Tag: jhansi

  • ಕೂಲರ್‌ಗಾಗಿ ಬೀಗರ ಮಧ್ಯೆ ಜಗಳ – ಕುರ್ಚಿ ಎಸೆದು ಅಟ್ಟಾಡಿಸಿದ ವಿಡಿಯೋ ವೈರಲ್

    ಕೂಲರ್‌ಗಾಗಿ ಬೀಗರ ಮಧ್ಯೆ ಜಗಳ – ಕುರ್ಚಿ ಎಸೆದು ಅಟ್ಟಾಡಿಸಿದ ವಿಡಿಯೋ ವೈರಲ್

    ಲಕ್ನೋ: ಕೂಲರ್‌ಗಾಗಿ ವರ ಹಾಗೂ ವಧುವಿನ ಕಡೆಯವರು ಕುರ್ಚಿ ಎಸೆದು ಜಗಳವಾಡಿದ ಘಟನೆ ಉತ್ತರಪ್ರದೇಶದ (Uttar Pradesh) ಝಾನ್ಸಿಯಲ್ಲಿ (Jhansi) ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

    ಮೇ 28ರಂದು ಝಾನ್ಸಿಯ ನಂದನ್‌ಪುರ ಪ್ರದೇಶದಲ್ಲಿ ಆವಾಸ್ ವಿಕಾಸ್ ನಿವಾಸಿ ಸೋನು ಹಾಗೂ ಸಪ್ನಾ ಎಂಬುವವರ ಮದುವೆ ಸಮಾರಂಭವೊಂದರಲ್ಲಿ ಈ ಘಟನೆ ನಡೆದಿದ್ದು, ಕುರ್ಚಿಯಿಂದ ಹೊಡೆದಾಡಿಕೊಂಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.ಇದನ್ನೂ ಓದಿ: ಕ್ಲಾಸ್‌ರೂಮ್‌ನಲ್ಲೇ ಅಪ್ರಾಪ್ತ ವಿದ್ಯಾರ್ಥಿ ಜೊತೆ ಸೆಕ್ಸ್‌ – ಶಿಕ್ಷಕಿ ಬಂಧನ

    ಎಲ್ಲಾ ಕಾರ್ಯಕ್ರಮಗಳು ಮುಗಿದ ಬಳಿಕ ರಾತ್ರಿ ವೇಳೆ ಅತಿಥಿಗಳು ಊಟಕ್ಕೆಂದು ಕುಳಿತಿದ್ದರು. ಇದೇ ವೇಳೆ ಆರಾಮಕ್ಕೆಂದು ಇರಿಸಿದ್ದ ಕೂಲರ್‌ನ ಮುಂದೆ ವರ ಹಾಗೂ ವಧು ಬಂದು ಕುಳಿತುಕೊಂಡರು. ಅವರು ಕುಳಿತಿದ್ದೇ ತಡ ವರನ ಕಡೆಯವರು ಚೂರು ಗಾಳಿಯೂ ಹಾದುಹೋಗದಂತೆ ಕೂಲರ್‌ಗೆ ಅಡ್ಡವಾಗಿ ಕುಳಿತರು. ಈ ಸಮಯದಲ್ಲಿ ಸ್ವಲ್ಪ ಆಕಡೆ ಸರಿದು ಕುಳಿತುಕೊಳ್ಳಲು ಹೇಳಿದಾಗ ಇಬ್ಬರ ಮಧ್ಯೆ ವಾಗ್ವಾದ ಶುರುವಾಯಿತು.

    ಮಾತು ತಾರಕಕ್ಕೇರಿ ವರ ಹಾಗೂ ವಧುವಿನ ಕಡೆಯವರ ಮಧ್ಯೆ ಜಗಳ ಪ್ರಾರಂಭವಾಯಿತು. ಕುರ್ಚಿಗಳನ್ನು ಎಸೆದು ಅಟ್ಟಾಡಿಸಿಕೊಂಡು ಹೊಡೆದಾಡಿ, ಸ್ಥಿತಿಯನ್ನು ಮತ್ತಷ್ಟು ಹದಗೆಡಿಸಿದರು. ಬಳಿಕ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಬರುವಷ್ಟರಲ್ಲಿ ಜಗಳ ಕಡಿಮೆಯಾಗಿತ್ತು.

    ಮಾರನೇ ದಿನ (ಮೇ 29) ವಧುವಿನ ಕುಟುಂಬಸ್ಥರು ಘಟನೆಯ ವೀಡಿಯೊಗಳೊಂದಿಗೆ ಎಸ್‌ಎಸ್‌ಪಿ ಕಚೇರಿಗೆ ಭೇಟಿ ನೀಡಿದರು. ಈ ಕುರಿತು ವಧುವಿನ ಸಹೋದರ ಮೋಹಿತ್ ಮಾತನಾಡಿ, ನಾವು ಆಹಾರ ಬಡಿಸುತ್ತಿದ್ದಾಗ ಕೆಲವು ಹುಡುಗರು ಕೂಲರ್‌ನ ಮುಂದೆ ಕುಳಿತರು. ವರ ಹಾಗೂ ವಧುವಿಗೆ ಸ್ವಲ್ಪ ಗಾಳಿ ಹೋಗಲು ಬಿಡಿ ಎಂದು ಕೇಳಿದಾಗ ಜಗಳ ಪ್ರಾರಂಭಿಸಿದರು ಎಂದು ಹೇಳಿದ್ದಾರೆ.ಇದನ್ನೂ ಓದಿ: ನಾವು ಭಿಕ್ಷೆ ಪಾತ್ರೆ ಹಿಡಿದು ಬರುತ್ತೇವೆಂದು ಚೀನಾದಂಥ ಮಿತ್ರರಾಷ್ಟ್ರಗಳು ನಿರೀಕ್ಷಸಲ್ಲ: ಪಾಕ್‌ ಪ್ರಧಾನಿ

  • ಡ್ಯಾಡಿನೇ ಮಮ್ಮಿನ ಕೊಂದಿದ್ದು – 4 ವರ್ಷದ ಮಗಳು ಬಿಡಿಸಿದ ಚಿತ್ರದಿಂದ ಬಯಲಾಯ್ತು ತಾಯಿಯ ಕೊಲೆ ರಹಸ್ಯ

    ಡ್ಯಾಡಿನೇ ಮಮ್ಮಿನ ಕೊಂದಿದ್ದು – 4 ವರ್ಷದ ಮಗಳು ಬಿಡಿಸಿದ ಚಿತ್ರದಿಂದ ಬಯಲಾಯ್ತು ತಾಯಿಯ ಕೊಲೆ ರಹಸ್ಯ

    ಲಕ್ನೋ: ಮಗಳು ಬಿಡಿಸಿದ ಚಿತ್ರದಿಂದ (Drawing) ತಾಯಿಯ ಕೊಲೆ (Murder) ರಹಸ್ಯ ಬಯಲಾಗಿರುವ ಘಟನೆ ಉತ್ತರ ಪ್ರದೇಶದಲ್ಲಿ (Uttar Pradesh) ನಡೆದಿದೆ. ಅಪ್ಪನೇ ಅಮ್ಮನನ್ನು ಕೊಲೆ ಮಾಡಿದ್ದು ಎಂದು ಪೊಲೀಸರ ಮುಂದೆ 4 ವರ್ಷದ ಮಗಳು (daughter) ಪೊಲೀಸರ ಮುಂದೆ ಸಾಕ್ಷಿ ಹೇಳಿದ್ದಾಳೆ.

