Tag: jewellery

  • ಮೋದಿ ತವರಲ್ಲಿ Surat Diamond Bourse – ವಿಶ್ವದ ಅತಿದೊಡ್ಡ ಕಚೇರಿ ಸಂಕೀರ್ಣ ಉದ್ಘಾಟಿಸಿದ ಪ್ರಧಾನಿ

    ಮೋದಿ ತವರಲ್ಲಿ Surat Diamond Bourse – ವಿಶ್ವದ ಅತಿದೊಡ್ಡ ಕಚೇರಿ ಸಂಕೀರ್ಣ ಉದ್ಘಾಟಿಸಿದ ಪ್ರಧಾನಿ

    ಗಾಂಧಿನಗರ: ಅಮೆರಿಕದ ಪೆಂಟಗನ್ ಮೀರಿಸುವ ಹೊಸ ಕಚೇರಿ ಸಂಕೀರ್ಣವು ಭಾರತದಲ್ಲಿ ತಲೆ ಎತ್ತಿದ್ದು ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಉದ್ಘಾಟನೆ ನೆರವೇರಿಸಿದ್ದಾರೆ.

    ವಿಶ್ವದ ಅತಿದೊಡ್ಡ ಕಾರ್ಪೊರೇಟ್ ಕಚೇರಿ ಕೇಂದ್ರವಾದ `ಸೂರತ್ ಡೈಮಂಡ್ ಬೋರ್ಸ್’ (Surat Diamond Bourse) ಅನ್ನು ಮೋದಿ ಅವರು ಭಾನುವಾರ (ಇಂದು) ಉದ್ಘಾಟಿಸಿ ಶುಭಹಾರೈಸಿದ್ದಾರೆ. ಈ ಮೂಲಕ ಗುಜರಾತ್‌ನ (Gujarat) ಸೂರತ್ ನಗರವು ವಜ್ರದ ರಾಜಧಾನಿಯಾಗುವ ಮಹತ್ವಾಕಾಂಕ್ಷೆಯನ್ನು ಖಚಿತಪಡಿಸಿದೆ. ಇದನ್ನೂ ಓದಿ: ಸೀರೆಯ ಸೆರಗು ಮೆಟ್ರೋ ಬಾಗಿಲಿಗೆ ಸಿಲುಕಿ ಎಳೆದೊಯ್ದ ರೈಲು – ಮಹಿಳೆ ಸಾವು

    ಡೈಮಂಡ್ ಬೋರ್ಸ್ ವಿಶೇಷತೆ ಏನು?
    ಸೂರತ್‌ ಡೈಮಂಡ್ ಬೋರ್ಸ್ 35.54 ಎಕರೆ ಭೂಪ್ರದೇಶದಲ್ಲಿ, 3,400 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿದೆ. ಈ ಮೂಲಕ ಇದು 1943ರಲ್ಲಿ 6.5 ಮಿಲಿಯನ್ ಚದರ ಅಡಿ ವಿಸ್ತೀರ್ಣದಲ್ಲಿ ನಿರ್ಮಾಣಗೊಂಡಿರುವ ಪೆಂಟಗನ್ ಸಂಕೀರ್ಣ ಕಚೇರಿಯನ್ನೂ ಹಿಂದಿಕ್ಕಿದೆ. 4,500ಕ್ಕೂ ಹೆಚ್ಚು ನೆಟ್‌ವರ್ಕ್ ಕಚೇರಿಗಳನ್ನು ಒಳಗೊಂಡಿದ್ದು ವಿಶ್ವದಲ್ಲೇ ಅತಿದೊಡ್ಡ ಕಚೇರಿ ಸಂಕೀರ್ಣ ಎಂಬ ಹೆಗ್ಗಳಿಕೆ ಪಡೆದುಕೊಂಡಿದೆ. ಇದನ್ನೂ ಓದಿ: ಸಂಸತ್‌ನಲ್ಲಿನ ಭದ್ರತಾ ಲೋಪಕ್ಕೂ, ಸಂಸದರ ಅಮಾನತಿಗೂ ಸಂಬಂಧವಿಲ್ಲ: ಲೋಕಸಭಾ ಸ್ಫೀಕರ್‌ ಸ್ಪಷ್ಟನೆ

    ಸೂರತ್‌ನ ಡೈಮಂಡ್ ಬೋರ್ಸ್ ಅಂತಾರಾಷ್ಟ್ರೀಯ ವಜ್ರ ಮತ್ತು ಆಭರಣ (Diamond And Jewellery) ವ್ಯಾಪಾರದ ಜಾಗತಿಕ ಕೇಂದ್ರವಾಗಲಿದೆ. 65,000ಕ್ಕೂ ಹೆಚ್ಚು ವಜ್ರದ ವ್ಯಾಪಾರಿಗಳಿಗೆ ಒನ್‌ಸ್ಟಾಪ್ ಡೆಸ್ಟಿನೇಶನ್ ಆಗಿದ್ದು, ಕಟ್ಟರ್, ಪಾಲಿಷರ್ ವಜ್ರಗಳು ಹಾಗೂ ವಜ್ರದ ಆಭರಣಗಳ ವ್ಯಾಪಾರ, ವಹಿವಾಟು ನಡೆಯಲಿದೆ. ಈ ಕಟ್ಟಡವು 175 ದೇಶಗಳ 4,200 ವ್ಯಾಪಾರಿಗಳನ್ನು ಒಳಗೊಂಡಿದೆ. ಆಮದು-ರಫ್ತಿಗಾಗಿ ಅತ್ಯಾಧುನಿಕ `ಕಸ್ಟಮ್ಸ್ ಕ್ಲಿಯರೆನ್ಸ್ ಹೌಸ್’ (Customs Clearance House) ಅನ್ನೂ ಹೊಂದಿದೆ. ಜೊತೆಗೆ ಚಿಲ್ಲರೆ ಆಭರಣ ವ್ಯಾಪಾರಕ್ಕಾಗಿ ಆಭರಣ ಮಳಿಗೆ ಮತ್ತು ಅಂತರರಾಷ್ಟ್ರೀಯ ಬ್ಯಾಂಕಿಂಗ್ ಮತ್ತು ಸುರಕ್ಷಿತ ವಾಲ್ಟ್ಸ್‌ಗಳ ಸೌಲಭ್ಯವೂ ಇಲ್ಲಿದೆ. ಮನರಂಜನಾ ವಲಯ ಮತ್ತು ಪಾರ್ಕಿಂಗ್‌ಗೆ 20 ಲಕ್ಷ ಚದರ ಅಡಿ ವಿಸ್ತೀರ್ಣ ಪ್ರದೇಶವನ್ನು ಮೀಸಲಿಡಲಾಗಿದೆ. ಇದನ್ನೂ ಓದಿ: ರಾಮ ಮಂದಿರ ಉದ್ಘಾಟನೆಗೆ ದಿನಗಣನೆ- ಅಂತಿಮ ಹಂತದಲ್ಲಿ ತಯಾರಿ, ವಿಶೇಷ ಸಾರಿಗೆ ವ್ಯವಸ್ಥೆ

