– ಹಾಸನದಲ್ಲಿ ಜೆಡಿಎಸ್‌ನವರು ಗೃಹಲಕ್ಷ್ಮಿ ತಗೋತಿಲ್ವಾ? ಅಂತ ಸಿಎಂ ಪ್ರಶ್ನೆ
ಹಾಸನ: ಮುಂದಿನ ಎರಡು ವರ್ಷಗಳಲ್ಲಿ ಎತ್ತಿನಹೊಳೆ ಯೋಜನೆ ಪೂರ್ಣಗೊಳಿಸಿ ಏಳು ಜಿಲ್ಲೆಗಳಿಗೆ ನೀರು ಕೊಡ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಭರವಸೆ ನೀಡಿದ್ದಾರೆ.
ಹಾಸನದ (Hassan) ಅರಸೀಕೆರೆ (Arsikere) ತಾಲೂಕು ಕ್ರೀಡಾಂಗಣದಲ್ಲಿ ನಡೆದ ಫಲಾನುಭವಿಗಳ ಸಮಾವೇಶದಲ್ಲಿ ಮಾತನಾಡಿದ ಅವರು, ಬಿಜೆಪಿಯವರು ನೇರವಾಗಿ ಅಧಿಕಾರಕ್ಕೆ ಬಂದಿಲ್ಲ. 2018ರಲ್ಲಿ ಯಡಿಯೂರಪ್ಪ (Yediyurappa) ಆಪರೇಷನ್ ಕಮಲ ಮಾಡಿ ಅಧಿಕಾರಕ್ಕೆ ಬಂದರು. ಅವರು ರಾಜ್ಯದ ಅಭಿವೃದ್ಧಿ ಮಾಡುವ ಬದಲು ಲೂಟಿ ಹೊಡೆದರು. ಎತ್ತಿನಹೊಳೆ ಯೋಜನೆ ಆಗೋದೆ ಇಲ್ಲ ಎಂದು ಕುಮಾರಸ್ವಾಮಿ ರಾಜಕೀಯವಾಗಿ ಹೇಳಿದ್ದಾರೆ. ಇನ್ನು ಎರಡು ವರ್ಷಗಳಲ್ಲಿ ಎತ್ತಿನಹೊಳೆ ಯೋಜನೆ ಪೂರ್ಣಗೊಳಿಸಿ 7 ಜಿಲ್ಲೆಗಳಿಗೆ ನೀರು ಕೊಡ್ತೇವೆ ಎಂದರು. ಇದನ್ನೂ ಓದಿ: ಶಿವಲಿಂಗೇಗೌಡ್ರು ನಮ್ಮನೆಗೆ, ಸಿಎಂ ಮನೆಗೆ ತಿರುಗಿ 4 ಜೊತೆ ಚಪ್ಪಲಿ ಸವೆಸಿದ್ದಾರೆ: ಡಿ.ಕೆ ಶಿವಕುಮಾರ್
ಜೆಡಿಎಸ್‌ನವರು ಗೃಹಲಕ್ಷ್ಮಿ ತಗೋತಿಲ್ವಾ?
ಕಾಂಗ್ರೆಸ್ ಸರ್ಕಾರ ಎಲ್ಲರಿಗೂ ಸಾಮಾಜಿಕ ನ್ಯಾಯ ಕೊಡುತ್ತಿದೆ. ಪಕ್ಷಾತೀತವಾಗಿ ಗ್ಯಾರೆಂಟಿಗಳನ್ನು ಕೊಡುತ್ತಿದ್ದೇವೆ. ಹಾಸನ ಜಿಲ್ಲೆಯಲ್ಲಿ ಜೆಡಿಎಸ್‌ನವರು (JDS) ಗೃಹಲಕ್ಷ್ಮಿ ತಗೋತಿಲ್ವಾ? ಶಕ್ತಿ ಯೋಜನೆಯಡಿಯಲ್ಲಿ ಬಸ್‌ನಲ್ಲಿ ಓಡಾಡುತ್ತಿಲ್ವಾ? ಎಲ್ಲಾ ಜಾತಿಯವರಿಗೂ ಶಕ್ತಿ ತುಂಬುತ್ತಿದ್ದೇವೆ. ಬಿಜೆಪಿ ಹಾಗೂ ಜೆಡಿಎಸ್‌ನವರು ಹೇಳುವ ಮಾತುಗಳು ಸತ್ಯಕ್ಕೆ ದೂರವಾದ ಮಾತುಗಳು. ಅವರು ಹೇಳುವ ಮಾತಿನಲ್ಲಿ ಸತ್ಯವಿಲ್ಲ ಎಂದು ಕಿಡಿಕಾರಿದರು. ಇದನ್ನೂ ಓದಿ: ಸಚಿವ ಸ್ಥಾನಕ್ಕೆ ಆಗ್ರಹ – ಶಿವಲಿಂಗೇಗೌಡ ಬೆಂಬಲಿಗರ ವಿರುದ್ಧ ವೇದಿಕೆಯಲ್ಲೇ ಸಿಎಂ ಗರಂ
ಶ್ರೇಯಸ್‌ಪಟೇಲ್ ಗೆಲ್ಲಿಸಿ ಇತಿಹಾಸ ನಿರ್ಮಾಣ ಮಾಡಿದ್ರಿ. ಶ್ರೇಯಸ್‌ಪಟೇಲ್ ಒಬ್ಬ ಪ್ರಾಮಾಣಿಕ ಯುವಕ. ಒಳ್ಳೆಯ, ಯೋಗ್ಯ ತೀರ್ಮಾನವನ್ನು ಮಾಡಿದ್ದೀರಾ. ಹಾಸನ ಜಿಲ್ಲೆಯಲ್ಲಿ ಏಳು ವಿಧಾನಸಭಾ ಸ್ಥಾನಗಳಿವೆ. ಮುಂದಿನ ಚುನಾವಣೆಯಲ್ಲಿ ಏಳಕ್ಕೆ ಏಳು ಸ್ಥಾನವನ್ನು ಗೆಲ್ಲಿಸಿಕೊಡುವ ಕೆಲಸ ಮಾಡಬೇಕು. ಶಿವಲಿಂಗೇಗೌಡ, ಶ್ರೇಯಸ್‌ಪಟೇಲ್ ನೇತೃತ್ವದಲ್ಲಿ ಚುನಾವಣೆ ನಡೆದರೆ ನೀವು ಅವರಿಗೆ ಆಶೀರ್ವಾದ ಮಾಡಬೇಕು ಎಂದರು.
ಬೆಂಗಳೂರು: ಮುಡಾ ಕೇಸ್‌ನಲ್ಲಿ (MUDA Case) ಸಿಎಂ ಸಿದ್ದರಾಮಯ್ಯ (Siddaramaiah) ಹಾಗೂ ಅವರ ಪತ್ನಿ ಪಾರ್ವತಿಯವರಿಗೆ (Parvathi Siddaramaiah) ಬಿಗ್ ರಿಲೀಫ್ ಸಿಕ್ಕಿದೆ. ಇ.ಡಿ ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಸಿದ್ದ ಅರ್ಜಿ ವಜಾಗೊಂಡಿದ್ದು, ಸಿಎಂ ಪತ್ನಿ ವಿರುದ್ಧದ ಮುಡಾ ಪ್ರಕರಣದ ವಿಚಾರಣೆ ರದ್ದಾಗಿದೆ. ಸುಪ್ರೀಂ ಆದೇಶದ ಬೆನ್ನಲ್ಲೇ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಸಿಎಂ ಸಿದ್ದರಾಮಯ್ಯ, ಪತ್ನಿ ವಿರುದ್ಧ ಅಪಪ್ರಚಾರ ಮಾಡಿದ ವಿಪಕ್ಷಗಳು ಸಾರ್ವಜನಿಕವಾಗಿ ಕ್ಷಮೆ ಕೇಳಬೇಕೆಂದು ಒತ್ತಾಯಿಸಿದ್ದಾರೆ.
