Tag: jersey

  • World Cup 2023- ನೀವು ನಮ್ಮ ಹೆಮ್ಮೆ- ಪಂದ್ಯಕ್ಕೂ ಮುನ್ನ ಕೊಹ್ಲಿಗೆ ಸಚಿನ್ ಜೆರ್ಸಿ ಗಿಫ್ಟ್

    World Cup 2023- ನೀವು ನಮ್ಮ ಹೆಮ್ಮೆ- ಪಂದ್ಯಕ್ಕೂ ಮುನ್ನ ಕೊಹ್ಲಿಗೆ ಸಚಿನ್ ಜೆರ್ಸಿ ಗಿಫ್ಟ್

    ಅಹಮದಾಬಾದ್: ವಿಶ್ವಕಪ್ 2023ರ (World Cup 2023) ಹೈವೋಲ್ಟೇಜ್ ಪಂದ್ಯಕ್ಕೂ ಮುನ್ನ ಅಹಮದಾಬಾದ್‍ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ (Narendra Modi Stadium Ahemadabad) ನಡೆದ ಒಂದು ಘಟನೆ ಹೃದಯಸ್ಪರ್ಶಿ ಕ್ಷಣಕ್ಕೆ ಸಾಕ್ಷಿಯಾಗಿದೆ.

    ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ (sachin Tendulakr) ಅವರು ತಮ್ಮ ಸಹಿ ಇರುವ ಜೆರ್ಸಿಯನ್ನು ವಿರಾಟ್ ಕೊಹ್ಲಿಗೆ (Virat Kohli) ಉಡುಗೊರೆಯಾಗಿ ನೀಡಿದ ಪ್ರಸಂಗ ನಡೆಯಿತು. ಜೆರ್ಸಿಯಲ್ಲಿ (Jersey) ಸಹಿ ಜೊತೆಗೆ ವಿರಾಟ್, ನೀವು ನಮ್ಮನ್ನು ಹೆಮ್ಮೆ ಪಡಿಸಿದ್ದೀರಿ ಎಂಬ ಹೃತ್ಪೂರ್ವಕ ಸಂದೇಶ ಕೂಡ ಬರೆಯಲಾಗಿದೆ. ಅಹಮದಾಬಾದ್‍ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಭಾರತವು ಆಸ್ಟ್ರೇಲಿಯಾ ತಂಡವನ್ನು ಎದುರಿಸುವ ಮುನ್ನವೇ ಮಾಸ್ಟರ್ ಬ್ಲಾಸ್ಟರ್ ನ ಈ ಭಾವನಾತ್ಮಕ ನಡೆಗೆ ಕ್ರೀಡಾಭಿಮಾನಿಗಳು ಸಾಕ್ಷಿಯಾದರು.

     

    View this post on Instagram

     

    A post shared by ICC (@icc)

     

    ಈ ಜೆರ್ಸಿಯು ಬಹಲ ಪ್ರಾಮುಖ್ಯತೆ ಪಡೆದಿದೆ. ಇದು 100 ಅಂತಾರಾಷ್ಟ್ರೀಯ ಶತಕಗಳನ್ನು ಗಳಿಸಿದ ಮೊದಲ ಬ್ಯಾಟ್ಸ್ ಮನ್ ತೆಂಡೂಲ್ಕರ್‌ರಿಂದ ಹಿಡಿದು ಅಂತಾರಾಷ್ಟ್ರೀಯ ಕ್ರಿಕೆಟ್‍ನಲ್ಲಿ ದಾಖಲೆಗಳನ್ನು ಮುರಿದು ಹೊಸ ಮಾನದಂಡಗಳನ್ನು ಸ್ಥಾಪಿಸುತ್ತಿರುವ ಕೊಹ್ಲಿಯವರೆಗೆ ಒಂದು ಪೀಳಿಗೆಯಿಂದ ಮುಂದಿನ ಪೀಳಿಗೆಗೆ ರವಾನೆಯಾದ ಜ್ಯೋತಿಯನ್ನು ಪ್ರತಿನಿಧಿಸುತ್ತದೆ.

    ಸಹಿ ಹಾಕಿದ ಜೆರ್ಸಿ ಕೇವಲ ಸ್ಮರಣಿಕೆಗಳಲ್ಲ; ಇದು ತೆಂಡೂಲ್ಕರ್ ಅವರ ಮನ್ನಣೆಯ ಸಂಕೇತವಾಗಿದೆ. ಭಾರತ ಕ್ರಿಕೆಟ್‍ಗೆ ಕೊಹ್ಲಿಯ ಕೊಡುಗೆಗಳನ್ನು ಮತ್ತು ರಾಷ್ಟ್ರವನ್ನು ಪ್ರೇರೇಪಿಸುವಲ್ಲಿ ಅವರ ಪಾತ್ರವನ್ನು ಗುರುತಿಸುತ್ತದೆ. ಇದನ್ನೂ ಓದಿ: ಮೂರು ಫೈನಲ್‌ ಪೈಕಿ ಟಾಸ್‌ ಸೋತ ಎರಡರಲ್ಲಿ ಭಾರತ ಚಾಂಪಿಯನ್‌ – ಈ ಬಾರಿ ಏನಾಗಬಹುದು?

    ಈ ಹಿಂದೆ ಭಾರತ ಹಾಗೂ ಪಾಕಿಸ್ತಾನ (India- Pakistan) ನಡುವಿನ ಪಂದ್ಯ ಮುಗಿದ ನಂತರ ಪಾಕಿಸ್ತಾನ ನಾಯಕ ಬಾಬರ್ ಆಜಮ್ ಅವರನ್ನು ವಿರಾಟ್ ಕೊಹ್ಲಿ  ಮೈದಾನದಲ್ಲೇ ಭೇಟಿ ಮಾಡಿ ಧೈರ್ಯ ತುಂಬಿದ್ದಲ್ಲದೆ ತಮ್ಮ ಹಸ್ತಾಕ್ಷರವುಳ್ಳ ಭಾರತ ತಂಡದ 2 ಜೆರ್ಸಿಗಳನ್ನು ನೀಡುವ ಮೂಲಕ ಅಭಿಮಾನಿಗಳ ಮನಗೆದ್ದಿದ್ದರು. ಈ ಫೋಟೋ ‘ಎಕ್ಸ್’ ಖಾತೆ ಸೇರಿದಂತೆ ಹಲವು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿತ್ತು.

  • ನಮ್ದು ಕಲ್ಲಂಗಡಿಯಾದರೆ ನಿಮ್ದು ಹಾರ್ಪಿಕ್ – ಇಂಡೋ ಪಾಕ್ ಅಭಿಮಾನಿಗಳ ಜೆರ್ಸಿ ಫೈಟ್

    ನಮ್ದು ಕಲ್ಲಂಗಡಿಯಾದರೆ ನಿಮ್ದು ಹಾರ್ಪಿಕ್ – ಇಂಡೋ ಪಾಕ್ ಅಭಿಮಾನಿಗಳ ಜೆರ್ಸಿ ಫೈಟ್

    ಮುಂಬೈ: ಟಿ20 ವಿಶ್ವಕಪ್‍ಗಾಗಿ (T20 World)  ಭಾರತದ ನೂತನ ಜೆರ್ಸಿ ಅನಾವರಣಗೊಂಡಿದೆ. ಅತ್ತ ಪಾಕಿಸ್ತಾನ (Pakistan) ತಂಡದ ಟಿ20 ವಿಶ್ವಕಪ್‌ ಜೆರ್ಸಿ (Jersey) ಎನ್ನುವ ಫೋಟೋ ಒಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಇದೀಗ ಈ ಜೆರ್ಸಿ ಕುರಿತಾಗಿ ಭಾರತ ಹಾಗೂ ಪಾಕಿಸ್ತಾನ ಅಭಿಮಾನಿಗಳು ಪರಸ್ಪರ ಕಾಲೆಳೆಯುತ್ತಿದ್ದಾರೆ.

