Tag: jewellery

  • ಪಬ್‍ಜಿಯಲ್ಲಿ ಮಗ್ನ – ನೀರು ಎಂದು ರಾಸಾಯನಿಕ ಕುಡಿದು ಯುವಕ ಸಾವು

    ಪಬ್‍ಜಿಯಲ್ಲಿ ಮಗ್ನ – ನೀರು ಎಂದು ರಾಸಾಯನಿಕ ಕುಡಿದು ಯುವಕ ಸಾವು

    ಲಕ್ನೋ: ಮೊಬೈಲಿನಲ್ಲಿ ಪಬ್‍ಜಿ ಗೇಮ್ ಆಡುವುದರಲ್ಲಿ ಮಗ್ನನಾಗಿದ್ದ ಯುವಕನೊಬ್ಬ ನೀರು ಎಂದು ಭಾವಿಸಿ ರಾಸಾಯನಿಕವನ್ನು ಕುಡಿದು ಸಾವನ್ನಪ್ಪಿರುವ ಆಘಾತಕಾರಿ ಘಟನೆ ನಡೆದಿದೆ.

    ಉತ್ತರ ಪ್ರದೇಶದ ಆಗ್ರಾದ ಕಂಟೋನ್ಮೆಂಟ್ ರೈಲು ನಿಲ್ದಾಣದ ಬಳಿ ಘಟನೆ ಸಂಭವಿಸಿದ್ದು, ಸಾವನ್ನಪ್ಪಿರುವ ಯುವಕನನ್ನು 22 ವರ್ಷದ ಸೌರಭ್ ಯಾದವ್ ಎಂದು ಗುರುತಿಸಲಾಗಿದೆ. ರೈಲಿನಲ್ಲಿ ಪ್ರಯಾಣಿಸುವಾಗ ನೀರು ಎಂದುಕೊಂಡು ಆಭರಣಗಳನ್ನು ಪಾಲಿಶ್ ಮಾಡುವ ರಾಸಾಯನಿಕವನ್ನು ಕುಡಿದು ಮೃತಪಟ್ಟಿದ್ದಾನೆ.

    ಈ ಕುರಿತು ಮಾಹಿತಿ ನೀಡಿದ ಆಗ್ರಾ ಕಂಟೋನ್ಮೆಂಟ್ ರೈಲು ನಿಲ್ದಾಣದ ಇನ್ಚಾರ್ಜ್ ವಿಜಯ್ ಸಿಂಗ್, ಆಭರಣಗಳ ಡೀಲರ್ ಆಗಿರುವ ತನ್ನ ಸ್ನೇಹಿತ ಸಂತೋಷ್ ಶರ್ಮಾ ಅವರೊಂದಿಗೆ ಯುವಕ ಸೌರಭ್ ಪ್ರಯಾಣಿಸುತ್ತಿದ್ದ. ಶರ್ಮಾ ಆಭರಣಗಳನ್ನು ಪಾಲಿಶ್ ಮಾಡುವ ರಾಸಾಯನಿಕವನ್ನು ತನ್ನ ಬ್ಯಾಗಿನಲ್ಲಿ ಇಟ್ಟುಕೊಂಡಿದ್ದರು. ಇವರಿಬ್ಬರೂ ಒಂದೇ ಬ್ಯಾಗನ್ನು ಹೊಂದಿದ್ದರು. ಸಂತೋಷ್ ಆಭರಣಗಳನ್ನು ಪಾಲಿಶ್ ಮಾಡುವ ವ್ಯಾಪಾರಕ್ಕಾಗಿ ಆಗ್ರಾಗೆ ತೆರಳುತ್ತಿದ್ದರು ಎಂದು ಮಾಹಿತಿ ನೀಡಿದ್ದಾರೆ.

