ಬೆಂಗಳೂರು: ಸಚಿವರ ಹನಿಟ್ರ‍್ಯಾಪ್ ಕೇಸ್‌ನ ಟೀಸರ್‌ನಲ್ಲಿ ಒಂದು ತೋರಿಸಿ, ಸಿನಿಮಾವನ್ನು ಬೇರೆಯದ್ದೇ ರೀತಿಯಲ್ಲಿ ತೋರಿಸುವ ಕೆಲಸ ಆಗುತ್ತಿದೆ ಎಂದು ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ (Nikhil Kumaraswamy) ಆರೋಪ ಮಾಡಿದ್ದಾರೆ.
ಹನಿಟ್ರ‍್ಯಾಪ್ ಕೇಸ್ (HoneyTrap Case) ಸಂಬಂಧ ಜೆಡಿಎಸ್ (JDS) ಕಚೇರಿಯಲ್ಲಿ ಮಾತನಾಡಿದ ಅವರು, ಸರ್ಕಾರದ ಸಚಿವರೇ ಸದನದ ಒಳಗೆ ಹನಿಟ್ರ‍್ಯಾಪ್ ಬಗ್ಗೆ ಆರೋಪ ಮಾಡಿದ್ದರು. ಈಗ ಅವರ ಮಗ ಕೊಲೆ ಕೇಸ್ ಬಗ್ಗೆ ಆರೋಪ ಮಾಡಿದ್ದಾರೆ. ಇದೆಲ್ಲವನ್ನೂ ರಾಜ್ಯದ ಜನರಿಗೆ ಬಿಡುತ್ತೇನೆ. ಮೊದಲು ಸಿನಿಮಾ ಟೀಸರ್ ತೋರಿಸಿದರು. ಆದರೆ ಒಳಗೆ ಸಿನಿಮಾ ಬೇರೆಯೇ ಆಗಿದೆ. ಅದೇನು ಅಂತ ಅವರಿಗೆ ಬಿಡುತ್ತೇನೆ. ಹನಿಟ್ರ‍್ಯಾಪ್ ಪ್ರಜಾಪ್ರಭುತ್ವಕ್ಕೆ ಮಾರಕ. ವಿಧಾನಸೌಧದಲ್ಲಿ ಹನಿಟ್ರ‍್ಯಾಪ್ ಬಗ್ಗೆ ಪ್ರಸ್ತಾಪ ಆಗುವುದು ಅತ್ಯಂತ ಮಾರಕವಾದ ವಿಚಾರ. ಯಾವುದೋ ಸ್ಥಾನದ ಮೇಲೆ ಅಪೇಕ್ಷೆ ಇಟ್ಟವರು ಹೀಗೆ ಅಡ್ಡದಾರಿ ಹಿಡಿದಿದ್ದಾರೆ. ವಾಮಮಾರ್ಗದಲ್ಲಿ ತೇಜೋವಧೆ ಮಾಡೋದು ಸರಿಯಲ್ಲ. ಇದು ಸಮಾಜಕ್ಕೆ ಮಾರಕ ಎಂದು ತಿಳಿಸಿದರು.ಇದನ್ನೂ ಓದಿ:ಸಿದ್ದರಾಮಯ್ಯಗೂ ಔರಂಗಜೇಬ್‌ಗೂ ಯಾವುದೇ ವ್ಯತ್ಯಾಸ ಇಲ್ಲ: ಹರೀಶ್ ಪೂಂಜಾ
ಹನಿಟ್ರ‍್ಯಾಪ್ ಯಾರು ಮಾಡಿದ್ದಾರೆ ಎಂದು ಸರ್ಕಾರ ನಡೆಸುತ್ತಿರುವವರು ಹೇಳಬೇಕು. ಪಾರದರ್ಶಕವಾಗಿ ತನಿಖೆ ಮಾಡಿ ಸರ್ಕಾರ ಹನಿಟ್ರ‍್ಯಾಪ್ ಬಗ್ಗೆ ಜನರ ಮುಂದೆ ಇಡಲಿ. ಪ್ರಭಾವಿ ಸಚಿವರಿಗೆ ಹನಿಟ್ರ‍್ಯಾಪ್ ಆಗಿದೆ. ಸರ್ಕಾರ ಗಂಭೀರವಾಗಿ ತೆಗೆದುಕೊಳ್ಳಬೇಕು. ಅವರೇ ಸರ್ಕಾರ ನಡೆಸುತ್ತಿದ್ದಾರೆ. ಅವರೇ ತನಿಖೆ ಮಾಡಿ ಸತ್ಯಾಸತ್ಯಾತೆ ಹೊರಗೆ ಇಡಲಿ ಎಂದು ಆಗ್ರಹಿಸಿದರು.
ಹನಿಟ್ರ‍್ಯಾಪ್ ಕೇಸ್‌ನ ತನಿಖೆ ನಿಧಾನವಾಗುತ್ತಿದೆ. ಸರ್ಕಾರ 2 ವರ್ಷಗಳಲ್ಲಿ ವಿರೋಧ ಪಕ್ಷದವರನ್ನ ಮುಗಿಸಲು ಯಾವ ಮಟ್ಟಕ್ಕೆ ಬೇಕಾದರೂ ಇಳಿದು ಕೆಲಸ ಮಾಡಿದೆ. ಆದರೆ ಹನಿಟ್ರ‍್ಯಾಪ್ ಕೇಸ್‌ನಲ್ಲಿ ಯಾಕೆ ತನಿಖೆ ನಿಧಾನವಾಗುತ್ತಿದೆ. ಸಿಟಿ ರವಿ (CT Ravi) ಕೇಸ್‌ನಲ್ಲಿ ಅಷ್ಟೊಂದು ಆಸಕ್ತಿವಹಿಸಿ ಏನೇನೋ ಮಾಡಿದರು. ಅವರೇನು ಭಯೋತ್ಪಾದಕರಾ? ಅಷ್ಟೊಂದು ಹೈಡ್ರಾಮಾ ಮಾಡೋಕೆ? ಆದರೆ ಹಾಗೆ ಎಂಎಲ್‌ಸಿ (MLC) ಒಬ್ಬರನ್ನ ನಡೆಸಿಕೊಂಡಿದ್ದು ಸರಿಯಲ್ಲ. ವಿಪಕ್ಷಗಳನ್ನು ಹಾಗೇ ನಡೆಸಿಕೊಳ್ಳುವವರು, ಸಚಿವರ ಮೇಲೆ ಆರೋಪ ಮಾಡಿದರೆ ಯಾಕೆ ಸರಿಯಾಗಿ ತನಿಖೆ ಮಾಡುತ್ತಿಲ್ಲ ಎಂದು ವಾಗ್ದಾಳಿ ನಡೆಸಿದರು.ಇದನ್ನೂ ಓದಿ:1 ಮುತ್ತಿಗೆ 50 ಸಾವಿರ, ಫುಲ್ ಕೋ ಆಪರೇಷನ್‌ಗೆ 15 ಲಕ್ಷ – ಟೀಚರಮ್ಮನ 1 ಮುತ್ತಿನ ಕಥೆ ಓದಿ
ಮಂಡ್ಯ: ಕೃಷಿ ಪತ್ತಿನ ಸಹಕಾರ ಸಂಘದ (Agricultural Credit Cooperative Society) ಚುನಾವಣೆಯಲ್ಲಿ ತಮ್ಮ ಪಕ್ಷದ ಪರವಾಗಿ ಮತಹಾಕದೇ ಕಾಂಗ್ರೆಸ್ ಪಕ್ಷದ ಪರವಾಗಿ ಮತಹಾಕಿದ್ದಕ್ಕೆ ಜೆಡಿಎಸ್ ಕಾರ್ಯಕರ್ತರು ಅಟ್ಟಹಾಸ ಮೆರೆದು, ಯುವಕ ಹಾಗೂ ಯುವಕನ ಕುಟುಂಬದ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಿರುವ ಘಟನೆ ಮಂಡ್ಯ ಜಿಲ್ಲೆ ನಾಗಮಂಗಲ (Nagamangala) ತಾಲ್ಲೂಕಿನ ಚೋಳೆನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಅಂದಹಾಗೆ ಸಕ್ಕರಿನಗರಿ ಮಂಡ್ಯ (Mandya) ಅಂದರೇ ರಾಜಕೀಯಕ್ಕೆ ಫೇಮಸ್. ಅದರಲ್ಲೂ ಗ್ರಾಮೀಣ ಭಾಗದಲ್ಲಿ ರಾಜಕಾರಣ ಹಾಸುಹೊದ್ದಿದೆ. ಆದರೆ ಸೊಸೈಟಿ ಚುನಾವಣೆಯಲ್ಲೂ ರಾಜಕೀಯ ಕೆಸರೆರಚಾಟ ಆರಂಭಗೊಂಡಿದ್ದು, ಲೋಕಲ್ ಫೈಟ್ ನಲ್ಲೂ ಡರ್ಟಿ ಪಾಲಿಟಿಕ್ಸ್ ನಡೆಯುತ್ತಿದೆ.
