Tag: jds

  • ಸಿಎಂಗೆ ಮುಡಾ ಟ್ರ್ಯಾಪ್‌, ಪರಮೇಶ್ವರ್‌ಗೆ ಚಿನ್ನದ‌ ಟ್ರ್ಯಾಪ್‌, ನಿಮ್ಮ ಹಿಟ್‌ಲಿಸ್ಟ್‌ನಲ್ಲಿ ಇನ್ಯಾರಿದ್ದಾರೆ: ಡಿಕೆಶಿಗೆ ನಿಖಿಲ್‌ ಪ್ರಶ್ನೆ

    ಸಿಎಂಗೆ ಮುಡಾ ಟ್ರ್ಯಾಪ್‌, ಪರಮೇಶ್ವರ್‌ಗೆ ಚಿನ್ನದ‌ ಟ್ರ್ಯಾಪ್‌, ನಿಮ್ಮ ಹಿಟ್‌ಲಿಸ್ಟ್‌ನಲ್ಲಿ ಇನ್ಯಾರಿದ್ದಾರೆ: ಡಿಕೆಶಿಗೆ ನಿಖಿಲ್‌ ಪ್ರಶ್ನೆ

    ಬೆಂಗಳೂರು: ನಿಮ್ಮ ಬಗ್ಗೆ ಮಾತನಾಡಿದ ಮುಖ್ಯಮಂತ್ರಿಗಳಿಗೆ (Chief Minister) ಮುಡಾ ಟ್ರ್ಯಾಪ್, ಸಚಿವರು, ದಲಿತ ಸಮಾಜದ ಹಿರಿಯರಾದ ಪರಮೇಶ್ವರ್ ಅವರಿಗೆ ಚಿನ್ನದ ಟ್ರ್ಯಾಪ್, ಹಿರಿಯ ಸಚಿವರಾದ ರಾಜಣ್ಣ ಅವರಿಗೆ ಹನಿಟ್ರ್ಯಾಪ್… ಇದೆಂಥಾ ವಿಶ್ವಾಸಾರ್ಹತೆ? ಇನ್ನು ನಿಮ್ಮ ಹಿಟ್ ಲಿಸ್ಟ್‌ನಲ್ಲಿರುವ ಉಳಿಕೆ ಕಾಂಗ್ರೆಸ್‌ ನಾಯಕರನ್ನ ದೇವರೇ ರಕ್ಷಣೆ ಮಾಡಬೇಕು ಅಂತ ಜೆಡಿಎಸ್‌ ಯುವನಾಯಕ ನಿಖಿಲ್‌ ಕುಮಾರಸ್ವಾಮಿ (Nikhil Kumaraswamy) ಕುಟುಕಿದ್ದಾರೆ.

    ಜೆಡಿಎಸ್‌ನಲ್ಲಿ ಭವಿಷ್ಯ ಇಲ್ಲ ಎಂಬ ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ ಎಕ್ಸ್‌ನಲ್ಲಿ ತಿರುಗೇಟು ನೀಡಿದ್ದಾರೆ. ಇದನ್ನೂ ಓದಿ: ಯುದ್ಧ ಹಡಗು, ಜಲಾಂತರ್ಗಾಮಿಗಳ ಸೂಕ್ಷ್ಮ ಮಾಹಿತಿಯನ್ನ ಪಾಕ್‌ಗೆ ರವಾನಿಸ್ತಿದ್ದ ಮೆಕ್ಯಾನಿಕಲ್ ಎಂಜಿನಿಯರ್ ಅರೆಸ್ಟ್‌!

    ನಿಖಿಲ್‌ ಎಕ್ಸ್‌ ಪೋಸ್ಟ್‌ನಲ್ಲಿ ಏನಿದೆ?
    ಭವಿಷ್ಯ, ಅವಕಾಶ ಮತ್ತು ನಂಬಿಕೆ ಬಗ್ಗೆ ಮಾತನಾಡುವ ಡಿ.ಕೆ ಶಿವಕುಮಾರ್‌ ಅವರೇ, 2023ರ ವಿಧಾನಸಭೆ ಚುನಾವಣೆಯ ಇತಿಹಾಸದ ಪುಟಗಳನ್ನೊಮ್ಮೆ ತಿರುಗಿಸಿ ನೋಡಿ. ನಂಬಿಕೆ ಮತ್ತು ವಿಶ್ವಾಸರ್ಹತೆ ಬಗ್ಗೆ ನೀವು ಮಾತನಾಡಿರುವುದು ಭೂತದ ಬಾಯಲ್ಲಿ ಭಗವದ್ಗೀತೆ ಹೇಳಿದ ಹಾಗಿದೆ. ಇದನ್ನೂ ಓದಿ: ಅಮೃತಹಳ್ಳಿ ಸ್ಪಾದಲ್ಲಿ ಲೇಡಿ ಗ್ಯಾಂಗ್‌ನಿಂದ ಅಟ್ಯಾಕ್ – ಬಂಧಿತ ಆರೋಪಿ ಕಾವ್ಯಳಿಗಿದೆ ರೌಡಿಸಂ ಲಿಂಕ್

    ನಿಮ್ಮನ್ನ ನಂಬಿ ಬಂದ ಮಾಜಿ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರನ್ನು ಮಂತ್ರಿ ಮಾಡಲಿಲ್ಲ. ಪಾಪ.. ಹಾಸನ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಗೆದ್ದ ಏಕೈಕ ಶಾಸಕ ಶಿವಲಿಂಗೇಗೌಡರನ್ನು ಸಹ ಮಂತ್ರಿ ಮಾಡಲಿಲ್ಲ, ಗುಬ್ಬಿ ಶಾಸಕರನ್ನು ಮಂತ್ರಿ ಮಾಡುವುದು ಇರಲಿ, ಅವರ ಶ್ರೀಮತಿ ಅವರನ್ನ ಡೇರಿ ಅಧ್ಯಕ್ಷರಾಗಿ ಮಾಡಲಿಲ್ಲ. ಇನ್ನು ರಾಮನಗರ ಜಿಲ್ಲೆಯ ಇಬ್ಬರು ಕಾಂಗ್ರೆಸ್ ಶಾಸಕರಂತೂ ಮಂತ್ರಿ ಆಗಲು ರೆಡಿ ಮಾಡಿಸಿದ್ದ ಸೂಟುಕೋಟುಗಳು ಮೂಲೆಗೆ ಬಿದ್ದು ಧೂಳು ತಿನ್ನುತ್ತಿವೆ. ಇದನ್ನೂ ಓದಿ: ಹಾಸನದಲ್ಲಿ ಮುಂದುವರಿದ ಮಳೆ – ಹೇಮಾವತಿ ಜಲಾಶಯಕ್ಕೆ 7,992 ಕ್ಯೂಸೆಕ್ ಒಳಹರಿವು

    ಇನ್ನು ನಿಮ್ಮ ಬಗ್ಗೆ ಮಾತನಾಡಿದ ಮುಖ್ಯಮಂತ್ರಿಗಳಿಗೆ ಮುಡಾ ಟ್ರ್ಯಾಪ್! ಸಚಿವರು, ದಲಿತ ಸಮಾಜದ ಹಿರಿಯರಾದ ಪರಮೇಶ್ವರ್ ಅವರಿಗೆ ಚಿನ್ನದ ಟ್ರ್ಯಾಪ್, ಹಿರಿಯ ಸಚಿವರಾದ ರಾಜಣ್ಣ ಅವರಿಗೆ ಹನಿಟ್ರ್ಯಾಪ್!! ಇದೆಂಥಾ ವಿಶ್ವಾಸಾರ್ಹತೆ? ಇನ್ನು ನಿಮ್ಮ ಹಿಟ್ ಲಿಸ್ಟ್ ನಲ್ಲಿ ಇರುವ ಉಳಿಕೆ ಕಾಂಗ್ರೆಸ್ ನಾಯಕರನ್ನು ದೇವರೇ ರಕ್ಷಣೆ ಮಾಡಬೇಕು. ಇದನ್ನೂ ಓದಿ: ಮೊಂಟೆಪದವು ಗುಡ್ಡಕುಸಿತಕ್ಕೆ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ – ಪಿಡಿಓ ಇತರ ಅಧಿಕಾರಿಗಳ ವಿರುದ್ಧ ದೂರು

    ರಾಜಕೀಯವಾಗಿ ಗುದ್ದಾಡೋಣ. ಹೋರಾಟ ಮಾಡೋಣ. ಆರೋಗ್ಯಕರವಾಗಿ ಆಲೋಚನೆ ಮಾಡಿ. ಮುತ್ಸದ್ಧಿಯಾಗಿ ಬೆಳೆಯುವ ಕನಿಷ್ಠ ಪ್ರಯತ್ನವನ್ನಾದರೂ ಮಾಡಿ. ಈ ರಾಷ್ಟ್ರ ಕಂಡ ಅಪರೂಪದ ನಾಯಕರಾದ ದೇವೇಗೌಡರ ಬಗ್ಗೆ ಮಾತನಾಡುವ ಮುನ್ನ ನಿಮ್ಮ ನಾಲಿಗೆಯ ಸ್ವಾಸ್ಥ್ಯವನ್ನು ಪರೀಕ್ಷೆ ಮಾಡಿಕೊಳ್ಳಿ. ಮಾತಿನಲ್ಲಿ ಎಚ್ಚರ ಇರದಿದ್ದರೆ ಅದು ನಿಮಗೇ ಮುಳುವು ಅಂತ ಎಚ್ಚರಿಕೆ ಕೊಟ್ಟಿದ್ದಾರೆ.

  • ಬಮೂಲ್ ಚುನಾವಣೆ ಹಿಂದಿನ ದಿನ  ಜೆಡಿಎಸ್ ಬೆಂಬಲಿತ 17 ಮತದಾರರು ಅನರ್ಹ – ಕಾಂಗ್ರೆಸ್‌ನಿಂದ ಅಧಿಕಾರ ದುರುಪಯೋಗ?

    ಬಮೂಲ್ ಚುನಾವಣೆ ಹಿಂದಿನ ದಿನ ಜೆಡಿಎಸ್ ಬೆಂಬಲಿತ 17 ಮತದಾರರು ಅನರ್ಹ – ಕಾಂಗ್ರೆಸ್‌ನಿಂದ ಅಧಿಕಾರ ದುರುಪಯೋಗ?

