Tag: jds

  • ಕುಣಿಯಲಾರದವರು ನೆಲ ಡೊಂಕು ಅನ್ನೋ ಹಾಗೆ ಡಿಕೆಶಿ ಮಾತಾಡಬಾರದು: ನಿಖಿಲ್ ಕುಮಾರಸ್ವಾಮಿ

    ಕುಣಿಯಲಾರದವರು ನೆಲ ಡೊಂಕು ಅನ್ನೋ ಹಾಗೆ ಡಿಕೆಶಿ ಮಾತಾಡಬಾರದು: ನಿಖಿಲ್ ಕುಮಾರಸ್ವಾಮಿ

    ಬೆಂಗಳೂರು: ಕುಣಿಯಲಾರದವರು ನೆಲ ಡೊಂಕು ಅನ್ನೋ ಹಾಗೆ ಡಿ.ಕೆ ಶಿವಕುಮಾರ್ (D.K Shivakumar) ಮಾತಾಡಬಾರದು ಎಂದು ಜೆಡಿಎಸ್ (JDS) ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ (Nikhil Kumaraswamy) ಡಿಸಿಎಂಗೆ ತಿರುಗೇಟು ಕೊಟ್ಟಿದ್ದಾರೆ.

    ನಗರದಲ್ಲಿ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಈ ವೇಳೆ, ರಾಮನಗರ ಜಿಲ್ಲೆಯನ್ನು ಬೆಂಗಳೂರು ದಕ್ಷಿಣ ಜಿಲ್ಲೆ ಮಾಡಲು ಅಡ್ಡ ಹಾಕಿದ್ದು ಕುಮಾರಸ್ವಾಮಿ (H.D Kumaraswamy) ಎಂಬ ಡಿಕೆಶಿ ಹೇಳಿಕೆಗೆ ಅವರು ಪ್ರತಿಕ್ರಿಯಿಸಿದರು. ಈ ವೇಳೆ, ಕುಮಾರಸ್ವಾಮಿಯವರು ಕೇಂದ್ರದ ಮೇಲೆ ಒತ್ತಡ ಹಾಕಿದ್ದಾರೆ ಅನ್ನೋದಕ್ಕೆ ಏನಾದರೂ ಸಾಕ್ಷಿ ಇದೆಯಾ ಇವರ ಹತ್ರ? ಕೈಲಾಗದೇ ಇರೋರು, ಕುಣಿಯೋದಕ್ಕೆ ಆಗದೇ ಇರೋರು ನೆಲ ಡೊಂಕು ಅಂದರು ಎಂದ ಹಾಗೆ ಆಗುತ್ತೆ. ರಾಮನಗರ ಜಿಲ್ಲೆಯ ಅಸ್ಮಿತೆ ಕಾಪಾಡಬೇಕು ಅನ್ನೋದು ಜಿಲ್ಲೆಯ ಜನರ ಬಯಕೆ. ರಾಮನಗರ ಜಿಲ್ಲೆಯ ಹೆಸರು ಬದಲಾವಣೆ ಮಾಡಿದ್ರೆ ಅದು ಅಭಿವೃದ್ಧಿ ಆಗುತ್ತಾ? ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಒಂದೇ ಒಂದು ಇಂಚು ಬೇರೆಯವರ ಜಾಗಕ್ಕೆ ನಾವು ಬೇಲಿ ಹಾಕಿಲ್ಲ: ನಿಖಿಲ್ ಕುಮಾರಸ್ವಾಮಿ

    ಈ ಸರ್ಕಾರದ ವಿದ್ಯುತ್ ಇಲಾಖೆಯಲ್ಲಿ ಸ್ಮಾರ್ಟ್ ಮೀಟರ್‌ನಲ್ಲಿ‌ ದೊಡ್ಡ ಅಕ್ರಮ ನಡೆಯುತ್ತಿದೆ. 7500 ಸಾವಿರ ಕೋಟಿ ರೂ. ಹಗರಣ ಅದು. ಬ್ಲ್ಯಾಕ್ ಲಿಸ್ಟ್‌ನಲ್ಲಿ ಇರೋರಿಗೆ ಸ್ಮಾರ್ಟ್ ಮೀಟರ್ ಟೆಂಡರ್ ‌ಕೊಟ್ಟಿದ್ದೀರಿ. 1500 ಮೀಟರ್‌ಗೆ 5,500 ರೂ. ಪಡೆಯುತ್ತಿದ್ದಾರೆ‌. ಎಲೆಕ್ಟ್ರಿಕ್ ಪೋಲ್ ಮಾಡೋನಿಗೆ ಮೀಟರ್ ಟೆಂಡರ್ ಕೊಟ್ಟಿದ್ದೀರಾ? ಇಷ್ಟು ಹಗರಣ ನಡೆಯುತ್ತಿದೆ. ಯಾವ ಅಭಿವೃದ್ಧಿ ಕಾಣಬಹುದು ಬೆಂಗಳೂರು ದಕ್ಷಿಣ ಅಂತ ಹೆಸರು ಬದಲಾವಣೆ ಮಾಡಿದ್ರೆ? ಹೆಜ್ಜೆ ಹೆಜ್ಜೆಗೂ ಈ ಸರ್ಕಾರ ಹಗರಣದಲ್ಲಿ ಮುಳುಗಿದೆ ಎಂದು ವಾಗ್ದಾಳಿ ನಡೆಸಿದರು.

    ಕುಮಾರಸ್ವಾಮಿ ವಿರುದ್ಧ ಡಿಕೆಶಿ ಏಕವಚನ ಪ್ರಯೋಗ ಮಾಡ್ತಿದ್ದಾರೆ. ಅವರು ಮಾತಾಡಲಿ, ರಾಜ್ಯದ ಜನ ಇದೆಲ್ಲವನ್ನೂ ‌ನೋಡ್ತಿದ್ದಾರೆ. ಇವತ್ತಿಂದ ಅಲ್ಲ ಬಹಳ ದಿನಗಳಿಂದ ಏಕವಚನದಲ್ಲಿ ಮಾತಾಡ್ತಿದ್ದಾರೆ. ಕುಮಾರಸ್ವಾಮಿ ಮಾತ್ರ ಅಲ್ಲ ಎಲ್ಲರಿಗೂ ಅವರು ಹಾಗೇ ಮಾತಾಡ್ತಾರೆ ಎಂದು ಕಿಡಿಕಾರಿದರು. ಇದನ್ನೂ ಓದಿ: ಮಕ್ಕಳಲ್ಲಿನ ಜ್ಞಾನದಾಹ ನೀಗಿಸುತ್ತಿದೆ ನಮ್ಮ ಮೈಸೂರಿನ ಕಲಿಸು ಸಂಸ್ಥೆ: ಯದುವೀರ್ ಒಡೆಯರ್

  • ಗಂಡಸರಿಗೆ ಉಚಿತವಾಗಿ ವಾರಕ್ಕೆ 2 ಬಾಟಲಿ ಮದ್ಯ ಕೊಡಿ: ಶಾಸಕ ಎಂ.ಟಿ ಕೃಷ್ಣಪ್ಪ

    ಗಂಡಸರಿಗೆ ಉಚಿತವಾಗಿ ವಾರಕ್ಕೆ 2 ಬಾಟಲಿ ಮದ್ಯ ಕೊಡಿ: ಶಾಸಕ ಎಂ.ಟಿ ಕೃಷ್ಣಪ್ಪ

    ಬೆಂಗಳೂರು: ಗ್ಯಾರಂಟಿ ಯೋಜನೆಗಳ (Guarantee Scheme) ಮಾದರಿಯಲ್ಲಿ ಪುರುಷರಿಗೆ ಉಚಿತವಾಗಿ ವಾರಕ್ಕೆ ಎರಡು ಬಾಟಲಿ ಮದ್ಯ (Alcohol) ಕೊಡಿ ಎಂದು ತುರುವೇಕೆರೆ ಜೆಡಿಎಸ್ (JDS) ಶಾಸಕ ಎಂಟಿ ಕೃಷ್ಣಪ್ಪ (MT Krishnappa) ಹೇಳಿದ್ದಾರೆ.

