Tag: jharkhand

  • ಪತ್ನಿಗೆ ಮೆಸೇಜ್‌ ಮಾಡಿದ್ದಕ್ಕೆ ಸ್ನೇಹಿತನ ಬರ್ಬರ ಹತ್ಯೆ – ಜಾರ್ಖಂಡ್‌ಗೆ ಹೊರಟಿದ್ದ ಆರೋಪಿ ಅರೆಸ್ಟ್‌

    ಪತ್ನಿಗೆ ಮೆಸೇಜ್‌ ಮಾಡಿದ್ದಕ್ಕೆ ಸ್ನೇಹಿತನ ಬರ್ಬರ ಹತ್ಯೆ – ಜಾರ್ಖಂಡ್‌ಗೆ ಹೊರಟಿದ್ದ ಆರೋಪಿ ಅರೆಸ್ಟ್‌

    ಬೆಂಗಳೂರು: ಪತ್ನಿಗೆ (Wife) ಮೆಸೇಜ್‌ ಮಾಡುತ್ತಿದ್ದ ಸ್ನೇಹಿತನ ಕತ್ತು‌ ಕೊಯ್ದು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಬೆಂಗಳೂರಿನ (Bengaluru) ಕೊಡುಗೇಹಳ್ಳಿ ಮರಿಯಪ್ಪನ ಪಾಳ್ಯದಲ್ಲಿ ನಡೆದಿದೆ.

    ಜಾರ್ಖಂಡ್ (Jharkhand) ಮೂಲದ ರಾಘು ಕೊಲೆಯಾದ ದುರ್ದೈವಿ. ರಾಜು ಕೊಲೆಗೈದ ಆರೋಪಿಯಾಗಿದ್ದಾನೆ. ಇಬ್ಬರೂ ಜಾರ್ಖಂಡ್‌ ಮೂಲದವರು. ಎರಡು ವರ್ಷಗಳ ಹಿಂದೆ ಇಬ್ಬರೂ ಬೆಂಗಳೂರಿಗೆ ಕೆಲಸ ಅರಸಿ ಬಂದಿದ್ದರು. ಇತ್ತೀಚೆಗೆ ರಾಘು ತನ್ನ ಸ್ನೇಹಿತನ ಹೆಂಡತಿ ಮೇಲೆ ಕಣ್ಣು ಹಾಕಿ, ಮೆಸೇಜ್‌ ಮಾಡುತ್ತಿದ್ದನಂತೆ. ಈ ವಿಚಾರ ತಿಳಿದ ರಾಜು ಸ್ನೇಹಿತ ರಾಘುವಿಗೆ ತಿಳುವಳಿಕೆ ಹೇಳಿದ್ದನಂತೆ.

    ಇಷ್ಟಾದರೂ ರಾಘು ಮಾತ್ರ ತನ್ನ ಹಳೆ ಚಾಳಿ ಬಿಡದೇ ಮತ್ತೆ ಸ್ನೇಹಿತನ ಪತ್ನಿಗೆ ಮೆಸೇಜ್‌ ಮಾಡುವುದನ್ನು ಮುಂದುವರಿಸಿದ್ದನಂತೆ. ಇದರಿಂದ ಕೋಪಗೊಂಡ ರಾಜು ಸೋಮವಾರ (ಅ.6) ರಾತ್ರಿ ರಾಘು ಜೊತೆ ಗಲಾಟೆ ಮಾಡಿ, ಕತ್ತು ಕೊಯ್ದು ಹತ್ಯೆ ಮಾಡಿದ್ದಾನೆ. ಬಳಿಕ ಆರೋಪಿ ಜಾರ್ಖಂಡ್‌ಗೆ ತೆರಳಲು ಬೈಯ್ಯಪನಹಳ್ಳಿ ರೈಲು ನಿಲ್ದಾಣಕ್ಕೆ ಹೋಗಿದ್ದಾನೆ. ಇದನ್ನೂ ಓದಿ: ಯಾದಗಿರಿ | ಸೆಕ್ಸ್‌ಗೆ ಒಪ್ಪದಿದ್ದಕ್ಕೆ ಪತ್ನಿಯ ಭೀಕರ ಕೊಲೆ – ಕೊಡಲಿಯೊಂದಿಗೆ ಪೊಲೀಸರಿಗೆ ಶರಣಾದ ಹಂತಕ

    ಕೊಲೆ ವಿಚಾರ ತಿಳಿದ ಪೊಲೀಸರು, ಸ್ಥಳದಲ್ಲಿ ಪರಿಶೀಲನೆ ನಡೆಸಿದಾಗ, ರಾಜುವಿನ ಕೈವಾಡದ ಬಗ್ಗೆ ಶಂಕೆ ವ್ಯಕ್ತವಾಗಿತ್ತು. ತಕ್ಷಣ ಆತನ ಬಗ್ಗೆ ಮಾಹಿತಿ ಪಡೆದು ಪೊಲೀಸರು ಹುಡುಕಾಟ ನಡೆಸಿದ್ದಾರೆ. ಈ ವೇಳೆ ಬೈಯಪ್ಪನಹಳ್ಳಿ ರೈಲು ನಿಲ್ದಾಣದಿಂದ ಜಾರ್ಖಂಡ್‌ಗೆ ರೈಲು ಇರುವ ಮಾಹಿತಿ ತಿಳಿದು, ರೈಲು ನಿಲ್ದಾಣಕ್ಕೆ ಹೋಗಿ ಪರಿಶೀಲನೆ ನಡೆಸಿದಾಗ ಆರೋಪಿ ಪತ್ತೆಯಾಗಿದ್ದಾನೆ. ಆತನನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಇದನ್ನೂ ಓದಿ: Bengaluru | ಪತಿಯೊಂದಿಗೆ ಗಲಾಟೆ – ಗೃಹಿಣಿ ನೇಣಿಗೆ ಶರಣು

  • ಜಾರ್ಖಂಡ್‌ನಲ್ಲಿ ಎನ್‌ಕೌಂಟರ್ – ಮೋಸ್ಟ್ ವಾಂಟೆಡ್ ಮಾವೋವಾದಿಯ ಹತ್ಯೆಗೈದ ಭದ್ರತಾ ಪಡೆ

    ಜಾರ್ಖಂಡ್‌ನಲ್ಲಿ ಎನ್‌ಕೌಂಟರ್ – ಮೋಸ್ಟ್ ವಾಂಟೆಡ್ ಮಾವೋವಾದಿಯ ಹತ್ಯೆಗೈದ ಭದ್ರತಾ ಪಡೆ

    -10 ಲಕ್ಷ ರೂ. ರಿವಾರ್ಡ್‌ ಹೊಂದಿದ್ದ ಮಾವೋವಾದಿಯ ಹತ್ಯೆ 

    ರಾಂಚಿ: ಭದ್ರತಾ ಪಡೆ ಹಾಗೂ ಮಾವೋವಾದಿಗಳ ಮಧ್ಯೆ ನಡೆದ ಗುಂಡಿನ ಚಕಮಕಿಯಲ್ಲಿ ಮೋಸ್ಟ್ ವಾಂಟೆಡ್ ಮಾವೋವಾದಿಯನ್ನು ಭದ್ರತಾ ಪಡೆಗಳು (Security Forces) ಹತ್ಯೆಗೈದಿದ್ದಾರೆ.

