Tag: jeorge

  • ವಿನಯ್ ಕುಲಕರ್ಣಿ ಬೆನ್ನು ಬಿಡದ ಕೊಲೆ ಕೇಸ್- ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಹೋರಾಟ

    ವಿನಯ್ ಕುಲಕರ್ಣಿ ಬೆನ್ನು ಬಿಡದ ಕೊಲೆ ಕೇಸ್- ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಹೋರಾಟ

    ಧಾರವಾಡ: ಇಲ್ಲಿನ ಜಿಲ್ಲಾ ಪಂಚಾಯತ್ ಸದಸ್ಯ ಯೋಗೇಶ್ ಗೌಡ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗಣಿ ಮತ್ತು ಭೂ ವಿಜ್ಞಾನ ಸಚಿವ ವಿನಯ್ ಕುಲಕರ್ಣಿಗೆ ಕಂಟಕವಾಗಿ ಪರಿಣಮಿಸಿದೆ.

    ಮಂತ್ರಿ ಕುಲಕರ್ಣಿ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಇವತ್ತು ರಾಜ್ಯಾದ್ಯಂತ ಸಾಂಕೇತಿಕ ಪ್ರತಿಭಟನೆ ನಡೆಸಲಿದೆ. ಇಂದು ಅಥಣಿಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ನೇತೃತ್ವದಲ್ಲಿ ಪ್ರತಿಭಟನೆ ನಡೆಯಲಿದೆ. ಜೊತೆಗೆ ಡಿವೈಎಸ್‍ಪಿ ಎಂಕೆ ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ಆರೋಪಿಯಾಗಿರುವ ಬೆಂಗಳೂರು ಅಭಿವೃದ್ಧಿ ಸಚಿವ ಕೆ ಜೆ ಜಾರ್ಜ್ ರಾಜೀನಾಮೆಗೂ ಆಗ್ರಹಿಸಲಿದೆ.

    ಸಿಬಿಐ ಎಫ್‍ಐಆರ್‍ನಲ್ಲಿ ಜಾರ್ಜ್ ಮೊದಲ ಆರೋಪಿಯಾಗಿದ್ದಾರೆ. ಯೋಗೇಶ್ ಗೌಡ ಕೊಲೆ ಪ್ರಕರಣಕ್ಕೂ ತಮಗೂ ಯಾವುದೇ ಸಂಬಂಧವಿಲ್ಲ. ಇದು ಬಿಜೆಪಿ ಸಂಸದ ಪ್ರಹ್ಲಾದ್ ಜೋಶಿ ಪಕ್ಷದ ಕೆಲ ನಾಯಕರೊಂದಿಗೆ ಮಾಡಿರುವ ಷಡ್ಯಂತ್ರ. ಲಿಂಗಾಯತ ಪ್ರತ್ಯೇಕ ಧರ್ಮ ಹೋರಾಟದಿಂದ ಕಂಗೆಟ್ಟಿರುವ ಅವರೆಲ್ಲಾ ತಮ್ಮ ವಿರುದ್ಧ ಸಂಚು ರೂಪಿಸಿದ್ದಾರೆ ಅಂತಾ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ವಿನಯ್ ಕುಲಕರ್ಣಿ ತಿರುಗೇಟು ನೀಡಿದ್ದಾರೆ.

  • 5 ವರ್ಷದ ಹಸುಳೆ ಮೇಲೆ ಕಾಮುಕರ ಅಟ್ಟಹಾಸ – ಐಸಿಯೂನಲ್ಲಿ ಕಂದಮ್ಮನಿಗೆ ಚಿಕಿತ್ಸೆ

    5 ವರ್ಷದ ಹಸುಳೆ ಮೇಲೆ ಕಾಮುಕರ ಅಟ್ಟಹಾಸ – ಐಸಿಯೂನಲ್ಲಿ ಕಂದಮ್ಮನಿಗೆ ಚಿಕಿತ್ಸೆ

    ಬೆಂಗಳೂರು: ನಗರದಲ್ಲಿ ಕಾಮುಕರ ಅಟ್ಟಹಾಸ ಮೀತಿಮೀರಿದೆ. ಮೂವರು ಕಾಮುಕರು ಶುಕ್ರವಾರ ಮಧ್ಯರಾತ್ರಿ ಐದು ವರ್ಷದ ಪುಟ್ಟ ಬಾಲಕಿಯನ್ನು ನಿರ್ಜನ ಪ್ರದೇಶಕ್ಕೆ ಹೊತ್ತೊಯ್ದು ಗ್ಯಾಂಗ್ ರೇಪ್ ಎಸಗಿರುವ ಹೃದಯವಿದ್ರಾವಕ ಘಟನೆಯೊಂದು ನಡೆದಿದೆ.