ಅಂದಹಾಗೆ ಕೆಲ ದಿನಗಳ ಕೆಳಗೆ ನಾಗಮಂಗಲ ತಾಲೂಕಿನ ಮುದ್ದಿನಹಟ್ಟಿ ಕೃಷಿ ಪತ್ತಿನ ಸಹಕಾರ ಸಂಘದ ಎಲೆಕ್ಷನ್ ಇತ್ತು. ಈ ವೇಳೆ ಚೋಳನಹಳ್ಳಿ ಗ್ರಾಮದ ವಿಕಾಸ್, ಕಾಂಗ್ರೆಸ್ ಪರವಾಗಿ ಚುನಾವಣೆ ಮಾಡಿದ್ದ. ಅಲ್ಲದೇ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಪರವಾಗಿ ಮತಚಲಾವಣೆ ಮಾಡಿದ್ದ. ಇದರಿಂದ ಕುಪಿತಗೊಂಡ ಗ್ರಾಮದ ಮಾಜಿ ಗ್ರಾಪಂ ಅಧ್ಯಕ್ಷ ಪ್ರಶಾಂತ್ ಗೌಡ ಅಂಡ್ ಗ್ಯಾಂಗ್ ವಿಕಾಸ್ ಹಾಗೂ ಸಹೋದರ ರಘು ಎಂಬುವವರ ಮೇಲೆ ಹಲ್ಲೆ ನಡೆಸಿದ್ರು. ಈ ಸಂಬಂಧ ನಾಗಮಂಗಲ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ರು. ಆದರೆ ದೂರು ನೀಡಿದ್ರು ಎಂದು ಮತ್ತೆ ಕುಪಿತಗೊಂಡು ವಿಕಾಸ್ ಹಾಗೂ ಆಕೆಯ ತಂಗಿ ನೇತ್ರಾವತಿ ಎಂಬಾಕೆಯ ಮೇಲೆ ಕಲ್ಲಿನಿಂದ ಪ್ರಶಾಂತ್, ಪ್ರತಾಪ್, ರಾಜು, ಪ್ರಮೋದ್, ಹರೀಶ್ ಎಂಬುವವರು ಹಲ್ಲೆ ನಡೆಸಿದ್ದಾರೆ. ಇದರಿಂದಾಗಿ ನೇತ್ರಾವತಿ ತುಟಿ, ಹಲ್ಲಿನ ಭಾಗಕ್ಕೆ ಗಂಭೀರವಾದ ಗಾಯವಾಗಿದೆ.
ಇನ್ನು ಹಲ್ಲೆ ಮಾಡಿ ದೂರು ನೀಡಿದ ನಂತರ ಸಹಾ ವಿಕಾಸ್ ಕುಟುಂಬಕ್ಕೆ ಮಾಜಿ ಗ್ರಾಪಂ ಅಧ್ಯಕ್ಷ ಪ್ರಶಾಂತ್ ಗೌಡ, ಅವಾಜ್ ಹಾಕಿದ್ದಾನೆ. ಯಾರು ಏನೂ ಮಾಡಲು ಸಾಧ್ಯವಿಲ್ಲ ಎಂದು ಬೆದರಿಕೆ ಹಾಕಿದ್ದಾರೆ. ಹೀಗಾಗಿ ಪ್ರಾಣ ಭಯದಲ್ಲೇ ಇಡೀ ಕುಟುಂಬ ಕಾಲ ಕಳೆಯುತ್ತಿದೆ. ಇನ್ನು ಗಂಭೀರವಾಗಿ ಗಾಯಗೊಂಡಿರೋ ನೇತ್ರಾವತಿಗೆ ಮಂಡ್ಯದ ಮಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ. ಈ ನಡುವೆ ನಾಗಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗುತ್ತಿದ್ದಂತೆ ಪ್ರಶಾಂತ್ ಗೌಡ ಸೇರಿದಂತೆ ಐವರು ಎಸ್ಕೇಪ್ ಆಗಿದ್ದಾರೆ. ಪೊಲೀಸರು ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ. ಇನ್ನು ನಮಗೆ ನ್ಯಾಯಬೇಕು. ಕೇವಲ ಎಫ್‌ಐಆರ್ ಆದರೆ ಸಾಲದು ಆರೋಪಿಗಳನ್ನ ಬಂಧಿಸುವಂತೆ ಒತ್ತಾಯಿಸಿದ್ದಾರೆ.
ಸ್ಥಳೀಯ ಚುನಾವಣೆಯಲ್ಲೂ ಡರ್ಟಿ ಪಾಲಿಟಿಕ್ಸ್ ಆರಂಭಗೊಂಡು ಒಬ್ಬರ ಮೇಲೆ ಒಬ್ಬರು ಮಾರಣಾಂತಿಕವಾಗಿ ಹಲ್ಲೆ ನಡೆಸುವ ಹಂತಕ್ಕೆ ತಲುಪಿರುವುದು ದುರಂತವೇ ಸರಿ.
ಬೆಂಗಳೂರು: 4 ದಿನಗಳ ದೆಹಲಿ ಪ್ರವಾಸ ಮುಗಿಸಿರುವ ಸಚಿವ ಸತೀಶ್ ಜಾರಕಿಹೊಳಿ (Satish Jarkiholi) ಬೆಂಗಳೂರಿಗೆ ವಾಪಸ್ ಆಗಿದ್ದಾರೆ.
ಹೆಚ್‌ಡಿ ಕುಮಾರಸ್ವಾಮಿ (HD Kumarawamy) ಭೇಟಿಯಿಂದ ಉದ್ಭವವಾಗಿ ನಾನಾ ಪ್ರಶ್ನೆಗಳಿಗೆ ಉತ್ತರ ನೀಡಿ ಮುಖ್ಯಮಂತ್ರಿಯಾಗಲು ಜೆಡಿಎಸ್ (JDS) ಬೆಂಬಲ ಕೋರಲು ಹೋಗಿದ್ದರು ಎಂಬ ಜಿಟಿ ದೇವೇಗೌಡ ಆರೋಪವನ್ನು ತಳ್ಳಿ ಹಾಕಿದ್ದಾರೆ. ಭೂತಯ್ಯನ ಮಗ ಅಯ್ಯು ಚಿತ್ರದ ಸನ್ನಿವೇಶವೊಂದನ್ನು ವಿವರಿಸಿ ನಾನು ಹಾಗಲ್ಲ ಎಂದಿದ್ದಾರೆ. ಇದನ್ನೂ ಓದಿ: ಐ ಲವ್ ಯು ನಂದಿನಿ ಅಂತಿದ್ರು, ಈಗ ಐ ಹೇಟ್ ಯು ನಂದಿನಿ ಅಂತಾ ಜಾಹೀರಾತು ಕೊಡಬೇಕು: ಅಶೋಕ್ ವಂಗ್ಯ
ನಮ್ಮ ಪಕ್ಷದ ಗಾಡಿ ಫುಲ್ ಇದೆ. ಜೆಡಿಎಸ್‌ನ 14 ಶಾಸಕರನ್ನು ತಗೆದುಕೊಂಡು ಏನು ಮಾಡೋಣ ಎಂದು ಕೇಳಿದ್ದಾರೆ. ಮುಖ್ಯಮಂತ್ರಿ ಮತ್ತು ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕಾಗಿ ನಾವು ವೇಟಿಂಗ್ ಲಿಸ್ಟ್‌ನಲ್ಲಿದ್ದೇವೆ. ಅಲ್ಲಿಯೇ ಕಾಯ್ತೇವೆ ಎಂದು ಜಾರಕಿಹೊಳಿ ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ಕರ್ನಾಟಕ ರಾಜ್ಯ ಈಸ್ಟ್ ಇಂಡಿಯಾ ಕಾಂಗ್ರೆಸ್ ಕಂಪನಿಯ ಕಪಿಮುಷ್ಟಿಯಲ್ಲಿದೆ: ಹೆಚ್‌ಡಿಕೆ
ದೇವೇಗೌಡರ ಭೇಟಿ ಆಕಸ್ಮಿಕ ಎಂದಿದ್ದಾರೆ. ಈ ನಡುವೆ ಸತೀಶ್ ಜಾರಕಿಹೊಳಿ ನಿವಾಸಕ್ಕೆ ಸಚಿವ ಎಂಬಿ ಪಾಟೀಲ್ ಭೇಟಿ ನೀಡಿ ಮಾತುಕತೆ ನಡೆಸಿದರು.
