Tag: Jharkhand Assembly Election

  • ಜಾರ್ಖಂಡ್, ವಯನಾಡಲ್ಲಿ ಕಾಂಗ್ರೆಸ್ ಗೆಲುವಿಗೆ ಧನ್ಯವಾದ ತಿಳಿಸಿದ ರಾಹುಲ್ ಗಾಂಧಿ

    ಜಾರ್ಖಂಡ್, ವಯನಾಡಲ್ಲಿ ಕಾಂಗ್ರೆಸ್ ಗೆಲುವಿಗೆ ಧನ್ಯವಾದ ತಿಳಿಸಿದ ರಾಹುಲ್ ಗಾಂಧಿ

    ನವದೆಹಲಿ: ಮಹಾರಾಷ್ಟ್ರ, ಜಾರ್ಖಂಡ್ ಸೇರಿದಂತೆ ಇನ್ನಿತರ ಚುನಾವಣೆಗಳ ಫಲಿತಾಂಶ ಇಂದು (ನ.23) ಹೊರಬಿದ್ದಿದ್ದು, ಜಾರ್ಖಂಡ್ ಹಾಗೂ ವಯನಾಡು ಕ್ಷೇತ್ರದಲ್ಲಿ ಕಾಂಗ್ರೆಸ್ ವಿಜಯಕ್ಕೆ ರಾಹುಲ್ ಗಾಂಧಿ (Rahul Gandhi) ಟ್ವೀಟ್ ಮೂಲಕ ಜನತೆಗೆ ಧನ್ಯವಾದ ತಿಳಿಸಿದ್ದಾರೆ.

    ಜಾರ್ಖಂಡ್‌ನಲ್ಲಿ `ಇಂಡಿಯಾ’ ಒಕ್ಕೂಟಕ್ಕೆ ಮತಚಲಾಯಿಸಿ ಗೆಲುವು ನೀಡಿದ್ದಕ್ಕೆ ಹೃತ್ಪೂರ್ವಕ ಧನ್ಯವಾದಗಳು. ಸಿಎಂ ಹೇಮಂತ್ ಸೊರೆನ್ ಅವರಿಗೆ ಹಾಗೂ ಕಾಂಗ್ರೆಸ್, ಜೆಎಂಎಂ ಪಕ್ಷದ ಎಲ್ಲಾ ಕಾರ್ಯಕರ್ತರಿಗೆ ಅಭಿನಂದನೆಯನ್ನು ತಿಳಿಸಿದ್ದಾರೆ. ಈ ಗೆಲುವು ಕೇವಲ ಸಂವಿಧಾನದ ಜಯವಲ್ಲ. ಇದು ನೆಲ, ಜಲ, ಅರಣ್ಯಕ್ಕೆ ಸಲ್ಲುವ ಜಯವಾಗಿದೆ ಎಂದು ಬರೆದುಕೊಂಡಿದ್ದಾರೆ.ಇದನ್ನೂ ಓದಿ: ಇನ್‌ಸ್ಟಾಗ್ರಾಂನಲ್ಲಿ ಪರಿಚಯವಾದ ವ್ಯಕ್ತಿ ಮದುವೆಯಾಗಲು 5 ವರ್ಷದ ಮಗುವನ್ನು ಕೊಂದ ತಾಯಿ

    ಇನ್ನೂ ಮಹರಾಷ್ಟ್ರದ ಚುನಾವಣಾ ಫಲಿತಾಂಶ ಕುರಿತು ಹಂಚಿಕೊಂಡು, ರಾಜ್ಯದ ಎಲ್ಲಾ ಮತದಾರರಿಗೆ, ಕಾರ್ಯಕರ್ತರ ಶ್ರಮಕ್ಕಾಗಿ ಧನ್ಯವಾದಗಳು ತಿಳಿಸುತ್ತೇನೆ. ಆದರೆ ಮಹಾರಾಷ್ಟ್ರದ ಚುನಾವಣಾ ಫಲಿತಾಂಶ ಅನಿರೀಕ್ಷಿತವಾಗಿದ್ದು, ಈ ಕುರಿತು ವಿವರವಾಗಿ ವಿಶ್ಲೇಷಣೆ ನಡೆಸುತ್ತೇವೆ ಎಂದಿದ್ದಾರೆ.

    ವಯನಾಡಿನಲ್ಲಿರುವ ನನ್ನ ಕುಟುಂಬದ ಜನತೆ ಪ್ರಿಯಾಂಕಾ ಅವರ ಮೇಲೆ ಇಟ್ಟಿರುವ ನಂಬಿಕೆಯ ಕುರಿತು ನನಗೆ ಹೆಮ್ಮೆಯಿದೆ. ವಯನಾಡಿನ ಪ್ರಗತಿಗಾಗಿ ಪ್ರಿಯಾಂಕಾ ಧೈರ್ಯದಿಂದ ಮುನ್ನಡೆಯುತ್ತಾಳೆ ಎಂದು ನಾನು ನಂಬಿದ್ದೇನೆ ಎಂದು ಬರೆದುಕೊಂಡಿದ್ದಾರೆ.

