Tag: jems

  • ರಾಜ್ಯದ 400 ಥಿಯೇಟರ್‌ಗಳಲ್ಲಿ ಜೇಮ್ಸ್ ರಿಲೀಸ್

    ರಾಜ್ಯದ 400 ಥಿಯೇಟರ್‌ಗಳಲ್ಲಿ ಜೇಮ್ಸ್ ರಿಲೀಸ್

    ಬೆಂಗಳೂರು: ಇಂದು ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ 47ನೇ ಹುಟ್ಟುಹಬ್ಬವಾಗಿದ್ದು, ಇಂದೇ ಅಪ್ಪು ಅಭಿನಯದ ಕೊನೆ ಚಿತ್ರ ಜೇಮ್ಸ್ ರಾಜ್ಯದ 400 ಥಿಯೇಟರ್‌ಗಳಲ್ಲಿ ರಿಲೀಸ್ ಆಗಿದೆ. ರಾಜ್ಯದಾದ್ಯಂತ ಅಪ್ಪು ಅಭಿಮಾನಿಗಳು ಥಿಯೇಟರಿಗೆ ಆಗಮಿಸಿ ಹಬ್ಬ ಮಾಡುತ್ತಿದ್ದಾರೆ.

    ಅಪ್ಪು ಇಲ್ಲದೇ ಮೊದಲ ಬಾರಿಗೆ ಅವರ ಹುಟ್ಟುಹಬ್ಬವನ್ನು ಅಭಿಮಾನಿಗಳು ಆಚರಿಸುತ್ತಿದ್ದಾರೆ. ಅಪ್ಪು ಅಗಲಿದ ನೋವಿದ್ದರೂ, ಅವರ ಕೊನೆ ಸಿನಿಮಾ ಜೇಮ್ಸ್‍ನ್ನು ನೋಡುವ ಮೂಲಕ ಅದ್ಧೂರಿಯಾಗಿ ಹುಟ್ಟುಹಬ್ಬವನ್ನು ಆಚರಿಸುತ್ತಿದ್ದಾರೆ. ಇಂದು ಬೆಳಗ್ಗೆ 5 ಗಂಟೆಗೆ ಚಿತ್ರ ತೆರೆಕಂಡಿದೆ. ಥಿಯೇಟರ್ ಗಳ ಮುಂದೆ ಪುನೀತ್ ರಾಜ್‍ಕುಮಾರ್ ಅವರ ಬೃಹತ್ ಕಟೌಟ್‍ಗಳನ್ನು ಹಾಕಿ ಜೇಮ್ಸ್ ಜಾತ್ರೆಯನ್ನು ಆಚರಣೆ ಮಾಡುತ್ತಿದ್ದಾರೆ.

    ಥಿಯೇಟರ್ ಮುಂಭಾಗದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದೆ. ಥಿಯೇಟರ್ ಸಿಬ್ಬಂದಿ, ಅಭಿಮಾನಿಗಳು ಥಿಯೇಟರ್‌ಗೆ ಬಾಳೆ ಕಂದು, ಮಾವಿನ ಸೊಪ್ಪು, ಹೂವಿನ ಹಾರವನ್ನು ಕಟ್ಟಿ ಅಲಂಕರಿಸಿದ್ದಾರೆ. ಅಪ್ಪು ಅಭಿಮಾನಿಗಳು ಅಪ್ಪು ಪೋಸ್ಟರ್‌ಗೆ ಹಾಲಿನ ಅಭಿಷೇಕ ಮಾಡಿದ್ದಾರೆ. ಇದನ್ನೂ ಓದಿ:  ಡಾ.ಪುನೀತ್ ರಾಜ್‍ಕುಮಾರ್ 47ನೇ ಜನ್ಮದಿನ – ಸಮಾಧಿ ಬಳಿ ಕೇಕ್ ಕತ್ತರಿಸಿದ ದೊಡ್ಮನೆ ಕುಟುಂಬ

    ಅಭಿಮಾನಿಗಳು ಶಿಳ್ಳೆ, ಚಪ್ಪಾಳೆ ಹಾಕಿ ಅಪ್ಪುಗೆ ಜೈಕಾರ ಕೂಗುತ್ತಿದ್ದಾರೆ. ಸ್ಕ್ರೀನ್ ಮುಂದೆ ಅಪ್ಪು ಭಾವಚಿತ್ರ ಇರುವ ಧ್ವಜ ಹಿಡಿದು ಸಂಭ್ರಮಾಚರಣೆ ಮಾಡಿದ್ದಾರೆ. ಸ್ಕ್ರೀನ್ ಮೇಲೆ ಅಪ್ಪು ಕಾಣಿಸುತ್ತಿದ್ದಂತೆ ಹರ್ಷೋದ್ಘಾರ ಮುಗಿಲು ಮುಟ್ಟಿದೆ. ಸ್ಕ್ರೀನ್ ಮುಂದೆ ಅಭಿಮಾನಿಗಳು ಹುಚ್ಚೇದ್ದು ಕುಣಿತ್ತಿದ್ದಾರೆ. ಬೆಂಗಳೂರಿನಲ್ಲೂ ಜೇಮ್ಸ್ ಸುನಾಮಿ ಜೋರಾಗೆ ಇದೆ. ಈ ಹಿನ್ನೆಲೆಯಲ್ಲಿ ಎಲ್ಲಾ ಚಿತ್ರಮಂದಿರಗಳಲ್ಲೂ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಇದನ್ನೂ ಓದಿ: ಜೇಮ್ಸ್ ಚಿತ್ರದ 1003 ಟಿಕೆಟ್ ಖರೀದಿ ಮಾಡಿದ ಅಪ್ಪು ಅಭಿಮಾನಿ

