Tag: Jeans pant

  • ವಿಶ್ವದ ಅತ್ಯಂತ ಹಳೆಯ ಜೀನ್ಸ್‌ಪ್ಯಾಂಟ್‌ 94 ಲಕ್ಷಕ್ಕೆ ಸೇಲ್

    ವಿಶ್ವದ ಅತ್ಯಂತ ಹಳೆಯ ಜೀನ್ಸ್‌ಪ್ಯಾಂಟ್‌ 94 ಲಕ್ಷಕ್ಕೆ ಸೇಲ್

    ವಾಷಿಂಗ್ಟನ್: ಜೀನ್ಸ್ ಪ್ಯಾಂಟ್ (Jeans Pant) ಅಂದ್ರೆ ಯಾರಿಗೆ ತಾನೆ ಇಷ್ಟವಿಲ್ಲ. ಇಂದಿನ ಯುವಕ-ಯುವತಿಯರಿಗೆ ಟ್ರೆಂಡಿಯಾದ ಜೀನ್ಸ್ ಧರಿಸೋದು ಗೀಳಾಗಿಬಿಟ್ಟಿದೆ. ಅದಕ್ಕಾಗಿ ಸಾವಿರಾರು ರೂ.ಗಳನ್ನ ಕೊಟ್ಟು ಖರೀದಿಸುತ್ತಾರೆ. ಆದ್ರೆ ವಿಶ್ವದ ಹಳೆಯ ಜೀನ್ಸ್‌ಪ್ಯಾಂಟ್‌ವೊಂದನ್ನು ಲಕ್ಷ ಲಕ್ಷ ಕೊಟ್ಟು ಖರೀದಿರುವ ಅಚ್ಚರಿ ವಿಷಯ ಬೆಳಕಿಗೆ ಬಂದಿದೆ.

    ಹೌದು. ಶತಮಾನಗಳಿಂದಲೂ, ಲೆಕ್ಕವಿಲ್ಲದಷ್ಟು ಪ್ರಸಿದ್ಧ ಕಲಾಕೃತಿಗಳನ್ನು ತಜ್ಞರು ಕಂಡುಹಿಡಿದಿದ್ದಾರೆ. ಅವು ಹಿಂದಿನ ಯುಗದ ನೋಟವನ್ನು ತೆರೆದಿಡುತ್ತವೆ. ವರ್ಷ ಕಳೆದಂತೆ ಐತಿಹಾಸಿಕ ಕಲಾಕೃತಿಗಳ ಮೌಲ್ಯ ಹೆಚ್ಚಾಗುತ್ತದೆ. ಪ್ರಸ್ತುತ ಮಾರುಕಟ್ಟೆಯಲ್ಲಿ ದುಬಾರಿ ಬೆಲೆಗೆ ಮಾರಾಟವಾಗುತ್ತವೆ. ಹಾಗೆಯೇ 1857ರಲ್ಲಿ ಉತ್ತರ ಕೆರೊಲಿನಾದ ಕರಾವಳಿಯಲ್ಲಿ ಸಂಭವಿಸಿದ ಹಡಗು ದುರಂತದಲ್ಲಿ ಕಳೆದುಹೋಗಿದ್ದ ಜೀನ್ಸ್‌ಪ್ಯಾಂಟ್‌ವೊಂದು (Jeans Pant) ಪತ್ತೆಯಾಗಿದೆ. ಇದನ್ನು ವಿಶ್ವದ ಹಳೆಯ ಜೀನ್ಸ್‌ಪ್ಯಾಂಟ್‌ ಎಂದು ಗುರುತಿಸಲಾಗಿದ್ದು, 94 ಲಕ್ಷ ರೂ.ಗಳಿಗೆ (1,14,000 US Dollars) ಮಾರಾಟ ಮಾಡಲಾಗಿದೆ. ಇದನ್ನೂ ಓದಿ: ಸಂವಿಧಾನ ಉಳಿಸಲು ಮೋದಿ ಹತ್ಯೆ ಮಾಡಿ – ಕಾಂಗ್ರೆಸ್ ಮಾಜಿ ಸಚಿವ ವಿವಾದಾತ್ಮಕ ಹೇಳಿಕೆಗೆ ಆಕ್ರೋಶ

