Tag: Jeethu Joseph

  • ದೃಶ್ಯಂ 3 ಸಿನಿಮಾ ಕನ್ಫರ್ಮ್​ – ಕ್ಲೈಮ್ಯಾಕ್ಸ್‌ ಬಗ್ಗೆ ಹೆಚ್ಚಾಯ್ತು ಕುತೂಹಲ

    ದೃಶ್ಯಂ 3 ಸಿನಿಮಾ ಕನ್ಫರ್ಮ್​ – ಕ್ಲೈಮ್ಯಾಕ್ಸ್‌ ಬಗ್ಗೆ ಹೆಚ್ಚಾಯ್ತು ಕುತೂಹಲ

    ಮಲಯಾಳಂ ಸೂಪರ್‌ ಸ್ಟಾರ್ ಮೋಹನ್ ಲಾಲ್ (Mohanlal) ಹಾಗೂ ಖ್ಯಾತ ನಿರ್ದೇಶಕ ಜೀತು ಜೋಸೆಫ್ (Jeethu Joseph), ಬ್ಲಾಕ್‌ಬಸ್ಟರ್ ಕ್ರೈಮ್ ಥ್ರಿಲ್ಲರ್‌ ಸಿನಿಮಾದ 3ನೇ ಭಾಗಕ್ಕೆ ಕೈಜೋಡಿಸಿದ್ದಾರೆ.

     

    View this post on Instagram

     

    A post shared by Mohanlal (@mohanlal)

    ಹೌದು. ದೃಶ್ಯಂ 3 (Drishyam 3) ಸಿನಿಮಾದಲ್ಲಿ ಒಟ್ಟಿಗೆ ಕೆಲಸ ಮಾಡಲಿದ್ದಾರೆ. ಫೆಬ್ರವರಿ 20 ರಂದು ನಿರ್ದೇಶಕ ಜೀತು ಜೋಸೆಫ್ ಮತ್ತು ನಿರ್ಮಾಪಕ ಆಂಥೋನಿ ಪೆರುಂಬವೂರ್ ಅವರೊಂದಿಗೆ ಫೋಟೋ ಹಂಚಿಕೊಳ್ಳುವ ಮೂಲಕ ಮೋಹನ್ ಲಾಲ್ ತಮ್ಮ ಸಿನಿಮಾವನ್ನು ಅಧಿಕೃತವಾಗಿ ಘೋಷಿಸಿದ್ದಾರೆ.

    ಈ ಫೋಟೋವನ್ನು ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡ ನಟ ಮೋಹನ್ ಲಾಲ್, ʻಪಾಸ್ಟ್​ ಎಂದಿಗೂ ಮೌನವಾಗಿರುವುದಿಲ್ಲ. ದೃಶ್ಯಂ 3 ಕನ್ಫರ್ಮ್‌ʼ ಎಂಬ ಕ್ಯಾಪ್ಷನ್​​ ಕೊಟ್ಟಿದ್ದಾರೆ. ಪೋಸ್ಟ್ ಹಂಚಿಕೊಂಡ ಕೂಡಲೇ ಅಭಿಮಾನಿಗಳು ಕಾಮೆಂಟ್‌ಗಳ ವಿಭಾಗದಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಳ್ಳಲು ಶುರು ಮಾಡಿದ್ದಾರೆ. ʻವಾಹ್, ಬಿಗ್ಗೆಸ್ಟ್​ ಬ್ರ್ಯಾಂಡ್ ಸೀಕ್ವೆಲ್ ಈಸ್​ ಬ್ಯಾಕ್​​ (ಫೈಯರ್​ ಎಮೋಜಿಯೊಂದಿಗೆ)ʼ ಎಂದು ಬರೆದುಕೊಂಡಿದ್ದಾರೆ.

    ಮಲಯಾಳಂ ಭಾಷೆಯಲ್ಲಿ ತೆರೆ ಕಂಡು ದೇಶಾದ್ಯಂತ ಸಂಚಲನ ಮೂಡಿಸಿದ್ದ ದೃಶ್ಯಂ 1, 2 ಸಿನಿಮಾ ಬೇರೆ ಭಾಷೆಗಳಿಗೂ ರಿಮೇಕ್‌ ಆಗಿತ್ತು. ಇದೀಗ ಬಾಗ-2 ಯಶಸ್ಸಿನ ಬೆನ್ನಲ್ಲೇ 3ನೇ ಭಾಗವನ್ನ ಬೆಳ್ಳಿ ತೆರೆಗೆ ತರಲು ಚಿತ್ರತಂಡ ಸಜ್ಜಾಗಿದೆ.

