Tag: Jewelery Shop

  • ಬಳ್ಳಾರಿಯ ಜ್ಯುವೆಲ್ಲರಿ ಅಂಗಡಿಯಲ್ಲಿ ಎಸಿ ಸ್ಫೋಟ – ಮೂವರಿಗೆ ಗಂಭೀರ ಗಾಯ

    ಬಳ್ಳಾರಿಯ ಜ್ಯುವೆಲ್ಲರಿ ಅಂಗಡಿಯಲ್ಲಿ ಎಸಿ ಸ್ಫೋಟ – ಮೂವರಿಗೆ ಗಂಭೀರ ಗಾಯ

    ಬಳ್ಳಾರಿ: ಕಲ್ಯಾಣ್ ಜ್ಯುವೆಲರ್ಸ್‍ನಲ್ಲಿ (Jewelery shop) ಶಾರ್ಟ್ ಸರ್ಕ್ಯೂಟ್‌ನಿಂದ ಎಸಿ ಸ್ಫೋಟಗೊಂಡ (AC Blast) ಪರಿಣಾಮ ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ.

    ಬಳ್ಳಾರಿ (Bellary)- ಬೆಂಗಳೂರು ರಸ್ತೆಯಲ್ಲಿರುವ ಮಳಿಗೆಯಲ್ಲಿ ಈ ಅವಘಡ ಸಂಭವಿಸಿದೆ. ಏಕಾಏಕಿ ಎಸಿ ಬ್ಲಾಸ್ಟ್ ಆದ ಪರಿಣಾಮ ಮಳಿಗೆಯಲ್ಲಿದ್ದ ವಸ್ತುಗಳು ಚೆಲ್ಲಾಪಿಲ್ಲಿಯಾಗಿವೆ. ಸ್ಫೋಟದ ತೀವ್ರತೆಗೆ ಕಿಟಕಿ ಗಾಜುಗಳು ಒಡೆದು ಹೋಗಿವೆ. ಅಲ್ಲದೇ ಮಳಿಗೆಯಲ್ಲಿ ದಟ್ಟ ಹೊಗೆ ಆವರಿಸಿದೆ. ಇದನ್ನೂ ಓದಿ: ಪ್ರಜ್ವಲ್‌ ಕೇಸ್‌ – ಜಡ್ಜ್‌ ಮುಂದೆ ಸಂತ್ರಸ್ತೆಯಿಂದ ಹೇಳಿಕೆ: ಏನಿದು ಸಿಆರ್​ಸಿಪಿ ಸೆಕ್ಷನ್ 164? ಹೇಳಿಕೆಗೆ ಯಾಕಿಷ್ಟು ಮಹತ್ವ?

    ಗಾಯಳುಗಳನ್ನು ಬಳ್ಳಾರಿಯ ವಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಓರ್ವ ಗಾಯಾಳುವಿನ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ.

    ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಹಾಗೂ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ಬಿಸಿಲಿನ ತಾಪಕ್ಕೆ ಹೊಲದ ಕೆಲಸಕ್ಕೆ ಹೋಗಿದ್ದ ರೈತ ಬಲಿ

  • ಇನ್ಶುರೆನ್ಸ್ ಹಣಕ್ಕೆ ಕಳ್ಳತನದ ಕತೆ – ಜ್ಯುವೆಲ್ಲರಿ ಮಾಲೀಕ ಅರೆಸ್ಟ್

    ಇನ್ಶುರೆನ್ಸ್ ಹಣಕ್ಕೆ ಕಳ್ಳತನದ ಕತೆ – ಜ್ಯುವೆಲ್ಲರಿ ಮಾಲೀಕ ಅರೆಸ್ಟ್

    ಬೆಂಗಳೂರು: ನಗರದ ಕೆ.ಆರ್. ಮಾರ್ಕೆಟ್ (KR Market) ಫ್ಲೈಓವರ್‌ನಲ್ಲಿ ಜು.15 ರಂದು ನಡೆದಿದ್ದ ದರೊಡೆ ಪ್ರಕರಣಕ್ಕೆ ಸ್ಫೋಟಕ ತಿರುವು ಸಿಕ್ಕಿದೆ. 3 ಕೆ.ಜಿ 780 ಗ್ರಾಂ ತೂಕದ ಸುಮಾರು 1.70 ಕೋಟಿ ರೂ. ಮೌಲ್ಯದ ಚಿನ್ನವನ್ನು ದರೋಡೆಕೋರರು ದೋಚಿದ್ದಾರೆ ಎಂದು ಮಾಲೀಕನೇ ಕತೆ ಕಟ್ಟಿರುವುದು ಬೆಳಕಿಗೆ ಬಂದಿದೆ.

