Tag: jenu

  • ದಾರಿಯಲ್ಲಿ ಹೋಗ್ತಿದ್ದಾಗ ಹೆಜ್ಜೇನು ದಾಳಿ: ಪಾರಾಗಲು ರಸ್ತೆಯಲ್ಲೇ ಉರುಳಾಡಿದ ಮಹಿಳೆ

    ದಾರಿಯಲ್ಲಿ ಹೋಗ್ತಿದ್ದಾಗ ಹೆಜ್ಜೇನು ದಾಳಿ: ಪಾರಾಗಲು ರಸ್ತೆಯಲ್ಲೇ ಉರುಳಾಡಿದ ಮಹಿಳೆ

    ದಾವಣಗೆರೆ: ದಾರಿಯಲ್ಲಿ ಹೋಗುತ್ತಿದ್ದ ಮಹಿಳೆ ಮೇಲೆ ಹೆಜ್ಜೇನು ದಾಳಿ ಮಾಡಿರುವ ಘಟನೆ ನಗರದ ಕೆಬಿ ಬಡಾವಣೆಯ ಶಿವಪ್ಪ ವೃತ್ತದ ಬಳಿ ನಡೆದಿದೆ.

    ಹೆಜ್ಜೇನು ಹುಳಗಳಿಂದ ತಪ್ಪಿಸಿಕೊಳ್ಳಲು ಮಹಿಳೆ ಪರದಾಡಿ ರಸ್ತೆಯಲ್ಲೆಲ್ಲಾ ಉರುಳಾಡಿದ್ದಾರೆ. ಹುಳುಗಳು ಕಚ್ಚಿ ಮುಖಕ್ಕೆ ಗಾಯವಾಗಿದೆ. ಮಹಿಳೆಯ ಆಕ್ರಂದನ ಕೇಳಿ ಬೆಂಕಿಯಿಂದ ಜೇನು ಹುಳಗಳನ್ನು ಆಟೋ ಚಾಲಕರೊಬ್ಬರು ಓಡಿಸಿದ್ದಾರೆ.

    ತೀವ್ರ ಅಸ್ವಸ್ಥಗೊಂಡಿದ್ದ ಮಹಿಳೆಯನ್ನು ಖಾಸಗಿ ಆಸ್ಪತ್ರೆಗೆ ಕರೆದೊಯ್ದು ಆಕೆಯ ಪ್ರಾಣವನ್ನು ಆಟೋ ಚಾಲಕ ಉಳಿಸಿದ್ದಾರೆ. ಈ ಘಟನೆಯಿಂದ ಕೆಲಕಾಲ ಸಂಚಾರ ಸ್ಥಗಿತಗೊಂಡಿತ್ತು.