    ರಾಮನಗರ: ಬಮೂಲ್ ಚುನಾವಣೆಯಲ್ಲಿ (Bamul Election) ಕಾಂಗ್ರೆಸ್‌ನಿಂದ (Congress) ಅಧಿಕಾರ ದುರುಪಯೋಗ ಆಗಿದ್ಯಾ ಎಂಬ ಅನುಮಾನ ವ್ಯಕ್ತವಾಗಿದೆ. ಚುನಾವಣೆ ಹಿಂದಿನ ದಿನವೇ ಚನ್ನಪಟ್ಟಣ ತಾಲೂಕಿನ ಏಕಾಏಕಿ 17 ಮತದಾರರನ್ನು ಅನರ್ಹ ಮಾಡಿರುವುದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.

    ಚನ್ನಪಟ್ಟಣ (channapatna) ಬಮೂಲ್ ಕ್ಷೇತ್ರದ 17 ಮತದಾರರನ್ನು ಸಹಕಾರ ಇಲಾಖೆ ಸಹಾಯಕ ನಿಬಂಧಕ ವೆಂಕಟೇಶ್, ಏಕಾಏಕಿ ಅನರ್ಹ ಮಾಡಿದ್ದಾರೆ. ಜೆಡಿಎಸ್ ಬೆಂಬಲಿತ ಮತಗಳನ್ನೇ ಟಾರ್ಗೆಟ್ ಮಾಡಿ ಅನರ್ಹ ಮಾಡಿರುವ ಆರೋಪ ಕೇಳಿಬಂದಿದ್ದು, ಸಹಕಾರ ಇಲಾಖೆ ಸಹಾಯಕ ನಿಬಂಧಕ(ಎಆರ್) ವಿರುದ್ಧ ಜೆಡಿಎಸ್ ಬೆಂಬಲಿತ ಮತದಾರರು ಆಕ್ರೋಶ ಹೊರಹಾಕಿದ್ದಾರೆ. ರಾಮನಗರದ ಎಆರ್ ಕಚೇರಿಗೆ ಮುತ್ತಿಗೆ ಹಾಕಿ ಅಧಿಕಾರಿ ವೆಂಕಟೇಶ್‌ಗೆ ತರಾಟೆ ತಗೆದುಕೊಂಡಿದ್ದಾರೆ. ಇದನ್ನೂ ಓದಿ: ಸದ್ಯ ಶಾಲೆಗಳಿಗೆ ಯಾವುದೇ ಕೊರೊನಾ ಮಾರ್ಗಸೂಚಿ ಇಲ್ಲ: ಮಧು ಬಂಗಾರಪ್ಪ

    ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಿಸಲು ಸಹಕಾರ ಇಲಾಖೆ ಅಧಿಕಾರಿಗಳು ಶಾಮೀಲಾಗಿ, ಡಿಸಿಎಂ ಡಿಕೆ ಶಿವಕುಮಾರ್‌ ಹಾಗೂ ಮಾಜಿ ಸಂಸದ ಡಿ.ಕೆ.ಸುರೇಶ್ ಸೂಚನೆ ಮೇರೆಗೆ ಜೆಡಿಎಸ್ ಬೆಂಬಲಿತ ಮತಗಳ ಅನರ್ಹ ಮಾಡಿ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಲು ಅನುಕೂಲ ಮಾಡಿಕೊಡಲಾಗಿದೆ ಎಂದು ಚನ್ನಪಟ್ಟಣದ 17 ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರು ಆಕ್ರೋಶ ಹೊರಹಾಕಿದ್ದಾರೆ.

    ದೂರಿನ ಬಗ್ಗೆ ಅರ್ಜಿ ಬಂದ ಹಿನ್ನೆಲೆಯಲ್ಲಿ ಮತಗಳ ಅನರ್ಹಗೊಳಿಸಿದ್ದೇನೆ ಎಂದು ಎಆರ್ ವೆಂಕಟೇಶ್ ಸಮಜಾಯಿಷಿ ಕೊಟ್ಟಿದ್ದು, ಯಾವುದೇ ಪರಿಶೀಲನೆ ನಡೆಸದೇ ಮತಗಳ ಅನರ್ಹ ಮಾಡಿದ್ದನ್ನು ಎಆರ್ ವೆಂಕಟೇಶ್ ಒಪ್ಪಿಕೊಂಡಿದ್ದಾರೆ. ದೂರು ಅರ್ಜಿ ಬಂದರೆ ಕ್ರಮ ಕೈಗೊಳ್ಳುವ ಅಧಿಕಾರ ನನಗಿದೆ. ಹಾಗಾಗಿ 17 ಮತಗಳನ್ನು ಅನರ್ಹ ಮಾಡಿದ್ದೇನೆ ಎಂದು ಸಬೂಬು ಹೇಳಿದ್ದಾರೆ. ಸಹಕಾರ ಇಲಾಖೆಯ ಈ ಅಧಿಕಾರಿ ನಡೆ ಸಾಕಷ್ಟು ಅನುಮಾನಕ್ಕೆ ಕಾರಣವಾಗಿದೆ.

  • ರಾಮನಗರ ಹೆಸರು ಬದಲಾವಣೆ – ತಮ್ಮ ಭೂಮಿಗಳ ಬೆಲೆ ಹೆಚ್ಚಿಸುವ ಷಡ್ಯಂತ್ರದ ಭಾಗ: ಹೆಚ್‌ಡಿಕೆ ಕೆಂಡ

    ರಾಮನಗರ ಹೆಸರು ಬದಲಾವಣೆ – ತಮ್ಮ ಭೂಮಿಗಳ ಬೆಲೆ ಹೆಚ್ಚಿಸುವ ಷಡ್ಯಂತ್ರದ ಭಾಗ: ಹೆಚ್‌ಡಿಕೆ ಕೆಂಡ

    – ದಲಿತರ ಭೂಮಿ ಕಬಳಿಸಿದವರನ್ನ ಸಿಎಂ ಜೊತೆಯಲಿಟ್ಟುಕೊಂಡಿದ್ದಾರೆಂದು ಲೇವಡಿ

    ನವದೆಹಲಿ: ಐತಿಹಾಸಿಕ ಮಹತ್ವ ಹೊಂದಿರುವ ರಾಮನಗರ ಹೆಸರನ್ನು ಕಿತ್ತು ಹಾಕಿ ಬೆಂಗಳೂರು ದಕ್ಷಿಣ(Bengaluru South) ಎಂದು ಮರುನಾಮಕರಣ ಮಾಡಿರುವ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ(H D Kumaraswamy) ಅವರು ತೀವ್ರ ವಾಗ್ದಾಳಿ ನಡೆಸಿದರು.

    ದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, 2007ರಲ್ಲಿ ನಾನು ತೀರ್ಮಾನ ಮಾಡುವಾಗ ಆಗ ವಿರೋಧ ಮಾಡಬಹುದಾಗಿತ್ತು ಆಗ ಮಾಡಲಿಲ್ಲ. ಈ ರಾಜ್ಯಕ್ಕೆ ಮೂವರು ಮುಖ್ಯಮಂತ್ರಿಗಳನ್ನು ರಾಮನಗರ ಕೊಟ್ಟಿದೆ. ಇಡೀ ಜಗತ್ತೇ ನಿಬ್ಬೆರಗಾಗುವ ವಿಧಾನಸೌಧವನ್ನು ಕೆಂಗಲ್ ಹನುಮಂತಯ್ಯ ಅವರು ಕಟ್ಟಿಸಿದ್ದರು. ನೆಹರು ಅವರಿಗೆ ಸಡ್ಡು ಹೊಡೆದು ರಾಜಕೀಯ ಮಾಡಿದ್ದರು. ಅಂತಹ ಮಹನೀಯರ ಹೆಸರನ್ನಾದರೂ ಜಿಲ್ಲೆಗೆ ಇಡಬಹುದಿತ್ತು. ಅವರ ಹೆಸರು ಇಟ್ಟಿದ್ದಿದ್ದರೆ ನಾನು ಅಭಿನಂದಿಸುತ್ತಿದ್ದೆ. ಕೆಂಗಲ್ ಅವರ ಹೆಸರಿಟ್ಟರೆ ಇವರ ಭೂಮಿಗಳಿಗೆ ಬೆಲೆ ಬರುವುದಿಲ್ಲವಲ್ಲ ಎಂದು ಟೀಕಿಸಿದರು. ಇದನ್ನೂ ಓದಿ: ಬ್ರಿಜೇಶ್ ಚೌಟ ಸೇರಿ ಭಾರತ ಸಂಸದರ ನಿಯೋಗ ಆಗಮಿಸುವ ಹೊತ್ತಲ್ಲೇ ಮಾಸ್ಕೋದಲ್ಲಿ ಡ್ರೋನ್‌ ದಾಳಿ!

    ರಾಮನಗರ(Ramanagara) ಹೆಸರನ್ನು ತೆಗೆದುಹಾಕಿ ಬೆಂಗಳೂರು ದಕ್ಷಿಣ ಎಂದು ಹೆಸರು ಇಟ್ಟುಕೊಂಡಿರುವುದು ಡಿಸಿಎಂ ಡಿ.ಕೆ ಶಿವಕುಮಾರ್(D K Shivakumar) ಅವರು ತಮ್ಮ ಭೂಮಿಗಳ ಬೆಲೆಯನ್ನು ಏರಿಸುವ ಷಡ್ಯಂತ್ರದ ಭಾಗವಾಗಿದೆ. ಅವರು ಯಾಕಾಗಿ ಜಿಲ್ಲೆಯ ಹೆಸರು ಬದಲಿಸಿದ್ದಾರೆ? ಅದರ ಹಿಂದಿನ ದುರುದ್ದೇಶ ಏನಿದೆ? ಎಂಬುದು ಗೊತ್ತಿದೆ. ಇದರ ಬಗ್ಗೆ ನಾನು ತಲೆಕೆಡಿಸಿಕೊಳ್ಳುವುದಿಲ್ಲ. ಯಾವಾಗ ಅದಕ್ಕೆ ತಿರುಗಿಸಿ ಉತ್ತರ ಕೊಡಬೇಕೋ ಆಗ ಕೊಡುತ್ತೇನೆ ಎಂದು ತಿರುಗೇಟು ಕೊಟ್ಟರು. ಇದನ್ನೂ ಓದಿ: ಅಯೋಧ್ಯೆ ರಾಮನ ಕಪ್ಪುಶಿಲೆ ಸಿಕ್ಕ ಜಾಗದಲ್ಲಿ ವಿವಾದ – ದಕ್ಷಿಣ ರಾಮಮಂದಿರ ಮಾಡಲು ಮುಂದಾದ ಜಮೀನು ಮಾಲೀಕ

