Tag: Jeff Bezos

  • ಕರಗಿತು ಭಾರೀ ಸಂಪತ್ತು – ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ 3ನೇ ಸ್ಥಾನಕ್ಕೆ ಕುಸಿದ ಅದಾನಿ

    ಕರಗಿತು ಭಾರೀ ಸಂಪತ್ತು – ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ 3ನೇ ಸ್ಥಾನಕ್ಕೆ ಕುಸಿದ ಅದಾನಿ

    ವಾಷಿಂಗ್ಟನ್: ಭಾರತದ ನಂ.1 ಶ್ರೀಮಂತ ವ್ಯಕ್ತಿ, ಅದಾನಿ ಗ್ರೂಪ್‌ನ ಅಧ್ಯಕ್ಷ ಗೌತಮ್ ಅದಾನಿ (Gautam Adani) ಅವರು ಇತ್ತೀಚೆಗಷ್ಟೇ ಅಮೆಜಾನ್‌ನ ಜೆಫ್ ಬೆಜೋಸ್ (Jeff Bezos) ಅವರನ್ನು ಹಿಂದಿಕ್ಕಿ, ವಿಶ್ವದಲ್ಲಿಯೇ ಅತ್ಯಂತ ಶ್ರೀಮಂತ (Billionaire) ವ್ಯಕ್ತಿಗಳ ಪಟ್ಟಿಯಲ್ಲಿ 2ನೇ ಸ್ಥಾನವನ್ನು ಪಡೆದಿದ್ದರು. ಆದರೆ ಅದಾನಿಯವರು ಈಗ ಮತ್ತೆ ಬ್ಲೂಮ್‌ಬರ್ಗ್ ಇಂಡೆಕ್ಸ್‌ನಲ್ಲಿ 3ನೇ ಸ್ಥಾನಕ್ಕೆ ಕುಸಿದಿದ್ದಾರೆ.

    ಬ್ಲೂಮ್‌ಬರ್ಗ್ ಬಿಲಿಯನೇರ್ಸ್ ಇಂಡೆಕ್ಸ್ (Bloomberg Billionaires Index) ಪ್ರಕಾರ ಇಂದಿನ ಹೊಸ ನವೀಕರಣದಲ್ಲಿ ಗೌತಮ್ ಅದಾನಿಯವರ ಸಂಪತ್ತಿನ ಮೌಲ್ಯ 135 ಬಿಲಿಯನ್ ಡಾಲರ್(ಸುಮಾರು 10.98 ಲಕ್ಷ ಕೋಟಿ ರೂ.)ಗಳಷ್ಟಿದೆ. 10 ದಿನಗಳ ಹಿಂದೆ ಅದಾನಿಯವರ ಸಂಪತ್ತು 154.7 ಬಿಲಿಯನ್ ಡಾಲರ್(12.33 ಲಕ್ಷ ಕೋಟಿ ರೂ.)ಗಳಷ್ಟಿತ್ತು. ಅವರು ಇತ್ತೀಚೆಗೆ 6.9 ಬಿಲಿಯನ್ ಡಾಲರ್(ಸುಮಾರು 56 ಸಾವಿರ ಕೋಟಿ ರೂ.) ಸಂಪತ್ತು ಕಳೆದುಕೊಂಡಿದ್ದಾರೆ ಎಂದು ವರದಿಯಾಗಿದೆ.

    ಇದೀಗ ಅದಾನಿಯನ್ನು ಹಿಂದಿಕ್ಕಿ ಬೆಜೋಸ್ ಅವರು ಮತ್ತೆ 2ನೇ ಸ್ಥಾನಕ್ಕೆ ಮರಳಿದ್ದಾರೆ. ಬೆಜೋಸ್ ಅವರ ಪ್ರಸ್ತುತ ನಿವ್ವಳ ಸಂಪತ್ತು 138 ಬಿಲಿಯನ್ ಡಾಲರ್ (11.23 ಲಕ್ಷ ಕೋಟಿ ರೂ.) ಆಗಿದೆ. ಟೆಸ್ಲಾ ಸಿಇಒ ಎಲೋನ್ ಮಸ್ಕ್ ಈಗ 245 ಬಿಲಿಯನ್ ಡಾಲರ್(19.92 ಲಕ್ಷ ಕೋಟಿ ರೂ) ಸಂಪತ್ತನ್ನು ಹೊಂದುವ ಮೊದಲ ಸ್ಥಾನವನ್ನು ಉಳಿಸಿಕೊಂಡಿದ್ದಾರೆ. ಇದನ್ನೂ ಓದಿ: ಷೇರು ಮಾರುಕಟ್ಟೆಯಲ್ಲಿ ರಕ್ತಪಾತ – ಹೂಡಿಕೆದಾರರಿಗೆ ಒಂದೇ ದಿನ 7 ಲಕ್ಷ ಕೋಟಿ ನಷ್ಟ