    ವಜ್ರ ವಿನ್ಯಾಸಕ್ಕೆ ಭಾರತ ಫೇಮಸ್: ವಿಶ್ವದಲ್ಲಿಯೇ ಮೊದಲಿಗೆ ದಕ್ಷಿಣ ಭಾರತದಲ್ಲಿ ವಜ್ರದ ನಿಕ್ಷೇಪಗಳು 9ನೇ ಶತಮಾನದಲ್ಲಿ ಪತ್ತೆಯಾದವು. ಅಲ್ಲಿಂದ 18ನೇ ಶತಮಾನದ ಮಧ್ಯಭಾಗದವರೆಗೆ ಭಾರತವು ವಜ್ರದ ಏಕೈಕ ಉತ್ಪಾದಕ ರಾಷ್ಟ್ರವಾಗಿತ್ತು. ನಂತರ ಇಲ್ಲಿನ ನಿಕ್ಷೇಪಗಳು ಬರಿದಾಗತೊಡಗಿ ಬ್ರೆಜಿಲ್‌ನಲ್ಲಿ ವಜ್ರದ ನಿಕ್ಷೇಪಗಳು ಪತ್ತೆಯಾಗಿ, ಅಲ್ಲಿ ಉತ್ಪಾದನೆ ಆರಂಭವಾಯಿತು. 1870ರ ದಶಕದಲ್ಲಿ ದಕ್ಷಿಣ ಆಫ್ರಿಕಾದಲ್ಲಿ ದೊಡ್ಡ ಪ್ರಮಾಣದಲ್ಲಿ ವಜ್ರದ ಅದಿರು ಪತ್ತೆಯಾದ ಮೇಲೆ ವಜ್ರೋದ್ಯಮ ಬೃಹತ್ ಪ್ರಮಾಣದಲ್ಲಿ ಬೆಳೆಯಿತು. ಈಗ ಅಲ್ಲಿ ಮಾತ್ರವಲ್ಲದೆ ಕೆನಡಾ, ಜಿಂಬಾಬ್ವೆ, ಅಂಗೋಲ ಮತ್ತು ರಷ್ಯಾದಲ್ಲಿ ಸಹ ವಜ್ರದ ಗಣಿಗಳಿವೆ. ಇಲ್ಲಿನ ಸಿಗುವ ವಜ್ರಗಳನ್ನು ಭಾರತಕ್ಕೆ ಕಳುಹಿಸಿ ಅಲಂಕಾರಿಕವಾಗಿ ವಿನ್ಯಾಸಗೊಳಿಸಲಾಗುತ್ತದೆ. ವಜ್ರದ ಹರಳುಗಳನ್ನು ವಿನ್ಯಾಸಗೊಳಿಸಲು ಭಾರತದ ಗುಜರಾತ್ ರಾಜ್ಯ ಫೇಮಸ್ ಆಗಿದೆ. ವಜ್ರಗಳನ್ನು ವಿನ್ಯಾಸಗೊಳಿಸಿ ಆಭರಣಗಳಾಗಿ ರೂಪಿಸಿ ಒದಗಿಸುವ ಕಾರ್ಯವನ್ನು ಭಾರತದಲ್ಲಿ ಸುಮಾರು 25 ಕಂಪನಿಗಳು ಮಾಡುತ್ತಿವೆ. ಇದೀಗ ಭಾರತದಲ್ಲೇ ಬೃಹತ್ ಕಚೇರಿ ಸಂಕೀರ್ಣ ತೆರೆಯುತ್ತಿರುವುದು ಮತ್ತೊಂದು ಗರಿಮೆ.

  • ಪೆಂಟಗನ್‌ ಮೀರಿಸುವ ವಿಶ್ವದ ಅತಿದೊಡ್ಡ ಕಚೇರಿ ಸಂಕೀರ್ಣ ʻಸೂರತ್ ಡೈಮಂಡ್ ಬೋರ್ಸ್ʼ – ಭಾನುವಾರ ಪ್ರಧಾನಿ ಮೋದಿಯಿಂದ ಉದ್ಘಾಟನೆ

    ಪೆಂಟಗನ್‌ ಮೀರಿಸುವ ವಿಶ್ವದ ಅತಿದೊಡ್ಡ ಕಚೇರಿ ಸಂಕೀರ್ಣ ʻಸೂರತ್ ಡೈಮಂಡ್ ಬೋರ್ಸ್ʼ – ಭಾನುವಾರ ಪ್ರಧಾನಿ ಮೋದಿಯಿಂದ ಉದ್ಘಾಟನೆ

    ಗಾಂಧಿನಗರ: ಅಮೆರಿಕದ ಪೆಂಟಗನ್‌ ಮೀರಿಸುವ ಹೊಸ ಕಚೇರಿ ಸಂಕೀರ್ಣವು ಭಾರತದಲ್ಲಿ ತಲೆ ಎತ್ತಿದ್ದು ಉದ್ಘಾಟನೆಗೆ ಸಜ್ಜಾಗಿದೆ. ವಿಶ್ವದ ಅತಿದೊಡ್ಡ ಕಾರ್ಪೊರೇಟ್ ಕಚೇರಿ ಕೇಂದ್ರವಾದ ‘ಸೂರತ್ ಡೈಮಂಡ್ ಬೋರ್ಸ್’ (Surat Diamond Bourse) ಅನ್ನು ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಭಾನುವಾರ ಉದ್ಘಾಟಿಸಲಿದ್ದಾರೆ. ಈ ಮೂಲಕ ಗುಜರಾತ್‌ನ ಸೂರತ್‌ ನಗರವು ವಜ್ರದ ರಾಜಧಾನಿಯಾಗುವ ನಗರದ ಮಹತ್ವಾಕಾಂಕ್ಷೆಯನ್ನು ಖಚಿತಪಡಿಸಿದೆ.

    ಗುಜರಾತ್‌ನ ಸೂರತ್ ಡೈಮಂಡ್ ಬೋರ್ಸ್, 6.7 ಮಿಲಿಯನ್ ಚದರ ಅಡಿ (620,000 ಚದರ ಮೀಟರ್) ವಿಸ್ತೀರ್ಣ ಭೂ ಪ್ರದೇಶದಲ್ಲಿ, 32 ಶತಕೋಟಿ (384 ಮಿಲಿಯನ್ ಡಾಲರ್‌) ವೆಚ್ಚದಲ್ಲಿ ನಿರ್ಮಾಣಗೊಂಡಿದೆ. ಇದು 1943ರಲ್ಲಿ 6.5 ಮಿಲಿಯನ್‌ ಚದರ ಅಡಿ ವಿಸ್ತೀರ್ಣದಲ್ಲಿ ನಿರ್ಮಾಣಗೊಂಡಿರುವ ಪೆಂಟಗನ್‌ ಸಂಕೀರ್ಣ ಕಚೇರಿಯನ್ನೂ ಹಿಂದಿಕ್ಕಿದೆ. ಈ ಕಚೇರಿ ಸಂಕೀರ್ಣವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟಿಸಲಿದ್ದಾರೆ. ಇದನ್ನೂ ಓದಿ: ಪಾಂಡ್ಯ ನಾಯಕತ್ವ ವರವೋ ಶಾಪವೋ – ಕ್ಯಾಪ್ಟನ್‌ ಆದ ಒಂದೇ ಗಂಟೆಯಲ್ಲಿ 4 ಲಕ್ಷ ಫಾಲೋವರ್ಸ್‌ ಕಳೆದುಕೊಂಡ ಮುಂಬೈ

