Tag: Jhanvi Kapoor

  • ಬಾಯ್ ಫ್ರೆಂಡ್ ಜೊತೆ ತಿರುಪತಿ ದರ್ಶನಕ್ಕೆ ಬಂದ ನಟಿ ಜಾನ್ವಿ

    ಬಾಯ್ ಫ್ರೆಂಡ್ ಜೊತೆ ತಿರುಪತಿ ದರ್ಶನಕ್ಕೆ ಬಂದ ನಟಿ ಜಾನ್ವಿ

    ತಿರುಪತಿ ತಿಮ್ಮಪ್ಪನ ದರ್ಶನ ಮಾಡಲು ಬಾಯ್ ಫ್ರೆಂಡ್  ಶಿಖರ್ ಪಹರಿಯಾ (Shikhar Paharia) ಜೊತೆ ಹೋಗಿದ್ದಾರೆ ಬಾಲಿವುಡ್ ನಟಿ ಜಾನ್ವಿ ಕಪೂರ್. ನಿನ್ನೆಯಷ್ಟೇ ಅವರು ಶಿಖರ್ ಜೊತೆ ತಿರುಪತಿಗೆ (Tirupati) ಬಂದು, ಒಟ್ಟಿಗೆ ದೇವರ ದರ್ಶನ ಮಾಡಿದ್ದಾರೆ. ಆ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಮದುವೆಗೂ ಮುಂಚೆ ಏನಿದು? ಎಂದು ಹಲವರು ಪ್ರಶ್ನೆಯನ್ನೂ ಮಾಡಿದ್ದಾರೆ.

    ಒಂದು ಕಡೆ ಜಾನ್ವಿ ಟೆಂಪಲ್ ರನ್ ಮಾಡುತ್ತಿದ್ದರೆ, ಮತ್ತೊಂದು ಕಡೆ ಅವರು ಮತ್ತೊಂದು ಚಿತ್ರಕ್ಕೂ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.  ‘ದೇವರ’ ಸಿನಿಮಾದಲ್ಲಿ ಜ್ಯೂ.ಎನ್‌ಟಿಆರ್‌ಗೆ (Shivarajkumar) ಹೀರೋಯಿನ್ ಆಗಿ ನಟಿಸಿದ ಬೆನ್ನಲ್ಲೇ ರಾಮ್ ಚರಣ್- ಶಿವಣ್ಣ ಕಾಂಬಿನೇಷನ್ ಸಿನಿಮಾಗೆ ಜಾನ್ವಿ ಕಪೂರ್ (Jhanvi Kapoor) ನಾಯಕಿಯಾಗಿದ್ದಾರೆ.

    ಬುಚ್ಚಿಬಾಬು ಸನಾ ನಿರ್ದೇಶನದ ಹೊಸ ಸಿನಿಮಾದಲ್ಲಿ ರಾಮ್ ಚರಣ್ (Ram Charan) ಜೊತೆ ಬಹುಮುಖ್ಯ ಪಾತ್ರದಲ್ಲಿ ಹ್ಯಾಟ್ರಿಕ್ ಹೀರೋ ಶಿವಣ್ಣ ಕೂಡ ನಟಿಸುತ್ತಿದ್ದಾರೆ. ರಾಮ್ ಚರಣ್ ಜೋಡಿಯಾಗಿ ಬಾಲಿವುಡ್ ಹಾಟ್ ಬ್ಯೂಟಿ ಜಾನ್ವಿ ಕಪೂರ್ ಕಾಣಿಸಿಕೊಳ್ತಾರೆ. ನಟನೆಗೆ ಹೆಚ್ಚು ಪ್ರಾಮುಖ್ಯತೆ ಇರುವ ಭಿನ್ನ ಪಾತ್ರದಲ್ಲಿ ನಟಿ ಕಾಣಿಸಿಕೊಳ್ತಿದ್ದಾರೆ.

    ಕೆಲ ತಿಂಗಳುಗಳ ಹಿಂದೆ ಬುಚ್ಚಿಬಾಬು ಸನಾ ಅವರು ಬೆಂಗಳೂರಿಗೆ ಆಗಮಿಸಿ ಶಿವಣ್ಣಗೆ ಭೇಟಿಯಾಗಿ ಕಥೆ ಹೇಳಿದ್ದರು. ಶಿವಣ್ಣಗೂ ಕಥೆ ಕೇಳಿ ಥ್ರಿಲ್ ಆಗಿ ಈ ಚಿತ್ರದ ಭಾಗವಾಗಲು ಓಕೆ ಎಂದಿದ್ದಾರೆ. ಸದ್ಯದಲ್ಲೇ ಸಿನಿಮಾ ಶುರುವಾಗಲಿದೆ.