ಸುಪ್ರೀಂಕೋರ್ಟ್ನ ಗೌರವಾನ್ವಿತ ಮುಖ್ಯ ನ್ಯಾಯಮೂರ್ತಿಗಳಾದ ಬಿ.ಆರ್.ಗವಾಯಿ ಮತ್ತು ನ್ಯಾಯಮೂರ್ತಿಗಳಾದ ಕೆ.ವಿನೋದಚಂದ್ರ ಅವರ ಆದೇಶವನ್ನು ನಾನು ವಿನೀತನಾಗಿ ಸ್ವಾಗತಿಸುತ್ತೇನೆ. ನನ್ನ ಸುದೀರ್ಘ ರಾಜಕೀಯ ಜೀವನದಲ್ಲಿ ನಾನು ಸದಾ ಸಂವಿಧಾನ ಮತ್ತು ನೆಲದ ಕಾನೂನಿಗೆ ತಲೆಬಾಗುತ್ತಾ ಬಂದವನು. ಈ ನಂಬಿಕೆಯನ್ನು ಸುಪ್ರೀಂ ಕೋರ್ಟ್ ಆದೇಶ ಉಳಿಸಿಕೊಂಡು ಕಾಪಾಡಿದೆ. ಇದನ್ನೂ ಓದಿ: ದಕ್ಷಿಣ ಕನ್ನಡದಲ್ಲಿ ಮಳೆ ಪೀಡಿತ ಪ್ರದೇಶದ 11 ಶಾಲೆಗಳ ದುರಸ್ತಿಗೆ ಕೇಂದ್ರ ಸರ್ಕಾರದ ಅನುಮೋದನೆ
ರಾಜಕೀಯವಾಗಿ ನನ್ನನ್ನು ಎದುರಿಸಲಾಗದ ಭಾರತೀಯ ಜನತಾ ಪಕ್ಷ ಮತ್ತು ಅದರ ಸಂಗಾತಿಗಳು ಸಾಂವಿಧಾನಿಕ ತನಿಖಾ ಸಂಸ್ಥೆಗಳಾದ ಸಿಬಿಐ ಮತ್ತು ಇಡಿಯನ್ನು ದುರ್ಬಳಕೆ ಮಾಡಿಕೊಂಡು ನನ್ನ ಪತ್ನಿಯ ವಿರುದ್ಧ ಸುಳ್ಳು ಪ್ರಕರಣವನ್ನು ಸೃಷ್ಟಿಸಿ, ನೀಡಿರುವ ಕಿರುಕುಳ ಅತ್ಯಂತ ಹೇಯವಾದುದು. ಇದರಿಂದ ನಾನು ಮತ್ತು ನನ್ನ ಕುಟುಂಬ ಅನುಭವಿಸಿದ ಮಾನಸಿಕವಾದ ಕಿರುಕುಳವನ್ನು ನಾನೆಂದೂ ಮರೆಯಲಾರೆ. ಇದನ್ನೂ ಓದಿ: ಧರ್ಮಸ್ಥಳದಲ್ಲಿ ಶವಗಳ ಹೂತಿಟ್ಟ ಪ್ರಕರಣ SIT ಹೆಗಲಿಗೆ – ನಿಷ್ಪಕ್ಷಪಾತ ತನಿಖೆ ಬಗ್ಗೆ ಗೃಹ ಸಚಿವ ಪರಂ ಭರವಸೆ
ನನ್ನ ಮನದಾಳದ ಮಾತನ್ನೇ ಸುಪ್ರೀಂ ಕೋರ್ಟ್‌ನ ಮುಖ್ಯನ್ಯಾಯಮೂರ್ತಿಗಳಾದ ಗವಾಯಿ ಅವರು ಹೇಳಿದ್ದಾರೆ. ‘ರಾಜಕೀಯ ಸಮರಕ್ಕೆ ಮತದಾರರನ್ನು ಬಳಸಕೊಳ್ಳಬೇಕೇ ಹೊರತು, ಇದಕ್ಕಾಗಿ ಜಾರಿ ನಿರ್ದೇಶನಾಲಯದಂತಹ ಸಾಂವಿಧಾನಿಕ ಸಂಸ್ಥೆಗಳನ್ನು ದುರ್ಬಳಕೆ ಮಾಡಬಾರದು’ ಎಂಬ ಅವರ ಮಾತುಗಳು ಸಂವಿಧಾನದ ಮೇಲೆ ನಂಬಿಕೆ ಇಟ್ಟಿರುವ ಪ್ರತಿಯೊಬ್ಬ ಪ್ರಜ್ಞಾವಂತ ಭಾರತೀಯನ ಅಭಿಪ್ರಾಯವಾಗಿದೆ. ಇದನ್ನೂ ಓದಿ: ಮುಂಬೈಯಲ್ಲಿ ರನ್‌ವೇಯಿಂದ ಜಾರಿದ ಏರ್ ಇಂಡಿಯಾ ವಿಮಾನ – ತಪ್ಪಿದ ಭಾರೀ ಅವಘಡ
ಕಳೆದ 10-11 ವರ್ಷಗಳಿಂದ ಕೇಂದ್ರ ಸರ್ಕಾರ ಮತ್ತು ಬಿಜೆಪಿಯು ಐಟಿ, ಸಿಬಿಐ ಮತ್ತು ಇಡಿಯ ದುರ್ಬಳಕೆ ಮೂಲಕ ಸಾಧಿಸುತ್ತಿರುವ ರಾಜಕೀಯ ದ್ವೇಷಕ್ಕೆ ಬಲಿಯಾದವರೆಲ್ಲರಲ್ಲಿಯೂ ಈ ತೀರ್ಪು ಸಮಾಧಾನ ಉಂಟುಮಾಡಿದೆ ಮತ್ತು ನ್ಯಾಯ ವ್ಯವಸ್ಥೆಯ ಮೇಲೆ ಭರವಸೆ ಮೂಡಿಸಿದೆ. ಇದನ್ನೂ ಓದಿ: ಕನಕಪುರದ 250ಕ್ಕೂ ಹೆಚ್ಚು ಹಳ್ಳಿಗಳಿಗೆ ಕಾವೇರಿ ಕುಡಿಯುವ ನೀರು ಪೂರೈಕೆ: ಡಿಕೆಶಿ
ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ನನ್ನ ಮತ್ತು ನನ್ನ ಕುಟುಂಬದ ವಿರುದ್ಧ ಕಪೋಲಕಲ್ಪಿತ ಆರೋಪಗಳನ್ನು ಮಾಡುತ್ತಾ ಬಂದಿರುವ ರಾಜ್ಯದ ಬಿಜೆಪಿ ಮತ್ತು ಜೆಡಿಎಸ್ ನಾಯಕರಲ್ಲಿ ಕಿಂಚಿತ್ತಾದರೂ ಮಾನ-ಮರ್ಯಾದೆ ಎನ್ನುವುದು ಉಳಿದುಕೊಂಡಿದ್ದರೆ ಅವರೆಲ್ಲರೂ ತಕ್ಷಣ ತಮ್ಮ ತಪ್ಪಿಗಾಗಿ ಸಾರ್ವಜನಿಕವಾಗಿ ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿದ್ದಾರೆ. ಇದನ್ನೂ ಓದಿ: ಸೋಪ್ ಬಾಕ್ಸ್‌ಲ್ಲಿ 14.69 ಕೋಟಿ ಮೌಲ್ಯದ ಕೊಕೇನ್ ಸ್ಮಗ್ಲಿಂಗ್ – ಇಬ್ಬರು ಮಹಿಳೆಯರು ಅರೆಸ್ಟ್
ಬೆಂಗಳೂರು: ರಾಜ್ಯ ಸರ್ಕಾರದಲ್ಲಿ ದಲಿತ IAS, IPS ಅಧಿಕಾರಿಗಳಿಗೆ ಅನ್ಯಾಯ ಆಗ್ತಿದೆ. ಅಹಿಂದ ಹೆಸರಿನಲ್ಲಿ ಅಧಿಕಾರಕ್ಕೆ ಬಂದ ಸಿದ್ದರಾಮಯ್ಯ ದಲಿತ ಸಮುದಾಯಕ್ಕೆ ಅನ್ಯಾಯ ಮಾಡ್ತಿದ್ದಾರೆ ಅಂತ ಮಾಜಿ ಶಾಸಕ ಜೆಡಿಎಸ್ ಪರಿಶಿಷ್ಟ ಜಾತಿ ವಿಭಾಗದ ರಾಜ್ಯಾಧ್ಯಕ್ಷ ಅನ್ನದಾನಿ, ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು.
ಜೆಡಿಎಸ್ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅನ್ನದಾನಿ, ರಾಜ್ಯದಲ್ಲಿ ಅಹಿಂದ ಸರ್ಕಾರ ನಡೆಯುತ್ತಿದೆ ಅಂತ ಸಿದ್ದರಾಮಯ್ಯ ಹೇಳ್ತಿದ್ದಾರೆ. ಅಹಿಂದ ಹೆಸರು ಹೇಳಿಕೊಂಡು ಅಧಿಕಾರ ಮಾಡ್ತಿದ್ದಾರೆ. ಸಿದ್ದರಾಮಯ್ಯ ಸಿಎಂ ಆಗಿ 7 ವರ್ಷ ಕಳೆದಿದೆ. 7 ವರ್ಷಗಳಲ್ಲಿ ಅಹಿಂದ ಸಮಾಜಕ್ಕೆ ಕೊಟ್ಟ ಕೊಡುಗೆ ಶೂನ್ಯ. ಯಾವುದೇ ಸಮಾಜಕ್ಕೆ ಇತಿಹಾಸದಲ್ಲಿ ಉಳಿಯೋ ಯೋಜನೆ ಕೊಡದೇ ಇರೋ ಇತಿಹಾಸ ಸಿದ್ದರಾಮಯ್ಯಗೆ. ದೇವರಾಜ್ ಅರಸ್ ಅವರನ್ನು ಅವಧಿ ಹಿಂದಿಕ್ಕಬೇಕು ಅಂತ ಅಧಿಕಾರ ಸಿದ್ದರಾಮಯ್ಯ ಮಾಡ್ತಿದ್ದಾರೆ. ಸಿದ್ದರಾಮಯ್ಯ ಮುಂದುವರೆಯಲಿ ನಮ್ಮದೇನು ತಕರಾರು ಇಲ್ಲ. ದಲಿತ ಸಮುದಾಯಕ್ಕೆ ಏನ್ ಕೊಟ್ಟಿದ್ದೀರಾ. ದಲಿತರ ಹಕ್ಕು ಸಿದ್ದರಾಮಯ್ಯ ಕಸಿಯುತ್ತಿದ್ದಾರೆ ಎಂದು ಕಿಡಿಕಾರಿದರು.