    ಪುರುಷರ ವೆಚ್ಚದಲ್ಲಿ, ನೀವು ಮಹಿಳೆಯರಿಗೆ ತಿಂಗಳಿಗೆ 2,000 ರೂ. ಹಣ, ಉಚಿತ ವಿದ್ಯುತ್ ಮತ್ತು ಉಚಿತ ಬಸ್ ಪ್ರಯಾಣವನ್ನು ನೀಡುತ್ತಿದ್ದೀರಿ. ಆದ್ದರಿಂದ, ಕುಡಿಯುವವರಿಗೆ, ಪ್ರತಿ ವಾರ ಅವರಿಗೆ ಎರಡು ಬಾಟಲಿಗಳನ್ನು ಉಚಿತವಾಗಿ ನೀಡಿ. ಅವರು ಕುಡಿಯಲು ಬಿಡಿ. ನಾವು ಪುರುಷರಿಗೆ ಪ್ರತಿ ತಿಂಗಳು ಹಣ ನೀಡಲು ಸಾಧ್ಯವಿಲ್ಲ. ಅದರ ಬದಲಾಗಿ, ಅವರಿಗೆ ಏನಾದರೂ ನೀಡಿ. ವಾರಕ್ಕೆ ಎರಡು ಬಾಟಲಿ ಕೊಟ್ಟರೆ ತಪ್ಪೇನಿದೆ? ಸರ್ಕಾರವು ಇದನ್ನು ಸೊಸೈಟಿಗಳ ಮೂಲಕ ಒದಗಿಸಬಹುದು ಎಂದು ಕೃಷ್ಣಪ್ಪ ಸಲಹೆ ನೀಡಿದರು. ಇದನ್ನೂ ಓದಿ:  ಚಿಕ್ಕಮಗಳೂರು| ಬೈಕಿಗೆ ಹಿಂದಿನಿಂದ ಪೊಲೀಸ್ ಜೀಪ್ ಡಿಕ್ಕಿ – ಸವಾರ ಸ್ಥಳದಲ್ಲೇ ಸಾವು

    ದುಡಿಯುವ ಕಾರ್ಮಿಕರು, ಜನರು ಮದ್ಯ ಸೇವಿಸುತ್ತಾರೆ. ಇದನ್ನು ತಪ್ಪಿಸಲು ಸಾಧ್ಯವಿಲ್ಲ. ಹೀಗಾಗಿ ಪುರುಷರಿಗೆ ಉಚಿತವಾಗಿ ಮದ್ಯ ವಿತರಿಸುವ ಯೋಜನೆಯನ್ನ ರಾಜ್ಯ ಸರ್ಕಾರ ತರಬೇಕು. ಸಹಕಾರ ಸಂಘಗಳ ಮೂಲಕ ಉಚಿತ ಮದ್ಯ ವಿತರಿಸಬೇಕು ಎಂದು ಜೆಡಿಎಸ್ ಶಾಸಕ ಕೃಷ್ಣಪ್ಪ ಸಲಹೆ ನೀಡಿದ್ದಾರೆ. ಇದನ್ನೂ ಓದಿ: ಆಯುಷ್ಮಾನ್ ಭಾರತ್ ವ್ಯಾಪ್ತಿಗೆ ಹೃದಯಾಘಾತ, ಪಾರ್ಶ್ವವಾಯುಗೆ ಚಿಕಿತ್ಸೆ ತರಲು ಹೆಚ್.ಡಿ.ದೇವೇಗೌಡರ ಒತ್ತಾಯ

    ಪಂಚ ಗ್ಯಾರಂಟಿ ಯೋಜನೆಗಳನ್ನ ಜನರಿಗೆ ಸಮರ್ಪಕವಾಗಿ ತಲುಪಿಸೋಕೆ ಸರ್ಕಾರ ಹೆಣಗಾಡುತ್ತಿದೆ. ಸರಿಯಾಗಿ ಅನ್ನಭಾಗ್ಯದ ಅಕ್ಕಿ ನೀಡಲಾಗುತ್ತಿಲ್ಲ. ಗೃಹಲಕ್ಷ್ಮಿ ಹಣ ಅದ್ಯಾವಾಗ ಫಲಾನುಭವಿಗಳ ಖಾತೆಗೆ ಹೋಗುತ್ತೋ ಗೊತ್ತಿಲ್ಲ. ಪರಿಸ್ಥಿತಿ ಹೀಗಿರುವಾಗ, ಮುಂದಿನ ಬಾರಿಯೂ ನಮ್ಮ ಸರ್ಕಾರ ಬಂದರೆ ಗೃಹಲಕ್ಷ್ಮಿ ಹಣವನ್ನು 2,000 ದಿಂದ 4,000ಕ್ಕೆ ಏರಿಕೆ ಮಾಡುತ್ತೇವೆ ಎಂದು ಸದನದ ಸಾಕ್ಷಿಯಾಗಿ ಕುಣಿಗಲ್ ಶಾಸಕ ರಂಗನಾಥ್ ಘೋಷಣೆ ಮಾಡಿದ್ದಾರೆ. ಇದನ್ನೂ ಓದಿ: ಚಿಕ್ಕಮಗಳೂರು| ಬೈಕಿಗೆ ಹಿಂದಿನಿಂದ ಪೊಲೀಸ್ ಜೀಪ್ ಡಿಕ್ಕಿ – ಸವಾರ ಸ್ಥಳದಲ್ಲೇ ಸಾವು

  • ಬೆಂಗಳೂರಿನಲ್ಲಿ ಗೋಮಾಳ ಜಾಗ ಒತ್ತುವರಿಗೆ ಅಧಿಕಾರಿಗಳಿಂದಲೇ ಸಹಾಯ: ಕೃಷ್ಣಭೈರೇಗೌಡ

    ಬೆಂಗಳೂರಿನಲ್ಲಿ ಗೋಮಾಳ ಜಾಗ ಒತ್ತುವರಿಗೆ ಅಧಿಕಾರಿಗಳಿಂದಲೇ ಸಹಾಯ: ಕೃಷ್ಣಭೈರೇಗೌಡ

    ಬೆಂಗಳೂರು: ಅಕ್ರಮವಾಗಿ ಸರ್ಕಾರಿ ಭೂಮಿ, ಗೋಮಾಳ ಜಮೀನು (Gomala Land) ಒತ್ತುವರಿ ಮಾಡಿಕೊಂಡಿರುವವರಿಗೆ ನಮ್ಮ ಅಧಿಕಾರಿಗಳೇ ಸಹಾಯ ಮಾಡ್ತಿದ್ದಾರೆ ಅಂತ ಖುದ್ದು ಕಂದಾಯ ಸಚಿವರೇ ಅಸಹಾಯಕತೆ ವ್ಯಕ್ತಪಡಿಸಿದ ಘಟನೆ ವಿಧಾನ ಪರಿಷತ್‌ನಲ್ಲಿ ನಡೆಯಿತು.

    ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಜೆಡಿಎಸ್ ನ ಶರವಣ (Sharavana) ಅವರು ಬೆಂಗಳೂರು (Bengaluru) ನಗರದಲ್ಲಿ 3 ವರ್ಷಗಳಿಂದ ನೂರಾರು ಎಕರೆ ಸರ್ಕಾರಿ ಭೂಮಿ, ಗೋಮಾಳ ಒತ್ತುವರಿ ಆಗಿದೆ. ಈವರೆಗೂ ಸರ್ಕಾರ ಎಷ್ಟು ಎಕರೆ ಜಾಗ ಒತ್ತುವರಿ ತೆರವು ಮಾಡಿದೆ. ಗೋಮಾಳ ಜಾಗ ಒತ್ತುವರಿ ಆಗಿದೆ. ಅಧಿಕಾರಿಗಳೇ ಇದರಲ್ಲಿ ಶಾಮೀಲಾಗಿದ್ದಾರೆ‌ ಒತ್ತುವರಿ ತೆರವು ಮಾಡಲು‌ ಅಧಿಕಾರಿಗಳ ಒತ್ತಡ ಇದೆಯಾ? ಅಧಿಕಾರಿಗಳು ಅಕ್ರಮ ಮಾಡ್ತಿದ್ದಾರಾ? ಸಚಿವರ ಕ್ಷೇತ್ರದಲ್ಲಿ ಇಂತಹ ಕೇಸ್ ಇದೆ. ಈ ಬಗ್ಗೆ ಕ್ರಮ ತೆಗೆದುಕೊಳ್ಳಬೇಕು. ಒತ್ತುವರಿ ತೆರವು ಮಾಡಬೇಕು ಅಂತ ಆಗ್ರಹ ಮಾಡಿದರು. ಇದನ್ನೂ ಓದಿ: ಗ್ಯಾರಂಟಿ ಯೋಜನೆಗಳಿಗೆ 56,984 ಕೋಟಿ ರೂ. ಮೀಸಲಿಟ್ಟ ತೆಲಂಗಾಣ ಸರ್ಕಾರ