    ಬೆಂಗಳೂರಿನ ಕೆಜಿ ಹಳ್ಳಿಯ ವೈಯಾಲಿಕಾವಲ್ ಸೊಸೈಟಿ ಬಳಿ ಈ ಘಟನೆ ನಡೆದಿದೆ. ಮಗುವಿನ ಪೋಷಕರು ಮೂಲತಃ ಚಿತ್ರದುರ್ಗದವರಾಗಿದ್ದು, ಕೆಲಸದ ನಿಮಿತ್ತ ಬೆಂಗಲೂರಿನಲ್ಲಿ 3 ವರ್ಷಗಳಿಂದ ವಾಸವಿದ್ದಾರೆ.

    ನಡೆದಿದ್ದೇನು?: ಎಂದಿನಂತೆ ತಾಯಿಯ ಜೊತೆ ಮಲಗಿದ್ದ ಬಾಲಕಿ ರಾತ್ರಿ ಬಹಿರ್ದೆಸೆಗೆಂದು ಹೊರಗೆ ಬಂದಿದೆ. ಆದ್ರೆ ಈ ಬಗ್ಗೆ ತಾಯಿಗೆ ಗೊತ್ತಿರಲಿಲ್ಲ. ಬಾಲಕಿ ಹೊರಗೆ ಬಂದಿದ್ದ ವೇಳೆ ಕಾಮುಕರು ಆಕೆಯನ್ನು ಕರೆದುಕೊಂಡು ನಿರ್ಜನ ಪ್ರದೇಶಕ್ಕೆ ತೆರಳಿ ಅಲ್ಲಿ ಆಕೆಯ ಮೇಲೆ ಅತ್ಯಾಚಾರವೆಸಗಿದ್ದಾರೆ. ಬಳಿಕ ಮನೆಯ ಬಳಿ ಬಾಲಕಿಯನ್ನು ಬಿಸಾಕಿ ಹೋಗಿದ್ದಾರೆ. ಇದರಿಂದ ತಲೆಗೆ ಗಂಭೀರ ಗಾಯಗೊಂಡಿದ್ದರಿಂದ ಅರೆಪ್ರಜ್ಞಾವಸ್ಥೆಯಲ್ಲಿದ್ದ ಬಾಲಕಿಯನ್ನು ಕಂಡು ಪೋಷಕರು ಕಂಗಾಲಾಗಿ ಬೌರಿಂಗ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಬಾಲಕಿ ಮಾತನಾಡುವ ಪರಿಸ್ಥಿತಿಗೆ ಬಂದ ಬಳಿಕ ಮತ್ತಷ್ಟು ಸ್ಪಷ್ಟತೆ ಸಿಗಲಿದೆ ಅಂತಾ ಡಿಸಿಪಿ ಅಜಯ್ ಹಿಲೋರಿ ಹೇಳಿದ್ದಾರೆ.

    ನಿನ್ನೆ ಮೂರು ಗಂಟೆ ಸುಮಾರಿಗೆ ಆಸ್ಪತ್ರೆಗೆ ಮಗು ದಾಖಲಾಗಿದೆ. ಮಗು ಶಾಕ್‍ಗೆ ಒಳಗಾಗಿದೆ. ಆಸ್ಪತ್ರೆಗೆ ದಾಖಲಾದಾಗ ಅರೆಪ್ರಜ್ಞಾವಸ್ಥೆಯಲ್ಲಿ ಇತ್ತು. ಮಗುವಿನ ಕೈ ಬೆರಳು ಕಟ್ಟಾಗಿದೆ. ಸದ್ಯ ಬಾಲಕಿಗೆ ಐಸಿಯೂವಿನಲ್ಲಿ ಚಿಕಿತ್ಸೆ ಮುಂದುವರೆದಿದೆ ಅಂತಾ ಬೌರಿಂಗ್ ಆಸ್ಪತ್ರೆಯ ನಿರ್ದೇಶಕ ಹಾಗೂ ಡೀನ್ ಮಂಜುನಾಥ್ ಹೇಳಿದ್ದಾರೆ.

    ಜಾರ್ಜ್ ಭೇಟಿ: ಪ್ರಕರಣ ಸಂಬಂಧ ಸಚಿವ ಕೆ ಜೆ ಜಾರ್ಜ್ ಆಸ್ಪತ್ರೆಗೆ ಭೇಟಿ ನೀಡಿ ಬಾಲಕಿಯ ಆರೋಗ್ಯ ವಿಚಾರಿಸಿದ್ದಾರೆ. ಅಲ್ಲದೇ ಬಾಲಕಿಯ ಪೋಷಕರ ಜೊತೆಗೂ ಮಾತುಕತೆ ನಡೆಸಿದ್ದಾರೆ. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದೊಂದು ಸಿರಿಯಸ್ ಕ್ರೈಂ. ಪ್ರಕರಣದಲ್ಲಿ ಯಾರೆ ತಪ್ಪು ಮಾಡಿದ್ರು ಕಠಿಣ ಶಿಕ್ಷೆ ಆಗಬೇಕು ಅಂತ ಹೇಳಿದ್ದಾರೆ.