ದಲಿತರಿಗೆ ಅನುಕೂಲ ಆಗೋ ಒಂದೇ ಒಂದು ಯೋಜನೆ ಸಿದ್ದರಾಮಯ್ಯ ಕೊಟ್ಟಿಲ್ಲ. ಕುಮಾರಸ್ವಾಮಿ ದಲಿತರ ಮನೆಯಲ್ಲಿ ವಾಸ ಮಾಡಿ ದಲಿತರ ಪರ ಯೋಜನೆ ಕೊಟ್ಟರು. ಕುಮಾರಸ್ವಾಮಿ ಬರೋ ಮುಂಚೆ ನಾಯಿ-ನರಿ ಓಡಾಡದೇ ಇರೋ ರೀತಿ ದಲಿತರ ಜಾಗ ಇತ್ತು. ದಲಿತರ ಕೇರಿಗಳು ಅಚ್ಚುಕಟ್ಟಾಗಲು ಕುಮಾರಸ್ವಾಮಿ ಅವರ ಕಾರ್ಯಕ್ರಮದಿಂದ. ದಲಿತರು ಸೇರಿ ಎಲ್ಲಾ ವರ್ಗದ ಜನ ಸಿದ್ದರಾಮಯ್ಯಗೆ ಅಧಿಕಾರ ಕೊಟ್ಟರು. ನಮ್ಮ ದಲಿತರ ವೋಟ್ ಹೆಚ್ಚಾಗಿ ಸಿದ್ದರಾಮಯ್ಯಗೆ ಕೊಟ್ಟರು. ಬಹುತೇಕ ಎಲ್ಲಾ ದಲಿತ ಕ್ಷೇತ್ರಗಳು ಸಿದ್ದರಾಮಯ್ಯಗೆ, ಕಾಂಗ್ರೆಸ್‌ಗೆ ಮತ ಹಾಕಿದ್ರು. ಆದರೆ, ಸಿದ್ದರಾಮಯ್ಯ ದಲಿತರಿಗೆ ಅನ್ಯಾಯ ಮಾಡಿದ್ದಾರ ಅಂತ ಕಿಡಿಕಾರಿದರು.
ಈ ಸರ್ಕಾರದಲ್ಲಿ IAS, IPS, ಎ ಗ್ರೇಡ್ ದಲಿತ ಅಧಿಕಾರಿಗಳಿಗೆ ಅನ್ಯಾಯ ಆಗ್ತಿದೆ. ಇದಕ್ಕೆ ದಲಿತ ಮಂತ್ರಿಗಳು ಉತ್ತರ ಕೊಡಬೇಕು. ಈ ಸರ್ಕಾರದಲ್ಲಿ IAS, IPS, KAS ದಲಿತರು ಆಯಕಟ್ಟಿನ ಜಾಗದಲ್ಲಿ ಇಲ್ಲ. ವಿಧಾನಸೌಧ, ಡಿಸಿ, ಎಸ್ಪಿ ಜಾಗದಲ್ಲಿ ಯಾರು ದಲಿತರು ಇದ್ದಾರೆ. ಸಿದ್ದರಾಮಯ್ಯ ಇದರ ಬಗ್ಗೆ ಲೆಕ್ಕಪತ್ರ ಹೊರಡಿಸಲಿ. ನಮ್ಮ ಜನರನ್ನ ಉಪಯೋಗ ಮಾಡಿಕೊಂಡು ನಮ್ಮ ಜನರಿಗೆ ಅನ್ಯಾಯ ಮಾಡ್ತಿದ್ದೀರಾ ಸಿದ್ದರಾಮಯ್ಯ ಅವರೇ ಅಂತ ಪ್ರಶ್ನೆ ಮಾಡಿದರು.
ರಾಹುಲ್ ಗಾಂಧಿ, ಸುರ್ಜೇವಾಲ 2023 ರಲ್ಲಿ ದಲಿತರ ಪರ ನಾವು ಇರುತ್ತೇವೆ ಅಂದರು. ಅಧಿಕಾರಕ್ಕೆ ಬಂದು ಈಗ ದಲಿತ ವಿರೋಧಿ ಆಗಿದ್ದೀರಾ. ಇದು ದಲಿತ ವಿರೋಧಿ ಸರ್ಕಾರ. ಬೇಕಾದವರಿಗೆ ಎರಡೆರಡು ಹುದ್ದೆ. ಕೊಟ್ಟವರಿಗೆ ಪದೇ ಪದೇ ಹುದ್ದೆ ಕೊಡೋ ಕೆಲಸ ಸಿದ್ದರಾಮಯ್ಯ ಮಾಡ್ತಿದ್ದಾರೆ. ಅಧಿಕಾರ ಮದದಲ್ಲಿ ನೀವು ಮರೆತು ಹೋಗಿರಬಹುದು. ಬಿಜೆಪಿ ಇದ್ದಾಗ ಅನೇಕ ಜಿಲ್ಲೆಗಳಿಗೆ ದಲಿತರನ್ನ ಡಿಸಿಗಳಾಗಿ ಮಾಡಿದ್ರು. ದಲಿತರಿಗೆ ಜಿಲ್ಲಾ ನಿಭಾಯಿಸೋ ಶಕ್ತಿ ಇಲ್ಲವಾ ಸಿದ್ದರಾಮಯ್ಯ ಅವರೇ. ACS, DC, SP ಹುದ್ದೆ ನಿಭಾಯಿಸೋ ಶಕ್ತಿ ದಲಿತರಿಗೆ ಇಲ್ಲ. ನೀವು ದಲಿತರ ರಕ್ಷಣೆ ಮಾಡ್ತೀರಾ. ದಲಿತರಿಗೆ ನೀವು ಮೋಸ ಮಾಡ್ತಿದ್ದೀರಾ ಅಂತ ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದರು.
ಕಾಂಗ್ರೆಸ್ ಪರವಾಗಿ ಕೆಲಸ ಮಾಡಿದ ಅಧಿಕಾರಿಗಳಿಗೂ ಅನ್ಯಾಯ ಆಗ್ತಿದೆ. ಸಿದ್ದರಾಮಯ್ಯ ಅವರೇ ಸ್ವಜನ ಪಕ್ಷಪಾತ ಬೇಡ. ಎಲ್ಲಾ ಸಮುದಾಯಕ್ಕೆ ಹುದ್ದೆಗಳನ್ನು ಸಮಾನವಾಗಿ ಕೊಡಿ. ದಲಿತರಿಗೂ ACS ಹುದ್ದೆ ಕೊಡಿ. ಹೇಳೋವಾಗ ದಲಿತ ಪರ. ಮಾಡೋವಾಗ ದಲಿತರಿಗೆ ಮೋಸ ಮಾಡೋದು. ದಲಿತ ಅಧಿಕಾರಿಗಳು ಅಸಮರ್ಥರಾ? ಹೊರ ರಾಜ್ಯದ ದಲಿತ ಅಧಿಕಾರಿಗಳಿಗೆ ಹುದ್ದೆ ಕೊಟ್ಟು ನಿಮ್ಮ ಸಮುದಾಯಕ್ಕೆ ಕೊಟ್ಡಿದ್ದೇನೆ ಅಂತೀರಾ. ನಿಮಗೆ ಮುಂದೆ ಸಹಕಾರ ಬೇಕಾದ್ರೆ ದಲಿತರ ಪರ ಕೆಲಸ ಮಾಡಿ. ಈಗಾಗಲೇ ನಿಮಗೆ ಸಹಕಾರ ಕಳೆದು ಹೋಗಿದೆ. ಸಿದ್ದರಾಮಯ್ಯ ಜೆಡಿಎಸ್ ಲೆಕ್ಕಕ್ಕೆ ತೆಗೆದುಕೊಂಡಿಲ್ಲ. ಈಗಲೂ ನಮ್ಮ ಮಾತು ಸಿದ್ದರಾಮಯ್ಯ ಕೇಳೋದಿಲ್ಲ. ದಲಿತರಿಗೆ ಆಗಿರೋ ಅನ್ಯಾಯ ಸರಿ ಮಾಡಿ. ಇಲ್ಲ ಅಂದರೆ ಸಿದ್ದರಾಮಯ್ಯ ಅವರನ್ನೇ ದಲಿತರು ಸರಿ ಮಾಡ್ತಾರೆ ಅಂತ ಎಚ್ಚರಿಕೆ ಕೊಟ್ಟರು.
ದಲಿತ ಸಚಿವರು ಸಿಎಂ ಬಳಿ ಹೋಗಿ ನಮ್ಮ ಸಮುದಾಯ ಅನ್ಯಾಯದ ಬಗ್ಗೆ ಮಾತಾಡಿ. ಪರಮೇಶ್ವರ್ ಸೇರಿದಂತೆ ದಲಿತ ಸಚಿವರಿಗೆ IAS, IPS ಕೂಗು ಕೇಳುತ್ತಿಲ್ಲವಾ? ಈ ಅನ್ಯಾಯದ ಬಗ್ಗೆ ಮಾತಾಡಿ ಅಂತ ಸಚಿವರ ವಿರುದ್ಧವೂ ವಾಗ್ದಾಳಿ ನಡೆಸಿದರು.