    27 ವರ್ಷದ ಮಹಿಳೆಯೊಬ್ಬರು ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದ ಘಟನೆ ಉತ್ತರ ಪ್ರದೇಶದ ಶಿವ ಪರಿವಾರ್ ಕಾಲೋನಿಯ ಝಾನ್ಸಿ ಬಳಿಯ ಕೊಟ್ವಾಲಿ ಪ್ರದೇಶದಲ್ಲಿ ನಡೆದಿತ್ತು. ಮಹಿಳೆಯ 4 ವರ್ಷದ ಮಗಳು ಚಿತ್ರ ಬಿಡಿಸಿ ಆಕೆಯ ತಂದೆಯೆ ಕೊಲೆ ಮಾಡಿದ್ದಾನೆ ಎಂದು ಆರೋಪಿಸುವ ಮೂಲಕ ಕೊಲೆ ಪ್ರಕರಣಕ್ಕೆ ಮಹತ್ವದ ಸಾಕ್ಷಿ ನೀಡಿದ್ದಾಳೆ. ಇದನ್ನೂ ಓದಿ : ಎಲಾನ್ ಮಸ್ಕ್-ಮೋದಿ ಭೇಟಿ ಬೆನ್ನಲ್ಲೇ ಟೆಸ್ಲಾದಿಂದ ಭಾರತದಲ್ಲಿ ನೇಮಕಾತಿ ಶುರು

    ಪತಿ, ಅತ್ತೆ ಹಾಗೂ ಮಾವ ಸೇರಿಕೊಂಡು ಕೊಲೆ ಮಾಡಿದ್ದಾರೆ ಎಂದು ಮೃತ ಮಹಿಳೆಯ ಕುಟುಂಬಸ್ಥರು ಆರೋಪಿಸಿದ್ದರು. ಇದನ್ನೂ ಓದಿ : ಮಹಾ ಕುಂಭವು ‘ಮೃತ್ಯು ಕುಂಭ’ವಾಗಿ ಬದಲಾಗಿದೆ: ಯೋಗಿ ಸರ್ಕಾರದ ವಿರುದ್ಧ ಮಮತಾ ಬ್ಯಾನರ್ಜಿ ಟೀಕೆ

    2019ರಲ್ಲಿ ಝಾನ್ಸಿ ನಿವಾಸಿಯಾದ ಸಂದೀಪ್ ಬುದೋಲಿನನ್ನು ಮೃತ ಮಹಿಳೆ ವಿವಾಹವಾಗಿದ್ದರು. ಮದುವೆಯ ಸಂದರ್ಭದಲ್ಲಿ 20 ಲಕ್ಷ ರೂ. ಹಣ ಹಾಗೂ ಇನ್ನಿತರ ಉಡುಗೊರೆಗಳನ್ನು ವರದಕ್ಷಿಣೆ ರೂಪದಲ್ಲಿ ಸಂದೀಪ್‌ಗೆ ನೀಡಲಾಗಿತ್ತು. ಸಂದೀಪ್ ಹಾಗೂ ಆತನ ಕುಟುಂಬಸ್ಥರು ವರದಕ್ಷಿಣೆ ರೂಪದಲ್ಲಿ ಕಾರು ನೀಡುವಂತೆ ಒತ್ತಾಯಿಸುತ್ತಿದ್ದರು ಎಂದು ಮೃತ ಮಹಿಳೆಯ ತಂದೆ ಸಂಜಯ್ ತ್ರಿಪಾಠಿ ದೂರಿದ್ದಾರೆ. ಇದನ್ನೂ ಓದಿ : ಮಹಿಳಾ ಕೂಲಿ ಕಾರ್ಮಿಕರಿಗೆ ವಿಮಾನ ಪ್ರಯಾಣ ಮಾಡಿಸಿದ ರೈತ

    ಅವರ ಬೇಡಿಕೆಯನ್ನು ಪೂರೈಸದಿದ್ದಾಗ ಆಕೆಗೆ ದೈಹಿಕ ಹಾಗೂ ಮಾನಸಿಕವಾಗಿ ಹಿಂಸೆ ನೀಡುತ್ತಿದ್ದರು. ಈ ಬಗ್ಗೆ ಪೊಲೀಸ್ ಠಾಣೆಗೆ ದೂರು ನೀಡಿದ್ದೆ. ಆ ಸಂದರ್ಭದಲ್ಲಿ ರಾಜಿ ಸಂದಾಯದ ಮೂಲಕ ಇತ್ಯರ್ಥವಾಗಿತ್ತು. ನಂತರ ಆಕೆ ಹೆಣ್ಣು ಮಗುವಿಗೆ ಜನ್ಮ ನೀಡಿದಳು. ಗಂಡು ಮಗುವಿಗೆ ಜನ್ಮ ನೀಡಿಲ್ಲ ಎಂದು ಸಂದೀಪ್ ಕುಟುಂಬಸ್ಥರು ಆಕೆಗೆ ಹಿಂಸೆ ನೀಡಲು ಪ್ರಾರಂಭಿಸಿದ್ದರು. ಹೆರಿಗೆಯ ಸಂದರ್ಭದಲ್ಲೂ ಸಂದೀಪ್ ಹಾಗೂ ಆತನ ಕುಟುಂಬಸ್ಥರು ಆಕೆಯನ್ನು ಆಸ್ಪತ್ರೆಯಲ್ಲೇ ಬಿಟ್ಟು ತೆರಳಿದ್ದರು. ಬಳಿಕ ನಾನು ಆಸ್ಪತ್ರೆಯ ಬಿಲ್ ಪಾವತಿಸಿ ಮಗು ಹಾಗೂ ಆಕೆಯನ್ನು ಮನೆಗೆ ಕರೆದುಕೊಂಡು ಹೋದೆ ಎಂದು ಸಂಜಯ್ ಹೇಳಿದ್ದಾರೆ. ಇದಾದ ಬಳಿಕ ಮಹಿಳೆಯ ಕೊಲೆಯಾಗಿದೆ. ಇದನ್ನೂ ಓದಿ : ಡಬಲ್ ಟ್ಯಾಕ್ಸ್ ಕಟ್ಟಿ ಬಿ-ಖಾತಾ ಪಡೆಯಿರಿ: ಸಿಎಂ ಸಭೆಯಲ್ಲಿ ಮಹತ್ವದ ನಿರ್ಧಾರ

