Tag: Jewels

  • ಲಕ್ಷ್ಮೀ ಪೂಜೆಗಿಟ್ಟಿದ್ದ ವಜ್ರಾಭರಣ ಹೊತ್ತೊಯ್ದ ಕಳ್ಳರು

    ಲಕ್ಷ್ಮೀ ಪೂಜೆಗಿಟ್ಟಿದ್ದ ವಜ್ರಾಭರಣ ಹೊತ್ತೊಯ್ದ ಕಳ್ಳರು

    ಬೆಂಗಳೂರು: ಲಕ್ಷ್ಮೀ ಪೂಜೆಗೆ ಇಟ್ಟಿದ್ದ ವಜ್ರ (Diamond) ಹಾಗೂ ಚಿನ್ನಾಭರಣಗಳನ್ನು (Gold Jewels) ಕಳ್ಳರು ಎಗರಿಸಿದ ಘಟನೆ ಆರ್‌ಆರ್‌ ನಗರದಲ್ಲಿ (Rajarajeshwari Nagar) ನಡೆದಿದೆ.

    ಜವರೇಗೌಡ ನಗರದ ಅಪಾರ್ಟ್‌ಮೆಂಟ್‌ನ ಪ್ರೀತಿ ಎಂಬವರ ಮನೆಯಲ್ಲಿ ಪೂಜೆಗೆ ಇಟ್ಟಿದ್ದ ಚಿನ್ನಾಭರಣ ಕಳ್ಳತನವಾಗಿದೆ. ಪೂಜೆಗೆ ಇಟ್ಟಿದ್ದ ಒಂದು ಜೊತೆ ಬಳೆ, ಚಿನ್ನದ ಪೆಂಡೆಂಟ್, ಎರಡು ಜೊತೆ ವಜ್ರದ ಸ್ಟಡ್ಸ್, ಚಿನ್ನದ ಮಾಂಗಲ್ಯ ಸರ, ಎರಡು ಜೊತೆ ಚಿನ್ನದ ಕಿವಿ ಓಲೆ ಚಿನ್ನ ಹಾಗೂ ವಜ್ರದ ಓಲೆಗಳನ್ನು ಕಳ್ಳರು ಕದ್ದೊಯ್ದಿದ್ದಾರೆ. ಇದನ್ನೂ ಓದಿ: ಪಟಾಕಿಗೆ ಆಕಸ್ಮಿಕ ಬೆಂಕಿ – ಕುರ್ಚಿ ಸಮೇತ ಹಾರಿ ಬಿದ್ದು ಯುವಕ ಸಾವು

    ಮನೆಯಿಂದ ಹೊರಗೆ ಹೋಗಿ ಬರುವಷ್ಟರಲ್ಲಿ ಕಳ್ಳತನ ನಡೆದಿದೆ. ಆಭರಣ ಕಳ್ಳತನದಿಂದ ಮನೆ ಮಂದಿ ಕಂಗಾಲಾಗಿದ್ದು, ಆರೋಪಿಗಳನ್ನು ಬಂಧಿಸುವಂತೆ ಆಗ್ರಹಿಸಿದ್ದಾರೆ.

    ಈ ಸಂಬಂಧ ಆರ್‌ಆರ್‌ ನಗರ ಪೊಲೀಸ್ (Police) ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ತನಿಷಾ ಕುಪ್ಪಂಡ ಕೇಸ್: ಒರಿಜನಲ್ ವಿಡಿಯೋ ಕೇಳಿದ ಪೊಲೀಸ್

  • ಬೆಂಗ್ಳೂರು ಅಲ್ಲ ರಾಜ್ಯವ್ಯಾಪಿ ಜನರಿಂದ ಐಎಂಎಗೆ ಹಣ ಹೂಡಿಕೆ

    ಬೆಂಗ್ಳೂರು ಅಲ್ಲ ರಾಜ್ಯವ್ಯಾಪಿ ಜನರಿಂದ ಐಎಂಎಗೆ ಹಣ ಹೂಡಿಕೆ

    ಬೆಂಗಳೂರು: ಐಎಂಎ ಜ್ಯುವೆಲ್ಲರಿಯಲ್ಲಿ ಹಣ ಹೂಡಿ ವಂಚನೆಗೆ ಒಳಗಾದವರು ಒಬ್ಬೊಬ್ಬರೇ ತಮ್ಮ ಸಂಕಟ ತೋಡಿಕೊಳ್ಳುತ್ತಿದ್ದಾರೆ. ಕಂಪನಿ ಮಾಲೀಕ ಮನ್ಸೂರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಬೆಂಗಳೂರಿನ ಶಿವಾಜಿನಗರದ ಐಎಂಎ ಜ್ಯುವೆಲ್ಲರಿ ಮಳಿಗೆ ಎದುರು ಮೋಸ ಹೋಗಿರುವ ಜನ ಎದುರು ಅಹೋರಾತ್ರಿ ಧರಣಿ ನಡೆಸಿದರು.

