Tag: jewellary shop

  • ಆರೋಪಿ ಉನ್ನಿಕೃಷ್ಣನ್ ಚಿನ್ನ ಕೊಟ್ಟಿದ್ದು ನಿಜ – ಸತ್ಯ ಒಪ್ಪಿಕೊಂಡ ಜ್ಯುವೆಲ್ಲರಿ ಶಾಪ್ ಮಾಲೀಕ ಗೋವರ್ಧನ್

    ಆರೋಪಿ ಉನ್ನಿಕೃಷ್ಣನ್ ಚಿನ್ನ ಕೊಟ್ಟಿದ್ದು ನಿಜ – ಸತ್ಯ ಒಪ್ಪಿಕೊಂಡ ಜ್ಯುವೆಲ್ಲರಿ ಶಾಪ್ ಮಾಲೀಕ ಗೋವರ್ಧನ್

    – 2019ರಲ್ಲಿ ಬಾಗಿಲು ನಿರ್ಮಾಣ ಮಾಡಿಕೊಟ್ಟಿದ್ದು ನಿಜ

    ಬಳ್ಳಾರಿ: ಆರೋಪಿ ಉನ್ನಿಕೃಷ್ಣನ್ ನನಗೆ ಚಿನ್ನ ಕೊಟ್ಟಿದ್ದು ನಿಜ ಎಂದು ಬಳ್ಳಾರಿಯ (Ballari) ರೊದ್ದಂ ಜ್ಯುವೆಲ್ಲರಿ ಶಾಪ್ ಮಾಲೀಕ ಗೋವರ್ಧನ್ ಸತ್ಯ ಒಪ್ಪಿಕೊಂಡಿದ್ದಾರೆ.

    ಶಬರಿಮಲೆಯ ಚಿನ್ನ (Sabarimala Gold Theft Case) ಬಳ್ಳಾರಿಯಲ್ಲಿ ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ‘ಪಬ್ಲಿಕ್ ಟಿವಿ’ ಜೊತೆ ಮಾತನಾಡಿದ ಗೋವರ್ಧನ್, ಅಯ್ಯಪ್ಪ ಸ್ವಾಮಿ ದೇಗುಲದ ಬಾಗಿಲು ಶಿಥಿಲವಾಗಿದೆ, ದೇವಸ್ಥಾನದ ಒಳಗೆ ಸರ್ಪಗಳು ಹೋಗುತ್ತಿವೆ ಅಂತಾ ಉನ್ನಿಕೃಷ್ಣನ್ ಹೇಳಿದ್ದರು. ಬಾಗಿಲನ್ನ ದೇಣಿಗೆ ರೀತಿ ನೀಡಿ ಎಂದು ಉನ್ನಿಕೃಷ್ಣನ್ ನನ್ನ ಬಳಿ ಕೇಳಿದ್ದರು. ಅಯ್ಯಪ್ಪ ಸ್ವಾಮಿ ಭಕ್ತ ಆಗಿದ್ದರಿಂದ ನಾನು ಒಪ್ಪಿಕೊಂಡೆ. ಕೇರಳದಲ್ಲಿ ಕಟ್ಟಿಗೆ ಖರೀದಿ ಮಾಡಿ, ಬೆಂಗಳೂರಿನ ಶ್ರೀರಾಂಪುರ ಐಯಪ್ಪ ಸ್ವಾಮಿ ದೇಗುಲದಲ್ಲಿ ಬಾಗಿಲು ನಿರ್ಮಾಣ ಮಾಡಿದ್ದೆವು. ಅಲ್ಲಿಂದ ಬಳ್ಳಾರಿಗೆ ಕಟ್ಟಿಗೆ ಬಾಗಿಲು ತಂದು ಅದಕ್ಕೆ ಚಿನ್ನದ ಲೇಪನ ಮಾಡಿ ಕೊಟ್ಟಿದ್ದೇವೆ. 2019ರಲ್ಲಿ ಬಾಗಿಲನ್ನ ನಿರ್ಮಾಣ ಮಾಡಿಕೊಟ್ಟಿದ್ದು ನಿಜ. ದ್ವಾರಪಾಲಕದ ಬಗ್ಗೆ 4 ಕೆಜಿ ಚಿನ್ನ ಕಡಿಮೆ ತೂಕ ಬಂದಿರುವ ಬಗ್ಗೆ ನನಗೆ ಮಾಹಿತಿ ಇಲ್ಲ ಎಂದರು. ಇದನ್ನೂ ಓದಿ: ಶಬರಿಮಲೆಯಲ್ಲಿ ಚಿನ್ನ ನಾಪತ್ತೆ ಪ್ರಕರಣಕ್ಕೆ ಬೆಂಗಳೂರು ಲಿಂಕ್‌ – ಬಳ್ಳಾರಿಯಲ್ಲಿ ಚಿನ್ನ ಮಾರಾಟ ಮಾಡಿರೋ ಶಂಕೆ

