Tag: Jewelry

  • ಚಿಕ್ಕಬಳ್ಳಾಪುರ | ತುಂಬಿದ ಬಸ್‌ಗಳಲ್ಲಿ ಕೈಚಳಕ ತೋರಿಸ್ತಿದ್ದ ಕಳ್ಳಿಯರ ಗ್ಯಾಂಗ್‌‌ ಲಾಕ್‌

    ಚಿಕ್ಕಬಳ್ಳಾಪುರ | ತುಂಬಿದ ಬಸ್‌ಗಳಲ್ಲಿ ಕೈಚಳಕ ತೋರಿಸ್ತಿದ್ದ ಕಳ್ಳಿಯರ ಗ್ಯಾಂಗ್‌‌ ಲಾಕ್‌

    ಚಿಕ್ಕಬಳ್ಳಾಪುರ: ಶಕ್ತಿ ಯೋಜನೆ (Shakti Scheme) ಮೂಲಕ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ಮಾಡಿದ್ದೇ ತಡ.. ಕೆಲ ಮಹಿಳೆಯರು ಪ್ರವಾಸ, ತವರು ಮನೆ, ನೆಂಟರ ಮನೆಗಳಿಗೆ ಅಂತ ಮೈತುಂಬಾ ಚಿನ್ನಾಭರಣ ಹಾಕಿಕೊಂಡು ಬಸ್ ಹತ್ತುತ್ತಾರೆ. ಆದ್ರೆ ಅಂಥವರನ್ನೆ ಟಾರ್ಗೆಟ್ ಮಾಡಿದ್ದ ಅದೊಂದು ಕಳ್ಳಿಯರ ಗ್ಯಾಂಗ್, ತುಂಬಿದ್ದ ಬಸ್ ಹತ್ತಿ ಮಹಿಳೆಯರ ಚಿನ್ನಾಭರಣಗಳಿಗೆ (Gold Jewelry) ಕನ್ನ ಹಾಕ್ತಿದ್ರು. ಈಗ ಆ ಗ್ಯಾಂಗ್ ಪೊಲೀಸರ ಅತಿಥಿಯಾಗಿದೆ.

    ಈ ಗ್ಯಾಂಗ್‌ನ ಕಳ್ಳಿಯರು (Women Theft Gang) ಬಸ್ ಹತ್ತಿದ್ರೆ ಸಾಕು ಪ್ರಯಾಣಿಕರ ಜೇಬಲ್ಲಿ ಇರೋ ದುಡ್ಡು ಕ್ಷಣ ಮಾತ್ರದಲ್ಲಿ ಮಾಯವಾಗ್ತಿತ್ತು. ಇನ್ನೂ ಮೈಮೇಲೆ ಇರೋ ಒಡವೆಗಳು ಮಂಗಮಾಯ ಆಗ್ತಿತ್ತು. ಆಕೆಯ ಹೆಸರು ತುಳಸಿ (22), ಮತ್ತಿಬ್ಬರ ಹೆಸರು ಪ್ರೇಮಾ (21), ಸೋನಿಯಾ (25). ಮೂವರೂ ಕಲಬುರಗಿ ಮೂಲದವರು. ಶಕ್ತಿ ಯೋಜನೆಯಡಿ ಮಹಿಳೆಯರು ಮುಗಿಬಿದ್ದು ಬಸ್‌ಗಳಲ್ಲಿ ಪ್ರಯಾಣ ಮಾಡ್ತಿದ್ದಂತೆ ಇವರ ಆದಾಯ ಏರಿಕೆಯಾಗಿದೆಯಂತೆ. ತುಂಬಿದ ಬಸ್‌ಗಳಲ್ಲಿ ಮಹಿಳೆಯರು ಬಸ್ ಹತ್ತುವಾಗ ಇಳಿಯುವಾಗ ಈ ಮೂವರು ಸುಂದರಿಯರು. ಮಹಿಳೆಯರ ಬ್ಯಾಗ್‌ನಲ್ಲಿದ್ದ ಹಣ, ಕತ್ತಲ್ಲಿದ್ದ ಚಿನ್ನಾಭರಣಗಳನ್ನು ಕಳ್ಳತನ ಮಾಡ್ತಿದ್ರು. ಇದನ್ನೂ ಓದಿ: ಕಾಮಿಡಿ ಕಿಲಾಡಿಗಳು ಖ್ಯಾತಿಯ ಚಂದ್ರಶೇಖರ್ ಸಿದ್ದಿ ನೇಣು ಬಿಗಿದುಕೊಂಡು ಆತ್ಮಹತ್ಯೆ

    ಇನ್ನೂ ಚಿಕ್ಕಬಳ್ಳಾಪುರ ನಗರದ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣವೇ ಈ ಮೂವರು ಕಳ್ಳಿಯರ ಅಡ್ಡೆಯಾಗಿತ್ತು. ಇತ್ತೀಚಿಗೆ ಎರಡು ಕಳ್ಳತನ ಪ್ರಕರಣಗಳು ದಾಖಲಾಗಿದ್ದವು. ಚಿಕ್ಕಬಳ್ಳಾಪುರ ನಗರ ಠಾಣೆ ಪೊಲೀಸರು, ಸಿಸಿಟಿವಿಯಲ್ಲಿ ದಾಖಲಾದ ವಿಡಿಯೊ ಜಾಡು ಹಿಡಿದು ತನಿಖೆ ಕೈಗೊಂಡಿದ್ರು. ಕೊನೆಗೆ ಚಿಕ್ಕಬಳ್ಳಾಪುರದಿಂದ ಕಲಬುರಗಿವರೆಗೂ ಪ್ರಯಾಣ ಮಾಡಿ ಮೂವರು ಕಳ್ಳಿಯರನ್ನ ಬಂಧಿಸಿದ್ದಾರೆ. ಬಂಧಿತರಿಂದ 7 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ.

    ಒಟ್ಟಿನಲ್ಲಿ ಮಹಿಳೆಯರು ತುಂಬಿದ ಬಸ್‌ಗಳನ್ನೇ ಬಂಡವಾಳ ಮಾಡಿಕೊಂಡಿರುವ ಕೆಲ ಕಳ್ಳಿಯರು ಕಳ್ಳತನ ಮಾಡುವುದನ್ನೇ ವೃತ್ತಿ ಮಾಡಿಕೊಂಡಿದ್ರು. ಆದ್ರೆ ಪೊಲೀಸರು ಈಗ ಆರೋಪಿಗಳನ್ನ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಇದನ್ನೂ ಓದಿ: ಎಣ್ಣೆಯಲ್ಲಿ ಫ್ಯಾಟ್ ಚೆಕಿಂಗ್‌ಗೆ ಮುಂದಾದ ಹೋಟೆಲ್‌ ಮಾಲೀಕರು – ಡಿವೈಸ್ ಬೆಲೆ ಕೇಳಿ ಸುಸ್ತು!

  • ಕಲಬುರಗಿ ಜ್ಯುವೆಲರಿ ಶಾಪ್‌ ದರೋಡೆ – ಅಂತರರಾಜ್ಯ ಕಳ್ಳರು ಭಾಗಿ ಶಂಕೆ, ಆರೋಪಿಗಳ ಚಲನವಲನ ಸಿಸಿಟಿವಿಯಲ್ಲಿ ಸೆರೆ

    ಕಲಬುರಗಿ ಜ್ಯುವೆಲರಿ ಶಾಪ್‌ ದರೋಡೆ – ಅಂತರರಾಜ್ಯ ಕಳ್ಳರು ಭಾಗಿ ಶಂಕೆ, ಆರೋಪಿಗಳ ಚಲನವಲನ ಸಿಸಿಟಿವಿಯಲ್ಲಿ ಸೆರೆ

    ಕಲಬುರಗಿ: ನಗರದ (Kalaburagi) ಹೃದಯ ಭಾಗದಲ್ಲಿರುವ ಸೂಪರ್ ಮಾರ್ಕೆಟ್‌ನ ಸರಾಫ್ ಬಜಾರ್‌ನಲ್ಲಿ ಚಿನ್ನದ ಅಂಗಡಿ ( Jewelry Shop) ದರೋಡೆ ಪ್ರಕರಣದಲ್ಲಿ ಅಂತರರಾಜ್ಯ ದರೋಡೆಕೋರರು ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದೆ. ದರೋಡೆಕೋರರ ಚಲನವಲನಗಳ ಹಲವು ಸಿಸಿಟಿವಿಯಲ್ಲಿ ಸೆರೆಯಾಗಿದೆ.