    ಇನ್ಶುರೆನ್ಸ್ ದುಡ್ಡಿನ ದುರಾಸೆಗೆ ಬಿದ್ದು ಚಿನ್ನದಂಗಡಿ (Jewelery Shop) ಮಾಲೀಕನೇ ಕಳ್ಳತನವಾಗಿದೆ ಎಂದು ಕತೆ ಕಟ್ಟಿದ್ದಾನೆ ಎಂದು ತನಿಖೆ ವೇಳೆ ಬಯಲಾಗಿದೆ. ಕೇಸರ್ ಚಿನ್ನದಂಗಡಿ ಮಾಲೀಕ ಈ ಪ್ಲಾನ್ ಮಾಡಿ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಈ ಪ್ರಕರಣದಲ್ಲಿ ಮಾಲೀಕ ಸೇರಿ ಇಬ್ಬರು ಅಪ್ರಾಪ್ತರನ್ನು ಪೊಲೀಸರು (Police) ಬಂಧಿಸಿದ್ದಾರೆ. ಇದನ್ನೂ ಓದಿ: ಮಣಿಪುರದಲ್ಲಿ ಮಹಿಳೆಯರ ಬೆತ್ತಲೆ ಮೆರವಣಿಗೆ ಕೇಸ್‌ – ಮಹಿಳಾ ನ್ಯಾಯಾಧೀಶರ ನೇತೃತ್ವದಲ್ಲಿ ಸಮಿತಿ ರಚನೆ?

    ಆರೋಪಿ ನಿಜವಾಗಿಯೂ ಕಳ್ಳತನವಾದಂತೆ ಬಿಂಬಿಸಿದ್ದ. ಬ್ಯಾಗ್ ಕಸಿದುಕೊಂಡು ಸ್ಕೂಟರ್ ಹತ್ತಿಕೊಂಡು ಹೋಗಿದ್ದಾರೆ ಎಂದು ಕತೆ ಕಟ್ಟಿದ್ದ. ಬಳಿಕ ಮಾರ್ಕೆಟ್ ಫ್ಲೈಓವರ್ ಮೂಲಕ ಸ್ಕೂಟರ್‌ನಲ್ಲಿ ತೆರಳಿದ್ದಾರೆ ಎಂದು ಪೊಲೀಸರಿಗೆ ಅನುಮಾನ ಬರದಂತೆ ಪ್ಲಾನ್ ಮಾಡಿ ದೂರು ನೀಡಿದ್ದ.

    ಸಿಸಿಟಿವಿ ಇಲ್ಲದ ಮಾರ್ಕೆಟ್ ಫ್ಲೈಓವರ್ ಮೇಲೆ ಚಿನ್ನ ದರೋಡೆಯಾಗಿದ್ದರ ಬಗ್ಗೆ ಕಾಟನ್‍ಪೇಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡದ್ದರು. ಬಳಿಕ ಮಾಲೀಕ ರಾಜು ಜೈನ್‍ನನ್ನು ವಿಚಾರಣೆ ಮಾಡಿದ್ದರು. ಅಲ್ಲದೇ ಚಿನ್ನ ತೆಗೆದುಕೊಂಡು ಹೋಗಿದ್ದ ಹುಡುಗರನ್ನು ವಿಚಾರಣೆ ಸಹ ಮಾಡಿದ್ದರು. ಇಷ್ಟಾದರೂ ಯಾವುದೇ ಸುಳಿವು ಸಹ ಸಿಕ್ಕಿರಲಿಲ್ಲ.

    ಬಳಿಕ ಚಿನ್ನದಂಗಡಿಯ ಹುಡುಗ ಸೈಡ್‍ಗೆ ಹೋಗಿ ವಾಟ್ಸಪ್ ಕಾಲ್ ಮಾಡಿದ್ದರ ಮೇಲೆ ಅನುಮಾನಗೊಂಡ ಪೊಲೀಸರು ವಿಚಾರಣೆ ನಡೆಸಿದಾಗ ಅಸಲಿ ಸತ್ಯ ಹೊರಗೆ ಬಂದಿದೆ. ತನಿಖೆ ವೇಳೆ ಹುಡುಗರಿಗೆ ಪೊಲೀಸರ ಜೊತೆ ಹೇಗೆ ವರ್ತಿಸಬೇಕು ಎಂದು 15 ದಿನಗಳ ಕಾಲ ಹೇಳಿ ಕೊಟ್ಟಿದ್ದ ಎಂಬ ರೋಚಕ ವಿಚಾರ ಬೆಳಕಿಗೆ ಬಂದಿದೆ.

