Tag: jharkhand

  • ರಾಹುಲ್‌ ಹೆಲಿಕಾಪ್ಟರ್‌ ಟೇಕ್ ಆಫ್‌ಗೆ ಅನುಮತಿ ವಿಳಂಬ – ಎಟಿಸಿ ವಿರುದ್ಧ ಕಾಂಗ್ರೆಸ್‌ ಕಿಡಿ

    ರಾಹುಲ್‌ ಹೆಲಿಕಾಪ್ಟರ್‌ ಟೇಕ್ ಆಫ್‌ಗೆ ಅನುಮತಿ ವಿಳಂಬ – ಎಟಿಸಿ ವಿರುದ್ಧ ಕಾಂಗ್ರೆಸ್‌ ಕಿಡಿ

    ರಾಂಚಿ: ಹೆಲಿಕಾಪ್ಟರ್‌ ಟೇಕ್ ಆಫ್‌ಗೆ ಏರ್ ಟ್ರಾಫಿಕ್ ಕಂಟ್ರೋಲ್ (Air Traffic Control) ತಡವಾಗಿ ಅನುಮತಿ ನೀಡಿದ ಪರಿಣಾಮ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರು (Rahul Gandhi) 45 ನಿಮಿಷಗಳ ಕಾಲ ಹೆಲಿಕಾಪ್ಟರ್‌ನಲ್ಲೇ ಕಾದು ಕುಳಿತ ಘಟನೆ ಜಾರ್ಖಂಡ್‌ನ (Jharkhand) ಗೊಡ್ಡಾದಲ್ಲಿ ನಡೆದಿದೆ.

    ರಾಜ್ಯದ ವಿಧಾನಸಭಾ ಚುನಾವಣೆಯ ಅಂತಿಮ ಹಂತದ ಪ್ರಚಾರಕ್ಕೆ ಅವರು ತೆರಳಿದ್ದರು. ಈ ವೇಳೆ ಅವರ ಹೆಲಿಕಾಪ್ಟರ್‌ ಟೇಕ್ ಆಫ್‌ಗೆ ತಡವಾಗಿ ಅನುಮತಿ ನೀಡಲಾಗಿದೆ. ಇದರಿಂದ ಸುಮಾರು 45 ನಿಮಿಷಗಳ ಕಾಲ ರಾಹುಲ್‌ ಹೆಲಿಕಾಪ್ಟರ್‌ನಲ್ಲೇ ಕಾದು ಕುಳಿತಿದ್ದಾರೆ.

    ಈ ಬಗ್ಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್‌ (Congress), ರಾಹುಲ್‌ ಗಾಂಧಿ ಪ್ರಚಾರಕ್ಕೆ ಸಮಸ್ಯೆ ಉಂಟು ಮಾಡುವ ಉದ್ದೇಶದಿಂದ ಹೀಗೆ ಮಾಡಲಾಗಿದೆ. ಗೊಡ್ಡಾದಿಂದ ಸುಮಾರು 150 ಕಿಲೋಮೀಟರ್‌ಗಳಷ್ಟು ದೂರದಲ್ಲಿರುವ ಚಕೈಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರ (Narendra Modi) ರ‍್ಯಾಲಿ ಇತ್ತು. ಅವರ ಕಾರ್ಯಕ್ರಮಕ್ಕೆ ಎಟಿಸಿ ಆದ್ಯತೆ ನೀಡಿದೆ ಎಂದು ಆರೋಪಿಸಿದೆ.

    ಶಾಸಕಿ ಮತ್ತು ಮಹಾಗಾಮಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ದೀಪಿಕಾ ಪಾಂಡೆ ಸಿಂಗ್ ಪ್ರತಿಕ್ರಿಯಿಸಿ, ಪ್ರಧಾನಿ ದಿಯೋಗಢ್‌ನಲ್ಲಿ ಇದ್ದಿದ್ದರಿಂದ ರಾಹುಲ್ ಗಾಂಧಿಗೆ ಆ ಪ್ರದೇಶವನ್ನು ದಾಟಲು ಅವಕಾಶ ನೀಡಲಿಲ್ಲ. ಕಾಂಗ್ರೆಸ್ 70 ವರ್ಷಗಳ ಕಾಲ ದೇಶವನ್ನು ಆಳಿತ್ತು. ಆಗ ಯಾವ ವಿರೋಧ ಪಕ್ಷದ ನಾಯಕರ ವಿರುದ್ಧವೂ ಈ ರೀತಿ ನಡೆದುಕೊಂಡಿಲ್ಲ. ಈ ನಡೆಯನ್ನು ಒಪ್ಪಲು ಸಾಧ್ಯವಿಲ್ಲ ಎಂದು ಕಿಡಿಕಾರಿದ್ದಾರೆ.

  • ಜಾರ್ಖಂಡ್‌ನಲ್ಲಿ ಮೊದಲ ಹಂತದ ಚುನಾವಣೆ ಅಂತ್ಯ- ಶೇ. 67ಕ್ಕೂ ಹೆಚ್ಚು ಮತದಾನ

    ಜಾರ್ಖಂಡ್‌ನಲ್ಲಿ ಮೊದಲ ಹಂತದ ಚುನಾವಣೆ ಅಂತ್ಯ- ಶೇ. 67ಕ್ಕೂ ಹೆಚ್ಚು ಮತದಾನ

    ರಾಂಚಿ: ಜಾರ್ಖಂಡ್‌ನಲ್ಲಿ (Jharkhand) ಮೊದಲ ಹಂತದ ಚುನಾವಣೆ ಶಾಂತಿಯುತವಾಗಿ ಮುಗಿದಿದೆ. 43 ಮತಕ್ಷೇತ್ರಗಳಲ್ಲಿ ಶೇ. 67ಕ್ಕೂ ಹೆಚ್ಚು ಮತದಾನ ನಡೆದಿದೆ. ವಯನಾಡು ಲೋಕಸಭೆ ಕ್ಷೇತ್ರಕ್ಕೂ ಉಪಚುನಾವಣೆ ನಡೆದಿದೆ.

    ಶೇ.65ರಷ್ಟು ಮಂದಿ ಮತ ಚಲಾಯಿಸಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಇಲ್ಲಿ ಶೇ.74ರಷ್ಟು ಮತದಾನವಾಗಿತ್ತು. ಮತದಾನದ ವೇಳೆ ಪ್ರವಾಹ, ಭೂಕುಸಿತದಿಂದ ಚದುರಿಹೋಗಿದ್ದವರ ಮರು ಸಂಗಮ ಆಗಿದೆ. ತಮ್ಮವರನ್ನು ಕಳೆದುಕೊಂಡಿದ್ದ ಜನ, ಮತಗಟ್ಟೆಗಳಲ್ಲಿ ಸಂಬಂಧಿಗಳು, ಆಪ್ತರನ್ನು ಕಂಡು ಭಾವುಕರಾದರು. ಹಳೆಯ ದಿನಗಳನ್ನು ಮೆಲುಕು ಹಾಕಿದರು. ಮೊದಲ ಬಾರಿಗೆ ಚುನಾವಣೆಗೆ ಸ್ಪರ್ಧೆ ಮಾಡಿರುವ ಪ್ರಿಯಾಂಕಾ ವಾದ್ರಾ ಗೆಲುವಿನ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಈ ಎಲ್ಲಾ ಚುನಾವಣೆಗಳ (Election) ಫಲಿತಾಂಶ ನ.23ರಂದು ಹೊರಬೀಳಲಿದೆ. ಇದನ್ನೂ ಓದಿ: ನೋಂದಣಿಗೂ ಮುನ್ನವೇ ಶುಲ್ಕ ಪಾವತಿ; ಸಿಎಂ ವಿರುದ್ಧ ಮತ್ತೊಂದು ದಾಖಲೆ ರಿಲೀಸ್!