    ಇಂತಹ ರಾಜಕಾರಣಕ್ಕೆ ನಾನು ಸೊಪ್ಪು ಹಾಕುವುದಿಲ್ಲ. ಕೇಂದ್ರ ಗೃಹ ಸಚಿವರಿಗೆ ಹೆಸರು ಬದಲಾವಣೆಗೆ ರಾಜ್ಯ ಸರ್ಕಾರ ಪ್ರಸ್ತಾಪ ಕಳಿಸಿದ್ದು, ಅದು ತಿರಸ್ಕೃತವಾಗಿದ್ದು ನನಗೆ ಗೊತ್ತಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

    ಇವರೇನು ಶಾಶ್ವತವಾಗಿ ಅಧಿಕಾರದಲ್ಲಿ ಇರುತ್ತಾರೆಯೇ? ಇವರು ಮಾಡಿದ್ದು ಮುಂದೆ ಬದಲಾಗಲಿದೆ. ಅದೂ ನನಗೆ ಗೊತ್ತಿದೆ. ಹೇಳಿ ಕೇಳಿ ಈ ವ್ಯಕ್ತಿ ರಿಯಲ್ ಎಸ್ಟೇಟ್ ವ್ಯಾಪಾರಿ. ಏನೆಲ್ಲಾ ತಂತ್ರಗಾರಿಕೆ ಹೂಡಿದರೆ ತಮ್ಮ ಜಮೀನುಗಳಿಗೆ ಬೆಲೆ ಬರುತ್ತಿದೆ ಎನ್ನವುದು ಅವರಿಗೆ ಗೊತ್ತಿದೆ. ರಾಮನಗರ ಜಿಲ್ಲೆಯಾದಾಗಲೇ ರೈತರ ಭೂಮಿಗೆ ಬೆಲೆ ಬಂದಿರಲಿಲ್ಲವೇ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಎಲ್ಲಾ ಸಂದರ್ಭಕ್ಕೂ ನಗುವೇ ಒಳ್ಳೆಯ ಉತ್ತರ – ದರ್ಶನ್ ಭೇಟಿ ಬಳಿಕ ಪವಿತ್ರಾ ಪೋಸ್ಟ್!

    ನನ್ನ ಜಮೀನಿಗೆ ಬೆಲೆ ಬರುತ್ತದೆ ಎಂದು ಅವರು ಹೇಳಿದ್ದಾರೆ. ಆ ಜಮೀನನ್ನು ಕೂಡ ಕಿತ್ತುಕೊಳ್ಳಲು ಕುತಂತ್ರ ಮಾಡಿದ್ದಾರೆ ಇವರು. 40 ವರ್ಷಗಳ ಹಿಂದೆ ಖರೀದಿ ಮಾಡಿದ ಜಮೀನಿಗೆ ಎಸ್‌ಐಟಿ ಅಂತ ರಚನೆ ಮಾಡಿಕೊಂಡು ಇಡೀ ದೇಶದಲ್ಲಿಯೇ ಮೊದಲ ಬಾರಿಗೆ ನನಗೆ ಕಿರುಕುಳ ಕೊಡುತ್ತಿದ್ದಾರೆ. ಇದರ ವಿರುದ್ಧ ನಾನೂ ಕಾನೂನು ಹೋರಾಟ ಮಾಡುತ್ತಿದ್ದೇನೆ ಎಂದು ಹೇಳಿದರು. ಇದನ್ನೂ ಓದಿ: Delhi Election| ಆಪ್‌ಗಿಂತ ಮೂರು ಪಟ್ಟು ಹೆಚ್ಚು ಖರ್ಚು ಮಾಡಿತ್ತು ಕಾಂಗ್ರೆಸ್‌ – 68 ಮಂದಿಗೆ ಬಿಜೆಪಿಯಿಂದ ತಲಾ 25 ಲಕ್ಷ

    ಇವರು ನನ್ನ ವಿರುದ್ಧ ಕಿರುಕುಳ, ಕುತಂತ್ರ ಮಾಡುತ್ತಿದ್ದಾರೆ. ಹೀಗೆಯೇ ಅವರು ಮಾಡುತ್ತಿರಲಿ, ಇವರು ಲೂಟಿ ಹೊಡೆದಿರುವ ಶೇ.50ರಷ್ಟು ಸರ್ಕಾರಿ ಭೂಮಿಗಳಿವೆ. ಇವರು ಏನೆಲ್ಲಾ ಅನ್ಯಾಯ, ಅಕ್ರಮ ಮಾಡಿದ್ದಾರೆ ಎನ್ನುವುದು ನನಗೆ ಗೊತ್ತಿದೆ. ಶಾಂತಿನಗರದ ದಲಿತರ ಜಾಗ ನುಂಗಿದ್ದು ಯಾರು? ರಾಮಕೃಷ್ಣ ಹೆಗಡೆ ಅವರ ಸರ್ಕಾರದಲ್ಲಿ ನೀಡಲಾದ ಜಾಗ ನುಂಗಿದ್ದು ಯಾರು? ಎಂದು ಕೇಳಿದರು. ಇದನ್ನೂ ಓದಿ: ನಮ್ಮ ಜಗಳ ನಮ್ಮಲ್ಲೇ ಇರಬೇಕಿತ್ತು, ನಾನು ಸತ್ತರೂ ಯಾರೂ ಕಾರಣರಲ್ಲ: ಸಹ ಕಲಾವಿದೆ

    ದಲಿತರ ಭೂಮಿ ಕಬಳಿಸಿದವರನ್ನು ಸಿದ್ದರಾಮಯ್ಯ ಜೊತೆಯಲ್ಲಿ ಇಟ್ಟುಕೊಂಡಿದ್ದಾರೆ
    ಮುಖ್ಯಮಂತ್ರಿ ಸಿದ್ದರಾಮಯ್ಯ(Siddaramaiah) ಅವರು ದ್ವಂದ್ವ ನೀತಿ ಬಗ್ಗೆ ಕಿಡಿಕಾರಿದ ಅವರು, ಸಿದ್ದಾರಾಮಯ್ಯ ಅವರು ತಾವು ಅಹಿಂದ ನಾಯಕ ಎಂದು ಹೇಳಿಕೊಳ್ಳುತ್ತಾರೆ. ದುರಂತವೆಂದರೆ, ದಲಿತರ ಭೂಮಿ ಕಬಳಿಸಿದವರನ್ನೇ ತಮ್ಮ ಜೊತೆಯಲ್ಲಿ ಇಟ್ಟುಕೊಂಡಿದ್ದಾರೆ. ಈಗ ನೋಡಿದರೆ ಅವರು ಮುಖ್ಯಮಂತ್ರಿ ಆಗಬೇಕು ಎಂದು ಹೊರಟಿದ್ದಾರೆ. ಇದು ಈ ಸರ್ಕಾರದಲ್ಲಿ ನಡೆಯುತ್ತಿರುವ ದಲಿತ ವಿರೋಧಿ ನೀತಿ ಎಂದು ವಾಗ್ದಾಳಿ ನಡೆಸಿದರು.

  • ಮಂತ್ರಾಲಯದಲ್ಲಿ ರಾಯರ ದರ್ಶನ ಪಡೆದ ಮಾಜಿ ಸಚಿವ ಹೆಚ್.ಡಿ ರೇವಣ್ಣ

    ಮಂತ್ರಾಲಯದಲ್ಲಿ ರಾಯರ ದರ್ಶನ ಪಡೆದ ಮಾಜಿ ಸಚಿವ ಹೆಚ್.ಡಿ ರೇವಣ್ಣ

    ರಾಯಚೂರು: ಮಾಜಿ ಸಚಿವ ಹೆಚ್.ಡಿ ರೇವಣ್ಣ(H D Revanna) ಮಂತ್ರಾಲಯಕ್ಕೆ ಭೇಟಿ ನೀಡಿ ಗುರು ರಾಘವೇಂದ್ರ ಸ್ವಾಮಿ ವೃಂದಾವನ ದರ್ಶನ ಪಡೆದರು. ರಾಯರ ವೃಂದಾವನಕ್ಕೆ ವಿಶೇಷ ಪೂಜೆ ಸಲ್ಲಿಸಿದರು. ಇದಕ್ಕೂ ಮುನ್ನ ಮಂತ್ರಾಲಯದಲ್ಲಿ ಮಂಚಾಲಮ್ಮ ದೇವಿ ದರ್ಶನ ಪಡೆದು ಪ್ರಾರ್ಥನೆ ಸಲ್ಲಿಸಿದರು.

    ಬಳಿಕ ಮಂತ್ರಾಲಯ(Mantralaya) ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥರಿಂದ ಆಶೀರ್ವಚನ ಪಡೆದರು. ಮಂತ್ರಾಕ್ಷತೆ ಫಲ ಪುಷ್ಪ ನೀಡಿ ಶ್ರೀಗಳು ಆಶೀರ್ವದಿಸಿದರು. ಈ ವೇಳೆ ಜಿಲ್ಲೆಯ ಜೆಡಿಎಸ್ ಕಾರ್ಯಕರ್ತರು ಜೊತೆಗಿದ್ದರು. ಇದನ್ನೂ ಓದಿ: ಪಾಕ್‌ನ ಉಗ್ರವಾದದ ನಿಜ ಬಣ್ಣ ಬಯಲು ಮಾಡಲು ವಿದೇಶಕ್ಕೆ ಹೊರಟ ಸರ್ವಪಕ್ಷಗಳ ನಿಯೋಗ

    ಇದಕ್ಕೂ ಮುನ್ನ ರಾಯಚೂರಿನಲ್ಲಿ(Raichur) ಮಾತನಾಡಿದ ಮಾಜಿ ಸಚಿವ ಹೆಚ್.ಡಿ ರೇವಣ್ಣ ಅವರು, ಇವತ್ತು ಕೆಲ ಶಕ್ತಿಗಳನ್ನ ದಮನ ಮಾಡಬೇಕು ಅಂದ್ರೆ ದೇವರ ಹತ್ರ ಹೋಗಬೇಕಲ್ಲ. ಆ ಕೆಲಸ ಮಾಡುತ್ತಿದ್ದೇನೆ ಹೀಗಾಗಿ ಮಂತ್ರಾಲಯಕ್ಕೆ ಹೊರಟಿದ್ದೇನೆ ಎಂದು ಹೇಳಿದ್ದರು.