    ಟಿ20 ವಿಶ್ವಕಪ್‍ಗಾಗಿ ಭಾರತದ ಪುರುಷ ಹಾಗೂ ಮಹಿಳಾ ಕ್ರಿಕೆಟ್ ತಂಡಕ್ಕೆ ನೀಲಿ ಹಾಗೂ ಕಡು ನೀಲಿ ಬಣ್ಣ ಮಿಶ್ರಿತ ಜೆರ್ಸಿ ಸಿದ್ಧವಾಗಿದೆ. ಈಗಾಗಲೇ ಬಿಸಿಸಿಐ (BCCI) ಈ ಜೆರ್ಸಿಯನ್ನು ಅನಾವರಣಗೊಳಿಸಿದೆ. ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಪಾಕಿಸ್ತಾನ ತಂಡದ ಆಟಗಾರರಿರುವ ಪೋಸ್ಟರ್ ಒಂದು ವೈರಲ್ ಆಗುತ್ತಿದ್ದು, ಈ ಪೋಸ್ಟರ್‌ನಲ್ಲಿ ಹಸಿರು ಮತ್ತು ಲೈಟ್ ಹಸಿರು ಬಣ್ಣದ ಜೆರ್ಸಿಯಲ್ಲಿ ಪಾಕಿಸ್ತಾನ ತಂಡ ಕಾಣಿಸಿಕೊಂಡಿದೆ ಇದು ಟಿ20 ವಿಶ್ವಕಪ್‍ಗೆ ಪಾಕಿಸ್ತಾನ ತಂಡದ ಜೆರ್ಸಿ ಎಂದು ವೈರಲ್ ಆಗುತ್ತಿದೆ. ಇದನ್ನೂ ಓದಿ: T20 ವಿಶ್ವಕಪ್‍ನಲ್ಲಿ ರಾಹುಲ್ ಗಾಂಧಿ ಜೊತೆ ಆರಂಭಿಕರಾಗಿ ಕಣಕ್ಕಿಳಿಯಲಿದ್ದಾರೆ ರೋಹಿತ್ – ಆ್ಯಂಕರ್ ಎಡವಟ್ಟು

    https://twitter.com/_troll_10/status/1571542005620289536

    ಪಾಕಿಸ್ತಾನದ ಈ ಜೆರ್ಸಿ ನೋಡಿದ ಬಳಿಕ ನೆಟ್ಟಿಗರು ಈ ಜೆರ್ಸಿ ಕಲ್ಲಂಗಡಿ ಹಣ್ಣಿನಂತೆ ವಿನ್ಯಾಸಗೊಳಿಸಲಾಗಿದೆ ಎಂದು ಕಾಲೆಳೆದಿದ್ದಾರೆ. ಇದಕ್ಕೆ ಟಕ್ಕರ್ ನೀಡಿರುವ ಪಾಕ್ ಅಭಿಮಾನಿಗಳು ಭಾರತದ ಜೆರ್ಸಿ ಹಾರ್ಪಿಕ್ ಬಾಟಲ್‍ನ ವಿನ್ಯಾಸದಂತಿದೆ ಎಂದು ಕಿಚಾಯಿಸಿದ್ದಾರೆ. ಇದೀಗ ಭಾರತ ಹಾಗೂ ಪಾಕಿಸ್ತಾನದ ಅಭಿಮಾನಿಗಳು ಟಿ20 ವಿಶ್ವಕಪ್‍ಗೂ ಮುನ್ನ ಜೆರ್ಸಿ ವಿಷಯವಾಗಿ ಫೈಟ್ ಆರಂಭಿಸಿದ್ದಾರೆ. ಇದನ್ನೂ ಓದಿ: ಟಿ20 ವಿಶ್ವಕಪ್‌ಗಾಗಿ `One Blue Jersey’ – ಟೀಂ ಇಂಡಿಯಾಕ್ಕೆ ನ್ಯೂ ಲುಕ್

    ಬಿಸಿಸಿಐ ನೂತನ ಜೆರ್ಸಿಗೆ `ಒನ್ ಬ್ಲೂ ಜೆರ್ಸಿ ಎಂದು ಹೆಸರಿಟ್ಟಿದೆ. ಇದು ನೀಲಿ ಹಾಗೂ ರಾಯಲ್ ಬ್ಲೂ (ಕಡು ನೀಲಿ) ಬಣ್ಣದ ಮಿಶ್ರಣದಿಂದ ಕೂಡಿದೆ. ಈಗಾಗಲೇ ಜೆರ್ಸಿಯನ್ನು ಅನಾವರಣಗೊಳಿಸಲಾಗಿದೆ. ಆದರೆ ಪಾಕಿಸ್ತಾನ ಜೆರ್ಸಿಯನ್ನು ಅಧಿಕೃತವಾಗಿ ಪಾಕಿಸ್ತಾನ ಕ್ರಿಕೆಟ್ ಬೋರ್ಡ್ (PCB) ಅನಾವರಣಗೊಳಿಸಿಲ್ಲ. 2022ರ ಟಿ20 ವಿಶ್ವಕಪ್‌ಗೆ ಆಸ್ಟ್ರೇಲಿಯಾ ಆತಿಥ್ಯ ವಹಿಸುತ್ತಿದ್ದು, ಅಕ್ಟೋಬರ್ 16 ರಿಂದ ನವೆಂಬರ್ 13ರ ವರೆಗೆ ಟೂರ್ನಿ ನಡೆಯಲಿದೆ.

    Live Tv
    [brid partner=56869869 player=32851 video=960834 autoplay=true]

  • ಟಿ20 ವಿಶ್ವಕಪ್‌ಗಾಗಿ `One Blue Jersey’ – ಟೀಂ ಇಂಡಿಯಾಕ್ಕೆ ನ್ಯೂ ಲುಕ್

    ಟಿ20 ವಿಶ್ವಕಪ್‌ಗಾಗಿ `One Blue Jersey’ – ಟೀಂ ಇಂಡಿಯಾಕ್ಕೆ ನ್ಯೂ ಲುಕ್

    ಮುಂಬೈ: ಅಕ್ಟೋಬರ್ 16 ರಿಂದ ಆರಂಭವಾಗಲಿರುವ ಟೀಂ ಇಂಡಿಯಾಕ್ಕೆ (Team India) ಹೊಸ ಜೆರ್ಸಿ ಸಿದ್ಧವಾಗಿದ್ದು, ಇಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಅನಾವರಣಗೊಳಿಸಿದೆ.

    ಮುಂಬರುವ ಟಿ20 ವಿಶ್ವಕಪ್‌ನಲ್ಲಿ (T20 World Cup) ಟೀಂ ಇಂಡಿಯಾ ಆಟಗಾರರು ಹೊಸ ಲುಕ್‌ನಲ್ಲಿ (New Look) ಕಾಣಿಸಿಕೊಳ್ಳಲಿದ್ದಾರೆ. ಕಿಟ್ ಪ್ರಾಯೋಜಕತ್ವ ಹೊರತಂದಿರುವ ಎಂಪಿಎಲ್ ಸ್ಪೋರ್ಟ್ಸ್ (Sports) ಸಹಯೋಗದಲ್ಲಿ ಬಿಸಿಸಿಐ, ಭಾರತ ಪುರುಷ ಹಾಗೂ ಮಹಿಳಾ ಕ್ರಿಕೆಟ್ ತಂಡದ ಜೆರ್ಸಿ ( Indian Womens Cricket Team) ಅನಾವರಣಗೊಳಿಸಿದೆ.

    ಇದಕ್ಕೆ `ಒನ್ ಬ್ಲೂ ಜೆರ್ಸಿ’ ಎಂದು ಹೆಸರಿಟ್ಟಿದೆ. ಇದು ನೀಲಿ ಹಾಗೂ ರಾಯಲ್ ಬ್ಲೂ (ಕಡು ನೀಲಿ) ಬಣ್ಣದ ಮಿಶ್ರಣದಿಂದ ಕೂಡಿದೆ. ಐಸಿಸಿ ಟ್ವೆಂಟಿ-20 ವಿಶ್ವಕಪ್‌ಗೆ ಆಸ್ಟ್ರೇಲಿಯಾ ಯಾ ಆತಿಥ್ಯ ವಹಿಸುತ್ತಿದ್ದು, ಅಕ್ಟೋಬರ್ 16ರಿಂದ ನವೆಂಬರ್ 13ರ ವರೆಗೆ ಸಾಗಲಿದೆ.

    ಇದಕ್ಕೂ ಮುನ್ನ ಭಾರತ ತಂಡವು ತವರಿನಲ್ಲಿ ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧ ಟಿ20 ಸರಣಿಯಲ್ಲಿ ಶಕ್ತಿ ಪ್ರದರ್ಶನ ನಡೆಸಲಿದೆ. ಸೆಪ್ಟೆಂಬರ್ 20 ರಿಂದ ಆಸ್ಟ್ರೇಲಿಯಾ ಹಾಗೂ ಸೆಪ್ಟಂಬರ್ 28 ರಿಂದ ದಕ್ಷಿಣ ಆಫ್ರಿಕಾದೊಂದಿಗೆ ಟಿ20 ಸರಣಿ ನಡೆಯಲಿದೆ.