    ಜಾರ್ಖಂಡ್‌ನ (Jharkhand) ಪಶ್ಚಿಮ ಸಿಂಗ್‌ಭೂಮ್ ಜಿಲ್ಲೆಯ ಗೋಯಿಲ್‌ಕೇರಾ ಪೊಲೀಸ್ ಠಾಣಾ (Goilkera Police Station) ವ್ಯಾಪ್ತಿಯಲ್ಲಿ ಬರುವ ಬುರ್ಜುವಾ ಬೆಟ್ಟದಲ್ಲಿ ಭಾನುವಾರ (ಸೆ.7) ಬೆಳಗ್ಗೆ ಎನ್‌ಕೌಂಟರ್ ನಡೆದಿದೆ.

    ಈ ಕುರಿತು ಅಧಿಕಾರಿಗಳು ಮಾಹಿತಿ ನೀಡಿದ್ದು, ಎನ್‌ಕೌಂಟರ್ ಬಳಿಕ ನಡೆದ ಶೋಧ ಕಾರ್ಯಾಚರಣೆಯಲ್ಲಿ ಶವವೊಂದು ಪತ್ತೆಯಾಗಿದೆ. ಮೃತ ವ್ಯಕ್ತಿಯನ್ನು ಸಿಪಿಐನ (ಮಾವೋವಾದಿ) ಸ್ವಯಂ ಘೋಷಿತ ವಲಯ ಕಮಾಂಡರ್ ಅಮಿತ್ ಹನ್ಸ್ದಾ ಅಲಿಯಾಸ್ ಆಪ್ತಾನ್ ಎಂದು ಗುರುತಿಸಲಾಗಿದೆ. ಈ ಮೊದಲು ಈ ವ್ಯಕ್ತಿಯನ್ನು ಪತ್ತೆಹಚ್ಚಿದರೆ 10 ಲಕ್ಷ ರೂ. ನೀಡುವುದಾಗಿ ಘೋಷಿಸಲಾಗಿತ್ತು. ಸದ್ಯ ಸ್ಥಳದಲ್ಲಿ ಶೋಧ ಕಾರ್ಯಾಚರಣೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.

    ಗೋಯಿಲ್‌ಕೇರಾ ಪೊಲೀಸ್ ಠಾಣಾ ವ್ಯಾಪ್ತಿಯ ಪ್ರದೇಶವೊಂದಕ್ಕೆ ಮಾವೋವಾದಿಗಳು ಬರುವ ಬಗ್ಗೆ ಚೈಬಾಸಾ ಪೊಲೀಸ್ ವರಿಷ್ಠಾಧಿಕಾರಿಗೆ ಸುಳಿವು ಸಿಕ್ಕಿತ್ತು. ಅವರ ಮಾಹಿತಿಯ ಆಧಾರದ ಮೇಲೆ ಭದ್ರತಾ ಪಡೆಗಳು ಭಾನುವಾರ (ಸೆ.7) ಬೆಳಗ್ಗೆ 6 ಗಂಟೆ ಸುಮಾರಿಗೆ ಸ್ಥಳಕ್ಕೆ ತೆರಳಿದಾಗ ಗುಂಡಿನ ಚಕಮಕಿ ನಡೆದಿದೆ. ಈ ಸಂದರ್ಭದಲ್ಲಿ ಮಾವೋವಾದಿಗಳು ದಟ್ಟಾರಣ್ಯದೊಳಗೆ ಪರಾರಿಯಾಗಿದ್ದು, ಶೋಧ ಕಾರ್ಯಾಚರಣೆ ವೇಳೆ ಓರ್ವನ ಮೃತದೇಹ ಪತ್ತೆಯಾಗಿದೆ ಎಂದಿದ್ದಾರೆ.

  • ಶಿಬು ಸೊರೇನ್ ಇಡೀ ಜೀವನವನ್ನು ಬುಡಕಟ್ಟು ಸಮುದಾಯದ ಕಲ್ಯಾಣಕ್ಕಾಗಿ ಮೀಸಲಿಟ್ಟಿದ್ದರು: ಮೋದಿ ಸಂತಾಪ

    ಶಿಬು ಸೊರೇನ್ ಇಡೀ ಜೀವನವನ್ನು ಬುಡಕಟ್ಟು ಸಮುದಾಯದ ಕಲ್ಯಾಣಕ್ಕಾಗಿ ಮೀಸಲಿಟ್ಟಿದ್ದರು: ಮೋದಿ ಸಂತಾಪ

    ನವದೆಹಲಿ: ಜಾರ್ಖಂಡ್‌ನ (Jharkhand) ಮಾಜಿ ಮುಖ್ಯಮಂತ್ರಿ ಶಿಬು ಸೊರೇನ್ (Shibu Soren) ನಿಧನಕ್ಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿ (Narendra Modi) ಸಂತಾಪ ಸೂಚಿಸಿದ್ದಾರೆ.

    ಶಿಬು ಸೊರೇನ್ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ದೆಹಲಿಯ ಗಂಗಾರಾಮ್ ಆಸ್ಪತ್ರೆಗೆ ತೆರಳಿದ ಮೋದಿ, ಶಿಬು ಸೊರೇನ್ ಅವರಿಗೆ ಅಂತಿಮ ನಮನ ಸಲ್ಲಿಸಿದರು. ಅಲ್ಲದೇ ಕುಟುಂಬಸ್ಥರನ್ನು ಭೇಟಿ ಮಾಡಿ ಸಂತಾಪ ಸೂಚಿಸಿದರು. ಇದನ್ನೂ ಓದಿ: ಬಿಬಿಎಂಪಿ ಚುನಾವಣೆ; ನವೆಂಬರ್ 3ಕ್ಕೆ ವಿಚಾರಣೆ ಮುಂದೂಡಿದ ಸುಪ್ರೀಂ

    ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ ಮೋದಿ, ಶಿಬು ಸೊರೇನ್ ಅವರು ಸಾರ್ವಜನಿಕ ಜೀವನದ ಶ್ರೇಣಿಯಲ್ಲಿ ಏರಿದ ತಳಮಟ್ಟದ ನಾಯಕರಾಗಿದ್ದರು. ಬುಡಕಟ್ಟು ಸಮುದಾಯಗಳು, ಬಡವರು ಮತ್ತು ದೀನದಲಿತರನ್ನು ಸಬಲೀಕರಣಗೊಳಿಸುವ ಬಗ್ಗೆ ಅವರು ವಿಶೇಷವಾಗಿ ಉತ್ಸುಕರಾಗಿದ್ದರು. ಅಲ್ಲದೇ ತಮ್ಮ ಇಡೀ ಜೀವನವನ್ನು ಬುಡಕಟ್ಟು ಸಮುದಾಯದ ಕಲ್ಯಾಣಕ್ಕಾಗಿ ಮೀಸಲಿಟ್ಟಿದ್ದರು. ಅದಕ್ಕಾಗಿ ಅವರನ್ನು ಯಾವಾಗಲೂ ಸ್ಮರಿಸಲಾಗುವುದು. ಅವರ ನಿಧನದಿಂದ ದುಃಖಿತನಾಗಿದ್ದೇನೆ ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಆ.5ರಂದು ಸಾರಿಗೆ ನೌಕರರ ಮುಷ್ಕರ; 40% ಖಾಸಗಿ ಬಸ್ ರಸ್ತೆಗಿಳಿಸಲು ಸರ್ಕಾರ ನಿರ್ಧಾರ