    ಅಪ್ಪ, ಅಮ್ಮನಿಗೆ ಹೊಡೆದು ನಂತರ ನೇಣಿಗೆ ಹಾಕಿದ್ದಾರೆ. ಅಮ್ಮನ ತಲೆಗೆ ಕಲ್ಲಿನಿಂದ ಹೊಡೆದು ಚೀಲದಲ್ಲಿ ಹಾಕಿ ಎಸೆದಿದ್ದಾನೆ. ಅಪ್ಪ ಅಮ್ಮನಿಗೆ ಹೊಡೆಯುತ್ತಿದ್ದರು. ಅಮ್ಮನಿಗೆ ಹೊಡೆದರೆ ನಿಮ್ಮ ಕೈ ಮುರಿಯುತ್ತೇನೆ ಎಂದಿದ್ದೆ. ಅಮ್ಮನಿಗೆ ಹೊಡೆದು ಆಕೆಯನ್ನು ಕೊಂದಿದ್ದಾರೆ. ನನಗೂ ಸಹ ಹೊಡೆಯುತ್ತಿದ್ದರು ಎಂದು ಮಗು ಪೊಲೀಸರ ಬಳಿ ಹೇಳಿದ್ದಾಳೆ. ಇದನ್ನೂ ಓದಿ : ಅಧಿಕಾರ ಹಂಚಿಕೆ – ಹೈಕಮಾಂಡ್ ತೀರ್ಮಾನಕ್ಕೆ ಎಲ್ಲರೂ ಬದ್ಧವಾಗಿ ಇರಬೇಕು: ಸಿದ್ದರಾಮಯ್ಯ

    ಪೊಲೀಸರು ಈ ಬಗ್ಗೆ ತನಿಖೆ ಆರಂಭಿಸಿದ್ದು, ಮಹಿಳೆಯ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಪತಿ ಸಂದೀಪ್‌ನನ್ನು ಬಂಧಿಸಿದ್ದು, ಇನ್ನುಳಿದ ಆರೋಪಿಗಳಿಗಾಗಿ ಪೊಲೀಸರು ಶೋಧಕಾರ್ಯ ನಡೆಸುತ್ತಿದ್ದಾರೆ. ಇದನ್ನೂ ಓದಿ : ಮಹಾಕುಂಭದಲ್ಲಿ ಸಚಿವ ಪ್ರಹ್ಲಾದ್ ಜೋಶಿ ಕುಟುಂಬ ಪುಣ್ಯಸ್ನಾನ

  • ಚಲಿಸುತ್ತಿದ್ದ ರೈಲಿನಲ್ಲೇ ಪತ್ನಿಗೆ ತಲಾಕ್ ನೀಡಿ ಪರಾರಿಯಾದ ಟೆಕ್ಕಿ

    ಚಲಿಸುತ್ತಿದ್ದ ರೈಲಿನಲ್ಲೇ ಪತ್ನಿಗೆ ತಲಾಕ್ ನೀಡಿ ಪರಾರಿಯಾದ ಟೆಕ್ಕಿ

    -ಸಿಎಂ ಯೋಗಿಯ ಸಹಾಯ ಕೇಳಿದ ಮಹಿಳೆ

    ಲಕ್ನೋ: ಚಲಿಸುತ್ತಿದ್ದ ರೈಲಿನಲ್ಲಿ (Train) ವ್ಯಕ್ತಿಯೊಬ್ಬ ತನ್ನ ಪತ್ನಿಗೆ ತಲಾಖ್ (Triple Talaq) ನೀಡಿ ಪರಾರಿಯಾಗಿರುವ ಆಘಾತಕಾರಿ ಘಟನೆ ಉತ್ತರ ಪ್ರದೇಶದ (Uttar Pradesh) ಝಾನ್ಸಿಯಲ್ಲಿ (Jhansi) ನಡೆದಿದೆ.

    ಮೊಹಮ್ಮದ್ ಅರ್ಷದ್ (28) ಎಂಬಾತ ತನ್ನ ಪತ್ನಿ ಅಫ್ಸಾನಾ (26) ಜೊತೆ ಪ್ರಯಾಣಿಸುತ್ತಿದ್ದಾಗ ತಲಾಕ್ ನೀಡಿದ್ದಾನೆ. ಬಳಿಕ ಆಕೆಗೆ ಥಳಿಸಿ, ರೈಲು ಝಾನ್ಸಿ ಜಂಕ್ಷನ್‍ಗೆ ತಲುಪುತ್ತಿದ್ದಂತೆ ರೈಲಿನಿಂದ ಇಳಿದು ಪರಾರಿಯಾಗಿದ್ದಾನೆ. ಏಪ್ರಿಲ್ 29 ರಂದು ಈ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.

    ಅರ್ಷದ್, ಭೋಪಾಲ್‍ನ ಖಾಸಗಿ ಸಂಸ್ಥೆಯೊಂದರಲ್ಲಿ ಟೆಕ್ಕಿಯಾಗಿ (Techie) ಕೆಲಸ ಮಾಡುತ್ತಿದ್ದ. ಅಫ್ಸಾನಾ ಹಾಗೂ ಅರ್ಷದ್ ಮ್ಯಾಟ್ರಿಮೋನಿಯಲ್ ವೆಬ್‍ಸೈಟ್‍ನಲ್ಲಿ ಪರಿಚಯವಾಗಿದ್ದು, ಈ ವರ್ಷ ಜನವರಿ 12 ರಂದು ಇಬ್ಬರು ಮದುವೆಯಾಗಿದ್ದರು ಎಂದು ತಿಳಿದು ಬಂದಿದೆ.

    ಕಳೆದ ವಾರ ದಂಪತಿ ಪುಖ್ರಾಯನ್‍ನಲ್ಲಿರುವ ಅರ್ಷದ್‍ನ ಸಂಬಂಧಿಯೊಬ್ಬರ ಮನೆಗೆ ಮನೆಗೆ ಭೇಟಿ ನೀಡಿದಾಗ, ಆತನಿಗೆ ಈಗಾಗಲೇ ಮದುವೆಯಾಗಿರುವುದು ತಿಳಿದು ಆಕೆ ಆಘಾತಕ್ಕೊಳಗಾಗಿದ್ದಾಳೆ. ಬಳಿಕ ಇಬ್ಬರ ನಡುವೆ ಗಲಾಟೆಯಾಗಿದೆ. ಮರಳಿ ಬರುವಾಗ ಇದೇ ವಿಚಾರಕ್ಕೆ ಆತ ರೈಲಿನಲ್ಲಿ ಪ್ರಯಾಣಿಸುತ್ತಿದ್ದಾಗಲೇ ತಲಾಕ್ ನೀಡಿ ಮಹಿಳೆಗೆ ಥಳಿಸಿದ್ದಾನೆ ಎಂದು ಆರೋಪಿಸಲಾಗಿದೆ.

    ಈ ವಿಚಾರವಾಗಿ ಅಫ್ಸಾನಾ, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ (Yogi Adityanath) ಅವರ ಸಹಾಯ ಕೇಳಿದ್ದು, ಮಹಿಳೆಯರಿಗೆ ವಂಚಿಸುವವರ ವಿರುದ್ಧ ಸೂಕ್ತ ಕ್ರಮಕೈಗೊಳ್ಳುವಂತೆ ಮನವಿ ಮಾಡಿದ್ದಾಳೆ.

    ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಆರೋಪಿಯ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

  • ಯಜಮಾನನ ಜೀವ ಉಳಿಸಲು ಹಾವಿನ ಜೊತೆ ಸೆಣಸಾಟ – ಕೊನೆಗೆ ತನ್ನ ಪ್ರಾಣವನ್ನೇ ತ್ಯಾಗ ಮಾಡಿದ ನಾಯಿ

    ಯಜಮಾನನ ಜೀವ ಉಳಿಸಲು ಹಾವಿನ ಜೊತೆ ಸೆಣಸಾಟ – ಕೊನೆಗೆ ತನ್ನ ಪ್ರಾಣವನ್ನೇ ತ್ಯಾಗ ಮಾಡಿದ ನಾಯಿ

    ಲಕ್ನೋ: ಮಾಲೀಕನನ್ನು ರಕ್ಷಿಸಲು ವಿಷಪೂರಿತ ಹಾವಿನೊಂದಿಗೆ ಸೆಣಸಾಡಿ ನಾಯಿಯೊಂದು ತನ್ನ ಪ್ರಾಣವನ್ನೇ ಬಿಟ್ಟಿರುವ ಘಟನೆ ಉತ್ತರ ಪ್ರದೇಶದ (Uttar Pradesh) ಝಾನ್ಸಿಯಲ್ಲಿ (Jhansi) ನಡೆದಿದೆ.

    ತನ್ನ ಯಜಮಾನನೊಂದಿಗೆ ವಾಕಿಂಗ್ ಹೋಗುತ್ತಿದ್ದ ವೇಳೆ ಹಾವನ್ನು ಕಂಡ ನಾಯಿ ಆತನನ್ನು ರಕ್ಷಿಸುವ ಸಲುವಾಗಿ ಹಾವನ್ನು ಕೊಂದು ಹಾಕಿದೆ. ಆದರೆ ದುರದೃಷ್ಟವಶಾತ್, ಹಾವು ಕಚ್ಚಿದ ವಿಷದಿಂದ ನಾಯಿ ಸಾವನ್ನಪ್ಪಿದೆ. ಇದನ್ನೂ ಓದಿ: ಮದುವೆ ಮನೆಗೆ ಬಂದವರಂತೆ ಬಂದ ಅಧಿಕಾರಿಗಳು- ಕೈ ಮುಖಂಡೆ, ಅಳಿಯನ ಮನೆ ಮೇಲೆ ಐಟಿ ರೇಡ್

    ಜಿಲ್ಲಾ ಪಂಚಾಯತ್ ಸದಸ್ಯರಾಗಿದ್ದ ಅಮಿತ್ ರೈ ಅವರು ಉತ್ತರಪ್ರದೇಶದ ಝಾನ್ಸಿ ಜಿಲ್ಲೆಯ ಗಡಿಗೆ ಹೊಂದಿಕೊಂಡಿರುವ ಮಧ್ಯಪ್ರದೇಶದ ಪ್ರತಾಪಪುರದಲ್ಲಿ ವಾಸವಾಗಿದ್ದರು. ಮೊದಲಿನಿಂದಲೂ ಶ್ವಾನ ಪ್ರಿಯರಾಗಿದ್ದ ಅಮಿತ್ ಸುಮಾರು ಐದು ವರ್ಷಗಳ ಹಿಂದೆ ಅಮೆರಿಕದ ಬುಲ್ಲಿ ಎಂಬ ನಾಯಿಯನ್ನು ತಂದು ಅದಕ್ಕೆ ಗಬ್ಬರ್ ಎಂದು ಹೆಸರಿಟ್ಟಿದ್ದರು. ತಾವು ಸಾಕಿದ್ದ ಎಲ್ಲಾ ನಾಯಿಗಳಿಗಿಂತಲೂ ಕೊಂಚ ಹೆಚ್ಚು ಪ್ರೀತಿಯನ್ನು ಗಬ್ಬರ್ ಮೇಲೆ ಅಮಿತ್ ಹೊಂದಿದ್ದರು. ಅದೇ ರೀತಿ ಗಬ್ಬರ್ ಕೂಡ ಅಮಿತ್ ವಿಚಾರದಲ್ಲಿ ಬಹಳ ಪೊಸೆಸಿವ್ ಆಗಿತ್ತು. ಅಮಿತ್ ಗದರದೇ ಇದ್ದರೆ ಯಾರನ್ನೂ ಅವರ ಆತನ ಹತ್ತಿರಕ್ಕೆ ಬರಲು ಬಿಡದೇ ರಕ್ಷಣೆ ನೀಡುತ್ತಿತ್ತು.

    ಬುಧವಾರ ಪ್ರತಾಪ್ ಪುರದಲ್ಲಿರುವ ತಮ್ಮ ಫಾರ್ಮ್‍ಹೌಸ್‍ಗೆ ಅಮಿತ್ ತನ್ನ ನಾಯಿಯೊಂದಿಗೆ ವಾಕಿಂಗ್‍ಗೆ ತೆರಳಿದ್ದರು. ಈ ವೇಳೆ ದೈತ್ಯ ವಿಷಕಾರಿ ಹಾವು (ರಸ್ಸೆಲ್ಸ್ ವೈಪರ್) ತನ್ನ ಮಾಲೀಕನ ಕಡೆಗೆ ಬರುತ್ತಿರುವುದನ್ನು ನಾಯಿ ಗಮನಿಸಿದೆ ಆದರೆ ಹಾವನ್ನು ಅಮಿತ್ ನೋಡಿಲ್ಲ. ಇದನ್ನೂ ಓದಿ: ರಿಮ್ಸ್ ಆಸ್ಪತ್ರೆಯಲ್ಲಿ ಬೀದಿ ನಾಯಿಗಳ ದರ್ಬಾರ್ – ಸಿಬ್ಬಂದಿ ನಿರ್ಲಕ್ಷ್ಯಕ್ಕೆ ರೋಗಿಗಳಿಂದ ಆಕ್ರೋಶ

    ತನ್ನ ಯಜಮಾನನಿಗೆ ನಿಯತ್ತಾಗಿದ್ದ ಗಬ್ಬರ್ ಅಮಿತ್‍ನನ್ನು ರಕ್ಷಿಸಲು ತಕ್ಷಣವೇ ಹಾವಿನ ಮೇಲೆ ಎಗರಿಸಿದೆ. ಸುದೀರ್ಘ ಕಾಲ ನಡೆದ ಹಾವು ಮತ್ತು ನಾಯಿ ಕಾಳಗದಲ್ಲಿ ಕೊನೆಗೆ ಗಬ್ಬರ್ ವಿಷಪೂರಿತ ಹಾವನ್ನು ಎರಡು ತುಂಡುಗಳಾಗಿ ಕಚ್ಚಿ ಕೊಂದು ಹಾಕುವಲ್ಲಿ ಯಶಸ್ವಿಯಾಗಿದೆ. ಆದರೆ, ಹಾವಿನ ವಿಷ ದೇಹದೊಳಗೆ ಹರಡಿದ್ದರಿಂದ ನಾಯಿ ಕೂಡ ಕೆಲ ನಿಮಿಷಗಳಲ್ಲೇ ಕೆಳಗೆ ಬಿದ್ದು ಸಾವನ್ನಪ್ಪಿದೆ.