    ರಾಜಸ್ಥಾನದ ಡಿಯೋನಿ ಉಪಚುನಾವಣೆ ವೇಳೆ ಪಕ್ಷೇತರ ಅಭ್ಯರ್ಥಿ ನರೇಶ್ ಮೀನಾ, ಚುನಾವಣಾಧಿಕಾರಿ ಕಪಾಳಕ್ಕೆ ಭಾರಿಸಿದ್ದಾರೆ. ಈ ಮಧ್ಯೆ, ಮಹಾರಾಷ್ಟ್ರ (Maharashtra) ಚುನಾವಣೆ ವೇಳೆಯೇ ಡಿಸಿಎಂ ಅಜಿತ್ ಪವಾರ್‌ಗೆ ಸುಪ್ರೀಂಕೋರ್ಟ್ ಶಾಕ್ ನೀಡಿದೆ. ಎನ್‌ಸಿಪಿ ಸಂಸ್ಥಾಪಕ ಶರದ್ ಪವಾರ್ ಫೋಟೋವನ್ನು ಪ್ರಚಾರದಲ್ಲಿ ಬಳಸಿಕೊಳ್ಳದಂತೆ ಸೂಚಿಸಿದೆ. ಸ್ವಂತ ಕಾಲಲ್ಲಿ ನಿಲ್ಲೋದನ್ನು ಕಲಿಯಿರಿ ಎಂದು ಅಜಿತ್ ಪವಾರ್‌ಗೆ ಚಾಟಿ ಬೀಸಿದೆ. ಇದನ್ನೂ ಓದಿ: ಬಿಡಿಗಾಸು ಅನುದಾನ ಬಿಡುಗಡೆ ಮಾಡದೆ ಹಗರಣದ ಆರೋಪ ಮಾಡುವುದರಲ್ಲಿ ಅರ್ಥವಿಲ್ಲ: ಸುನಿಲ್ ಕುಮಾರ್ ತಿರುಗೇಟು

  • ಜಾರ್ಖಂಡ್ ವಿಧಾನಸಭೆ ಚುನಾವಣೆ – 43 ಕ್ಷೇತ್ರಗಳಿಗೆ ಇಂದು ಮತದಾನ

    ಜಾರ್ಖಂಡ್ ವಿಧಾನಸಭೆ ಚುನಾವಣೆ – 43 ಕ್ಷೇತ್ರಗಳಿಗೆ ಇಂದು ಮತದಾನ

    ರಾಂಚಿ: ಜಾರ್ಖಂಡ್‌ನ (Jharkhand) 81 ವಿಧಾನಸಭಾ ಕ್ಷೇತ್ರಗಳ ಪೈಕಿ 43 ಕ್ಷೇತಗಳಿಗೆ ಇಂದು (ನ.13) ಮತದಾನ ಆರಂಭವಾಗಿದ್ದು, ಒಟ್ಟು 683 ಅಭ್ಯರ್ಥಿಗಳು ಕಣದಲ್ಲಿದ್ದಾರೆ.

    ಇಂದು ದೇಶಾದ್ಯಂತ 11 ರಾಜ್ಯಗಳ 32 ವಿಧಾನಸಭಾ ಕ್ಷೇತ್ರಗಳಿಗೆ ಹಾಗೂ ಕೇರಳದ ವಯನಾಡ್ (Wayanad) ಲೋಕಸಭಾ ಕ್ಷೇತ್ರಕ್ಕೆ ಮತದಾನ ನಡೆಯುತ್ತಿದೆ.ಇದನ್ನೂ ಓದಿ: ಮುಡಾ ಹಗರಣ: ವಿಚಾರಣೆ ತೀವ್ರಗೊಳಿಸಿದ ಇ.ಡಿ – ಸಿಎಂ ಸಿದ್ದರಾಮಯ್ಯ ಆಪ್ತನಿಗೆ ಡ್ರಿಲ್

    ಜಾರ್ಖಂಡ್‌ನ 15 ಜಿಲ್ಲೆಗಳಲ್ಲಿ ಬೆಳಗ್ಗೆ 7 ಗಂಟೆಗೆ ಮತದಾನ ಆರಂಭವಾಗಿದ್ದು, ಸಂಜೆ 5 ಗಂಟೆಯವರೆಗೆ ನಡೆಯಲಿದೆ. ಚುನಾವಣಾ ಆಯೋಗವು ರಾಜ್ಯಾದ್ಯಂತ ಒಟ್ಟು 15,344 ಮತಗಟ್ಟೆಗಳನ್ನು ಸ್ಥಾಪಿಸಿದ್ದು, 225 ಸೂಕ್ಷ್ಮ ಮತಗಟ್ಟೆಗಳು ಎಂದು ಘೋಷಿಸಿದೆ. ಭದ್ರತಾ ಸುವ್ಯವಸ್ಥೆ ಕಾಪಾಡಲು 200 ಕಂಪನಿಗಳ ಭದ್ರತಾ ಪಡೆಗಳನ್ನು ನಿಯೋಜಿಸಿದೆ. ಒಟ್ಟು 2.60 ಕೋಡಿ ಮತದಾರರ ಪೈಕಿ ಈ ಹಂತದಲ್ಲಿ 1 ಕೋಟಿ 37 ಲಕ್ಷ ಮತದಾರರು ಮತ ಚಲಾಯಿಸಲಿದ್ದಾರೆ.