    ಜಾರ್ಖಂಡ್‌ನ ಜೆಎಂಎಂ ನೇತೃತ್ವದ ಇಂಡಿಯಾ ಒಕ್ಕೂಟ 34 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದು, ಬಿಜೆಪಿ 21ರಲ್ಲಿ ಗೆಲುವು ಸಾಧಿಸಿದೆ.

    ಸಂಜೆ 7 ಗಂಟೆಯವರೆಗೆ ಮಹಾರಾಷ್ಟ್ರದಲ್ಲಿ ಮಹಾಯುತಿ ಮೈತ್ರಿಕೂಟವು 230 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದು, ಮಹಾವಿಕಾಸ ಅಘಾಡಿ 1 ಹಾಗೂ ಪಕ್ಷೇತರರು 7 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದ್ದಾರೆ.ಇದನ್ನೂ ಓದಿ: ಯಶ್‌ ನಟನೆಯ ‘ಟಾಕ್ಸಿಕ್‌’ ಸೆಟ್‌ನಲ್ಲಿ ಕಾಣಿಸಿಕೊಂಡ ಮತ್ತೊಬ್ಬ ಬಾಲಿವುಡ್‌ ನಟಿ

  • ಜಾರ್ಖಂಡ್ ವಿಧಾನಸಭೆ ಚುನಾವಣೆ – 43 ಕ್ಷೇತ್ರಗಳಿಗೆ ಇಂದು ಮತದಾನ

    ಜಾರ್ಖಂಡ್ ವಿಧಾನಸಭೆ ಚುನಾವಣೆ – 43 ಕ್ಷೇತ್ರಗಳಿಗೆ ಇಂದು ಮತದಾನ

    ರಾಂಚಿ: ಜಾರ್ಖಂಡ್‌ನ (Jharkhand) 81 ವಿಧಾನಸಭಾ ಕ್ಷೇತ್ರಗಳ ಪೈಕಿ 43 ಕ್ಷೇತಗಳಿಗೆ ಇಂದು (ನ.13) ಮತದಾನ ಆರಂಭವಾಗಿದ್ದು, ಒಟ್ಟು 683 ಅಭ್ಯರ್ಥಿಗಳು ಕಣದಲ್ಲಿದ್ದಾರೆ.

    ಇಂದು ದೇಶಾದ್ಯಂತ 11 ರಾಜ್ಯಗಳ 32 ವಿಧಾನಸಭಾ ಕ್ಷೇತ್ರಗಳಿಗೆ ಹಾಗೂ ಕೇರಳದ ವಯನಾಡ್ (Wayanad) ಲೋಕಸಭಾ ಕ್ಷೇತ್ರಕ್ಕೆ ಮತದಾನ ನಡೆಯುತ್ತಿದೆ.ಇದನ್ನೂ ಓದಿ: ಮುಡಾ ಹಗರಣ: ವಿಚಾರಣೆ ತೀವ್ರಗೊಳಿಸಿದ ಇ.ಡಿ – ಸಿಎಂ ಸಿದ್ದರಾಮಯ್ಯ ಆಪ್ತನಿಗೆ ಡ್ರಿಲ್

    ಜಾರ್ಖಂಡ್‌ನ 15 ಜಿಲ್ಲೆಗಳಲ್ಲಿ ಬೆಳಗ್ಗೆ 7 ಗಂಟೆಗೆ ಮತದಾನ ಆರಂಭವಾಗಿದ್ದು, ಸಂಜೆ 5 ಗಂಟೆಯವರೆಗೆ ನಡೆಯಲಿದೆ. ಚುನಾವಣಾ ಆಯೋಗವು ರಾಜ್ಯಾದ್ಯಂತ ಒಟ್ಟು 15,344 ಮತಗಟ್ಟೆಗಳನ್ನು ಸ್ಥಾಪಿಸಿದ್ದು, 225 ಸೂಕ್ಷ್ಮ ಮತಗಟ್ಟೆಗಳು ಎಂದು ಘೋಷಿಸಿದೆ. ಭದ್ರತಾ ಸುವ್ಯವಸ್ಥೆ ಕಾಪಾಡಲು 200 ಕಂಪನಿಗಳ ಭದ್ರತಾ ಪಡೆಗಳನ್ನು ನಿಯೋಜಿಸಿದೆ. ಒಟ್ಟು 2.60 ಕೋಡಿ ಮತದಾರರ ಪೈಕಿ ಈ ಹಂತದಲ್ಲಿ 1 ಕೋಟಿ 37 ಲಕ್ಷ ಮತದಾರರು ಮತ ಚಲಾಯಿಸಲಿದ್ದಾರೆ.

