Tag: jds

  • ವಿಧಾನ ಪರಿಷತ್‌ನಲ್ಲಿ ಸಹಕಾರಿ ಬಿಲ್ ಸೋಲಿಸಿ ಸರ್ಕಾರಕ್ಕೆ ಮುಖಭಂಗ ಮಾಡಿದ ದೋಸ್ತಿಗಳು

    ವಿಧಾನ ಪರಿಷತ್‌ನಲ್ಲಿ ಸಹಕಾರಿ ಬಿಲ್ ಸೋಲಿಸಿ ಸರ್ಕಾರಕ್ಕೆ ಮುಖಭಂಗ ಮಾಡಿದ ದೋಸ್ತಿಗಳು

    ಬೆಂಗಳೂರು: ವಿಧಾನಸಭೆಯಲ್ಲಿ ಅಂಗೀಕಾರವಾಗಿದ್ದ ಕರ್ನಾಟಕ ಸೌಹಾರ್ದ ಸಹಕಾರಿ ತಿದ್ದುಪಡಿ ಕಾಯ್ದೆಯು ವಿಧಾನ ಪರಿಷತ್‌ನಲ್ಲಿ ತಿರಸ್ಕೃತವಾಗಿದೆ. ಈ ಮೂಲಕ ಕಾಯ್ದೆ ಅನುಮೋದನೆ ನಿರೀಕ್ಷೆಯಲ್ಲಿದ್ದ ರಾಜ್ಯ ಸರ್ಕಾರಕ್ಕೆ ಮುಖಭಂಗವಾಗಿದೆ. ಬಿಲ್ ಸೋಲಿಸಿ ಸರ್ಕಾರಕ್ಕೆ ಮುಖಭಂಗ ಮಾಡುವಲ್ಲಿ ದೋಸ್ತಿಗಳು ಯಶಸ್ವಿಯಾಗಿದ್ದಾರೆ.

    ತಿದ್ದುಪಡಿ ವಿಧೇಯಕ ಕುರಿತಂತೆ ಕಲಾಪದಲ್ಲಿ ಆಡಳಿತ ಹಾಗೂ ವಿರೋಧ ಪಕ್ಷದ ಸದಸ್ಯರು ಒಂದು ಗಂಟೆಗಳ ಕಾಲ ಚರ್ಚೆ ನಡೆಸಿದರು. ಕಾಯ್ದೆಯಲ್ಲಿ ಕೆಲವು ಅಂಶಗಳು ನ್ಯೂನತೆಯಿಂದ ಕೂಡಿದೆ. ಹೀಗಾಗಿ, ಇದನ್ನ ಸರಳೀಕರಣಗೊಳಿಸುವಂತೆ ವಿರೋಧ ಪಕ್ಷದ ಸದಸ್ಯರು ಒತ್ತಾಯಿಸಿದರು. ಆದರೆ, ಸರ್ಕಾರ ಒಪ್ಪದ ಕಾರಣ ಕಾಯ್ದೆಯ ಅಂಗೀಕಾರಕ್ಕೆ ಮತಕ್ಕೆ ಹಾಕುವಂತೆ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಸಭಾಪತಿ ಬಸವರಾಜ ಹೊರಟ್ಟಿ ಅವರಿಗೆ ಮನವಿ ಮಾಡಿದರು. ಸಭಾಪತಿಗಳು ಮತಕ್ಕೆ ಹಾಕುವ ನಿರ್ಧಾರ ಕೈಗೊಂಡರು. ಇದನ್ನೂ ಓದಿ: ಸಿದ್ದರಾಮಯ್ಯ ನಮಗೆ ಸಿಎಂ ಅಲ್ಲ, ನಮಗೆ ಡಿಕೆಶಿಯೇ ಸಿಎಂ: ಅಶೋಕ್‌

    ಮತದಾನ ಪ್ರಕ್ರಿಯೆಯಲ್ಲಿ ಬಿಲ್ ಪರ 23 ಮತಗಳು ಬಿದ್ದರೆ, ಬಿಲ್ ವಿರುದ್ಧ 26 ಮತಗಳು ಬಿದ್ದು ವಿಧೇಯಕಕ್ಕೆ ಸೋಲಾಯ್ತು.

    ಬಿಲ್ ವಿರೋಧಕ್ಕೆ ಕಾರಣ ಏನು?
    * ಪ್ರಕರಣ 2 (ಜೆಡ್) ಹಾಗೂ ಪ್ರಕರಣ 17ಬಿ ಸೇರ್ಪಡೆ ಮೂಲಕ ಪ್ರತಿಯೊಂದು ಸಹಕಾರಿಯು ತನ್ನ ಠೇವಣಿಯ ಶೇ.20 ಅನ್ನು ದ್ರವ್ಯ ರೂಪದಲ್ಲಿ ಮೀಸಲಿಡುವ ಪ್ರಸ್ತಾವನೆ ಇದೆ.
    * ಬಿಲ್ ಉದ್ದೇಶ ಸರಿ ಇದೆ. ಆದರೆ, ಇದನ್ನು ರಾಜ್ಯ ಶಾಸನಬದ್ಧ ಮೀಸಲು ದ್ರವ್ಯಾಸ್ತಿ ಎಂದು ನಿಗದಿಪಡಿಸಿರುವುದರಿಂದ, ಇದು ಸರ್ಕಾರದ ಆಸ್ತಿ ಎಂದು ಪರಿಗಣಿತವಾಗುತ್ತದೆ. ಇದು ಸರಿಯಲ್ಲ.
    * ಆದ್ದರಿಂದ ಇದನ್ನು ಸಹಕಾರಿಯ ಶಾಸನಬದ್ಧ ದ್ರವ್ಯಾಸ್ತಿ ಎಂದು ಬದಲಾಯಿಸುವುದು ಸೂಕ್ತ.
    * ಪ್ರತಿಯೊಂದು ಸಹಕಾರಿಯೂ ಸಹ ರಿಜಿಸ್ಟ್ರಾರನ ಪೂರ್ವಾನುಮತಿಯೊಂದಿಗೆ ಶೆಡ್ಯೂಲ್ ಬ್ಯಾಂಕಿನಲ್ಲಿ ಹೂಡಿಕೆ ಮಾಡಬೇಕಾಗುತ್ತದೆ.
    * ಇದು ಕಾಯ್ದೆಯ ಆಶಯಕ್ಕೂ ವಿರುದ್ಧ. ಆದ್ದರಿಂದ ‘ರಿಜಿಸ್ಟ್ರಾರನ ಪೂರ್ವಾನುಮತಿಯೊಂದಿಗೆ’ ಎಂಬುದನ್ನು ಕೈಬಿಡಬೇಕು.
    * ಪ್ರಸ್ತುತ ಇರುವ ಕಲಂ 18 ಸರಿಯಾಗಿ ಇದೆ. ಒಂದು ವೇಳೆ ಬದಲಾಯಿಸುವುದಿದ್ದಲ್ಲಿ ಸರ್ಕಾರಿ ಭದ್ರತೆಗಳಲ್ಲಿ ಹಾಗೂ ಸಹಕಾರ ಬ್ಯಾಂಕುಗಳಲ್ಲಿ ಹೂಡಿಕೆಗೂ ಸಹ ಅವಕಾಶ ನೀಡುವುದು.
    * ಪ್ರಕರಣ 26 (1ಎ) ಮೂಲಕ ಪ್ರತಿಯೊಬ್ಬ ಅಭ್ಯರ್ಥಿಯು ಅವನ/ಅವಳ ಹಾಗೂ ಕುಟುಂಬದ ಆಸ್ತಿ ಮತ್ತು ಹೊಣೆಗಾರಿಕೆಗಳ ಘೋಷಣೆ ಕಡ್ಡಾಯ ಮಾಡಿದ್ದು, ಚುನಾವಣೆಯ ಸಂದರ್ಭದಲ್ಲಿ ಹಾಗೂ ಪ್ರತಿ ಐದು ವರ್ಷಕ್ಕೊಮ್ಮೆ ಘೋಷಣೆ ಸರಿ ಇದೆ.
    * ಪ್ರತಿ ವರ್ಷ ಘೋಷಣೆ ಪ್ರಾಯೋಗಿಕವಾಗಿ ಕಷ್ಟ/ಕಾರ್ಯಸಾಧುವಲ್ಲ. ಆದ್ದರಿಂದ ಇವುಗಳನ್ನು ಕೈಬಿಡುವುದು.
    * ಪ್ರಕರಣ 33(1ಎ) ಸೇರ್ಪಡೆ ಮೂಲಕ ಪ್ರತಿ 3 ವರ್ಷಕ್ಕೊಮ್ಮೆ ಸಹಕಾರ ಲೆಕ್ಕಪರಿಶೋಧನಾ ನಿರ್ದೇಶಕರಿಂದ ಲೆಕ್ಕಪರಿಶೋಧನೆ ಮಾಡಿಸುವುದನ್ನು ಕಡ್ಡಾಯ ಮಾಡಿದೆ. ಇದನ್ನ 5 ವರ್ಷಕ್ಕೆ ಮಾಡಬೇಕು.
    * ರಾಜ್ಯದಲ್ಲಿ 50,000 ಕ್ಕೂ ಹೆಚ್ಚು ಸಹಕಾರ ಸಂಘ/ಸೌಹಾರ್ದ ಸಹಕಾರಿಗಳು ಇದ್ದು, ಪ್ರತಿವರ್ಷ 17,000 ಕ್ಕೂ ಹೆಚ್ಚು ಸಂಸ್ಥೆಗಳ ಲೆಕ್ಕಪರಿಶೋಧನೆ ಮಾಡುವುದು ಪ್ರಾಯೋಗಿಕವಾಗಿ ಕಷ್ಟ/ಕಾರ್ಯಸಾಧುವಲ್ಲ. ಇದು ಕಾಯ್ದೆಯ ಆಶಯಕ್ಕೂ ವಿರುದ್ಧ. ಆದ್ದರಿಂದ ಇದನ್ನು ಕೈಬಿಡಬೇಕು.