    ಜಾರ್ಖಂಡ್ ಮಾಜಿ ಮುಖ್ಯಮಂತ್ರಿ ಹಾಗೂ ಜಾರ್ಖಂಡ್ ಮುಕ್ತಿ ಮೋರ್ಚಾ ಸ್ಥಾಪಕರಲ್ಲಿ ಒಬ್ಬರಾದ ಶಿಬು ಸೊರೇನ್ ಅವರು 81ನೇ ವಯಸ್ಸಿನಲ್ಲಿ ವಿಧಿವಶರಾಗಿದ್ದಾರೆ. ಮೂತ್ರಪಿಂಡ ಸಂಬಂಧಿತ ಸಮಸ್ಯೆಯಿಂದ ಬಳಲುತ್ತಿದ್ದ ಸೊರೇನ್ ಅವರನ್ನ ದೆಹಲಿಯ ಗಂಗಾರಾಮ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕಳೆದ ಒಂದು ತಿಂಗಳಿಗೂ ಹೆಚ್ಚು ಸಮಯದಿಂದ ಅವರು ಚಿಕಿತ್ಸೆ ಪಡೆಯುತ್ತಿದ್ದರು. ಆರೋಗ್ಯ ಪರಿಸ್ಥಿತಿ ಗಂಭೀರವಾಗಿದ್ದರಿಂದ ಇತ್ತೀಚೆಗೆ ವೆಂಟಿಲೇಟರ್‌ನಲ್ಲಿ ಇರಿಸಲಾಗಿತ್ತು ಎಂದು ತಿಳಿದುಬಂದಿದೆ. ಇದನ್ನೂ ಓದಿ: ರಾಹುಲ್‌ ಗಾಂಧಿ ಪ್ರತಿಭಟನಾ ರ‍್ಯಾಲಿ ಆ.8ಕ್ಕೆ ಮುಂದೂಡಿಕೆ: ಡಿಕೆಶಿ

  • ಜಾರ್ಖಂಡ್‌ ಮಾಜಿ ಮುಖ್ಯಮಂತ್ರಿ ಶಿಬು ಸೊರೇನ್ ವಿಧಿವಶ

    ಜಾರ್ಖಂಡ್‌ ಮಾಜಿ ಮುಖ್ಯಮಂತ್ರಿ ಶಿಬು ಸೊರೇನ್ ವಿಧಿವಶ

    ರಾಂಚಿ: ಜಾರ್ಖಂಡ್ ಮಾಜಿ ಮುಖ್ಯಮಂತ್ರಿ ಹಾಗೂ ಜಾರ್ಖಂಡ್ ಮುಕ್ತಿ ಮೋರ್ಚಾ (JMM) ಸ್ಥಾಪಕರಲ್ಲಿ ಒಬ್ಬರಾದ ಶಿಬು ಸೊರೇನ್‌ (Shibu Soren) ಅವರು 81ನೇ ವಯಸ್ಸಿನಲ್ಲಿ ವಿಧಿವಶರಾಗಿದ್ದಾರೆ.

    ಮೂತ್ರಪಿಂಡ ಸಂಬಂಧಿತ ಸಮಸ್ಯೆಯಿಂದ ಬಳಲುತ್ತಿದ್ದ ಸೊರೇನ್ ಅವರನ್ನ ದೆಹಲಿಯ ಗಂಗಾರಾಮ್ ಆಸ್ಪತ್ರೆಗೆ (Ganga Ram Hospital) ದಾಖಲಿಸಲಾಗಿತ್ತು. ಕಳೆದ ಒಂದು ತಿಂಗಳಿಗೂ ಹೆಚ್ಚು ಸಮಯದಿಂದ ಅವರು ಚಿಕಿತ್ಸೆ ಪಡೆಯುತ್ತಿದ್ದರು. ಆರೋಗ್ಯ ಪರಿಸ್ಥಿತಿ ಗಂಭೀರವಾಗಿದ್ದರಿಂದ ಇತ್ತೀಚೆಗೆ ವೆಂಟಿಲೇಟರ್‌ನಲ್ಲಿ ಇರಿಸಲಾಗಿತ್ತು ಎಂದು ತಿಳಿದುಬಂದಿದೆ. ಇದನ್ನೂ ಓದಿ: ಉತ್ತರ ಪ್ರದೇಶದ 17 ಜಿಲ್ಲೆಗಳಲ್ಲಿ ಪ್ರವಾಹ – 12 ಮಂದಿ ಸಾವು, ಪ್ರಯಾಗ್‌ರಾಜ್‌ ಬಹುತೇಕ ಮುಳುಗಡೆ

    ತಂದೆಯ ನಿಧನದ ಮಾಹಿತಿಯನ್ನು ಪುತ್ರನೂ ಆಗಿರುವ ಜಾರ್ಖಂಡ್‌ ಸಿಎಂ ಹೇಮಂತ್ ಸೊರೇನ್‌ (Hemant Soren) ತಮ್ಮ ಎಕ್ಸ್‌ ಪೋಸ್ಟ್‌ನಲ್ಲಿ ಹಂಚಿಕೊಂಡಿದ್ದಾರೆ. ʻಪ್ರೀತಿಯ ದಿಶೋಮ್ ಗುರೂಜಿ ನಮ್ಮನ್ನ ಅಗಲಿದ್ದಾರೆ. ನಾನಿಂದು ಎಲ್ಲವನ್ನೂ ಕಳೆದುಕೊಂಡೆʼ ಅಂತ ಭಾವುಕ ಸಂದೇಶವೊಂದನ್ನೂ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಗ್ರೌಂಡ್‌ ಪೆನೆಟ್ರೇಟಿಂಗ್ ರೇಡಾರ್‌ನಿಂದ ಅಸ್ಥಿಪಂಜರ ಪತ್ತೆ ಕಾರ್ಯ ನಡೆಸಿ – ಎಸ್‌ಐಟಿಗೆ ದೂರುದಾರ ಹೊಸ ರಿಕ್ವೆಸ್ಟ್‌

    ಜಾರ್ಖಂಡ್ ಮುಕ್ತಿ ಮೋರ್ಚಾದ ಮುಖಂಡರಾದ ಶಿಬು ಸೊರೇನ್ ಅವರು ಕಳೆದ 38 ವರ್ಷಗಳಿಂದ ಪಕ್ಷದ ಚುಕ್ಕಾಣಿ ಹಿಡಿದಿದ್ದರು. 4 ದಶಕಗಳ ಕಾಲ ರಾಜಕೀಯ ಜೀವನದಲ್ಲಿ ಶಿಬು ಸೊರೇನ್‌ ತಮ್ಮದೇ ಛಾಪು ಮೂಡಿಸಿದ್ದಾರೆ. 8 ಬಾರಿ ಲೋಕಸಭೆಗೆ, ಎರಡು ಅವಧಿಗೆ ರಾಜ್ಯಸಭಾ ಸಂಸದರಾಗಿ ಆಯ್ಕೆಯಾಗಿದ್ದರು.  ಇದನ್ನೂ ಓದಿ: ಕೆಲವರು ಅಧಿಕಾರ ಹಂಚಿಕೊಳ್ಳಲು ಒಪ್ಪಲ್ಲ – ಸಿದ್ದರಾಮಯ್ಯಗೆ ಟಾಂಗ್‌ ಕೊಟ್ರಾ ಡಿಕೆಶಿ?