    ಅಲ್ಲದೇ ಸೂರತ್‌ನ ಡೈಮಂಡ್‌ ಬೋರ್ಸ್‌ ಅಂತಾರಾಷ್ಟ್ರೀಯ ವಜ್ರ (Diamond) ಮತ್ತು ಆಭರಣ (Jewellery) ವ್ಯಾಪಾರದ ಜಾಗತಿಕ ಕೇಂದ್ರವಾಗಲಿದೆ. ಒರಟು ಮತ್ತು ನಯವಾಗಿ ವಿನ್ಯಾಸಗೊಳಿಸಿದ ಪಾಲಿಶ್‌ ವಜ್ರಗಳ ವ್ಯಾಪಾರ ನಡೆಯಲಿದೆ. ಆಮದು-ರಫ್ತಿಗಾಗಿ ಅತ್ಯಾಧುನಿಕ ʻಕಸ್ಟಮ್ಸ್ ಕ್ಲಿಯರೆನ್ಸ್ ಹೌಸ್ʼ (Customs Clearance House), ಚಿಲ್ಲರೆ ಆಭರಣ ವ್ಯಾಪಾರಕ್ಕಾಗಿ ಆಭರಣ ಮಳಿಗೆ ಮತ್ತು ಅಂತರರಾಷ್ಟ್ರೀಯ ಬ್ಯಾಂಕಿಂಗ್ ಮತ್ತು ಸುರಕ್ಷಿತ ವಾಲ್ಟ್‌ಗಳ ಸೌಲಭ್ಯವನ್ನೂ ಬೋರ್ಸ್ ಒಳಗೊಂಡಿರುತ್ತದೆ ಎಂದು ಮೂಲಗಳು ತಿಳಿಸಿವೆ.

    ಬೋರ್ಸ್‌ ಸರಿಸುಮಾರು 175 ದೇಶಗಳ 4,200 ವ್ಯಾಪಾರಿಗಳನ್ನು ಇರಿಸುವ ಸಾಮರ್ಥ್ಯ ಹೊಂದಿದ್ದು, 1.5 ಲಕ್ಷ ಜನರಿಗೆ ಉದ್ಯೋಗಾವಕಾಶ ಸಿಗಲಿದೆ ಎಂದು ಹೇಳಲಾಗಿದೆ. ಇದನ್ನೂ ಓದಿ: ಅಚ್ಚರಿ ಬೆಳವಣಿಗೆಯಲ್ಲಿ ಮುಂಬೈ ಸಾರಥಿಯಾದ ಪಾಂಡ್ಯ – ಹಿಟ್‌ಮ್ಯಾನ್‌ ಸ್ಥಾನ ಏನು?

    ವಜ್ರ ವಿನ್ಯಾಸಕ್ಕೆ ಭಾರತ ಫೇಮಸ್: ವಿಶ್ವದಲ್ಲಿಯೇ ಮೊದಲಿಗೆ ದಕ್ಷಿಣ ಭಾರತದಲ್ಲಿ ವಜ್ರದ ನಿಕ್ಷೇಪಗಳು 9ನೇ ಶತಮಾನದಲ್ಲಿ ಪತ್ತೆಯಾದವು. ಅಲ್ಲಿಂದ 18ನೇ ಶತಮಾನದ ಮಧ್ಯಭಾಗದವರೆಗೆ ಭಾರತವು ವಜ್ರದ ಏಕೈಕ ಉತ್ಪಾದಕ ರಾಷ್ಟ್ರವಾಗಿತ್ತು. ನಂತರ ಇಲ್ಲಿನ ನಿಕ್ಷೇಪಗಳು ಬರಿದಾಗತೊಡಗಿ ಬ್ರೆಜಿಲ್‌ನಲ್ಲಿ ವಜ್ರದ ನಿಕ್ಷೇಪಗಳು ಪತ್ತೆಯಾಗಿ, ಅಲ್ಲಿ ಉತ್ಪಾದನೆ ಆರಂಭವಾಯಿತು. 1870ರ ದಶಕದಲ್ಲಿ ದಕ್ಷಿಣ ಆಫ್ರಿಕಾದಲ್ಲಿ ದೊಡ್ಡ ಪ್ರಮಾಣದಲ್ಲಿ ವಜ್ರದ ಅದಿರು ಪತ್ತೆಯಾದ ಮೇಲೆ ವಜ್ರೋದ್ಯಮ ಬೃಹತ್ ಪ್ರಮಾಣದಲ್ಲಿ ಬೆಳೆಯಿತು. ಈಗ ಅಲ್ಲಿ ಮಾತ್ರವಲ್ಲದೆ ಕೆನಡ, ಜಿಂಬಾಬ್ವೆ, ಅಂಗೋಲ ಮತ್ತು ರಷ್ಯಾಗಳಲ್ಲಿ ಸಹ ವಜ್ರದ ಗಣಿಗಳಿವೆ. ಇಲ್ಲಿನ ಸಿಗುವ ವಜ್ರಗಳನ್ನು ಭಾರತಕ್ಕೆ ಕಳುಹಿಸಿ ಅಲಂಕರಿಕವಾಗಿ ವಿನ್ಯಾಸಗೊಳಿಸಲಾಗುತ್ತದೆ. ವಜ್ರದ ಹರಳುಗಳನ್ನು ವಿನ್ಯಾಸಗೊಳಿಸಲು ಭಾರತದ ಗುಜರಾತ್ ರಾಜ್ಯ ಫೇಮಸ್ ಆಗಿದೆ. ವಜ್ರಗಳನ್ನು ವಿನ್ಯಾಸಗೊಳಿಸಿ ಆಭರಣಗಳಾಗಿ ರೂಪಿಸಿ ಒದಗಿಸುವ ಕಾರ್ಯವನ್ನು ಭಾರತದಲ್ಲಿ ಸುಮಾರು 25 ಕಂಪನಿಗಳು ಮಾಡುತ್ತಿವೆ. ಇದೀಗ ಭಾರತದಲ್ಲೇ ಬೃಹತ್‌ ಕಚೇರಿ ಸಂಕೀರ್ಣ ತೆರೆಯುತ್ತಿರುವುದು ಮತ್ತೊಂದು ಗರಿಮೆ.

  • ಚಿನ್ನದಂಗಡಿ ಗೋಡೆ ಒಡೆದು 25 ಕೋಟಿ ರೂ. ಮೌಲ್ಯದ ಆಭರಣ ದರೋಡೆ

    ಚಿನ್ನದಂಗಡಿ ಗೋಡೆ ಒಡೆದು 25 ಕೋಟಿ ರೂ. ಮೌಲ್ಯದ ಆಭರಣ ದರೋಡೆ

    ನವದೆಹಲಿ: ಚಿನ್ನದಂಗಡಿ ಒಂದರ ಗೋಡೆ ಒಡೆದು 25 ಕೋಟಿ ರೂ. ಮೌಲ್ಯದ ಚಿನ್ನಾಭರಣ (Jewellery) ದೋಚಿದ ಪ್ರಕರಣ ದೆಹಲಿಯ (Delhi) ಭೋಗಲ್ ಪ್ರದೇಶದಲ್ಲಿ ನಡೆದಿದೆ.

