Tag: Jeevijaya

  • ಸಿಎಂ ಆರ್‌.ಗುಂಡೂರಾವ್‌ ಸೋಲಿಸಿದ್ದ ಮಾಜಿ ಸಚಿವ ಜೀವಿಜಯ ಕಾಂಗ್ರೆಸ್‌ಗೆ ರಾಜೀನಾಮೆ

    ಸಿಎಂ ಆರ್‌.ಗುಂಡೂರಾವ್‌ ಸೋಲಿಸಿದ್ದ ಮಾಜಿ ಸಚಿವ ಜೀವಿಜಯ ಕಾಂಗ್ರೆಸ್‌ಗೆ ರಾಜೀನಾಮೆ

    – ಬಿಜೆಪಿ ಶಾಸಕ ಅಪ್ಪಚ್ಚು ರಂಜನ್‌ಗೆ ಪರೋಕ್ಷ ಬೆಂಬಲ

    ಕೊಡಗು: ಕೊಡಗಿನವರಿಗೆ (Kodagu) ಕಾಂಗ್ರೆಸ್ (Congress) ಪಕ್ಷದಿಂದ ಟಿಕೆಟ್ ನೀಡದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ರಾಜಿನಾಮೆ ಸಲ್ಲಿಸಿದ್ದೇನೆ ಎಂದು ಮಾಜಿ ಸಚಿವ, ಹಿರಿಯ ರಾಜಕಾರಣಿ ಬಿ.ಎ. ಜೀವಿಜಯ (B.A.Jeevijaya) ತಿಳಿಸಿದ್ದಾರೆ.

    ಮಡಿಕೇರಿಯಲ್ಲಿ ಮಾತಾನಾಡಿದ ಅವರು ರಾಜಕಾರಣದಲ್ಲಿ ಅನೇಕ ಬಾರಿ ಎಡವಿ ತಪ್ಪು ದಾರಿಯಲ್ಲಿ ನಡೆದಿದ್ದೇನೆ. ಜನತೆ ಕೊಟ್ಟ ಅವಕಾಶವನ್ನು ದುರುಪಯೋಗ ಮಾಡಿಲ್ಲ. ಕಾಂಗ್ರೆಸ್‌ನಿಂದ ಪ್ರಾರಂಭವಾಗಿ ಕಾಂಗ್ರೆಸ್‌ನಿಂದ ಸಕ್ರಿಯ ರಾಜಕಾರಣದಿಂದ ದೂರವಾಗಿ ರಾಜೀನಾಮೆ ಪತ್ರ ನೀಡಿದ್ದೇನೆ. ಇಂತಹ ನಿರ್ಧಾರಕ್ಕೆ ಬರಲು ಕಾರಣರಾದ ಕೆಪಿಸಿಸಿ ಅಧ್ಯಕ್ಷರಿಗೆ ಧನ್ಯವಾದ ಎಂದು ಕುಟುಕಿದರು. ಇದನ್ನೂ ಓದಿ: ಹೆಲಿಕಾಪ್ಟರ್‌ಗೆ ಹದ್ದು ಡಿಕ್ಕಿ- ಡಿಕೆ ಶಿವಕುಮಾರ್‌ ಗ್ರೇಟ್‌ ಎಸ್ಕೇಪ್‌

    ಯಾವ ಪಕ್ಷದ ಹಂಗೂ ಇಲ್ಲ‌. ಸತ್ವ ಇಲ್ಲದ ತತ್ವಗಳು ಸಿದ್ಧಾಂತಗಳು ಮಾಯವಾಗಿದೆ. ಬೇರೆ ಜಿಲ್ಲೆಯ ಅಭ್ಯರ್ಥಿ ಬೇಡ ಎಂದಿದ್ದೆ. ನನ್ನ ಪತ್ರಕ್ಕೆ ಕವಡೆ ಕಾಸಿನ ಬೆಲೆ ಸಿಕ್ಕಿಲ್ಲ‌. ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯ ತಂದೆ ಒಂದು ಪಕ್ಷ, ಮಗ ಮತ್ತೊಂದು ಪಕ್ಷ. ಕೊಡಗಿನವರೇ ಇಲ್ಲಿ ಗೆಲ್ಲಬೇಕು. ನನಗೆ ಅಥವಾ ಚಂದ್ರಮೌಳಿಗೆ ಟಿಕೆಟ್ ಕೊಡಬೇಕು ಎನ್ನುವ ಶಿಫಾರಸು ಇತ್ತು. ಆದರೆ ನಮ್ಮ ಅಭಿಪ್ರಾಯ ಆಲಿಸದೆ ಹೊರಗಿನವರಿಗೆ ಟಿಕೆಟ್ ಕೊಟ್ಟರು. ನಮ್ಮಂತಹವರು ರಾಜಕಾರಣ ಮಾಡಲು ಸಾಧ್ಯವಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

