Tag: Jesus

  • ಯೇಸುವಿನ ಕುರಿತು ಅವಹೇಳನ – ಕೊಡಗಿನ ವಿವಿಧ ಪೊಲೀಸ್‌ ಠಾಣೆಗಳಲ್ಲಿ ದೂರು ದಾಖಲು

    ಯೇಸುವಿನ ಕುರಿತು ಅವಹೇಳನ – ಕೊಡಗಿನ ವಿವಿಧ ಪೊಲೀಸ್‌ ಠಾಣೆಗಳಲ್ಲಿ ದೂರು ದಾಖಲು

    ಮಡಿಕೇರಿ: ಯೇಸುಕ್ರಿಸ್ತನ (Jesus) ಕುರಿತು ಸಾಮಾಜಿಕ ಜಾಲತಾಣಗಳಲ್ಲಿ (Social Media) ಅವಹೇಳನ ಮಾಡಿದ ಕಿಡಿಗೇಡಿಗಳನ್ನು ಕೂಡಲೇ ಬಂಧಿಸಿ ಕ್ರಮ ಕೈಗೊಳ್ಳಬೇಕೆಂದು ಇಲ್ಲಿನ ರೋಮನ್ ಕ್ಯಾಥೋಲಿಕ್ ಅಸೋಸಿಯೇಷನ್‌ ಸಂಸ್ಥೆ ಆಗ್ರಹಿಸಿದೆ. ಅಲ್ಲದೇ ಸಂಸ್ಥೆಯ ತಾಲೂಕು ಘಟಕಗಳು ಕೊಡಗು (Kodagu) ಜಿಲ್ಲೆಯ ವಿವಿಧ ಪೊಲೀಸ್‌ ಠಾಣೆಗಳಲ್ಲಿ ದೂರು ದಾಖಲಿಸಿವೆ.

    ರೋಮನ್ ಕ್ಯಾಥೋಲಿಕ್ ಅಸೋಸಿಯೇಷನ್‌ನ ಮಡಿಕೇರಿ ನಗರ, ಕುಶಾಲನಗರ, ವಿರಾಜಪೇಟೆ ಮತ್ತು ಸೋಮವಾರಪೇಟೆ ಘಟಕಗಳು ಆಯಾ ವ್ಯಾಪ್ತಿಯ ಪೊಲೀಸ್‌ ಠಾಣೆಗಳಲ್ಲಿ ದೂರು ದಾಖಲಿಸಿ ಕಠಿಣ ಕ್ರಮಕ್ಕೆ ಒತ್ತಾಯಿಸಿವೆ. ಇದನ್ನೂ ಓದಿ: ನಕಲಿ ಕಾಂಗ್ರೆಸ್ ನೀತಿ ವಿರುದ್ಧ ನಾಳೆ ಮಹಾತ್ಮ ಗಾಂಧಿ ಪ್ರತಿಮೆ ಮುಂದೆ ಧರಣಿ: ಬಿ.ವೈ.ವಿಜಯೇಂದ್ರ

    ಈ ಕುರಿತು ʻಪಬ್ಲಿಕ್‌ ಟಿವಿʼ ಜೊತೆಗೆ ಮಾತನಾಡಿರುವ ರೋಮನ್ ಕ್ಯಾಥೋಲಿಕ್ ಅಸೋಸಿಯೇಷನ್‌ನ (Roman Catholic Association) ಜಿಲ್ಲಾಧ್ಯಕ್ಷ ಜಾನ್ಸನ್ ಪಿಂಟೋ, ಕೆಲವು ಕಿಡಿಗೇಡಿಗಳು ಯೇಸುಕ್ರಿಸ್ತನಿಗೆ ಅವಹೇಳನ ಮಾಡಿ ಕ್ರೈಸ್ತ ಸಮುದಾಯದ ಭಾವನೆಗೆ ಧಕ್ಕೆಯುಂಟು ಮಾಡಿದ್ದಾರೆ ಎಂದು ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ: ಪೂಂಚ್‍ನಲ್ಲಿ ಸೇನಾ ವಾಹನ ಅಪಘಾತದಲ್ಲಿ ಹುತಾತ್ಮರಾಗಿದ್ದ ರಾಜ್ಯದ ಮೂವರು ಯೋಧರಿಗೆ ಕಣ್ಣೀರ ವಿದಾಯ  