    ಸಂಜೀವ್ ಜೈನ್ ಎಂಬವರಿಗೆ ಸೇರಿದ ಅಂಗಡಿಯಲ್ಲಿ ಈ ಕಳ್ಳತನವಾಗಿದೆ. ಅವರು ಎರಡು ದಿನಗಳಿಂದ ಅಂಗಡಿ ಮುಚ್ಚಿದ್ದರು. ಇಂದು (ಮಂಗಳವಾರ) ಅಂಗಡಿ ತೆರೆದಾಗ ಇಡೀ ಅಂಗಡಿಯಲ್ಲಿ ಧೂಳು ತುಂಬಿತ್ತು. ಅಲ್ಲದೇ ಸಿಸಿ ಕ್ಯಾಮೆರಾಗಳಿಗೆ ಹಾನಿ ಮಾಡಲಾಗಿತ್ತು. ಬಳಿಕ ಅಂಡಿಯನ್ನು ಪರೀಶೀಲಿಸಿದಾಗ ಕಳ್ಳತನವಾಗಿರುವುದು ಬೆಳಕಿಗೆ ಬಂದಿದೆ ಸಂಜೀವ್ ತಿಳಿಸಿದ್ದಾರೆ. ಇದನ್ನೂ ಓದಿ: ತಾಯಿಯ ಕುತ್ತಿಗೆಗೆ 30 ಬಾರಿ ಚುಚ್ಚಿ, ಕಬ್ಬಿಣದ ಬಾಣಲೆಯಲ್ಲಿ ಹೊಡೆದು ಕೊಂದ ಪಾಪಿ ಮಗಳು!

    ಸ್ಟ್ರಾಂಗ್ ರೂಮ್‍ನ ಗೋಡೆಯಲ್ಲಿ ರಂಧ್ರ ಕೊರೆದಿದ್ದಾರೆ. ಬಳಿಕ ಟೆರೇಸ್ ಮೂಲಕ ಬಂದು ಸಿಸಿಟಿವಿಗಳಿಗೆ ಹಾನಿಮಾಡಿದ್ದಾರೆ. ಬಳಿಕ ಅಂಗಡಿಯಲ್ಲಿದ್ದ ಚಿನ್ನಾಭರಣ ದೋಚಿದ್ದಾರೆ.

    ಈ ಪ್ರಕರಣದ ಬಗ್ಗೆ ಮಾತನಾಡಿರುವ ಡಿಸಿಪಿ ರಾಜೇಶ್ ಡಿಯೋ, ಪ್ರಕರಣದ ತನಿಖೆ ನಡೆಯುತ್ತಿದೆ. ಅಂಗಡಿಯನ್ನು ಎರಡು ದಿನ ಮುಚ್ಚುವ ವಿಚಾರ ತಿಳಿದವರೇ ಈ ಕೃತ್ಯ ಎಸಗಿರುವ ಸಾಧ್ಯತೆ ಇದೆ. ಶೀಘ್ರದಲ್ಲೇ ಆರೋಪಿಗಳನ್ನು ಬಂಧಿಸಲಾಗುವುದು ಎಂದು ಅವರು ತಿಳಿಸಿದ್ದಾರೆ. ಇದನ್ನೂ ಓದಿ: ಬೆಂಗಳೂರು ಬಂದ್ – ಹೋಟೆಲ್ ತೆರೆದಿದ್ದಕ್ಕೆ ಮಾಲೀಕನ ಮೇಲೆ ಹಲ್ಲೆ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಚಿನ್ನ, ಬೆಳ್ಳಿ ಖರೀದಿಗೆ ಮುಗಿಬಿದ್ದ ಜನ – ದರ ಹೆಚ್ಚಿದ್ದರೂ ಖರೀದಿ ಜೋರು

    ಚಿನ್ನ, ಬೆಳ್ಳಿ ಖರೀದಿಗೆ ಮುಗಿಬಿದ್ದ ಜನ – ದರ ಹೆಚ್ಚಿದ್ದರೂ ಖರೀದಿ ಜೋರು

    ನವದೆಹಲಿ: ಆರ್‌ಬಿಐ (RBI) 2 ಸಾವಿರ ರೂ. ಮುಖಬೆಲೆಯ ನೋಟುಗಳನ್ನು ಹಿಂದಕ್ಕೆ ಪಡೆಯುವ ಆದೇಶ ಪ್ರಕಟಿಸಿದ ಬೆನ್ನಲ್ಲೇ ಜನ ಚಿನ್ನ, ಬೆಳ್ಳಿ (Gold, Silver) ಖರೀದಿಸಲು ಮುಗಿಬಿದ್ದಿದ್ದಾರೆ.

    ಹೌದು. ಶನಿವಾರ ದೇಶಾದ್ಯಂತ ಜುವೆಲ್ಲರಿ ಅಂಗಡಿಗಳಲ್ಲಿ (Jewellery Shop) ಭರ್ಜರಿ ವ್ಯಾಪಾರ ನಡೆದಿದೆ. ಜನರು ಚಿನ್ನವನ್ನು ದುಬಾರಿ ಬೆಲೆ ನೀಡಿ ಖರೀದಿಸುತ್ತಿರುವುದು ವಿಶೇಷ.

    ಶನಿವಾರ ಜೈಪುರದಲ್ಲಿ 10 ಗ್ರಾಂ 24 ಕ್ಯಾರೆಟ್‌ ಚಿನ್ನದ ಬೆಲೆ 63 ಸಾವಿ ರೂ. ಇದ್ದರೂ ಗ್ರಾಹಕರು 66 ಸಾವಿರ ರೂ. ನೀಡಿ ಖರೀದಿಸಿದ್ದಾರೆ. ದೇಶಾದ್ಯಂತ 10% ರಿಂದ 20% ರಷ್ಟು ಆಭರಣ ವ್ಯಾಪಾರ ಹೆಚ್ಚಾಗಿದೆ. ಸಾಧಾರಣವಾಗಿ ಅಕ್ಷಯ ತೃತೀಯಾ ಅಥವಾ ಹಬ್ಬದ ಸಮಯದಲ್ಲಿ ಹೆಚ್ಚಾಗಿ ಚಿನ್ನ ಖರೀದಿ ನಡೆಯುತ್ತಿರುತ್ತದೆ. ಆದರೆ ಈಗ ಯಾವುದೇ ಹಬ್ಬ ಇಲ್ಲದೇ ಇದ್ದರೂ ಆರ್‌ಬಿಐ ನಿರ್ಧಾರದಿಂದ ಆಭರಣ ಖರೀದಿ ಹೆಚ್ಚಾಗುತ್ತಿದೆ.  ಇದನ್ನೂ ಓದಿ: ಅಂಡರ್ ಪಾಸ್‌ನಲ್ಲಿ ಐವರನ್ನು ರಕ್ಷಿಸಿದ ಪಬ್ಲಿಕ್ ಟಿವಿ ಚಾಲಕನಿಗೆ ಬಿಬಿಎಂಪಿ ಆಯುಕ್ತರಿಂದ ಸನ್ಮಾನ

    ಪೆಟ್ರೋಲ್‌ ಪಂಪ್‌ನಲ್ಲಿ 2 ಸಾವಿರ ರೂ. ಚಲಾವಣೆ ಬಹಳ ವಿರಳ. ಆದರೆ ಈಗ ಹಲವು ಮಂದಿ 2000 ರೂ. ನೀಡಿ ಪೆಟ್ರೋಲ್‌ ಹಾಕಿಸುತ್ತಿದ್ದಾರೆ ಎಂದು ಕೋಲ್ಕತ್ತಾ ಮೂಲದ ಪೆಟ್ರೋಲ್‌ ಪಂಪ್‌ ಉದ್ಯೋಗಿ ತಿಳಿಸಿದ್ದಾರೆ.