    Live Tv
    [brid partner=56869869 player=32851 video=960834 autoplay=true]

  • ಆಡಿದ್ದು ಡೆಲ್ಲಿ ಪರ – ಫೈನಲ್‍ನಲ್ಲಿ ಆ ಒಂದು ಕಾರಣಕ್ಕಾಗಿ ರಾಜಸ್ಥಾನ ತಂಡಕ್ಕೆ ಚಿಯರ್ ಅಪ್ ಮಾಡಿದ್ರು ಚೇತನ್ ಸಕಾರಿಯಾ

    ಆಡಿದ್ದು ಡೆಲ್ಲಿ ಪರ – ಫೈನಲ್‍ನಲ್ಲಿ ಆ ಒಂದು ಕಾರಣಕ್ಕಾಗಿ ರಾಜಸ್ಥಾನ ತಂಡಕ್ಕೆ ಚಿಯರ್ ಅಪ್ ಮಾಡಿದ್ರು ಚೇತನ್ ಸಕಾರಿಯಾ

    ಅಹಮದಾಬಾದ್: ರಾಜಸ್ಥಾನ ರಾಯಲ್ಸ್ ಮತ್ತು ಗುಜರಾತ್ ಟೈಟಾನ್ಸ್ ನಡುವಿನ ಫೈನಲ್ ಪಂದ್ಯದಲ್ಲಿ ಡೆಲ್ಲಿ ತಂಡದ ಬೌಲರ್ ಚೇತನ್ ಸಕಾರಿಯಾ ರಾಜಸ್ಥಾನ ತಂಡದ ಜೆರ್ಸಿ ತೊಟ್ಟು ಚಿಯರ್ ಅಪ್ ಮಾಡಿದ್ದಾರೆ.

    15ನೇ ಆವೃತ್ತಿ ಐಪಿಎಲ್‍ನಲ್ಲಿ ಚೇತನ್ ಸಕಾರಿಯಾ ಡೆಲ್ಲಿ ಕಾಪಿಟಲ್ಸ್ ಪರ ಆಡಿದ್ದರು. ಡೆಲ್ಲಿ ತಂಡ ಪ್ಲೇ ಆಫ್ ಪ್ರವೇಶಿಸಲು ವಿಫಲವಾಗಿ ಲೀಗ್ ಪಂದ್ಯದಿಂದಲೇ ಹೊರಬಿದ್ದಿತು. ಆದರೆ ನಿನ್ನೆ ನಡೆದ ಫೈನಲ್ ಪಂದ್ಯದಲ್ಲಿ ಸಕಾರಿಯಾ ರಾಜಸ್ಥಾನ ತಂಡದ ಜೆರ್ಸಿ ತೊಟ್ಟು ಸ್ಟೇಡಿಯಂನಲ್ಲಿ ಹಾಜರಿದ್ದರು. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಫೋಟೋಗಳು ಹರಿದಾಡುತ್ತಿದೆ. ಇದನ್ನೂ ಓದಿ: ಗುಜರಾತ್‌ಗೆ ಐಪಿಎಲ್‌ ಟ್ರೋಫಿ – ಯಾವ ಆಟಗಾರರಿಗೆ ಏನು ಪ್ರಶಸ್ತಿ?

    ಚೇತನ್ ಸಕಾರಿಯಾ 14ನೇ ಆವೃತ್ತಿ ಐಪಿಎಲ್‍ನಲ್ಲಿ ರಾಜಸ್ಥಾನ ರಾಯಲ್ಸ್ ಪರ ಆಡಿದ್ದರು. ರಾಜಸ್ಥಾನ ತಂಡದ ಪರ ಉತ್ತಮ ಪ್ರದರ್ಶನ ತೋರಿ ತನ್ನ ಬೌಲಿಂಗ್ ಸಾಮಥ್ರ್ಯವನ್ನು ಸಾಬೀತುಪಡಿಸಿದ್ದರು. ನಂತರ ಕೊರೊನಾದಿಂದಾಗಿ ಐಪಿಎಲ್ ಅರ್ಧದಲ್ಲಿ ಸ್ಥಗಿತಗೊಂಡು ಮನೆಗೆ ಸಕಾರಿಯಾ ಹಿಂದಿರುಗುತ್ತಿದ್ದಂತೆ ತಂದೆಗೆ ಕೊರೊನಾ ಸೋಂಕು ಕಾಣಿಸಿಕೊಂಡಿತ್ತು. ಈ ಸಂದರ್ಭ ತನಗೆ ಐಪಿಎಲ್‍ನಲ್ಲಿ ರಾಜಸ್ಥಾನ ತಂಡ ನೀಡಿದ ಹಣದಿಂದಾಗಿ ತಂದೆಗೆ ಗುಜರಾತ್‍ನ ಖಾಸಗಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಕೊಡಿಸಿದ್ದೆ ಎಂದು ಸಕಾರಿಯಾ ರಾಜಸ್ಥಾನ ತಂಡದ ಸಹಾಯವನ್ನು ನೆನಪಿಸಿಕೊಂಡಿದ್ದರು. ಜೊತೆಗೆ ರಾಜಸ್ಥಾನ ತಂಡಕ್ಕೆ ಯಾವತ್ತು ಚಿರಋಣಿಯಾಗಿರುವುದಾಗಿ ಹೇಳಿಕೊಂಡಿದ್ದರು. ಅದರಂತೆ ಈ ಬಾರಿಯ ಫೈನಲ್‍ನಲ್ಲಿ ಸಕಾರಿಯಾ ರಾಜಸ್ಥಾನ ತಂಡಕ್ಕೆ ಚಿಯರ್ ಅಪ್ ಮಾಡಿ ತಮ್ಮ ಈ ಹಿಂದಿನ ಮಾತಿನಂತೆ ನಡೆದುಕೊಂಡಿದ್ದಾರೆ. ಇದನ್ನೂ ಓದಿ: IPL Final 2022 – ವಿಶ್ವದ ಅತಿ ದೊಡ್ಡ ಜೆರ್ಸಿ ಅನಾವರಣಗೊಳಿಸಿ ಗಿನ್ನಿಸ್ ದಾಖಲೆ

    https://twitter.com/Joydip30406345/status/1530957263489290241

    ಇದೀಗ ಸಕಾರಿಯಾರ ಈ ನಡೆ ಕುರಿತಾಗಿ ಅಭಿಮಾನಿಗಳು ಹೊಗಳಿಕೆ ವ್ಯಕ್ತಪಡಿಸುತ್ತಿದ್ದು, ಸಕಾರಿಯಾ ರಾಜಸ್ಥಾನ ತಂಡಕ್ಕೆ ಇಟ್ಟಿರುವ ನಿಷ್ಠೆ ತುಂಬಾ ಅಮೂಲ್ಯವಾದುದು ಎಂದು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

  • 10 ವಿಕೆಟ್ ಕಿತ್ತು ಇತಿಹಾಸ ಬರೆದ ಪಂದ್ಯದ ಜೆರ್ಸಿಯನ್ನು ಹರಾಜಿಗಿಟ್ಟ ಅಜಾಜ್ ಪಟೇಲ್

    ವೆಲ್ಲಿಂಗ್ಟನ್: ಕಳೆದ ವರ್ಷ ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ ಟೆಸ್ಟ್ ಪಂದ್ಯದಲ್ಲಿ ನ್ಯೂಜಿಲೆಂಡ್ ಸ್ಪಿನ್ನರ್ ಅಜಾಜ್ ಪಟೇಲ್ ಎಲ್ಲಾ 10 ವಿಕೆಟ್‌ಗಳನ್ನು ಕಬಳಿಸಿ ಇತಿಹಾಸ ಬರೆದಾಗ ಧರಿಸಿದ್ದ ಜೆರ್ಸಿಯನ್ನು ಹರಾಜಿಗಿಡಲು ನಿರ್ಧರಿಸಿದ್ದಾರೆ.

    ಅಂತಾರಾಷ್ಟ್ರೀಯ ಕ್ರಿಕೆಟ್ ಇತಿಹಾಸದಲ್ಲಿ ಒಂದೇ ಇನ್ನಿಂಗ್ಸ್‌ನಲ್ಲಿ 10 ವಿಕೆಟ್ ಪಡೆದ ಮೂರನೇ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಪಟೇಲ್, ಹರಾಜಿನಿಂದ ಸಂಗ್ರಹವಾಗುವ ಹಣವನ್ನು ಮಕ್ಕಳ ಆಸ್ಪತ್ರೆಗೆ ವಿವಿಧ ರೂಪದಲ್ಲಿ ದೇಣಿಗೆ ನೀಡಲು ಮುಂದಾಗಿದ್ದಾರೆ. ಇದನ್ನೂ ಓದಿ: ಆರ್‌ಸಿಬಿ ಅಭಿಮಾನಿಗೆ ಪ್ರಪೋಸ್ ಮಾಡಿ ಮನಗೆದ್ದ ಹುಡುಗಿ – ನೆಟ್ಟಿಗರು ಫುಲ್ ಆಕ್ಟಿವ್

    ಟೆಸ್ಟ್ ಕ್ರಿಕೆಟ್‌ನಲ್ಲಿ ಇನ್ನಿಂಗ್ಸ್ ಒಂದರ ಎಲ್ಲಾ 10 ವಿಕೆಟ್ ಪಡೆದು ಅಜಾಜ್ ಪಟೇಲ್ ಭಾರೀ ಮೆಚ್ಚುಗೆಗೆ ಪಾತ್ರರಾಗಿದ್ದರು. ಅಂದು ಪಟೇಲ್‌ಗೆ ಟೀಂ ಇಂಡಿಯಾದ ನಾಯಕರಾಗಿದ್ದ ವಿರಾಟ್ ಕೊಹ್ಲಿ ವಿಶೇಷವಾಗಿ ಅಭಿನಂದಿಸಿದ್ದರು. ಅಲ್ಲದೇ ಟೀಂ ಇಂಡಿಯಾದ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ತಮ್ಮ ಹಸ್ತಾಕ್ಷರವಿರುವ ಭಾರತೀಯ ಜೆರ್ಸಿಯನ್ನು ಉಡುಗೊರೆಯಾಗಿ ನೀಡಿದ್ದರು.