    ಘಟನೆಯಿಂದ ಮಗು ತಲೆಗೆ ಏಟಾಗಿದೆ. ಅದಕ್ಕೆ ಮೊದಲ ಆದ್ಯತೆ ಚಿಕಿತ್ಸೆ ನೀಡಲಾಗುತ್ತಿದೆ. ಅಲ್ಲದೇ ಪೊಲೀಸ್ರು ಪ್ರಕರಣವನ್ನು ಪಡೆದುಕೊಂಡು ತನಿಖೆ ಮಾಡುತ್ತಿದ್ದಾರೆ. ಪ್ರಕರಣದ ತನಿಖೆಯನ್ನು ಪೊಲೀಸರು ಸೀರಿಯಸ್ ಆಗಿ ಮಾಡಿ ಕೋರ್ಟ್‍ಗೆ ನೀಡ್ತಾರೆ. ಪೊಲೀಸ್ರಿಗೆ ಸಹಕಾರ ನೀಡಬೇಕು. ಸಮಾಜ ಇಂತಹವರ ವಿರುದ್ಧ ಒಟ್ಟಾಗಿ ಶಿಕ್ಷೆ ನೀಡಬೇಕು. ಇದು ಸಮಾಜ ಸಹಿಸಲಾಗದ ಪ್ರಕರಣವಾಗಿದೆ. ಇಂತಹ ಕೃತ್ಯವೆಸಗಿದ್ದಾರೆ ಅವರಿಗೆ ಶಿಕ್ಷೆ ನೀಡಬೇಕಿದೆ. ಈ ಬಗ್ಗೆ ಕಮಿಷನರ್ ಮತ್ತು ಡಿಸಿಪಿ ಜತೆ ಮಾತನಾಡಿದ್ದೇನೆ ಅಂತಾ ಜಾರ್ಜ್ ತಿಳಿಸಿದ್ದಾರೆ.

    ಒಟ್ಟಿನಲ್ಲಿ ಪ್ರಕರಣ ದಾಖಲಿಸಿಕೊಂಡಿರೋ ಕೆಜಿ ಹಳ್ಳಿ ಪೊಲೀಸರು ಕಾಮುಕರಿಗಾಗಿ ಬಲೆ ಬೀಸಿದ್ದಾರೆ.

  • ರಾಜ್ಯ ಸುರಂಗ ಮಾರ್ಗ ಪ್ರಸ್ತಾವನೆಗೆ ಆರಂಭದಲ್ಲೇ ವಿಘ್ನ: ಬೆಂಗಳೂರಿಗರ ವಿರೋಧ ಯಾಕೆ?

    ರಾಜ್ಯ ಸುರಂಗ ಮಾರ್ಗ ಪ್ರಸ್ತಾವನೆಗೆ ಆರಂಭದಲ್ಲೇ ವಿಘ್ನ: ಬೆಂಗಳೂರಿಗರ ವಿರೋಧ ಯಾಕೆ?

    – ಪವಿತ್ರ ಕಡ್ತಲ

    ಬೆಂಗಳೂರು: ಸ್ಟೀಲ್ ಬ್ರಿಡ್ಜ್‍ಗೆ ತಿಲಾಂಜಲಿ ಇಟ್ಟ ಸರ್ಕಾರ ಸುರಂಗ ಮಾರ್ಗಕ್ಕೆ ಕೈ ಹಾಕಿತ್ತು. ಆದ್ರೆ ಸ್ಟೀಲ್‍ಬ್ರಿಡ್ಜ್ ಗೆ ವಿರೋಧ ವ್ಯಕ್ತಪಡಿಸಿದ ಸೇಮ್ ಟೀಮ್ ಈಗ ಸುರಂಗ ಮಾರ್ಗದ ಬಗ್ಗೆಯೂ ಅಪಸ್ವರವೆತ್ತಿದೆ. ಸಚಿವ ಜಾರ್ಜ್ ಅವರ ಸುರಂಗ ಕನಸು ಭಗ್ನವಾಗುತ್ತಾ ಅನ್ನೋ ಅನುಮಾನ ಮೂಡಿದೆ.