    ಎಸ್‌ಐಟಿ (SIT) ಅಧಿಕಾರಿಗಳು ತನಿಖೆ ಮಾಡಿದ್ದು ಸತ್ಯ, ಅವರ ತನಿಖೆಗೆ ಸಹಕಾರ ನೀಡುತ್ತೇವೆ. ನಾನು ಅಯ್ಯಪ್ಪ ಸ್ವಾಮಿ ಭಕ್ತ, ನಾನು ಯಾವುದೇ ತಪ್ಪು ಮಾಡಿಲ್ಲ. ತಪ್ಪು ಮಾಡಿದವರು ಯಾರೇ ಇದ್ದರೂ ಅವರಿಗೆ ಶಿಕ್ಷೆ ಆಗುತ್ತದೆ. ಎಸ್‌ಐಟಿ ಅಧಿಕಾರಿಗಳು ನಿನ್ನೆ ಬಳ್ಳಾರಿಗೆ ಬಂದಿದ್ದರು. ನಮ್ಮ ಜ್ಯುವೆಲ್ಲರಿ ಶಾಪ್‌ನಲ್ಲಿ ತನಿಖೆ ಮಾಡಿ ವಿಚಾರಣೆ ಮಾಡಿದರು. 476 ಗ್ರಾಂ ಚಿನ್ನದ ಆರೋಪ ನನ್ನ ಮೇಲೆ ಇದೆ. ಅದು ತನಿಖೆ ನಡಿಯುತ್ತಿದೆ. ಇದರ ಬಗ್ಗೆ ಹೆಚ್ಚಿನ ಮಾಹಿತಿ ಹೇಳಲು ಆಗಲ್ಲ. ಉನ್ನಿಕೃಷ್ಣನ್ ಅವರಿಂದಲೇ ಬಾಗಿಲು ನಿರ್ಮಾಣಕ್ಕೆ ಆರ್ಡರ್ ಬಂದಿತ್ತು. ಉಳಿದ ವಿಚಾರ ತನಿಖೆ ನಡೆಯುತ್ತಿದೆ, ತನಿಖೆಗೆ ನಾನು ಸಹಕರಿಸುತ್ತೇನೆ ಎಂದು ತಿಳಿಸಿದರು. ಇದನ್ನೂ ಓದಿ: ಸ್ನೇಹಿತೆಯ ಖಾಸಗಿ ವೀಡಿಯೋ ಕದ್ದು ಹಂಚಿ ಬ್ಲ್ಯಾಕ್‌ಮೇಲ್‌ ಆರೋಪ; ಕಿರುತೆರೆ ನಟಿ ವಿರುದ್ಧ FIR

    ಶಬರಿಮಲೆಯಲ್ಲಿ ಚಿನ್ನ ನಾಪತ್ತೆ ಪ್ರಕರಣಕ್ಕೆ ಈಗ ಕರ್ನಾಟಕದ ಬೆಂಗಳೂರು, ಬಳ್ಳಾರಿಯ ಲಿಂಕ್ ಸಿಕ್ಕಿದೆ. ಪ್ರಮುಖ ಆರೋಪಿ ಬೆಂಗಳೂರಿನ ಉನ್ನಿಕೃಷ್ಣನ್ ಪೊಟ್ಟಿಯನ್ನ ವಿಶೇಷ ತನಿಖಾ ತಂಡದ (ಎಸ್‌ಐಟಿ) ಅಧಿಕಾರಿಗಳು ಸಾಕ್ಷ್ಯ ಸಂಗ್ರಹಕ್ಕಾಗಿ ಬೆಂಗಳೂರಿಗೆ ಕರೆತಂದಿದ್ದಾರೆ. ಇದನ್ನೂ ಓದಿ: Mysuru | ಬಾತ್‌ರೂಂನಲ್ಲಿ ಗ್ಯಾಸ್ ಗೀಸರ್ ಸೋರಿಕೆ; ಉಸಿರುಗಟ್ಟಿ ಅಕ್ಕ-ತಂಗಿ ಸಾವು

    ಬೆಂಗಳೂರಿನ ಶ್ರೀರಾಂಪುರದಲ್ಲಿ ಚಿನ್ನಲೇಪಿತ ಕವಚಗಳನ್ನು ಇರಿಸಿ ಈತ ದೇಣಿಗೆ ಸಂಗ್ರಹಿಸಿದ್ದ ಎಂಬ ಆರೋಪವೂ ಇದೆ. ಹೀಗಾಗಿ ಸಾಕ್ಷ್ಯ ಸಂಗ್ರಹಕ್ಕಾಗಿ ಬೆಂಗಳೂರಿಗೆ ಕರೆತರಲಾಗಿದೆ. ಅಲ್ಲದೇ ಕದ್ದ ಚಿನ್ನವನ್ನ ಬಳ್ಳಾರಿಯಲ್ಲಿ ಮಾರಾಟ ಮಾಡಿರುವ ಆರೋಪದ ಹಿನ್ನೆಲೆ ಬಳ್ಳಾರಿಯಲ್ಲು ತಪಾಸಣೆ ನಡೆಸಿದ್ದು, ಒಂದಿಷ್ಟು ಚಿನ್ನವನ್ನ ರಿಕವರಿ ಮಾಡಲಾಗಿದೆ. ಅದಕ್ಕೆ ಪೂರಕವಾದ ದಾಖಲೆಗಳು ಬೆಂಗಳೂರಿನಲ್ಲಿದ್ದ ಕಾರಣ ಇಬ್ಬರು ಅಧಿಕಾರಿಗಳು ಕೋರ್ಟ್ ಅನುಮತಿಯೊಂದಿಗೆ ಬಂದು ದಾಖಲೆ ಕಲೆ ಹಾಕಿದ್ದಾರೆ. ಇದನ್ನೂ ಓದಿ: ಪಾಕ್‌ ಪರಮಾಣು ಶಸ್ತ್ರಾಗಾರದ ಮೇಲೆ ಅಮೆರಿಕ ನಿಯಂತ್ರಣ ಹೊಂದಿತ್ತು – CIA ಮಾಜಿ ಅಧಿಕಾರಿ ಜಾನ್ ಕಿರಿಯಾಕೌ ಆರೋಪ