     

    ರಾಮ್ ಚರಣ್ ಮತ್ತು ಶಿವಣ್ಣ ಸಾಕಷ್ಟು ವರ್ಷಗಳಿಂದ ಪರಿಚಿತರು. ಇಬ್ಬರಿಗೂ ಉತ್ತಮ ಒಡನಾಟವಿದೆ. ಸಿನಿಮಾಗಾಗಿ ಮೊದಲ ಬಾರಿಗೆ ಜೊತೆಯಾಗ್ತಿರೋದ್ರಿಂದ ಶಿವಣ್ಣ- ಚರಣ್ ಕಾಂಬೋ ನೋಡಲು ಫ್ಯಾನ್ಸ್ಗೆ ಕಾಯ್ತಿದ್ದಾರೆ.

  • ಡೆಸರ್ಟ್ ಸಫಾರಿ ಬಳಿಕ ಬಿಕಿನಿಯಲ್ಲಿ ಜಾನ್ವಿ, ಖುಷಿ ಕಪೂರ್ ಮೋಜು, ಮಸ್ತಿ

    ಡೆಸರ್ಟ್ ಸಫಾರಿ ಬಳಿಕ ಬಿಕಿನಿಯಲ್ಲಿ ಜಾನ್ವಿ, ಖುಷಿ ಕಪೂರ್ ಮೋಜು, ಮಸ್ತಿ

    ಮುಂಬೈ: ಬಾಲಿವುಡ್ ನಟಿ ಜಾನ್ವಿ ಕಪೂರ್ ಸಹೋದರಿ ಖುಷಿ ಕಪೂರ್ ಜೊತೆ ಬಿಕಿನಿ ತೊಟ್ಟು ಹಾಟ್ ಆಗಿ ಫೋಟೋಗಳಿಗೆ ಪೋಸ್ ನೀಡುವ ಮೂಲಕ ಪಡ್ಡೆಹುಡುಗರ ನಿದ್ದೆಗೇಡಿಸುತ್ತಿದ್ದಾರೆ.

    ತಮ್ಮ ಬ್ಯುಸಿ ಶೆಡ್ಯೂಲ್‍ಗಳಿಂದ ಬ್ರೇಕ್ ಪಡೆದುಕೊಂಡು ದುಬೈನಲ್ಲಿ ಸಹೋದರಿ ಖುಷಿ ಕಪೂರ್ ಜೊತೆಗೆ ಡೆಸರ್ಟ್ ಸಫಾರಿ ಮಾಡಿ ಸಖತ್ ಎಂಜಾಯ್ ಮಾಡಿದ್ದ ಜಾನ್ವಿ ಕಪೂರ್ ಇದೀಗ ಕಡಲ ತೀರದಲ್ಲಿ ಬಿಕಿನಿ ತೊಟ್ಟು ಸಖತ್ ಹಾಟ್ ಆ್ಯಂಡ್ ಬೋಲ್ಡ್ ಲುಕ್‍ನಲ್ಲಿ ಮಿಂಚಿದ್ದಾರೆ.

    Janhvi Kapoor

    ಈ ಫೋಟೋಗಳನ್ನು ಜಾನ್ವಿ ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಹಂಚಿಕೊಂಡಿದ್ದು, ಫೋಟೋ ಜೊತೆಗೆ ಲುಂಗಿ ಡ್ಯಾನ್ಸ್ ಎಂದು ಕ್ಯಾಪ್ಷನ್‍ನಲ್ಲಿ ಬರೆದುಕೊಂಡಿದ್ದಾರೆ. ಈ ಪೋಸ್ಟ್‍ಗೆ ಸಹೋದರಿ ಖುಷಿ “ವಾವ್” ಎಂದು ಕಾಮೆಂಟ್ ಮಾಡಿದರೆ, ನಟಿ ಕಿಯಾರಾ ಅಡ್ವಾಣಿ “ಉಫ್” ಎಂದು ಕಾಮೆಂಟ್ ಮಾಡಿದ್ದಾರೆ. ಜೊತೆಗೆ ಜಾನ್ವಿಯ ಚಿಕ್ಕಮ್ಮ ಮಹೀಪ್ ಕಪೂರ್ ಫೈರ್ ಎಮೋಜಿಗಳನ್ನು ಕಳುಹಿಸಿದ್ದಾರೆ. ಇದನ್ನೂ ಓದಿ:  ಡೆಸರ್ಟ್ ಸಫಾರಿಯನ್ನು ಎಂಜಾಯ್ ಮಾಡ್ತಿರೋ ಜಾನ್ವಿ, ಖುಷಿ ಕಪೂರ್

