Tag: jewellery

  • ಕಳ್ಳನಂತೆ ಬಂದು ದೊಡ್ಡಮ್ಮನ ಮೇಲೆ ಹಲ್ಲೆ ಮಾಡಿ ಚಿನ್ನಾಭರಣ ದರೋಡೆ – ಆರೋಪಿ ಅರೆಸ್ಟ್‌

    ಕಳ್ಳನಂತೆ ಬಂದು ದೊಡ್ಡಮ್ಮನ ಮೇಲೆ ಹಲ್ಲೆ ಮಾಡಿ ಚಿನ್ನಾಭರಣ ದರೋಡೆ – ಆರೋಪಿ ಅರೆಸ್ಟ್‌

    – ತನಗೇನು ಗೊತ್ತಿಲ್ಲದಂತೆ ಘಟನಾ ಸ್ಥಳದಲ್ಲೇ ಇದ್ದ ದುಷ್ಟ

    ದಾವಣಗೆರೆ: ಇತ್ತೀಚೆಗೆ ಚನ್ನಗಿರಿ (Channagiri) ತಾಲೂಕಿನ ಕಾರಿಗನೂರು ಕ್ರಾಸ್ ಬಳಿ ಮಹಿಳೆಯ ಮೇಲೆ ಹಲ್ಲೆ ಮಾಡಿ ಚಿನ್ನಾಭರಣ (Jewellery) ದರೋಡೆ ಮಾಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿ ಹಲ್ಲೆಗೊಳಗಾದ ಮಹಿಳೆಯ ತಂಗಿ ಮಗ ಎಂಬುದು ಗೊತ್ತಾಗಿ ಕುಟುಂಬಸ್ಥರು ಶಾಕ್‌ ಆಗಿದ್ದಾರೆ.

    ಬಂಧಿತನನ್ನು ನವೀನ್ ಎಂದು ಗುರುತಿಸಲಾಗಿದೆ. ಅ.3ರಂದು ವೀರಮ್ಮ ಅವರ ಮೇಲೆ ಹಲ್ಲೆ ಮಾಡಿ, ಪ್ರಜ್ಞಾಹೀನ ಸ್ಥಿತಿಗೆ ತಲುಪಿದಾಗ ಆರೋಪಿ ದರೋಡೆ ಮಾಡಿದ್ದ. ಈತ ದುಶ್ಚಟಗಳಿಗೆ ದಾಸನಾಗಿದ್ದ. ಸಾಕಷ್ಟು ಸಾಲ ಮಾಡಿಕೊಂಡಿದ್ದ, ಇದರಿಂದಾಗಿ ಸಾಲಗಾರರ ಕಾಟ ಜಾಸ್ತಿಯಾಗಿತ್ತು. ಅದಕ್ಕಾಗಿ ಹಣ ಹೊಂದಿಸಲು ಈ ರೀತಿ ಸಂಚು ರೂಪಿಸಿದ್ದ. ಬಳಿಕ ತನಗೆ ಏನು ತಿಳಿಯದಂತೆ ಘಟನೆ ನಡೆದ ಸ್ಥಳದಲ್ಲೇ ಇದ್ದ ಎಂದು ತಿಳಿದು ಬಂದಿದೆ. ಇದನ್ನೂ ಓದಿ: ಬೆಂಗಳೂರು | ಮನೆಗೆ ನುಗ್ಗಿ ಗ್ಯಾಂಗ್‌ ರೇಪ್‌ ಮಾಡಿದ್ದ ಕಾಮುಕರ ಬಂಧನ

    ಘಟನೆಯಲ್ಲಿ ವೀರಮ್ಮ ಗಂಭೀರವಾಗಿ ಗಾಯಗೊಂಡಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಮಹಿಳೆಯ ಪತಿ ಉಮಾಪತಿ ಈ ಸಂಬಂಧ ಹದಡಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ದೂರಿನ ಅನ್ವಯ ಆರೋಪಿಯನ್ನು ಪೊಲೀಸರು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಬೆಂಗಳೂರಲ್ಲಿ ತಿಗಣೆ ಔಷಧಿ ವಾಸನೆಗೆ ಬಿಟೆಕ್ ವಿದ್ಯಾರ್ಥಿ ಬಲಿ

  • ದಾವಣಗೆರೆ | ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಕಳ್ಳತನ – ಮೂವರು ಅಂತರರಾಜ್ಯ ಕಳ್ಳರು ಅರೆಸ್ಟ್

    ದಾವಣಗೆರೆ | ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಕಳ್ಳತನ – ಮೂವರು ಅಂತರರಾಜ್ಯ ಕಳ್ಳರು ಅರೆಸ್ಟ್

    ದಾವಣಗೆರೆ: ಮನೆ ಬೀಗ ಮುರಿದು ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ (Jewellery) ಹಾಗೂ ನಗದು ದೋಚಿದ್ದ ಮೂವರು ಕುಖ್ಯಾತ ಅಂತರರಾಜ್ಯ ಕಳ್ಳರನ್ನು ವಿದ್ಯಾನಗರ ಪೊಲೀಸರು ಬಂಧಿಸಿದ್ದಾರೆ.

    ಬಂಧಿತ ಆರೋಪಿಗಳನ್ನು ರಾಜಸ್ಥಾನ (Rajasthan) ಮೂಲದ ಶ್ಯಾಮ್ ಸಿಂಗ್ (28) ಕವರ್ ಪಾಲ್(24) ಪ್ರತಾಪ್ ಸಿಂಗ್ (33) ಎಂದು ಗುರುತಿಸಲಾಗಿದೆ. ಆರೋಪಿಗಳಿಂದ ಸುಮಾರು 15.37 ಲಕ್ಷ ರೂ. ಮೌಲ್ಯದ ಚಿನ್ನಾಭರಣ, ಬೆಳ್ಳಿ ಆಭರಣಗಳನ್ನು ಜಪ್ತಿ ಮಾಡಿದ್ದಾರೆ.

    ಆರೋಪಿಗಳು ಆ.30ರಂದು‌ ವಿದ್ಯಾನಗರ ನಿವಾಸಿ ರಂಗನಾಥ ಎಂಬವರ ಮನೆಯ ಇಂಟರ್ ಲಾಕ್ ಒಡೆದು ನುಗ್ಗಿ ಚಿನ್ನಾಭರಣ, ಬೆಳ್ಳಿ ಆಭರಣ ದೋಚಿ ಪರಾರಿಯಾಗಿದ್ದರು. ರಂಗನಾಥ ಅವರು ಸೆ.1 ರಂದು ಬೆಂಗಳೂರಿಂದ ಮನೆಗೆ ವಾಪಸ್ ಆದ ವೇಳೆ ಪ್ರಕರಣ ಬೆಳಕಿಗೆ ಬಂದಿತ್ತು. ಈ ಸಂಬಂಧ ವಿದ್ಯಾನಗರ ಪೊಲೀಸ್ ಠಾಣೆಗೆ ಅವರು ದೂರು ನೀಡಿದ್ದರು. ಇದನ್ನೂ ಓದಿ: ಕೆಂಪು ಕೋಟೆಯಲ್ಲಿ 1.5 ಕೋಟಿ ಮೌಲ್ಯದ ಕಲಶ ಕದ್ದ ಕಳ್ಳ ಅರೆಸ್ಟ್