     

    ಇದಕ್ಕೆ ಸಚಿವ ಕೃಷ್ಣಭೈರೇಗೌಡ (Krishna Byre Gowda) ಉತ್ತರ ನೀಡಿ, ಕೆಲವು ಅಧಿಕಾರಿಗಳಿಂದಲೇ ಒತ್ತುವರಿ ತೆರವು ಆಗ್ತಿಲ್ಲ. ಅಧಿಕಾರಿಗಳು ಉದ್ದೇಶಪೂರ್ವಕವಾಗಿಯೇ ವ್ಯವಸ್ಥಿತವಾಗಿ ಇಂತಹ ಪ್ರಕರಣಗಳನ್ನ ನಡೆಸುತ್ತಿದ್ದಾರೆ. ಕಾನೂನು ಅಡಿಯಲ್ಲೇ ಕಾನೂನು ವಿರೋಧಿ ಕೆಲಸ ಕೆಲ ಅಧಿಕಾರಿಗಳು ಮಾಡ್ತಿದ್ದಾರೆ. ನನ್ನ ಕ್ಷೇತ್ರದಲ್ಲಿ ಇಂತಹ ಅಕ್ರಮ ನಡೆದಿದೆ. ಗೋಮಾಳ ಒತ್ತುವರಿ ಮಾಡಿಕೊಂಡಿದ್ದಾರೆ. ಪಂಚಾಯತಿಯವರೇ ಖಾತೆ ಮಾಡಿಕೊಟ್ಡಿದ್ದಾರೆ. ವ್ಯವಸ್ಥಿತವಾಗಿ ಅಕ್ರಮವಾಗಿ ಅಧಿಕಾರಿಗಳ ಬೆಂಬಲದಿಂದ ಒತ್ತುವರಿ ಮಾಡಿಕೊಂಡಿದ್ದಾರೆ. ಇಂತಹ ಕೇಸ್ ಬಗ್ಗೆ ನಾವು ಟ್ರ್ಯಾಕ್ ಮಾಡ್ತಿದ್ದೇವೆ. ಸರ್ಕಾರದ ಜಾಗ, ಗೋಮಾಳದ ಜಾಗಕ್ಕೆ ಫೈಟ್ ಮಾಡ್ತಿದ್ದೇವೆ‌. ಕಾನೂನು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ‌. ನಾವು ಅಂತಹ ಕೇಸ್ ಟ್ಯಾಕಲ್ ಮಾಡಲು ಕ್ರಮ ತೆಗೆದುಕೊಳ್ಳುತ್ತಿದ್ದೇವೆ ಅಂತ ತಿಳಿಸಿದರು.

  • ಗ್ರೇಟರ್ ಬೆಂಗಳೂರು ವಿಧೇಯಕ ವಾಪಸ್ ಪಡೆಯದೇ ಹೋದ್ರೆ ಸಿಎಂ, ಸಚಿವರ ಕಾರ್ಯಕ್ರಮಗಳಿಗೆ ಮುತ್ತಿಗೆ – ಜೆಡಿಎಸ್ ಎಚ್ಚರಿಕೆ

    ಗ್ರೇಟರ್ ಬೆಂಗಳೂರು ವಿಧೇಯಕ ವಾಪಸ್ ಪಡೆಯದೇ ಹೋದ್ರೆ ಸಿಎಂ, ಸಚಿವರ ಕಾರ್ಯಕ್ರಮಗಳಿಗೆ ಮುತ್ತಿಗೆ – ಜೆಡಿಎಸ್ ಎಚ್ಚರಿಕೆ

    ಬೆಂಗಳೂರು: ರಾಜ್ಯ ರಾಜಧಾನಿಯನ್ನು ಇಬ್ಬಾಗ ಮಾಡೋ ʻಗ್ರೇಟರ್ ಬೆಂಗಳೂರುʼ (Greater Bengaluru) ವಿಧೇಯಕ ಖಂಡಿಸಿ ‌ಇಂದು ಜೆಡಿಎಸ್‌ (JDS) ಪ್ರತಿಭಟನೆ ನಡೆಸಿತು. ಫ್ರೀಡಂ ಪಾರ್ಕ್ ನಲ್ಲಿ ಬೆಂಗಳೂರು  ನಗರ ಅಧ್ಯಕ್ಷ ರಮೇಶ್ ಗೌಡ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ MLC, ಮಾಜಿ‌ ಎಂಎಲ್ಸಿಗಳು ಭಾಗಿಯಾಗಿದ್ರು. ಸರ್ಕಾರ ನಡೆ ಖಂಡಿಸಿ ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಹೊರಟ ಕಾರ್ಯಕರ್ತರನ್ನ ಪೊಲೀಸರು ಬಂಧಿಸಿದ್ರು.

    ಈ ವೇಳೆ ಮಾತನಾಡಿದ ಬೆಂಗಳೂರು (Bengaluru) ನಗರ ಜೆಡಿಎಸ್ ನಗರ ಘಟಕ ಅಧ್ಯಕ್ಷ ರಮೇಶ್ ಗೌಡ, ಕಾಂಗ್ರೆಸ್ ಸರ್ಕಾರ ಎರಡು ವರ್ಷಗಳಿಂದ ಜನ ವಿರೋಧಿ ನೀತಿ ಅನುಸರಿಸುತ್ತಿದ್ದಾರೆ. ಜನರಿಗೆ ನಿತ್ಯ ನರಕ ತೋರಿಸುತ್ತಿದ್ದಾರೆ. ಕೆಂಪೇಗೌಡರು ಬೆಂಗಳೂರು ಕಟ್ಟಿದ್ದರು. ಈ ಸರ್ಕಾರ ಬೆಂಗಳೂರನ್ನ ಛಿದ್ರ ಛಿದ್ರ ಮಾಡ್ತಿದ್ದಾರೆ. ಬೆಂಗಳೂರನ್ನ 7 ಭಾಗ ಮಾಡಲು ಹೊರಟಿದ್ದಾರೆ. ರಿಯಲ್ ಎಸ್ಟೇಟ್ ಮಾಡಲು 7 ಭಾಗ ಮಾಡ್ತಿದ್ದಾರೆ ಅಂತ ಆರೋಪ ಮಾಡಿದ್ರು. ಇದನ್ನೂ ಓದಿ: ಮೆಗಾ ಮ್ಯಾಜಿಕ್ ಸ್ಟಾರ್ ಕುದ್ರೋಳಿ ಗಣೇಶ್‌ಗೆ ‘ಗೋಲ್ಡನ್ ಮ್ಯಾಜಿಷಿಯನ್’ ರಾಷ್ಟ್ರೀಯ ಜಾದೂ ಪ್ರಶಸ್ತಿ