    ಶಬರಿಮಲೆಯ ಚಿನ್ನ ಬಳ್ಳಾರಿಯಲ್ಲಿ ಪತ್ತೆ
    ಎಸ್‌ಪಿ ಶಶಿಧರನ್ ನೇತೃತ್ವದ ಕೇರಳದ ಎಸ್‌ಐಟಿ ಚಿನ್ನ ನಾಪತ್ತೆ ಪ್ರಕರಣದ ತನಿಖೆ ನಡೆಸುತ್ತಿದ್ದು, ನಿನ್ನೆ ರೊದ್ದಂ ಜ್ಯುವೆಲ್ಸ್ ಮಳಿಗೆ ಮೇಲೆ ದಾಳಿ ನಡೆಸಿದೆ. ಈ ವೇಳೆ ನಾಣ್ಯಗಳ ರೂಪದಲ್ಲಿ 476 ಗ್ರಾಂ ಚಿನ್ನ ಪತ್ತೆಯಾಗಿದೆ. ಈ ಚಿನ್ನವನ್ನ ಪೊಟ್ಟಿಯಿಂದ ರೊದ್ದಂ ಗೋಲ್ಡ್ ಮಾಲೀಕ ಗೋವರ್ಧನ್ ಖರೀದಿ ಮಾಡಿದ್ದ. ಚಿನ್ನ ವಶಕ್ಕೆ ಪಡೆದ ಎಸ್‌ಐಟಿ ತಂಡ ಗೋವರ್ಧನ್ ವಿಚಾರಣೆ ನಡೆಸಿದೆ. ಸದ್ಯ ರೊದ್ದಂ ಗೋಲ್ಡ್ ಶಾಪ್ ಬೀಗ ಹಾಕಲಾಗಿದೆ. ಅಲ್ಲದೇ ಬೆಂಗಳೂರಿನ ಉನ್ನಿಕೃಷ್ಣನ್ ಮನೆಯಲ್ಲಿ ಚಿನ್ನದ ಗಟ್ಟಿ ಹಾಗೂ 2 ಲಕ್ಷ ರೂ. ನಗದು ಪತ್ತೆಯಾಗಿದೆ ಎಂದು ಎಸ್‌ಐಟಿ ಮೂಲಗಳು ತಿಳಿಸಿವೆ. ಇದನ್ನೂ ಓದಿ: ಪಿಓಕೆಯಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ – ವಿಶ್ವಸಂಸ್ಥೆಯಲ್ಲಿ ಪಾಕ್ ಕುಟುಕಿದ ಭಾರತ

  • ಕಲಬುರಗಿ ಚಿನ್ನದಂಗಡಿ ದರೋಡೆ ಕೇಸ್; ಖದೀಮರ ಸುಳಿವು ಪತ್ತೆ – ಇಬ್ಬರು ಅಂದರ್

    ಕಲಬುರಗಿ ಚಿನ್ನದಂಗಡಿ ದರೋಡೆ ಕೇಸ್; ಖದೀಮರ ಸುಳಿವು ಪತ್ತೆ – ಇಬ್ಬರು ಅಂದರ್

    ಕಲಬುರಗಿ: ಇಂಥದ್ದೇ ಚಿನ್ನದಂಗಡಿಯಲ್ಲಿ ದರೋಡೆ ನಡೆಸುವಂತೆ ಸುಪಾರಿ ನೀಡಿದ್ದ ಪಶ್ಚಿಮ ಬಂಗಾಳ ಮೂಲದ ವ್ಯಕ್ತಿಯ ಬೆನ್ನು ಬಿದ್ದಿರುವ ಪೊಲೀಸರು, ಇದೀಗ ಮುಂಬೈ (Mumbai) ನಗರದಲ್ಲಿ ಅವಿತು ಕುಳಿತಿರುವ ದರೋಡೆಕೋರರ ಸುಳಿವು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.

    ಚಿನ್ನಾಭರಣ ಅಂಗಡಿ ಮಾಲೀಕನ ಹಣೆಗೆ ಗನ್ ಹಿಡಿದು ಬೆದರಿಕೆ ಹಾಕಿ, ಆತನ ಕೈಕಾಲು ಕಟ್ಟಿ ಚಿನ್ನಾಭರಣ ದೋಚಿದ್ದ ದರೋಡೆಕೋರರ ಬೆನ್ನು ಹತ್ತಿರುವ ಕಲಬುರಗಿ ಪೊಲೀಸರು (Kalaburagi Police) ಈಗಾಗಲೇ ಮುಂಬೈ ತಲುಪಿದ್ದು, ಕಳ್ಳರು ಎಲ್ಲಿ ಅವಿತು ಕುಳಿತಿದ್ದಾರೆ ಎಂಬ ಸುಳಿವು ಸಹ ಪೊಲೀಸರಿಗೆ ಲಭಿಸಿದೆ. ಇದನ್ನೂ ಓದಿ: ಹಾಡಹಗಲೇ ಜ್ಯುವೆಲರಿ ಶಾಪ್‌ಗೆ ನುಗ್ಗಿ ದರೋಡೆ – ಗನ್ ತೋರಿಸಿ 3 ಕೆಜಿ ಚಿನ್ನಾಭರಣ ದೋಚಿದ ಗ್ಯಾಂಗ್

    ದರೋಡೆಕೋರರ ಬಳಿ ಗನ್ ಇರುವ ಕಾರಣಕ್ಕಾಗಿ ಪಕ್ಕಾ ಯೋಜನೆ ರೂಪಿಸಿಯೇ ದರೋಡೆಕೋರರನ್ನು ಹೆಡೆಮುರಿ ಕಟ್ಟಿ ಕಲಬುರಗಿಗೆ ತರಲು ಪೊಲೀಸರು ಕಾರ್ಯತಂತ್ರ ರೂಪಿಸುತ್ತಿದ್ದಾರೆ ಎಂದು ಪೊಲೀಸ್ ಇಲಾಖೆಯ ಉನ್ನತ ಮೂಲಗಳು ತಿಳಿಸಿವೆ. ಇದನ್ನೂ ಓದಿ: ಪ್ರಿಯಾಂಕ್‌ ಖರ್ಗೆ ಆಪ್ತನ ಮೇಲೆ ಮಾದಕದ್ರವ್ಯ ಮಾರಾಟ ಆರೋಪ – ಬಂಧನದ ಬೆನ್ನಲ್ಲೇ ಪಕ್ಷದಿಂದ ಉಚ್ಛಾಟನೆ