    ಆರೋಪಿಗಳ ಪತ್ತೆಗೆ ವಿದ್ಯಾನಗರ ಠಾಣೆ ಸಿಪಿಐ ಶಿಲ್ಪಾ ವೈ.ಎಸ್ ಅವರ ನೇತೃತ್ವದಲ್ಲಿ ವಿಶೇಷ ತಂಡ ರಚನೆ ಮಾಡಲಾಗಿತ್ತು. ಗುಜರಾತ್‍ನ ಸೂರತ್ ಸಿಟಿ ಸಾರೋಲಿ ಪೊಲೀಸ್ ಠಾಣೆಯ ಪೊಲೀಸರ ಸಹಕಾರದಿಂದ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ಬಂಧಿತರಿಂದ 12.97 ಲಕ್ಷ ರೂ. ಮೌಲ್ಯದ 162.150 ಗ್ರಾಂ ತೂಕದ ಬಂಗಾರದ ಆಭರಣಗಳು, 1.08 ಲಕ್ಷ ಮೌಲ್ಯದ 1350 ಗ್ರಾಂ ತೂಕದ ಬೆಳ್ಳಿ ವಸ್ತುಗಳು, 95 ನಗದು, 34 ಸಾವಿರ ರೂ. ಬೆಲೆಯ 6 ಮೊಬೈಲ್, 3 ಸಾವಿರ ಬೆಲೆಯ ಎರಡು ವಾಚ್‍ಗಳನ್ನು ಜಪ್ತಿ ಮಾಡಲಾಗಿದೆ.

    ಆರೋಪಿಗಳ ವಿರುದ್ಧ ದಾವಣಗೆರೆ ಜಿಲ್ಲೆಯ ಹರಿಹರ ನಗರ ಠಾಣೆ, ಹಳಿಯಾಳ ಠಾಣೆ, ಧಾರವಾಡ, ತುಮಕೂರು ಬಡಾವಣೆ, ತಿಪಟೂರು, ಮದ್ಯಪ್ರದೇಶದ ಭೂಪಾಲ್ ಸೇರಿದಂತೆ ವಿವಿಧ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದೆ. ಈ ಬಗ್ಗೆ ತನಿಖೆ ವೇಳೆ ಗೊತ್ತಾಗಿದೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಕಾರ್ ಡ್ರೈವರ್‌ನ ಭೀಕರ ಕೊಲೆ – ಸ್ನೇಹಿತರಿಂದಲೇ ಹತ್ಯೆ ಶಂಕೆ

  • ಬೆಂಗಳೂರಲ್ಲಿ ಚಿನ್ನದಂಗಡಿ ದರೋಡೆ ಕೇಸ್‌ – ಟಾಯ್‌ ಗನ್ ತೋರಿಸಿ ಚಿನ್ನ ರಾಬರಿ

    ಬೆಂಗಳೂರಲ್ಲಿ ಚಿನ್ನದಂಗಡಿ ದರೋಡೆ ಕೇಸ್‌ – ಟಾಯ್‌ ಗನ್ ತೋರಿಸಿ ಚಿನ್ನ ರಾಬರಿ

    ಬೆಂಗಳೂರು: ಟಾಯ್‌ ಗನ್‌ ತೋರಿಸಿ ಬೆಂಗಳೂರಿನ ಮಾದನಾಯಕನಹಳ್ಳಿಯಲ್ಲಿ ಚಿನ್ನದಂಗಡಿ ದರೋಡೆ ಮಾಡಿರುವುದು ಬೆಳಕಿಗೆ ಬಂದಿದೆ. ಪರಿಚಿತರೇ ಈ ಕೃತ್ಯ ಎಸಗಿರುವ ಶಂಕೆ ವ್ಯಕ್ತವಾಗಿದೆ.

    ಮಾಚೋಹಳ್ಳಿ ಗೇಟ್ ಬಳಿ ಚಿನ್ನದಂಗಡಿ ಕಳ್ಳತನಕ್ಕೆ ಬಳಸಿದ್ದು, ಟಾಯ್ ಗನ್ ಅನ್ನೋದು ಗೊತ್ತಾಗಿದೆ. ಕಳೆದ ಗುರುವಾರ ಜುವೆಲ್ಲರಿ ಶಾಪ್ ಕ್ಲೋಸ್ ಮಾಡುವ ಹೊತ್ತಲ್ಲಿ ಏಕಾಏಕಿ ಕೈಯಲ್ಲಿ ಗನ್ ಹಿಡಿದು‌ ಮೂವರು ನುಗ್ಗಿದ್ದರು. ಶಾಪ್ ಒಳಗೆ ಬಂದಿದ್ದ ಮೂವರು ಅಂಗಡಿಯಲ್ಲಿದ್ದ ಸುಮಾರು 180 ಗ್ರಾಂ ನಷ್ಟು ಚಿನ್ನಾಭರಣ ದೋಚಿ ಪರಾರಿಯಾಗಿದ್ದರಿ. ಇದನ್ನೂ ಓದಿ: ಇನ್ಸ್ಟಾಗ್ರಾಂ ಲವ್, ಸೆಕ್ಸ್, ದೋಖಾ ಆರೋಪ – ಡೆತ್‌ ನೋಟ್ ಬರೆದಿಟ್ಟು ಮಹಿಳೆ ಆತ್ಮಹತ್ಯೆ

    ಮಾಲೀಕ ಮತ್ತು ಸಿಬ್ಬಂದಿ ತಡೆಯೋಕೆ ಯತ್ನಿಸಿದ್ದರೂ ಅದು ಸಾಧ್ಯವಾಗಿರಲಿಲ್ಲ. ವಿಚಾರ ತಿಳಿದು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ ಪೊಲೀಸರಿಗೆ ಆರೋಪಿಗಳು ಕೈಯಲ್ಲಿ ಹಿಡಿದು ಬಂದಿದ್ದ ಗನ್‌ಗಳು ನಕಲಿಯಾಗಿವೆ ಅನ್ನೋದು ಗೊತ್ತಾಗಿದೆ. ಅಷ್ಟೇ ಅಲ್ಲ, ಆರೋಪಿಗಳು ಪರಿಚಿತರು ಎನ್ನುವ ಶಂಕೆ ವ್ಯಕ್ತವಾಗಿದೆ.

    ಪೊಲೀಸರ ತನಿಖೆಯಲ್ಲಿ ಆರೋಪಿಗಳ ಬಗ್ಗೆ ಸುಳಿವು ಸಿಕ್ಕಿದ್ದು, ಅದಷ್ಟು ಬೇಗ ಬಂಧಿಸುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ:  ರಾಯಚೂರಿನಲ್ಲಿ ಮಳೆಯಬ್ಬರ – ಪಾಯ ಕುಸಿದು ಪಕ್ಕಕ್ಕೆ ವಾಲಿದ 4 ಅಂತಸ್ತಿನ ಕಟ್ಟಡ

  • ಹಾಸನ | ಹೊಳೆನರಸೀಪುರದಲ್ಲಿ ನಾಲ್ವರು ಖತರ್ನಾಕ್ ಕಳ್ಳಿಯರ ಬಂಧನ

    ಹಾಸನ | ಹೊಳೆನರಸೀಪುರದಲ್ಲಿ ನಾಲ್ವರು ಖತರ್ನಾಕ್ ಕಳ್ಳಿಯರ ಬಂಧನ

    – ಚಿನ್ನ ಕದ್ದ ಚೋರಿಯರು ಸಿಕ್ಕಿಬಿದ್ದದ್ದು ಹೇಗೆ?
    – 6.38 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಸೀಜ್‌

    ಹಾಸನ: ಜಿಲ್ಲೆಯ ಹೊಳೆನರಸೀಪುರ ನಗರ ಠಾಣೆ ಪೊಲೀಸರು (Holenarasipur City Police) ಕಾರ್ಯಾಚರಣೆ ನಡೆಸಿ ನಾಲ್ವರು ಖತರ್ನಾಕ್ ಕಳ್ಳಿಯರನ್ನು ಬಂಧಿಸಿ 6.38 ಲಕ್ಷ ರೂ. ಮೌಲ್ಯದ ಚಿನ್ನಾಭರಣ (Jewellery) ವಶಪಡಿಸಿಕೊಂಡಿದ್ದಾರೆ.

    ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆ, ಕುಪ್ಪಂ ಗ್ರಾಮದ ಶಶಿ (35), ಮಾಧವಿ (40), ಅಕಿಲ (30) ಹಾಗೂ ವಿದ್ಯಾ (29) ಬಂಧಿತ ಕಳ್ಳಿಯರು. ಇದನ್ನೂ ಓದಿ: ಹನಿಮೂನ್‌ಗೆ ತೆರಳಿದ್ದ ದಂಪತಿ ನಾಪತ್ತೆ ಕೇಸ್‌ – ಮೂವರು ಪುರುಷರೊಟ್ಟಿಗೆ ದಂಪತಿ ನೋಡಿದ್ದೆ: ಸ್ಫೋಟಕ ಸಂಗತಿ ಬಿಚ್ಚಿಟ್ಟ ಗೈಡ್‌

    ನಾಲ್ವರು ಒಂದೇ ಗ್ರಾಮದವರಾಗಿದ್ದು ಕಳ್ಳತನವನ್ನೇ ಫ್ಯಾಷನ್‌ ಮಾಡಿಕೊಂಡಿದ್ದರು. ಬಂಧಿತ ಶಶಿ ಹಾಗೂ ವಿದ್ಯಾ ವಿರುದ್ಧ ಬೆಂಗಳೂರಿನ ಪೊಲೀಸ್ ಠಾಣೆಯಲ್ಲಿ (Bengaluru Police Station) ಕಳ್ಳತನ ಪ್ರಕರಣಗಳು ದಾಖಲಾಗಿವೆ. ಮಾಧವಿ ಹಾಗೂ ಅಕಿಲ ಮೊದಲ ಪ್ರಕರಣದಲ್ಲಿ ಬಂಧನವಾಗಿದ್ದಾರೆ. ಶಶಿ ಗಾರ್ಮೆಂಟ್ಸ್ ಉದ್ಯೋಗಿಯಾಗಿದ್ದು ಉಳಿದ ಮೂವರು ಕ್ರಷರ್‌ಗಳಲ್ಲಿ ಕಲ್ಲು ಒಡೆಯುವ ಕೆಲಸ ಮಾಡಿಕೊಂಡಿದ್ದಾರೆ.

    ಕೆಎಸ್‌‍ಆರ್‌ಟಿಸಿ ಬಸ್‌‍ಗಳಲ್ಲಿ ಪ್ರಯಾಣಿಸುತ್ತಿದ್ದ ಅಮಾಯಕ ಮಹಿಳೆಯರೇ ಇವರೇ ಟಾರ್ಗೆಟ್‌ ಆಗಿದ್ದು ನೂಕುನುಗ್ಗಲಿನಲ್ಲಿ ಮಹಿಳೆಯರು ಕೆಎಸ್‌‍ಆರ್‌ಟಿಸಿ ಬಸ್‌‍ ಹತ್ತುವಾಗ ಅವರ ಮೈ ಮೇಲಿನ ಚಿನ್ನದ ಒಡವೆ, ವ್ಯಾನಿಟಿ ಬ್ಯಾಗ್‌ಗಳಿದ್ದ ಚಿನ್ನಾಭರಣಗಳನ್ನ ದೋಚುತ್ತಿದ್ದರು. ತಾವು ಸಹ ಬಸ್‌‍ ಹತ್ತುವರಂತೆ ನಟನೆ ಮಾಡುತ್ತಿದ್ದು ಯಾರಿಗೂ ಸಂಶಯ ಬರುತ್ತಿರಲಿಲ್ಲ.‌ ಇದನ್ನೂ ಓದಿ: ಎಲ್ರೂ ಬಂದು ಹೇಗಾಯ್ತು ಹುಷಾರಾಗಿ ಅಂತಾರೆ, ಪರಿಹಾರ ಮಾತ್ರ ಇಲ್ಲ: ಆರ್‌ಸಿಬಿ ಫ್ಯಾನ್ಸ್ ನೋವಿನ ಮಾತು

    ಸದ್ಯ ಬಂಧಿತರಿಂದ 35 ಗ್ರಾಂ ತೂಕದ ಚಿನ್ನದ ಸರ, 22 ಗ್ರಾಂ ತೂಕದ ನೆಕ್ಲೆಸ್‌, 5 ಗ್ರಾಂ ತೂಕದ ಬೆಳ್ಳಿ ಗಣಪತಿ ಡಾಲರ್‌ ಹಾಗೂ 29 ಗ್ರಾಂ ತೂಕದ ಚಿನ್ನದ ಸರ ವಶಪಡಿಸಿಕೊಳ್ಳಲಾಗಿದೆ ಎಂದು ಎಸ್ಪಿ ಮಹಮದ್ ಸುಜೇತಾ ಮಾಹಿತಿ ನೀಡಿದರು.

  • ಇಡಿ ಭರ್ಜರಿ ಬೇಟೆ – 13 ಕಡೆ ದಾಳಿ, 32 ಕೋಟಿ ಮೌಲ್ಯದ ವಜ್ರಖಚಿತ ಆಭರಣ, ನಗದು ಜಪ್ತಿ

    ಇಡಿ ಭರ್ಜರಿ ಬೇಟೆ – 13 ಕಡೆ ದಾಳಿ, 32 ಕೋಟಿ ಮೌಲ್ಯದ ವಜ್ರಖಚಿತ ಆಭರಣ, ನಗದು ಜಪ್ತಿ

    ಮುಂಬೈ: ಹೈದರಾಬಾದ್‌ ಹಾಗೂ ಮುಂಬೈನ (Mumbai and Hyderabad) 13 ಸ್ಥಳಗಳಲ್ಲಿ ಎರಡು ದಿನಗಳ ಕಾಲ ನಡೆಸಿದ ದಾಳಿಯಲ್ಲಿ ಒಟ್ಟು 31 ಕೋಟಿ ರೂ. ಮೌಲ್ಯದ ಚಿನ್ನಾಭರಣ ಮತ್ತು ನಗದನ್ನು ಜಾರಿ ನಿರ್ದೇಶನಾಲಯ (Enforcement Directorate) ಜಪ್ತಿ ಮಾಡಿದೆ.

