Tag: je

  • JE ಮೇಲೆ ಪವರ್ ಮ್ಯಾನ್ ಹಲ್ಲೆ

    JE ಮೇಲೆ ಪವರ್ ಮ್ಯಾನ್ ಹಲ್ಲೆ

    ಹಾಸನ: ವಿದ್ಯುತ್ ಮೀಟರ್ ಬೋರ್ಡ್ ಅಳವಡಿಕೆಯಲ್ಲಿ ಲೋಪ ಆಗಿದ್ದನ್ನು ಪ್ರಶ್ನಿಸಿದ್ದಕ್ಕೆ ಜೆಇ ಮೇಲೆ ಲೈನ್‍ಮ್ಯಾನ್ (ಪವರ್ ಮ್ಯಾನ್) ಹಲ್ಲೆ ನಡೆಸಿರುವ ಘಟನೆ ಹಾಸನದಲ್ಲಿ ನಡೆದಿದೆ.

    ಹಗರೆ ಸೆಸ್ಕಾಂ ಶಾಖೆಯ ಕೃಷ್ಣ ಹಲ್ಲೆಗೊಳಗಾದ ಕಿರಿಯ ಇಂಜಿನಿಯರ್. ವಿದ್ಯುತ್ ಮೀಟರ್ ಬೋರ್ಡ್ ಕಳೆದು ಹಾಕಿ, ಜ್ಯೂನಿಯರ್ ಲೈನ್ ಮ್ಯಾನ್ ಬೇರೆ ಮೀಟರ್ ಬೋರ್ಡ್ ಅಳವಡಿಸಿದ್ದ. ಈ ಬಗ್ಗೆ ದೂರು ಬಂದ ಕಾರಣ, ಪರಿಶೀಲನೆ ನಡೆಸಿದಾಗ ಬೇರೆ ಮೀಟರ್ ಬೋರ್ಡ್ ಅಳವಡಿಸಿರುವುದು ಬಯಲಿಗೆ ಬಂದಿತ್ತು. ಹೀಗಾಗಿ ಕಳೆದು ಹಾಕಿರುವ ಮೀಟರ್ ಬೋರ್ಡ್ ತಂದುಕೊಡುವಂತೆ ಜೆಇ ಕೃಷ್ಣ ಸೂಚನೆ ನೀಡಿದ್ದರು. ಇದನ್ನೂ ಓದಿ: 3 ಸಾವಿರ ಲೀಟರ್ ಮದ್ಯವನ್ನ ಕಾಲುವೆಗೆ ಸುರಿದ ತಾಲಿಬಾನ್

    ಮೀಟರ್ ಬೋರ್ಡ್ ಕೊಡುತ್ತೇನೆ ಎಂದು ಕರೆಸಿಕೊಂಡ ಲೈನ್‍ಮ್ಯಾನ್ ಬಳಿಕ ಕಿರಿಯ ಇಂಜಿನಿಯರ್ ಮೇಲೆ ಕಲ್ಲಿನಿಂದ ಹಲ್ಲೆ ಮಾಡಿದ್ದಾನೆ. ಕೂಡಲೇ ಕುಸಿದು ಬಿದ್ದ ಕೃಷ್ಣರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು. ಈ ಸಂಬಂಧ ಹಳೇಬೀಡು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ:  ಸಕ್ಕರೆ ಕಾರ್ಖಾನೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಚಾಲಕನ ಮಗ ಇಂದು IPS ಅಧಿಕಾರಿ

  • ಹಿರಿಯ ಅಧಿಕಾರಿಗಳ ಕಿರುಕುಳ ಆರೋಪ: ಜೆಸ್ಕಾಂ ಜೆಇ ಆತ್ಮಹತ್ಯೆಗೆ ಯತ್ನ

    ಹಿರಿಯ ಅಧಿಕಾರಿಗಳ ಕಿರುಕುಳ ಆರೋಪ: ಜೆಸ್ಕಾಂ ಜೆಇ ಆತ್ಮಹತ್ಯೆಗೆ ಯತ್ನ

    – ಡೆತ್ ನೋಟ್ ಬರೆದಿಟ್ಟು ವಿಷ ಸೇವಿಸಿದ ಎಂಜಿನಿಯರ್

    ರಾಯಚೂರು: ಹಿರಿಯ ಅಧಿಕಾರಿಗಳ ಕಿರುಕುಳಕ್ಕೆ ಬೇಸತ್ತು ರಾಯಚೂರಿನ ಲಿಂಗಸುಗೂರು ತಾಲೂಕಿನ ಹಟ್ಟಿ ಗ್ರಾಮದಲ್ಲಿ ಜೆಸ್ಕಾಂ ಎಂಜಿನಿಯರ್ ಆತ್ಮಹತ್ಯೆಗೆ ಯತ್ನಿಸಿ ಇದೀಗ ಸಾವು ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದಾರೆ.

    ಶ್ರೀಧರ್ ಜೋಶಿ ಆತ್ಮಹತ್ಯೆಗೆ ಯತ್ನಿಸಿದ ಜೆಸ್ಕಾಂ ಕಿರಿಯ ಅಭಿಯಂತರ. ವಿಷ ಸೇವಿಸುವ ಮುನ್ನ ಜೋಶಿ ಡೆತ್ ನೋಟ್ ಬರೆದಿದ್ದು, ಅದರಲ್ಲಿ ಇಲಾಖೆಯ ಹಿರಿಯ ಅಧಿಕಾರಿಗಳಾದ ಸೂಪರಿಂಡೆಂಟ್ ಎಂಜಿನಿಯರ್ ಕೃಷ್ಣಪ್ಪ, ಎಇಇ ದಾವಲಸಾಬ್ ಅವರ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಬರೆದಿದ್ದಾರೆ. ಮಾತ್ರವಲ್ಲದೇ ಅನಾವಶ್ಯಕವಾಗಿ ಪದೇ ಪದೇ ವರ್ಗಾವಣೆ ಮಾಡಿ ಕಿರುಕುಳ ನೀಡುತ್ತಿದ್ದಾರೆ ಅಂತಾನೂ ಬರೆದಿದ್ದಾರೆ.

    ಸದ್ಯ ಹಟ್ಟಿ ಚಿನ್ನದ ಗಣಿ ಆಸ್ಪತ್ರೆಯಲ್ಲಿ ಜೋಶಿ ಚಿಕಿತ್ಸೆಗೆ ಸ್ಪಂದಿಸದ ಕಾರಣ ಇದೀಗ ಅವರನ್ನು ರಾಯಚೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಹಟ್ಟಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.