  • ದೇವೇಗೌಡರನ್ನು ಭೇಟಿಯಾದ ಎನ್‌ಡಿಎ ಉಪ ರಾಷ್ಟ್ರಪತಿ ಅಭ್ಯರ್ಥಿ

    ದೇವೇಗೌಡರನ್ನು ಭೇಟಿಯಾದ ಎನ್‌ಡಿಎ ಉಪ ರಾಷ್ಟ್ರಪತಿ ಅಭ್ಯರ್ಥಿ

    ನವದೆಹಲಿ: ಎನ್‌ಡಿಎ ಉಪ ರಾಷ್ಟ್ರಪತಿ ಅಭ್ಯರ್ಥಿಯಾಗಿರುವ ಸಿಪಿ ರಾಧಾಕೃಷ್ಣನ್‌ಗೆ (CP Radhakrishnan) ಮೈತ್ರಿ ಪಕ್ಷ ಜೆಡಿಎಸ್ (JDS) ಬೆಂಬಲ ಘೋಷಿಸಿದೆ. ದೆಹಲಿಯ ದೇವೇಗೌಡರ (HD Deve Gowda) ನಿವಾಸದಲ್ಲಿ ಉಪ ರಾಷ್ಟ್ರಪತಿ ಅಭ್ಯರ್ಥಿ ಸಿಪಿ ರಾಧಾಕೃಷ್ಣನ್ ದೇವೇಗೌಡರನ್ನ ಭೇಟಿಯಾಗಿ ಚರ್ಚೆ ನಡೆಸಿದರು.

    ಭೇಟಿಯ ಸಮಯದಲ್ಲಿ ಕೇಂದ್ರ ಸಚಿವರಾದ ಪ್ರಹ್ಲಾದ ಜೋಶಿ, ಕುಮಾರಸ್ವಾಮಿ, ಸಂಸದರಾದ ಮಂಜುನಾಥ್ ಉಪಸ್ಥಿತರಿದ್ದರು. ಇದೇ ವೇಳೆ ಮಾತನಾಡಿದ ದೇವೇಗೌಡರು, ನನ್ನ 10 ವರ್ಷದ ಅನುಭವದಲ್ಲಿ ಮೋದಿ ಅವರ ಮನಸ್ಸನ್ನು ಯಾರು ಪತ್ತೆ ಹಚ್ಚಲು ಸಾಧ್ಯವಿಲ್ಲ. ಕೊನೆಯ ಘಳಿಗೆಯ ತನಕ ಗುಟ್ಟು ಬಿಟ್ಟು ಕೊಡುವುದಿಲ್ಲ. ರಾಧಾಕೃಷ್ಣನ್ ಅವರು ಅಂತಿಮವಾಗಿ ಆಯ್ಕೆಯಾದರು. ಎಲ್ಲಾ ದೃಷ್ಟಿಯಿಂದಲೂ ಸಮರ್ಥರು, ಅರ್ಹರು ಆಗಿರುವ ಯೋಗ್ಯ ಅಭ್ಯರ್ಥಿಯನ್ನು ಆಯ್ಕೆ ಮಾಡಿದ್ದಾರೆ ಎಂದರು. ಇದನ್ನೂ ಓದಿ: ಪೋಕ್ಸೊ ಪ್ರಕರಣದಲ್ಲಿ ಮಹಿಳೆಗೆ 20 ವರ್ಷ ಜೈಲು

    ರಾಜ್ಯಪಾಲರಾಗಿ, ಲೆಫ್ಟಿನೆಂಟ್ ಗವರ್ನರ್ ಆಗಿ, ಲೋಕಸಭಾದ ಹಲವು ಸಮಿತಿಗಳಲ್ಲಿ ಕೆಲಸ ಮಾಡಿದ್ದಾರೆ. ವಿವಿಧ ಸಮಿತಿಗಳ ಭಾಗವಾಗಿ 24 ದೇಶಗಳಲ್ಲಿ ಪ್ರವಾಸ ಮಾಡಿದ್ದಾರೆ. ಜನಸಾಮಾನ್ಯರ ಮಧ್ಯದಿಂದ ಬೆಳದು ಬಂದ ವ್ಯಕ್ತಿ ಇವರು, ನನಗೆ ತುಂಬಾ ಸಂತೋಷ ಆಗಿದೆ. ನಾನು ಒಬ್ಬ ಸಾಮಾನ್ಯ ಸದಸ್ಯನಾಗಿ ಕೆಲಸ ಮಾಡುವ ಅವಕಾಶ ಸಿಕ್ಕಿದೆ. ನಮ್ಮ ಪಕ್ಷದಿಂದ ಬೆಂಬಲ ಇದೆ ಎಂದು ದೇವೇಗೌಡರು ಹೇಳಿದರು. ಇದನ್ನೂ ಓದಿ: ವಯನಾಡ್ ಲೋಕಸಭಾ ಕ್ಷೇತ್ರದ ಮೆಪ್ಪಾಡಿಗೆ ಕರ್ನಾಟಕ ಸರ್ಕಾರದಿಂದ 10 ಕೋಟಿ ಹಣ

  • ʻಧರ್ಮಸ್ಥಳದ ಮಂಜುನಾಥನನ್ನು ರಕ್ಷಿಸಿʼ – ವಿಧಾನಸೌಧಕ್ಕೆ ಪೋಸ್ಟರ್ ಹಿಡಿದು ಬಂದ ಜೆಡಿಎಸ್ ಶಾಸಕ

    ʻಧರ್ಮಸ್ಥಳದ ಮಂಜುನಾಥನನ್ನು ರಕ್ಷಿಸಿʼ – ವಿಧಾನಸೌಧಕ್ಕೆ ಪೋಸ್ಟರ್ ಹಿಡಿದು ಬಂದ ಜೆಡಿಎಸ್ ಶಾಸಕ

    ಬೆಂಗಳೂರು: ಜೆಡಿಎಸ್ (JDS) ಶಾಸಕ ಶರಣುಗೌಡ ಕಂದಕೂರ್ (Sharanagouda Kandakur) ʻಧರ್ಮಸ್ಥಳದ ಮಂಜುನಾಥನನ್ನು ರಕ್ಷಿಸಿʼ ಎಂಬ ಪೋಸ್ಟರ್‌ ಹಿಡಿದು ಬಂದಿದ್ದಾರೆ.

    ಸ್ವಾಮಿ ಮಂಜುನಾಥನನ್ನು ರಕ್ಷಿಸಿ, ಅಪಪ್ರಚಾರಿಗಳನ್ನು ಶಿಕ್ಷಿಸಿ, ಸತ್ಯಮೇವ ಜಯತೆ ಎಂದು ಪೋಸ್ಟರ್‌ನಲ್ಲಿ ಬರೆಯಲಾಗಿದೆ. ಈ ಬಗ್ಗೆ ʻಪಬ್ಲಿಕ್‌ ಟಿವಿಗೆʼ ಪ್ರತಿಕ್ರಿಯಿಸಿರುವ ಶಾಸಕ, ಅಪಪ್ರಚಾರ ಮಾಡುವವರನ್ನು ಸರ್ಕಾರ ಶಿಕ್ಷಿಸದೇ ಇದ್ದರೇ, ಮಂಜುನಾಥನೇ ಶಿಕ್ಷಿಸುವ ಕಾಲ ಬರಲಿದೆ. ಸರ್ಕಾ ತೊಟ್ಟಿಲು ತೂಗಿ ಮಕ್ಕಳನ್ನು ಚಿವುಟುವ ಕೆಲಸ ಮಾಡಬಾರದು ಎಂದಿದ್ದಾರೆ. ಇದನ್ನೂ ಓದಿ: ಸರ್ಕಾರದ ವಿರುದ್ಧ ಕೇಸರಿ ಪಡೆ ʻಧರ್ಮʼ ಯುದ್ಧ – ಷಡ್ಯಂತ್ರದ ಹಿಂದಿರೋರು ಯಾರು? – ಅಪಪ್ರಚಾರಕರ ವಿರುದ್ಧ ಕ್ರಮಕ್ಕೆ ಆಗ್ರಹ

    ಎಸ್‌ಐಟಿ ತನಿಖೆ ಎಷ್ಟು ದಿನದಿಂದ ತನಿಖೆ ನಡೆಸುತ್ತಿದೆ. ಇದೆಲ್ಲ ಅಪಪ್ರಚಾರ ನಡೆಯುತ್ತಿದೆ. ಇದಕ್ಕೆ ಅಂತ್ಯಹಾಡಬೇಕು. ಪಿತೂರಿಯ ಪಿತಾಮಹರ ವಿರುದ್ಧ ಕ್ರಮ ಆಗ್ಬೇಕು. ಅಪಪ್ರಚಾರ ನಿಲ್ಲಿಸಬೇಕು. ಸೌಜನ್ಯ ಪರವಾಗಿ ನಮ್ಮ ಸಂಪೂರ್ಣ ಸಹಕಾರ ಇದೆ ಎಂದಿದ್ದಾರೆ.

    ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿಟ್ಟ ಪ್ರಕರಣ (Dharmasthala Case) ಈಗ ತೀರ್ವ ಸ್ವರೂಪ ಪಡೆದುಕೊಂಡಿದೆ. ಎಸ್‌ಐಟಿ ತನಿಖೆಯಲ್ಲಿ ಈವರೆಗೆ ಯಾವುದೇ ಕಳೇಬರ ಪತ್ತೆಯಾಗದ ಹಿನ್ನೆಲೆ ರಾಜ್ಯ ಸರ್ಕಾರದ ವಿರುದ್ಧ ಕೇಸರಿ ಪಡೆ ಮುಗಿಬಿದ್ದಿದೆ. ಧರ್ಮಸ್ಥಳದ ವಿರುದ್ಧ ಅಪಪ್ರಚಾರ ಮಾಡುತ್ತಿರುವವರ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಿದ್ದಲ್ಲದೇ, ಷಡ್ಯಂತ್ರದ ಹಿಂದಿರುವವರು ಯಾರು? ಎಂಬುದನ್ನು ಬಹಿರಂಗಪಡಿಸುವಂತೆ ಆಗ್ರಹಿಸಿವೆ. ಜೊತೆಗೆ ಈವರೆಗಿನ ತನಿಖಾ (Investigation) ಬೆಳವಣಿಗೆ ಬಗ್ಗೆ ಮಧ್ಯಂತರ ವರದಿ ಬಿಡುಗಡೆಗೆ ಆಗ್ರಹಿಸಿವೆ. ಇದನ್ನೂ ಓದಿ: ಧರ್ಮಸ್ಥಳದಲ್ಲಿ ಶವಗಳ ಹೂತಿಟ್ಟ ಪ್ರಕರಣ – ಪರಂ ಉತ್ತರ ಭಾರೀ ಕುತೂಹಲ

  • ಇಂದಿನಿಂದ ಮಳೆಗಾಲದ ಅಧಿವೇಶನ ಪ್ರಾರಂಭ

    ಇಂದಿನಿಂದ ಮಳೆಗಾಲದ ಅಧಿವೇಶನ ಪ್ರಾರಂಭ

    ಬೆಂಗಳೂರು: ಇಂದಿನಿಂದ ವಿಧಾನಮಂಡಲ ಅಧಿವೇಶನ ಪ್ರಾರಂಭವಾಗಲಿದೆ. ಸರ್ಕಾರ ವರ್ಸಸ್ ವಿಪಕ್ಷಗಳ ನಡುವೆ ಮಹಾಕದನಕ್ಕೆ ಅಧಿವೇಶನ ವೇದಿಕೆಯಾಗುವ ಸಾಧ್ಯತೆ ಇದೆ.

    ಇಂದಿನಿಂದ ಆಗಸ್ಟ್ 22 ರವರೆಗೂ ಅಧಿವೇಶನ ನಡೆಯಲಿದೆ. ವಿಪಕ್ಷಗಳಿಗೆ ಸರ್ಕಾರವನ್ನ ಕಟ್ಟಿ ಹಾಕಲು ಸಾಲು ಸಾಲು ಅಸ್ತ್ರಗಳಿವೆ. ಸರ್ಕಾರದ ವೈಫಲ್ಯಗಳನ್ನ ಬಿಚ್ಚಿಟ್ಟು ಸರ್ಕಾರವನ್ನ ಎಕ್ಸ್‌ಪೋಸ್ ಮಾಡಲು ವಿಪಕ್ಷಗಳ ಸಿದ್ಧತೆ ನಡೆಸಿವೆ. ಇದನ್ನೂ ಓದಿ: ಪ್ರಿಯಾಂಕ್ ಖರ್ಗೆ V/s ಆರ್‌.ಅಶೋಕ್‌ ಮಧ್ಯೆ ಟ್ವೀಟ್ ವಾರ್‌ – ವೈಯಕ್ತಿಕ ಮಟ್ಟಕ್ಕೆ ತಿರುಗಿದ ಫೈಟ್‌

    ಭಾನುವಾರ ಬಿಜೆಪಿ-ಜೆಡಿಎಸ್ ಪ್ರಮುಖ ನಾಯಕರಿಂದ ಸದನದಲ್ಲಿ ಹೋರಾಟದ ಬಗ್ಗೆ ಚರ್ಚೆಯ ವಿಷಯಗಳ ಪ್ರಸ್ತಾಪವಾಗಿದೆ. ಸರ್ಕಾರದ ವಿರುದ್ಧ ಒಟ್ಟಾಗಿ ಹೋರಾಟ ನಡೆಸಲು ಎರಡು ಪಕ್ಷಗಳಿಂದ ಚರ್ಚೆ ನಡೆದಿದೆ ಎನ್ನಲಾಗಿದೆ. ವಿಪಕ್ಷಗಳ ಅಸ್ತ್ರಕ್ಕೆ ಪ್ರತಿ ಅಸ್ತ್ರ ಹೂಡಲು ಸರ್ಕಾರದಿಂದಲೂ ಸಿದ್ಧತೆ ನಡೆದಿದೆ.

    ವಿಪಕ್ಷಗಳಿಗೆ ಅಸ್ತ್ರ?
    * ಚಿನ್ನಸ್ವಾಮಿ ಕಾಲ್ತುಳಿತ ಪ್ರಕರಣದಲ್ಲಿ 11 ಅಮಾಯಕ ಜೀವಗಳ ಸಾವು ವಿಷಯ.
    * ರಾಜ್ಯದಲ್ಲಿ ರಸಗೊಬ್ಬರದ ಕೊರತೆಯಿಂದ ರೈತರಿಗೆ ಸಮಸ್ಯೆ ವಿಷಯ.
    * ಧರ್ಮಸ್ಥಳದ ಕೊಲೆಗಳ ಪ್ರಕರಣ.
    * SCSP-TSP ಹಣವನ್ನ ಗ್ಯಾರಂಟಿ ಬಳಕೆ ಮಾಡಿಕೊಂಡಿರೋ ವಿಷಯ ಪ್ರಸ್ತಾಪ.
    * ವಿಪಕ್ಷಗಳ ಶಾಸಕರಿಗೆ ಅನುದಾನ ಕೊಡದೇ ಕೇವಲ ಆಡಳಿತ ಪಕ್ಷದ ಶಾಸಕರಿಗೆ ಮಾತ್ರ ಅನುದಾನ ಕೊಟ್ಟಿರೋ ವಿಚಾರ.
    * ಮೈಸೂರಿನಲ್ಲಿ ಡ್ರಗ್ಸ್ ಫ್ಯಾಕ್ಟರಿ ಪತ್ತೆ, ಮಂಗಳೂರು ದ್ವೇಷದ ಕೊಲೆ ಸೇರಿ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿರೋ ವಿಚಾರ.
    * ಕಾಂಗ್ರೆಸ್‌ನಲ್ಲಿ ಸಿಎಂ ಕುರ್ಚಿಯ ಕಿತ್ತಾಟದ ವಿಷಯ.
    * ರಾಹುಲ್ ಗಾಂಧಿಯ ಮತಗಳ್ಳತನ ಆರೋಪಕ್ಕೆ ಸಚಿವ ರಾಜಣ್ಣ, ಇಬ್ರಾಹಿಂ ಮಾತುಗಳನ್ನ ಪ್ರಸ್ತಾಪ ಮಾಡಿ ಸರ್ಕಾರವನ್ನ ಕಟ್ಟಿ ಹಾಕೋ ಪ್ಲ್ಯಾನ್.

  • ಮತಗಳ್ಳತನ ಮಾಡುತ್ತಿರುವುದೇ ಕಾಂಗ್ರೆಸ್ – ದಾಖಲೆ ಸಮೇತ ರಾಗಾಗೆ ಜೆಡಿಎಸ್ ತಿರುಗೇಟು

    ಮತಗಳ್ಳತನ ಮಾಡುತ್ತಿರುವುದೇ ಕಾಂಗ್ರೆಸ್ – ದಾಖಲೆ ಸಮೇತ ರಾಗಾಗೆ ಜೆಡಿಎಸ್ ತಿರುಗೇಟು

    – ರಾಹುಲ್ ಗಾಂಧಿ ಮುಂದೆ 5 ಪ್ರಶ್ನೆಯಿಟ್ಟ ಜೆಡಿಎಸ್
    – ಕಾಂಗ್ರೆಸ್ 136 ಕ್ಷೇತ್ರ ಗೆದ್ದಿದೆ, ಹಾಗಾದ್ರೆ ಮತಗಳ್ಳತನದಿಂದ ಗೆದ್ದಿದ್ಯಾ?

