Tag: jds

  • ಸರ್ಕಾರದ ವಿರುದ್ಧ ಪೋಸ್ಟರ್ ಅಂಟಿಸಿದವರ ಮೇಲೆ ಎಫ್‌ಐಆರ್‌

    ಸರ್ಕಾರದ ವಿರುದ್ಧ ಪೋಸ್ಟರ್ ಅಂಟಿಸಿದವರ ಮೇಲೆ ಎಫ್‌ಐಆರ್‌

    ಬೆಂಗಳೂರು: ರಾಜ್ಯದಲ್ಲಿರುವ ಕಾಂಗ್ರೆಸ್‌ ಸರ್ಕಾರದ (Congress Government) ವಿರುದ್ಧ ಪೋಸ್ಟರ್ (Poster) ಅಂಟಿಸಿ ಅಭಿಯಾನ ನಡೆಸಿದ್ದವರ ವಿರುದ್ಧ ಎಫ್‌ಐಆರ್‌ ದಾಖಲಿಸಲಾಗಿದೆ.

    ಕಳೆದ ಮೂರು ದಿನದ ಹಿಂದೆ ಜೆಡಿಎಸ್ ಪಕ್ಷದಿಂದ ಸರ್ಕಾರದ ವಿರುದ್ಧ “ಸಾಕಪ್ಪ ಸಾಕು ಕಾಂಗ್ರೆಸ್ ಸರ್ಕಾರ” ಎಂಬ ಹೆಸರಿನಲ್ಲಿ ಪೋಸ್ಟ್‌ ಅಂಟಿಸಿ ಸರ್ಕಾರವನ್ನು ಟೀಕಿಸಲಾಗಿತ್ತು

    ನಗರದ ಮಹಾರಾಣಿ ಕಾಲೇಜು ಬಸ್ ನಿಲ್ದಾಣ, ಕೆ.ಆರ್ ಸರ್ಕಲ್ ಸೇರಿ ವಿವಿಧ ಕಡೆ ಪೋಸ್ಟರ್ ಅಂಟಿಸಿ, ಕ್ಯೂ ಆರ್ ಕೋಡ್ ಸ್ಕ್ಯಾನ್ ಅಳವಡಿಕೆ ಮಾಡಲಾಗಿತ್ತು. ಇದನ್ನೂ ಓದಿ: ಮದುವೆಯಾಗಲು ಬಂದ ಪ್ರೇಮಿಗಳಿಗೆ ಗೂಸಾ – ರಕ್ತ ಸುರಿಯುತ್ತಿದ್ದರೂ ಪ್ರಿಯಕರನತ್ತ ಕೈ ಸನ್ನೆ ಮಾಡಿದ ಯುವತಿ

     

    ಯಾವುದೇ ಅನುಮತಿ ಪಡೆಯದೇ ಪೋಸ್ಟರ್‌ಗಳನ್ನು ಅಂಟಿಸಿದ್ದ ಹಿನ್ನೆಲೆಯಲ್ಲಿ ಹಲಸೂರು ಪೊಲೀಸ್ ಠಾಣೆಯಲ್ಲಿ (Halasuru Police Station) ಈ ಸಂಬಂಧ ಎಫ್ ಐಆರ್ ದಾಖಲಿಸಲಾಗಿದೆ. ಇದನ್ನೂ ಓದಿ: ಯತ್ನಾಳ್ ಬೆನ್ನುಬಿದ್ದು ಪೀಠ ಕಳೆದುಕೊಳ್ತಾರ ಜಯಮೃತ್ಯುಂಜಯ ಶ್ರೀ?

    ಬೆಲೆ ಏರಿಕೆ, ಭ್ರಷ್ಟಾಚಾರ, ಆರೋಪದಲ್ಲಿ ಜೆಡಿಎಸ್ ಪಕ್ಷ “ಸಾಕಪ್ಪ ಸಾಕು ಕಾಂಗ್ರೆಸ್ ಸರ್ಕಾರ” ಹೆಸರಿನಲ್ಲಿ ಅಭಿಯಾನ ನಡೆಸುತ್ತಿದೆ.

  • ನನ್ನ ಆಡಳಿತದಲ್ಲಿ ಕಮಿಷನ್ ದಂಧೆ ವಿಧಾನಸೌಧದ ಮೆಟ್ಟಿಲು ಮುಟ್ಟಲು ಬಿಟ್ಟಿರಲಿಲ್ಲ: ಹೆಚ್‌ಡಿಕೆ

    ನನ್ನ ಆಡಳಿತದಲ್ಲಿ ಕಮಿಷನ್ ದಂಧೆ ವಿಧಾನಸೌಧದ ಮೆಟ್ಟಿಲು ಮುಟ್ಟಲು ಬಿಟ್ಟಿರಲಿಲ್ಲ: ಹೆಚ್‌ಡಿಕೆ

    – ಗುತ್ತಿಗೆದಾರರಿಂದ ಕಮಿಷನ್‌ ಆರೋಪ; ಸರ್ಕಾರದ ವಿರುದ್ಧ ಕೇಂದ್ರ ಸಚಿವ ವಾಗ್ದಾಳಿ

    ಬೆಂಗಳೂರು: ಗುತ್ತಿಗೆದಾರರಿಂದ ಕಮಿಷನ್‌ ಆರೋಪಕ್ಕೆ ಸಂಬಂಧಿಸಿದಂತೆ ಸರ್ಕಾರದ ವಿರುದ್ಧ ಕೇಂದ್ರ ಸಚಿವ ಹೆಚ್‌.ಡಿ.ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.

    ಎಕ್ಸ್‌ನಲ್ಲಿ ಪೋಸ್ಟ್‌ ಹಾಕಿ ಕಿಡಿಕಾರಿರುವ ಹೆಚ್‌ಡಿಕೆ, ಸಿಎಂ ಆರ್ಥಿಕ ಸಲಹೆಗಾರ ಬಸವರಾಜ್ ರಾಯರೆಡ್ಡಿ ಹೇಳಿಕೆ ಪ್ರಸ್ತಾಪ ಮಾಡಿ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.

    ಎಕ್ಸ್‌ ಪೋಸ್ಟ್‌ನಲ್ಲೇನಿದೆ?
    ಘನತವೇತ್ತ ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ಅವರು ಯೂಟರ್ನ್ ಹೊಡೆಯುವ ಅಗತ್ಯವೇ ಇಲ್ಲ. ಅವರು ಸತ್ಯವನ್ನೇ ನುಡಿದಿದ್ದಾರೆ. ಮಹಾತ್ಮ ಗಾಂಧೀಜಿ ಅವರ ಸತ್ಯಮೇವ ಜಯತೇ ಘೋಷ ವಾಕ್ಯವನ್ನು ಕಾಂಗ್ರೆಸ್ ನಾಯಕರು ಅದೆಷ್ಟು ಶ್ರದ್ಧಾಭಕ್ತಿಯಿಂದ ಪರಿಪಾಲನೆ ಮಾಡುತ್ತಿದ್ದಾರೆ (!?) ಎಂಬುದಕ್ಕೆ ರಾಯರೆಡ್ಡಿ ಅವರ ಹೇಳಿಕೆಯೇ ಸಾಕ್ಷಿ.

    ಗುತ್ತಿಗೆಯಲ್ಲಿ ಪರ್ಸಂಟೇಜ್, ಕಮಿಷನ್ ದಂಧೆಗೆ ನಾಂದಿ ಹಾಡಿದ್ದು, ಅನ್ಯಪಕ್ಷಗಳ ಸರ್ಕಾರಗಳೇ ಹೊರತು ಜೆಡಿಎಸ್ ಸರ್ಕಾರವಲ್ಲ. ನಾನು ಮುಖ್ಯಮಂತ್ರಿ ಆಗಿದ್ದ ವೇಳೆ ಗುತ್ತಿಗೆದಾರರಿಗೆ ನಿಯಮಿತವಾಗಿ ಹಣ ಪಾವತಿ ಆಗುತ್ತಿತ್ತು, ವಿಳಂಬ ಎನ್ನುವ ಪ್ರಶ್ನೆಯೇ ಇರಲಿಲ್ಲ. ನನ್ನ ಆಡಳಿತದಲ್ಲಿ ಕಮಿಷನ್ ದಂಧೆ ವಿಧಾನಸೌಧದ ಮೆಟ್ಟಿಲು ಮುಟ್ಟಲು ಬಿಟ್ಟಿರಲಿಲ್ಲ.