    ಕಲಬುರಗಿಯ ಸರಾಫ್ ಬಜಾರ್ (Saraf Bazar) ಪ್ರದೇಶದಲ್ಲಿರುವ ಇಂಥದ್ದೇ ಚಿನ್ನಾಭರಣದ ಅಂಗಡಿಗೆ (Gold Shop) ನುಗ್ಗಿ, ದರೋಡೆ ಮಾಡುವಂತೆ ಸುಪಾರಿ ನೀಡಿರುವ ಕುತೂಹಲಕಾರಿ ಅಂಶ ಪೊಲೀಸರ ತನಿಖೆಯಲ್ಲಿ ಬಯಲಾಗಿದೆ. ಹೀಗೆ ಸುಪಾರಿ ನೀಡಿರುವ ವ್ಯಕ್ತಿಯ ಬೆನ್ನು ಬಿದ್ದಿರುವ ಪೊಲೀಸರು ಆತನ ಬಂಧನಕ್ಕೆ ಯೋಜನೆ ರೂಪಿಸುವಷ್ಟರಲ್ಲಿ ಆತ ತೆಲಂಗಾಣದ ಮೂಲಕ ಪಶ್ಚಿಮ ಬಂಗಾಳಕ್ಕೆ ಕಾಲ್ಕಿತ್ತಿದ್ದಾನೆ ಎಂಬ ಅಂಶ ಸದ್ಯ ಬೆಳಕಿಗೆ ಬಂದಿದೆ. ಇದನ್ನೂ ಓದಿ: ಡಿವೋರ್ಸ್‌ ಕೇಸ್‌| ಸಂಗಾತಿ ರೆಕಾರ್ಡ್ ಮಾಡಿದ ಕರೆಯನ್ನು ಸಾಕ್ಷಿಯಾಗಿ ಪರಿಗಣಿಸಬಹುದು – ಸುಪ್ರೀಂ

    ಈ ಎಲ್ಲ ಬೆಳವಣಿಗೆಗಳ ಮಧ್ಯೆ, ಪ್ರಕರಣದಲ್ಲಿ ಭಾಗಿಯಾಗಿರುವ ನಾಲ್ವರು ದರೋಡೆಕೋರರ ಜೊತೆ ಸಂಪರ್ಕದಲ್ಲಿದ್ದ ಹೈದರಾಬಾದ್ ಮೂಲದ ಇಬ್ಬರನ್ನು ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆ ತೀವ್ರಗೊಳಿಸಿದ್ದಾರೆ. ಈ ಇಬ್ಬರೂ ದರೋಡೆಕೋರರು ಕಳ್ಳತನ ಮಾಡಿದ ಚಿನ್ನಾಭರಣಗಳನ್ನು ಮಾರಾಟ ಮಾಡುವ ಹೊಣೆಗಾರಿಕೆ ಹೊತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

  • ಚಿನ್ನ ಕದಿಯಲು ಹೋದಾಗ ತನ್ನದೇ ಗ್ಯಾಂಗ್‌ನಿಂದ ಗುಂಡೇಟು – ಪರಾರಿಯಾಗಿದ್ದ ಆರೋಪಿ ಮಧ್ಯಪ್ರದೇಶ ಆಸ್ಪತ್ರೆಯಲ್ಲಿ ಸಾವು

    ಚಿನ್ನ ಕದಿಯಲು ಹೋದಾಗ ತನ್ನದೇ ಗ್ಯಾಂಗ್‌ನಿಂದ ಗುಂಡೇಟು – ಪರಾರಿಯಾಗಿದ್ದ ಆರೋಪಿ ಮಧ್ಯಪ್ರದೇಶ ಆಸ್ಪತ್ರೆಯಲ್ಲಿ ಸಾವು

    ಬೆಂಗಳೂರು: ಕೊಡಿಗೇಹಳ್ಳಿಯ ಚಿನ್ನದಂಗಡಿ ದರೋಡೆ ಯತ್ನದ ವೇಳೆ ತಮ್ಮ ಗುಂಪಿನವರೇ ಹಾರಿಸಿದ್ದ ಗುಂಡೇಟಿನಿಂದ ಗಾಯಗೊಂಡಿದ್ದ ಆರೋಪಿ ಸೂರಜ್ ಮಧ್ಯಪ್ರದೇಶದ ಗ್ವಾಲಿಯರ್ ಆಸ್ಪತ್ರೆಯಲ್ಲಿ ಸಾವಿಗೀಡಾಗಿದ್ದಾನೆ.