    ಎನ್‌ಡಿಎ ಮೈತ್ರಿಕೂಟದ ಬಿಜೆಪಿ, ಜೆಡಿ(ಯು), ಎಲ್‌ಜೆಪಿ ಮತ್ತು ಎಜೆಎಸ್ ಮತ್ತು ಇಂಡಿಯಾ ಮೈತ್ರಿಕೂಟಗಳ ಜೆಎಂಎಂ, ಕಾಂಗ್ರೆಸ್, ಆರ್‌ಜೆಡಿ ನಡುವೆ ನೇರ ಏರ್ಪಟ್ಟಿದೆ. ಮೊದಲ ಹಂತದ ಚುನವಾಣೆಯ ಪಶ್ಚಿಮದಲ್ಲಿ ಅತಿ ಹೆಚ್ಚು ಅಭ್ಯರ್ಥಿಗಳು ಕಣಕ್ಕಿಳಿದಿದ್ದು, ಪ್ರಮುಖ ಅಭ್ಯರ್ಥಿಗಳೆಂದರೆ ಚಂಪೈ ಸೊರೆನ್, ಮಹುವಾ ಮಜಿ, ಗೀತಾ ಕೋಡಾ, ಅಜೋಯ್ ಕುಮಾರ್, ಬನ್ನಾ ಗುಪ್ತಾ ಮತ್ತು ಸುಖರಾಮ್ ಓರಾನ್ ಸ್ಪರ್ಧಿಸುತ್ತಿದ್ದಾರೆ. ಜಗನ್ನಾಥಪುರದಲ್ಲಿ ಅತಿ ಕಡಿಮೆ ಅಭ್ಯರ್ಥಿಗಳಿದ್ದು, ಕೇವಲ ಎಂಟು ಅಭ್ಯರ್ಥಿಗಳು ಮಾತ್ರ ನಾಮಪತ್ರ ಸಲ್ಲಿಸಿದ್ದಾರೆ.

    ನ.20 ರಂದು ಎರಡನೇ ಹಂತದಲ್ಲಿ ಮತದಾನ ನಡೆಯಲಿದ್ದು, 528 ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ. ಇನ್ನೂ ನ.23 ರಂದು ಮತ ಎಣಿಕೆ ನಡೆಯಲಿದ್ದು, ಫಲಿತಾಂಶ ಪ್ರಕಟವಾಗಲಿದೆ.ಇದನ್ನೂ ಓದಿ: ಶಿಗ್ಗಾಂವಿ| ಒಳ್ಳೆಯ ಅಭ್ಯರ್ಥಿ ಆಯ್ಕೆ ಆಗಿ ಬರಲಿ – ಕುರುಬ ಸಮಾಜದ ವಯೋವೃದ್ಧನಿಂದ ಪೂಜೆ

  • ಜಾರ್ಖಂಡ್ ವಿಧಾನಸಭೆಗೆ ನಾಳೆ ಮೊದಲ ಹಂತದ ಚುನಾವಣೆ – 15 ಜಿಲ್ಲೆಗಳ 42 ಸ್ಥಾನಗಳಿಗೆ ಮತದಾನ

    ಜಾರ್ಖಂಡ್ ವಿಧಾನಸಭೆಗೆ ನಾಳೆ ಮೊದಲ ಹಂತದ ಚುನಾವಣೆ – 15 ಜಿಲ್ಲೆಗಳ 42 ಸ್ಥಾನಗಳಿಗೆ ಮತದಾನ

    ರಾಂಚಿ: ಜಾರ್ಖಂಡ್ ವಿಧಾನಸಭೆಗೆ (Jharkhand Assembly Elections) ನಾಳೆ ಮೊದಲ ಹಂತದ ಮತದಾನ ನಡೆಯಲಿದೆ. ಮೊದಲ ಸುತ್ತಿನಲ್ಲಿ 15 ಜಿಲ್ಲೆಗಳ 43 ಸ್ಥಾನಗಳಿಗೆ ಮತದಾನ (Voting) ನಡೆಯಲಿದೆ.

    ಮೊದಲ ಹಂತದಲ್ಲಿ 683 ಅಭ್ಯರ್ಥಿಗಳು ಅಖಾಡದಲ್ಲಿದ್ದು, ನಾಳೆ (ಬುಧವಾರ) ಅವರ ಭವಿಷ್ಯ ಇವಿಎಂಗಳಲ್ಲಿ (EVM) ಭದ್ರವಾಗಲಿದೆ. ಮೊದಲ ಸುತ್ತಿನಲ್ಲಿ ಗರಿಷ್ಠ ಆರು ಸ್ಥಾನಗಳು ಪೂರ್ವ ಸಿಂಗ್‌ಭೂಮ್ ಜಿಲ್ಲೆಯಲ್ಲಿವೆ. ಪಲಮು, ಪಶ್ಚಿಮ ಸಿಂಗ್‌ಭೂಮ್ ಮತ್ತು ರಾಂಚಿ ಜಿಲ್ಲೆಗಳಲ್ಲಿ ತಲಾ ಐದು ವಿಧಾನಸಭಾ ಸ್ಥಾನಗಳಿದ್ದು, ಕೊಡೆರ್ಮಾ ಮತ್ತು ರಾಮಗಢ ಜಿಲ್ಲೆಯಲ್ಲಿ ತಲಾ ಒಂದು ಸ್ಥಾನವಿದೆ. ಇಂಡಿಯಾ ಒಕ್ಕೂಟದ ಭಾಗವಾಗಿರುವ ಆಡಳಿತಾರೂಢ ಜಾರ್ಖಂಡ್ ಮುಕ್ತಿ ಮೋರ್ಚಾ, ಆಲ್ ಜಾರ್ಖಂಡ್ ಸ್ಟೂಡೆಂಟ್ಸ್ ಯೂನಿಯನ್, ಜನತಾ ದಳ ಯುನೈಡೆಟ್ ಒಳಗೊಂಡು ಎನ್‌ಡಿಎ ಒಕ್ಕೂಟದ ವಿರುದ್ಧ ಸ್ಪರ್ಧೆ ಮಾಡಿದೆ. ಇದನ್ನೂ ಓದಿ: ಬಂಡೀಪುರ ಅರಣ್ಯದಲ್ಲಿ ರಾತ್ರಿ ಸಂಚಾರ ನಿಷೇಧ ವಾಪಸ್? – ಹೈಕಮಾಂಡ್‌ ಲಾಬಿಗೆ ಮಣಿದ್ರಾ ಡಿಕೆಶಿ?

    ಮೊದಲ ಹಂತದಲ್ಲಿ ಒಟ್ಟು 43 ಸ್ಥಾನಗಳ ಪೈಕಿ ಜೆಎಂಎಂ 23 ಸ್ಥಾನಗಳಲ್ಲಿ ಮತ್ತು ಕಾಂಗ್ರೆಸ್ 17 ಸ್ಥಾನಗಳಲ್ಲಿ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಲಾಲು ಪ್ರಸಾದ್ ಯಾದವ್ ಅವರ ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ಒಟ್ಟು ಐದು ಸ್ಥಾನಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಎನ್‌ಡಿಎಯಲ್ಲಿ ಬಿಜೆಪಿ 43ರಲ್ಲಿ 36 ಸ್ಥಾನಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಸುದೇಶ್ ಮಹತೋ ಅವರ ಎಜೆಎಸ್‌ಯು ನಾಲ್ಕು ಸ್ಥಾನಗಳಲ್ಲಿ, ನಿತೀಶ್ ಕುಮಾರ್ ಅವರ ಜೆಡಿಯು ಎರಡು ಸ್ಥಾನಗಳಲ್ಲಿ ಮತ್ತು ಚಿರಾಗ್ ಪಾಸ್ವಾನ್ ಅವರ ಎಲ್‌ಜೆಪಿ (ಆರ್) ಒಂದು ಸ್ಥಾನದಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಇದಲ್ಲದೇ ಇತರೆ ಸಣ್ಣ ಪಕ್ಷಗಳೂ ಸ್ಪರ್ಧೆಯನ್ನು ಕುತೂಹಲ ಮೂಡಿಸಿದೆ. ಇದನ್ನೂ ಓದಿ: ಗುತ್ತಿಗೆ ಕಾಮಗಾರಿಗಳಲ್ಲಿ ಶೇ.4 ಮೀಸಲಾತಿ ಕೊಡಿ: ಸರ್ಕಾರಕ್ಕೆ ಮುಸ್ಲಿಂ ಸಮುದಾಯ ಬೇಡಿಕೆ