    ಬೆಂಗಳೂರು: ಮತಗಳ್ಳತನ ಮಾಡಿರುವುದೇ ಕಾಂಗ್ರೆಸ್ (Congress) ಎಂದು ಜೆಡಿಎಸ್ ನಗರ ಘಟಕದ ಅಧ್ಯಕ್ಷ ಹೆಚ್.ಎಂ. ರಮೇಶ್ ಗೌಡ (H M Ramesh Gowda) ಅವರು ಚುನಾವಣಾ ಆಯೋಗ ಹಾಗೂ ಬಿಜೆಪಿ ವಿರುದ್ಧ ರಾಹುಲ್ ಗಾಂಧಿ ಮಾಡಿರುವ ಆರೋಪಕ್ಕೆ ದಾಖಲೆ ಸಮೇತ ಉತ್ತರಿಸುವ ಮೂಲಕ ತಿರುಗೇಟು ನೀಡಿದ್ದಾರೆ. ಅಲ್ಲದೇ ರಾಹುಲ್ ಗಾಂಧಿ ಮುಂದೆ 5 ಪ್ರಶ್ನೆಗಳನ್ನಿಟ್ಟಿದ್ದಾರೆ.

    ಪಕ್ಷದ ರಾಜ್ಯ ಕಚೇರಿಯಲ್ಲಿ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಹುಲ್ ಗಾಂಧಿ (Rahul Gandhi) ಅವರು ಆಯೋಗಕ್ಕೆ ಐದು ಪ್ರಶ್ನೆ ಕೇಳಿದ್ದಾರೆ. ಜೆಡಿಎಸ್ ಕೂಡ ಅವರಿಗೆ ಐದು ಪ್ರಶ್ನೆ ಕೇಳುತ್ತದೆ. ನೈತಿಕತೆ ಇದ್ದರೆ ಅವರು ಈ ಪ್ರಶ್ನೆಗಳಿಗೆ ಉತ್ತರ ಕೊಡಲಿ ಎಂದು ಸವಾಲು ಹಾಕಿದ್ದಾರೆ. ಇದನ್ನೂ ಓದಿ: ಬಿಹಾರ ಚುನಾವಣೆ ಹೊತ್ತಲ್ಲೇ 334 ರಾಜಕೀಯ ಪಕ್ಷಗಳನ್ನು ಪಟ್ಟಿಯಿಂದಲೇ ತೆಗೆದ ಚುನಾವಣಾ ಆಯೋಗ

    ಜೆಡಿಎಸ್‌ನ ಐದು ಪ್ರಶ್ನೆಗಳಾವುವು?
    1. ನೀವು ಚುನಾವಣಾ ಆಯೋಗಕ್ಕೆ ಉತ್ತರ ಕೊಡುವುದಕ್ಕೆ ಹೆದರುತ್ತಿರುವುದು ಯಾಕೆ?
    2. ಕಳೆದ ವಿಧಾನಸಭೆ ಚುನಾವಣೆಯಲ್ಲಿ ರಾಮನಗರ, ಮಾಗಡಿ, ಕುಣಿಗಲ್ ಸೇರಿ ಅನೇಕ ವಿಧಾನಸಭೆ ಕ್ಷೇತ್ರಗಳಲ್ಲಿ ಗಿಫ್ಟ್ ಕೂಪನ್ ಹಂಚಿ ಗೆದ್ದಿದ್ದೀರಿ. ಇದು ಮತಗಳ್ಳತನ ಅಲ್ಲವೇ?
    3. ಗೃಹಲಕ್ಷ್ಮೀ ಗ್ಯಾರಂಟಿಯನ್ನು ಚುನಾವಣಾ ಅಸ್ತ್ರವನ್ನಾಗಿ ಬಳಕೆ ಮಾಡುತ್ತೀರಿ. ಚುನಾವಣೆ ಬಂದ ಕೂಡಲೇ ನಾಲ್ಕೈದು ತಿಂಗಳ ಗೃಹಲಕ್ಷ್ಮೀ ಹಣ ಜಮೆ ಮಾಡುತ್ತೀರಿ. ನಿಯಮಿತವಾಗಿ ಪ್ರತೀ ತಿಂಗಳು ಜಮೆ ಮಾಡುತ್ತಿಲ್ಲ, ಯಾಕೆ? ಇದು ಚುನಾವಣಾ ಅಕ್ರಮ ಅಲ್ಲವೇ?
    4. ಕಳೆದ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ 9 ಲೋಕಸಭೆ ಕ್ಷೇತ್ರಗಳಲ್ಲಿ ಮತಗಳ್ಳತನ ಆಗಿಲ್ಲವೇ? ಆಗಿಲ್ಲದಿದ್ರೆ ಮತಗಳ್ಳರಿಗೆ ನಿಮ್ಮ ಮೇಲೆ ವಿಶೇಷ ಪ್ರೀತಿ ಯಾಕೆ?
    5. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಮಂಡ್ಯ ಸೇರಿ ಅನೇಕ ಕ್ಷೇತ್ರಗಳಲ್ಲಿ ಅತೀ ಕಡಿಮೆ ಅಂತರದಿಂದ ನಿಮ್ಮ ಶಾಸಕರು ಗೆದ್ದಿದ್ದಾರೆ. ಹಾಗಿದ್ದರೆ ಅವರೂ ಮತಗಳ್ಳತನ ಮಾಡಿಯೇ ಗೆಲುವು ಸಾಧಿಸಿದ್ದಾರೆಯೇ ಎಂದು ಪ್ರಶ್ನಿಸಿದ್ದಾರೆ.

    ನೀವು ಚುನಾವಣಾ ಆಯೋಗಕ್ಕೆ ಐದು ಪ್ರಶ್ನೆ ಕೇಳಿದ್ದೀರಿ. ನಾನೂ ನಿಮ್ಮನ್ನು ಐದು ಪ್ರಶ್ನೆ ಕೇಳುತ್ತೇನೆ ಉತ್ತರಿಸಿ. ಎಲೆಕ್ಷನ್ ಕಮಿಷನ್ ಉತ್ತರ ಕೊಡಿ ಎಂದರೆ ನಾನು ನಿಮ್ಮಂತೆಯೇ ಜಾರಿಕೊಳ್ಳುವುದಿಲ್ಲ. ನನ್ನ ಪ್ರಶ್ನೆಗಳಿಗೆ ಉತ್ತರ ಕೊಡಿ ಎಂದು ಒತ್ತಾಯಿಸಿದ್ದಾರೆ. ಇದನ್ನೂ ಓದಿ: ದೆಹಲಿಯಲ್ಲಿ ಖಾಸಗಿ ಶಾಲೆಗಳ ಫೀಸ್ ನಿಯಂತ್ರಣಕ್ಕೆ ಮುಂದಾದ ಸರ್ಕಾರ – ಇನ್ಮುಂದೆ ಶುಲ್ಕ ಏರಿಕೆಗೆ ಅನುಮತಿ ಕಡ್ಡಾಯ

    ರಾಹುಲ್ ಗಾಂಧಿ ಅವರು ಲೋಕಸಭೆಯ ಪ್ರತಿಪಕ್ಷ ನಾಯಕ ಎಂಬುದನ್ನು ಮರೆತಿದ್ದಾರೆ. ಅವರು ಲೋಕಸಭೆಯಲ್ಲಿ ಈ ವಿಷಯವನ್ನು ಮಾತನಾಡಬೇಕೇ ಹೊರತು ಹಾದಿ ಬೀದಿಯಲ್ಲಿ ರಂಪ ಮಾಡಬಾರದು. ಬೆಂಗಳೂರಿಗೆ ಬಂದು ಅವರದ್ದೇ ಪಕ್ಷದ ಸರ್ಕಾರ ಇರುವ ರಾಜ್ಯದಲ್ಲಿ ಆಡಳಿತ ತಂತ್ರವನ್ನು ದುರುಪಯೋಗ ಮಾಡಿಕೊಂಡು ಪ್ರತಿಭಟನೆ ಪ್ರಹಸನ ನಡೆಸಿ ಹೋಗಿದ್ದಾರೆ ಎಂದು ಟೀಕಿಸಿದ್ದಾರೆ.