    ಮಾ.14 ರಂದು ಕೊಡಿಗೇಹಳ್ಳಿಯ ಲಕ್ಷ್ಮೀ ಬ್ಯಾಂಕರ್ಸ್ & ಜ್ಯುವೆಲರ್ಸ್ ದರೋಡೆಗೆ ನಾಲ್ವರ ಗುಂಪು ಯತ್ನಿಸಿತ್ತು. ಈ ವೇಳೆ ದರೋಡೆಕೋರರ ಗುಂಪು ಗುಂಡು ಹಾರಿಸಿತ್ತು. ಪರಿಣಾಮ ಮಾಲೀಕ ಹಾಗೂ ಕೆಲಸಗಾರರೊಬ್ಬರಿಗೆ ಗುಂಡು ತಗುಲಿ ಗಾಯಗೊಂಡಿದ್ದರು. ಇದೇ ವೇಳೆ ಅದೇ ಗ್ಯಾಂಗ್‍ನ ಆರೋಪಿ ಆಶು ಪಂಡಿತ್ ಹಾರಿಸಿದ್ದ ಗುಂಡು ಸೂರಜ್ ಕತ್ತಿಗೆ ತಗುಲಿತ್ತು. ಬಳಿಕ ಜನ ಸೇರುತ್ತಿದ್ದಂತೆ ಆತನನ್ನು ಕರೆದುಕೊಂಡು ಕಳ್ಳರ ಗ್ಯಾಂಗ್ ಪರಾರಿಯಾಗಿತ್ತು. ಇದನ್ನೂ ಓದಿ: ಬೆಂಗ್ಳೂರಲ್ಲಿ ಹಾಡಹಗಲೇ ಚಿನ್ನದಂಗಡಿ ಮಾಲೀಕನ ಮೇಲೆ ಗುಂಡಿನ ದಾಳಿ

    ದರೋಡೆಕೋರರ ಗುಂಪು, ಆಂಧ್ರಪ್ರದೇಶದ ಆನಂತರಪುರಕ್ಕೆ ತೆರಳಿ ಅಲ್ಲಿಂದ ರೈಲಿನಲ್ಲಿ ಮಧ್ಯಪ್ರದೇಶದ ಗ್ವಾಲಿಯರ್‍ಗೆ ಪರಾರಿಯಾಗಿತ್ತು. ಬಳಿಕ ಸೂರಜ್‍ನ ಸಹಚರರು ಆತನನ್ನು ಗ್ವಾಲಿಯರ್ ಆಸ್ಪತ್ರೆಗೆ ದಾಖಲಿಸಿದ್ದರು. ಇದೀಗ ಚಿಕಿತ್ಸೆ ಫಲಕಾರಿಯಾಗದೇ ಆತ ಸಾವಿಗೀಡಾಗಿದ್ದಾನೆ. ಈ ಸಂಬಂಧ ಮೂವರು ಆರೋಪಿಗಳನ್ನು ಕೊಡಿಗೇಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಇದನ್ನೂ ಓದಿ: ಅಪ್ರಾಪ್ತೆ ಎಂದು ಬುದ್ಧಿಮಾತು – ವಿಷ ಸೇವಿಸಿ ರೈಲ್ವೇ ಹಳಿ ಮೇಲೆ ಮಲಗಿದ ಪ್ರೇಮಿಗಳು

  • ಚಿನ್ನದ ಅಂಗಡಿ ಮಾಲೀಕನ ಮೇಲೆ ಶೂಟೌಟ್ – ನಾಲ್ವರು ದರೋಡೆಕೋರರು ಅರೆಸ್ಟ್

    ಚಿನ್ನದ ಅಂಗಡಿ ಮಾಲೀಕನ ಮೇಲೆ ಶೂಟೌಟ್ – ನಾಲ್ವರು ದರೋಡೆಕೋರರು ಅರೆಸ್ಟ್

    ಬೆಂಗಳೂರು: ಕೊಡಿಗೆಹಳ್ಳಿಯಲ್ಲಿ (Kodigehalli) ಚಿನ್ನದ ಅಂಗಡಿ (Jewellary Shop) ಮಾಲೀಕನ ಮೇಲೆ ಶೂಟೌಟ್ (Shootout) ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಖತರ್ನಾಕ್ ದರೋಡೆಕೋರರನ್ನು ಪೊಲೀಸರು ಬಂಧಿಸಿದ್ದಾರೆ.

    ಖಾನಾ ಪಂಡಿತ್, ಆಶು ಪಂಡಿತ್, ಮೋಸೆ ಅಲಿಯಾಸ್ ಬಂಟಿ ಹಾಗೂ ಸೂರಜ್ ಎಂಬವರನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಈ ಖದೀಮರು ಸಣ್ಣ ಸಣ್ಣ ಆಭರಣದ ಅಂಗಡಿಗಳನ್ನು ಮಾತ್ರ ಟಾರ್ಗೆಟ್ ಮಾಡಿ ಕಳ್ಳತನ ಮಾಡುತ್ತಿದ್ದರು. ದೊಡ್ಡ ದೊಡ್ಡ ಅಂಗಡಿಗಳಲ್ಲಿ ಸಾಕಷ್ಟು ಜನರು ಕೆಲಸ ನಿರ್ವಹಿಸುತ್ತಾರೆ. ಸಣ್ಣ ಸಣ್ಣ ಅಂಗಡಿಗಳಲ್ಲಿ ಒಬ್ಬರು, ಇಬ್ಬರು ಮಾತ್ರ ಕೆಲಸ ಮಾಡುವುದರಿಂದ ಅಂತಹ ಅಂಗಡಿಗಳನ್ನು ಟಾರ್ಗೆಟ್ ಮಾಡುತ್ತಿದ್ದರು. ಇದನ್ನೂ ಓದಿ: ನಾನು ಅಮೆರಿಕ ಅಧ್ಯಕ್ಷನಾಗಿ ಆಯ್ಕೆಯಾಗದಿದ್ದರೆ ದೇಶದಲ್ಲಿ ರಕ್ತಪಾತವಾಗುತ್ತೆ: ಟ್ರಂಪ್‌