  • ಬಡ್ಡಿ ಸಮೇತ ತೀರಿಸದೇ ಹೋದ್ರೆ ನಾನು ದೇವೇಗೌಡ್ರ ಮಗನೇ ಅಲ್ಲ: ಹೆಚ್.ಡಿ ರೇವಣ್ಣ

    ಬಡ್ಡಿ ಸಮೇತ ತೀರಿಸದೇ ಹೋದ್ರೆ ನಾನು ದೇವೇಗೌಡ್ರ ಮಗನೇ ಅಲ್ಲ: ಹೆಚ್.ಡಿ ರೇವಣ್ಣ

    ಹಾಸನ: ನಾನು ಸಮಯಕ್ಕಾಗಿ ಕಾಯ್ತಾ ಇದಿನಿ, ಎಲ್ಲವನ್ನೂ ಬಡ್ಡಿ ಸಮೇತ ತೀರಿಸದೇ ಹೋದ್ರೆ ನಾನು ದೇವೇಗೌಡರ (H.D Devegowda) ಮಗನೇ ಅಲ್ಲ ಎಂದು ಮಾಜಿಸಚಿವ ಹೆಚ್.ಡಿ ರೇವಣ್ಣ (H.D Revanna) ಗುಡುಗಿದ್ದಾರೆ.

    ಹಾಸನದ (Hassan) ದ್ಯಾಪಲಾಪುರ ಗ್ರಾಮದಲ್ಲಿ ಶ್ರೀ ಆಂಜನೇಯ ಸ್ವಾಮಿ ದೇವಾಲಯದ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಈ ವೇಳೆ, ಕೆಲವರು ಹೇಳ್ತಾರೆ ದೇವೇಗೌಡರದು, ರೇವಣ್ಣ ಅವರದ್ದು ಮುಗಿತು ಅಂತಾರೆ. ಈ ಜಿಲ್ಲೆಗೆ ದೇವೇಗೌಡರ ಕೊಡುಗೆ ಏನೆಂದು ಜನರಿಗೆ ಗೊತ್ತಿದೆ ಎಂದಿದ್ದಾರೆ. ಇದನ್ನೂ ಓದಿ: ಸಮಾಜಘಾತಕ ಶಕ್ತಿಗಳನ್ನು ಮಟ್ಟಹಾಕಲು ಒಂದು ವಿಶೇಷ ಪಡೆ ಅಗತ್ಯವಿದೆ: ಸಿಎಂ

    ಕೆಲವು ಅಧಿಕಾರಿಗಳು ರೇವಣ್ಣ ಹಾಗೂ ದೇವೇಗೌಡರದು ಮುಗೀತು ಎಂದು ತಿಳಿದುಕೊಂಡಿದ್ದಾರೆ. ಹಿಂದೆ ಕೂಡ ಜಿಲ್ಲೆಯಲ್ಲಿ ಎಲ್ಲಾ ಸ್ಥಾನ ಸೋತಿದ್ದೆವು. ಬಳಿಕ ಐದೇ ವರ್ಷಕ್ಕೆ ದೇವೇಗೌಡರು ಅಧಿಕಾರಕ್ಕೆ ಬಂದಿದ್ದರು. ಹಾಸನಕ್ಕೆ ದೇವೇಗೌಡರ ಕೊಡುಗೆ ಏನು ಅಂತಾರೆ. ರೈಲ್ವೆ ಯೋಜನೆ, ಇಂಜಿನಿಯರಿಂಗ್, ಮೆಡಿಕಲ್ ಕಾಲೇಜು, ನಸಿರ್ಂಗ್ ಕಾಲೇಜು ಮಾಡಿದ್ದು ಯಾರು? ಹಾಸನ ಜಿಲ್ಲೆಯ ಶಿಕ್ಷಣಕ್ಕೆ ಕುಮಾರಸ್ವಾಮಿ ಐದು ಸಾವಿರ ಕೋಟಿ ರೂ. ಕೊಟ್ಟಿದ್ರು ಎಂದಿದ್ದಾರೆ.

    ಕಾಂಗ್ರೆಸ್‍ನವರು ಹಾಸನ – ಮೈಸೂರು ರೈಲ್ವೆ ಯೋಜನೆ ಸ್ಥಗಿತ ಮಾಡಿದ್ದರು. ಆದರೆ ದೇವೇಗೌಡರು ಪ್ರಧಾನಿಯಾಗಿ ಹತ್ತೆ ತಿಂಗಳಿಗೆ ಆ ಯೋಜನೆ ಮಾಡಿದ್ರು. ಕಾಂಗ್ರೆಸ್‍ನವರು ಈ ಜಿಲ್ಲೆಯಲ್ಲಿ ಸುಳ್ಳು ಹೇಳಿಕೊಂಡು ರಾಜಕಾರಣ ಮಾಡುತ್ತಿದ್ದಾರೆ. ಈ ಜಿಲ್ಲೆ ಲೂಟಿಕೋರರ ಕೈ ಸೇರಿದೆ. ನಾನೂ ಇಲ್ಲೇ ಇರ್ತಿನೆ, ಇದೆಲ್ಲಾ ಎಷ್ಟು ದಿನ ಇರುತ್ತದೆ ನೋಡೋಣ. ಈ ದೇಶ ಉಳಿಯಬೇಕಾದರೆ ಮೋದಿಯವರು ಇರಲೇಬೇಕು. ಅವರಿಗೆ ನಮ್ಮ ಪಕ್ಷದ ಸಂಪೂರ್ಣ ಬೆಂಬಲ ಇದೆ ಎಂದಿದ್ದಾರೆ. ಇದನ್ನೂ ಓದಿ: ಅಂಬೇಡ್ಕರ್‌ರನ್ನ ಸೋಲಿಸಿದ್ದು ಕಾಂಗ್ರೆಸ್ ಅಲ್ಲ ಎಂದು ಸಾಬೀತಾದ್ರೆ, ರಾಜೀನಾಮೆಗೆ ಸಿದ್ಧ: ಛಲವಾದಿ ಸವಾಲ್

  • ಪಹಲ್ಗಾಮ್ ಉಗ್ರರ ದಾಳಿ – ಕೇಂದ್ರದ ನಿರ್ಧಾರಕ್ಕೆ ನಮ್ಮ ಸಹಕಾರವಿದೆ: ದೇವೇಗೌಡ

    ಪಹಲ್ಗಾಮ್ ಉಗ್ರರ ದಾಳಿ – ಕೇಂದ್ರದ ನಿರ್ಧಾರಕ್ಕೆ ನಮ್ಮ ಸಹಕಾರವಿದೆ: ದೇವೇಗೌಡ

    ಬೆಂಗಳೂರು: ಪಹಲ್ಗಾಮ್ ಉಗ್ರರ ದಾಳಿಗೆ (Pahalgam Terror Attack) ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಸರ್ಕಾರ ಯಾವುದೇ ನಿರ್ಣಯ ತೆಗೆದುಕೊಂಡರೂ ನನ್ನ ಸಂಪೂರ್ಣ ಬೆಂಬಲ ಇರಲಿದೆ ಎಂದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ (H D Devegowda) ಹೇಳಿದರು.

    ಪಹಲ್ಗಾಮ್ ಘಟನೆಗೆ ಬಗ್ಗೆ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ ಅವರು, ಕಾಶ್ಮೀರ ಘಟನೆ ಬಗ್ಗೆ ಕೇಂದ್ರ ಸರ್ಕಾರ ನಿರ್ಣಯ ತೆಗೆದುಕೊಂಡಿದೆ. ಮೊದಲ ಬಾರಿಗೆ ಪ್ರವಾಸಿಗರ ಮೇಲೆ ಉಗ್ರರು ದಾಳಿ ಮಾಡಿದ್ದಾರೆ. ಪಾಕಿಸ್ತಾನದ (Pakistan) ಬೆಂಬಲದಿಂದ ಮಾಡಿದ್ದಾರೆ ಎಂಬ ಮಾಹಿತಿ ಕೇಂದ್ರದ ಬಳಿ ಇದೆ. ಇಡೀ ದೇಶದ ಎಲ್ಲಾ 140 ಕೋಟಿ ಜನರು ಈ ವಿಷಯದಲ್ಲಿ ಕೇಂದ್ರ ಸರ್ಕಾರ ಹಾಗೂ ಮೋದಿ ಅವರ ನೇತೃತ್ವದಲ್ಲಿ ಯಾವ ಕ್ರಮ ತೆಗೆದುಕೊಳ್ಳುತ್ತಾರೋ ಅದಕ್ಕೆ ಎಲ್ಲರೂ ಬೆಂಬಲ ಕೊಡಬೇಕು. ಒಂದೇ ಧ್ವನಿಯಲ್ಲಿ ಬೆಂಬಲ ಕೊಡಬೇಕು ಎಂದರು. ಇದನ್ನೂ ಓದಿ: Pahalgam Terrorist Attack | ನಾಳೆ ಮೋದಿ ನೇತೃತ್ವದಲ್ಲಿ 2ನೇ ಸುತ್ತಿನ ಹೈವೋಲ್ಟೇಜ್‌ ಸಭೆ

    ನಾನು ರಾಜಕೀಯ ಪಕ್ಷದ ನಾಯಕ, ಎನ್‌ಡಿಎ ಮುಖಂಡನಾಗಿ ಹೇಳುತ್ತೇನೆ. ನಾನು ಪಕ್ಷದ ಅಧ್ಯಕ್ಷನಾಗಿ ಹೇಳುತ್ತೇನೆ. ಕೇಂದ್ರದ ಎಲ್ಲಾ ನಿರ್ಣಯಕ್ಕೆ ನಮ್ಮ ಸಂಪೂರ್ಣ ಬೆಂಬಲ ಇದೆ. ಈ ವಿಷಯದಲ್ಲಿ ತೆಗೆದುಕೊಳ್ಳುವ ಎಲ್ಲಾ ನಿರ್ಣಯಕ್ಕೆ ನಮ್ಮ ಬೆಂಬಲ ಇದೆ ಎಂದು ಸ್ಪಷ್ಟಪಡಿಸಿದರು. ಇದನ್ನೂ ಓದಿ: ಏ.20ರಂದೇ ನಡೆಯಬೇಕಿದ್ದ ಪಹಲ್ಗಾಮ್ ದಾಳಿ 2 ದಿನ ತಡವಾಗಿದ್ದೇಕೆ? – NIA ತನಿಖೆಯಲ್ಲಿ ರೋಚಕ ಅಂಶ

    ಪ್ರಧಾನಿ ಮೋದಿ (Narendra Modi) ಅವರೇನು ನನಗೆ ಕರೆ ಮಾಡಿಲ್ಲ. ಮಾಡೋ ಅವಶ್ಯಕತೆಯೂ ಇಲ್ಲ. ಅವಶ್ಯಕತೆ ಬಿದ್ದರೆ ನಾನೇ ಮೋದಿ ಅವರಿಗೆ ಪತ್ರ ಬರೆಯುತ್ತೇನೆ. ನಾನು ಅನೇಕ ಸಮಯದಲ್ಲಿ ಪತ್ರಗಳನ್ನು ಬರೆದಿದ್ದೇನೆ. ಮುಂದೆಯೂ ಬರೆಯುತ್ತೇನೆ. ನನಗೆ ಅನ್ನಿಸಿದ್ದನ್ನ ಆತಂಕ ಇಲ್ಲದೇ ಹೇಳುತ್ತೇನೆ. ಮೋದಿ ಹಾಗೂ ನನ್ನ ಸಂಬಂಧ ಇಂದು-ನಾಳೆ ಅಂತ ಅಲ್ಲ. ನನ್ನ ಜೀವನದ ಕೊನೆ ಘಟ್ಟದಲ್ಲಿ ಈ ನಿರ್ಣಯ ಮಾಡಿದ್ದೇನೆ ಎಂದು ಹೇಳಿದರು.

