Tag: Jehangir ali khan

  • ಕರೀನಾ, ಸೈಫ್ ಪುತ್ರನಿಗೆ ಒಂದು ವರ್ಷ – ಮಗನ ಫೋಟೋ ಶೇರ್ ಮಾಡಿದ ಬೇಬೋ

    ಕರೀನಾ, ಸೈಫ್ ಪುತ್ರನಿಗೆ ಒಂದು ವರ್ಷ – ಮಗನ ಫೋಟೋ ಶೇರ್ ಮಾಡಿದ ಬೇಬೋ

    ಮುಂಬೈ: ಬಾಲಿವುಡ್ ನಟಿ ಕರೀನಾ ಕಪೂರ್ ಮತ್ತು ಸೈಫ್ ಅಲಿ ಖಾನ್ ದ್ವಿತೀಯ ಪುತ್ರ ಜಹಾಂಗೀರ್​ ಅಲಿ ಖಾನ್‍ಗೆ ಇಂದು ಒಂದು ವರ್ಷ ತುಂಬಿದೆ. ಇದೇ ಖುಷಿಯಲ್ಲಿ ಕರೀನಾ ಮಗನ ಒಂದಷ್ಟು ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

    2021ರ ಫೆಬ್ರವರಿ 21ರಂದು ಜೆಹ್ ಅಲಿ ಖಾನ್ ಜನಿಸಿದನು. ಸದ್ಯ ಮಗನ ಮೊದಲನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸುತ್ತಿರುವ ಕರೀನಾ ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಜೆಹ್ ತನ್ನ ಅಣ್ಣ ತೈಮೂರ್ ಹಿಂದೆ ಅಂಬೆಗಾಲಿಟ್ಟುಕೊಂಡು ಹೋಗುತ್ತಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ. ಇದನ್ನೂ ಓದಿ : ವೀಲ್ ಚೇರ್ ರೋಮಿಯೋಗೆ ಒಲಿದು ಬಂದ ಅದೃಷ್ಟ: ಬೆಂಗಳೂರು ಫಿಲ್ಮಂ ಫೆಸ್ಟ್‌ನಲ್ಲಿ ಕಮಾಲ್ ಮಾಡಲು ರೋಮಿಯೋ ರೆಡಿ..!!!

    ಈ ಫೋಟೋ ಜೊತೆಗೆ ಕ್ಯಾಪ್ಷನ್‍ನಲ್ಲಿ ಅಣ್ಣ ನನಗಾಗಿ ಕಾಯಿರಿ. ಇಂದಿಗೆ ನಾನು ಕೂಡ ನಿಮ್ಮಲ್ಲಿ ಒಬ್ಬ. ಜಗತ್ತಿನ ಎಲ್ಲವನ್ನು ಒಟ್ಟಾಗಿ ಕಲಿಯೋಣ. ಖಂಡಿತ ಅಮ್ಮ ನಮ್ಮನ್ನು ಫಾಲೋವ್ ಮಾಡುತ್ತಿರುತ್ತಾರೆ ಎಂದು ತೈಮೂರ್‍ಗೆ ಜೆಹ್ ಹೇಳುವಂತೆ ಕೆಲವು ಸಾಲುಗಳನ್ನು ಬರೆದಿದ್ದು, ಕೊನೆಯಲ್ಲಿ ನನ್ನ ಪ್ರೀತಿಯ ಪುತ್ರ ಜೆಹ್ ಹುಟ್ಟುಹಬ್ಬದ ಶುಭಾಶಯಗಳು ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ : ಉಪೇಂದ್ರ ಅಣ್ಣನ ಮಗನ ಬೆನ್ನುಬಿದ್ದ ಸ್ಯಾಂಡಲ್ ವುಡ್

    ಸೈಫ್ ಅಲಿ ಖಾನ್ ಜೊತೆ ಜೆಹ್ ಇರುವ ಮತ್ತೊಂದು ಫೋಟೋ ಶೇರ್ ಮಾಡಿರುವ ಕರೀನಾ, ಒಕೆ ಬಾಬಾ ನಿನ್ನನ್ನೇ ಫಾಲೋವ್ ಮಾಡುತ್ತೇನೆ. ಲವ್ ಯು ಎಂದು ಕ್ಯಾಪ್ಷನ್ ಹಾಕಿದ್ದಾರೆ. ಇನ್ನೂ ಜೈಹ್ ಫೋಟೋವನ್ನು ನಟಿ ಕರಿಷ್ಮಾ ಕಪೂರ್ ಕೂಡ ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಶೇರ್ ಮಾಡಿಕೊಂಡು ಹುಟ್ಟುಹಬ್ಬದ ಶುಭಾಶಯಗಳನ್ನು ತಿಳಿಸಿದ್ದಾರೆ. ಒಟ್ಟಾರೆ ಎಲ್ಲ ಫೋಟೋಗಳಲ್ಲಿಯೂ ಜೈಹ್ ಸಖತ್ ಆ್ಯಕ್ಟೀವ್ ಆಗಿ ಆಟ ಆಡುತ್ತಿರುವುದನ್ನು ಕಾಣಬಹುದಾಗಿದೆ.