ನವದೆಹಲಿ: ಹಾಲು ಮತ್ತು ವಿದ್ಯುತ್ ದರ ಏರಿಕೆ ಮಾಡಿರುವ ರಾಜ್ಯ ಕಾಂಗ್ರೆಸ್ (Congress) ಸರ್ಕಾರದ ವಿರುದ್ಧ ಟೀಕಾಪ್ರಹಾರ ನಡೆಸಿರುವ ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಹೆಚ್.ಡಿ. ಕುಮಾರಸ್ವಾಮಿ (H D Kumaraswamy) ಅವರು, ಕರ್ನಾಟಕ ರಾಜ್ಯ ಈಸ್ಟ್ ಇಂಡಿಯಾ ಕಾಂಗ್ರೆಸ್ ಕಂಪನಿ ಕಪಿಮುಷ್ಟಿಯಲ್ಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಎರಡು ವರ್ಷಗಳ ಸರಣಿ ಸುಲಿಗೆ!
ಯುಗಾದಿ ಹಬ್ಬಕ್ಕೆ ಬೆಲೆ ‘ಏರಿಕೆ ಹೋಳಿಗೆ!!’
🔺 ಹಾಲು ಹಾಲಾಹಲ; 3ನೇ ಸಲ ದರ ಏರಿಕೆ!
2023 ಆಗಸ್ಟ್ ₹3
2024 ಜೂನ್ ₹2
2025 ಮಾರ್ಚ್, ಅಂದರೆ ಈಗ ₹4
🔺 ವಿದ್ಯುತ್ ಶಾಕ್!
ಈಗ ಎಲ್ಲರಿಗೂ ಪ್ರತೀ ಯೂನಿಟ್ಟಿಗೆ ₹36 ಪೈಸೆ ಬರೆ. ಮಹಾದೇವಪ್ಪನಿಗೂ ಶಾಕು! ಕಾಕಾ ಪಾಟೀಲಗೂ ಶಾಕು!!
ಒಂದು ಕೈಯಲ್ಲಿ ಕೊಟ್ಟು…
— ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy (@hd_kumaraswamy) March 28, 2025
ರಾಜ್ಯದಲ್ಲಿ ಹಾಲಿನ ಹಾಲಾಹಲ ಶುರುವಾಗಿದೆ. 3ನೇ ಸಲ ದರ ಏರಿಕೆ ಮಾಡಲಾಗಿದೆ. 2023 ಆಗಸ್ಟ್ ತಿಂಗಳಲ್ಲಿ 3 ರೂ., 2024 ಜೂನ್ ತಿಂಗಳಿನಲ್ಲಿ 2 ರೂ. ಹಾಗೂ 2025 ಮಾರ್ಚ್ ಅಂದರೆ ಈಗ 4 ರೂ. ಏರಿಕೆ ಮಾಡಲಾಗಿದೆ. ಹಾಗೆಯೇ ವಿದ್ಯುತ್ ಕೂಡ ದುಬಾರಿ ಆಗಿದೆ. ಜನರಿಗೆ ವಿದ್ಯುತ್ ಶಾಕ್ ನೀಡಿದ್ದಾರೆ. ಈಗ ಎಲ್ಲರಿಗೂ ಪ್ರತೀ ಯೂನಿಟ್‌ಗೆ 36 ಪೈಸೆ ಬರೆ. ಮಹಾದೇವಪ್ಪನಿಗೂ ಶಾಕು! ಕಾಕಾ ಪಾಟೀಲಗೂ ಶಾಕು!! ಎಂದು ರಾಜ್ಯ ಸರ್ಕಾರದ ಬಗ್ಗೆ ಕೇಂದ್ರ ಸಚಿವರು ಲೇವಡಿ ಮಾಡಿದ್ದಾರೆ. ಇದನ್ನೂ ಓದಿ: Milk Price Hike | ಗ್ಯಾರಂಟಿ ಸರ್ಕಾರದ ಬಂದ ಮೇಲೆ ಯಾವುದು ಎಷ್ಟು ಏರಿಕೆ? ಮುಂದೆ ಏನೇನು ಶಾಕ್ ಸಿಗುತ್ತೆ?
ಒಂದು ಕೈಯಲ್ಲಿ ಕೊಟ್ಟು 10 ಕೈಗಳಲ್ಲಿ ಕಿತ್ತುಕೊಳ್ಳುವ ದಶಾವತಾರಿ ರಾವಣರೂಪಿ ಸುಲಿಗೆ ಪ್ರವೃತ್ತಿ ಕನ್ನಡಿಗರ ಪಾಲಿಗೆ ಮರಣಶಾಸನ. ಹಾಲು, ವಿದ್ಯುತ್ ದರ ಏರಿಕೆ ಖಂಡನೀಯ. ನೆಪ ರೈತರದ್ದು, ಲಾಭ ಕೆಎಂಎಫ್‌ಗೆ! (KMF) ಕಂಪನಿ ಆಡಳಿತ ನಡೆಸುತ್ತಿದೆ ಸರ್ಕಾರ! ಮೊಸರು ದರ 4 ರೂ. ಏರಿಕೆ ಮಾಡಿದ್ದೀರಿ. ಈ ಹಣ ಏನು ಮಾಡುತ್ತೀರಿ? ರೈತರಿಗೆ ವರ್ಗಾಯಿಸುತ್ತೀರೋ ಅಥವಾ ಕೆಎಂಎಫ್ ತಾನೇ ಉಳಿಸಿಕೊಳ್ಳಲಿದೆಯೋ? ಸ್ಪಷ್ಟಪಡಿಸಿ ಎಂದು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಮೈಸೂರು-ಕುಶಾಲನಗರ ಚತುಷ್ಪಥ ಹೆದ್ದಾರಿಯ 3ನೇ ಪ್ಯಾಕೇಜ್‌ಗೆ ಕೇಂದ್ರ ಅನುಮೋದನೆ
ಇದು ಪ್ರಜಾಪ್ರಭುತ್ವ ಸರಕಾರವಲ್ಲ. ದರ ಏರಿಕೆ, ತೆರಿಗೆ ಹೇರಿಕೆ ಸರ್ಕಾರ! ಇದು ಈಸ್ಟ್ ಇಂಡಿಯಾ ಕಾಂಗ್ರೆಸ್ ಕಂಪನಿ! ಸುಲಿಗೆಯಷ್ಟೇ ನಿತ್ಯ ಕೃತ್ಯ. ಕರ್ನಾಟಕ ರಾಜ್ಯ ಈಸ್ಟ್ ಇಂಡಿಯಾ ಕಾಂಗ್ರೆಸ್ ಕಂಪನಿಯ ಕಪಿಮುಷ್ಟಿಯಲ್ಲಿದೆ. ಈಸ್ಟ್ ಇಂಡಿಯಾ ಕಾಂಗ್ರೆಸ್!! ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ನಾಳೆ ವರ್ಷದ ಮೊದಲ ಸೂರ್ಯಗ್ರಹಣ – 30 ರಿಂದ 50 ವರ್ಷಗಳ ಬಳಿಕ ಸಂಭವಿಸಲಿದೆ ಷಡ್ ಗ್ರಹಯೋಗ
ಬೆಂಗಳೂರು: ಮುಸ್ಲಿಮರಿಗೆ ಗುತ್ತಿಗೆ ಮೀಸಲಾತಿ ಕೊಡಲು ಸಂವಿಧಾನ ಬದಲಾವಣೆ ಮಾಡ್ತೀವಿ ಎಂಬ ಡಿಕೆಶಿ (DK Shivakumar) ಹೇಳಿಕೆ ಖಂಡಿಸಿ ಪ್ರತಿಭಟನೆ ನಡೆಸಿದ್ದು, ಡಿಕೆಶಿ ರಾಜೀನಾಮೆ ಕೊಡುವವರೆಗೂ ಹೋರಾಟ ಮಾಡುತ್ತೇವೆ ಎಂದು ಜೆಡಿಎಸ್ (JDS) ಎಸ್ಸಿ (SC) ಘಟಕದ ಅಧ್ಯಕ್ಷ ಮಾಜಿ ಶಾಸಕ ಅನ್ನದಾನಿ (Annadani) ಕಿಡಿಕಾರಿದ್ದಾರೆ.