    ಎನ್‌ಡಿಎ ಮೈತ್ರಿಕೂಟದ ಬಿಜೆಪಿ, ಜೆಡಿ(ಯು), ಎಲ್‌ಜೆಪಿ ಮತ್ತು ಎಜೆಎಸ್ ಮತ್ತು ಇಂಡಿಯಾ ಮೈತ್ರಿಕೂಟಗಳ ಜೆಎಂಎಂ, ಕಾಂಗ್ರೆಸ್, ಆರ್‌ಜೆಡಿ ನಡುವೆ ನೇರ ಏರ್ಪಟ್ಟಿದೆ. ಮೊದಲ ಹಂತದ ಚುನವಾಣೆಯ ಪಶ್ಚಿಮದಲ್ಲಿ ಅತಿ ಹೆಚ್ಚು ಅಭ್ಯರ್ಥಿಗಳು ಕಣಕ್ಕಿಳಿದಿದ್ದು, ಪ್ರಮುಖ ಅಭ್ಯರ್ಥಿಗಳೆಂದರೆ ಚಂಪೈ ಸೊರೆನ್, ಮಹುವಾ ಮಜಿ, ಗೀತಾ ಕೋಡಾ, ಅಜೋಯ್ ಕುಮಾರ್, ಬನ್ನಾ ಗುಪ್ತಾ ಮತ್ತು ಸುಖರಾಮ್ ಓರಾನ್ ಸ್ಪರ್ಧಿಸುತ್ತಿದ್ದಾರೆ. ಜಗನ್ನಾಥಪುರದಲ್ಲಿ ಅತಿ ಕಡಿಮೆ ಅಭ್ಯರ್ಥಿಗಳಿದ್ದು, ಕೇವಲ ಎಂಟು ಅಭ್ಯರ್ಥಿಗಳು ಮಾತ್ರ ನಾಮಪತ್ರ ಸಲ್ಲಿಸಿದ್ದಾರೆ.

    ನ.20 ರಂದು ಎರಡನೇ ಹಂತದಲ್ಲಿ ಮತದಾನ ನಡೆಯಲಿದ್ದು, 528 ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ. ಇನ್ನೂ ನ.23 ರಂದು ಮತ ಎಣಿಕೆ ನಡೆಯಲಿದ್ದು, ಫಲಿತಾಂಶ ಪ್ರಕಟವಾಗಲಿದೆ.ಇದನ್ನೂ ಓದಿ: ಶಿಗ್ಗಾಂವಿ| ಒಳ್ಳೆಯ ಅಭ್ಯರ್ಥಿ ಆಯ್ಕೆ ಆಗಿ ಬರಲಿ – ಕುರುಬ ಸಮಾಜದ ವಯೋವೃದ್ಧನಿಂದ ಪೂಜೆ

  • ಮಹಿಳೆಯರಿಗೆ 2,100 ರೂ., ವಾರ್ಷಿಕ 2 ಎಲ್‌ಪಿಜಿ ಸಿಲಿಂಡರ್‌ ಫ್ರೀ – ಜಾರ್ಖಂಡ್‌ ಚುನಾವಣೆಗೆ ಬಿಜೆಪಿ ಗ್ಯಾರಂಟಿ

    ಮಹಿಳೆಯರಿಗೆ 2,100 ರೂ., ವಾರ್ಷಿಕ 2 ಎಲ್‌ಪಿಜಿ ಸಿಲಿಂಡರ್‌ ಫ್ರೀ – ಜಾರ್ಖಂಡ್‌ ಚುನಾವಣೆಗೆ ಬಿಜೆಪಿ ಗ್ಯಾರಂಟಿ

    ರಾಂಚಿ: ಮುಂಬರುವ ಜಾರ್ಖಂಡ್‌ ವಿಧಾನಸಭಾ ಚುನಾವಣೆಗೆ ಬಿಜೆಪಿ ಪ್ರಣಾಳಿಕೆಯನ್ನು (BJP Manifesto) ಕೇಂದ್ರ ಗೃಹಸಚಿವ ಅಮಿತ್‌ ಶಾ (Amit Shah) ಭಾನುವಾರ ಬಿಡುಗಡೆಗೊಳಿಸಿದರು.