    ಪ್ರಕರಣ ಸಂಬಂಧ ನಾಲ್ವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಇನ್ನು ಘಟನೆ ಸಂಬಂಧ ಆರೋಪಿಗಳು ಯಡವಟ್ಟು ಮಾಡಿದ್ದು, ಶೂಟೌಟ್ ವೇಳೆ ತಮ್ಮದೇ ಗ್ಯಾಂಗ್‌ನ ಸದಸ್ಯ ಸೂರಜ್ ಎಂಬಾತನಿಗೆ ಗುಂಡು ಹಾರಿಸಿದ್ದಾರೆ. ಆಶು ಪಂಡಿತ್ ಮಾಡಿದ ಯಡವಟ್ಟಿಗೆ ಸೂರಜ್ ಗಂಟಲಿಗೆ ಗುಂಡೇಟು ಬಿದ್ದಿದೆ. ಸದ್ಯ ಸೂರಜ್ ಗ್ವಾಲಿಯರ್‌ನ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಇದನ್ನೂ ಓದಿ: ಬೆಂಗಳೂರಲ್ಲಿ ದಾಖಲೆ ಇಲ್ಲದೇ ಸಾಗಿಸುತ್ತಿದ್ದ ಲಕ್ಷ ಲಕ್ಷ ಹಣ ಸೀಜ್‌

    ಆಶು ಪಂಡಿತ್ ಹಾಗೂ ಖಾನಾ ಪಂಡಿತ್ ಮೇಲೆ 20ಕ್ಕೂ ಹೆಚ್ಚು ಪ್ರಕರಣ ದಾಖಲಾಗಿದೆ. ಕಳೆದ ವಾರವಷ್ಟೇ ಇದೇ ರೀತಿಯಾಗಿ ಮುಂಬೈನಲ್ಲಿ ಕಳ್ಳತನ ಮಾಡಿ ಅಲ್ಲಿಂದ ಎಸ್ಕೇಪ್ ಆಗಿದ್ದರು. ಇದೀಗ ನಾಲ್ವರ ಪೈಕಿ ಮೂವರನ್ನು ಕರೆತಂದು ವಿಚಾರಣೆ ನಡೆಸಲಾಗುತ್ತಿದೆ. ಇದನ್ನೂ ಓದಿ: ಪ್ರತಿಭಟನೆ ನಡೆಸುತ್ತಿದ್ದ ಕಾಂಗ್ರೆಸ್ ಮುಖಂಡನ ಮೇಲೆ ಹಲ್ಲೆ – ಗುಬ್ಬಿ ಶಾಸಕ ಶ್ರೀನಿವಾಸ್ ವಿರುದ್ಧ ಎಫ್‍ಐಆರ್

    ಎರಡು ಬೈಕ್‌ಗಳಲ್ಲಿ ಬಂದ ನಾಲ್ಕು ಮಂದಿ ದುಷ್ಕರ್ಮಿಗಳಲ್ಲಿ, ಇಬ್ಬರು ಇಳಿದು ಗುಂಡಿನ ದಾಳಿ ಮಾಡಿದ್ದಾರೆ. ಈ ವೇಳೆ ಅಂಗಡಿ ಮಾಲೀಕ ಅಪ್ಪುರಾಮ್ ಎಂಬವರ ಹೊಟ್ಟೆಗೆ ಗುಂಡು ತಗುಲಿದೆ. ಅಲ್ಲದೇ ಅಂತರಾಮ್ ಎಂಬವರ ಕಾಲಿಗೆ ಗುಂಡು ತಗುಲಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅಪ್ಪುರಾಮ್ ಸ್ಥಿತಿ ಗಂಭೀರವಾಗಿದೆ. ಇದನ್ನೂ ಓದಿ: ಉಜ್ಬೇಕಿಸ್ತಾನ್ ಮಹಿಳೆ ಕೊಲೆ ಕೇಸ್; ಹಣದಾಸೆಗೆ ನಡೆದಿತ್ತು ಕೃತ್ಯ – ಕೇರಳದಲ್ಲಿ ಇಬ್ಬರ ಬಂಧನ

  • ಮಂಗಳೂರು ಜ್ಯುವೆಲ್ಲರಿ ಶಾಪ್‍ಗೆ ನುಗ್ಗಿ ಸಿಬ್ಬಂದಿ ಹತ್ಯೆ ಪ್ರಕರಣ- ಆರೋಪಿ ಅರೆಸ್ಟ್

    ಮಂಗಳೂರು ಜ್ಯುವೆಲ್ಲರಿ ಶಾಪ್‍ಗೆ ನುಗ್ಗಿ ಸಿಬ್ಬಂದಿ ಹತ್ಯೆ ಪ್ರಕರಣ- ಆರೋಪಿ ಅರೆಸ್ಟ್

    ಮಂಗಳೂರು: ನಗರದಲ್ಲಿ ಜ್ಯುವೆಲ್ಲರಿ ಶಾಪ್‍ (Mangalore Jewellary Shop) ಗೆ ನುಗ್ಗಿ ಸಿಬ್ಬಂದಿ ಹತ್ಯೆ ಮಾಡಿರುವ ಪ್ರಕರಣ ಸಂಬಂಧ ಇದೀಗ ಆರೋಪಿಯನ್ನು ಬಂಧಿಸಲಾಗಿದೆ.