  • ಕಠಿಣ ಸಂದರ್ಭದಲ್ಲೂ ಅಭಿವೃದ್ಧಿಯ ದೀಪ ಬೆಳಗಿಸಬಹುದು – ಮಾಜಿ ಮಾವೋವಾದಿಗಳ ಮೀನು ಕೃಷಿಗೆ ಮೋದಿ ಶ್ಲಾಘನೆ

    ಕಠಿಣ ಸಂದರ್ಭದಲ್ಲೂ ಅಭಿವೃದ್ಧಿಯ ದೀಪ ಬೆಳಗಿಸಬಹುದು – ಮಾಜಿ ಮಾವೋವಾದಿಗಳ ಮೀನು ಕೃಷಿಗೆ ಮೋದಿ ಶ್ಲಾಘನೆ

    ರಾಂಚಿ: ಜಾರ್ಖಂಡ್‌ನಲ್ಲಿ (Jharkhand) ಮಾಜಿ ಮಾವೋವಾದಿ (Ex-Maoists) ಮೀನು ಸಾಕಣೆದಾರನಾಗಿ ಬದಲಾದ ವಿಚಾರಕ್ಕೆ ಪ್ರಧಾನಿ ನರೇಂದ್ರ ಮೋದಿ (Narendra Modi) ಶ್ಲಾಘಿಸಿದ್ದಾರೆ. ಮನ್ ಕಿ ಬಾತ್‌ನ 124 ನೇ ಆವೃತ್ತಿಯಲ್ಲಿ ಈ ಬಗ್ಗೆ ಅವರು ಮಾತಾಡಿದ್ದಾರೆ.

    ಗುಮ್ಲಾದ ಬಾಸಿಯಾ ಬ್ಲಾಕ್ ಒಂದು ಕಾಲದಲ್ಲಿ ಮಾವೋವಾದಿ ಹಿಂಸಾಚಾರಕ್ಕೆ ಹೆಸರುವಾಸಿಯಾಗಿತ್ತು. ಅಲ್ಲಿನ ಹಳ್ಳಿಗಳು ನಿರ್ಜನವಾಗಿದ್ದವು ಮತ್ತು ಜನರು ಭಯದಲ್ಲಿ ವಾಸಿಸುತ್ತಿದ್ದರು. ಉದ್ಯೋಗಾವಕಾಶಗಳ ಕೊರತೆಯಿಂದ ಯುವಕರು ವಲಸೆ ಹೋಗುತ್ತಿದ್ದರು. ಅಲ್ಲಿ ಹಿಂಸಾಚಾರವನ್ನು ಕೈಬಿಟ್ಟು ಮಾಜಿ ಮಾವೋವಾದಿಗಳು ಮೀನುಗಾರರಾಗಿ ಬದಲಾಗಿದ್ದಾರೆ. ಇದು ಅತ್ಯಂತ ಕಠಿಣ ಸಂದರ್ಭಗಳಲ್ಲಿಯೂ ಅಭಿವೃದ್ಧಿಯ ದೀಪವನ್ನು ಬೆಳಗಿಸಬಹುದು ಎಂಬುದಕ್ಕೆ ಸಾಕ್ಷಿಯಾಗಿದೆ ಎಂದು ಅವರು ಹೇಳಿದ್ದಾರೆ. ಇದನ್ನೂ ಓದಿ: Mann ki Baat: ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲಾಗೆ ಮೋದಿ ಪ್ರಶಂಸೆ

    ಜೂ.27 ರಂದು ಮಾಧ್ಯಮವೊಂದರಲ್ಲಿ ʻಮೀನು ಸಾಕಣೆ ಜಾರ್ಖಂಡ್‌ನಲ್ಲಿ ಮಾಜಿ ಮಾವೋವಾದಿಗಳನ್ನು ಹೇಗೆ ಪರಿವರ್ತಿಸುತ್ತಿದೆʼಎಂಬ ಶಿರ್ಷಿಕೆಯಲ್ಲಿ ಬರಹ ಪ್ರಕಟವಾಗಿತ್ತು. ಇದನ್ನು ಉಲ್ಲೇಖಿಸಿ, ಹಿಂಸಾಚಾರದ ಮಾರ್ಗವನ್ನು ತ್ಯಜಿಸಿದ ಮಾಜಿ ಮಾವೋವಾದಿ ಓಂ ಪ್ರಕಾಶ್ ಸಾಹು ಅವರ ಸ್ಪೂರ್ತಿದಾಯಕ ಕಥೆಯನ್ನು ವಿವರಿಸಿದ್ದಾರೆ. ಈ ವೇಳೆ,  ಕೆಲವೊಮ್ಮೆ ಕತ್ತಲೆ ಹೆಚ್ಚು ಇರುವ ಸ್ಥಳದಿಂದ ಅತ್ಯಂತ ಪ್ರಕಾಶಮಾನವಾದ ಬೆಳಕು ಹೊರಹೊಮ್ಮುತ್ತದೆ ಎಂದು, ಈ ಬದಲಾವಣೆಯನ್ನು ಕೊಂಡಾಡಿದ್ದಾರೆ.

    ಸಾಹು ಹಿಂಸಾಚಾರವನ್ನು ತ್ಯಜಿಸಿ ಮೀನು ಸಾಕಣೆಯನ್ನು ಪ್ರಾರಂಭಿಸಲು ನಿರ್ಧರಿಸಿದಾಗ ಬದಲಾವಣೆ ಪ್ರಾರಂಭವಾಯಿತು. ಮೊದಲು ಬಂದೂಕುಗಳನ್ನು ಹಿಡಿದಿದ್ದವರು ಈಗ ಮೀನುಗಾರಿಕೆ ಬಲೆಗಳನ್ನು ಕೈಗೆತ್ತಿಕೊಂಡಿದ್ದಾರೆ. ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆ (PMMSY)ಯ ಪ್ರಾರಂಭವು ಅವರಿಗೆ ಹೊಸ ಶಕ್ತಿ, ಸರ್ಕಾರಿ ತರಬೇತಿ ಮತ್ತು ಕೊಳ ನಿರ್ಮಾಣಕ್ಕೆ ಸಹಾಯವನ್ನು ಒದಗಿಸಿದೆ. ಈ ಯೋಜನೆ ಗುಮ್ಲಾದಲ್ಲಿ ಮೀನುಗಾರಿಕೆ ಕ್ರಾಂತಿಗೆ ಕಾರಣವಾಗಿದೆ. ಈಗ ಬಾಸಿಯಾ ಬ್ಲಾಕ್‌ನ 150 ಕ್ಕೂ ಹೆಚ್ಚು ಕುಟುಂಬಗಳು ಮೀನು ಸಾಕಣೆಯಲ್ಲಿ ತೊಡಗಿವೆ. ಅನೇಕ ಮಾಜಿ ಮಾವೋವಾದಿ ಸಂಘಟನೆಯ ಸದಸ್ಯರು ಹಳ್ಳಿಗಳಲ್ಲಿ ಗೌರವಯುತವಾಗಿ ವಾಸಿಸುತ್ತಿದ್ದಾರೆ. ಇತರರಿಗೆ ಉದ್ಯೋಗವನ್ನು ಒದಗಿಸುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.