    ಪಾಕಿಸ್ತಾನಕ್ಕೆ ಸಿಂಧೂ ನದಿ ನೀರು ತಡೆ ಹಿಡಿದಿರುವ ವಿಚಾರ ಮತ್ತು ಯುದ್ಧ ಆಗಬೇಕು ಎಂಬ ಒತ್ತಡಗಳ ವಿಚಾರವಾಗಿ ಪ್ರತಿಕ್ರಿಯಿಸಿದರು. ಯುದ್ದ ಮಾಡಬೇಕು ಅನ್ನುವ ಸನ್ನಿವೇಶದ ಬಗ್ಗೆ ನಮ್ಮ ದೇಶದ ಪ್ರಧಾನಿಗಳು ತೀರ್ಮಾನ ಮಾಡ್ತಾರೆ. ಇಡೀ ರಾಷ್ಟ್ರದ ನಾಯಕತ್ವ ಅಲ್ಲ. ವಿಶ್ವದಲ್ಲಿ ಮೋದಿ ಅವರಿಗೆ ಗೌರವ ಇದೆ. ವಿಶ್ವದ ಅನೇಕ ನಾಯಕರು ಈ ಘಟನೆ ಖಂಡಿಸಿದ್ದಾರೆ. ಭಾರತಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಟ್ರಂಪ್ ಕೂಡಾ ಮೊದಲ ಬಾರಿಗೆ ರಿಯಾಕ್ಟ್ ಮಾಡಿದ್ದಾರೆ ಎಂದರು. ಇದನ್ನೂ ಓದಿ: ಪಹಲ್ಗಾಮ್‌ಗೆ ಹೋಗಿದ್ರೆ ಜಮೀರ್, ಖಾದರ್ ಬಿಟ್ಟು ಸಿದ್ದರಾಮಯ್ಯಗೆ ಗುಂಡು ಹೊಡೆಯುತ್ತಿದ್ರು: ಮುತಾಲಿಕ್

    ಅಂತರಾಷ್ಟ್ರೀಯ ಮಟ್ಟದಲ್ಲಿ ಬೆಂಬಲ ಕೊಡುವ ಅನೇಕ ರಾಷ್ಟ್ರಗಳು ತಮ್ಮ ಭಾವನೆ ವ್ಯಕ್ತಪಡಿಸಿದ್ದಾರೆ. ಮುಂದೆ ಏನಾಗಬಹುದು ಅನ್ನೋ ಬಗ್ಗೆ ನಾನು ಈಗ ಹೇಳೋಕೆ ಆಗುವುದಿಲ್ಲ. ಆದರೆ ಪ್ರಧಾನಮಂತ್ರಿಗಳು ತೆಗೆದುಕೊಳ್ಳುವ ಆಯಾ ಸನ್ನಿವೇಶಕ್ಕೆ ತಕ್ಕಂತೆ ಏನು ನಿರ್ಣಯ ತೆಗೆದುಕೊಳ್ಳುತ್ತಾರೆ. ಅದಕ್ಕೆ ಇಡೀ ರಾಷ್ಟ್ರದ ಜನತೆ ಬೆಂಬಲ ಕೊಡಬೇಕು. ನಾನು ಒಬ್ಬ ಮಾತ್ರ ಅಲ್ಲ. ಎಲ್ಲರೂ ಬೆಂಬಲ ಕೊಡಬೇಕು. ಇದರಲ್ಲಿ ಯಾರು ರಾಜಕೀಯ ಮಾಡಬಾರದು. ಪ್ರಧಾನಿಗಳು ತೆಗೆದುಕೊಳ್ಳೋ ನಿರ್ಧಾರಕ್ಕೆ ನಾವೆಲ್ಲರೂ ಒಗ್ಗಟ್ಟಿನಿಂದ ಸಹಕಾರ ಕೊಡಬೇಕು. ಇಂತಹ ಘಟನೆ ಮುಂದೆ ನಡೆಯಬಾರದು. ಕೃತ್ಯ ಮಾಡಿರೋರನ್ನ ಪತ್ತೆ ಹಚ್ಚಿ ಅವರಿಗೆ ಶಿಕ್ಷೆ ಕೊಡೋವರೆಗೂ, ಯಾರು ಇದರ ಹಿಂದೆ ಇದ್ದಾರೆ ಅವರಿಗೂ ಶಿಕ್ಷೆ ಕೊಡೋಕೆ ಪ್ರಧಾನಿಗಳು ತೆಗೆದುಕೊಳ್ಳೋ ನಿರ್ಣಯಕ್ಕೆ, ರಕ್ಷಣಾ ಹಾಗೂ ಗೃಹ ಸಚಿವರು ತೆಗೆದುಕೊಳ್ಳೋ ನಿರ್ಧಾರಕ್ಕೆ ನಾವು, ನಮ್ಮ ಪಕ್ಷ ಬದ್ಧರಾಗಿ ಇದ್ದೇವೆ ಎಂದು ತಿಳಿಸಿದರು. ಇದನ್ನೂ ಓದಿ: ಮೋದಿ ಜೊತೆಗೆ ನಾವಿದ್ದೇವೆ, ಪಾಕ್‌ ವಿರುದ್ಧ ಇಂದಿರಾ ಗಾಂಧಿಯಂತೆ ಕ್ರಮ ಕೈಗೊಳ್ಳಬೇಕು: ಎಂ.ಬಿ ಪಾಟೀಲ್‌

    ಘಟನೆ ಬಗ್ಗೆ ರಾಜ್ಯ ಕಾಂಗ್ರೆಸ್ ನಾಯಕರು ರಾಜಕೀಯ ಮಾಡ್ತಿರೋ ವಿಚಾರಕ್ಕೆ ಮಾತನಾಡಿದ ಅವರು, ಈಗಾಗಲೇ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ (Mallikarjuna Kharge) ಅವರು ಘಟನೆ ಬಗ್ಗೆ ಯಾವುದೇ ಕೊಂಕು ಇಲ್ಲದೇ ಪ್ರಧಾನಿಗಳ ಜೊತೆ ನಿಲ್ಲೋದಾಗಿ ಹೇಳಿದ್ದಾರೆ. ಖರ್ಗೆ ಕಾಂಗ್ರೆಸ್ ಪಕ್ಷದ ಅಧ್ಯಕ್ಷರು. ಅವರು ಹಿರಿಯ ಮುಖಂಡರು, ಅನುಭವದಿಂದ ಹೇಳಿದ್ದಾರೆ. ಕಾಂಗ್ರೆಸ್ ವರಿಷ್ಠರು ಮಾತಾಡಿರೋ ಮಾತಿಗೆ ಮಾತ್ರ ಬೆಲೆ ಹೆಚ್ಚು. ಇದಕ್ಕಿಂತ ಹೆಚ್ಚು ನಾನೇನೂ ಹೇಳೋದಿಲ್ಲ. ಕಾಂಗ್ರೆಸ್‌ನ ಸಹಕಾರ ಇದೆ ಎಂದು ರಾಜ್ಯ ಕಾಂಗ್ರೆಸ್ ನಾಯಕರ ಮಾತಿಗೆ ಬೆಲೆ ಇಲ್ಲ ಅಂತ ಪರೋಕ್ಷವಾಗಿ ರಾಜ್ಯ ಕಾಂಗ್ರೆಸ್ ನಾಯಕರಿಗೆ ತಿರುಗೇಟು ಕೊಟ್ಟರು.

  • ಜನಿವಾರ ತೆಗೆದು ಒಂದು ಸಮುದಾಯಕ್ಕೆ ಅವಮಾನ ಮಾಡಿದ್ದು ಸರಿಯಲ್ಲ : ನಿಖಿಲ್ ಖಂಡನೆ

    ಜನಿವಾರ ತೆಗೆದು ಒಂದು ಸಮುದಾಯಕ್ಕೆ ಅವಮಾನ ಮಾಡಿದ್ದು ಸರಿಯಲ್ಲ : ನಿಖಿಲ್ ಖಂಡನೆ

    ಬೆಂಗಳೂರು: ಜನಿವಾರ ಹಾಕಿದ್ದಕ್ಕೆ ಸಿಇಟಿ ಪರೀಕ್ಷೆಗೆ (CET Exam) ಅವಕಾಶ ಕೊಡದ ಪ್ರಕರಣವನ್ನ ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ (Nikhil Kumaraswamy) ಖಂಡಿಸಿದ್ದಾರೆ.