    ಇನ್ನಿಂಗ್ಸ್ ಒಂದರಲ್ಲಿ ಎಲ್ಲಾ 10 ವಿಕೆಟ್ ಪಡೆದ ದಿನ ನನ್ನ ಜೀವನದ ಅತ್ಯಂತ ಶ್ರೇಷ್ಠ ಕ್ರಿಕೆಟ್ ದಿನಗಳಲ್ಲಿ ಒಂದು ಎಂದಿದ್ದ ಪಟೇಲ್, ಗುರುವಾರ ಸ್ಟಾರ್‌ಶಿಪ್ ಫೌಂಡೇಶನ್ ಇನ್‌ಸ್ಟಾಗ್ರಾಮ್‌ನಲ್ಲಿ ತಮ್ಮ ಇತಿಹಾಸ ನಿರ್ಮಿಸಿದ ದಿನದಂದು ಧರಿಸಿದ್ದ ಜೆರ್ಸಿಯನ್ನು ಹರಾಜಿಗಿಟ್ಟಿರುವ ಬಗ್ಗೆ ತಿಳಿಸಿದ್ದಾರೆ. ಇದನ್ನೂ ಓದಿ: ಆರ್‌ಸಿಬಿ ಅಭಿಮಾನಿಗೆ ಪ್ರಪೋಸ್ ಮಾಡಿ ಮನಗೆದ್ದ ಹುಡುಗಿ – ನೆಟ್ಟಿಗರು ಫುಲ್ ಆಕ್ಟಿವ್

    ಸ್ಟಾರ್‌ಶಿಪ್ ಫೌಂಡೇಶನ್‌ನ ಪ್ಲೇ ಥೆರಪಿಸ್ಟ್‌ಗಾಗಿ ಹಣವನ್ನು ಸಂಗ್ರಹಿಸಲು ಮುಂಬೈನಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ 10 ವಿಕೆಟ್ ಕಿತ್ತು ಸಾಧನೆ ಮಾಡಿದ ನನ್ನ ಹಸ್ತಾಕ್ಷರವಿರುವ ಶರ್ಟ್ ಹರಾಜಿಗೆ ಇಡಲಾಗುತ್ತಿದೆ. ಇದರಿಂದ ಬರುವ ಹಣ ಮಕ್ಕಳು ಹಾಗೂ ಅವರ ಕುಟುಂಬಗಳಿಗೆ ಸಹಾಯವಾಗಲಿದೆ ಎಂದು ಪಟೇಲ್ ತಿಳಿಸಿದ್ದಾರೆ.

  • ಶಾಲಾ ದಿನಗಳಲ್ಲಿ ಕಿರುಕುಳ ಅನುಭವಿಸಿದ್ದೇನೆ : ಜೆರ್ಸಿ ಹೀರೋ ಶಾಹೀದ್

    ಶಾಲಾ ದಿನಗಳಲ್ಲಿ ಕಿರುಕುಳ ಅನುಭವಿಸಿದ್ದೇನೆ : ಜೆರ್ಸಿ ಹೀರೋ ಶಾಹೀದ್

    ನಿನ್ನೆಯಷ್ಟೇ ತಮ್ಮ ಕಿರಿವಯಸ್ಸಿನಲ್ಲಿ ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಕುರಿತು ರಾಷ್ಟ್ರ ಪ್ರಶಸ್ತಿ ವಿಜೇತ ನಟಿ ಕಂಗನಾ ರಣಾವತ್ ಮಾತನಾಡಿದ್ದರು. ತಮ್ಮ ಹನ್ನೊಂದನೇ ವಯಸ್ಸಿನಲ್ಲೇ ತಮ್ಮ ಬಟ್ಟೆ ಬಿಚ್ಚಿಸಲಾಗುತ್ತಿತ್ತು ಎಂದು ಹೇಳುವ ಮೂಲಕ ಅಚ್ಚರಿ ಮೂಡಿಸಿದ್ದರು. ಈ ಸುದ್ದಿಯ ಬೆನ್ನಲ್ಲೇ ಶಾಹೀದ್ ಕಪೂರ್ ಕೂಡ ತಮಗಾದ ಕಿರುಕುಳದ ಬಗ್ಗೆಯೂ ಮಾತನಾಡಿದ್ದಾರೆ. ಇದನ್ನೂ ಓದಿ : ದಕ್ಷಿಣದ ಸಿನಿಮಾ ನೋಡಲ್ಲ: ವಿವಾದಕ್ಕೆ ಕಾರಣವಾದ ಬಾಲಿವುಡ್ ಖ್ಯಾತ ನಟ ನವಾಜುದ್ಧೀನ್ ಸಿದ್ದಿಕಿ

    ಶಾಹೀದ್ ಕಪೂರ್ ನಟನೆಯ ಜರ್ಸಿ ಸಿನಿಮಾ ರಿಲೀಸ್ ಆಗಿ, ತಕ್ಕ ಮಟ್ಟಿಗೆ ಬಾಕ್ಸ್ ಆಫೀಸ್‍ ನಲ್ಲಿ ಸದ್ದು ಮಾಡುತ್ತಿದೆ. ಈ ಹೊತ್ತಿನಲ್ಲಿ ಖಾಸಗಿ ವಾಹಿನಿಯ ಸಂದರ್ಶನವೊಂದರಲ್ಲಿ ಮಾತನಾಡಿದ ಶಾಹೀದ್ ತಮಗಾದ ಕಹಿ ಘಟನೆಯನ್ನು ಮೆಲುಕು ಹಾಕಿದ್ದಾರೆ. ಹೀಗಾಗಿ ತಮ್ಮ ಶಾಲಾ ದಿನಗಳ ಬಗ್ಗೆ ನೆನಪಿಸಿಕೊಳ್ಳಲು ಇಷ್ಟಪಡುವುದಿಲ್ಲ ಎಂದೂ ಅವರು ಹೇಳಿದ್ದಾರೆ. ಇದನ್ನೂ ಓದಿ : ಕರ್ನಾಟಕದಲ್ಲೇ ನಡೆಯಿತು ತಮಿಳು ಸಿನಿಮಾಗೆ ಮುಹೂರ್ತ: ಬೆಂಗಳೂರಿಗೆ ಬಂದಿಳಿದ ತಮಿಳು ನಟ

    ಪ್ರಾಥಮಿಕ ಶಾಲೆಯನ್ನು ಶಾಹೀದ್ ಓದಿದ್ದು ಮುಂಬೈನಲ್ಲಿ ಆಗ ಶಾಲೆಯಲ್ಲಿ ನಿತ್ಯ ಕಿರುಕುಳವನ್ನು ಅವರು ಅನುಭವಿಸುತ್ತಿದ್ದರಂತೆ. ಆ ದಿನಗಳು ಮತ್ತೆಂದೂ ನನ್ನ ಜೀವನದಲ್ಲಿ ಬರಲಿಲ್ಲ. ಬರಬಾರದು ಅಂದುಕೊಂಡೇ ಬದುಕಿದೆ. ಮುಂದೆ ದೆಹಲಿಯಲ್ಲಿ ಕಾಲೇಜು ಓದಿದೆ. ಅವು ನನ್ನ ಗೋಲ್ಡನ್ ದಿನಗಳು ಎಂದು ನೆನಪಿಸಿಕೊಂಡಿದ್ದಾರೆ ಶಾಹೀದ್. ಇದನ್ನೂ ಓದಿ : ನಮ್ಮದು ಪ್ಯಾನ್ ಇಂಡಿಯಾ ಸಿನಿಮಾವಲ್ಲ, ಸಿನಿಮಾ ಅಷ್ಟೇ : ಬಾಲಿವುಡ್ ವಿರುದ್ಧ ಕಿಚ್ಚ ಸುದೀಪ್ ಗುಡುಗು

    ಶಾಹೀದ್ ಕಪೂರ್ ಯಾವತ್ತಿಗೂ ಬೋಲ್ಡ್ ಆಗಿಯೇ ಮಾತನಾಡುವಂತಹ ವ್ಯಕ್ತಿ. ಸಿನಿಮಾಗಳು ಸೋತಾಗಲೂ ಅವರು ಅದನ್ನು ಒಪ್ಪಿಕೊಂಡಿದ್ದಾರೆ. ಹೀಗಾಗಿ ಶಾಹೀದ್ ಆಡಿದ ಮಾತುಗಳು ಬಾಲಿವುಡ್ ನಲ್ಲಿ ಚರ್ಚೆಗೆ ಕಾರಣವಾಗಿವೆ. ಅವರಿಗೆ ಆದ ಕಿರುಕುಳದ ಬಗ್ಗೆ ಸಾಂತ್ವಾನದ ಮಾತುಗಳು ಕೇಳಿ ಬಂದಿವೆ.

