Tag: jharkhand team

  • ದೆಹಲಿಯ ಹೋಟೆಲ್‍ನಲ್ಲಿ ಬೆಂಕಿ- ಜಾರ್ಖಂಡ್ ಟೀಂ, ಧೋನಿ ಪಾರು

    ದೆಹಲಿಯ ಹೋಟೆಲ್‍ನಲ್ಲಿ ಬೆಂಕಿ- ಜಾರ್ಖಂಡ್ ಟೀಂ, ಧೋನಿ ಪಾರು

    ನವದೆಹಲಿ: ದೆಹಲಿಯ ದ್ವಾರಕಾದಲ್ಲಿರುವ ವೆಲ್‍ಕಮ್ ಹೋಟೆಲ್‍ನಲ್ಲಿ ಇಂದು ಬೆಳಿಗ್ಗೆ ಬೆಂಕಿ ಅವಘಢ ಸಂಭವಿಸಿದ್ದು, ಹೋಟೆಲ್‍ನಲ್ಲಿ ತಂಗಿದ್ದ ಕ್ರಿಕೆಟಿಗ ಎಸಂಎಸ್ ಧೋನಿ ಹಾಗೂ ಜಾರ್ಖಂಡ್ ತಂಡವನ್ನು ರಕ್ಷಣೆ ಮಾಡಲಾಗಿದೆ.

    ಇಂದು ಬೆಳಿಗ್ಗೆ ಈ ಅನಾಹುತ ಸಂಭವಿಸಿದ್ದು ಸುಮಾರು 6.30ರ ವೇಳೆಗೆ ದೆಹಲಿ ಫೈರ್ ಸರ್ವೀಸ್‍ಗೆ ಕರೆ ಮಾಡಿ ವಿಷಯ ತಿಳಿಸಲಾಗಿತ್ತು. ಕೂಡಲೇ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ 7.30ರ ವೇಳೆಗೆ ಬೆಂಕಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ.

    ವಿಜಯ್ ಹಜಾರೆ ಟ್ರೋಫಿಯ ಸೆಮಿ ಫೈನಲ್ ಪಂದ್ಯವನ್ನು ಆಡಲು ಧೋನಿ ದೆಹಲಿಯಲ್ಲಿ ತಂಗಿದ್ದರು.

    ಘಟನೆಯಲ್ಲಿ ಅದೃಷ್ಟವಶಾತ್ ಯಾರಿಗೂ ಹಾನಿಯಾಗಿಲ್ಲ. ಆದ್ರೆ ಮೂಲಗಳ ಮಾಹಿತಿ ಪ್ರಕಾರ ಕ್ರಿಕೆಟ್ ತಂಡದ ಕಿಟ್ ಸುಟ್ಟು ಹೋಗಿದೆ ಎಂದು ಹೇಳಲಾಗಿದೆ. ಘಟನೆ ಹಿನ್ನೆಲೆಯಲ್ಲಿ ಪಂದ್ಯವನ್ನು ಶನಿವಾರಕ್ಕೆ ಮುಂದೂಡಲಾಗಿದೆ.

    ದೆಹಲಿಯ ಪಲಾಮ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಜಾರ್ಖಂಡ್ ತಂಡ ವಿದರ್ಭ ತಂಡವನ್ನು 6 ವಿಕೆಟ್‍ಗಳಿಂದ ಮಣಿಸಿ ಸೆಮಿ ಫೈನಲ್‍ಗೆ ಲಗ್ಗೆ ಇಟ್ಟಿದೆ. ಧೋನಿ ವಿಜಯ್ ಹಜಾರೆ ಸ್ಕ್ವಾಡ್‍ನ ಸದಸ್ಯರಾಗಿದ್ದು ಈವರೆಗೆ 6 ಪಂದ್ಯಗಳಲ್ಲಿ ನಾಯಕರಾಗಿದ್ದಾರೆ.