    1857ರ ಸೆಪ್ಟೆಂಬರ್‌ನಲ್ಲಿ 425 ಜನರಿದ್ದ ಶಿಪ್ ಆಫ್ ಗೋಲ್ಡ್ ಹಡಗು ಪನಾಮದಿಂದ ನ್ಯೂಯಾರ್ಕ್‌ಗೆ ಪ್ರಯಾಣಿಸುತ್ತಿದ್ದ ವೇಳೆ ಚಂಡಮಾರುತಕ್ಕೆ ಸಿಕ್ಕಿ ಮುಳುಗಿತ್ತು. ಈ ವೇಳೆ ಹಡಗಿನಲ್ಲೇ ಸಿಲುಕಿದ್ದ ಟ್ರಂಕ್‌ವೊಂದರಲ್ಲಿ ಹಳೆಯ ಜೀನ್ಸ್ಪ್ಯಾಂಟ್ ಇದ್ದಿದ್ದನ್ನು ಎಸ್‌ಎಸ್ ಸೆಂಟ್ರಲ್ ಅಮೆರಿಕಾ ಪತ್ತೆಮಾಡಿದೆ. ಒರೆಗಾನ್‌ನ ಮೆಕ್ಸಿಕನ್-ಅಮೆರಿಕ ಯುದ್ಧದ (Mexican-American War) ಅನುಭವಿ ಜಾನ್ ಡಿಮೆಂಟ್‌ಗೆ ಸೇರಿದ್ದ ಟ್ರಂಕ್‌ನಲ್ಲಿ ಪ್ಯಾಂಟ್ ಪತ್ತೆಯಾಗಿದೆ. ಇದನ್ನೂ ಓದಿ: ಮಹಾರಾಷ್ಟ್ರ ಮಾಜಿ ಸಚಿವ ದೇಶ್‌ಮುಖ್‌ ಜಾಮೀನು ನೀಡಿ ಕೆಲ ಹೊತ್ತಲ್ಲೇ ತಡೆ ಹಿಡಿದ ಬಾಂಬೆ ಕೋರ್ಟ್‌

    ಕಳೆದ ವಾರ ಕೆನಡಾದ ರೆನೋವಾದಲ್ಲಿ 270 ಗೋಲ್ಡ್ ರಶ್-ಯುಗದ ಕಲಾಕೃತಿಗಳೊಂದಿಗೆ ಪ್ರದರ್ಶಿಸಲಾಗಿತ್ತು. ವಿಶ್ವದ ಜನಪ್ರಿಯ ಜೀನ್ಸ್ ತಯಾರಕರಲ್ಲಿ ಒಬ್ಬರಾದ ಲೆವಿಸ್ಟ್ರಾಸ್ ಈ ಪ್ಯಾಂಟ್ ಅನ್ನು ತಯಾರಿಸಿದ್ದಾರೆ ಎನ್ನಲಾಗಿದೆ. ಆದ್ರೆ ಈ ಪ್ಯಾಂಟ್ ಲೆವಿಗಿಂತಲೂ 16 ವರ್ಷ ಹಳೆಯದ್ದಾಗಿದೆ. ಸ್ಯಾನ್ ಫ್ರಾನ್ಸಿಸ್ಕೋ ಮೂಲದ ಲೆವಿಸ್ಟ್ರಾಸ್ 1873 ರಲ್ಲಿ ಮೊದಲಿಗೆ ಪ್ಯಾಂಟ್ ಸಿದ್ಧಮಾಡಿದ್ದರು ಎಂದು ವರದಿಗಳು ಹೇಳಿವೆ.

    Live Tv
    [brid partner=56869869 player=32851 video=960834 autoplay=true]

  • ನಾನೂ ಗೂಂಡಾಗಿರಿ ಮಾಡ್ತಿದ್ದೆ, ಜೀನ್ಸ್ ಪ್ಯಾಂಟ್ ಹಾಕ್ಕೊಂಡ್ರೆ ಹುಡ್ಗೀರೆಲ್ಲಾ ನನ್ನೇ ನೋಡ್ತಿದ್ರು: ಶ್ರೀರಾಮುಲು

    ನಾನೂ ಗೂಂಡಾಗಿರಿ ಮಾಡ್ತಿದ್ದೆ, ಜೀನ್ಸ್ ಪ್ಯಾಂಟ್ ಹಾಕ್ಕೊಂಡ್ರೆ ಹುಡ್ಗೀರೆಲ್ಲಾ ನನ್ನೇ ನೋಡ್ತಿದ್ರು: ಶ್ರೀರಾಮುಲು