    ಸಾಹು ಅವರ ಹೊರತಾಗಿ, ಮಾಜಿ ಮಾವೋವಾದಿ ಜ್ಯೋತಿ ಲಕ್ರಾ ಮತ್ತು ಈಶ್ವರ್ ಗೋಪ್ ಅವರ ಬಗ್ಗೆಯೂ ಉಲ್ಲೇಖಿಸಿದ್ದಾರೆ. 41 ವರ್ಷದ ಜ್ಯೋತಿ ಲಕ್ರಾ, 2002 ರಲ್ಲಿ ಹಿಂಸಾಚಾರ ಕೈಬಿಟ್ಟು ಪಿಎಂಎಂಎಸ್‌ವೈ ಯೋಜನೆಯ ಲಾಭ ಪಡೆದು ಮೀನು ಮೇವಿನ ಗಿರಣಿಯನ್ನು ನಡೆಸುತ್ತಿದ್ದಾರೆ. 42 ವರ್ಷದ ಈಶ್ವರ್ ಗೋಪ್, ಮಾಜಿ ಮಾವೋವಾದಿಯಾಗಿದ್ದು, ನಂತರ ಮಾವೋವಾದಿ ವಿರೋಧಿ ಶಾಂತಿ ಸೇನಾ ಗುಂಪನ್ನು ಸೇರಿಕೊಂಡರು. ಅಲ್ಲದೇ ಮೀನು ಕೃಷಿಯಲ್ಲಿ ತೊಡಗಿ ವಾರ್ಷಿಕವಾಗಿ 2,50,000 ರೂ. ಮೌಲ್ಯದ ಎಂಟು ಕ್ವಿಂಟಾಲ್ ಮೀನುಗಳನ್ನು ಮಾರಾಟಮಾಡುತ್ತಾರೆ. ಇದರಲ್ಲಿ 1,20,000 ರೂ. ಲಾಭ ಪಡೆಯುತ್ತಿದ್ದಾರೆ.

    ಕೇಂದ್ರ ಗೃಹ ಸಚಿವಾಲಯ ಮೇ 2025 ರಲ್ಲಿ ರಾಂಚಿ ಜಿಲ್ಲೆಯ ಜೊತೆಗೆ ಗುಮ್ಲಾ ಜಿಲ್ಲೆಯನ್ನು ಮಾವೋವಾದಿ ಪೀಡಿತ ಪ್ರದೇಶಗಳ ಪಟ್ಟಿಯಿಂದ ಕೈಬಿಟ್ಟಿದೆ. ಇದನ್ನೂ ಓದಿ: ತಮಿಳುನಾಡಿನಲ್ಲಿ 4,800 ಕೋಟಿ ಮೊತ್ತದ ಅಭಿವೃದ್ಧಿ ಯೋಜನೆಗಳಿಗೆ ಪ್ರಧಾನಿ ಮೋದಿ ಚಾಲನೆ

  • ಪರಿಶೀಲನೆ ವೇಳೆ 802 ಬಾಟಲಿ ಮದ್ಯ ನಾಪತ್ತೆ – ಅಧಿಕಾರಿಗಳ ಬಳಿ ಇಲಿಗಳು ಕುಡಿದಿವೆ ಎಂದ ವ್ಯಾಪಾರಿಗಳು!

    ಪರಿಶೀಲನೆ ವೇಳೆ 802 ಬಾಟಲಿ ಮದ್ಯ ನಾಪತ್ತೆ – ಅಧಿಕಾರಿಗಳ ಬಳಿ ಇಲಿಗಳು ಕುಡಿದಿವೆ ಎಂದ ವ್ಯಾಪಾರಿಗಳು!

    ರಾಂಚಿ: ಅಬಕಾರಿ (Excise Department) ಅಧಿಕಾರಿಗಳ ದಾಳಿ ವೇಳೆ, ನಾಪತ್ತೆಯಾಗಿದ್ದ 802 ಬಾಟಲಿ ಮದ್ಯವನ್ನು ಇಲಿಗಳು ಕುಡಿದಿವೆ ಎಂದು ವ್ಯಾಪಾರಿಗಳು ಹೇಳಿರುವುದು ಜಾರ್ಖಂಡ್‌ನ (Jharkhand) ಧನ್‌ಬಾದ್‌ನಲ್ಲಿ ನಡೆದಿದೆ. ಈ ಪ್ರಕರಣದಿಂದ ಭ್ರಷ್ಟಾಚಾರ ಇಲಿಗಳ ಹೆಸರನ್ನು ಹಾಳುಮಾಡುತ್ತಿದೆ ಎಂದು ಜನ ಮಾತಾಡಿಕೊಳ್ಳುತ್ತಿದ್ದಾರೆ.

    ಸೆಪ್ಟೆಂಬರ್ 1 ರಂದು ಜಾರ್ಖಂಡ್‌ನಲ್ಲಿ ಹೊಸ ಮದ್ಯ ನೀತಿ ಜಾರಿಗೆ (Jharkhand New Liquor Policy) ಬರಲಿದೆ. ಇದಕ್ಕಾಗಿ ಅಧಿಕಾರಿಗಳು ಧನ್‌ಬಾದ್‌ನಲ್ಲಿ ಮದ್ಯದ ಸ್ಟಾಕ್‌ ಪರಿಶೀಲನೆ ನಡೆಸಿದರು. ಈ ವೇಳೆ, ಅಧಿಕಾರಿಗಳಿಗೆ 802 ಬಾಟಲಿಗಳಲ್ಲಿದ್ದ ಮದ್ಯ ಖಾಲಿಯಾಗಿರುವುದು ಗೊತ್ತಾಗಿದೆ. ವ್ಯಾಪಾರಿಗಳ ಬಳಿ ಈ ಬಗ್ಗೆ ಕೇಳಿದಾಗ, ಅವುಗಳನ್ನು ಇಲಿಗಳು ಕುಡಿಯುತ್ತಿವೆ ಎಂದು ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ವಿಫಲನಾಗಿದ್ದೇನೆ ಎನಿಸುತ್ತಿದೆ – ದೆಹಲಿಯಲ್ಲಿ ಕಾಣೆಯಾದ ಯುವತಿಯ ರೂಮ್‌ನಲ್ಲಿ ಡೆತ್‌ನೋಟ್ ಪತ್ತೆ

    ವ್ಯಾಪಾರಿಗಳ ಉತ್ತರಕ್ಕೆ ಅಧಿಕಾರಿಗಳು ಇದು ಅಸಂಬದ್ಧ ಉತ್ತರ ಎಂದು ಪ್ರತಿಕ್ರಿಯಿಸಿದ್ದಾರೆ. ಅಲ್ಲದೇ ಈ ನಷ್ಟಕ್ಕೆ, ದಂಡ ಪಾವತಿಸುವಂತೆ ವ್ಯಾಪಾರಿಗಳಿಗೆ ನೋಟಿಸ್ ಕಳುಹಿಸಲಾಗುವುದು ಎಂದು ಸಹಾಯಕ ಅಬಕಾರಿ ಆಯುಕ್ತೆ ರಾಮಲೀಲಾ ರಾವಣಿ ತಿಳಿಸಿದ್ದಾರೆ.