  • ಟಾಪ್‌ ದುಬಾರಿ ಬಜೆಟ್‌ ಸಿನಿಮಾಗಳಿಗೆ ಕೋವಿಡ್‌ ಶಾಕ್‌ –  ರಿಲೀಸ್‌ ಡೇಟ್‌ ಮುಂದಕ್ಕೆ

    ಟಾಪ್‌ ದುಬಾರಿ ಬಜೆಟ್‌ ಸಿನಿಮಾಗಳಿಗೆ ಕೋವಿಡ್‌ ಶಾಕ್‌ – ರಿಲೀಸ್‌ ಡೇಟ್‌ ಮುಂದಕ್ಕೆ

    ಮುಂಬೈ: ಜನವರಿಯಲ್ಲಿ ಬಹುನಿರೀಕ್ಷಿತ ಚಿತ್ರಗಳು ರಿಲೀಸ್ ಆಗಬೇಕಾಗಿತ್ತು. ಆದರೆ ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆ ಥಿಯೇಟರ್ ಗಳಿಗೆ ಸರ್ಕಾರ ಕೆಲವು ನಿಯಮಗಳನ್ನು ಹಾಕಿದೆ. ಪರಿಣಾಮ ಜನವರಿಯಲ್ಲಿ ರಿಲೀಸ್ ಆಗಬೇಕಾಗಿದ್ದ ಹಲವು ಬಹುನಿರೀಕ್ಷಿತ ಚಿತ್ರಗಳು ಮುಂದಕ್ಕೆ ಹೋಗಿದೆ.

    ಕಳೆದ ವರ್ಷವೂ ಕೋವಿಡ್ ಹಿನ್ನೆಲೆ ಬಹುನಿರೀಕ್ಷಿತ ಚಿತ್ರಗಳು ಮುಂದಕ್ಕೆ ಹೋಗಿ ಈ ವರ್ಷ ರಿಲೀಸ್ ಆಗುವುದು ಪಕ್ಕಾ ಎನ್ನಲಾಗುತ್ತಿತ್ತು. ಇದರಿಂದ ಅವರ ಅಭಿಮಾನಿಗಳು ಸಹ ಸಖತ್ ಖುಷ್ ಆಗಿದ್ದರು. ಆದರೆ ಕೋವಿಡ್-19 ಪ್ರಕರಣಗಳು ಹೆಚ್ಚಳವಾಗುತ್ತಿರುವ ಹಿನ್ನೆಲೆ ದೇಶದ ವಿವಿಧ ಭಾಗಗಳಲ್ಲಿ ನಿರ್ಬಂಧಗಳನ್ನು ಹೇರಲಾಗುತ್ತಿದೆ. ಇದರಿಂದ ಬಾಲಿವುಡ್ ಸೇರಿದಂತೆ ಬಹುಭಾಷೆಗಳಲ್ಲಿ ತಯಾರಾಗಿರುವ ಸಿನಿಮಾಗಳ ರಿಲೀಸ್ ದಿನಾಂಕ ಮುಂದೆ ಹೋಗಿದೆ. ಇದನ್ನೂ ಓದಿ: ರಾಜ್ಯದಲ್ಲಿ ವೀಕೆಂಡ್ ಕರ್ಫ್ಯೂ ಜಾರಿಯಾಗಿದ್ದು, ಲಾಕ್‍ಡೌನ್ ಆಗಲು ಬಿಡ್ಬೇಡಿ – ಮಂತ್ರಾಲಯ ಶ್ರೀ ಮನವಿ

    ಈ ಪಟ್ಟಿಯಲ್ಲಿ ಅಕ್ಷಯ್ ಕುಮಾರ್ ಅವರ ‘ಪೃಥ್ವಿರಾಜ್’ ಮತ್ತು ಎಸ್‍ಎಸ್ ರಾಜಮೌಳಿ ನಿರ್ದೇಶನದ ‘RRR’, ಪ್ರಭಾಸ್ ಅವರ ‘ರಾಧೆ ಶ್ಯಾಮ್’ ಮತ್ತು ಶಾಹಿದ್ ಕಪೂರ್ ಅಭಿನಯದ ‘ಜೆರ್ಸಿ’ ಸಿನಿಮಾಗಳ ನಿರ್ಮಾಪಕರು ಸಿನಿಮಾದ ರಿಲೀಸ್ ದಿನಾಂಕವನ್ನು ಮುಂದೆ ಹಾಕಲು ನಿರ್ಧರಿಸಲಾಗಿದೆ.

    ದೀಪಿಕಾ ಪಡುಕೋಣೆ ನಟನೆಯ ‘ಗೆಹರಾಯಿಯಾ’ ಸಿನಿಮಾವನ್ನು ಓಟಿಟಿಯಲ್ಲಿ ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ.

    ಈ ವರ್ಷದ ಬಹುನಿರೀಕ್ಷಿತ ಚಿತ್ರಗಳಲ್ಲಿ ರಾಜಮೌಳಿ ನಿರ್ದೇಶನದ RRR ಸಿನಿಮಾ ಪ್ರಮುಖವಾಗಿತ್ತು. ಈ ಸಿನಿಮಾದಲ್ಲಿ ರಾಮ್ ಚರಣ್, ಜೂನಿಯರ್ ಎನ್‍ಟಿಆರ್, ಆಲಿಯಾ ಭಟ್ ಮತ್ತು ಅಜಯ್ ದೇವಗನ್ ನಟಿಸಿದ್ದಾರೆ. ಚಿತ್ರವನ್ನು ಜನವರಿ 7 ರಂದು ಬಿಡುಗಡೆ ಮಾಡುವುದಾಗಿ ಚಿತ್ರತಂಡ ಅಧಿಕೃತವಾಗಿ ಫೋಷಿಸಿತ್ತು. ಆದರೆ ಈಗ ಬಿಡುಗಡೆಯ ದಿನಾಂಕವನ್ನು ಮುಂದಕ್ಕೆ ಹಾಕಲಾಗಿದೆ ಎಂದು ಚಿತ್ರತಂಡವೇ ತಿಳಿಸಿದೆ.

    ಈ ಕುರಿತು ‘RRR’ ಸಿನಿಮಾವನ್ನು ನಿರ್ಮಿಸುತ್ತಿರುವ ‘ಡಿವಿವಿ ಎಂಟರ್‍ಟೈನ್‍ಮೆಂಟ್ಸ್’ ಜನವರಿ 1 ರಂದು ಟ್ವಿಟ್ಟರ್‌ನಲ್ಲಿ, ನಾವು ಎಲ್ಲವನ್ನು ಗಮನದಲ್ಲಿಟ್ಟುಕೊಂಡು, ಒತ್ತಾಯದ ಮೇರೆಗೆ ನಮ್ಮ ಸಿನಿಮಾದ ರಿಲೀಸ್ ಅನ್ನು ಮುಂದಕ್ಕೆ ಹಾಕಲಾಗುತ್ತಿದೆ. ಎಲ್ಲ ಅಭಿಮಾನಿಗಳಿಗೆ, ಪ್ರೇಕ್ಷಕರಿಗೆ ಧನ್ಯವಾದಗಳು ಎಂದು ಬರೆದು ಟ್ವೀಟ್ ಮಾಡಲಾಗಿತ್ತು.

     

    View this post on Instagram

     

    A post shared by Taran Adarsh (@taranadarsh)

    ಅಕ್ಷಯ್ ಕುಮಾರ್ ಮತ್ತು ಮಾಜಿ ವಿಶ್ವಸುಂದರಿ ಮಾನುಷಿ ಛಿಲ್ಲರ್ ನಟನೆಯ ‘ಪೃಥ್ವಿರಾಜ್’ ಸಿನಿಮಾದ ರಿಲೀಸ್ ಸಹ ಮುಂದೆ ಹೋಗುತ್ತಿದೆ. ಈ ಕುರಿತು ತರಣ್ ಆದರ್ಶ್ ಇನ್‍ಸ್ಟಾದಲ್ಲಿ, ‘ಪೃಥ್ವಿರಾಜ್’ ಸಿನಿಮಾ ಜನವರಿ 21 ರಂದು ತೆರೆಗೆ ಬರಲು ನಿರ್ಧರಿಸಲಾಗಿತ್ತು. ಆದರೆ, ಈಗ ಚಿತ್ರದ ಬಿಡುಗಡೆಯನ್ನು ಮುಂದೂಡಲಾಗಿದೆ ಬರೆದು ಚಿತ್ರದ ಪೋಸ್ಟರ್ ಅನ್ನು ಶೇರ್ ಮಾಡಿದ್ದರು. ಈ ಸಿನಿಮಾದ ಬಿಡುಗಡೆಯ ಹೊಸ ದಿನಾಂಕವನ್ನು ಇನ್ನೂ ತಿಳಿಸಿಲ್ಲ.