    ಬಳ್ಳಾರಿ: ಮೊದಲು ನಾನೂ ಗೂಂಡಾಗಿರಿ ಮಾಡ್ತಿದ್ದೆ, ತುಂಬಾ ಜಗಳ ಮಾಡ್ತಿದ್ದೆ. ಬಡವರಿಗೆ ಯಾರಾದ್ರೂ ತೊಂದರೆ ಕೊಟ್ಟಾಗ ಮಾತ್ರ ಗೂಂಡಾಗಿರಿ ಮಾಡುತ್ತಾ, ಅವರ ಪರವಾಗಿ ನಿಲ್ಲುತ್ತಿದೆ. ಬಡವರ ಪರವಾಗಿ ನಿಂತು ಜಗಳವಾಡಿ 14-15 ಬಾರಿ ಜೈಲಿಗೂ ಹೋಗಿದ್ದೆ ಎಂದು ಸಚಿವ ಶ್ರೀರಾಮುಲು (Sriramulu) ಹಳೆಯ ನೆನಪುಗಳನ್ನು ಮೆಲುಕು ಹಾಕಿದರು.

    ವೀರಶೈವ ವಿದ್ಯಾವರ್ಧಕ ಸಂಘದ ಎಸ್‌ಜಿ ಕಾಲೇಜಿನ (SG College) ಅಮೃತ ಮಹೋತ್ಸವ ಮತ್ತು ದಾನಿಗಳ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಇದನ್ನೂ ಓದಿ: Breaking News- ಅನಿರುದ್ಧ ಬ್ಯಾನ್ ವಿಚಾರ: ಫಿಲ್ಮ್ ಚೇಂಬರ್ ಗೆ ಬಾರದಿರಲು ನಿರ್ಮಾಪಕರ ಸಂಘ ನಿರ್ಧಾರ

    ನಾನೂ ಗೂಂಡಾಗಿರಿ ಮಾಡ್ತಿದ್ದೆ. ಯಾರಾದರೂ ಬಡವರಿಗೆ ತೊಂದರೆ ಕೊಟ್ಟಾಗ ಮಾತ್ರ ಅವರ ಪರವಾಗಿ ನಿಂತು ಜಗಳವಾಡುತ್ತಿದೆ. ಅದಕ್ಕಾಗಿ ಜೈಲಿಗೂ ಹೋಗಿ ಬಂದಿದ್ದೇನೆ. ನಮ್ಮಪ್ಪ ವಕೀಲರ (Lawyer) ಬಳಿ ಬೇಲ್ ಕೇಳೋದಕ್ಕೆ ಹೋದಾಗಲೆಲ್ಲಾ ಎಷ್ಟು ಬಾರಿ ಬೇಲ್ ಕೊಡಬೇಕು ಅವನಿಗೆ ಎಂದು ಸಿಡಿಮಿಡಿಗೊಳ್ಳುತ್ತಿದ್ದರು. ಅಲ್ಲದೇ ನಿಮ್ಮಪ್ಪನಿಂದಲೇ ನಾನು ದುಡಿಯೋದಕ್ಕೆ ಹೋಗ್ತಿದ್ದೀನಿ ಅಂತ ವಕೀಲರು ನನ್ನ ಬಳಿ ಹೇಳ್ತಿದ್ದರು. ಇಂತಹ ನೆನಪುಗಳನ್ನು ನಾವು ಮರೆಯಬಾರದು ಎಂದು ಮುಗುಳ್ನಕ್ಕರು. ಇದನ್ನೂ ಓದಿ: ಜನಾರ್ದನ ರೆಡ್ಡಿ ನನ್ನ ಆಪ್ತಮಿತ್ರ, ಸ್ನೇಹಕ್ಕಾಗಿ ಪ್ರಾಣ ಕೊಡಲು ಸಿದ್ಧ: ಶ್ರೀರಾಮುಲು