    ಬೆಂಗಳೂರು ಅನೇಕ ಸಮಸ್ಯೆ ಎದುರಿಸುತ್ತಿದೆ. ನೀರಿಲ್ಲ, ಟ್ರಾಫಿಕ್ ಜಾಮ್ ಸೇರಿ ಅನೇಕ ಸಮಸ್ಯೆ ಇದೆ. ಈ‌ ಸರಕಾರದಲ್ಲಿ ಜನರು ನಿತ್ಯ ಸತ್ತು ಬದುಕುತ್ತಿದ್ದಾರೆ. ಗ್ರೇಟರ್ ಬೆಂಗಳೂರು ‌ವಿಧೇಯಕಕ್ಕೆ ರಾಜ್ಯಪಾಲರು ಸಹಿ ಹಾಕಬಾರದು. ಕೂಡಲೇ ಸರ್ಕಾರ ಗ್ರೇಟರ್ ಬೆಂಗಳೂರು ವಿಧೇಯಕ ವಾಪಸ್ ಪಡೆಯಬೇಕು. ಸರ್ಕಾರ ಬಿಲ್ ವಾಪಸ್ ಪಡೆಯದೇ ಹೋದ್ರೆ ಸಿಎಂ ಮತ್ತು ಸಚಿವ ಕಾರ್ಯಕ್ರಮಗಳಿಗೆ ಕಪ್ಪುಪಟ್ಟಿ ಪ್ರದರ್ಶನ ಮಾಡೋ ಕೆಲಸ ಜೆಡಿಎಸ್ ಮಾಡಲಿದೆ ಅಂತ ಎಚ್ಚರಿಕೆ ಕೊಟ್ರು. ಇದನ್ನೂ ಓದಿ: 2 ವರ್ಷದಲ್ಲಿ ದುಬೈಗೆ 52 ಟ್ರಿಪ್‌ – ಈ ಪೈಕಿ 45 ಬಾರಿ ಒಂದೇ ದಿನದಲ್ಲಿ ಹೋಗಿ ಬಂದಿದ್ದ ರನ್ಯಾ

    ಈ ಸರ್ಕಾರದಲ್ಲಿ ಹಾಲಿನ ದರ, ಟಿಕೆಟ್ ದರ ಎಲ್ಲವೂ ಜಾಸ್ತಿ ಆಗಿದೆ. ಸರ್ಕಾರ ರಾಜ್ಯದ ಹಿತ ಕಾಪಾಡುತ್ತಿಲ್ಲ. ಬೆಂಗಳೂರಿನಲ್ಲಿ ಕುಡಿಯೋಕೆ‌ ನೀರು ಕೊಡ್ತಿಲ್ಲ. ಆದರು ನೀರಿನ ದರ ಏರಿಕೆ ಮಾಡ್ತಿದ್ದಾರೆ. ಬೆಂಗಳೂರಿಗೆ ಶಾಪ ವಿಮೋಚನೆ ಆಗಬೇಕಾದ್ರೆ ಈ ಸರ್ಕಾರವನ್ನ ಜನರು ಕಿತ್ತು ಹಾಕಬೇಕು ಅಂತ ಮನವಿ ಮಾಡಿದ್ರು. ಇದನ್ನೂ ಓದಿ: ನಿಮ್ಮ ಉಗ್ರವಾದದ ದಾಖಲೆ ಪ್ರಪಂಚದ ಮುಂದಿದೆ: ಕಾಶ್ಮೀರದ ಬಗ್ಗೆ ಮಾತನಾಡಿದ ಪಾಕ್‌ಗೆ ಭಾರತ ತಿರುಗೇಟು 

  • ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷರಿಂದ ಶಾಸಕರ ಹಕ್ಕು ಮೊಟಕುಗೊಳಿಸುವ ಕಾರ್ಯ: ರಾಜ್ಯಪಾಲರಿಗೆ ಬಿಜೆಪಿ ದೂರು

    ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷರಿಂದ ಶಾಸಕರ ಹಕ್ಕು ಮೊಟಕುಗೊಳಿಸುವ ಕಾರ್ಯ: ರಾಜ್ಯಪಾಲರಿಗೆ ಬಿಜೆಪಿ ದೂರು

    ಬೆಂಗಳೂರು: ರಾಜ್ಯದಲ್ಲಿ ಗ್ಯಾರಂಟಿ ಅನುಷ್ಠಾನ ಸಮಿತಿ (Guarantee Panel) ಅಧ್ಯಕ್ಷರಿಂದ ಶಾಸಕರ ಹಕ್ಕು ಮೊಟಕುಗೊಳಿಸುವ ಕೆಲಸ ಆಗುತ್ತಿದೆ ಎಂದು ಬಿಜೆಪಿ (BJP) ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ (B.Y Vijayendra) ಆರೋಪಿಸಿದ್ದಾರೆ.

    ರಾಜ್ಯಪಾಲರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಈ ವೇಳೆ, ಬಿಜೆಪಿ- ಜೆಡಿಎಸ್ ನಿಯೋಗವು ರಾಜ್ಯಪಾಲರನ್ನು ಭೇಟಿ ಮಾಡಿದೆ. ಗ್ಯಾರಂಟಿ ಅನುಷ್ಠಾನ ಮಾಡುವ ನಿಟ್ಟಿನಲ್ಲಿ ತಾಲೂಕು, ಜಿಲ್ಲಾ ಮತ್ತು ರಾಜ್ಯ ಮಟ್ಟದಲ್ಲಿ ಅಧ್ಯಕ್ಷರನ್ನು ನೇಮಿಸಿದ್ದು ಇದು ಸಂಪೂರ್ಣವಾಗಿ ಕಾಂಗ್ರೆಸ್ ಸರ್ಕಾರದ ಅಸಾಂವಿಧಾನಿಕ ನಡೆ ಎಂಬುದನ್ನು ರಾಜ್ಯಪಾಲರ ಗಮನಕ್ಕೆ ತಂದಿದ್ದೇವೆ ಎಂದು ತಿಳಿಸಿದ್ದಾರೆ.

    ರಾಜ್ಯದ ಜನರ ತೆರಿಗೆ ಹಣದ ದುರುಪಯೋಗ ಆಗಿದೆ ಎಂದು ಮನದಟ್ಟು ಮಾಡಲಾಗಿದೆ. ಈ ಸರ್ಕಾರಕ್ಕೆ ತಿಳಿಹೇಳುವ ಕೆಲಸ ಮಾಡುವಂತೆ ಹಾಗೂ ಮಧ್ಯಸ್ಥಿಕೆ ವಹಿಸಲು ಮನವಿ ಮಾಡಲಾಗಿದೆ ಎಂದು ಅವರು ಮಾಹಿತಿ ಹಂಚಿಕೊಂಡಿದ್ದಾರೆ.

    ನನ್ನ ವಿಧಾನಸಭಾ ಕ್ಷೇತ್ರದಲ್ಲೇ ಜಿಲ್ಲಾ ಉಸ್ತುವಾರಿ ಸಚಿವರು, ಶಾಲೆ ಮತ್ತು ಕಾಲೇಜುಗಳ ಉಸ್ತುವಾರಿ ಸಮಿತಿಗಳಿಗೆ ಶಿಕಾರಿಪುರ ತಾಲೂಕಿನ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷರು ಕೊಟ್ಟ ಹೆಸರನ್ನು ಪರಿಗಣಿಸಲು ಸೂಚಿಸಿದ್ದಾರೆ. ಇಂಥ ಕೆಲಸ ಬೇರೆ ಕಡೆಯೂ ನಡೆಯುತ್ತಿದೆ. ಈ ಸಂಬಂಧ ಸದನದಲ್ಲಿ ಹಕ್ಕುಚ್ಯುತಿಯನ್ನು ಮಂಡಿಸಲಿದ್ದೇವೆ. ಸಚಿವರಿಂದ ಶಾಸಕರ ಹಕ್ಕು ಮೊಟಕುಗೊಳಿಸುವ ಕೆಲಸ ಆಗುತ್ತಿದೆ ಎಂದು ಆರೋಪಿಸಿದ್ದಾರೆ.

  • ಕೇಂದ್ರ ಬಜೆಟ್‍ನಲ್ಲಿ ಕರ್ನಾಟಕದ ಹೆಸರೇ ಇರಲಿಲ್ಲ: ರೇವಣ್ಣಗೆ ಶ್ರೇಯಸ್ ಪಟೇಲ್ ತಿರುಗೇಟು

    ಕೇಂದ್ರ ಬಜೆಟ್‍ನಲ್ಲಿ ಕರ್ನಾಟಕದ ಹೆಸರೇ ಇರಲಿಲ್ಲ: ರೇವಣ್ಣಗೆ ಶ್ರೇಯಸ್ ಪಟೇಲ್ ತಿರುಗೇಟು

    ಹಾಸನ: ಕೇಂದ್ರ ಬಜೆಟ್‍ನಲ್ಲಿ ಹಾಸನ (Hassan) ಅಲ್ಲ, ಕರ್ನಾಟಕವೇ ಇರಲಿಲ್ಲ ಎಂದು ಮಾಜಿ ಸಚಿವ ಹೆಚ್.ಡಿ ರೇವಣ್ಣಗೆ (H.D Revanna) ಸಂಸದ ಶ್ರೇಯಸ್ ಪಟೇಲ್ (Shreyas Patel) ಟಾಂಗ್ ಕೊಟ್ಟಿದ್ದಾರೆ.

    ಹಾಸನದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಈ ವೇಳೆ, ನಾನೊಬ್ಬ ಜನಪ್ರತಿನಿಧಿಯಾಗಿದ್ದೇನೆ. ನನಗೆ ಕೇಂದ್ರ ಬಜೆಟ್ ಪುಸ್ತಕ ಕೊಡ್ತಾರೆ. ನನಗಿಂತ ಗೊತ್ತಾ ಅವರಿಗೆ? ಕೆಂದ್ರ ಬಜೆಟ್ ಪುಸ್ತಕದಲ್ಲಿ ಎಷ್ಟೋ ರಾಜ್ಯಗಳ ಹೆಸರಿಲ್ಲ. ಇನ್ನೂ ಹಾಸನದ ಹೆಸರು ಇರುತ್ತಾ? ರಾಜ್ಯ ಬಜೆಟ್‍ನಲ್ಲಿ ಹಾಸನ ಜಿಲ್ಲೆಗೆ ಸಾಕಷ್ಟು ಕೊಡುಗೆ ಕೊಟ್ಟಿದ್ದಾರೆ. ಸುಮ್ಮನೆ ಇಲ್ಲಸಲ್ಲದ ಹೇಳಿಕೆ ನೀಡಬಾರದು ಎಂದಿದ್ದಾರೆ. ಇದನ್ನೂ ಓದಿ: ಹಾಸನಕ್ಕೆ ಬಜೆಟ್‌ನಲ್ಲಿ ಜೂಜು, ಎಣ್ಣೆ, ಮಟ್ಕಾ, ಗಾಂಜಾ ಗ್ಯಾರಂಟಿ: ರೇವಣ್ಣ ವ್ಯಂಗ್ಯ

    ಇನ್ನೂ ಪೊಲೀಸರು ಕುಡಿದು ಕರ್ತವ್ಯಕ್ಕೆ ಬರುತ್ತಾರೆ ಎಂಬ ರೇವಣ್ಣ ಅವರ ಆರೋಪಕ್ಕೆ, ಗಲಾಟೆಯಾದ ಸಂದರ್ಭದಲ್ಲಿ ಪೊಲೀಸರು ನಿಭಾಯಿಸುತ್ತಾರೆ. ಪೊಲೀಸರ ಮೇಲೆ ಇಲ್ಲಸಲ್ಲದ ಆರೋಪ ಮಾಡಬಾರದು. ಎಣ್ಣೆ ಕುಡಿದು ಬಂದು ಡ್ಯೂಟಿ ಮಾಡಿದ್ರೆ ಸಾಕ್ಷಿ, ಪುರಾವೆಗಳಿದ್ದರೆ ಕೊಡಲಿ. ಇವರ ಕಾಲದಲ್ಲಿ ಏನೇನು ಆಗಿದೆ ಎಂದು ಗೊತ್ತಿದೆ ಎಂದು ಅಸಮಾಧಾನ ಹೊರಹಾಕಿದ್ದಾರೆ.

    ರಾಜ್ಯಕ್ಕೆ ಇವರ ಕಾಲದಲ್ಲಿ ಯಾವ ಗ್ಯಾರೆಂಟಿ ಕೊಟ್ಟಿದ್ದಾರೆ? ನಾವು ಕೆಲಸ ಮಾಡುತ್ತಿದ್ದೇವೆ, ಮುಂದೆ ಸಹ ಮಾಡಿ ತೋರಿಸುತ್ತೇವೆ. ಅವರು ಹಿರಿಯರಿದ್ದಾರೆ ಅಭಿವೃದ್ಧಿಗೆ ಕೈ ಜೋಡಿಸಲಿ, ಸಲಹೆ ನೀಡಲಿ, ಚುನಾವಣೆ ಸಂದರ್ಭದಲ್ಲಿ ರಾಜಕೀಯ ಮಾಡೋಣ. ಹಾಸನ ಜಿಲ್ಲೆಯ ಅಭಿವೃದ್ಧಿ ದೃಷ್ಟಿಯಿಂದ ಸಲಹೆ, ಸಹಕಾರ ನೀಡಲಿ ಎಂದು ತಿರುಗೇಟು ಕೊಟ್ಟಿದ್ದಾರೆ.

    ನಾಲ್ಕೈದು ತಿಂಗಳಿನಲ್ಲಿ ಸರ್ಕಾರ ಬೀಳುತ್ತೆ ಎಂಬ ಎಂಎಲ್‍ಸಿ ಸೂರಜ್ ರೇವಣ್ಣ ಹೇಳಿಕೆ ವಿಚಾರವಾಗಿ, ತಿಳಿದವರಿಗೆ, ಬುದ್ದಿವಂತರಿಗೆ ಏನಾದರೂ ಉತ್ತರ ಕೊಡಬಹುದು. ಅವರು ಯಾವ ಮಾನದಂಡದ ಮೇಲೆ ಹಾಗೆ ಹೇಳಿದ್ದಾರೆ ಎಂಬುದು ಗೊತ್ತಿಲ್ಲ. ನಮ್ಮ ಸರ್ಕಾರ ಅಸ್ಥಿರವಾಗಿದೆಯೇ? 140 ಜನ ಶಾಸಕರಿದ್ದಾರೆ. ಇಡೀ ರಾಜ್ಯದ ಜನ ಕಾಂಗ್ರೆಸ್‍ಗೆ ಆಶೀರ್ವಾದ ಮಾಡಿದ್ದಾರೆ ಎಂದು ಹೇಳಿದ್ದಾರೆ.

    ಸೋಮವಾರ ಹಾಸನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ್ದ ಮಾಜಿ ಸಚಿವ ಹೆಚ್.ಡಿ ರೇವಣ್ಣ ಅವರು ಬಜೆಟ್ ಪುಸ್ತಕದಲ್ಲಿ ನಮ್ಮ ಜಿಲ್ಲೆಯ ಹೆಸರೇ ಇರಲಿಲ್ಲ, ಆದರೂ ನಮ್ಮ ಜಿಲ್ಲೆಗೆ ಹೆಚ್ಚುವರಿಯಾಗಿ ಜೂಜು, ಎಣ್ಣೆ, ಮಟ್ಕಾ, ಗಾಂಜಾ ಗ್ಯಾರಂಟಿ ಕೊಟ್ಟಿದ್ದಾರೆ ಎಂದು ವ್ಯಂಗ್ಯವಾಡಿದ್ದರು. ಇದನ್ನೂ ಓದಿ: Hassan| ಅತ್ತೆ-ಸೊಸೆ ಜಗಳ; ಕೆರೆಗೆ ಹಾರಿ ತಾಯಿ, ಮಗ ಆತ್ಮಹತ್ಯೆ

  • ಬೆಂಗಳೂರು ವಿವಿಗೆ ಡಾ. ಮನಮೋಹನ್‌ ಸಿಂಗ್‌ ಹೆಸರಿಡಲು ಜೆಡಿಎಸ್‌ ವಿರೋಧ

    ಬೆಂಗಳೂರು ವಿವಿಗೆ ಡಾ. ಮನಮೋಹನ್‌ ಸಿಂಗ್‌ ಹೆಸರಿಡಲು ಜೆಡಿಎಸ್‌ ವಿರೋಧ

    – ಮೈಸೂರಲ್ಲಿ ಕಟ್ಟುತ್ತಿರೋ ನಿಮ್ಮ ಹೊಸ ಮನೆಗೆ ‘ಮನಮೋಹನ್‌ ಸಿಂಗ್’‌ ಅಂತ ಹೆಸರಿಡಿ
    – ನಿಮ್ಮ ಸೊಸೆ ಒಡೆತನದ ಕ್ಲಬ್‌ಗೆ ಮರುನಾಮಕರಣ ಮಾಡಿ ಅಂತ ಸಿದ್ದರಾಮಯ್ಯಗೆ ಟಾಂಗ್‌

    ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯಕ್ಕೆ (Bengaluru University) ಮಾಜಿ ಪ್ರಧಾನಿ ಡಾ. ಮನಮೋಹನ್‌ ಸಿಂಗ್‌ (Manmohan Singh) ಅವರ ಹೆಸರಿಡಲು ಜೆಡಿಎಸ್‌ ವಿರೋಧ ವ್ಯಕ್ತಪಡಿಸಿದೆ.

    ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್‌ ಹಾಕಿರುವ ಜೆಡಿಎಸ್‌, ಸಿಎಂ ಸಿದ್ದರಾಮಯ್ಯ ಅವರೇ, ಬೆಂಗಳೂರು ವಿಶ್ವವಿದ್ಯಾಲಯ ನಿಮ್ಮ ಮನೆತನದ ಆಸ್ತಿಯಲ್ಲ. ಕಾಂಗ್ರೆಸ್ ಪಕ್ಷದ ಆಸ್ತಿಯೂ ಅಲ್ಲ ಎಂದು ಟಾಂಗ್‌ ಕೊಟ್ಟಿದೆ. ಇದನ್ನೂ ಓದಿ: ಹಠಾತ್‌ ಎದೆನೋವು – ಉಪರಾಷ್ಟ್ರಪತಿ ಜಗದೀಪ್‌ ಧನಕರ್‌ ಆಸ್ಪತ್ರೆಗೆ ದಾಖಲು

    ಎಕ್ಸ್‌ ಪೋಸ್ಟ್‌ನಲ್ಲಿ ಏನಿದೆ?
    ಸಿಎಂ ಸಿದ್ದರಾಮಯ್ಯ ಅವರೇ ಬೆಂಗಳೂರು ವಿಶ್ವವಿದ್ಯಾಲಯ ನಿಮ್ಮ ಮನೆತನದ ಆಸ್ತಿಯಲ್ಲ. ಕಾಂಗ್ರೆಸ್ ಪಕ್ಷದ ಆಸ್ತಿಯೂ ಅಲ್ಲ. ‘ಬೆಂಗಳೂರು’ ಎಂಬುದು ಈ ನೆಲಮೂಲದ ಹೆಗ್ಗುರುತು. ಸಮಸ್ತ ಕನ್ನಡಿಗರ ಹೆಮ್ಮೆ. ಹಾಗೂ ಕನ್ನಡಿಗರ ಪ್ರತಿಧ್ವನಿ. ಬೆಂಗಳೂರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಖ್ಯಾತಿ ಪಡೆದ ನಗರ. ಬೆಂಗಳೂರು ಎಂಬುದೇ ಒಂದು ವಿಶ್ವ ಪ್ರಸಿದ್ಧ ಬ್ರ್ಯಾಂಡ್. ಅದೇ ಬೆಂಗಳೂರು ಹೆಸರಿಗೆ ಇರುವ ಶಕ್ತಿ.

    ನಮಗೆ ಡಾ.ಮನಮೋಹನ್ ಸಿಂಗ್ ಅವರ ಮೇಲೆ ಅಪಾರವಾದ ಗೌರವವಿದೆ. ಆದರೆ, ‘ಬೆಂಗಳೂರು ನಗರ ವಿವಿ’ಗೆ ಪರ್ಯಾಯವಾಗಿ ಬೇರೆ ಯಾವುದೇ ಹೆಸರಿಡಲು ತೀವ್ರ ವಿರೋಧವಿದೆ. ಈ ವಿಚಾರದಲ್ಲಿ ಕರ್ನಾಟಕದ ಜನತೆಯೂ ಸಹ ಕಾಂಗ್ರೆಸ್‌ ಸರ್ಕಾರದ ಈ ನಿರ್ಧಾರವನ್ನು ಒಪ್ಪುವುದಿಲ್ಲ.

    ರಾಜ್ಯದಲ್ಲಿ ಕನ್ನಡ ಭಾಷೆ, ನೆಲ, ಜಲ ನಾಡಿಗಾಗಿ ಹೋರಾಡಿದ ಸಾವಿರಾರು ಕನ್ನಡಿಗ ಸಾಧಕರು ಇದ್ದಾರೆ. ಹಲವು ಕ್ಷೇತ್ರಗಳಲ್ಲಿ ಸಾಧನೆ ಮಾಡಿ ಕರ್ನಾಟಕಕ್ಕೆ ಕೀರ್ತಿ ತಂದ ಮಹನೀಯರಿದ್ದಾರೆ. ಆ ಕನ್ನಡಿಗರು ಕಾಂಗ್ರೆಸ್ಸಿಗರ ಕಣ್ಣಿಗೆ ಬೀಳಲಿಲ್ಲವೇ?

    ಸಿದ್ದರಾಮಯ್ಯನವರೇ.. ಅಷ್ಟು ಅಭಿಮಾನ, ಗೌರವ ಇದ್ದರೆ ಮೈಸೂರಿನಲ್ಲಿ ನಿರ್ಮಿಸುತ್ತಿರುವ ನಿಮ್ಮ ಹೊಸ ಮನೆಗೆ ಮನಮೋಹನ್ ಸಿಂಗ್ ನಿವಾಸ ಎಂದು ಹೆಸರಿಟ್ಟುಕೊಳ್ಳಿ. ನಿಮ್ಮ ಸೊಸೆಯ ಒಡೆತನದಲ್ಲಿರುವ ಬಹುಕೋಟಿ ಮೌಲ್ಯದ ಐಶಾರಾಮಿ ಕ್ಲಬ್‌ಗೆ ಮರುನಾಮಕರಣ ಮಾಡಿಕೊಳ್ಳಿ.

    ದೆಹಲಿಯ ಹೊಸದಾಗಿ ನಿರ್ಮಿಸಿದ ಕಾಂಗ್ರೆಸ್‌ ಕಚೇರಿಗೆ ‘ಇಂದಿರಾ ಭವನ’ ಎಂದು ಹೆಸರಿಟ್ಟಿರಿ. ಅದಕ್ಕೆ ಮನಮೋಹನ್‌ ಸಿಂಗ್‌ ಹೆಸರಿಡಲು ಇಟಲಿ ಕಾಂಗ್ರೆಸ್‌ನ ಆಪ್ತರ ಗುಂಪು ಒಪ್ಪಲಿಲ್ಲ ಎಂಬುದು ತಮಗೆ ತಿಳಿದಿರುವ ವಿಷಯ. ಆದರೆ ಕರ್ನಾಟಕದಲ್ಲಿ ಕಾಂಗ್ರೆಸ್ ನೇತೃತ್ವದ ಆಡಳಿತವಿರುವ ಕಾರಣ ‘ಗುಲಾಮಿ ಕಾಂಗ್ರೆಸ್‌’ ನಾಯಕರು, ಬೆಂಗಳೂರಿನಲ್ಲಿ ಬೇಳೆ ಬೇಯಿಸಿಕೊಳ್ಳುತ್ತೀರಿ. ಇದನ್ನೂ ಓದಿ: ಏ.4ರಿಂದ 14ರವರೆಗೆ ಬೆಂಗಳೂರು ಕರಗ – 20 ಲಕ್ಷ ಜನ ಭಾಗಿ ನಿರೀಕ್ಷೆ

    ಕೆಲ ತಿಂಗಳ ಹಿಂದಷ್ಟೆ ಬೆಂಗಳೂರಿನಲ್ಲಿ ರಾಜೀವ್ ಗಾಂಧಿ ಕಂಚಿನ ಪ್ರತಿಮೆ ಅನಾವರಣಗೊಳಿಸಲಾಗಿತ್ತು. ಈಗ ಬೆಂಗಳೂರು ವಿವಿಗೆ ಮನಮೋಹನ್‌ ಸಿಂಗ್‌ ಹೆಸರು ನಾಮಕರಣ ಮಾಡುವುದಾಗಿ ಘೋಷಿಸಿದ್ದೀರಿ. ಹೈಕಮಾಂಡ್‌ ಗುಲಾಮಗಿರಿಗೆ ಸದಾ ‘ಸಿದ್ಧ’ರಾಮಯ್ಯ ಎಂದು ಜೆಡಿಎಸ್‌ ಕಾಲೆಳೆದಿದೆ.