    ಕೆಲ ದಿನಗಳ ಹಿಂದೆ ಮಾಜಿ ಪ್ರಧಾನಿ ದೇವೇಗೌಡರು ನನಗೆ ಫೋನ್ ಮಾಡಿದ್ರು. ಆದರೆ ಪಕ್ಷದ ವಿಚಾರದ ಬಗ್ಗೆ ಏನೂ ಮಾತನಾಡಿಲ್ಲ. ಅಲ್ಲದೇ ಬಿಜೆಪಿ ಅಭ್ಯರ್ಥಿ ಅಪ್ಪಚ್ಚು ರಂಜನ್ ಆಕಸ್ಮಿಕವಾಗಿ ಸಿಕ್ಕರು. ಕೊನೆ ಚುನಾವಣೆ ಎಂದರು. ಶಾಸಕರಾಗುವುದು ಬಿಜೆಪಿಗೆ ಮಾತ್ರವಲ್ಲ ಎಲ್ಲರಿಗೂ ನೀವೇ ಶಾಸಕರು. ಎಲ್ಲರನ್ನೂ ಸಮಾನವಾಗಿ ಕಾಣಬೇಕು ಎಂದೆ, ಅವರು ಒಪ್ಪಿದರು. ಅವರಿಗೆ ಬೆಂಬಲ ಕೊಟ್ಟರೆ ತಪ್ಪೇನು ಎಂಬ ಭಾವನೆ ಇದೆ ಎಂದು ಪರೋಕ್ಷವಾಗಿ ರಂಜನ್‌ಗೆ ಬೆಂಬಲ ಸೂಚಿಸಿದರು. ಇದನ್ನೂ ಓದಿ: PublicTV Explainer: ಮತ ಪ್ರಮಾಣ ಹೆಚ್ಚಿದ್ದರೂ ಕರ್ನಾಟಕದಲ್ಲಿ ಕಾಂಗ್ರೆಸ್‌ ಏಕಾಂಗಿಯಾಗಿ ಅಧಿಕಾರಕ್ಕೆ ಏರಿಲ್ಲ ಯಾಕೆ?

    ಕೊಡಗಿನಲ್ಲಿ ಕಾಂಗ್ರೆಸ್‌ನ ಭದ್ರಕೋಟೆಗೆ ಮೊದಲು ಪೆಟ್ಟು ನೀಡಿದ್ದೇ ಬಿ.ಎ. ಜೀವಿಜಯ. 1983 ರಲ್ಲಿ ಜನತಾ ಪಕ್ಷದಿಂದ ಸ್ಪರ್ಧಿಸಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಅಂದಿನ ಮುಖ್ಯಮಂತ್ರಿ ಆರ್. ಗುಂಡೂರಾವ್ ಅವರನ್ನು ಮಣಿಸಿ ಗಮನ ಸೆಳೆದಿದ್ದರು.

  • ಮೊಟ್ಟೆ ಎಸೆದ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಕೊಟ್ಟ ಮದುವೆ ಫೋಟೋ

    ಮೊಟ್ಟೆ ಎಸೆದ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಕೊಟ್ಟ ಮದುವೆ ಫೋಟೋ

    ಮಡಿಕೇರಿ: ಗುಡ್ಡೆಹೊಸೂರಿನಲ್ಲಿ ಸಿದ್ದರಾಮಯ್ಯ ಕಾರಿಗೆ ಮೊಟ್ಟೆ ಎಸೆದ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದ್ದು, ಇದೀಗ ಸಂಪತ್ ಸಹೋದರನ ಮದುವೆಯಲ್ಲಿ ಮಾಜಿ ಸಚಿವ ಜೀವಿಜಯ ಭಾಗಿಯಾಗಿದ್ದ ಫೋಟೋ ರಿಲೀಸ್ ಆಗಿದೆ.