    ಮಾಜಿ ಮುಖ್ಯಮಂತ್ರಿ ಚಂಪೈ ಸೊರೆನ್, ಆರೋಗ್ಯ ಸಚಿವ ಬನ್ನಾ ಗುಪ್ತಾ, ರಾಜ್ಯಸಭಾ ಸಂಸದ ಮಹುವಾ ಮಜಿ, ಮಾಜಿ ಮುಖ್ಯಮಂತ್ರಿ ಮಧು ಕೋಡಾ ಅವರ ಪತ್ನಿ ಗೀತಾ ಕೋಡಾ ಮತ್ತು ಮಾಜಿ ಮುಖ್ಯಮಂತ್ರಿ ರಘುಬರ್ ದಾಸ್ ಅವರ ಸೊಸೆ ಪೂರ್ಣಿಮಾ ದಾಸ್ ಅವರಂತಹ ಪ್ರಮುಖ ಮುಖಗಳು ಮೊದಲ ಹಂತದ ಚುನಾವಣಾ ಅಖಾಡದಲ್ಲಿ ಗಮನ ಸೆಳೆದಿವೆ. ಇದನ್ನೂ ಓದಿ: Assam| ನಿರ್ಮಾಣ ಹಂತದ ಮೋರಿಗೆ ಬಿದ್ದ ಕಾರು – ನಾಲ್ವರು ಸಾವು, ಇಬ್ಬರು ಗಂಭೀರ

    ಚುನಾವಣೆಗಾಗಿ ಚುನಾವಣಾ ಆಯೋಗವು ಸಕಲ ತಯಾರಿ ಮಾಡಿಕೊಂಡಿದೆ. ರಾಜ್ಯಾದ್ಯಂತ ಒಟ್ಟು 15,344 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. 225 ಸೂಕ್ಷ್ಮ ಮತಗಟ್ಟೆಗಳು ಎಂದು ಘೋಷಿಸಿದೆ. ಭದ್ರತಾ ಸುವ್ಯವಸ್ಥೆ ಕಾಪಾಡಲು ಮತ್ತು ಚುನಾವಣಾ ಪ್ರಕ್ರಿಯೆಯನ್ನು ಸುಗಮಗೊಳಿಸಲು 200 ಕಂಪನಿಗಳ ಭದ್ರತಾ ಪಡೆಗಳನ್ನು ನಿಯೋಜಿಸಿದೆ. ಮೊದಲ ಹಂತದಲ್ಲಿ 1.37 ಕೋಟಿ ಮಂದಿ ಮತದಾರರು ಮತ ಚಲಾಯಿಸಲಿದ್ದಾರೆ. ಇದನ್ನೂ ಓದಿ: ತಲೆ ಮೇಲೆ ಹರಿದ ಸರ್ಕಾರಿ ಬಸ್- ವಿದ್ಯಾರ್ಥಿ ಸ್ಥಳದಲ್ಲೇ ಸಾವು

  • ಮಹಿಳೆಯರಿಗೆ 2,100 ರೂ., ವಾರ್ಷಿಕ 2 ಎಲ್‌ಪಿಜಿ ಸಿಲಿಂಡರ್‌ ಫ್ರೀ – ಜಾರ್ಖಂಡ್‌ ಚುನಾವಣೆಗೆ ಬಿಜೆಪಿ ಗ್ಯಾರಂಟಿ

    ಮಹಿಳೆಯರಿಗೆ 2,100 ರೂ., ವಾರ್ಷಿಕ 2 ಎಲ್‌ಪಿಜಿ ಸಿಲಿಂಡರ್‌ ಫ್ರೀ – ಜಾರ್ಖಂಡ್‌ ಚುನಾವಣೆಗೆ ಬಿಜೆಪಿ ಗ್ಯಾರಂಟಿ

    ರಾಂಚಿ: ಮುಂಬರುವ ಜಾರ್ಖಂಡ್‌ ವಿಧಾನಸಭಾ ಚುನಾವಣೆಗೆ ಬಿಜೆಪಿ ಪ್ರಣಾಳಿಕೆಯನ್ನು (BJP Manifesto) ಕೇಂದ್ರ ಗೃಹಸಚಿವ ಅಮಿತ್‌ ಶಾ (Amit Shah) ಭಾನುವಾರ ಬಿಡುಗಡೆಗೊಳಿಸಿದರು.

    ಬಿಜೆಪಿ ಜಾರ್ಖಂಡ್‌ನಲ್ಲಿ (Jharkhand) ಅಧಿಕಾರಕ್ಕೆ ಬಂದರೆ ರಾಜ್ಯದ ಪ್ರತಿಯೊಬ್ಬ ಮಹಿಳೆಗೆ ತಿಂಗಳಿಗೆ 2,100 ರೂ. ನೀಡುವುದು ಸೇರಿದಂತೆ ಹಲವು ಗ್ಯಾರಂಟಿಗಳನ್ನು ಘೋಷಣೆ ಮಾಡಿದರು. ಇದನ್ನೂ ಓದಿ: 10 ದಿನಗಳಲ್ಲಿ ರಾಜೀನಾಮೆ ಕೊಡದಿದ್ರೆ ಸಿದ್ದಿಕಿಯಂತೆ ಹತ್ಯೆ – ಸಿಎಂ ಯೋಗಿಗೆ ಬೆದರಿಕೆ ಹಾಕಿದ್ದ ಮಹಿಳೆ ಅರೆಸ್ಟ್

    ಬಿಜೆಪಿ ಪ್ರಣಾಳಿಕೆ ಏನು?
    * ಪ್ರತಿ ಮನೆಗೆ 500 ರೂ.ಗೆ ಎಲ್‌ಪಿಜಿ ಸಿಲಿಂಡರ್‌ ಮತ್ತು ವಾರ್ಷಿಕ 2 ಉಚಿತ ಸಿಲಿಂಡರ್‌

    * ನುಸುಳುಕೋರರು ಆಕ್ರಮಿಸಿಕೊಂಡಿರುವ ಆದಿವಾಸಿಗಳ ಭೂಮಿಯನ್ನು ಆದಿವಾಸಿಗಳಿಗೆ ಹಿಂದಿರುಗಿಸುವುದಾಗಿ ಪ್ರತಿಜ್ಞೆ