    ಇಲಿಗಳ ಮೇಲೆ ಇಂತಹ ಆರೋಪ ಬರುತ್ತಿರುವುದು ಇದೇ ಮೊದಲಲ್ಲ. ಕೆಲವು ವರ್ಷಗಳ ಹಿಂದೆ ಪೊಲೀಸರು ವಶಪಡಿಸಿಕೊಂಡ ಸುಮಾರು 10 ಕೆಜಿ ಗಾಂಜಾದಲ್ಲಿ 9 ಕೆಜಿ ಗಾಂಜಾವನ್ನು ಇಲಿಗಳು ತಿಂದಿವೆ ಎಂದಿದ್ದರು. ಈ ವಿಚಾರವಾಗಿ ಸಂಬಂಧಪಟ್ಟ ಅಧಿಕಾರಿಗಳನ್ನು ಕೋರ್ಟ್‌ ತರಾಟೆಗೆ ತೆಗೆದುಕೊಂಡಿತ್ತು.

    ಜಾರ್ಖಂಡ್‌ನ ಹೊಸ ಮದ್ಯ ನೀತಿ ಅಡಿಯಲ್ಲಿ, ಮದ್ಯದ ಅಂಗಡಿಗಳ ನಿರ್ವಹಣೆ ಮತ್ತು ಹಂಚಿಕೆ ರಾಜ್ಯ ಸರ್ಕಾರದ ನಿಯಂತ್ರಣದಿಂದ ಖಾಸಗಿ ಪರವಾನಗಿದಾರರಿಗೆ ಸಿಗಲಿದೆ. ಆದಾಯ ಸಂಗ್ರಹಣೆಯಲ್ಲಿ ಪಾರದರ್ಶಕತೆಯನ್ನು ಹೆಚ್ಚಿಸುವುದು ಮತ್ತು ರಾಜ್ಯದ ಮೇಲಿನ ಆಡಳಿತಾತ್ಮಕ ಹೊರೆಯನ್ನು ಕಡಿಮೆ ಮಾಡುವುದು ಈ ನೀತಿಯ ಗುರಿಯಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಇದನ್ನೂ ಓದಿ: ಬೆಂಗಳೂರಿನ 2 ಪಬ್ ಮೇಲೆ ದಾಳಿ – ಇಬ್ಬರು ವಿದೇಶಿ ಡ್ರಗ್ ಪೆಡ್ಲರ್‌ಗಳು ಅರೆಸ್ಟ್

  • ಜಾರ್ಖಂಡ್‌| ಜೆಜೆಎಂಪಿ ಮುಖ್ಯಸ್ಥ ಪಪ್ಪು ಲೋಹ್ರಾ ಸೇರಿ ಇಬ್ಬರು ನಕ್ಸಲ್‌ ನಾಯಕರ ಎನ್‌ಕೌಂಟರ್‌

    ಜಾರ್ಖಂಡ್‌| ಜೆಜೆಎಂಪಿ ಮುಖ್ಯಸ್ಥ ಪಪ್ಪು ಲೋಹ್ರಾ ಸೇರಿ ಇಬ್ಬರು ನಕ್ಸಲ್‌ ನಾಯಕರ ಎನ್‌ಕೌಂಟರ್‌

    ರಾಂಚಿ: ಜಾರ್ಖಂಡ್‌ನ (Jarkhand Maoist Encounter) ಲತೇಹಾರ್‌ ಜಿಲ್ಲೆಯಲ್ಲಿ ಜೆಜೆಎಂಪಿ ಮುಖ್ಯಸ್ಥ ಪಪ್ಪು ಲೋಹ್ರಾ ಸೇರಿ ಇಬ್ಬರು ಪ್ರಮುಖ ನಕ್ಸಲ್‌ ನಾಯಕರ ಎನ್‌ಕೌಂಟರ್‌ ಆಗಿದೆ.

    ಶನಿವಾರ ಮುಂಜಾನೆ ಭದ್ರತಾ ಪಡೆಗಳು ನಡೆಸಿದ ಕಾರ್ಯಚರಣೆಯಲ್ಲಿ ನಕ್ಸಲ್ ದಂಗೆಕೋರ ಸಂಘಟನೆ ಜಾರ್ಖಂಡ್ ಜನ ಮುಕ್ತಿ ಪರಿಷತ್ (ಜೆಜೆಎಂಪಿ)ನ ಇಬ್ಬರು ಕಾರ್ಯಕರ್ತರು ಹತರಾಗಿದ್ದಾರೆ. ಮೃತರಲ್ಲಿ ಪಪ್ಪು ಲೋಹ್ರಾನ ತಲೆಗೆ 10 ಲಕ್ಷ ರೂ. ಹಾಗೂ ಪ್ರಭಾತ್‌ ಗಂಜು ತಲೆಗೆ 5 ಲಕ್ಷ ರೂ. ಬಹುಮಾನ ಘೋಷಿಸಲಾಗಿತ್ತು. ಇದನ್ನೂ ಓದಿ: ಭಾರತದಲ್ಲಿ ಐಫೋನ್‌ ತಯಾರಿಸಿದರೆ 25% ಸುಂಕ – ಆಪಲ್‌ಗೆ ಟ್ರಂಪ್‌ ವಾರ್ನಿಂಗ್‌

    ಈ ಪ್ರದೇಶದಲ್ಲಿ ಶಸ್ತ್ರಸಜ್ಜಿತ ನಕ್ಸಲರ ಉಪಸ್ಥಿತಿಯ ಬಗ್ಗೆ ಗುಪ್ತಚರ ಮಾಹಿತಿ ಇತ್ತು. ಮಾಹಿತಿ ಆಧಾರದ ಮೇಲೆ ಜಂಟಿ ಭದ್ರತಾ ಪಡೆಗಳು ಈ ಕಾರ್ಯಾಚರಣೆಯನ್ನು ನಡೆಸಿದ್ದವು. ಭೀಕರ ಗುಂಡಿನ ಚಕಮಕಿಯ ಸಮಯದಲ್ಲಿ ಗಾಯಗೊಂಡ ಸ್ಥಿತಿಯಲ್ಲಿ ಮತ್ತೊರ್ವ ಜೆಜೆಎಂಪಿ ನಕ್ಸಲನನ್ನು ಜೀವಂತವಾಗಿ ಸೆರೆಹಿಡಿಯಲಾಗಿದೆ.

    ಸ್ಥಳದಿಂದ ಒಂದು ಐಎನ್‌ಎಸ್‌ಎಎಸ್ ರೈಫಲ್ ಅನ್ನು ಸಹ ವಶಪಡಿಸಿಕೊಳ್ಳಲಾಗಿದೆ. ಸದ್ಯ ಕಾರ್ಯಚರಣೆ ಇನ್ನು ಮುಂದುವರಿದಿದೆ. ಇತ್ತೀಚಿನ ದಿನಗಳಲ್ಲಿ ಪೊಲೀಸರು ಜೆಜೆಎಂಪಿ ವಿರುದ್ಧ ತೀವ್ರ ಕಾರ್ಯಾಚರಣೆ ನಡೆಸುತ್ತಿರುವುದು ಗಮನಾರ್ಹ. ಇದನ್ನೂ ಓದಿ: IPL 2025 | ಕೊನೆಯಲ್ಲಿ ʻಸನ್‌ʼ ಸ್ಟ್ರೋಕ್‌ – ಮೊದಲೆರಡು ಸ್ಥಾನ ಕಳೆದುಕೊಂಡರೆ ಆರ್‌ಸಿಬಿಗೆ ಆಗುವ ನಷ್ಟವೇನು?