    ಘಟನೆ ಬಗ್ಗೆ ಜೆಪಿ ಭವನದಲ್ಲಿ ಮಾತನಾಡಿದ ಅವರು, ಜನಿವಾರ ಹಾಕಿದ್ದಕ್ಕೆ ಪರೀಕ್ಷೆಗೆ ಕೂರಿಸದೇ ಇರುವುದು ಸರಿಯಲ್ಲ.ಈ ಘಟನೆಯನ್ನ ನಾನು ಖಂಡಿಸುತ್ತೇನೆ. ಜನಿವಾರ ಹಾಕಿಕೊಂಡು ಕಾಪಿ ಹೊಡೆಯೋಕೆ ಆಗುತ್ತಾ?ಜನಿವಾರದಲ್ಲಿ ಕಾಪಿ ಚೀಟಿ ಇಟ್ಟುಕೊಂಡು ಹೋಗೋಕೆ ಆಗುತ್ತಾ?ಜನಿವಾರ ಇದ್ದರೆ ಏನು ಸಮಸ್ಯೆ ಅಂತ ಪ್ರಶ್ನೆ ಮಾಡಿದರು. ಇದನ್ನೂ ಓದಿ: ಜಾತಿಗಣತಿ ವರದಿ ಚರ್ಚೆಗೆ ಕೂಡಲೇ ಸರ್ಕಾರ ಸರ್ವ ಪಕ್ಷಗಳ ಸಭೆ ಕರೆಯಬೇಕು: ನಿಖಿಲ್ ಕುಮಾರಸ್ವಾಮಿ

     

    ಸ್ಮಾರ್ಟ್ ವಾಚ್, ಎಲೆಕ್ಟ್ರಿಕ್ ವಸ್ತು ಅಂತಹದ್ದನ್ನ ಬೇಕಿದ್ರೆ ನೀವು ತೆಗೆಸಬೇಕು ಸರಿ. ಆದರೆ ಜನಿವಾರ ತೆಗೆದು ಒಂದು ಸಮುದಾಯಕ್ಕೆ ಅವಮಾನ ಮಾಡೋದು ಸರಿಯಲ್ಲ. ಈ ಘಟನೆಗೆ ಕಾರಣವಾಗಿರೋರ ಮೇಲೆ ಕ್ರಮ ತೆಗೆದುಕೊಳ್ಳಬೇಕು. ಅವರಿಗೆ ಬುದ್ದಿವಾದ ಹೇಳಬೇಕು. ಮುಂದೆ ಇಂತಹ ಘಟನೆ ಆಗದಂತೆ ಕ್ರಮವಹಿಸಬೇಕು ಅಂತ ಆಗ್ರಹ ಮಾಡಿದರು. ಇದನ್ನೂ ಓದಿ: ಮಾಜಿ ಡಾನ್ ಮುತ್ತಪ್ಪ ರೈ ಆಸ್ತಿ ಎಷ್ಟಿದೆ? – ವಿವಾದ ಹುಟ್ಟಿಕೊಂಡಿದ್ದು ಯಾವಾಗ?

  • ನಮ್ಮ ತಂದೆ ಯಾವ್ದೇ ಕಾರಣಕ್ಕೂ ರಾಜೀನಾಮೆ ಕೊಡಲ್ಲ: ಶಾಸಕ ಮಂಥರ್ ಗೌಡ

    ನಮ್ಮ ತಂದೆ ಯಾವ್ದೇ ಕಾರಣಕ್ಕೂ ರಾಜೀನಾಮೆ ಕೊಡಲ್ಲ: ಶಾಸಕ ಮಂಥರ್ ಗೌಡ

    – ಒಕ್ಕಲಿಗ ಸಮುದಾಯಕ್ಕೆ ಅನ್ಯಾಯವಾದ್ರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡೋಕು ಸಿದ್ಧ ಎಂದಿದ್ದ ಎ. ಮಂಜು

    ಮಡಿಕೇರಿ: ಜಾತಿ ಜನಗಣತಿ ವರದಿ ಜಾರಿಗೆ ತರುವ ವಿಚಾರದಲ್ಲಿ ಆಡಳಿತ ಪಕ್ಷ ಕಾಂಗ್ರೆಸ್‌ನಲ್ಲೇ ಆಂತಕರಿಕ ಕಚ್ಚಾಟ ಹೆಚ್ಚಾಗಿದೆ. ಪ್ರತಿಪಕ್ಷಗಳಿಂದಲೂ ವಾಗ್ದಾಳಿ ನಡೆಯುತ್ತಿದೆ. ಈ ನಡುವೆ ಜಾತಿ ಜನಗಣತಿ ವರದಿ ಜಾರಿಯಾದ್ರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡೋದಕ್ಕೂ ಸಿದ್ಧ ಎಂದು ಶಾಸಕ ಎ. ಮಂಜು (A Manju) ಹೇಳಿದ್ದಾರೆ. ಆದ್ರೆ ಅವರ ಪುತ್ರ ಮಡಿಕೇರಿಯ ಕಾಂಗ್ರೆಸ್‌ ಶಾಸಕ ಮಂಥರ್‌ ಗೌಡ (Mantar Gowda) ಯಾವುದೇ ಕಾರಣಕ್ಕೂ ನಮ್ಮ ತಂದೆ ರಾಜೀನಾಮೆ ಕೊಡಲ್ಲ ಅಂದಿದ್ದಾರೆ.

    ಮಡಿಕೇರಿಯಲ್ಲಿ (Madikeri) ಮಾತಾನಾಡಿದ ಅವರು, ಜಾತಿ ಜನಗಣತಿ (Caste Census) ವಿಚಾರವಾಗಿ ಮೊನ್ನೆ ಉಪ ಮುಖ್ಯಮಂತ್ರಿ ಅವರ ನೇತೃತ್ವದಲ್ಲಿ ಸಭೆ ನಡೆಸಲಾಗಿದೆ. ಆ ಸಭೆಯಲ್ಲಿ ಜಾತಿ ಜನಗಣತಿ ಸರ್ವೇ ಇನ್ನೊಂದು ಬಾರಿ ಮಾಡಲಿ ಎಂಬ ಚರ್ಚೆಯಾಗಿದೆ. ಬಹಳಷ್ಟು ಮಂದಿ ನಮ್ಮನೆಗೆ ಬಂದಿಲ್ಲ ಅಂತಾರೆ, ಆದ್ದರಿಂದ ಮರು ಸರ್ವೆಗೆ ಸಿಎಂ ಒಪ್ಪಿಗೆ ಸೂಚಿಸುತ್ತಾರೆ ಅನ್ನೋ ವಿಶ್ವಾಸ ನಮಗಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಒಕ್ಕಲಿಗ ಸಮುದಾಯಕ್ಕೆ ಅನ್ಯಾಯ ಆದ್ರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡೋಕು ಸಿದ್ಧ: ಎ.ಮಂಜು

    ನಮ್ಮ ತಂದೆ ಅವರು ಈ ವಿಚಾರವಾಗಿ ರಾಜೀನಾಮೆ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ. ನಮ್ಮ ತಂದೆಯ ಪಕ್ಷ ಬೇರೆ ಇದೆ. ಅದಕ್ಕೆ ನಾವು ನಮ್ಮ ಪಕ್ಷವನ್ನು ಬಿಟ್ಟು ಕೋಡೋಕೆ ಆಗಲ್ಲ. ರಾಜೀನಾಮೆ ವಿಚಾರ ಅವರ ಅನಿಸಿಕೆ… ಅವರ ಪಾರ್ಟಿ.. ಅವರ ನಿಲುವು ಇರಬಹುದು. ಅದಕ್ಕೂ ನಮಗೂ ಸಂಬಂಧ‌ ಇಲ್ಲ. ನಮ್ಮ ತಂದೆ ಅವರು ಹಿರಿಯ ರಾಜಕಾರಣಿಗಳು, ಮಕ್ಕಳ ಮಾತು ಯಾವತ್ತೂ ಕೇಳುವುದಿಲ್ಲ. ಒಟ್ಟಿನಲ್ಲಿ ಇಂದಿನ ಪರಿಸ್ಥಿತಿಯಲ್ಲಿ ಅವರು ರಾಜೀನಾಮೆ ಕೊಡಲ್ಲ. ಜಾತಿ ಜನಗಣತಿ ವರದಿ ಬಗ್ಗೆ ಮುಖ್ಯಮಂತ್ರಿಗಳು ಸರಿಯಾದ ರೀತಿಯಲ್ಲಿ ಕ್ರಮ ತೆಗೆದುಕೊಳ್ಳುತ್ತಾರೆ ಎಂದು ನುಡಿದಿದ್ದಾರೆ.

    ಶಾಸಕ ಎ. ಮಂಜು ಹೇಳಿದ್ದೇನು?
    ಈ ಸರ್ಕಾರಕ್ಕೆ ಜಾತಿಗಣತಿ ಮಾಡಲು ಅಧಿಕಾರ‌ ಕೊಟ್ಟವರು ಯಾರು? ಜಾತಿಗಣತಿ ಮಾಡಬೇಕಿರೋದು ಕೇಂದ್ರ ಸರ್ಕಾರ. ರಾಜ್ಯ ಯಾಕೆ ಜನಗಣತಿ ಮಾಡಬೇಕು. ಸಿದ್ದರಾಮಯ್ಯ ಸರ್ಕಾರ ಮಾಡಿರೋದು ಜಾತಿಗಣತಿ ಅಲ್ಲ. ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ.ಇಂತಹ ಸಮೀಕ್ಷೆಯಲ್ಲಿ ಜನರ ಸಾಮಾಜಿಕ, ಶೈಕ್ಷಣಿಕ ವರದಿ ಬಗ್ಗೆ ಅಂಕಿಅಂಶಗಳನ್ನ ಕೊಡಬೇಕು. ಅದು ಬಿಟ್ಟು ಇವರು ಯಾಕೆ ಜಾತಿಗಣತಿ ಅಂಕಿಅಂಶಗಳನ್ನ ಕೊಡ್ತಿದ್ದಾರೆ. ಕಾಂಗ್ರೆಸ್ ನಲ್ಲಿ ಕುರ್ಚಿ ಕಿತ್ತಾಟ ಜೋರಾಗಿದೆ.ಕುರ್ಚಿ ಕಿತ್ತಾಟ ಮರೆ ಮಾಚೋಕೆ ಇದೆಲ್ಲ ಮಾಡ್ತಿದ್ದಾರೆ.ಇದು ಸರಿಯಲ್ಲ.  ಇದನ್ನೂ ಓದಿ: ಕೋಮುದ್ವೇಷ ಪ್ರಚೋದನಾ ಭಾಷಣ ಆರೋಪ; ಆಂದೋಲಾ ಶ್ರೀ ವಿರುದ್ಧ FIR ದಾಖಲು

    ಸಿದ್ದರಾಮಯ್ಯ ಅವರು ಈ ಜಾತಿಗಣತಿ ವರದಿ ಅಂಗೀಕಾರ ಮಾಡಬಾರದು. ಬಿಜೆಪಿ, ಜೆಡಿಎಸ್, ಕಾಂಗ್ರೆಸ್ ‌ಎಲ್ಲಾ ಒಕ್ಕಲಿಗ ಶಾಸಕರು ಪಕ್ಷಾತೀತವಾಗಿ ಈ ಬಗ್ಗೆ ಧ್ವನಿ ಎತ್ತಬೇಕು. ನಮ್ಮ ಸಮುದಾಯಕ್ಕೆ ಅನ್ಯಾಯ ಆದ್ರೆ ನಾವು ಸಹಿಸೊಲ್ಲ. ನನಗೆ ಸಮುದಾಯದ ಮುಖ್ಯ ಶಾಸಕ ಸ್ಥಾನ ಮುಖ್ಯ ಅಲ್ಲ. ಸಮುದಾಯಕ್ಕಾಗಿ ಬೇಕಿದ್ರೆ ಶಾಸಕ ಸ್ಥಾನಕ್ಕೂ ರಾಜೀನಾಮೆ ‌ಕೊಡೋಕೆ ಸಿದ್ಧ.

