Tag: jds

  • ಡಿ.ಕೆ ಶಿವಕುಮಾರ್‌ಗೆ ನಾಡಿನ ಜನ ಪಾಠ ಕಲಿಸೋ ದಿನ ದೂರವಿಲ್ಲ: ಜೆಡಿಎಸ್

    ಡಿ.ಕೆ ಶಿವಕುಮಾರ್‌ಗೆ ನಾಡಿನ ಜನ ಪಾಠ ಕಲಿಸೋ ದಿನ ದೂರವಿಲ್ಲ: ಜೆಡಿಎಸ್

    ಬೆಂಗಳೂರು: ನಗರದ (Bengaluru) ನಾಗರೀಕರಿಗೆ ಉಪಕಾರ ಸ್ಮರಣೆ ಇಲ್ಲ ಎಂಬ ಡಿಸಿಎಂ ಡಿ.ಕೆ ಶಿವಕುಮಾರ್ (D.K Shivakumar) ಹೇಳಿಕೆ ವಿರುದ್ಧ ಜೆಡಿಎಸ್ (JDS) ಕಿಡಿಕಾರಿದೆ. ಈ ವಿಚಾರವಾಗಿ ಸಾಮಾಜಿಕ ಜಾಲತಾಣ X ನಲ್ಲಿ ಟ್ವೀಟ್ ಮಾಡಿರುವ ಜೆಡಿಎಸ್, ಡಿಸಿಎಂ ಡಿ.ಕೆ ಶಿವಕುಮಾರ್ ನಿಮ್ಮ ಧಿಮಾಕಿನ ದುರಹಂಕಾರದ ಮಾತಿಗಳಿಗೆ ನಾಡಿನ ಜನರು ತಕ್ಕಪಾಠ ಕಲಿಸುತ್ತಾರೆ ಎಂದು ಎಚ್ಚರಿಕೆ ನೀಡಿದೆ.

    ಕಾಂಗ್ರೆಸ್ ಅಧಿಕಾರಕ್ಕೆ ಬರುವ ಮೊದಲು ಉಚಿತ, ಉಚಿತ, ಉಚಿತ, ಅಧಿಕಾರ ಹಿಡಿದ ಮೇಲೆ ಬೆಲೆ ಏರಿಕೆ ಖಚಿತ, ಖಚಿತ, ಖಚಿತ. ರಾಜ್ಯವನ್ನು ಲೂಟಿ ಮಾಡುತ್ತಿರುವ ಭ್ರಷ್ಟ ಕಾಂಗ್ರೆಸ್ ಸರ್ಕಾರ ಬೆಲೆಗಳನ್ನು ಏರಿಸುತ್ತಲೇ ನಾಡಿನ ಜನರ ನೆಮ್ಮದಿಯ ಬದುಕಿಗೆ ಕೊಳ್ಳಿ ಇಡುತ್ತಿದೆ ಎಂದು ವಾಗ್ದಾಳಿ ನಡೆಸಿದೆ.

    ನಾಗರಿಕರಿಗೆ ಉಪಕಾರ ಸ್ಮರಣೆ ಇಲ್ಲ, ಎಷ್ಟು ಮಾಡಿದ್ರೂ ಅಷ್ಟೇ. ಬೆಂಗಳೂರಲ್ಲಿ ನೀರಿನ ದರ ಹೆಚ್ಚಿಸೇ ಹೆಚ್ಚಿಸ್ತೀವಿ. ಅಧಿಕಾರಕ್ಕೆ ಬಂದ ಮೇಲೆ ಉಪಕಾರ ಸ್ಮರಣೆ ಇಲ್ಲ ಎಂದು ಜನರನ್ನು ಜರಿಯಲು ನಿಮಗೆ ಯಾವ ನೈತಿಕತೆ ಇದೆ? ಡಿ.ಕೆ ಶಿವಕುಮಾರ್ ನಿಮ್ಮ ಧೀಮಾಕಿನ, ದುರಂಹಕಾರದ ಮಾತುಗಳಿಗೆ ನಾಡಿನ ಜನರು ತಕ್ಕ ಪಾಠ ಕಲಿಸುವ ದಿನಗಳು ದೂರವಿಲ್ಲ ನೀರಿಕ್ಷಿಸಿ ಎಂದು ಟ್ವೀಟ್‌ನಲ್ಲಿ ಎಚ್ಚರಿಸಲಾಗಿದೆ.

  • ಚಾರ್ಜ್‌ಶೀಟ್‌ನಲ್ಲಿ ಹೆಸರಿರುವ ಕುಮಾರಸ್ವಾಮಿ ಕೇಂದ್ರ ಸಚಿವರಾಗಬಹುದಾ: ಪೊನ್ನಣ್ಣ ಪ್ರಶ್ನೆ

    ಚಾರ್ಜ್‌ಶೀಟ್‌ನಲ್ಲಿ ಹೆಸರಿರುವ ಕುಮಾರಸ್ವಾಮಿ ಕೇಂದ್ರ ಸಚಿವರಾಗಬಹುದಾ: ಪೊನ್ನಣ್ಣ ಪ್ರಶ್ನೆ

    ಬೆಂಗಳೂರು: ಅಕ್ರಮವಾಗಿ ಗಣಿ ಭೂಮಿ‌ ಮಂಜೂರು ಆರೋಪದಲ್ಲಿ ಚಾರ್ಜ್‌ಶೀಟ್‌ನಲ್ಲಿ ಹೆಸರು ಇರುವ ಕುಮಾರಸ್ವಾಮಿ‌ (H.D.Kumaraswamy) ಅವರು ಕೇಂದ್ರ ಸಚಿವರಾಗಬಹುದಾ ಎಂದು ಶಾಸಕ ಹಾಗೂ ಸಿಎಂ‌ ಕಾನೂನು ಸಲಹೆಗಾರ ಪೊನ್ನಣ್ಣ (Ponnanna) ಪ್ರಶ್ನಿಸಿದ್ದಾರೆ.

    ಬೆಂಗಳೂರಿನಲ್ಲಿ (Bengaluru) ಮಾತನಾಡಿದ ಅವರು, ಕುಮಾರಸ್ವಾಮಿ ಬಹಳ ದೊಡ್ಡ ನಾಯಕರಿದ್ದಾರೆ. ದಯವಿಟ್ಟು ಕೇಂದ್ರ ಸಚಿವರಾಗಿ ಮೇಕೆದಾಟಿಗೆ ಅನುಮತಿ ಕೊಡಿಸಲಿ. ಕೆಲವೊಮ್ಮೆ ರಾಜಕೀಯದಲ್ಲಿ ಯೋಗ್ಯತೆಗಿಂತ ಹೆಚ್ಚು ಯೋಗ ಬೇಕಾಗುತ್ತದೆ. ಇಬ್ಬರು ಸಂಸದರನ್ನು ಇಟ್ಟುಕೊಂಡು ಇವರು ಕೇಂದ್ರ ಸಚಿವರಾಗಿದ್ದಾರೆ. ಅದು ಅವರ ಯೋಗ ಎಂದು ಲೇವಡಿ ಮಾಡಿದ್ದಾರೆ. ಇದನ್ನೂ ಓದಿ: ರಾಜ್ಯಪಾಲರಿಗಾಗಲಿ, ಲೋಕಾಯುಕ್ತಕ್ಕಾಗಲಿ ವಕ್ತಾರನಲ್ಲ, ನಾನು ಕಾಂಗ್ರೆಸ್ ಪ್ರತಿನಿಧಿ: ಡಿಕೆಶಿ

    ಕುಮಾರಸ್ವಾಮಿ ವಿರುದ್ಧ ಗಂಭೀರ ಆರೋಪಗಳಿವೆ. ಲೋಕಾಯುಕ್ತ ತನಿಖಾ ಸಂಸ್ಥೆ ಕುಮಾರಸ್ವಾಮಿ ವಿರುದ್ಧ ಪ್ರಾಸಿಕ್ಯುಷನ್ ಕೇಳಿದೆ. ಇದನ್ನು ತಿರುಚಿ ಅವರು ಮಾತನಾಡುತ್ತಿದ್ದಾರೆ. ಲೋಕಾಯುಕ್ತ ಚಾರ್ಜ್‌ಶೀಟಲ್ಲಿ ಕಾನೂನುಬಾಹಿರ ರೆಕಮಂಡೇಷನ್ ಇದೆ ಎಂದು ಪ್ರಸ್ತಾಪ ಮಾಡಲಾಗಿದೆ. ಚಾರ್ಜ್‌ಶೀಟ್‌ನಲ್ಲಿ ಭ್ರಷ್ಟಾಚಾರದ ಹೆಸರು ಇರುವವರು ಕೇಂದ್ರ ಮಂತ್ರಿಯಾಗಿ ಮುಂದುವರಿಯಬಹುದಾ ಎಂದು ಪ್ರಶ್ನಿಸಿದ್ದಾರೆ.