    ಶನಿವಾರ ಹಾಡಹಗಲೇ ದರೋಡೆಕೋರರು ಅಂಗಡಿ ಮಾಲೀಕನಿಗೆ ಗನ್ ಪಾಯಿಂಟ್‌ನಲ್ಲಿ ಇಟ್ಟು ಬಂಗಾರ ದೋಚಿದ್ದರು. ಆದರೆ, ಈ ಖತರ್ನಾಕ್ ಗ್ಯಾಂಗ್ ಯಾವುದೇ ರೀತಿಯ ಮೊಬೈಲ್, ಕಾರು ಹಾಗೂ ಬೈಕ್ ಸಹ ಬಳಸದೇ ಕೃತ್ಯ ನಡೆಸಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ಹಾಡಹಗಲೇ ಜ್ಯುವೆಲರಿ ಶಾಪ್‌ಗೆ ನುಗ್ಗಿ ದರೋಡೆ – ಗನ್ ತೋರಿಸಿ 3 ಕೆಜಿ ಚಿನ್ನಾಭರಣ ದೋಚಿದ ಗ್ಯಾಂಗ್

    ದರೋಡೆಗೂ ಮೊದಲು ನಾಲ್ಕು ಜನರ ಗ್ಯಾಂಗ್ ಆಟೋ‌ ಮೂಲಕ ಸರಾಫ್ ಬಜಾರ್‌ ತನಕ ಬಂದಿದೆ. ದರೋಡೆ ಬಳಿಕ ಬ್ರಹ್ಮಪೂರ್ ಪೊಲೀಸ್ ಠಾಣೆವರೆಗೂ ಬಿಂದಾಸಾಗಿ ನಡೆದುಕೊಂಡೆ ಹೋಗಿದ್ದಾರೆ. ಬಳಿಕ ಅಲ್ಲಿಂದ ಆಟೋದಲ್ಲಿ ಕುಳಿತು ಕೇಂದ್ರೀಯ ಬಸ್ ನಿಲ್ದಾಣದ ಹಿಂಬದಿ ಗೇಟ್ ಬಳಿ ಇಳಿದುಕೊಂಡಿದ್ದಾರೆ. ಅಂಗಡಿ ಮಾಲೀಕನ ಮೊಬೈಲನ್ನು ಅಲ್ಲೇ ಬಿಸಾಡಿ ಕೇಂದ್ರ ಬಸ್ ನಿಲ್ದಾಣದ ಒಳಗೆ ನಾಲ್ಕು ಜನ ದರೋಡೆಕೊರರು ಹೋಗಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

    ಸದ್ಯ ಅಂತರರಾಜ್ಯ ದರೋಡೆಕೋರರು ಈ ಕೃತ್ಯ ನಡೆಸಿರುವ ಬಗ್ಗೆ ಪೊಲೀಸರು ಮಾಹಿತಿ‌ ಕಲೆ ಹಾಕಿದ್ದು, ಮಹಾರಾಷ್ಟ್ರ, ತೆಲಂಗಾಣ ಸೇರಿದಂತೆ ಉತ್ತರ ಭಾರತದ ರಾಜ್ಯಗಳ ಪೊಲೀಸರಿಗೆ ದರೋಡೆಕೊರರ ಭಾವಚಿತ್ರಗಳನ್ನು ರವಾನಿಸಲಾಗಿದೆ.

    ಪೊಲೀಸರ ದಾರಿ ತಪ್ಪಿಸಲು ಮೊಬೈಲ್ ಬಳಕೆ
    ದರೋಡೆ ಸಮಯದಲ್ಲಿ ನಾಲ್ಕು ಜನ ದರೋಡೆಕೊರರು ಮೊಬೈಲ್ ಬಳಕೆ ಮಾಡದೆ ಕೈಯಲ್ಲಿ ಸುಮ್ಮನೆ ಮೊಬೈಲ್ ಹಿಡಿದು ಪೊಲೀಸರ ತನಿಖಾ ದಾರಿ ತಪ್ಪಿಸಲು ಪ್ಲ್ಯಾನ್ ಸಹ ಮಾಡಿದ್ದರು ಎಂದು ತಿಳಿದುಬಂದಿದೆ. ಹೀಗಾಗಿ, ದರೊಡೆಕೋರರ ಪತ್ತೆಗೆ ಅಷ್ಟ ದಿಕ್ಕುಗಳಲ್ಲಿ ಪೊಲೀಸರು ಐದು ತಂಡಗಳಿಂದ ದರೋಡೆಕೊರರ ಚಲನವಲನಗಳ ಇಂಚಿಂಚು ಹೆಜ್ಜೆಗಳ ಕುರಿತು ಮಾಹಿತಿ ಸಂಗ್ರಹಿಸುತ್ತಿದ್ದಾರೆ.

    ಒಬ್ಬೊಬ್ಬರಿಗೆ ಒಂದು ಜವಾಬ್ದಾರಿ
    ಗ್ರಾಮೀಣ ಎಸಿಪಿ ನೈತೃತ್ವದ ತಂಡದಿಂದ ಟವರ್ ಲೋಕೆಷನ್, ಸಿಡಿಆರ್ ಸಂಗ್ರಹ, ಉತ್ತರ ವಿಭಾಗದ ಎಸಿಪಿಯಿಂದ ನಗರದ ಸಿಸಿಟಿವಿ ಪರೀಶಿಲನೆ, ದಕ್ಷಿಣ ಎಸಿಪಿ ನೈತೃತ್ವದ ತಂಡದಿಂದ ಅಂಗಡಿ‌ ಮಾಲೀಕ ಹಾಗೂ ಗ್ರಾಹಕರ ಬಗ್ಗೆ ಮಾಹಿತಿ ಸಂಗ್ರಹ, ಅಶೋಕ ನಗರ ಠಾಣೆ ಇನ್ಸಪೆಕ್ಟರ್‌ಗೆ ಬಸ್‌ಗಳ ಬಗ್ಗೆ ಮಾಹಿತಿ ಹಾಗೂ ಸ್ಟೇಷನ್ ಬಜಾರ್ ಇನ್ಸಪೆಕ್ಟರ್‌ ರೈಲು ಪ್ರಯಾಣದ ಬಗ್ಗೆ ಪರೀಶಿಲನೆ ನಡೆಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: ಪ್ರಿಯತಮೆ ಕುಟುಂಬಸ್ಥರಿಂದ ಕೊಲೆ ಬೆದರಿಕೆ ಆರೋಪ – ಹೆದರಿ ಯುವಕ ಆತ್ಮಹತ್ಯೆ

     

  • ಗೃಹಪ್ರವೇಶ ಮುಗಿಸಿದ್ದ ಹೊಸ ಮನೆಗೆ ಕನ್ನ; ಯುಗಾದಿ ಹಬ್ಬಕ್ಕೆ ಸ್ವಗ್ರಾಮಕ್ಕೆ ಹೋಗಿದ್ದಾಗ ಮನೆಗಳವು

    ಗೃಹಪ್ರವೇಶ ಮುಗಿಸಿದ್ದ ಹೊಸ ಮನೆಗೆ ಕನ್ನ; ಯುಗಾದಿ ಹಬ್ಬಕ್ಕೆ ಸ್ವಗ್ರಾಮಕ್ಕೆ ಹೋಗಿದ್ದಾಗ ಮನೆಗಳವು

    – 150 ಗ್ರಾಂ ಚಿನ್ನ, 2 ಕೆಜಿ ಬೆಳ್ಳಿ ಲೂಟಿ

    ಚಿಕ್ಕಬಳ್ಳಾಪುರ: ಗೃಹಪ್ರವೇಶ ಮಾಡ 40 ದಿನ ಕಳೆಯುವಷ್ಟರಲ್ಲೇ ಹೊಸ ಮನೆಗೆ ಕಳ್ಳರು ಕನ್ನ ಹಾಕಿ 17 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ (Jewelry), ನಗದು ದೋಚಿರುವ ಘಟನೆ ಚಿಕ್ಕಬಳ್ಳಾಪುರ (Chikkaballapura) ಜಿಲ್ಲೆಯ ಚಿಂತಾಮಣಿ ನಗರದ ಗುಂಡಪ್ಪ ಬಡಾವಣೆಯಲ್ಲಿ ನಡೆದಿದೆ.