    ಅದಾನಿಯವರು ಈ ವರ್ಷ ಫೆಬ್ರವರಿಯಲ್ಲಿ ಮುಖೇಶ್ ಅಂಬಾನಿ ಅವರನ್ನು ಹಿಂದಿಕ್ಕಿ ಏಷ್ಯಾದಲ್ಲೇ ನಂ.1 ಶ್ರೀಮಂತ ವ್ಯಕ್ತಿಯಾದರು. ಕಳೆದ ತಿಂಗಳು ಮೈಕ್ರೋಸಾಫ್ಟ್ ಕಾರ್ಪೊರೇಷನ್‌ನ ಬಿಲ್ ಗೇಟ್ಸ್ ಅವರನ್ನು ಹಿಂದಿಕ್ಕಿ, ವಿಶ್ವದ 3ನೇ ಶ್ರೀಮಂತ ವ್ಯಕ್ತಿಯಾದರು. ಇದಾದ ಕೆಲವೇ ದಿನಗಳಲ್ಲಿ ಬೆಜೋಸ್ ಅವರನ್ನೂ ಹಿಂದಿಕ್ಕಿ 2ನೇ ಸ್ಥಾನಕ್ಕೇರಿದರು. ಇದೀಗ ಅದಾನಿ ಮತ್ತೆ 3ನೇ ಸ್ಥಾನಕ್ಕೆ ಕುಸಿದಿದ್ದಾರೆ.

    ಸಂಪತ್ತು ಇಳಿಕೆಯಾಗಿದ್ದು ಯಾಕೆ?
    ಕಂಪನಿಯ ಷೇರುಗಳ ಪೈಕಿ ಮಾಲೀಕರ ಬಳಿ ಇರುವ ಷೇರುಗಳ ಲೆಕ್ಕಾಚಾರದ ಆಧಾರದಲ್ಲಿ ಸಂಪತ್ತಿನ ಮೌಲ್ಯವನ್ನು ಅಂದಾಜಿಸಲಾಗುತ್ತಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ನಡೆಯುತ್ತಿರುವ ಬೆಳವಣಿಗೆಗಳಿಂದ ವಿಶ್ವಾದ್ಯಂತ ಷೇರು ಮಾರುಕಟ್ಟೆಯಲ್ಲಿ ರಕ್ತಪಾತವಾಗುತ್ತಿದೆ. ಭಾರತದಲ್ಲೂ ಅದಾನಿ ಕಂಪನಿಯ ಷೇರುಗಳು ಇಳಿಕೆಯಾದ ಹಿನ್ನೆಲೆಯಲ್ಲಿ ಗೌತಮ್ ಅದಾನಿಯವರ ಸಂಪತ್ತಿನ ಮೌಲ್ಯವೂ ಕಡಿಮೆಯಾಗಿದೆ. ಇದನ್ನೂ ಓದಿ: ಫಸ್ಟ್‌ ಟೈಂ ಸುಪ್ರೀಂ ಸಾಂವಿಧಾನಿಕ ಪೀಠದ ವಿಚಾರಣೆ ಲೈವ್‌ – ಎಲ್ಲಿ ನೋಡಬಹುದು?