    30 ರ ಹರೆಯದಲ್ಲಿ ಕ್ರಿಕೆಟ್ ಆಡಲು ಹಿಂದಿರುಗುವ ಕ್ರಿಕೆಟಿಗನ ಕಥೆಯನ್ನು ಆಧಾರಿಸಿ ‘ಜೆರ್ಸಿ’ ಸಿನಿಮಾವನ್ನು ತಯಾರಿಸಲಾಗಿತ್ತು. ಈ ಸಿನಿಮಾವನ್ನು ಡಿಸೆಂಬರ್ 31 ರಂದು ಬಿಡುಗಡೆ ಮಾಡಬೇಕಾಗಿತ್ತು. ಆದರೆ ದಿನಾಂಕವನ್ನು ಮುಂದಕ್ಕೆ ಹಾಕಲಾಯಿತು. ಈ ಸಿನಿಮಾ 2019 ರ ತೆಲುಗು ಸಿನಿಮಾದ ‘ಜೆರ್ಸಿ’ ರಿಮೇಕ್ ಆಗಿದೆ. ಈ ಸಿನಿಮಾದಲ್ಲಿ ಶಾಹಿದ್ ಕಪೂರ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಕುರಿತು ಶಾಹಿದ್ ಅವರು ಟ್ವೀಟ್ ಮಾಡುವ ಮೂಲಕ ತಿಳಿಸಿದ್ದರು. ಇದನ್ನೂ ಓದಿ: ಲಾಕ್‍ಡೌನ್ ಮಾಡಬಾರದು ಅನ್ನೋದೇ ಸರ್ಕಾರದ ಮೂಲ ಉದ್ದೇಶ: ಅಶ್ವಥ್ ನಾರಾಯಣ್

     

    View this post on Instagram

     

    A post shared by Deepika Padukone (@deepikapadukone)

    ದೀಪಿಕಾ ಪಡುಕೋಣೆ ನಟನೆಯ ‘ಗೆಹರಾಯಿಯಾ’ ಸಿನಿಮಾ ಸಹ ಜನವರಿ 25 ರಂದು ಬಿಡುಗಡೆಯಾಗಬೇಕಿತ್ತು. ಆದರೆ ಸೋಂಕಿನ ಹಿನ್ನೆಲೆ ಈ ಸಿನಿಮಾವನ್ನು ಓಟಿಟಿ ಪ್ಲಾಟ್‍ಫಾರ್ಮ್‍ನಲ್ಲಿ ರಿಲೀಸ್ ಮಾಡಲಾಗುತ್ತಿದೆ. ಇಂದು ದೀಪಿಕಾ ಹುಟ್ಟುಹಬ್ಬದ ಹಿನ್ನೆಲೆ ಈ ಕುರಿತು ಅವರೇ ಇನ್‍ಸ್ಟಾದಲ್ಲಿ ಪೋಸ್ಟರ್ ಅನ್ನು ಶೇರ್ ಮಾಡುವ ಮೂಲಕ ಅಭಿಮಾನಿಗಳಿಗೆ ತಿಳಿಸಿದ್ದಾರೆ. ಈ ಸಿನಿಮಾ ಓಟಿಟಿಯಲ್ಲಿ ಫೆಬ್ರವರಿ 11 ರಂದು ಬಿಡುಗಡೆಯಾಗಲಿದೆ.

    ಪ್ರಭಾಸ್ ಮತ್ತು ಪೂಜಾ ನಟನೆಯ ‘ರಾಧೆ ಶ್ಯಾಮ್’ ಸಿನಿಮಾ ಸಹ ರಿಲೀಸ್ ಮಾಡುವ ಯೋಜನೆಯಲ್ಲಿತ್ತು. ಆದರೆ ಈ ಚಿತ್ರತಂಡ ಸಹ ಸಿನಿಮಾವನ್ನು ಸಧ್ಯಕ್ಕೆ ರಿಲೀಸ್ ಮಾಡಲು ಸಾಧ್ಯವಿಲ್ಲ ಎಂದು ಅಭಿಮಾನಿಗಳಿಗೆ ತಿಳಿಸಿದೆ.

  • ರೆಟ್ರೋ ಶೈಲಿಯ ಜೆರ್ಸಿಯಲ್ಲಿ ಮಿಂಚುತ್ತಿದ್ದಾರೆ ಟೀಂ ಇಂಡಿಯಾ ಆಟಗಾರರು

    ರೆಟ್ರೋ ಶೈಲಿಯ ಜೆರ್ಸಿಯಲ್ಲಿ ಮಿಂಚುತ್ತಿದ್ದಾರೆ ಟೀಂ ಇಂಡಿಯಾ ಆಟಗಾರರು

    ಮುಂಬೈ: ಟೀಂ ಇಂಡಿಯಾ ಆಟಗಾರರು ಮುಂಬರುವ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ ಫೈನಲ್ ಪಂದ್ಯಕ್ಕೆ ಧರಿಸುವ ಜೆರ್ಸಿಯಲ್ಲಿ ಮಿಂಚುತ್ತಿದ್ದಾರೆ. ಈ ಜೆರ್ಸಿ ರೆಟ್ರೋ ಶೈಲಿಯಲ್ಲಿದ್ದು, ಆಟಗಾರರು ಒಬ್ಬೊಬ್ಬರೆ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಫೋಟೋ ಹಂಚಿಕೊಳ್ಳುತ್ತಿದ್ದಾರೆ.

    ಭಾರತ ಹಾಗೂ ನ್ಯೂಜಿಲ್ಯಾಂಡ್ ತಂಡಗಳ ನಡುವೆ ಇಂಗ್ಲೆಂಡ್‍ನಲ್ಲಿ ನಡೆಯಲಿರುವ ಚೊಚ್ಚಲ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ ಫೈನಲ್ ಪಂದ್ಯಾಕ್ಕಾಗಿ ಟೀಂ ಇಂಡಿಯಾ ರೆಟ್ರೋ ಶೈಲಿಯ ಹೊಸ ಜೆರ್ಸಿಯೊಂದಿಗೆ ಕಣಕ್ಕಿಳಿಯಲಿದೆ. ಇದೀಗ ಈ ರೆಟ್ರೋ ಶೈಲಿಯ ಜೆರ್ಸಿಯನ್ನು ತೊಟ್ಟು ಭಾರತದ ಟೆಸ್ಟ್ ಸ್ಪೆಷಲಿಸ್ಟ್ ಬ್ಯಾಟ್ಸ್‌ಮ್ಯಾನ್ ಎನಿಸಿಕೊಂಡಿರುವ ಚೇತೇಶ್ವರ ಪೂಜಾರ ಫೋಟೋ ಒಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು, ನಾನು ಈ ಜೆರ್ಸಿಯನ್ನು ತೊಟ್ಟು ಮೈದಾನಕ್ಕೆ ಇಳಿಯಲು ಕಾತರನಾಗಿದ್ದೇನೆ ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಐಪಿಎಲ್ ದ್ವಿತೀಯಾರ್ಧದಲ್ಲಿ ಧೋನಿ ಬ್ಯಾಟ್‍ನಿಂದ ರನ್ ಮಳೆ ಸುರಿಯಲಿದೆ: ದೀಪಕ್ ಚಹರ್

     

    View this post on Instagram

     

    A post shared by Ravindra jadeja (@ravindra.jadeja)

    ಕಳೆದ ದಿನ ಭಾರತ ತಂಡದ ಆಲ್‍ರೌಂಡರ್ ಆಟಗಾರ ರವೀಂದ್ರ ಜಡೇಜಾ, ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ ಫೈನಲ್ ಪಂದ್ಯದಲ್ಲಿ ಭಾರತ ತಂಡ ತೊಡುವ ರೆಟ್ರೋ ಜಂಪರ್ ಶೈಲಿಯ ಸ್ವೆಟರ್ ತೊಟ್ಟು ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಂಡಿದ್ದರು. ಇದನ್ನೂ ಓದಿ: ಧೋನಿ, ಕೊಹ್ಲಿಯ ಬಗ್ಗೆ ಒಂದೇ ಪದದಲ್ಲಿ ಉತ್ತರಿಸಿದ ಸೂರ್ಯಕುಮಾರ್ ಯಾದವ್