    ನಾನು ಜೀನ್ಸ್‌ಪ್ಯಾಂಟ್‌ (Jeans Pant) ಹಾಕಿಕೊಂಡು ಹೋದ್ರೆ ಹುಡುಗೀರೆಲ್ಲಾ ನನ್ನನ್ನೇ ನೋಡ್ತಿದ್ರು. ಆದ್ರೆ ನಾನು ಬೇರೆಕಡೆ ಹೋಗಿ ಮಾತನಾಡುತ್ತಿರಲಿಲ್ಲ. ನಮ್ಮೂರಿನಲ್ಲಿ ಮಾತ್ರ ಮಾತನಾಡುತ್ತಿದೆ. ನೀವೇ ಹೇಳಿ ನಾನು ಮಾತನಾಡಿದ್ದು ತಪ್ಪಾ? ಎಂದು ಸಭೀಕರನ್ನೇ ಪ್ರಶ್ನಿಸಿದರು.

    ನಾನು ಪರೀಕ್ಷೆಯಲ್ಲಿ ಕಾಪಿ ಹೊಡೆದು ಪಾಸಾಗಿದ್ದೇನೆ, ಕಾಪಿ ಹೊಡೆಯುವುದಲ್ಲಿ ಪಿಹೆಚ್‌ಡಿ (PHD) ಮಾಡಿದ್ದೇನೆ ಎಂದು ಮನಬಿಚ್ಚಿ ಮಾತನಾಡಿದ ಶ್ರೀರಾಮುಲು ತಮ್ಮ ಶಿಕ್ಷಕರನ್ನು ಸ್ಮರಿಸಿದರು.

    Live Tv
    [brid partner=56869869 player=32851 video=960834 autoplay=true]

  • ಬುರ್ಕಾ ಬದಲು ಜೀನ್ಸ್ ಪ್ಯಾಂಟ್ ಧರಿಸಿದ್ದ ಯುವತಿಯನ್ನು ಅಂಗಡಿಯಿಂದ ಹೊರ ಹಾಕಿದ ಮಾಲೀಕ

    ಬುರ್ಕಾ ಬದಲು ಜೀನ್ಸ್ ಪ್ಯಾಂಟ್ ಧರಿಸಿದ್ದ ಯುವತಿಯನ್ನು ಅಂಗಡಿಯಿಂದ ಹೊರ ಹಾಕಿದ ಮಾಲೀಕ

    ದಿಸ್ಪುರ: ಬುರ್ಕಾ ಬದಲು ಜೀನ್ಸ್ ಪ್ಯಾಂಟ್ ಧರಿಸಿದ್ದಕ್ಕೆ ಮುಸ್ಲಿಂ ಯುವತಿಯನ್ನು ಅಂಗಡಿಯ ಮಾಲೀಕ ಹೊರ ಹಾಕಿರುವ ಘಟನೆ ಅಸ್ಸಾಂನಲ್ಲಿ ನಡೆದಿದೆ.

    ಮುಸ್ಲಿಂ ಸಮುದಾಯದ ಯುವತಿ ಜೀನ್ಸ್ ಪ್ಯಾಂಟ್ ಧರಿಸಿದ್ದಾಳೆ ಎನ್ನುವ ಕಾರಣಕ್ಕೆ ಆಕೆಯನ್ನು ಅಂಗಡಿಯಿಂದ ಮಾಲೀಕ ಹೊರಹಾಕಿದ್ದಾನೆ. ಬುರ್ಕಾ ಏಕೆ ಧರಿಸಿಲ್ಲ, ಜೀನ್ಸ್ ಪ್ಯಾಂಟ್ ಯಾಕೆ ಹಾಕಿಕೊಂಡಿದ್ದೀಯ ಎಂದು ಆಕೆಗೆ ಅಂಗಡಿಯ ಮಾಲೀಕ ಪ್ರಶ್ನೆ ಮಾಡಿದ್ದಾನೆ. ಇದನ್ನೂ ಓದಿ: ಪುನೀತ್ ಓದಿಸುತ್ತಿದ್ದ 1,800 ಮಕ್ಕಳ ಜವಾಬ್ದಾರಿ ಹೊತ್ತ ನಟ ವಿಶಾಲ್

