Tag: Jesus Christ

  • ನಿಮ್ಮ ನೆರೆಯವರನ್ನೂ ನಿಮ್ಮಂತೆಯೇ ಪ್ರೀತಿಸಿ – ಏಸುವಿನ ಸಂದೇಶ

    ನಿಮ್ಮ ನೆರೆಯವರನ್ನೂ ನಿಮ್ಮಂತೆಯೇ ಪ್ರೀತಿಸಿ – ಏಸುವಿನ ಸಂದೇಶ

    ವಿಶ್ವದಾದ್ಯಂತ ಡಿಸೆಂಬರ್‌ 25ರಂದು ಜಾತಿ, ಧರ್ಮಗಳನ್ನು ಮೀರಿ ಆಚರಿಸಲಾಗುವ ಕ್ರಿಸ್‌ಮಸ್‌ ಅನ್ನು ಭಾರತದಲ್ಲೂ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಕ್ರಿಸ್‌ ಎಂಬುದು ಏಸುವಿನ ಹೆಸರಾದರೆ, ಮಾಸ್‌ ಎಂಬುದು ಪ್ರಾರ್ಥಿಸುವ ಸಮೂಹವನ್ನು ಪ್ರತಿನಿಧಿಸುತ್ತದೆ. ಇವೆರಡು ಪದಗಳು ಒಂದಾದಾಗ ಕ್ರಿಸ್‌ಮಸ್‌ ಆಗುತ್ತದೆ!

    ಏಸುವಿನ ಸಂದೇಶ: ಏಸು ತನ್ನ 12ನೇ ವಯಸ್ಸಿನಲ್ಲೇ ಬೋಧಕರೊಂದಿಗೆ ಆಧ್ಯಾತ್ಮಿಕ ಚರ್ಚೆಯಲ್ಲಿ ತೊಡಗುತ್ತಿದ್ದ. 18ನೇ ವಯಸ್ಸಲ್ಲಿ ದೀಕ್ಷೆ ಪಡೆದು, ಬೋಧನೆಯಲ್ಲಿ ತೊಡಗಿಸಿಕೊಂಡ. ಜನರಿಗೆ ಸಂದೇಶವನ್ನು ನೀಡುವ ಜೊತೆಗೇ ಏಸು ಅನೇಕ ಪವಾಡಗಳನ್ನು ಮಾಡಿದ.

    ಏಸು ಅನೇಕ ರೋಗಿಗಳನ್ನು ಗುಣಪಡಿಸಿದ, ಆಹಾರ ಸಾಮಗ್ರಿಗಳ ಕೊರತೆಯಿದ್ದರೂ ಅದನ್ನೇ ಅಕ್ಷಯವಾಗಿಸಿ ಸಾವಿರಾರು ಜನರಿಗೆ ಊಟ ನೀಡಿದ. ಸತ್ತವರಿಗೆ ಪುನರ್‌ಜನ್ಮ ನೀಡಿದ. ಇಂತಹ ಪವಾಡಗಳಿಂದ ಆತ ಸಾಮಾನ್ಯ ವ್ಯಕ್ತಿ ಅಲ್ಲ ಎಂಬ ತೀರ್ಮಾನಕ್ಕೆ ಬಂದರು.

    ಏಸುವಿನ ಸಂದೇಶ ಅತ್ಯಂತ ನೇರ ಮತ್ತು ಸರಳವಾಗಿತ್ತು. ಆತ ಹೇಳುತ್ತಿದ್ದ ನೀತಿ ಕತೆಗಳು ಮತ್ತು ಹೇಳಿಕೆಗಳು ಜನರನ್ನು ಬಹಳ ಆಕರ್ಷಿಸಿಸುತ್ತಿದ್ದವು. ಆತ ಬೋಧಿಸಿದ ಮಹಾನ್‌ ಬೋಧನೆ ಪ್ರೀತಿಯೇ ಆಗಿತ್ತು. ಭಗವಂತನನ್ನು ಹೃದಯದಿಂದ ಪ್ರೀತಿಸಿ, ನಿಮ್ಮ ನೆರೆಯವರನ್ನೂ ನಿಮ್ಮಂತೆಯೇ ಪ್ರೀತಿಸಿ. ಪ್ರೀತಿಯೇ ಜೀವನ, ಇದರಿಂದಲೇ ಭಗವಂತನನ್ನು ತಲುಪಲು ಸಾಧ್ಯ ಎಂದು ಏಸು ಸಂದೇಶ ಕೊಟ್ಟರು.