    ವಿನಯ್ ಗೋಯೆಲ್ ಫ್ರಾಡ್. ಅವನು ಗಣಿಗೆ ಅರ್ಜಿಯೇ ಹಾಕಿರಲಿಲ್ಲ. ಕುಮಾರಸ್ವಾಮಿ ಅವನಿಗೆ ಅನುಕೂಲ ಮಾಡಿಕೊಡಲು ಗಣಿ ಸಂಪತ್ತು, ಅದಕ್ಕೆ ಕಾನೂನುಬಾಹಿರ ಅನುಮತಿ ನೀಡಿದ್ದರು. ಚಾರ್ಜ್‌ಶೀಟಲ್ಲಿ ಹೆಸರು ಇರುವವರು ಮಂತ್ರಿ ಆಗಬಹುದಾ ಎಂದು ಕೇಳಿದ್ದಾರೆ. ಇದನ್ನೂ ಓದಿ: ಕುಮಾರಸ್ವಾಮಿ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ಕೇಳಲು SIT ಪತ್ರ ಬರೆದಿದೆ: ಸಿದ್ದರಾಮಯ್ಯ

  • ಸಾಮಾಜಿಕ ನ್ಯಾಯದ ಪರ ಇರೋದಕ್ಕೆ ನನ್ನ ವಿರುದ್ಧ ಬಿಜೆಪಿ ಷಡ್ಯಂತ್ರ: ಸಿದ್ದರಾಮಯ್ಯ

    ಸಾಮಾಜಿಕ ನ್ಯಾಯದ ಪರ ಇರೋದಕ್ಕೆ ನನ್ನ ವಿರುದ್ಧ ಬಿಜೆಪಿ ಷಡ್ಯಂತ್ರ: ಸಿದ್ದರಾಮಯ್ಯ

    ಬೆಂಗಳೂರು: ನಾನು ಸಾಮಾಜಿಕ ನ್ಯಾಯದ ಪರವಾಗಿ ಇದ್ದೇನೆ ಅಂತ ಸಹಿಸಲು ಬಿಜೆಪಿಯವರಿಗೆ (BJP) ಆಗ್ತಿಲ್ಲ. ಹೀಗಾಗಿ ನನ್ನ ವಿರುದ್ಧ ಷಡ್ಯಂತ್ರ ಮಾಡ್ತಿದ್ದಾರೆ ಎಂದು ರಾಜ್ಯಪಾಲರು ನೀಡಿರುವ ಪ್ರಾಸಿಕ್ಯೂಷನ್ ಅನುಮತಿ ವಿರುದ್ಧ ಸಿಎಂ ಸಿದ್ದರಾಮಯ್ಯ (Siddaramaiah) ಮತ್ತೆ ಕಿಡಿಕಾರಿದ್ದಾರೆ.

    ಮಾಜಿ ಸಿಎಂ ದೇವರಾಜ ಅರಸು ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಾನು ದೇವರಾಜ್ ಅವರ ಸಾಮಾಜಿಕ ನ್ಯಾಯದ ಅಡಿಯಲ್ಲಿ ಕೆಲಸ ಮಾಡ್ತಿದ್ದೇನೆ. ಬಡವರ ಪರ ಇದ್ದೇನೆ. ಇದೆಲ್ಲವನ್ನೂ ಮಾಡ್ತಿದ್ದೇನೆ ಅಂತ ಬಿಜೆಪಿ ಅವರಿಗೆ ನನ್ನ ಮೇಲೆ ಕೋಪ. ಅದಕ್ಕೆ ಸಿದ್ದರಾಮಯ್ಯರನ್ನ ಹೇಗಾದ್ರು ಮಾಡಿ ಮುಗಿಸಬೇಕು ಎಂದು ಹುನ್ನಾರ ಮಾಡ್ತಿದ್ದಾರೆ ಎಂದು ಆರೋಪಿಸಿದರು.

    ನನ್ನ 40 ವರ್ಷಗಳ ರಾಜಕೀಯ ಜೀವನದಲ್ಲಿ ಯಾವುದೇ ತಪ್ಪು ಮಾಡಿಲ್ಲ. ನನ್ನ ರಾಜಕೀಯ ಜೀವನಕ್ಕೆ ಕಪ್ಪು ಚುಕ್ಕೆ ಇಡೋ ಪ್ರಯತ್ನ ಮಾಡ್ತಿದ್ದಾರೆ. ನಾನು ಏನು ತಪ್ಪು ಮಾಡಿದೇ ಹೋದರು ರಾಜೀನಾಮೆ ಕೊಡಿ ರಾಜೀನಾಮೆ ಕೊಡಿ ಅಂತ ಮಾತಾಡ್ತಿದ್ದಾರೆ. ಅದಕ್ಕೆ ಕೆಲವರು ತಮಟೆ ಹೊಡೆಯುತ್ತಿದ್ದಾರೆ‌. ಇದು ನನ್ನ ವಿರುದ್ದ ಮಾಡ್ತಿರೋ ಷಡ್ಯಂತ್ರ. ಇಂತಹ ಷಡ್ಯಂತ್ರಗಳನ್ನ ನಾವೆಲ್ಲ ಒಂದಾಗಿ ವಿರೋಧ ಮಾಡಬೇಕು. ಇಲ್ಲದೆ ಹೋದರೆ ನ್ಯಾಯ ಸಿಗೊಲ್ಲ ಎಂದು ಜನರಿಗೆ ಕರೆ ನೀಡಿದರು.

    ದೇವರಾಜ ಅರಸು ಮತ್ತು ರಾಜೀವ್ ಗಾಂಧಿ ಸಾಮಾಜಿಕ ‌ನ್ಯಾಯದ ಪರ‌ ಕೆಲಸ ಮಾಡಿದ್ದರು. ಇಬ್ಬರ ಹಾದಿಯಲ್ಲಿ ನಡೆಯೋ ಪ್ರಯತ್ನ ಮಾಡ್ತಿದ್ದೇನೆ‌. ಅಧಿಕಾರ ಇರಲಿ ಇರದೇ ಹೋಗಲಿ ಸಾಮಾಜಿಕ ನ್ಯಾಯದಲ್ಲಿ ನಾನು ರಾಜೀ ಆಗೊಲ್ಲ ಎಂದು ವಿರೋಧಿಗಳಿಗೆ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.

  • ಸಿದ್ದರಾಮಯ್ಯ ರಾಜೀನಾಮೆಗೆ ಆಗ್ರಹಿಸಿ ನಾಳೆ ಬಿಜೆಪಿ-ಜೆಡಿಎಸ್ ಪ್ರತಿಭಟನೆ

    ಸಿದ್ದರಾಮಯ್ಯ ರಾಜೀನಾಮೆಗೆ ಆಗ್ರಹಿಸಿ ನಾಳೆ ಬಿಜೆಪಿ-ಜೆಡಿಎಸ್ ಪ್ರತಿಭಟನೆ

    ಬೆಂಗಳೂರು: ಒಂದೆಡೆ ಸಿಎಂ ವಿರುದ್ಧ ಪ್ರಾಸಿಕ್ಯೂಷನ್‌ಗೆ ರಾಜ್ಯಪಾಲರ ಅನುಮತಿ ವಿರೋಧಿಸಿ ಕಾಂಗ್ರೆಸ್ ಪ್ರತಿಭಟನೆಗೆ ಇಳಿದಿದ್ದರೆ, ಮತ್ತೊಂದೆಡೆ ಬಿಜೆಪಿ ಸಹ ಹೋರಾಟದ ಹಾದಿಗೆ ಇಳಿದಿದೆ. ಸಿಎಂ ಸಿದ್ದರಾಮಯ್ಯ (Siddaramaiah) ರಾಜೀನಾಮೆಗೆ ಆಗ್ರಹಿಸಿ ಪ್ರತಿಭಟನೆ ನಡೆಸಲು ಬಿಜೆಪಿ ನಿರ್ಧರಿಸಿದೆ. ನಾಳೆ 11:30 ಕ್ಕೆ ವಿಧಾನಸೌಧದ ಗಾಂಧಿ ಪ್ರತಿಮೆ ಎದುರು ಪ್ರತಿಭಟನೆ ಮಾಡೋದಾಗಿ ವಿಪಕ್ಷ ನಾಯಕ ಆರ್.ಅಶೋಕ್ (R.Ashok) ತಿಳಿಸಿದ್ದಾರೆ.

    ಬೆಂಗಳೂರಿನಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದರು. ಸಿದ್ದರಾಮಯ್ಯ ತಾವು ಕ್ಲೀನ್ ಕ್ಲೀನ್ ಅಂತಾರೆ. ಅದೇನು ಕ್ಲೀನೋ? ಕಳೆದ ಸಲ ಸಿದ್ದರಾಮಯ್ಯ ವಿರುದ್ಧ 65 ಕೇಸ್ ಇದ್ವು. ಅವುಗಳನ್ನೆಲ್ಲ ಎಸಿಬಿ ಮೂಲಕ ಮುಚ್ಚಿ ಹಾಕಿಸಿದರು. ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ಕೊಟ್ಟಿದ್ದನ್ನು ಕಾಂಗ್ರೆಸ್‌ನವ್ರು ಸ್ವಾಗತ ಮಾಡಬೇಕಿತ್ತು. ಅವರು ತಾವು ಕ್ಲೀನ್ ಅಂತಾರಲ್ಲ. ತನಿಖೆ ನಡೆಯಲಿ ಅಂತಾ ಸ್ವಾಗತ ಮಾಡಬೇಕಿತ್ತು. ಈಗ ಕಾಂಗ್ರೆಸ್ ಹೈಕಮಾಂಡ್ ಸಿದ್ದರಾಮಯ್ಯ ಪರ ನಿಂತಿದೆ. ಯಾವ ನೈತಿಕತೆ ಇಟ್ಕೊಂಡು ಸಿದ್ದರಾಮಯ್ಯ ಪರ ನಿಲ್ತಾರೆ..? ನಾಳೆ ಸಿದ್ದರಾಮಯ್ಯ ರಾಜೀನಾಮೆಗೆ ಆಗ್ರಹಿಸಿ ನಾವು ಪ್ರತಿಭಟನೆ ಮಾಡ್ತೇವೆ. ಜೆಡಿಎಸ್ ಶಾಸಕರು ಕಳಿಸುವಂತೆ ಹೆಚ್ಡಿಕೆ ಜತೆಗೂ ಮಾತಾಡಿದ್ದೇನೆ ಎಂದು ಅಶೋಕ್ ಹೇಳಿದರು.‌ ಇದನ್ನೂ ಓದಿ: ರಾಜ್ಯಪಾಲರಿಂದ ಪ್ರಾಸಿಕ್ಯೂಷನ್ ಅನುಮತಿ; ಸರ್ಕಾರ ಸ್ವಲ್ಪಮಟ್ಟಿಗೆ ಶೇಕ್ ಆಗಿರೋದು ನಿಜ – ಪರಮೇಶ್ವರ್

    ಯಡಿಯೂರಪ್ಪ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ಕೊಟ್ಟಾಗ ರಾಜೀನಾಮೆ ಕೊಡಿ ಅಂತಾ ಸಿದ್ದರಾಮಯ್ಯ ಆಗ್ರಹ ಮಾಡಿದರು. ಈಗ ಸಿದ್ದರಾಮಯ್ಯ ಏನು ಮಾಡ್ತಿದ್ದಾರೆ? ಅವರು ರಾಜೀನಾಮೆ ಕೊಡಲಿ ಎಂದು ಆಗ್ರಹಿಸಿದರು.

    ಕಾಂಗ್ರೆಸ್ ಪ್ರತಿಭಟನಾಕಾರರ ವಿರುದ್ಧ ಕಿಡಿಕಾರಿದ ಅಶೋಕ್, ರಾಜ್ಯಪಾಲರ ಕಟೌಟ್‌ಗಳಿಗೆ ಬೆಂಕಿ ಹಚ್ಚಿದ್ದಾರೆ. ಆದರೆ ಪೊಲೀಸರು ಏನೂ ಕ್ರಮ ಕೈಗೊಳ್ಳದೇ ಮೌನವಾಗಿದ್ದಾರೆ. ನಮ್ಮ ಪ್ರತಿಭಟನೆಗೆ ದೂರು ದಾಖಲು ಮಾಡುವ ಪೊಲೀಸರು ಈಗ ಕೈ ಕಟ್ಟಿ ಕೂತಿದ್ದಾರೆ. ರಾಜ್ಯಾಂಗದ ಮುಖ್ಯಸ್ಥರ ಕಟೌಟ್‌ಗೆ ಬೆಂಕಿ ಹಚ್ಚಿದ್ರೂ ಕ್ರಮ ಇಲ್ಲ. ರಾಜ್ಯದಲ್ಲಿ ಆಡಳಿತ ವ್ಯವಸ್ಥೆ ಕುಸಿದಿದೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಸರ್ಕಾರವೇ ಸ್ತ್ರೀ ಕುಲ ಪೀಡಕರ ರಕ್ಷಣೆಗೆ ನಿಂತಿರುವ ಅನುಮಾನ ಮೂಡಿಸುತ್ತಿದೆ: ವಿಜಯೇಂದ್ರ ಕಿಡಿ

  • ಯೋಗೇಶ್ವರ್‌ಗೆ ಬಂಡಾಯ ಸ್ಪರ್ಧೆಯೇ ಗಟ್ಟಿ; ಕಾಂಗ್ರೆಸ್ ಸೇರ್ಪಡೆ ಹಾದಿ ಮತ್ತಷ್ಟು ಕಠಿಣ

    ಯೋಗೇಶ್ವರ್‌ಗೆ ಬಂಡಾಯ ಸ್ಪರ್ಧೆಯೇ ಗಟ್ಟಿ; ಕಾಂಗ್ರೆಸ್ ಸೇರ್ಪಡೆ ಹಾದಿ ಮತ್ತಷ್ಟು ಕಠಿಣ

    – ಡಿಕೆಶಿ ಮುನಿಸೇ ಸೈನಿಕನಿಗೆ ಮುಳ್ಳಾಗುತ್ತಾ?

    ರಾಮನಗರ: ಚನ್ನಪಟ್ಟಣ ಟಿಕೆಟ್ ಗೊಂದಲ ಸದ್ಯಕ್ಕೆ ಬಗೆಹರಿಯುವುದು ಅನುಮಾನ. ‘ದೋಸ್ತಿ’ ಪಾಳಯದಲ್ಲಿನ ರಾಜಕೀಯ ಚಟುವಟಿಕೆ ಗಮನಿಸಿದರೆ ಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ (C.P.Yogeshwar) ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸುವುದು ಗಟ್ಟಿಯಾಗಿದೆ. ಡಿ.ಕೆ.ಶಿವಕುಮಾರ್ ಜೊತೆಗಿನ ಮುನಿಸಿನಿಂದ ಕಾಂಗ್ರೆಸ್ ಸೇರ್ಪಡೆ ಹಾದಿ ಮತ್ತಷ್ಟು ಕಠಿಣವಾದಂತೆ ಭಾಸವಾಗುತ್ತಿದೆ.