    ಅಸ್ಸಾಂನ ಬಿಸ್ವನಾಥ್ ಚರಿಯಾಲಿಯಲ್ಲಿರುವ ಎಲೆಕ್ಟ್ರಾನಿಕ್ಸ್ ಅಂಗಡಿಗೆ 22 ವರ್ಷದ ಯುವತಿ ಇಯರ್‌ಫೋನ್ ಖರೀದಿಸಲು ಎಲೆಕ್ಟ್ರಾನಿಕ್ಸ್ ಅಂಗಡಿಗೆ ಹೋಗಿದ್ದಾರೆ. ಆದರೆ ಆಕೆಗೆ ಇಯರ್‌ಫೋನ್ ಮಾರಾಟ ಮಾಡಲು ಅಗಂಗಡಿ ಮಾಲೀಕ ಮಾಲೀಕ ನೂರುಲ್ ಅಮೀನ್ ನಿರಾಕರಿಸಿದ್ದಾನೆ. ಆಕೆ ಜೀನ್ಸ್ ಪ್ಯಾಂಟ್ ಧರಿಸಿದ್ದಕ್ಕಾಗಿ ಅನುಚಿತವಾಗಿ ವರ್ತಿಸಿದ್ದಾನೆ. ಅಲ್ಲದೆ, ಬುರ್ಕಾ ಧರಿಸುವಂತೆ ಅಂಗಡಿಯ ಮಾಲೀಕರು ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ. ಈ ಘಟನೆಯ ನಂತರ, ಯುವತಿಯ ತಂದೆ ತನ್ನ ಮಗಳೊಂದಿಗೆ ತೋರಿದ ವರ್ತನೆಯನ್ನ ಪ್ರಶ್ನಿಸಿಲು ಎಲೆಕ್ಟ್ರಾನಿಕ್ಸ್ ಸ್ಟೋರ್‌ಗೆ ಭೇಟಿ ನೀಡಿದ್ದರು. ಆದರೆ ಅವರೊಂದಿಗೂ ಅಂಗಡಿಯ ಮಾಲೀಕ ನೂರುಲ್‍ನ ಪುತ್ರ ರಫಿಕುಲ್ ಇಸ್ಲಾಂ ಅಮಾನುಷವಾಗಿ ನಡೆಸಿಕೊಂಡಿದ್ದು, ಹಲ್ಲೆಗೆ ಯತ್ನಿಸಿದ್ದಾರೆ ಎಂದು ತಿಳಿದುಬಂದಿದೆ. ಇದನ್ನೂ ಓದಿ: ನಾಲ್ವರ ಬಾಳಿಗೆ ಬೆಳಕಾದ ಅಪ್ಪು

    ಈ ಸಂಬಂಧ, ಯುವತಿಯ ತಂದೆ ಹಾಗೂ ಸಂತ್ರಸ್ತೆ ಯುವತಿ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಬಿಸ್ವನಾಥ್ ಪೊಲೀಸರು ಆರೋಪಿ ನೂರುಲ್ ಅಮೀನ್ ಮತ್ತು ಅವರ ಮಗ ರಫಿಕುಲ್ ಅವರನ್ನು ವಶಕ್ಕೆ ಪಡೆದಿದ್ದಾರೆ.

  • ಟೀ ಶರ್ಟ್, ಜೀನ್ಸ್ ಪ್ಯಾಂಟ್ ತೊಟ್ಟಳೆಂದು ಹುಡುಗಿಯ ಕೊಲೆ ಮಾಡಿದ್ರು!

    ಟೀ ಶರ್ಟ್, ಜೀನ್ಸ್ ಪ್ಯಾಂಟ್ ತೊಟ್ಟಳೆಂದು ಹುಡುಗಿಯ ಕೊಲೆ ಮಾಡಿದ್ರು!

    ಲಕ್ನೋ: ಆಧುನಿಕ ಜಗತ್ತಿನಲ್ಲಿ ಯುವತಿಯರು ಜೀನ್ಸ್ ಪ್ಯಾಂಟ್, ಟೀ ಶರ್ಟ್ ತೊಡುವುದು ಸಾಮಾನ್ಯವಾಗಿದೆ. ಆದರೆ ಕೆಲವೆಡೆಗಳಲ್ಲಿ ಇನ್ನೂ ಜನರು ಇದನ್ನು ವಿರೋಧಿಸುತ್ತಾರೆ. ಇದೀಗ ಜೀನ್ಸ್, ಟಿ- ಶರ್ಟ್ ಧರಿಸಿದಳೆಂದು ಹುಡುಗಿಯೊಬ್ಬಳನ್ನು ಕೊಲೆಗೈದ ಅಚ್ಚರಿಯ ಘಟನೆಯೊಂದು ಉತ್ತರಪ್ರದೇಶದಲ್ಲಿ ನಡೆದಿದೆ.