    ಶಾಂತಿದೂತ: ಜನರ ಸೇವೆಯೇ ಶ್ರೇಷ್ಠ ಧರ್ಮವೆಂದು ಏಸು ಹೇಳಿದ. ಭೌತಿಕಕ್ಕಿಂತ ಆಧ್ಯಾತ್ಮಿಕತೆಯು ಹೆಚ್ಚು ಮುಖ್ಯವೆಂದ. ಪಾಪವನ್ನು ದ್ವೇಷಿಸಿ ಆದರೆ ಪಾಪಿಯನ್ನಲ್ಲ ಎಂಬ ಸಂದೇಶ ಸಾರಿದ. ೀ ಮೂಲಕ ಆತ ಶಾಂತಿದೂತನಾದ. ಇದು ಕೇವಲ ಬೋಧನೆಯಾಗಿರಲಿಲ್ಲ. ಆತ ಸ್ವತಃ ಇವುಗಳನ್ನು ಪಾಲಿಸಿ ತೋರಿಸಿದ. ಆತನನ್ನೇ ಶಿಲುಬೆಗೆ ಏರಿಸಿದ ಜನರನ್ನೂ ಕ್ಷಮಿಸಿದ. ಈ ಮೂಲಕ ಜಗತ್ತಿಗೆ ಕ್ಷಮೆ ಹಾಗೂ ಪ್ರೀತಿಯ ಸಂದೇಶ ಸಾರಿದ.

    ಏಸುವಿನ ಜನನ: ಏಸುಕ್ರಿಸ್ತನ ಜನನಕ್ಕೆ ಸಂಬಂಧಿಸಿದಂತೆ ಕೆಲವು ಕತೆಗಳಿವೆ. ದೇವದೂತ ಗೇಬ್ರಿಯಲ್ ಏಸುವಿನ ತಾಯಿ ಮೇರಿಯನ್ನು ಭೇಟಿಯಾಗಿ, ಪಾಪಗಳಿಂದ ಜನರನ್ನು ರಕ್ಷಿಸಲು ಪವಿತ್ರಾತ್ಮವು ಅವಳ ಮಗನಾಗಿ ಜನಿಸುತ್ತಾನೆ. ಆ ಮಗುವಿಗೆ ಏಸು ಎಂದು ಹೆಸರಿಡಬೇಕೆಂದೂ ಸೂಚಿಸುತ್ತಾನೆ.

    ಅದೇ ವೇಳೆಗೆ, ಪ್ರತಿಯೊಬ್ಬ ಪ್ರಜೆಯೂ ತಾವು ಹುಟ್ಟಿದ ಸ್ಥಳದಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳುವಂತೆ ರೋಮನ್‌ ಚಕ್ರವರ್ತಿ ಮಾಡಿದ್ದ ಆದೇಶವನ್ನು ಪಾಲಿಸಲು, ಬೆಥ್ಲೆಹೆಮ್‌ನಲ್ಲಿ ಜನಿಸಿದ್ದ ಜೋಸೆಫ್‌, ನಜರೇತ್‌ ಪಟ್ಟಣದಿಂದ ಅಲ್ಲಿಗೆ ಪ್ರಯಾಣಿಸಬೇಕಾಯಿತು. ಆತನೊಂದಿಗೆ ಗರ್ಭವತಿ ಪತ್ನಿ ಮೇರಿಯೂ ಇದ್ದಳು. ದಂಪತಿ ಅಲ್ಲಿಗೆ ಆಗಮಿಸಿದಾಗ ರಾತ್ರಿಯಾಗಿತ್ತು. ಅವರಿಗೆ ಉಳಿದುಕೊಳ್ಳಲು ಸ್ಥಳ ಸಿಗಲಿಲ್ಲ. ಈ ವೇಳೆ ಕುದುರೆ ಲಾಯದಲ್ಲಿ ಉಳಿದುಕೊಂಡಿದ್ದರು. ಆಗಲೇ ಏಸುವಿನ ಜನನವಾಯಿತು ಎನ್ನಲಾಗುತ್ತದೆ.