    ಮುಹೂರ್ತಕ್ಕೂ ಮುನ್ನ ಚನ್ನಪಟ್ಟಣ (Channapatna) ಉಪಚುನಾವಣಾ ಕಣ ರಂಗೇರಿದ್ದು, ದೋಸ್ತಿ ಪಾಳಯದಲ್ಲಿ ಟಿಕೆಟ್ ಫೈಟ್ ಜೋರಾಗಿದೆ. ಒಂದು ಕಡೆ ಹೆಚ್.ಡಿ.ಕುಮಾರಸ್ವಾಮಿ ವರ್ಸಸ್ ಸಿ.ಪಿ.ಯೋಗೇಶ್ವರ್ ಮಧ್ಯೆ ಜಟಾಪಟಿ ನಡೆಯುತ್ತಿದೆ. ಇನ್ನೊಂದು ಕಡೆ ಬಿಜೆಪಿಯಲ್ಲಿ ಯೋಗೇಶ್ವರ್ ಪರ-ವಿರೋಧಿ ಬಣ ಸೃಷ್ಟಿಯಾಗಿದೆ. ಇತ್ತ ಬಿಜೆಪಿ ಹೈಕಮಾಂಡ್ ಅಂಗಳದಲ್ಲಿ ಟಿಕೆಟ್ ಇತ್ಯರ್ಥ ಪೆಂಡಿಂಗ್ ಉಳಿದಿದೆ. ಟಿಕೆಟ್ ಕಾದಾಟಕ್ಕೆ ದೋಸ್ತಿ ಪಾಳಯ 3 ದಿಕ್ಕು 3 ಬಾಗಿಲು ಎಂಬಂತಾಗಿದೆ.‌ ಇದನ್ನೂ ಓದಿ: ಚನ್ನಪಟ್ಟಣ ಕೈವಶಕ್ಕೆ ಡಿಸಿಎಂ ರಣತಂತ್ರ; ಒಂದೇ ವೇದಿಕೆಯಲ್ಲಿ ಡಿಕೆಶಿ-ಸಿಪಿವೈ ಸಮಾಗಮ

    ಹೆಚ್ಡಿಕೆ ವಿಶ್ವಾಸಗಳಿಸಿ ಟಿಕೆಟ್ ಪಡೆಯಲು ಯೋಗೇಶ್ವರ್ ವಿಫಲರಾದರಾ ಎಂಬ ಮಾತು ಕೇಳಿಬರುತ್ತಿದೆ. ವರಿಷ್ಠರ ಮಟ್ಟದಲ್ಲಿ ಟಿಕೆಟ್ ಗಿಟ್ಟಿಸಲು ಸಿಪಿವೈ ಸಮರ ಶುರು ಮಾಡಿದ್ದಾರೆ. ಟಿಕೆಟ್ ಸಿಗದಿದ್ದರೆ ಬಂಡಾಯ ಸ್ಪರ್ಧೆಗೂ ಸೈ ಎಂಬ ಸಂದೇಶ ರವಾನೆ ಮಾಡಿದ್ದಾರೆ. ಎನ್‌ಡಿಎ ಅಭ್ಯರ್ಥಿ ಮಾಡಿ, ಇಲ್ಲ ಪಕ್ಷೇತರ ಅಭ್ಯರ್ಥಿಯಾಗ್ತೇನೆ ಎಂದಿದ್ದಾರೆ. ದೆಹಲಿಗೆ ಹೋಗಿ ಬಂದ ನಂತರ ನಿನ್ನೆ ಡಿಕೆಶಿ ಜತೆ ವೇದಿಕೆ ಹಂಚಿಕೊಂಡಿದ್ದರು. ಆ ಮೂಲಕ ಯಾವುದೇ ನಡೆಗೂ ರೆಡಿ ಎನ್ನುವ ಸಂದೇಶ ಕೊಟ್ಟಿದ್ದರು.

    ಚನ್ನಪಟ್ಟಣ ವಿಚಾರದಲ್ಲಿ ಬಿಜೆಪಿ ಹೈಕಮಾಂಡ್ ನಡೆ ಕುತೂಹಲ ಮೂಡಿಸಿದೆ. ಮೈತ್ರಿ ಧರ್ಮ ಪಾಲನೆ ಮಾಡುತ್ತಾ ಎಂಬ ಪ್ರಶ್ನೆ ಮೂಡಿದೆ. ಬಿಜೆಪಿಯಲ್ಲಿ ಸಿಪಿವೈ ಪರ ಒಂದು ಬಣದಿಂದ ಟಿಕೆಟ್‌ಗೆ ಒತ್ತಾಯ ಕೇಳಿಬರುತ್ತಿದೆ. ಸಿಪಿವೈಗೆ ಟಿಕೆಟ್ ಕೊಡುವಂತೆ ಬಿಜೆಪಿ ಉಪಚುನಾವಣೆ ಸಮಿತಿ ಶಿಫಾರಸು ಮಾಡಿದೆ. ಬಿ.ವೈ ವಿಜಯೇಂದ್ರ ಮಾತ್ರ ಸಿಪಿವೈಗೆ ಟಿಕೆಟ್ ವಿಚಾರದಲ್ಲಿ ಮೌನವಹಿಸಿದ್ದಾರೆ. ಹೆಚ್ಡಿಕೆ ಕಾರಣಕ್ಕೆ ಟಿಕೆಟ್ ವಿಚಾರದಲ್ಲಿ ಮೌನವಾಗಿದ್ದಾರೆ. ಮೈತ್ರಿ ಪಾಲನೆ ಹಿನ್ನೆಲೆ ಹೈಕಮಾಂಡ್ ತೀರ್ಮಾನಿಸಲಿ ಎಂಬ ನಿಲುವು ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಟಿಕೆಟ್ ಸಿಗದಿದ್ದರೆ ಪಕ್ಷೇತರನಾಗಿ ಸ್ಪರ್ಧೆ: ಯೋಗೇಶ್ವರ್‌

    ಚನ್ನಪಟ್ಟಣ ಟಿಕೆಟ್ ಪಡೆಯಬೇಕು ಎಂದು ಜೆಡಿಎಸ್ ನಾಯಕರು ಹಠ ಹಿಡಿದಿದ್ದಾರೆ. ಮುಖಂಡರ ಮಾತು ಧಿಕ್ಕರಿಸಿ ಕೇಂದ್ರ ಸಚಿವ ಹೆಚ್‌ಡಿಕೆ ಮೈತ್ರಿ ಪಾಲನೆ ಮಾಡುತ್ತಾರಾ ಎಂಬ ಪ್ರಶ್ನೆ ಮೂಡಿದೆ.

    ನಿನ್ನೆ ನಡೆದ ಕಾರ್ಯಕ್ರಮವೊಂದರಲ್ಲಿ ಡಿಕೆ ಶಿವಕುಮಾರ್ ಮತ್ತು ಸಿಪಿ ಯೋಗೇಶ್ವರ್ ಅಕ್ಕಪಕ್ಕ ಕುಳಿತಿದ್ದರೂ ಪರಸ್ಪರರು ಮಾತನಾಡಲಿಲ್ಲ. ತಮ್ಮನ ಸೋಲನ್ನು ಡಿಕೆಶಿ ಇನ್ನೂ ಮರೆತಿಲ್ಲವೇ ಎಂಬ ಪ್ರಶ್ನೆ ಮೂಡಿದೆ. ಈ ಹಿನ್ನೆಲೆಯಲ್ಲಿ ಯೋಗೇಶ್ವರ್‌ಗೆ ಬಂಡಾಯ ಸ್ಪರ್ಧೆಯೇ ಗಟ್ಟಿ ಎಂಬಂತಾಗಿದೆ. ಕಾಂಗ್ರೆಸ್ ಸೇರ್ಪಡೆ ಹಾದಿ ಮತ್ತಷ್ಟು ಕಠಿಣವಾಗಿದೆ.

  • ಚನ್ನಪಟ್ಟಣ ಕ್ಷೇತ್ರದ ಅಭ್ಯರ್ಥಿ ಕುರಿತು ದೆಹಲಿ ಮಟ್ಟದಲ್ಲಿ ಚರ್ಚಿಸಿ ನಿರ್ಧಾರ: ವಿಜಯೇಂದ್ರ

    ಚನ್ನಪಟ್ಟಣ ಕ್ಷೇತ್ರದ ಅಭ್ಯರ್ಥಿ ಕುರಿತು ದೆಹಲಿ ಮಟ್ಟದಲ್ಲಿ ಚರ್ಚಿಸಿ ನಿರ್ಧಾರ: ವಿಜಯೇಂದ್ರ

    ಬೆಂಗಳೂರು: ಚನ್ನಪಟ್ಟಣ (Channapatna) ಕ್ಷೇತ್ರದ ಅಭ್ಯರ್ಥಿ ಕುರಿತು ಎರಡೂ ಪಕ್ಷಗಳ ವರಿಷ್ಠರು ದೆಹಲಿ ಮಟ್ಟದಲ್ಲಿ ಚರ್ಚಿಸಿ ಅಂತಿಮ ನಿರ್ಧಾರ ಕೈಗೊಳ್ಳುತ್ತಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿವೈ ವಿಜಯೇಂದ್ರ (BY Vijayendra) ತಿಳಿಸಿದರು.