    ಬೆಳಗ್ಗೆ 11 ಗಂಟಗೆ ವಿಧಾನಸೌಧಕ್ಕೆ ಮುತ್ತಿಗೆ ಹಾಕಿ, ಪ್ರಕರಣದ ತೀವ್ರತೆಯನ್ನು ಸರ್ಕಾರಕ್ಕೆ ಮುಟ್ಟಿಸುತ್ತೇವೆ ಎಂದು ಪ್ರತಿಭಟನಾಕಾರರು ನಿರ್ಧರಿಸಿದ್ದಾರೆ. ಐಎಂಎ ಮಾಲೀಕನನ್ನು ಬಂಧಿಸಿ ಹಣ ಕಳೆದುಕೊಂಡಿರುವ ಅಮಾಯಕರಿಗೆ ಹಣ ಕೊಡಿಸುವಂತೆ ಗೃಹಸಚಿವರಲ್ಲಿ ಮನವಿ ಮಾಡಿಕೊಳ್ಳಲಿದ್ದಾರೆ.
    ಇದನ್ನೂ ಓದಿ: ಐಎಂಎ ಮಾಲೀಕ ಆತ್ಮಹತ್ಯೆ ಮಾಡಿಕೊಂಡಿಲ್ವಂತೆ – ಲಾಭಾಂಶದ ಆಸೆಗೆ ಲಕ್ಷ, ಕೋಟಿ ಕಳೆದುಕೊಂಡ್ರು

    ರಾತ್ರಿಯೆಲ್ಲಾ ಪೊಲೀಸರು ದೂರು ಸ್ವೀಕರಿಸಿದ್ದು, ಧೈರ್ಯ ಹೇಳುವ ಕೆಲಸವನ್ನೂ ಮಾಡಿದ್ದಾರೆ. ಜ್ಯುವೆಲ್ಲರಿ ಬಳಿ ಸಾವಿರಾರು ಜನ ಜಮಾಯಿಸಿದ್ದರಿಂದ ಪೊಲೀಸ್ ಭದ್ರತೆ ಒದಗಿಸಲಾಗಿದೆ. ಅಂದಹಾಗೆ, ಬೆಂಗಳೂರು ಮಾತ್ರ ಅಲ್ಲ, ರಾಜ್ಯಾದ್ಯಂತ ಮೋಸ ಹೋದವರು ಆತಂಕ್ಕೀಡಾಗಿದ್ದಾರೆ. ದಾವಣಗೆರೆಯಲ್ಲಿ ಜನ ಪ್ರತಿಭಟಿಸಿದ್ದಾರೆ.

    ದುಪ್ಪಟ್ಟು ಹಣದ ಆಸೆಯಿಂದ ಮಕ್ಕಳ ಶಾಲಾ ಶುಲ್ಕಗೆ ಸಹಾಯ ಆಗುತ್ತದೆ ಎಂದು 4 ಲಕ್ಷ ಹೂಡಿದ್ವಿ. 3 ಪರ್ಸೆಂಟ್ ಬಡ್ಡಿಯಲ್ಲಿ ಜೀವನ ಸಾಗಿಸ್ತಿದ್ವಿ. ಈಗ ನೋಡಿದ್ರೆ ಹಿಂಗಾಯ್ತು ಅಂತ ಸೊಹ್ರಾಬಾನು ಕಣ್ಣೀರು ಹಾಕ್ತಿದ್ದಾರೆ.