    ನನ್ನ ಮನೆಗೆ ಬಂದು ಸಮೀಕ್ಷೆಯೇ ಮಾಡಿಲ್ಲ. ಇದಕ್ಕೇನು ಹೇಳೋದು. ಜಯಪ್ರಕಾಶ್ ಹೆಗ್ಡೆ ಇದನ್ನ ಜಾತಿ ಸಮೀಕ್ಷೆ ಅಂತ ಹೇಳಲಿ ನೋಡೋಣ.ಡಿಕೆಶಿವಕುಮಾರ್ ಸಮುದಾಯಕ್ಕೆ ಅನ್ಯಾಯ ಮಾಡಲು ಬಿಡಬಾರದು. ಇವತ್ತಿನ ‌ಕ್ಯಾಬಿನೆಟ್‌ನಲ್ಲಿ ಇದನ್ನ ಅಂಗೀಕಾರ ‌ಮಾಡಿದ್ರೆ ಉಗ್ರ ಹೋರಾಟ ಮಾಡ್ತೀವಿ ಅಂತ ಸರ್ಕಾರಕ್ಕೆ ಶಾಸಕ ಎ ಮಂಜು ಎಚ್ಚರಿಕೆ ಕೊಟ್ಟಿದ್ದರು.  ಇದನ್ನೂ ಓದಿ: ಮಹಾರಾಷ್ಟ್ರದಲ್ಲಿ ಹೊಸ ಶಿಕ್ಷಣ ನೀತಿ ಜಾರಿ – ಹಿಂದಿ 3ನೇ ಕಡ್ಡಾಯ ಭಾಷೆ

  • ಜಾತಿಗಣತಿ ‘ಪಬ್ಲಿಕ್ ಟಿವಿ’ ರಿಯಾಲಿಟಿ ಚೆಕ್ – ಮನೆ ಮನೆಗೆ ಹೋಗಿ ಸರ್ವೆ ಮಾಡಿದ್ರಾ?- ಜನರು ಹೇಳಿದ್ದೇನು?

    ಜಾತಿಗಣತಿ ‘ಪಬ್ಲಿಕ್ ಟಿವಿ’ ರಿಯಾಲಿಟಿ ಚೆಕ್ – ಮನೆ ಮನೆಗೆ ಹೋಗಿ ಸರ್ವೆ ಮಾಡಿದ್ರಾ?- ಜನರು ಹೇಳಿದ್ದೇನು?

    ಬೆಂಗಳೂರು: ಜಾತಿಗಣತಿಗೆ (Caste Census) ಸಾಕಷ್ಟು ಆಕ್ಷೇಪ, ವಿರೋಧ ಎದ್ದಿದೆ. ಮತ್ತೊಂದು ಕಡೆ ಅವೈಜ್ಞಾನಿಕ, ಮನೆ ಮನೆಗೆ ಭೇಟಿ ಕೊಟ್ಟಿಲ್ಲ ಎನ್ನುವ ದೊಡ್ಡ ಆರೋಪ ಇದೆ. ‘ಪಬ್ಲಿಕ್ ಟಿವಿ’ (Public TV) ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ರಿಯಾಲಿಟಿ ಚೆಕ್ ಮಾಡಿದೆ. ಜಾತಿಗಣತಿ ಸರ್ವೆಗೆ ಮನೆ ಮನೆಗೆ ಬಂದಿದ್ದರಾ ಎಂಬ ಬಗ್ಗೆ ಜನರು ಏನು ಹೇಳಿದ್ದಾರೆಂಬ ಬಗ್ಗೆ ಇಲ್ಲಿ ಮಾಹಿತಿ ಇದೆ.

    ಜಾತಿಗಣತಿ ಸರ್ವೆಗೆ ನಮ್ಮ ಮನೆಗೆ ಯಾರು ಕೂಡ ಬಂದಿಲ್ಲ. ನಾವು 50 ವರ್ಷಗಳಿಂದ ಇಲ್ಲಿ ವಾಸವಾಗಿದ್ದೇನೆ. ಸರ್ವೆಗೆ ಯಾರೂ ಬಂದಿಲ್ಲ ಎಂದು ಬೆಂಗಳೂರಿನ ಮಲ್ಲೇಶ್ವರಂನ ನಿವಾಸಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಒಕ್ಕಲಿಗ ಸಮುದಾಯಕ್ಕೆ ಅನ್ಯಾಯ ಆದ್ರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡೋಕು ಸಿದ್ಧ: ಎ.ಮಂಜು

    ಮೂರು ವರ್ಷಗಳ ಹಿಂದೆ ಮನೆಗೆ ಬಂದು ಸರ್ವೆ ಮಾಡಿದ್ದರು. 10 ವರ್ಷಗಳ ಹಿಂದೊಮ್ಮೆ ನಾವು ಪಬ್ಲಿಕ್‌ನಲ್ಲಿದ್ದಾಗ ಬಂದು ಸರ್ವೆ ಮಾಡಿದ್ದರು ಎಂದು ಸರ್ವೆ ಆಗಿರುವ ಬಗ್ಗೆ ವ್ಯಕ್ತಿಯೊಬ್ಬರು ಮಾಹಿತಿ ನೀಡಿದ್ದಾರೆ.

    ನಮ್ಮ ಮನೆಗೆ ಸರ್ವೆಗೆ ಯಾರೂ ಬಂದೇ ಇಲ್ಲ. ನಮ್ಮ ಜಾತಿಯೇ ಲೆಕ್ಕಕ್ಕೆ ಬಂದಿಲ್ಲ. ಕ್ಷತ್ರಿಯರು ಅನ್ನೋದೆ ಬಂದಿಲ್ಲ. ಯಾವ್ಯಾವ್ದೋ ಜಾತಿ ಲೆಕ್ಕ ಎಲ್ಲಾ ಹೇಳ್ತಾರೆ. ಹಾಗಾದ್ರೆ, ನಮ್ಮ ಜಾತಿಯೇ ಇಲ್ವಾ? ಇವರು ಜಾತಿಗಣತಿ ಮಾಡಿರೋದೆ ಗೊತ್ತಿಲ್ಲ ಎಂದು ಮಲ್ಲೇಶ್ವರಂನ ಮಹಿಳೆಯೊಬ್ಬರು ಹೇಳಿದ್ದಾರೆ. ಇದನ್ನೂ ಓದಿ: ಜಾತಿಗಣತಿ ವರದಿ ಯಾರನ್ನೋ ಕೂರಿಸಿ ಬರೆಸಿದಂತೆ ಇದೆ: ಸೂರಜ್ ರೇವಣ್ಣ ಕಿಡಿ

    ಯಾರು ಕೂಡ ಬಂದಿಲ್ಲ. ಬಂದಿದ್ದರೆ ಅಲ್ವಾ ನೆನಪಿರೋದು. ಜಾತಿಗಣತಿ ಬಗ್ಗೆ ಚರ್ಚೆ ಆಗುತ್ತಿರುವುದು ಬೇಡದಿರುವ ಕೆಲಸ. ನಿಜ ಆಗಿದ್ದರೆ ಒಪ್ಪಿಕೊಳ್ಳಬಹುದು. ಎಲ್ಲರಿಗೂ ಗೊತ್ತು ಅದು ಸುಳ್ಳು ಅಂತಾ. ಯಾವುದೋ ನಂಬರ್ ಕೊಟ್ಟಿದ್ದಾರೆ. ಎಷ್ಟು ಕಾಗೆ ಇತ್ತು ಅನ್ನೋ ಬೀರ್‌ಬಲ್ ಕಥೆ ಥರ ಆಯ್ತು ಇದು ಎಂದು ಜಯನಗರ ನಿವಾಸಿಯೊಬ್ಬರು ಮಾತನಾಡಿದ್ದಾರೆ.

    10 ವರ್ಷಗಳ ಹಿಂದೆ ಸರ್ವೆ ಮಾಡೋದಕ್ಕೆ ಬಂದಿದ್ದರು. ನಿಮ್ಮ ಮನೆಯಲ್ಲಿ ಎಷ್ಟು ಜನ ಇದ್ದಾರೆ? ನಿಮ್ಮ ಜಾತಿ ಯಾವುದು ಅಂತಾ ಕೇಳಿದ್ದರು. ಅದು ಬಿಟ್ಟು ಬೇರೆ ಏನೂ ಕೇಳಿರಲಿಲ್ಲ ಎಂದು ಹಿಂದೆ ಜಾತಿಗಣತಿಗೆ ಬಂದಿದ್ದರೆಂದು ದಾವಣಗೆರೆ ಮಹಿಳೆಯೊಬ್ಬರು ತಿಳಿಸಿದ್ದಾರೆ. ಇದನ್ನೂ ಓದಿ: ಕ್ಲೈಮ್ಯಾಕ್ಸ್ ಹಂತಕ್ಕೆ ಬಂದ ಜಾತಿ ಜಿದ್ದಾಜಿದ್ದಿ – ಸಿಎಂ ಮುಂದಿರುವ ಆಯ್ಕೆ ಏನು?

    ನಮ್ಮ ಮನೆಗೆ ಯಾರೂ ಬಂದಿಲ್ಲ. ಅದರ ಬಗ್ಗೆ ಗೊತ್ತು. ಹಿಂದೂ ಧರ್ಮವನ್ನು ಒಡೆಯುವ ಪ್ರಯತ್ನ ಇದು. ರಾಜಕೀಯವಾಗಿ ಮಾಡುತ್ತಿರುವ ತಂತ್ರವಿದು. ನಮ್ಮ ಸ್ನೇಹಿತರ ವಲಯದಲ್ಲೂ ಯಾರ ಮನೆಗೂ ಹೋಗಿಲ್ಲ ಅಂತಾನೇ ಹೇಳ್ತಿದ್ದಾರೆ. ಇವರ ಉದ್ದೇಶ ಏನು ಅಂತಾನೂ ಅರ್ಥ ಆಗ್ತಿಲ್ಲ ಎಂದು ಮತ್ತೊಬ್ಬ ಜಯನಗರ ನಿವಾಸಿ ಜಾತಿಗಣತಿ ಸರ್ವೆ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.