    ಸಾವಿರಾರು ವರ್ಷಗಳಿಂದ ಕ್ರಿಸ್‌ಮಸ್‌ ಹಬ್ಬವನ್ನ ಶಾಂತಿಯುತವಾಗಿ ಆಚರಿಸಿಕೊಂಡು ಬರಲಾಗುತ್ತಿದೆ. ಆದ್ರೆ ಕಿಡಿಗೇಡಿಗಳು ಜಾಲತಾಣದಲ್ಲಿ ಕ್ರಿಸ್ಮಸ್‌ ಹಬ್ಬ ಹಾಗೂ ಯೇಸುವಿನ ಕುರಿತು ಅಗೌರವ ಪೋಸ್ಟ್‌ ಮಾಡಿರುವುದಲ್ಲದೇ, ಕೀಳು ಪದಗಳನ್ನ ಬಳಸಿ ನಿಂದಿಸಿದ್ದಾರೆ. ಇದು ಸಮಾಜದಲ್ಲಿ ಅಶಾಂತಿ ಮೂಡಿಸುವ ಪ್ರಯತ್ನವಾಗಿದೆ. ಹಾಗಾಗಿ ಪೊಲೀಸರು ತಪ್ಪಿತಸ್ಥರನ್ನು ಕೂಡಲೇ ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ, ಕ್ರೈಸ್ತರು ಒಗ್ಗೂಡಿ ಜಿಲ್ಲಾದ್ಯಂತ ಹೋರಾಟ ನಡೆಸಲಿದ್ದೇವೆ ಎಂದು ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ಸಿರಿಯಾದಲ್ಲಿ ಬಿಕ್ಕಟ್ಟು – ಅಲ್ಲೋಲ ಕಲ್ಲೋಲ ಎಬ್ಬಿಸಿದೆ ಆಕೆಯ ಒಂದು ವೀಡಿಯೋ; ದೊಡ್ಡಣ್ಣನ ಕುತಂತ್ರದಿಂದ ಹೀಗಾಯ್ತಾ?

  • ಏಸು ಭೇಟಿಗಾಗಿ ಉಪವಾಸ – 400ಕ್ಕೂ ಹೆಚ್ಚು ಮಂದಿ ಸಾವು, 610 ಜನ ನಾಪತ್ತೆ

    ಏಸು ಭೇಟಿಗಾಗಿ ಉಪವಾಸ – 400ಕ್ಕೂ ಹೆಚ್ಚು ಮಂದಿ ಸಾವು, 610 ಜನ ನಾಪತ್ತೆ

    ನೈರೋಬಿ: ಉಪವಾಸ ಮಾಡಿದರೆ ಏಸು ಕ್ರಿಸ್ತನನ್ನು (Jesus) ಭೇಟಿಯಾಗಬಹುದು ಎಂಬ ನಕಲಿ ಧಾರ್ಮಿಕ ಬೋಧಕನ ಮಾತನ್ನು ಕೇಳಿ ಉಪವಾಸ (Fasting) ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಮಾರು 403ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದು, 12 ಜನರ ಶವ ಕೀನ್ಯಾದ (Kenya) ಶಕಹೊಲ (Shakahola) ಅರಣ್ಯದಲ್ಲಿ ಪತ್ತೆಯಾಗಿದೆ.