    * ಬುಡಕಟ್ಟು ಜನಾಂಗದವರನ್ನು ಮದುವೆಯಾಗುವ ನುಸುಳುಕೋರರ ಮಕ್ಕಳಿಗೆ ಬುಡಕಟ್ಟು ಸ್ಥಾನಮಾನ ರದ್ದು

    * ಆದಿವಾಸಿಗಳನ್ನು ಏಕರೂಪ ನಾಗರಿಕ ಸಂಹಿತೆಯ (ಯುಸಿಸಿ) ವ್ಯಾಪ್ತಿಯಿಂದ ಹೊರಗಿಡಲಾಗುವುದು

    * ಪ್ರಶ್ನೆ ಪತ್ರಕೆ ಸೋರಿಕೆಗೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಕೈಗೊಂಡು ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸುವುದಾಗಿ ಭರವಸೆ

    * 5 ವರ್ಷಗಳಲ್ಲಿ ಯುವಕರಿಗೆ ಸ್ವಯಂ ಉದ್ಯೋಗಕ್ಕಾಗಿ 5 ಲಕ್ಷ ಅವಕಾಶಗಳನ್ನು ಖಾತರಿಪಡಿಸುತ್ತೇವೆ

    * 2,87,500 ಸರ್ಕಾರಿ ಹುದ್ದೆಗಳ ನೇಮಕಾತಿ ಪಾರದರ್ಶಕವಾಗಿ ನಡೆಯಲಿದ್ದು, ಮೊದಲ ಕ್ಯಾಬಿನೆಟ್‌ನಲ್ಲೇ ಪ್ರಕ್ರಿಯೆ ಶುರುವಾಗಲಿದೆ.

    * 2025ರ ನವೆಂಬರ್‌ ಒಳಗೆ 1.5 ಲಕ್ಷ ಹುದ್ದೆಗಳನ್ನು ಭರ್ತಿ ಮಾಡಲಾಗುವುದು.

    81 ಸದಸ್ಯ ಬಲದ ಕ್ಷೇತ್ರಗಳಿಗೆ ನ.13 ಮತ್ತು 20 ರಂದು ಚುನಾವಣೆ (Jharkhand Assembly Election) ನಡೆಯಲಿದೆ. ನ.23 ರಂದು ಮತ ಎಣಿಕೆ ನಡೆಯಲಿದೆ. ಇದನ್ನೂ ಓದಿ: ನ.7ರ ಒಳಗಡೆ ಬಾಕಿ ಹಣವನ್ನು ಪಾವತಿಸದೇ ಇದ್ದರೆ ವಿದ್ಯುತ್‌ ಕೊಡಲ್ಲ: ಬಾಂಗ್ಲಾಗೆ ಅದಾನಿ ಡೆಡ್‌ಲೈನ್‌

  • ಜಾರ್ಖಂಡ್‌ನ ಹಲವೆಡೆ ಭೂಮಿ ಕಂಪನ – ರಿಕ್ಟರ್ ಮಾಪಕದಲ್ಲಿ 4.3 ತೀವ್ರತೆ ದಾಖಲು

    ಜಾರ್ಖಂಡ್‌ನ ಹಲವೆಡೆ ಭೂಮಿ ಕಂಪನ – ರಿಕ್ಟರ್ ಮಾಪಕದಲ್ಲಿ 4.3 ತೀವ್ರತೆ ದಾಖಲು

    ರಾಂಚಿ: ಜಾರ್ಖಂಡ್‌ನ (Jharkhand) ಕೆಲವು ಭಾಗಗಳಲ್ಲಿ ಇಂದು ಬೆಳಗ್ಗೆ 9 ಗಂಟೆ ಸುಮಾರಿಗೆ 4.3 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಹಿರಿಯ ಹವಾಮಾನ ತಜ್ಞ ಉಪೇಂದ್ರ ಶ್ರೀವಾಸ್ತವ ತಿಳಿಸಿದ್ದಾರೆ.

    ರಾಂಚಿಯಿಂದ (Ranchi) ಸುಮಾರು 35 ಕಿಮೀ ದೂರದಲ್ಲಿರುವ ಖುಂತಿ ಜಿಲ್ಲೆಯಲ್ಲಿ ಇಂದು ಬೆಳಗ್ಗೆ 9 ಗಂಟೆ ಸುಮಾರಿಗೆ ಭೂಕಂಪನ ಸಂಭವಿಸಿದ್ದು, ಅದರ ಆಳವು ಐದು ಕಿ.ಮೀಗಳಷ್ಟಿತ್ತು ಎಂದು ಭೂಕಂಪಶಾಸ್ತ್ರದ ರಾಷ್ಟ್ರೀಯ ಕೇಂದ್ರದ ವರದಿ ತಿಳಿಸಿದೆ. ಇದನ್ನೂ ಓದಿ: ಒಂದು ಚುನಾವಣೆಗೆ ಸಲಹೆ ನೀಡಲು 100 ಕೋಟಿ ಪಡೆಯುತ್ತೇನೆ: ಪ್ರಶಾಂತ್‌ ಕಿಶೋರ್‌

    ಸೆರೈಕೆಲಾ-ಖರ್ಸ್ವಾನ್ ಜಿಲ್ಲೆಯ ಜಮ್‌ಶೆಡ್‌ಪುರ ಮತ್ತು ಕಂದ್ರದಲ್ಲೂ ಕಂಪನದ ಅನುಭವವಾಗಿದೆ. ಆದರೆ ಯಾವುದೇ ಜೀವಹಾನಿ ಅಥವಾ ಆಸ್ತಿಪಾಸ್ತಿ ಹಾನಿಯಾದ ಬಗ್ಗೆ ವರದಿಯಾಗಿಲ್ಲ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ತಲೆಮರೆಸಿಕೊಳ್ಳಲು 8 ಮೊಬೈಲ್‌, 20 ಸಿಮ್‌, 6 ನಕಲಿ ಹೆಸರು – ಆರೋಪಿಯನ್ನು 1,600 ಕಿ.ಮೀ ಬೆನ್ನಟ್ಟಿ ಹಿಡಿದ ಪೊಲೀಸರು!

  • Jharkhand Election | 70 ಕ್ಷೇತ್ರಗಳಲ್ಲಿ ಕಾಂಗ್ರೆಸ್‌, ಜೆಎಂಎಂ ಮೈತ್ರಿಕೂಟ ಸ್ಪರ್ಧೆ ಫಿಕ್ಸ್‌

    Jharkhand Election | 70 ಕ್ಷೇತ್ರಗಳಲ್ಲಿ ಕಾಂಗ್ರೆಸ್‌, ಜೆಎಂಎಂ ಮೈತ್ರಿಕೂಟ ಸ್ಪರ್ಧೆ ಫಿಕ್ಸ್‌

    ರಾಂಚಿ: ಮುಂಬರುವ ಜಾರ್ಖಂಡ್‌ ವಿಧಾನಸಭಾ ಚುನಾವಣೆಗೆ (Jharkhand assembly polls) ಇಂಡಿಯಾ ಮೈತ್ರಿಕೂಟ ಒಟ್ಟಾಗಿ ಸ್ಪರ್ಧಿಸಲಿದೆ. ಕಾಂಗ್ರೆಸ್ ಮತ್ತು ಆಡಳಿತಾರೂಢ ಜಾರ್ಖಂಡ್ ಮುಕ್ತಿ ಮೋರ್ಚಾ 81 ವಿಧಾನಸಭಾ ಕ್ಷೇತ್ರಗಳ ಪೈಕಿ 70 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದೆ ಎಂದು ಮುಖ್ಯಮಂತ್ರಿ ಹೇಮಂತ್ ಸೊರೇನ್ ಘೋಷಣೆ (Hemant Soren) ಮಾಡಿದ್ದಾರೆ.