    ಮೃತಳನ್ನು ನೇಹಾ (16) ಎಂದು ಗುರುತಿಸಲಾಗಿದೆ. ಈ ಘಟನೆ ಉತ್ತರಪ್ರದೇಶದ ದೇವಾರಿಯಾ ಪ್ರದೇಶದಲ್ಲಿ ನಡೆದಿದೆ. ಈಕೆ ವಿದ್ಯಾಭ್ಯಾಸ ಹಿನ್ನೆಲೆಯಲ್ಲಿ ಲೂಧಿಯಾನದಲ್ಲಿ ನೆಲೆಸಿದ್ದಳು. ಹೀಗಾಗಿ ಅಲ್ಲಿ ಎಲ್ಲರಂತೆ ನೇಹಾ ಕೂಡ ಜೀನ್ಸ್, ಟೀ ಶರ್ಟ್ ಧರಿಸುತ್ತಿದ್ದಳು.

    ಲೂಧಿಯಾನದಲ್ಲಿ ಧರಿಸಿ ಅಭ್ಯಾಸವಿದ್ದ ನೇಹಾ ತಮ್ಮ ಮನೆಗೆ ಬಂದ ಸಂದರ್ಭದಲ್ಲಿಯೂ ಜೀನ್ಸ್, ಟೀ ಶರ್ಟ್ ಹಾಕಿದ್ದಾಳೆ. ಈ ವೇಳೆ ಮನೆಯಲ್ಲಿ ಇಂತಹ ಬಟ್ಟೆಗಳನ್ನು ಹಾಕಿಕೊಳ್ಳಬೇಡ ಎಂದು ನೇಹಾ ಚಿಕ್ಕಪ್ಪ ಹಾಗೂ ಅಜ್ಜ ವಾರ್ನ್ ಮಾಡಿದ್ದಾರೆ. ಈ ವಿಚಾರದಲ್ಲಿ ಮನೆಯಲ್ಲಿ ಗದ್ದಲವೇ ನಡೆದಿದೆ.

    ಜಗಳವಾಗಿ ಕೆಲ ಹೊತ್ತಿನ ಬಳಿಕ ಊರ ಹೊರಗೆ ಸೇತುವೆಯ ಬಳಿ ನೇಣು ಬಿಗಿದುಕೊಂಡ ರೀತಿಯಲ್ಲಿ ನೇಹಾ ಶವವವಾಗಿ ಪತ್ತೆಯಾಗಿದ್ದಾಳೆ. ಹುಡುಗಿ ಶವ ನೋಡಿದ ಸ್ಥಳೀಯರು ಕೂಡಲೇ ಪೊಲೀಸರಿಗೆ ಮಾಹಿತಿ ರವಾನಿಸಿದ್ದಾರೆ. ಅಂತೆಯೇ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಯಾರೋ ಕೊಲೆ ಮಾಡಿ ನೇತು ಹಾಕಿದ್ದಾರೆ ಎಂದು ಶಂಕೆ ವ್ಯಕ್ತಪಡಿಸಿದ್ದಾರೆ.

    ಇತ್ತ ಹುಡುಗಿಯ ತಾಯಿ ಪೊಲೀಸರಿಗೆ ದೂರು ನೀಡಿದ್ದಾರೆ. ದೂರಿನಲ್ಲಿ ನಾನು ಮನೆಯಲ್ಲಿ ಇಲ್ಲದ ವೇಳೆ ನನ್ನ ಮಗಳನ್ನು ಚಿಕ್ಕಪ್ಪ ಹಾಗೂ ಆಕೆಯ ಅಜ್ಜ ಸೇರಿ ಕೊಲೆ ಮಾಡಿದ್ದಾರೆ. ಬಳಿಕ ಅವರೇ ಮಗಳ ಶವವನ್ನು ಇಲ್ಲಿ ಎಸೆದಿದ್ದಾರೆ ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: ಬದುಕಿರುವುದಕ್ಕಾಗಿ ನಾನು ಅದೃಷ್ಟವಂತೆ: ಶಿಲ್ಪಾ ಶೆಟ್ಟಿ

    ತಾಯಿ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

  • ಶಾಲೆಗೆ ಜೀನ್ಸ್ ಪ್ಯಾಂಟ್ ಧರಿಸಿ ಬಂದ ವಿದ್ಯಾರ್ಥಿಗೆ ನಡೆದಾಡಲೂ ಆಗದಂತೆ ಕತ್ತರಿಯಿಂದ ಗಾಯಗೊಳಿಸಿದ್ರು!