    ಸೋ ಕಾಲ್ಡ್ ಸತ್ಯಸಂಧರಾದ ಕಾಂಗ್ರೆಸ್ಸಿಗರು ಅರ್ಥ ಮಾಡಿಕೊಳ್ಳಬೇಕು. ಭ್ರಷ್ಟಾಚಾರದ ವಿರುದ್ಧ ಸಿದ್ದರಾಮಯ್ಯ ಕಠಿಣ ಕ್ರಮ ಕೈಗೊಳ್ಳುತ್ತಿದ್ದಾರೆ ಎಂದು ರಾಯರೆಡ್ಡಿ ಹೇಳಿದ್ದಾರೆ. ಪಾಪ ಅವರು ಏಕಿಷ್ಟು ಹೆದರಿದರು ಎನ್ನುವುದನ್ನು ನಾನು ಅರ್ಥ ಮಾಡಿಕೊಳ್ಳಬಲ್ಲೆ. ಅಧಿಕಾರ ಮತ್ತು ಆಸರೆ ನಾಲಿಗೆಯ ಶಕ್ತಿಯನ್ನು ಕುಂದಿಸುತ್ತವೆ.

    ಸನ್ಮಾನ್ಯ ಸಿಎಂ ಸಾಹೇಬರ ಸರಣಿ ಹಗರಣಗಳ ಸಿದ್ವಿಲಾಸಿ ಬಗ್ಗೆ ಅರಿಯದಷ್ಟು ಮುಗ್ಧರೇ ರಾಯರೆಡ್ಡಿ. ಕರ್ನಾಟಕವನ್ನು ಕೊಳ್ಳೆ ಹೊಡೆಯುತ್ತಿರುವ ಕಾಂಗ್ರೆಸ್ ಈಸ್ಟ್ ಇಂಡಿಯಾ ಕಂಪನಿ ಸರ್ಕಾರದ ಭಾಗವಾಗಿರುವ ಅವರಿಗೆ ಜೆಡಿಎಸ್ ಕುರಿತು ಟೀಕಿಸುವ ನೈತಿಕತೆ ಎಲ್ಲಿದೆ? ಸರಣಿ ಹಗರಣಗಳ ಸಿದ್ವಿಲಾಸಿ. ಕಾಂಗ್ರೆಸ್ ಈಸ್ಟ್ ಇಂಡಿಯಾ ಕಂಪನಿ ಎಂದು ಹೆಚ್‌ಡಿಕೆ ಕಿಡಿಕಾರಿದ್ದಾರೆ.

  • ಗುತ್ತಿಗೆದಾರರಿಂದ ಕಮಿಷನ್ ಆರೋಪ – `ಕೈ’ ಸರ್ಕಾರದ ವಿರುದ್ಧ ಜೆಡಿಎಸ್ ವಾಗ್ದಾಳಿ

    ಗುತ್ತಿಗೆದಾರರಿಂದ ಕಮಿಷನ್ ಆರೋಪ – `ಕೈ’ ಸರ್ಕಾರದ ವಿರುದ್ಧ ಜೆಡಿಎಸ್ ವಾಗ್ದಾಳಿ

    ಬೆಂಗಳೂರು: ಗುತ್ತಿಗೆದಾರರ ಸಂಘದಿಂದ ಕಾಂಗ್ರೆಸ್ ಸರ್ಕಾರ (Congress Government) ಕಮಿಷನ್ ಪಡೆದಿದೆ ಎಂಬ ಆರೋಪಕ್ಕೆ ಸರ್ಕಾರದ ವಿರುದ್ಧ ಜೆಡಿಎಸ್ ಕಿಡಿಕಾರಿದೆ. `ಪಬ್ಲಿಕ್ ಟಿವಿ’ ವರದಿ ಉಲ್ಲೇಖಿಸಿದ ಜೆಡಿಎಸ್ (JDS), ಕಾಂಗ್ರೆಸ್ (Congress) ವಿರುದ್ಧ 60% ಸರ್ಕಾರ ಎಂದು ವಾಗ್ದಾಳಿ ನಡೆಸಿದೆ.

    ಎಕ್ಸ್‌ನಲ್ಲಿ ಏನಿದೆ?
    60% ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರದ ವಿರುದ್ಧ ಗುತ್ತಿಗೆದಾರರ ಸಂಘ ಮತ್ತೆ ಪತ್ರ ಬರೆದಿದೆ. ಕಮಿಷನ್ ಕಾಂಗ್ರೆಸ್ ಸರ್ಕಾರದ ಹಗರಣಗಳು, ಕಿಕ್ ಬ್ಯಾಕ್ ಸಿದ್ದರಾಮಯ್ಯ (Siddaramaiah) ತಂಡದ “ಊಸರವಳ್ಳಿ ನಾಟಕಗಳು” ಸರಣಿ ರೂಪದಲ್ಲಿ ಅನಾವರಣಗೊಳ್ಳುತ್ತಿದೆ.ಇದನ್ನೂ ಓದಿ: ಕೊನೆಗೂ ಭಾರತಕ್ಕೆ ಬಂದ ಮುಂಬೈ ದಾಳಿ ಉಗ್ರ ರಾಣಾ

    ಕಾಂಗ್ರೆಸ್ ಸರ್ಕಾರದ 60% ಕಮಿಷನ್ ದಾಹ ಇನ್ನೂ ತಣಿದಿಲ್ಲ. ಗುತ್ತಿಗೆದಾರರಿಗೆ ಬಾಕಿ ಹಣ ಬಿಡುಗಡೆ ಮಾಡುತ್ತಿಲ್ಲ. ಇದಕ್ಕೆ ಸಂಘ ಬರೆದಿರುವ ಪತ್ರವೇ ಸಾಕ್ಷಿ. PWD ಇಲಾಖೆಯಲ್ಲಿ ಸಚಿವ ಸತೀಶ್ ಜಾರಕಿಹೊಳಿ (Satish Jarkiholi) ಕುಟುಂಬ ಮತ್ತು ಸಣ್ಣ ನೀರಾವರಿ ಇಲಾಖೆಯಲ್ಲಿ ಸಚಿವ ಬೋಸರಾಜು (NS Bosaraju) ಅವರ ಮಗ ಕಮಿಷನ್ ದಂಧೆಯಲ್ಲಿ ತೊಡಗಿದ್ದಾರೆ.

    ಪ್ರತಿಯೊಂದು ಬಿಲ್ ಬಿಡುಗಡೆಗೂ ಇಂತಿಷ್ಟು ಕಮಿಷನ್ ಕೊಡಲೇಬೇಕು ಎಂಬ ಅಲಿಖಿತ ನಿಯಮ ಜಾರಿಗೊಳಿಸಿದ್ದಾರೆ ಎಂದು ಸ್ವತಃ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಮಂಜುನಾಥ್ ಆರೋಪಿಸಿದ್ದಾರೆ ಎಂದು ಕಿಡಿಕಾರಿದೆ.ಇದನ್ನೂ ಓದಿ: ಮುಂಬೈ ದಾಳಿಕೋರ ರಾಣಾ ತನ್ನ ಪ್ರಜೆಯಲ್ಲ – ದಿಢೀರ್‌ ಪಾಕ್‌ ಸ್ಪಷ್ಟನೆ

  • ಗುತ್ತಿಗೆದಾರರು ಕಮಿಷನ್ ಆರೋಪದ ಸಾಕ್ಷಿ ಕೊಟ್ಟರೆ ತನಿಖೆ ಮಾಡಿಸುತ್ತೇವೆ – ಕೃಷ್ಣಬೈರೇಗೌಡ

    ಗುತ್ತಿಗೆದಾರರು ಕಮಿಷನ್ ಆರೋಪದ ಸಾಕ್ಷಿ ಕೊಟ್ಟರೆ ತನಿಖೆ ಮಾಡಿಸುತ್ತೇವೆ – ಕೃಷ್ಣಬೈರೇಗೌಡ

    ಬೆಂಗಳೂರು: ರಾಜ್ಯ ಸರ್ಕಾರದ (State Government) ಮೇಲೆ ಗುತ್ತಿಗೆದಾರರು ಮಾಡಿರುವ ಕಮಿಷನ್ ಆರೋಪಕ್ಕೆ ಸೂಕ್ತ ದಾಖಲಾತಿ ಕೊಟ್ಟರೆ ತನಿಖೆ ಮಾಡಿಸುವುದಾಗಿ ಕಂದಾಯ ಸಚಿವ ಕೃಷ್ಣಬೈರೇಗೌಡ (Krishna Byregowda) ಸ್ಪಷ್ಟನೆ ನೀಡಿದರು.ಇದನ್ನೂ ಓದಿ: ಕೊನೆಗೂ ಭಾರತಕ್ಕೆ ಬಂದ ಮುಂಬೈ ದಾಳಿ ಉಗ್ರ ರಾಣಾ