    ಇತ್ತೀಚೆಗಷ್ಟೇ ಗುಡ್ಡೆಹೊಸೂರಿನಲ್ಲಿ ಸಿದ್ದರಾಮಯ್ಯ ಕಾರಿಗೆ ಮೊಟ್ಟೆ ಎಸೆದ ಆರೋಪಿ ಸಂಪತ್ ಮಾತನಾಡಿ, ತಾನು ಮೊದಲು ಜೆಡಿಎಸ್ ಮೆಂಬರ್ ಆಗಿದ್ದೆ, ಆನಂತರ ಕಾಂಗ್ರೆಸ್ ಕಾರ್ಯಕರ್ತನಾದೆ. ಅಲ್ಲದೆ ಮಾಜಿ ಸಚಿವ ಕೈ ನಾಯಕ ಜೀವಿಜಯ ಫಾಲೋವರ್ ಎಂದು ಹೇಳಿಕೊಂಡಿದ್ದ.

    ಈತನ ಹೇಳಿಕೆಗೆ ಮಾಜಿ ಸಚಿವ ಜೀವಿಜಯ ಪ್ರತಿಕ್ರಿಯಿಸಿ, ಸಂಪತ್ ಯಾರೆಂದು ನನಗೆ ಗೊತ್ತಿಲ್ಲ. ಸಂಪತ್‍ನನ್ನು ನೋಡೇ ಇಲ್ಲ. ಸಂಪತ್ ಜೊತೆ ಇರುವ ಫೋಟೋ ಬಿಡುಗಡೆ ಮಾಡುವಂತೆ ಸವಾಲು ಹಾಕಿದ್ದರು. ಇದೀಗ ಸಂಪತ್ ಸಹೋದರರನ ಮದುವೆಯಲ್ಲಿ ಭಾಗಿಯಾಗಿದ್ದ ಮಾಜಿ ಸಚಿವ ಜೀವಿಜಯ ಫೋಟೋ ರಿಲೀಸ್ ಆಗಿ ಬಿಗ್ ಟ್ವಿಸ್ಟ್ ಸಿಕ್ಕಿದೆ. ಇದನ್ನೂ ಓದಿ: ಮಧ್ಯಾಹ್ನ ಮಾಂಸಾಹಾರ ತಿಂದು ಸಂಜೆ ದೇವಸ್ಥಾನಕ್ಕೆ ಹೋಗಬಾರದಾ : ಸಿದ್ದರಾಮಯ್ಯ ಪ್ರಶ್ನೆ

    ಸಂಪತ್ ಯಾರು ಎನ್ನವುದರ ಬಗ್ಗೆ ಈಗ ಬಿಜೆಪಿ ಮತ್ತು ಕಾಂಗ್ರೆಸ್ ಮಧ್ಯೆ ಜಗಳ ನಡೆಯುತ್ತಿದೆ. ಕಾಂಗ್ರೆಸ್‍ನವರು ಆತ ಬಿಜೆಪಿ ಕಾರ್ಯಕರ್ತ ಎಂದಿದ್ದರೆ ಬಿಜೆಪಿಯವರು ಆತ ಕಾಂಗ್ರೆಸ್ ಕಾರ್ಯಕರ್ತ ಎನ್ನುತ್ತಿದ್ದಾರೆ. ಬಿಜೆಪಿ ನಾಯಕರು ಮೊಟ್ಟೆ ಎಸೆದದ್ದು ಕಾಂಗ್ರೆಸ್ ಕಾರ್ಯಕರ್ತ. ಹೀಗಾಗಿ ಕಾಂಗ್ರೆಸ್ ವಿರುದ್ಧವೇ ಕಾಂಗ್ರೆಸ್ ಪ್ರತಿಭಟನೆ ನಡೆಸುತ್ತಿದ್ದಾರೆ ಎಂದು ಪ್ರತಿಕ್ರಿಯಿಸುತ್ತಿದ್ದಾರೆ. ಇದನ್ನೂ ಓದಿ: ಮಧ್ಯಾಹ್ನ ನಾಟಿ ಕೋಳಿ ಊಟ ಮಾಡಿ ಸಂಜೆ ದೇವಸ್ಥಾನಕ್ಕೆ ಭೇಟಿ ಕೊಟ್ರಾ ಸಿದ್ದರಾಮಯ್ಯ?