    Live Tv
    [brid partner=56869869 player=32851 video=960834 autoplay=true]

  • 204 ಕೋಟಿ  ನೀಡಿ ಬುಕ್ಕಿಂಗ್ – ಅಮೆಜಾನ್ ಸಂಸ್ಥಾಪಕನ ಜೊತೆ ಬಾಹ್ಯಾಕಾಶ ಪ್ರಯಾಣ

    204 ಕೋಟಿ ನೀಡಿ ಬುಕ್ಕಿಂಗ್ – ಅಮೆಜಾನ್ ಸಂಸ್ಥಾಪಕನ ಜೊತೆ ಬಾಹ್ಯಾಕಾಶ ಪ್ರಯಾಣ

    ವಾಷಿಂಗ್ಟನ್ : ಅಮೆಜಾನ್ ಸಂಸ್ಥಾಪಕ ಜೆಫ್ ಬೆಜೋಸ್ ಜೊತೆ ಬಾಹ್ಯಾಕಾಶಕ್ಕೆ ಹೋಗಲು 28 ದಶಲಕ್ಷ ಡಾಲರ್(ಅಂದಾಜು 204 ಕೋಟಿ ರೂ.)ನೀಡಿ ಬಿಡ್ ಗೆದ್ದು ವ್ಯಕ್ತಿಯೊಬ್ಬ ಸುದ್ದಿಯಾಗಿದ್ದಾನೆ.

    ಅಮೆಜಾನ್ ಸಂಸ್ಥಾಪಕ ಜೆಫ್ ಬೆಜೋಸ್ ಸಂಸ್ಥಾಪಿಸಿರುವ ಬ್ಲ್ಯೂ ಒರಿಜಿನ್ ಕಂಪನಿಯ ಚೊಚ್ಚಲ ಬಾಹ್ಯಾಕಾಶ ಪ್ರವಾಸ ಯೋಜನೆಯ ಟಿಕೆಟ್‍ಗೆ ಬುಕ್ಕಿಂಗ್ ಆರಂಭವಾಗಿತ್ತು. ಈ ವೇಳೆ ವ್ಯಕ್ತಿಯೊಬ್ಬ 204 ಕೋಟಿ ರೂಪಾಯಿ ಬಿಡ್ ಮಾಡಿ ಗೆದ್ದುಕೊಂಡಿದ್ದಾರೆ.

    ಅಮೆರಿಕಾ ಗಗನಯಾತ್ರಿಗಳಾದ ನೀಲ್ ಅರ್ಮ್‍ಸ್ಟ್ರಾಂಗ್ ಚಂದ್ರನ ಮೇಲಿಳಿದು ಇದೇ ಜು.20ಕ್ಕೆ 52 ವರ್ಷ ತುಂಬಲಿದೆ. ಅದೇ ದಿನ ಬ್ಲ್ಯೂ ಒರಿಜಿನ್ ಕಂಪನಿಯ ರಾಕೆಟ್ ಬಾಹ್ಯಾಕಾಶ ಪ್ರವಾಸ ಕೈಗೊಳ್ಳಲಿದೆ.

    ಮೊದಲ ಪ್ರಯಾಣದಲ್ಲಿ ಬೆಜೋಸ್ ಮತ್ತು ಅವರ ಸಹೋದರ ಮಾರ್ಕ್ ಇರಲಿದ್ದು, ಇನ್ನೊಂದು ಸೀಟ್‍ಗೆ ಆಸಕ್ತರಿಗಾಗಿ ಬಿಡ್ ಆಹ್ವಾನಿಸಲಾಗಿತ್ತು. 159 ದೇಶಗಳ 7500 ಜನ ಭಾಗಿಯಾಗಿದ್ದರು. ಈ ಪೈಕಿ ಅತಿ ಹೆಚ್ಚು ಅಂದರೆ 204 ಕೋಟಿ ರೂಪಾಯಿ ಬಿಡ್ ಸಲ್ಲಿಸಿದ ವ್ಯಕ್ತಿಯನ್ನು ಪ್ರವಾಸಕ್ಕೆ ಆಯ್ಕೆ ಮಾಡಲಾಗಿದೆ. ಬಿಡ್ ಗೆದ್ದ  ವ್ಯಕ್ತಿ ಯಾರು ಎಂಬುದನ್ನು ಕಂಪನಿ ಬಹಿರಂಗ ಮಾಡಿಲ್ಲ.