ಕಾಂಗ್ರೆಸ್‌ನಲ್ಲಿ ದಲಿತ ಶಾಸಕರು, ಮಂತ್ರಿಗಳು ಮಾತಾಡದೇ ಇರೋ ಸ್ಥಿತಿ ನಿರ್ಮಾಣ ಆಗಿದೆ ಅಂತ ಮಾಜಿ ಶಾಸಕ ಜೆಡಿಎಸ್ ಪರಿಶಿಷ್ಟ ಜಾತಿ ಘಟದ ಅಧ್ಯಕ್ಷ ಅನ್ನದಾನಿ ಸರ್ಕಾರ ಮತ್ತು ಕಾಂಗ್ರೆಸ್ ವಿರುದ್ಧ ಕಿಡಿಕಾರಿದರು.
ಕಾಂಗ್ರೆಸ್ ಪಕ್ಷದಲ್ಲಿ ದಲಿತ ಶಾಸಕರಿಗೂ, ಮಂತ್ರಿಗಳಿಗೂ ಕಷ್ಟ ಆಗ್ತಿದೆ. ಇದನ್ನ ಹೇಳಿಕೊಳ್ಳಲು ಆಗ್ತಿಲ್ಲ. ಅಂಬೇಡ್ಕರ್ ಅವರಿಗೆ ಕಷ್ಟ ಕೊಟ್ಟ ಪಕ್ಷ ಕಾಂಗ್ರೆಸ್. ಅಂಬೇಡ್ಕರ್ ಅವರನ್ನು ಸೋಲಿಸಿದ ಪಕ್ಷ ಕಾಂಗ್ರೆಸ್. ಕಾಂಗ್ರೆಸ್‌ನಲ್ಲಿ ಭಯದ ವಾತಾವರಣದಲ್ಲಿ ಶಾಸಕರು, ಸಚಿವರು ಕೆಲಸ ಮಾಡ್ತಿದ್ದಾರೆ. ದಲಿತರ ಮೇಲಿನ ಅನ್ಯಾಯವನ್ನ ಸಿದ್ದರಾಮಯ್ಯ ಅವರು ನೋಡಿಯೂ ನೋಡದಂತೆ ಇದ್ದಾರೆ. ಸಚಿವರು ಮಾತಾಡಿದ್ರೆ ಸಚಿವ ಸ್ಥಾನ ಹೋಗುತ್ತದೆ ಅನ್ನೋ ಭಯ. ಶಾಸಕರಿಗೆ ಮುಂದೆ ಟಿಕೆಟ್ ಕೊಡದೇ ಇರ್ತಾರೆ ಅನ್ನೋ ಭಯ. ಹೀಗಾಗಿ, ಯಾರು ಮಾತಾಡುತ್ತಿಲ್ಲ. ಮುಂದೊಂದು ದಿನ ಇದು ಸ್ಫೋಟ ಆಗುತ್ತದೆ. ಅವರು ಹೇಳಿಲ್ಲ ಅಂದರೆ ನಾವೇ ಮುಂದೆ ಕಾಂಗ್ರೆಸ್‌ನಲ್ಲಿ ದಲಿತ ಶಾಸಕರು, ಮಂತ್ರಿಗಳಿಗೆ ತೊಂದರೆ ಆಗ್ತಿದೆ ಅಂತ ಹೇಳೋಣ ಅಂತ ಕಾಂಗ್ರೆಸ್ ವಿರುದ್ಧ ಕಿಡಿಕಾರಿದರು.
– ಆ.11ರ ಒಳಗೆ ಸಮಾನ ಅನುದಾನ ಹಂಚಿಕೆಯಾಗದಿದ್ರೆ ಅಧಿವೇಶನದಲ್ಲಿ ಹೋರಾಟ ಎಚ್ಚರಿಕೆ
ಬೆಂಗಳೂರು: ರಾಜ್ಯ ಸರ್ಕಾರ ಜೆಡಿಎಸ್ (JDS) ಶಾಸಕರಿಗೆ ಅನುದಾನ ಬಿಡುಗಡೆ ಮಾಡದೇ ಅನ್ಯಾಯ ಮಾಡುತ್ತಿದೆ ಎಂದು ಜೆಡಿಎಸ್ ಶಾಸಕಾಂಗ ನಾಯಕ ಸುರೇಶ್ ಬಾಬು (Suresh Babu) ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಜೆಡಿಎಸ್ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯದಲ್ಲಿ ಈ ಸರ್ಕಾರ ಬಂದ ಮೇಲೆ ಅಭಿವೃದ್ಧಿ ಕಾಣಿಸುತ್ತಿಲ್ಲ. ಆಡಳಿತ ಪಕ್ಷದ ಶಾಸಕರೇ ಸರ್ಕಾರದ ವಿರುದ್ಧ ಮಾತನಾಡುತ್ತಿದ್ದಾರೆ. ಅಭಿವೃದ್ಧಿ ಕೆಲಸಕ್ಕೆ ಹಣ ಕೊಡುತ್ತಿಲ್ಲ. ಈ ಸರ್ಕಾರ ಅಭಿವೃದ್ಧಿ ಪರ ಇಲ್ಲ. ಈ ಸರ್ಕಾರದಲ್ಲಿ ಸುರ್ಜೇವಾಲ ಸೂಪರ್ ಸಿಎಂ ಆಗಿದ್ದಾರೆ. ಜನರು ಸುರ್ಜೇವಾಲಗೆ ಓಟ್ ಹಾಕಿದ್ರಾ? ಸುರ್ಜೇವಾಲ ಶಾಸಕರ ಜೊತೆ ಮಾತನಾಡುತ್ತಿದ್ದಾರೆ. ಸುರ್ಜೇವಾಲ ಹೇಳಿದ ಮೇಲೆ ಸಿಎಂ 50 ಕೋಟಿ ಹಣ ಬಿಡುಗಡೆ ಮಾಡಿದ್ದಾರೆ. ಸಿಎಂ ವಿಶೇಷ ಅಧಿಕಾರಿಗಳಿಗೆ ಪಟ್ಟಿ ಕೊಡಿ ಅಂತ ಶಾಸಕರಿಗೆ ಸಿಎಂ ಪತ್ರ ಬರೆದಿದ್ದಾರೆ. ದುಡ್ಡು ಇದ್ದರೆ ಇವರು ಯಾಕೆ ಹಣ ಕೊಡುತ್ತಿಲ್ಲ? ಹೈಕಮಾಂಡ್‌ಗೆ ಕಪ್ಪ ಕಾಣಿಕೆ ಕೊಡೋಕೆ ಈ ಸರ್ಕಾರ ಮುಂದಾಗಿದೆ. ವಿಶೇಷ ಅನುದಾನ ಅಂತ ಬಿಡುಗಡೆ ಮಾಡಿ ಅದನ್ನು ಹೈಕಮಾಂಡ್‌ಗೆ ಕಪ್ಪ-ಕಾಣಿಕೆ ಕೊಡುತ್ತಿದ್ದಾರೆ ಅನ್ನಿಸುತ್ತಿದೆ. ಸಿಎಂ ಈ ಬಗ್ಗೆ ಸ್ಪಷ್ಟೀಕರಣ ಕೊಡಬೇಕು ಎಂದು ಆಗ್ರಹಿಸಿದರು. ಇದನ್ನೂ ಓದಿ: ಅನ್ಯ ಧರ್ಮಗಳ ಪಾಲನೆ – ತಿರುಪತಿಯ ನಾಲ್ವರು ನೌಕರರ ಅಮಾನತು
ಕ್ಯಾಬಿನೆಟ್‌ನಲ್ಲಿ ಕಾಂಗ್ರೆಸ್ ಶಾಸಕರಿಗೆ 50 ಕೋಟಿ ರೂ., ಬಿಜೆಪಿ ಅವರಿಗೆ 25 ಕೋಟಿ ರೂ. ಕೊಡೋಣ ಅಂತ ಚರ್ಚೆ ಆಗಿದೆ. ಜೆಡಿಎಸ್ ಶಾಸಕರಿಗೆ ಈಗಲೇ ಅನುದಾನ ಕೊಡೋದು ಬೇಡ ಅಂತ ಇವರು ಚರ್ಚೆ ಮಾಡಿದ್ದಾರೆ. ರಾಜ್ಯದಲ್ಲಿ 224 ಶಾಸಕರು ಒಂದೇ. ಇವರೇನು ಕೆಪಿಸಿಸಿಯಿಂದ ನಮಗೆ ಹಣ ಕೊಡುತ್ತಿಲ್ಲ. ಶಾಸಕರ ನಿಧಿಯಲ್ಲಿ ಹಣ ಕೊಡಬೇಕು. ಯಾವುದೇ ತಾರತಮ್ಯ ಮಾಡದೇ ಎಲ್ಲಾ ಶಾಸಕರಿಗೆ ಅನುದಾನ ಕೊಡಬೇಕು. ಇಲ್ಲದೇ ಹೋದರೆ ರಾಜ್ಯಾದ್ಯಂತ ನಾವು ಹೋರಾಟ ಮಾಡುತ್ತೇವೆ ಎಂದು ಎಚ್ಚರಿಕೆ ಕೊಟ್ಟರು. ಇದನ್ನೂ ಓದಿ: ಜೆಡಿಎಸ್-ಬಿಜೆಪಿ ಸಂಸದರು ಮೋದಿ ಮುಂದೆ ನಿಂತು ಮಾತಾಡೋಕೆ ನಡುಗುತ್ತಾರೆ: ಸಿದ್ದರಾಮಯ್ಯ ವಾಗ್ದಾಳಿ