    2009ರಿಂದ ವಸಾಯಿ ವಿರಾರ್ ಮುನ್ಸಿಪಲ್ ಕಾರ್ಪೊರೇಷನ್‌ (VVMC) ವ್ಯಾಪ್ತಿಯ ಸರ್ಕಾರಿ ಮತ್ತು ಖಾಸಗಿ ಭೂಮಿಯಲ್ಲಿ ಅಕ್ರಮವಾಗಿ ಕಟ್ಟಡಗಳನ್ನ ನಿರ್ಮಿಸಿ ಭಾರೀ ಅಕ್ರಮ ನಡೆಸಿರುವ ಆರೋಪದ ಮೇಲೆ ಇಡಿ ದಾಳಿ ನಡೆಸಿತ್ತು. ಈ ವೇಳೆ 9.04 ಕೋಟಿ ರೂ. ನಗದು ಮತ್ತು 23.25 ಕೋಟಿ ರೂ. ಮೌಲ್ಯದ ವಜ್ರಖಚಿತ ಆಭರಣಳು ಹಾಗೂ ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದೆ. ವಿವಿಎಂಸಿಯ ಉಪ ನಿರ್ದೇಶಕ (ಪಟ್ಟಣ ಯೋಜನೆ) ವೈ.ಎಸ್ ರೆಡ್ಡಿ ಅವರ ಮನೆಯಿಂದಲೇ ಬಹುಪಾಲು ಆಭರಣ, ನಗದು ಜಪ್ತಿಯಾಗಿದೆ ಎಂದು ವರದಿಗಳು ತಿಳಿಸಿವೆ.

    ವಸೈ ವಿರಾರ್ ನಗರದಲ್ಲಿ ʻಕೊಳಚೆನೀರಿನ ಸಂಸ್ಕರಣಾ ಘಟಕʼ ಮತ್ತು ʻಡಂಪಿಂಗ್ ಗ್ರೌಂಡ್‌ʼ (Dumping Ground) ನಿರ್ಮಾಣಕ್ಕಾಗಿ ಭೂಮಿಯನ್ನ ಕಾಯ್ದಿರಿಸಲಾಗಿತ್ತು. ಆದ್ರೆ ಕಾಲಕ್ರಮೇಣ 41 ಕಟ್ಟಡಗಳನ್ನ ಅಕ್ರಮವಾಗಿ ನಿರ್ಮಿಸಲಾಗಿದೆ ಎಂದು ಜಾರಿ ನಿರ್ದೇಶನಾಲಯ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

    2009ರಿಂದ ವಿವಿಧ ವಿವಿಎಂಸಿ ಅಧಿಕಾರಿಗಳ ಸಹಕಾರದೊಂದಿಗೆ ಈ ಪ್ರದೇಶದಲ್ಲಿ ಅಕ್ರಮ ಕಟ್ಟಡಗಳನ್ನು ನಿರ್ಮಿಸಲು ಭಾರೀ ಅಕ್ರಮ ನಡೆದಿದೆ. ದಾಳಿ ಸಂದರ್ಭದಲ್ಲಿ ಇದಕ್ಕೆ ಪೂರಕವಾದ ದಾಖಲೆಗಳು ಪತ್ತೆಯಾಗಿವೆ. ಆರೋಪಿ ಬಿಲ್ಡರ್‌ಗಳು ಮತ್ತು ಡೆವಲಪರ್‌ಗಳು ಅಕ್ರಮ ಕಟ್ಟಡಗಳನ್ನು ನಿರ್ಮಿಸುವ ಮೂಲಕ ಸಾರ್ವಜನಿಕರನ್ನು ವಂಚಿಸಿದ್ದಾರೆ. ನಂತರ ಸರ್ಕಾರಿ ದಾಖಲೆಗಳನ್ನು ನಕಲು ಮಾಡಿ ಮನೆಗಳನ್ನು ಜನರಿಗೆ ಮಾರಾಟ ಮಾಡಿದ್ದಾರೆ. ಅಪಾರ್ಟ್ಮೆಂಟ್‌ಗಳಲ್ಲಿ ಫ್ಲಾಟ್‌ ಖರೀದಿಸುವಂತೆ ಜನರನ್ನ ದಾರಿ ತಪ್ಪಿಸಿದ್ದಾರೆ ಎಂದು ಇಡಿ ತನಿಖಾ ವರದಿಯಲ್ಲಿ ತಿಳಿಸಿದೆ.

    ಈ ಕುರಿತು ಬಿಲ್ಡರ್‌ಗಳು, ಸ್ಥಳೀಯ ಸಹಾಯಕರು ಮತ್ತು ಇತರರ ವಿರುದ್ಧ ಮೀರಾ ಭಯಾಂದರ್ ಪೊಲೀಸ್ ಆಯುಕ್ತರು ದಾಖಲಿಸಿದ ಬಹು ಎಫ್‌ಐಆರ್‌ಗಳ ಆಧಾರದ ಮೇಲೆ ಜಾರಿ ನಿರ್ದೇಶನಾಲಯ ತನಿಖೆ ಪ್ರಾರಂಭಿಸಿದೆ.

    2 ದಿನ 13 ಸ್ಥಳಗಳಲ್ಲಿ ದಾಳಿ:
    ಮುಂಬೈ ವಲಯ ಕಚೇರಿಯ ಜಾರಿ ನಿರ್ದೇಶನಾಲಯವು ಇದೇ ಮೇ 14, 15ರಂದು ಮುಂಬೈ ಮತ್ತು ಹೈದರಾಬಾದ್‌ನಾದ್ಯಂತ 13 ವಿಭಿನ್ನ ಸ್ಥಳಗಳಲ್ಲಿ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ದಾಳಿ ನಡೆಸಿತ್ತು. ಶೋಧ ಕಾರ್ಯಾಚರಣೆಯಲ್ಲಿ 9.04 ಕೋಟಿ ರೂ. (ಅಂದಾಜು) ನಗದು ಮತ್ತು 23.25 ಕೋಟಿ ರೂ. ಮೌಲ್ಯದ ವಜ್ರಖಚಿತ ಆಭರಣ, ಬೆಳ್ಳಿ ಹಾಗೂ ಹಲವು ಮಹತ್ವದ ದಾಖಲೆಗಳನ್ನು ವಶಕ್ಕೆ ಪಡೆದುಕೊಂಡಿದೆ.

  • ಮೈಸೂರು | ಮನೆ ಹಿಂಬಾಗಿಲಿನ ಬೀಗ ಮುರಿದು 22 ಲಕ್ಷ ಮೌಲ್ಯದ ಚಿನ್ನ, ಬೆಳ್ಳಿ, ನಗದು ಕಳ್ಳತನ

    ಮೈಸೂರು | ಮನೆ ಹಿಂಬಾಗಿಲಿನ ಬೀಗ ಮುರಿದು 22 ಲಕ್ಷ ಮೌಲ್ಯದ ಚಿನ್ನ, ಬೆಳ್ಳಿ, ನಗದು ಕಳ್ಳತನ

    ಮೈಸೂರು: ಮನೆಯ ಹಿಂಬಾಗಿಲಿನ ಬೀಗ ಮುರಿದು ಸುಮಾರು 22 ಲಕ್ಷ ರೂ. ಮೌಲ್ಯದ ಚಿನ್ನ, ಬೆಳ್ಳಿ, ನಗದು ಕಳ್ಳತನ ಮಾಡಿರುವ ಘಟನೆ ಮೈಸೂರು (Mysuru) ತಾಲೂಕಿನ ನಾಗವಾಲದಲ್ಲಿ ನಡೆದಿದೆ.