  • ಗಂಟೆಗೆ 127 ಕೋಟಿ ಸಂಪತ್ತು – ಎಲೋನ್‌ ಮಸ್ಕ್‌ ವಿಶ್ವದ ನಂ.1 ಶ್ರೀಮಂತ

    ಗಂಟೆಗೆ 127 ಕೋಟಿ ಸಂಪತ್ತು – ಎಲೋನ್‌ ಮಸ್ಕ್‌ ವಿಶ್ವದ ನಂ.1 ಶ್ರೀಮಂತ

    – ಟೆಸ್ಲಾ 2020ರಲ್ಲಿ ಉತ್ಪಾದಿಸಿದ ಕಾರುಗಳ ಸಂಖ್ಯೆ 4.99 ಲಕ್ಷ
    – ಜೆಫ್‌ ಬೆಜೋಸ್‌ಗೆ 2ನೇ ಸ್ಥಾನ

    ವಾಷಿಂಗ್ಟನ್: ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದಿರುವ ಅಮೆರಿಕದ ಟೆಸ್ಲಾ ಮತ್ತು ಸ್ಪೇಸ್‌ ಎಕ್ಸ್‌ ಕಂಪನಿಯ ಸಂಸ್ಥಾಪಕ ಎಲೋನ್‌ ಮಸ್ಕ್‌ ಗಂಟೆಗೆ ಅಂದಾಜು 127 ಕೋಟಿ ರೂ. ಸಂಪತ್ತು ಗಳಿಸುತ್ತಿದ್ದಾರೆ.

    ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ ಸ್ಥಾನ ಪಡೆದಿರುವ 49 ವರ್ಷದ ಎಲೋನ್‌ ಮಸ್ಕ್‌ ಈಗ ಅಮೇಜಾನ್‌ ಸಂಸ್ಥಾಪಕ ಜೆಫ್ ಬೆಜೋಸ್‌ರನ್ನು ಹಿಂದಿಕ್ಕಿದ್ದಾರೆ.

    2017ರಿಂದ ಜೆಫ್‌ ಬೆಜೋಸ್‌ ಅವರು ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದರು. ಆದರೆ ಈಗ ಮಸ್ಕ್‌ ಸಂಪತ್ತು 195 ಶತಕೋಟಿ ಡಾಲರ್‌( ಅಂದಾಜು 14,23,500 ಕೋಟಿ ರೂ.) ಏರಿಕೆಯಾಗಿದ್ದರೆ ಬಿಜೋಸ್‌ 185 ಶತಕೋಟಿ ಡಾಲರ್‌ ಇದೆ ಎಂದು ಬ್ಲೂಮ್‌ಬರ್ಗ್‌ ಬಿಲಿಯನೇರ್‌ ಇಂಡೆಕ್ಸ್‌ ತಿಳಿಸಿದೆ.

    2020ರ ಜನವರಿಯಲ್ಲಿ ಶ್ರೀಮಂತರ ಪಟ್ಟಿಯಲ್ಲಿ ಎಲೋನ್‌ ಮಸ್ಕ್‌ ಈ ಜಾಗತಿಕ ಪಟ್ಟಿಯಲ್ಲಿ 35ನೇ ಸ್ಥಾನದಲ್ಲಿದ್ದರು. ಕಳೆದ ಒಂದು ವರ್ಷದಲ್ಲಿ ಮಸ್ಕ್‌ ಸಂಪತ್ತು 150 ಶತಕೋಟಿ ಡಾಲರ್‌ ಹೆಚ್ಚಳವಾಗಿದೆ. ಈ ಮೂಲಕ ಅತಿ ಕಡಿಮೆ ಅವಧಿಯಲ್ಲಿ ಅತಿ ಹೆಚ್ಚು ಸಂಪತ್ತು ಹೆಚ್ಚಿಸಿಕೊಂಡ ವಿಶ್ವದ ಮೊದಲ ಉದ್ಯಮಿ ಎಂಬ ಹೆಗ್ಗಳಿಕೆಗೆ ಮಸ್ಕ್‌ ಪಾತ್ರವಾಗಿದ್ದಾರೆ. ಕಳೆದ ಒಂದು ವರ್ಷದಲ್ಲಿ ಪ್ರತಿ ಗಂಟೆಗೆ 17.36 ದಶಲಕ್ಷ ಡಾಲರ್‌(ಅಂದಾಜು 127 ಕೋಟಿ ರೂ.) ಸಂಪತ್ತು ಗಳಿಸಿದ್ದರಿಂದ ಮಸ್ಕ್‌ ವಿಶ್ವದ ನಂಬರ್‌ 1 ಶ್ರೀಮಂತರಾಗಿ ಹೊರಹೊಮ್ಮಿದ್ದಾರೆ.