ಜೆಡಿಎಸ್ ಶಾಸಕರಿಗೆ ಅನುದಾನ ಕೊಟ್ಟಿಲ್ಲ. ಈಗ ಮಾಡಿರೋ ಕಾಮಗಾರಿಗಳಿಗೂ ಹಣ ಬಿಡುಗಡೆ ಮಾಡಿಲ್ಲ. ಅವರ ಪಕ್ಷದವರಿಗೆ ಮಾತ್ರ ಹಣ ಬಿಡುಗಡೆ ಮಾಡುತ್ತಾರೆ. ಜೆಡಿಎಸ್ ಅವರಿಗೆ ಯಾಕೆ ಹಣ ಬಿಡುಗಡೆ ಮಾಡಿಲ್ಲ. ಎಲ್ಲಾ ಶಾಸಕರನ್ನು ಒಂದಾಗಿ ನೋಡಿ. ತಾರತಮ್ಯ ಮಾಡೋದು ಸರಿಯಲ್ಲ. ವಿಧಾನಸಭೆ ಅಧಿವೇಶನದಲ್ಲಿ ಈ ಬಗ್ಗೆ ಚರ್ಚೆ ಮಾಡುತ್ತೇವೆ. ಬಿಜೆಪಿ ಶಾಸಕರಿಗೂ ಅನುದಾನ ಕೊಟ್ಟಿಲ್ಲ. ಸೂಪರ್ ಸಿಎಂ ಹೇಳಿದ ಮೇಲೆ ಕಾಂಗ್ರೆಸ್ ಶಾಸಕರಿಗೆ ಬಿಡುಗಡೆ ಮಾಡಿದ್ದಾರೆ. ಆಗಸ್ಟ್ 11ರ ಒಳಗೆ ಸಮಾನವಾಗಿ ಅನುದಾನ ಹಂಚಿಕೆ ಆಗಬೇಕು. ಇಲ್ಲದೆ ಹೋದ್ರೆ ಅಧಿವೇಶನದಲ್ಲಿ ಹೋರಾಟ ಮಾಡುತ್ತೇವೆ ಎಂದು ಖಡಕ್ ವಾರ್ನಿಮಗ್ ನೀಡಿದ್ದಾರೆ. ಇದನ್ನೂ ಓದಿ: Kolar | ಕಲಬೆರೆಕೆ ಹಾಲು ತಯಾರಿಕಾ ಘಟಕದ ಮೇಲೆ ಪೊಲೀಸರ ದಾಳಿ – ಹಾಲಿನಲ್ಲಿ ಕೆಮಿಕಲ್ ಅಂಶ ಪತ್ತೆ
– ಮೋದಿ ದೇಶದ 10% ಜನರಿಗೆ ಕೆಲಸ ಮಾಡ್ತಾರೆ, 90% ಜನ ಲೆಕ್ಕಕ್ಕಿಲ್ಲ
– ಜೆಡಿಎಸ್-ಬಿಜೆಪಿ ಕಾರ್ಯಕರ್ತರಿಗೂ ಗ್ಯಾರಂಟಿ ಕೊಟ್ಟಿದ್ದೇವೆ ಟೀಕಿಸಲು ನಾಚಿಕೆ ಆಗಬೇಕು ಎಂದ ಸಿಎಂ
ಮೈಸೂರು: ಜೆಡಿಎಸ್ – ಬಿಜೆಪಿ ಸಂಸದರಿಗೆ ಮೋದಿ (Narendra Modi) ಮುಂದೆ ನಿಂತು ರಾಜ್ಯಕ್ಕೆ ಆದ ಅನ್ಯಾಯ ಕೇಳುವ ಧೈರ್ಯವಿಲ್ಲ. ಮೋದಿ ಮುಂದೆ ಮಾತಾಡಲು ಇವರೆಲ್ಲಾ ನಡುಗುತ್ತಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ತೀವ್ರ ವಾಗ್ದಾಳಿ ನಡೆಸಿದರು.
ಮೈಸೂರಿನಲ್ಲಿ (Mysuru) ಸಾಧನಾ ಸಮಾವೇಶವನ್ನುದ್ದೇಶಿಸಿ ಮುಖ್ಯಭಾಷಣ ಮಾಡಿದ ಸಿಎಂ, ಬಿಜೆಪಿ-ಜೆಡಿಎಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಬಿಜೆಪಿ, ಜೆಡಿಎಸ್ ಮುಖಂಡರೂ (BJP JDS Leaders) ಈ ವೇದಿಕೆಯಲ್ಲಿ ಇರಬೇಕಿತ್ತು. ಒಂದೇ ವೇದಿಕೆಗೆ ಬಂದಿದ್ದರೆ ಅವರೇನೂ ಅಭಿವೃದ್ಧಿ ಮಾಡಿದ್ದಾರೆ? ನಾವೇನು ಅಭಿವೃದ್ಧಿ ಮಾಡಿದ್ದೇವೆ ಗೊತ್ತಾಗ್ತಿತ್ತು. ಚರ್ಚೆಗೆ ನಾನು ಬರ್ತಿನಿ, ನೀವೂ ಬನ್ನಿ ಚರ್ಚೆ ಮಾಡೋಣ ಅಂತ ಜೆಡಿಎಸ್ – ಬಿಜೆಪಿಗೆ ಬಹಿರಂಗ ಸವಾಲು ಹಾಕಿದರು. ಇದನ್ನೂ ಓದಿ: ಮನೆಯಲ್ಲಿ ಕೂತಿರೋರಿಗೆಲ್ಲ ವೆಲ್‌ಕಮ್ ಮಾಡೋಕಾಗಲ್ಲ – ಡಿಕೆಶಿ ಹೆಸರನ್ನೇ ಹೇಳದ ಸಿಎಂ
ಬಿಜೆಪಿ, ಜೆಡಿಎಸ್‌ಗೆ ಇರುವಷ್ಟು ಮತ್ಸರ ಇರಬಾರದು
ಸರ್ಕಾರ ದಿವಾಳಿ ಆಗಿದ್ದರೆ, ಅಭಿವೃದ್ಧಿ ಯೋಜನೆ ಮಾಡುಲು ಆಗುತ್ತಿತ್ತಾ? ಸರ್ಕಾರ ದಿವಾಳಿ ಆಗಿಲ್ಲ ಎಂದರಲ್ಲದೇ ಇದು ಸಿದ್ದರಾಮಯ್ಯನ ಶಕ್ತಿ ಪ್ರದರ್ಶನ ಅಲ್ಲ. ಇದು ಅಭಿವೃದ್ಧಿಯ ಶಕ್ತಿಯನ್ನು ಜನರ ಮುಂದೆ ಇಡುವ ಸಮಾವೇಶ. ಮತ್ಸರ ಇರಬೇಕು. ಆದ್ರೆ ಬಿಜೆಪಿ, ಜೆಡಿಎಸ್‌ಗೆ ಇರುವಷ್ಟು ಮತ್ಸರ ಇರಬಾರದು. ಬಿಜೆಪಿ, ಜೆಡಿಎಸ್ ಸುಳ್ಳು ಹೇಳುತ್ತಾ ಜನರ ದಾರಿ ತಪ್ಪಿಸುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಸಿದ್ದರಾಮಯ್ಯ ಹಣಕಾಸು ಸಚಿವರಾದಾಗ ಲಕ್ಷ್ಮಿ ಕುಂಟಾಗಿ ಖಜಾನೆಯಲ್ಲಿರ‍್ತಾಳೆ: ಮಲ್ಲಿಕಾರ್ಜುನ ಖರ್ಗೆ
ಜೆಡಿಎಸ್ ವೀಕ್ ಆಗಿ ಬಿಜೆಪಿ ಜೊತೆ ಸೇರಿದೆ