    ಮೃತಪಟ್ಟವರಲ್ಲಿ ಹೆಚ್ಚಿನವರು ಗುಡ್ ನ್ಯೂಸ್ ಇಂಟರ್‌ನ್ಯಾಷನಲ್ ಚರ್ಚ್‌ನ ಸಂಸ್ಥಾಪಕ, ಬೋಧಕ ಪೌಲ್ ಮೆಕೆಂಜಿ ಅನುಯಾಯಿಗಳಾಗಿದ್ದರು. ಉಪವಾಸ ಮಾಡಿದರೆ ಏಸುಕ್ರಿಸ್ತನನ್ನು ಸೇರಬಹುದು ಎಂಬ ಆತನ ಮಾತನ್ನು ನಂಬಿದ ಅನುಯಾಯಿಗಳು ಉಪವಾಸ ಮಾಡಿದ್ದು, 403ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ. ಅಲ್ಲದೇ 610ಕ್ಕೂ ಹೆಚ್ಚು ಜನರು ಕಾಣೆಯಾಗಿದ್ದಾರೆ ಎಂದು ವರದಿಯಾಗಿದೆ. ಇದನ್ನೂ ಓದಿ: ಚೀನಾದ ವಿದೇಶಾಂಗ ಸಚಿವ ಕ್ವಿನ್ ಗ್ಯಾಂಗ್ ನಾಪತ್ತೆ

    ಸದ್ಯ ಉಪವಾಸ ಮಾಡಲು ಸಲಹೆ ನೀಡಿದ ಆರೋಪಿ ಪೌಲ್ ಮೆಕೆಂಜಿ ಮತ್ತು ಇನ್ನಿತರ 36 ಶಂಕಿತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ನಾಪತ್ತೆಯಾದ 610ಕ್ಕೂ ಹೆಚ್ಚು ಜನರು ಅರಣ್ಯದ ಸುತ್ತಲಿನ ಗ್ರಾಮದವರಾಗಿದ್ದಾರೆ. ಇದುವರೆಗೆ ಹೊರತೆಗೆದ 403 ಮೃತದೇಹಗಳ ಪೈಕಿ 253 ದೇಹಗಳಲ್ಲಿ ಡಿಎನ್‌ಎ ಹೊಂದಾಣಿಕೆಯನ್ನು ನಡೆಸಲಾಗಿದೆ. ಇದನ್ನೂ ಓದಿ: ಚಂದ್ರನ ವೀಕ್ಷಣೆಗೆ ಇಷ್ಟೊಂದು ಕಸರತ್ತು ಮಾಡುವ ಅಗತ್ಯವಿಲ್ಲ: ಚಂದ್ರಯಾನ-3 ಲೇವಡಿ ಮಾಡಿದ ಪಾಕಿಸ್ತಾನ ಮಾಜಿ ಸಚಿವ

    ಆರೋಪಿ ಪಾದ್ರಿ 2017ರಲ್ಲಿ ಮಕ್ಕಳಿಗೆ ಶಾಲೆಗೆ ಹೋಗಬೇಡಿ, ಬೈಬಲ್ ಶಿಕ್ಷಣವನ್ನು ಮಾನ್ಯ ಮಾಡುವುದಿಲ್ಲ ಎಂದು ಪ್ರಚಾರ ಮಾಡಿದ್ದ. ಅಲ್ಲದೇ ಜನರಿಗೆ ಏಸುಕ್ರಿಸ್ತನ ಭೇಟಿ ಮಾಡಲು ಅವಕಾಶ ಕಲ್ಪಿಸುವುದಾಗಿ ಹೇಳಿ ಜನರನ್ನು ಅರಣ್ಯಕ್ಕೆ ಕರೆಸಿ ಅಲ್ಲಿ ಉಪವಾಸ ಮಾಡಿಸುತ್ತಿದ್ದ. ಇದನ್ನೂ ಓದಿ: ಭಾರತಕ್ಕೆ ಸಂಬಂಧಿಸಿದ 105 ಪ್ರಾಚೀನ ವಸ್ತುಗಳನ್ನು ವಾಪಸ್ ನೀಡಿದ ಅಮೆರಿಕ