    2016ರ ನವೆಂಬರ್‌ 8 ರಂದು 500, 1000 ರೂ. ಮುಖಬೆಲೆಯ ನೋಟು ನಿಷೇಧ ನಿರ್ಧಾರ ಕೈಗೊಂಡ ಬೆನ್ನಲ್ಲೇ ಭಾರೀ ಸಂಖ್ಯೆಯ ಗ್ರಾಹಕರು ಚಿನ್ನವನ್ನು ಖರೀದಿ ಮಾಡಿದ್ದರು. ಈ ಕಾರಣಕ್ಕೆ ಆದಾಯ ತೆರಿಗೆ ಇಲಾಖೆ ಹಲವು ಜ್ಯುವೆಲ್ಲರಿ ಅಂಗಡಿಗಳಿಗೆ ನೋಟಿಸ್‌ ಜಾರಿ ಮಾಡಿ ಗ್ರಾಹಕರ ವಿವರ ಕೇಳಿತ್ತು. ಈ ಕಾರಣಕ್ಕೆ ಈ ಬಾರಿ ಜ್ಯುವೆಲ್ಲರಿಗಳು 2000 ರೂ. ಮುಖಬೆಲೆಯ ನೋಟುಗಳನ್ನು ನೀಡಿ ಆಭರಣ ಖರೀದಿಸುವ ಗ್ರಾಹಕರ ಎಲ್ಲಾ ವಿವರಗಳನ್ನು ಸಂಗ್ರಹಿಸುತ್ತಿದೆ.

     

    2000 ರೂ. ನೋಟು ಬಳಕೆಗೆ ಆರ್‌ಬಿಐ ಸಂಪೂರ್ಣ ನಿಷೇಧ ಹೇರಿಲ್ಲ. ಈಗಲೂ ವ್ಯವಹಾರಗಳಿಗೆ ಬಳಸಬಹುದು. ಪಾವತಿ ಮಾಡಲು, ಹಣವನ್ನು ಸ್ವೀಕರಿಸಲು ಬಳಕೆ ಮಾಡಬಹುದು. ಸೆಪ್ಟೆಂಬರ್‌ 30ರವರೆಗೂ ಈ ನೋಟುಗಳು ಕಾನೂನು ಮಾನ್ಯತೆ ಹೊಂದಿರಲಿವೆ.

  • ಯುವತಿ ಮೇಲೆ ಅತ್ಯಾಚಾರವೆಸಗಿ ಚಿನ್ನಾಭರಣ ಕದ್ದು ಪರಾರಿ – ಮಹಿಳೆ ಸೇರಿ ಐವರ ವಿರುದ್ಧ ಕೇಸ್

    ಯುವತಿ ಮೇಲೆ ಅತ್ಯಾಚಾರವೆಸಗಿ ಚಿನ್ನಾಭರಣ ಕದ್ದು ಪರಾರಿ – ಮಹಿಳೆ ಸೇರಿ ಐವರ ವಿರುದ್ಧ ಕೇಸ್

    ಭೋಪಾಲ್: ಯುವತಿಯೊಬ್ಬಳ (Woman) ಮೇಲೆ ಅತ್ಯಾಚಾರವೆಸಗಿ (Rape) ಆಕೆಯ ಬಳಿಯಿದ್ದ ಚಿನ್ನಾಭರಣ (Jewellery) ಹಾಗೂ ನಗದುಗಳನ್ನು ಐದು ಜನರ ಗುಂಪೊಂದು ದೋಚಿರುವ ಘಟನೆ ಮಧ್ಯಪ್ರದೇಶದ (Madhya Pradesh) ದಾಮೋಹ್‍ನಲ್ಲಿ ನಡೆದಿದೆ.

    32 ವರ್ಷದ ಯುವತಿಯೊಬ್ಬಳು ತನ್ನ ಸಹೋದರನೊಂದಿಗೆ ಗ್ರಾಮಕ್ಕೆ ಬೈಕ್‍ನಲ್ಲಿ ಹೋಗುತ್ತಿದ್ದಳು. ಈ ವೇಳೆ ಐವರ ಗುಂಪೊಂದು ತಡೆದಿದ್ದಾರೆ. ನಂತರ ಯುವತಿ ಬಳಿಯಿದ್ದ ಚಿನ್ನಾಭರಣ, ಮೊಬೈಲ್ ಹಾಗೂ ನಗದುಗಳನ್ನು ದೋಚಿದ್ದಾರೆ.

    ಅಷ್ಟೇ ಅಲ್ಲದೇ ಆರೋಪಿಗಳು ಸಂತ್ರಸ್ತೆಯ ಸಹೋದರನಿಗೆ ತೀವ್ರವಾಗಿ ಥಳಿಸಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಆತ ಪ್ರಜ್ಞೆ ತಪ್ಪಿದ್ದಾನೆ. ಅದಾದ ಬಳಿಕ ಆ ಗುಂಪು ಯುವತಿಯನ್ನು ಪಕ್ಕದಲ್ಲಿದ್ದ ಅರಣ್ಯ ಪ್ರದೇಶಕ್ಕೆ ಕರೆದೊಯ್ದಿದ್ದಾರೆ. ಅಲ್ಲಿ ಆಕೆಯ ಮೇಲೆ ಓರ್ವ ವ್ಯಕ್ತಿ ಅತ್ಯಾಚಾರವೆಸಗಿದ್ದಾನೆ. ಇದನ್ನೂ ಓದಿ: ಕಚ್ಚಾ ತೈಲದ ವಿಂಡ್‌ಫಾಲ್‌ ತೆರಿಗೆ ಕಡಿತಗೊಳಿಸಿದ ಭಾರತ

    ಘಟನೆಗೆ ಸಂಬಂಧಿಸಿದಂತೆ ರಾಜಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಗಳಿಗಾಗಿ ಶೋಧ ನಡೆಸುತ್ತಿದ್ದಾರೆ. ಆರೋಪಿಗಳಲ್ಲಿ ಓರ್ವ ಮಹಿಳೆಯೂ ಭಾಗಿಯಾಗಿದ್ದಾಳೆ. ಗಂಭೀರವಾಗಿ ಗಾಯಗೊಂಡಿದ್ದ ಸಂತ್ರಸ್ತೆ ಹಾಗೂ ಆಕೆಯ ಸಹೋದರ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಸಿಕ್ಕಿಂನಲ್ಲಿ ಭಾರೀ ಹಿಮಪಾತ – 6 ಸಾವು, ಹಲವರು ನಾಪತ್ತೆ