    Live Tv
    [brid partner=56869869 player=32851 video=960834 autoplay=true]

  • ದಳ ತೊರೆದು ಕೈ ಹಿಡಿದ ಜೀವಿಜಯ

    ದಳ ತೊರೆದು ಕೈ ಹಿಡಿದ ಜೀವಿಜಯ

    ಬೆಂಗಳೂರು: ಜೆಡಿಎಸ್ ಮುಖಂಡ, ಮಾಜಿ ಸಚಿವ ಜೀವಿಜಯ ಅವರು ಕಾಂಗ್ರೆಸ್‍ಗೆ ಸೇರ್ಪಡೆಯಾಗಿದ್ದರೆ. ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಪಕ್ಷ ಸೇರ್ಪಡೆಯಾಗಿದ್ದಾರೆ.

    ಕಾಂಗ್ರೆಸ್ ಪಕ್ಷದ ಬಾವುಟ ನೀಡುವ ಮೂಲಕ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಪಕ್ಷಕ್ಕೆ ಬರಮಾಡಿಕೊಂಡರು. ಜೀವಿಜಯ ಸೇರ್ಪಡೆ ಆಗುತ್ತಿದ್ದಂತೆ ಕಲಾಪದಲ್ಲಿ ಭಾಗವಹಿಸಲು ಸಿದ್ದರಾಮಯ್ಯ ವಿಧಾನಸೌಧಕ್ಕೆ ತೆರಳಿದರು.

    ಕಾಂಗ್ರೆಸ್ ಸೇರ್ಪಡೆ ಬಳಿಕ ಮಾತನಾಡಿದ ಜೀವಿಜಯ, ನಾನು ಮೊದಲು ಕಾಂಗ್ರೆಸ್ ನಲ್ಲೇ ಇದ್ದವನು. ಈಗ ರಾಜಕೀಯದಲ್ಲಿ ಸಕ್ರೀಯವಾಗಿಲ್ಲ. ಆದರೆ ದೇಶದಲ್ಲಿ ಜಾತ್ಯಾತೀತ ತತ್ವಗಳಿಗೆ ತೊಂದರೆ ಆಗುತ್ತಿದೆ. ನಿನ್ನೆ ಜೆಡಿಎಸ್ ಪಕ್ಷದ ನಿಲುವು ನೋಡಿ ನನಗೆ ರಾತ್ರಿ ನಿದ್ದೆ ಬರಲಿಲ್ಲ. ಜಾತ್ಯಾತೀತ ಅಂತ ಹೇಳಿಕೊಳ್ಳುವ ಪಕ್ಷದ ನಡೆ ನೋಡಿ ನನಗೆ ತೀವ್ರ ಬೇಸರವಾಯಿತು. ಭೂ ಸುಧಾರಣಾ ಕಾಯ್ದೆ ಪಾಸ್ ಮಾಡಲು ಬಿಜೆಪಿಗೆ ಸಹಕರಿಸಿದ ಜೆಡಿಎಸ್ ಟೀಕಿಸಿದರು.

    ಜೀ ವಿಜಯ ಕಾಂಗ್ರೆಸ್ ಸೇರ್ಪಡೆ ಕಾರ್ಯಕ್ರಮದಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಮಾಜಿ ಸಚಿವ ಜಮೀರ್ ಅಹ್ಮದ್ ಖಾನ್, ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮ್ಮದ್ ಉಪಸ್ಥಿತರಿದ್ದರು.

    ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ನನ್ನ ಹೆಸರು ಹೇಳಿಲ್ಲ ಎಂದು ಮಡಕೇರಿ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ರಾಜಾ ರಾವ್ ಎದ್ದು ನಿಂತು ಆಕ್ಷೇಪ ವ್ಯಕ್ತಪಡಿಸಿದರು. ಡಿ.ಕೆ.ಶಿವಕುಮಾರ್ ನನ್ನ ಹೆಸರು ಹೇಳಿಲ್ಲ ಎಂದು ರಾಜಾರಾವ್ ಎದ್ದು ನಿಂತರು. ಬಳಿಕ ಹೆಸರು ಹೇಳಿದ್ದೇವೆ ಎಂದು ನಾಯಕರು ಸಮಾಧಾನ ಮಾಡಿ ಕೂರಿಸಿದರು.