ಟೆಲ್ ಅವಿವ್: ಇಸ್ರೇಲಿನ (Israel) ಪೂರ್ವ ಜೆರುಸಲೇಂನಲ್ಲಿ (Jerusalem) ಭಯೋತ್ಪಾದನ ದಾಳಿ ನಡೆದಿದ್ದು ಕನಿಷ್ಠ 5 ಮಂದಿ ಮೃತಪಟ್ಟಿದ್ದು, ಹಲವು ಮಂದಿ ಗಾಯಗೊಂಡಿದ್ದಾರೆ.
ಜೆರುಸಲೆಮ್‌ನ ಯಿಗಲ್ ಯಾಡಿನ್ ಸ್ಟ್ರೀಟ್‌ನಲ್ಲಿರುವ ರಾಮೋಟ್ ಜಂಕ್ಷನ್ ಈ ದಾಳಿ ನಡೆದಿದೆ. ಉಗ್ರರು ಬಸ್ಸನ್ನು ಹತ್ತಿ ಮನಬಂದಂತೆ ಗುಂಡಿನ ದಾಳಿ ನಡೆಸಿದ್ದರಿಂದ ಸಾವು ನೋವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ.
ಗುಂಡಿನ ದಾಳಿ ನಡೆದ ಜಾಗ ಜನನಿಬಿಡ ಪ್ರದೇಶವಾಗಿತ್ತು. ಗುಂಡಿನ ಶಬ್ಧ ಕೇಳುತ್ತಿದ್ದಂತೆ ಜನರು ದಿಕ್ಕಾಪಾಲಾಗಿ ಓಡಿದ್ದಾರೆ.
ಉಗ್ರಗಾಮಿ ಸಂಘಟನೆ ಹಮಾಸ್‌ಗೆ ಶಸ್ತ್ರಾಸ್ತ್ರಗಳನ್ನು ಕೈಬಿಟ್ಟು ಶರಣಾಗಬೇಕು ಇಲ್ಲದೇ ಇದ್ದರೆ ಸಂಪೂರ್ಣ ನಾಶಪಡಿಸಲಾಗುವುದು ಎಂದು ಇಸ್ರೇಲ್ ರಕ್ಷಣಾ ಸಚಿವ ಇಸ್ರೇಲ್ ಕಾಟ್ಜ್ ಪ್ಯಾಲೆಸ್ಟೀನಿಯನ್ ಎಚ್ಚರಿಕೆ ನೀಡಿದ ಕೆಲವೇ ಗಂಟೆಗಳಲ್ಲಿ ಈ ಗುಂಡಿನ ದಾಳಿ ನಡೆದಿದೆ.
ಇಸ್ರೇಲ್ ಹಾಗೂ ಪ್ಯಾಲೆಸ್ಟೈನ್ (Palestine) 2021ರಲ್ಲಿ ಭೀಕರ ಕಾಳಗ ನಡೆಸಿದ ನಂತರ ಈಗ ಮತ್ತೊಮ್ಮೆ ಎದುರು ಬದುರಾಗಿವೆ. ವೈಮಾನಿಕ ದಾಳಿ ಹಾಗೂ ಗುಂಡಿನ ಚಕಮಕಿ ಬಳಿಕ ಮತ್ತೊಮ್ಮೆ 2 ರಾಷ್ಟ್ರಗಳ ನಡುವೆ ಘನಘೋರ ಕಾದಾಟ ನಡೆಯುತ್ತಿದೆ.
ಹಮಾಸ್ ಉಗ್ರರು ಇಸ್ರೇಲ್ (Israel) ನಗರದ ಒಳಗಡೆ ನುಗ್ಗಿ ಸೈನಿಕರ ಜನರ ಪ್ರಾಣ ತೆಗೆಯುತ್ತಿದ್ದಾರೆ. ಇದಕ್ಕೆ ಪ್ರತಿಯಾಗಿ ಇಸ್ರೇಲ್ ದಾಳಿ ನಡೆಸುತ್ತಿದೆ.
ಕಿತ್ತಾಟ ಯಾಕೆ?
ಇಸ್ರೇಲ್ ಮತ್ತು ಪ್ಯಾಲೆಸ್ಟೈನ್ ಮಧ್ಯೆ ಕಾಳಗ ಯಾಕೆ ಎಂಬುದನ್ನು ತಿಳಿದುಕೊಳ್ಳಬೇಕಾದರೆ 77 ವರ್ಷಗಳ ಹಿಂದಕ್ಕೆ ಹೋಗಬೇಕು. ಎರಡನೇ ವಿಶ್ವಯುದ್ಧ ಬಳಿಕ 1945ರಲ್ಲಿ ಬ್ರಿಟನ್ ವಿಶ್ವಸಂಸ್ಥೆಗೆ ಒಟ್ಟೋಮಾನ್ ಸಾಮ್ರಾಜ್ಯವನ್ನ ಒಪ್ಪಿಸಿತು. ಇದನ್ನೂ ಓದಿ: ಕಷ್ಟದ ಸಮಯದಲ್ಲಿ ಇಸ್ರೇಲ್ ಪರ ಒಗ್ಗಟ್ಟಿನಿಂದ ನಿಲ್ಲುತ್ತೇವೆ: ನರೇಂದ್ರ ಮೋದಿ
1947ರಲ್ಲಿ ವಿಶ್ವಸಂಸ್ಥೆ ಅರಬ್ ರಾಜ್ಯ ಹಾಗೂ ಇಸ್ರೇಲ್ ಎಂದು ಆ ಭೂಭಾಗವನ್ನ ವಿಂಗಡಿಸಿತು. ಇದಾದ ಒಂದು ವರ್ಷದ ಬಳಿಕ 1948ರಲ್ಲಿ ಇಸ್ರೇಲ್ ತಾನೊಂದು ಸ್ವತಂತ್ರ ದೇಶ ಎಂದು ಘೋಷಣೆ ಮಾಡಿತು. ಈ ಮೂಲಕ ವಿಶ್ವದ ಮೊದಲ ಯಹೂದಿ ದೇಶವಾಗಿ ಅಸ್ತಿತ್ವಕ್ಕೂ ಬಂತು. ಯಹೂದಿ ದೇಶವಾಗಿ ಅಸ್ತಿತ್ವಕ್ಕೆ ಬಂದರೂ ಜೆರುಸಲೇಂ ಸೇರಿದಂತೆ ಹಲವು ಪ್ರದೇಶಗಳು ನನ್ನದು. ಅದು ತನಗೆ ಸೇರಬೇಕೆಂದು ಹೇಳುತ್ತಿತ್ತು. ಇಸ್ರೇಲ್ ದೇಶವಾಗಿದ್ದನ್ನು ಪ್ಯಾಲೆಸ್ಟೈನ್ ಸೇರಿದಂತೆ ಅರಬ್ ರಾಷ್ಟ್ರಗಳು ವಿರೋಧಿಸುತ್ತಲೇ ಇವೆ. ವಿಶೇಷ ಏನೆಂದರೆ ಮೂರು ಧರ್ಮಗಳ ಪವಿತ್ರ ಸ್ಥಳ ಜೆರುಸಲೇಂ (Jerusalem) ಆಗಿದೆ. ಈಗ ಕಿತ್ತಾಟ ನಡೆಯುತ್ತಿರುವ ಜೆರುಸಲೇಂ ಯಹೂದಿ, ಮುಸ್ಲಿಮ್ ಮತ್ತು ಕ್ರೈಸ್ತರ ಪವಿತ್ರ ಸ್ಥಳವಾಗಿದೆ.