  • 5ನೇ ಬಾರಿಗೆ ಒಂದಾಯ್ತು ‘ದೃಶ್ಯಂ ಜೋಡಿ’ : ಮೋಹನ್ ಲಾಲ್ ಹಿಂದೆ ಬಿದ್ದ ಜೀತು

    5ನೇ ಬಾರಿಗೆ ಒಂದಾಯ್ತು ‘ದೃಶ್ಯಂ ಜೋಡಿ’ : ಮೋಹನ್ ಲಾಲ್ ಹಿಂದೆ ಬಿದ್ದ ಜೀತು

    ಲಯಾಳಂ (Malayalam) ಸಿನಿಮಾ ರಂಗದ ಹಿಟ್ ಜೋಡಿ ಎಂದೇ ಕರೆಯಲ್ಪಡುವ ನಿರ್ದೇಶಕ ಜೀತು ಜೋಸೆಫ್ (Jeethu Joseph) ಮತ್ತು ನಟ ಮೋಹನ್ ಲಾಲ್ (Mohanlal) ಮತ್ತೊಂದು ಸಿನಿಮಾ ಮಾಡಲು ಸಿದ್ಧರಾಗಿದ್ದಾರೆ. ಅದೂ ಐದನೇ ಬಾರಿಗೆ ಈ ಜೋಡಿ ಒಂದಾಗುತ್ತಿದ್ದು, ಹೊಸ ಸಿನಿಮಾದ *New Movie) ಘೋಷಣೆ ಈಗಷ್ಟೇ ಆಗಿದೆ. ಸದ್ಯ ಪ್ರೊಡಕ್ಷನ್ 33 ಎನ್ನುವ ಹೆಸರಿನಲ್ಲಿ ಕೆಲಸಗಳು ಆರಂಭವಾಗಿವೆ.

    ಮೋಹನ್ ಲಾಲ್ ಅವರಿಗಾಗಿಯೇ ನಿರ್ದೇಶಕ ಜೀತು ‘ದೃಶ್ಯಂ’ ಕಥೆಗಳನ್ನು ಬರೆದರು. ದೃಶ್ಯಂ 1 ಮತ್ತು ದೃಶ್ಯಂ 2 ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದವು. ಕೇವಲ ಮಲಯಾಳಂ ಸಿನಿಮಾ ರಂಗ ಮಾತ್ರವಲ್ಲ ಅನೇಕ ಭಾಷೆಗಳಲ್ಲಿ ಈ ಸಿನಿಮಾ ಡಬ್ ಆಯಿತು. ಕನ್ನಡದಲ್ಲೂ ಈ ಸಿನಿಮಾ ರೀಮೇಕ್ ಆಯಿತು. ಈಗ ಹಿಟ್ ಜೋಡಿಯೇ ಮತ್ತೊಂದು ಸಿನಿಮಾ ಮಾಡಲು ಹೊರಟಿದೆ. ಇದು ದೃಶ್ಯಂ ಭಾಗ 3ನಾ ಅಥವಾ ಬೇರೆ ಸಿನಿಮಾನಾ ಎನ್ನುವುದು ಗೊತ್ತಾಗಬೇಕಿದೆ. ಇದನ್ನೂ ಓದಿ:ಗಂಡು ಮಗುವಿಗೆ ಜನ್ಮ ನೀಡಿದ ರಾಧಿಕಾ ರಾವ್

    ಈ ಹೊಸ ಸಿನಿಮಾಗೆ ದೃಶ್ಯಂ ಚಿತ್ರಗಳನ್ನು ನಿರ್ಮಾಣ ಮಾಡಿದ ಸಂಸ್ಥೆಯೇ ಹಣ ಹೂಡುತ್ತಿದ್ದು, ಇನ್ನಷ್ಟೇ ತಾರಾಗಣ ಮತ್ತು ಇತರ ಸಂಗತಿಗಳು ಹೊರ ಬರಬೇಕಿವೆ. ನಿರ್ಮಾಣ ಸಂಸ್ಥೆಯು ಹೊಸ ಸಿನಿಮಾದ ಪೋಸ್ಟರ್ ಹಂಚಿಕೊಳ್ಳುತ್ತಿದ್ದಂತೆಯೇ ಮೋಹನ್ ಲಾಲ್ ಅಭಿಮಾನಿಗಳು ಸಂಭ್ರಮಿಸಿದ್ದಾರೆ. ಮತ್ತೊಂದು ಹಿಟ್ ಸಿನಿಮಾ ಗ್ಯಾರಂಟಿ ಎಂದು ಚೆಪ್ಪಾಳೆ ತಟ್ಟಿದ್ದಾರೆ. ಅಷ್ಟರ ಮಟ್ಟಿಗೆ ಈ ಜೋಡಿ ಮಲಯಾಳಂ ಸಿನಿಮಾ ರಂಗದಲ್ಲಿ ಮೋಡಿ ಮಾಡಿದೆ.

    ಸದ್ಯ ಸಿನಿಮಾದ ಪೋಸ್ಟರ್ ಮಾತ್ರ ರಿಲೀಸ್ ಆಗಿದ್ದು, ಆಗಸ್ಟ್ ನಿಂದ ಚಿತ್ರೀಕರಣ ಪ್ರಾರಂಭಿಸಲಿದೆಯಂತೆ ಚಿತ್ರತಂಡ. ಅದಕ್ಕೂ ಮುನ್ನ ಜೀತು ತಮ್ಮ ಕೈಯಲ್ಲಿನ ಸಿನಿಮಾ ಮುಗಿಸಬೇಕಿದೆ. ಈ ಬಾರಿ ಯಾವ ರೀತಿಯ ಕಥೆಯನ್ನು ಆಯ್ಕೆ ಮಾಡಿಕೊಂಡಿದ್ದಾರೆ ಎಂದು ಹೇಳದ ಜೀತು, ಹೊಸ ರೀತಿಯ ಸಿನಿಮಾದ ಭರವಸೆಯನ್ನು ಮಾತ್ರ ನೀಡಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]