    ಬಿಜೆಪಿ ಜಾರ್ಖಂಡ್‌ನಲ್ಲಿ (Jharkhand) ಅಧಿಕಾರಕ್ಕೆ ಬಂದರೆ ರಾಜ್ಯದ ಪ್ರತಿಯೊಬ್ಬ ಮಹಿಳೆಗೆ ತಿಂಗಳಿಗೆ 2,100 ರೂ. ನೀಡುವುದು ಸೇರಿದಂತೆ ಹಲವು ಗ್ಯಾರಂಟಿಗಳನ್ನು ಘೋಷಣೆ ಮಾಡಿದರು. ಇದನ್ನೂ ಓದಿ: 10 ದಿನಗಳಲ್ಲಿ ರಾಜೀನಾಮೆ ಕೊಡದಿದ್ರೆ ಸಿದ್ದಿಕಿಯಂತೆ ಹತ್ಯೆ – ಸಿಎಂ ಯೋಗಿಗೆ ಬೆದರಿಕೆ ಹಾಕಿದ್ದ ಮಹಿಳೆ ಅರೆಸ್ಟ್

    ಬಿಜೆಪಿ ಪ್ರಣಾಳಿಕೆ ಏನು?
    * ಪ್ರತಿ ಮನೆಗೆ 500 ರೂ.ಗೆ ಎಲ್‌ಪಿಜಿ ಸಿಲಿಂಡರ್‌ ಮತ್ತು ವಾರ್ಷಿಕ 2 ಉಚಿತ ಸಿಲಿಂಡರ್‌

    * ನುಸುಳುಕೋರರು ಆಕ್ರಮಿಸಿಕೊಂಡಿರುವ ಆದಿವಾಸಿಗಳ ಭೂಮಿಯನ್ನು ಆದಿವಾಸಿಗಳಿಗೆ ಹಿಂದಿರುಗಿಸುವುದಾಗಿ ಪ್ರತಿಜ್ಞೆ

    * ಬುಡಕಟ್ಟು ಜನಾಂಗದವರನ್ನು ಮದುವೆಯಾಗುವ ನುಸುಳುಕೋರರ ಮಕ್ಕಳಿಗೆ ಬುಡಕಟ್ಟು ಸ್ಥಾನಮಾನ ರದ್ದು

    * ಆದಿವಾಸಿಗಳನ್ನು ಏಕರೂಪ ನಾಗರಿಕ ಸಂಹಿತೆಯ (ಯುಸಿಸಿ) ವ್ಯಾಪ್ತಿಯಿಂದ ಹೊರಗಿಡಲಾಗುವುದು

    * ಪ್ರಶ್ನೆ ಪತ್ರಕೆ ಸೋರಿಕೆಗೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಕೈಗೊಂಡು ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸುವುದಾಗಿ ಭರವಸೆ

    * 5 ವರ್ಷಗಳಲ್ಲಿ ಯುವಕರಿಗೆ ಸ್ವಯಂ ಉದ್ಯೋಗಕ್ಕಾಗಿ 5 ಲಕ್ಷ ಅವಕಾಶಗಳನ್ನು ಖಾತರಿಪಡಿಸುತ್ತೇವೆ

    * 2,87,500 ಸರ್ಕಾರಿ ಹುದ್ದೆಗಳ ನೇಮಕಾತಿ ಪಾರದರ್ಶಕವಾಗಿ ನಡೆಯಲಿದ್ದು, ಮೊದಲ ಕ್ಯಾಬಿನೆಟ್‌ನಲ್ಲೇ ಪ್ರಕ್ರಿಯೆ ಶುರುವಾಗಲಿದೆ.

    * 2025ರ ನವೆಂಬರ್‌ ಒಳಗೆ 1.5 ಲಕ್ಷ ಹುದ್ದೆಗಳನ್ನು ಭರ್ತಿ ಮಾಡಲಾಗುವುದು.

    81 ಸದಸ್ಯ ಬಲದ ಕ್ಷೇತ್ರಗಳಿಗೆ ನ.13 ಮತ್ತು 20 ರಂದು ಚುನಾವಣೆ (Jharkhand Assembly Election) ನಡೆಯಲಿದೆ. ನ.23 ರಂದು ಮತ ಎಣಿಕೆ ನಡೆಯಲಿದೆ. ಇದನ್ನೂ ಓದಿ: ನ.7ರ ಒಳಗಡೆ ಬಾಕಿ ಹಣವನ್ನು ಪಾವತಿಸದೇ ಇದ್ದರೆ ವಿದ್ಯುತ್‌ ಕೊಡಲ್ಲ: ಬಾಂಗ್ಲಾಗೆ ಅದಾನಿ ಡೆಡ್‌ಲೈನ್‌