    ನಮ್ಮ ಲೇಔಟ್‌ನಲ್ಲಿ 85 ಮನೆಗಳಿವೆ. ಜಾತಿಗಣತಿ ಸರ್ವೆಗೆ ಯಾರೂ ಬಂದಿಲ್ಲ. ನಮ್ಮ ಮನೆಗೂ ಒಬ್ಬರೂ ಕೂಡ ಬಂದಿಲ್ಲ ಎಂದು ಮೈಸೂರಿನ ನಿವಾಸಿಗಳು ಹೇಳಿದ್ದಾರೆ. ಇದನ್ನೂ ಓದಿ: ನಮ್ಮ ಸರ್ಕಾರ ತೆಗೆಯಲು ಪ್ಲ್ಯಾನ್‌ ನಡೆದಿದೆ ಒಗ್ಗಟ್ಟಾಗಿ ಇರಿ: ಖರ್ಗೆ ಶಾಕಿಂಗ್ ಹೇಳಿಕೆ

    ಒಬ್ಬರ ಮನೆಗೂ ಇಲ್ಲಿ ವಿಸಿಟ್ ಕೊಟ್ಟಿಲ್ಲ. ಸರ್ಕಾರದಿಂದ ಜಾತಿಗಣತಿ ಪ್ರಕಟ ಆದರೆ ಉಗ್ರ ಹೋರಾಟ ಆಗಬಹುದು. ಸರ್ಕಾರ ಇದನ್ನು ವಾಪಸ್ ತೆಗೆದುಕೊಳ್ಳಬೇಕು. ಸರ್ಕಾರ ತಮ್ಮ ಪರವಾಗಿ ಇರಲಿ ಅಂತಾ ಜಾತಿಗಣತಿ ಮಾಡಿಕೊಳ್ಳುತ್ತಿದ್ದಾರೆ. ಇದು ಸರಿಯಲ್ಲ ಎಂದು ರಾಮನಗರ ನಿವಾಸಿಯೊಬ್ಬರು ಅಸಮಾಧಾನ ಹೊರಹಾಕಿದ್ದಾರೆ.

    ಮಂಡ್ಯ, ಕೋಲಾರ, ಧಾರವಾಡ, ರಾಯಚೂರು, ಉಡುಪಿ ಹೀಗೆ ಅನೇಕ ಜಿಲ್ಲೆಗಳಲ್ಲಿ ಜಾತಿಗಣತಿ ಸರ್ವೆ ಆಗಿದೆಯಾ ಅಥವಾ ಇಲ್ಲವಾ ಎಂದು ‘ಪಬ್ಲಿಕ್ ಟಿವಿ’ ರಿಯಾಲಿಟಿ ಚೆಕ್ ಮಾಡಿದೆ. ಕೆಲವರು ಸರ್ವೆಗೆ ಬಂದಿದ್ದು ಎಂದು ಹೇಳಿದ್ದಾರೆ. ಇನ್ನೂ ಕೆಲವರು ಬಂದಿರಲಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ. ಜನರಿಂದ ಮಿಶ್ರಪ್ರತಿಕ್ರಿಯೆ ವ್ಯಕ್ತವಾಗಿದೆ.

  • ಒಕ್ಕಲಿಗ ಸಮುದಾಯಕ್ಕೆ ಅನ್ಯಾಯ ಆದ್ರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡೋಕು ಸಿದ್ಧ: ಎ.ಮಂಜು

    ಒಕ್ಕಲಿಗ ಸಮುದಾಯಕ್ಕೆ ಅನ್ಯಾಯ ಆದ್ರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡೋಕು ಸಿದ್ಧ: ಎ.ಮಂಜು

    – ವರದಿ ಜಾರಿಯಾದ್ರೆ ಉಗ್ರ ಹೋರಾಟ; ಸರ್ಕಾರಕ್ಕೆ ಎಚ್ಚರಿಕೆ

    ಬೆಂಗಳೂರು: ಜಾತಿ ಜನಗಣತಿ (Caste Census) ಮಾಡುವ ಅಧಿಕಾರ ರಾಜ್ಯ ಸರ್ಕಾರಕ್ಕೆ ಇಲ್ಲ. ಸಿಎಂ ನನಗೆ ಜಾತಿ ಜನಗಣತಿ ಮಾಡಲು ಅಧಿಕಾರ ಇದೆ ಎಂದು ಹೇಳಲಿ, ನನ್ನ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡ್ತೇನೆ ಎಂದು ಎ. ಮಂಜು (A Manju) ಸವಾಲ್‌ ಹಾಕಿದ್ದಾರೆ.

    ಜಾತಿ ಜನಗಣತಿ ವಿಚಾರವಾಗಿ ʻಪಬ್ಲಿಕ್‌ ಟಿವಿʼ ಜೊತೆಗೆ ಬೆಂಗಳೂರಿನಲ್ಲಿ (Bengaluru) ಮಾತನಾಡಿದ ಅವರು, ಜಾತಿ ಜನಗಣತಿ ಅಲ್ಲ ಇದು.. ಇವರಿಗೆ ಜಾತಿ ಜನಗಣತಿ ಮಾಡಲು ಅಧಿಕಾರ ಇಲ್ಲ. ಸಿಎಂ ನನಗೆ ಜಾತಿ ಜನಗಣತಿ ಮಾಡಲು ಅಧಿಕಾರ ಇದೆ ಎಂದು ಹೇಳಲಿ, ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡ್ತೇನೆ ಎಂದು ಸವಾಲ್‌ ಹಾಕಿದ್ದಾರೆ. ಇದನ್ನೂ ಓದಿ: ಡ್ರೆಸ್ಸಿಂಗ್‌ ರೂಮ್‌ ಮಾಹಿತಿ ಲೀಕ್‌ – ಗಂಭೀರ್‌ ಆಪ್ತ ಸೇರಿ ನಾಲ್ವರು ಕೋಚಿಂಗ್‌ ಸಿಬ್ಬಂದಿಯನ್ನ ಕಿತ್ತೆಸೆದ ಬಿಸಿಸಿಐ

    ಈ ಸರ್ಕಾರಕ್ಕೆ ಜಾತಿ ಜನಗಣತಿ ಮಾಡಲು ಅಧಿಕಾರ ಕೊಟ್ಟವರು ಯಾರು? ಜಾತಿ ಜನಗಣತಿ ಮಾಡಬೇಕಿದ್ದು ಕೇಂದ್ರ ಸರ್ಕಾರ. ಇದು ಜಾತಿಗಣತಿ ಅಲ್ಲ. ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ. ಇಂತಹ ಸಮೀಕ್ಷೆಯಲ್ಲಿ ಜಾತಿಗಣತಿ ಯಾಕೆ ಮಾಡಿದ್ದು ಯಾಕೆ? ಕಾಂಗ್ರೆಸ್‌ನಲ್ಲಿ ಕುರ್ಚಿ ಕಿತ್ತಾಟ ಇರೋದಕ್ಕೆ ಇವೆಲ್ಲ ಮಾಡ್ತಿದ್ದಾರೆ. ಕುರ್ಚಿ ಕಿತ್ತಾಟ ಮರೆ ಮಾಚೋಕೆ ಇದೆಲ್ಲ ಮಾಡ್ತಿದ್ದಾರೆ. ಇದು ಸರಿಯಲ್ಲ, ಈ ಜಾತಿ ಜನಗಣತಿ ವರದಿ ಅಂಗೀಕಾರ ಮಾಡಬಾರದು ಎಂದು ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಬೆಂಗಳೂರಲ್ಲಿ ಮಳೆ ಎಫೆಕ್ಟ್‌; ಕಾರಿನ ಮೇಲೆ ಬಿದ್ದ ಮರದ ಕೊಂಬೆ – ಬೈಕ್‌ ಸವಾರ ಜಸ್ಟ್‌ ಮಿಸ್‌

    ಈ ಜಾತಿ ಜನಗಣತಿ ವಿರುದ್ಧ ಬಿಜೆಪಿ, ಜೆಡಿಎಸ್, ಕಾಂಗ್ರೆಸ್‌ ಎಲ್ಲಾ ಒಕ್ಕಲಿಗ ಶಾಸಕರು ಪಕ್ಷಾತೀತವಾಗಿ ಧ್ವನಿ ಎತ್ತಬೇಕು. ನಮ್ಮ ಸಮುದಾಯಕ್ಕೆ ಅನ್ಯಾಯ ಆದ್ರೆ ನಾವು ಸಹಿಸಲ್ಲ. ನನಗೆ ಸಮುದಾಯದ ಮುಖ್ಯ, ಶಾಸಕ ಸ್ಥಾನ ಮುಖ್ಯ ಅಲ್ಲ. ಸಮುದಾಯಕ್ಕಾಗಿ ಶಾಸಕ ಸ್ಥಾನಕ್ಕೂ ರಾಜೀನಾಮೆ ಕೊಡೋಕೆ ಸಿದ್ಧ ಎಂದು ಹೇಳಿದ್ದಾರೆ. ಇದನ್ನೂ ಓದಿ: UK | ರಾಯಲ್ ಕಾಲೇಜ್ ಆಫ್ ಫಿಸಿಶಿಯನ್ಸ್‌ನ 123ನೇ ಅಧ್ಯಕ್ಷರಾಗಿ ಭಾರತೀಯ ಮೂಲದ ಮುಮ್ತಾಜ್‌ ಆಯ್ಕೆ

    ನನ್ನ ಮನೆಗೆ ಬಂದು ಸಮೀಕ್ಷೆಯೇ ಮಾಡಿಲ್ಲ. ಇದಕ್ಕೇನು ಹೇಳೋದು? ಜಯಪ್ರಕಾಶ್ ಹೆಗ್ಡೆ ಇದನ್ನ ಜಾತಿ ಸಮೀಕ್ಷೆ ಅಂತ ಹೇಳಲಿ ನೋಡೋಣ. ಡಿಕೆ ಶಿವಕುಮಾರ್ ಸಮುದಾಯಕ್ಕೆ ಅನ್ಯಾಯ ಮಾಡಲು ಬಿಡಬಾರದು. ಇವತ್ತಿನ ಕ್ಯಾಬಿನೆಟ್‌ನಲ್ಲಿ ಇದನ್ನ ಅಂಗೀಕಾರ ಮಾಡಿದ್ರೆ ಉಗ್ರ ಹೋರಾಟ ಮಾಡ್ತೀವಿ. ಸರ್ಕಾರಕ್ಕೆ ಶಾಸಕ ಎ ಮಂಜು ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ಖಾಸಗಿ ಶಾಲೆಗಳ ದಾಖಲಾತಿಗೆ ಸರ್ಕಾರದಿಂದ ರೂಲ್ಸ್ – ಪೋಷಕರ ಸಂದರ್ಶನ, ಮನಸೋ ಇಚ್ಛೆ ಫೀಸ್‌ಗೆ ಬ್ರೇಕ್