    ಪಕ್ಷಗಳ ನಡುವೆ ಸೀಟು ಹಂಚಿಕೆ ಕುರಿತು ಮಾತನಾಡಿದ ಅವರು, ಸದ್ಯಕ್ಕೆ ನಾವು ಸೀಟು ಹಂಚಿಕೆಯ ಬಗ್ಗೆ ಎಲ್ಲರೊಂದಿಗೆ ಮಾತುಕತೆ ನಡೆಸಿಲ್ಲ. ಕಾಂಗ್ರೆಸ್‌ (Congress) ಮತ್ತು ಆಡಳಿತಾರೂಢ ಜೆಎಂಎಂ (JMM) 70 ಕ್ಷೇತ್ರಗಳಲ್ಲಿ ಸ್ಪರ್ಧಿಸುವುದು ಖಚಿತವಾಗಿದೆ. ಉಳಿದ 11 ಕ್ಷೇತ್ರಗಳಲ್ಲಿ ಸ್ಪರ್ಧಿಸಲು ಆರ್‌ಜೆಡಿ ಮತ್ತು ಎಡ ಪಕ್ಷಗಳೊಂದಿಗೆ ಮಾತುಕತೆ ನಡೆಯಲಿದೆ ಎಂದು ತಿಳಿಸಿದ್ದಾರೆ.

    ಜಾರ್ಖಂಡ್‌ ಚುನಾವಣೆಗೆ ಈಗಾಗಲೇ ಮುಹೂರ್ತ ಫಿಕ್ಸ್‌ ಆಗಿದ್ದು, ನ.13 ಮತ್ತು ನ.20 ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದೆ. ನವೆಂಬರ್‌ 23ರಂದು ಮತ ಎಣಿಕೆ ನಡೆಯಲಿದೆ. ಇದನ್ನೂ ಓದಿ: ಭಾರತ ಎಲ್ಲರಿಗಿಂತ ಮೊದಲು 6G ಅಭಿವೃದ್ಧಿಪಡಿಸಿ ಬಿಡುಗಡೆ ಮಾಡಲಿದೆ: ಪಿಯೂಷ್ ಗೋಯಲ್

    2019ರ ಚುನಾವಣೆಯಲ್ಲಿ ಜೆಎಂಎಂ 43 ಸ್ಥಾನಗಳಲ್ಲಿ‌, ಕಾಂಗ್ರೆಸ್‌ 31 ಸ್ಥಾನಗಳಲ್ಲಿ ಸ್ಪರ್ಧಿಸಿತ್ತು. ಈ ಪೈಕಿ ಜೆಎಂಎಂ 30, ಕಾಂಗ್ರೆಸ್ 16 ಮತ್ತು ಆರ್‌ಜೆಡಿ 1 ಸ್ಥಾನಗಳಲ್ಲಿ ಗೆಲುವು ಪಡೆದಿದ್ದವು. ಇದಕ್ಕೂ ಮುನ್ನ 2014 ರಲ್ಲಿ 37 ಸ್ಥಾನಗಳನ್ನು ಪಡೆದಿದ್ದ 2019ರಲ್ಲಿ 25 ಸ್ಥಾನಗಳಲ್ಲಿ ಗೆದ್ದಿತ್ತು. ಎಜೆಎಸ್‌ಯು ಪಕ್ಷವು ಏಕಾಂಗಿಯಾಗಿ ಸ್ಪರ್ಧಿಸಿ 2 ಸ್ಥಾನಗಳನ್ನು ಗೆದ್ದುಕೊಂಡಿತು. ಈ ಬಾರಿ ಪ್ರತ್ಯೇಕವಾಗಿ ಸ್ಪರ್ಧೆಗಿಳಿದರೆ, ಕೆಲವು ಕ್ಷೇತ್ರಗಳಲ್ಲಿ ಸೋಲು ಎದುರಾಗುವ ಸಾಧ್ಯತೆಯಿದೆ ಎಂದು ಆಂತರಿಕ ಸಮೀಕ್ಷೆಗಳು ಹೇಳಿವೆ. ಹಾಗಾಗಿ ಮೈತ್ರಿಯಾಗಿ ಕಣಕ್ಕಿಳಿಯಲು ನಿರ್ಧರಿಸಿವೆ ಎಂದು ವರದಿಗಳು ತಿಳಿಸಿವೆ.

    2

    ಸ್ಥಳೀಯ ಮೂಲಗಳ ಪ್ರಕಾರ, ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (M-L) ಮತ್ತು ಮಾರ್ಕ್ಸ್‌ವಾದಿ ಸಮನ್ವಯ ಸಮಿತಿ (MMC) ಕೂಡ ಈ ಚುನಾವಣೆಯಲ್ಲಿ ಜೆಎಂಎಂ ಮತ್ತು ಕಾಂಗ್ರೆಸ್‌ ನೊಂದಿಗೆ ಸೇರಿ ಚುನಾವಣಾ ಅಖಾಡಕ್ಕಿಳಿಯಲು ಬಯಸಿವೆ. ಇನ್ನೂ ಕಳೆದ ಚುನಾವಣೆಯಲ್ಲಿ 7 ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದ ರಾಷ್ಟ್ರೀಯ ಜನತಾ ದಳ ಈ ಬಾರಿ ಕಡಿಮೆ ಸ್ಥಾನಗಳಲ್ಲಿ ಸ್ಪರ್ಧಿಸುವ ನಿರೀಕ್ಷೆಯಿದೆ ಎಂದು ತಿಳಿದುಬಂದಿದೆ. ಇದನ್ನೂ ಓದಿ: ಮಾಧ್ಯಮಗಳ ಎದುರು ನಕಲಿ ಎನ್‌ಕೌಂಟರ್‌ ಆರೋಪ ಮಾಡಿದ ಬಿಷ್ಣೋಯ್ ಗ್ಯಾಂಗ್‌ನ ಶೂಟರ್‌!

  • ಜಾರ್ಖಂಡ್‌ನಲ್ಲಿ ಎರಡು ಹಂತದಲ್ಲಿ ಚುನಾವಣೆ – ನ.23 ರಂದು ಮತ ಎಣಿಕೆ

    ಜಾರ್ಖಂಡ್‌ನಲ್ಲಿ ಎರಡು ಹಂತದಲ್ಲಿ ಚುನಾವಣೆ – ನ.23 ರಂದು ಮತ ಎಣಿಕೆ

    ನವದೆಹಲಿ: ಜಾರ್ಖಂಡ್‌ ಚುನಾವಣೆಗೆ (Jharkhand  Election) ಮುಹೂರ್ತ ನಿಗದಿಯಾಗಿದೆ. ಒಟ್ಟು ಎರಡು ಹಂತದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ.