    ಮೃತಪಟ್ಟವರ ಶವಗಳನ್ನು ಅಧಿಕೃತವಾಗಿ ಪರೀಕ್ಷೆ ನಡೆಸಿದಾಗ ಹೆಚ್ಚಿನವರು, ಅಪೌಷ್ಟಿಕತೆ, ಉಸಿರುಗಟ್ಟುವಿಕೆ ಮುಂತಾದ ತೊಂದರೆಯಿಂದ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ಈ ಸಂಶೋಧನೆಗಳನ್ನು ಮುಖ್ಯ ಸರ್ಕಾರಿ ರೋಗಶಾಸ್ತ್ರಜ್ಞ ಜೋಹಾನ್ಸೆನ್ ಓಡುರ್ ದೃಢಪಡಿಸಿದ್ದಾರೆ. ಇದರಲ್ಲಿ ಹೆಚ್ಚಿನವರು ಹಸಿವಿನಿಂದ ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ಪುಟಿನ್ ಕನಸಿನ ಯುರೋಪಿನ ಉದ್ದದ ಸೇತುವೆಗೆ ಮತ್ತೆ ಹಾನಿ; ರಷ್ಯಾ-ಕ್ರಿಮಿಯಾ ಸಂಪರ್ಕ ಕಡಿತ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಯೇಸುವಿನ ಮರಣದ ಜೀವಂತ ದೃಶ್ಯ ರೂಪಕ ಕಂಡು ಕಣ್ಣೀರು ಹಾಕಿದ ಭಕ್ತರು

    ಯೇಸುವಿನ ಮರಣದ ಜೀವಂತ ದೃಶ್ಯ ರೂಪಕ ಕಂಡು ಕಣ್ಣೀರು ಹಾಕಿದ ಭಕ್ತರು

    ಮಡಿಕೇರಿ: ಯೇಸು ಕ್ರಿಸ್ತ ಸಾಯುವ ಮುನ್ನ ಅನುಭವಿಸಿದ ನೋವು, ಯಾತನೆಯ ಜೀವಂತ ದೃಶ್ಯ ರೂಪಕವನ್ನು ಕಂಡು ಕ್ರೈಸ್ತ ಧರ್ಮದ ಜನರು ಕಣ್ಣೀರು ಹಾಕಿದ ಘಟನೆ ಸೋಮವಾರಪೇಟೆ ತಾಲೂಕಿನ ಗೋಪುರದ ಗ್ರಾಮದಲ್ಲಿ ನಡೆದಿದೆ.

    ಗೋಪಾಲಪುರ ಸಂತ ಅಂತೋಣಿ ಚರ್ಚ್‍ನಲ್ಲಿ ಗುಡ್ ಫ್ರೈಡೆ(ಶುಭ ಶುಕ್ರವಾರ) ಅಂಗವಾಗಿ ಕ್ರೈಸ್ತ ಭಕ್ತರು ಉಪವಾಸವೆಂದು ಶ್ರದ್ಧೆ ಭಕ್ತಿಯಿಂದ ಗೋಪಾಲಪುರದ ಚರ್ಚ್‍ಗೆ ಆಗಮಿಸಿದ್ದರು. ಈ ವೇಳೆ ಗೋಪಾಲಪುರ ಚರ್ಚ್‍ನ ಹಿಂದೆ ಇರುವ ಶಿಲುಬೆ ಬೆಟ್ಟದಲ್ಲಿ ಪ್ರಾರ್ಥನೆ ಸಲ್ಲಿಸಿದರು. ಈ ಸಮಯದಲ್ಲಿ ಫಾದರ್ ಜಾಕಬ್ ಕೊಳನೂರು ಅವರು ಪ್ರಾರ್ಥನೆಯ ವಿಧಿ ವಿಧಾನಗಳು ಸಲ್ಲಿಸಿದರು. ಇದನ್ನೂ ಓದಿ: ಭಾರತೀಯತೆಗೆ ಯಾರೆಲ್ಲಾ ವಿರೋಧ ಮಾಡುತ್ತಾರೋ ಇಲ್ಲಿ ಇರಬಾರದು: ಅದಮಾರು ಶ್ರೀ 