  • ಚರಂಡಿ ಮೂಲಕ 10 ಅಡಿ ಸುರಂಗ ಕೊರೆದು ಜ್ಯುವೆಲರಿ ಅಂಗಡಿಗೆ ಕನ್ನ

    ಚರಂಡಿ ಮೂಲಕ 10 ಅಡಿ ಸುರಂಗ ಕೊರೆದು ಜ್ಯುವೆಲರಿ ಅಂಗಡಿಗೆ ಕನ್ನ

    ಲಕ್ನೋ: ಅಂಗಡಿಯೊಂದರಿಂದ 10 ಅಡಿ ಸುರಂಗವನ್ನು ಚರಂಡಿ ಮೂಲಕ ಕೊರೆದು ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣಗಳನ್ನು ಕಳ್ಳರು (Thieves) ದೋಚಿದ ಘಟನೆ ಉತ್ತರ ಪ್ರದೇಶದ  (Uttar Pradesh) ಮೀರತ್‍ನಲ್ಲಿ ನಡೆದಿದೆ.

    ಜ್ಯುವೆಲರಿ ಶೋ ರೂಮ್‌ (Jewellery Shop) ಮಾಲೀಕರು ವ್ಯಾಪಾರಕ್ಕಾಗಿ ಅಂಗಡಿಯನ್ನು ತೆರೆಯಲು ಬಂದಾಗ ಚರಂಡಿಯ ಮೂಲಕ ಸುರಂಗವೊಂದು (Tunnel) ಕೊರೆದಿರುವುದನ್ನು ಗಮನಿಸಿದರು. ಕಳ್ಳರು ಅಂಗಡಿಯೊಳಗೆ ಪ್ರವೇಶಿಸಲು ಡ್ರೈನ್‍ನ್ನು ಬಳಕೆ ಮಾಡಿಕೊಂಡು ಇಟ್ಟಿಗೆ ಹಾಗೂ ಮಣ್ಣನ್ನು ಕೆಡವಿದ್ದಾರೆ.

    ಅದಾದ ಬಳಿಕ ಅಂಗಡಿಯೊಳಗೆ ಬಂದು ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣಗಳೊಂದಿಗೆ ಕಳ್ಳರು ಪರಾರಿಯಾಗಿದ್ದಾರೆ. ಆದರೆ ಚಿನ್ನಾಭರಣದ ನಿಖರವಾದ ಮೊತ್ತ ತಿಳಿದುಬಂದಿಲ್ಲ. ಇದನ್ನೂ ಓದಿ: ಶಾಸಕ ಶಾಮನೂರು ಕೊಟ್ಟ ಗಿಫ್ಟನ್ನು ರಸ್ತೆಗೆ ಎಸೆದು ಮಹಿಳೆಯರ ಆಕ್ರೋಶ

    ಘಟನೆ ಬಳಿಕ ಮೀರತ್ ಬುಲಿಯನ್ ಟ್ರೇಡರ್ಸ್ ಅಸೋಸಿಯೇಷನ್ ಸದಸ್ಯರು ಶೋರೂಮ್ ಬಳಿ ಪ್ರತಿಭಟನೆ ನಡೆಸಿದ್ದಾರೆ. ಗಲಾಟೆಯಾದ ಕೂಡಲೇ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇದನ್ನೂ ಓದಿ: ಸಿದ್ದರಾಮಯ್ಯ ಕೋಲಾರದಲ್ಲಿ ಸ್ಪರ್ಧಿಸಬೇಕೆಂಬುದು ನನ್ನ ಆಸೆ: ವರ್ತೂರು ಪ್ರಕಾಶ್

  • ಯುಗಾದಿಯಂದೇ ಕಳ್ಳತನ – ಬಾಗಿಲು ಮುರಿದು ಲಕ್ಷಾಂತರ ಮೌಲ್ಯದ ಚಿನ್ನಾಭರಣ ಕಳವು

    ಯುಗಾದಿಯಂದೇ ಕಳ್ಳತನ – ಬಾಗಿಲು ಮುರಿದು ಲಕ್ಷಾಂತರ ಮೌಲ್ಯದ ಚಿನ್ನಾಭರಣ ಕಳವು

    ರಾಮನಗರ: ಮನೆ ಬಾಗಿಲು ಮುರಿದು ಲಕ್ಷಾಂತರ ಮೌಲ್ಯದ ಚಿನ್ನಾಭರಣ (Jewellery) ಕಳ್ಳತನ ಮಾಡಿರುವ ಘಟನೆ ಮಾಗಡಿ (Magadi) ತಾಲೂಕಿನ ಸೋಲೂರು (Soluru) ಗ್ರಾಮದಲ್ಲಿ ಬುಧವಾರ ನಡೆದಿದೆ.

    ಗ್ರಾಮದ ನಿವಾಸಿ ಹನುಮಂತರಾಯಪ್ಪ ಎಂಬುವವರು ಯುಗಾದಿ ಹಬ್ಬಕ್ಕೆ ತಮ್ಮ ಸಂಬಂಧಿಕರ ಮನೆಗೆ ತೆರಳಿದ್ದರು. ಯಾರು ಇಲ್ಲದೇ ಇರುವುದನ್ನು ಗಮನಿಸಿ, ರಾತ್ರಿ ವೇಳೆ ಬಾಗಿಲು ಒಡೆದು ಬೀರುವಿನಲ್ಲಿದ್ದ 4 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಹಾಗೂ ಬೆಳ್ಳಿ ವಸ್ತುಗಳನ್ನು ಕಳ್ಳರು ಕದ್ದಿದ್ದಾರೆ. ಇದನ್ನೂ ಓದಿ: ಮೋದಿ ವಿರುದ್ಧ ವಿವಾದಾತ್ಮಕ ಹೇಳಿಕೆ – ರಾಹುಲ್‌ ಗಾಂಧಿಗೆ 2 ವರ್ಷ ಜೈಲು ಶಿಕ್ಷೆ

    ಈ ಸಂಬಂಧ ಕುದೂರು (Kudur) ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ಅದಾನಿ ಬಳಿಕ ಹೊಸ ವರದಿ ಬಿಡುಗಡೆಯ ಸೂಚನೆ ಕೊಟ್ಟ ಹಿಂಡೆನ್‍ಬರ್ಗ್

  • ಟಾಯ್ಲೆಟ್‍ನಲ್ಲಿ ಬ್ಯಾಂಕ್ ಸಿಬ್ಬಂದಿಯನ್ನು ಕೂಡಿ ಹಾಕಿ ಕೆಜಿಗಟ್ಟಲೆ ಚಿನ್ನ ಹೊತ್ತೊಯ್ದರು

    ಟಾಯ್ಲೆಟ್‍ನಲ್ಲಿ ಬ್ಯಾಂಕ್ ಸಿಬ್ಬಂದಿಯನ್ನು ಕೂಡಿ ಹಾಕಿ ಕೆಜಿಗಟ್ಟಲೆ ಚಿನ್ನ ಹೊತ್ತೊಯ್ದರು

    ಚೆನ್ನೈ: ಟಾಯ್ಲೆಟ್‍ನಲ್ಲಿ ಬ್ಯಾಂಕ್ ಸಿಬ್ಬಂದಿಯನ್ನು ಕೂಡಿ ಹಾಕಿ ಕೋಟ್ಯಾಂತರ ರೂಪಾಯಿ ಮೌಲ್ಯದ ಮೂವತ್ತೆರಡು ಕೆಜಿ ಚಿನ್ನಾಭರಣವನ್ನು ಖದೀಮರು ಲೂಟಿ ಮಾಡಿರುವ ಘಟನೆ ಚೆನ್ನೈನಲ್ಲಿ ನಡೆದಿದೆ.