    ಶಿಡ್ಲಘಟ್ಟ ಜಿಲ್ಲಾ ಪಂಚಾಯಿತಿಯಲ್ಲಿ ನರೇಗ ಎಂಜಿನಿಯರ್‌ ಆಗಿ ಕೆಲಸ ನಿರ್ವಹಿಸುತ್ತಿರುವ ನಾಗೇಂದ್ರ ಎಂಬುವವರು ತಮ್ಮ ಕುಟುಂಬದವರೊಂದಿಗೆ ಯುಗಾದಿ ಹಬ್ಬಕ್ಕಾಗಿ ಮನೆಗೆ ಬೀಗ ಜಡಿದು ಬಾಗೇಪಲ್ಲಿ ತಾಲ್ಲೂಕಿನ ಇದ್ಲಿವಾರಪಲ್ಲಿ ಗ್ರಾಮಕ್ಕೆ ಹೋಗಿದ್ದು, ಹಬ್ಬ ಮುಗಿಸಿ ಮನೆಗೆ ವಾಪಾಸ್ ಬಂದಾಗ ಕಳವು ಪ್ರಕರಣ ಬೆಳಕಿಗೆ ಬಂದಿದೆ. ಇದನ್ನೂ ಓದಿ: ಯಡಿಯೂರಪ್ಪ ಕುಟುಂಬ ರಾಜ್ಯಾಧ್ಯಕ್ಷ ಸ್ಥಾನದಿಂದ ಮುಕ್ತಿ ಆಗೋವರೆಗೂ ನಾನು ಬಿಜೆಪಿಗೆ ವಾಪಸ್ ಆಗಲ್ಲ – ಯತ್ನಾಳ್ ಶಪಥ

    ಕಳವಿಗೆ ಬಂದಿರೋ ಕಳ್ಳರು ಮನೆಯಲ್ಲಿ ಯಾರು ಇಲ್ಲದೇ ಇರುವುದನ್ನು ಖಚಿತಪಡಿಸಿಕೊಳ್ಳಲು ಮೊದಲು ಮನೆಯ ಬಾಗಿಲಿನ ಕಿಟಕಿ ಗಾಜು ಹೊಡೆದು ಮನೆಯಲ್ಲಿ ಯಾರು ಇಲ್ಲದೇ ಇರುವುದನ್ನು ಖಚಿತ ಪಡಿಸಿಕೊಂಡ ನಂತರ ಮನೆಯ ಮುಂಬಾಗಿಲು ಮುರಿದು ಒಳ್ಳನುಗ್ಗಿದ್ದಾರೆ.

    ಮನೆಯಲ್ಲಿದ್ದ ಸರಿ ಸುಮಾರು 150 ಗ್ರಾಂ ಚಿನ್ನಾಭರಣಗಳು, 2 ಕೆಜಿ ಬೆಳ್ಳಿಯು ಆಭರಣಗಳು ಮತ್ತು ನಗದು 3 ಲಕ್ಷ ರೂಪಾಯಿ ನಗದು ಕಳ್ಳತನ ಮಾಡಿಕೊಂಡು ಹೋಗಿದ್ದಾರೆ. ಚಿಂತಾಮಣಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  ಇದನ್ನೂ ಓದಿ: ಒಂದೇ ಮಳೆಗೆ ಬೆಂಗಳೂರಿನ ಹಲವೆಡೆ ಅವಾಂತರ – ಎಲ್ಲೆಲ್ಲಿ ಎಷ್ಟು ಮಳೆ?

  • ಹಳೆಯ ಆಭರಣಗಳಿಗೆ ಹೊಸ ಹುರುಪು – ಟ್ರೆಂಡಿಯಾಗಿ ಧರಿಸುವ ಬೆಳ್ಳಿ ಒಡವೆಗಳ ಬಗ್ಗೆ ಇಲ್ಲಿದೆ ಸಿಂಪಲ್ ಟಿಪ್ಸ್

    ಹಳೆಯ ಆಭರಣಗಳಿಗೆ ಹೊಸ ಹುರುಪು – ಟ್ರೆಂಡಿಯಾಗಿ ಧರಿಸುವ ಬೆಳ್ಳಿ ಒಡವೆಗಳ ಬಗ್ಗೆ ಇಲ್ಲಿದೆ ಸಿಂಪಲ್ ಟಿಪ್ಸ್

    ಹೆಂಗಳೆಯರ ಫ್ಯಾಷನ್‌ಗೆ ಕೊನೆಯೇ ಇಲ್ಲ. ಹೊಸತು ಹಳೆಯದ್ದಾಗುತ್ತಿದ್ದಂತೆ ಈಗ ಹಳೆಯ ಕಾಲದ ಆಭರಣಗಳೇ ಟ್ರೆಂಡ್ ಆಗಿವೆ. ಯುವತಿಯರೂ ಸಹ ಅಜ್ಜ – ಅಜ್ಜಿ ಕಾಲದ ಒಡವೆಗಳಿಗೆ ಚಿತ್ತಾಕರ್ಷಕ ರೂಪಕೊಟ್ಟು ಧರಿಸುತ್ತಿದ್ದಾರೆ. ಬೆಳ್ಳಿ ಬಂಗಾರ ಎಂದರೆ ಕಣ್ಣರಳಿಸುವ ಹೆಣ್ಣುಮಕ್ಕಳು ಪ್ರತೀ ಒಡವೆಯನ್ನೂ ಟ್ರೆಂಡಿಯಾಗಿ ಹೇಗೆ ಧರಿಸಬಹುದು ಎಂದೇ ಲೆಕ್ಕಾಚಾರ ಹಾಕುತ್ತಿದ್ದಾರೆ.

    ಇತ್ತೀಚಿನ ದಿನಗಳಲ್ಲಿ ಬೆಳ್ಳಿ-ಬಂಗಾರ ಎಲ್ಲರ ಮನಗೆಲ್ಲುತ್ತಿದೆ. ಬೆಳ್ಳಿಯ ಆಭರಣಗಳು ಧರಿಸುವವರ ಸಂಖ್ಯೆಯೂ ಹೆಚ್ಚಾಗಿದೆ. ಎಲ್ಲಾ ರೀತಿಯ ಧಿರಿಸಿಗೆ ಒಪ್ಪುವಂತಹ ಚೆಂದದ ಡಿಸೈನ್ ಬೆಳ್ಳಿ ಪ್ರಿಯರಿಗೆ ಅಚ್ಚುಮೆಚ್ಚು. ಅನಾದಿ ಕಾಲದಿಂದಲೂ ಬೆಳ್ಳಿಯ ಬಳಕೆ ಚಾಲ್ತಿಯಲ್ಲಿದೆ. ಇಂದಿನ ದಿನಮಾನಗಳಲ್ಲೂ ಬೆಳ್ಳಿ ತನ್ನ ಬೇಡಿಕೆಯನ್ನು ಉಳಿಸಿಕೊಂಡಿದೆ. ಕೆಲವರು ಇದೇ ಬೆಳ್ಳಿ ಆಭರನಣಕ್ಕೆ ಚಿನ್ನದ ಹೊಳಪು ನೀಡಿ ಧರಿಸುತ್ತಾರೆ.

    ಬೆಳ್ಳಿ ಆಭರಣಗಳಲ್ಲಿ ಕಿವಿಯೋಲೆಗಳು, ಉಂಗುರಗಳು, ಮೂಗಿನ ನತ್ತುಗಳು, ಬೆಳ್ಳಿಯ ನೆಕ್ಲೆಸ್‌ಗಳು, ಬಳೆ, ಖಡಗಗಳು ಸೇರಿ ಇನ್ನೂ ಅನೇಕವು ಫ್ಯಾಷನ್ ಪ್ರಿಯರ ಲಗ್ಗೆ ಇಟ್ಟಿದೆ. ಅಲ್ಲದೆ ಬೆಳ್ಳಿ ಆರೋಗ್ಯಕ್ಕೂ ಒಳ್ಳೆಯದು. ಹಾಗಾದ್ರೆ ಯಾವೆಲ್ಲ ರೀತಿಯಲ್ಲಿ ಈ ಬೆಳ್ಳಿ ಆಭರಣಗಳನ್ನು ಟ್ರೆಂಡಿಯಾಗಿ ಧರಿಸಬಹುದು ಎನ್ನುವ ಬಗ್ಗೆ ಇಲ್ಲಿದೆ ನೋಡಿ ಸಿಂಪಲ್ ಟಿಪ್ಸ್.

    ಆಫೀಸ್‌ಗಳಲ್ಲೂ ಟ್ರೆಂಡಿ ಲುಕ್:
    ಬೆಳ್ಳಿ ಆಭರಣಗಳು ಒಂದೇ ರೀತಿಯದಲ್ಲ. ಹೀಗಾಗಿ ನೀವು ಅದನ್ನು ಆಫೀಸ್‌ಗೂ ಧರಿಸಿ ಹೋಗಬಹುದು. ಇದನ್ನು ನಿಮ್ಮ ಡೆನಿಮ್ ಶರ್ಟ್ ಅಥವಾ ಫಾರ್ಮಲ್ ಮೇಲೆ ಧರಿಸಬಹುದು. ಅಥವಾ ಕಾಟನ್ ಸೀರೆಗಳ ಮೇಲೂ ಧರಿಸಬಹುದಾಗಿದೆ. ಬೆಳ್ಳಿ ಖಡಗ, ಬೆಳ್ಳಿ ಉಂಗುರ, ನೆಕ್ಲೆಸ್ ಸೇರಿದಂತೆ ಬೆಳ್ಳಿ ನತ್ತುಗಳನ್ನು ಧರಿಸಿದರೆ ಸಖತ್ ಸ್ಟೈಲಿಷ್ ಲುಕ್ ನೀಡುತ್ತದೆ.