ಫ್ರೀಡಂ ಪಾರ್ಕ್‌ನಲ್ಲಿ (Freedom Park) ಪ್ರತಿಭಟನೆ ನಡೆಸಿದ್ದು, ಡಿಕೆಶಿ ಪೋಸ್ಟರ್ ಹಿಡಿದು, ಧಿಕ್ಕಾರ ಕೂಗಿ ಆಕ್ರೋಶ ಹೊರ ಹಾಕಿದರು. ಈ ವೇಳೆ ವಿಧಾನಸೌಧ ಮುತ್ತಿಗೆ ಹಾಕಲು ಹೊರಟ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದರು.ಇದನ್ನೂ ಓದಿ: ಉದ್ಯಮಿ ಮಗಳೊಂದಿಗೆ ಪ್ರಭಾಸ್ ಮದುವೆ ವಿಚಾರ ಸುಳ್ಳು- ಆಪ್ತರಿಂದ ಸ್ಪಷ್ಟನೆ
ಈ ವೇಳೆ ಮಾತನಾಡಿದ ಅವರು, ಡಿಕೆ ಶಿವಕುಮಾರ್ ಸಂವಿಧಾನ ಬದಲಾವಣೆ ಮಾಡ್ತೀನಿ ಎಂದು ಹೇಳಿದ್ದಾರೆ. ಡಿಕೆಶಿ ಡಿಸಿಎಂ ಆಗಿದ್ದರೆ ಸಂವಿಧಾನದಿಂದ ಬೇರೆಯವರನ್ನ ಒಲೈಕೆ ಮಾಡುವಾಗ ಎಚ್ಚರಿಕೆಯಿಂದ ಇರಬೇಕು. ನೀವು ಯಾರಿಗಾದರೂ ಮೀಸಲಾತಿ ಕೊಡಿ ನಮ್ಮ ಅಭ್ಯಂತರ ಇಲ್ಲ. ಆದರೆ ಸಂವಿಧಾನ ಬದಲಾವಣೆ ಮಾಡುವ ಮಾತು ಆಡಬೇಡಿ. ನಾನು ಮಾತಾಡಿಲ್ಲ ಎಂದು ಹೇಳಿದ್ದೀರಾ. ನೀವು ಹೇಳಿದ್ದೀರಾ ಎಂದು ವಾಗ್ದಾಳಿ ನಡೆಸಿದರು.
ಅಂಬೇಡ್ಕರ್ ಅವರನ್ನು ಸೋಲಿಸಿದ್ದು ಕಾಂಗ್ರೆಸ್. ಅಂಬೇಡ್ಕರ್ ಸಂವಿಧಾನ ತಿದ್ದುಪಡಿ ಮಾಡಿದ್ದು ಈ ನೀಚ ಕಾಂಗ್ರೆಸ್. ಈ ದೇಶದಲ್ಲಿ ಸಂವಿಧಾನವನ್ನು ಅಪಮಾನ ಮಾಡಿರುವುದು ಕಾಂಗ್ರೆಸ್. ದೇವೇಗೌಡರನ್ನ, ಅಡ್ವಾಣಿ, ಜೆಪಿ ಅವರನ್ನ ಜೈಲಿಗೆ ಹಾಕಿದ್ದೀರಿ. ಅಂಬೇಡ್ಕರ್ ಸಂವಿಧಾನ ಅಮಾನತು ಮಾಡಿ, ಇಂದಿರಾ ಗಾಂಧಿ ತುರ್ತು ಪರಿಸ್ಥಿತಿ ಜಾರಿ ಮಾಡಿದರು. ಇದನ್ನ ಜನರು ಅರ್ಥ ಮಾಡಿಕೊಳ್ಳಬೇಕು ಎಂದು ಕಾಂಗ್ರೆಸ್ ವಿರುದ್ದ ಆಕ್ರೋಶ ಹೊರಹಾಕಿದರು.
ಎಸ್‌ಸಿಎಸ್‌ಪಿ-ಟಿಎಸ್‌ಪಿ ಹಣವನ್ನು ಗ್ಯಾರಂಟಿಗೆ ಬಳಕೆ ಮಾಡಿಕೊಂಡಿದ್ದಾರೆ. ಇದನ್ನ ಕೇಳಿದರೆ ಭಂಡ ಮಾತು ಆಡುತ್ತೀರಿ. ಕಾಂಗ್ರೆಸ್‌ನವರು ಮಾನ ಮರ್ಯಾದೆ ಇಟ್ಟುಕೊಂಡು ಮಾತಾಡಬೇಕು. ಡಿಕೆಶಿ ಮನಸಿನಲ್ಲಿ ಇರೋದು ಬಾಯಲ್ಲಿ ಬಂದಿದೆ. ಅವರಿಗೆ ನಾಚಿಕೆ ಆಗಬೇಕು. ಕೂಡಲೇ ಹೇಳಿಕೆ ವಾಪಸ್ ತೆಗೆದುಕೊಂಡು ಕ್ಷಮೆ ಕೇಳಬೇಕು. ಡಿಕೆಶಿ ಅವರೇ ನಿಮ್ಮಿಂದ ಸಂವಿಧಾನ ಬದಲಾವಣೆ ಸಾಧ್ಯವಿಲ್ಲ. ದಲಿತರ ಹಣವನ್ನ ನುಂಗಿರುವುದು ಕಾಂಗ್ರೆಸ್. ಸಂವಿಧಾನ ಬದಲಾವಣೆ ಮಾಡ್ತೀನಿ ಎಂದಿರುವ ಡಿಕೆಶಿ ಕೂಡಲೇ ರಾಜೀನಾಮೆ ಕೊಡಬೇಕು ಎಂದು ಆಗ್ರಹಿಸಿದರು.ಇದನ್ನೂ ಓದಿ:Earthquake | ಮ್ಯಾನ್ಮಾರ್‌ನಲ್ಲಿ ಎರಡೆರಡು ಬಾರಿ ಪ್ರಬಲ ಭೂಕಂಪ – ಬ್ಯಾಂಕಾಕ್‌ನಲ್ಲೂ ನಡುಕ
ಮೈಸೂರು: ಸಚಿವ ಸತೀಶ್ ಜಾರಕಿಹೊಳಿ (Satish Jarkiholi) ಸಿಎಂ ಆಗಲು ಕುಮಾರಸ್ವಾಮಿಯವರನ್ನು (H.D Kumaraswamy) ಭೇಟಿ ಮಾಡಿದ್ದಾರೆ ಎಂದು ಶಾಸಕ ಜಿ.ಟಿ ದೇವೇಗೌಡ (G. T. Devegowda) ಹೇಳಿದ್ದಾರೆ.
ಮೈಸೂರಿನಲ್ಲಿ (Mysuru) ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಈ ವೇಳೆ, ಮುಂದೆ ಮುಖ್ಯಮಂತ್ರಿ ಆಗುವ ಅವಕಾಶ ಸಿಕ್ಕರೆ ಜೆಡಿಎಸ್‍ನ 18 ಶಾಸಕರ ಬೆಂಬಲವನ್ನು ಅವರು ಕೇಳಿರಬಹುದು. ರಾಜಕಾರಣದಲ್ಲಿ ಏನುಬೇಕಾದರೂ ಆಗಬಹುದು. ಸದ್ಯದ ಪರಿಸ್ಥಿತಿ ನೋಡಿದ್ರೆ ಅವರು ಬೇರೆ ಕಾರಣಕ್ಕೆ ಕುಮಾರಸ್ವಾಮಿಯವರನ್ನು ಭೇಟಿ ಮಾಡಿರಲು ಸಾಧ್ಯವಿಲ್ಲ ಎಂದಿದ್ದಾರೆ. ಇದನ್ನೂ ಓದಿ: ದೆಹಲಿಯಲ್ಲಿ ಹೆಚ್‌ಡಿಕೆ ಜೊತೆ ಜಾರಕಿಹೊಳಿ ಸಭೆ
ಜಾರಕಿಹೊಳಿಯವರು ಮಾಜಿ ಪ್ರಧಾನಿ, ಕೇಂದ್ರ ಸಚಿವರನ್ನು ಭೇಟಿ ಮಾಡಿದ್ದಾರೆ ಎಂದರೆ ಅದಕ್ಕೆ ಇದೇ ಕಾರಣ. ಒಂದು ವೇಳೆ ಜೆಡಿಎಸ್ ಅವರಿಗೆ ಬೆಂಬಲ ನೀಡಿದರೂ ನಾನು ತಟಸ್ಥನಾಗಿರುತ್ತೇನೆ. ಈ ವಿಚಾರದಲ್ಲಿ ಮಾತ್ರ ನಾನು ತಟಸ್ಥ ಅಲ್ಲ ಎಂದು ಮಾರ್ಮಿಕವಾಗಿ ನುಡಿದಿದ್ದಾರೆ.
ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಬಿಜೆಪಿ ಉಚ್ಚಾಟನೆ ಮಾಡಿರುವ ವಿಚಾರವಾಗಿ, ಅದು ಬಿಜೆಪಿಯ ಆಂತರಿಕ ವಿಷಯ. ಅದರ ಬಗ್ಗೆ ನಾನು ಹೆಚ್ಚು ಮಾತನಾಡಲ್ಲ. ಮುಂದೆ ಇನ್ನೂ ಏನೇನು ಬೆಳವಣಿಗೆ ಆಗುತ್ತೆ ಕಾದು ನೋಡೋಣ ಎಂದಿದ್ದಾರೆ.
ಹನಿಟ್ರ್ಯಾಪ್ ಪ್ರಕರಣದ ವಿಚಾರವಾಗಿ, ಸದನದಲ್ಲಿ ಸುನಿಲ್ ಕುಮಾರ್ ಹಾಗೂ ರಾಜಣ್ಣ ಈ ವಿಚಾರ ಮಾತನಾಡಿದ್ದಾರೆ. ಕರ್ನಾಟಕ ರಾಜಕಾರಣಕ್ಕೆ ಇತಿಹಾಸ ಇದೆ. ಇತ್ತೀಚಿನ ದಿನಗಳ ಘಟನೆ ನೋಡಿದ್ರೆ ಪ್ರಜಾಪ್ರಭುತ್ವ ವೇಗವಾಗಿ ಬೆಳೆಯುತ್ತಿದೆ ಎನಿಸುತ್ತಿದೆ ಎಂದು ಅವರು ವ್ಯಂಗ್ಯವಾಡಿದ್ದಾರೆ.
ಬೆಂಗಳೂರು: ಹನಿಟ್ರ‍್ಯಾಪ್ ಕೇಸ್ (Honey Trap Case) ಯಾರಿಗೂ ಶೋಭೆ ತರೋದಿಲ್ಲ. ದೇಶಕ್ಕೆ ಕಳಂಕ ತರುತ್ತಿರೋದೆ ಕಾಂಗ್ರೆಸ್ ಎಂದು ಕಾಂಗ್ರೆಸ್ ವಿರುದ್ಧ ಜೆಡಿಎಸ್ ಮಾಜಿ ಶಾಸಕ ಅನ್ನದಾನಿ (K Annadani) ವಾಗ್ದಾಳಿ ನಡೆಸಿದ್ದಾರೆ.
ಹನಿಟ್ರ‍್ಯಾಪ್ ಕೇಸ್ ವಿಚಾರವಾಗಿ ಜೆಪಿ ಭವನದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ನಮ್ಮ ಜೆಡಿಎಸ್‌ನಲ್ಲಿ ಟ್ರಾಪ್ ಆಗೋರು ಯಾರು ಇಲ್ಲ. ನಮ್ಮಲ್ಲಿ ಮೊದಲ ಬಾರಿಗೆ ಗೆದ್ದವರು ಜಾಸ್ತಿ ಇದ್ದಾರೆ. ಒಳ್ಳೆ ವ್ಯಕ್ತಿತ್ವದಲ್ಲಿ ಕೆಲಸ ಮಾಡುತ್ತಿದ್ದಾರೆ. ಹನಿಟ್ರ‍್ಯಾಪ್ ಯಾರಿಗೂ ಶೋಭೆ ತರೋದಿಲ್ಲ. ನನ್ನಂತ ಪ್ರಾಮಾಣಿಕ ರಾಜಕಾರಣ ಆದವರಿಗೆ ಇಂತಹ ವಿಷಯ ಬೇಸರ ತರಿಸುತ್ತದೆ ಎಂದು ತಿಳಿಸಿದರು. ಇದನ್ನೂ ಓದಿ: ಸಂವಿಧಾನ ಬದಲಾವಣೆ ಹೇಳಿಕೆಗೆ ಡಿಕೆಶಿ ದೇಶದ, ರಾಜ್ಯದ ಕ್ಷಮೆ ಕೇಳಿ, ರಾಜೀನಾಮೆ ಕೊಡ್ಬೇಕು – ಅನ್ನದಾನಿ
ನಾವು ಯಾವತ್ತು ರಾಜಕೀಯ ವ್ಯಭಿಚಾರದ ಕೆಲಸ ಮಾಡಿಲ್ಲ. ದೇವೇಗೌಡರ ಮಾರ್ಗದರ್ಶನಲ್ಲಿ ನಾವು ಕೆಲಸ ಮಾಡುತ್ತಿದ್ದೇವೆ.ದೇಶಕ್ಕೆ ಕಳಂಕ ತರುತ್ತಿರೋರು ಕಾಂಗ್ರೆಸ್‌ನವರು. 48 ಜನರ ಸಿ.ಡಿ ಇದೆ ಅಂದರೆ ಯಾರದ್ದು ಸರ್ಕಾರ ಇರೋದು? ಈ ದೇಶ, ರಾಜ್ಯದ ಗೌರವವನ್ನು ಹನಿಟ್ರ‍್ಯಾಪ್ ಮಾಡಿ ಹಾಳು ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ವಿರುದ್ಧ ಅನ್ನದಾನಿ ಹರಿಹಾಯ್ದರು. ಇದನ್ನೂ ಓದಿ: ಏ.1ರಿಂದ ಗೋಧಿ ದಾಸ್ತಾನು ಘೋಷಣೆ ಕಡ್ಡಾಯ – ರಾಜ್ಯ, ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರ ಸರ್ಕಾರ ಸೂಚನೆ
– ಕಾಂಗ್ರೆಸ್‌ನಿಂದ 99 ಬಾರಿ ಸಂವಿಧಾನ ತಿದ್ದುಪಡಿ ಆಗಿದೆ ಎಂದ ಮಾಜಿ ಶಾಸಕ
ಬೆಂಗಳೂರು: ಮುಸ್ಲಿಮರಿಗೆ ಗುತ್ತಿಗೆಯಲ್ಲಿ ಮೀಸಲಾತಿ (Muslims 4% Reservation) ಕೊಡಲು ಸಂವಿಧಾನ ಬದಲಾವಣೆ ಮಾಡುತ್ತೇವೆ ಎಂದಿದ್ದು ಡಿಸಿಎಂ ಡಿಕೆಶಿವಕುಮಾರ್ ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ, ದೇಶದ, ರಾಜ್ಯದ ಜನರ ಕ್ಷಮೆ ಕೇಳಬೇಕು ಅಂತ ಜೆಡಿಎಸ್ ಎಸ್ಸಿ ಘಟಕದ ಅಧ್ಯಕ್ಷ, ಮಾಜಿ ಶಾಸಕ ಅನ್ನದಾನಿ (K. Annadani) ಆಗ್ರಹಿಸಿದ್ದಾರೆ.