    ಇದೀಗ ಟೀಂ ಇಂಡಿಯಾ ಆಟಗಾರರು ತೊಟ್ಟಿರುವ ರೆಟ್ರೋ ಶೈಲಿಯ ಜೆರ್ಸಿ ಮತ್ತು ಸ್ವೆಟರ್‍ನಲ್ಲಿ ಯಾವುದೇ ಕಂಪನಿಯ ಲಾಂಛನವನ್ನು ಜೆರ್ಸಿಯ ಮುಂಭಾಗದಲ್ಲಿ ಬಳಸಿಲ್ಲ. ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ(ಐಸಿಸಿ) ಆಯೋಜಿಸುತ್ತಿರುವ ಪಂದ್ಯವಾಗಿರುವುದರಿಂದ ಕೇವಲ ಬಿಸಿಸಿಐ ಹಾಗೂ ಐಸಿಸಿ ಲೋಗೋ ಮಾತ್ರ ಬಳಸಿಕೊಳ್ಳಲಾಗಿದೆ. ಪ್ರಯೋಜಕರಾದ ಬೈಜುಸ್ ಮತ್ತು ಎಂಪಿಎಲ್ ಲೋಗೋ ಸ್ವೆಟರ್ ಮೇಲೆ ಹಾಕಿಲ್ಲ. ಆದರೆ ಜೆರ್ಸಿಯ ಕೈ ತೋಳಿನ ಭಾಗದಲ್ಲಿ ಬೈಜುಸ್‍ನ ಲೋಗೋ ಹಾಕಲಾಗಿದೆ. ಇದನ್ನೂ ಓದಿ: ಸೆಪ್ಟೆಂಬರ್‌ನಿಂದ ನಡೆಯಲಿವೆ ಮುಂದೂಡಲ್ಪಟ್ಟ ಐಪಿಎಲ್ ಪಂದ್ಯಗಳು- ಬಿಸಿಸಿಐ ಘೋಷಣೆ

    ಭಾರತ ಹಾಗೂ ನ್ಯೂಜಿಲ್ಯಾಂಡ್ ತಂಡಗಳ ನಡುವೆ ಟೆಸ್ಟ್ ಚಾಂಪಿಯನ್‍ಶಿಪ್ ಫೈನಲ್ ಪಂದ್ಯಾಟ ಜೂನ್ 18 ರಿಂದ ಇಂಗ್ಲೆಂಡ್‍ನ ಸೌಥಾಂಪ್ಟನ್‍ನಲ್ಲಿ ನಡೆಯಲಿದೆ.

  • ಯಾರಿಗೆ ಸಿಗಲಿದೆ ಧೋನಿಯ ನಂ.7 ಜೆರ್ಸಿ?

    ಯಾರಿಗೆ ಸಿಗಲಿದೆ ಧೋನಿಯ ನಂ.7 ಜೆರ್ಸಿ?

    ಬೆಂಗಳೂರು: ಟೀಂ ಇಂಡಿಯಾದ ಮಾಜಿ ನಾಯಕ ಎಂಎಸ್‌ ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಹೇಳಿದ್ದಾರೆ. ಆದರೆ  ಈಗ ಅವರು ಧರಿಸುತ್ತಿದ್ದ ನಂ.7 ಜೆರ್ಸಿ ಯಾರಿಗೆ ಸಿಗಲಿದೆ ಎಂಬ ಪ್ರಶ್ನೆ ಎದ್ದಿದೆ.

    ಧೋನಿ ಅಭಿಮಾನಿಗಳು ಈ ಜೆರ್ಸಿ ಸಂಖ್ಯೆಗೂ ನಿವೃತ್ತಿ ನೀಡಬೇಕು ಎಂದು ಎಂದು ಒತ್ತಾಯಿಸುತ್ತಿದ್ದಾರೆ. ಈ ಆಗ್ರಹಕ್ಕೆ ವಿಕೆಟ್‌ ಕೀಪರ್‌ ದಿನೇಶ್‌ ಕಾರ್ತಿಕ್‌ ಸಾಥ್‌ ನೀಡಿದ್ದು 2019ರ ವಿಶ್ವಕಪ್‌ ಸೆಮಿಫೈನಲ್‌ ವೇಳೆ ಧೋನಿ ಜೊತೆಗಿನ ಫೋಟೋ ಹಾಕಿ ಈ ಜೆರ್ಸಿಗೆ ನಿವೃತ್ತಿ ನೀಡಬೇಕೆಂದು ಹೇಳಿದ್ದಾರೆ.

    ಈ ಸಂಬಂಧ ಟ್ವೀಟ್‌ ಮಾಡಿರುವ ಅವರು ವಿಶ್ವಕಪ್‌ ಸೆಮಿಫೈನಲ್‌ ಕ್ರಿಕೆಟ್‌ ಮುಗಿದ ಬಳಿಕ ತೆಗೆದ ಫೋಟೋ ಇದು. ಈ ಪ್ರಯಾಣದಲ್ಲಿ ಬಹಳಷ್ಟು ನೆನಪುಗಳಿವೆ. ವೈಟ್‌ ಬಾಲ್‌ ಕ್ರಿಕೆಟ್‌ನಲ್ಲಿ ನಂ.7 ಜೆರ್ಸಿಗೂ ಬಿಸಿಸಿಐ ನಿವೃತ್ತಿ ಹೇಳಬಹುದು ಎಂನ ನಿರೀಕ್ಷೆಯನ್ನು ಇಟ್ಟುಕೊಂಡಿದ್ದೇನೆ. ಜೀವನದಲ್ಲಿ ನಿಮ್ಮ ಎರಡನೇ ಇನ್ನಿಂಗ್ಸ್‌ಗೆ ಶುಭವಾಗಲಿ. ಅಲ್ಲಿಯೂ ಸಹ ನಮಗೆ ಸಾಕಷ್ಟು ಆಶ್ಚರ್ಯಗಳನ್ನು ನೀಡುತ್ತೀರಿ ಎಂಬ ಖಾತರಿಯಿದೆ ಎಂದು ಬರೆದುಕೊಂಡಿದ್ದಾರೆ.

    ಈಗ ಐಸಿಸಿ ಟೆಸ್ಟ್‌ ಕ್ರಿಕೆಟ್‌ನಲ್ಲೂ ನಂಬರ್‌ ಇರುವ ಜೆರ್ಸಿ ತೊಡಲು ಅನುಮತಿ ನೀಡಿದೆ. ಹೀಗಾಗಿ ಬಿಸಿಸಿಐ ಯಾವ ರೀತಿಯ ನಿರ್ಧಾರ ಮಾಡುತ್ತದೆ ಎಂಬ ಕುತೂಹಲ ಮೂಡಿದೆ. ಈ ಹಿಂದೆ ಈ ವಿಚಾರಕ್ಕೆ ಪ್ರತಿಕ್ರಿಯಿಸಿದ್ದ ಬಿಸಿಸಿಐ ವಕ್ತಾರರೊಬ್ಬರು ಧೋನಿ ಅವರ ನಂ. 7ರ ಜೆರ್ಸಿಯನ್ನು ಯಾರಿಗೂ ನೀಡುವುದಿಲ್ಲ. ಈ ನಂಬರ್ ಗೆ ಹಾಗೂ ಧೋನಿಗೆ ಅವಿನಾಭವ ಸಂಬಂಧ ಇದೆ ಎಂದು ಅಭಿಮಾನಿಗಳು ಭಾವಿಸಿದ್ದಾರೆ. ಆದ್ದರಿಂದ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ. ಆದರೆ ಯಾವುದೇ ನಂಬರ್‌ಗೆ ಅಧಿಕೃತವಾಗಿ ನಿವೃತ್ತಿ ಹೇಳಲು ಅಧಿಕಾರವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

    ಈ ಹಿಂದೆ ಸಚಿನ್ ತೆಂಡೂಲ್ಕರ್ ಅವರ ನಂ.10 ಜೆರ್ಸಿಯನ್ನು ಶಾರ್ದೂಲ್‌ ಠಾಕೂರ್ ಧರಿಸಿದ್ದ ಸಂದರ್ಭದಲ್ಲಿ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದರು. ಪರಿಣಾಮ ಈ ಏಕದಿನ ಹಾಗೂ ಟಿ20 ಮಾದರಿಯಲ್ಲಿ ನಂ.10 ಜೆರ್ಸಿಯನ್ನು ಯಾರಿಗೂ ನೀಡದೇ ಬಿಸಿಸಿಐ ಅನಧಿಕೃತವಾಗಿ ನಿವೃತ್ತಿ ನೀಡಿದೆ. ಶಾರ್ದೂಲ್‌ ಠಾಕೂರ್‌ ಈಗ ನಂ.54 ಜೆರ್ಸಿ ತೊಟ್ಟು ಟೀಂ ಇಂಡಿಯಾವನ್ನು ಪ್ರತಿನಿಧಿಸುತ್ತಿದ್ದಾರೆ.

     

    39 ವರ್ಷದ ಧೋನಿ ಯುಎಇಯಲ್ಲಿ ನಡೆಯಲಿರುವ ಐಪಿಎಲ್‌ನಲ್ಲಿ ಚೆನ್ನೈ ತಂಡವನ್ನು ಮುನ್ನಡೆಸಲಿದ್ದಾರೆ. ಈ ಸಮಯದಲ್ಲಿ ಎಲ್ಲ ಮಾದರಿಯ ಕ್ರಿಕೆಟಿಗೆ ನಿವೃತ್ತಿ ಹೇಳುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.