    ದೇಸಿ ಸ್ಟೈಲ್‌:
    ಬೆಳ್ಳಿಯ ಆಭರಣಗಳು ಕುರ್ತಾ ಮತ್ತು ಸಲ್ವಾರ್ ಕಮೀಜ್‌ಗಳೊಂದಿಗೆ ಉತ್ತಮವಾಗಿ ಕಾಣುತ್ತವೆ. ಜೊತೆಗೆ ಪಲಾಜೋಸ್ ಮತ್ತು ಇತರ ಟ್ರೆಡೀಷನಲ್ ಉಡುಪುಗಳೊಂದಿಗೆ ಬೆಳ್ಳಿ ಚೆನ್ನಾಗಿ ಒಪ್ಪುತ್ತದೆ. ಬೆಳ್ಳಿ ಬಳೆಗಳು, ಕಿವಿಯೋಲೆಗಳು, ಚೋಕರ್ ಅಥವಾ ನೆಕ್ಲೆಸ್ ರೂಪದಲ್ಲಿ ಧರಿಸಿ ಸ್ಟೈಲಿಷ್ ಆಗಿ ಕಾಣಬಹುದಾಗಿದೆ.

    ಬೊಹಿಮಿಯನ್ ಶೈಲಿ:
    ಬೋಹೀಮಿಯನ್ ಬೆಳ್ಳಿ ಆಭರಣಗಳು ಟ್ರೆಂಡಿ ಮತ್ತು ಆರಾಮದಾಯಕ ಶೈಲಿಯಾಗಿದೆ. ದೊಡ್ಡ ಮೂಗುತಿ ಉಡುಪಿನೊಂದಿಗೆ ಧರಿಸಬಹುದು. ಅಲ್ಲದೇ ಬೆಳ್ಳಿ ಬಳೆ ಮತ್ತು ನೆಕ್ಲೆಸ್‌ಗಳನ್ನು ಕೂಡ ಶರ್ಟ್‌ಗಳ ಮೇಲೆ ಧರಿಸಬಹುದಾಗಿದೆ.

    ಸ್ಟ್ರೀಟ್‌ ಸ್ಟೈಲ್‌:
    ಇಂಡೋ-ವೆಸ್ಟರ್ನ್ ಮತ್ತು ಬೋಹೀಮಿಯನ್ ಶೈಲಿಗಳು ಇಂದು ಹೆಚ್ಚು ಟ್ರೆಂಡಿಂಗ್ ಶೈಲಿಗಳಾಗಿವೆ. ವಿಶೇಷ ಸಂದರ್ಭಗಳಲ್ಲಿ ಅಥವಾ ಶಾಪಿಂಗ್‌ಗೆ ಹೋಗುವಾಗ ನೀವು ಆಭರಣಗಳನ್ನು ಧರಿಸಬಹುದು. ಇದು ಹೀಲ್ಸ್, ಜೆಗ್ಗಿಂಗ್‌ಗಳು ಮತ್ತು ಸಡಿಲವಾದ ಟಾಪ್‌ಗಳೊಂದಿಗೆ ಸಖತ್ ಫ್ಯಾಷನೇಬಲ್ ಆಗಿ ಕಾಣುತ್ತದೆ.

    Live Tv
    [brid partner=56869869 player=32851 video=960834 autoplay=true]

  • 2 ವರ್ಷಗಳ ಬಳಿಕದ ದಾಖಲೆ – ಅಕ್ಷಯ ತೃತೀಯದಂದು ಭರ್ಜರಿ ಸೇಲ್

    2 ವರ್ಷಗಳ ಬಳಿಕದ ದಾಖಲೆ – ಅಕ್ಷಯ ತೃತೀಯದಂದು ಭರ್ಜರಿ ಸೇಲ್

    ನವದೆಹಲಿ: ಕೋವಿಡ್ ಸಂದರ್ಭದಲ್ಲಿ ಕುಸಿದಿದ್ದ ಆಭರಣ ಮಾರುಕಟ್ಟೆ 2 ವರ್ಷಗಳ ಬಳಿಕ ಈ ಬಾರಿಯ ಅಕ್ಷಯ ತೃತೀಯದಂದು ಮತ್ತೆ ಚೇತರಿಸಿಕೊಂಡಿದೆ.

    ದೇಶಾದ್ಯಂತ 2 ವರ್ಷಗಳ ಬಳಿಕ 2022ರ ಅಕ್ಷಯ ತೃತೀಯದಂದು 15,000 ಕೋಟಿ ರೂ. ಮೌಲ್ಯದ ಆಭರಣ ಮಾರಾಟವಾಗಿದೆ. ಇದು ಕೋವಿಡ್‌ನಿಂದ ವಿಧಿಸಲಾದ ಲಾಕ್‌ಡೌನ್ ಬಳಿಕದ ಅತಿ ದೊಡ್ಡ ಆಭರಣ ವ್ಯವಹಾರವಾಗಿದೆ ಎಂದು ಅಖಿಲ ಭಾರತ ವ್ಯಾಪರಗಳ ಒಕ್ಕೂಟ(ಸಿಎಐಟಿ) ತಿಳಿಸಿದೆ. ಇದನ್ನೂ ಓದಿ: ವಾಣಿಜ್ಯ, ಸರ್ಕಾರಿ ಬಳಕೆದಾರರಿಗೆ ಟ್ವಿಟ್ಟರ್‌ನಲ್ಲಿ ಶುಲ್ಕ ಸಾಧ್ಯತೆ: ಮಸ್ಕ್

    ಕೋವಿಡ್ ವಕ್ಕರಿಸಿಕೊಳ್ಳುತ್ತಿದ್ದಂತೆಯೇ ದೇಶಾದ್ಯಂತ ಚಿನ್ನದ ಮಾರಾಟದಲ್ಲಿ ಶೇ.80 ರಷ್ಟು ಭಾರೀ ಇಳಿಕೆ ಕಂಡು ಬಂದಿತ್ತು. ಈ ಬಾರಿ ಕೋವಿಡ್ ಹಾವಳಿ ಕಡಿಮೆಯಿರುವುದರಿಂದ ಹಾಗೂ ಹಬ್ಬದ ಪ್ರಯುಕ್ತ ರಜೆ ಇದ್ದಿದ್ದರಿಂದ ಚಿನ್ನ ಖರೀದಿಗೆ ಜನರು ಮುಗಿ ಬಿದ್ದಿದ್ದಾರೆ. ದೇಶಾದ್ಯಂತ ಒಂದೇ ದಿನ ಬರೋಬ್ಬರಿ 30 ಟನ್ ಚಿನ್ನ ಮಾರಾಟವಾಗಿದೆ.

    2 ತಿಂಗಳ ಹಿಂದೆ ಚಿನ್ನದ ಬೆಲೆ 55,000 ದಿಂದ 58,000 ರೂ. ವರೆಗೂ ತಲುಪಿತ್ತು. ಇದೀಗ ಚಿನ್ನದ ಬೆಲೆ 50,000 ರೂ.ಗೆ ಇಳಿಕೆಯಾಗಿರುವುದರಿಂದ ಹಾಗೂ ಇದು ಮದುವೆ ಸಮಾರಂಭಗಳಂತಹ ಸಮಯವಾಗಿರುವುದರಿಂದ ಹೆಚ್ಚಿನ ಪ್ರಮಾಣದಲ್ಲಿ ಚಿನ್ನಾಭರಣ ಮಾರಟವಾಗಿದೆ ಎಂದು ಸಿಎಐಟಿ ಕಾರ್ಯದರ್ಶಿ ಪ್ರವೀಣ್ ಖಂಡೇವಾಲ್ ತಿಳಿಸಿದ್ದಾರೆ. ಇದನ್ನೂ ಓದಿ: ಬಿಸಿಲಿನ ತಾಪಕ್ಕೆ 25 ಬಲಿ, 100ಕ್ಕೂ ಹೆಚ್ಚು ಮಂದಿ ಆಸ್ಪತ್ರೆಗೆ

    ರಾಜ್ಯದಲ್ಲೂ ಭಾರೀ ಮಾರಾಟ:
    ಕರ್ನಾಟಕದಲ್ಲೂ ಅಕ್ಷಯ ತೃತೀಯ ಅಂಗವಾಗಿ ಜನರು ಚಿನ್ನಾಭರಣ ಖರೀದಿಗೆ ಮುಗಿಬಿದ್ದಿದ್ದಾರೆ. ಮಂಗಳವಾರ ಒಂದೇ ದಿನ ಸುಮಾರು 1,680 ಕೋಟಿ ರೂ. ವ್ಯವಹಾರ ನಡೆದಿದೆ. ಬೆಂಗಳೂರಿನಲ್ಲಿ 650 ಕೋಟಿ ರೂ. ವ್ಯಾಪಾರ ನಡೆದಿದೆ ಎಂದು ಕರ್ನಾಟಕ ಜ್ಯುವೆಲ್ಲರ್ಸ್ ಫೆಡರೇಷನ್ ಅಸೋಸಿಯೇಷನ್ ಪ್ರಧಾನ ಕಾರ್ಯದರ್ಶಿ ಡಾ. ಜಿ ರಾನಚಾರಿ ತಿಳಿಸಿದ್ದಾರೆ.