ನಾನು ಜೆಡಿಎಸ್ ಅಧ್ಯಕ್ಷನಾಗಿದ್ದಾಗ 58 ಸ್ಥಾನ ಗೆದ್ದಿದ್ದೇವು. ಈಗ ಜೆಡಿಎಸ್ ಗೆದ್ದಿರೋದು ಎಷ್ಟು ದೇವೇಗೌಡರೇ? ಜೆಡಿಎಸ್ ಈಗ ಗೆದ್ದಿರೋದು 18 ಸ್ಥಾನ ಮಾತ್ರ. ಜೆಡಿಎಸ್ ಯಾವುದೇ ಕಾರಣಕ್ಕೂ ಸ್ವಂತ ಬಲದಿಂದ ಅಧಿಕಾರೋದಕ್ಕೆ ಸಾಧ್ಯವಿಲ್ಲ. ಜೆಡಿಎಸ್ ವೀಕ್ ಆಗಿದೆ. ಹೀಗಾಗಿ ಬಿಜೆಪಿ ಜೊತೆ ಸೇರಿಕೊಂಡಿದ್ದಾರೆ. ಜೆಡಿಎಸ್, ಬಿಜೆಪಿ ಈ ರಾಜ್ಯದಲ್ಲಿ ಜನರ ಪ್ರೀತಿ ಉಳಿಸಿ ಕೊಂಡಿಲ್ಲ ಎಂದು ತಿವಿದರು. ಇದನ್ನೂ ಓದಿ: ನಮ್ಮ ಸರ್ಕಾರ ದೇವರ ಮನೆಯಿದ್ದಂತೆ, ಸಿದ್ದರಾಮಯ್ಯ ನಮ್ಮೆಲ್ಲರ ನಾಯಕ: ಡಿಕೆಶಿ
ಜೆಡಿಎಸ್, ಬಿಜೆಪಿಗೆ ಹೊಟ್ಟೆ ಉರಿ
ಜೆಡಿಎಸ್ – ಬಿಜೆಪಿ ಸಂಸದರಿಗೆ ಮೋದಿ ಮುಂದೆ ನಿಂತು ರಾಜ್ಯಕ್ಕೆ ಆದ ಅನ್ಯಾಯ ಕೇಳುವ ಧೈರ್ಯವಿಲ್ಲ. ಮೋದಿ ಮುಂದೆ ಮಾತಾಡಲು ಇವರೆಲ್ಲಾ ನಡುಗುತ್ತಾರೆ. ಬಿಜೆಪಿ – ಜೆಡಿಎಸ್‌ಗೆ ನಾಚಿಕೆ ಆಗಲ್ವಾ? ನಾವು ಜೆಡಿಎಸ್ – ಬಿಜೆಪಿ ಕಾರ್ಯಕರ್ತರಿಗೂ ಗ್ಯಾರಂಟಿ ಕೊಟ್ಟಿದ್ದೇವೆ. ಗ್ಯಾರಂಟಿ ಟೀಕಿಸಲು ಅವರಿಗೆ ನಾಚಿಕೆ ಆಗಬೇಕು. ನಮ್ಮ ಗ್ಯಾರಂಟಿಯಿಂದ ಬಡವರು, ದಲಿತರು, ಅಲ್ಪಸಂಖ್ಯಾತರು ಖುಷಿಯಾಗಿದ್ದಾರೆ. ಇದೇ ಜೆಡಿಎಸ್, ಬಿಜೆಪಿಗೆ ಹೊಟ್ಟೆ ಉರಿ, ಈ ಹೊಟ್ಟೆ ಉರಿ ಬಿಡಿ. ರಾಜಕೀಯವಾಗಿ ಏನಾದ್ರೂ ಮಾತನಾಡಿ, ನಾನು ತಪ್ಪು ಮಾಡಿದ್ದರೆ ದಾಖಲೆ ಸಮೇತ ಹೇಳಿ ಎಂದು ಹೇಳಿದರು. ಇದನ್ನೂ ಓದಿ: Kolar | ಕಲಬೆರೆಕೆ ಹಾಲು ತಯಾರಿಕಾ ಘಟಕದ ಮೇಲೆ ಪೊಲೀಸರ ದಾಳಿ – ಹಾಲಿನಲ್ಲಿ ಕೆಮಿಕಲ್ ಅಂಶ ಪತ್ತೆ
ಮೋದಿ ದೇಶದ 10% ಜನರಿಗೆ ಮಾತ್ರ ಕೆಲಸ ಮಾಡೋದು
ಮುಂದುವರಿದು… ನರೇಂದ್ರ ಮೋದಿ ಈ ದೇಶದ 10% ಜನರಿಗೆ ಮಾತ್ರ ಕೆಲಸ ಮಾಡೋದು, ಉಳಿದ 90% ಅವರಿಗೆ ಲೆಕ್ಕ ಇಲ್ಲ. ಆದ್ರೆ ಕಾಂಗ್ರೆಸ್ ಬಡವರು, ದಲಿತರ ಪರ ಕೆಲಸ ಮಾಡುವ ಪಕ್ಷ. ಬುದ್ಧ, ಬಸವ, ಅಂಬೇಡ್ಕರ್ ತತ್ವದಲ್ಲಿ ಕಾಂಗ್ರೆಸ್ ನಂಬಿಕೆ ಇಟ್ಟಿದೆ. ಆದ್ರೆ ಆರ್‌ಎಸ್‌ಎಸ್, ಬಿಜೆಪಿ ಮನುವಾದಿಗಳು, ಸಂವಿಧಾನ ವಿರೋಧಿಗಳು ಅಂತ ವಾಗ್ದಾಳಿ ನಡೆಸಿದರು.
ಗ್ಯಾರಂಟಿ ಶಾಶ್ವತ
ಇದೇ ವೇಳೆ ಗ್ಯಾರಂಟಿ ನಿಲ್ಲಿಸುತ್ತೆ ಕಾಂಗ್ರೆಸ್ ಎನ್ನುವ ವಿಪಕ್ಷಗಳ ಆರೋಪ ಕುರಿತು ಮಾತನಾಡಿ, ಯಾವುದೇ ಕಾರಣಕ್ಕೂ ಗ್ಯಾರಂಟಿ ಯೋಜನೆ ನಿಲ್ಲಿಸಲ್ಲ. ಗ್ಯಾರಂಟಿ ಯೋಜನೆಗಳನ್ನು ಬಿಜೆಪಿ ಬೇರೆ ಬೇರೆ ರಾಜ್ಯದಲ್ಲಿ ಕಾಪಿ ಮಾಡ್ತಿದೆ. ಮೋದಿ ಜೀ ನಿಮಗೆ ನಾಚಿಕೆ ಆಗಲ್ವಾ? ನಮ್ಮ ಗ್ಯಾರಂಟಿ ಟೀಕಿಸಿ ಈಗ ಅದನ್ನೆ ಎಲ್ಲಾ ಕಡೆ ಕೊಡುತ್ತಿದ್ದಿರಿ ಎಂದು ಲೇವಡಿ ಮಾಡಿದರು.
ಶಾಸಕರಿಗೆ ಸಿಎಂ ಸಿದ್ದರಾಮಯ್ಯ 50 ಕೋಟಿ ಅನುದಾನ ನೀಡಿದ ವಿಚಾರ ಕುರಿತು ಚನ್ನಪಟ್ಟಣದಲ್ಲಿ ಮಾತನಾಡಿದ ಅವರು, ಇದು ಬಜೆಟ್‌ನಲ್ಲೇ ತೀರ್ಮಾನ ಮಾಡಲಾಗಿತ್ತು. ಇದಕ್ಕಾಗಿ 8 ಸಾವಿರ ಕೋಟಿಯನ್ನ ಮೀಸಲಿಟ್ಟಿದ್ದೆವು. ಪಿಡಬ್ಲ್ಯೂಡಿ ಇಲಾಖೆಯ ರಸ್ತೆ, ಸೇತುವೆ ಹಾಗೂ ಶಾಸಕರ ವಿವೇಚನೆಗೆ ಅನುಗುಣವಾಗಿ ಬಳಸಲು ಅನುದಾನ ಬಿಡುಗಡೆ ಮಾಡಿದ್ದೇವೆ ಎಂದು ತಿಳಿಸಿದರು. ಇದನ್ನೂ ಓದಿ: ಅರಂತೋಡು ಘನತ್ಯಾಜ್ಯ ಘಟಕ ಮರುಸ್ಥಾಪನೆಗೆ ಶಾಸಕ ಕಿಶೋರ್ ಕುಮಾರ್ ಪುತ್ತೂರು ನೆರವು – 5 ಲಕ್ಷ ಅನುದಾನ ಮಂಜೂರು
ಬಿಜೆಪಿ-ಜೆಡಿಎಸ್‌ನವರು ತಾಳ್ಮೆಯಿಂದ ಇರಬೇಕು, ನಿಮಗೂ ಅನುದಾನ ಸಿಗುತ್ತೆ. ಈಗ ಟೀಕೆ ಮಾಡುವ ಮೊದಲು ನೀವು ಕೊಟ್ಟಿರೋದೇನು ಮೊದಲು ಹೇಳಿ. ನನಗೆ ಸ್ಯಾಂಕ್ಷನ್ ಆಗಿದ್ದ ಮೆಡಿಕಲ್ ಕಾಲೇಜು ಕಿತ್ತುಕೊಳ್ಳಲಿಲ್ವಾ? ಅದನ್ನ ಮರೆತುಬಿಟ್ಟಿದ್ದೀರಾ? ಆದರೆ, ನಾವು ಆ ಕೆಲಸ ಮಾಡಲ್ಲ. ಈಗ ಪ್ರಾರಂಭ ಆಗಿದೆ. ಎಲ್ಲರಿಗೂ ಅನುದಾನ ಕೊಡ್ತೀವಿ ಎಂದರು.