    ಕಡಲ ತೀರದ ಕತ್ತಲಿನಲ್ಲಿ ಜಾನ್ವಿ, ಖುಷಿ ಜೊತೆಗೆ ಬಿಕಿನಿಯಲ್ಲಿ ಫೋಟೋಗೆ ಪೋಸ್ ನೀಡಿರುವುದನ್ನು ಹಾಗೂ ಸಮುದ್ರದ ನೀರಿನಲ್ಲಿ ಆಟ ಆಡಿರುವುದನ್ನು, ವಾಟರ್ ಬೈಕ್ ರೈಡ್ ಮಾಡಿರುವುದನ್ನು ಕಾಣಬಹುದಾಗಿದೆ.

    Janhvi Kapoor

    ಜಾನ್ವಿ ಕಪೂರ್ ಮತ್ತು ಖುಷಿ ಕಪೂರ್ ದಿವಂಗತ ನಟಿ ಶ್ರೀದೇವಿ ಮತ್ತು ನಿರ್ಮಾಪಕ ಬೋನಿ ಕಪೂರ್ ಅವರ ಪುತ್ರಿಯರು. ಜಾನ್ವಿ ಕಪೂರ್ ‘ಧಡಕ್’ ಚಿತ್ರದ ಮೂಲಕ ಬಾಲಿವುಡ್‍ಗೆ ಪಾದಾರ್ಪಣೆ ಮಾಡಿದ್ದರು. ಈ ಸಿನಿಮಾ ಮರಾಠಿ ಹಿಟ್ ಸಿನಿಮಾ ‘ಸೈರಾಟ್’ ಆಗಿದ್ದು, ಹಿಂದಿ ರಿಮೇಕ್‍ನಲ್ಲಿ ಇವರು ನಟಿಸಿದ್ದರು. ಜಾನ್ವಿ ಓಟಿಟಿಯಲ್ಲಿ ‘ಆಂಥಾಲಜಿ ಘೋಸ್ಟ್ ಸ್ಟೋರೀಸ್’ ಸಿನಿಮಾದಲ್ಲಿಯೂ ನಟಿಸಿದ್ದಾರೆ. ಈ ಸಿನಿಮಾಗೆ ಜೋಯಾ ಅಖ್ತರ್ ನಿರ್ದೇಶನ ಮಾಡಿದ್ದರು. ಇದನ್ನೂ ಓದಿ: ಚಿಕ್ಕವಯಸ್ಸಿನ ಹುಡುಗನ ಜೊತೆ ಡೇಟಿಂಗ್ ಮಾಡುವ ಬಗ್ಗೆ ರಶ್ಮಿಕಾ ಉತ್ತರ ಏನು ಗೊತ್ತಾ?

     

    View this post on Instagram

     

    A post shared by Janhvi Kapoor (@janhvikapoor)

    ಜಾನ್ವಿ ಕಪೂರ್ ಬೆಳ್ಳಿಪರದೆ ಮೇಲೆ ಕೊನೆಯದಾಗಿ ‘ರೂಹಿ’ ಚಿತ್ರದಲ್ಲಿ ಕಾಣಿಸಿಕೊಂಡಿದ್ದು, ಈ ಚಿತ್ರದಲ್ಲಿ ರಾಜ್‍ಕುಮಾರ್ ರಾವ್ ಮತ್ತು ವರುಣ್ ಶರ್ಮಾ ನಟಿಸಿದ್ದರು. ಪ್ರಸ್ತುತ ಈ ನಟಿ ಕರಣ್ ಜೋಹರ್ ನಿರ್ದೇಶನದ ತಖ್ತ್, ಗುಡ್ ಲಕ್ ಜೆರ್ರಿ ಮತ್ತು ದೋಸ್ತಾನಾ 2 ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ.