  • ಜೀಸಸ್‌ ಹುಟ್ಟಿದ ನಾಡಲ್ಲೇ ಕ್ರಿಸ್ಮಸ್‌ ಸಂಭ್ರಮ ಇಲ್ಲ

    ಜೀಸಸ್‌ ಹುಟ್ಟಿದ ನಾಡಲ್ಲೇ ಕ್ರಿಸ್ಮಸ್‌ ಸಂಭ್ರಮ ಇಲ್ಲ

    ಬೆತ್ಲೆಹೆಮ್‌ (ಪ್ಯಾಲೆಸ್ತೀನ್): ಜಗತ್ತಿನಾದ್ಯಂತ ಕ್ರಿಸ್ಮಸ್‌ (Christmas) ಹಬ್ಬದ ಸಂಭ್ರಮ ಮನೆ ಮಾಡಿದೆ. ಎಲ್ಲೆಡೆ ಏಸುಕ್ರಿಸ್ತನ ಸ್ಮರಣೆ ಮಾಡಲಾಗುತ್ತಿದೆ. ಇಂತಹ ಹೊತ್ತಿನಲ್ಲಿ ಜೀಸಸ್‌ (Jesus Christ) ಹುಟ್ಟಿದ ನಾಡಲ್ಲೇ ಕ್ರಿಸ್ಮಸ್‌ ಸಂಭ್ರಮವಿಲ್ಲ. ಕ್ರಿಸ್ಮಟ್‌ ಟ್ರೀ ಕೂಡ ಇಲ್ಲ. ಈ ನೆಲದಲ್ಲಿ ಮಾತ್ರ ಸೂತಕದ ಛಾಯೆ ಆವರಿಸಿದೆ.

    ಬೆತ್ಲೆಹೆಮ್‌ (Bethlehem) ಸಾಮಾನ್ಯವಾಗಿ ಕ್ರಿಸ್ಮಸ್‌ನಲ್ಲಿ ಅತ್ಯಂತ ಜನನಿಬಿಡವಾಗಿರುತ್ತದೆ. ಆದರೆ ಈ ವರ್ಷ ಯುದ್ಧದಿಂದಾಗಿ ಇಸ್ರೇಲಿ ಆಕ್ರಮಿತ ವೆಸ್ಟ್ ಬ್ಯಾಂಕ್‌ನಲ್ಲಿರುವ ಪ್ಯಾಲೇಸ್ಟಿನಿಯನ್ ಪಟ್ಟಣ ಪ್ರವಾಸಿಗರು ಮತ್ತು ಯಾತ್ರಿಕರಿಲ್ಲದೇ ಬಣಗುಡುತ್ತಿವೆ. ಹೋಟೆಲ್‌ಗಳು, ರೆಸ್ಟೋರೆಂಟ್‌ಗಳು ಮತ್ತು ಸ್ಮಾರಕ ಅಂಗಡಿಗಳು ಖಾಲಿ ಖಾಲಿಯಾಗಿವೆ. ಇದನ್ನೂ ಓದಿ: ಇಸ್ರೇಲ್ ವೈಮಾನಿಕ ದಾಳಿಯಲ್ಲಿ 78 ಮಂದಿ ಪ್ಯಾಲೆಸ್ತೇನಿಯರ ದುರ್ಮರಣ

    ಅಕ್ಟೋಬರ್ 7 ರಂದು ದಕ್ಷಿಣ ಇಸ್ರೇಲ್‌ನಲ್ಲಿ ಹಮಾಸ್ ದಾಳಿ ನಡೆಯಿತು. ಇದಾದ ಬಳಿಕ ಇಸ್ರೇಲ್‌ ಯುದ್ಧವನ್ನು ಘೋಷಿಸಿತು. ಗಾಜಾದ ಮೇಲೆ ಇಸ್ರೇಲ್‌ನ ಮಿಲಿಟರಿ ದಾಳಿ ಮತ್ತು ಪಶ್ಚಿಮ ದಂಡೆಯಲ್ಲಿ ಹಿಂಸಾಚಾರದ ಹೆಚ್ಚಳವಾಗಿದೆ. ಹೀಗಾಗಿ ಬೆತ್ಲೆಹೆಮ್‌ಗೆ ವ್ಯಾಪಾರ ಮಾಲೀಕರು ಯಾರೂ ಬರುತ್ತಿಲ್ಲ.

    ಇದು ಪಟ್ಟಣಕ್ಕೆ (ಬೆತ್ಲೆಹೆಮ್‌) ಬಂದೊದಗಿದ ಅತ್ಯಂತ ಕೆಟ್ಟ ಕ್ರಿಸ್ಮಸ್‌ ದಿನವಾಗಿದೆ. ಬೆತ್ಲೆಹೆಮ್‌ ಅನ್ನು ಬಂದ್‌ ಮಾಡಲಾಗಿದೆ. ಕ್ರಿಸ್ಮಸ್ ಟ್ರೀ ಇಲ್ಲ, ಸಂತೋಷವಿಲ್ಲ, ಕ್ರಿಸ್ಮಸ್ ಉತ್ಸಾಹವಿಲ್ಲ ಎಂದು ಸ್ಥಳೀಯರು ನೊಂದು ನುಡಿದಿದ್ದಾರೆ. ಇದನ್ನೂ ಓದಿ: ಭಾರತದ ಧ್ವಜವುಳ್ಳ ಕಚ್ಚಾತೈಲ ಟ್ಯಾಂಕರ್‌ ಮೇಲೆ ಹೌತಿ ಉಗ್ರರಿಂದ ಡ್ರೋನ್‌ ದಾಳಿ

    ಜೆರುಸಲೆಮ್‌ನ ದಕ್ಷಿಣದಲ್ಲಿರುವ ಬೆತ್ಲೆಹೆಮ್‌ ಜೀಸಸ್ ಜನಿಸಿದ ಪವಿತ್ರ ಸ್ಥಳ ಎಂದು ಕ್ರಿಶ್ಚಿಯನ್ನರು ನಂಬಿದ್ದಾರೆ. ನೇಟಿವಿಟಿ ಚರ್ಚ್ ನೋಡಲು ಪ್ರಪಂಚದ ಮೂಲೆ ಮೂಲೆಯಿಂದ ಜನ ಕ್ರಿಸ್ಮಸ್‌ ಸಂದರ್ಭದಲ್ಲಿ ಬರುತ್ತಿದ್ದರು. ಸ್ಥಳೀಯರಿಗೆ ಪ್ರವಾಸಿಗರೇ ಆದಾಯ ಮೂಲವಾಗಿದ್ದರು. ಆದರೆ ಯುದ್ಧದಿಂದಾಗಿ ಕ್ರಿಸ್ಮಸ್‌ ಸಂಭ್ರಮ ಇಲ್ಲದಂತಾಗಿದೆ.

    ಕ್ರಿಸ್ಮಸ್‌ ಸಂದರ್ಭದಲ್ಲಿ ತುಂಬಿ ತುಳುಕುತ್ತಿದ್ದ ಹೋಟೆಲ್‌ಗಳು ಈಗ ಖಾಲಿ ಹೊಡೆಯುತ್ತಿವೆ. ಕ್ರಿಸ್ಮಸ್ ಬ್ರೇಕ್ಫಾಸ್ಟ್ ಇಲ್ಲ, ಕ್ರಿಸ್ಮಸ್ ಡಿನ್ನರ್ ಇಲ್ಲ, ಕ್ರಿಸ್ಮಸ್ ಬಫೆ ಇಲ್ಲ ಎಂದು ಹೋಟೆಲ್‌ ಮಾಲೀಕರೊಬ್ಬರು ಬೇಸರ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಅಮೆರಿಕಾದಲ್ಲಿ ಹಿಂದೂ ದೇಗುಲದ ಗೋಡೆ ಮೇಲೆ ಖಲಿಸ್ತಾನಿ ಪರ ಬರಹ- ಭಾರೀ ಖಂಡನೆ

  • ಡಿಕೆಶಿ ಸ್ವಕ್ಷೇತ್ರದಲ್ಲಿ ಏಸುಕ್ರಿಸ್ತನ ಜಪ- ರೇಷನ್ ಕಾರ್ಡ್‍ನಲ್ಲಿ ಏಸುಕ್ರಿಸ್ತನ ಫೋಟೋ ಮುದ್ರಣ

    ಡಿಕೆಶಿ ಸ್ವಕ್ಷೇತ್ರದಲ್ಲಿ ಏಸುಕ್ರಿಸ್ತನ ಜಪ- ರೇಷನ್ ಕಾರ್ಡ್‍ನಲ್ಲಿ ಏಸುಕ್ರಿಸ್ತನ ಫೋಟೋ ಮುದ್ರಣ

    ರಾಮನಗರ: ಹಲಾಲ್, ಹಿಜಬ್ ಗಲಾಟೆ ನಡುವೆ ರಾಮನಗರ (Ramanagara) ಜಿಲ್ಲೆಯಲ್ಲಿ ಮತ್ತೊಂದು ವಿವಾದ ಶುರುವಾಗಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ (DK Shivakumar) ಸ್ವಗ್ರಾಮ ದೊಡ್ಡ ಆಲಹಳ್ಳಿಯಲ್ಲಿ ಪಡಿತರ ಚೀಟಿ (Ration Card) ಹಿಂಭಾಗ ಏಸು ಕ್ರಿಸ್ತ (Jesus Christ), ಲಕ್ಷ್ಮಿ ದೇವಿ ಫೋಟೋ ಮುದ್ರಿಸಲಾಗಿದೆ ಎಂಬ ಆರೋಪ ಕೇಳಿ ಬಂದಿದೆ.