    ನಾಗವಾಲದ (Nagwala) ನಿವಾಸಿ ರೇಣುಕಾ ಎಂಬವರ ಮನೆಯಲ್ಲಿ ಕಳ್ಳತನ ನಡೆದಿದೆ. ಮನೆಯವರು ಮಹದೇಶ್ವರ ಬೆಟ್ಟಕ್ಕೆ ಹೋಗಿದ್ದ ವೇಳೆ ಹಿಂಬಾಗಿಲಿನ ಬೀಗ ಮುರಿದು ಕಳ್ಳತನ ಮಾಡಲಾಗಿದೆ. ಇದನ್ನೂ ಓದಿ: ಸುಶ್ಮಿತಾ ಸೇನ್ ಮಾಜಿ ಅತ್ತಿಗೆಗೆ ಆರ್ಥಿಕ ಸಂಕಷ್ಟ- ಆನ್‌ಲೈನ್‌ನಲ್ಲಿ ನಟಿ ಸೀರೆ ಮಾರಾಟ

    3,26,700 ರೂ., ನಗದು 276 ಗ್ರಾಂ ಚಿನ್ನ, 1,350 ಗ್ರಾಂ ಬೆಳ್ಳಿ ಸೇರಿ ಸುಮಾರು 22 ಲಕ್ಷ ಮೌಲ್ಯದ ವಸ್ತುಗಳನ್ನ ಖದೀಮರು ದೋಚಿದ್ದಾರೆ. ಸದ್ಯ ಇಲವಾಲ ಪೊಲೀಸರು (Ilavala Police) ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ಜಾತಿಗಣತಿ ವರದಿ ಸೀಲ್ ಓಪನ್… ಕ್ಯಾಬಿನೆಟ್‌ನಲ್ಲಿ ಮಂಡನೆ; ಮುಂದಿನ‌ ಕ್ಯಾಬಿನೆಟ್‌ಗೆ ಕ್ಲೈಮ್ಯಾಕ್ಸ್..!

  • ಹಬ್ಬದ ಸಂಭ್ರಮದಲ್ಲಿ ಸೀರೆ ಸ್ಟೈಲಿಂಗ್‌ಗೆ ಸಿಂಪಲ್ ಟಿಪ್ಸ್

    ಹಬ್ಬದ ಸಂಭ್ರಮದಲ್ಲಿ ಸೀರೆ ಸ್ಟೈಲಿಂಗ್‌ಗೆ ಸಿಂಪಲ್ ಟಿಪ್ಸ್

    ಯುಗಾದಿ ಹಬ್ಬದ (Ugadi Festival) ಸಂಭ್ರಮಕ್ಕೆ ಸಾಥ್ ನೀಡುವ ರೇಷ್ಮೆ ಸೀರೆಗಳಲ್ಲಿ ನಾರಿಮಣಿಯರು ಆಕರ್ಷಕವಾಗಿ ಕಾಣಿಸುವುದು ತೀರಾ ಸುಲಭ. ಅದಕ್ಕಾಗಿ ಒಂದಿಷ್ಟು ಸ್ಟೈಲಿಂಗ್‌ಗೆ ಐಡಿಯಾಗಳನ್ನು ಫಾಲೋ ಮಾಡಬೇಕು. ಈ ಕುರಿತಂತೆ ಒಂದಿಷ್ಟು ಸಿಂಪಲ್ ಟಿಪ್ಸ್ ನೀಡಿದ್ದಾರೆ. ನೀವು ಧರಿಸುತ್ತಿರುವ ರೇಷ್ಮೆ ಸೀರೆ ಯಾವ ಡಿಸೈನ್ ಹೊಂದಿದೆ? ಯಾವ ಬಗೆಯ ಬಾರ್ಡರ್ ಹೊಂದಿದೆ? ಸಾದಾ, ಪ್ರಿಂಟ್ಸ್, ಹ್ಯಾಂಡ್‌ವರ್ಕ್ ಮಾಡಲಾಗಿದೆಯಾ? ಇಲ್ಲವೇ ಸಿಂಪಲ್ ರೇಷ್ಮೆ ಸೀರೆಯಾ ಎಂಬುದನ್ನು ಮನಗಂಡು ಸ್ಟೈಲಿಂಗ್‌ ಡಿಸೈಡ್ ಮಾಡುವುದು ಉತ್ತಮ.

    ನೀವು ಸೀರೆಗೆ ಹೊಸ ಲುಕ್ ನೀಡಲು ಬಯಸುತ್ತಿರುವಿರಾದಲ್ಲಿ ಕಾಂಟ್ರಾಸ್ಟ್ ಬ್ಲೌಸ್ ಮ್ಯಾಚ್ ಮಾಡಿ. ಸಾದಾ ರೇಷ್ಮೆ ಸೀರೆಯಾದಲ್ಲಿ, ಡಿಸೈನರ್ ಹ್ಯಾಂಡ್‌ವರ್ಕ್ ಅಥವಾ ಡಿಸೈನರ್ ಬ್ಲೌಸ್ ಮ್ಯಾಚ್ ಮಾಡಿ. ಗ್ರ‍್ಯಾಂಡ್ ಸೀರೆಯಾದಲ್ಲಿ ಆದಷ್ಟೂ ಸಿಂಪಲ್ ಬ್ಲೌಸ್ ಧರಿಸಿ. ಇನ್ನು, ಗ್ಲಾಮರಸ್ ಲುಕ್ ಬೇಕಾದಲ್ಲಿ ಸಮ್ಮರ್ ಬ್ಲೌಸ್ ಧರಿಸಿ. ಇದನ್ನೂ ಓದಿ:ವಿಜಯಲಕ್ಷ್ಮಿ ಅಕ್ಕ ಹೋರಾಟ ನೋಡಿ ಅವರೊಂದಿಗೆ ನಿಲ್ಲಬೇಕು ಅನ್ನಿಸಿತು: ದರ್ಶನ್‌ ಕೇಸ್‌ ಬಗ್ಗೆ ಧನ್ವೀರ್ ಮಾತು

    ರೇಷ್ಮೆ ಸೀರೆ ಉಟ್ಟಾಗ ನಿಮ್ಮ ಹೇರ್‌ ಸ್ಟೈಲ್ ನಿಮ್ಮ ಮುಖಕ್ಕೆ ಹೊಂದುವಂತಿರಬೇಕು. ಟ್ರೆಡಿಷನಲ್ ಬೇಕಿದ್ದಲ್ಲಿ ಜಡೆ ಹೆಣೆದು ಡಿಸೈನ್ ಮಾಡಿ. ಮಾಡರ್ನ್ ಲುಕ್ ಬೇಕಿದ್ದಲ್ಲಿ ಫ್ರೀ ಹೇರ್ ಅಥವಾ ಮೆಸ್ಸಿ ಹೇರ್ ಸ್ಟೈಲ್‌ ಯಾವುದಾದರೂ ಡಿಸೈನ್ ಮಾಡಿ. ಕರ್ಲ್ ಮಾಡಿಸಿದಲ್ಲೂ ಆಕರ್ಷಕವಾಗಿ ಕಾಣಿಸುವುದು.

    Temple Jewellery

    ಹಬ್ಬದಂದು ಉಡುವ ರೇಷ್ಮೆ ಸೀರೆಯ ಜ್ಯುವೆಲರಿಗಳು ಆಂಟಿಕ್ ಅಥವಾ ಟ್ರೆಡಿಷನಲ್ ಇದ್ದಲ್ಲಿ ಫೆಸ್ಟಿವ್ ಲುಕ್ ನಿಮ್ಮದಾಗುವುದು. ಹಾರ, ನೆಕ್ಲೇಸ್, ಕಡ, ಇಯರಿಂಗ್ಸ್, ಮಾಂಗ್‌ಟೀಕಾ, ಮಾಟಿ, ಕಮರ್‌ಬಾಂದ್ ನಿಮ್ಮ ರೇಷ್ಮೆ ಸೀರೆಯ ಲುಕ್ ಅನ್ನು ಮತ್ತಷ್ಟು ಸುಂದರವಾಗಿಸುವುದು. ನೋಡಲು ಸುಂದರವಾಗಿ ಕಾಣಿಸುವಿರಿ. ಒಟ್ಟಿನಲ್ಲಿ ಹಬ್ಬದ ದಿನದಂದು ಒಂದಿಷ್ಟು ಸಿಂಪಲ್ ಮೇಕೋವರ್ ಐಡಿಯಾಗಳನ್ನು ಪಾಲಿಸಿದಲ್ಲಿ, ನೀವೂ ಕೂಡ ಸೆಲೆಬ್ರೆಟಿಯಂತೆ ಕಾಣಿಸುವುದರಲ್ಲಿ ಯಾವುದೇ ಸಂಶಯವಿಲ್ಲ.