    ಮೆಕ್ಯಾನಿಕ್ ಕೆಲಸ ಮಾಡುವ ಇಮ್ತಿಯಾಜ್ ಪಾಷಾ, ತಂಗಿಯ ಮದುವೆಗೆ ಅಂತಾ 1.5 ಲಕ್ಷ ಹೂಡಿಕೆ ಮಾಡಿದ್ದರು. ಇದೇ 10 ರಂದು ಹಣ ತೆಗೆಯಲು ಅರ್ಜಿ ಕೂಡ ಹಾಕಿದ್ದರು. ಅಷ್ಟರಲ್ಲಿ ಮನ್ಸೂರ್ ಖಾನ್ ಪರಾರಿ ಸುದ್ದಿ ನೋಡಿ ಕಂಗಾಲಾಗಿದ್ದಾರೆ. ಉಸ್ಮಾನ್ ಮತ್ತು ನಾಸಿರುದ್ದೀನ್ ಪ್ರತೀ ತಿಂಗಳು ಮನೆ ಬಾಡಿಗೆ ಕಟ್ಟಲು ಹಣ ಆಗಲಿ ಎಂದು ಹೂಡಿಕೆ ಮಾಡಿರುವುದಾಗಿ ತಿಳಿಸಿದ್ದಾರೆ.

    ವಂಚನೆ ಹೇಗೆ?
    ಐಎಂಎ ಜ್ಯುವೆಲ್ಸ್ ನಿಂದ ಚಿನ್ನ, ವಜ್ರ ಖರೀದಿಸುವ ಗ್ರಾಹಕರಿಗೆ ಮೇಕಿಂಗ್ ಹಾಗೂ ವೇಸ್ಟೇಜ್ ಶುಲ್ಕ ವಿಧಿಸುತ್ತಿರಲಿಲ್ಲ. ಈ ಪ್ರಕಟಣೆ ನೋಡಿ ಜನ ಚಿನ್ನ ಖರೀದಿ ಮಾಡುತ್ತಿದ್ದರು. ಖರೀದಿಗೆ ಬಂದ ಗ್ರಾಹಕರಿಗೆ ಕಂಪನಿಯಲ್ಲಿ ಹಣ ಹೂಡುವಂತೆ ಸಿಬ್ಬಂದಿ ಪುಸಲಾಯಿಸುತ್ತಿದ್ದರು. ಜ್ಯುವೆಲ್ಸ್ ಸಿಬ್ಬಂದಿಯ ಮಾತಿಗೆ ಮರುಳಾದ ಜನ ತಮ್ಮಲ್ಲಿದ್ದ ಹಣವನ್ನು ಹೂಡಿಕೆ ಮಾಡುತ್ತಿದ್ದರು. 1 ಲಕ್ಷ ರೂ. 3 ಸಾವಿರ ರೂ. ನಂತೆ ಕಂಪನಿ ಬಡ್ಡಿ ನೀಡುತಿತ್ತು. ಕಂಪನಿ ಸರಿಯಾದ ಸಮಯದಲ್ಲಿ ಲಾಭಾಂಶ ನೀಡುತ್ತಿದ್ದ ಕಾರಣ ವಿಶ್ವಾಸಾರ್ಹತೆ ಗಳಿಸಿಕೊಂಡಿತ್ತು. ಲಾಭಾಂಶ ಪಡೆದ ಗ್ರಾಹಕರು ಸ್ನೇಹಿತರಿಗೆ ಹೇಳುತ್ತಿದ್ದ ಕಾರಣ ಅವರು ಹೂಡಿಕೆ ಮಾಡತೊಡಗಿದರು. ಭಾರೀ ಪ್ರಚಾರ ಸಿಕ್ಕಿದ ಪರಿಣಾಮ ಹೂಡಿಕೆ ಹೆಚ್ಚಾಯಿತು. ಆದರೆ ಕಳೆದ 2-3 ತಿಂಗಳಿನಿಂದ ಸಂಸ್ಥೆ ಬಡ್ಡಿ ನೀಡಿರಲಿಲ್ಲ. ಈ ನಡುವೆ ಜೂನ್ 10 ರಂದು ಸಂಪೂರ್ಣ ಹಣ ನೀಡುವುದಾಗಿ ಭರವಸೆ ನೀಡಿತ್ತು. ಆದರೆ ಜೂ.9 ರಂದು ಮಾಲೀಕ ಮನ್ಸೂರ್ ಅಲಿ ಖಾನ್ ಆತ್ಮಹತ್ಯೆಯ ವಿಡಿಯೋ ವೈರಲ್ ಆದ ಬಳಿಕ ಮಳಿಗೆಯ ಮುಂದೆ ಜನರು ಜಮಾಯಿಸಿ ಹೂಡಿದ್ದ ಹಣವನ್ನು ಕೇಳಲು ಆರಂಭಿಸಿದರು.