  • 1 ಕೋಟಿ ಬಹುಮಾನ ಘೋಷಿತ ನಕ್ಸಲ್ ನಾಯಕ ಸೇರಿ 8 ಮಂದಿ ಹತ್ಯೆ

    1 ಕೋಟಿ ಬಹುಮಾನ ಘೋಷಿತ ನಕ್ಸಲ್ ನಾಯಕ ಸೇರಿ 8 ಮಂದಿ ಹತ್ಯೆ

    ರಾಂಚಿ: ಕೇಂದ್ರ ಪಡೆಗಳು ನಕ್ಸಲರ ವಿರುದ್ಧ ನಡೆಸಿದ ದಾಳಿಯಲ್ಲಿ ಭಾರಿ ಪ್ರಗತಿ ಸಾಧಿಸಿದ್ದು, ಜಾರ್ಖಂಡ್‌ನ (Jharkhand) ಬೊಕಾರೊದಲ್ಲಿ (Bokaro) ತಲೆಗೆ 1 ಕೋಟಿ ರೂ. ಬಹುಮಾನ ಘೋಷಿಸಿದ್ದ ನಕ್ಸಲ್ ನಾಯಕ ಸೇರಿ 8 ಮಂದಿ ನಕ್ಸಲರನ್ನು ಸದೆಬಡಿಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಸೋಮವಾರ ಬೆಳಗ್ಗೆ ಕೇಂದ್ರ ಮೀಸಲು ಪೊಲೀಸ್ ಪಡೆ (CRPF), ಕಮಾಂಡೋ ಬೆಟಾಲಿಯನ್ ಫಾರ್ ರೆಸಲ್ಯೂಟ್ ಆಕ್ಷನ್ (CoBRA) ಕಮಾಂಡೋಗಳ ಅರಣ್ಯ ಯುದ್ಧ ಘಟಕ ಮತ್ತು ಜಾರ್ಖಂಡ್ ಪೊಲೀಸರು ಜಂಟಿ ಕಾರ್ಯಾಚರಣೆಯನ್ನು ನಡೆಸಿದ್ದರು. ಇದನ್ನೂ ಓದಿ: ಒಂದು ವಾರದಿಂದ ಬೆದರಿಕೆ – ಪುತ್ರನಿಂದ ದೂರು, ಓಂ ಪ್ರಕಾಶ್‌ ಪತ್ನಿ ಅರೆಸ್ಟ್‌

    ಮೋಸ್ಟ್ ವಾಂಟೆಡ್ ನಕ್ಸಲ್ ನಾಯಕನ ಪತ್ತೆಗೆ ಸರ್ಕಾರವು 1 ಕೋಟಿ ರೂ. ಬಹುಮಾನ ಫೋಷಿಸಿತ್ತು. ಇದೀಗ ಕೇಂದ್ರ ಮೀಸಲು ಪೊಲೀಸ್ ಪಡೆ ಆತನನ್ನು ಹೊಡೆದುರುಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕಾರ್ಯಚರಣೆ ವೇಳೆ 2 ಐಎನ್‌ಎಸ್‌ಎಎಸ್ ರೈಫಲ್‌ಗಳು, 1 ಸೆಲ್ಫ್ ಲೋಡಿಂಗ್ ರೈಫಲ್ ಮತ್ತು 1 ಪಿಸ್ತೂಲ್ ವಶಕ್ಕೆ ಪಡೆಯಲಾಗಿದೆ. ಇದನ್ನೂ ಓದಿ: ಲವ್ವರ್ ಬ್ಲ್ಯಾಕ್‌ಮೇಲ್‌ಗೆ ಬೇಸತ್ತು ಹಸೆಮಣೆ ಏರಬೇಕಿದ್ದ ಶಿಕ್ಷಕಿ ಆತ್ಮಹತ್ಯೆ

    ಏಪ್ರಿಲ್ ಆರಂಭದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಅವರು ಹಿಂಸೆಯಿಂದ ಬದಲಾವಣೆ ತರಲು ಸಾಧ್ಯವಿಲ್ಲ ಎಂದು ಹೇಳಿ ನಕ್ಸಲರಿಗೆ ಶಸ್ತ್ರಾಸ್ತ್ರ ತ್ಯಜಿಸುವಂತೆ ಕರೆ ನೀಡಿದ್ದರು. ಛತ್ತೀಸ್‌ಗಢದಲ್ಲಿ ನಕ್ಸಲ್ ಮುಕ್ತ ಎಂದು ಘೋಷಿಸಲಾದ ಎಲ್ಲಾ ಗ್ರಾಮಗಳಿಗೆ ಅಭಿವೃದ್ಧಿ ನಿಧಿಯಾಗಿ 1 ಕೋಟಿ ರೂ.ಗಳನ್ನು ಘೋಷಿಸಿದ ಅವರು, ಶರಣಾದ ನಕ್ಸಲರು ಸರ್ಕಾರದ ಸಹಾಯದಿಂದ ಸುರಕ್ಷಿತ ಮತ್ತು ಗೌರವಾನ್ವಿತ ಜೀವನವನ್ನು ನಡೆಸುತ್ತಾರೆ ಎಂದು ಭರವಸೆ ನೀಡಿದರು.

  • ಜಾರ್ಖಂಡ್‌ | ಗೂಡ್ಸ್ ರೈಲುಗಳ ನಡುವೆ ಡಿಕ್ಕಿ – ಇಬ್ಬರು ಲೋಕೋ ಪೈಲಟ್‌ ಸೇರಿ 3 ಸಾವು

    ಜಾರ್ಖಂಡ್‌ | ಗೂಡ್ಸ್ ರೈಲುಗಳ ನಡುವೆ ಡಿಕ್ಕಿ – ಇಬ್ಬರು ಲೋಕೋ ಪೈಲಟ್‌ ಸೇರಿ 3 ಸಾವು

    ಡಿಕ್ಕಿ ಬಳಿಕ ಹೊತ್ತಿ ಉರಿದ ಇಂಜಿನ್‌  – ಮೂವರು ಸಿಬ್ಬಂದಿಗೆ ಗಾಯ

    ರಾಂಚಿ: ಜಾರ್ಖಂಡ್‌ನ (Jharkhand) ಸಾಹಿಬ್‌ಗಂಜ್‌ನಲ್ಲಿ ಎರಡು ಗೂಡ್ಸ್‌ ರೈಲುಗಳ (Train) ಮಧ್ಯೆ ಭೀಕರ ಅಪಘಾತ ಸಂಭವಿಸಿದ್ದು, ಇಬ್ಬರು ಲೋಕೋ ಪೈಲಟ್‌ (Loco Pilot) ಸೇರಿದಂತೆ ಮೂವರು ಸಿಬ್ಬಂದಿ ಸಾವಿಗೀಡಾಗಿದ್ದಾರೆ.