ಬೆಂಗಳೂರಿನ ಖಾಸಗಿ ಶಾಲೆಗಳಿಗೆ ಹುಸಿ ಬಾಂಬ್ ಬೆದರಿಕೆ ವಿಚಾರವಾಗಿ ಮಾತನಾಡಿ, ಆ ರೀತಿ ಯಾವುದೇ ಬಾಂಬ್ ಬೆದರಿಕೆ ಇಲ್ಲ. ಎಲ್ಲರೂ ಮುನ್ನೆಚ್ಚರಿಕೆಯಿಂದ ಇರಬೇಕು. ನಮ್ಮ ಪೊಲೀಸ್ ಅಧಿಕಾರಿಗಳು ಅದನ್ನ ನೋಡಿಕೊಳ್ತಾರೆ ಎಂದರು. ಸಣ್ಣಪುಟ್ಟ ಅಂಗಡಿಗಳಿಗೆ ಜಿಎಸ್ಟಿ ತೆರಿಗೆ ಹಾಕ್ತಿರೋ ಬಗ್ಗೆ ಪ್ರತಿಕ್ರಿಯಿಸಿ, ಅದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲ. ಪರಿಶೀಲನೆ ನಡೆಸುತ್ತಿದ್ದು, ನಂತರ ಮಾತನಾಡುತ್ತೇನೆ ಎಂದು ತಿಳಿಸಿದರು. ಇದನ್ನೂ ಓದಿ: ಸುರ್ಜೇವಾಲಾ ನನ್ನನ್ನು ಕರೆದಿಲ್ಲ, ಸಂಪುಟದಿಂದ ಕೈ ಬಿಡ್ತಾರೆ ಅಂತನೂ ಹೇಳಿಲ್ಲ – ಆರ್.ಬಿ.ತಿಮ್ಮಾಪುರ್
ಚಿಕ್ಕಬಳ್ಳಾಪುರ: ದೇಶಕ್ಕೆ ನರೇಂದ್ರ ಮೋದಿ (PM Modi), ರಾಜ್ಯಕ್ಕೆ ಕುಮಾರಣ್ಣ ಎನ್ನುವ ಮೂಲಕ ಕುಮಾರಸ್ವಾಮಿ ಮತ್ತೆ ಸಿಎಂ ಆಗಬೇಕು ಅಂತ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ನಗರದಲ್ಲಿ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ (Nikhil Kumaraswamy) ಹೇಳಿದರು.
ಕಾರ್ಯಕ್ರಮದ ನಂತರ ‘ಪಬ್ಲಿಕ್ ಟಿವಿ’ ಜೊತೆ ಮಾತನಾಡಿ, ಇದು ಕೇವಲ ಜೆಡಿಎಸ್ ಕಾರ್ಯಕರ್ತರ ಭಾವನೆ ಅಷ್ಟೇ ಅಲ್ಲ, ರಾಜ್ಯದ ಜನರ ಭಾವನೆ. ಕುಮಾರಣ್ಣ ಸಿಎಂ ಆಗಿದ್ದಾಗ ಕೊಟ್ಟ ಕೊಡುಗೆಗಳನ್ನ ಜನ ಈಗಲೂ ಸ್ಮರಿಸಿಕೊಳ್ಳುತ್ತಿದ್ದಾರೆ. ಅಂತಹ ವ್ಯಕ್ತಿ ಸಿಎಂ ಆದರೆ ರಾಜ್ಯದಲ್ಲಿ ಸಮೃದ್ಧಿಯ ವಾತವಾರಣ ನಿರ್ಮಾಣವಾಗಲಿದೆ. ನಾನು ರಾಜ್ಯದ ನಾನಾ ಕಡೆ ಪ್ರವಾಸ ಮಾಡಿದಾಗ, ಜನ ಕುಮಾರಣ್ಣ ಸಿಎಂ ಆಗಲಿ ಎಂದು ಬಯಸುತ್ತಿದ್ದಾರೆ ಎಂದರು.
ಜೆಡಿಎಸ್ ಬಿಜೆಪಿ ಮೈತ್ರಿ ಶಾಶ್ವತ
ಜೆಡಿಎಸ್-ಬಿಜೆಪಿ ಮೈತ್ರಿ ಶಾಶ್ವತವಾಗಿ ಇರಲಿದೆ. ಮುಂದಿನ 2028 ರಲ್ಲಿ ಬಿಜೆಪಿ ಜೆಡಿಎಸ್ ಮೈತ್ರಿಗೆ 180 ಸ್ಥಾನಗಳು ಸಿಗಲಿದ್ದು, ಸರ್ಕಾರ ರಚನೆ ಮಾಡಲಿದ್ದೇವೆ. ನಮ್ಮ ನಾಯಕರು ಕುಮಾರಣ್ಣ. ಫೇಸ್ ವ್ಯಾಲ್ಯೂ ಇರುವ ನಾಯಕರು ದೇವೇಗೌಡರು, ಕುಮಾರಣ್ಣ. ಕುಮಾರಣ್ಣ ಸಿಎಂ ಆಗಬೇಕು ಎಂಬುದು ನಮ್ಮ ಅಪೇಕ್ಷೆ ಅಲ್ಲ, ಇದು ಕಾರ್ಯಕರ್ತರ ಅಪೇಕ್ಷೆ. ನಾವು 3 ವರ್ಷ ಯಾವುದೇ ವಾಮಮಾರ್ಗದಿಂದ ಅಧಿಕಾರ ಹಿಡಿಯಲ್ಲ. ಮುಂದೆ 2028 ರಲ್ಲಿ 180 ಸ್ಥಾನ ಪಡೆದು ಕೇಂದ್ರದ ನಾಯಕರ ಜೊತೆ ಚರ್ಚೆ ಮಾಡಿ ಸಿಎಂ ಸ್ಥಾನದ ತೀರ್ಮಾನ ಮಾಡಲಿದ್ದೇವೆ ಎಂದು ತಿಳಿಸಿದರು. ಇದನ್ನೂ ಓದಿ: ರಾಜ್ಯದ ಆರು ನೀರಾವರಿ ಯೋಜನೆಗಳಿಗೆ 11,122.76 ಕೋಟಿ ಅನುದಾನಕ್ಕಾಗಿ ಮನವಿ: ಡಿಸಿಎಂ ಡಿಕೆಶಿ
ನನಗೆ ರಾಜ್ಯಾಧ್ಯಕ್ಷ ಸ್ಥಾನದ ಅಪೇಕ್ಷೆ ಇಲ್ಲ
ನಾನು ಪಕ್ಷ ಸಂಘಟನೆಯಲ್ಲಿ ತೊಡಗಿದ್ದೇನೆ. ಮುಂದೆ ಗ್ರಾಮ, ತಾಲೂಕು, ಜಿಲ್ಲಾ ಪಂಚಾಯಿತಿ ಚುನಾವಣೆಗಳು ಎದುರಾಗಲಿವೆ. ಅದಕ್ಕಾಗಿ ನಾನು ಹೋರಾಟ ಮಾಡುತ್ತಿದ್ದೇನೆ. ನಾನು ರಾಜ್ಯಾಧ್ಯಕ್ಷ ಸ್ಥಾನದ ಮೇಲೆ ಅಪೇಕ್ಷೆ ಇಟ್ಟಿಲ್ಲ ಎಂದರು.
ಬೆಂಗಳೂರು: ಇಲ್ಲಿನ ಕೇಂದ್ರ ವಿಶ್ವವಿದ್ಯಾಲಯಕ್ಕೆ (Bengaluru University) ಮಾಜಿ ಪ್ರಧಾನಿ ದಿ. ಮನಮೋಹನ್ ಸಿಂಗ್ (Manmohan Singh) ಹೆಸರು ಇಡಲು ಮುಂದಾಗಿರುವ ರಾಜ್ಯ ಸರ್ಕಾರದ ನಡೆಯನ್ನ ಜೆಡಿಎಸ್ (JDS) ಖಂಡಿಸಿದೆ.
ಎಕ್ಸ್‌ನಲ್ಲಿ ಏನಿದೆ?
ರಾಜ್ಯದಲ್ಲಿ ಗುಲಾಮಿ ಕಾಂಗ್ರೆಸ್ (Congress) ಸರ್ಕಾರದ ತೊಘಲಕ್ ಆಡಳಿತ ಹೇಗಿದೆ ನೋಡಿ ಕರ್ನಾಟಕದ ಮಹಾಜನತೆ. ರಾಮನ ಹೆಸರಿನ “ರಾಮನಗರ” (Ramanagar) ಜಿಲ್ಲೆಯನ್ನು “ಬೆಂಗಳೂರು ದಕ್ಷಿಣ” (Bengaluru South) ಎಂದು ವಿರೋಧವನ್ನು ಲೆಕ್ಕಿಸದೇ ಮರುನಾಮಕರಣ ಮಾಡಲಾಗಿದೆ. “ಬೆಂಗಳೂರು ಕೇಂದ್ರ ವಿಶ್ವವಿದ್ಯಾಲಯ”ಕ್ಕೆ ಮಾಜಿ ಪಿಎಂ “ಮನಮೋಹನ್ ಸಿಂಗ್ ವಿವಿ ಬೆಂಗಳೂರು” ಎಂದು ಹೆಸರಿಡಲು ಈಗ ಕಾಂಗ್ರೆಸ್ ಸರ್ಕಾರ ತೀರ್ಮಾನಿಸಿದೆ.