  • ನಿಮ್ಮ ಗರ್ಲ್‍ಫ್ರೆಂಡ್ ಬರ್ತ್‍ಡೇಗೆ ಯಾವ ಗಿಫ್ಟ್ ಕೊಟ್ಟರೆ ಫುಲ್ ಖುಷ್ ಆಗ್ತಾರೆ ಗೊತ್ತಾ?

    ನಿಮ್ಮ ಗರ್ಲ್‍ಫ್ರೆಂಡ್ ಬರ್ತ್‍ಡೇಗೆ ಯಾವ ಗಿಫ್ಟ್ ಕೊಟ್ಟರೆ ಫುಲ್ ಖುಷ್ ಆಗ್ತಾರೆ ಗೊತ್ತಾ?

    ಸಾಮಾನ್ಯವಾಗಿ ಹುಡುಗರಿಗೆ ತಮ್ಮ ಗರ್ಲ್‍ಫ್ರೆಂಡ್ ಬರ್ತ್‍ಡೇ ವೇಳೆ ಯಾವ ರೀತಿಯ ಉಡುಗೊರೆಗಳನ್ನು ನೀಡಬೇಕು ಎಂದು ತಿಳಿಯದೇ ಗೊಂದಲದಲ್ಲಿರುತ್ತಾರೆ. ಆದರೆ ಪ್ರತಿಯೋರ್ವ ಮಹಿಳೆಯರಿಗೆ ಆಭರಣಕ್ಕಿಂತ ಪ್ರಿಯವಾದದ್ದು ಮತ್ತೊಂದಿಲ್ಲ. ಚಿಕ್ಕ ಆಭರಣಗಳು ಸಹ ಮಹಿಳೆಯರಿಗೆ ಸಖತ್ ಖುಷಿ ನೀಡುತ್ತದೆ. ನೀವು ನಿಮ್ಮ ಗರ್ಲ್‍ಫ್ರೆಂಡ್‍ಗೆ ವಿಶೇಷವಾದ ಉಡುಗೊರೆ ನೀಡಲು ಬಯಸುತ್ತಿದ್ದರೆ, ಚೀಪ್ ಆ್ಯಂಡ್ ಬೆಸ್ಟ್ ರೇಟ್‍ನಲ್ಲಿ ಸಿಗುವ ಪುಟ್ಟ-ಪುಟ್ಟ ಆಭರಣಗಳನ್ನು ಗಿಫ್ಟ್ ಆಗಿ ನೀಡಬಹುದು.

    ಇಯರಿಂಗ್ಸ್ ಸೆಟ್
    ಈ ಇಯರಿಂಗ್ ಸೆಟ್‍ನಲ್ಲಿ 6 ರೀತಿಯ ಸುಂದರವಾದ ಇಯರಿಂಗ್ಸ್‍ಗಳಿದ್ದು, ಇದನ್ನು ನಿಮ್ಮ ಗೆಳತಿ ದಿನನಿತ್ಯ ಬಳಸಬಹುದಾಗಿದೆ. ಅಲ್ಲದೇ ಡೈಮಂಡ್ ಸ್ಟಡ್‍ಗಳು ಮತ್ತು ಪರ್ಲ್ ಸ್ಟಡ್, ರೌಂಡ್ ಶೇಪ್ ಇಯರಿಂಗ್ ಸೇರಿದಂತೆ ಹಲವಾರು ಆಕಾರಗಳಲ್ಲಿ ಇಯರಿಂಗ್ಸ್‍ಗಳಿದ್ದು, ಇವುಗಳನ್ನು ನಿಮ್ಮ ಗೆಳತಿ ಆಫೀಸ್ ವೇರ್ ಮತ್ತು ಡೇಟ್ ನೈಟ್‍ಗೆ ತೆರಳುವ ವೇಳೆ ಕೂಡ ಧರಿಸಬಹುದಾಗಿದೆ.

    Jewelry

    ಟ್ರೆಡಿಷನಲ್ ಇಯರಿಂಗ್
    ಮಹಿಳೆಯರ ಇಯರ್ ಕಲೆಕ್ಷನ್‍ನಲ್ಲಿ ಟ್ರೆಡಿಷನಲ್ ಇಯರ್ ಕೂಡ ಒಂದು. ಮದುವೆ ಸಮಾರಂಭಗಳಲ್ಲಂತೂ ಮಹಿಳೆಯರಿಗೆ ಟ್ರೆಡಿಷನಲ್ ಇಯರಿಂಗ್ಸ್ ಬಹಳ ಮುಖ್ಯ. ಸದ್ಯ ಕೆಳಗೆ ನೀಡಲಾಗಿರುವ ಈ ಚಿನ್ನದ ಇಯರಿಂಗ್ ಸೀರೆ ಹಾಗೂ ಲೆಹೆಂಗಾದ ಜೊತೆ ಧರಿಸುವುದರಿಂದ ಇದು ನಿಮ್ಮ ಗೆಳತಿಯ ಅಂದವನ್ನು ಮತ್ತಷ್ಟು ಹೆಚ್ಚಿಸುತ್ತದೆ.

    Jewelry

    ಜ್ಯುವೆಲರಿ ಕೊಂಬೋ
    ಈ ಜ್ಯುವೆಲರಿ ಕೊಂಬೋದಲ್ಲಿ ಇಯರಿಂಗ್, ಮ್ಯಾಚಿಂಗ್ ನೆಕ್ಲೇಸ್ ಮತ್ತು ಬ್ರೇಸ್ಲೆಟ್‍ಗಳನ್ನು ನೀಡಲಾಗಿರುತ್ತದೆ. ಈ ಸೆಟ್ ಶೈನಿಂಗ್ ನೀಡುವುದರ ಜೊತೆಗೆ ನಿಮ್ಮ ಗೆಳತಿಗೆ ಕಂಪ್ಲೀಟ್ ಲುಕ್ ನೀಡುತ್ತದೆ. ಇದನ್ನು ಕೋಬಾಲ್ಟ್ ನೀಲಿ ಕಲ್ಲು ಮತ್ತು ಸಣ್ಣ ವಜ್ರಗಳಿಂದ ತಯಾರಿಸಲಾಗಿದೆ. ಈ ಜ್ಯುವೆಲರಿ ಸೆಟ್ ಟ್ರೆಡಿಷನ್ ಮತ್ತು ವೆಸ್ಟ್ರನ್ ಡ್ರೆಸ್ ಎರಡಕ್ಕೂ ಸೂಟ್ ಆಗುತ್ತದೆ.

    Jewelry

    ಸಾಲಿಟೇರ್ ರಿಂಗ್
    ಏಕ ವಜ್ರದ ಉಂಗುರವನ್ನು ಸಾಲಿಟೇರ್ ರಿಂಗ್ ಎಂದು ಕರೆಯಲಾಗುತ್ತದೆ. ಇದು ನಿಶ್ಚಿತಾರ್ಥದ ರಿಂಗ್ ಎಂದೇ ಫೇಮಸ್ ಆಗಿದೆ. ಇದರಲ್ಲಿ ಸಾಕಷ್ಟು ಬೆಸ್ಟ್ ಡಿಸೈನ್‍ಗಳಿದೆ. ನಿಮ್ಮ ಗರ್ಲ್ ಫ್ರೆಂಡ್ ಅಥವಾ ಪತ್ನಿ ವಜ್ರದ ಉಂಗುರಗಳಲ್ಲಿ ಕ್ಲಾಸಿಕ್ ಅಥವಾ ದೊಡ್ಡ ಸಾಲಿಟೇರ್ ಡೈಮಂಡ್ ರಿಂಗ್‍ಗಳನ್ನು ಇಷ್ಟಪಟ್ಟರೆ ಈ ಉಂಗುರಗಳನ್ನು ಗಿಫ್ಟ್ ಆಗಿ ನೀಡಬಹುದಾಗಿದೆ.