    ಗುತ್ತಿಗೆದಾರರ ಸಂಘದಿಂದ ಸಚಿವ ಸತೀಶ್ ಜಾರಕಿಹೊಳಿ, ಬೋಸರಾಜು ಮೇಲೆ ಆರೋಪ ಮಾಡಿರುವ ವಿಚಾರ ಹಾಗೂ ಸಿಎಂ, ಡಿಸಿಎಂಗೆ ಪತ್ರ ಬರೆದಿರುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಗುತ್ತಿಗೆದಾರರು ಏನಾದರೂ ಆರೋಪ ಮಾಡಿದರೆ, ಅದಕ್ಕೆ ಸೂಕ್ತ ದಾಖಲಾತಿ ಕೊಟ್ಟರೆ ತನಿಖೆ ಮಾಡಿಸುತ್ತೇವೆ. ಗುತ್ತಿಗೆದಾರರ ದೂರು ಪರಿಶೀಲನೆ ಮಾಡುತ್ತೇವೆ. ಮಧ್ಯವರ್ತಿಗಳು ಯಾರು ಎಂದು ಅವರು ಮಾಹಿತಿ ಕೊಡಲಿ. ಯಾರ ಕುಟುಂಬದ ಹಸ್ತಕ್ಷೇಪ ಎಂದು ದಾಖಲಾತಿ ಕೊಡಲಿ. ಅವರು ಕೊಟ್ಟರೆ ದೂರು ಪರಿಶೀಲನೆ ಮಾಡುತ್ತೇವೆ. ಸಚಿವರು ಯಾರು? ಕುಟುಂಬದವರು ಯಾರು? ಎಂದು ನಿರ್ದಿಷ್ಟವಾಗಿ ಹೇಳಿದರೆ ತನಿಖೆ ಮಾಡಿಸುತ್ತೇವೆ ಎಂದು ತಿಳಿಸಿದರು.

    ಯಾರ ಹಸ್ತಕ್ಷೇಪ ಎಂದು ಹೇಳಿದರೆ ತನಿಖೆ ಮಾಡಿಸಬಹುದು. ಬಿಜೆಪಿ ಮೇಲೆ 40% ಕಮಿಷನ್ ಆರೋಪದ ನ್ಯಾಯಾಂಗ ತನಿಖೆ ಆಗುತ್ತಿದೆ. ಕೋವಿಡ್‌ನಲ್ಲಿ ಅಕ್ರಮ ಆಗಿರುವ ಬಗ್ಗೆ ಬಿಜೆಪಿ ನಾಯಕರೇ ಹೇಳುತ್ತಿದ್ದಾರೆ. ಇದರ ತನಿಖೆಯೂ ನಡೆಯುತ್ತಿದೆ. ಅದೇ ರೀತಿ ಗುತ್ತಿಗೆದಾರರು ಏನಾದರೂ ಈ ಬಗ್ಗೆ ದೂರು ಕೊಟ್ಟರೆ ತನಿಖೆ ಮಾಡುತ್ತೇವೆ ಎಂದು ಹೇಳಿದರು.ಇದನ್ನೂ ಓದಿ: ಮುಂಬೈ ದಾಳಿಕೋರ ರಾಣಾ ತನ್ನ ಪ್ರಜೆಯಲ್ಲ – ದಿಢೀರ್‌ ಪಾಕ್‌ ಸ್ಪಷ್ಟನೆ

  • ಧರ್ಮಸ್ಥಳದಲ್ಲಿ ಆಣೆ ಪ್ರಮಾಣ ಮಾಡಲು ಸಿದ್ಧ – ಚಲುವರಾಯಸ್ವಾಮಿ ಸವಾಲ್‌ಗೆ ಹೆಚ್‌ಡಿಕೆ ಪ್ರತಿಕ್ರಿಯೆ

    ಧರ್ಮಸ್ಥಳದಲ್ಲಿ ಆಣೆ ಪ್ರಮಾಣ ಮಾಡಲು ಸಿದ್ಧ – ಚಲುವರಾಯಸ್ವಾಮಿ ಸವಾಲ್‌ಗೆ ಹೆಚ್‌ಡಿಕೆ ಪ್ರತಿಕ್ರಿಯೆ

    – ಚಲುವರಾಯಸ್ವಾಮಿಯನ್ನ ಮಂತ್ರಿ ಮಾಡಲು 50 ಜನ ಶಾಸಕರನ್ನ ಸೇರಿಸಿದ್ದು ನಾನು ಎಂದ ಕೇಂದ್ರ ಸಚಿವ

    ಮಂಡ್ಯ: ನಾನು ಸಿಎಂ ಆಗುವಾಗ ಚಲುವರಾಯಸ್ವಾಮಿ (Chaluvaraya Swamy) ನೋಡಿಕೊಂಡು ಎಂಎಲ್‌ಎಗಳು ಬಂದ್ರಾ? ಅಥವಾ ನನ್ನ ನೋಡಿಕೊಂಡು ಬಂದ್ರಾ? ಅನ್ನೋದಕ್ಕೆ ಧರ್ಮಸ್ಥಳದಲ್ಲಿ ಆಣೆ-ಪ್ರಮಾಣ ಮಾಡಲು ಸಿದ್ಧ ಎಂದು ಕೇಂದ್ರ ಸಚಿವ ಹೆಚ್‌.ಡಿ ಕುಮಾರಸ್ವಾಮಿ (HD Kumaraswamy) ಹೇಳಿದ್ದಾರೆ.

    ಕುಮಾರಸ್ವಾಮಿ ಸಿಎಂ (Chief Minister) ಆಗಲು ನಾನು ಕಾರಣ ಇಲ್ಲ ಎಂದರೆ ಧರ್ಮಸ್ಥಳಕ್ಕೆ ಬಂದು ಆಣೆ-ಪ್ರಮಾಣ ಮಾಡಲಿ ಎಂದು ಸಚಿವ ಚಲುವರಾಯಸ್ವಾಮಿ ಸವಾಲು ಹಾಕಿದ್ದ ವಿಚಾರಕ್ಕೆ ಮಂಡ್ಯದಲ್ಲಿ ಮಾತನಾಡಿದ ಅವರು, ನಾನು ಆಣೆ ಮಾಡಲು ತಯಾರಿದ್ದೇನೆ. ನಾನು ಸಿಎಂ ಆಗುವಾಗ ಚಲುವರಾಯಸ್ವಾಮಿ ನೋಡಿ ಎಂಎಲ್‌ಎಗಳು ಬಂದ್ರಾ ಏನು ಅಂತ. ಇದು ಸುಳ್ಳು ಚಲುವರಾಯಸ್ವಾಮಿಯನ್ನ ಮಂತ್ರಿ ಮಾಡಲು ಶ್ರಮ ಹಾಕಿದ್ದೇನೆ ಎಂದು ತಿಳಿಸಿದ್ದಾರೆ.