    ಜೆಡಿಎಸ್ ಹಾಗೂ ಬಿಜೆಪಿ ಒಟ್ಟಾಗಿ ಲೋಕಸಭೆ ಚುನಾವಣೆ ಎದುರಿಸಿದ್ದೇವು. ಆದರೆ ಎಲ್ಲಾ ಕ್ಷೇತ್ರಗಳನ್ನು ಗೆಲ್ಲಲು ಆಗಲಿಲ್ಲ. ಆದರೂ ನಾವು ಸಾಂವಿಧಾನಿಕ ಸಂಸ್ಥೆಯಾಗಿರುವ ಚುನಾವಣೆ ಆಯೋಗವನ್ನು ದೂರುವ ಕೆಲಸ ಮಾಡಲಿಲ್ಲ. ವಿಧಾನಸಭೆ ಚುನಾವಣೆಯಲ್ಲಿ ಕೆಪಿಸಿಸಿ ಅಧ್ಯಕ್ಷರು 136 ಸ್ಥಾನ ಗೆಲ್ಲುತ್ತೇವೆ ಎಂದು ಹೇಳಿದ್ದರು. ಇಷ್ಟು ಕರಾರುವಕ್ಕಾಗಿ ಸಂಖ್ಯೆ ಹೇಳಬೇಕು ಎಂದರೆ ಅವರೇನು ಬ್ರಹ್ಮನೇ. ಅವರು ಹೇಳಿದ ಪ್ರಕಾರವೇ 136 ಸ್ಥಾನ ಗೆದ್ದಿದ್ದಾರೆ. ಹಾಗಾದರೆ ಇವರೂ ರಿಗ್ಗಿಂಗ್ ಮಾಡಿ, ಮತಗಳ್ಳತನ ಮಾಡಿ ಗೆದ್ದಿದ್ದಾರಾ ಎಂದು ಪ್ರಶ್ನಿಸಿದ್ದಾರೆ.

    ರಾಹುಲ್ ಗಾಂಧಿಯವರು ಅಧಿವೇಶನದಲ್ಲಿ ಇದೆಲ್ಲಾ ಮಾತಾಡಬಹುದಲ್ವ? ಅಲ್ಲಿ ಸಮಯ ಹಾಳು ಮಾಡಿ, ಹಾದಿಬೀದಿಯಲ್ಲಿ ಮಾತಾಡೋದು ಯಾಕೆ? ಅವರಿಗೆ ಕೇವಲ ಬಿಹಾರ ಚುನಾವಣೆಯಲ್ಲಿ ಜನರ ಗಮನ ಬೇರೆಡೆಗೆ ಸೆಳೆದು ಮತ ಗಳಿಕೆ ಮಾಡುವ ಏಕೈಕ ದುರುದ್ದೇಶದಿಂದ ಆಯೋಗದ ಮೇಲೆ ಸುಳ್ಳು ಆರೋಪ ಮಾಡುತ್ತಿದ್ದಾರೆ. ಬಿಹಾರದಲ್ಲಿ ಸೋಲುವ ಹತಾಶೆ ಅವರನ್ನು ಕಾಡುತ್ತಿದೆ ಎಂದು ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಆ.16ರಂದು ʻಧರ್ಮಸ್ಥಳ ಚಲೋʼ ಅಭಿಯಾನ – ಧರ್ಮಸ್ಥಳದೊಂದಿಗೆ ನಾವಿದ್ದೇವೆ ಎಂದ ಶಾಸಕ ಎಸ್.ಆರ್ ವಿಶ್ವನಾಥ್

    ರಾಹುಲ್ ಗಾಂಧಿ ಲೆಕ್ಕ ಸುಳ್ಳು
    ರಾಹುಲ್ ಗಾಂಧಿ ಅಸತ್ಯದ ಮಾಹಿತಿ ಇಟ್ಟುಕೊಂಡು ಜನರನ್ನು ದಾರಿ ತಪ್ಪಿಸುತ್ತಿದ್ದಾರೆ. ಅವರು ತಮ್ಮ ಪಕ್ಷ ಮತಗಳ್ಳತನದಲ್ಲಿ ತೊಡಗಿತ್ತು ಎಂಬುದನ್ನು ಮರೆಮಾಚುವ ದುರುದ್ದೇಶದಿಂದ ಜನರ ಗಮನ ಬೇರೆಡೆಗೆ ಸೆಳೆಯುವ ನಾಟಕ ಆಡುತ್ತಿದ್ದಾರೆ. ಶಿವಾಜಿನಗರ, ಸರ್ವಜ್ಞನಗರ ಸೇರಿದಂತೆ ನಗರದ ಹಲವಾರು ವಿಧಾನಸಭೆ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಮತಗಳ್ಳತನ ಮಾಡಿದೆ. ಅದಕ್ಕೆ ದಾಖಲೆಗಳು ಇವೆ ಎಂದು ಕೆಲ ಮಹತ್ವದ ದಾಖಲೆಗಳನ್ನು ಬಿಡುಗಡೆ ಮಾಡಿದ್ದಾರೆ.

    ಬೆಂಗಳೂರು ನಗರದಲ್ಲಿ ಕಾಂಗ್ರೆಸ್ ಗೆದ್ದಿರುವ ಬಹುತೇಕ ವಿಧಾನಸಭೆ ಕ್ಷೇತ್ರಗಳಲ್ಲಿ ಮತಗಳ್ಳತನ ನಡೆದಿದೆ. ತಾವು ಅಂತಹ ತಪ್ಪು ಮಾಡಿ ಆಯೋಗದ ಮೇಲೆ ಆರೋಪ ಮಾಡುತ್ತಿದೆ ಕಾಂಗ್ರೆಸ್. ಈ ದಾಖಲೆಗಳ ಬಗ್ಗೆ ರಾಹುಲ್ ಗಾಂಧಿ ಅವರು, ಕಾಂಗ್ರೆಸ್ ನಾಯಕರು ಮಾತನಾಡಬೇಕು. ನಾನು ದಾಖಲೆಗಳನ್ನು ಬಿಡುಗಡೆ ಮಾಡಿದ್ದೇನೆ. ಚರ್ಚೆಗೆ ಬರಲಿ, ನಾನು ತಯಾರಿದ್ದೇನೆ ಎಂದು ಸವಾಲೆಸಿದ್ದಾರೆ.

  • ಪ್ರಜಾಪ್ರಭುತ್ವಕ್ಕೆ ವಿಷವಿಕ್ಕುವ ಘೋರ ಷಡ್ಯಂತ್ರ‍ – ರಾಹುಲ್ ವಿರುದ್ಧ ಹೆಚ್‌ಡಿಕೆ ಕಿಡಿ

    ಪ್ರಜಾಪ್ರಭುತ್ವಕ್ಕೆ ವಿಷವಿಕ್ಕುವ ಘೋರ ಷಡ್ಯಂತ್ರ‍ – ರಾಹುಲ್ ವಿರುದ್ಧ ಹೆಚ್‌ಡಿಕೆ ಕಿಡಿ

    ಬೆಂಗಳೂರು: ಅಮೃತಕಾಲದ ಪ್ರಜಾಪ್ರಭುತ್ವಕ್ಕೆ ವಿಷವಿಕ್ಕುವ ಘೋರ ಷಡ್ಯಂತ್ರ‍ ಮಾಡಲಾಗುತ್ತಿದೆ ಎಂದು ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ (H D Kumaraswamy) ಎಕ್ಸ್ ಮೂಲಕ ಕಿಡಿಕಾರಿದ್ದಾರೆ.

    ಗುರುವಾರ ರಾಹುಲ್‌ಗಾಂಧಿ (Rahul Gandhi) ನವದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಲೋಕಸಭಾ ಚುನಾವಣೆ ವೇಳೆ ಮತಗಳ್ಳತನ ನಡೆದಿದೆ ಗಂಭೀರ ಆರೋಪ ಮಾಡಿದ್ದರು. ಈ ಕುರಿತು ಎಕ್ಸ್ನಲ್ಲಿ ಪೋಸ್ಟ್ ಮಾಡಿದ ಅವರು, ಚುನಾವಣೆ ಆಯೋಗದ (Election Commission) ಮೇಲೆ ಸುಳ್ಳಿನ ಸುರಿಮಳೆ ಹಾಗೂ ಜನತಂತ್ರಕ್ಕೆ ನೇಣು ಬಿಗಿಯುವ ದೂರ್ತ ಹುನ್ನಾರ ಮಾಡುತ್ತಿದ್ದಾರೆ. ಅಮೃತಕಾಲದ ಪ್ರಜಾಪ್ರಭುತ್ವಕ್ಕೆ ವಿಷವಿಕ್ಕುವ ಘೋರ ಷಡ್ಯಂತ್ರ‍ ಮಾಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: ಮಹೇಶ್‌ ಶೆಟ್ಟಿ ತಿಮರೋಡಿ, ಮಟ್ಟಣ್ಣನವರ್, ಪುನೀತ್‌ ಕೆರೆಹಳ್ಳಿ ವಿರುದ್ಧ ಎಫ್‌ಐಆರ್‌ ದಾಖಲು