    Jewelry

  • ಚಿನ್ನಾಭರಣ ಕಳವು ಮಾಡಿರುವುದಾಗಿ ಮಗಳ ವಿರುದ್ಧವೇ ದೂರು ಕೊಟ್ಟ ತಾಯಿ

    ಚಿನ್ನಾಭರಣ ಕಳವು ಮಾಡಿರುವುದಾಗಿ ಮಗಳ ವಿರುದ್ಧವೇ ದೂರು ಕೊಟ್ಟ ತಾಯಿ

    ಬೆಂಗಳೂರು: ತಾಯಿ ಮನೆಯಲ್ಲಿಯೇ ಕೋಟ್ಯಂತರ ಮೌಲ್ಯದ ಚಿನ್ನಾಭರಣವನ್ನು ಮಗಳು ಕಳವು ಮಾಡಿರುವ ವಿಚಿತ್ರ ಘಟನೆಯೊಂದು ಜೆಪಿ ನಗರದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

    ಬೆಂಗಳೂರಿನ ಜೆಪಿ ನಗರ ಪೊಲೀಸ್ ಠಾಣೆಯಲ್ಲಿ ತಾಯಿ ವಿಜಯಲಕ್ಷ್ಮಿ ನನ್ನ ಮಗಳು ತೇಜವಂತಿ ನಾಲ್ಕು ಕೋಟಿ ಮೌಲ್ಯದ ಏಳೂವರೆ ಕೆಜಿ ವಜ್ರ ಹಾಗೂ ಚಿನ್ನಾಭರಣ ವಂಚಿಸಿದ್ದಾಳೆ ಎಂದು ದೂರು ನೀಡಿದ್ದಾರೆ. ಈ ಹಿನ್ನೆಲೆ ತೇಜವಂತಿ ಮೇಲೆ ಪೊಲೀಸರು ಎಫ್ ಐಆರ್ ದಾಖಲಿಸಿದ್ದಾರೆ. ಇದನ್ನೂ ಓದಿ: ಸಿಎಂ ರಾಜೀನಾಮೆ ನೀಡ್ಬೇಕು, ಕಂಗನಾ ಪದ್ಮಶ್ರೀ ವಾಪಸ್ ಪಡೀಬೇಕು: ಎಸ್.ಮನೋಹರ್

    ಕೆಲ ದಿನಗಳ ಹಿಂದೆ ವಿಜಯಲಕ್ಷ್ಮಿ ಅವರು ಆಪರೇಶನ್ ಗೆ ಒಳಗಾಗಿದ್ದು, ಈ ವೇಳೆ ಮನೆಗೆ ಬಂದ ತೇಜವಂತಿ ತಾಯಿಗೆ ತಿಳಿಯದಂತೆ ಚಿನ್ನಾಭರಣ ತೆಗೆದುಕೊಂಡು ಹೋಗಿದ್ದಾಳೆ. ನಂತರ ಚಿನ್ನಾಭರಣವನ್ನು ಲಾಕರ್ ನಲ್ಲಿ ಇಟ್ಟಿರುವುದಾಗಿ ನಂಬಿಸಿದ್ದಾಳೆ. ಆದರೆ ಈಗ ತೇಜವಂತಿ ಚಿನ್ನಾಭರಣಗಳ ಜೊತೆಗೆ ನಾಪತ್ತೆಯಾಗಿದ್ದು, ಈ ಸಂಬಂಧ ಜೆಪಿ ನಗರ ಪೊಲೀಸ್ ಠಾಣೆಗೆ ವಿಜಯಲಕ್ಷ್ಮಿ ದೂರು ನೀಡಿದ್ದಾರೆ.

    ಈ ಪರಿಣಾಮ ಜೆಪಿ ನಗರ ಠಾಣೆಯಲ್ಲಿ ಐಪಿಸಿ ಸೆಕ್ಷನ್ 420 ಅಡಿ ಎಫ್ ಐ ಆರ್ ದಾಖಲಿಸಿಕೊಳ್ಳಲಾಗಿದೆ.

  • ಗ್ರಾಹಕನ ಸೋಗಿನಲ್ಲಿ ಆಭರಣ ಕಳ್ಳತನ- 4ಲಕ್ಷ ಮೌಲ್ಯದ ಸ್ವತ್ತುಗಳು ವಶ

    ಗ್ರಾಹಕನ ಸೋಗಿನಲ್ಲಿ ಆಭರಣ ಕಳ್ಳತನ- 4ಲಕ್ಷ ಮೌಲ್ಯದ ಸ್ವತ್ತುಗಳು ವಶ

    ಕಾರವಾರ : ಚಿನ್ನದಂಗಡಿಯಲ್ಲಿ ಗ್ರಾಹಕನ ಸೋಗಿನಲ್ಲಿ ಆಭರಣ ಕಳ್ಳತನ ಮಾಡಿದ್ದ ಆರೋಪಿಗಳನ್ನು ಬಂಧಿಸಿದ ಪೊಲೀಸರು 4ಲಕ್ಷ ಮೌಲ್ಯದ ಸ್ವತ್ತುಗಳು ವಶಕ್ಕೆ ಪಡೆಯಲಾಗಿದೆ.

    ಸೆಪ್ಟೆಂಬರ್ 17 ರಂದು ಶಿರಸಿ ನಗರದ ರತ್ನದೀಪ ಜ್ಯುವೆಲರಿ ಶಾಪ್ ನಲ್ಲಿ ಗ್ರಾಹಕನ ಸೋಗಿನಲ್ಲಿ ಬಂದು ಕಳ್ಳತನ ಮಾಡಿದ್ದ ಪ್ರಕರಣವನ್ನು ಶಿರಸಿ ಪೊಲೀಸರು ಬೇಧಿಸುವಲ್ಲಿ ಯಶಸ್ವಿಯಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಬಿಜೆಪಿಯನ್ನು ತುಕ್ಡೆ ತುಕ್ಡೆ ಮಾಡುತ್ತೇನೆ: ಕನ್ಹಯ್ಯ ಕುಮಾರ್

    ಬೆಳವಾಗಿಯ ನಾವೇಕರ ಗಲ್ಲಿಯ ನಿಲೇಶ್ ರೇವಣಕರ (32) ಹಾಗೂ ಕಾರವಾರದ ಹಬ್ಬುವಾಡದ ರಾಘವೇಂದ್ರ ದೈವಜ್ಞ (35) ಬಂಧಿತ ಆರೋಪಿಗಳಾಗಿದ್ದಾರೆ. ಆರೋಪಿ ನಿಲೇಶ್ ರತ್ನದೀಪ ಜ್ಯುವೆಲರ್ಸನಲ್ಲಿ ಗ್ರಾಹಕರ ಸೋಗಿನಲ್ಲಿ ಬಂದು, ಚಿನ್ನದ ಸರವನ್ನು ಕಸಿದುಕೊಂಡು ಕಾರಿನಲ್ಲಿ ಪರಾರಿಯಾಗಿದ್ದ. ಇದು ಅಂಗಡಿಯ ಸಿಸಿಟಿಯಲ್ಲಿ ದಾಖಲಾಗಿತ್ತು. ನಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದರು.

    ಬಂಧಿತ ಆರೋಪಿಗಳಿಂದ ಪೊಲೀಸರು 22.28 ಗ್ರಾಂ ಬಂಗಾರದ ತೂಕದ ಚಿನ್ನದ ಎರಡು ಸರ ಹಾಗೂ ಮಾರುತಿ ಸ್ವಿಪ್ಟ್ ಕಾರು ಸೇರಿ ಒಟ್ಟೂ 4ಲಕ್ಷ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಕುರಿತು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹಿರಿಯ ಅಧಿಕಾರಿಗಳ ಮಾರ್ಗದರ್ಶನಲ್ಲಿ ಪಿಎಸ್‍ಐ ರಾಜಕುಮಾರ, ಪಿಎಸ್‍ಐ ಮೋಹಿನಿ ಶೆಟ್ಟಿ ಹಾಗೂ ಸಿಬ್ಬಂದಿಗಳಾದ ಚೇತನ್ ಕುಮಾರ್, ಕೊಟೇಶ ಮುಂತಾದವರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದಾರೆ.

  • ಮೇಕೆಗೆ ನೀರು ಕುಡಿಸಲು ತೆರಳುತ್ತಿದ್ದ ವೃದ್ದೆಯ ಕೊಲೆಗೈದು ಹೂತು ಹಾಕಿದ್ರು

    ಮೇಕೆಗೆ ನೀರು ಕುಡಿಸಲು ತೆರಳುತ್ತಿದ್ದ ವೃದ್ದೆಯ ಕೊಲೆಗೈದು ಹೂತು ಹಾಕಿದ್ರು

    ಹಾಸನ: ಮೇಕೆಗೆ ನೀರು ಕುಡಿಸಲು ತೆರಳುತ್ತಿದ್ದ ವೃದ್ದೆಯನ್ನು ಕೊಲೆ ಮಾಡಿ ನಂತರ ದೇಹವನ್ನು ಮಣ್ಣಿನಲ್ಲಿ ಹೂತುಹಾಕಿರುವ ಘಟನೆ ಹಾಸನ ಜಿಲ್ಲೆ ಬೇಲೂರು ತಾಲ್ಲೂಕಿನ ಹಾಲ್ತೊರೆ ಗ್ರಾಮದಲ್ಲಿ ನಡೆದಿದೆ.

    ಗ್ರಾಮದ ಲಕ್ಷ್ಮಮ್ಮ (50) ಕೊಲೆಯಾದ ಮಹಿಳೆ. ನಿನ್ನೆ ಮನೆಯಿಂದ ಜಮೀನಿಗೆ ತೆರಳಿದ್ದ ಮಹಿಳೆ ಮನೆಗೆ ವಾಪಸ್ ಬಂದಿರಲಿಲ್ಲ. ಇಂದು ಗ್ರಾಮಸ್ಥರೆಲ್ಲಾ ಸೇರಿ ಹುಡುಕಾಟ ನಡೆಸುತ್ತಿದ್ದ ವೇಳೆ ಕೊಲೆ ನಡೆದಿರುವುದು ಬೆಳಕಿಗೆ ಬಂದಿದೆ. ಒಡವೆಗಾಗಿ ಕೊಲೆ ಮಾಡಿರಬಹುದು ಎಂದು ಶಂಕಿಸಲಾಗಿದೆ.