  • ಲಿವ್‌ ಇನ್‌ನಲ್ಲಿದ್ದಾಗ ಕೊಟ್ಟಿದ್ದ ಹಣ, ಒಡವೆ ಕೊಡು ಎಂದವನಿಗೆ ಥಳಿಸಿ ವಿಷ ಕುಡಿಸಿದ ಮಾಜಿ ಪ್ರೇಯಸಿ!

    ಲಿವ್‌ ಇನ್‌ನಲ್ಲಿದ್ದಾಗ ಕೊಟ್ಟಿದ್ದ ಹಣ, ಒಡವೆ ಕೊಡು ಎಂದವನಿಗೆ ಥಳಿಸಿ ವಿಷ ಕುಡಿಸಿದ ಮಾಜಿ ಪ್ರೇಯಸಿ!

    ಲಕ್ನೋ: ಲಿವ್‍ಇನ್ ರಿಲೇಶನ್‍ಶಿಪ್‌ನಲ್ಲಿದ್ದಾಗ (Live In Relationship) ಕೊಟ್ಟಿದ್ದ ಹಣ ಹಾಗೂ ಆಭರಣಗಳನ್ನು ಹಿಂತಿರುಗಿಸುವಂತೆ ಒತ್ತಾಯಿಸಿದ ಯುವಕನಿಗೆ ಆತನ ಮಾಜಿ ಪ್ರೇಯಸಿ ಹಾಗೂ ಆಕೆಯ ಸಹಚರರು ಥಳಿಸಿ ವಿಷ ಕುಡಿಯುವಂತೆ ಒತ್ತಾಯಿಸಿದ ಅಮಾನವೀಯ ಘಟನೆ ಉತ್ತರ ಪ್ರದೇಶದ (Uttar Pradesh) ಹಮೀರ್‌ಪುರದಲ್ಲಿ ನಡೆದಿದೆ.

    ಹಮೀರ್‌ಪುರದ ನಿವಾಸಿ ಶೈಲೇಂದ್ರ ಗುಪ್ತಾ ಹಲ್ಲೆಗೊಳಗಾದ ದುರ್ದೈವಿ ಎಂದು ಗುರುತಿಸಲಾಗಿದೆ. ಆತ ಮಹೋಬಾದ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ. ಆತ ನಾಲ್ಕು ವರ್ಷಗಳ ಹಿಂದೆ ಪರಿಚಯವಾಗಿದ್ದ ಕಾಲಿಪಹರಿ ಗ್ರಾಮದ ಮಹಿಳೆಯೊಂದಿಗೆ ಲಿವ್ ಇನ್ ಸಂಬಂಧದಲ್ಲಿದ್ದ. ಈ ಸಮಯದಲ್ಲಿ ಮಹಿಳೆಗೆ ಲಕ್ಷಾಂತರ ರೂ. ಮೌಲ್ಯದ ದುಬಾರಿ ಆಭರಣಗಳನ್ನು ಕೊಡಿಸಿದ್ದ. ಅಲ್ಲದೇ 4 ಲಕ್ಷ ರೂ. ನಗದು ಹಣ ನೀಡಿದ್ದ. ಇತ್ತೀಚೆಗೆ ಮಹಿಳೆ ಬೇರೊಬ್ಬನ ಸಂಪರ್ಕದಲ್ಲಿದ್ದಳು. ಬಳಿಕ ಶೈಲೇಂದ್ರ ಹಾಗೂ ಮಹಿಳೆ ದೂರವಾಗಿದ್ದರು.

    ಇದಾದ ಬಳಿಕ ಶೈಲೇಂದ್ರ ಹಿಂದೆ ನೀಡಿದ್ದ ಹಣ ಮತ್ತು ಆಭರಣಗಳನ್ನು ಹಿಂದಿರುಗಿಸುವಂತೆ ಮಹಿಳೆಗೆ ಒತ್ತಾಯಿಸುತ್ತಿದ್ದ. ಹಣ ಮತ್ತು ಆಭರಣ ಮರಳಿ ಪಡೆಯಲು ಅವರ ಮನೆಗೆ ತೆರಳಿದ್ದಾಗ, ಮಹಿಳೆ, ಆಕೆಯ ಸಹಚರರಾದ ಸದಾಬ್ ಬೇಗ್, ದೀಪಕ್ ಮತ್ತು ಹ್ಯಾಪಿ ಎಂಬವರ ಜೊತೆ ಸೇರಿ ಆತನ ಮೇಲೆ ಹಲ್ಲೆ ನಡೆಸಿದ್ದಾರೆ. ಬಳಿಕ ವಿಷ ಸೇವಿಸುವಂತೆ ಒತ್ತಾಯಿಸಿದ್ದಾರೆ. ದಾಳಿಯ ನಂತರ, ಯುವಕನ ಸ್ಥಿತಿ ಗಂಭೀರವಾಗಿದ್ದು, ಚಿಕಿತ್ಸೆಗಾಗಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.

    ತನಗೆ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದಾರೆ ಮತ್ತು ಹಣ ಒಡವೆ ಹಿಂದಿರುಗಿಸುವಂತೆ ಒತ್ತಾಯಿಸಿದರೆ ಸುಳ್ಳು ಪ್ರಕರಣದಲ್ಲಿ ಸಿಲುಕಿಸುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಮಾಜಿ ಪ್ರೇಯಸಿಯ ವಿರುದ್ಧ ಶೈಲೇಂದ್ರ ಆರೋಪಿಸಿದ್ದಾನೆ. ಈ ಪ್ರಕರಣದ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

  • ಬಿಹಾರದ ಆಭರಣ ಮಳಿಗೆಯಲ್ಲಿ ಫಿಲ್ಮಿಸ್ಟೈಲ್‌ನಲ್ಲಿ ದರೋಡೆ – 8 ನಿಮಿಷದಲ್ಲಿ 25 ಕೋಟಿ ಚಿನ್ನಾಭರಣ ದರೋಡೆ!

    ಬಿಹಾರದ ಆಭರಣ ಮಳಿಗೆಯಲ್ಲಿ ಫಿಲ್ಮಿಸ್ಟೈಲ್‌ನಲ್ಲಿ ದರೋಡೆ – 8 ನಿಮಿಷದಲ್ಲಿ 25 ಕೋಟಿ ಚಿನ್ನಾಭರಣ ದರೋಡೆ!