    ವಿಚಾರಣೆ ವೇಳೆ ಸಂತೋಷ್ ಮಾಹಿತಿ ನೀಡಿ, ಪ್ರಯಾಣದ ವೇಳೆ ಸೌರಭ್ ಮೊಬೈಲಿನಲ್ಲಿ ಪಬ್‍ಜಿ ಗೇಮ್ ಆಡುವುದರಲ್ಲಿ ಬ್ಯುಸಿಯಾಗಿದ್ದ, ಈ ವೇಳೆ ಕುಡಿಯಲು ನೀರು ತೆಗೆದುಕೊಳ್ಳಲು ಹೋಗಿದ್ದಾನೆ. ಆದರೆ ತಿಳಿಯದೇ ರಾಸಾಯನಿಕದ ಬಾಟಲ್ ತೆಗೆದುಕೊಂಡಿದ್ದಾನೆ. ಬಾಟಲಿಯನ್ನು ಪರಿಶೀಲಿಸದೇ ನೀರು ಎಂದು ರಾಸಾಯನಿಕವನ್ನೇ ಕುಡಿದಿದ್ದಾನೆ ಎಂದು ಸಿಂಗ್ ತಿಳಿಸಿದ್ದಾರೆ.

    ಅಭರಣಗಳನ್ನು ಸ್ವಚ್ಛಗೊಳಿಸಲು ಹಾಗೂ ಪಾಲಿಶ್ ಮಾಡಲು ಬಳಸುವ ರಾಸಾಯನಿಕವನ್ನು ಸೌರಭ್ ಯಾದವ್ ಕುಡಿದಿದ್ದಾನೆ. ನಂತರ ಸೌರಭ್ ಆರೋಗ್ಯದಲ್ಲಿ ವ್ಯತ್ಯಾಸ ಉಂಟಾಗಿದ್ದು, ಮೊರೆನಾ(ಆಗ್ರಾ ಹಾಗೂ ಗ್ವಾಲಿಯರ್ ನಡುವಿನ ನಗರ) ಹತ್ತಿರದಲ್ಲಿ ಕುಸಿದು ಬಿದ್ದಿದ್ದಾನೆ. ರೈಲು ನಿಲ್ದಾಣವನ್ನು ತಲುಪುವಷ್ಟರಲ್ಲಿ ಸೌರಭ್ ಮೃತಪಟ್ಟಿದ್ದಾನೆ. ಪ್ರಕರಣದ ಕುರಿತು ಖಚಿತಪಡಿಸಿಕೊಳ್ಳಲು ಮರಣೋತ್ತರ ಪ್ರರೀಕ್ಷೆಗಾಗಿ ಕಾಯುತ್ತಿದ್ದೇವೆ ಎಂದು ಸಿಂಗ್ ವಿವರಿಸಿದ್ದಾರೆ.

  • ಕದ್ದಿದ್ದು ತಮಿಳುನಾಡಲ್ಲಿ, ಸರೆಂಡರ್ ಆಗಿದ್ದು ಬೆಂಗಳೂರಲ್ಲಿ..!

    ಕದ್ದಿದ್ದು ತಮಿಳುನಾಡಲ್ಲಿ, ಸರೆಂಡರ್ ಆಗಿದ್ದು ಬೆಂಗಳೂರಲ್ಲಿ..!

    ಬೆಂಗಳೂರು: ಕಳ್ಳನೊಬ್ಬ ತಮಿಳುನಾಡಿನಲ್ಲಿ 30 ಕೆಜಿ ಚಿನ್ನಾಭರಣ ಕದ್ದು ಬೆಂಗಳೂರಿನಲ್ಲಿ ಕೋರ್ಟಿಗೆ ಶರಣಾಗಿದ್ದಾನೆ.

    ಮುರುಗ ಕೋರ್ಟಿಗೆ ಶರಣಾದ ಖತರ್ನಾಕ್ ಕಳ್ಳ. ಆರೋಪಿ ಮುರುಗ ತಿರುಚ್ಚಿಯ ಲಲಿತಾ ಜ್ಯುವೆಲರ್ಸ್ ನಲ್ಲಿ ಕಳ್ಳತನ ಮಾಡಿ, ತಲೆಮರಿಸಿಕೊಂಡಿದ್ದ. ಇತನ ಬಂಧನಕ್ಕಾಗಿ ತಮಿಳುನಾಡು ಪೊಲೀಸರು ಹುಡುಕಾಟ ನಡೆಸಿದ್ದರು. ಆದರೆ ಶುಕ್ರವಾರ ಏಕಾಏಕಿ ನಗರದ ಮೆಯೋಹಾಲ್ ಕೋರ್ಟಿಗೆ ಬಂದು ಶರಣಾಗಿದ್ದಾನೆ.