    ನ.13 ಮತ್ತು 20 ರಂದು ಚುನಾವಣೆ ನಡೆಯಲಿದ್ದರೆ ನ.23 ರಂದು ಮತ ಎಣಿಕೆ ನಡೆಯಲಿದೆ. ನೀತಿ ಸಂಹಿತೆ ಇಂದಿನಿಂದಲೇ ಜಾರಿಯಾಗಲಿದೆ. ಇದನ್ನೂ ಓದಿ: ಚನ್ನಪಟ್ಟಣ, ಶಿಗ್ಗಾಂವಿ, ಸಂಡೂರಿಗೆ ನ.13 ರಂದು ಉಪಚುನಾವಣೆ

    ಒಟ್ಟು 82 ಕ್ಷೇತ್ರಗಳಿರುವ ಜಾರ್ಖಂಡ್‌ನಲ್ಲಿ ಹೇಮತ್‌ ಸೊರೆನ್‌ ನೇತೃತ್ವದಲ್ಲಿ ಮೈತ್ರಿ ಪಕ್ಷಗಳು 47 ಸ್ಥಾನಗಳನ್ನು ಗೆದ್ದು ಅಧಿಕಾರಕ್ಕೆ ಏರಿದ್ದವು.

     

  • ಜಾರ್ಖಂಡ್‌ನಲ್ಲಿ ರಾಷ್ಟ್ರೀಯ ಪೌರತ್ವ ನೋಂದಣಿ ಕಾಯ್ದೆ ಜಾರಿಗೊಳಿಸುತ್ತೇವೆ: ಶಿವರಾಜ್ ಸಿಂಗ್ ಚೌಹಾಣ್

    ಜಾರ್ಖಂಡ್‌ನಲ್ಲಿ ರಾಷ್ಟ್ರೀಯ ಪೌರತ್ವ ನೋಂದಣಿ ಕಾಯ್ದೆ ಜಾರಿಗೊಳಿಸುತ್ತೇವೆ: ಶಿವರಾಜ್ ಸಿಂಗ್ ಚೌಹಾಣ್

    ರಾಂಚಿ: ಮುಂಬರುವ ವಿಧಾನಸಭೆ ಚುನಾವಣೆ ಬಳಿಕ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದರೆ ರಾಷ್ಟ್ರೀಯ ಪೌರತ್ವ ನೋಂದಣಿ (NRC) ಕಾಯ್ದೆ ಜಾರಿಗೆ ತರುವುದಾಗಿ ಕೇಂದ್ರ ಸಚಿವ ಹಾಗೂ ಬಿಜೆಪಿ ಉಸ್ತುವಾರಿ ಶಿವರಾಜ್ ಸಿಂಗ್ ಚೌಹಾಣ್ (Shivraj Singh Chouhan) ಭರವಸೆ ನೀಡಿದ್ದಾರೆ.

    ಮುಂಬರುವ ಜಾರ್ಖಂಡ್‌ ಚುನಾವಣೆ ಹಿನ್ನೆಲೆ ಕೇಂದ್ರ ಸಚಿವರು ಈ ಭರವಸೆ ನೀಡಿದ್ದಾರೆ. ಪ್ರಸ್ತುತ ಮುಖ್ಯಮಂತ್ರಿ ಹೇಮಂತ್ ಸೊರೆನ್ (Hemant Soren) ನೇತೃತ್ವದ ರಾಜ್ಯ ಸರ್ಕಾರ ನುಸುಳುಕೋರರಿಗೆ ಒಲವು ತೋರುತ್ತಿದೆ ಎಂದು ಕಿಡಿ ಕಾರಿದ್ದಾರೆ. ಇದನ್ನೂ ಓದಿ: 2026ರ ವೇಳೆಗೆ ಸಂಪೂರ್ಣ ನಕ್ಸಲಿಸಂ ಮಟ್ಟ ಹಾಕಿದ್ದೇವೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳಬೇಕು: ಅಮಿತ್‌ ಶಾ

    ಮುಂಬರುವ ಚುನಾವಣೆಗೆ ಬಿಜೆಪಿ ಪ್ರಣಾಳಿಕೆ ಬಿಡುಗಡೆ ಮಾಡಲಿದೆ. ಈ ಚುನಾವಣೆಯು ಕೇವಲ ಅಧಿಕಾರಕ್ಕಾಗಿ ಅಲ್ಲ, ʻರೋಟಿ, ಮತಿ ಔರ್‌ ಭೇಟಿʼ ರಕ್ಷಣೆಗಾಗಿ ಎಂದು ಸಂಕಲ್ಪ ಮಾಡಿದ್ದೇವೆ. ಜನರು ತಿನ್ನುವ ಅನ್ನದ ಜೊತೆಗೆ, ಮನೆ ಮಕ್ಕಳನ್ನು ರಕ್ಷಿಸುವ ಕೆಲಸವಾಗಬೇಕು. ಜಾರ್ಖಂಡ್‌ ಉಳಿಸಬೇಕು ಅದಕ್ಕಾಗಿ ಎನ್‌ಆರ್‌ಸಿ ಜಾರಿಗೆ ತರಲಿದ್ದೇವೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಜಮ್ಮು-ಕಾಶ್ಮೀರ, ಹರಿಯಾಣ ಚುನಾವಣಾ ಫಲಿತಾಂಶಕ್ಕೆ ಕ್ಷಣಗಣನೆ – ಯಾರಿಗೆ ಗದ್ದುಗೆ?

    ಬಾಂಗ್ಲಾದೇಶ ನುಸುಳುಕೋರರಿಂದ, ಈ ಪ್ರದೇಶದ ಜನಸಂಖ್ಯಾಬಲವು ಈ ಹಿಂದಿಗಿಂತ 44 ಪ್ರತಿಶತದಷ್ಟು ಹೆಚ್ಚು ಜನಸಂಖ್ಯೆ ಹೊಂದಿದೆ. ಹಾಗಾಗಿ ಬೆಳವಣಿಗೆ ಮೇಲೆ ಪರಿಣಾಮ ಬೀರುತ್ತಿದೆ. ಇಲ್ಲಿನ ಮುಖ್ಯಮಂತ್ರಿ ಹೇಮಂತ್ ಸೋರೆನ್ ಸಹ ನುಸುಳುಕೋರರ ಪರವಾಗಿದ್ದಾರೆ. ವೋಟ್‌ ಬ್ಯಾಂಕ್‌ ರಾಜಕಾರಣಕ್ಕಾಗಿ ನುಸುಳುಕೋರರ ಪರ ಒಲವು ತೋರಿದ್ದಾರೆ. ಆದ್ದರಿಂದ ಮುಂದಿನ ಬಾರಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದರೆ ಎನ್‌ಸಿಆರ್‌ ಅನ್ನು ಜಾರಿಗೊಳಿಸುತ್ತೇವೆ. ಈದರಲ್ಲಿ ಸ್ಥಳೀಯ ನಿವಾಸಿಗಳನ್ನು ನೋಂದಾಯಿಸಿ ನುಸುಳುಕೋರರನ್ನು ದೇಶದಿಂದ ಹೊರಹಾಕಲಾಗುವುದು ಎಂದು ಶಿವರಾಜ್ ಸಿಂಗ್ ಚೌಹಾಣ್ ತಿಳಿಸಿದ್ದಾರೆ.