    ಒಟ್ಟಾರೆ ಯಜಮಾನನಿಗಾಗಿ ನಾಯಿ ತನ್ನ ಪ್ರಾಣವನ್ನೇ ತ್ಯಾಗ ಮಾಡಿದ್ದು, ಗಬ್ಬರ್ ಅನನು ಕಳೆದುಕೊಂಡು ಅಮಿತ್ ಹಾಗೂ ಆತನ ಕುಟುಂಬಸ್ಥರು ಕಣ್ಣೀರು ಹಾಕುತ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ತರಗತಿಗೆ ನುಗ್ಗಿ ಸಹಪಾಠಿ ಮೇಲೆ ಗುಂಡು ಹಾರಿಸಿದ ಗೆಳೆಯ

    ತರಗತಿಗೆ ನುಗ್ಗಿ ಸಹಪಾಠಿ ಮೇಲೆ ಗುಂಡು ಹಾರಿಸಿದ ಗೆಳೆಯ

    ಲಕ್ನೋ: ಹಾಡಹಗಲಿನಲ್ಲಿಯೇ ಸಹಪಾಠಿ ಮೇಲೆ ಗೆಳೆಯನೇ ಗುಂಡು ಹಾರಿಸಿರುವ ಘಟನೆ ಉತ್ತರ ಪ್ರದೇಶದ ಜಾನ್ಸಿಯ ಬಿಕೆಡಿ ಕಾಲೇಜಿನಲ್ಲಿ ನಡೆದಿದೆ. ಬಳಿಕ ಆರೋಪಿ ಯುವತಿಯೊಬ್ಬಳ ಮನೆಗೆ ನುಗ್ಗಿ ಆಕೆಯ ಮೇಲೂ ಗುಂಡು ಹಾರಿಸಿದ್ದಾನೆ.

    ಈ ಕುರಿತಂತೆ ತನಿಖೆ ನಡೆಸಿದ ಪೊಲೀಸರು, ಆರೋಪಿಯನ್ನು ಮಂಥನ್ ಸಿಂಗ್ ಎಂದು ಗುರುತಿಸಿದ್ದಾರೆ. ಆರೋಪಿ ಮಂಥನ್ ತನ್ನ ಸ್ನೇಹಿತ ಹುಕ್ಮೇಂದ್ರ ಗುರ್ಜರ್ ಮತ್ತು ಯುವತಿಗೆ ಆತ್ಮೀಯ ಸ್ನೇಹಿತನಾಗಿದ್ದು, ಕೆಲವು ಮನಸ್ತಾಪಗಳಿಂದ ಆರೋಪಿ ಇಬ್ಬರೊಂದಿಗೆ ಜಗಳ ಮಾಡಿಕೊಂಡಿದ್ದಾನೆ. ಅಲ್ಲದೆ ಸ್ನೇಹಿತ ಹುಕ್ಮೇಂದ್ರ ಗುರ್ಜರ್ ತನ್ನ ಬಗ್ಗೆ ವದಂತಿಗಳನ್ನು ಹರಡುತ್ತಿದ್ದಾನೆ ಎಂದು ಆರೋಪಿ ಮಂಥನ್ ಸಿಂಗ್ ತಪ್ಪು ಗ್ರಹಿಸಿಕೊಂಡಿದ್ದಾನೆ ಎಂದು ಹೇಳಿದರು.

    ಇದರಿಂದ ಕೋಪಗೊಂಡು ಮಂಥನ್ ಸಿಂಗ್, ತರಗತಿ ನಡೆಯುತ್ತಿದ್ದ ವೇಳೆ ಕೊಠಡಿಗೆ ಪ್ರವೇಶಿಸಿ ಹುಕ್ಮೇಂದ್ರ ಗುರ್ಜರ್(22) ಎಂಬ ವಿದ್ಯಾರ್ಥಿ ಮೇಲೆ ಗುಂಡು ಹಾರಿಸಿದ್ದಾನೆ. ಹುಕ್ಮೇಂದ್ರ ಜಾನ್ಸಿಯ ಬಿಕೆಡಿ ಕಾಲೇಜಿನ ಎಂಎ ಮನಃಶಾಸ್ತ್ರ ವಿದ್ಯಾರ್ಥಿಯಾಗಿದ್ದಾನೆ. ಬಳಿಕ ಆರೋಪಿ ಮಂಥನ್ ಸಿಂಗ್ ಜಾನ್ಸಿಯ ಮಿಷನ್ ಕಾಂಪೌಂಡ್‍ನಲ್ಲಿರುವ ಸಿಪ್ರೀ ಬಜಾರ್ ಪ್ರದೇಶವನ್ನು ತಲುಪಿ ತ್ರಿಪಿಕಾ ಎಂಬ ಯುವತಿಯ ಮನೆಗೆ ನುಗ್ಗಿ ಅವಳ ಮೇಲೆ ಕೂಡ ಗುಂಡು ಹಾರಿಸಿದ್ದಾನೆ ಎಂದರು.

    ಈ ಕುರಿತಂತೆ ಮಾತನಾಡಿದ ಜಾನ್ಸಿಯ ಎಸ್‍ಎಸ್‍ಪಿ ದಿನೇಶ್ ಕುಮಾರ್, ಆರೋಪಿ ಮಂಥನ್ ಬಿಡಿಕೆ ಕಾಲೇಜಿನ ವಿದ್ಯಾರ್ಥಿಯಾಗಿದ್ದು, ತನ್ನ ಸಹಪಾಠಿಯ್ನನು ಕಾಲೇಜು ಆವರಣದಲ್ಲಿ ಮತ್ತು ಒರ್ವ ಯುವತಿಗೆ ಗುಂಡು ಹಾರಿಸಿ ಕೊಂದಿದ್ದಾನೆ. ಇದೀಗ ಆರೋಪಿಯನ್ನು ಬಂಧಿಸಲಾಗಿದ್ದು, ಆತನ ಬಳಿ ಇದ್ದ ಪಿಸ್ತೂಲ್‍ನನ್ನು ವಶ ಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದರು.

    ಅಲ್ಲದೆ ಘಟನೆಯಲ್ಲಿ ಯುವಕ ಗಂಭೀರವಾಗಿ ಗಾಯಗೊಂಡಿದ್ದು, ಆತನಿಗೆ ಜಾನ್ಸಿ ವೈದ್ಯಕೀಯ ಕಾಲೇಜಿನಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ ಮತ್ತು ಯುವತಿ ಮೃತಪಟ್ಟಿದ್ದಾಳೆ ಎಂದು ಹೇಳಿದರು.