    ನಗರದ ಅರುಂಬಕ್ಕಂ ಪ್ರದೇಶದಲ್ಲಿರುವ ಫೆಡ್‍ಬ್ಯಾಂಕ್ ಗೋಲ್ಡ್ ಲೋನ್‍ನಲ್ಲಿ ದರೋಡೆ ಮಾಡಲು ಮಾಸ್ಕ್ ಧರಿಸಿ ನುಗ್ಗಿದ ಕಳ್ಳರು ಸ್ಟ್ರಾಂಗ್ ರೂಮ್‍ನ ಕೀಗಳನ್ನು ತೆಗೆದುಕೊಂಡು ಮೂವರು ಬ್ಯಾಂಕ್ ಉದ್ಯೋಗಿಗಳನ್ನು ಶೌಚಾಲಯದಲ್ಲಿ ಬೀಗ ಹಾಕಿ ಕೂಡಿಹಾಕಿದ್ದಾರೆ. ನಂತರ ಕ್ಯಾರಿ ಬ್ಯಾಗ್‍ನಲ್ಲಿದ್ದ 32 ಕೆಜಿ ಚಿನ್ನಾಭರಣಗಳನ್ನು ದೋಚಿ ಪರಾರಿಯಾಗಿದ್ದಾರೆ ಎಂದು ಪೊಲೀಸ್ ಕಮಿಷನರ್ ಶಂಕರ್ ಜೀವಲ್ ತಿಳಿಸಿದ್ದಾರೆ.

    ಈ ಕುರಿತಂತೆ ಪ್ರತಿಕ್ರಿಯಿಸಿದ ಸೆಕ್ಯುರಿಟಿ ಗಾರ್ಡ್, ಕಳ್ಳರು ನನಗೆ ನೀಡಿದ ತಂಪು ಪಾನೀಯವನ್ನು ಸೇವಿಸಿದ ನಂತರ ನಾನು ಪ್ರಜ್ಞಾಹೀನನಾಗಿದ್ದೇನೆ. ಎಲ್ಲರೂ ಈಗ ಚೆನ್ನಾಗಿದ್ದಾರೆ. ಯಾವುದೇ ಉದ್ಯೋಗಿ ಪ್ರಜ್ಞಾಹೀನವಾಗಿಲ್ಲ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಬಂಧಿತ ಉಗ್ರರ ವಿಚಾರಣೆಯ ವೇಳೆ ಮಾಹಿತಿ ಬಹಿರಂಗ- ಗುಪ್ತಚರ ಇಲಾಖೆಯಿಂದ ಎಚ್ಚರಿಕೆ

    ಈ ದರೋಡೆಯನ್ನು ಬ್ಯಾಂಕಿನಲ್ಲಿ ಕೆಲಸ ಮಾಡುತ್ತಿರುವ ಉದ್ಯೋಗಿಯೇ ನಡೆಸಿರಬಹುದು ಎಂಬ ಅನುಮಾನವನ್ನು ಜಂಟಿ ಪೊಲೀಸ್ ಆಯುಕ್ತ ಟಿಎಸ್ ಅನ್ಬು ವ್ಯಕ್ತಪಡಿಸಿದ್ದಾರೆ. ಅಲ್ಲದೇ ಆರೋಪಿಗಳ ಪತ್ತೆಗೆ ಪೊಲೀಸರು ವಿಶೇಷ ತಂಡ ರಚಿಸಿದ್ದಾರೆ. ಇದನ್ನೂ ಓದಿ: ಧ್ವಜಾರೋಹಣಕ್ಕೆ ಈದ್ಗಾ ಮೈದಾನದಲ್ಲಿ ಸಿದ್ಧತೆ- ಅಹಿತಕರ ಘಟನೆ ನಡೆಯದಂತೆ ಖಾಕಿ ಭದ್ರತೆ

    Live Tv
    [brid partner=56869869 player=32851 video=960834 autoplay=true]

  • ಗರ್ಲ್‍ಫ್ರೆಂಡ್‍ಗೆ ಗಿಫ್ಟ್ ಕೊಡಲು ಹೆಂಡತಿ ಚಿನ್ನಾಭರಣ ಕದ್ದ ಭೂಪ

    ಗರ್ಲ್‍ಫ್ರೆಂಡ್‍ಗೆ ಗಿಫ್ಟ್ ಕೊಡಲು ಹೆಂಡತಿ ಚಿನ್ನಾಭರಣ ಕದ್ದ ಭೂಪ

    ಚೆನ್ನೈ: 22 ವರ್ಷದ ಗರ್ಲ್ ಫ್ರೆಂಡ್‍ಗೆ ಗಿಫ್ಟ್ ನೀಡಲು 40 ವರ್ಷದ ವ್ಯಕ್ತಿಯೋರ್ವ ತನ್ನ ಹೆಂಡತಿಯ ಆಭರಣವನ್ನೇ ಕದ್ದಿರುವ ಘಟನೆ ಚೆನ್ನೈನಲ್ಲಿ ನಡೆದಿದೆ.

    ಆರೋಪಿಯನ್ನು ಶೇಖರ್ ಎಂದು ಗುರುತಿಸಲಾಗಿದ್ದು, ಈತ ತನ್ನ ಸಹೋದರ ರಾಜೇಶ್ ಕುಟುಂಬ ಮತ್ತು ತಾಯಿಯೊಂದಿಗೆ ಚೆನ್ನೈನ ಪೂನಮಲ್ಲಿ ಎಂಬ ಪ್ರದೇಶದಲ್ಲಿ ವಾಸಿಸುತ್ತಿದ್ದನು. ಎರಡು ವರ್ಷದ ಹಿಂದೆ ಕೌಟುಂಬಿಕ ಕಲಹ ಹಿನ್ನೆಲೆ ಶೇಖರ್‌ನನ್ನು ಪತ್ನಿ ತೊರೆದಿದ್ದರು. ಇದನ್ನೂ ಓದಿ: ಶ್ರೀಲಂಕಾದೊಂದಿಗೆ ತನ್ನ ವಿನಿಮಯಕ್ಕೆ ತೊಂದರೆ ಮಾಡುವುದನ್ನು ನಿಲ್ಲಿಸಿ – ಭಾರತಕ್ಕೆ ಚೀನಾ ಮನವಿ