  • ಇಂದು ರಾಜ್ಯ ಬಜೆಟ್‌ ಮಂಡನೆ – ಬಜೆಟ್‌ಗೂ ಮುನ್ನ ಬಿಜೆಪಿ, ಜೆಡಿಎಸ್‌ ಪ್ರತಿಭಟನೆ

    ಇಂದು ರಾಜ್ಯ ಬಜೆಟ್‌ ಮಂಡನೆ – ಬಜೆಟ್‌ಗೂ ಮುನ್ನ ಬಿಜೆಪಿ, ಜೆಡಿಎಸ್‌ ಪ್ರತಿಭಟನೆ

    ಬೆಂಗಳೂರು: 2025-26ನೇ ಸಾಲಿನ ಆಯವ್ಯಯವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಮಂಡಿಸಲಿದ್ದಾರೆ. ವಿವಿಧ ಬೇಡಿಕೆಗಳನ್ನು ಸರ್ಕಾರದ ಮುಂದಿಟ್ಟು ಬಜೆಟ್‌ಗೂ ಮುನ್ನ ಬಿಜೆಪಿ, ಜೆಡಿಎಸ್ ಪ್ರತಿಭಟನೆ ನಡೆಸಲಿವೆ.

    ಬೆಳಗ್ಗೆ 9:30 ಕ್ಕೆ ವಿಧಾನಸೌಧ ಗಾಂಧಿ ಪ್ರತಿಮೆ‌ ಎದುರು ಮೈತ್ರಿ ನಾಯಕರು ಪ್ರತಿಭಟನೆ ನಡೆಸಲಿದ್ದಾರೆ. ಎಸ್‌ಸಿಎಸ್ಪಿ-ಟಿಎಸ್ಪಿ ಹಣ ಗ್ಯಾರಂಟಿಗಳಿಗೆ ಬಳಸಬಾರದು, ಶಾಸಕರ ಕ್ಷೇತ್ರಗಳಿಗೆ ತಲಾ 150 ಕೋಟಿ ಅನುದಾನ ಕೊಡಬೇಕು ಎಂದು ಆಗ್ರಹಿಸಿದ್ದಾರೆ.

    ರಾಜ್ಯ ಸರ್ಕಾರದ ಅಧಿಕ ಸಾಲಗಳ ಮತ್ತೊಂದು ಬಜೆಟ್ ಎಂದು ಆಪಾದಿಸಿ, ಗಾಂಧಿ ಪ್ರತಿಮೆಯಿಂದ ಕೆಂಗಲ್ ಗೇಟ್ ವರೆಗೆ ಪ್ರತಿಭಟನಾ ಮೆರಣಿಗೆ ನಡೆಸಲು ದೋಸ್ತಿಗಳು ಯೋಜಿಸಿದ್ದಾರೆ ಎನ್ನಲಾಗಿದೆ.

    ರಾಹುಕಾಲಕ್ಕೂ ಮುನ್ನ ಸಿಎಂ ಬಜೆಟ್‌ ಮಂಡನೆ ಆರಂಭ ಮಾಡಲಿದ್ದಾರೆ. ಕಳೆದ ವರ್ಷವೂ ರಾಹುಕಾಲಕ್ಕೂ ಮುನ್ನ ಬಜೆಟ್ ಮಂಡನೆ ಆರಂಭಿಸಿದ್ದರು. ಬೆಳಗ್ಗೆ 10:30 ಕ್ಕೆ ಆರಂಭವಾಗುವ ರಾಹುಕಾಲ ಮಧ್ಯಾಹ್ನ 12:30 ರ ವರೆಗೂ ಇರಲಿದೆ. ಹೀಗಾಗಿ, ಸಿಎಂ ರಾಹುಕಾಲ ಶುರುವಿಗೂ ಮುನ್ನ ಬೆಳಗ್ಗೆ 10:15 ಕ್ಕೆ ಬಜೆಟ್ ಓದು ಆರಂಭಿಸಲಿದ್ದಾರೆ.

  • ಚುನಾವಣೆ ಬಂದರೆ ಮಾತ್ರ ಗ್ಯಾರಂಟಿ ಹಣ ಹಾಕ್ತಾರೆ – ಸುರೇಶ್ ಬಾಬು ಕಿಡಿ

    ಚುನಾವಣೆ ಬಂದರೆ ಮಾತ್ರ ಗ್ಯಾರಂಟಿ ಹಣ ಹಾಕ್ತಾರೆ – ಸುರೇಶ್ ಬಾಬು ಕಿಡಿ

    ಬೆಂಗಳೂರು: ಚುನಾವಣೆ ಬಂದರೆ ಮಾತ್ರ ಗ್ಯಾರಂಟಿ ಹಣ ಹಾಕ್ತಾರೆ ಎಂದು ಜೆಡಿಎಸ್ ಶಾಸಕ ಸುರೇಶ್ ಬಾಬು (Suresh Babu) ಆಕ್ರೋಶ ಹೊರಹಾಕಿದ್ದಾರೆ.

    ಇಂದು ಗ್ಯಾರಂಟಿ ಯೋಜನೆ ಹಣ ವಿಳಂಬ, ಸಚಿವ ವೆಂಕಟೇಶ್‌ರಿಂದ ಎಂಜಿನಿಯರ್‌ಗೆ ಧಮ್ಕಿ ಹಾಕಿದ ಪ್ರಕರಣ ಖಂಡಿಸಿ ಜೆಡಿಎಸ್‌ನ ಶಾಸಕರು ಸುರೇಶ್ ಬಾಬು ನೇತೃತ್ವದಲ್ಲಿ ವಿಧಾನಸೌಧದ ಗಾಂಧಿ ಪ್ರತಿಮೆ ಮುಂದೆ ಪ್ರತಿಭಟನೆ ನಡೆಸಿದರು.ಇದನ್ನೂ ಓದಿ: ತರುಣ್ ಸುಧೀರ್ ನಿರ್ಮಾಣದ ಹೊಸ ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ ವಿಜೇತ ಸಂಗೀತ ನಿರ್ದೇಶಕ ಎಂಟ್ರಿ

    ಪ್ರತಿಭಟನೆ ವೇಳೆ ಮಾತನಾಡಿದ ಅವರು, ಸರ್ಕಾರ ಅನೇಕ ಭಾಗ್ಯಗಳು ಕೊಡ್ತಿದೆ. ಬೇಕಾಬಿಟ್ಟಿ ಗ್ಯಾರಂಟಿ ಹಣ ಕೊಡ್ತಿದ್ದಾರೆ. ಚುನಾವಣೆ ಬಂದರೆ ಮಾತ್ರ ಗ್ಯಾರಂಟಿ ಹಣ ಹಾಕ್ತಾರೆ. ಗ್ಯಾರಂಟಿ ಹಣ ತಿಂಗಳ ಪ್ರಾರಂಭದ 1 ರಿಂದ 5ನೇ ತಾರೀಖಿನ ಒಳಗೆ ಹಣ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.

    ಸಚಿವ ವೆಂಕಟೇಶ್ ಎಂಜಿನಿಯರ್‌ಗೆ ಧಮ್ಕಿ ಹಾಕಿದ್ದಾರೆ. ಸಚಿವರು ಹೀಗೆ ಮಾತಾಡೋದು ಸರಿಯಲ್ಲ. ಜೆಡಿಎಸ್ ಅವರಿಗೆ ಯಾಕೆ ಗುತ್ತಿಗೆ ಕೊಡ್ತೀರಾ ಎಂದು ಕೇಳುತ್ತಾರೆ. ಸಚಿವರು ಕೂಡಲೇ ತಮ್ಮ ಹೇಳಿಕೆ ವಾಪಸ್ ಪಡೆದು, ಕೂಡಲೇ ಕ್ಷಮೆ ಕೇಳಬೇಕು ಎಂದು ಕಿಡಿಕಾರಿದರು.