    ಆರೋಪಿ ಮುರುಗ ಕಳ್ಳತನ ಪ್ರಕರಣದಲ್ಲಿ ಈ ಹಿಂದೆ ಬಾಣಸವಾಡಿ ಪೊಲೀಸರು ಬಂಧಿಸಿದ್ದರು. ಆಗ ಆತನ ತನ್ನ ಬಳಿ ಇದ್ದ 10 ಕೆಜಿ ಚಿನ್ನಾಭರಣವನ್ನು ಪೊಲೀಸರಿಗೆ ಒಪ್ಪಿಸಿದ್ದ. ಅಷ್ಟೇ ಅಲ್ಲದೆ ಮಡಿವಾಳ ಪೊಲೀಸರು ಈ ಹಿಂದೆ ಮುರಿಗನನ್ನ ಹಿಡಿದು 10 ಕೆಜಿ ಚಿನ್ನಾಭರಣವನ್ನ ವಶಕ್ಕೆ ಪಡೆದಿದ್ದರು.

    ಹಳೆಯ ಚಾಳಿಯನ್ನು ಮುಂದುವರಿಸಿದ್ದ ಮುರುಗ, ತನ್ನ ಟೀಂ ಜೊತೆಗೆ ಸೇರಿ ತಿರುಚ್ಚಿ ನಗರದ ಲಲಿತಾ ಜ್ಯುವೆಲರ್ಸ್ ನಲ್ಲಿ ಅಕ್ಟೋಬರ್ 2ರಂದು ರಾತ್ರಿ ಚಿನ್ನಾಭರಣ ಎಗರಿಸಿದ್ದ. ಗೊಡೆಗಳನ್ನು ಕೊರೆದು ಅಂಗಡಿಯೊಳಗೆ ಪ್ರವೇಶಿಸಿದ್ದ ಮುರುಗ ಅಂಡ್ ಟೀಂ ಸುಮಾರು 30 ಕೆ.ಜಿ ತೂಕದ 13 ಕೋಟಿ ಮೌಲ್ಯದ 800ಕ್ಕೂ ಅಧಿಕ ಚಿನ್ನಾಭರಣಗಳನ್ನು ದೋಚಿ ಪರಾರಿಯಾಗಿತ್ತು.

    ಬಹುಮಹಡಿ ಕಟ್ಟಡವಾದ ಲಲಿತಾ ಜ್ಯವೆಲರ್ಸ್ ನಲ್ಲಿ ಎಲ್ಲಾ ಕಡೆಗಳಲ್ಲಿ ಸಿಸಿಟಿವಿಯನ್ನು ಅಳವಡಿಸಲಾಗಿದೆ. ಹೀಗಾಗಿ ಯಾರಿಗೂ ತಮ್ಮ ಗುರುತು ಪತ್ತೆಯಾಗದಿರಲಿ ಎಂಬ ಕಾರಣಕ್ಕೆ ಮುರುಗ ಹಾಗೂ ಆತನ ತಂಡವು ಮುಖಕ್ಕೆ ಮಾಸ್ಕ್ ಧರಿಸಿಕೊಂಡಿತ್ತು. ಇದರಿಂದಾಗಿ ಕಳ್ಳರ ಗುರುತು ಪತ್ತೆಯಾಗಿರಲಿಲ್ಲ. ಮುರುಗನ ಮೇಲೆ ಅನುಮಾನ ವ್ಯಕ್ತಪಡಿಸಿದ ಪೊಲಿಸರು ಆತನಿಗಾಗಿ ಬಲೆ ಬೀಸಿದ್ದರು.

    ಆರೋಪಿ ಮುರುಗ ಮಾರಕ ಖಾಯಿಲೆಯಿಂದ ಬಳಲುತ್ತಿದ್ದಾನೆ. ಹೀಗಾಗಿ ಪೊಲೀಸರ ಲಾಠಿ ಏಟಿಗೆ ಬೆದರಿ ಕೋರ್ಟ್ ಗೆ ಶರಣಾಗಿದ್ದಾನೆ ಎಂದು ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.