    ಬೆಂಗಳೂರಿನಲ್ಲಿ (Bengaluru) ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಯೋಗೀಶ್ವರ್ (CP Yogeshwar) ಅವರು ಚನ್ನಪಟ್ಟಣದಲ್ಲಿ ತಾವೂ ಸ್ಪರ್ಧಾಕಾಂಕ್ಷಿ ಎಂದು ಹೇಳಿದ್ದು ತಪ್ಪೆನ್ನುವುದಿಲ್ಲ. ಚನ್ನಪಟ್ಟಣ ಕ್ಷೇತ್ರದಲ್ಲಿ ಅವರಿಗೆ ಅವರದ್ದೇ ಆದ ಹಿಡಿತ, ಬೆಂಬಲ ಇದೆ. ಆದರೆ ಬಿಜೆಪಿ-ಜೆಡಿಎಸ್ ಪಕ್ಷಗಳು ಒಟ್ಟಾಗಿ ಹೋಗುವ ಸಂದರ್ಭ ಇದು. ಅಲ್ಲಿ ಕುಮಾರಸ್ವಾಮಿ ಅವರು ಆಯ್ಕೆ ಆಗಿದ್ದರು. ಎರಡೂ ಪಕ್ಷಗಳ ವರಿಷ್ಠರು ದೆಹಲಿ ಮಟ್ಟದಲ್ಲಿ ಚರ್ಚಿಸಿ ಅಂತಿಮ ನಿರ್ಧಾರ ಕೈಗೊಳ್ಳುತ್ತಾರೆ ಎಂದು ವಿವರಿಸಿದರು. ಇದನ್ನೂ ಓದಿ: 100 ವರ್ಷ ಸಮೀಪಿಸುತ್ತಿರುವ ಕೆಆರ್‌ಎಸ್ ಡ್ಯಾಂ ಸುಭದ್ರವಾಗಿದೆ: ಚಲುವರಾಯಸ್ವಾಮಿ

    ಬಿಜೆಪಿ- ಜೆಡಿಎಸ್ (BJP-JDS) ಪಕ್ಷಗಳು ಲೋಕಸಭಾ ಚುನಾವಣೆಯನ್ನು ಒಟ್ಟಾಗಿ ಎದುರಿಸಿದ್ದೇವೆ. ವಿಧಾನಸಭಾ ಉಪ ಚುನಾವಣೆ ಅಭ್ಯರ್ಥಿ ಆಯ್ಕೆ ಸಂಬಂಧ ಸಮಿತಿ ರಚಿಸಿ ಅಭಿಪ್ರಾಯ ಪಡೆದಿದ್ದೇವೆ. ಅಶ್ವಥ್ ನಾರಾಯಣ್ ಅವರ ಸಮಿತಿಯ ವರದಿ ಬಗ್ಗೆ ಮಾಹಿತಿ ಇಲ್ಲ. ನಾನು ಕೂಡ ಅಶ್ವಥ್ ನಾರಾಯಣ್ ಜೊತೆ ಚರ್ಚೆ ಮಾಡುವೆ. ವರಿಷ್ಠರ ಗಮನಕ್ಕೆ ತರುತ್ತೇನೆ ಎಂದರು. ಇದನ್ನೂ ಓದಿ: ಈಗ ನೀರು ಹರಿಸಿದ್ರೂ ಅಕ್ಟೋಬರ್‌ ವೇಳೆಗೆ ಡ್ಯಾಂ ತುಂಬುವ ಸಾಧ್ಯತೆಯಿದೆ – ಸಿದ್ದರಾಮಯ್ಯ ವಿಶ್ವಾಸ

    ಬೆಳಗಾವಿಯಲ್ಲಿ ಭಿನ್ನರ ಗೌಪ್ಯ ಸಭೆ ಬಗ್ಗೆ ಮಾತನಾಡಿ, ರಾಜ್ಯಾಧ್ಯಕ್ಷನಾಗಿ ಪ್ರತಿಯೊಬ್ಬರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹೋಗುವುದು ನನ್ನ ಆದ್ಯ ಕರ್ತವ್ಯ. ಇದನ್ನು ಸತತವಾಗಿ ಮಾಡಿಕೊಂಡು ಬಂದಿದ್ದೇನೆ. ಪಕ್ಷಕ್ಕೆ ಶಕ್ತಿ ಸಿಗುವುದಾದರೆ ಕೆಲವರು ಮಾಡಬಯಸಿದ ಪಾದಯಾತ್ರೆಗೆ ವರಿಷ್ಠರು ಸಮ್ಮತಿ ಕೊಡುತ್ತಾರೆ. ನಮ್ಮದು ಈ ವಿಚಾರಕ್ಕೆ ಯಾವುದೇ ರೀತಿಯ ತಕರಾರಿಲ್ಲ. ಕೇಂದ್ರದ ವರಿಷ್ಠರ ಭೇಟಿಯೂ ಪಕ್ಷದ ಸಂಘಟನೆಗೆ ಲಾಭ ತರಬೇಕು ಎಂಬ ಸದುದ್ದೇಶವನ್ನು ಹೊಂದಿರಲಿ ಎಂದು ಆಶಿಸಿದರು. ಇದನ್ನೂ ಓದಿ: Bengaluru | ಬಿಎಂಟಿಸಿ ವೋಲ್ವೋ ಬಸ್‌ನಿಂದ ಸರಣಿ ಅಪಘಾತ; ನಡುರಸ್ತೆಯಲ್ಲೇ ವಾಹನ ಸವಾರರ ಚೀರಾಟ

    ಜಲ ಸಂಪನ್ಮೂಲ ಸಚಿವರು ಸಂಪನ್ಮೂಲದ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಂಡ ಹಾಗಿದೆ. ಜಲ, ಜನ, ರೈತರ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಿಲ್ಲ ಎಂದು ಅವರು ಟೀಕಿಸಿದರು. ಪ್ರಾಣ ಕಳೆದುಕೊಂಡ ಪಿಎಸ್‌ಐ ಪರಶುರಾಮ್ ಅವರ ಕುಟುಂಬಕ್ಕೆ ಪರಿಹಾರ ಕೊಟ್ಟಿಲ್ಲ. ರಾಜ್ಯ ಸರ್ಕಾರದ ಆದ್ಯತೆ ಏನೆಂದು ಜನರು ಪ್ರಶ್ನೆ ಮಾಡುತ್ತಿದ್ದಾರೆ ಎಂದು ತಿಳಿಸಿದರು. ಇದನ್ನೂ ಓದಿ: ಡ್ಯಾಂ ವಿಚಾರದಲ್ಲಿ ರಾಜಕೀಯ ಬೆರಸಬಾರದು – ಸಚಿವ ಪ್ರಿಯಾಂಕ್ ಖರ್ಗೆ

    ಅಣೆಕಟ್ಟೆಗಳು ಭರ್ತಿಯಾದ ಬಗ್ಗೆ ರೈತರು ಸಂತಸದಿಂದಿದ್ದರು. ತುಂಗಭದ್ರಾ ಡ್ಯಾಂಗೆ ಮುಖ್ಯ ಎಂಜಿನಿಯರ್ ನೇಮಿಸಿಲ್ಲ. ತುಂಗಭದ್ರಾ ಜಲಾಶಯದ ಗೇಟ್ ಮುರಿದ ಘಟನೆಗೆ ರಾಜ್ಯ ಸರ್ಕಾರದ ನಿರ್ಲಕ್ಷ್ಯವೇ ಕಾರಣ. ಈ ದುರ್ಘಟನೆಯಿಂದ ಪ್ರತಿದಿನ 98 ಸಾವಿರ ಕ್ಯುಸೆಕ್ ನೀರು ಹೊರಕ್ಕೆ ಹರಿಯುತ್ತಿದೆ. ಅಪಾರ ಪ್ರಮಾಣದ ನೀರು ಹೊರಕ್ಕೆ ಬಿಡಬೇಕಿದೆ. ಇದರಿಂದ ರೈತರು ಅತ್ಯಂತ ಸಂಕಷ್ಟಕ್ಕೆ ಸಿಲುಕುತ್ತಾರೆ ಎಂದು ಆತಂಕ ವ್ಯಕ್ತಪಡಿಸಿದರು. ಇದನ್ನೂ ಓದಿ: ಜಲಾಶಯ ನಿರ್ವಹಣೆಗೆ ಕೇಂದ್ರ ಸಮಿತಿ ಸಲಹೆ ಧಿಕ್ಕರಿಸಿದೆ ರಾಜ್ಯ ಸರ್ಕಾರ: ಜೋಶಿ ಆರೋಪ