    – ಗನ್‌ಪಾಯಿಂಟ್‌ನಲ್ಲಿರಿಸಿ ದೋಚಿದ ಗ್ಯಾಂಗ್‌

    ಪಾಟ್ನಾ: ಬಿಹಾರದ (Bihar) ಭೋಜ್‌ಪುರ ಜಿಲ್ಲೆಯ ಗೋಪಾಲಿ ಚೌಕ್‌ನಲ್ಲಿ ಫಿಲ್ಮಿಸ್ಟೈಲ್‌ ದರೋಡೆ ನಡೆದಿದೆ. ಏಳು ಮಂದಿಯ ದರೋಡೆಕೋರರ ಗುಂಪೊಂದು ಇಲ್ಲಿ ಆಭರಣ ಮಳಿಗೆಗೆ ನುಗ್ಗಿ 8 ನಿಮಿಒಷಗಳಲ್ಲಿ ಬರೋಬ್ಬರಿ 25 ಕೋಟಿ ರೂ. ಮೌಲ್ಯದ ಚಿನ್ನಾಭರಣ (Jewellery) ದೋಚಿದೆ.

    ಸೋಮವಾರ (ಇಂದು) ಮುಂಜಾನೆ ಬಿಹಾರದ ಅರ್ರಾಹ್‌ನಲ್ಲಿರುವ ತನಿಷ್ಕ್ ಆಭರಣ ಶೋರೂಮ್‌ಗೆ ನುಗ್ಗಿದ ಶಸ್ತ್ರಸಜ್ಜಿತ ದರೋಡೆಕೋರರು 25 ಕೋಟಿ ಮೌಲ್ಯದ ಚಿನ್ನಾಭರಣಗಳನ್ನು ದೋಚಿದ್ದಾರೆ. ಇದನ್ನೂ ಓದಿ: ರಂಜಾನ್ ಟೈಮಲ್ಲೇ ಗುಲ್ಮಾರ್ಗ್‌ ಫ್ಯಾಷನ್ ಶೋ – 24 ಗಂಟೆಗಳಲ್ಲಿ ವರದಿ ನೀಡುವಂತೆ ಒಮರ್ ಅಬ್ದುಲ್ಲಾ ಆದೇಶ

    ಆಭರಣ ಮಳಿಗೆಯಲ್ಲಿದ್ದವರನ್ನು ಗನ್‌ಪಾಯಿಂಟ್‌ನಲ್ಲಿ ಬೆದರಿಸಿ ಲೂಟಿ ಮಾಡಿದ್ದಾರೆ. ರಾಬರಿ ವೇಳೆ ಕುಳಿತ ಸ್ಥಾನದಿಂದ ಎದ್ದು ಬಂದ ಮ್ಯಾನೇಜರ್ ಮೇಲೆ ದರೋಡೆಕೋರರು ಹಲ್ಲೆ ಮಾಡಿದ್ದಾರೆ. 8 ನಿಮಿಷದಲ್ಲಿ ಚಿನ್ನಾಭರಣ ಸೇರಿ ನಗದನ್ನು ದೋಚಿ ಎಸ್ಕೇಪ್ ಆಗಿದ್ದಾರೆ. ದರೋಡೆಕೋರರ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಎಲ್ಲಾ ಮುಗಿದ ಮೇಲೆ ಎಂದಿನಂತೆ ಪೊಲೀಸರು ಎಂಟ್ರಿ ಕೊಟ್ಟು ತನಿಖೆ ನಡೆಸಿದ್ದಾರೆ. ಚೇಸ್ ಮಾಡಿ ಇಬ್ಬರನ್ನು ಬಂಧಿಸುವಲ್ಲಿ ಸಫಲರಾಗಿದ್ದಾರೆ.

    ಈ ಕುರಿತು ಮಾತನಾಡಿರುವ ಶೋರೂಂ ಮ್ಯಾನೇಜರ್ ಕುಮಾರ್ ಮೃತ್ಯುಂಜಯ್, ಕಳ್ಳರು ನಗದು ಜೊತೆಗೆ ಚಿನ್ನದ ಸರಗಳು, ನೆಕ್ಲೇಸ್‌ಗಳು, ಬಳೆ ಮತ್ತು ಕೆಲವು ವಜ್ರ ಸೇರಿದಂತೆ ಬೆಲೆಬಾಳುವ ವಸ್ತುಗಳನ್ನು ತೆಗೆದುಕೊಂಡು ಹೋಗಿದ್ದಾರೆಂದು ತಿಳಿಸಿದ್ದಾರೆ. ಇದನ್ನೂ ಓದಿ: ಬಿಬಿಎಂಪಿ 2ಕ್ಕಿಂತ ಹೆಚ್ಚು ಹೋಳಾಗೋದು ಫಿಕ್ಸ್ – ಸದ್ಯದಲ್ಲೇ `ಗ್ರೇಟರ್ ಬೆಂಗಳೂರು’ ಆಡಳಿತ ಕಾಯ್ದೆ ಜಾರಿಗೆ ಸಿದ್ಧತೆ

  • ನನ್ನ 3ನೇ ಅವಧಿಯಲ್ಲಿ ಭಾರತ ಟಾಪ್‌-3 ಆರ್ಥಿಕತೆಯಲ್ಲಿ ಒಂದಾಗಲಿದೆ: ಮೋದಿ ಮತ್ತೊಂದು ಗ್ಯಾರಂಟಿ

    ನನ್ನ 3ನೇ ಅವಧಿಯಲ್ಲಿ ಭಾರತ ಟಾಪ್‌-3 ಆರ್ಥಿಕತೆಯಲ್ಲಿ ಒಂದಾಗಲಿದೆ: ಮೋದಿ ಮತ್ತೊಂದು ಗ್ಯಾರಂಟಿ

    ಗಾಂಧಿನಗರ (ಸೂರತ್‌): ನನ್ನ 3ನೇ ಅವಧಿಯಲ್ಲಿ ಭಾರತ ದೇಶವು ವಿಶ್ವದ ಟಾಪ್‌-3 ಆರ್ಥಿಕತೆಗಳಲ್ಲಿ (Economies) ಒಂದಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ದೇಶದ ಜನರಿಗೆ ಮತ್ತೊಂದು ಗ್ಯಾರಂಟಿ ನೀಡಿದ್ದಾರೆ.

    ಗುಜರಾತ್‌ನ ವಾಣಿಜ್ಯನಗರಿ ಸೂರತ್‌ನಲ್ಲಿ ಡೈಮಂಡ್‌ ಬೋರ್ಸ್‌ (Surat Diamond Bourse) ಕಚೇರಿ ಸಂಕೀರ್ಣ ಉದ್ಘಾಟಿಸಿ ಬಳಿಕ ಮಾತನಾಡಿದ ಅವರು, ಭಾರತವನ್ನು ವಿಶ್ವದ ಟಾಪ್‌-3 ಆರ್ಥಿಕತೆಗಳಲ್ಲಿ ಒಂದಾಗಲಿದೆ. ಅದಕ್ಕಾಗಿ ಸರ್ಕಾರವು ಮುಂಬರುವ 25 ವರ್ಷಗಳ ಗುರಿ ನಿಗದಿಪಡಿಸಿದೆ ಎಂದು ಹೇಳಿದ್ದಾರೆ.