  • ಬುರ್ಖಾ ಧರಿಸಿ 72 ಗ್ರಾಂ ಚಿನ್ನದ ಸರ ಕಿತ್ತುಕೊಂಡು ಹೋದ ಕಳ್ಳಿ

    ಬುರ್ಖಾ ಧರಿಸಿ 72 ಗ್ರಾಂ ಚಿನ್ನದ ಸರ ಕಿತ್ತುಕೊಂಡು ಹೋದ ಕಳ್ಳಿ

    ಕೋಲಾರ: ಬುರ್ಖಾ ಧರಿಸಿ ಮನೆಗೆ ಬಂದ ಮಹಿಳೆಯೊಬ್ಬಳು ಚಿನ್ನದ ಸರ ಕಿತ್ತುಕೊಂಡು ಪರಾರಿಯಾದ ಘಟನೆ ಕೆಜಿಎಫ್‍ನ ಶ್ರೀರಾಮ ನಗರ ಬಡಾವಣೆಯಲ್ಲಿ ನಡೆದಿದೆ.

    ಕೆಜಿಎಫ್‍ನ ಶ್ರೀರಾಮ ನಗರ ಬಡಾವಣೆಯ ಪೂಂಗೋದೈ (60) ಚಿನ್ನದ ಸರ ಕಳೆದುಕೊಂಡ ಮಹಿಳೆ. ಆರೋಪಿ ಮಹಿಳೆಯು ತಾನು ನಗರಸಭೆಯಿಂದ ಆಧಾರ್ ಪರಿಶೀಲನೆಗಾಗಿ ಬಂದಿದ್ದೇನೆ ಎಂದು ಹೇಳಿದ್ದಳು.

    ಪೂಂಗೋದೈ ಅವರ ಮನೆಗೆ ಬಂದಿದ್ದ ಆರೋಪಿ ಆಧಾರ್ ಕಾರ್ಡ್ ತೋರಿಸುವಂತೆ ತಿಳಿಸಿದ್ದಳು. ಈ ವೇಳೆ ಮನೆಯಲ್ಲಿ ಯಾರು ಇಲ್ಲದಿರುವುದನ್ನು ಹಾಗೂ ಪೂಂಗೋದೈ ಅವರ ಕೊರಳಲ್ಲಿದ್ದ ಚಿನ್ನದ ಸರವನ್ನು ಗಮನಿಸಿದ್ದಳು. ಆಧಾರ್ ಕಾರ್ಡ್ ಹಿಡಿದುಕೊಂಡ ಬಂದ ಪೂಂಗೋದೈ ಕಣ್ಣಿಗೆ ಖಾರದ ಪುಡಿ ಎರಚಿ, 72 ಗ್ರಾಂ ಚಿನ್ನದ ಸರ ಕಸಿದಕೊಂಡು ಪರಾರಿಯಾಗಿದ್ದಾಳೆ.

    ಸ್ಥಳಕ್ಕೆ ಭೇಟಿ ನೀಡಿದ ಕೆಜಿಎಫ್ ಎಸ್‍ಪಿ ಮಹಮ್ಮದ್ ಸುಜಿತಾ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ರಾಬರ್ಟ್ ಸನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಮಹಿಳೆಯ ಬಂಧನಕ್ಕಾಗಿ ಪೊಲೀಸರು ಶೋಧ ನಡೆಸಿದ್ದಾರೆ.

    [wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.in/wp-content/plugins/wonderplugin-video-embed/engine/playvideo-64-64-0.png”]

  • ಹಿಂಬಾಗಿಲು ಮುರಿದು 440 ಗ್ರಾಂ ಚಿನ್ನಾಭರಣ ದೋಚಿದ ಕಳ್ಳರು

    ಹಿಂಬಾಗಿಲು ಮುರಿದು 440 ಗ್ರಾಂ ಚಿನ್ನಾಭರಣ ದೋಚಿದ ಕಳ್ಳರು

    ಹಾವೇರಿ: ಹಿಂಬಾಗಿಲು ಮುರಿದು ಮನೆಯಲ್ಲಿದ್ದ 440 ಗ್ರಾಂ ಚಿನ್ನಾಭರಣವನ್ನು ಕಳ್ಳರು ದೋಚಿದ ಘಟನೆ ಜಿಲ್ಲೆಯ ಹಾನಗಲ್ ಪಟ್ಟಣದ ರೇಣುಕಾನಗರದಲ್ಲಿ ನಡೆದಿದೆ.