ಇಲ್ಲಿನ ಜೆಪಿ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಅಮಿತ್ ಶಾ (Amit Shah) ಅವರು ಅಂಬೇಡ್ಕರ್ ಬಗ್ಗೆ ಮಾತಾಡಿದ್ರು ಅಂತ ಕಾಂಗ್ರೆಸ್ (Congress) ಅವರು ದೊಡ್ಡ ಆಂದೋಲನ ಮಾಡಿದ್ರು. ಈಗ ಡಿಸಿಎಂ ಡಿಕೆ ಶಿವಕುಮಾರ್ ಅವರೇ ಸಂವಿಧಾನ ಬದಲಾವಣೆ ಮಾಡೋ ಮಾತುಗಳನ್ನಾಡಿದ್ದಾರೆ. ಯಾಕೆ ಅವರ ಮೇಲೆ ಕ್ರಮ ಇಲ್ಲ ಅಂತ ಕಾಂಗ್ರೆಸ್ ಹೈಕಮಾಂಡ್‌ಗೆ ಪ್ರಶ್ನೆ ಕೇಳಿದ್ರು. ಇದನ್ನೂ ಓದಿ: ಹನಿಟ್ರ್ಯಾಪ್ ಪ್ರಕರಣ ತನಿಖೆಗೆ ಕೋರಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಜಾಗೊಳಿಸಿದ ಸುಪ್ರೀಂ
ರಾಹುಲ್ ಗಾಂಧಿ ಅವರು ಸಂವಿಧಾನದ ಪುಸ್ತಕ ಹಿಡಿದು ಪ್ರಮಾಣ ವಚನ ಸ್ವೀಕಾರ ಮಾಡಿದ್ರು. ಸಂವಿಧಾನ ರಕ್ಷಣೆ ನಾವೇ ಮಾಡೋದು ಅಂದರು. ಈಗ ಡಿಕೆ ಶಿವಕುಮಾರ್ ಸಂವಿಧಾನ ಬದಲಾವಣೆ ಮಾಡ್ತೀನಿ ಅಂದರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಸುಮ್ಮನೆ ಇದ್ದಾರೆ. ಡಿಕೆಶಿ ಹೇಳಿಕೆ ಬಗ್ಗೆ ಮಲ್ಲಿಕಾರ್ಜುನ ಖರ್ಗೆ ಮಾತಾಡಬೇಕು ಅಂತ ಆಗ್ರಹ ಮಾಡಿದ್ರು. ಇದನ್ನೂ ಓದಿ: ಹಿಂದೂಗಳು ಸುರಕ್ಷಿತವಾಗಿದ್ದರೆ, ಮುಸ್ಲೀಮರೂ ಸುರಕ್ಷಿತ – ಯೋಗಿ ಆದಿತ್ಯನಾಥ್
ಕಾಂಗ್ರೆಸ್ ನವರ ಮನಸು ಕೊಳಕಾಗಿದೆ. ಅಂಬೇಡ್ಕರ್ ವಿರೋಧಿಗಳು ಕಾಂಗ್ರೆಸ್ ಅವರು. ಅಂಬೇಡ್ಕರ್ ಅವರನ್ನು ಸೋಲಿಸಿದ್ದು ಕಾಂಗ್ರೆಸ್ ಅವರು. ಇಂದಿರಾಗಾಂಧಿ ಸಂವಿಧಾನ ವಿರೋಧಿಸಿ ತುರ್ತು ಪರಿಸ್ಥಿತಿಯ ಘೋಷಣೆ ಮಾಡಿದ್ರು ಅಂತ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ದುಬೈ ಮರಳುಗಾಡಿನಲ್ಲಿ ನಟಿ ಫೋಟೋಶೂಟ್- ಬಾಲಿವುಡ್ ಬ್ಯೂಟಿಯಂತೆ ಮಿಂಚಿದ ಇಶಿತಾ
ಡಿಸಿಎಂ ಆಗೋಕೆ ಸಂವಿಧಾನ ಕಾರಣ:
ಡಿಕೆಶಿ ಡಿಸಿಎಂ ಆಗೋಕೆ ಸಂವಿಧಾನ ಕಾರಣ. 99 ಬಾರಿ ಸ್ವಾತಂತ್ರ್ಯ ಬಂದಾಗಿನಿಂದ ಸಂವಿಧಾನ ತಿದ್ದುಪಡಿ ಮಾಡಿರೋದು ಕಾಂಗ್ರೆಸ್‌ನವರು. ನರೇಂದ್ರ ಮೋದಿ ಅವರು ಒಂದೇ ಒಂದು ಅರ್ಟಿಕಲ್ ತಿದ್ದಿಲ್ಲ. ನೆಹರು, ಇಂದಿರಾಗಾಂಧಿ, ಮನಮೋಹನ್ ಸಿಂಗ್ ಸಂವಿಧಾನ ತಿದ್ದುಪಡಿ ಮಾಡಿದ್ದಾರೆ. ಪ್ರಿಯಾಂಕ್ ಖರ್ಗೆ ಅವರೇ ಏನ್ ಮಾಡ್ತಿದ್ದೀರಾ? ಡಿಕೆ ಶಿವಕುಮಾರ್ ಹೇಳಿಕೆ ಬಗ್ಗೆ ಮಾತಾಡಿ, ಮುಸ್ಲಿಮರಿಗೆ ಮೀಸಲಾತಿ ಕೊಡಲು ಸಂವಿಧಾನ ಬದಲಾವಣೆ ಮಾಡ್ತೀನಿ ಅಂತ ಹೇಳಿದ್ದಾರೆ. ಈ ಬಗ್ಗೆ ಮಾತಾಡಿ ಅಂತ ಪ್ರಿಯಾಂಕ್ ಖರ್ಗೆಗೆ ಆಗ್ರಹ ಮಾಡಿದ್ರು.
ಡಿಕೆಶಿ ಹೇಳಿಕೆ ಖಂಡಿಸಿ ಜೆಡಿಎಸ್ SC ಘಟಕದಿಂದ ಪ್ರತಿಭಟನೆ ಮಾಡಲಾಗುತ್ತದೆ. ಶುಕ್ರವಾರ ರಾಜ್ಯಾದ್ಯಂತ ಹೋರಾಟ ಮಾಡ್ತೀವಿ. ಡಿಕೆ ಶಿವಕುಮಾರ್ ರಾಜೀನಾಮೆ ಕೊಡಬೇಕು. ಕೂಡಲೇ ತಮ್ಮ ಹೇಳಿಕೆ ವಾಪಸ್ ಪಡೆದು ರಾಜೀನಾಮೆ ಕೊಡಬೇಕು ಅಂತ ಆಗ್ರಹ ಮಾಡಿದ್ರು. ಅನಂತ್ ಕುಮಾರ್ ಹೆಗಡೆ ಸಂವಿಧಾನ ಬದಲಾವಣೆ ಬಗ್ಗೆ ಮಾತಾಡಿದ್ದಕ್ಕೆ ಟಿಕೆಟ್ ಬಿಜೆಪಿ ಕೊಡದೇ ಇರೋದು ನಾವು ಒಪ್ಪುತ್ತೇವೆ. ಬಿಜೆಪಿ ಶಿಸ್ತುಕ್ರಮ ನಾವು ಸ್ವಾಗತ ಮಾಡ್ತೀನಿ. ಅದೇ ರೀತಿ ಡಿಕೆಶಿವಕುಮಾರ್ ವಿರುದ್ದ ಮಲ್ಲಿಕಾರ್ಜುನ ಖರ್ಗೆ ಶಿಸ್ತು ಕ್ರಮ ತೆಗೆದುಕೊಳ್ಳಬೇಕು ಅಂತ ಆಗ್ರಹ ಮಾಡಿದ್ರು. ಇದನ್ನೂ ಓದಿ: ಮಹಾನಗರ ಪಾಲಿಕೆಯ ಗಾರ್ಬೇಜ್ ರೀತಿ ರಾಜ್ಯ ಸರ್ಕಾರದ ಆಡಳಿತ: ಛಲವಾದಿ ನಾರಾಯಣಸ್ವಾಮಿ ಕಿಡಿ
ಬೆಂಗಳೂರು: ಮೇಕೆದಾಟು ವಿಚಾರದಲ್ಲಿ ಡಿಸಿಎಂ ಡಿಕೆ ಶಿವಕುಮಾರ್ (DCM DK Shivakumar) ಅವರು ತಮ್ಮ ಸ್ನೇಹಿತ ಸ್ಟಾಲಿನ್ ಅವರನ್ನು ಒಪ್ಪಿಸಲಿ ಎಂದು ಜೆಡಿಎಸ್ (JDS) ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ (Nikhil Kumaraswamy) ಸವಾಲ್ ಹಾಕಿದ್ದಾರೆ.ಇದನ್ನೂ ಓದಿ:ರೀಲ್ಸ್ ತಂದ ಸಂಕಷ್ಟ: ವಿಚಾರಣೆಗೆ ಹಾಜರಾದ ವಿನಯ್, ರಜತ್
ಜೆಪಿ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮೇಕೆದಾಟು ಯೋಜನೆಗೆ ನಾವು ಅವಕಾಶ ಕೊಡುವುದಿಲ್ಲ ಎಂಬ ತಮಿಳುನಾಡು ಸಿಎಂ ಸ್ಟಾಲಿನ್ (MK Stalin) ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ನೀರಾವರಿ ವಿಚಾರದಲ್ಲಿ ಸೌಹಾರ್ದವಾಗಿ ಸಮಸ್ಯೆ ಬಗೆಹರಿಸಿಕೊಳ್ಳಬೇಕು ಅಂತ ಐಎನ್‌ಡಿ (IND) ಕೂಟಕ್ಕೆ ಇಷ್ಟ ಇಲ್ಲ ಅನಿಸುತ್ತದೆ. ಇದೇ ಕಾರಣದಿಂದ ಸ್ಟಾಲಿನ್ ಅವರು ವಿರೋಧ ಮಾಡುತ್ತಿದ್ದಾರೆ ಎಂದರು.