  • ಕೃಷಿಯಲ್ಲಿ ಯಶಸ್ಸು ಕಂಡ ಕಾನೂನು ಪದವೀಧರೆ – ದಿನಕ್ಕೆ 30 ಸಾವಿರ ರೂ. ವ್ಯಾಪಾರ

    ಕೃಷಿಯಲ್ಲಿ ಯಶಸ್ಸು ಕಂಡ ಕಾನೂನು ಪದವೀಧರೆ – ದಿನಕ್ಕೆ 30 ಸಾವಿರ ರೂ. ವ್ಯಾಪಾರ

    – ಬರಡು ಭೂಮಿಯಲ್ಲಿ ಸ್ಟ್ರಾಬೆರ್ರಿ ಬೆಳೆದ ಯುವತಿ
    – ಪ್ರಧಾನಿ ಮೋದಿಯಿಂದ ಮೆಚ್ಚುಗೆ

    ತ್ತರ ಪ್ರದೇಶದ ಕಾನೂನು ಪದವೀಧರೆ ಲಾಕ್‍ಡೌನ್ ಸಮಯವನ್ನ ಸದುಪಯೋಗ ಮಾಡಿಕೊಂಡಿದ್ದು, ಕೃಷಿಯಲ್ಲಿ ಯಶಸ್ಸು ಕಂಡಿದ್ದಾರೆ. ಈಗ ಬರಡು ಭೂಮಿಯಿಂದಲೇ ಲಕ್ಷ ಲಕ್ಷ ಹಣವನ್ನ ಯುವತಿ ಸಂಪಾದನೆ ಮಾಡುತ್ತಿದ್ದಾರೆ.

    ಝಾನ್ಸಿಯಲ್ಲಿ ಸ್ಟ್ರಾಬೆರ್ರಿ ಗರ್ಲ್: ಝಾನ್ಸಿ ನಿವಾಸಿ 23 ವರ್ಷದ ಗುರ್ಲಿನ್ ಚಾವ್ಲಾ ಕೃಷಿಯನ್ನ ಕಂಡ ಯುವತಿ. ಇದೀಗ ಝಾನ್ಸಿಯಲ್ಲಿ ಸ್ಟ್ರಾಬೆರ್ರಿ ಗರ್ಲ್ ಅಂತಾನೇ ಗುರುತಿಸಿಕೊಂಡಿದ್ದಾರೆ. ಕಳೆದ ಭಾನುವಾರ ಮನ್ ಕೀ ಬಾತ್ ನಲ್ಲಿಯೂ ಪ್ರಧಾನಿ ನರೇಂದ್ರ ಮೋದಿ ಸಹ ಗುರ್ಲಿನ್ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದೇ ವರ್ಷ ಮಹಾರಾಷ್ಟ್ರದ ಪುಣೆಯಿಂದ ಕಾನೂನು ಪದವಿ ಪಡೆದುಕೊಂಡಿದ್ದಾರೆ. ನಾನು ಕೃಷಿಯಲ್ಲಿ ತೊಡಗಿಕೊಳ್ಳುತ್ತೇನೆಂದು ಕಲ್ಪನೆ ಸಹ ಮಾಡಿಕೊಂಡಿರಲಿಲ್ಲ. ಲಾಕ್‍ಡೌನ್ ವೇಳೆ ಊರಿಗೆ ಬಂದು ಮನೆಯಲ್ಲಿ ಖಾಲಿ ಕುಳಿತುಕೊಂಡಿದ್ದೆ. ಗಾಡರ್ನಿಂಗ್ ನಲ್ಲಿ ಈ ಸಮಯ ಬಳಸಿಕೊಳ್ಳಬೇಕೆಂದು ನಿರ್ಧರಿಸಿದೆ. ಹಾಗಾಗಿ ಮನೆಯಲ್ಲಿಯೆ ಕೆಲ ಸ್ಟ್ರಾಬೆರಿ ಪ್ಲಾಂಟಿಂಗ್ ಮಾಡಿದೆ. ಕೆಲವೇ ದಿನಗಳಲ್ಲಿ ಹಣ್ಣುಗಳ ಮೂಲಕ ಪ್ರತಿಫಲ ನನ್ನದಾಯ್ತು ಎಂದು ಗುರ್ಲಿನ್ ಹೇಳುತ್ತಾರೆ.

    ಆನ್‍ಲೈನ್ ನಲ್ಲಿ ಸ್ಟ್ರಾಬೆರ್ರಿ ಪ್ಲಾಂಟ್ ಹೇಗೆ ಬೆಳೆಯಬೇಕೆಂದು ಗುರ್ಲಿನ್ ಕಲಿತುಕೊಂಡಿದ್ದರು. ಇನ್ನು ಗುರ್ಲಿನ್ ಸಾಧನೆಗೆ ಅವರ ತಂದೆ ಬೆನ್ನಲುಬಾಗಿ ನಿಂತಿದ್ದರು. ಗುರ್ಲಿನ್ ಆಸೆಯಂತೆ ನಾಲ್ಕು ಎಕರೆ ಜಮೀನಿನ ಪೈಕಿ ಒಂದೂವರೆ ಎಕರೆ ಭೂಮಿಯಲ್ಲಿ 20 ಸಾವಿರ ಸ್ಟ್ರಾಬೆರ್ರಿ ಪ್ಲಾಂಟ್ ತಂದು ನೆಟ್ಟಿದ್ದರು. ಅಂದಿನಿಂದ ಗುರ್ಲಿನ್ ರೈತ ಮಹಿಳೆಯಾಗಿ ಪ್ಲಾಂಟ್ ಆರೈಕೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಅದರೆಲ್ಲರ ಪರಿಣಾಮ ಡಿಸೆಂಬರ್ ವೇಳೆಗೆ ಸ್ಟ್ರಾಬೆರ್ರಿ ಹಣ್ಣುಗಳ ಗುರ್ಲಿನ್ ಕೈ ಸೇರಿದ್ದವು.

    ದಿನಕ್ಕೆ 250ಕ್ಕೂ ಹೆಚ್ಚು ಆರ್ಡರ್, 30 ಸಾವಿರ ವ್ಯಾಪಾರ:
    ಹಣ್ಣುಗಳು ಬಿಡಲು ಆರಂಭಿಸುತ್ತಿದ್ದಂತೆ ಸ್ಟ್ರಾಬೆರ್ರಿ ಮಾರಾಟಕ್ಕಾಗಿ ಸ್ಥಳೀಯ ಮಾರುಕಟ್ಟೆಯ ಸಂಪರ್ಕ ಮಾಡಿದ್ದರು. ವ್ಯಾಪಾರಸ್ಥರು ಹಣ್ಣುಗಳ ಗುಣಮಟ್ಟಕ್ಕೆ ಮೆಚ್ಚುಗೆ ಸೂಚಿಸಿ ಆರ್ಡರ್ ನೀಡಲಾರಂಭಿಸಿದರು. ಇದೀಗ ಹಲವು ಸೂಪರ್ ಮಾರ್ಕೆಟ್ ಗಳು ಗುರ್ಲಿನ್ ಅವರಿಂದ ಹಣ್ಣುಗಳನ್ನ ಖರೀದಿಸುತ್ತಿವೆ. ಇದೀಗ ತಮ್ಮದೇ ವೆಬ್‍ಸೈಟ್ ಆರಂಭಿಸಿರುವ ಗುರ್ಲಿನ್ ಆನ್‍ಲೈನ್ ಮೂಲಕ ಸಹ ಆರ್ಡರ್ ಗಳನ್ನ ಪಡೆದುಕೊಳ್ಳುತ್ತಿದ್ದಾರೆ. ಪ್ರತಿದಿನ ಸುಮಾರು 70 ಕೆಜಿ ಸ್ಟ್ರಾಬೆರ್ರಿ ಸಿಗುತ್ತೆ. 250ಕ್ಕೂ ಹೆಚ್ಚು ಆರ್ಡರ್ ಪಡೆಯುವ ಗುರ್ಲಿನ್ ಪ್ರತಿನಿತ್ಯ 30 ಸಾವಿರ ರೂ.ನಷ್ಟು ವ್ಯಾಪಾರ ಮಾಡುತ್ತಾರೆ. ಮಿಶ್ರ ಬೇಸಾಯ ಪದ್ಧತಿಯನ್ನ ಅಳವಡಿಸಿಕೊಂಡಿರುವ ಗುರ್ಲಿನ್ ತರಕಾರಿಯನ್ನ ಸಹ ಬೆಳೆಯುತ್ತಾರೆ.