ನಾಡಪ್ರಭು ಕೆಂಪೇಗೌಡರು ಕಟ್ಟಿದ ಬೆಂಗಳೂರು ನಗರದ ವಿಶ್ವಮಟ್ಟದಲ್ಲಿ ಬ್ರ‍್ಯಾಂಡ್ ಆಗಿದೆ. “ಬೆಂಗಳೂರು” ಹೆಸರನ್ನೇ ವಿಶ್ವವಿದ್ಯಾಲಯಕ್ಕೂ ಇಡಲಾಗಿತ್ತು. ಪರ್ಯಾಯಾವಾಗಿ ಮರುನಾಮಕರಣ ಮಾಡುವ ಅವಶ್ಯಕತೆ, ಜರೂರು ಏನಿತ್ತು? ಅಧಿಕಾರದ ಮದ, ದರ್ಪ, ದುರಹಂಕಾರದಲ್ಲಿ ಮೆರೆಯುತ್ತಿರುವ ಸಿದ್ದರಾಮಯ್ಯ ಹಾಗೂ ಡಿಕೆಶಿವಕುಮಾರ್ ಹೈಕಮಾಂಡ್ ಮೆಚ್ಚಿಸಲು ಬೆಂಗಳೂರಿನ ಘನತೆ, ಗೌರವಕ್ಕೆ ಹಾಗೂ ಕನ್ನಡಿಗರ ಭಾವನೆಗಳಿಗೆ ಧಕ್ಕೆ ತರುವ ಕೆಲಸವನ್ನು ವಿರೋಧದ ನಡುವೆಯೂ ಮಾಡುತ್ತಿರುವುದು ಅಕ್ಷಮ್ಯ ಎಂದು ಆಕ್ರೋಶ ಹೊರಹಾಕಿದೆ.ಇದನ್ನೂ ಓದಿ: ಶಾಲಾ ವಾಹನ ಏರಲು ರಸ್ತೆಗೆ ಓಡಿದ ಬಾಲಕನಿಗೆ ಬಿಎಂಟಿಸಿ ಬಸ್ ಡಿಕ್ಕಿ – ವಿದ್ಯಾರ್ಥಿ ಸ್ಥಿತಿ ಗಂಭೀರ
ಎಕ್ಸ್‌ನಲ್ಲಿ ಏನಿದೆ?
ಐದು ವರ್ಷ ನಾನೇ ಮುಖ್ಯಮಂತ್ರಿ ಎಂದು ಹೇಳಿಕೊಂಡು ತಿರುಗುವ ಕರ್ಮ ಸಿದ್ದರಾಮಯ್ಯನವರಿಗೆ ಬರಬಾರದಿತ್ತು. ನಾನೇ ಸಿಎಂ.. ನಾನೇ ಸಿಎಂ.. ಎಂದು ಮಾಧ್ಯಮಗಳ ಮುಂದೆ ಗಂಟಲು ಹರಿದುಕೊಳ್ಳುತ್ತಿರುವುದರ ಹಿಂದೆ ಸಿಎಂ ಕುರ್ಚಿ ಅಲುಗಾಡುತ್ತಿರುವುದನ್ನು ಸೂಚಿಸುತ್ತಿದೆ.
ಐದು ವರ್ಷ ನಾನೇ ಮುಖ್ಯಮಂತ್ರಿ ಎಂದು ಹೇಳಿಕೊಂಡು ತಿರುಗುವ ಕರ್ಮ @siddaramaiah ಅವರಿಗೆ ಬರಬಾರದಿತ್ತು.
ನಾನೇ ಸಿಎಂ.. ನಾನೇ ಸಿಎಂ.. ಎಂದು ಮಾಧ್ಯಮಗಳ ಮುಂದೆ ಗಂಟಲು ಹರಿದು ಕೊಳ್ಳುತ್ತಿರುವುದರ ಹಿಂದೆ ಸಿಎಂ ಕುರ್ಚಿ ಅಲುಗಾಡುತ್ತಿರುವುದನ್ನು ಸೂಚಿಸುತ್ತಿದೆ.
ನಾಯಕತ್ವ ಬದಲಾವಣೆ ಆಗಬೇಕು ಎಂದು ಡಿಸಿಎಂ @DKShivakumar ಬಣದ ಇಕ್ಬಾಲ್…
ನಾಯಕತ್ವ ಬದಲಾವಣೆ ಆಗಬೇಕು ಎಂದು ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಬಣದ ಇಕ್ಬಾಲ್ ಹುಸೇನ್, ಹೆಚ್.ಸಿ ಬಾಲಕೃಷ್ಣ, ರಂಗನಾಥ್, ರವಿ ಗಾಣಿಗ ಸೇರಿದಂತೆ ಹಲವರು ಬಹಿರಂಗವಾಗಿ ಹೇಳಿಕೆ ಕೊಡುತ್ತಿದ್ದಾರೆ.
ಇನ್ನು ತಮ್ಮ ನಾಯಕನ ಕುರ್ಚಿಗೆ ಕುತ್ತು ಬಂದಿರುವುದು ಸ್ಪಷ್ಟವಾಗುತ್ತಲೇ ಸಿದ್ದರಾಮಯ್ಯ ಆಪ್ತರು ಸಹ ಕೂಗುಮಾರಿಗಳಂತೆ ಅವರ ಪರ ಬ್ಯಾಟ್ ಬೀಸುತ್ತಿದ್ದಾರೆ. ಲಾಟರಿ ಸಿಎಂ ಸಿದ್ದರಾಮಯ್ಯ ಅವರೇ, ನಿಮ್ಮ ಕಾಂಗ್ರೆಸ್ ಸರ್ಕಾರದ ದುರಾಡಳಿತದ ವಿರುದ್ಧ ಮತ್ತು ನಿಮ್ಮ ನಾಯಕತ್ವದ ಬಗ್ಗೆ ಸಚಿವರು ಹಾಗೂ ಕಾಂಗ್ರೆಸ್ ಶಾಸಕರಲ್ಲೇ ಅಸಮಾಧಾನದ ಬೆಂಕಿ ಎದ್ದು, ಹಾದಿ ಬೀದಿಯಲ್ಲಿ ಹೊಗೆಯಾಡುತ್ತಿದೆ. ವಿಪಕ್ಷಗಳ ವಿರುದ್ಧ ಬೆಂಕಿಯುಗುಳಿದರೇ, ನಿಮ್ಮ ಹೊಟ್ಟೆ ಕಿಚ್ಚು ಮತ್ತಷ್ಟು ಉಲ್ಬಣಿಸುತ್ತದೆ ಹೊರತು ಉಪಶಮನವಾಗುವುದಿಲ್ಲ ಎಂದು ಕಿಡಿಕಾರಿದೆ.ಇದನ್ನೂ ಓದಿ: ಡಿಕೆಶಿ ಸಿಎಂ ಆಗಬೇಕೆಂಬ ಆಸೆ ನನಗೂ ಇದೆ, ಅವ್ರ ಶ್ರಮಕ್ಕೆ ಫಲ ಸಿಗುತ್ತೆ: ಡಿಕೆ ಸುರೇಶ್
ಬೀದರ್: ಸೆಪ್ಟೆಂಬರ್ ಕ್ರಾಂತಿ ಆಗುತ್ತಾ ಗೊತ್ತಿಲ್ಲ, ಆದರೆ ಕಾಂಗ್ರೆಸ್‌ನಲ್ಲಿ (Congress) ರಾಜಕೀಯ ಬೆಳವಣಿಗೆ ಆಗುತ್ತಿದೆ ಎಂದು ಜೆಡಿಎಸ್ (JDS) ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ (Nikhil Kumaraswamy) ಹೇಳಿದರು.
ಜಿಲ್ಲೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಅದೇನೋ ಸೆಪ್ಟೆಂಬರ್‌ಗೆ ಕ್ರಾಂತಿ ಆಗುತ್ತೆ, ಕ್ರಾಂತಿಯಾಗುತ್ತದೆ ಎನ್ನುತ್ತಿದ್ದಾರೆ. ಆದರೆ ಆ ಕ್ರಾಂತಿಯಾಗುತ್ತದೋ ಇಲ್ವೋ ಗೊತ್ತಿಲ್ಲ. ಆದರೆ ಕಾಂಗ್ರೆಸ್‌ನಲ್ಲಿ ರಾಜಕೀಯ ಬೆಳವಣಿಗಳು ಆಗುತ್ತಿವೆ. ಕಾದು ನೋಡೋಣ ಎಂದರು.ಇದನ್ನೂ ಓದಿ: ಕಾರವಾರ| ಕೊಡಸಳ್ಳಿ ವಿದ್ಯುತ್‌ಗಾರದ ಬಳಿ ಗುಡ್ಡ ಕುಸಿತ; ರಸ್ತೆ ಸಂಚಾರ ಬಂದ್
ಸಿದ್ದರಾಮಯ್ಯನವರು (Siddaramaiah) ಐದು ವರ್ಷ ನಾನೇ ಸಿಎಂ ಎಂದು ಹೇಳುತ್ತಿದ್ದಾರೆ. ಆದರೆ ಒಂದAತು ಸತ್ಯ ಕಾಂಗ್ರೆಸ್‌ನಲ್ಲಿ ಹಲವು ಗುಂಪುಗಳಿದ್ದು, ಕೆಲವು ಗುಂಪುಗಳು ಸೈಲೆಂಟಾಗಿ ಕೆಲಸ ಮಾಡುತ್ತಿವೆ. ಕೆಲವು ಗುಂಪುಗಳು ನೇರವಾಗಿಯೇ ಗುಂಪುಗಾರಿಕೆ ಮಾಡುತ್ತಿದ್ದು, ಈ ಬಗ್ಗೆ ಯತೀಂದ್ರ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ. ಈ ಸರ್ಕಾರದ ಮೇಲೆ ರಾಜ್ಯದ ಜನರು ವಿಶ್ವಾಸ ಕಳೆದುಕೊಂಡು ಬಹಳ ದಿನವಾಗಿದ್ದು, ಸರ್ಕಾರ ಕಾಲಹರಣ ಮಾಡುತ್ತಿದೆ ಎಂದರು.