-ರಾಹುಲ್ ಗಾಂಧಿ ಸಂವಿಧಾನ ಬುಕ್ ಹಿಡಿದುಕೊಂಡು ಗಂಟೆ ಅಲ್ಲಾಡಿಸಿದ್ರೆ ಆಗೋದಿಲ್ಲ
ಬೆಂಗಳೂರು: ಕಾಂಗ್ರೆಸ್ (Congress) ಸರ್ಕಾರ ಮನಿ-ಹನಿ ಸರ್ಕಾರವಾಗಿದೆ. ಕರ್ನಾಟಕದಲ್ಲಿ (Karnataka) ಸ್ಮಾರ್ಟ್ ಮೀಟರ್‌ಗೆ ಬಾಟಾ ಚಪ್ಪಲಿ ಥರ ಹಣ ಫಿಕ್ಸ್ ಮಾಡಿದ್ದಾರೆ ಎಂದು ಜೆಡಿಎಸ್ (JDS) ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ (Nikhil Kumaraswamy) ವಾಗ್ದಾಳಿ ನಡೆಸಿದ್ದಾರೆ.
ಜೆಪಿ ಭವನದಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಸರ್ಕಾರ ಬಂದು 2 ವರ್ಷಗಳಾಗುತ್ತಾ ಬಂತು. ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಿನಿಂದ ದೊಡ್ಡ ಹಗರಣಗಳು ಬಯಲಿಗೆ ಬರುತ್ತಿದೆ. ಜನ ಇದನ್ನ ನಿರೀಕ್ಷೆ ಮಾಡಿರಲಿಲ್ಲ. ಸರ್ಕಾರದಲ್ಲಿ ಸ್ಮಾರ್ಟ್ ಮೀಟರ್ (Smart meter) ಹಗರಣ ನಡೆದಿದೆ. ಇದರ ಟೆಂಡರ್ ಪ್ರಕ್ರಿಯೆ ಸರಿಯಾಗಿ ಆಗಿಲ್ಲ. ಸದನದಲ್ಲೂ ಈ ಹಗರಣ ಬಗ್ಗೆ ಪ್ರಸ್ತಾಪ ಆಗಿದೆ. ಹಲವಾರು ರಾಜ್ಯಗಳು ಸ್ಮಾರ್ಟ್ ಮೀಟರ್ ಅಳವಡಿಕೆ ಮಾಡಿವೆ. ಕೇಂದ್ರ ಸರ್ಕಾರ ಸ್ಮಾರ್ಟ್ ಮೀಟರ್ ಅಳವಡಿಕೆ ಬಗ್ಗೆ ಸೂಚನೆ ನೀಡಿತ್ತು. ಕೇಂದ್ರ ಸರ್ಕಾರ ಸ್ಮಾರ್ಟ್ ಮೀಟರ್‌ಗೆ ಸಬ್ಸಿಡಿ ಕೊಡುತ್ತಿದೆ. ಈಗಾಗಲೇ ದೇಶದಲ್ಲಿ 19 ಕೋಟಿಯಷ್ಟು ಸ್ಮಾರ್ಟ್ ಮೀಟರ್ ಅಳವಡಿಸಲಾಗಿದೆ ಎಂದರು.ಇದನ್ನೂ ಓದಿ:ಸ್ಮಾರ್ಟ್ ಮೀಟರ್ ಖರೀದಿ ಟೆಂಡರ್‌ನಲ್ಲಿ 15,568 ಕೋಟಿ ಮೊತ್ತದ ಹಗರಣ ಆಗಿದೆ – ಅಶ್ವಥ್ ನಾರಾಯಣ್ ಬಾಂಬ್
ಕರ್ನಾಟಕದಲ್ಲಿ ದೊಡ್ಡ ಅಕ್ರಮವಾಗಿದೆ. ಕೇರಳ, ಯುಪಿ, ಗುಜರಾತ್, ಹಿಮಾಚಲ ಪ್ರದೇಶ, ತೆಲಂಗಾಣ ರಾಜ್ಯದಲ್ಲಿ ಸ್ಮಾರ್ಟ್ ಮೀಟರ್‌ಗೆ 900 ರೂ. ಮಾತ್ರ ಇದೆ. ಆದರೆ ಕರ್ನಾಟಕದಲ್ಲಿ 4,998 ರೂ. ಬಾಟಾ ಚಪ್ಪಲಿ ರೀತಿ ಹಣ ಫಿಕ್ಸ್ ಮಾಡಿದ್ದಾರೆ. 2 ಫೇಸ್ ಮೀಟರ್‌ಗೆ 9,000 ರೂ., 3 ಫೇಸ್ ಮೀಟರ್‌ಗೆ 28,000 ಫಿಕ್ಸ್ ಮಾಡಿದ್ದಾರೆ. ನಿರ್ವಹಣೆ ವೆಚ್ಚ ಅಂತ ಬೇರೆ ರಾಜ್ಯದಲ್ಲಿ 57 ರೂ. ಪ್ರತಿ ತಿಂಗಳು ತೆಗೆದುಕೊಳ್ತಿದ್ದಾರೆ. ನಮ್ಮ ರಾಜ್ಯದಲ್ಲಿ ಪ್ರತಿ ತಿಂಗಳು 71 ರೂ. ಪಡೆಯುತ್ತಾರೆ. ಈ ಮೂಲಕ 10 ವರ್ಷಕ್ಕೆ 15,500 ಕೋಟಿ ರೂ. ಸಂಗ್ರಹ ಮಾಡೋಕೆ ಸರ್ಕಾರ ಪ್ಲ್ಯಾನ್ ಮಾಡಿದೆ. ರಾಜಶ್ರೀ ಎಲೆಕ್ಟ್ರಿಕ್ ಕಂಪನಿಗೆ ಅರ್ಹತೆ ಇಲ್ಲ. ಆದರೂ ಟೆಂಡರ್ ಕೊಟ್ಟಿದ್ದಾರೆ. ಯುಪಿಯಲ್ಲಿ ಬ್ಲ್ಯಾಕ್ ಲಿಸ್ಟ್ ಆಗಿರುವ ಕಂಪನಿಗೆ ಸಬ್ ಕಾಂಟ್ರ್ಯಾಕ್ಟ್ ಅಂತ ಸಾಫ್ಟ್‌ವೇರ್ ಮೆಂಟೇನೆನ್ಸ್‌ಗೆ ಕೊಟ್ಟಿದ್ದಾರೆ. ಯಾಕೆ ಬೆಸ್ಕಾಂನಲ್ಲಿ ತಜ್ಞರು ಇಲ್ಲವಾ? ಇದೊಂದು ದೊಡ್ಡ ಹಗಲು ದರೋಡೆ, 15,500 ಕೋಟಿ ರೂ. ಲೂಟಿ ಆಗಿದೆ. ಕೂಡಲೇ ರೀ-ಟೆಂಡರ್ ಕರೆಯಬೇಕು. ಸೋಮವಾರ ತರಾತುರಿಯಲ್ಲಿ ಅಧಿಕಾರಿಗಳು ಪ್ರೆಸ್‌ಮೀಟ್ ಮಾಡಿಸಿದ್ದಾರೆ. ಬಿಜೆಪಿ-ನಾವು ಒಟ್ಟಾಗಿ ಅಕ್ರಮದ ಬಗ್ಗೆ ಹೋರಾಟ ಮಾಡಿ, ತಾರ್ಕಿಕ ಅಂತ್ಯಕ್ಕೆ ತೆಗೆದುಕೊಂಡು ಹೋಗುತ್ತೇವೆ ಎಂದರು.