    ಶಾಲೆಗೆ ಜೀನ್ಸ್ ಪ್ಯಾಂಟ್ ಧರಿಸಿ ಬಂದ ವಿದ್ಯಾರ್ಥಿಗೆ ನಡೆದಾಡಲೂ ಆಗದಂತೆ ಕತ್ತರಿಯಿಂದ ಗಾಯಗೊಳಿಸಿದ್ರು!

    ಲಕ್ನೋ: 11ನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿ ಯೂನಿಫಾರ್ಮ್ ಬದಲಾಗಿ ಜೀನ್ಸ್ ಪ್ಯಾಂಟ್ ಧರಿಸಿದ್ದಕ್ಕೆ ಶಾಲಾ ಆಡಳಿತ ಮಂಡಳಿ ಕತ್ತರಿ ಹಾಕಿದೆ. ಶಾಲಾ ಸಿಬ್ಬಂದಿ ಪ್ಯಾಂಟ್ ಕತ್ತರಿಸುವ ವೇಳೆ ವಿದ್ಯಾರ್ಥಿ ಕಾಲಿಗೆ ಗಾಯವಾಗಿದ್ದು, ನಡೆದಾಡಲು ಆಗುತ್ತಿಲ್ಲ.

    ಉತ್ತರ ಪ್ರದೇಶ ರಾಜ್ಯದ ಕಾನ್ಪುರನ ಸಿಕಂದರ್ ಪಟ್ಟಣದಲ್ಲಿ ಈ ಘಟನೆ ನಡೆದಿದೆ. ವಿದ್ಯಾರ್ಥಿ ಜೀನ್ಸ್ ಪ್ಯಾಂಟ್ ಧರಿಸಿ ಪರೀಕ್ಷೆಗೆ ಹಾಜರಾಗಿದ್ದಾನೆ. ಸಮವಸ್ತ್ರ ಧರಿಸದೇ ವಿದ್ಯಾರ್ಥಿ ಪರೀಕ್ಷೆಗೆ ಹಾಜರಾಗಿದ್ದರಿಂದ ಕೋಪಗೊಂಡ ಶಾಲಾ ಆಡಳಿತ ಮಂಡಳಿ ಕತ್ತರಿಯಿಂದ ಪ್ಯಾಂಟ್ ನ್ನು ತೊಡೆಯ ಭಾಗದವರೆಗೂ ಕತ್ತರಿಸಿದ್ದಾರೆ. ಈ ವೇಳೆ ಪ್ಯಾಂಟ್ ಕತ್ತರಿಸುವಾಗ ವಿದ್ಯಾರ್ಥಿಯ ತೊಡೆಯ ಭಾಗಕ್ಕೆ ಕತ್ತರಿ ತಗುಲಿ ಗಾಯವಾಗಿದೆ.

    ಶಾಲೆಯ ಸಿಬ್ಬಂದಿ ನನ್ನ ಮಗನ ಮಾತನ್ನು ಕೇಳದೇ ಪ್ಯಾಂಟ್ ಕಟ್ ಮಾಡಿದ್ದಾರೆ. ಈ ವೇಳೆ ಕತ್ತರಿ ನನ್ನ ಮಗನ ತೊಡೆಯ ಭಾಗಕ್ಕೆ ತಗುಲಿದೆ. ಸಮವಸ್ತ್ರ ಧರಿಸದ ಕಾರಣ ನನ್ನ ಮಗನನ್ನು ಮನೆಗೆ ಕಳುಹಿಸಲಾಗಿದೆ. ಶಾಲಾ ಆಡಳಿತ ಮಂಡಳಿಯ ಈ ವರ್ತನೆ ತಪ್ಪು ಎಂದು ವಿದ್ಯಾರ್ಥಿ ತಂದೆ ವಿನೋದ್ ಪಾಲ್ ಹೇಳಿದ್ದಾರೆ.

    ಈ ಸಂಬಂಧ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.