    ಚಿನ್ನದ ವ್ಯಾಪಾರಿ ತಮ್ಮ ಸ್ಕೂಟರ್‍ನಲ್ಲಿ ಚಿನ್ನ ಇಟ್ಟುಕೊಂಡು ಫ್ಲೈಓವರ್‍ನಲ್ಲಿ ಹೋಗುತ್ತಿದ್ದ ವೇಳೆ ಮತ್ತೊಂದು ಬೈಕ್‍ನಲ್ಲಿ ಬಂದಿದ್ದ ಇಬ್ಬರು ಅರೋಪಿಗಳು, ಫ್ಲೈಓವರ್ ಮೇಲೆ ಚಲಿಸುತಿದ್ದ ಬೈಕ್‍ಗೆ ಅಡ್ಡ ಬಂದು ಬ್ಯಾಗ್ ಕಸಿದು ಪರಾರಿಯಾಗಿದ್ದಾರೆ ಎಂದು ಆರೋಪಿಗಳು ಕತೆ ಕಟ್ಟಿದ್ದರು. ಇದನ್ನೂ ಓದಿ: ಫೆರಿಫೆರಲ್ ರಿಂಗ್ ರಸ್ತೆ ನಿರ್ಮಾಣ ಯೋಜನೆ ರದ್ದು ಮಾಡಲು ಸಾಧ್ಯವಿಲ್ಲ: ಡಿಕೆಶಿ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಭಾರೀ ಮಳೆಗೆ ಪ್ರವಾಹದಂತಾದ ಜ್ಯುವೆಲ್ಲರಿ ಶಾಪ್ – ಕೊಚ್ಚಿ ಹೋಯ್ತು 2.5 ಕೋಟಿಯ ಆಭರಣ

    ಭಾರೀ ಮಳೆಗೆ ಪ್ರವಾಹದಂತಾದ ಜ್ಯುವೆಲ್ಲರಿ ಶಾಪ್ – ಕೊಚ್ಚಿ ಹೋಯ್ತು 2.5 ಕೋಟಿಯ ಆಭರಣ

    ಬೆಂಗಳೂರು: ಭಾನುವಾರ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ (Bengaluru) ಸುರಿದ ಭಾರೀ ಮಳೆಗೆ (Rain) ಹಲವೆಡೆ ಅವಾಂತರಗಳು ಸೃಷ್ಟಿಯಾಗಿವೆ. ಸಿಲಿಕಾನ್ ಸಿಟಿಯಲ್ಲಿ ಒಂದೇ ದಿನ ಇಬ್ಬರ ಸಾವಾಗಿದೆ. ಇದೇ ರೀತಿ ನಗರದ ಆಭರಣದ ಅಂಗಡಿಯೊಂದಕ್ಕೆ (Jewelery Shop) ನೀರು ನುಗ್ಗಿ ಆಭರಣಗಳು ನೀರಲ್ಲಿ ಕೊಚ್ಚಿ ಹೋಗಿರುವ ಘಟನೆಯೂ ನಡೆದಿದೆ.

    ಮಲ್ಲೇಶ್ವರಂನ (Malleshwaram) ಭರಣದ ಅಂಗಡಿಯೊಂದಕ್ಕೆ ಮಳೆಯ ನೀರು ನುಗ್ಗಿದ್ದು, ಅಂಗಡಿಯಲ್ಲಿದ್ದ ಅರ್ಧಕ್ಕರ್ಧ ಆಭರಣಗಳು ಕೊಚ್ಚಿ ಹೋಗಿವೆ. ಅಂಗಡಿಯಲ್ಲಿದ್ದ ಫರ್ನಿಚರ್ಸ್, ಜ್ಯುವೆಲ್ಲರಿ ಹಾಗೂ 50 ಸಾವಿರ ರೂ. ಹಣ ಅಂಗಡಿಯ ಹಿಂಭಾಗದ ಬಾಗಿಲಿನ ಮೂಲಕ ಕೊಚ್ಚಿ ಹೋಗಿದೆ.