    ಸೂರತ್‌ ಡೈಮಂಡ್‌ ಬೋರ್ಸ್‌ ʻನವ ಭಾರತದ ಶಕ್ತಿʼಯ ಸಂಕೇತ. ಈ ಸಂಕೀರ್ಣವು ರಾಷ್ಟ್ರದ ಪ್ರಗತಿಗಾಗಿ ನಮ್ಮ ಸರ್ಕಾರ ಕೈಗೊಂಡಿರುವ ದೃಢ ಸಂಕಲ್ಪವನ್ನು ಪ್ರತಿಬಿಂಬಿಸುತ್ತದೆ. ವಿಶ್ವದಾದ್ಯಂತ ಜನರು ಈ ಡೈಮಂಡ್‌ ಬೋರ್ಸ್‌ ಬಗ್ಗೆ ಮಾತನಾಡುತ್ತಾರೆ ಎಂದು ಭವಿಷ್ಯ ನುಡಿದಿದ್ದಾರೆ. ಇದನ್ನೂ ಓದಿ: ಸಂಸತ್‌ ಮೇಲಿನ ದಾಳಿ ಗಂಭೀರವಾದದ್ದು; ಚರ್ಚೆ ಬೇಡ, ವಿಸ್ತೃತ ತನಿಖೆಯಾಗಲಿ: ಪ್ರಧಾನಿ ಮೋದಿ ಮೊದಲ ಪ್ರತಿಕ್ರಿಯೆ

    ಬೋರ್ಸ್‌ ಭಾರತೀಯ ವಿನ್ಯಾಸ, ಭಾರತೀಯ ವಿನ್ಯಾಸಕಾರರು, ಭಾರತೀಯ ವಸ್ತು ಮತ್ತು ಭಾರತೀಯ ಪರಿಕಲ್ಪನೆಗಳ ಸಾಮರ್ಥ್ಯವನ್ನು ಇಲ್ಲಿ ಪ್ರದರ್ಶಿಸುತ್ತಿದೆ. ನಮ್ಮ ಈ ಕಚೇರಿ ಸಂಕೀರ್ಣದ ಎದುರು ಇತರ ಕಟ್ಟಡಗಳು ತಮ್ಮ ಹೊಳಪನ್ನೇ ಕಳೆದುಕೊಳ್ಳುತ್ತವೆ. ಈ ಹಿಂದೆ ಸೂರತ್‌ ನಗರವನ್ನು ʻಸೂರ್ಯನಗರʼಎಂದು ಕರೆಯಲಾಗುತ್ತಿತ್ತು. ಇಲ್ಲಿನ ಜನರ ಪರಿಶ್ರಮದಿಂದ ಈಗ ʻಡೈಮಂಡ್‌ ಸಿಟಿʼ ಆಗಿದೆ ಎಂದು ಶ್ಲಾಘಿಸಿದ್ದಾರೆ.

    ಮುಂದುವರಿದು, ಪರಿಸರ ವಿಜ್ಞಾನ ಮತ್ತು ವಾಸ್ತುಶಿಲ್ಪ ಅಧ್ಯಯನ ಮಾಡುವ ವಿದ್ಯಾರ್ಥಿಗಳು ಒಮ್ಮೆ ಈ ಅದ್ಭುತ ಕಟ್ಟಡಕ್ಕೆ ಭೇಟಿ ನೀಡಬೇಕು. ಇಲ್ಲಿ ಪ್ರಯೋಗವಾಗಿರುವ ವಿನೂತನ ವಿನ್ಯಾಸವನ್ನು ಅಧ್ಯಯನಕ್ಕಾಗಿ ವಾಸ್ತುಶಿಲ್ಪದ ವಿದ್ಯಾರ್ಥಿಗಳನ್ನು ಕರೆತರಬೇಕು. ಪರಿಸರ ಅಧ್ಯಯನ ವಿದ್ಯಾರ್ಥಿಗಳು ಇಲ್ಲಿನ ಹಸಿರು ಪರಿಸರದ ಗಮನಾರ್ಹ ವೈಶಿಷ್ಟಗಳ ಬಗ್ಗೆ ತಳಿಯಲು ಭೇಟಿ ನೀಡಬೇಕು ಎಂಬ ಕಿವಿ ಮಾತನ್ನೂ ಹೇಳಿದ್ದಾರೆ.

    ನಂತರ 353 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾದ ಸೂರತ್‌ ವಿಮಾನ ನಿಲ್ದಾಣದ ಟರ್ಮಿನಲ್‌ ಕಟ್ಟಡವನ್ನೂ ಪ್ರಧಾನಿ ಉದ್ಘಾಟಿಸಿದರು. ಈ ವೇಳೆ ಮಾತನಾಡಿ, ಸೂರತ್‌ನ ಜನರು, ಸಾರ್ವಜನಿಕರು, ವ್ಯಾಪಾರಿಗಳು ಮತ್ತು ಉದ್ಯಮಿಗಳಿಗೆ ಇನ್ನೂ ಎರಡು ಊಡುಗೊರೆ ಸಿಕ್ಕಿದೆ. ಸೂರತ್ ವಿಮಾನ ನಿಲ್ದಾಣದ ಹೊಸ ಟರ್ಮಿನಲ್ ಉದ್ಘಾಟನೆಯಾಗಿದೆ, ಜೊತೆಗೆ ಸೂರತ್ ವಿಮಾನ ನಿಲ್ದಾಣ ಅಂತಾರಾಷ್ಟ್ರೀಯ ಸ್ಥಾನಮಾನ ಪಡೆದುಕೊಂಡಿದೆ. ಇದು ಅತ್ಯಂತ ದೊಡ್ಡ ವಿಷಯ. ಈ ಹಿಂದೆ ನಾನು ಇಲ್ಲಿಗೆ ಭೇಟಿ ನೀಡಿದಾಗ ವಿಮಾನ ನಿಲ್ದಾಣವು ಹಳೆಯ ಬಸ್‌ ನಿಲ್ದಾಣದಂತೆ ಕಾಣುತ್ತಿತ್ತು. ಈಗ ಅದರ ರೂಪಾಂತರ ನೋಡಿದ್ರೆ ನಾವು ಎಲ್ಲಿಯವರೆಗೆ ಬಂದಿದ್ದೇವೆ ಎಂಬುದು ತಿಳಿಯುತ್ತದೆ ಎಂದು ಶ್ಲಾಘಿಸಿದ್ದಾರೆ.

    ಸೂರತ್ ಪ್ರಸ್ತುತ 14 ದೇಶೀಯ ನಗರಗಳಿಗೆ ಸಂಪರ್ಕ ಹೊಂದಿದೆ. ದೆಹಲಿ, ಚೆನ್ನೈ, ಬೆಂಗಳೂರು, ಕೋಲ್ಕತ್ತಾ, ಹೈದರಾಬಾದ್, ಗೋವಾ, ಗೋವಾ ಮೊಪಾ, ಬೆಳಗಾವಿ, ಪುಣೆ, ಜೈಪುರ, ಉದಯಪುರ, ಇಂದೋರ್, ದಿಯು ಮತ್ತು ಕಿಶನ್‌ಗಢ್ ಮತ್ತು ಅಂತಾರಾಷ್ಟ್ರೀಯವಾಗಿ ಶಾರ್ಜಾ ಮೂಲಕ ಪ್ರಪಂಚದ ಇತರ ಭಾಗಗಳಿಗೆ ಸಂಪರ್ಕ ಹೊಂದಿದೆ. ಇದು ವಾರಕ್ಕೆ 252ಕ್ಕೂ ಹೆಚ್ಚು ಪ್ರಯಾಣಿಕರ ವಿಮಾನ ಚಲನೆಗಳನ್ನು ನಿರ್ವಹಿಸುತ್ತಿದೆ. ಇದನ್ನೂ ಓದಿ: ವೈದ್ಯ, ಆರ್ಮಿ ಡಾಕ್ಟರ್‌, ಪ್ರಧಾನ ಮಂತ್ರಿ ಕಚೇರಿ ಅಧಿಕಾರಿ.. ನಾನಾ ವೇಶ – ಮಹಿಳೆಯರನ್ನು ವಂಚಿಸುತ್ತಿದ್ದ ವ್ಯಕ್ತಿ ಬಂಧನ