    ಕಳೆದ ಒಂದು ವರ್ಷದಲ್ಲಿ ಎಲೆಕ್ಟ್ರಿಕ್‌ ಕಾರು ಕಂಪನಿ ಟೆಸ್ಲಾದ ಷೇರು ಬೆಲೆ ಭಾರೀ ಏರಿಕೆ ಕಂಡಿದೆ. ಮೊದಲ ಪಟ್ಟ ಸಿಕ್ಕಿದ ಹಿನ್ನೆಲೆಯಲ್ಲಿ ಶುಕ್ರವಾರ ಅಮೆರಿಕದ ಷೇರು ಮಾರುಕಟ್ಟೆ ನಾಸ್ಡಾಕ್‌ನಲ್ಲಿ ಒಂದು ಷೇರು ಬೆಲೆ 816 ಡಾಲರ್‌ (ಅಂದಾಜು 59 ಸಾವಿರ) ತಲುಪಿದೆ. ಇದು ಟೆಸ್ಲಾ ಇತಿಹಾಸದಲ್ಲಿ ದಾಖಲೆಯಾಗಿದ್ದು ಮುಂದಿನ ದಿನಗಳಲ್ಲಿ ಮತ್ತಷ್ಟು ಏರಿಕೆಯಾಗಬಹುದು ಎಂದು ಮಾರುಕಟ್ಟೆ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. ಪ್ರಸ್ತುತ ಟೆಸ್ಲಾ ಕಂಪನಿಯಲ್ಲಿ ಮಸ್ಕ್‌ ಶೇ.20 ರಷ್ಟು ಷೇರುಗಳನ್ನು ಹೊಂದಿದ್ದಾರೆ.

    ಟೆಸ್ಲಾ ಕಂಪನಿಯ ಷೇರುಗಳು ಒಂದೇ ವರ್ಷದ ಅವಧಿಯಲ್ಲಿ ಶೇ. 743ರಷ್ಟು ಮೇಲೇರಿವೆ. ವಿಶೇಷ ಏನೆಂದರೆ ಟೆಸ್ಲಾ ಕಂಪನಿ 2020ರಲ್ಲಿ ಒಟ್ಟು 4,99,550 ಕಾರನ್ನು ಉತ್ಪಾದಿಸಿತ್ತು. ಹಾಗೆ ಲೆಕ್ಕ ಹಾಕಿದರೆ ಜಗತ್ತಿನ ಅತಿ ದೊಡ್ಡ ಕಾರು ಉತ್ಪಾದನಾ ಕಂಪನಿಗಳಾದ ಜನರಲ್‌ ಮೋಟರ್ಸ್‌, ಫೋರ್ಡ್‌, ಟೊಯೋಟಾ, ಹೋಂಡಾ ಕಂಪನಿಗಳು ಒಂದೇ ತಿಂಗಳಿನಲ್ಲಿ ಈ ಪ್ರಮಾಣದ ಕಾರುಗಳನ್ನು ಉತ್ಪಾದಿಸುತ್ತಿವೆ. ಟೆಸ್ಲಾ ಕಂಪನಿಯ ಎಲೆಕ್ಟ್ರಿಕ್‌ ಕಾರು ದುಬಾರಿಯಾಗಿದ್ದರೂ ಮುಂದಿನ ದಿನಗಳಲ್ಲಿ ಎಲೆಕ್ಟ್ರಿಕ್‌ ಕಾರು ಮಾರುಕಟ್ಟೆ ಬೇಡಿಕೆ ಹೆಚ್ಚಾಗಲಿದೆ. ಈ ಕಾರಣಕ್ಕೆ ಟೆಸ್ಲಾ ಷೇರುಗಳ ಬೆಲೆ ಏರಿಕೆಯಾಗುತ್ತದೆ.