    ಆಭರಣದ ಅಂಗಡಿ ಆರಂಭವಾಗಿ ಮೇ 27ಕ್ಕೆ 1 ವರ್ಷ ತುಂಬಲಿದೆ. ಆದರೆ ಏಕಾಏಕಿ ಸುರಿದ ಮಳೆಯಿಂದ ಅಂಗಡಿಗೆ ರಭಸವಾಗಿ ನೀರು ನುಗ್ಗಿ ಮಾಲೀಕರು ಬೆಲೆಬಾಳುವ ವಸ್ತುಗಳನ್ನೆಲ್ಲಾ ಕಳೆದುಕೊಂಡಿದ್ದಾರೆ. ಇದೀಗ ಅಂಗಡಿ ಮಾಲಕಿ ಪ್ರಿಯಾ ಏನೂ ತೋಚದೇ ಕಣ್ಣೀರು ಹಾಕಿದ್ದಾರೆ. ಇದನ್ನೂ ಓದಿ: ಯುವತಿಯ ರಕ್ಷಣೆಗೆ ಪ್ರಯತ್ನ ಪಟ್ಟರೂ ಸಾಧ್ಯವಾಗಲಿಲ್ಲ: ನೀರಿಗೆ ಧುಮುಕಿ ಐವರನ್ನು ರಕ್ಷಿಸಿದ ‘ಪಬ್ಲಿಕ್’ ಹೀರೋ

    ಅಂಗಡಿಗೆ ನೀರು ತುಂಬುತ್ತಿದ್ದಂತೆ ಪ್ರಿಯಾ ಬಿಬಿಎಂಪಿ ಅಧಿಕಾರಿಗಳಿಗೆ ಕರೆ ಮಾಡಿ ಮಾಹಿತಿ ನೀಡಿದ್ದರು. ಆದರೆ ಅಧಿಕಾರಿಗಳು ಯಾವುದಕ್ಕೂ ಕ್ಯಾರೇ ಅಂದಿರಲಿಲ್ಲ. ಇದೀಗ ಸುಮಾರು 2 ಕೋಟಿ ರೂ. ವೆಚ್ಚದ ಆಭರಣ ಹಾಗೂ ಫರ್ನಿಚರ್ಸ್ಗಳನ್ನು ಮಾಲೀಕರು ಕಳೆದುಕೊಂಡಿದ್ದಾರೆ. ಇದನ್ನೂ ಓದಿ: ಅಂಡರ್ ಪಾಸ್‌ನಲ್ಲಿ ಸಿಲುಕಿದ್ದ ಐವರ ರಕ್ಷಣೆ – ಪಬ್ಲಿಕ್ ಟಿವಿ ಡ್ರೈವರ್‌ಗೆ ಬಹುಮಾನ ಘೋಷಣೆ

  • ಪೊಲೀಸರ ಸೋಗಿನಲ್ಲಿ ಕಳ್ಳತನ- ನೌಕರ ನೆನಪಿಟ್ಟುಕೊಂಡಿದ್ದ ಜೀಪ್ ನಂಬರ್ ಆಧರಿಸಿ ಆರೋಪಿಗಳು ಅರೆಸ್ಟ್

    ಪೊಲೀಸರ ಸೋಗಿನಲ್ಲಿ ಕಳ್ಳತನ- ನೌಕರ ನೆನಪಿಟ್ಟುಕೊಂಡಿದ್ದ ಜೀಪ್ ನಂಬರ್ ಆಧರಿಸಿ ಆರೋಪಿಗಳು ಅರೆಸ್ಟ್

    ಬೆಂಗಳೂರು: ಪೊಲೀಸರ ಸೋಗಿನಲ್ಲಿ ಚಿನ್ನಾಭರಣ ಅಂಗಡಿಗೆ ನುಗ್ಗಿದ ಕಳ್ಳರು, ರೇಡ್ ಮಾಡುವ ನೆಪದಲ್ಲಿ 800 ಗ್ರಾಂ. ಚಿನ್ನವನ್ನು ಹೊತ್ತೊಯ್ದಿದ್ದು, ಇದೀಗ ನಾಲ್ವರು ಆರೋಪಿಗಳನ್ನು ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.

    ಸಿಲಿಕಾನ್ ಸಿಟಿಯ ಹಲಸೂರು ಗೇಟ್ ನಗರ್ತಪೇಟೆಯಲ್ಲಿ ಘಟನೆ ನಡೆದಿದ್ದು, ಚಿನ್ನಾಭರಣ ಪಾಲಿಶ್ ಮಾಡುವ ಗೀತಾ ಜ್ಯುವೆಲರ್ಸ್‍ಗೆ ಆರು ಜನ ಪೊಲೀಸ್ ವೇಷಧಾರಿಗಳು ನುಗ್ಗಿ ಸುಮಾರು 800 ಗ್ರಾಂ. ಚಿನ್ನಾಭರಣ, ದಾಖಲೆಗಳನ್ನು ಕಳ್ಳತನ ಮಾಡಿದ್ದರು. ಪ್ರಕರಣಿಕ್ಕೆ ಸಂಬಂಧಿಸಿದಂತೆ ಪೊಲೀಸರು ಇದೀಗ ನಾಗಮಂಗಲ ಮೂಲದ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.