    ಹಾಲ್ತೊರೆ ಗ್ರಾಮದ ರಂಗೇಗೌಡ ಎಂಬವರ ಪತ್ನಿ ಲಕ್ಷ್ಮಮ್ಮ. ದಂಪತಿಗೆ ಇಬ್ಬರು ಮಕ್ಕಳಿದ್ದು, ಮಗಳನ್ನು ಮದುವೆ ಮಾಡಿಕೊಡಲಾಗಿತ್ತು. ಮಗ ಆಂಧ್ರಪ್ರದೇಶದಲ್ಲಿ ಬೇಕರಿ ಇಟ್ಟುಕೊಂಡಿದ್ದು, ತಾಯಿಗೆ ಸಾಕಷ್ಟು ಚಿನ್ನದ ಒಡವೆಗಳನ್ನು ಮಾಡಿಸಿಕೊಟ್ಟಿದ್ದ. ಲಕ್ಷ್ಮಮ್ಮ ಪ್ರತಿನಿತ್ಯ ಪತಿಯೊಂದಿಗೆ ಮೇಕೆ ಮೇಯಿಸಲು ಜಮೀನಿನ ಬಳಿ ತೆರಳುತ್ತಿದ್ದರು. ನಿನ್ನೆ ಸಂಬಂಧಿಕರ ಮನೆಯಲ್ಲಿ ಆರತಿ ಕಾರ್ಯಕ್ರಮ ಇದ್ದಿದ್ದರಿಂದ ರಂಗೇಗೌಡ ಒಬ್ಬರೇ ಮೇಕೆಯನ್ನು ಜಮೀನಿನ ಬಳಿ ಕಟ್ಟಿ ಬಂದಿದ್ದರು. ಮಗ ಕೊಡಿಸಿದ್ದ ಒಡವೆಗಳನ್ನು ಹಾಕಿಕೊಂಡು ಲಕ್ಷ್ಮಮ್ಮ ಕಾರ್ಯಕ್ರಮಕ್ಕೆ ತೆರಳಿದ್ದರು. ಅಲ್ಲಿಂದ ಬಂದವರೇ ಮೇಕೆಗೆ ನೀರು ಕುಡಿಸಲು ಜಮೀನಿಗೆ ತೆರಳಿದ್ದಾರೆ.

    ಮಧ್ಯಾಹ್ನ ಲಕ್ಷ್ಮಮ್ಮನ ಸಹೋದರಿ ತಮ್ಮ ಜಮೀನಿನ ಬಳಿ ಹೋದ ವೇಳೆ ಮೇಕೆ ಮಾತ್ರ ಕಾಣಿಸಿದೆ. ಸುತ್ತಮುತ್ತ ಹುಡುಕಾಟ ನಡೆಸಿ, ಲಕ್ಷ್ಮಮ್ಮ ಸಿಗದಿದ್ದಾಗ ರಂಗೇಗೌಡರಿಗೆ ಫೋನ್ ಮಾಡಿ ತಿಳಿಸಿದ್ದಾರೆ. ಜಮೀನಿನ ಬಳಿ ಬಂದ ರಂಗೇಗೌಡ ಎಲ್ಲೋ ಹೋಗಿರಬಹುದು ಬರುತ್ತಾರೆ ಎಂದು ಕಾದಿದ್ದಾರೆ. ರಾತ್ರಿಯಾದರೂ ಮನೆಗೆ ಮರಳದ ಕಾರಣ ಗ್ರಾಮಸ್ಥರೆಲ್ಲಾ ಸೇರಿ ಜಮೀನಿನ ಬಳಿ ಹುಡುಕಾಟ ನಡೆಸಿದರೂ ಲಕ್ಷ್ಮಮ್ಮ ಪತ್ತೆಯಾಗಿಲ್ಲ. ಇಂದು ಬೆಳಿಗ್ಗೆ ಪುನಃ ಹುಡುಕಾಟ ನಡೆಸುವ ವೇಳೆ ಮಾವಿನ ತೋಪಿನಲ್ಲಿ ಕೊಲೆ ಮಾಡಿ ಹೂತುಹಾಕಿರುವುದು ಪತ್ತೆಯಾಗಿದೆ.

    ರಂಗೇಗೌಡರ ಕುಟುಂಬಸ್ಥರು ತುಂಬಾ ಒಳ್ಳೆಯವರು. ಎಲ್ಲರೊಂದಿಗೂ ನಗುನಗುತ್ತಲೇ ಮಾತನಾಡುತ್ತಿದ್ದರು. ಯಾರೊಂದಿಗೂ ಜಗಳವಾಡಿದವರಲ್ಲ. ಪ್ರತಿದಿನ ದಂಪತಿ ಒಟ್ಟಿಗೆ ಜಮೀನ ಬಳಿ ತೆರಳುತ್ತಿದ್ದರು. ನಿನ್ನೆ ಮೈಮೇಲೆ ಚಿನ್ನದ ಒಡವೆಗಳನ್ನು ಹಾಕಿಕೊಂಡೆ ಮೇಕೆಗೆ ನೀರು ಕುಡಿಸಲು ಹೋಗುತ್ತಿದ್ದ ವೇಳೆ ಯಾರೋ ದುಷ್ಕರ್ಮಿಗಳು ನಾಲೆ ಪಕ್ಕದಲ್ಲಿ ಪುಟ್ಟಮ್ಮರನ್ನು ಕೊಲೆ ಮಾಡಿ ನಂತರ ಚಿಕ್ಕ ಗುಂಡಿ ತೆಗೆದು ಹೂತಿದ್ದಾರೆ. ಒಡವೆಗಳಿಗಾಗಿಯೇ ಕೊಲೆ ಮಾಡಿರಬಹುದು ಎಂದು ಗ್ರಾಮಸ್ಥರು ಅನುಮಾನ ವ್ಯಕ್ತಪಡಿಸಿದ್ದಾರೆ.

    ಘಟನಾ ಸ್ಥಳಕ್ಕೆ ಶ್ವಾನದಳ ಹಾಗೂ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬೇಲೂರು ತಹಸೀಲ್ದಾರ್ ನಟೇಶ್ ಹಾಗೂ ಉಪವಿಭಾಗಾಧಿಕಾರಿ ಸಮ್ಮುಖದಲ್ಲಿ ಶವ ಹೊರತೆಗೆದು ಮರಣೋತ್ತರ ಪರೀಕ್ಷೆಗಾಗಿ ಹಾಸನ ಜಿಲ್ಲಾಸ್ಪತ್ರೆಗೆ ಕಳುಹಿಸಲಾಗಿದೆ. ಹಳೇಬೀಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಆರೋಪಿಗಳಿಗೆ ಪೊಲೀಸರು ಬಲೆ ಬೀಸಿದ್ದಾರೆ.

  • ಮದುವೆ ಸಮಯದಲ್ಲಿ ವಧುವಿನಂತೆ ಕಂಗೊಳಿಸಲು ಧರಿಸಬೇಕಾದ ಮುಖ್ಯ ಆಭರಣಗಳು

    ಮದುವೆ ಸಮಯದಲ್ಲಿ ವಧುವಿನಂತೆ ಕಂಗೊಳಿಸಲು ಧರಿಸಬೇಕಾದ ಮುಖ್ಯ ಆಭರಣಗಳು

    ಸಾಮಾನ್ಯವಾಗಿ ಸಾಂಪ್ರಾದಾಯಿಕ ಆಭರಣ ತೊಡದೇ ಮದುಮಗಳ ನೋಟವು ಪರಿಪೂರ್ಣಗೊಳ್ಳವುದೇ ಇಲ್ಲ. ಹಿಂದಿನ ಕಾಲದಲ್ಲಿ ಮದುವೆಯ ಸಮಯದಲ್ಲಿ ವಧು ಸಿಂಗಾರಗೊಳಿಸಲು ಮುಡಿಯಿಂದ ಪಾದದವರೆಗೂ 16 ಆಭರಣಗಳನ್ನು ಹಾಕಲಾಗುತ್ತಿತ್ತು. ಆದರೆ ಇಂದಿನ ಕಾಲದ ವಧು 16 ಆಭರಣಗಳನ್ನು ಧರಿಸಲೇ ಬೇಕೆಂಬ ಅಗತ್ಯವಿಲ್ಲ. ಹೀಗಾಗಿ ಅವರ ಪೂರ್ವಜರು ನೀಡಿದ ಅಥವಾ ತಮ್ಮ ನೆಚ್ಚಿನ ಅಂಗಡಿಗಳಲ್ಲಿ ಆಭರಣ ಖರೀದಿಸಿ ಕಡಿಮೆ ಆಭರಣವನ್ನು ತೊಟ್ಟು ವಧುವಿನಂತೆ ಮಿಂಚುತ್ತಾರೆ.