    ಅಮೆರಿಕದ ನಾಸಾ ಸ್ಪೇಸ್‌ ಎಕ್ಸ್‌ ಕಂಪನಿ ಅಭಿವೃದ್ದಿ ಪಡಿಸಿದ್ದ ರಾಕೆಟ್‌ ಮೂಲಕ ಬಾಹ್ಯಾಕಾಶಕ್ಕೆ ಗಗನ ಯಾನಿಗಳನ್ನು ಕಳುಹಿಸಿಕೊಟ್ಟಿತ್ತು. ಈ ಮೂಲಕ ಬಾಹ್ಯಾಕಾಶ ಕ್ಷೇತ್ರದಲ್ಲೂ ಖಾಸಗಿ ರಂಗಕ್ಕೆ ಅವಕಾಶ ಕಲ್ಪಿಸಿತ್ತು.

  • ಬಿಲ್ ಗೇಟ್ಸ್ ನಂ.1 – ವಿಶ್ವದ ಶ್ರೀಮಂತ ಪಟ್ಟದಿಂದ ಕೆಳಗಿಳಿದ ಜೆಫ್ ಬೆಜೋಸ್

    ಬಿಲ್ ಗೇಟ್ಸ್ ನಂ.1 – ವಿಶ್ವದ ಶ್ರೀಮಂತ ಪಟ್ಟದಿಂದ ಕೆಳಗಿಳಿದ ಜೆಫ್ ಬೆಜೋಸ್

    ಸೀಟೆಲ್: ವಿಶ್ವದ ಆಗರ್ಭ ಶ್ರೀಮಂತ ಪಟ್ಟದಿಂದ ಅಮೆಜಾನ್ ಸ್ಥಾಪಕ ಮತ್ತು ಸಿಇಒ ಜೆಫ್ ಬೆಜೋಸ್ ಕೆಳಗಿಳಿದಿದ್ದಾರೆ. ಹೀಗಾಗಿ ಮತ್ತೆ ಬಿಲ್ ಗೇಟ್ಸ್ ವಿಶ್ವದ ಅತ್ಯಂತ ಶ್ರೀಮಂತ ಪಟ್ಟವನ್ನು ಅಲಂಕರಿಸಿದ್ದಾರೆ.

    ಪ್ರಸಕ್ತ ಹಣಕಾಸು ವರ್ಷದ ಕಳೆದ ತ್ರೈಮಾಸಿಕದಲ್ಲಿ ಬೆಜೋಸ್ ಅವರು ಸುಮಾರು 7 ಶತಕೋಟಿ ಡಾಲರ್(ಅಂದಾಜು 49 ಸಾವಿರ ಕೋಟಿ ರೂ.) ಮಾರುಕಟ್ಟೆ ಮೌಲ್ಯವನ್ನು ಕಳೆದುಕೊಂಡಿದ್ದಾರೆ. ಗುರುವಾರ ಅಂತಾರಾಷ್ಟ್ರೀಯ ಷೇರು ಮಾರುಕಟ್ಟೆ ವ್ಯವಹಾರದಲ್ಲಿ ಅಮೆಜಾನ್ ಷೇರುಗಳ ಬೆಲೆ ಶೇಕಡಾ 7ರಷ್ಟು ಕುಸಿದಿದ್ದು, ಬೆಜೋಸ್ ಅವರ ಕಂಪೆನಿಗೆ 103.9 ಶತಕೋಟಿ ಡಾಲರ್(ಅಂದಾಜು 729 ಲಕ್ಷ ಕೋಟಿ ರೂ.) ನಷ್ಟು ಕಡಿಮೆಯಾಗಿದೆ.