    ಕುಣಿದು ಕುಪ್ಪಳಿಸಿದ ಗುರ್ಲಿನ್ ತಂದೆ:
    ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಂಡು ಐದು ತಿಂಗಳು ಕಳೆಯುವಷ್ಟರಲ್ಲಿಯೇ ಝಾನ್ಸಿಯಲ್ಲಿ ಆಯೋಜಿಸಿದ ಸ್ಟ್ರಾಬೆರ್ರಿ ಫೆಸ್ಟಿವಲ್ ಗೆ ರಾಯಭಾರಿಯನ್ನಾಗಿ ಸಿಎಂ ಯೋಗಿ ಆದಿತ್ಯನಾಥ್ ನೇಮಕ ಮಾಡಿದ್ರು. ಗುರ್ಲಿನ್ ತಂದೆ ಹರ್ಜಿತ್ ಸಿಂಗ್ ಸಾರಿಗೆ ಉದ್ಯಮಿಯಾಗಿದ್ದಾರೆ. ಪ್ರಧಾನಿಗಳು ಮಗಳ ಬಗ್ಗೆ ಮೆಚ್ಚುಗೆ ಮಾತುಗಳನ್ನಾಡಿದ್ದಕ್ಕೆ ಕುಣಿದು ಕುಪ್ಪಳಿಸಿದ್ದಾರೆ. ಇನ್ನು ಸಿಎಂ ಯೋಗಿ ಆದಿತ್ಯನಾಥ್ ತಮ್ಮ ಕಚೇರಿಗೆ ಗುರ್ಲಿನ್ ಹಾಗೂ ಅವರ ಕುಟುಂಬವನ್ನ ಕರೆಸಿಕೊಂಡಿದ್ದರು. ಈ ವೇಳೆ ಗುರ್ಲಿನ್ ತಾವು ಬೆಳೆದ ಸ್ಟ್ರಾಬೆರ್ರಿಗಳನ್ನ ಉಡುಗೊರೆಯಾಗಿ ಮುಖ್ಯಮಂತ್ರಿಗಳಿಗೆ ನೀಡಿದ್ದಾರೆ.

    ಸ್ಟ್ರಾಬೆರ್ರಿ ಬೆಳೆಯೋದು ಹೇಗೆ?:
    ಸ್ಟ್ರಾಬೆರ್ರಿಯನ್ನು ಲೋಮಿ ಮಣ್ಣಿನಲ್ಲಿ ಬೆಳೆಯೋದು ಸೂಕ್ತ. ಈ ಮಣ್ಣು ಸರಿಯಾದ ಆಮ್ಲಿಯತೆ ಕಾಪಾಡುವ ಖನಿಜ ಅಂಶಗಳನ್ನ ಹೊಂದಿರುತ್ತೆ. ಈ ಮಣ್ಣಿನ ಸ್ಥಿತಿಯನ್ನ ಕಾಪಾಡಿಕೊಳ್ಳಲು ಸಾವಯವ ಗೊಬ್ಬರಗಳನ್ನ ವಾರ್ಷಿಕವಾಗಿ ಬಳಕೆ ಮಾಡಿಕೊಂಡಿರಬೇಕು. ಆಗಸ್ಟ್-ಸೆಪ್ಟೆಂಬರ್ ನಲ್ಲಿ ಸ್ಟ್ರಾಬೆರ್ರಿಗಳನ್ನ ಪ್ಲಾಂಟ್ ಮಾಡಬೇಕು. ಸಸಿಗಳ ತಾಪಮಾನ 30 ಡಿಗ್ರಿ ಸೆಲ್ಸಿಯಸ್ ಗಿಂತ ಹೆಚ್ಚಾಗದಂತೆ ನೋಡಿಕೊಳ್ಳಬೇಕು. ಶಾಖ ಹೆಚ್ಚಾದ್ರೆ ಪ್ಲಾಂಟ್ ಒಣಗಿ, ಹಣ್ಣುಗಳ ಕೆಡುತ್ತವೆ. ಆದ್ರೆ ಬುಂದೇಲಖಂಡ್ ನಲ್ಲಿ ಸಾಮಾನ್ಯ ವಾಗಿ 35 ಡಿಗ್ರಿ ಸೆಲ್ಸಿಯಸ್ ತಾಪಮಾನ ಇರುತ್ತೆ. ಅದ್ರೂ ಛಲ ಬಿಡದ ಗುರ್ಲಿನ್ ವೈಜ್ಞಾನಿಕ ನಿಯಮಗಳನ್ನು ಪಾಲಿಸಿ ಸ್ಟ್ರಾಬೆರ್ರಿ ಬೆಳೆದಿದ್ದಾರೆ.

  • ಲಕ್ಷ್ಮಿ ರಾಯ್ ‘ಝಾನ್ಸಿ’ ಮಾತಿನ ಮನೆಗೆ

    ಲಕ್ಷ್ಮಿ ರಾಯ್ ‘ಝಾನ್ಸಿ’ ಮಾತಿನ ಮನೆಗೆ

    ಕನ್ನಡ ನಾಡಿನ ಪ್ರತಿಭೆ ಅಕ್ಕ ಪಕ್ಕ ರಾಜ್ಯಗಳಲ್ಲಿ ಜನಪ್ರಿಯತೆ ಪಡೆದ ಲಕ್ಷ್ಮಿ ರಾಯ್ ಸಾಹಸ ಪ್ರಧಾನ ಚಿತ್ರದ ಮೂಲಕ ವಾಪಸ್ಸಾಗಿರುವ `ಝಾನ್ಸಿ’ ಚಿತ್ರೀಕರಣ ಪೂರ್ಣಗೊಳಿಸಿ ಈಗ ಮಾತಿನ ಮನೆಗೆ ತೆರಳಲಿದೆ ಎಂದು ನಿರ್ದೇಶಕ ಪಿವಿಎಸ್ ಗುರುಪ್ರಸಾದ್ ತಿಳಿಸಿದ್ದಾರೆ.