    ಇದೇ ಸಂದರ್ಭದಲ್ಲಿ ಗೋಪಾಲಪುರ ಚರ್ಚ್‍ನ ಯುವತಂಡ, ಶಿಲುಬೆಯ ಹಾದಿಯಲ್ಲಿ ಯೇಸು ಅನುಭವಿಸಿದ ಯಾತನೆ ಹಾಗೂ ಮರಣದ ಬಗ್ಗೆ ನೈಜತೆಯಿಂದ ದೃಶ್ಯ ವೃತ್ತಾಂತವನ್ನು ಅಭಿನಯಿಸಿದ ಹಿನ್ನೆಲೆಯಲ್ಲಿ ಚರ್ಚ್‍ಗೆ ಬಂದ ಭಕ್ತರು ಅಂದಿನ ದಿನಗಳಲ್ಲಿ ಯೇಸು ಕ್ರೈಸ್ತ ಅನುಭವಿಸಿದ ನೋವುಗಳನ್ನು ನೋಡಿ ಕಣ್ಣೀರು ಹಾಕಿದ್ರು.

    ವಿಭಿನ್ನವಾಗಿ ದೃಶ್ಯ ರೂಪಕ ಪ್ರಸ್ತುತ ಪಡಿಸಿದವರನ್ನು ಮನಸೂರೆಗೊಳ್ಳಿಸುವಲ್ಲಿ ಯಶಸ್ವಿಯಾದರು. ಈ ಸಂದರ್ಭದಲ್ಲಿ ಚರ್ಚ್‍ನ ಫಾದರ್ ಜಾಕಬ್ ಕೊಳನೂರು ಎಲ್ಲರಿಗೂ ಆಶೀರ್ವಚನ ನೀಡಿದರು. ಇದನ್ನೂ ಓದಿ: ಹರ್ಷ ಕೊಲೆಯ ಪ್ರತೀಕಾರಕ್ಕೆ ನಡೆಯಿತಾ ಸಂಚು – ಪೊಲೀಸ್ ಕಾರ್ಯಾಚರಣೆಯಿಂದ ಸಂಚು ವಿಫಲ

  • ಯೇಸುವಿನ ಹೆಸರಿನಲ್ಲಿ ಕ್ರೈಸ್ತ ದಂಪತಿ ಬಳಿ ಲಕ್ಷಾಂತರ ರೂ. ದೋಚಿದ ಕಳ್ಳ

    ಯೇಸುವಿನ ಹೆಸರಿನಲ್ಲಿ ಕ್ರೈಸ್ತ ದಂಪತಿ ಬಳಿ ಲಕ್ಷಾಂತರ ರೂ. ದೋಚಿದ ಕಳ್ಳ

    ಹಾಸನ: ಇತ್ತೀಚಿಗೆ ಆನ್‍ಲೈನ್ ದೋಖಾಗಳು ಪದೆ ಪದೇ ನಡೆಯುತ್ತಲೇ ಇದ್ದರೂ ಕೂಡ ಕೆಲವು ಮುಗ್ಧರು ಬಲಿಯಾಗುತ್ತಲೆ ಇದ್ದಾರೆ. ಇದಕ್ಕೆ ಮತ್ತೊಂದು ಉದಾಹರಣೆ ಎಂಬಂತೆ ಜಿಲ್ಲೆಯ ದಂಪತಿ ಕ್ರೈಸ್ತ ಧರ್ಮ ಮತ್ತು ಯೇಸುವಿನ ಹೆಸರಿನಲ್ಲಿ ಮೋಸಹೋಗಿದ್ದಾರೆ.

    ಫೇಸ್ ಬುಕ್‍ನಲ್ಲಿ ಪರಿಚಯದ ವ್ಯಕ್ತಿ ಗಿಫ್ಟ್ ಕಳುಹಿಸುತ್ತೇನೆ ಎಂದು ಒಂದು ಲಕ್ಷದ ಎಪ್ಪತ್ತು ಸಾವಿರ ಪಂಗನಾಮ ಹಾಕಿರುವ ಘಟನೆ ಬೆಳಕಿಗೆ ಬಂದಿದೆ. ಹಾಸನ ಜಿಲ್ಲೆಯ ಹೊಳೇನರಸೀಪುರದಲ್ಲಿ ವಾಸವಾಗಿರುವ ಕುಸುಮ ಮತ್ತು ಸ್ಯಾಮುವೆಲ್ ದಂಪತಿ ಮೋಸಹೋಗಿದ್ದಾರೆ.