    ಕೇರಳದ ಕಲ್ಲಿಕೋಟೆಯ ಚಟ್ಟನಾಡುತ್ ಕೆಳಮನೆ ನಿವಾಸಿ ಶಿಫಾಸ್(33) ಬಂಧಿತ ಆರೋಪಿ. ಕೊಲೆ ಪ್ರಕರಣ ನಡೆದ ತಿಂಗಳ ಬಳಿಕ ಆರೋಪಿಯನ್ನು ಕಾಸರಗೋಡಿ (Kasaragodu) ನಲ್ಲಿ ಬಂಧಿಸಲಾಗಿದೆ. ಇದನ್ನೂ ಓದಿ: ಹಾಡಹಗಲೇ ಜ್ಯುವೆಲ್ಲರಿಗೆ ನುಗ್ಗಿ ವ್ಯಕ್ತಿಯ ಕೊಲೆ- ರಕ್ತದ ಮಡುವಿನಲ್ಲಿ ನರಳುತ್ತಿದ್ರೂ ಕ್ಯಾರೇ ಅನ್ನದೆ ದೋಚಿದ ಕಳ್ಳರು

    ಕೊಲೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಯ ಪತ್ತೆಗೆ ಬಲೆ ಬೀಸಿದ್ದರು. ಇದೀಗ ಆರೋಪಿಯನ್ನು ಕಾಸರಗೋಡು ಮಲ್ಲಿಕಾರ್ಜುನ ದೇವಸ್ಥಾನದ ಆವರಣದಲ್ಲಿ ಡಿವೈಎಸ್‍ಪಿ ಸುಧಾಕರನ್ ನೇತೃತ್ವದ ಪೊಲೀಸ್ ತಂಡ ಬಂಧಿಸಿದೆ. ದರೋಡೆ ನಡೆಸುವ ಉದ್ದೇಶದಿಂದಲೇ ಕೊಲೆ ನಡೆಸಿರುವ ಬಗ್ಗೆ ಮಾಹಿತಿ ಸಿಕ್ಕಿದ್ದು, ಆರೋಪಿಯನ್ನು ಮಂಗಳೂರಿಗೆ ಕರೆತರಲಾಗಿದೆ. ಇದನ್ನೂ ಓದಿ: 40 ಲಕ್ಷ ಲಂಚ ಅಲ್ಲ ಸಿಕ್ಕಿದ್ದು 1.62 ಕೋಟಿ – ಬಿಜೆಪಿ ಶಾಸಕನ ಪುತ್ರನ ಜೊತೆ ಐವರು ಅರೆಸ್ಟ್

    ಕೊಲೆ ಪ್ರಕರಣ: ಫೆ.3ರಂದು ಮಂಗಳೂರಿನ ಹಂಪನಕಟ್ಟೆ(Hampanakatte) ಯ ಮಂಗಳೂರು ಜ್ಯುವೆಲ್ಲರಿ ಹೆಸರಿನ ಶಾಪ್ ನಲ್ಲಿ ಅತ್ತಾವರ ನಿವಾಸಿ ರಾಘವೇಂದ್ರ(50) ಹತ್ಯೆ ಮಾಡಲಾಗಿತ್ತು. ಮಾಲೀಕ ಕೇಶವ ಆಚಾರ್ಯ ಮಧ್ಯಾಹ್ನ ಊಟಕ್ಕೆ ಹೋಗಿದ್ದ ವೇಳೆ ಬರ್ಬರ ಕೊಲೆ ನಡೆದಿತ್ತು. ಘಟನೆ ನಡೆದ ದಿನವೇ ಜ್ಯುವೆಲ್ಲರಿಯಲ್ಲಿದ್ದ ಚಿನ್ನಾಭರಣ ಮಿಸ್ಸಿಂಗ್ ಆಗಿದ್ದು, ಈ ಬಗ್ಗೆ ಬಂದರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

  • ತಂದೆಯ ಜ್ಯುವೆಲ್ಲರಿ ಶಾಪ್‍ನಿಂದ್ಲೇ 14 ಕೆ.ಜಿ ಚಿನ್ನ ಕದ್ದ ಮಗ!

    ತಂದೆಯ ಜ್ಯುವೆಲ್ಲರಿ ಶಾಪ್‍ನಿಂದ್ಲೇ 14 ಕೆ.ಜಿ ಚಿನ್ನ ಕದ್ದ ಮಗ!

    – ನಷ್ಟ ಸರಿದೂಗಿಸಲು ಚಿನ್ನ ಕದ್ದ

    ಚೆನ್ನೈ: ಮಗನೊಬ್ಬ ತನ್ನ ತಂದೆಯ ಅಂಗಡಿಯಿಂದಲೇ ಬರೋಬ್ಬರಿ 14 ಕೆ.ಜಿ ಚಿನ್ನ ಕದ್ದ ಘಟನೆ ಚೆನ್ನೈನಲ್ಲಿ ನಡೆದಿದೆ.

    ಆರೋಪಿ ಮಗನನ್ನು ಎಸ್ ಹರ್ಷ ಬೋತ್ರಾ(24) ಎಂದು ಗುರುತಿಸಲಾಗಿದೆ. ಸದ್ಯ ಈತನನ್ನ ಪೊಲೀಸರು ಬಂಧಿಸಿದ್ದಾರೆ. ಸುಭಾಶ್ ಚಂದ್ರ ಬೋತ್ರಾ ಮಗನಾಗಿರುವ ಹರ್ಷ ಆನ್‍ಲೈನ್ ವಹಿವಾಟಿನಲ್ಲಿ ಆಗಿರುವ 1.5 ಕೋಟಿ ನಷ್ಟವನ್ನು ಸರಿದೂಗಿಸಲು ಚಿನ್ನ ಕದ್ದಿದ್ದಾನೆ ಎಂದು ಹೇಳಿದ್ದಾನೆ.

    ಆರಂಭದಲ್ಲಿ ಪೊಲೀಸರು ಹೊರಗಿನವರ ಕೈವಾಡ ಇರಬಹುದೆಂದು ಶಂಕಿಸಿದ್ದಾರೆ. ಆದರೆ ಈ ಸಂಬಂಧ ಸ್ಥಳೀಯ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಿದಾಗ ಜ್ಯುವೆಲ್ಲರಿ ಶಾಪ್ ಬಳಿ ಹರ್ಷಾ ಬ್ಯಾಗ್ ಹಿಡಿದುಕೊಂಡು ಓಡಾಡುತ್ತಿರುವುದು ಬೆಳಕಿಗೆ ಬಂದಿದೆ.