  • ಮಹರಾಷ್ಟ್ರ, ಜಾರ್ಖಂಡ್ ವಿಧಾನಸಭೆ ಚುನಾವಣೆ – ಸಿಎಂ ಏಕನಾಥ್ ಶಿಂಧೆ ಸೇರಿ ಪ್ರಮುಖ ನಾಯಕರಿಂದ ನಾಮಪತ್ರ ಸಲ್ಲಿಕೆ

    ಮಹರಾಷ್ಟ್ರ, ಜಾರ್ಖಂಡ್ ವಿಧಾನಸಭೆ ಚುನಾವಣೆ – ಸಿಎಂ ಏಕನಾಥ್ ಶಿಂಧೆ ಸೇರಿ ಪ್ರಮುಖ ನಾಯಕರಿಂದ ನಾಮಪತ್ರ ಸಲ್ಲಿಕೆ

    ನವದೆಹಲಿ: ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ಹಿನ್ನಲೆ ಮುಖ್ಯಮಂತ್ರಿ ಮತ್ತು ಶಿವಸೇನೆ ಮುಖ್ಯಸ್ಥ ಏಕನಾಥ್ ಶಿಂಧೆ (Eknath Shinde) ಅವರು ಥಾಣೆಯ (Thane) ಕೊಪ್ರಿ-ಪಚ್ಪಖಾಡಿ ಕ್ಷೇತ್ರದಿಂದ ಸ್ಪರ್ಧಿಸಲು ನಾಮಪತ್ರ (Nomination Paper) ಸಲ್ಲಿಸಿದ್ದಾರೆ.

    ಶಿಂಧೆ ಥಾಣೆಯ ಪ್ರಬಲ ನಾಯಕ ದಿವಂಗತ ಆನಂದ್ ದಿಘೆ ಅವರ ಸೋದರಳಿಯ ಶಿವಸೇನಾ (UBT) ಅಭ್ಯರ್ಥಿ ಕೇದಾರ್ ದಿಘೆ ಅವರನ್ನು ಎದುರಿಸಲಿದ್ದಾರೆ. 2009ರಲ್ಲಿ ಕ್ಷೇತ್ರ ರಚನೆಯಾದಾಗಿನಿಂದ ಶಿಂಧೆ ಈ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ. ನಾಮಪತ್ರ ಸಲ್ಲಿಕೆಗೂ ಮುನ್ನ ಏಕನಾಥ್ ಶಿಂಧೆ ಸಂತ ಏಕನಾಥ ಮಹಾರಾಜರ ವಂಶದ ಯೋಗಿರಾಜ್ ಮಹಾರಾಜ್ ಗೋಸ್ವಾಮಿಯವರಿಂದ ಆಶೀರ್ವಾದ ಪಡೆದರು. ಬಳಿಕ ರೋಡ್ ಶೋ ನಡೆಸಿದರು. ಅಲಂಕೃತ ರಥದಂತಹ ವಾಹನವನ್ನು ಏರಿ ನೂರಾರು ಬೆಂಬಲಿಗರು ಸಮ್ಮುಖದಲ್ಲಿ ಅವರು ನಾಮಪತ್ರ ಸಲ್ಲಿಸಲು ತೆರಳಿದರು. ಇದನ್ನೂ ಓದಿ: ನಾವು ಅಲ್ಲಾನ ವಿರೋಧಿಗಳಲ್ಲಾ- ಅಲ್ಲಾನ ಹೆಸರಿನ ಬದ್ಮಾಶ್‌ಗಿರಿ ಮಾಡೋರ ವಿರೋಧಿ: ಜೋಶಿ ಕಿಡಿ

    ಏಕನಾಥ್ ಶಿಂಧೆ ನಾಮಪತ್ರ ಸಲ್ಲಿಕೆ ವೇಳೆ ಕೇಂದ್ರ ಸಚಿವ ರಾಮದಾಸ್ ಅಠವಳೆ ಸೇರಿದಂತೆ ಶಿವಸೇನೆ ಮತ್ತು ಎನ್‌ಸಿಪಿಯ, ಆರ್‌ಪಿಐ (ಎ) ಯ ಪ್ರಮುಖ ನಾಯಕರು ಭಾಗಿಯಾಗಿದ್ದರು. 2019ರ ಚುನಾವಣೆಯಲ್ಲಿ, ಶಿವಸೇನೆ ವಿಭಜನೆಯ ಮೊದಲು ಏಕನಾಥ್ ಶಿಂಧೆ ಕೊಪ್ರಿ-ಪಚ್ಪಖಾಡಿ ಸ್ಥಾನವನ್ನು 65% ಕ್ಕಿಂತ ಹೆಚ್ಚು ಮತಗಳೊಂದಿಗೆ ಗೆದ್ದರು. ಕಾಂಗ್ರೆಸ್ ಅಭ್ಯರ್ಥಿ ಸಂಜಯ್ ಘಡಿಗಾಂವ್ಕರ್ ಮತ್ತು ಮಹಾರಾಷ್ಟ್ರ ನವನಿರ್ಮಾಣ ಸೇನೆ ಅಭ್ಯರ್ಥಿ ಮಹೇಶ್ ಪರಶುರಾಮ್ ಕದಂ ತಲಾ 13 ಪ್ರತಿಶತದಷ್ಟು ಮತ ಗಳಿಸಿದ್ದರು. ಇದನ್ನೂ ಓದಿ: ದೀಪಾವಳಿ ಹಬ್ಬ – ಬೆಂಗಳೂರಲ್ಲಿ ಪಟಾಕಿ ಸಿಡಿಸಲು ಬಿಬಿಎಂಪಿ ಮಾರ್ಗಸೂಚಿ

    ಉಪಮುಖ್ಯಮಂತ್ರಿ ಮತ್ತು ಎನ್‌ಸಿಪಿ ಮುಖ್ಯಸ್ಥ ಅಜಿತ್ ಪವಾರ್ ಕೂಡ ಬಾರಾಮತಿ ವಿಧಾನಸಭಾ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದರು. ಎನ್‌ಸಿಪಿ-ಎಸ್‌ಪಿ ಅಭ್ಯರ್ಥಿಯಾಗಿ ಅಜಿತ್ ಪವಾರ್ ಅವರ ಸೋದರಳಿಯ ಮತ್ತು ಶರದ್ ಪವಾರ್ ಅವರ ಮೊಮ್ಮಗ ಯುಗೇಂದ್ರ ಪವಾರ್ ಕ್ಷೇತ್ರದಿಂದ ಪ್ರತಿಸ್ಪರ್ಧಿ ಅಭ್ಯರ್ಥಿಯಾಗಿದ್ದಾರೆ. ಮಾಜಿ ಸಿಎಂ, ಹಿರಿಯ ಕಾಂಗ್ರೆಸ್ ನಾಯಕ ಪೃಥ್ವಿರಾಜ್ ಚವ್ಹಾಣ್ ಅವರು ಕರಡ ದಕ್ಷಿಣ ವಿಧಾನಸಭಾ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದ್ದಾರೆ. ಚಿಖಾಲಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶ್ವೇತಾ ಮಹಾಲೆ ಪಾಟೀಲ್ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರ ಸಮ್ಮುಖದಲ್ಲಿ ನಾಮಪತ್ರ ಸಲ್ಲಿಸಿದರು. ಕಂಕಾವಲಿಯಿಂದ ಬಿಜೆಪಿ ಅಭ್ಯರ್ಥಿ ನಿತೇಶ್ ರಾಣೆ ರೋಡ್ ಶೋ ನಡೆಸಿ ಇಂದು ನಾಮಪತ್ರ ಸಲ್ಲಿಸಿದರು. ಜಾರ್ಖಂಡ್‌ನಲ್ಲಿ ಜಮ್ತಾರಾ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸೀತಾ ಸೊರೇನ್ ಅವರು ನಾಮಪತ್ರ ಸಲ್ಲಿಸಿದರು. ಜಾರ್ಖಂಡ್ ಬಿಜೆಪಿ ಅಧ್ಯಕ್ಷ ಬಾಬುಲಾಲ್ ಮರಾಂಡಿ ಅವರು ಧನ್ವಾರ್ ವಿಧಾನಸಭಾ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದರು. ಇದನ್ನೂ ಓದಿ: 14,201 ಎಕರೆಯಲ್ಲಿ 773 ಎಕರೆ ಮಾತ್ರ ವಕ್ಫ್‌ಗೆ ನೋಟಿಫಿಕೇಶನ್ ಆಗಿದೆ: ಕೃಷ್ಣಭೈರೇಗೌಡ

    ವಯನಾಡ್ ಲೋಕಸಭೆ ಉಪ ಚುನಾವಣೆಗೆ ಪ್ರಿಯಾಂಕ್ ಗಾಂಧಿ ಸಲ್ಲಿಸಿದ ನಾಮಪತ್ರ ಸ್ವೀಕೃತಗೊಂಡಿದೆ. ಈ ಬೆನ್ನಲ್ಲೇ ವಯನಾಡ್‌ನ ಮೂರು ಪ್ರದೇಶಗಳಲ್ಲಿ ಪ್ರಿಯಾಂಕ ಗಾಂಧಿ ರೋಡ್ ಶೋ ನಡೆಸಿದರು. ಇಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಕ್ಷೇತ್ರಕ್ಕೆ ಸಮಯ ನೀಡಲ್ಲ ಎನ್ನುವ ಆರೋಪಕ್ಕೆ ಉತ್ತರ ನೀಡಿದರು. ನಾನು ಒಮ್ಮೆ ಆಯ್ಕೆಯಾಗಬೇಕು. ಆ ಬಳಿಕ ಎಷ್ಟು ಸಮಯ ನೀಡುವೆ ನೀವೆ ನೋಡುತ್ತಿರಿ. ಆಯ್ಕೆಯಾಗದೇ ಇದಕ್ಕೆ ಹೇಗೆ ಉತ್ತರಿಸಲಿ ಎಂದರು. ದೇಶದಲ್ಲಿ ನಿರುದ್ಯೋಗ ಸಮಸ್ಯೆಯು ಸಾರ್ವಕಾಲಿಕ ಉತ್ತುಂಗದಲ್ಲಿದೆ. ಪೋಷಕರು ತಮ್ಮ ಮಕ್ಕಳಿಗೆ ಶಿಕ್ಷಣ ನೀಡಲು ಶ್ರಮಿಸುತ್ತಿದ್ದಾರೆ. ನಿಮ್ಮ ಸೌಲಭ್ಯಗಳು ಸಾಕಷ್ಟು ಉತ್ತಮವಾಗಿಲ್ಲ. ಕಠಿಣ ತರಬೇತಿ ನೀಡುವ ಮತ್ತು ಕೆಲಸ ಮಾಡುವ ಎಲ್ಲಾ ಹುಡುಗರಿಗೆ ಹೊಸ ಅವಕಾಶಗಳನ್ನು ಸೃಷ್ಟಿಸಬೇಕಾಗಿದೆ ಎಂದು ಹೇಳಿದರು. ಇದನ್ನೂ ಓದಿ: 1974 ಮುಂಚಿನ ದಾಖಲೆ ಇದ್ದರೆ ರೈತರು ಟಾಸ್ಕ್‌ ಫೋರ್ಸ್‌ಗೆ ತಂದುಕೊಡಿ – ಎಂ.ಬಿ ಪಾಟೀಲ್‌

  • ಜಾರ್ಖಂಡ್ ವಿಧಾನಸಭಾ ಚುನಾವಣೆ ರಾಯಭಾರಿಯಾಗಿ ಲೆಜೆಂಡ್ ಕ್ರಿಕೆಟಿಗ ಎಂ.ಎಸ್ ಧೋನಿ ನೇಮಕ

    ಜಾರ್ಖಂಡ್ ವಿಧಾನಸಭಾ ಚುನಾವಣೆ ರಾಯಭಾರಿಯಾಗಿ ಲೆಜೆಂಡ್ ಕ್ರಿಕೆಟಿಗ ಎಂ.ಎಸ್ ಧೋನಿ ನೇಮಕ

    ರಾಂಚಿ: ಮುಂಬರುವ ಜಾರ್ಖಂಡ್ ವಿಧಾನಸಭಾ ಚುನಾವಣೆ (Jharkhand Assembly Election) ರಾಯಭಾರಿಯಾಗಿ (Brand Ambassador) ಕ್ರಿಕೆಟಿಗ ಮಹೇಂದ್ರ ಸಿಂಗ್ ಧೋನಿಯವರನ್ನು (Mahendra Singh Dhoni) ಚುನಾವಣಾ ಆಯೋಗ (Election Commission) ಆಯ್ಕೆ ಮಾಡಿದೆ.

    ನ.13 ಹಾಗೂ ನ.20ರಂದು ಎರಡು ಹಂತಗಳಲ್ಲಿ ನಡೆಯಲಿರುವ ಜಾರ್ಖಂಡ್ ವಿಧಾನಸಭಾ ಚುನಾವಣೆಗೆ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರನ್ನು ರಾಯಭಾರಿಯಾಗಿ ನೇಮಕ ಮಾಡಲಾಗಿದೆ.ಇದನ್ನೂ ಓದಿ: ರಸ್ತೆ ದಾಟುವಾಗ ಬೈಕ್ ಡಿಕ್ಕಿ – ಚಿಕಿತ್ಸೆ ಫಲಕಾರಿಯಾಗದೇ ಉಪತಹಶೀಲ್ದಾರ್ ಸಾವು