    ಹಾನಗಲ್‍ನ ಪ್ರೋ. ಎನ್.ಜಿ.ಬಣಕಾರ ಎಂಬವರಿಗೆ ಸೇರಿದ್ದ ಮನೆಯಲ್ಲಿ ಕಳ್ಳತನವಾಗಿದ್ದು, 13 ಲಕ್ಷ ಮೌಲ್ಯದ ಚಿನ್ನಾಭರಣವನ್ನು ಕಳ್ಳರು ದೋಚಿದ್ದಾರೆ. ಎನ್.ಜಿ.ಬಣಕಾರ ಹಾಗೂ ಕುಟುಂಬಸ್ಥರು ಊರಿಗೆ ಹೋಗಿದ್ದನ್ನು ಖಚಿತಪಡಿಸಿಕೊಂಡ ಕಳ್ಳರು ಮಂಗಳವಾರ ರಾತ್ರಿ ತಮ್ಮ ಕೈಚಳಕ ತೋರಿದ್ದಾರೆ.

    ಈ ಕುರಿತು ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಆಕಸ್ಮಿಕವಾಗಿ 65 ಲಕ್ಷ ರೂ. ಮೌಲ್ಯದ ಆಭರಣಗಳನ್ನ ಕಸದ ರಾಶಿಗೆ ಎಸೆದ ಮಹಿಳೆ!

    ಆಕಸ್ಮಿಕವಾಗಿ 65 ಲಕ್ಷ ರೂ. ಮೌಲ್ಯದ ಆಭರಣಗಳನ್ನ ಕಸದ ರಾಶಿಗೆ ಎಸೆದ ಮಹಿಳೆ!

    ಅಟ್ಲಾಂಟ: ಮಹಿಳೆಯೊಬ್ಬಳು ತನ್ನ 100,000 ಡಾಲರ್(ಅಂದಾಜು 65 ಲಕ್ಷ ರೂ.) ಮೌಲ್ಯದ ವಜ್ರದ ಆಭರಣಗಳನ್ನ ಕಸದ ರಾಶಿಗೆ ಎಸೆದಿರುವ ಘಟನೆ ಅಮೆರಿಕದ ಜಾರ್ಜಿಯಾದಲ್ಲಿ ನಡೆದಿದೆ.

    ಮಹಿಳೆ ತನ್ನ ವಜ್ರದ ಆಭರಣಗಳನ್ನ ಆಕಸ್ಮಿಕವಾಗಿ ಕಸದ ರಾಶಿಗೆ ಎಸೆದಿದ್ದರು. ನಂತರ ಕಸ ವಿಲೇವಾರಿ ಮಾಡುವವರಿಗೆ ಕರೆ ಮಾಡಿ ತಾನು ಕಳೆದುಕೊಂಡ ಭಾರೀ ಮೊತ್ತದ ಆಭರಣದ ಬಗ್ಗೆ ತಿಳಿಸಿದ್ದರು.

    ಮಹಿಳೆಯ ಆಭರಣಗಳನ್ನ ಕಳೆದುಕೊಂಡ ಬಗ್ಗೆ ಮಾಹಿತಿ ತಿಳಿದ ನಂತರ ಹಾಲ್ ಕೌಂಟಿಯ ಘನ ತಾಜ್ಯ ವಿಭಾಗದ ನಿರ್ದೇಶಕರಾದ ಜಾನ್ನಿ ವಿಕ್ಕರ್ಸ್ ಅವರು ತಮ್ಮ ಕಾರ್ಮಿಕರೊಂದಿಗೆ ಆಭರಣ ಹುಡುಕುವ ಕಾರ್ಯಾಚರಣೆಯನ್ನ ಶುರುಮಾಡಿದ್ದರು. ಆದರೆ ಆ ಮಹಿಳೆಯು ಕರೆ ಮಾಡಿದಾಗ ಒಂದು ಸುಳಿವನ್ನ ಮಾತ್ರ ಕೊಟ್ಟಿದ್ದರು. ಮಹಿಳೆಯು ತನ್ನ ಆಭರಣವನ್ನ ಕಪ್ಪು ಬ್ಯಾಗ್‍ನಲ್ಲಿ ಇಟ್ಟಿದ್ದು, ಆ ಕಪ್ಪು ಬ್ಯಾಗ್‍ನ ಹುಡುಕಾಟ ಪ್ರಾರಂಭವಾಯಿತು.