    ಇತ್ತ ಮೈಕ್ರೊಸಾಫ್ಟ್ ಸಹ ಸಂಸ್ಥಾಪಕ ಬಿಲ್ ಗೇಟ್ಸ್ ಅವರ ಸಂಪತ್ತಿನ ಮೌಲ್ಯ ಈಗ 105.7 ಶತಕೋಟಿ ಡಾಲರ್ ಆಗಿದೆ. ಹೀಗಾಗಿ ಈ ಬಾರಿ ಮತ್ತೆ ಬಿಲ್ ಗೇಟ್ಸ್ ಅವರೇ ನಂ. 1 ಸ್ಥಾನಕ್ಕೇರಿದ್ದಾರೆ. ಸತತ 24 ವರ್ಷಗಳಿಂದ 2018ರವರೆಗೂ ಬಿಲ್ ಗೇಟ್ಸ್ ಅವರೇ ಜಗತ್ತಿನ ಶ್ರೀಮಂತ ವ್ಯಕ್ತಿಯಾಗಿದ್ದರು. ಆದರೆ 2018ರಲ್ಲಿ ಬಿಜೋಸ್ ಬಿಲ್ ಗೇಟ್ಸ್ ಅವರನ್ನು ಹಿಂದಿಕ್ಕಿ ದಾಖಲೆ ಬರೆದಿದ್ದರು. ಆಗ ಬಿಜೋಸ್ ಅವರ ಸಂಪೂರ್ಣ ಸಂಪತ್ತಿನ ಮೌಲ್ಯ 160 ಶತಕೋಟಿ ಡಾಲರ್ ಇತ್ತು.

    2017ರ ನಂತರ ತ್ರೈಮಾಸಿಕ ಅವಧಿಯಲ್ಲಿ ಅಮೆಜಾನ್ ಆದಾಯ ಶೇಕಡಾ 26ರಷ್ಟು ಇಳಿಮುಖ ಕಂಡಿದೆ. 1987ರಲ್ಲಿ ವಿಶ್ವದ ಅತಿ ಶ್ರೀಮಂತರ ಫೋಬ್ರ್ಸ್ ಮ್ಯಾಗಜಿನ್ ಪಟ್ಟಿಯಲ್ಲಿ 1.25 ಶತಕೋಟಿ ಡಾಲರ್ ಸಂಪತ್ತಿನ ಮೌಲ್ಯದೊಂದಿಗೆ ಬಿಲ್ ಗೇಟ್ಸ್ ಸ್ಥಾನ ಪಡೆದುಕೊಂಡಿದ್ದರು. 1998ರಲ್ಲಿ ಫೋಬ್ರ್ಸ್ ನ 400 ಅಮೆರಿಕದ ಶ್ರೀಮಂತರ ಪಟ್ಟಿಗೆ ಬೆಜೋಸ್ ಸೇರ್ಪಡೆಯಾಗಿದ್ದರು. ಆ ನಂತರ ಅಮೆಜಾನ್ ಕಂಪನಿ ಸಾರ್ವಜನಿಕ ಕ್ಷೇತ್ರದಲ್ಲಿ ವಹಿವಾಟು ಆರಂಭಿಸಿತು. ಆಗ ಕಂಪೆನಿಯ ಒಟ್ಟಾರೆ ಆದಾಯ 1.6 ಶತಕೋಟಿ ಡಾಲರ್ ಆಗಿತ್ತು.

    ಏಪ್ರೀಲ್‍ನಲ್ಲಿ ಬೆಜೊಸ್ ದಂಪತಿ ವಿಚ್ಛೇದನ ಪಡೆದಿಕೊಂಡಿದ್ದರು. ಇದು ಇತಿಹಾಸದಲ್ಲೇ ದುಬಾರಿ ವಿಚ್ಛೇದನ ಪ್ರಕರಣವಾಗಿದ್ದು, ಸುಮಾರು 36 ಶತಕೋಟಿ ಡಾಲರ್ ಮೌಲ್ಯದ ಜೆಫ್ ಬೆಜೋಸ್ ಅವರ ಷೇರುಗಳಿಗೆ ಮ್ಯಾಕೆಂಜಿ ಬೆಜೋಸ್ ಅವರಿಗೆ ನೀಡಲಾಗಿದೆ.