    ತಾನು ಮಂತ್ರಿ ಆಗಲು ಚಲುವರಾಯಸ್ವಾಮಿ ಮಧ್ಯರಾತ್ರಿ ಮೂರು ಗಂಟೆವರೆಗೆ ನನ್ನನ್ನ ಬಿಟ್ಟಿಲ್ಲ. ಅವರನ್ನ ಮಂತ್ರಿ ಮಾಡಲು 50 ಜನ ಶಾಸಕರನ್ನು ಸೇರಿಸಿದ್ದೆ. ನಾನು ಪಟ್ಟಿರುವ ಶ್ರಮವನ್ನು ಚಲುವರಾಯಸ್ವಾಮಿ ಮರೆಯಬಾರದು ಎಂದು ಕೇಂದ್ರ ಸಚಿವರು ಹೇಳಿದ್ದಾರೆ. ಇದನ್ನೂ ಓದಿ: 64 ವರ್ಷಗಳ ಬಳಿಕ ಗುಜರಾತ್‌ನಲ್ಲಿ ಎಐಸಿಸಿ ಅಧಿವೇಶನ – ಹಲವು ಮಹತ್ವದ ನಿರ್ಣಯ ಸಾಧ್ಯತೆ

    ಇನ್ನೂ ಚಲುವರಾಯಸ್ವಾಮಿಗೆ ಇರುವ ಚಟಗಳು ನನಗೆ ಇಲ್ಲ, ಮಂಡ್ಯದಲ್ಲಿ (Mandya) ಕೇಳಿದ್ರೆ ಚಲುವರಾಯಸ್ವಾಮಿ ಚಟಗಳ ಬಗ್ಗೆ ಹೇಳುತ್ತಾರೆ. ಚಲುವರಾಯಸ್ವಾಮಿ ಎಷ್ಟು ಮನೆ ಹಾಳು ಮಾಡಿದ್ದಾರೆ ಎಂದು ಎಲ್ಲರಿಗೂ ಗೊತ್ತಿದೆ‌ ಎಂದು ವಾಗ್ದಾಳಿ ನಡೆಸಿದ್ದಾರೆ.  ಇದನ್ನೂ ಓದಿ: 2ನೇ ವಿಮಾನ ನಿಲ್ದಾಣಕ್ಕೆ ಬಿಡದಿಯಲ್ಲಿ 5,000 ಎಕ್ರೆ ಜಮೀನು ಕೊಟ್ರೆ ಆಗುತ್ತಾ? ಯಾರ ಒತ್ತಡ ಅನ್ನೋದು ಗೊತ್ತಿಲ್ಲ: ಪರಮೇಶ್ವರ್

    ಆಣೆ-ಪ್ರಮಾಣಕ್ಕೆ ಆಹ್ವಾನ:
    ಇದಕ್ಕೂ ಮುನ್ನ ಮಂಡ್ಯದಲ್ಲಿ ಮಾತನಾಡಿದ್ದ ಸಚಿವ ಚಲುವರಾಯಸ್ವಾಮಿ, ಕುಮಾರಸ್ವಾಮಿ ಅವರನ್ನು ಮೊದಲ ಬಾರಿಗೆ ಸಿಎಂ ಮಾಡಲು ನಾನು ಶ್ರಮಪಟ್ಟಿದ್ದೇನೆ. ಒಂದು‌ ವೇಳೆ ನಾನು ಶ್ರಮಪಡದೇ ಅವರ ಸ್ವಂತ ಶ್ರಮದಿಂದ ಸಿಎಂ ಆಗಿದ್ದೇನೆ ಎನ್ನುವುದಾದರೆ ಧರ್ಮಸ್ಥಳಕ್ಕೆ ಬಂದು ಆಣೆ ಪ್ರಮಾಣ ಮಾಡಲಿ ಎಂದು ಕುಮಾರಸ್ವಾಮಿ ಅವರಿಗೆ ಸವಾಲು ಹಾಕಿದ್ದರು.

    ಕುಮಾರಸ್ವಾಮಿ ಅವರು ಮೊದಲ ಬಾರಿಗೆ ಸಿಎಂ ಆಗುವಾಗ ನಾನು ಎಲ್ಲರನ್ನೂ ಒಗ್ಗೂಡಿಸಿದ್ದೇನೆ. ಸ್ವತಃ ದೇವೇಗೌಡರೇ (HD Devegowda) ನನ್ನ ಈ ವಿಚಾರವಾಗಿ ಬೈದಿದ್ದಾರೆ. ನಾನು ಕುಮಾರಸ್ವಾಮಿ ಸಿಎಂ ಆಗಲು ಶ್ರಮ ಪಟ್ಟಿದ್ದೇನೆ. ನಾವು ಅವರೊಟ್ಟಿಗೆ ರಾತ್ರಿ ಎಲ್ಲಾ ಇದ್ದಿದ್ದು, ಅವರನ್ನು ಸಿಎಂ‌ ಮಾಡಲು ಹೊರತು ಬೇರೆಯಾವ ವಿಚಾರಕ್ಕೂ ಅಲ್ಲ. ನಾನು ಅವರನ್ನು ಸಿಎಂ ಮಾಡಲು ಶ್ರಮ ಪಟ್ಟಿಲ್ಲ ಎನ್ನುವುದಾದರೆ ಧರ್ಮಸ್ಥಳಕ್ಕೆ ಬಂದು ಆಣೆ ಪ್ರಮಾಣ ಮಾಡಲಿ ಅಂತ ಆಹ್ವಾನ ನೀಡಿದ್ದರು. ಇದನ್ನೂ ಓದಿ: ದ್ವಿತೀಯ ಪಿಯುಸಿ ಪರೀಕ್ಷೆ ರಿಸಲ್ಟ್: ಪಾಸಾದವರಿಗೆ ವಿಶ್ ಮಾಡಿ, ಫೇಲ್ ಆದವರಿಗೆ ಧೈರ್ಯ ತುಂಬಿದ ಸಿಎಂ

    ಮುಂದುವರೆದು‌.. ನನ್ನಿಂದ ಅವರ ಆರೋಗ್ಯ ಹಾಳಾಗಿಲ್ಲ. ಅವರ ವೈಯಕ್ತಿಕ ಸಮಸ್ಯೆಗಳಿಂದ ನಿದ್ದೆ ಮಾಡದೇ ಅವರ ಆರೋಗ್ಯ ಹಾಳಾಗಿದೆ. ಅವರ ಚಟಗಳ ಬಗ್ಗೆ ಆತ್ಮಸಾಕ್ಷಿ ಮಾಡಿಕೊಳ್ಳಲಿ. ಬೇಕಿದ್ದರೆ ಅವರು ಹಾಗೂ ನಾನು ಇಬ್ಬರೇ ಕೂತು ಸ್ವಚರಿತ್ರೆಗಳ ಬಗ್ಗೆ ಬಹಿರಂಗ ಚರ್ಚೆ ಮಾಡೋಣ ಬರಲು ಹೇಳಿ ಎಂದು ಚಲುವರಾಯಸ್ವಾಮಿ ಪಂಥ್ವಾಹನ ನೀಡಿದ್ದರು.  ಇದನ್ನೂ ಓದಿ: ಪಂಜಾಬ್‌ ಬಿಜೆಪಿ ನಾಯಕನ ಮನೆಯಲ್ಲಿ ಸ್ಫೋಟ ಕೇಸ್‌ – ಬಂಧಿತ ಆರೋಪಿಗೆ ಲಾರೆನ್ಸ್‌ ಬಿಷ್ಣೋಯ್‌ ಲಿಂಕ್‌

  • ಇಡೀ ಸರ್ಕಾರ ಒಬ್ಬ ಕುಮಾರಸ್ವಾಮಿಯನ್ನ ಸೈಲೆಂಟ್ ಮಾಡಲು ಯತ್ನಿಸುತ್ತಿದೆ: ಹೆಚ್‍ಡಿಕೆ

    ಇಡೀ ಸರ್ಕಾರ ಒಬ್ಬ ಕುಮಾರಸ್ವಾಮಿಯನ್ನ ಸೈಲೆಂಟ್ ಮಾಡಲು ಯತ್ನಿಸುತ್ತಿದೆ: ಹೆಚ್‍ಡಿಕೆ

    ಮಂಡ್ಯ: ಇಡೀ ಸರ್ಕಾರ ಒಬ್ಬ ಕುಮಾರಸ್ವಾಮಿಯನ್ನು (H.D Kumaraswamy) ಸೈಲೆಂಟ್ ಮಾಡಲು ಪ್ರಯತ್ನಿಸುತ್ತಿದೆ ಎಂದು ಕೇಂದ್ರ ಸಚಿವ ಹೆಚ್‍ಡಿಕೆ ಆರೋಪಿಸಿದ್ದಾರೆ.

    ಮಂಡ್ಯದಲ್ಲಿ (Mandya) ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಈ ವೇಳೆ ಕಾಂಗ್ರೆಸ್ (Congress) ಸರ್ಕಾರ ದ್ವೇಷದ ರಾಜಕಾರಣ ಮಾಡುತ್ತಿದೆ. ಅಧಿಕಾರ ದುರುಪಯೋಗದ ಬಗ್ಗೆ ನನ್ನ ಬಳಿ ದಾಖಲೆಗಳಿವೆ. ನನ್ನ ಮೇಲೆ ಯುದ್ಧ ಶುರು ಮಾಡಿದ್ದಾರೆ. ಈ ಸರ್ಕಾರದ ಅಕ್ರಮಗಳ ಬಗ್ಗೆ ಟನ್‍ಗಟ್ಟಲೆ ದಾಖಲೆಗಳಿವೆ. ಆದರೆ ಯಾವ ರೀತಿಯ ದಾಖಲೆಗಳು ಇದ್ದರೂ ಇವತ್ತಿನ ತನಿಖಾ ಸಂಸ್ಥೆಗಳ ಮೇಲೆ ನಂಬಿಕೆ ಇಲ್ಲ ಎಂದಿದ್ದಾರೆ.

    ನಮ್ಮದು ಬಂದೂಕು ಸಂಸ್ಕೃತಿಯಲ್ಲ, ನಮ್ಮದು ಸರ್ವ ಜನಾಂಗದ ಶಾಂತಿಯ ತೋಟದ ಸಂಸ್ಕೃತಿ. ದಾಖಲೆಗಳ ಮುಂದೆ ಬಂದೂಕು ಕೆಲಸಕ್ಕೆ ಬರಲ್ಲ. ಕರ್ನಾಟಕ ರಾಜ್ಯ ಸಿಡಿ, ಪೆನ್‍ಡ್ರೈವ್ ತಯಾರು ಮಾಡುವ ರಾಜ್ಯವಾಗಿದೆ ಎಂದು ಕಾಂಗ್ರೆಸ್‍ನ ಸಚಿವರೆ ಹೇಳಿದ್ದಾರೆ. ಯಾವ ತನಿಖೆ ಮಾಡಿದ್ದೀರಾ ಪರಮೇಶ್ವರ್ ಅವರೇ? ಸಿದ್ದರಾಮಯ್ಯಗೆ (Siddaramaiah) ಇದರ ಬಗ್ಗೆ ಮಾಹಿತಿ ಇಲ್ವಾ? ಯಾರ ಮನೆ ರೇಡ್ ಮಾಡಿಸಿದ್ದೀರಿ? ಏನೇನು ಸಿಕ್ತು? ಯಾಕೆ ಸುಪಾರಿ ಕೊಟ್ರು? ಸುಮ್ಮನೆ ಕೊಡ್ತಾರಾ? ತನಿಖೆ ನಡೆಸಿ ಸತ್ಯ ಹೊರ ತರುತ್ತೀರಾ ಎಂದು ಸಾಲು ಸಾಲು ಪ್ರಶ್ನೆಗಳನ್ನು ಸರ್ಕಾರದ ಮುಂದಿಟ್ಟಿದ್ದಾರೆ.

    ನಾನು ಮಾಜಿ ಪ್ರಧಾನಿ ಮಗ, 2 ಬಾರಿ ಸಿಎಂ ಆಗಿದ್ದೆ. ಈಗ ಕೇಂದ್ರ ಮಂತ್ರಿಯಾಗಿದ್ದೇನೆ ನಾನು ಒತ್ತುವರಿ ಮಾಡಲು ಸಾಧ್ಯನಾ? ರೆವಿನ್ಯೂ ಪ್ರಕರಣಕ್ಕೆ ಡಿವೈಎಸ್‍ಪಿ ತನಿಖಾಧಿಕಾರಿ ಮಾಡಿದ್ದು ಇತಿಹಾಸದಲ್ಲೇ ಮೊದಲು. ನನಗೆ ಈ ಪರಿಸ್ಥಿತಿ ತಂದವರು ಇನ್ನೆಷ್ಟು ಮನೆ ಹಾಳು ಮಾಡಿದ್ದೀರಿ? ಎಂದು ಕಿಡಿಕಾರಿದ್ದಾರೆ.

    ಕೆರೆ ನುಂಗಿ ಅಣ್ಣನ ಹೆಸರಿಗೆ ರಿಜಿಸ್ಟರ್ ಮಾಡಿಸಿ, ಗಿಫ್ಟ್ ಪಡೆಯುವವರು ಕುಮಾರಸ್ವಾಮಿ ಬಗ್ಗೆ ಮಾತಾಡ್ತೀರಾ? ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಎಷ್ಟು ಜನರನ್ನ ಬಲಿ ಪಡೆದಿದೆ? ಈ ಸರ್ಕಾರ ದ್ವೇಷದ ರಾಜಕಾರಣ ಮಾಡ್ತಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ.

    ನಾನು ಪ್ರಚಾರಕ್ಕೆ ದಾಖಲೆ ಕೊಟ್ಟರೂ ನ್ಯಾಯ ದೊರಕಲ್ಲ. ದಾಖಲೆಗಳನ್ನು ಭದ್ರವಾಗಿಟ್ಟಿದ್ದೇನೆ. ಒಂದು ಬಾರಿ 5 ವರ್ಷ ಸ್ವತಂತ್ರ ಸರ್ಕಾರ ಕೊಡಿ. ಎಲ್ಲರನ್ನೂ ನೋಡಿದ್ದೀರಿ, ನನಗೂ ಒಂದು ಅವಕಾಶ ಕೊಡಿ. ಎಲ್ಲಾ ಅಕ್ರಮಗಳಿಗೂ ತಾರ್ಕಿಕ ಅಂತ್ಯ ಕಾಣಿಸುತ್ತೇನೆ ಎಂದು ಸವಾಲು ಹಾಕಿದ್ದಾರೆ.

  • ಕುಮಾರಸ್ವಾಮಿ ಮಾತಿಗೆ ಹೆದರೋ ಮಗ ನಾನಲ್ಲ – ಡಿಕೆಶಿ ಕೌಂಟರ್‌

    ಕುಮಾರಸ್ವಾಮಿ ಮಾತಿಗೆ ಹೆದರೋ ಮಗ ನಾನಲ್ಲ – ಡಿಕೆಶಿ ಕೌಂಟರ್‌

    ಬೆಂಗಳೂರು: ಕೇತಗಾನಹಳ್ಳಿ ಭೂಒತ್ತುವರಿ ಪ್ರಕರಣದಿಂದ ಕೆರಳಿರುವ ಕೇಂದ್ರ ಸಚಿವ ಕುಮಾರಸ್ವಾಮಿ, ರಾಜ್ಯ ಸರ್ಕಾರದ ವಿರುದ್ಧ ವಾರ್ ಡಿಕ್ಲೇರ್ ಮಾಡಿದ್ದಾರೆ. ಸಿಎಂ-ಡಿಸಿಎಂ ನನ್ನ ಮೇಲೆ ದ್ವೇಷ ಸಾಧಿಸ್ತಿದ್ದಾರೆ. ಆದ್ರೆ ನನ್ನತ್ರ ಟನ್‌ಗಟ್ಟಲೇ ದಾಖಲೆಗಳಿವೆ.. ಹುಷಾರ್, ನನ್ನನ್ನು ಕೆಣಕಬೇಡಿ ಎಂದು ವಾರ್ನಿಂಗ್ ಕೊಟ್ಟಿದ್ದಾರೆ.

    ಮಾಜಿ ಪ್ರಧಾನಿ ಮಗ ನಾನು.. 4 ಎಕರೆ ಭೂಮಿ ಒತ್ತುವರಿ ಮಾಡಿಕೊಳ್ಬೇಕಾ? ಅಂತ ಪ್ರಶ್ನಿಸಿದ್ರು. ಅತಿಕ್ರಮಣದ ದಾಖಲೆ ಇದ್ರೆ ಬಿಡುಗಡೆ ಮಾಡಿ ಎಂದು ಸವಾಲ್ ಹಾಕಿದ್ರು. ಮುಡಾ ಕೇಸಲ್ಲಿ ಲೋಕಾಯುಕ್ತ ತನಿಖೆಯ ಪಾರದರ್ಶಕತೆ ಬಗ್ಗೆ ಮತ್ತೆ ದನಿ ಎತ್ತಿದ್ರು. ಗ್ಯಾರಂಟಿಗಳ ವಿಚಾರದಲ್ಲಿ ಸರ್ಕಾರ ಏಪ್ರಿಲ್ ಫೂಲ್ ಮಾಡ್ತಿದೆ ಎಂದು ಲೇವಡಿ ಮಾಡಿದ್ರು. ಕಸದ ಹೆಸ್ರಲ್ಲಿ ಲೂಟಿ ಎಂಬ ಆರೋಪಕ್ಕೂ ಕೌಂಟರ್ ನೀಡಿದ್ರು.