    ರೈತರಿಗೆ ಪರಿಹಾರ ಕೊಡುವಂತೆ ಮುಖ್ಯಮಂತ್ರಿಗಳನ್ನು ಆಗ್ರಹಿಸಿದ್ದೇನೆ. ಪ್ರತಿ ಹೆಕ್ಟೇರ್‌ಗೆ ಕನಿಷ್ಠ 50 ಸಾವಿರ ಕೊಡುವಂತೆ ಕೋರಿದರು. ಭತ್ತ ಬೆಳೆಯುವ ಪ್ರದೇಶ ಇದಾಗಿದೆ. ಇಲ್ಲಿ ಒಂದು ಬೆಳೆ ತೆಗೆಯಲೂ ಕಷ್ಟ ಆಗಲಿದೆ ಎಂದು ಬೇಸರಿಸಿದರು. ಇದನ್ನೂ ಓದಿ: ಬಾಬಾ ರಾಮ್‍ದೇವ್, ಆಚಾರ್ಯ ಬಾಲಕೃಷ್ಣಗೆ ಬಿಗ್ ರಿಲೀಫ್ – ನ್ಯಾಯಾಂಗ ನಿಂದನೆ ಆರೋಪ ಕೈಬಿಟ್ಟ ಸುಪ್ರೀಂ

  • ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಿಖಿಲ್ ಸ್ಪರ್ಧಿಸಲ್ಲ: ಸಾರಾ ಮಹೇಶ್

    ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಿಖಿಲ್ ಸ್ಪರ್ಧಿಸಲ್ಲ: ಸಾರಾ ಮಹೇಶ್

    ಮೈಸೂರು: ಚನ್ನಪಟ್ಟಣ ಉಪ ಚುನಾವಣೆಯಲ್ಲಿ (Channapatna By_election) ನಿಖಿಲ್ ಕುಮಾರಸ್ವಾಮಿ (Nikhil Kumaraswamy) ಸ್ಪರ್ಧಿಸಲು ತಯಾರಿಲ್ಲ ಎಂದು ಮಾಜಿ ಸಚಿವ ಸಾರಾ ಮಹೇಶ್ (Sa Ra Mahesh) ಹೇಳಿದ್ದಾರೆ.

    ಮೈಸೂರಿನಲ್ಲಿ `ಪಬ್ಲಿಕ್ ಟಿವಿ’ ಜೊತೆ ಅವರು ಮಾತನಾಡಿದ್ದಾರೆ. ಈ ವೇಳೆ, ನಾನು ಚುನಾವಣೆಗೆ ಸ್ಪರ್ಧೆ ಮಾಡಲ್ಲ ಎಂದು ನಿಖಿಲ್ ಸ್ಪಷ್ಟಪಡಿಸಿದ್ದಾರೆ. ದೇವೇಗೌಡರು, ಕುಮಾರಸ್ವಾಮಿ ಮತ್ತು ಅನಿತಾ ಕುಮಾರಸ್ವಾಮಿ ಅಭಿಪ್ರಾಯ ಕೂಡ ಇದೇ ಆಗಿದೆ ಎಂದು ತಿಳಿಸಿದ್ದಾರೆ.

    ನಿಖಿಲ್ ಮೇಲೆ ಚುನಾವಣೆಗೆ ಸ್ಪರ್ಧಿಸುವಂತೆ ಒತ್ತಡವಿದೆ. ಆದರೆ ಅವರು ಯಾವ ಒತ್ತಡಕ್ಕೂ ಮಣಿಯುವ ಸ್ಥಿತಿಯಲ್ಲಿ ಇಲ್ಲ ಎಂದು ತಿಳಿಸಿದ್ದಾರೆ.

    ಇನ್ನೂ ಚನ್ನಪಟ್ಟಣ ಉಪಚುನಾವಣೆಗೆ ಸ್ಪರ್ಧಿಸುವುದಾಗಿ ಸಿ.ಪಿ ಯೋಗೇಶ್ವರ್ ಘೋಷಿಸಿಕೊಂಡಿದ್ದಾರೆ. ಪಕ್ಷ ಟಿಕೆಟ್‌ ನೀಡದಿದ್ದಲ್ಲಿ ಸ್ವತಂತ್ರವಾಗಿ ಸ್ಪರ್ಧಿಸುವುದಾಗಿ ಅವರು ಹೇಳಿದ್ದಾರೆ. ಇದರ ಬೆನ್ನಲ್ಲೇ ಮೈತ್ರಿ ಪಕ್ಷಗಳಲ್ಲಿ ಚರ್ಚೆಗಳು ನಡೆದಿದ್ದವು. ಈ ವಿಚಾರ ಮೈಸೂರು ಚಲೋ ಪಾದಯಾತ್ರೆ ವೇಳೆ ಸಹ ಸುದ್ದು ಮಾಡಿತ್ತು. ಈ ವೇಳೆ ನಾವು ಟಿಕೆಟ್ ಹಂಚಿಕೆಗೆ ಸೇರಿಲ್ಲ ಎಂದು ಕುಮಾರಸ್ವಾಮಿಯವರು ಪ್ರತಿಕ್ರಿಯಿಸಿದ್ದರು.

  • ‘ಕಪ್ಪು ಚುಕ್ಕೆ’ ಆಟದಲ್ಲಿ ಸಿದ್ದರಾಮಯ್ಯಗೆ ಅಪ್ಪಳಿಸಿದ ಅನಿರೀಕ್ಷಿತ ಅಲೆ..!

    ‘ಕಪ್ಪು ಚುಕ್ಕೆ’ ಆಟದಲ್ಲಿ ಸಿದ್ದರಾಮಯ್ಯಗೆ ಅಪ್ಪಳಿಸಿದ ಅನಿರೀಕ್ಷಿತ ಅಲೆ..!

    – ರವೀಶ ಎಚ್.ಎಸ್, ಪೊಲಿಟಿಕಲ್ ಬ್ಯೂರೋ ಚೀಫ್, ಪಬ್ಲಿಕ್ ಟಿವಿ

    ದು ನನ್ನ ಮಗ ರಾಕೇಶ್ ರೂಂ.. ಮುಖದ ಮೇಲೆ ಕೈ ಆಡಿಸುತ್ತಾ ಆ ಕಡೆ ಈ ಕಡೆ ನೋಡುತ್ತಿದ್ದರು ಮುಖ್ಯಮಂತ್ರಿ ಸಿದ್ದರಾಮಯ್ಯ. ರೂಂ ಮೂಲೆಯಲ್ಲಿ ರಾಕೇಶ್ ಫೋಟೋ ಕೂಡ ಇತ್ತು. ಆ ಕೊಠಡಿಯ ಎಲ್ಲ ಕಡೆ ಒಂದು ಕ್ಷಣ ಕಣ್ಣಾಡಿಸಿ ಬಿಟ್ಟರು. ಕ್ಷಣಕ್ಕಷ್ಟೇ ಮೌನವಾದರು.. ಆ ಬಳಿಕ ಇನ್ನೊಂದು ಫೋಟೋ ನೋಡಿದರು. ಓಹೋ.. ಇದು ಆ ಫೋಟೋ.. ನಾನು ಕಾಂಗ್ರೆಸ್‌ಗೆ ಸೇರಿದಾಗ ತೆಗೆದ ಫೋಟೋ. ಮೈಸೂರು ಕಾಂಗ್ರೆಸ್ ಆಫೀಸ್‌ಗೆ ಹೋಗಿದ್ದೆ ಆಗ ತೆಗೆದಿದ್ದು ಎನ್ನುತ್ತಾ ಸಿದ್ದರಾಮಯ್ಯ ಮೊಗದಲ್ಲಿ ಗೆದ್ದ ನಗು ಎದ್ದು ಕಾಣ್ತಿತ್ತು. ಅಂದಹಾಗೆ ಇದೆಲ್ಲ ಕಂಡಿದ್ದು ಪಬ್ಲಿಕ್ ಟಿವಿ ಮುಖ್ಯಸ್ಥ ಹೆಚ್.ಆರ್.ರಂಗನಾಥ್ ಅವರ ಮುಖ್ಯಮಂತ್ರಿ ಸಿದ್ದರಾಮಯ್ಯ ವಿಶೇಷ ಸಂದರ್ಶನಕ್ಕೂ ಮುನ್ನ. ಮೈಸೂರಿನ ಶಾರದಾದೇವಿನಗರದಲ್ಲಿ ಈಗ ಇರುವ ಮನೆಯ ಮೂರನೇ ಮಹಡಿಯ ಸಂದರ್ಶನಕ್ಕಾಗಿ ಸೆಟ್ ಮಾಡಲಾಗಿತ್ತು. ಅಪರೂಪಕ್ಕೆ ಎಂಬಂತೆ ಆ ಕೊಠಡಿಗೆ ಸಿಎಂ ಸಿದ್ದರಾಮಯ್ಯ ಬಂದಾಗ ಅವರಲ್ಲಿ ಕಂಡುಬಂದ ಭಾವನಾತ್ಮಕ ಕ್ಷಣಗಳು. ಸಿದ್ದರಾಮಯ್ಯನಹುಂಡಿ ಎಂಬ ಗ್ರಾಮದಿಂದ ಬಂದು ಲಾಯರ್ ಆಗಿ, ಅಲ್ಲಿಂದ ರಾಜಕೀಯಕ್ಕೆ ಬಂದು ರಾಜಕಾರಣದಲ್ಲಿ ಸಕ್ಸಸ್ ಕಂಡಿದ್ದೇ ಒಂದು ಮೈಲಿಗಲ್ಲು. ಎರಡು ಬಾರಿ ವಿರೋಧ ಪಕ್ಷದ ನಾಯಕ, ಎರಡು ಬಾರಿ ಉಪಮುಖ್ಯಮಂತ್ರಿ, ಎರಡು ಬಾರಿ ಮುಖ್ಯಮಂತ್ರಿ ಆಗುವುದು ಸಾಧನೆ ಅಲ್ಲದೆ ಮತ್ತೇನು.? ಆದರೆ ಅದೇ ಸಿದ್ದರಾಮಯ್ಯಗೆ ಕಡೆಯ ರಾಜಕೀಯ ಕಾಲಘಟ್ಟದಲ್ಲಿ ನಿರೀಕ್ಷಿಸಲಾಗದ ಅಲೆಯೊಂದು ಅಪ್ಪಳಿಸಿತು. ಭೂಮಿ ಮೇಲೆ ಆಸೆಯೇ ಇಲ್ಲ ಎಂದು ಸಾರ್ವಜನಿಕವಾಗಿ ನಡವಳಿಕೆ ತೋರಿದ್ದವರು ಸೈಟುಗಳಿಗಾಗಿಯೇ ಉರುಳು ಸುತ್ತಿಸಿಕೊಂಡಿದ್ದೇ ಒಂದು ಅಘಾತದ ಸಂಗತಿ.