    ‘ಝಾನ್ಸಿ’ ಆಗಿ ಖಡಕ್ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಲಕ್ಷ್ಮಿ ರಾಯ್ ಕಾಣಿಸಿಕೊಂಡಿದ್ದಾರೆ. ಈ ಚಿತ್ರಕ್ಕಾಗಿ ಅವರು ಮಾರ್ಷಿಯಲ್ ಆರ್ಟ್ ಸಹ ಕಲಿತಿದ್ದಾರೆ. ಒಂದು ಹಾಡಿಗೆ ನೃತ್ಯ ನಿರ್ದೇಶಕ ಧನ್ ಕುಮಾರ್ ಸ್ಟೆಪ್ಸ್ ಕೂಡ ಹಾಕಿಸಿದ್ದಾರೆ. ನಿರ್ದೇಶಕ ಗುರುಪ್ರಸಾದ್ ಈ ಹಿಂದೆ `ಮರ್ಯಾದ ರಾಮಣ್ಣ’ ಚಿತ್ರವನ್ನು ನಿರ್ದೇಶನ ಮಾಡಿದವರು. ಈ `ಝಾನ್ಸಿ’ ಚಿತ್ರಕ್ಕೆ ಅವರದೇ ಕಥೆ, ಚಿತ್ರಕಥೆ ಸಂಭಾಷಣೆ ಸಹ ಮಾಡಿದ್ದಾರೆ.

    ಡ್ರಗ್ಸ್, ಲ್ಯಾಂಡ್ ಮಾಫಿಯಾ ಹಾಗೂ ಇನ್ನಿತರ ವಿಚಾರಗಳನ್ನು ಒಳಗೊಂಡ `ಝಾನ್ಸಿ’ ಮಾಸ್ ಹಾಗೂ ಕುಟುಂಬ ಸಮೇತ ನೋಡುವಂತಹ ಚಿತ್ರ ಎಂದು ನಿರ್ದೇಶಕ ಪಿವಿಎಸ್ ಗುರುಪ್ರಸಾದ್ ತಿಳಿಸಿದ್ದಾರೆ. ಮುಂಬೈ ಮೂಲದ ರಾಜೇಶ್ ಕುಮಾರ್ ಈ ಚಿತ್ರದ ನಿರ್ಮಾಪಕರು. ನಾಲ್ಕು ಹಾಡುಗಳಿಗೆ ಎಂ.ಎನ್.ಕೃಪಾಕರ್ ಸಂಗೀತ, ವೀರೇಶ್ ಛಾಯಾಗ್ರಹಣ, ಬಸವರಾಜ್ ಸಂಕಲನ ಒದಗಿಸಿದ್ದಾರೆ.

  • ರಿಯಲಿಸ್ಟಿಕ್ ಸಾಹಸಕ್ಕೆ ಮುಂದಾದ ಲಕ್ಷ್ಮಿ ರೈ!

    ರಿಯಲಿಸ್ಟಿಕ್ ಸಾಹಸಕ್ಕೆ ಮುಂದಾದ ಲಕ್ಷ್ಮಿ ರೈ!

    ನಾಲ್ಕೈದು ವರ್ಷಗಳಿಂದ ಬೇರೆ ಭಾಷೆಗಳಲ್ಲಿಯೇ ಬ್ಯುಸಿಯಾಗಿದ್ದ ಲಕ್ಷ್ಮಿ ರೈ ಮರಳಿ ಬಂದಿದ್ದಾರೆ. ಇದೀಗ ಮುಹೂರ್ತವನ್ನೂ ಆಚರಿಸಿಕೊಂಡು ಚಿತ್ರೀಕರಣಕ್ಕೆ ಸಜ್ಜಾಗಿರೋ ಈ ಚಿತ್ರದಲ್ಲಿ ಜ್ಯೂಲಿ ಲಕ್ಷ್ಮಿ ಯಾವುದೇ ಡ್ಯೂಪ್ ಬಳಸದೆ ಸಾಹಸ ಸನ್ನಿವೇಶಗಳಲ್ಲಿ ನಟಿಸೋ ರಿಸ್ಕಿನ ನಿರ್ಧಾರ ತಳೆದಿದ್ದಾರೆ!

    ಪತ್ತಿ ಗುರುಪ್ರಸಾದ್ ನಿರ್ದೇಶನದ ಈ ಚಿತ್ರದಲ್ಲಿ ಲಕ್ಷ್ಮಿ ರೈ ಝಾನ್ಸಿಯಾಗಿ ಮಿಂಚಲಿದ್ದಾರೆ. ಪಕ್ಕಾ ಆಕ್ಷನ್ ಜಾನರಿನ ಈ ಚಿತ್ರದಲ್ಲಿ ಸಾಕಷ್ಟು ಸಾಹಸ ಸನ್ನಿವೇಶಗಳಿವೆ. ಈ ಕಾರಣದಿಂದಲೇ ಈ ಚಿತ್ರವನ್ನು ಒಪ್ಪಿಕೊಂಡಿರೋ ಲಕ್ಷ್ಮಿ ಈಗಾಗಲೇ ಪಾತ್ರಕ್ಕೆ ಬೇಕಾದ ತಯಾರಿ ಮಾಡಿಕೊಂಡಿದ್ದಾರೆ.

    ಮಾರ್ಷಲ್ ಆರ್ಟ್ಸ್  ಮುಂತಾದ ಸಮರ ಕಲೆಗಳನ್ನೂ ಕರಗತ ಮಾಡಿಕೊಂಡಿದ್ದಾರಂತೆ. ಇಷ್ಟೆಲ್ಲ ಕಲಿತಿರೋ ಅವರು ಇಡೀ ಚಿತ್ರದಲ್ಲಿ ಡ್ಯೂಪ್ ಬಳಸದೇ ಸಾಹಸ ಸನ್ನಿವೇಶಗಳಲ್ಲಿ ನಟಿಸಲಿದ್ದಾರೆ.

    ಕನ್ನಡದ ಮಟ್ಟಿಗೆ ಲಕ್ಷ್ಮಿ ರೈ ಈವರೆಗೂ ರೊಮ್ಯಾಂಟಿಕ್ ಆದ ಪಾತ್ರಗಳಲ್ಲಿಯೇ ಕಾಣಿಸಿಕೊಂಡಿದ್ದರು. ಆದರೆ ಆ ಬಳಿಕ ನಾಲ್ಕು ವರ್ಷ ಬಾಲಿವುಡ್ ಟಾಲಿವುಡ್ ಸೇರಿದಂತೆ ಪರಭಾಷಾ ಚಿತ್ರಗಳಲ್ಲಿ ಬ್ಯುಸಿಯಾಗಿದ್ದ ಅವರೀಗ ಭಿನ್ನವಾದ ಗೆಟಪ್ಪಿನಲ್ಲಿ ಕನ್ನಡ ಪ್ರೇಕ್ಷಕರ ಮುಂದೆ ಬರಲು ತಯಾರಾಗಿದ್ದಾರೆ. ಇದಕ್ಕಾಗಿ ಭಾರೀ ರಿಸ್ಕು ತೆಗೆದುಕೊಳ್ಳಲೂ ಮುಂದಾಗಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv