Tag: jds

  • ರಾಜ್ಯದ ಅಭಿವೃದ್ಧಿಗಾಗಿ ತೈಲ ದರ ಹೆಚ್ಚಳ: ಪರಮೇಶ್ವರ್

    ರಾಜ್ಯದ ಅಭಿವೃದ್ಧಿಗಾಗಿ ತೈಲ ದರ ಹೆಚ್ಚಳ: ಪರಮೇಶ್ವರ್

    ಬೆಂಗಳೂರು: ರಾಜ್ಯದ ಅಭಿವೃದ್ಧಿ ಕಾರ್ಯಗಳಿಗೆ ಹಣ ಬೇಕು ಎಂಬ ಕಾರಣಕ್ಕೆ ತೈಲ ದರ ಹೆಚ್ಚಳ (Petrol price hike) ಮಾಡಲಾಗಿದೆ ಎಂದು ಗೃಹ ಸಚಿವ ಡಾ.ಜಿ ಪರಮೇಶ್ವರ್ (G.Parameshwar) ಹೇಳಿದ್ದಾರೆ.

    ಬೆಂಗಳೂರಿನಲ್ಲಿ (Bengaluru) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ (BJP) ಎಷ್ಟು ಬಾರಿ ತೈಲ ಬೆಲೆ ಏರಿಕೆ ಮಾಡಿತ್ತು ಎಂದು ಅವರು ಯೋಚನೆ ಮಾಡಬೇಕು. ಬಿಜೆಪಿ 14 ಬಾರಿ ಬೆಲೆ ಏರಿಕೆ ಮಾಡಿತ್ತು. ಪಕ್ಕದ ರಾಜ್ಯಗಳಿಗೆ ಹೊಲಿಕೆ ಮಾಡಿದ್ರೆ, ಈಗಲೂ ಕರ್ನಾಟಕದಲ್ಲಿ ಬೆಲೆ ಕಡಿಮೆಯೇ ಇದೆ. ಬೇರೆ ರಾಜ್ಯದಲ್ಲಿ ಬೆಲೆ ಇನ್ನೂ ಹೆಚ್ಚಿದೆ. ಗ್ಯಾರಂಟಿಯಿಂದಾಗಿ ಬೆಲೆ ಏರಿಕೆ ಮಾಡಿಲ್ಲ. ಸಮಯಕ್ಕೆ ತಕ್ಕನಾಗಿ ಬೆಲೆ ಏರಿಕೆ ಮಾಡಬೇಕಿದೆ ಎಂದಿದ್ದಾರೆ. ಇದನ್ನೂ ಓದಿ: ದರ್ಶನ್ ಕೇಸ್‍ನಲ್ಲಿ ಯಾವುದೇ ಮೃದು ಧೋರಣೆ ಇಲ್ಲ: ಪರಮೇಶ್ವರ್

    ನಮ್ಮ ರಾಜ್ಯದಲ್ಲಿ ಸಂಪನ್ಮೂಲಗಳ ಕ್ರೂಢೀಕರಣ ಆಗಬೇಕಿದೆ. ಅದಕ್ಕಾಗಿ ಬೆಲೆ ಏರಿಕೆ ಮಾಡಲಾಗಿದೆ. ಗ್ಯಾರಂಟಿಗೊಸ್ಕರ ಬೆಲೆ ಏರಿಕೆ ಮಾಡಿದ್ದಾರೆ ಎಂದು ಹೇಳುವುದು ಸರಿಯಲ್ಲ. ನಾವು ಇಷ್ಟ ಬಂದ ಹಾಗೆ ತೈಲ ಬೆಲೆ ಏರಿಸಿಲ್ಲ. ಅಭಿವೃದ್ಧಿ ಮಾಡಲು ಹೆಚ್ಚು ಹಣ ಬೇಕು. ಅದಕ್ಕಾಗಿ ಮಾತ್ರ ಬೆಲೆ ಏರಿಕೆ ಮಾಡಿದ್ದೇವೆ ಎಂದಿದ್ದಾರೆ.

    ಇವತ್ತು ನಾನು ಒಂದು ಮಾತು ಹೇಳಿದ್ರೆ, ಶಾಶ್ವತವಾಗಿ ಅದೇ ಮಾತು ಉಳಿದು ಹೋಗುತ್ತಾ? ಸಮಯಕ್ಕೆ ತಕ್ಕನಾಗಿ ಮಾತುಗಳು ಬದಲಾಗುತ್ತವೆ. ನಾವು ಸಹ ಆಡಳಿತ ಮಾಡಬೇಕಲ್ವಾ? ಎಂದು ಅವರು ವಿಪಕ್ಷಗಳಿಗೆ ತಿರುಗೇಟು ಕೊಟ್ಟಿದ್ದಾರೆ. ಇದನ್ನೂ ಓದಿ: ರಾಜಧಾನಿಗೆ ಅಮರಾವತಿಯನ್ನೇ ಚಂದ್ರಬಾಬು ನಾಯ್ಡು ಆಯ್ದುಕೊಂಡಿದ್ದು ಏಕೆ..?

  • ತೈಲ ಬೆಲೆ ಹೆಚ್ಚಾಗಿದ್ದಕ್ಕೆ ಪ್ರತಿಪಕ್ಷಗಳು ಕೇಂದ್ರದ ವಿರುದ್ಧ ಪ್ರತಿಭಟನೆ ಮಾಡ್ಬೇಕು: ಸಿಎಂ

    ತೈಲ ಬೆಲೆ ಹೆಚ್ಚಾಗಿದ್ದಕ್ಕೆ ಪ್ರತಿಪಕ್ಷಗಳು ಕೇಂದ್ರದ ವಿರುದ್ಧ ಪ್ರತಿಭಟನೆ ಮಾಡ್ಬೇಕು: ಸಿಎಂ

    ಬೆಂಗಳೂರು: ಪೆಟ್ರೋಲ್ ಹಾಗೂ ಡೀಸೆಲ್ ದರ ಹೆಚ್ಚಳ (Petrol price hike) ಮಾಡಿದ್ದಕ್ಕೆ ಬಿಜೆಪಿ (BJP) ಹಾಗೂ ಜೆಡಿಎಸ್‍ನವರು (JDS) ನಮ್ಮ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡುತ್ತಿದ್ದಾರೆ. ಅವರು ಪ್ರತಿಭಟನೆ ಮಾಡಬೇಕಾಗಿರುವುದು ಕೇಂದ್ರ ಸರ್ಕಾರದ ವಿರುದ್ಧ ಎಂದು ಸಿಎಂ ಸಿದ್ದರಾಮಯ್ಯ (CM Siddaramaiah) ಪ್ರತಿಪಕ್ಷಗಳಿಗೆ ತಿರುಗೇಟು ಕೊಟ್ಟಿದ್ದಾರೆ.

    ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನರೇಂದ್ರ ಮೋದಿಯವರು ಗುಜರಾತ್ ಸಿಎಂ ಆಗಿದ್ದಾಗ ಬೆಲೆ ಏರಿಕೆ ಬಗ್ಗೆ ಕೇಂದ್ರದ ಮೇಲೆ ಹೇಳಿಕೆ ಕೊಟ್ಟಿದ್ದರು. ನಾನು ಪ್ರಧಾನಿ ಆದ್ಮೇಲೆ ಪೆಟ್ರೋಲ್, ಡಿಸೇಲ್ ಬೆಲೆ ಇಳಿಸ್ತೀವಿ ಎಂದಿದ್ದರು. ಅದಕ್ಕೆ ವಿರುದ್ಧವಾಗಿ ಈಗ ಕೆಲಸ ಮಾಡುತ್ತಿದ್ದಾರೆ. ನರೇಂದ್ರ ಮೋದಿ ಪ್ರಧಾನಿ ಆದಾಗ ಪೆಟ್ರೋಲ್ ಬೆಲೆ 72.26 ರೂ. ಇತ್ತು, ಜೂನ್ 2024ರಲ್ಲಿ 104 ರೂ.ಪಾಯಿ ಆಗಿತ್ತು, ಡೀಸೆಲ್ ಬೆಲೆ 57 ರೂ. ಇತ್ತು, ಈಗ 98 ರೂ.ಆಗಿದೆ. ಈಗ ಹೇಳಿ, ಬೆಲೆ ಹೆಚ್ಚು ಮಾಡಿದ್ದು ಯಾರು ಎಂದು ಅವರು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ದುರಹಂಕಾರ ಬಿಟ್ಟು ಜನಪರ ಆಡಳಿತ ನೀಡಿ- ಸಿಎಂ ವಿರುದ್ಧ ಸುನೀಲ್ ಕುಮಾರ್ ವಾಗ್ದಾಳಿ

    ಮನಮೋಹನ್ ಸಿಂಗ್ ಅವರ ಕಾಲದಲ್ಲಿ ಕಚ್ಚಾ ತೈಲ ಬೆಲೆ 113 ಡಾಲರ್ ಇತ್ತು, ಈಗ 82.35 ಡಾಲರ್ ಇದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಇಳಿಕೆ ಆದರೆ ದೇಶದಲ್ಲೂ ಬೆಲೆ ಇಳಿಸಬೇಕು ಅಲ್ವಾ? ಈಗ ಬಿಜೆಪಿಯವರು ಯಾರ ವಿರುದ್ಧ ಪ್ರತಿಭಟಿಸಬೇಕು? ಕೇಂದ್ರ ಸರ್ಕಾರದ ಮೇಲೆ ಅಲ್ವಾ ಎಂದು ಅವರು ಪ್ರಶ್ನಿಸಿದ್ದಾರೆ.

    ಕೇಂದ್ರ ಸರ್ಕಾರ ಜಿಎಸ್‍ಟಿ ತಂದಮೇಲೆ ಹೆಚ್ಚಿನ ತೆರಿಗೆ ವಿಧಿಸುವ ಅಧಿಕಾರ ಇಲ್ಲ. ಪೆಟ್ರೋಲ್ ಹಾಗೂ ಡಿಸೇಲ್ ಮೇಲಿನ ಸೆಸ್ ವಿಧಿಸುವ ಅಧಿಕಾರ, ಅಬಕಾರಿ ಸುಂಕ, ಸ್ಟ್ಯಾಂಪ್ ಡ್ಯೂಟಿ ವಿಧಿಸುವ ಅಧಿಕಾರ ಮಾತ್ರ ರಾಜ್ಯ ಸರ್ಕಾರಕ್ಕೆ ಇದೆ. ಉಳಿದೆಲ್ಲ ತೆರಿಗೆಯನ್ನು ಅವರೇ ವಿಧಿಸ್ತಾರೆ ಎಂದು ಅವರು ಸ್ಪಷ್ಟನೆ ನೀಡಿದ್ದಾರೆ.

    ಕರ್ನಾಟಕ ಸರ್ಕಾರ ಪಾಪರ್ ಆಗಿದೆ ಎಂಬ ವಿಪಕ್ಷ ನಾಯಕ ಆರ್.ಅಶೋಕ್ (R.Ashok) ಹೇಳಿಕೆ ವಿಚಾರವಾಗಿ, ಪಾಪರ್ ಎಂದು ಘೋಷಿಸಿದ್ದು ಯಾರು? ಪಾಪರ್ ಅಂದ್ರೆ ಅರ್ಥ ಗೊತ್ತಾ ಅಶೋಕನಿಗೆ? ನಾವು ಯಾರಿಗಾದರೂ ವೇತನ ಕೊಡೋದು ನಿಲ್ಲಿಸಿದ್ದೇವಾ? ಎಂದು ಅವರು ಏಕವಚನದಲ್ಲೇ ವಾಗ್ದಾಳಿ ನಡೆಸಿದ್ದಾರೆ.

    ಇನ್ನೂ ಕೇಂದ್ರದ ವಿಶೇಷ ಅನುದಾನದ ವಿಚಾರವಾಗಿ, 5,495 ಕೋಟಿ ರೂ. ತೆರಿಗೆ ಪಾಲು ಕಡಿಮೆಯಾಗಿದೆ. ವಿಶೇಷ ಅನುದಾನ ಘೋಷಣೆ ಮಾಡಿ ರಾಜ್ಯಕ್ಕೆ ಹಣ ಕೊಡಲಿಲ್ಲ. ನಿರ್ಮಲಾ ಸೀತಾರಾಮನ್ ಈ ಬಗ್ಗೆ ಏನು ಕ್ರಮ ತೆಗೆದುಕೊಂಡಿಲ್ಲ. ಭದ್ರಾ ಮೇಲ್ದಂಡೆ, ಬೆಂಗಳೂರು ಪೆರಿಫಿರಲ್ ರಿಂಗ್ ರೋಡ್‍ಗಳ ಯೋಜನೆಗೆ ವಿಶೇಷ ಅನುದಾನ ನೀಡಿಲ್ಲ. ಇವರು ಯಾರ ಬಗ್ಗೆ ಪ್ರತಿಭಟನೆ ಮಾಡಬೇಕು ಎಂದು ಅವರು ಕಿಡಿಕಾರಿದ್ದಾರೆ. ಇದನ್ನೂ ಓದಿ: ಸ್ಪೀಕರ್‌ ಹುದ್ದೆ ಬಿಜೆಪಿಗೆ, ಡೆಪ್ಯೂಟಿ ಸ್ಪೀಕರ್‌ ಹುದ್ದೆ ಎನ್‌ಡಿಎ ಮಿತ್ರ ಪಕ್ಷಕ್ಕೆ?

  • ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಹೆಚ್‌ಡಿಕೆ

    ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಹೆಚ್‌ಡಿಕೆ

    ಬೆಂಗಳೂರು: ಸಂಸತ್ ಸದಸ್ಯರಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ ಚನ್ನಪಟ್ಟಣ (Channapatna) ವಿಧಾನಸಭೆ ಕ್ಷೇತ್ರದ ಶಾಸಕ ಸ್ಥಾನಕ್ಕೆ ಹೆಚ್‌ಡಿ ಕುಮಾರಸ್ವಾಮಿ (HD Kumaraswamy) ರಾಜೀನಾಮೆ ನೀಡಿದ್ದಾರೆ.

    ಇಂದು ಬೆಳಗ್ಗೆ ಸ್ಪೀಕರ್ ಯಟಿ ಖಾದರ್ (UT Khader) ಕೊಠಡಿಗೆ ಆಗಮಿಸಿದ ಕುಮಾರಸ್ವಾಮಿ ಅವರು ರಾಜೀನಾಮೆ ಸಲ್ಲಿಸಿದರು. ರಾಜೀನಾಮೆ ಸಲ್ಲಿಸುವ ವೇಳೆ ಜಿಟಿ ದೇವೇಗೌಡ, ಭೋಜೇಗೌಡರು ಉಪಸ್ಥಿತರಿದ್ದರು. ಇದನ್ನೂ ಓದಿ: G7 Group Photo | ಮಧ್ಯದಲ್ಲಿ ನಿಂತ ಭಾರತ: ಮೋದಿ ಹೇಳಿದ್ದೇನು?

     

    ಲೋಕಸಭಾ ಚುನಾವಣೆಯಲ್ಲಿ (Lok Sabha Election) ಮಂಡ್ಯದಿಂದ (Mandya) ಗೆದ್ದ ಕುಮಾರಸ್ವಾಮಿ ಮೋದಿ ಸಂಪುಟದಲ್ಲಿ ಬೃಹತ್‌ ಕೈಗಾರಿಕೆ ಮತ್ತು ಉಕ್ಕು ಖಾತೆಯ ಸಚಿವರಾಗಿ ನೇಮಕವಾಗಿದ್ದಾರೆ. ಇದನ್ನೂ ಓದಿ: ಫ್ಯಾನ್ಸ್ ಬಳಸಿಕೊಂಡು ಕೊಲೆ ಮಾಡುವುದು ಎಷ್ಟು ಸರಿ? – ದರ್ಶನ್ ಕೃತ್ಯ ಖಂಡಿಸಿದ ರಮ್ಯಾ

    ಇಂದು ರಾಜೀನಾಮೆ ನೀಡುವ ಮೊದಲು ಬೆಳಗ್ಗೆ ಕುಮಾರಸ್ವಾಮಿ ತಿರುಪತಿಗೆ ತೆರಳಿ ತಿಮ್ಮಪ್ಪನ ದರ್ಶನ ಪಡೆದಿದ್ದರು. ಈ ವೇಳೆ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ನನಗೆ ದೊಡ್ಡ ಜವಾಬ್ದಾರಿ ನೀಡಿದ್ದಾರೆ. ಕೇಂದ್ರ ಸರ್ಕಾರದ ಸಚಿವನಾಗಿ ನನ್ನ ಕೆಲಸ ಯಶಸ್ವಿಯಾಗಲು ವೆಂಕಟೇಶ್ವರನ ಆಶೀರ್ವಾದ ಪಡೆಯಲು ನಾನು ಬಂದಿದ್ದೇನೆ  ಎಂದು ಹೇಳಿದ್ದರು.

     

  • ನನ್ನನ್ನೂ ಜೈಲಿಗೆ ಕಳಿಸುವ ಪ್ರಯತ್ನ ನಡೆಯುತ್ತಿದೆ – ಕೇಂದ್ರ ಸಚಿವ ಹೆಚ್‌ಡಿಕೆ ಕಳವಳ

    ನನ್ನನ್ನೂ ಜೈಲಿಗೆ ಕಳಿಸುವ ಪ್ರಯತ್ನ ನಡೆಯುತ್ತಿದೆ – ಕೇಂದ್ರ ಸಚಿವ ಹೆಚ್‌ಡಿಕೆ ಕಳವಳ

    – ಪೊಲೀಸ್ ಅಧಿಕಾರಿಗಳೇ ಹಣದ ವ್ಯಾಮೋಹಕ್ಕೆ ಬಲಿಯಾಗಿದ್ದಾರೆ ಎಂದು ಆರೋಪ
    – ದರ್ಶನ್‌ ಕೇಸ್‌ – ಇದೊಂದು ಘಟನೆ ಬಗ್ಗೆ ಯಾಕೆ ಮಾತಾಡ್ಬೇಕು? ಎಂದ ಹೆಚ್‌ಡಿಕೆ

    ಬೆಂಗಳೂರು: ಕೇಂದ್ರ ಸಚಿವರಾಗಿ ರಾಜ್ಯಕ್ಕೆ ಮೊದಲ ಬಾರಿಗೆ ಭೇಟಿ ನೀಡಿದ ಹೆಚ್.ಡಿ ಕುಮಾರಸ್ವಾಮಿ (HD Kumaraswamy) ಅವರಿಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ (Thawar Chand Gehlot) ಅವರನ್ನು ಭೇಟಿಯಾದರು. ಬೆಂಗಳೂರಿನ ರಾಜಭವನದಲ್ಲಿ ಸೌಹಾರ್ದಯುತ ಭೇಟಿಯಾಗಿ ಮಾತುಕತೆ ನಡೆಸಿದರು. ಇದೇ ವೇಳೆ ಚನ್ನಪಟ್ಟಣ ಶಾಸಕ ಸ್ಥಾನಕ್ಕೆ ಶುಕ್ರವಾರ ರಾಜೀನಾಮೆ ನೀಡುವುದಾಗಿಯೂ ಅವರು ತಿಳಿಸಿದರು.

    ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೇಂದ್ರದಲ್ಲಿ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬಂದ ದಿನದಿಂದ ನನ್ನ ವಿರುದ್ಧ ಏನೇನು ನಡೆಯುತ್ತಿದೆ ಅನ್ನೋದು ಗೊತ್ತಿದೆ. ನಾನು ಕೇಂದ್ರ ಮಂತ್ರಿ (Central Minister) ಆಗಿರೋದು ಅವರಿಗೆ ಅರಗಿಸಿಕೊಳ್ಳಲು ಆಗುತ್ತಿಲ್ಲ. ಅದಕ್ಕಾಗಿ ನನ್ನನ್ನು ಜೈಲಿಗೆ ಹಾಕಿಸಬೇಕು ಅಂತ ಕಷ್ಟಪಡುತ್ತಿದ್ದಾರೆ. ಸರ್ಕಾರದವರು ಬಿಡದಿ ಜಮೀನು ದಾಖಲೆ ಹುಡುಕುತ್ತಿದ್ದಾರೆ. ಇದರಲ್ಲಿ ಎಲ್ಲರೂ ಸೇರಿಕೊಂಡಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ರೇಣುಕಾಸ್ವಾಮಿ ಹತ್ಯೆ ಕೇಸ್‌: ಕಣ್ಣೆದುರೇ ಮಗ ಅರೆಸ್ಟ್‌ – ಮನನೊಂದ ತಂದೆ ಹೃದಯಾಘಾತದಿಂದ ಸಾವು!

    ದರ್ಶನ್‌ ಒಂದು ಘಟನೆ ಯಾಕೆ ಮಾತಾಡಬೇಕು?:
    ಇದೇ ವೇಳೆ ದರ್ಶನ್ ಪ್ರಕರಣದ ಕುರಿತು ಪ್ರತಿಕ್ರಿಯಿಸಿ, ದರ್ಶನ್ ಪ್ರಕರಣದ ಬಗ್ಗೆ ನಾನು ಚರ್ಚೆ ಮಾಡಲ್ಲ. ಇವತ್ತು ಆ ರೀತಿಯ ಘಟನೆಗಳು ರಾಜ್ಯದಲ್ಲಿ ನಡೆಯುತ್ತಲೇ ಇವೆ. ದರ್ಶನ್ ಘಟನೆ ಒಂದು ಭಾಗ ಅಷ್ಟೇ. ಈ ಸರ್ಕಾರ ಬಂದ ನಂತರ ಪ್ರತಿದಿನ ಮಾನುಷ್ಯನ ಜೀವನದ ಬಗ್ಗೆ, ಜೀವ ತೆಗೆಯೋದ್ರಲ್ಲಿ ಭಯ ಭಕ್ತಿ ಹೊರಟು ಹೋಗಿದೆ. ಅದಕ್ಕೆ ಕಾರಣ ಈ ಸರ್ಕಾರದ ಆಡಳಿತ. ಒಂದು ಘಟನೆಯನ್ನು ಯಾಕೆ ಮಾತಾಡಬೇಕು? ಎಂದು ಪ್ರಶ್ನೆ ಮಾಡಿದ್ದಾರೆ. ಇದನ್ನೂ ಓದಿ: ದೆಹಲಿಯ ಯಮುನಾ ಬಳಿಯ ಪ್ರಾಚೀನ ಶಿವಮಂದಿರ ಕೆಡವಲು ನೀಡಿದ ಆದೇಶ ಎತ್ತಿಹಿಡಿದ ಸುಪ್ರೀಂ

    ಪೊಲೀಸರೇ ಹಣದ ವ್ಯಾಮೋಹಕ್ಕೆ ಬಲಿಯಾಗಿದ್ದಾರೆ:
    ವೈಯಕ್ತಿಕ ಕಾರಣದಿಂದ ಕೊಲೆ ಮಾಡುವುದು ರಾಜ್ಯದಲ್ಲಿ ಎಷ್ಟು ಸುಲಭವಾಗಿದೆ. ಇದಕ್ಕೆಲ್ಲ ರಾಜ್ಯ ಸರ್ಕಾರದ ನಡೆಯೇ ಕಾರಣ. ಪೊಲೀಸ್ ಅಧಿಕಾರಿಗಳೇ ಹಣದ ವ್ಯಾಮೋಹಕ್ಕೆ ಬಲಿಯಾಗಿದ್ದಾರೆ. ಬರುವಾಗ ಕೊಟ್ಟು ಬಂದಿದ್ದನ್ನ ಸಂಪಾದನೆ ಮಾಡೋದಕ್ಕೆ ಹೀಗೆ ಮಾಡ್ತಿದ್ದಾರೆ. ಆಡಳಿತ ಸಂಪೂರ್ಣ ಕುಸಿದಿದೆ. ಶಾಮಿಯಾನ ಹಾಕೋ ಘಟನೆ ಇತಿಹಾದಲ್ಲಿ ಆಗಿರಲಿಲ್ಲ. ಯಥಾ ರಾಜಾ ತಥಾ ಪ್ರಜೆ ರೀತಿ ಈ ಸರ್ಕಾರದ ನಡವಳಿಕೆ ಆಗಿದೆ. ಈ ಸರ್ಕಾರಕ್ಕೆ ಏನಾದ್ರು ಕಿಂಚಿತ್ತೂ ಗೌರವ ಇದ್ದರೆ ಆಡಳಿತದಲ್ಲಿ ಸರಿಪಡಿಸಿಕೊಳ್ಳಲಿ ಎಂದು ತಿವಿದಿದ್ದಾರೆ.

    ಬಿಎಸ್‌ವೈ ಪ್ರಕರಣದ ಕುರಿತು ಮಾತನಾಡಿ, ಸರ್ಕಾರ 4 ತಿಂಗಳ ನಡವಳಿಕೆ ಅನುಮಾನ ಇದೆ. ರಾಜ್ಯದ ಜನರೇ ಅನುಮಾನ ಪಡ್ತಿದ್ದಾರೆ. ಕಾನೂನು ಅರಿವು ಇರೋರು ಬಹಳ ಜನ ಈ ರಾಜ್ಯದಲ್ಲಿ ಇದ್ದಾರೆ. ಸಿಎಂ ಕೂಡ ವಕೀಲರಿದ್ದಾರೆ. ಆದರೂ ದ್ವೇಷದ ರಾಜಕೀಯ ಮಾಡ್ತಿದ್ದಾರೆ. ಇವರಿಗೆ ಯಾವ ನೈತಿಕ ಇದೆ ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಮನೆಯ ಮೇಲೆ ಗುಂಡಿನ ದಾಳಿ- ಸಲ್ಮಾನ್ ಹೇಳಿಕೆ ದಾಖಲಿಸಿಕೊಂಡ ಮುಂಬೈ ಪೊಲೀಸರು

  • ಕಳ್ಳಕಾಕರಿಗೆ ಸಿಎಂ ಚಿನ್ನದ ಪದಕ ಭಾಗ್ಯ – ಜೆಡಿಎಸ್ ತೀವ್ರ ವಾಗ್ದಾಳಿ

    ಕಳ್ಳಕಾಕರಿಗೆ ಸಿಎಂ ಚಿನ್ನದ ಪದಕ ಭಾಗ್ಯ – ಜೆಡಿಎಸ್ ತೀವ್ರ ವಾಗ್ದಾಳಿ

    ಬೆಂಗಳೂರು: ಕಾಂಗ್ರೆಸ್ (Congress) ಸರ್ಕಾರ ನಿಷ್ಠಾವಂತ ಅಧಿಕಾರಿಗಳಿಗೆ ಕಿರುಕುಳ ಹಾಗೂ ವರ್ಗಾವಣೆ ಭಾಗ್ಯ ನೀಡಿ, ಕಳ್ಳಕಾಕರಿಗೆ ಮುಖ್ಯಮಂತ್ರಿಗಳ ಚಿನ್ನದ ಪದಕದ ಭಾಗ್ಯ ನೀಡುತ್ತಿದೆ ಎಂದು ಜೆಡಿಎಸ್ (JDS) ಗಂಭೀರ ಆರೋಪ ಮಾಡಿದೆ.

    ಎಕ್ಸ್‌ನಲ್ಲಿ ಈ ಬಗ್ಗೆ ಪ್ರತಿಕ್ರಿಯಿಸಿರುವ ಜೆಡಿಎಸ್, ಸುರಪುರ ಉಪ ವಿಭಾಗದ ಡಿವೈಎಸ್ಪಿ ಜಾವೀದ್ ಇನಾಂದಾರ್ ಹೆಸರನ್ನು 2023ನೇ ಸಾಲಿನ ಮುಖ್ಯಮಂತ್ರಿಗಳ ಚಿನ್ನದ ಪದಕಕ್ಕೆ ಶಿಫಾರಸ್ಸು ಮಾಡಿರುವ ವಿಚಾರಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಜಾವೀದ್ ವಿರುದ್ಧ ತೀವ್ರ ಆರೋಪಗಳಿವೆ. ಆದರೂ ಅವರನ್ನು ಚಿನ್ನದ ಪದಕಕ್ಕೆ ಆಯ್ಕೆ ಮಾಡಲಾಗಿದೆ ಎಂದು ಜೆಡಿಎಸ್ ಆರೋಪಿಸಿದೆ. ಇದನ್ನೂ ಓದಿ: ದೆಹಲಿಯ ಯಮುನಾ ಬಳಿಯ ಪ್ರಾಚೀನ ಶಿವಮಂದಿರ ಕೆಡವಲು ನೀಡಿದ ಆದೇಶ ಎತ್ತಿಹಿಡಿದ ಸುಪ್ರೀಂ

    ಪೊಲೀಸ್ ಇಲಾಖೆ (Police Department) ಜಪ್ತಿ ಮಾಡಿದ್ದ 4.9 ಕೆಜಿ ಚಿನ್ನವನ್ನು ಕಳವು ಮಾಡಿರುವ ಆರೋಪಿಗೆ ಮುಖ್ಯಮಂತ್ರಿಗಳ ಚಿನ್ನದ ಪದಕ ಕೊಡಲು ಸರ್ಕಾರ ಮುಂದಾಗಿದೆ. ಅಲ್ಲದೇ ಈತನ ವಿರುದ್ಧ ಈಗಾಗಲೇ ಪಡಿತರ ಅಕ್ಕಿ ಕಳ್ಳತನ ಸೇರಿದಂತೆ ಅನೇಕ ಆರೋಪಗಳಿವೆ. ಅಂಥವರಿಗೆ ಚಿನ್ನದ ಪದಕ ನೀಡಿ, ನಿಷ್ಠಾವಂತರಿಗೆ ಕಿರುಕುಳ ಹಾಗೂ ವರ್ಗಾವಣೆ ಭಾಗ್ಯ ನೀಡುತ್ತಿದೆ ಎಂದು ಟೀಕಿಸಿದೆ.

    ಮುಖ್ಯಮಂತ್ರಿಗಳ ಚಿನ್ನದ ಪದಕ ಕೊಡಲು ಮುಂದಾಗಿರುವುದು ನೋಡಿದರೆ, ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಪದಕಗಳೂ ಮಾರಾಟಕ್ಕೆ ಇದೆಯೇ? ಎಂಬ ಅನುಮಾನ ಮೂಡುತ್ತಿದೆ ಎಂದು ಜೆಡಿಎಸ್ ಕುಟುಕಿದೆ. ಈ ವಿಚಾರವಾಗಿ ಗುರುಮಿಠಕಲ್ ಶಾಸಕ ಶ್ರೀ ಶರಣಗೌಡ ಕಂದಕೂರು ಅವರು ಸರ್ಕಾರಕ್ಕೆ ಪತ್ರ ಬರೆದು, ತನಿಖೆ ನಡೆಸಲು ಆಗ್ರಹಿಸಿದ್ದಾರೆ ಎಂದು ಟ್ವೀಟ್‍ನಲ್ಲಿ ಉಲ್ಲೇಖಿಸಲಾಗಿದೆ. ಇದನ್ನೂ ಓದಿ: ಜಮ್ಮು-ಕಾಶ್ಮೀರದಲ್ಲಿ ನಡೆದ ಉಗ್ರರ ದಾಳಿ ಹಿಂದೆ ಪಾಕ್‌ ಕೈವಾಡ – ರಹಸ್ಯ ಬಯಲು!

  • ಕೇಂದ್ರ ಸಚಿವರಾಗಿ ಬಂದ ಕುಮಾರಸ್ವಾಮಿಗೆ ಏರ್ಪೋರ್ಟ್ ಬಳಿ ಅದ್ದೂರಿ ಸ್ವಾಗತ

    ಕೇಂದ್ರ ಸಚಿವರಾಗಿ ಬಂದ ಕುಮಾರಸ್ವಾಮಿಗೆ ಏರ್ಪೋರ್ಟ್ ಬಳಿ ಅದ್ದೂರಿ ಸ್ವಾಗತ

    ಚಿಕ್ಕಬಳ್ಳಾಪುರ: ಕೇಂದ್ರ ಸಚಿವರಾಗಿ ರಾಜ್ಯಕ್ಕೆ ಮರಳಿದ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ (H.D.Kumaraswamy) ಅವರಿಗೆ ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ (Bengaluru Airport) ಬಳಿ ಅದ್ದೂರಿ ಸ್ವಾಗತ ಕೋರಲಾಯಿತು.

    ವಿಮಾನ ನಿಲ್ದಾಣದ ಬಿವಿಐಪಿ ಲಾಂಚ್‌ನಿಂದ ಕುಮಾರಸ್ವಾಮಿ ಬರುತ್ತಿದ್ದಂತೆ ಜೆಡಿಎಸ್ ನಾಯಕರು ಹಾಗೂ ಕಾರ್ಯಕರ್ತರು ಕೇಂದ್ರ ಸಚಿವರನ್ನು ಬರಮಾಡಿಕೊಳ್ಳಲು ಮುಗಿಬಿದ್ದರು. ಹೂ ಮಾಲೆ ಹಾಕಿ, ಪುಷ್ಪ ಗುಚ್ಛ ನೀಡಿ ಕುಮಾರಸ್ವಾಮಿ ಅವರನ್ನು ಬರಮಾಡಿಕೊಂಡರು. ಈ ವೇಳೆ ಸ್ಥಳದಲ್ಲಿ ತಳ್ಳಾಟ ನೂಕಾಟವಾಯಿತು. ಇದನ್ನೂ ಓದಿ: ರಕ್ಷಣೆಗಾಗಿ ಪೊಲೀಸ್ ಠಾಣೆಗೆ ಶಾಮಿಯಾನ ಹಾಕಿಸಿಕೊಂಡಿದ್ದಾರೆ: ಡಿಕೆಶಿ

    ಸಿಐಎಸ್ಎಫ್ ಏರ್ಪೋರ್ಟ್ ಭದ್ರತಾ ಸಿಬ್ಬಂದಿ ಜೆಡಿಎಸ್ ಕಾರ್ಯಕರ್ತರನ್ನ ಚದುರಿಸಿದರು. ನಂತರ ಬೆಂಗಳೂರಿನತ್ತ ಹೊರಟ ಕುಮಾರಸ್ವಾಮಿ ಅವರಿಗೆ ವಿಮಾನ ನಿಲ್ದಾಣದ ಸಾದಹಳ್ಳಿ ಟೋಲ್ ಬಳಿ ಸಾವಿರಾರು ಮಂದಿ ಜೆಡಿಎಸ್ ಕಾರ್ಯಕರ್ತರು ಸಡಗರ ಸಂಭ್ರಮದಿಂದ ಅದ್ದೂರಿಯಾಗಿ ಸ್ವಾಗತ ಕೋರಿದರು.

    ಜೆಸಿಬಿ ಹಾಗೂ ಕ್ರೇನ್‌ಗಳ ಮೂಲಕ ಬೃಹತ್ ಸೇಬಿನ ಹಾರ ಹೂಮಾಲೆ ಹಾಕಿ ನಾಯಕನನ್ನು ಸ್ವಾಗತಿಸಿದರು. ಇದನ್ನೂ ಓದಿ: ಚುನಾವಣೆ ಸೋಲು ಅರಗಿಸಿಕೊಳ್ಳಲಾಗದೇ ಬಿಎಸ್‌ವೈ ಮೇಲೆ ರಾಜಕೀಯ ವೈಷಮ್ಯ: ಜೋಶಿ ಆಕ್ರೋಶ

  • ಹಾಸನ ಸೋಲು ಅನಿರೀಕ್ಷಿತ – ಮತ್ತೆ ಪಕ್ಷ ಸಂಘಟನೆ ಮಾಡ್ತೀವಿ: ನಿಖಿಲ್

    ಹಾಸನ ಸೋಲು ಅನಿರೀಕ್ಷಿತ – ಮತ್ತೆ ಪಕ್ಷ ಸಂಘಟನೆ ಮಾಡ್ತೀವಿ: ನಿಖಿಲ್

    ಬೆಂಗಳೂರು: ಹಾಸನ ಲೋಕಸಭೆ ಫಲಿತಾಂಶ (Hassan Lok Sabha Result) ಅನಿರೀಕ್ಷಿತ ಬೆಳವಣಿಗೆ. ಹಾಸನದಲ್ಲಿ ಮತ್ತೆ ಪಕ್ಷ ಕಟ್ಟುವ ಕೆಲಸ ಮಾಡುತ್ತೇವೆ ಎಂದು ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ (Nikhil Kumaraswamy) ತಿಳಿಸಿದ್ದಾರೆ.

    ಹಾಸನ ಸೋಲಿಗೆ ಪ್ರತಿಕ್ರಿಯೆ ನೀಡಿದ ಅವರು, ಹಾಸನದ ಬೆಳವಣಿಗೆ ಅನಿರೀಕ್ಷಿತ. ಇಂತಹ ಫಲಿತಾಂಶ ನಿರೀಕ್ಷೆ ಮಾಡಿರಲಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆ, ಚುನಾವಣೆಯಲ್ಲಿ ಗೆಲುವು, ಸೋಲು ಸಾಮಾನ್ಯ. ದೇವೇಗೌಡರು ಸೋತಿರೋ ಇತಿಹಾಸ ಇದೆ. ಸೋತಿದ್ದಾರೆ ಅಂತ ಬೇಸರ ಮಾಡಿಕೊಂಡು ಮನೆಯಲ್ಲಿ ಕೂರೋದಿಲ್ಲ. ಸಾವಿರಾರು ಕಾರ್ಯಕರ್ತರು ಹಾಸನದಲ್ಲಿ ಇದ್ದಾರೆ. ಅವರಿಗಾಗಿ ನಾವು ಅವರ ಜೊತೆ ಇದ್ದೇವೆ. ಮತ್ತೆ ಪಕ್ಷ ಕಟ್ಟುವ ಕೆಲಸ ಹಾಸನದಲ್ಲಿ ಮಾಡುತ್ತೇವೆ ಎಂದರು. ಇದನ್ನೂ ಓದಿ: ಅಗತ್ಯ ಬಿದ್ದರೆ ಬಿಎಸ್‍ವೈ ಅರೆಸ್ಟ್: ಪರಮೇಶ್ವರ್

    ಹಾಸನ ಸೋಲಿಗೆ ಕಾರಣ ಪಕ್ಷದ ಚೌಕಟ್ಟಿನಲ್ಲಿ ಮಾತನಾಡುತ್ತೇವೆ. ಆತ್ಮ ವಿಮರ್ಶೆ ಮಾಡಿಕೊಳುತ್ತೇವೆ. ಪ್ರಜ್ವಲ್‌ರಿಂದ ಸೋಲಾಯಿತು ಎಂದು ನಾನು ಮಾತಾಡಲ್ಲ. ಟಿಕೆಟ್ ಕೊಟ್ಟಿದ್ರು. ಚುನಾವಣೆ ಆಗಿದೆ, ಸೋಲಾಯ್ತು. ಅದರ ಬಗ್ಗೆ ನಾನೇನು ಮಾತಾಡಲ್ಲ ಎಂದು ತಿಳಿಸಿದರು. ಇದನ್ನೂ ಓದಿ: ರೇಣುಕಾಸ್ವಾಮಿ ಕೊಲೆ ಕೇಸ್: ತಪ್ಪಿತಸ್ಥರಿಗೆ ಶಿಕ್ಷೆಯಾಗೋವರೆಗೂ ಪ್ರಾಮಾಣಿಕ ತನಿಖೆ ನಡೆಸಬೇಕು: ಬೊಮ್ಮಾಯಿ

  • ಮಂಡ್ಯದಲ್ಲಿ ಕೇಂದ್ರ ಸಚಿವ ಹೆಚ್‌ಡಿಕೆ ರಾಜೀನಾಮೆ ನೀಡ್ತಾರೆ, ಚನ್ನಪಟ್ಟಣ ಕ್ಷೇತ್ರ ಉಳಿಸಿಕೊಳ್ತಾರೆ: ಡಿ.ಕೆ‌.ಸುರೇಶ್

    ಮಂಡ್ಯದಲ್ಲಿ ಕೇಂದ್ರ ಸಚಿವ ಹೆಚ್‌ಡಿಕೆ ರಾಜೀನಾಮೆ ನೀಡ್ತಾರೆ, ಚನ್ನಪಟ್ಟಣ ಕ್ಷೇತ್ರ ಉಳಿಸಿಕೊಳ್ತಾರೆ: ಡಿ.ಕೆ‌.ಸುರೇಶ್

    ರಾಮನಗರ: ಮಂಡ್ಯದಲ್ಲಿ ಕೇಂದ್ರ ಸಚಿವ ಹೆಚ್‌.ಡಿ.ಕುಮಾರಸ್ವಾಮಿ (H.D.Kumaraswamy) ರಾಜೀನಾಮೆ ನೀಡುತ್ತಾರೆ. ಚನ್ನಪಟ್ಟಣ ಕ್ಷೇತ್ರವನ್ನ ಉಳಿಸಿಕೊಳ್ತಾರೆ ಎಂದು ಚನ್ನಪಟ್ಟಣದಲ್ಲಿ ಮಾಜಿ ಸಂಸದ ಡಿ.ಕೆ.ಸುರೇಶ್ (D.K.Suresh) ವ್ಯಂಗ್ಯವಾಡಿದ್ದಾರೆ.

    ಚನ್ನಪಟ್ಟಣ (Channapatna) ಕೃತಜ್ಞತಾ ಸಭೆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಚನ್ನಪಟ್ಟಣಕ್ಕೆ ಇನ್ನೂ ಉಪಚುನಾವಣೆ ಘೋಷಣೆ ಆಗಿಲ್ಲ. ಯಾಕಂದ್ರೆ ಹಾಲಿ ಶಾಸಕರು ಇನ್ನೂ ರಾಜೀನಾಮೆ ನೀಡಿಲ್ಲ. ನಮಗೆ ವಿಶ್ವಾಸ ಇದೆ. ಹೆಚ್‌ಡಿಕೆ ಯಾವುದೇ ಕಾರಣಕ್ಕೂ ಚನ್ನಪಟ್ಟಣ ಬಿಟ್ಟು ಹೋಗಲ್ಲ. ಅವರಿಗೆ ಅಧಿಕಾರಕ್ಕಿಂತ ಕ್ಷೇತ್ರದ ಜನ, ಕಾರ್ಯಕರ್ತರು ಮುಖ್ಯ ಎಂದು ಟಾಂಗ್‌ ಕೊಟ್ಟಿದ್ದಾರೆ. ಇದನ್ನೂ ಓದಿ: ಇನ್ಮುಂದೆ ಬೆಂಗ್ಳೂರಲ್ಲಿ ಬೆಳಗ್ಗೆ 5ರಿಂದ ರಾತ್ರಿ 10ರ ವರೆಗೆ ಪಾರ್ಕ್‍ಗಳು ಓಪನ್: ಡಿಕೆಶಿ

    ನಾನು ಸಾಕಷ್ಟು ಬಾರಿ ಅವರ ಮಾತುಗಳನ್ನ ಆಲಿಸಿದ್ದೇನೆ. ಚನ್ನಪಟ್ಟಣ, ರಾಮನಗರ ನನ್ನ ಎರಡು ಕಣ್ಣುಗಳು ಎಂದಿದ್ದರು. ಅಧಿಕಾರ ಇದ್ದಾಗ, ಇಲ್ಲದಿದ್ದಾಗ ಅವರ ಮಾತುಗಳನ್ನ ನೋಡಿದ್ದೇನೆ. ಅಲ್ಲದೇ ಅವರು ಹೃದಯವಂತರು ಕೂಡಾ. ಹಾಗಾಗಿ ಚನ್ನಪಟ್ಟಣ ಉಳಿಸಿಕೊಳ್ತಾರೆ ಎನ್ನುವ ವಿಶ್ವಾಸ ಇದೆ ಎಂದು ಲೇವಡಿ ಮಾಡಿದ್ದಾರೆ.

    ಚನ್ನಪಟ್ಟಣ ಸ್ಪರ್ಧೆಗೆ ಕಾರ್ಯಕರ್ತರ ಒತ್ತಾಯ ವಿಚಾರ ಕುರಿತು ಮಾತನಾಡಿ, ಅವರು ರಾಜೀನಾಮೆ ಕೊಟ್ಟಮೇಲೆ ತಾನೆ ಉಪಚುನಾವಣೆ ವಿಚಾರ. ನಾನು ಈಗಾಗಲೇ ಸೋತಿದ್ದೇನೆ. ಜನ ನನ್ನನ್ನ ತಿರಸ್ಕಾರ ಮಾಡಿದ್ದಾರೆ. ಅಭ್ಯರ್ಥಿ ಆಯ್ಕೆ ಬಗ್ಗೆ ಹೈಕಮಾಂಡ್ ಹಾಗೂ ರಾಜ್ಯ ನಾಯಕರು ತೀರ್ಮಾನ ಮಾಡ್ತಾರೆ. ಅಚ್ಚರಿ ಅಭ್ಯರ್ಥಿಯನ್ನ ಚನ್ನಪಟ್ಟಣಕ್ಕೆ ಕೊಡ್ತಾರೆ ಎಂದು ಡಿ.ಕೆ.ಸುರೇಶ್ ತಿಳಿಸಿದ್ದಾರೆ. ಇದನ್ನೂ ಓದಿ: ಗುರಿ ಸಾಧಿಸದೇ ಇದ್ರೆ ಶಿಸ್ತು ಕ್ರಮ – ವಾಣಿಜ್ಯ ಇಲಾಖೆ ಅಧಿಕಾರಿಗಳಿಗೆ ಸಿಎಂ ಖಡಕ್ ಎಚ್ಚರಿಕೆ

  • ಬರೋಬ್ಬರಿ 25 ವರ್ಷದ ಬಳಿಕ ಜೆಡಿಎಸ್‌ಗೆ ಕೇಂದ್ರದಲ್ಲಿ ಮಂತ್ರಿ ಸ್ಥಾನ!

    ಬರೋಬ್ಬರಿ 25 ವರ್ಷದ ಬಳಿಕ ಜೆಡಿಎಸ್‌ಗೆ ಕೇಂದ್ರದಲ್ಲಿ ಮಂತ್ರಿ ಸ್ಥಾನ!

    ಬೆಂಗಳೂರು:   ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರ ಮೂರನೇ ಅಧಿಕಾರ ಅವಧಿಯಲ್ಲಿ ಮಾಜಿ ಸಿಎಂ ಹೆಚ್‌ಡಿ ಕುಮಾರಸ್ವಾಮಿ (HD Kumaraswamy) ಅವರಿಗೆ ಕ್ಯಾಬಿನೆಟ್‌ ಮಂತ್ರಿಗಿರಿ (Cabinet Minister) ಸಿಕ್ಕಿದೆ. ಈ ಮೂಲಕ ಬರೋಬ್ಬರಿ 25 ವರ್ಷದ ಬಳಿಕ ಜೆಡಿಎಸ್‌ಗೆ (JDS) ಕೇಂದ್ರದಲ್ಲಿ ಮಂತ್ರಿಗಿರಿ ಒಲಿದಂತಾಗಿದೆ.

    ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷರಾಗಿದ್ದ ಅವಧಿಯಲ್ಲಿ 1996-97ರಲ್ಲಿ ದೇವೇಗೌಡರು (HD Devegowda) ಪ್ರಧಾನಿಯಾಗಿದ್ದರು. ಈ ಸಂದರ್ಭದಲ್ಲಿ ಕೆಲ ಕಾಲ ಗೃಹ ಖಾತೆಯನ್ನು ತಮ್ಮ ಬಳಿಯೇ ಇಟ್ಟುಕೊಂಡಿದ್ದರು.

    ದೇವೇಗೌಡರು (Devegowda)  ಪ್ರಧಾನಿಯಾಗಿದ್ದ ಸಮಯದಲ್ಲಿ ಅಂದು ಜೆಡಿಎಸ್‌ ನಾಯಕರಾಗಿದ್ದ ಎಸ್‌.ಆರ್‌. ಬೊಮ್ಮಾಯಿ ಮತ್ತು ಸಿಎಂ ಇಬ್ರಾಹಿಂ ಅವರಿಗೆ ಕೇಂದ್ರದಲ್ಲಿ ಮಂತ್ರಿ ಸ್ಥಾನ ಸಿಕ್ಕಿತ್ತು. ಆ ನಂತರ ಜೆಡಿಎಸ್‌ನಿಂದ ಸಂಸತ್‌ಗೆ ಆಯ್ಕೆ ಆಗುತ್ತಿದ್ದರೂ ಯಾರಿಗೂ ಮಂತ್ರಿ ಸ್ಥಾನ ಸಿಕ್ಕಿರಲಿಲ್ಲ.  ಇದನ್ನೂ ಓದಿ: ಬಿಜೆಪಿ ವಿಜಯೋತ್ಸವದ ಬಳಿಕ ದುಷ್ಕರ್ಮಿಗಳ ಅಟ್ಟಹಾಸ- ಇಬ್ಬರಿಗೆ ಚಾಕು ಇರಿತ

    2004, 2009ರ ಚುನಾವಣೆಯಲ್ಲಿ ಯುಪಿಎ (UPA)  ಸರ್ಕಾರ ಅಧಿಕಾರದಲ್ಲಿದ್ದರೆ 2014 ರಿಂದ 2024ರ ವರೆಗೆ ಎನ್‌ಡಿಎ (NDA) ಸರ್ಕಾರ ಕೇಂದ್ರದಲ್ಲಿ ಅಧಿಕಾರದಲ್ಲಿತ್ತು. 2014ರ ಚುನಾವಣೆಯಲ್ಲಿ ಯಾರೊಂದಿಗೂ ಮೈತ್ರಿ ಮಾಡಿಕೊಳ್ಳದ ಜೆಡಿಎಸ್‌ 2019ರಲ್ಲಿ ಕಾಂಗ್ರೆಸ್‌ ಜೊತೆ ಮೈತ್ರಿ ಮಾಡಿಕೊಂಡು ಕೇವಲ ಒಂದು ಸ್ಥಾನ ಮಾತ್ರ ಗೆದ್ದುಕೊಂಡಿತ್ತು.

     

    ಈ ಚುನಾವಣೆಯಲ್ಲಿ ಮೊದಲೇ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿದ್ದ ಜೆಡಿಎಸ್‌ ಹಾಸನ, ಮಂಡ್ಯ, ಕೋಲಾರದಲ್ಲಿ ಸ್ಪರ್ಧಿಸಿತ್ತು. ಹಾಸನದಲ್ಲಿ ಪ್ರಜ್ವಲ್‌ ರೇವಣ್ಣ ಸೋತರೆ, ಮಂಡ್ಯದಲ್ಲಿ ಹೆಚ್‌ಡಿ ಕುಮಾರಸ್ವಾಮಿ, ಕೋಲಾರದಲ್ಲಿ ಮಲ್ಲೇಶ್‌ ಬಾಬು ಜಯಗಳಿಸಿದ್ದರು. ಇದನ್ನೂ ಓದಿ: ಟೀ ಮಾರಾಟ.. ಅಧ್ಯಾತ್ಮದ ನೆಲೆಯಿಂದ ಪ್ರಧಾನಿ ಗಾದಿವರೆಗೆ ಮೋದಿ ನಡೆದು ಬಂದ ದಾರಿ

    ಎನ್‌ಡಿಎ ಸರ್ಕಾರದಲ್ಲಿ ಜೆಡಿಎಸ್‌ ಪ್ರಮುಖ ಮಿತ್ರಪಕ್ಷವಾಗಿರುವ ಕಾರಣ ಕುಮಾರಸ್ವಾಮಿ ಅವರಿಗೆ ಮೋದಿ ಸಂಪುಟದಲ್ಲಿ ಸಚಿವ ಸ್ಥಾನ ಸಿಕ್ಕಿದೆ.  ಅಷ್ಟೇ ಅಲ್ಲದೇ ಮೊದಲ ಬಾರಿಗೆ ಕೇಂದ್ರದಲ್ಲಿ ಕುಮಾರಸ್ವಾಮಿ ಅವರಿಗೆ ಮಂತ್ರಿ ಸ್ಥಾನ ಒಲಿದಿದೆ.

     

  • ಮೋದಿ ಕ್ಯಾಬಿನೆಟ್‌ನಲ್ಲಿ ಹೆಚ್‌ಡಿಕೆಗೆ ಸ್ಥಾನ: ಮಂಜುನಾಥ್‌ ಸುಳಿವು

    ಮೋದಿ ಕ್ಯಾಬಿನೆಟ್‌ನಲ್ಲಿ ಹೆಚ್‌ಡಿಕೆಗೆ ಸ್ಥಾನ: ಮಂಜುನಾಥ್‌ ಸುಳಿವು

    ನವದೆಹಲಿ: ಮಾಜಿ ಸಿಎಂ, ಮಂಡ್ಯ ಸಂಸದ ಹೆಚ್‌ಡಿ ಕುಮಾರಸ್ವಾಮಿ (HD Kumaraswamy) ಅವರು ಪ್ರಧಾನಿ ನರೇಂದ್ರ ಮೋದಿ (PM Narendra Modi) ಸಂಪುಟದಲ್ಲಿ ಸೇರುವುದು ಖಚಿತವಾಗಿದೆ.

    ಕುಮಾರಸ್ವಾಮಿ ಅವರು ಇಂದು ಮೋದಿ ಅವರೊಂದಿಗೆ ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎಂದು ಬೆಂಗಳೂರು ಗ್ರಾಮಾಂತರ ಲೋಕಸಭಾ (Bengaluru Rural) ಕ್ಷೇತ್ರದ ಬಿಜೆಪಿ ಸಂಸದ ಡಾ.ಮಂಜುನಾಥ್‌ (Dr Manjunath) ಸುಳಿವು ನೀಡಿದ್ದಾರೆ.

    ದೆಹಲಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರುಮ ಕುಮಾರಸ್ವಾಮಿಯವರು ಸಚಿವರಾಗುತ್ತಿರುವುದು ಖುಷಿ ತಂದಿದೆ. ಜೆಡಿಎಸ್ ಪಕ್ಷದ ನಾಯಕರು, ಕಾರ್ಯಕರ್ತರಿಗೆ ಆತ್ಮವಿಶ್ವಾಸ ತುಂಬಿದೆ ಎಂದು ಸಂತಸ ವ್ಯಕ್ತಪಡಿಸಿದರು. ಇದನ್ನೂ ಓದಿ: ಮೋದಿ ಸಂಪುಟದಲ್ಲಿ ಟಿಡಿಪಿಗೆ 3, ಜೆಡಿಯುಗೆ 2 ಸಚಿವ ಸ್ಥಾನ? – NDA ಕೂಟದ ಯಾವ ಪಕ್ಷಕ್ಕೆ ಎಷ್ಟು ಸ್ಥಾನ?

     

    ಇಂದು ಸಂಜೆ 7:15ಕ್ಕೆ ಸರಿಯಾಗಿ ರಾಷ್ಟ್ರಪತಿ ಭವನದಲ್ಲಿ ಮೋದಿ (Narendra Modi) ದೇಶದ ಪ್ರಧಾನಿಯಾಗಿ ಸತತ ಮೂರನೇ ಬಾರಿ ಪದಗ್ರಹಣ ಮಾಡಲಿದ್ದಾರೆ. ಈ ಮೂಲಕ ಮೈತ್ರಿ ಸರ್ಕಾರದ ಶಕೆ ಮತ್ತೆ ದೇಶದಲ್ಲಿ ಆರಂಭವಾಗಿದೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಓದಿದ ಸೋಫಿಯಾ ಈಗ ಒಡಿಶಾದಲ್ಲಿ ಶಾಸಕಿ!

    ಮೋದಿ ಪ್ರಮಾಣ ಬೆನ್ನಲ್ಲೇ 30 ಮಂದಿ ಸಚಿವರಾಗಿ ಪ್ರಮಾಣವಚನ ಸ್ವೀಕರಿಸುವ ಸಾಧ್ಯತೆಯಿದೆ. ಒಟ್ಟು ಎರಡು ಹಂತಗಳಲ್ಲಿ ಸಂಪುಟ ರಚನೆಯಾಗುವ ಸಾಧ್ಯತೆಯಿದ್ದು ಪ್ರಮಾಣವಚನ ಸಮಾರಂಭಕ್ಕಾಗಿ ಈಗಾಗಲೇ ಎಲ್ಲಾ ಸಿದ್ದತೆಗಳು ನಡೆದಿವೆ. ಪೂರ್ಣ ಪ್ರಮಾಣದ ಮಂತ್ರಿಮಂಡಲದ ಬಲವು 78 ಮತ್ತು 81 ರ ನಡುವೆ ಇರಬಹುದೆಂದು ನಿರೀಕ್ಷಿಸಲಾಗಿದೆ.

     

    ಗೃಹ, ರಕ್ಷಣೆ, ಹಣಕಾಸು ಮತ್ತು ವಿದೇಶಾಂಗ ವ್ಯವಹಾರಗಳಂತಹ ಮಹತ್ವದ ಖಾತೆಗಳನ್ನು ಬಿಜೆಪಿ ಇಟ್ಟುಕೊಳ್ಳಲಿದ್ದು ಉಕ್ಕು, ನಾಗರಿಕ ವಿಮಾನಯಾನ ಮತ್ತು ಕಲ್ಲಿದ್ದಲು ಮುಂತಾದ ಖಾತೆಗಳು ಮಿತ್ರ ಪಕ್ಷಗಳಿಗೆ ಸಿಗುವ ಸಾಧ್ಯತೆಯಿದೆ. ಇಂದು ಬೆಳಗ್ಗೆಯಿಂದ ಪ್ರಮಾಣ ವಚನ ಸ್ವೀಕರಿಸಲಿರುವ ಸಚಿವರಿಗೆ ಸರ್ಕಾರದಿಂದ ಕರೆಗಳು ಬರುವ ನಿರೀಕ್ಷೆಯಿದೆ.