ಯಹೂದಿಗಳಿಗೆ ಯಾಕೆ?
ಟೆಂಪಲ್ ಮೌಂಟ್ ಯಹೂದಿಗಳ (Jews) ಅತ್ಯಂತ ಪವಿತ್ರ ಸ್ಥಳವೆಂದು ಕರೆಯಲಾಗುತ್ತದೆ. ಯಹೂದಿ ದಂತಕಥೆಯ ಪ್ರಕಾರ ಅಬ್ರಹಾಂ ತನ್ನ ಧರ್ಮ ಮತ್ತು ನಂಬಿಕೆಯನ್ನು ಸಾಬೀತುಪಡಿಸಲು ದೇವರ ಬೇಡಿಕೆಯ ಮೇರೆಗೆ ತನ್ನ ಮಗ ಐಸಾಕ್‌ನನ್ನು ತ್ಯಾಗ ಮಾಡಲು ಹೋಗುತ್ತಾನೆ. ಈ ಸಂದರ್ಭದಲ್ಲಿ ಮೇಲಿನಿಂದ ಕುರಿ ಕಾಣಿಸಿಕೊಂಡಿತು ಮತ್ತು ಅವನ ಮಗನನ್ನು ಬಿಡುಗಡೆ ಮಾಡಿತು ಎಂಬ ಕಥೆಯಿದೆ.
ಯಹೂದಿಗಳ ಮೊದಲ ಮತ್ತು ಎರಡನೆಯ ಪವಿತ್ರ ದೇವಾಲಯಗಳು ಇಲ್ಲಿದೆ. ಜೆರುಸಲೇಂನಲ್ಲಿ ಅನೇಕ ಯಹೂದಿ ಪ್ರವಾದಿಗಳು ಬೋಧಿಸಿದ್ದಾರೆ. ಜಗತ್ತನ್ನು ಸೃಷ್ಟಿಸಿದ ಅಡಿಪಾಯದ ಸ್ಥಳ ಇದು ಎಂದು ಯಹೂದಿಗಳು ನಂಬುತ್ತಾರೆ. ಅನೇಕ ಯಹೂದಿಗಳು ಡೋಮ್ ಆಫ್ ದಿ ರಾಕ್ ಅನ್ನು ಪವಿತ್ರ ಸ್ಥಳವೆಂದು ನಂಬುತ್ತಾರೆ. ವಾರ್ಷಿಕವಾಗಿ ಲಕ್ಷಾಂತರ ಮಂದಿ ಈ ಪವಿತ್ರ ಗೋಡೆಯನ್ನು ವೀಕ್ಷಿಸಲು ಭೇಟಿ ನೀಡುತ್ತಾರೆ.
ಮುಸ್ಲಿಮರಿಗೆ ಯಾಕೆ?
ಸೌದಿ ಅರೇಬಿಯಾದ ಮೆಕ್ಕಾ ಮತ್ತು ಮದೀನಾ ಇಸ್ಲಾಂ ಧರ್ಮದ ಮೂರನೇ ಪವಿತ್ರ ಸ್ಥಳ ಜೆರುಸಲೇಂ ಆಗಿದೆ. ಪ್ರವಾದಿ ಮುಹಮ್ಮದ್ (Prophet Muhammad) ಮೆಕ್ಕಾದಿಂದ (Mecca) ಈ ಜಾಗಕ್ಕೆ ಬಂದು ಸ್ವರ್ಗಕ್ಕೆ ಏರಿದರು ಎಂದು ಮುಸ್ಲಿಮರು (Muslims) ನಂಬುತ್ತಾರೆ. ಇಲ್ಲಿ ಡೋಮ್ ಆಫ್ ರಾಕ್ ಮತ್ತು ಅಲ್-ಅಕ್ಸಾ ಮಸೀದಿಯ ಇದ್ದು 1,300 ವರ್ಷಗಳ ಹಿಂದೆ ಸ್ಥಾಪನೆಯಾಗಿದೆ ಎಂದು ನಂಬಲಾಗುತ್ತದೆ. ಅಲ್ ಅಕ್ಸಾ ಮಸೀದಿಗೆ (Al Aqsa Mosque) ಮುಸ್ಲಿಮರು ವರ್ಷಪೂರ್ತಿ ಭೇಟಿ ನೀಡುತ್ತಾರೆ. ಆದರಲ್ಲೂ ರಂಜಾನ್ ತಿಂಗಳಲ್ಲಿ ಪ್ರತಿ ಶುಕ್ರವಾರ ಲಕ್ಷಾಂತರ ಮುಸ್ಲಿಮರು ಮಸೀದಿಯಲ್ಲಿ ಪ್ರಾರ್ಥನೆ ಮಾಡಲು ಆಗಮಿಸುತ್ತಾರೆ.