  • ಜೇಮ್ಸ್ ಚಿತ್ರದ ವಿಶ್ವದಾಖಲೆಗಾಗಿ ಪುಟಾಣಿಗಳ ಜೊತೆಗೆ 525 ಕಿಮೀ ಸಾಗಿದ ಕುಟುಂಬ

    ಜೇಮ್ಸ್ ಚಿತ್ರದ ವಿಶ್ವದಾಖಲೆಗಾಗಿ ಪುಟಾಣಿಗಳ ಜೊತೆಗೆ 525 ಕಿಮೀ ಸಾಗಿದ ಕುಟುಂಬ

    ನೆಲಮಂಗಲ: ಅಪ್ಪು ಕೊನೆಯ ಸಿನಿಮಾ ಜೇಮ್ಸ್ ವಿಶ್ವದಾಖಲೆ ಮಾಡಲೆಂದು 7 ಮಕ್ಕಳ ಜೊತೆಗೆ ಇಲ್ಲೊಂದು ಕುಟುಂಬ ಕಾಲ್ನಡಿಗೆ ಮೂಲಕ ವಿಜಯಪುರದಿಂದ ಬೆಂಗಳೂರು ನಗರಕ್ಕೆ ಬರುತ್ತಿದೆ.

    ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅಗಲಿ ತಿಂಗಳುಗಳೇ ಕಳೆದರೂ ಅಭಿಮಾನಿಗಳು ಒಂದೆಲ್ಲಾ ಒಂದು ರೀತಿಯಲ್ಲಿ ತಮ್ಮ ಅಭಿಮಾನವನ್ನು ತೋರುತ್ತಿದ್ದಾರೆ. ವಿಜಯಪುರದ ಧರೆಪ್ಪ ಅರ್ದಾವೂರ್ ಮತ್ತು ವಿದ್ಯಾರಾಣಿ ದಂಪತಿ ಏಳು ಮಕ್ಕಳ ಜೊತೆಗೆ ಸುಮಾರು 525 ಕಿ.ಮೀ ಪಾದಯಾತ್ರೆ ಮಾಡಿದ್ದಾರೆ.

    ಫೆಬ್ರವರಿ 25ರಂದು ಆರಂಭ ಮಾಡಿದ ಪಾದಯಾತ್ರೆ ಇಂದು ನೆಲಮಂಗಲ ಮೂಲಕ ಕಂಠೀರವ ಸ್ಟುಡಿಯೋ ತಲುಪಿ ಅಪ್ಪು ಸಮಾಧಿಗೆ ಪೂಜೆ ಸಲ್ಲಿಸಲಿದ್ದಾರೆ. ಈ ಕುಟುಂಬವು ಪಾದಯಾತ್ರೆ ಜೊತೆಗೆ ಜನಜಾಗೃತಿ ಮೂಡಿಸುತ್ತಿದ್ದಾರೆ. ಇದನ್ನೂ ಓದಿ:  ಜಮ್ಮು, ಕಾಶ್ಮೀರ ಬಜೆಟ್ ಮಂಡಿಸಲಿರುವ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್

    ರಸ್ತೆಯದ್ದಕ್ಕೂ ಪುನೀತ್ ಅಭಿನಯದ ಚಲನಚಿತ್ರ ಗೀತೆಗಳ ಸಾರದೊಂದಿಗೆ ಹೆಜ್ಜೆ ಹಾಕುತ್ತಿದ್ದಾರೆ. ಇನ್ನೂ ಪುನೀತ್ ರಾಜ್‍ಕುಮಾರ್ ಕನಸಿನಂತೆ ಕನ್ನಡ ಶಾಲೆಗಳ ಅಭಿವೃದ್ಧಿ ಜಾಗೃತಿ ಜಾಥಾ, ಅಂಗಾಂಗಗಳ ದಾನ ಮತ್ತು ನೇತ್ರದಾನ ಕುರಿತು ಜನಜಾಗೃತಿ ಪಾದಯಾತ್ರೆಯುದ್ದಕೂ ಅಭಿಮಾನವನ್ನು ವ್ಯಕ್ತಪಡಿಸಿದ ಕುಟುಂಬ ಇದಾಗಿದೆ. ಇದನ್ನೂ ಓದಿ: ಅತಂತ್ರ ಸ್ಥಿತಿಯಲ್ಲಿರೋ ಉಕ್ರೇನ್ ರಿಟರ್ನ್ಸ್ ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರ ಸಹಾಯ ಮಾಡುತ್ತಾ..?