    ಗುತ್ತಿಗೆದಾರರಿಂದ ಕಮೀಷನ್ ಪಡೆಯುವ ಕೆಲಸ ಈ ಸರ್ಕಾರದಲ್ಲಿ ಆಗ್ತಿದೆ. ಈ ಸರ್ಕಾರಕ್ಕೆ ನಾಚಿಕೆ ಆಗುವುದಿಲ್ಲವಾ? ಸಿಎಂ ಅವರೇ ಕಮೀಷನ್ ಕೊಡಬೇಡಿ ಎಂದು ಹೇಳಿದ್ದಾರೆ. ಸಿಎಂ ಅವರೇ ಹೀಗೆ ಹೇಳ್ತಿದ್ದಾರೆ ಅಂದರೆ ಕಮೀಷನ್ ನಡೆಯುತ್ತಿದೆ ಎಂದರ್ಥ. ಕಾಂಗ್ರೆಸ್ ಸರ್ಕಾರ ರಾಜ್ಯವನ್ನು ಅಧೋಗತಿಗೆ ತೆಗೆದುಕೊಂಡು ಹೋಗಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

    ಯಾವುದೇ ಇಲಾಖೆಗೆ ನ್ಯಾಯ ಒದಗಿಸುವ ಕೆಲಸ ಮಾಡಿಲ್ಲ. ರಾಜ್ಯದ ಬೊಕ್ಕಸದ ಹಣ ಎಲ್ಲಾ ಇಲಾಖೆಗೆ ವಿತರಣೆ ಮಾಡಬೇಕು. SCSP-TSP ಹಣವನ್ನ ಗ್ಯಾರಂಟಿಗೆ ಕೊಡೋದು ಸರಿಯಲ್ಲ. SC-ST ಜನರಿಗೆ ಮಾತ್ರ ಹಣ ನೀಡಬೇಕು. ಒಬ್ಬ ಮಂತ್ರಿ ಜೈಲಿಗೆ ಹೋಗಿ ಬಂದರು ನಾಚಿಕೆ ಆಗುವುದಿಲ್ಲ. ದಲಿತರ ವೋಟ್ ಮಾತ್ರ ನಿಮಗೆ ಬೇಕಾ? ಅವರ ಅಭಿವೃದ್ಧಿ ಬೇಡ್ವಾ? ದಲಿತರಿಗೆ ಈ ಸರ್ಕಾರ ಅನ್ಯಾಯ ಮಾಡ್ತಿದೆ ಎಂದು ಆಕ್ರೋಶ ಹೊರಹಾಕಿದರು.ಇದನ್ನೂ ಓದಿ: ಬಾಯಿ ಚಪ್ಪರಿಸುವ ಟೊಮೆಟೊ ಸಾಸ್‌ನಲ್ಲಿ ಅಪಾಯಕಾರಿ ರಾಸಾಯನಿಕ ಬಳಕೆ!

     

  • ಗ್ಯಾರಂಟಿ ಎಫೆಕ್ಟ್ – ರಸ್ತೆ ಗುಂಡಿ ಮುಚ್ಚೋಕು ಸರ್ಕಾರದ ಬಳಿ ದುಡ್ಡಿಲ್ಲ: ಹೆಚ್.ಟಿ ಮಂಜು

    ಗ್ಯಾರಂಟಿ ಎಫೆಕ್ಟ್ – ರಸ್ತೆ ಗುಂಡಿ ಮುಚ್ಚೋಕು ಸರ್ಕಾರದ ಬಳಿ ದುಡ್ಡಿಲ್ಲ: ಹೆಚ್.ಟಿ ಮಂಜು

    ಮಂಡ್ಯ: ಗ್ಯಾರಂಟಿ ಯೋಜನೆಯಿಂದ ಸರ್ಕಾರ ಆರ್ಥಿಕವಾಗಿ ದಿವಾಳಿಯಾಗಿದೆ. ರಸ್ತೆ ಗುಂಡಿ ಮುಚ್ಚೋಕು ಸರ್ಕಾರದ ಬಳಿ ದುಡ್ಡಿಲ್ಲ ಎಂದು ಕೆ.ಆರ್ ಪೇಟೆ ಶಾಸಕ ಹೆಚ್.ಟಿ ಮಂಜು (H.T Manju) ವ್ಯಂಗ್ಯವಾಡಿದ್ದಾರೆ.

    ಮಂಡ್ಯದಲ್ಲಿ (Mandya) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಕೆಟ್ಟ ಸಮಯದಲ್ಲಿ ಶಾಸಕನಾಗಿದ್ದೇನೆ. ಕ್ಷೇತ್ರದಲ್ಲಿ ಕನಿಷ್ಠ ಪ್ರಮಾಣದ ಕೆಲಸವನ್ನೂ ಮಾಡಲು ಆಗುತ್ತಿಲ್ಲ. ಗ್ರಾಮೀಣ ಪ್ರದೇಶದ ಅಭಿವೃದ್ಧಿಗೆ ಅನುದಾನ ನೀಡುವಲ್ಲಿ ಸರ್ಕಾರ ವಿಫಲವಾಗಿದೆ. ಕೆರೆ ಕಟ್ಟೆ ದುರಸ್ಥಿಗೂ ಸರ್ಕಾರದ ಬಳಿ ಹಣ ಇಲ್ಲ. ರಸ್ತೆ ಗುಂಡಿ ಮುಚ್ಚುವುದಕ್ಕೂ ಹಣ ಕೊಡುತ್ತಿಲ್ಲ ಎಂದು ಅಳಲನ್ನು ತೋಡಿಕೊಂಡಿದ್ದಾರೆ.

    ಅನುದಾನಕ್ಕಾಗಿ ಹೋರಾಟ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ. ಕೆರೆ ಕಟ್ಟೆಗಳು ಒಡೆದು ಮೂರ್ನಾಲ್ಕು ವರ್ಷಗಳಾಗಿವೆ. ಮಳೆಯಿಂದ ಒಡೆದ ಕೆರೆ ಏರಿ ದುರಸ್ತಿ ಮಾಡಿಸಲು ಸರ್ಕಾರ ಹಣ ನೀಡುತ್ತಿಲ್ಲ. ಈ ಬಗ್ಗೆ ಅಧಿವೇಶನದಲ್ಲೂ ಮಾತನಾಡಿದ್ದೇನೆ. ಸಿಎಂ ಸಿದ್ದರಾಮಯ್ಯ ಅವರಿಗೆ ನೇರವಾಗಿ ಮನವಿ ಮಾಡಿಕೊಂಡಿದ್ದೇನೆ. ಮನವಿ ಸಲ್ಲಿಸಿದಾಗ ಸ್ಪಂದಿಸುವ ಭರವಸೆ ನೀಡಿದ್ದರು. ಆದರೆ ಈವರೆಗೂ ಹಣ ಬಿಡುಗಡೆಯಾಗಿಲ್ಲ ಎಂದಿದ್ದಾರೆ.

    ನಮ್ಮ ಕ್ಷೇತ್ರದ ರೈತರ ಸ್ಥಿತಿ ಶೋಚನೀಯವಾಗಿದೆ. ರಸ್ತೆಗಳಲ್ಲಿ ಮಂಡಿ ಉದ್ದದ ಗುಂಡಿ ಬಿದ್ದಿವೆ. ಇದರಿಂದ ಸಣ್ಣ ಸಣ್ಣ ವಾಹನಗಳು ಸಂಚಾರ ಮಾಡೋದಕ್ಕೂ ಸಾದ್ಯವಾಗುತ್ತಿಲ್ಲ. ಬಜೆಟ್ ಅಧಿವೇಶನದಲ್ಲಿ ಅನುದಾನಕ್ಕಾಗಿ ಅಂತಿಮವಾಗಿ ಮಾನವಿ ಮಾಡುತ್ತೇನೆ. ಆಗಲೂ ಸ್ಪಂದಿಸದಿದ್ದರೆ ರೈತರೊಂದಿಗೆ ಸೇರಿ ಪಾದಯಾತ್ರೆ ಮಾಡುತ್ತೇನೆ. ಆ ಪಾದಯಾತ್ರೆಗೆ ನಿಖಿಲ್ ಕುಮಾರಸ್ವಾಮಿ ಚಾಲನೆ ನೀಡುತ್ತಾರೆ. ಹೋರಾಟದ ಮೂಲಕ ಅನುದಾನ ಪಡೆದುಕೊಳ್ಳುವ ಪ್ರಯತ್ನ ಮಾಡುತ್ತೇವೆ ಎಂದಿದ್ದಾರೆ.