ಕ್ರೈಸ್ತರಿಗೆ ಯಾಕೆ?
ಕ್ರಿಶ್ಚಿಯನ್ (Christian) ಕಥೆಗಳ ಪ್ರಕಾರ ಏಸುವನ್ನು (Jesus) ಗೋಲ್ಗೊಥಾ ಅಥವಾ ಕ್ಯಾಲ್ವರಿ ಬೆಟ್ಟದ ಮೇಲೆ ಶಿಲುಬೆಗೇರಿಸಲಾಯಿತು. ಈ ಕಾರಣಕ್ಕೆ ಯೇಸುವಿನ ಖಾಲಿ ಸಮಾಧಿಗೆ ಭೇಟಿ ನೀಡಲು ಮತ್ತು ಆ ಭೂಮಿಯಲ್ಲಿ ಪ್ರಾರ್ಥನೆ ಮಾಡಲು ಲಕ್ಷಾಂತರ ಕ್ರೈಸ್ತರು ಈ ಜಾಗಕ್ಕೆ ಬರುತ್ತಾರೆ.
1967ರ ಯುದ್ಧದಲ್ಲಿ ಏನಾಯ್ತು?
ಸಿರಿಯಾದ ಬೆಂಬಲದೊಂದಿಗೆ ಪ್ಯಾಲೆಸ್ಟೈನ್ ಗೆರಿಲ್ಲಾ ಪಡೆ ಇಸ್ರೇಲ್ ಮೇಲೆ ದಾಳಿ ಮಾಡಿತು. ಇದಕ್ಕೆ ಅರಬ್ ರಾಷ್ಟ್ರಗಳು ಬೆಂಬಲ ನೀಡಿದವು. ಇದರಿಂದ ಕೆರಳಿದ ಇಸ್ರೇಲ್ ಭಾರೀ ಪ್ರತಿದಾಳಿ ನಡೆಸಿತು. 1967ರಲ್ಲಿ 6 ದಿನಗಳ ಕಾಲ ನಡೆದ ಈ ಯುದ್ಧದಲ್ಲಿ ಇಸ್ರೇಲ್ ಪೂರ್ವ ಜೆರುಸಲೇಂ ಹಾಗೂ ವೆಸ್ಟ್ ಬ್ಯಾಂಕ್ ಅನ್ನು ವಶಕ್ಕೆ ಪಡೆದಿತ್ತು. ಈ ಕಾರಣಕ್ಕೆ ಜೆರುಸಲೇಂನ ವಶಕ್ಕೆ ಪಡೆಯಲು ಇಸ್ರೇಲ್ ವಿರುದ್ಧ ಆಗಾಗ ಪ್ಯಾಲೆಸ್ಟೈನ್ ಸಂಘರ್ಷ ನಡೆಸುತ್ತಿರುತ್ತದೆ. ಈಗಲೂ ಇದೇ ವಿಚಾರಕ್ಕೆ ಹಮಾಸ್ ಉಗ್ರರು ಇಸ್ರೇಲ್ ಮೇಲೆ ಸಮರ ಆರಂಭಿಸಿದ್ದಾರೆ. ಇದನ್ನೂ ಓದಿ: ಇಸ್ರೇಲ್ ಒಳಗೆ ನುಗ್ಗಿದ ಉಗ್ರರು – ಸಾರ್ವಜನಿಕರ ಮೇಲೆ ಗುಂಡಿನ ಮಳೆ
ಹಮಾಸ್ ಉಗ್ರರು ಪವಿತ್ರ ಮಸೀದಿಯಾದ ಅಲ್ ಅಕ್ಸಾ ಮಸೀದಿ ಹೆಸರಿನಲ್ಲಿ ಆಪರೇಷನ್ ಅಲ್-ಅಕ್ಸಾ ಫ್ಲಡ್ (Operation Al Aqsa Flood) ಹೆಸರನ್ನು ಇರಿಸಿದೆ. ಅಂದರೆ ಆಪರೇಷನ್ ಅಲ್-ಅಕ್ಸಾ ನೆರೆ ರೂಪದಲ್ಲಿ ಬಂದು ಇಸ್ರೇಲ್ ಅನ್ನು ಕೊಚ್ಚಿಕೊಂಡು ಹೋಗುತ್ತೇವೆ ಎಂದು ಉಗ್ರರು ಘೋಷಿಸಿಕೊಂಡಿದ್ದಾರೆ.
ಜೆರುಸಲೇಂ: ಇಸ್ರೇಲ್ (Israel) ಪಡೆಗಳು ಪಶ್ಚಿಮ ದಂಡೆಯಲ್ಲಿ ಕಾರ್ಯಾಚರಣೆ ನಡೆಸಿ 10 ಮಂದಿ ಪ್ಯಾಲೆಸ್ಟೀನಿಯನ್ನರನ್ನ (Palestinians )ಹತ್ಯೆ ಮಾಡಿದ ಬೆನ್ನಲ್ಲೇ ಇಸ್ರೇಲ್‌ನಲ್ಲಿ ಭಯೋತ್ಪಾದಕ (Terror Attack) ಗುಂಡಿನ ದಾಳಿ (Shoot out) ನಡೆದಿದೆ.