    ನನ್ನ ಹತ್ತಿರ ನೆಟ್ಟಗೆ ಮನೆ ಇಲ್ಲ. ಎರಡು ಮನೆ ಮಾರಿಬಿಟ್ಟೆ.. ಮೈಸೂರಿನಲ್ಲಿ ಈಗ ಒಂದು ಮನೆ ಕಟ್ಟುತ್ತಿದ್ದೇನೆ. ಅದು ಮೂರು ವರ್ಷದಿಂದ ಮನೆ ಕಟ್ಟುತ್ತಿದ್ದೇನೆ. ಮಗ ಒಂದು ತೋಟ ಮಾಡಿದ್ದಾನೆ. ಮೈಸೂರಿನ ಕೂಡನಹಳ್ಳಿ ಹತ್ತಿರ 7-8 ಎಕರೆ ತೋಟ ಇದೆ. ಅದು ಮನೆಯಿಂದ ಪಾಲು ಬಂದಿದ್ದು ಅಷ್ಟೇ. ಇಷ್ಟು ಬಿಟ್ಟರೆ ನನ್ನ ಹತ್ತಿರ ಏನೇ ಇದ್ದರೂ ತೆಗೆದುಕೊಳ್ಳಲಿ. ಹೀಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಲು ಶುರು ಮಾಡಿದ್ದಾರೆ. ಸಾರ್ವಜನಿಕ ಜೀವನದಲ್ಲಿ ಹೊರಗೆ ಕಾಣಿಸಿಕೊಳ್ಳದೇ, ಇಲ್ಲಿ ತನಕ ಎಲ್ಲಿಯೂ ವೇದಿಕೆ ಹಂಚಿಕೊಳ್ಳದೇ, ಸಿದ್ದರಾಮಯ್ಯ ಪತ್ನಿ ಪಾರ್ವತಿ ಅವರ ಫೋಟೋ ನೋಡಿದ್ದೀರಾ ಎಂದು ಕೇಳುವಷ್ಟು ಅಂತರ ಕಾಯ್ದುಕೊಂಡಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಆದರೆ ಅದೇ ಪತ್ನಿ ವಿಚಾರದಲ್ಲಿ ಸೈಟುಗಳ ಅಕ್ರಮ ಹಂಚಿಕೆ ಆರೋಪ ಕೇಳಿಬಂದಿರುವುದು ಸಿದ್ದರಾಮಯ್ಯಗೆ ಅರಗಿಸಿಕೊಳ್ಳಲಾಗುತ್ತಿಲ್ಲ. ಈ ಮೊದಲು ಪುತ್ರನ ವಿಡಿಯೋ ಒಂದು ಹೊರಗೆ ಬಂದು ವರ್ಗಾವಣೆ ದಂಧೆಯ ಆರೋಪ ಕೇಳಿಬಂದಿತ್ತು. ಸ್ವತಃ ಸಿಎಂ ಸಿದ್ದರಾಮಯ್ಯ ಜೊತೆ ಪುತ್ರ ಯತೀಂದ್ರ ಮಾತನಾಡಿದ್ದ ವಿಡಿಯೋ ವರ್ಗಾವಣೆಯದ್ದು ಅಲ್ಲ, ಸಿಎಸ್‌ಆರ್ ಫಂಡ್ ಮಾತುಕತೆ ಅಂತಾ ಸಮರ್ಥಿಸಿಕೊಂಡಿದ್ದರು. ಆಗ ಪುತ್ರನ ವಿಡಿಯೋ ಪ್ರಕರಣದ ಮುಜುಗರವಾದ್ರೆ, ಈಗ ಪತ್ನಿ ಸೈಟು ಪಡೆದಿರುವ ಅಕ್ರಮ ಆರೋಪ ಸಿದ್ದರಾಮಯ್ಯಗೆ ಭಾವನಾತ್ಮಕವಾಗಿ ಬಹುದೊಡ್ಡ ಹೊಡೆತ. ಆ ಕಾರಣಕ್ಕಾಗಿಯೇ ಮೈಸೂರಿನ ಸಮಾವೇಶದಲ್ಲಿ ಪತ್ನಿ ವಿಚಾರವಾಗಿಯೂ ಭಾವನಾತ್ಮಕವಾಗಿ ಮಾತನಾಡಿಬಿಟ್ಟರು. ನನ್ನ ಧರ್ಮಪತ್ನಿ ಪಾರ್ವತಿ ಎಲ್ಲಿಯೂ ಸಾರ್ವಜನಿಕ ಕಾರ್ಯಕ್ರಮಕ್ಕೆ ಬಂದಿಲ್ಲ. ನಾನು ಪ್ರಮಾಣವಚನ ಸ್ವೀಕಾರ ಮಾಡುವಾಗಲೂ ಬಂದಿಲ್ಲ. ಇಲ್ಲಿರುವವರು ಅನೇಕರು ನನ್ನ ಹೆಂಡತಿ ಮುಖ ನೋಡಿಲ್ಲ. ಅವರು ತಪ್ಪು ಮಾಡಲು ಸಾಧ್ಯನಾ? ನಾನು ತಪ್ಪು ಮಾಡಲು ಸಾಧ್ಯನಾ ಎಂದು ಪ್ರಶ್ನೆ ಕೇಳಿ ಎಮೋಷನಲ್ ಕಾರ್ಡ್ ಪ್ಲೇ ಮಾಡಿದ್ದು ಇದೇ ವೇದಿಕೆಯಲ್ಲಿ. ಅದೇ ವೇದಿಕೆಯಲ್ಲಿ ಮಾರನೇ ದಿನ ಎಮೋಷನಲ್ ಕಾರ್ಡ್‌ಗೆ ಕೇಂದ್ರ ಸಚಿವ ಕುಮಾರಸ್ವಾಮಿ ತಿರುಗೇಟು ಕೊಟ್ಟುಬಿಟ್ಟರು. ನಿಮ್ಮ ಪತ್ನಿ ಬಗ್ಗೆ ನಾವು ಮಾತಾಡ್ತಿಲ್ಲ. ನಿಮ್ಮ ಪತ್ನಿ ಸೈಟುಗಳನ್ನ ಪಡೆದಿರುವ ಮಾರ್ಗದ ಬಗ್ಗೆ ನಮ್ಮ ತಕರಾರು ಎನ್ನುವ ಮೂಲಕ ರಾಜಕೀಯ ಹೋರಾಟವೇ ಎಂಬ ಸಂದೇಶ ರವಾನಿಸಿದ್ದಾರೆ.