    ಜಾರ್ಖಂಡ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಜಾರ್ಖಂಡ್‌ ಮುಖ್ಯ ಚುನಾವಣಾಧಿಕಾರಿ ಕೆ.ರವಿಕುಮಾರ್ ಮಾತನಾಡಿ, ವಿಧಾನಸಭಾ ಚುನಾವಣೆಗೆ ಧೋನಿ ತಮ್ಮ ಫೋಟೋವನ್ನು ಬಳಸಲು ಚುನಾವಣಾ ಆಯೋಗಕ್ಕೆ ಒಪ್ಪಿಗೆ ನೀಡಿದ್ದಾರೆ. ಜೊತೆಗೆ ಇನ್ಯಾವುದೇ ವಿವರ ಬೇಕಾದಲ್ಲಿ ಅವರ ಒಪ್ಪಿಗೆಯ ಮೇರೆಗೆ ತೆಗೆದುಕೊಳ್ಳಲಾಗುವುದು. SWEEP (ಸಿಸ್ಟಮ್ಯಾಟಿಕ್ ವೋಟರ್ಸ್ ಎಜುಕೇಶನ್ ಮತ್ತು ಎಲೆಕ್ಟೋರಲ್ ಪಾರ್ಟಿಸಿಪೇಷನ್) ಕಾರ್ಯಕ್ರಮದ ಅಡಿಯಲ್ಲಿ ಮತದಾರರಲ್ಲಿ ಜಾಗೃತಿ ಮೂಡಿಸಲು ಧೋನಿ ಭಾಗಿಯಾಗಲಿದ್ದಾರೆ. ವಿಶೇಷವಾಗಿ ಮತದಾರರಲ್ಲಿ ಮತ ಚಲಾಯಿಸುವಂತೆ ಪ್ರೋತ್ಸಾಹಿಸುತ್ತಾರೆ ಎಂದು ಚುನಾವಣಾ ಆಯೋಗ ಆಶಿಸುತ್ತದೆ ಎಂದರು.

    ನ.13 ರಂದು ಮೊದಲ ಹಂತದಲ್ಲಿ ಒಟ್ಟು 43 ಕ್ಷೇತ್ರಗಳಿಗೆ ಮತದಾನ ನಡೆಯಲಿದೆ. ಈಗಾಗಲೇ ಶುಕ್ರವಾರ (ಅ.25ರಂದು) ನಾಮಪತ್ರ ಸಲ್ಲಿಕೆ ಪೂರ್ಣಗೊಂಡಿದೆ. ನಾಮಪತ್ರ ಸಲ್ಲಿಸಿದವರ ಪೈಕಿ ಮಾಜಿ ಮುಖ್ಯಮಂತ್ರಿ ಚಂಪೈ ಸೊರೆನ್ ಅವರು ಸರೈಕೆಲಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ.

    ಆಲ್ ಜಾರ್ಖಂಡ್ ಸ್ಟೂಡೆಂಟ್ಸ್ ಯೂನಿಯನ್ (AJSU) ಪಕ್ಷದ ಅಧ್ಯಕ್ಷ ಮತ್ತು ಜಾರ್ಖಂಡ್‌ನ ಮಾಜಿ ಉಪಮುಖ್ಯಮಂತ್ರಿ ಸುದೇಶ್ ಮಹತೋ ಅವರು ಸಿಲ್ಲಿ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದ್ದು, ಮುಂಬರುವ ಜಾರ್ಖಂಡ್ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ, ಎಜೆಎಸ್‌ಯು, ಜನತಾ ದಳ (United) ಮತ್ತು ಲೋಕ ಜನಶಕ್ತಿ ಪಕ್ಷ ಜೊತೆ ಮೈತ್ರಿ ಮಾಡಿಕೊಂಡು ಸ್ಪರ್ಧಿಸಲಿದೆ. ಬಿಜೆಪಿ 68, ಎಜೆಎಸ್‌ಯು 10, ಜೆಡಿಯು 2 ಮತ್ತು ಎಲ್‌ಜೆಪಿ 1 ಸ್ಥಾನಗಳಲ್ಲಿ ಸ್ಪರ್ಧಿಸಲಿವೆ.

    ಒಟ್ಟು 81 ಸ್ಥಾನಗಳಿಗೆ ನ.13 ಮತ್ತು ನ.20 ರಂದು ಎರಡು ಹಂತಗಳಲ್ಲಿ ಜಾರ್ಖಂಡ್ ವಿಧಾನಸಭೆ ಚುನಾವಣೆ ನಡೆಯಲಿದ್ದು, ನ.23 ರಂದು ಫಲಿತಾಂಶ ಪ್ರಕಟಿಸಲಿದೆ.ಇದನ್ನೂ ಓದಿ: ಜೆಇಇ ಪರೀಕ್ಷೆ ಪಾಸಾಗದ್ದಕ್ಕೆ 7ನೇ ಮಹಡಿಯಿಂದ ಬಿದ್ದು ವಿದ್ಯಾರ್ಥಿನಿ ಆತ್ಮಹತ್ಯೆ – ಡೆತ್‌ನೋಟ್‌ನಲ್ಲಿ ಏನಿತ್ತು?