    ದೀಪಾವಳಿ ಹಬ್ಬದ ಸಂದರ್ಭದಲ್ಲಿ ನಕಲಿ ಚಿನ್ನ ಮಾರಾಟ ಮಾಡುತ್ತಿರುವುದಾಗಿ ಹೇಳಿ ನಕಲಿ ಪೊಲೀಸರು ದಾಳಿ ಮಾಡಿದ್ದಾರೆ. ನಾವು ಪೊಲೀಸರು ರೇಡ್ ಗೆ ಬಂದಿದ್ದೆವೆ ಎಂದು ಹೇಳಿ ಕಳ್ಳತನ ಮಾಡಿದ್ದಾರೆ. ಅಂಗಡಿ ಕೆಲಸಗಾರನನ್ನು ಜೀಪ್ ನಲ್ಲಿ ಕೂರಿಸಿ ಕಳ್ಳರು ದಾಖಲೆ ಕೊಂಡೊಯ್ದಿದ್ದಾರೆ. ಅಲ್ಲದೆ ಕೋಲ್ಕತ್ತಾದಲ್ಲಿದ್ದ ಗೀತಾ ಜ್ಯುವೆಲರ್ಸ್ ಮಾಲೀಕನಿಗೆ ಕರೆ ಮಾಡಿ, ನಿಮ್ಮ ಅಂಗಡಿ ಮೇಲೆ ರೇಡ್ ಮಾಡಿದ್ದೇವೆ ಪೊಲೀಸ್ ಠಾಣೆಗೆ ಬನ್ನಿ ಎಂದು ಕರೆದಿದ್ದಾರೆ.

    ಕಳ್ಳರ ಮಾತು ನಂಬಿ ಗೀತಾ ಜ್ಯುವೆಲರ್ಸ್ ಮಾಲೀಕ ಕಾರ್ತಿಕ್ ಕೋಲ್ಕತ್ತಾ ದಿಂದ ಬಂದಿದ್ದು, ಬಳಿಕ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ವಿಚಾರಿಸಿದ್ದಾರೆ. ಈ ವೇಳೆ ಜ್ಯುವೆಲರ್ಸ್ ನಲ್ಲಿ ಕಳ್ಳತನ ಆಗಿರುವುದು ಬೆಳಕಿಗೆ ಬಂದಿದೆ. ತಕ್ಷಣವೇ ಕಾರ್ತಿಕ್ ಅವರು ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರಿನ್ವಯ ಪ್ರಕರಣ ದಾಖಲಿಸಿಕೊಂಡು ಅರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದರು.

    ಜೀಪ್ ನಂಬರ್ ಆಧಾರದ ಮೇಲೆ ಬಂಧನ
    ಪ್ರಕರಣಕ್ಕೆ ಸಂಬಂಧಿಸಿದಂತೆ ಆರಂಭದಲ್ಲಿ ಜ್ಯುವಲರಿ ಶಾಪ್ ನೌಕರರನ್ನು ವಿಚಾರಣೆ ನಡೆಸಿದ್ದು, ಈ ವೇಳೆ ನೌಕರ ಜೀಪ್ ನಂಬರ್ ನೆನಪಿಟ್ಟುಕೊಂಡಿದ್ದನ್ನು ಹೇಳಿದ್ದಾರೆ. ಜೀಪ್ ನಂಬರ್ ಆಧಾರದ ಮೇಲೆ ನಾಲ್ವರು ಆರೋಪಿಗಳನ್ನು ಇದೀಗ ಪೊಲಿಸರು ಬಂಧಿಸಿದ್ದಾರೆ. ನಾಗಮಂಗಲ ಮೂಲದ ನಾಲ್ವರನ್ನ ಹಲಸೂರು ಗೇಟ್ ಪೊಲೀಸರು ಬಂಧಿಸಿದ್ದು, ಉಳಿದ ಇಬ್ಬರು ಆರೋಪಿಗಳಿಗಾಗಿ ಶೋಧ ಕಾರ್ಯ ನಡೆಸಿದ್ದಾರೆ.

  • ವಿದೇಶಿ ಕರೆನ್ಸಿ ತೋರಿಸಿ 18 ಸಾವಿರ ಜೇಬಿಗೆ ಇಳಿಸಿ ವಿದೇಶಿಗರು ಪರಾರಿ

    ವಿದೇಶಿ ಕರೆನ್ಸಿ ತೋರಿಸಿ 18 ಸಾವಿರ ಜೇಬಿಗೆ ಇಳಿಸಿ ವಿದೇಶಿಗರು ಪರಾರಿ

    ಗದಗ: ಬಂಗಾರದ ಮೂಗುತಿ ಖರೀದಿಗಾಗಿ ವಿದೇಶಿಗರ ಸೋಗಿನಲ್ಲಿ ಬಂದು ಬರೋಬ್ಬರಿ 18 ಸಾವಿರ ರೂಪಾಯಿ ಎಗರಿಸಿ ಪರಾರಿಯಾದ ಘಟನೆ ಜಿಲ್ಲೆಯ ರೋಣ ಪಟ್ಟಣದಲ್ಲಿ ನಡೆದಿದೆ.

    ಪಟ್ಟಣದ ಶ್ರೀ ಲಕ್ಷ್ಮೀ ವೇಂಕಟೇಶ್ವರ ಜುವೆಲರ್ಸ್ ಶಾಪ್‍ಗೆ ಬಂದ ಯುವಕ-ಯುವತಿಯರಿಬ್ಬರು ವಿದೇಶಿಗರ ಸ್ಟೈಲ್‍ನಲ್ಲಿ ಇಂಗ್ಲಿಷ್ ಮಾತನಾಡಿದ್ದಾರೆ. ಚಿನ್ನದ ಮೂಗುತಿ ಬೇಕೆಂದು ಹೇಳಿ ಮೂಗುತಿ ಖರೀದಿಸಿ ವಿದೇಶಿ ಕರೆನ್ಸಿ ನೀಡಿದ್ದಾರೆ. ಈ ನೋಟು ನಮ್ಮಲ್ಲಿ ನಡೆಯುವುದಿಲ್ಲ, ಭಾರತೀಯ ನೋಟು ಕೊಡಿ ಎಂದು ಅಂಗಡಿ ಮಾಲೀಕ ಕೇಳಿದ್ದಾರೆ. ನಮ್ಮಲ್ಲಿ ಭಾರತೀಯ ನೋಟು ಇಲ್ಲ, ಅದು ಹೇಗಿರುತ್ತೆ ತೋರಿಸಿ ಎಂದು ಪುಸಲಾಯಿಸಿದ್ದಾರೆ.

    ಆಗ ಅಂಗಡಿ ಮಾಲೀಕ, ಮೊದಲು ತನ್ನ ಬಳಿಯಿರುವ 2 ಸಾವಿರದ ನೋಟು ತೋರಿಸಿದ್ದಾರೆ. ನಂತರ ಬೇರೆ ಯಾವ ಯಾವ ನೋಟು ಇದೆ ತೋರಿಸಿ ಎಂದಿದ್ದಾರೆ. ಆಗ 10 ರೂಪಾಯಿನಿಂದ ಹಿಡಿದು 2 ಸಾವಿರ ರೂಪಾಯಿವರೆಗೆ ಇರುವ ಕಂತೆ ಕಂತೆ ನೋಟುಗಳನ್ನು ತೋರಿಸಿದ್ದಾರೆ. ಆಗ ಈ ಕಳ್ಳರು ಆ ನೋಟಿನ ಕಂತೆಯನ್ನು ಹಿಡಿದು, ನಂಬರ್, ಭಾಷೆ, ಚಿತ್ರ ಎಲ್ಲವನ್ನು ನೋಡುವ ರೀತಿ ನಟಿಸಿದ್ದಾರೆ. ಆಗ ಅಲ್ಲಿದ್ದ ಯುವತಿ ಮಾಲೀಕನ ಗಮನ ಬೇರೆ ಕಡೆ ಸೇಳೆದಾಗ ಯುವಕ 18 ಸಾವಿರ ರೂಪಾಯಿ ಹಣವನ್ನು ಜೇಬಿಗೆ ಇಳಿಸಿಕೊಂಡಿದ್ದಾನೆ. ಈ ಎಲ್ಲ ದೃಶ್ಯಗಳು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

    ನಂತರ ಬ್ಯಾಂಕ್‍ಗೆ ಹೋಗಿ ಕರೆನ್ಸಿ ಬದಲಿಸಿಕೊಂಡು ಬರುವುದಾಗಿ ಹೇಳಿ, ಅಲ್ಲಿಂದ ಕಾಲ್ಕಿತ್ತಿದ್ದಾರೆ. ಅರ್ಧಗಂಟೆ ನಂತರ ಬೇರೆಯವರಿಗೆ ಹಣ ನೀಡಬೇಕಾದ ವೇಳೆ ಹಣವನ್ನು ಎಣಿಸಿಕೊಂಡಾಗ ಬರೋಬ್ಬರಿ 18 ಸಾವಿರ ರೂಪಾಯಿ ಇಲ್ಲವಾಗಿದೆ. ಸಿಸಿ ಕ್ಯಾಮೆರಾ ಚೆಕ್ ಮಾಡಿದಾಗ ವಿದೇಶಿಗರ ಅಸಲಿಯತ್ತು ಗೊತ್ತಾಗಿದೆ. ಈ ಸಂಬಂಧ ರೋಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ವಿದೇಶಿ ಕಳ್ಳರಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

  • ಬೆಕ್ಕು, ನಾಯಿ ಮಾಸ್ಕ್ ಧರಿಸಿ 30 ಕೆಜಿ ಚಿನ್ನಾಭರಣ ದೋಚಿದ ಕಿಲಾಡಿ ಕಳ್ಳರು

    ಬೆಕ್ಕು, ನಾಯಿ ಮಾಸ್ಕ್ ಧರಿಸಿ 30 ಕೆಜಿ ಚಿನ್ನಾಭರಣ ದೋಚಿದ ಕಿಲಾಡಿ ಕಳ್ಳರು

    ಚೆನ್ನೈ;  ಬೆಕ್ಕು ಮತ್ತು ನಾಯಿ ಮಾಸ್ಕ್ ಧರಿಸಿ ಜನಪ್ರಿಯ ಚಿನ್ನದಂಗಡಿಯಿಂದ 30 ಕೆ.ಜಿ ಚಿನ್ನಾಭರಣವನ್ನು ದೋಚಿರುವ ಘಟನೆ ತಮಿಳುನಾಡಿನ ತಿರುಚಿರಾಪಳ್ಳಿಯಲ್ಲಿ ನಡೆದಿದೆ.

    ಮಾಸ್ಕ್ ಧರಿಸಿ ಮಳಿಗೆಯ ಗೋಡೆ ಕೊರೆದು ಒಳಬಂದ ಇಬ್ಬರು ಕಳ್ಳರು, ನಗರದ ಹೆಸರಾಂತ ಆಭರಣ ಮಳಿಗೆ ಲಲಿತ ಜ್ಯುವೆಲ್ಲರಿ ಅಂಗಡಿಯಲ್ಲಿ ಸುಮಾರು 30 ಕೆಜಿಯ 800 ಆಭರಣಗಳನ್ನು ದೋಚಿಕೊಂಡು ಹೋಗಿದ್ದಾರೆ. ಈ ಆಭರಣಗಳ ಒಟ್ಟು ಮೌಲ್ಯ 13 ಕೋಟಿ ಇದೆ ಎಂದು ಪೊಲೀಸರು ತಿಳಿಸಿದರು.

    ಈ ವಿಚಾರದ ಬಗ್ಗೆ ಮಾತನಾಡಿರುವ ಅಂಗಡಿಯ ಮಾಲೀಕರಲ್ಲಿ ಒಬ್ಬರಾದ ಕಿರಣ್ ಕುಮಾರ್, ಶೋ ರೂಮ್‍ಗೆ 6 ಜನ ಸೆಕ್ಯುರಿಟಿ ಗಾರ್ಡ್‌ ಗಳು ಇದ್ದರೂ ಗೋಡೆ ಕೊರೆದು ಒಳಗೆ ಬಂದಿರುವ ಕಳ್ಳರು ಸುಮಾರು 90 ನಿಮಿಷ ಅಂಗಡಿಯ ಒಳಗಡೆ ಓಡಾಡಿ 30 ಕೆಜಿ 13 ಕೋಟಿ ಬೆಲೆ ಬಾಳುವ 800 ಬಗೆಯ ಚಿನ್ನಾಭರಣವನ್ನು ಕಳ್ಳತನ ಮಾಡಿಕೊಂಡು ಹೋಗಿದ್ದಾರೆ. ಮುಂಜಾನೆ ಸಿಬ್ಬಂದಿ ಬಂದು ಬಾಗಿಲು ತೆರೆದಾಗ ನಮಗೆ ಈ ವಿಚಾರ ಗೊತ್ತಾಗಿದೆ ಎಂದು ಹೇಳಿದ್ದಾರೆ.

    ಬಹಳ ಪ್ಲಾನ್ ಮಾಡಿ ಕಳ್ಳತನ ಮಾಡಿರುವ ಕಳ್ಳರು ಪೊಲೀಸ್ ಶ್ವಾನಗಳು ನಮ್ಮನ್ನು ಗುರುತಿಸಬಾರದು ಎಂಬ ಕಾರಣಕ್ಕೆ ಅವರು ಓಡಾಡಿದ ಜಾಗದಲ್ಲೆಲ್ಲ ಖಾರದ ಪುಡಿ ಹಾಕಿದ್ದಾರೆ. ಒಟ್ಟು ಮೂವರು ಸೇರಿ ಈ ಕಳ್ಳತನ ಮಾಡಿದ್ದು, ಇಬ್ಬರು ಅಂಡಿಯೊಳಗೆ ಬಂದರೆ ಒಬ್ಬ ಹೊರಗಡೆ ನಿಂತು ಪೊಲೀಸ್ ಬರುವುದನ್ನು ನೋಡುತ್ತಿರುತ್ತಾನೆ. ಆದರೆ ಈ ಎಲ್ಲಾ ದೃಶ್ಯಗಳು ಅಂಗಡಿಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

    ಈ ವಿಚಾರದ ಬಗ್ಗೆ ಮಾಹಿತಿ ನೀಡಿರುವ ಪೊಲೀಸ್ ಆಯುಕ್ತ ಎ ಅಮಲ್ರಾಜ್, ಕಳ್ಳರ ಸುಳಿವು ಹುಡುಕಲು ಸ್ಥಳೀಯ ಪೊಲೀಸರು ಹೋಗಿ ಸ್ಥಳ ಪರಿಶೀಲನೆ ಮಾಡಿ ಬಂದಿದ್ದಾರೆ. ಕೆಲ ಮುಖ್ಯ ಮಾಹಿತಿಗಳು ದೊರಕಿವೆ. ಆರೋಪಿಗಳನ್ನು ಬಂಧಿಸಲು ನಾವು ಹಲವಾರು ತಂಡಗಳನ್ನು ರಚಿಸಿದ್ದೇವೆ. ಅದಷ್ಟೂ ಬೇಗ ಅವರನ್ನು ಕಂಡುಹಿಡಿಯುತ್ತೇವೆ ಎಂದು ಹೇಳಿದ್ದಾರೆ.

  • ಹೆಲ್ಮೆಟ್ ಹಾಕಿಕೊಂಡು ಜ್ಯುವೆಲ್ಲರಿ ಶಾಪ್ ಕಳ್ಳತನಕ್ಕೆ ವಿಫಲ ಯತ್ನ- ವಿಡಿಯೋ ನೋಡಿ

    ಹೆಲ್ಮೆಟ್ ಹಾಕಿಕೊಂಡು ಜ್ಯುವೆಲ್ಲರಿ ಶಾಪ್ ಕಳ್ಳತನಕ್ಕೆ ವಿಫಲ ಯತ್ನ- ವಿಡಿಯೋ ನೋಡಿ

    ಚಿಕ್ಕಬಳ್ಳಾಪುರ: ಹೆಲ್ಮೆಟ್ ಧರಿಸಿ ದ್ವಿಚಕ್ರ ವಾಹನದಲ್ಲಿ ಬಂದ ಇಬ್ಬರು ಚೋರರು ಜ್ಯುವೆಲ್ಲರಿ ಶಾಪ್ ನಲ್ಲಿ ಕಳ್ಳತನ ಮಾಡಲು ಯತ್ನಿಸಿ ವಿಫಲವಾಗಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕಿನ ಬೂದಿಗೆರೆ ಗ್ರಾಮದಲ್ಲಿ ನಡೆದಿದೆ.

    ಶನಿವಾರ ಮಧ್ಯ ರಾತ್ರಿ ಈ ಘಟನೆ ನಡೆದಿದ್ದು, ಸಿಸಿಕ್ಯಾಮೆರಾದಲ್ಲಿ ಕಳ್ಳರ ವಿಫಲ ಯತ್ನ ಸೆರೆಯಾಗಿದೆ.

    ಲಕ್ಷ್ಮೀ ಜ್ಯೂವೆಲ್ಲರ್ಸ್ ಅಂಡ್ ಬ್ಯಾಂಕರ್ಸ್ ನಲ್ಲಿ ಕಳ್ಳತನಕ್ಕೆ ಯತ್ನಿಸಿದ್ದು, ಹೆಲ್ಮೆಟ್ ಧರಿಸಿ ಮೊದಲು ಅಂಗಡಿ ಮುಂದೆಯ ಗೇಟ್ ನ ಬೀಗ ಒಡೆದು ಕಳ್ಳತನಕ್ಕೆ ಮುಂದಾಗಿದ್ದಾರೆ. ನಂತರ ರಸ್ತೆ ಬದಿಯಲ್ಲಿ ಅಂಗಡಿಯಿದ್ದ ಕಾರಣ ಕಳ್ಳತನ ಮಾಡಲು ಸಾಧ್ಯವಾಗದೆ ಕೊನಗೆ ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ಹಿಂದುರಿಗಿದ್ದಾರೆ.

    ಈ ಕುರಿತು ಚನ್ನರಾಯಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    https://youtu.be/RKNu-Zkqjus