    ಸ್ಟೀಲ್ ಬ್ರಿಡ್ಜ್ ಗೆ ಜನರಿಂದ ಹಾಗೂ ಸಿಟಿಜನ್ ಫೋರಂನಿಂದ ವ್ಯಾಪಕ ಹೋರಾಟದ ಬಳಿಕ ಸರ್ಕಾರ ಮತ್ತೆ ಚರ್ಚೆಗೆ ಗ್ರಾಸವಾಗಿದೆ. ಸ್ಟೀಲ್ ಬಿಟ್ಟು ಏಷ್ಯಾದ ಅತಿ ದೊಡ್ಡ ಸುರಂಗ ಮಾರ್ಗವನ್ನು ರಾಜ್ಯಸರ್ಕಾರ ನಗರದ ನಾಲ್ಕು ಕಡೆ ನಿರ್ಮಾಣ ಮಾಡೋದಕ್ಕೆ ಟೊಂಕ ಕಟ್ಟಿ ನಿಂತಿದೆ. ವಿದೇಶಿ ಕಂಪನಿಗಳು ಭೇಟಿ ನೀಡಿವೆ.

    ಆದ್ರೇ ಈಗ ಮತ್ತೆ ಸಚಿವರ ಸುರಂಗ ಕನಸಿಗೆ ಸ್ಟೀಲ್ ಬ್ರಿಡ್ಜ್ ಗೆ ಹಸಿರು ಪೀಠದಲ್ಲಿ ದಾವೆ ಹೂಡಿದ್ದ ಸಿಟಿಜನ್ ಫೋರಂ ಹಾಗೂ ನಮ್ಮ ಬೆಂಗಳೂರು ಫೌಂಡೇಷನ್ ಮತ್ತೆ ರೆಡಿಯಾಗಿದೆ. ಸ್ಟೀಲ್ ಬ್ರಿಡ್ಜ್ ಗೆ ಮರ ಹೋಗುತ್ತೆ ಅಂತಾ ವಿರೋಧ ವ್ಯಕ್ತಪಡಿಸಿದ್ರು. ಹಾಗಿದ್ರೆ ಸುರಂಗಕ್ಕೆ ಯಾಕೀ ಅಡ್ಡಿ ಅಂತಾ ಕೇಳಿದ್ರೆ ಹೋರಾಟಗಾರರ ಉತ್ತರಿಸಿದ್ದು ಹೀಗೆ:

    1. ಪ್ರಾಜೆಕ್ಟ್ ಶುರುವಾಗುವ ಮುಂಚೆ ಸಾರ್ವಜನಿಕರಿಗೆ ಸಮಗ್ರ ಮಾಹಿತಿಯನ್ನಾದ್ರೂ ನೀಡಬೇಕಾಗಿತ್ತು.
    2. ಇಷ್ಟು ದೊಡ್ಡ ಸುರಂಗ ಮಾರ್ಗ ಮಾಡುವ ಕಾರ್ಯಕ್ಷಮತೆ ನಿಜವಾಗಲೂ ಇದ್ಯಾ?
    3. ಇಷ್ಟೆಲ್ಲಾ ಖರ್ಚು ಮಾಡಿ ಟ್ರಾಫಿಕ್ ಕಂಟ್ರೋಲ್ ಎಷ್ಟರಮಟ್ಟಿಗೆ ಆಗುತ್ತೆ, ಈ ಬಗ್ಗೆ ಸರ್ಕಾರ ಮೌನವಾಗಿದೆ
    4. ಸರ್ಕಾರ ಸಿಎನ್‍ಆರ್ ರಾವ್ ಅಂಡರ್‍ಪಾಸ್‍ಗೆ ಐದು ವರ್ಷ ತೆಗೆದುಕೊಂಡಿದೆ, ಇನ್ನು ಇದು ಹೆಂಗೋ.
    5. ಪಬ್ಲಿಕ್ ಟ್ರಾನ್ಸ್ ಪೋರ್ಟ್‍ನ್ನೇ ಹೆಚ್ಚು ಮಾಡಬಹುದು. ಇದ್ರ ಮಧ್ಯೆ ಈ ಪ್ರಾಜೆಕ್ಟ್ ಯಾಕೆ..?

    ಒಟ್ಟಿನಲ್ಲಿ ಸರ್ಕಾರ ಸರಿಯಾದ ಮಾಹಿತಿ ನೀಡದೇ ಏಕಾಏಕಿ ಪ್ರಾಜೆಕ್ಟ್ ಅನುಷ್ಟಾನಕ್ಕೆ ಇಳಿದ್ರೆ ಮತ್ತೆ ಸ್ಟೀಲ್ ಬ್ರಿಡ್ಜ್ ಮಾದರಿ ಹೋರಾಟ ನಡೆಸುವ ಎಚ್ಚರಿಕೆಯನ್ನು ಹೋರಾಟಗಾರರು ನೀಡಿದ್ದಾರೆ. ಇದಕ್ಕೆ ಸರ್ಕಾರದ ಉತ್ತರ ಏನು ಇರುತ್ತೋ ಕಾದು ನೋಡಬೇಕು.