ಇಸ್ರೇಲ್ ಜೆರುಸಲೇಮ್‌ನ (Jerusalem) ಹೊರವಲಯದಲ್ಲಿರುವ ಸಿನಗಾಗ್‌ನಲ್ಲಿ ನಡೆದ ಗುಂಡಿನ ದಾಳಿಯಲ್ಲಿ 7 ಮಂದಿ ಸಾವನ್ನಪ್ಪಿದ್ದು, 10 ಮಂದಿ ಗಾಯಗೊಂಡಿದ್ದಾರೆ ಎಂದು ಇಸ್ರೇಲ್ ವಿದೇಶಾಂಗ ಸಚಿವಾಲಯ (Israel’s Foreign Ministry) ತಿಳಿಸಿದೆ. 70 ವರ್ಷದ ಮಹಿಳೆ ಸೇರಿದಂತೆ ಹಲವರು ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಇದನ್ನೂ ಓದಿ: ಆರ್ಥಿಕ, ಆಹಾರ ಬಿಕ್ಕಟ್ಟಿನಿಂದ ತತ್ತರಿಸಿರುವ ಪಾಕ್‌ಗೆ ಮತ್ತೊಂದು ಸಂಕಷ್ಟ – ನಿಗೂಢ ಕಾಯಿಲೆಗೆ 18 ಸಾವು
ಇಸ್ರೇಲ್ ಪೊಲೀಸರು, ಇದನ್ನು `ಭಯೋತ್ಪಾದಕ ದಾಳಿ’ ಎಂದು ಖಚಿತಪಡಿಸಿದ್ದಾರೆ. ಈ ಭಯೋತ್ಪಾದಕ ದಾಳಿಯನ್ನು ಪ್ಯಾಲೆಸ್ಟೀನಿಯ ಇಸ್ಲಾಮಿಕ್ ಜಿಹಾದ್ ಸಂಘಟನೆ ಹೊಗಳಿದೆ. ಆದರೆ ದಾಳಿ ಮಾಡಿರುವ ಹೊಣೆಯನ್ನು ತಳ್ಳಿಹಾಕಿದೆ. ಇದನ್ನೂ ಓದಿ: ಗುಂಡಿನ ದಾಳಿ ನಡೆಸಿ 10 ಪ್ಯಾಲೆಸ್ಟೀನಿಯನ್ನರ ಹತ್ಯೆಗೈದ ಇಸ್ರೇಲ್ ಪಡೆ
ಪರಸ್ಪರ ರಾಕೆಟ್ ದಾಳಿ: ಇಸ್ರೇಲ್ ಸೇನೆ ಮತ್ತು ಪ್ಯಾಲೆಸ್ಟೀನ್ ಉಗ್ರರ ಗುಂಪುಗಳ ನಡುವೆ ಗಾಜಾಪಟ್ಟಿಯಲ್ಲಿ ಪರಸ್ಪರ ಕ್ಷಿಪಣಿ, ರಾಕೆಟ್ ದಾಳಿ ನಡೆದಿದ್ದು, ಕ್ಷಿಪಣಿ, ಗುಂಡಿನ ದಾಳಿಯಲ್ಲಿ 61 ವರ್ಷದ ಮಹಿಳೆ, ಕನಿಷ್ಠ ಏಳು ಮಂದಿ ಉಗ್ರರು ಅಸುನೀಗಿದ್ದಾರೆ. ಈ ಬೆಳವಣಿಗೆ ಜೆರುಸಲೇಂನ ನಿವಾಸಿಗಳಲ್ಲಿ ಆತಂಕವನ್ನು ಮೂಡಿಸಿದೆ. ಪ್ಯಾಲೆಸ್ಟೀನ್ ಉಗ್ರರ ಗುಂಪು ರಾಕೆಟ್ ದಾಳಿಯನ್ನು ನಿಲ್ಲಿಸಿದಲ್ಲಿ ಪ್ರತಿಯಾಗಿ ಸೇನೆ ಕೂಡಾ ವಾಯುದಾಳಿಯನ್ನು ಸ್ಥಗಿತಗೊಳಿಸಲಿದೆ ಎಂದು ಇಸ್ರೇಲ್‌ನ ರಕ್ಷಣಾ ಸಚಿವರು ಸುಳಿವು ನೀಡಿದ್ದಾರೆ.
ಇಸ್ರೇಲ್ ಮತ್ತು ಪ್ಯಾಲೆಸ್ಟೀನ್‌ನ ನಡುವೆ ದಶಕಗಳಿಂದಲೂ ಸಂಘರ್ಷದ ಸ್ಥಿತಿ ಇದೆ. ಇತ್ತೀಚೆಗೆ ಮರು ಆಯ್ಕೆಗೊಂಡಿರುವ ಪ್ರಧಾನಿ ಬೆಂಜಮಿನ್ ನೇತನ್ಯಾಹು ಅವರಿಗೆ ಇದು ಅಗ್ನಿಪರೀಕ್ಷೆಯಾಗಿದೆ. ಪ್ಯಾಲೆಸ್ಟೀನ್ ಉಗ್ರರು ಗಾಜಾದಿಂದ ಇಸ್ರೇಲ್‌ನ ದಕ್ಷಿಣ ಭಾಗವನ್ನು ಗುರಿಯಾಗಿಸಿ ರಾಕೆಟ್ ದಾಳಿ ನಡೆಸಿದರೆ ಪ್ರತಿಯಾಗಿ ಇಸ್ರೆಲ್ ಸೇನೆಯು ಗಾಜಾದಲ್ಲಿರುವ ತರಬೇತಿ ಶಿಬಿರ, ರಾಕೆಟ್ ತಯಾರಿಕಾ ಘಟಕವನ್ನು ಗುರಿಯಾಗಿಸಿ ದಾಳಿ ನಡೆಸುತ್ತಿದೆ ಎಂದಿದ್ದಾರೆ.
ಇತ್ತೀಚೆಗೆ ಅಮೆರಿಕದ ಕ್ಯಾಲಿಫೋರ್ನಿಯಾ ಹಾಗೂ ವಾಷಿಂಗ್ಟನ್ ರಾಜ್ಯದ ಯಾಕಿಮಾ ನಗರದಲ್ಲಿ ಗುಂಡಿನ ದಾಳಿಗೆ 14 ಮಂದಿ ಬಲಿಯಾಗಿದ್ದರು. ನಂತರ ಇಸ್ರೇಲ್‌ನಲ್ಲಿ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಯಲ್ಲಿ 10 ಮಂದಿ ಪ್ಯಾಲೆಸ್ಟೇನಿಯರನ್ನ ಗುಂಡಿಕ್ಕಿ ಕೊಲ್ಲಲಾಗಿತ್ತು.