  • ಮಗಳ ಮೊದಲ ಸಿನಿಮಾ ನೋಡೋ ಮೊದಲೇ ಬಾರದ ಲೋಕಕ್ಕೆ ಪಯಣಿಸಿದ ಶ್ರೀದೇವಿ

    ಮಗಳ ಮೊದಲ ಸಿನಿಮಾ ನೋಡೋ ಮೊದಲೇ ಬಾರದ ಲೋಕಕ್ಕೆ ಪಯಣಿಸಿದ ಶ್ರೀದೇವಿ

    ಮುಂಬೈ: ಭಾರತೀಯ ಚಿತ್ರರಂಗದ ಖ್ಯಾತ ಹಿರಿಯ ನಟಿ ಶ್ರೀದೇವಿ ಶನಿವಾರ ರಾತ್ರಿ 11.30 ರ ಸುಮಾರಿಗೆ ವಿಧಿವಶರಾಗಿದ್ದಾರೆ. ದುಬೈನ ಸಂಬಂಧಿಕರ ಮದುವೆಗೆಂದು ತನ್ನ ಮಗಳು ಖುಷಿ ಕಪೂರ್ ಮತ್ತು ಪತಿ ಬೋನಿ ಕಪೂರ್ ಜೊತೆ ತೆರಳಿದ್ದ ಅವರು, ಶನಿವಾರ ರಾತ್ರಿ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ.

    ಶ್ರೀದೇವಿ ಅವರ ಪಾರ್ಥೀವ ಶರೀರವನ್ನು ಭಾರತಕ್ಕೆ ವಿಶೇಷ ವಿಮಾನದಲ್ಲಿ ತರಲು ಸಿದ್ಧತೆ ನಡೆದಿದ್ದು ಮಧ್ಯಾಹ್ನ  ಮೃತದೇಹ  ಮುಂಬೈ ತಲುಪುವ ಸಾಧ್ಯತೆಯಿದೆ.

    ಶ್ರೀದೇವಿಯವರ ಹಿರಿಯ ಮಗಳು ಜಾನ್ವಿ ಕಪೂರ್ ‘ಧಡಕ್’ ಸಿನಿಮಾದಲ್ಲಿ ನಟಿಸುವ ಮೂಲಕ ಬಾಲಿವುಡ್‍ಗೆ ಎಂಟ್ರಿ ಕೊಟ್ಟಿದ್ದರು. ಇದು ಮರಾಠಿಯ ‘ಸೈರಾಟ್’ ಸಿನಿಮಾದ ರಿಮೇಕ್ ಆಗಿದೆ. ಮಗಳು ನಟಿಸಿದ್ದ ಸಿನಿಮಾವನ್ನು ನೋಡುವ ಮೊದಲೇ ಶ್ರೀದೇವಿ ಅವರು ಬಾರದ ಲೋಕಕ್ಕೆ ಪಯಣ ಬೆಳೆಸಿದ್ದಾರೆ. ಬಹು ನಿರೀಕ್ಷಿತ ಧಡಕ್ ಸಿನಿಮಾ ಈ ವರ್ಷದ ಜುಲೈನಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದೆ.

    ಶ್ರೀದೇವಿ ಅವರು 2017 ರಲ್ಲಿ ಬಾಲಿವುಡ್ `ಮಾಮ್’ ಎಂಬ ಚಿತ್ರದಲ್ಲಿ ನಟಿಸಿ ಭಾರೀ ಪ್ರಶಂಸೆಯನ್ನ ಗಳಿಸಿದ್ದರು. ಈಗ ಶಾರೂಖ್ ಖಾನ್ ನಟನೆಯ ಝೀರೋ ಸಿನಿಮಾದಲ್ಲಿ ಶ್ರೀದೇವಿಯವರು ನಟಿಸುತ್ತಿದ್ದು, ಇದು ಅವರ ಕೊನೆ ಚಿತ್ರವಾಗಿದೆ. ಈ ಚಿತ್ರವು ಡಿಸೆಂಬರ್ ನಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದೆ.

    ನಾಲ್ಕನೇ ವಯಸ್ಸಿಗೇ ಬಾಲನಟಿಯಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಶ್ರೀದೇವಿಯವರು ಆಗಸ್ಟ್ 13ರಂದು ತಮಿಳುನಾಡಿನ ಶಿವಕಾಶಿಯಲ್ಲಿ ಜನಿಸಿದ್ದರು. ಶ್ರೀದೇವಿಯವರ ಹುಟ್ಟು ಹೆಸರು ಶ್ರೀ ಅಮ್ಮಾಯಂಗಾರ್ ಅಯ್ಯಪ್ಪನ್. ಆರು ಫಿಲ್ಮ್ ಫೇರ್ ಅವಾರ್ಡ್‍ಗಳನ್ನ ಪಡೆದುಕೊಂಡಿರುವ ಶ್ರೀದೇವಿಯವರು, ಪದ್ಮಶ್ರೀ ಪ್ರಶಸ್ತಿಯನ್ನೂ ಸಹ ಪಡೆದಿದ್ದರು.

    https://youtu.be/nALnWAlRZC8