    ಇದಕ್ಕೆ ತಿರುಗೇಟು ನೀಡಿದ ಡಿಸಿಎಂ ಡಿಕೆ ಶಿವಕುಮಾರ್‌, ಕುಮಾರಸ್ವಾಮಿ ಮಾತಿಗೆ ಹೆದರೋ ಮಗ ನಾನಲ್ಲ. ಅದೆಷ್ಟು ದಾಖಲೆ ಇದೆಯೋ ರಿಲೀಸ್ ಮಾಡ್ಲಿ ಅಂತ ಕೌಂಟರ್‌ ಕೊಟ್ಟಿದ್ದಾರೆ.

    ನಾನು ಕುಮಾರಸ್ವಾಮಿಗೆ ಹೆದರುವ ಮಗ ಅಲ್ಲ. ಟನ್ ಗಟ್ಟಲೇ ಅಲ್ಲ ಭೂಮಿಯನ್ನೇ ತರಲಿ, ನನ್ನ, ನನ್ನ ಹೆಂಡ್ತಿ ಮಕ್ಕಳ ಆಸ್ತಿ ಬಹಿರಂಗ ಮಾಡಲಿ. ನಾನು ಕುಮಾರಸ್ವಾಮಿಗೆ ಹೇಳುತ್ತೇನೆ, ನನ್ನದು ಎಷ್ಟು ವ್ಯವಹಾರ ಇದೆ ಅದರ ದಾಖಲೆ ಬಿಡುಗಡೆ ಮಾಡಲಿ, ನನಗೂ ಗೊತ್ತಿದೆ ನನ್ನ ಆಸ್ತಿ, ಮಕ್ಕಳ ಮತ್ತು ಕುಟುಂಬದ ಆಸ್ತಿ ಎಷ್ಟಿದೆ, ಅದನ್ನೆಲ್ಲಾ ತೆಗೆಸಿದ್ದಾರೆ. ಅದನ್ನು ಬಹಿರಂಗ ಮಾಡಲಿ, ಇವರಿಗೆಲ್ಲಾ ಹೆದರುವಂತಹ ಮಗ ಅಲ್ಲ ನಾನು ಅಂತ ತಿರುಗೇಟು ನೀಡಿದ್ದಾರೆ.

    ಇದೇ ವೇಳೆ ನೀರಾವರಿ ಯೋಜನೆಗಳ ಕುರಿತು ಮಾತನಾಡಿ, ಮೇಕೆದಾಟು, ಅಪ್ಪರ್ ಭದ್ರಾ, ಮಹದಾಯಿ ಎತ್ತಿನಹೊಳೆ ಯೋಜನೆ ಬಗ್ಗೆ ಮಾತನಾಡಿದ್ದೇವೆ. ಅವರಿಗೆ ಎಲ್ಲವೂ ಅರ್ಥವಾಗಿದೆ. ಆದ್ಯತೆ ಇದೆ ಅನ್ನೋದು ಅವರಿಗೆ ಗೊತ್ತಾಗಿದೆ. ಎಲ್ಲರನ್ನ ಕರೆಸಿ ಮಾತನಾಡುತ್ತೇವೆ ಅಂದಿದ್ದಾರೆ. ಭದ್ರಾ ಮೇಲ್ದಂಡೆ ಯೋಜನೆಗೆ 5,300 ಕೋಟಿ ಬಿಡುಗಡೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಕ್ಯಾಬಿನೆಟ್ ಗೆ ಕಳಿಸಿದ್ದೇವೆ ಅಂದಿದ್ದಾರೆ. ನೋಡೋಣ ಏನು ಮಾಡ್ತಾರೆ. ಎತ್ತಿನಹೊಳೆ ಯೋಜನೆಗೆ ಅಪ್ಲೈ ಮಾಡಿದ್ದೇವೆ ಎಂದು ಹೇಳಿದರು.

  • ಹಾಲಿನ ಪ್ರೋತ್ಸಾಹ ಧನ ಬಿಡುಗಡೆಗೆ ಮಾಡಿ: ಸರ್ಕಾರಕ್ಕೆ ನಿಖಿಲ್ ಕುಮಾರಸ್ವಾಮಿ ಆಗ್ರಹ

    ಹಾಲಿನ ಪ್ರೋತ್ಸಾಹ ಧನ ಬಿಡುಗಡೆಗೆ ಮಾಡಿ: ಸರ್ಕಾರಕ್ಕೆ ನಿಖಿಲ್ ಕುಮಾರಸ್ವಾಮಿ ಆಗ್ರಹ

    ಬೆಂಗಳೂರು: ಹಾಲಿನ (Milk) ದರವನ್ನು ನಾಲ್ಕೈದು ಬಾರಿ ಏರಿಕೆ ಮಾಡಿದರೂ ರೈತರಿಗೆ (Farmers) ಮಾತ್ರ ಪ್ರೋತ್ಸಾಹ ಧನವನ್ನ ಇನ್ನೂ ನೀಡಿಲ್ಲ. ಸರ್ಕಾರ ಕೂಡಲೇ ಹೈನುಗಾರರಿಗೆ ಹಾಲಿನ ಪ್ರೋತ್ಸಾಹ ಧನ (Milk Incentive Funds) ಬಿಡುಗಡೆ ಮಾಡಬೇಕು ಎಂದು ಜೆಡಿಎಸ್‌ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ (Nikhil Kumaraswamy) ಆಗ್ರಹಿಸಿದ್ದಾರೆ.

    ಈ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಅವರು, ನಾವು ಕೃಷಿಕರ ಪರ, ರೈತರ ಪರ ಎಂದು ಕೊಚ್ಚಿಕೊಳ್ಳುವ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಎರಡು ವರ್ಷಗಳೇ ಆಗಿದೆ. ಇನ್ನೂ ಪ್ರಚಾರ ಜಾಸ್ತಿ, ಕೆಲಸ ಕಮ್ಮಿ. ಇದು ಸರ್ಕಾರದ ನೀತಿ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಜನರಿಗೆ ಮತ್ತೆ ದರ ಏರಿಕೆಯ ಬರೆ – ಬೆಂಗಳೂರಿನಲ್ಲಿ ಕಾಫಿ, ಟೀ ಬೆಲೆ ಏರಿಕೆ

    ಕಳೆದ ಆರು ತಿಂಗಳಿಂದ ರಾಜ್ಯದ ರೈತರ ಹಾಲಿನ ಪ್ರೋತ್ಸಾಹ ಧನ ಬಿಡುಗಡೆ ಮಾಡದ ರೈತ ವಿರೋಧಿ ಕಾಂಗ್ರೆಸ್ ಸರ್ಕಾರ ಬರೋಬ್ಬರಿ 656 ಕೋಟಿ ರೂ. ಹಣವನ್ನು ಬಾಕಿ ಉಳಿಸಿಕೊಂಡಿದೆ. ಇದು ರೈತರ ಬಗ್ಗೆ ಈ ಸರ್ಕಾರಕ್ಕಿರುವ ಅಸಡ್ಡೆತನವನ್ನು ಸಾಕ್ಷಿಯಾಗಿದೆ ಎಂದು ಅವರು ಅಕ್ರೋಶ ಹೊರಹಾಕಿದ್ದಾರೆ.

    ನಿಮ್ಮ ಬಣ್ಣ ಬಣ್ಣದ ಮಾತುಗಳಿಂದ ಅನ್ನದಾತರಿಗೆ ಯಾವುದೇ ಉಪಯೋಗವಿಲ್ಲ. ಹಾಲಿನ ದರವನ್ನು ನಾಲ್ಕೈದು ಬಾರಿ ಏರಿಕೆ ಮಾಡಿದರೂ ರೈತರಿಗೆ ಮಾತ್ರ ಪ್ರೋತ್ಸಾಹ ಧನವನ್ನು ನೀಡಿಲ್ಲ. ಕೂಡಲೇ ಹೈನುಗಾರರಿಗೆ ಹಾಲಿನ ಪ್ರೋತ್ಸಾಹ ಧನ ಬಿಡುಗಡೆ ಮಾಡಿ ಎಂದು ಅವರು ಆಗ್ರಹಿಸಿದ್ದಾರೆ. ಇದನ್ನೂ ಓದಿ: ಕಾನೂನು ಪೊನ್ನಣ್ಣನಿಗೂ ಒಂದೇ, ಮಂಥರ್ ಗೌಡಗೂ ಒಂದೇ: ಪರಮೇಶ್ವರ್

  • ಮಂಡ್ಯದಲ್ಲಿ ದಳಪತಿಗಳಿಗೆ ಮುಖಭಂಗ – ಮತ್ತೆ ‘ಕೈ’ ವಶವಾಯ್ತು ಮನ್ಮುಲ್‌ ಗದ್ದುಗೆ

    ಮಂಡ್ಯದಲ್ಲಿ ದಳಪತಿಗಳಿಗೆ ಮುಖಭಂಗ – ಮತ್ತೆ ‘ಕೈ’ ವಶವಾಯ್ತು ಮನ್ಮುಲ್‌ ಗದ್ದುಗೆ

    – ಜೆಡಿಎಸ್‌ ಶಾಸಕರ ವಿರುದ್ಧವೇ ಗೆದ್ದು ಬೀಗಿದ ಬಂಡಾಯ ಅಭ್ಯರ್ಥಿ

    ಮಂಡ್ಯ: ಮಂಡ್ಯದಲ್ಲಿ (Mandya) ದಳಪತಿಗಳಿಗೆ ಮತ್ತೆ ಮುಖಭಂಗವಾಗಿದೆ. ಮನ್ಮುಲ್‌ (Manmul) ಗದ್ದುಗೆ ಮತ್ತೆ ‘ಕೈ’ ವಶವಾಗಿದೆ.

    ಚುನಾವಣೆ ಅಷ್ಟೇ ಅಲ್ಲ, ಕಾನೂನಾತ್ಮಕವಾಗಿಯೂ ದಳಪತಿಗಳಿಗೆ ಹಿನ್ನಡೆಯಾಗಿದೆ. ಜೆಡಿಎಸ್‌ ಅಭ್ಯರ್ಥಿಗಳಿಗೆ ಕೋರ್ಟ್‌ ತೀರ್ಪು ಶಾಕ್ ಕೊಟ್ಟಿದೆ. ತಿಂಗಳ ನಂತರ ಅಧಿಕೃತ ಫಲಿತಾಂಶ ಘೋಷಣೆಯಾಗಿದ್ದು, ಜೆಡಿಎಸ್‌ ಶಾಸಕನನ್ನೇ ಮಣಿಸಿ ಬಂಡಾಯ ಅಭ್ಯರ್ಥಿ ಗದ್ದುಗೆ ಏರಿದ್ದಾರೆ.

    ಕೆಆರ್‌ ಪೇಟೆಯ ಜೆಡಿಎಸ್‌ ಶಾಸಕ ಹೆಚ್‌.ಟಿ.ಮಂಜು ಅವರು ಶಾಸಕನಾಗಿಯೂ ಮನ್ಮುಲ್‌ ಚುನಾವಣೆಗೆ ಸ್ಪರ್ಧಿಸಿದ್ದರು. ಆದರೆ, ಜೆಡಿಎಸ್‌ ಶಾಸಕನಿಗೆ ಬಂಡಾಯ ಅಭ್ಯರ್ಥಿ ಮಣ್ಣುಮುಕ್ಕಿಸಿದ್ದಾರೆ. ಅಧಿಕೃತವಾಗಿ ಮನ್ಮುಲ್‌ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ.

    ಡಾಲು ರವಿ, ಎಂ.ಬಿ.ಹರೀಶ್‌ಗೆ ವಿಜಯಮಾಲೆ ಒಲಿದಿದೆ. ಜೆಡಿಎಸ್‌ನಲ್ಲೇ ಇದ್ದು ಶಾಸಕ, ಬೆಂಬಲಿಗನ ವಿರುದ್ಧ ಬಂಡಾಯಗಾರರು ತೊಡೆತಟ್ಟಿದ್ದರು. ಅಧಿಕಾರ, ಜನ ಬಲದ ನಡುವೆಯೂ ರವಿ ಗೆದ್ದು ಬೀಗಿದ್ದಾರೆ. ಮನ್ಮುಲ್‌ ನೂತನ ನಿರ್ದೇಶಕರಾಗಿ ಗೆದ್ದು ತಮ್ಮ ಶಕ್ತಿ ಪ್ರದರ್ಶನ ಮಾಡಿದ್ದಾರೆ.

    ನಮ್ಮ ಹೋರಾಟ ಶಾಸಕನ ವಿರುದ್ಧ ಅಷ್ಟೆ. ನಾವು ಈಗಲೂ ಜೆಡಿಎಸ್‌ನಲ್ಲಿದ್ದೇವೆ. ಚುನಾವಣೆಯಲ್ಲಿ ಚಲುವರಾಯಸ್ವಾಮಿ ಸಹಾಯ ಮಾಡಿದ್ದಾರೆ ಅಷ್ಟೆ. ಕಾಂಗ್ರೆಸ್‌ ಸೇರ್ಪಡೆ ಬಗ್ಗೆ ನಮಗೆ ಆಲೋಚನೆಯೇ ಇಲ್ಲ ಎಂದು ಸ್ವಪಕ್ಷೀಯರ ವಿರುದ್ಧವೇ ಮನ್ಮುಲ್‌ ನೂತನ ನಿರ್ದೇಶಕ ಗುಡುಗಿದ್ದಾರೆ.

  • ಬೆಲೆ ಏರಿಕೆ ವಿರುದ್ಧ ಬಿಜೆಪಿ ಏಕಾಂಗಿ ಹೋರಾಟ ಮಾಡೋದು ಸರಿಯಲ್ಲ: ಸುರೇಶ್ ಬಾಬು

    ಬೆಲೆ ಏರಿಕೆ ವಿರುದ್ಧ ಬಿಜೆಪಿ ಏಕಾಂಗಿ ಹೋರಾಟ ಮಾಡೋದು ಸರಿಯಲ್ಲ: ಸುರೇಶ್ ಬಾಬು

    – ಗ್ಯಾರಂಟಿಗೆ ಹಣ ಹೊಂದಿಸಲು ಸರ್ಕಾರ ಬೆಲೆ ಏರಿಕೆ ಮಾಡ್ತಿದೆ ಎಂದು ಕಿಡಿ

    ಬೆಂಗಳೂರು: ಬೆಲೆ ಏರಿಕೆ ವಿರುದ್ಧ ಬಿಜೆಪಿ ನಡೆಸುತ್ತಿರುವ ಏಕಾಂಗಿ ಹೋರಾಟಕ್ಕೆ ಜೆಡಿಎಸ್ ಆಕ್ಷೇಪ ವ್ಯಕ್ತಪಡಿಸಿದೆ. ಜೆಡಿಎಸ್ ಶಾಸಕಾಂಗ ನಾಯಕ ಸುರೇಶ್ ಬಾಬು(Suresh Babu) ಬಿಜೆಪಿ ವಿರುದ್ಧ ಆಕ್ರೋಶ ಹೊರ ಹಾಕಿದ್ದು, ಬಿಜೆಪಿ ನಡೆ ಸರಿಯಲ್ಲ ಎಂದು ಕಿಡಿಕಾರಿದರು.

    ವಿಧಾನಸೌಧದಲ್ಲಿ ಮಾತನಾಡಿದ ಅವರು, ಬಿಜೆಪಿ(BJP) ಇಂದಿನಿಂದ ಅಹೋರಾತ್ರಿ ಧರಣಿ ಮಾಡ್ತಿದೆ. ಆದರೆ ನಮ್ಮನ್ನ ಕರೆದಿಲ್ಲ. ಜೆಡಿಎಸ್‌ಗೆ(JDS) ಮೇಲುಗೈ ಆಗುತ್ತದೆ ಎಂದು ಬಿಜೆಪಿ ನಮ್ಮನ್ನ ಕರೆದಿಲ್ಲ. ಮುಡಾ ಪಾದಯಾತ್ರೆಯಲ್ಲಿ ಹೀಗೆ ಆಯ್ತು. ಈಗಲೂ ಹೀಗೆ ಆಗಿದೆ. ಬಿಜೆಪಿ ನಾಯಕರಿಗೆ ಮನವಿ ಮಾಡುತ್ತೇವೆ. ಒಟ್ಟಾಗಿ ಹೋರಾಟ ಮಾಡಬೇಕು. ರಾಜ್ಯದಲ್ಲಿ ಸಮನ್ವಯ ಸಾಧಿಸಲು ಒಂದು ಸಮಿತಿ ರಚಿಸಿಬೇಕು ಎಂದು ಆಗ್ರಹಿಸಿದರು. ಇದನ್ನೂ ಓದಿ: ನಿಲ್ದಾಣದಲ್ಲಿ ನಿಂತಿದ್ದ ಬಸ್ಸಿಗೆ ಬೆಂಕಿ – 10ಕ್ಕೂ ಹೆಚ್ಚು ದ್ವಿಚಕ್ರ ವಾಹನಗಳು ಬೆಂಕಿಗಾಹುತಿ

    ಮೊದಲಿಂದಲೂ ನಾವು ಸಮನ್ವಯ ಸಮಿತಿ ಮಾಡಿ ಎಂದು ಹೇಳ್ತಿದ್ದೇವೆ. ಒಟ್ಟಾಗಿ ಹೋರಾಟ ಮಾಡಿದರೆ ಪ್ರಬಲವಾಗಿ ಇರುತ್ತದೆ. ನಾವು ಒಟ್ಟಾಗಿ ಹೋರಾಟ ಮಾಡಿದರೆ ಸರ್ಕಾರಕ್ಕೆ ಭಯ ಇರುತ್ತದೆ. ನಮ್ಮ ಪಕ್ಷಕ್ಕೆ ಬಿಜೆಪಿ ಹೋರಾಟ ಬಗ್ಗೆ ನಮಗೆ ಯಾವುದೇ ಮಾಹಿತಿ ಕೊಟ್ಟಿಲ್ಲ. ದೇವೇಗೌಡ, ಕುಮಾರಸ್ವಾಮಿ ಅವರಿಗೂ ಕೇಳಿದೆ ಯಾರಿಗೂ ಹೇಳಿಲ್ಲ. ಇದು ಸರಿಯಾದ ಬೆಳವಣಿಗೆ ಅಲ್ಲ. ಇಬ್ಬರು ಒಟ್ಟಾಗಿ ಹೋಗಬೇಕು. ಈ ನಿಟ್ಟಿನಲ್ಲಿ ಎರಡು ಪಕ್ಷಗಳು ಕೂತು ಮಾಡಬೇಕು ಎಂದರು.

    ಸಮನ್ವಯದ ಕೊರತೆ ಬಗ್ಗೆ ಕೇಂದ್ರದ ನಾಯಕರಿಗೆ ಗೊತ್ತಿಲ್ಲ ಅನ್ನಿಸುತ್ತದೆ. ರಾಜ್ಯ ನಾಯಕರು ಇದನ್ನ ಮಾಡುತ್ತಿದ್ದಾರೆ. ನಿಖಿಲ್, ಬಿಜೆಪಿ ಅವರು ಘೋಷಣೆ ಮಾಡಿದರು ಎಂದು ನಾವು ಹೋರಾಟ ಮಾಡುತ್ತೇವೆ ಅಂತ ಹೇಳಿದ್ದಾರೆ. ಬಿಜೆಪಿ ಅಧ್ಯಕ್ಷ ವಿಜಯೇಂದ್ರ(Vijayendra) ಅವರು ನಾವು ಪ್ರತ್ಯೇಕ ಹೋರಾಟ ಅಂತ ಹೇಳಿದ್ದಾರೆ. ಇದು ಅವರ ಮನಸ್ಥಿತಿ ತೋರಿಸುತ್ತದೆ. ಎರಡು ಪಕ್ಷಗಳು ಪ್ರತ್ಯೇಕವಾಗಿ ಹೋರಾಟ ಮಾಡೋದು ಸರಿಯಲ್ಲ. ಎರಡು ಪಕ್ಷದ ವರಿಷ್ಠರು ಇದರ ಬಗ್ಗೆ ಸಮನ್ವಯ ಮಾಡಬೇಕು. ಇಲ್ಲದೆ ಹೋದರೆ ಎರಡು ಪಕ್ಷಕ್ಕೆ ಸಮಸ್ಯೆ ಆಗುತ್ತದೆ. ರಾಜ್ಯಮಟ್ಟದಲ್ಲಿ ಹೊಂದಾಣಿಕೆ ಬಗ್ಗೆ ಮಾತಾಡಬೇಕು ಎಂದು ಹೇಳಿದರು. ಇದನ್ನೂ ಓದಿ: ಲೋಕಸಭೆಯಲ್ಲಿ ವಕ್ಫ್‌ ತಿದ್ದುಪಡಿ ಮಸೂದೆ ಮಂಡನೆ

    ನಾವು ಎನ್‌ಡಿಎ ಅಂಗ ಪಕ್ಷ, ಅದನ್ನ ಬಿಜೆಪಿ ಅವರು ಅರ್ಥ ಮಾಡಿಕೊಳ್ಳಬೇಕು. ಸಂಬಂಧ ಕಿತ್ತು ಹೋಗೋಕೆ ಕ್ಷಣ ಮಾತ್ರ ಸಾಕು. ಆದರೆ ಒಟ್ಟಾಗಿ ಹೋಗೋದನ್ನ ರೂಢಿಸಿಕೊಳ್ಳಿ. ದೇವೇಗೌಡ, ಕುಮಾರಸ್ವಾಮಿ ಅವರು ಬಿಜೆಪಿ ವರ್ತನೆಗೆ ಬೇಸರ ವ್ಯಕ್ತಪಡಿಸಿದ್ದಾರೆ ಎಂದರು.

    ಗ್ಯಾರಂಟಿಗೆ ಹಣ ಹೊಂದಿಸಲು ಬೆಲೆ ಏರಿಕೆ:
    ಬೆಲೆ ಏರಿಕೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ರಾಜ್ಯದಲ್ಲಿ ಸರ್ಕಾರ ಎಲ್ಲಾ ವಸ್ತುಗಳ ಬೆಲೆ ಏರಿಕೆ ಮಾಡಿದೆ. ಜನರು ವಿರೋಧ ಮಾಡುವುದಿಲ್ಲ ಎಂಬ ಭಾವನೆಗೆ ಈ ಸರ್ಕಾರ ಬಂದಿದೆ. ಗ್ಯಾರಂಟಿಗೆ ಹಣ ಹೊಂದಿಸಲು ಬೆಲೆ ಏರಿಕೆ ಮಾಡ್ತಿದ್ದಾರೆ. ಗ್ರಾಹಕರಿಗೆ ಹೊರೆ ಹಾಕುವ ಕೆಲಸ ಮಾಡ್ತಿದ್ದಾರೆ. ಹಾಲು, ನೀರು, ವಿದ್ಯುತ್ ಎಲ್ಲಾ ಬೆಲೆ ಏರಿಕೆ ಮಾಡಿದ್ದಾರೆ. ಈ ಸರ್ಕಾರ ಬಡವರ ಪರ ಇಲ್ಲದ ಸರ್ಕಾರ ಎಂದು ಕಿಡಿಕಾರಿದರು. ಇದನ್ನೂ ಓದಿ: ಅರ್ಥಶಾಸ್ತ್ರದ ಬಗ್ಗೆ ಗೊತ್ತಿರೋರು ಬೆಲೆ ಏರಿಕೆ ವಿರೋಧ ಮಾಡಲ್ಲ: ಆರ್.ವಿ.ದೇಶಪಾಂಡೆ

    ಕಾಂಗ್ರೆಸ್ ಅವರು ಚುನಾವಣೆಯಲ್ಲಿ ಗೆಲ್ಲೋಕೆ ಗ್ಯಾರಂಟಿ ಘೋಷಣೆ ಮಾಡಿದ್ರು. ಮತ ಪಡೆಯೋಕೆ ಯೋಜನೆ ತಂದರು. ಇಂತಹ ವ್ಯವಸ್ಥೆ ಆಗಬಾರದು. ಸರ್ಕಾರದ ಹಣ ಪಕ್ಷದ ಕಾರ್ಯಕರ್ತರಿಗೆ ಕೊಡ್ತಿದ್ದಾರೆ. ಈ ಸರ್ಕಾರ ಅನೇಕ ಅವ್ಯವಹಾರ ಮಾಡ್ತಿದೆ. ಸರ್ಕಾರದ ನೆಲೆ ಬೆಲೆ ಏರಿಕೆ ಖಂಡಿಸಿ ಹೋರಾಟ ಮಾಡಲಿದೆ. ವರಿಷ್ಠರ ಜೊತೆ ಚರ್ಚೆ ಮಾಡಿ ದಿನಾಂಕ ನಿಗದಿ ಮಾಡೋದಾಗಿ ತಿಳಿಸಿದರು.