Live Tv
[brid partner=56869869 player=32851 video=960834 autoplay=true]
ಜೆರುಸಲೇಮ್: ಶುಕ್ರವಾರ ಜೆರುಸಲೇಮ್‌ನ ಅಲ್-ಅಕ್ಸಾ ಮಸೀದಿ ಆವರಣದಲ್ಲಿ ಪ್ಯಾಲಸ್ಟೈನ್ ಮಂದಿ ಹಾಗೂ ಪೊಲೀಸರ ನಡುವೆ ಘರ್ಷಣೆ ನಡೆದಿದ್ದು, ಘಟನೆಯಲ್ಲಿ 150ಕ್ಕೂ ಹೆಚ್ಚು ಮಂದಿಗೆ ಗಾಯಗಳಾಗಿವೆ ಎಂದು ವರದಿಯಾಗಿದೆ.
ಶುಕ್ರವಾರ ನಡೆದ ಘರ್ಷಣೆಯಲ್ಲಿ ರಬ್ಬರ್ ಬುಲೆಟ್, ಸ್ಟನ್ ಗ್ರೆನೇಡ್, ಲಾಠಿ ಏಟಿನಿಂದಾಗಿ ಹೆಚ್ಚಿನ ಸಂಖ್ಯೆಯಲ್ಲಿ ಪ್ಯಾಲಸ್ಟೈನ್‌ನವರು ಗಾಯಗೊಂಡಿದ್ದಾರೆ ಎಂದು ರೆಡ್ ಕ್ರೆಸೆಂಟ್ ತಿಳಿಸಿದೆ. ಇದನ್ನೂ ಓದಿ: ಉಕ್ರೇನ್ ಯುದ್ಧ – ಭಾರತದಿಂದ ಈಜಿಪ್ಟ್‌ಗೆ ರಫ್ತು ಆಗಲಿದೆ ಗೋಧಿ
ಅಲ್-ಅಕ್ಸಾ ಮಸೀದಿ ಆವರಣ ಪೂರ್ವ ಜೆರುಸೆಲೇಮ್‌ನ ಓಲ್ಡ್ ಸಿಟಿ ಪ್ರದೇಶದಲ್ಲಿದೆ. ಇದನ್ನು ಇಸ್ರೇಲ್ 1967ರಲ್ಲಿ ಯುದ್ಧದಲ್ಲಿ ವಶಪಡಿಸಿಕೊಂಡಿದೆ.
ಕಳೆದ 2 ವಾರಗಳ ಹಿಂದೆ ನಡೆದ ಇಸ್ರೇಲ್‌ನ ಅರಬ್ ಸ್ಟ್ರೀಟ್ ದಾಳಿಯ ಬಳಿಕ ದೇಶಾದ್ಯಂತ ಭದ್ರತಾ ಪಡೆಗಳು ಕಟ್ಟೆಚ್ಚರ ವಹಿಸಿದೆ.
ಕೀವ್: ಭೀಕರ ಯುದ್ಧದ ಹಿನ್ನೆಲೆಯಲ್ಲಿ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ರಷ್ಯಾ ಅಧ್ಯಕ್ಷ ವಾಡ್ಲಿಮಿರ್ ಪುಟಿನ್‌ಗೆ ಜೆರುಸಲೇಮ್‌ನಲ್ಲಿ ಸಂಧಾನಕ್ಕೆ ಬರುವಂತೆ ಕರೆ ನೀಡಿದ್ದಾರೆ.
ಉಕ್ರೇನ್-ರಷ್ಯಾ ದೇಶಗಳ ನಡುವೆ ನಡೆಯುತ್ತಿರುವ ಸಂಘರ್ಷವನ್ನು ಮಾತುಕತೆ ನಡೆಸಿ ಪರಿಹರಿಸಲು ಝೆಲೆನ್ಸ್ಕಿ, ಪುಟಿನ್‌ಗೆ ಆಫರ್ ನೀಡಿದ್ದು, ಇದರಲ್ಲಿ ಮಧ್ಯವರ್ತಿಯಾಗಿ ಮಾತುಕತೆ ಮುನ್ನಡೆಸಲು ಝೆಲೆನ್ಸ್ಕಿ ಇಸ್ರೇಲ್ ಪ್ರಧಾನಿ ನಫ್ತಾಲಿ ಬೆನೆಟ್‌ಗೆ ಮನವಿಯಿಟ್ಟಿದ್ದಾರೆ. ಇದನ್ನೂ ಓದಿ: ಉಕ್ರೇನ್‍ಗೆ 200 ಮಿಲಿಯನ್ ಡಾಲರ್ ಆರ್ಥಿಕ ನೆರವು ನೀಡಿದ ಅಮೆರಿಕ
ವರದಿಗಳ ಪ್ರಕಾರ ಝೆಲೆನ್ಸ್ಕಿ ಸಂಘರ್ಷವನ್ನು ಪರಿಹರಿಸಲು ರಷ್ಯಾ ಅಥವಾ ಉಕ್ರೇನ್‌ನಲ್ಲಿ ಮಾತುಕತೆ ನಡೆಸುವುದು ಸೂಕ್ತವಲ್ಲ. ಹೀಗಾಗಿ ನಾನು ಇಸ್ರೇಲ್‌ನ ಜೆರುಸಲೇಮ್ ಅನ್ನು ಆಯ್ದುಕೊಂಡಿದ್ದೇನೆ. ಎರಡು ಶತ್ರು ರಾಷ್ಟ್ರಗಳ ಮಾತುಕತೆಗೆ ಮಧ್ಯವರ್ತಿಯಾಗಲು ಬೆನೆಟ್‌ಗೆ ತಿಳಿಸಿದ್ದೇನೆ ಎಂದಿದ್ದಾರೆ.