ಈ ಹಗರಣದಲ್ಲಿ ಯಾರು ಇದ್ದಾರೆ ಹೇಳಬೇಕು. ಸಚಿವರು, ಅಧಿಕಾರಿಗಳ ಗಮನಕ್ಕೆ ಬಾರದೇ ಈ ರೀತಿಯಾಗಲು ಸಾಧ್ಯವಿಲ್ಲ. ರಾಜ್ಯದ ಜನತೆಗೆ ಎಲ್ಲಾ ರೀತಿಯಲ್ಲಿಯೂ ಬರೆ ಎಳೆದಿದ್ದಾರೆ. ಯಾವುದು ಬಿಟ್ಟಿಲ್ಲ. ಈಗ ಸ್ಮಾರ್ಟ್ ಮೀಟರ್ ಬರೆ ಹಾಕಿದ್ದಾರೆ. ದಪ್ಪ ಚರ್ಮ ಇಟ್ಟುಕೊಂಡು ಸರ್ಕಾರ ಮಾಡ್ತಿದ್ದಾರೆ. ಮುಂದೆ ಕಾಂಗ್ರೆಸ್ ಅಧಿಕಾರಕ್ಕೆ ಬರುವುದಿಲ್ಲ ಅಂತ ಅವರಿಗೆ ಗೊತ್ತಾಗಿದೆ. ಹೀಗಾಗಿ ಎಷ್ಟು ಸಾಧ್ಯವೋ ಅಷ್ಟು ಲೂಟಿ ಮಾಡೋಣ ಅಂತ ಮಾಡ್ತಿದ್ದಾರೆ ಎಂದು ಆರೋಪಿಸಿದರು.ಇದನ್ನೂ ಓದಿ:ಬ್ಲಡ್ ಕ್ಯಾನ್ಸರ್‌ನಿಂದ ತಮಿಳು ನಟ ಶಿಹಾನ್ ಹುಸೈನಿ ನಿಧನ
ಸಂವಿಧಾನ ಬದಲಾವಣೆ ಬಗ್ಗೆ ಡಿಕೆಶಿ ಹೇಳಿಕೆ ವಿಚಾರ:
ಗಾಂಧಿ ಕುಟುಂಬದ ಕುಡಿ ರಾಹುಲ್ ಗಾಂಧಿ (Rahul Gandhi) ಸಂವಿಧಾನ ರಕ್ಷಕರು ಎಂದು ಕಾಂಗ್ರೆಸ್‌ನವರು ಹೇಳುತ್ತಾರೆ. ರಾಹುಲ್ ಗಾಂಧಿ ಸಂವಿಧಾನದ ಬುಕ್ ಹಿಡಿದುಕೊಂಡು ಗಂಟೆ ಅಲ್ಲಾಡಿಸಿದರೆ ಆಗುವುದಿಲ್ಲ. ಕಾಂಗ್ರೆಸ್‌ನವರು ಮೋದಿ ಸಂವಿಧಾನ ಬದಲಾವಣೆ ಮಾಡ್ತಾರೆ ಅಂತ ಅಪಪ್ರಚಾರ ಮಾಡಿದ್ದರು. ಈಗ ಡಿಸಿಎಂ ಡಿಕೆ ಶಿವಕುಮಾರ್ (DCM DK Shivakumar) ಸಂವಿಧಾನ ಬದಲಾವಣೆ ಮಾಡ್ತೀವಿ ಅಂತ ಹೇಳಿದ್ದಾರೆ. ಕಾಂಗ್ರೆಸ್ (Congress) ಮನಸ್ಥಿತಿಯನ್ನ ಜನರ ಮುಂದೆ ಇಟ್ಟಿದ್ದಾರೆ. ಡಿಕೆಶಿ ತಲೆಗೆ ನಟ್ಟು ಬೋಲ್ಟ್ ಇಲ್ಲದ ಕಾರಣ ಅಲ್ಲಾಡುತ್ತಿದೆ ಅನ್ನಿಸುತ್ತಿದೆ. ಹೀಗೆ ಮಾತಾಡಿದರೆ ರಾಜ್ಯದ ಜನರೇ ಇವರ ನೆಟ್ಟು ಬೋಲ್ಟ್ ಟೈಟ್ ಮಾಡಲು ಸ್ಪಾನರ್ ತೆಗೆದುಕೊಳ್ಳುತ್ತಾರೆ ವ್ಯಂಗ್ಯವಾಡಿದರು.
ಮುಸ್ಲಿಂ ಮೀಸಲಾತಿ ವಿಚಾರ:
ರಾಜ್ಯಪಾಲರಿಗೆ ಜೆಡಿಎಸ್ (JDS) ಶಾಸಕರು-ಬಿಜೆಪಿಯವರು ಒಟ್ಟಾಗಿ ದೂರು ಕೊಡಲಾಗಿದೆ. ನಮ್ಮಲ್ಲಿ ಯಾವುದೇ ಗೊಂದಲ ಇಲ್ಲ. ಬಿಜೆಪಿ ಜೊತೆ ಒಟ್ಟಾಗಿ ಹೋಗುತ್ತೇವೆ. ಕಾಂಗ್ರೆಸ್ ವಿರುದ್ಧ ಹೋರಾಟ ಮಾಡುತ್ತೇವೆ. ಈಗಾಗಲೇ ಕುಮಾರಸ್ವಾಮಿ (HD Kumraswamy) ಇದಕ್ಕೆ ಸ್ಪಷ್ಟನೆ ನೀಡಿದ್ದಾರೆ. ಧರ್ಮಾಧಾರಿತ ಮೀಸಲಾತಿಗೆ (Religion Reservation) ಅವಕಾಶ ಇಲ್ಲ. ಹಿಂದುಳಿದ ಸಮುದಾಯಗಳು ಇವೆ. ಮುಸ್ಲಿಮರಿಗೆ ಯಾಕೆ ವಿಶೇಷವಾಗಿ ಮೀಸಲಾತಿ ಕೊಟ್ಟಿದ್ದೀರಾ? ಇದಕ್ಕೆ ನಮ್ಮ ವಿರೋಧ ಇದೆ. ಕಾಂಗ್ರೆಸ್ ಒಲೈಕೆ ರಾಜಕೀಯ ಬಿಡಬೇಕು ಎಂದು ಕಿಡಿಕಾರಿದರು.
ಹನಿಟ್ರ‍್ಯಾಪ್ ವಿಚಾರ:
ನಾನು ಒಬ್ಬ ಯುವಕನಾಗಿ ಹೊಸದಾಗಿ ರಾಜಕೀಯಕ್ಕೆ ಬರುತ್ತಿದ್ದೇನೆ. ನನ್ನಂತ ಎಷ್ಟೋ ಯುವಕರು ರಾಜಕೀಯಕ್ಕೆ ಬರಬೇಕು ಎಂದು ಬಯಕೆ ಇಟ್ಟುಕೊಂಡಿದ್ದಾರೆ. ವಿಧಾನಸೌಧದ ಒಳಗೆ ಅನೇಕ ಪುಣ್ಯಾತ್ಮರು ಆಡಳಿತ ಕೊಟ್ಟಿದ್ದಾರೆ. ಇಂತಹ ದೇವಾಲಯದಲ್ಲಿ ಬೆಳಗ್ಗೆ ಮನಿ, ಸಂಜೆ ಹನಿ ಆಗ್ತಿದೆ. ಈ ಸರ್ಕಾರ ಮನಿ-ಹನಿ ಸರ್ಕಾರ ಆಗಿದೆ. ಸದನದ ಒಳಗೆ ರಾಜಣ್ಣ ಅವರು ಆರೋಪ ಮಾಡಿದ್ದರು. ಕ್ಯಾಬಿನೆಟ್ ಸಚಿವರಿಗೆ ರಕ್ಷಣೆ ಇಲ್ಲ. ಬೇರೆ ಅವರ ಕಥೆ ಏನು? 48 ಜನರದ್ದು ಇದೆ ಎಂದು ಹೇಳ್ತಾರೆ. ಸ್ಪಷ್ಟ ನಿರ್ಧಾರ ಮಾಡಿ. ಮೊದಲು ದೂರು ಕೊಡಿ. ಒಂದು ಕುರ್ಚಿಗೋಸ್ಕರ ಈ ಮಟ್ಟಕ್ಕೆ ರಾಜಕೀಯ ಮಾಡ್ತಿದ್ದಾರೆ. ಸಿಡಿ ಫ್ಯಾಕ್ಟರಿ ಮಾಲೀಕರ ಯಾರು? ಎಳೂವರೆ ಕೋಟಿ ಮಹಾನ್ ವ್ಯಕ್ತಿ ಯಾರು? ಇಷ್ಟು ಸಿಡಿ ಮಾಡಿಸಿದ ಪುಣ್ಯಾತ್ಮ ಯಾರು ಅಂತ ಜನ ತಿಳಿಯಲು ಕಾಯುತ್ತಿದ್ದಾರೆ. ರಾಜಣ್ಣ ಅವರೇ ದೂರು ಕೊಡಿ. ಯಾಕೆ ಸತಾಯಿಸುತ್ತೀರಾ ಎಂದರು.ಇದನ್ನೂ ಓದಿ:ರಾಜಣ್ಣ ದೂರು ಕೊಡಬೇಕಲ್ಲವಾ? ನೀವು ಎಷ್ಟು ಬಾರಿ ತಿರುಗಿಸಿ ಮುರುಗಿಸಿ ಕೇಳಿದ್ರು ಅಷ್ಟೇ: ಪರಮೇಶ್ವರ್