    ಧೋನಿಯ ಜೆರ್ಸಿ ಸಂಖ್ಯೆ 7ಕ್ಕೆ ನಿವೃತ್ತಿ ನೀಡಬೇಕಾ ಅಥವಾ ಆಟಗಾರರಿಗೆ ಬಳಸಲು ನೀಡಬೇಕೇ? ನಿಮ್ಮ ಅಭಿಪ್ರಾಯಗಳನ್ನು ಕಮೆಂಟ್‌ ಮಾಡಿ ತಿಳಿಸಿ.

  • ನನಗೆ ಆ ಪಾತ್ರ ಮಾಡಲು ಆಗಲ್ಲ- ರಶ್ಮಿಕಾರಿಂದ ಬಾಲಿವುಡ್ ಸಿನಿಮಾ ರಿಜೆಕ್ಟ್

    ನನಗೆ ಆ ಪಾತ್ರ ಮಾಡಲು ಆಗಲ್ಲ- ರಶ್ಮಿಕಾರಿಂದ ಬಾಲಿವುಡ್ ಸಿನಿಮಾ ರಿಜೆಕ್ಟ್

    ಬೆಂಗಳೂರು: ನನಗೆ ಆ ಪಾತ್ರವನ್ನು ಮಾಡಲು ಆಗಲ್ಲ ಎಂದು ಕಿರಿಕ್ ಬ್ಯೂಟಿ ರಶ್ಮಿಕಾ ಮಂದಣ್ಣ ಬಾಲಿವುಡ್ ಸಿನಿಮಾ ಆಫರ್‍ವೊಂದನ್ನು ತಿರಸ್ಕರಿಸಿದ್ದಾರೆ.

    ನಟಿ ರಶ್ಮಿಕಾ ಮಂದಣ್ಣ ಅವರು, ತೆಲುಗಿನ ಜೆರ್ಸಿ ಸಿನಿಮಾದ ಹಿಂದಿ ರಿಮೇಕ್‍ನಲ್ಲಿ ಅಭಿನಯಿಸಲಿದ್ದಾರೆ. ಈ ಮೂಲಕ ಕೊಡಗಿನ ಬೆಡಗಿ ಬಾಲಿವುಡ್‍ಗೆ ಹಾರಲಿದ್ದಾರೆ ಎಂದು ಈ ಹಿಂದೆ ಸುದ್ದಿಯಾಗಿತ್ತು. ಇದರ ಜೊತೆಗೆ ಬಾಲಿವುಡ್‍ಗೆ ಹೋಗಲು ರಶ್ಮಿಕಾ ಸೌತ್ ಸಿನಿಮಾರಂಗದ ಹಲವಾರು ಚಿತ್ರಗಳನ್ನು ರಿಜೆಕ್ಟ್ ಮಾಡಿದ್ದಾರೆ ಎಂದು ಕೂಡ ಹೇಳಲಾಗಿತ್ತು.

    ಈಗ ಹಿಂದಿಗೆ ರಿಮೇಕ್ ಆಗುತ್ತಿರುವ ಜೆರ್ಸಿ ಸಿನಿಮಾದ ಕಲಾವಿದರ ಮತ್ತು ತಂತ್ರಜ್ಞರ ಹೆಸರನ್ನು ಚಿತ್ರತಂಡ ಅಧಿಕೃತವಾಗಿ ಬಿಡುಗಡೆ ಮಾಡಿದೆ. ಆದರೆ ಚಿತ್ರತಂಡ ಬಿಡುಗಡೆ ಮಾಡಿರುವ ಪಟ್ಟಿಯಲ್ಲಿ ರಶ್ಮಿಕಾ ಮಂದಣ್ಣ ಅವರ ಹೆಸರು ಕಂಡುಬಂದಿಲ್ಲ. ಈ ವಿಚಾರಕ್ಕೆ ಪ್ರತಿಕ್ರಿಯಿಸಿರುವ ಮಂದಣ್ಣ, ಆ ಸಿನಿಮಾದಿಂದ ಅವರು ನನ್ನನ್ನು ಕೈಬಿಡಲಿಲ್ಲ. ನಾನೇ ಆ ಪಾತ್ರ ಮಾಡಲು ಆಗಲ್ಲ ಎಂದು ಹಿಂದೆ ಸರಿದೆ ಎಂದು ಹೇಳಿದ್ದಾರೆ.

    ಈ ವಿಚಾರವಾಗಿ ಸಂದರ್ಶನವೊಂದರಲ್ಲಿ ಮಾತನಾಡಿರುವ ರಶ್ಮಿಕಾ, ಜೆರ್ಸಿಯಂತಹ ಸಿನಿಮಾದ ರಿಮೇಕ್‍ನಲ್ಲಿ ಅಭಿನಯಿಸುವುದು ಸುಲಭವಲ್ಲ. ಒಂದು ಸಿನಿಮಾದಲ್ಲಿ ಅಭಿನಯಿಸುತ್ತಿದ್ದೇವೆ ಎಂದರೆ, ಆ ಪಾತ್ರಕ್ಕೆ ನ್ಯಾಯ ಒದಗಿಸುವ ಕೆಲಸ ಮಾಡಬೇಕು. ನನ್ನಿಂದ ಆ ಪಾತ್ರಕ್ಕೆ ಜೀವ ತುಂಬಲು ಆಗುವುದಿಲ್ಲ ಅಂದರೆ ನಾನು ಆ ಸಿನಿಮಾವನ್ನು ಒಪ್ಪಿಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ.

    ಕನ್ನಡ ಮತ್ತು ತೆಲುಗು ಚಿತ್ರರಂಗದಲ್ಲಿ ಸ್ಟಾರ್ ನಟರ ಜೊತೆ ನಟಿಸಿ ಬ್ಯುಸಿ ಇರುವ ರಶ್ಮಿಕಾ, ಬಾಲಿವುಡ್ ಸಿನಿಮಾದಲ್ಲಿ ಅಭಿನಯಿಸಲು ಆಗಲ್ಲ ಎಂದು ಹೇಳಿರುವುದು ವಿಶೇಷವಾಗಿದೆ. ಜೊತೆಗೆ ಜೆರ್ಸಿ ಹಿಂದಿ ರಿಮೇಕ್‍ನಲ್ಲಿ ಶಾಹಿದ್ ಕಪೂರ್ ಮತ್ತು ಮೃಣಾಲ್ ಠಾಕೂರ್ ಅವರು ಅಭಿನಯಿಸುತ್ತಿದ್ದಾರೆ. ಈ ವಿಚಾರವಾಗಿ ಮಾತನಾಡಿರುವ ರಶ್ಮಿಕಾ ಆ ಪಾತ್ರಕ್ಕಾಗಿ ಎನರ್ಜಿ ತುಂಬುವ ಉತ್ತಮ ನಟಿಯನ್ನು ಆಯ್ಕೆ ಮಾಡಬೇಕಿತ್ತು ಎಂದಿದ್ದಾರೆ.

    2019ರಲ್ಲಿ ಬಿಡುಗಡೆಯಾದ ತೆಲುಗಿನ ಜೆರ್ಸಿ ಸಿನಿಮಾದಲ್ಲಿ ನಾನಿ ಮತ್ತು ಕನ್ನಡತಿ ಶ್ರದ್ಧಾ ಶ್ರೀನಾಥ್ ಅವರು ಅಭಿನಯಿಸಿದ್ದರು. 2019ರ ಏಪ್ರಿಲ್‍ನಲ್ಲಿ ಬಿಡುಗಡೆಯಾಗಿದ್ದ ಈ ಚಿತ್ರ ಸೂಪರ್ ಹಿಟ್ ಆಗಿತ್ತು. ಒಬ್ಬ ಒಳ್ಳೆಯ ಕ್ರಿಕೆಟ್ ಆಟಗಾರ 10 ವರ್ಷದ ನಂತರ ಬ್ಯಾಟ್ ಹಿಡಿದು ತನ್ನ ಮಗನಿಗಾಗಿ ಇಂಡಿಯಾ ಕ್ರಿಕೆಟ್‍ಗೆ ಆಯ್ಕೆಯಾಗುವುದೇ ಸಿನಿಮಾ ಮುಖ್ಯ ಕಥೆ. ಇದರ ಜೊತೆ ಪ್ರೀತಿ, ವೈಫಲ್ಯಗಳ ಮಧ್ಯೆ ಜೀವನದಲ್ಲಿ ಗೆಲ್ಲುವುದಕ್ಕೆ ಸ್ಫೂರ್ತಿ ಯಾವುದು ಎಂಬದನ್ನು ಚಿತ್ರದಲ್ಲಿ ಬಹಳ ಚೆನ್ನಾಗಿ ತೋರಿಸಲಾಗಿತ್ತು.