ಉಕ್ರೇನ್-ರಷ್ಯಾ ನಡುವೆ ಯುದ್ಧ ಪ್ರಾರಂಭವಾದಾಗಿನಿಂದ ಉಕ್ರೇನ್‌ನ 1,300ಕ್ಕೂ ಹೆಚ್ಚು ಸೈನಿಕರು ಸಾವನ್ನಪ್ಪಿದ್ದು, ರಷ್ಯಾದ ಸೈನಿಕರ ಸಾವಿನ ಸಂಖ್ಯೆ ಇದಕ್ಕಿಂತಲೂ ಹೆಚ್ಚಿದೆ ಎಂದು ಉಕ್ರೇನ್ ತಿಳಿಸಿದೆ. ರಷ್ಯಾ ಉಕ್ರೇನ್‌ನ ಅತೀ ಹೆಚ್ಚು ಜನಸಂಖ್ಯೆಯಿರುವ ನಗರ ಮೆಲಿಟೊಪೊಲ್ ಅನ್ನು ಶನಿವಾರ ವಶಪಡಿಸಿಕೊಂಡಿದೆ. ರಷ್ಯಾ ಉಕ್ರೇನ್‌ನ ನಾಗರಿಕರ ಮೇಲೂ ದಾಳಿ ನಡೆಸುತ್ತಿದ್ದು, ಇದರಿಂದ ಹೆಚ್ಚಿನ ಸಂಖ್ಯೆಯಲ್ಲಿ ನಾಗರಿಕರೂ ಸಾವನ್ನಪ್ಪುತ್ತಿದ್ದಾರೆ ಎಂದು ಉಕ್ರೇನ್ ಆರೋಪಿಸಿದೆ.
ಜೆರುಸಲೇಮ್ : ಗಾಜಾದ ಹಮಾಸ್ ಬಂಡುಕೋರರೊಂದಿಗೆ ಆರಂಭಗೊಂಡ ಇಸ್ರೇಲ್ ಮಿಲಿಟಿರಿ ಪಡೆಯ ಯುದ್ಧ ದಿನೇ ದಿನೇ ತೀವ್ರತೆ ಪಡೆದುಕೊಳ್ಳುತ್ತಿದೆ. ಗಾಜಾ ನಗರದಲ್ಲಿ ಇಸ್ರೇಲ್ ನಡೆಸಿದ ವಾಯುದಾಳಿಯಿಂದ ಒಂದೇ ಕುಟುಂಬದ ಸುಮಾರು 10 ಮಂದಿ ಸಾವನ್ನಪ್ಪಿದ್ದು, ಪವಾಡಸದೃಶ್ಯವೆಂಬಂತೆ 6 ತಿಂಗಳ ಮಗು ಬದುಕುಳಿದಿದೆ.
ಈದ್ ಅಲ್- ಫಿತರ್ ರಜಾದಿನವನ್ನು ಆಚರಿಸಲು ಪತ್ನಿ ಮತ್ತು ಐದು ಮಕ್ಕಳು ಸಂಬಂಧಿಕರ ಮನೆಗೆ ಹೋಗಿದ್ದರು. ದಾಳಿಗೆ ಸಿಲುಕಿ ಕುಟುಂಬದ ಬಹುತೇಕ ಮಂದಿ ಸಾವನ್ನಪ್ಪಿದ್ದಾರೆ ಎಂದು ಮಗುವಿನ ತಂದೆ ಮೊಹಮ್ಮದ್ ಹದೀದಿ ಹೇಳಿದ್ದಾರೆ. ಕಳೆದ ಶನಿವಾರ ಘಟನೆ ನಡೆದಿದ್ದು, ಸಾವನ್ನಪ್ಪಿದ ಕುಟುಂಬದ 10 ಮದಿ ಪೈಕಿ ಬಹುತೇಕರು ಪುಟ್ಟ ಮಕ್ಕಳೆ ಆಗಿದ್ದಾರೆ.
ಪತ್ನಿ ಮತ್ತು 6 ರಿಂದ 14 ವರ್ಷದ ಮಕ್ಕಳಲ್ಲಿ ಮೂವರು ಸಾವನ್ನಪಿದ್ದಾರೆ, 11 ವರ್ಷದ ಮಗು ಕಾಣೆಯಾಗಿದೆ. 6 ತಿಂಗಳ ಮಗ ಒಮರ್ ಮಾತ್ರ ಬದುಕುಳಿದಿದ್ದಾನೆ. ಮಗುವಿನ ಕಾಲು ಮುರಿದಿದೆ. ಮಗುವನ್ನು ಗಾಜಾದ ಅಲ್- ಶಿಫಾ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಲಾಗುತ್ತಿದೆ. ದಾಳಿಯ ಬೆನ್ನಲ್ಲೇ ನೂರಾರು ಜನರು ಗಾಜಾ ನಗರದ ಬೀದಿಗಳಲ್ಲಿ ಕುಟುಂಬ ಸದಸ್ಯರ ಮೃತದೇಹಗಳನ್ನು ಹೊತ್ತು ಮೆರವಣಿಗೆ ನಡೆಸಿದ್ದಾರೆ ಎಂದು ಹದೀದಿ ತಿಳಿಸಿದ್ದಾರೆ.
ಹಮಾಸ್ ಬಂಡುಕೋರರು ಇಸ್ರೇಲ್ ಮೇಲೆ ನೂರಾರು ರಾಕೆಟ್‍ಗಳನ್ನು ಹಾರಿಸಿದ್ದಾರೆ. ಪ್ರತೀಕಾರವಾಗಿ ಇಸ್ರೇಲ್ ಗಾಜಾ ಪಟ್ಟಿ ಮೇಲೆ ವೈಮಾನೀಕ ದಾಳಿ ನಡೆಸಿದೆ. ಗಾಜಾದಲ್ಲಿ 31 ಮಕ್ಕಳು 20 ಮಹಿಳೆಯರು ಸೇರಿದಂತೆ ಕನಿಷ್ಠ 126 ಜನರು ಸಾವನ್ನಪ್ಪಿದ್ದಾರೆ. ಇಸ್ರೇಲ್‍ನಲ್ಲಿ 6 ವರ್ಷದ ಬಾಲಕ, ಸೈನಿಕರು ಸೇರಿದಂತೆ 7ಮಂದಿ ಮೃತಪಟ್ಟಿದ್ದಾರೆ.
ಹೈದರಾಬಾದ್: ತಿರುಪತಿ -ತಿರುಮಲ ನಗರದ ಮಧ್ಯೆ ಪ್ರಯಾಣಿಸುವ ಆಂಧ್ರಪ್ರದೇಶ ರಸ್ತೆ ಸಾರಿಗೆ ನಿಗಮದ ಬಸ್‍ನಲ್ಲಿ ನೀಡಿರುವ ಟಿಕೆಟ್‍ಗಳು ಭಾರೀ ವಿವಾದಕ್ಕೆ ಗುರಿಯಾಗಿವೆ.