    ಇತ್ತೀಚೆಗಷ್ಟೇ ಚಿನ್ನಾಭರಣ ವಾಪಸ್ ಪಡೆಯಲು ಮನೆಗೆ ಬಂದಿದ್ದ ವೇಳೆ ಚಿನ್ನಾಭರಣ ಕಾಣೆಯಾಗಿದ್ದನ್ನು ಕಂಡು ಶೇಖರ್ ಪತ್ನಿ ಶಾಕ್ ಆಗಿದ್ದಾರೆ. ನಂತರ ಈ ಕುರಿತಂತೆ ಆಕೆ ಪೊಲೀಸರಿಗೆ ದೂರು ನೀಡಿದ್ದು, ತನಿಖೆ ನಡೆಸಿದಾಗ ಶೇಖರ್ ತನ್ನ ಪತ್ನಿಯ 300 ಸಾವರಿನ್ ಚಿನ್ನಾಭರಣ, ತಾಯಿಗೆ ಸೇರಿದ 200 ಸಾವರಿನ್ ಚಿನ್ನಾಭರಣ ಮತ್ತು 50 ಸಾವರಿನ್ ಮೌಲ್ಯದ ಚಿನ್ನಾಭರಣಗಳನ್ನು ಕದ್ದಿರುವುದು ಪತ್ತೆಯಾಗಿದೆ.

    ಈ ಎಲ್ಲಾ ಚಿನ್ನಾಭರಣವನ್ನು 22 ವರ್ಷದ ಸ್ವಾತಿ ಎಂಬ ಯುವತಿಗೆ ಶೇಖರ್ ಉಡುಗೊರೆಯಾಗಿ ನೀಡಿದ್ದು, ಆಕೆಯೊಂದಿಗೆ ಸಂಬಂಧ ಇಟ್ಟುಕೊಂಡಿರುವುದು ಬೆಳಕಿಗೆ ಬಂದಿದೆ. ಅಲ್ಲದೇ ಶೇಖರ್ ಪ್ರೇಯಸಿಗೆ ಕಾರನ್ನು ಖರೀದಿಸಿ ಕೂಡ ನೀಡಿದ್ದಾರೆ. ಇದೀಗ ಪೊಲೀಸರು ಅದನ್ನು ವಶಪಡಿಸಿಕೊಂಡು, ವ್ಯಕ್ತಿಯನ್ನು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಪ್ರಧಾನಿ ಮೋದಿ ಅವರ ತಿರಂಗಾ ಡಿಪಿ ಕರೆಯನ್ನು ಆರ್‌ಎಸ್‌ಎಸ್‌ ತಿರಸ್ಕರಿಸಿದೆ – ಬಿಜೆಪಿ ಕಾಲೆಳೆದ ಕಾಂಗ್ರೆಸ್‌

    Live Tv
    [brid partner=56869869 player=32851 video=960834 autoplay=true]

    Live Tv
    [brid partner=56869869 player=32851 video=960834 autoplay=true]

  • ಆಭರಣ ಅಂಗಡಿಗೆ ನುಗ್ಗಿ ದರೋಡೆಗೆ ಯತ್ನ – ಕಳ್ಳನ ಲಾಂಗ್ ಕಿತ್ತು ಕಳುಹಿಸಿದ ಮಾಲೀಕ

    ಆಭರಣ ಅಂಗಡಿಗೆ ನುಗ್ಗಿ ದರೋಡೆಗೆ ಯತ್ನ – ಕಳ್ಳನ ಲಾಂಗ್ ಕಿತ್ತು ಕಳುಹಿಸಿದ ಮಾಲೀಕ

    ಬೆಂಗಳೂರು: ಒಡವೆ ಅಂಗಡಿಗೆ ನುಗ್ಗಿ ಲಾಂಗ್ ತೋರಿಸಿ ದರೋಡೆಗೆ ಯತ್ನಿಸಿದ ಕಳ್ಳನ ಲಾಂಗ್‍ನನ್ನು ಮಾಲೀಕನೇ ಕಿತ್ತು ಕಳುಹಿಸಿರುವ ಘಟನೆ ಬೆಂಗಳೂರಿನ ಪುಲಕೇಶಿ ನಗರದಲ್ಲಿ ನಡೆದಿದೆ.

    ದ್ವಿಚಕ್ರ ವಾಹನದಲ್ಲಿ ಬಂದ ಆರೋಪಿ ಲಾಂಗ್ ತೆಗೆದುಕೊಂಡು ನೇರವಾಗಿ ಅಂಗಡಿಗೆ ನುಗ್ಗಿ, ಮಾಲೀಕನಿಗೆ ಹಣ ನೀಡುವಂತೆ ಬೆದರಿಕೆಯೊಡ್ಡಿದ್ದಾನೆ. ಇದರಿಂದ ಆತಂಕಗೊಂಡ ಮಾಲೀಕ ಹಣ ನೀಡಲು ಮುಂದಾಗಿದ್ದಾನೆ. ಈ ವೇಳೆ ಹಣದ ಪೆಟ್ಟಿಗೆಗೆ ಆರೋಪಿಯೇ ಕೈ ಹಾಕಿ ಹಣ ದೋಚಲು ಯತ್ನಿಸಿದಾಗ, ಆತನ ಕೈಯಲ್ಲಿದ್ದ ಲಾಂಗ್‍ನನ್ನು ಅಂಗಡಿ ಮಾಲೀಕ ಗಟ್ಟಿಯಾಗಿ ಹಿಡಿದಿಟ್ಟುಕೊಂಡು ಕಿರುಚಾಡಲು ಪ್ರಾರಂಭಿಸಿದ್ದಾನೆ. ಇದನ್ನೂ ಓದಿ:  ಗಂಡನ ಜೊತೆ ಜಗಳ – ಸಾಯ್ತೀನಿ ಅಂತ ಕೆರೆಯಲ್ಲಿ ಕೂತ ಮಹಿಳೆ

    ಈ ವೇಳೆ ಸ್ಥಳದಲ್ಲಿಯೇ ನಿಂತಿದ್ದ ಪೌರ ಕಾರ್ಮಿಕ ಮಹಿಳೆ ಆರೋಪಿ ಕೈಯಲ್ಲಿ ಲಾಂಗ್ ಇದ್ದರೂ, ಹೆದರದೇ ಪೊರಕೆಯಲ್ಲಿ ಹೊಡೆಯಲು ಮುಂದಾಗಿದ್ದಾಳೆ. ಇದರಿಂದ ಭಯಭೀತನಾಗಿ ಆರೋಪಿ ವಾಹನದಲ್ಲಿ ಪರಾರಿಯಾಗಿದ್ದಾನೆ.

    ಸದ್ಯ ಈ ದೃಶ್ಯ ಅಂಗಡಿಯಲ್ಲಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಆರೋಪಿಯನ್ನು ಸಿದ್ಧಿಕ್ ಎಂದು ಗುರುತಿಸಲಾಗಿದೆ. ಇದೀಗ ಪುಲಕೇಶಿ ನಗರದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಇದನ್ನೂ ಓದಿ: ನನ್ನ ಶಿಕ್ಷಣಕ್ಕೆ ಸಹಾಯ ಮಾಡಿ – ಸಿಎಂ ನಿತೀಶ್ ಕುಮಾರ್‌ಗೆ ಸಾರ್ವಜನಿಕವಾಗಿ ಬಾಲಕನ ಮನವಿ