    ಅಪಘಾತದ ಬಳಿಕ ರೈಲಿನ ಎಂಜಿನ್‌ಗಳಿಗೆ ಬೆಂಕಿ ಹೊತ್ತಿಕೊಂಡಿದೆ. ಪರಿಣಾಮ ಮೂವರ ಸಾವಾಗಿದೆ. ಅವಘಡದಲ್ಲಿ ಮೂವರು ಸಿಐಎಸ್‌ಎಫ್ (Central Industrial Security Force) ಸಿಬ್ಬಂದಿ ಗಾಯಗೊಂಡಿದ್ದಾರೆ. ಇದನ್ನೂ ಓದಿ: ಹಳಿಯಲ್ಲಿದ್ದ ಕಸ ತೆರವುಗೊಳಿಸುತ್ತಿದ್ದ ವೇಳೆ ಎಕ್ಸ್‌ಪ್ರೆಸ್ ರೈಲು ಡಿಕ್ಕಿ – ನಾಲ್ವರು ಗುತ್ತಿಗೆ ಕಾರ್ಮಿಕರ ದುರ್ಮರಣ

    ಬೆಳಗಿನ ಜಾವ 3:30ರ ಸುಮಾರಿಗೆ ಈ ಅಪಘಾತ ನಡೆದಿದೆ. ಫರಕ್ಕಾದಿಂದ ಲಾಲ್ಮಾಟಿಯಾಗೆ ಗೂಡ್ಸ್ ರೈಲು ಬರ್ಹೆತ್‌ನಲ್ಲಿ ನಿಂತಿದ್ದ ಸರಕು ರೈಲಿಗೆ ಡಿಕ್ಕಿ ಹೊಡೆದಿದೆ.‌

    ಕಲ್ಲಿದ್ದಲು ತುಂಬಿದ್ದ ಹಿನ್ನಲೆ ವೇಗವಾಗಿ ಬೆಂಕಿ ಹೊತ್ತಿಕೊಂಡಿದೆ ಎಂದು ತಿಳಿದು ಬಂದಿದೆ. ಇದನ್ನೂ ಓದಿ: ಕರ್ನಾಟಕ ಎಕ್ಸ್‌ಪ್ರೆಸ್‌ ರೈಲು ಹರಿದು 11 ಮಂದಿ ಸಾವು – ಅವಘಡ ಹೇಗಾಯ್ತು?

  • ಗ್ಯಾಂಗ್‌ಸ್ಟರ್‌ನನ್ನು ಪೊಲೀಸರ ವಶದಿಂದ ಬಿಡಿಸಲು ಯತ್ನ – ಎನ್‌ಕೌಂಟರ್‌ನಲ್ಲಿ ಹತ್ಯೆಗೀಡಾದ ಅಮನ್ ಸಾವೊ!

    ಗ್ಯಾಂಗ್‌ಸ್ಟರ್‌ನನ್ನು ಪೊಲೀಸರ ವಶದಿಂದ ಬಿಡಿಸಲು ಯತ್ನ – ಎನ್‌ಕೌಂಟರ್‌ನಲ್ಲಿ ಹತ್ಯೆಗೀಡಾದ ಅಮನ್ ಸಾವೊ!

    ರಾಂಚಿ: ಜಾರ್ಖಂಡ್‌ನಲ್ಲಿ ಕುಖ್ಯಾತ ದರೋಡೆಕೋರ ಅಮನ್ ಸಾವೊನನ್ನು ಆತನ ಸಹಚರರು ಪೊಲೀಸರ ವಶದಿಂದ ಪಾರು ಮಾಡಲು ಯತ್ನಿಸಿದ್ದು, ಈ ವೇಳೆ ನಡೆದ ಎನ್‌ಕೌಂಟರ್‌ನಲ್ಲಿ (Encounter) ಆತ ಸಾವನ್ನಪ್ಪಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಮಂಗಳವಾರ ಬೆಳಗ್ಗೆ ಹಲವಾರು ಪ್ರಕರಣಗಳಲ್ಲಿ ಶಿಕ್ಷೆಗೊಳಗಾದ ದರೋಡೆಕೋರನನ್ನು ನೆರೆಯ ಛತ್ತೀಸ್‌ಗಢದ ರಾಯ್‌ಪುರ ಜೈಲಿನಿಂದ ರಾಂಚಿಗೆ ಕರೆತರುತ್ತಿದ್ದಾಗ ಈ ದಾಳಿ ನಡೆದಿದೆ. ಅವನನ್ನು ಬಿಡುಗಡೆ ಮಾಡಲು ಆತನ ಗ್ಯಾಂಗ್‌ನ ಸದಸ್ಯರು ಪೊಲೀಸ್ ವಾಹನದ ಮೇಲೆ ದಾಳಿ ಮಾಡಿದ್ದಾರೆ. ಈ ವೇಳೆ ನಡೆದ ಎನ್‌ಕೌಂಟರ್‌ನಲ್ಲಿ ಸಾವೊ ಹತನಾಗಿದ್ದಾನೆ. ಕೊಲೆ ಮತ್ತು ಸುಲಿಗೆ ಪ್ರಕರಣದಲ್ಲಿ 2020 ರಲ್ಲಿ ಆತನನ್ನು ಬಂಧಿಸಲಾಗಿತ್ತು.

    ರಾಂಚಿಯಿಂದ ಸುಮಾರು 180 ಕಿ.ಮೀ ದೂರದಲ್ಲಿರುವ ರಾಮಗಢ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ, ಸಾವೊ ಗ್ಯಾಂಗ್‌ನ ಸದಸ್ಯರು ಬಾಂಬ್‌ ಸಿಡಿಸಿ, ಪೊಲೀಸ್ ವಾಹನದ ಮೇಲೆ ಗುಂಡಿನ ದಾಳಿ ಮಾಡಿದ್ದಾರೆ. ಈ ವೇಳೆ ಸಾವೊ ಎಸ್‌ಟಿಎಫ್ ಜವಾನನಿಂದ ಐಎನ್‌ಎಸ್‌ಎಎಸ್ ರೈಫಲ್ ಕಸಿದು ಕೊಂಡು ವಾಹನದಿಂದ ಇಳಿದು ಓಡಿ ಹೋಗಿದ್ದ. ಬಳಿಕ ವಾಹನದ ಮೇಲೆ ಗುಂಡು ಹಾರಿಸಿದ್ದಾನೆ. ಪೊಲೀಸರು ಆತ್ಮರಕ್ಷಣೆಗಾಗಿ ಪ್ರತಿದಾಳಿ ನಡೆಸಿದ್ದು, ಆತ ಸಾವಿಗೀಡಾಗಿದ್ದಾನೆ. ಘಟನೆಯಲ್ಲಿ ಪೊಲೀಸ್ ಸಿಬ್ಬಂದಿಯೊಬ್ಬರು ಗಾಯಗೊಂಡಿದ್ದಾರೆ. ಎನ್‌ಐಎ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಸಾವೊನನ್ನು ರಾಯ್‌ಪುರದಿಂದ ರಾಂಚಿಗೆ ಕರೆತರಲಾಗುತ್ತಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಪೊಲೀಸರ ಕ್ರಮವನ್ನು ವಿರೋಧ ಪಕ್ಷದ ನಾಯಕ ಬಾಬುಲಾಲ್ ಮರಾಂಡಿಯವರು ಪ್ರಶಂಸಿದ್ದಾರೆ.