    ಸಾಂವಿಧಾನಿಕ ಸಂಸ್ಥೆಗಳ ಮೇಲೆ ಅಸತ್ಯದ ಆರೋಪದ ಮೂಲಕ ಅನುಮಾನದ ಪ್ರಯೋಜನ ಪಡೆಯುವ ಕಿಡಿಗೇಡಿಗಳ ಪಿತೂರಿ ನಡೆಯುತ್ತಿದೆ. ಚುನಾವಣೆಯಲ್ಲಿ ಎಸಗಿದ ಪಾಪವನ್ನು ಸುಳ್ಳಿನಿಂದ ಮುಚ್ಚಿಕೊಳ್ಳುವ ಗೂಬೆಲ್ ರಾಜಕಾರಣ. ಮತಗಳ್ಳತನಕ್ಕೆ ಒಂದೇ ಮದ್ದು. ಮತದಾರರ ಗುರುತಿನ ಚೀಟಿಗೆ ಆಧಾರ್ ಸಂಖ್ಯೆ ಲಿಂಕ್ ಮಾಡುವುದು. ಅಷ್ಟು ಮಾಡಿದರೆ ಮತಗಳ್ಳರ ಆಟಕ್ಕೆ ಅಂಕೆ ಬೀಳುವುದು ಗ್ಯಾರಂಟಿ ಎಂದಿದ್ದಾರೆ. ಇದನ್ನೂ ಓದಿ: ಕಾಂತಾರ ಚಾಪ್ಟರ್ 1| ಕನಕವತಿಯ ಮೊದಲ ನೋಟ ವರಮಹಾಲಕ್ಷ್ಮಿಯಂದು ಅನಾವರಣ

    ಕೇಂದ್ರೀಯ ಚುನಾವಣೆ ಆಯೋಗಕ್ಕೆ ನನ್ನ ಮನವಿ ಅಥವಾ ಒತ್ತಾಯ ಇಷ್ಟೇ, ಮುಳ್ಳನ್ನು ಮುಳ್ಳಿನಿಂದಲೇ ತೆಗೆಯಿರಿ ಎಂದು ಹೇಳಿದ್ದಾರೆ. ಇದನ್ನೂ ಓದಿ: ಮಂತ್ರಾಲಯದಲ್ಲಿ ರಾಯರ 354ನೇ ಆರಾಧನಾ ಮಹೋತ್ಸವ – ಇಂದಿನಿಂದ 7 ದಿನ ಸಪ್ತರಾತ್ರೋತ್ಸವ

    ರಾಹುಲ್‌ಗಾಂಧಿ ಅವರ ಆರೋಪವೇನು?
    ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದಲ್ಲಿ ಬರುವ ಮಹಾದೇವಪುರದಲ್ಲಿ (Mahadevapura) ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಭಾರೀ ಅಕ್ರಮ ನಡೆದಿದೆ. ಮಹಾರಾಷ್ಟ್ರ, ಹರಿಯಾಣ, ಕರ್ನಾಟಕ ಚುನಾವಣೆ ಸೇರಿ ಹಲವೆಡೆ ಮತಗಳ್ಳತನ ಆಗಿದೆ. ಕಳೆದ ಐದು ತಿಂಗಳಲ್ಲಿ ಮಹಾರಾಷ್ಟ್ರಕ್ಕೆ ಅತಿ ಹೆಚ್ಚು ಮತದಾರರು ಸೇರ್ಪಡೆಯಾಗಿದ್ದಾರೆ. ಜನಸಂಖ್ಯೆಗಿಂತ ಹೆಚ್ಚು ಮತದಾರರಿದ್ದಾರೆ ಎಂದು ದಾಖಲೆ ಸಮೇತವಾಗಿ ಆರೋಪಿಸಿದ್ದರು.

  • ಪ್ರಜ್ವಲ್‍ಗೆ ಶಿಕ್ಷೆ – ಕೋರ್ಟ್ ತೀರ್ಪಿಗೆ ಯಾರೇ ಆದರೂ ತಲೆ ಬಾಗಬೇಕಾಗುತ್ತದೆ: ನಿಖಿಲ್ ಕುಮಾರಸ್ವಾಮಿ

    ಪ್ರಜ್ವಲ್‍ಗೆ ಶಿಕ್ಷೆ – ಕೋರ್ಟ್ ತೀರ್ಪಿಗೆ ಯಾರೇ ಆದರೂ ತಲೆ ಬಾಗಬೇಕಾಗುತ್ತದೆ: ನಿಖಿಲ್ ಕುಮಾರಸ್ವಾಮಿ

    ಚಿತ್ರದುರ್ಗ: ಕೋರ್ಟ್ ತೀರ್ಪಿಗೆ ಯಾರೇ ಆದರೂ ತಲೆ ಬಾಗಬೇಕಾಗುತ್ತದೆ ಎಂದು ಜೆಡಿಎಸ್ (JDS) ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ (Nikhil Kumaraswamy) ಹೇಳಿದ್ದಾರೆ.

    ಹಿರಿಯೂರು ತಾಲೂಕಿನ ಮಸ್ಕಲ್ ಬಳಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಈ ವೇಳೆ, ಪ್ರಜ್ವಲ್ ರೇವಣ್ಣ (Prajwal Revanna) ವಿರುದ್ಧ ಸೆಷನ್ ಕೋರ್ಟ್‍ನಲ್ಲಿ ಆದೇಶ ಪ್ರಕಟಗೊಂಡಿದೆ. ಕೋರ್ಟ್ ತೀರ್ಪಿನ ಬಗ್ಗೆ ಹೆಚ್ಚಿನ ವಿಶ್ಲೇಷಣೆಯ ಅಗತ್ಯವಿಲ್ಲ ಎಂದಿದ್ದಾರೆ. ಇದನ್ನೂ ಓದಿ: ಕಾಲೇಜಲ್ಲಿ ನಾನು ಮೆರಿ‌ಟ್‌ ವಿದ್ಯಾರ್ಥಿ, ಶಿಕ್ಷೆ ಕೊಡುವಾಗ ನನ್ನ ಕುಟುಂಬವನ್ನ ಪರಿಗಣಿಸಿ: ಕೋರ್ಟಲ್ಲಿ ಪ್ರಜ್ವಲ್‌ ರೇವಣ್ಣ ಕಣ್ಣೀರು

    ಪ್ರಜ್ವಲ್ ಮೇಲೆ ಆರೋಪ ಬಂದ ತಕ್ಷಣ ಪಕ್ಷದಿಂದ ಅಮಾನತು ಮಾಡಲಾಗಿತ್ತು. ನಮ್ಮ ಪಕ್ಷದ ವರಿಷ್ಠರು ಪಕ್ಷದಿಂದ ಅಮಾನತಿನಲ್ಲಿಟ್ಟಿದ್ದರು. ಆಗ ಅಪರಾಧಿನೋ, ಅಲ್ಲವೋ ಎಂಬ ತೀರ್ಪು ಬಂದಿರಲಿಲ್ಲ. ವರಿಷ್ಠರ ತೀರ್ಮಾನದ ಸ್ಪಷ್ಟತೆ ಅರ್ಥ ಮಾಡಿಕೊಳ್ಳಬೇಕಾಗುತ್ತದೆ. ಇದಕ್ಕಿಂತ ಹೆಚ್ಚಾಗಿ ಈ ವಿಷಯದ ಬಗ್ಗೆ ನಾನು ಪ್ರಯಿಕ್ರಿಯಿಸಲ್ಲ ಎಂದಿದ್ದಾರೆ. ಇದನ್ನೂ ಓದಿ: ಅತ್ಯಾಚಾರ ಕೇಸಲ್ಲಿ ಅಪರಾಧಿ; ತೀರ್ಪು ಪ್ರಕಟವಾಗುತ್ತಿದ್ದಂತೆ ಕೋರ್ಟ್‌ನಲ್ಲಿ ಕಣ್ಣೀರಿಟ್ಟ ಪ್ರಜ್ವಲ್ ರೇವಣ್ಣ

  • ಪ್ರಜ್ವಲ್ ರೇವಣ್ಣ ಶಿಕ್ಷೆ ಬಗ್ಗೆ ನಮಗಿಂತ ಜೆಡಿಎಸ್ – ಬಿಜೆಪಿ ನಾಯಕರ ಪ್ರತಿಕ್ರಿಯೆ ಬಹುಮುಖ್ಯ: ಡಿಕೆಶಿ

    ಪ್ರಜ್ವಲ್ ರೇವಣ್ಣ ಶಿಕ್ಷೆ ಬಗ್ಗೆ ನಮಗಿಂತ ಜೆಡಿಎಸ್ – ಬಿಜೆಪಿ ನಾಯಕರ ಪ್ರತಿಕ್ರಿಯೆ ಬಹುಮುಖ್ಯ: ಡಿಕೆಶಿ

    ನವದೆಹಲಿ: ಪ್ರಜ್ವಲ್ ರೇವಣ್ಣಗೆ (Prajwal Revanna) ಜೀವಾವಧಿ ಶಿಕ್ಷೆಯಾಗಿರುವ ಬಗ್ಗೆ ನಾವು ಮಾತನಾಡಿದರೆ ರಾಜಕೀಯವಾಗುತ್ತದೆ. ಹೀಗಾಗಿ ಜೆಡಿಎಸ್-ಬಿಜೆಪಿ ನಾಯಕರು ಪ್ರತಿಕ್ರಿಯೆ ನೀಡುವುದು ಬಹುಮುಖ್ಯ ಎಂದು ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಹೇಳಿದರು.

    ನವದೆಹಲಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈ ತೀರ್ಪಿನ ಬಗ್ಗೆ ನನ್ನ ಪ್ರತಿಕ್ರಿಯೆ ಕೇಳುವುದಕ್ಕಿಂತ ಅವರದ್ದೇ ಪಕ್ಷ ಜೆಡಿಎಸ್ (JDS) ಹಾಗೂ ಅವರ ಮೈತ್ರಿ ಪಕ್ಷ ಬಿಜೆಪಿ (BJP) ನಾಯಕರನ್ನು ಕೇಳಬೇಕು. ಏನು ಸರಿ, ಏನು ಸರಿಯಿಲ್ಲ ಎಂದು ಅವರು ಹೇಳಬೇಕು. ಅವರಿಗೆ ಈ ಬಗ್ಗೆ ಪ್ರತಿಕ್ರಿಯೆ ನೀಡುವ ಶಕ್ತಿ, ಸಾಮರ್ಥ್ಯ ಇದೆ. ಜೆಡಿಎಸ್ ರಾಜ್ಯಾಧ್ಯಕ್ಷರು, ರಾಷ್ಟ್ರೀಯ ಅಧ್ಯಕ್ಷರು, ಯುವ ಘಟಕದ ಅಧ್ಯಕ್ಷರು ಪ್ರತಿಕ್ರಿಯೆ ನೀಡಲಿ. ನಾವು ಕಾನೂನಿಗೆ ಗೌರವ ಕೊಟ್ಟು, ಅದು ಹೇಳಿದಂತೆ ಕೇಳಿಕೊಂಡು ಬರುತ್ತೇವೆ. ಅಶೋಕ್, ನಾರಾಯಣಸ್ವಾಮಿ, ಸಿಟಿ ರವಿ ಸೇರಿದಂತೆ ಬಿಜೆಪಿ ಪ್ರಮುಖ ನಾಯಕರು ಯಾಕೆ ಮಾತನಾಡುತ್ತಿಲ್ಲ ಎಂದು ಪ್ರಶ್ನಿಸಿದರು. ಇದನ್ನೂ ಓದಿ: Belagavi | ಮುಸ್ಲಿಂ ಹೆಡ್ ಮಾಸ್ಟರ್ ವರ್ಗಾವಣೆ ಮಾಡಲು ಮಕ್ಕಳಿಗೆ ವಿಷವಿಟ್ಟ ಪಾಪಿಗಳು

    ವಿಚಾರಣೆ ವೇಳೆಯಲ್ಲೂ ಪ್ರಜ್ವಲ್ ರೇವಣ್ಣ ಇದನ್ನು ಷಡ್ಯಂತ್ರ ಎಂದು ವಾದ ಮಂಡಿಸಿದ್ದಾರೆ ಎಂಬ ಕುರಿತು ಪ್ರತಿಕ್ರಿಯಿಸಿ, ನನಗೆ ಆ ಬಗ್ಗೆ ಗೊತ್ತಿಲ್ಲ. ಅವರು ನ್ಯಾಯಾಲಯದಲ್ಲಿ ಕೊಟ್ಟಿರುವ ಹೇಳಿಕೆ ಬಗ್ಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ ಎಂದು ತಿಳಿಸಿದರು. ಇದನ್ನೂ ಓದಿ: ಕಲಬುರಗಿ ಕರ್ನಾಟಕ ಕೇಂದ್ರಿಯ ವಿವಿ ವಿದ್ಯಾರ್ಥಿನಿ ಕೆನ್ನೆಗೆ ಮುತ್ತಿಟ್ಟ ಕ್ಯಾಂಟೀನ್ ಓನರ್

    ರಾಹುಲ್ ಗಾಂಧಿ ತಮ್ಮ ಸಂದೇಶ ನೀಡಿದ್ದಾರೆ:
    ರಾಹುಲ್ ಗಾಂಧಿ ಅವರ ಪ್ರತಿಭಟನೆ ಬಗ್ಗೆ ಮಾತನಾಡಿ, ನಾನು ಈ ವಿಚಾರವಾಗಿ ಹೆಚ್ಚು ಚರ್ಚೆ ಮಾಡುವುದಿಲ್ಲ. ರಾಹುಲ್ ಗಾಂಧಿ ಅವರು ತಮ್ಮ ಸಂದೇಶ ತಿಳಿಸಲಿದ್ದಾರೆ. ಸಂವಿಧಾನ ಉಳಿಸಿ, ಪ್ರಜಾಪ್ರಭುತ್ವ ರಕ್ಷಿಸಿ ಹೋರಾಟದ ವಿಚಾರವಾಗಿ ರಾಹುಲ್ ಗಾಂಧಿ ಅವರು ದೇಶಕ್ಕೆ ತಮ್ಮ ಸಂದೇಶ ರವಾನಿಸಿದ್ದಾರೆ ಎಂದು ಹೇಳಿದರು. ಇದನ್ನೂ ಓದಿ: ಭಾರತದ ಮೇಲೆ ಅಮೆರಿಕ 25% ಟ್ಯಾರಿಫ್‌ – ‘ಸ್ವದೇಶಿ’ ವಸ್ತು ಖರೀದಿಸಿ: ಮೋದಿ ಕರೆ

    ರಾಹುಲ್ ಗಾಂಧಿ ಅವರ ಪ್ರತಿಭಟನೆ ದಿನ ಸಾರಿಗೆ ನೌಕರರ ಮುಷ್ಕರದ ಬಗ್ಗೆ ಪ್ರತಿಕ್ರಿಯಿಸಿ, ಅವರು ತಮ್ಮದೇ ಆದ ವಿಚಾರ ಇಟ್ಟುಕೊಂಡು ಪ್ರತಿಭಟನೆ ಮಾಡುತ್ತಿದ್ದಾರೆ. ಅವರು ಈ ಹಿಂದೆ ಸಮಯಾವಕಾಶ ಕೇಳಿದ್ದರು. ಅವರನ್ನು ಕರೆದು ಮಾತನಾಡಬೇಕು ಎಂದು ಸಿಎಂ ಹೇಳಿದ್ದರು. ಈಗಾಗಲೇ ನಮ್ಮ ಸಾರಿಗೆ ಸಚಿವರು ಕರೆಸಿ ಮಾತನಾಡಿದ್ದಾರೆ. ಅದನ್ನು ಸೂಕ್ತ ರೀತಿಯಲ್ಲಿ ಬಗೆಹರಿಸಲಾಗುವುದು ಎಂದರು. ಇದನ್ನೂ ಓದಿ: ಪತ್ನಿಗೆ ಅಕ್ರಮ ಸಂಬಂಧ – ಎರಡು ಮಕ್ಕಳಿಗೆ ವಿಷವುಣಿಸಿ ಪತಿ ಆತ್ಮಹತ್ಯೆ

  • ಡಿಕೆಶಿಯವರು ಉಡಾಫೆ ಬಿಟ್ಟು ರಾಜ್ಯದ ಅಭಿವೃದ್ಧಿ ಕಡೆ ಗಮನ ಕೊಡಲಿ – ನಿಖಿಲ್ ಕುಮಾರಸ್ವಾಮಿ

    ಡಿಕೆಶಿಯವರು ಉಡಾಫೆ ಬಿಟ್ಟು ರಾಜ್ಯದ ಅಭಿವೃದ್ಧಿ ಕಡೆ ಗಮನ ಕೊಡಲಿ – ನಿಖಿಲ್ ಕುಮಾರಸ್ವಾಮಿ

    ಬೆಂಗಳೂರು: ಡಿಕೆ ಶಿವಕುಮಾರ್ (DK Shivakumar) ಅವರು ಉಡಾಫೆ ಬಿಟ್ಟು ರಾಜ್ಯದ ಅಭಿವೃದ್ಧಿ ಕಡೆ ಗಮನ ಕೊಡಲಿ ಎಂದು ಜೆಡಿಎಸ್ (JDS) ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ (Nikhil Kumaraswamy) ವಾಗ್ದಾಳಿ ನಡೆಸಿದ್ದಾರೆ.

    ಎಕ್ಸ್ ಖಾತೆಯಲ್ಲಿ ಟ್ವೀಟ್ ಮಾಡಿರುವ ಅವರು, ಜೆಡಿಎಸ್ ಪಕ್ಷದ ಕಾಲ ಮುಗಿಯಿತು ಎಂಬ ಡಿಸಿಎಂ ಡಿಕೆ ಶಿವಕುಮಾರ್ ಹೇಳಿಕೆ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.ಇದನ್ನೂ ಓದಿ: ಡಿ-ಬಾಸ್ ಫ್ಯಾನ್ಸ್‌ನಿಂದ ಅಶ್ಲೀಲ ಮೆಸೇಜ್ – ನಟಿ ರಮ್ಯಾ ಬೆಂಬಲಕ್ಕೆ ನಿಂತ ದೊಡ್ಮನೆ ಕುಟುಂಬ

    ಎಕ್ಸ್‌ನಲ್ಲಿ ಏನಿದೆ?
    ಶಿವಕುಮಾರಣ್ಣ, ಪ್ರಾದೇಶಿಕ ಪಕ್ಷ ಕಟ್ಟುವುದು, ಯಾರೋ ಗೆದ್ದ ಕಪ್ ಹಿಡಿದು ಮುತ್ತಿಟ್ಟು, ರೀಲ್ಸ್ ಮಾಡುವಷ್ಟು ಸುಲಭವಲ್ಲ. ಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬಂದು ಎರಡು ವರ್ಷ ಕಳೆದರೂ ಕೂಡ ನಿಗಮ ಮಂಡಳಿಗಳಲ್ಲಿ ನಿಮ್ಮ ಕಾರ್ಯಕರ್ತರಿಗೆ ಅಧಿಕಾರ ಕೊಡುವ ಯೋಗ್ಯತೆ ಇಲ್ಲ. ಆದರೂ ನಮ್ಮ ಕಾರ್ಯಕರ್ತರನ್ನು ಪಕ್ಷಕ್ಕೆ ಕರೆಯುತ್ತಿದ್ದಾರೆ. ಇದೇ ಉತ್ಸಾಹ ಬೆಂಗಳೂರಿನ ರಸ್ತೆಗಳ ಗುಂಡಿ ಮುಚ್ಚುವ ಬಗ್ಗೆ ಇದ್ದಿದ್ದರೆ ಸ್ವಲ್ಪ ಮರ್ಯಾದೆಯಾದರೂ ಉಳಿಯುತ್ತಿತ್ತು. ಉಡಾಫೆ ಬಿಟ್ಟು ರಾಜ್ಯದ ಅಭಿವೃದ್ಧಿಯ ಬಗ್ಗೆ ಗಮನ ಹರಸಿ ಎಂದು ಕಿಡಿಕಾರಿದ್ದಾರೆ.

    Nikhil Kumaraswamy Tweet
    Nikhil Kumaraswamy Tweet

    ತಾಯಿ ಚಾಮುಂಡೇಶ್ವರಿಯ ಆಶೀರ್ವಾದ, ಮಾನ್ಯ ಮಾಜಿ ಪ್ರಧಾನ ಮಂತ್ರಿಗಳಾದ ಹೆಚ್.ಡಿ.ದೇವೇಗೌಡ ಅವರು ಮತ್ತು ಮಾಜಿ ಮುಖ್ಯಮಂತ್ರಿಗಳು ಹಾಗೂ ಕೇಂದ್ರ ಸಚಿವರಾಗಿರುವ ಕುಮಾರಣ್ಣನವರ ವರ್ಚಸ್ಸಿನ ಮುಂದೆ ನಿಮ್ಮ ಮಾತುಗಳಿಗೆ ಕವಡೆಕಾಸಿನ ಕಿಮ್ಮತ್ತು ಕೊಡುವವರು ಯಾರು ಇಲ್ಲ. `ಗ್ಯಾರಂಟಿ’ ಅನುಷ್ಠಾನ ಸಮಿತಿ ಹೆಸರಿನಲ್ಲಿ, ರಾಜ್ಯದ ಜನರ ತೆರಿಗೆ ಹಣದಲ್ಲಿ `ಗೌರವ’ ಧನ ಪಡೆದು ಕೆಲಸ ಮಾಡುತ್ತಿರುವ ಗಂಜಿ ಗಿರಾಕಿ ಕಾಂಗ್ರೆಸ್ ಕಾರ್ಯಕರ್ತರ ರೀತಿಯಲ್ಲ ನಮ್ಮವರು. ಜೆಡಿಎಸ್‌ನ ಕಾರ್ಯಕರ್ತರು ನಿಷ್ಠಾವಂತರು ಎಂದು ಹೇಳಿದ್ದಾರೆ.ಇದನ್ನೂ ಓದಿ: Operation Sindoor Debate | ಹೋರಾಡಿದ್ದು ಸೇನೆ, ಕ್ರೆಡಿಟ್‌ ಬಯಸುತ್ತಿರೋದು ಮೋದಿ – ಪ್ರಿಯಾಂಕಾ ಗಾಂಧಿ ಕಿಡಿ

  • ಮಜಾವಾದಿ ಸಿದ್ದರಾಮಯ್ಯ ಕೊಟ್ಟಿದ್ದಕ್ಕಿಂತ ಕಿತ್ತುಕೊಂಡಿದ್ದೇ ಹೆಚ್ಚು – ಜೆಡಿಎಸ್

    ಮಜಾವಾದಿ ಸಿದ್ದರಾಮಯ್ಯ ಕೊಟ್ಟಿದ್ದಕ್ಕಿಂತ ಕಿತ್ತುಕೊಂಡಿದ್ದೇ ಹೆಚ್ಚು – ಜೆಡಿಎಸ್

    – ಕಾಂಗ್ರೆಸ್ ಸರ್ಕಾರ ದಲಿತ ವಿರೋಧಿ ಸರ್ಕಾರ

    ಬೆಂಗಳೂರು: ಗ್ಯಾರಂಟಿಗೆ SCSP-TSP ಹಣ ಬಳಕೆ ಮಾಡ್ತಿರೋ ಸರ್ಕಾರದ ವಿರುದ್ದ ಜೆಡಿಎಸ್ (JDS) ಕಿಡಿಕಾರಿದೆ. ಎಕ್ಸ್‌ನಲ್ಲಿ ಈ ಬಗ್ಗೆ ಆಕ್ರೋಶ ಹೊರ ಹಾಕಿರುವ ಜೆಡಿಎಸ್, ಕಾಂಗ್ರೆಸ್ (Congress) ಸರ್ಕಾರ ದಲಿತರಿಗೆ ಅನ್ಯಾಯ ಮಾಡುತ್ತಿದೆ ಎಂದು ಆರೋಪ ಮಾಡಿದೆ.

    ಪೋಸ್ಟ್‌ನಲ್ಲಿ ಏನಿದೆ?
    ದಲಿತರನ್ನು ಕೇವಲ ಮತಬ್ಯಾಂಕ್‌ ಆಗಿ ಬಳಸಿಕೊಳ್ಳುತ್ತಲೇ ಬಂದಿರುವ ಕಾಂಗ್ರೆಸ್ ಮತ್ತೆ ದಲಿತರ ಬೆನ್ನಿಗೆ ಚೂರಿ ಹಾಕಿದೆ. ಮಜಾವಾದಿ ಸಿದ್ದರಾಮಯ್ಯ (CM Siddaramaiah) ಅಹಿಂದ ಸಮುದಾಯಕ್ಕೆ ಕೊಟ್ಟಿದ್ದಕ್ಕಿಂತ ಕಿತ್ತುಕೊಂಡಿದ್ದೇ ಹೆಚ್ಚು. ಇದನ್ನೂ ಓದಿ: ಕಾನೂನು, ಕಾಯ್ದೆ ಪ್ರಕಾರವೇ ಗ್ಯಾರಂಟಿಗೆ ಎಸ್‌ಸಿಎಸ್‌ಪಿ-ಟಿಎಸ್‌ಪಿ ಹಣ ಬಳಕೆ: ಮಹದೇವಪ್ಪ

    ದಲಿತ ವಿರೋಧಿ ಸಿದ್ದರಾಮಯ್ಯ 2025-26ನೇ ಸಾಲಿನಲ್ಲಿ SCSP/TSP ಕಾರ್ಯಕ್ರಮಗಳಿಗೆ ಮೀಸಲಿಟ್ಟಿದ್ದ 42,017.51 ಕೋಟಿ ರೂ.ನಲ್ಲಿ 11,896.84 ಕೋಟಿ ರೂ. ಹಣವನ್ನು ಗ್ಯಾರಂಟಿ ಯೋಜನೆಗೆ ಹಂಚಿಕೆ ಮಾಡಿಕೊಳ್ಳುತ್ತಿದೆ. ಪರಿಶಿಷ್ಟರ SCSP/TSP ಹಣಕ್ಕೆ ಕನ್ನ ಹಾಕಿದ ಸಿದ್ದರಾಮಯ್ಯ. 2025-26ನೇ ಸಾಲಿನಲ್ಲಿ 11,896.84 ಕೋಟಿ ರೂ. 2024-25ನೇ ಸಾಲಿನಲ್ಲಿ 14.282.38 ಕೋಟಿ ರೂ. 2023-24ನೇ ಸಾಲಿನಲ್ಲಿ 11,114 ಕೋಟಿ ರೂ. ಹಂಚಿಕೆ ಮಾಡಲಾಗಿದೆ.

    ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಕಲ್ಯಾಣಕ್ಕೆ ವಿನಿಯೋಗವಾಗಬೇಕಿದ್ದ ಸಾವಿರಾರು ಕೋಟಿ ರೂ. ಹಣವನ್ನ ಅವೈಜ್ಞಾನಿಕ ಗ್ಯಾರಂಟಿಗಳಿಗೆ (Guarantee Schemes) ದುರುಪಯೋಗ ಮಾಡುತ್ತಿರುವ ಕಾಂಗ್ರೆಸ್‌ ಸರ್ಕಾರ ಮತ್ತೊಮ್ಮೆ ದಲಿತರಿಗೆ ದ್ರೋಹ ಮಾಡುತ್ತಿದೆ ಎಂದು ಕಿಡಿಕಾರಿದೆ. ಇದನ್ನೂ ಓದಿ: ರಾಜ್ಯದಲ್ಲಿ ಸಿಎಂ ಬದಲಾವಣೆ ಅನ್ನೋದು ಬಿಜೆಪಿ ಸೃಷ್ಟಿ: ಬೋಸರಾಜು