    ಈ ಹಿನ್ನೆಲೆಯಲ್ಲಿ ಶಾಪ್ ಮಾಲಿಕನ ಮಗ ಹರ್ಷನನ್ನು ವಿಚಾರಣೆ ನಡೆಸಿದಾಗ ಆತ ತಪ್ಪೊಪ್ಪಿಕೊಂಡಿದ್ದಾನೆ. ಅಲ್ಲದೆ ಆತನ ಬಳಿ 11.5 ಕೆ.ಜಿ ಚಿನ್ನ ಇರುವುದು ತಿಳಿದುಬಂತು. ವಿಚಾರಣೆಯ ವೇಳೆ ಆಗಿರುವ ನಷ್ಟವನ್ನು ಮರುಪಾವತಿಸಿದ ಬಳಿಕ ಹರ್ಷ ಎಲ್ಲಾ ಚಿನ್ನವನ್ನು ವಾಪಸ್ ಮಾಡುವ ಪ್ಲಾನ್ ಮಾಡಿರುವುದಾಗಿ ತಿಳಿಸಿದ್ದನು.

    ಸುಭಾಸ್ ಚಂದ್ರ ಬೋತ್ರಾ ಹಾಗೂ ರಾಜ್‍ಕುಮಾರ್ ಚೋಪ್ರಾ ಇಬ್ಬರೂ ಸೇರಿ ಕಳೆದ 20 ವರ್ಷಗಳಿಂದ ಚಿನ್ನದ ಅಂಗಡಿ ನಡೆಸುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

  • ಕಳ್ಳತನದ ಮಾಲು ವಶಪಡಿಸಿಕೊಳ್ಳಲು ಹೋದ ಸಿಪಿಐಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ ಜ್ಯುವೆಲ್ಲರಿ ಶಾಪ್ ಮಾಲೀಕ!

    ಕಳ್ಳತನದ ಮಾಲು ವಶಪಡಿಸಿಕೊಳ್ಳಲು ಹೋದ ಸಿಪಿಐಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ ಜ್ಯುವೆಲ್ಲರಿ ಶಾಪ್ ಮಾಲೀಕ!

    ಕೋಲಾರ: ಕಳ್ಳತನದ ಮಾಲು ವಶಪಡಿಸಿಕೊಳ್ಳಲು ಹೋದ ಸಿಪಿಐ ಗೆ ಜ್ಯುವೆಲ್ಲರಿ ಅಂಗಡಿ ಮಾಲೀಕ ಹಾಗೂ ಆತನ ಮಕ್ಕಳು ಅವಾಚ್ಯ ಶಬ್ದಗಳಿಂದ ನಿಂದಿಸಿ ಪ್ರಾಣಬೆದರಿಕೆ ಹಾಕಿರುವ ಘಟನೆ ಕೋಲಾರದಲ್ಲಿ ನಡೆದಿದೆ.

    ಕೋಲಾರ ಜಿಲ್ಲೆಯ ಕೆಜಿಎಫ್ ನಗರದ ರಾಬರ್ಟ್ ಸನ್ ಪೇಟೆಯಲ್ಲಿ ಗುರುವಾರ ರಾತ್ರಿ ಈ ಘಟನೆ ನಡೆದಿದೆ. ಜ್ಯುವೆಲ್ಲರಿ ಅಂಗಡಿ ಮಾಲೀಕ ಪ್ರಕಾಶ್ ಚಂದ್, ಮಕ್ಕಳಾದ ರಾಜೇಶ್ ಚಂದ್ ಹಾಗೂ ನಿತೀಶ್ ಚಂದ್ ಸಿಪಿಐಗೆ ಪ್ರಾಣ ಬೆದರಿಕೆ ಹಾಕಿದ ಆರೋಪಿಗಳು.

    ಪ್ರಕಾಶ್ ಚಂದ್ ಜ್ಯುವೆಲ್ಲರಿ ಶಾಪ್ ನಲ್ಲಿ ಕಳ್ಳತನದ ಮಾಲು ವಶಪಡಿಸಿಕೊಳ್ಳಲು ತೆರಳಿದ್ದ ಬಂಗಾರಪೇಟೆ ಸಿಪಿಐ ದಿನೇಶ್ ಪಾಟೀಲ್ ಹಾಗೂ ತಂಡದ ಕರ್ತವ್ಯಕ್ಕೆ ಅಡ್ಡಿಪಡಿಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಬಂಗಾರಪೇಟೆ ತಾಲೂಕಿನ ಕಾಮಸಮುದ್ರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಮನೆ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಅರೋಪಿ ಚಂದ್ರಪ್ಪ ನೀಡಿದ ಮಾಹಿತಿ ಮೇರೆಗೆ ಮಾಲು ವಶಕ್ಕೆ ಪಡೆಯಲು ತೆರಳಿದ್ದ ಸಂದರ್ಭದಲ್ಲಿ ಬೆದರಿಕೆ ಹಾಕಿದ್ದಾರೆ ಎಂದು ತಿಳಿದುಬಂದಿದೆ.

    ಈ ಸಂಬಂಧ ರಾಬರ್ಟ ಸನ್ ಪೇಟೆ ಪೊಲೀಸ್ ಠಾಣೆಯಲ್ಲಿ ಜ್ಯುವೆಲ್ಲರಿ ಶಾಪ್ ಮಾಲೀಕ ಪ್ರಕಾಶ್ ಚಂದ್ ಹಾಗು ಮೂವರು ಮಕ್ಕಳ ವಿರುದ್ಧ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿದೆ.