Tag: jewargi

  • ಶಾಸಕ ಅಜಯ್ ಸಿಂಗ್ ನಿವಾಸದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಮನೆ ಕೆಲಸದಾತನ ಶವ ಪತ್ತೆ

    ಶಾಸಕ ಅಜಯ್ ಸಿಂಗ್ ನಿವಾಸದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಮನೆ ಕೆಲಸದಾತನ ಶವ ಪತ್ತೆ

    ಕಲಬುರಗಿ: ಜೇವರ್ಗಿ (Jewargi) ಶಾಸಕ ಡಾ. ಅಜಯ್ ಸಿಂಗ್ (Ajay Singh) ನಿವಾಸದಲ್ಲಿ ಮನೆ ಕೆಲಸದ ವ್ಯಕ್ತಿಯ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.

    ಕಲಬುರಗಿ (Kalaburagi) ನಗರದ ಶರಣ ನಗರ ಬಡಾವಣೆಯಲ್ಲಿ ಶಾಸಕರ ನಿವಾಸದಲ್ಲಿರುವ ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ. ಮೃತ ವ್ಯಕ್ತಿಯನ್ನು ದೇವೇಂದ್ರ ಪಟ್ಟೆದಾರ ಎಂದು ಗುರುತಿಸಲಾಗಿದೆ. ಮೇಲ್ನೋಟಕ್ಕೆ ಆತ್ಮಹತ್ಯೆ ಎಂದು ತಿಳಿದುಬಂದರೂ ನಿಖರ ಕಾರಣ ತಿಳಿದುಬಂದಿಲ್ಲ. ಸ್ಥಳಕ್ಕೆ ಬೆರಳಚ್ಚು ತಜ್ಞರ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಬ್ರಹ್ಮಪೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಈ ಬಗ್ಗೆ ಮಾಹಿತಿ ನೀಡಿರುವ ಡಿಸಿಪಿ ಅಡ್ಡೂರು ಶ್ರೀನಿವಾಸಲು, ಅಜಯ್ ಸಿಂಗ್ ಅವರ ಮನೆಯಲ್ಲಿ ಕೆಲಸದಾತ ದೇವೇಂದ್ರನ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಬೆಳಗ್ಗೆ 6 ಗಂಟೆಗೆ ನಮಗೆ ಈ ಬಗ್ಗೆ ಮಾಹಿತಿ ಬಂದಿದೆ. ಎಫ್‌ಎಸ್‌ಎಲ್ ತಂಡದವರು, ನಮ್ಮ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಎಂದು ತಿಳಿಸಿದರು. ಇದನ್ನೂ ಓದಿ: ವರಮಹಾಲಕ್ಷ್ಮಿ ಹಬ್ಬಕ್ಕೆ ತಾವರೆ ಹೂ ಕೀಳಲು ಕೆರೆಗೆ ಇಳಿದ ತಂದೆ-ಮಗ ಸಾವು

    ಕಲಬುರಗಿ ತಾಲೂಕಿನ ಪಟ್ಟಣ ಗ್ರಾಮದ ನಿವಾಸಿದ್ದ ದೇವೇಂದ್ರ, ಅಜಯ್ ಸಿಂಗ್ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಬಗ್ಗೆ ಮಾಹಿತಿ ಇದೆ. ಘಟನೆ ನಡೆದ ಸಂದರ್ಭದಲ್ಲಿ ಅಜಯ್ ಸಿಂಗ್ ಅವರು ಮನೆಯಲ್ಲಿ ಇದ್ದ ಬಗ್ಗೆ ಮಾಹಿತಿ ಇಲ್ಲ. ಸಾವಿಗೆ ನಿಖರವಾದ ಯಾವುದೇ ಕಾರಣ ಸದ್ಯ ತಿಳಿದುಬಂದಿಲ್ಲ. ತನಿಖೆ ನಡೆದ ಬಳಿಕವಷ್ಟೇ ಸಾವಿನ ಹಿಂದಿರುವ ಕಾರಣ ಬಯಲಾಗಲಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಹೃದಯಾಘಾತದಿಂದ ಪೊಲೀಸ್ ಕಾನ್ಸ್‌ಟೇಬಲ್ ಸಾವು

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ನನ್ನನ್ನು ಇಲ್ಲೇ ಮಣ್ಣುಮಾಡಿ ಅಂತ 15 ವರ್ಷದ ಹಿಂದೆಯೇ ಗುಂಡಿ ತೋಡಿದ್ದ – ವ್ಯಕ್ತಿ ಮರಣದ ಬಳಿಕ ಅಲ್ಲೇ ಅಂತ್ಯಸಂಸ್ಕಾರ

    ನನ್ನನ್ನು ಇಲ್ಲೇ ಮಣ್ಣುಮಾಡಿ ಅಂತ 15 ವರ್ಷದ ಹಿಂದೆಯೇ ಗುಂಡಿ ತೋಡಿದ್ದ – ವ್ಯಕ್ತಿ ಮರಣದ ಬಳಿಕ ಅಲ್ಲೇ ಅಂತ್ಯಸಂಸ್ಕಾರ

    ಕಲಬುರಗಿ: ತನ್ನ ಸಾವಿನ ಬಳಿಕ ಯಾರಿಗೂ ಹೊರೆಯಾಗಬಾರದು ಎಂದು 15 ವರ್ಷಗಳ ಹಿಂದೆಯೇ ಗುಂಡಿ ತೋಡಿದ್ದ ವ್ಯಕ್ತಿ ನಿಧನರಾಗಿದ್ದು, ಇದೀಗ ಅವರೇ ತೋಡಿದ ಗುಂಡಿಯಲ್ಲಿ ಅಂತ್ಯಸಂಸ್ಕಾರ (Bury) ಮಾಡಲಾಗಿದೆ.

     

    ಕಲಬುರಗಿ (Kalaburagi) ಜಿಲ್ಲೆಯ ಜೇವರ್ಗಿ (Jewargi) ತಾಲೂಕಿನ ಹಿಪ್ಪರಗಾ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಅದೇ ಗ್ರಾಮದ ಸಿದ್ದಪ್ಪ (96) ನಿಧನ ಹೊಂದಿದ ವ್ಯಕ್ತಿ. ತಮ್ಮ ಸಾವಿನ ಬಳಿಕ ಯಾರಿಗೂ ಹೊರೆಯಾಗಬಾರದು ಎಂಬ ಕಾರಣಕ್ಕೆ 15 ವರ್ಷಗಳ ಹಿಂದೆ ಅವರೇ ತಮ್ಮ ಅಂತ್ಯಸಂಸ್ಕಾರಕ್ಕೆಂದು ಗುಂಡಿ ತೋಡಿದ್ದರು. ಇದನ್ನೂ ಓದಿ: Shakthi Scheme Effect- ಟ್ರಿಪ್‍ಗೆ ಹೋದ ಪತ್ನಿ ಮನೆಗೆ ಬಂದಿಲ್ಲವೆಂದು ಪತಿ ಅವಾಂತರ

    ಸಿದ್ದಪ್ಪ ಹಾಗೂ ಅವರ ಪತ್ನಿ ನೀಲಮ್ಮಳಿಗಾಗಿ 2 ಗುಂಡಿಯನ್ನು ತೋಡಲಾಗಿತ್ತು. 6 ವರ್ಷಗಳ ಹಿಂದೆ ನೀಲಮ್ಮ ನಿಧನರಾದಾಗ ಅವರಿಗಾಗಿ ತೋಡಿದ್ದ ಗುಂಡಿಯಲ್ಲಿಯೇ ಅಂತ್ಯಸಂಸ್ಕಾರ ಮಾಡಲಾಗಿತ್ತು. ಇದೀಗ ಸಿದ್ದಪ್ಪ ಕೂಡಾ ವಿಧಿವಶರಾಗಿದ್ದು, ಪತ್ನಿಯ ಪಕ್ಕದ ಗುಂಡಿಯಲ್ಲಿ ಅವರ ಅಂತ್ಯಸಂಸ್ಕಾರ ಮಾಡಲಾಗಿದೆ. ಇದನ್ನೂ ಓದಿ: ಮದುವೆಯಾಗಲು ಹೆಣ್ಣು ಸಿಗದೆ ಮನನೊಂದು ಯುವಕ ಆತ್ಮಹತ್ಯೆ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಜೇವರ್ಗಿ ತಹಶೀಲ್ದಾರ್ ಗೆ ಕೈ ನಾಯಕನ ಅವಾಜ್- ದೂರು ದಾಖಲು

    ಜೇವರ್ಗಿ ತಹಶೀಲ್ದಾರ್ ಗೆ ಕೈ ನಾಯಕನ ಅವಾಜ್- ದೂರು ದಾಖಲು

    ಕಲಬುರಗಿ: ಇತ್ತೀಚೆಗೆ ರಾಜ್ಯದಲ್ಲಿ ಅಧಿಕಾರಿಗಳ ಮೇಲೆ ಕಾಂಗ್ರೆಸ್ ಮುಖಂಡರ ಗುಂಡಾ ವರ್ತನೆ ಮಿತಿ ಮೀರಿದ್ದು, ಇದೀಗ ಕಲಬುರಗಿಯ ಜೇವರ್ಗಿ ತಹಶೀಲ್ದಾರ್ ಗೆ ಕೈ ನಾಯಕರೊಬ್ಬರು ಅವಾಜ್ ಹಾಕಿರೋ ಆರೋಪ ಕೇಳಿಬಂದಿದೆ.

    ಜಿಲ್ಲೆಯ ಜೇವರ್ಗಿ ತಾಲೂಕಿನ ಕಾಂಗ್ರೆಸ್ ಮುಖಂಡರಾಗಿರೋ ಶಾಂತಪ್ಪ ಕೂಡ್ಲಗಿ ಹಾಲಿ ಇಜೇರಿ ಜಿಲ್ಲಾ ಪಂಚಾಯತ್ ಸದಸ್ಯರಾಗಿದ್ದಾರೆ. ಇವರು ಫೆಬ್ರವರಿ 28ರಂದು ಕೊಳಕುರ ಗ್ರಾಮದ ರೈತರೊಬ್ಬರ ಭೂಮಿ ವಿವಾದ ಕುರಿತು ಮಾತನಾಡಲು ಜೇವರ್ಗಿ ತಹಶೀಲ್ದಾರ್ ಬಸವಲಿಂಗಪ್ಪ ನಾಯ್ಕೋಡಿ ಬಳಿ ಹೋಗಿದ್ದಾರೆ. ಈ ಸಂದರ್ಭದಲ್ಲಿ ನಾಯ್ಕೋಡಿ ಹಾಗು ಶಾಂತಪ್ಪ ಮಧ್ಯೆ ಮಾತಿನ ಚಕಮಕಿ ನಡೆದಿದ್ದು, ನಾನು ಹೇಳಿದಂತೆ ರೈತನಿಗೆ ಭೂಮಿ ಮಂಜೂರು ಮಾಡಬೇಕು. ಇಲ್ಲ ಅಂದ್ರೆ ಕುರ್ಚಿ ಖಾಲಿ ಮಾಡಬೇಕು ಅಂತಾ ಕಾಂಗ್ರೆಸ್ ಮುಖಂಡ ತಹಶೀಲ್ದಾರ್ ಗೆ ಅವಾಜ್ ಹಾಕಿದ್ದಾರೆ.

    ಇಜೇರಿ ಜಿಲ್ಲಾ ಪಂಚಾಯತ್ ಸದಸ್ಯ ಶಾಂತಪ್ಪ ಅವರು, ನಮ್ಮ ಕಚೇರಿಗೆ ಬಂದು ಕೊಳಕುರ ಗ್ರಾಮದ ಸರ್ವೇ ನಂಬರ್ 417 ಸರ್ಕಾರಿ ಜಮೀನಿನಲ್ಲಿ ಮೊರಾರ್ಜಿ ದೇಸಾಯಿ ಶಾಲೆಗೆ ಮಂಜೂರಾದ ಸ್ಥಳದಲ್ಲಿ, ಆ ಜಾಗ ಬೇರೆ ರೈತರ ಹೆಸರಿಗೆ ಮಂಜೂರಾಗಿದೆ ಅಂತಾ ತಕರಾರು ತೆಗೆದು, ನನ್ನನ್ನು ಅವಾಚ್ಯ ಪದಗಳಿಂದ ನಿಂದಿಸಿದ್ದಾರೆ. ನಾನು ಹೇಳಿದ ಹಾಗೆ ಜಮೀನು ರೈತನಿಗೆ ನೀಡಬೇಕು ಅಂತಾ ಅವಾಜ್ ಹಾಕಿದ್ದು, ಈ ಸಂದರ್ಭದಲ್ಲಿ ಕಚೇರಿಯಲ್ಲಿ ಕೆಲ ಕಾಲ ಬಿಗುವಿನ ವಾತಾವರಣ ನಿರ್ಮಿಸಿದ್ದಾರೆ. ಈ ಮೂಲಕ ಸರ್ಕಾರಿ ಕೆಲಸಕ್ಕೆ ಅಡೆತಡೆ ಮಾಡಿದ್ದಾರೆ. ಈ ಸಂಧರ್ಭದಲ್ಲಿ ಬುದ್ಧಿ ಹೇಳಲು ಬಂದ ಪ್ರೊಬೆಷನರಿ ತಹಶೀಲ್ದಾರ್ ನಾಗಮ್ಮ ಅವರೊಂದಿಗೂ ಕೂಡ ಇವರು ಸರಿಯಾಗಿ ಮಾತನಾಡಿಲ್ಲ. ಹೀಗಾಗಿ ಇವರ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದೇನೆ ಅಂತ ತಹಶೀಲ್ದಾರ್ ಬಸವಲಿಂಗಪ್ಪ ಹೇಳಿದ್ದಾರೆ.

    ಈ ಸಂದರ್ಭದಲ್ಲಿ ಸ್ಥಳೀಯ ಶಾಸಕ ಡಾ. ಅಜಯ್ ಸಿಂಗ್ ಸ್ಥಳಕ್ಕೆ ಆಗಮಿಸಿ ಇಬ್ಬರ ಜಗಳ ಬಿಡಿಸಿದ್ದಾರೆ. ಇದಾದ ಬಳಿಕ ಕೈ ಮುಖಂಡನ ಗುಂಡಾಗಿರಿ ಕುರಿತು ತಹಶೀಲ್ದಾರ ಜೇವರ್ಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ಕುರಿತು ಕಾಂಗ್ರೆಸ್ ಮುಖಂಡ ಶಾಂತಪ್ಪ ಕೂಡ್ಲಗಿಯವರನ್ನು ಕೇಳಿದ್ರೆ, ನಾನು ಅವಾಜ್ ಹಾಕಿಲ್ಲ. ನೊಂದ ರೈತನ ಪರ ಧ್ವನಿ ಎತ್ತಿದ್ರೆ ತಹಶೀಲ್ದಾರ್ ಸುಳ್ಳು ದೂರು ನೀಡಿದ್ದಾರೆ ಅಂತಾ ಹೇಳುತ್ತಿದ್ದಾರೆ.

     ಕೊಳಕುರ ಸರ್ವೆ ನಂಬರ್ 417 ಈ ಭೂಮಿ ಸರ್ಕಾರಿ ಭೂಮಿಯಾಗಿದ್ದು, 15 ವರ್ಷಗಳ ಹಿಂದೆ ಸರ್ಕಾರ ಅವನಿಗೆ ಆ ಭೂಮಿ ಮಂಜೂರಾತಿ ಮಾಡಿದೆ. ಇದರ ಎಲ್ಲಾ ದಾಖಲಾತಿಗಳು ಅವನ ಹೆಸರಿನಲ್ಲಿವೆ. ಆದ್ರು ಇವನ ಜಮೀನಿನಲ್ಲಿಯೇ ಮೊರಾರ್ಜಿ ಶಾಲೆ ಕಟ್ಟಲು ತಹಶೀಲ್ದಾರ್ ಅನುಮತಿ ಕೊಟ್ಟಿದ್ದಾರೆ. ಅದಕ್ಕಾಗಿ ಕೇಳಲು ನಾವು ಹೋದಾಗ ತಹಶೀಲ್ದಾರ್ ನನ್ನ ಕೈಯಲ್ಲಿಲ್ಲ ಅಂತಾ ಹೇಳಿದ್ದಾರೆ. ಈ ಕುರಿತು ರೈಟಿಂಗ್ ನಲ್ಲಿ ಕೊಡಿ ನ್ಯಾಯ ಕೇಳಲು ಕೋರ್ಟ್ ಗೆ ಹೋಗುತ್ತೇವೆ ಅಂತಾ ಹೇಳಿದ್ದೇವೆ. ಈ ಸಂದರ್ಭದಲ್ಲಿ ಶಾಸಕ ಅಜಯ್ ಸಿಂಗ್ ಅವರನ್ನು ಸಹ ಕರೆಸಿದಾಗ ಅಲ್ಲಿಗೆ ಬಂದಿದ್ದಾರೆ. ಅವರ ಮಾತು ಕೇಳದಿದ್ದಾಗ ಇಲ್ಲಿಂದ ಜಾಗ ಖಾಲಿ ಮಾಡು ಅಂತಾ ಹೇಳಿದ್ದೇವೆ. ಆದರೆ ಏಕವಚನದಲ್ಲಿ ಮಾತನಾಡಿಲ್ಲ, ಆದ್ರೆ ತಹಶೀಲ್ದಾರ ಅವರು ವಿನಾಕಾರಣ ಠಾಣೆಗೆ ದೂರು ನೀಡಿದ್ದಾರೆ ಅಂತ ಶಾಂತಪ್ಪ ಹೇಳಿದ್ದಾರೆ.

    ಕೈ ಮುಖಂಡನ ಅವಾಜ್ ಪ್ರಕರಣ ಇದೀಗ ಜೇವರ್ಗಿ ಪೊಲೀಸ್ ಠಾಣೆಯ ಮೆಟ್ಟಿಲೇರಿದೆ.