    ಪ್ರತಿ ದಿನ 300 ಟನ್‍ಗಳ ಕಸದ ರಾಶಿ ಬೀಳುತ್ತಿದ್ದ ಸ್ಥಳದಲ್ಲಿ, ಮೂರು ಗಂಟೆಗಳ ನಿರಂತರ ಪ್ರಯತ್ನದಿಂದ, ಪ್ರತಿ 20 ನಿಮಿಷಕ್ಕೆ 9-10 ಟನ್‍ಗಳ ಕಸದ ರಾಶಿಯನ್ನ ಹುಡುಕಿ ಕೊನೆಗೂ ಆ ಕಪ್ಪು ಬ್ಯಾಗನ್ನು ಕಾರ್ಮಿಕರು ಹುಡುಕುವಲ್ಲಿ ಯಶಸ್ವಿಯಾಗಿದ್ದಾರೆ.

    ಕಸದ ರಾಶಿಯಲ್ಲಿ ಆ ಕಪ್ಪು ಬ್ಯಾಗ್ ಸಿಕ್ಕ ಬಳಿಕ ಅಲ್ಲಿಯ ಕಾರ್ಮಿಕರು ತಮ್ಮದೇ ವಸ್ತು ಕಳೆದು ಹೋದಾಗ ಮತ್ತೆ ಹುಡುಕಿದಷ್ಟು ಸಂತಸವನ್ನ ವ್ಯಕ್ತಪಡಿಸಿದರು.

    ಆ ಕಪ್ಪು ಬ್ಯಾಗ್‍ನಲ್ಲಿ 100,000 ಡಾಲರ್(ಅಂದಾಜು 65 ಲಕ್ಷ ರೂ.) ಬೆಲೆ ಬಾಳುವ ಎರಡು ಉಂಗುರಗಳು ಮತ್ತು ಒಂದು ಕೈಬಳೆ ಇದ್ದವು. ವಜ್ರದ ಆಭರಣವನ್ನ ಹುಡುಕಿದ ಕಾರ್ಮಿಕರಿಗೆ ಆ ಮಹಿಳೆ ಅಭಿನಂದನೆ ಸಲ್ಲಿಸಿದರು.

  • ಮೋರಿ ಒಳಗೆ ಸುರಂಗ ಕೊರೆದು ಜ್ಯುವೆಲ್ಲರಿ ಅಂಗಡಿಗೆ ಕನ್ನ

    ಮೋರಿ ಒಳಗೆ ಸುರಂಗ ಕೊರೆದು ಜ್ಯುವೆಲ್ಲರಿ ಅಂಗಡಿಗೆ ಕನ್ನ

    – 40 ಲಕ್ಷ ರೂ. ಮೌಲ್ಯದ ಆಭರಣ ಕಳ್ಳತನ

    ಬೆಂಗಳೂರು: ಕಳ್ಳರ ಗುಂಪೊಂದು ಮೋರಿಯ ಒಳಗಿನಿಂದ ಚಿನ್ನದ ಅಂಗಡಿಗೆ ಕನ್ನ ಹಾಕಿ ಚಿನ್ನಾಭರಣವನ್ನು ಕದ್ದಿರುವ ಘಟನೆ ಬೆಂಗಳೂರಿನ ಕೆಆರ್‍ಪುರಂನಲ್ಲಿ ನಡೆದಿದೆ.

    ದೇವಸಂದ್ರ ಮುಖ್ಯರಸ್ತೆಯ ಬಾಲಾಜಿ ಜ್ಯುವೆಲ್ಲರಿ ಅಂಗಡಿಗೆ ಕಳ್ಳರು ಕನ್ನ ಹಾಕಿದ್ದು, ಗುರುವಾರ ಬೆಳಗ್ಗೆ ಮಾಲೀಕ ಮೋಹನ್ ಲಾಲ್ ಅವರು ಬಾಗಿಲು ತೆರೆದಾಗ ಕೃತ್ಯ ಬೆಳಕಿಗೆ ಬಂದಿದೆ.