    ಪತಿ ಸ್ಯಾಮುವೆಲ್ ಚರ್ಚ್‍ನಲ್ಲಿ ಫಾದರ್ ಆಗಿದ್ರೆ ಪತ್ನಿ ಕುಸುಮ ಕೂಡ ಸಮಾಜ ಸೇವೆ ಮಾಡಿಕೊಂಡು ಚರ್ಚ್ ಕೆಲಸ ಮಾಡಿಕೊಂಡಿದ್ದಾರೆ. ಕ್ರೈಸ್ತ ಧರ್ಮದ ಪ್ರಚಾರ ಜೊತೆಗೆ ಕೆಲವು ನೊಂದವರನ್ನು ಮನೆಯಲ್ಲಿ ಸೇರಿಸಿಕೊಂಡು ಜೀವನ ನಡೆಸುತ್ತಿದ್ದಾರೆ. ಫೇಸ್ ಬುಕ್‍ನಲ್ಲಿ ವಿಲಿಯಂ ಫ್ರಾಂಕ್ ಎಂಬಾತ ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿದ್ದಾನೆ. ಸ್ಯಾಮುವೆಲ್ ಮತ್ತು ಅವರ ಕುಟುಂಬದ ಬಗ್ಗೆ ಸಾಂತ್ವನ ವ್ಯಕ್ತಪಡಿಸಿದ ಅನಾಮಿಕ ವಿದೇಶದಿಂದ ಲಕ್ಷಾಂತರ ರೂಪಾಯಿ ಹಣ ಕಳುಹಿಸುತ್ತೇನೆ ಎಂದು ಹೇಳಿದ್ದಾನೆ.

    ನಿಮ್ಮ ಊರಿನಲ್ಲಿ ಹೊಸದಾಗಿ ಚರ್ಚ್ ನಿರ್ಮಾಣ ಮಾಡಿ. ನಿಮಗೆಲ್ಲ ಏನಾದರು ಸಹಾಯ ಮಾಡಬೇಕೆಂದು ಅನಿಸುತ್ತಿದೆ. ಆ ದೇವರೇ ನಿಮಗೆ ಸಹಾಯ ಮಾಡುತ್ತಿದ್ದಾನೆ ಎಂದೆಲ್ಲ ನಂಬಿಸಿದ್ದಾನೆ. ಮೋಸದ ಮಾತುಗಳನ್ನು ನಂಬಿದ ಇವರು ಒಮ್ಮೆ 28,600 ಇನ್ನೊಂದು ಬಾರಿ 89,000 ಆಮೇಲೆ 49,500 ಹೀಗೆ ಒಟ್ಟು 1,67,100 ರೂಪಾಯಿ ಬ್ಯಾಂಕ್ ಮೂಲಕವೇ ಪಾವತಿ ಮಾಡಿದ್ದಾರೆ. ಆದರೆ ಹಣ ಹಾಕಿದ ನಂತರ ಆ ಗಿಫ್ಟ್ ಬರಲೇ ಇಲ್ಲ. ಹಣ ಕಳೆದುಕೊಂಡವರು ಈಗ ಏನೂ ಮಾಡಲು ತೋಚದೆ ಯಾರೂ ಕೂಡ ಈ ರೀತಿ ಮೋಸ ಹೋಗಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ.