ತಿರುಪತಿ ಬಸ್‍ಗಳಲ್ಲಿ ನೀಡುವ ಟಿಕೆಟ್‍ಗಳ ಹಿಂಭಾಗದಲ್ಲಿ ಹಜ್ ಹಾಗೂ ಜೆರುಸಲೆಮ್ ತೀರ್ಥಯಾತ್ರೆಯ ಕುರಿತು ಸಿಎಂ ವೈ.ಎಸ್.ಜಗನ್‍ಮೋಹನ್ ರೆಡ್ಡಿ ಸರ್ಕಾರವು ಮುದ್ರಿಸಿದೆ. ಹೀಗಾಗಿ ಆಂಧ್ರ ಪ್ರದೇಶ ಬಿಜೆಪಿ ನಾಯಕರು ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ವಿರುದ್ಧ ಅಸಮಾಧಾನ ಹೊರ ಹಾಕಿದ್ದಾರೆ.
#AndhraPradesh– Tickets issued at Ram Bagicha depot in Tirumala had ‘Hajj, Jerusalem’ tour ads-sparking row among Hindu groups, who alleged ‘religious conversions’. State BJP also alleged the same,demanding an inquiry.Acc to dpt manager-rolls were issued ‘bymistake’ to Tirumala. pic.twitter.com/Rijh4OJ8U1
ಈ ವಿಚಾರವನ್ನು ಪ್ರಯಾಣಿಕರೊಬ್ಬರು ಬುಧವಾರ ಪ್ರಾದೇಶಿಕ ವ್ಯವಸ್ಥಾಪಕರ ಗಮನಕ್ಕೆ ತಂದಿದ್ದರು. ಆಗ ಅವರು ಹಿಂದೂಯೇತರ ಯಾತ್ರೆಗಳ ಬಗ್ಗೆ ಮುದ್ರಿತವಾಗಿರುವ ಟಿಕೆಟ್‍ಗಳ ಬಂಡಲ್ ತಪ್ಪಾಗಿ ತಿರುಪತಿಗೆ ಬಂದಿದೆ ಅಂತ ತಿಳಿಸಿದ್ದರು ಎಂದು ವರದಿಯಾಗಿದೆ.
ತಿರುಪತಿ ಬಸ್‍ಗಳ ಟಿಕೆಟ್‍ನಲ್ಲಿ ಮುದ್ರಿಸಿದ ಜಾಹೀರಾತು ವಿಷಯವನ್ನು ನಮ್ಮ ಗಮನಕ್ಕೆ ತರಲಾಗಿದೆ. ಈ ಬಗ್ಗೆ ತನಿಖೆ ನಡೆಸಲಾಗುತ್ತದೆ. ಜೊತೆಗೆ ಇದು ಅಲ್ಪಸಂಖ್ಯಾತ ಇಲಾಖೆ ಹೊರಡಿಸಿದ ಸರ್ಕಾರದ ಜಾಹೀರಾತು ಎಂದು ಸಾರಿಗೆ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕರು ಹೇಳಿದ್ದಾರೆ.
ಹೈದರಾಬಾದ್‍ನ ಬಿಜೆಪಿ ಶಾಸಕ ರಾಜಾ ಸಿಂಗ್ ಅವರು ಬಸ್ ಟಿಕೆಟ್ ವಿಚಾರವಾಗಿ ಈಗಾಗಲೇ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಆಂಧ್ರ ಪ್ರದೇಶ ಸಿಎಂ ಜಗನ್ ಮೋಹನ್ ರೆಡ್ಡಿ ಅವರು ಹಿಂದೂ ಧರ್ಮದವರಲ್ಲ. ಅವರಿಗೆ ಹಿಂದೂ ಧರ್ಮದ ಮೇಲೆ ನಂಬಿಕೆಯೂ ಇಲ್ಲ. ಹೀಗಾಗಿ ಅಲ್ಪಸಂಖ್ಯಾತ ಧರ್ಮಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಿದ್ದಾರೆ ಎಂದು ಬಿಜೆಪಿ ನಾಯಕರು ದೂರಿದ್ದಾರೆ.
ಜಗನ್ ಮೋಹನ್ ರೆಡ್ಡಿ ಅವರು ಅಮೆರಿಕದಲ್ಲಿ ಕಳೆದ ವಾರ ನಡೆದ ಕಾರ್ಯಕ್ರಮವೊಂದರಲ್ಲಿ ದೀಪ ಹಚ್ಚಲು ನಿರಾಕರಿಸಿದ್ದರು. ದೀಪ ಹಚ್ಚದೇ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಅವರು ಹಿಂದೂ ಸಂಪ್ರದಾಯಕ್ಕೆ ಅಗೌರವ ತೋರಿದ್ದಾರೆ ಎಂದು ಅಸಮಾಧಾನ ಹೊರಹಾಕಿದ್ದಾರೆ.
Before election, YSRCP slogan was 'Kavali Jagan,Ravali Jagan', ('Andhra needs Jagan, wants Jagan' )
But Now, Is this their new Slogan- Ravali Jesus, Kavali Jesus?
Promoting one particular religion on bus ticket to Tirupati is highly objectionable. This must come to an end. pic.twitter.com/8NBjneobuD
ನವದೆಹಲಿ: ಸುಮಾರು ಒಂದು ತಿಂಗಳ ಹಿಂದಷ್ಟೇ ಹಜ್ ಯಾತ್ರಿಗಳಿಗೆ ಸರ್ಕಾರದ ಸಬ್ಸಿಡಿಯನ್ನ ರದ್ದು ಮಾಡಿದ ಬಿಜೆಪಿ ಇದೀಗ ಕ್ರೈಸ್ತರನ್ನ ಉಚಿತವಾಗಿ ಜೆರುಸಲೇಂಗೆ ಕಳಿಸೋದಾಗಿ ಹೇಳಿದೆ.
ನಾಗಾಲ್ಯಾಂಡ್‍ನಲ್ಲಿ ಅಧಿಕಾರಕ್ಕೆ ಬಂದರೆ ಕ್ರೈಸ್ತರನ್ನ ಉಚಿತವಾಗಿ ಜೆರುಸಲೇಂಗೆ ಕಳಿಸುವುದಾಗಿ ಬಿಜೆಪಿ ಹೇಳಿದೆ. ಆದ್ರೆ ಎಲ್ಲಾ ಭಾರತೀಯ ಕ್ರೈಸ್ತರಿಗೆ ಈ ಆಫರ್ ನೀಡಿತ್ತಿದೆಯೋ ಅಥವಾ ಇದು ಈಶಾನ್ಯದಲ್ಲಿರುವ ಕ್ರೈಸ್ತರಿಗೋ ಅಥವಾ ನಾಗಾಲ್ಯಾಂಡಿನಲ್ಲಿರುವ ಕ್ರೈಸ್ತರಿಗೆ ಮಾತ್ರವೋ ಎಂಬುದು ಸ್ಪಷ್ಟವಾಗಿಲ್ಲ. ಮೂರು ಈಶಾನ್ಯ ರಾಜ್ಯಗಳಾದ ಮೇಘಾಲಯ, ನಾಗಾಲ್ಯಾಂಡ್ ಹಾಗೂ ತ್ರಿಪುರಾದಲ್ಲಿ ಚುನಾವಣೆಗೆ ತಯಾರಿ ನಡೆಸುತ್ತಿರುವ ಹೊತ್ತಲ್ಲೇ ಬಿಜೆಪಿ ಈ ಆಫರ್ ನೀಡಿದೆ. ಮೇಘಾಲಯದಲ್ಲಿ 75% ಜನಸಂಖ್ಯೆ ಕ್ರೈಸ್ತರಾಗಿದ್ದಾರೆ. ಹಾಗೇ ನಾಗಾಲ್ಯಾಂಡ್‍ನಲ್ಲಿ 88% ಜನಸಂಖ್ಯೆ ಕ್ರೈಸ್ತರಾಗಿದ್ದಾರೆ.
ವೀ ದಿ ನಾಗಾಸ್ ಎಂಬ ಸುದ್ದಿ ಮಾಧ್ಯಮವೊಂದು ಬಿಜೆಪಿಯ ಈ ಆಫರ್ ಬಗ್ಗೆ ಟ್ವಿಟ್ಟರ್‍ನಲ್ಲಿ ತಿಳಿಸಿದೆ. ಯುಎನ್‍ಐ ಸುದ್ದಿ ಸಂಸ್ಥೆಯ ವರದಿಯಲ್ಲಿ, ಉಚಿತ ಜೆಲುಸಲೇಂ ಪ್ರವಾಸ ನಾಗಾಲ್ಯಾಂಡಿನ ಕ್ರೈಸ್ತರಿಗೆ ಮಾತ್ರ ಎಂದು ಹೇಳಿದೆ.
ಬಿಜೆಪಿಯ ಈ ಆಫರ್‍ಗೆ ಇದೀಗ ಟೀಕೆ ವ್ಯಕ್ತವಾಗಿದೆ. ಅದರಲ್ಲೂ ಹಜ್ ಸಬ್ಸಿಡಿ ರದ್ದು ಮಾಡಿದ ಹಿನ್ನೆಲೆಯಲ್ಲಿ ಹಲವರು ಇದನ್ನ ಬೂಟಾಟಿಕೆ ಹಾಗೂ ಅವಕಾಶವಾದ ಎಂದು ಖಂಡಿಸಿದ್ದಾರೆ.
ಬಿಜೆಪಿ ಕ್ರೈಸ್ತರನ್ನ ಉಚಿತ ಪ್ರವಾಸಕ್ಕೆ ಕಳಿಸಲು ಮುಂದಾಗಿದೆ. ನಾನು ಹೇಳಿದ್ದು ನಿಜ. ಚುನಾವಣೆಯ ಅಗತ್ಯಕ್ಕೆ ತಕ್ಕಂತೆ ಬಿಜೆಪಿ ಸಬ್ಸಿಡಿ ನೀಡುವುದು ಮುಂದುವರಿಸಿದೆ. ಇಂಡಿಯಾ ಫಸ್ರ್ಟ್ ಎಂಬ ಬಿಜೆಪಿ ಹೇಳಿಕೆಯ ಅರ್ಥ ಇದೆ ಎಂದು ಅಖಿಲ ಭಾರತ ಮಜ್ಲಿಸ್ ಇ ಇಥೆಹಾದುಲ್ ಮುಸಲ್ಮಿನ್(ಎಐಎಂಐಎಂ) ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಟ್ವೀಟ್ ಮಾಡಿದ್ದಾರೆ.
ಕಳೆದ ತಿಂಗಳು ಹಜ್ ಸಬ್ಸಿಡಿ ರದ್ದು ಮಾಡಿದ್ದಾಗ ಹೇಳಿಕೆ ನೀಡಿದ್ದ ಕೆಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಮುಖ್ತರ್ ಅಬ್ಬಾಸ್ ನಖ್ವಿ, ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಘನತೆಯೊಂದಿಗೆ ಅಲ್ಪಸಂಖ್ಯಾತರ ಅಭಿವೃದ್ಧಿಯಾಗಬೇಕೆಂದು ನಂಬಿದೆಯೇ ಹೊರತು ಓಲೈಕೆಯಿಂದಲ್ಲ ಎಂದು ಹೇಳಿದ್ದರು.
ಓಲೈಕೆಯಿಲ್ಲದ ಅಭಿವೃದ್ಧಿಯಲ್ಲಿ ನಮಗೆ ನಂಬಿಕೆ ಇದೆ. ನಮಗೆ ನಂಬಿಕೆ ಇರುವುದು ಘನತೆಯುಕ್ತ ಅಭಿವೃದ್ಧಿಯಲ್ಲಿ. ಹಜ್ ಸಬ್ಸಿಡಿ ಹಣವನ್ನ ಹೆಣ್ಣುಮಕ್ಕಳ ವಿದ್ಯಾಭ್ಯಾಸಕ್ಕೆ ಬಳಸಿಕೊಳ್ಳಲಾಗುತ್ತದೆ ಎಂದು ನಖ್ವಿ ಹೇಳಿದ್ದರು.