    ಮೋರಿಯಿಂದ 6 ಅಡಿ ಉದ್ದದ ಸುರಂಗವನ್ನು ಕೊರೆದು ಮಧ್ಯಭಾಗವನ್ನು ಪ್ರವೇಶಿಸಿ ಚಿನ್ನ ಮತ್ತು ಬೆಳ್ಳಿಯನ್ನು ಕದ್ದಿದ್ದಾರೆ. ಈ ಕೃತ್ಯ ಬೆಳಕಿಗೆ ಬಂದ ಮೇಲೆ ಮಾಲೀಕ ಕೆಆರ್‍ಪುರಂ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

    ಬೆಳ್ಳಿ ಸೇರಿದಂತೆ ಚಿನ್ನಾಭರಣ ಕದ್ದು ಪರಾರಿಯಾಗಿದ್ದಾರೆ. ವಿಷಯ ತಿಳಿದ ಕೆ.ಆರ್.ಪುರಂ ಪೊಲೀಸರು ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದ್ದು, ಕಳ್ಳರ ಪತ್ತೆಗಾಗಿ ಹುಡುಕಾಟ ನಡೆಸಿದ್ದಾರೆ.

    ಬೆಳ್ಳಿ ಪತ್ತೆ: ಪೊಲೀಸರು ಸ್ಥಳಕ್ಕೆ ಆಗಮಿಸಿ ಸುರಂಗದ ಒಳಗಡೆ ನುಗ್ಗಿ ಪರಿಶೀಲಿಸಿದ್ದಾರೆ. ಈ ವೇಳೆ ಸುಮಾರು 40 ಕೆಜಿಯಷ್ಟು ಬೆಳ್ಳಿಯನ್ನು ಅಲ್ಲೆ ಬಿಟ್ಟು ಕಳ್ಳರು ಪರಾರಿಯಾಗಿದ್ದಾರೆ. ಅಂದಾಜು ಒಟ್ಟು 40 ಲಕ್ಷ ರೂ. ಮೌಲ್ಯದ ಆಭರಣಗಳು ಕಳ್ಳತನವಾಗಿದೆ ಎಂದು ಮಾಲೀಕ ತಿಳಿಸಿದ್ದಾರೆ.

    ಮೋರಿ ಮೇಲೆ ಕಲ್ಲಿನ ಸ್ಲ್ಯಾಬ್ ಹಾಕಲಾಗಿತ್ತು. ಸ್ಲ್ಯಾಬ್ ಇದ್ದ ಕಾರಣ ಸುರಂಗ ಕೊರೆದಿದ್ದ ವಿಚಾರ ಪತ್ತೆಯಾಗಿರಲಿಲ್ಲ. ಡಿಸಿಪಿ ಬೋರಲಿಂಗಯ್ಯ ಸ್ಥಳಕ್ಕೆ ಭೇಟಿ ನೀಡಿದ್ದು, ತನಿಖೆ ಮುಂದುವರಿಯುತ್ತಿದೆ.

    ಪೊಲೀಸರು ಈಗ ಜ್ಯುವೆಲ್ಲರಿ ಒಳಗಡೆ ಇದ್ದ ಸಿಸಿಟಿವಿ ದೃಶ್ಯಗಳನ್ನು ವಶಪಡಿಸಿಕೊಂಡಿದ್ದಾರೆ. ಎಷ್ಟು ಜನ ಕಳ್ಳರು ಈ ಕೃತ್ಯದಲ್ಲಿ ಭಾಗಿಯಾಗಿದ್ದಾರೆ ಎನ್ನುವ ಮಾಹಿತಿ ಸಿಕ್ಕಿಲ್ಲ. ಎರಡು ಅಥವಾ ಮೂರು ಮಂದಿ ಈ ಕಳ್ಳತನದಲ್ಲಿ ಭಾಗಿಯಾಗಿದ್ದಾರೆ ಎಂದು ಹೇಳಲಾಗುತ್ತಿದೆ.