  • ದೇವಾಲಯಗಳ ನಗರಿಯಲ್ಲಿ ಮಾತೆ ಮೇರಿಯ ಜನ್ಮದಿನ ಸಂಭ್ರಮ

    ದೇವಾಲಯಗಳ ನಗರಿಯಲ್ಲಿ ಮಾತೆ ಮೇರಿಯ ಜನ್ಮದಿನ ಸಂಭ್ರಮ

    ಉಡುಪಿ: ದೇವಾಲಯಗಳ ನಗರಿ ಉಡುಪಿಯಲ್ಲಿ ಇಂದು ಮಾತೆ ಮೇರಿಯಮ್ಮನ ಜನ್ಮದಿನವನ್ನು ಸಂಭ್ರಮದಿಂದ ಆಚರಿಸಲಾಯಿತು.

    ಏಸುಕ್ರಿಸ್ತನ ತಾಯಿ ಮೇರಿಯನ್ನು ತೊಟ್ಟಿಲಿನಲ್ಲಿ ತೂಗಿ, ಬಣ್ಣ ಬಣ್ಣದ ಹೂವು ಎಸೆದು ಭೂಮಿಗೆ ಸ್ವಾಗತಿಸಲಾಯಿತು. ಮಾತೆ ಮೇರಿಯ ಜನ್ಮದಿನದ ಶುಭದಿನವನ್ನು ಕರಾವಳಿಯಲ್ಲಿ ತೆನೆ ಹಬ್ಬ ಅಂತಾನೂ ಕರೆಯುತ್ತಾರೆ.

    ಉಡುಪಿಯ ಮದರ್ ಆಫ್ ಸಾರೋಸ್ ಚರ್ಚ್‍ನಲ್ಲಿ ಅದ್ಧೂರಿಯಾಗಿ ಮೋತಿ ಫೆಸ್ಟ್ ನಡೆಯಿತು. ಉಡುಪಿ ಧರ್ಮಗುರುಗಳು ಮಾತೆ ಮೇರಿಯನ್ನು ತೊಟ್ಟಿಲಿನಲ್ಲಿ ಹೊತ್ತು ತರುವ ಮೆರವಣಿಗೆಯ ನೇತೃತ್ವವನ್ನ ವಹಿಸಿದ್ದರು. ಶಿಸ್ತುಬದ್ಧ ವಾದ್ಯಗೋಷ್ಠಿಯ ಹಿನ್ನೆಲೆಯಲ್ಲಿ ಪೂಜಾವಿಧಿ ನಡೆಯಿತು.

    ಚರ್ಚ್‍ಗೆ ಬರುವ ಭಕ್ತರು ಮನೆಯಲ್ಲೇ ಬೆಳೆದ ಹೂವನ್ನು ತರುತ್ತಾರೆ. ಪೂಜಾವಿಧಿ ಸಂದರ್ಭ ಭಕ್ತರು ಮಾತೆ ಮೇರಿಯನ್ನು ಮಲಗಿಸಿದ ತೊಟ್ಟಿಲಿನತ್ತ ಬಣ್ಣಬಣ್ಣದ ಹೂವು ಎಸೆಯುತ್ತಾರೆ. ವಿವಿಧ ಬಣ್ಣದ ಹೂವುಗಳು ತೊಟ್ಟಿಲಿನತ್ತ ತೂರಿಬರುವ ಸುಂದರ ದೃಶ್ಯವನ್ನು ಕಣ್ತುಂಬಿಕೊಳ್ಳುವುದೇ ಚೆಂದ.

    ಮಾಂಸಪ್ರಿಯ ಕ್ರೈಸ್ತ ಸಮುದಾಯದವರು ಇಂದು ಶುದ್ಧ ಸಸ್ಯಾಹಾರಿಗಳು. ಮನೆಯಲ್ಲೇ ಬೆಳೆದ ಹೂವುಗಳನ್ನು, ತರಕಾರಿಗಳನ್ನು ಚರ್ಚ್‍ಗೆ ತಂದು ಪೂಜಿಸುತ್ತಾರೆ. ಧರ್ಮಗುರುಗಳು ಚರ್ಚ್‍ಗೆ ಬಂದ ಭಕ್ತರಿಗೆ ತೆನೆಗಳನ್ನು ವಿತರಿಸುತ್ತಾರೆ.