    ಆದರೆ ಎಷ್ಟೋ ಮಹಿಳೆಯರಿಗೆ ಮದುವೆಯ ಸಮಯದಲ್ಲಿ ವಧುವಿನಂತೆ ಕಾಣಿಸಿಕೊಳ್ಳಲು ಮುಖ್ಯವಾಗಿ ಧರಿಸಬೇಕಾದ ಆಭರಣಗಳು ಯಾವುದೆಂಬುವುದರ ಬಗ್ಗೆ ತಿಳಿದಿರುವುದಿಲ್ಲ. ಅಂತಹವರಿಗೆ ಕೆಲವೊಂದು ಮಾಹಿತಿ ಈ ಕೆಳಗಿನಂತಿದೆ.

    ವಧುವಿನ ಸೆಟ್: ವಧುವಿನ ಸೆಟ್‍ನಲ್ಲಿ ನೆಕ್ಲೆಸ್ ಹಾಗೂ ಜುಮ್ಕಿ ಸೇರಿದಂತೆ ಕೆಲವು ಬೇಸಿಕ್ ಆಭರಣಗಳು ಇರುತ್ತದೆ. ಮದುವೆ ಸಮಯದಲ್ಲಿ ವಧುವಿಗೆ ಹೆಚ್ಚಾಗಿ ಹಲವಾರು ಶೈಲಿಯ ಹಾರದ ಸರಗಳನ್ನು ಹಾಕುತ್ತಾರೆ.

    ವಧುವಿನ ಸೆಟ್

    ಬೈತಲೆ ಬೊಟ್ಟು: ವಧುವಿಗೆ ತೊಡಿಸುವ ಆಭರಣಗಳಲ್ಲಿ ಬೈತಲೆ ಬೊಟ್ಟು ಕೂಡ ಒಂದು. ಕೂದಲಿನ ಮಧ್ಯೆ ಕ್ರಾಫ್ ತೆಗೆದು ಹಣೆಯ ಮಧ್ಯೆ ಇದನ್ನು ಸಿಗಿಸಲಾಗುತ್ತದೆ. ಹಿಂದೂ ಪುರಾಣದಲ್ಲಿ ಇದನ್ನು ಮೂರನೇ ಕಣ್ಣು ಅಥವಾ ಆತ್ಮದ ಶಕ್ತಿ ಎಂದು ಪ್ರತಿನಿಧಿಸಲಾಗುತ್ತದೆ. ಇದು ಮಹಿಳೆ ಹಾಗೂ ಪುರುಷ ಮಧ್ಯೆ ಇರುವ ಆಧ್ಯಾತ್ಮಿಕ, ದೈಹಿಕ ಮತ್ತು ಭಾವನಾತ್ಮಕ ಮಟ್ಟದ ಪವಿತ್ರ ಒಕ್ಕೂಟವನ್ನು ಸೂಚಿಸುವ ಸಂರಕ್ಷಣೆಯ ಕೇಂದ್ರವಾಗಿದೆ.

    ಬೈತಲೆ ಬೊಟ್ಟು

    ಹಾಥ್ ಪೂಲ್: ಯಾವುದೇ ಆಭರಣಗಳನ್ನು ಧರಿಸಿದರು ವಧುವಿನ ಕೈ ಮತ್ತು ಬೆರಳುಗಳ ಮೇಲೆ ಹ್ಯಾಥ್‍ಪೂಲ್‍ನಂತೆ ಸುಂದರವಾಗಿ ಯಾವುದು ಕಾಣಿಸಲು ಸಾಧ್ಯವಿಲ್ಲ. ಹ್ಯಾಥ್‍ಫೂಲ್ ಎಂದರೆ ಫ್ಲವರ್ ಆಫ್ ದಿ ಆ್ಯಂಡ್ (ಕೈ ಮೇಲೆ ಹೂವು) ಎಂದರ್ಥ. ಹಸ್ತದ ಹಿಂಭಾಗ ಹೂವಿನಂತೆ ಆಭರಣವನ್ನು ವಿನ್ಯಾಸಗೊಳಿಸಲಾಗಿದ್ದು, ಮುತ್ತು, ರತ್ನ, ಕಮಲ, ಸರಗಳಿಂದ ತಯಾರಿಸಲಾಗಿದೆ. ಈ ಆಭರಣವು ವಧುವುಗೆ ಗ್ಲಾಮರ್ ಲುಕ್ ನೀಡುತ್ತದೆ.

    ಹಾಥ್ ಪೂಲ್

    ಮೂಗು ಬೊಟ್ಟು (ನೋಸ್ ರಿಂಗ್): ವೃತ್ತಾಕಾರದ ಮುಗುತಿ ವಧುವಿನ ಅಂದವನ್ನು ಮತ್ತಷ್ಟು ಹೆಚ್ಚಿಸುತ್ತದೆ. ಈ ರೀತಿಯ ಮೂಗುತಿಯನ್ನು ಪಾರ್ವತಿ ದೇವರು ಮದುವೆಯ ಸಮಯದಲ್ಲಿ ಧರಿಸಿದ್ದರು ಎಂದು ಪುರಾಣದಲ್ಲಿ ತಿಳಿಸಲಾಗಿದೆ. ಈ ರೀತಿಯ ಮುಗುತಿ ಭಾರವಿರುವುದರಿಂದ ನಿಮಗೆ ಧರಿಸಲು ಆನ್‍ಕಂಫರ್ಟ್‍ಟೇಬಲ್ ಫೀಲ್ ಆದಲ್ಲಿ ಧರಿಸುವ ಅಗತ್ಯವಿಲ್ಲ. ಇದೀಗ ಕಡಿಮೆ ತೂಕದ ಮುಗುತಿ ಹಾಗೂ ಪ್ರೆಸಿಂಗ್ ಮೂಗು ಬೊಟ್ಟು ದೊರೆಯುತ್ತದೆ.

    ಮೂಗು ಬೊಟ್ಟು

    ಬಳೆಗಳು: ವಧು ಬಳೆಗಳನ್ನು ತೊಡದೇ ಮದುವೆಯ ಸಂಪೂರ್ಣಗೊಳ್ಳುವುದಿಲ್ಲ. ಬಳೆಗಳು ಭಾರತೀಯ ಸಂಸ್ಕøತಿಯ ಒಂದು ಭಾಗವಾಗಿದೆ. ಇಂದಿನ ಮಾಡ್ರೆನ್ ವಧುಗಳು ಕೆಂಪು ಮತ್ತು ಹಸಿರಿನ ಸಾಂಪ್ರದಾಯಿಕ ಬಳೆಯನ್ನೇ ತೊಡಬೇಕೆಂದಿಲ್ಲ. ಮುತ್ತಿನ, ಚಿನ್ನದ ಮತ್ತು ವಜ್ರದ ಬಳೆಗಳನ್ನು ತೊಡುತ್ತಾರೆ. ಅಲ್ಲದೆ ತಮ್ಮ ಉಡುಪಿಗೆ ಹೊಂದಿಕೊಳ್ಳುವಂತಹ ಬಳೆಗಳನ್ನು ಹಾಕಿಕೊಂಡು ವಧು ಮದುವೆಯ ಸಮಯದಲ್ಲಿ ಕಂಗೋಳಿಸುತ್ತಾರೆ. ಬಳೆ ನಿಮ್ಮ ಕೈಗಳನ್ನು ಪೂರ್ಣಗೊಳಿಸುವುದಲ್ಲದೇ ಸುಂದರವಾಗಿ ಕಾಣುವಂತೆ ಮಾಡುತ್ತದೆ.

    ಬಳೆಗಳು

    ಗೆಜ್ಜೆ : ಸರಳವಾದಂತಹ ಗೆಜ್ಜೆಯನ್ನು ಧರಿಸಿದರು ವಧುವಿನ ಕಾಲುಗಳು ಸುಂದರವಾಗಿ ಕಾಣಿಸುತ್ತದೆ. ಬೆಳ್ಳಿ ಲೋಹ ಮತ್ತು ಚಿಕ್ಕ ಮಣಿಯಂತಿರುವ ಗಂಟೆಗಳನ್ನು ಅಳವಡಿಸುವ ಮೂಲಕ ಗೆಜ್ಜೆಯನ್ನು ತಯಾರಿಸಲಾಗುತ್ತದೆ. ವಧು ನಡಿಯುವಾಗ ಗೆಜ್ಜೆ ಸದ್ದು ಮಾಡುತ್ತದೆ. ಅಲ್ಲದೆ ಗೆಜ್ಜೆ ಧರಿಸಿ ವಧು ಹಸೆಮಣೆಯತ್ತ ಬರುವಾಗ ಸಾಕ್ಷತ್ ಲಕ್ಷ್ಮಿ ದೇವಿ ಪ್ರವೇಶಿಸಿದಂತೆ ತೋರುತ್ತದೆ.

    ಗೆಜ್ಜೆ