    ಈ ಹಿಂದೆ ಅಸ್ಸಾಂನಲ್ಲಿ ರಾಷ್ಟ್ರೀಯ ಪೌರತ್ವ ನೋಂದಣಿಯ ಅಂತಿಮ ಪಟ್ಟಿ ಸಿದ್ಧಪಡಿಸಲಾಗಿತ್ತು. ಎನ್ಆರ್​ಸಿ ಅಂತಿಮ ಪಟ್ಟಿಯಲ್ಲಿ 3.11 ಕೋಟಿ ಜನರ ಹೆಸರು ಸೇರ್ಪಡೆಗೊಂಡಿದ್ದು, ಅಸ್ಸಾಂನಲ್ಲಿರುವ 19.06 ಲಕ್ಷ ಮಂದಿಯ ಹೆಸರು ಪಟ್ಟಿಯಿಂದ ಹೊರಗುಳಿದಿತ್ತು. ಇದನ್ನೂ ಓದಿ: ದಲಿತರ ಮನೆಯಲ್ಲಿ ಅಡುಗೆ ಮಾಡಿ `ಪಾಕ ಪ್ರವೀಣ’ನಾದ ರಾಹುಲ್ ಗಾಂಧಿ

  • ರಸ್ತೆ ಗುಂಡಿಯಲ್ಲಿ ಕಾರು ಸಿಲುಕಿ ಪರದಾಡಿದ ಶಿವರಾಜ್ ಸಿಂಗ್ ಚೌಹಾಣ್!

    ರಸ್ತೆ ಗುಂಡಿಯಲ್ಲಿ ಕಾರು ಸಿಲುಕಿ ಪರದಾಡಿದ ಶಿವರಾಜ್ ಸಿಂಗ್ ಚೌಹಾಣ್!

    ರಾಂಚಿ: ಜಾರ್ಖಂಡ್‌ನ (Jharkhand) ಬಹರಗೋರಾ ನಗರದಲ್ಲಿ ಚುನಾವಣಾ ರ‍್ಯಾಲಿಗೆ ತೆರಳಿದ್ದ ಕೇಂದ್ರ ಸಚಿವ ಶಿವರಾಜ್ ಸಿಂಗ್ ಚೌಹಾಣ್ (Shivraj Singh Chouhan) ಅವರ ಕಾರು ರಸ್ತೆಯ ಕೆಸರು ಗುಂಡಿಯಲ್ಲಿ ಸಿಲುಕಿ ಪರದಾಡಿದ್ದಾರೆ.

    ವೈರಲ್ ಆಗಿರುವ ವಿಡಿಯೋದಲ್ಲಿ, ಅವರು ಪ್ರಯಾಣಿಸುತ್ತಿದ್ದ ಕಾರು ಜಲಾವೃತವಾದ ರಸ್ತೆಯ ದೊಡ್ಡ ಗುಂಡಿಯಲ್ಲಿ ಓರೆಯಾಗಿ ನಿಂತಿದೆ. ಈ ವೇಳೆ ಭದ್ರತಾ ಸಿಬ್ಬಂದಿ ಧಾವಿಸಿ ಕಾರನ್ನು ತಳ್ಳಲು ಯತ್ನಿಸಿದ್ದಾರೆ. ಆದರೆ ಕಾರು ಗುಂಡಿಯಿಂದ ಮೇಲೆ ಬರಲಿಲ್ಲ. ಬಳಿಕ ಶಿವರಾಜ್ ಚೌಹಾಣ್ ವಾಹನದಿಂದ ಹೊರಬರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಇದನ್ನೂ ಓದಿ: ಮುನಿರತ್ನ ವಿರುದ್ಧದ ಕೇಸ್‌ಗಳು ಅಧಿಕೃತವಾಗಿ ಎಸ್‌ಐಟಿಗೆ ವರ್ಗ

    ಶಿವರಾಜ್ ಸಿಂಗ್ ಚೌಹಾಣ್ ಜಾರ್ಖಂಡ್‌ನ ಬಿಜೆಪಿಯ (BJP) ಚುನಾವಣಾ ಉಸ್ತುವಾರಿ ಮತ್ತು ಮುಂಬರುವ ರಾಜ್ಯ ವಿಧಾನಸಭಾ ಚುನಾವಣೆಗೆ ಪಕ್ಷದ ಪ್ರಚಾರಕ್ಕಾಗಿ ಅಲ್ಲಿಗೆ ಬಂದಿದ್ದರು.

    ಇನ್ನೂ ರ‍್ಯಾಲಿಯಲ್ಲಿ ಮಾತಾಡಿದ ಅವರು, ರಾಜ್ಯದಲ್ಲಿ ಕಾರ್ಮೋಡ ಕಟ್ಟಿ ಮಳೆಯಾಗುತ್ತಿದೆ. ಇಲ್ಲಿ ಸೂರ್ಯ ಉದಯಿಸುತ್ತಾನೆ. ಆ ಸೂರ್ಯ ಕಮಲವೇ ಎಂದು ಹೇಳಬಲ್ಲೆ. ರಾಜ್ಯದಲ್ಲಿ ಬದಲಾವಣೆ ಬರುತ್ತದೆ ಎಂದು ಹೇಳಿದ್ದಾರೆ.

    ಜಾರ್ಖಂಡ್‌ನಲ್ಲಿ ಹೇಮಂತ್ ಸೊರೆನ್ ನೇತೃತ್ವದ ಸರ್ಕಾರದ ಐದು ವರ್ಷಗಳ ಅಧಿಕಾರಾವಧಿಯು ಜನವರಿ 2025 ರಲ್ಲಿ ಕೊನೆಗೊಳ್ಳಲಿದೆ. ಈ ವರ್ಷದ ಕೊನೆಯಲ್ಲಿ ರಾಜ್ಯ ವಿಧಾನಸಭಾ ಚುನಾವಣೆಯನ್ನು ನಿಗದಿಪಡಿಸಲಾಗಿದೆ. ಇದನ್ನೂ ಓದಿ: ಜಾತ್ಯಾತೀತತೆ ಯುರೋಪಿಯನ್ ಕಾನ್ಸೆಪ್ಟ್: ಭಾರತದಲ್ಲಿ ಸೆಕ್ಯುಲರಿಸಂ ಅಗತ್ಯವಿಲ್ಲ: ತಮಿಳುನಾಡು ರಾಜ್ಯಪಾಲ ರವಿ