    ಪಡಿತರ ಚೀಟಿ ಹಿಂಭಾಗ ಏಸು ಕ್ರಿಸ್ತನ ಫೋಟೋ ಮುದ್ರಿಸಲಾಗಿರುವ ಫೋಟೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ (Social Media) ವೈರಲ್ ಆಗಿದೆ. ಈ ಫೋಟೋ ವೈರಲ್ (Photo Viral) ಆಗುತ್ತಿದ್ದಂತೆ ಹಿಂದೂಪರ ಸಂಘಟನೆಗಳು ಆಕ್ರೋಶ ಹೊರ ಹಾಕಿವೆ. ಅಷ್ಟೇ ಅಲ್ಲದೇ ಸರ್ಕಾರದಿಂದ ನೀಡಲಾಗುವ ಪಡಿತರ ಚೀಟಿ ಹಿಂಭಾಗ ಏಸು ಕ್ರಿಸ್ತ, ಲಕ್ಷ್ಮಿ ದೇವಿ ಫೋಟೋ ಮುದ್ರಿಸಿರುವ ಬಗ್ಗೆ ಜಿಲ್ಲಾಧಿಕಾರಿಗಳು ಸೂಕ್ತ ತನಿಖೆ ನಡೆಸುವಂತೆ ಆಗ್ರಹಿಸಲು ಶ್ರೀರಾಮ ಸೇನೆ (Sri Rama Sene) ಮುಂದಾಗಿದೆ. ಇದನ್ನೂ ಓದಿ: ಹೈಕಮಾಂಡ್ ಕೈ ಕಾಲು ಕಟ್ಟಿ ಹಾಕಿ, ಖರ್ಗೆ ಕೈಯಲ್ಲಿ ಕೆಲಸ ಮಾಡಿಸ್ತಾರೆ: ಸುಧಾಕರ್

    ಈ ಬಗ್ಗೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಜಿಲ್ಲಾ ಉಪನಿರ್ದೇಶಕಿ ರಮ್ಯಾ ಮಾತನಾಡಿ, ಇದು ಸರ್ಕಾರದಿಂದ ಮುದ್ರಣವಾಗಿರುವ ಕಾರ್ಡ್ ಅಲ್ಲ, ಸ್ಥಳೀಯ ಸೈಬರ್‌ನಲ್ಲಿ ಮುದ್ರಣ ಮಾಡಲಾಗಿದೆ. ಆದರೆ ರೇಷನ್ ಕಾರ್ಡ್‍ನಲ್ಲಿ ಪ್ರಿಂಟ್ ಮಾಡಲಾಗಿಲ್ಲ. ಲ್ಯಾಮಿನೇಷನ್ ಮಾಡುವವರು ಈ ರೀತಿ ಪ್ರಿಂಟ್ ಮಾಡಿದ್ದಾರೆ. ನಮಗೆ ಈ ಬಗ್ಗೆ ದೂರು ಬಂದಿದೆ. ಈ ಕುರಿತು ಸೈಬರ್ ಸೆಂಟರ್‌ಗಳ ಮೇಲೆ ನಿಗಾ ವಹಿಸುತ್ತೇವೆ. ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮವಹಿಸುತ್ತೇವೆ ಎಂದು ತಿಳಿಸಿದರು. ಇದನ್ನೂ ಓದಿ: ನನ್ನ ವಿರುದ್ಧ ಒಂದೇ ಒಂದು ಭ್ರಷ್ಟಾಚಾರದ ಕೇಸ್ ಕಾಂಗ್ರೆಸ್ ಸಾಬೀತು ಮಾಡಲಿ- ಅಶ್ವಥ್ ನಾರಾಯಣ ಸವಾಲ್

    Live Tv
    [brid partner=56869869 player=32851 video=960834 autoplay=true]

  • ವಿಶ್ವ ಯುದ್ಧ ನಂತ್ರ ಫಸ್ಟ್ ಟೈಂ ಏಸುಕ್ರಿಸ್ತನ ಶಿಲ್ಪ ಸ್ಥಳಾಂತರ

    ವಿಶ್ವ ಯುದ್ಧ ನಂತ್ರ ಫಸ್ಟ್ ಟೈಂ ಏಸುಕ್ರಿಸ್ತನ ಶಿಲ್ಪ ಸ್ಥಳಾಂತರ

    ಕೀವ್: ರಷ್ಯಾ-ಉಕ್ರೇನ್ ಯುದ್ಧ ನಡೆಯುತ್ತಿರುವಂತೆಯೇ, ಎಲ್ವಿವ್‍ನ ಅರ್ಮೇನಿಯನ್ ಕ್ಯಾಥೆಡ್ರಲ್‍ನಲ್ಲಿರುವ ಯೇಸುಕ್ರಿಸ್ತನ ಶಿಲ್ಪವನ್ನು ಸ್ಥಳಾಂತರ ಮಾಡಲಾಗಿದೆ ಎಂದು ಪೂರ್ವ ಯುರೋಪಿಯನ್ ಮಾಧ್ಯಮ ಸಂಸ್ಥೆ ನೆಕ್ಸ್‌ಟಾ ಮಂಗಳವಾರ ವರದಿ ಮಾಡಿದೆ.

    ಈ ಹಿಂದೆ ವಿಶ್ವ ಸಮರ 2ರ (1939-1945) ಸಮಯದಲ್ಲಿ ಕ್ಯಾಥೆಡ್ರಲ್ ಚರ್ಚ್‍ನಿಂದ ಕೊನೆಯ ಬಾರಿಗೆ ಈ ಯೇಸುಕ್ರಿಸ್ತನ ಪ್ರತಿಮೆಯನ್ನು ಸ್ಥಳಾಂತರಿಸಲಾಗಿತ್ತು. ಫೆಬ್ರವರಿ 24 ರಂದು ರಷ್ಯಾ ಉಕ್ರೇನಿಯನ್ ನಗರಗಳನ್ನು ಆಕ್ರಮಿಸಿದೆ. ಇದನ್ನೂ ಓದಿ: ಬಿಹಾರ ವರನ ಕೈ ಹಿಡಿದ ಜರ್ಮನಿ ಮಹಿಳೆ

    ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಫೆಬ್ರವರಿ 24 ರಂದು ಉಕ್ರೇನ್ ವಿರುದ್ಧ ಯುದ್ಧ ಘೋಷಿಸಿದರು. ಅಂದಿನಿಂದ ರಷ್ಯಾದ ಮಿಲಿಟರಿ ನೂರಾರು ಕ್ಷಿಪಣಿ ಮತ್ತು ಫಿರಂಗಿ ದಾಳಿಗಳನ್ನು ದೇಶಾದ್ಯಂತ ಮತ್ತು ಇತರ ಸೈಟ್‍ಗಳ ಮೇಲೆ ನಡೆಸಿವೆ. ಇದನ್ನೂ ಓದಿ: ರೇಣುಕಾಚಾರ್ಯ, ಪ್ರತಾಪಸಿಂಹ ವಿರುದ್ಧದ 4 ಕೇಸ್‌ ವಾಪಸ್‌ ಪಡೆದ ಸರ್ಕಾರ- ಹೈಕೋರ್ಟ್‌ ಗರಂ

    ಹೋರಾಟ ಪ್ರಾರಂಭವಾದಾಗಿನಿಂದ ಕನಿಷ್ಠ 331 ನಾಗರಿಕರು ಕೊಲ್ಲಲ್ಪಟ್ಟಿದ್ದಾರೆ ಎಂದು ದೃಢಪಡಿಸಲಾಗಿದೆ. ಆದರೆ ನಿಜವಾದ ಸಂಖ್ಯೆ ಬಹುಶಃ ಹೆಚ್ಚು ಎಂದು ವಿಶ್ವ ಸಂಸ್ಥೆಯ ಮಾನವ ಹಕ್ಕುಗಳ ಕಚೇರಿ ಹೇಳಿದೆ. ಇದರ ಮಧ್ಯೆ 1.5 ದಶಲಕ್ಷಕ್ಕೂ ಹೆಚ್ಚು ಜನರು ಉಕ್ರೇನ್‍ನಿಂದ ಪಲಾಯನ ಮಾಡಿದ್ದಾರೆ.