    ಇದೆಲ್ಲವನ್ನೂ ನೋಡಿದಾಗ ಮುಡಾದಲ್ಲಿ ಪತ್ನಿ ಪಾರ್ವತಿಗೆ 50:50 ಪರಿಹಾರ ರೂಪದ 14 ಸೈಟುಗಳ ಹಂಚಿಕೆ ಅಕ್ರಮ ಎಂಬ ಆರೋಪದ ರಾಡಿ ಬಳಿಕ ಸಿದ್ದರಾಮಯ್ಯ ಬೇಸರ ಆಗಿರುವುದು ಸ್ಪಷ್ಟವಾಗುತ್ತೆ. ಯಾವುದಕ್ಕೆ ನನಗೆ ಆಸೆ ಇಲ್ಲ ಎನ್ನುತ್ತಿದ್ದೆನೋ, ಅದೇ ಭೂಮಿ ವಿಚಾರದಲ್ಲಿ ಮಸಿ ಬಳಿಯುವ ಯತ್ನ ನಡೆದುಹೋಯ್ತಲ್ಲ ಎಂಬ ನೋವು ಸಿದ್ದರಾಮಯ್ಯರನ್ನ ಕಾಡದೇ ಇರಲಾರದು. ಆ ಕಾರಣಕ್ಕಾಗಿಯೇ ಮುಡಾ ಕೊಟ್ಟಿರುವ ಸೈಟ್‌ಗಳನ್ನ ವಾಪಸ್ ಕೊಡುವ ಪ್ರಸ್ತಾಪ ಮುಂದಿಟ್ಟಿದ್ದಾರೆ. ಟೇಕ್ ಇಟ್ ಬ್ಯಾಕ್.. ಆದ್ರೆ ಪತ್ನಿಗೆ ಕೊಡಬೇಕಾದ ಪರಿಹಾರವನ್ನು ಕಾನೂನು ರೂಪದಲ್ಲೇ ಕೊಡಲಿ ಎಂಬ ಹೊಸ ಸೂತ್ರ ಬಿಟ್ಟಿದ್ದಾರೆ. ಆದ್ರೆ ದೇಸಾಯಿ ವಿಚಾರಣಾ ಆಯೋಗದ ತನಿಖೆ ಇರುವಾಗ, ರಾಜ್ಯಪಾಲರ ಬಳಿ ಪ್ರಾಸಿಕ್ಯೂಶನ್ ಅನುಮತಿ ಕೊಡಬೇಕೋ..? ಬೇಡವೋ..? ಎಂಬ ವಿಚಾರ ಇರುವ ಹಂತದಲ್ಲಿ ಕಾನೂನಾತ್ಮಕವಾಗಿ ವಾಪಸ್ ಕೊಡಬಹುದಾ ಎಂಬ ಪ್ರಶ್ನೆಯೂ ಎದುರಾಗಿದೆ. ಆ ಕಾರಣಕ್ಕಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾದುನೋಡಲು ಮುಂದಾಗಿದ್ದಾರೆ ಅನ್ನಿಸುತ್ತೆ. ಸಿವಿಲ್ ವ್ಯಾಜ್ಯ.. ಕ್ರಿಮಿನಲ್ ವ್ಯಾಜ್ಯಗಳಿಗೂ ಬಹಳಷ್ಟು ವ್ಯತ್ಯಾಸಗಳಿವೆ. ರಾಜಕಾರಣವೇ ಹಾಗೆ ಯಾವುದನ್ನ ಎಲ್ಲಿಗೆ ಬೇಕಾದರೂ ತಂದು ನಿಲ್ಲಿಸುತ್ತೆ. ಆ ರಾಜಕಾರಣವನ್ನ ಎಲ್ಲರೂ ಎಲ್ಲ ಕಾಲಕ್ಕೂ ಮಾಡಿದ್ದಾರೆ. ಮುಂದೆಯೂ ಮಾಡಿಯೇ ಮಾಡುತ್ತಾರೆ. ಆದರೆ ಮುಡಾ ಪ್ರಕರಣದಲ್ಲಿ ಸಿದ್ದರಾಮಯ್ಯ ಪ್ರಭಾವ ಎಷ್ಟಿತ್ತು.. ಎಷ್ಟಿರಲಿಲ್ಲ..? ಯಾರದ್ದು ಸರಿ..? ಯಾರದ್ದು ತಪ್ಪು.. ಎಷ್ಟಿದೆ.? ಎಂಬ ಸತ್ಯಾಸತ್ಯತೆ ತನಿಖೆಯಿಂದ ಹೊರಬರುತ್ತೆ.

    ಇವರದ್ದೇ ಸರಿ.. ಇವರದ್ದೇ ತಪ್ಪು ಎಂದು ತೀರ್ಪು ನೀಡುವ ವಿಶ್ಲೇಷಣೆ ಅಗತ್ಯ ಇಲ್ಲ. ಆದರೆ ಆಕ್ಷನ್‌ಗೆ ರಿಯಾಕ್ಷನ್‌ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಧಾನಗತಿಯ ಹೆಜ್ಜೆ ಇಟ್ಟಿದ್ದರ ಬಗ್ಗೆ ಸಾಕಷ್ಟು ಚರ್ಚೆ ನಡೆದುಹೋಗಿದೆ. ಸೈಟುಗಳ ಅಕ್ರಮ ಹಂಚಿಕೆ ಆರೋಪ ಕೇಳಿಬಂದಾಗ ಇಷ್ಟು ದೊಡ್ಡ ಮಟ್ಟಕ್ಕೆ ಆ ಹೋರಾಟವನ್ನ ತೆಗೆದುಕೊಂಡು ಹೋಗ್ತಾರೆ ಅಂದುಕೊಂಡಿರಲಿಲ್ಲ ಅನ್ನಿಸುತ್ತೆ. ಅಲ್ಲದೆ ಆ 14 ಸೈಟ್‌ಗಳನ್ನು ವಾಪಸ್ ಕೊಡುವ ಬಗ್ಗೆ ನಿರ್ಧಾರ ತೆಗೆದುಕೊಳ್ಳುವಲ್ಲಿ ಗೊಂದಲದಲ್ಲಿದ್ದರು ಎನ್ನುವುದು ಸ್ಪಷ್ಟವಾಗುತ್ತೆ. ಆ ಕಾರಣಕ್ಕಾಗಿಯೇ ಬಿಜೆಪಿ – ಜೆಡಿಎಸ್ ಜಂಟಿ ಹೋರಾಟದ ಕಿಚ್ಚು ನಿಧಾನಗತಿಯಲ್ಲಿ ಹಬ್ಬುತ್ತಿದ್ದರೂ ಸಿದ್ದರಾಮಯ್ಯ ಮುಂದೆ ನೋಡೋಣ ಎಂಬ ಮನಸ್ಥಿತಿಗೆ ಬಂದುಬಿಟ್ಟರೇನೋ… ವಿಧಾನಸಭೆಯಲ್ಲಿ ಚರ್ಚೆಗೆ ಅವಕಾಶ ಕೇಳಿದಾಗ ಸಿದ್ದರಾಮಯ್ಯ ಹಿಂದೇಟು ಹಾಕಬಾರದಿತ್ತು. ವಿಧಾನಸಭೆಯಲ್ಲಿ ಮಾತಿನಲ್ಲೂ, ಅನುಭವದಲ್ಲಿ ವಿಪಕ್ಷಗಳನ್ನ ಎದುರಿಸುವ ತಾಕತ್ತು ಸಿದ್ದರಾಮಯ್ಯಗೆ ಇತ್ತು. ಆದರೆ ಪತ್ನಿ ಪಾರ್ವತಿ ಪಡೆದಿರುವ ಸೈಟು ವಿಚಾರವಾಗಿ ಚರ್ಚೆ ನಡೆದು ಕಡತಕ್ಕೆ ಹೋಗುವುದು, ಮತ್ತಷ್ಟು ರಾಡಿ ಆಗುವುದು ಸಿದ್ದರಾಮಯ್ಯಗೆ ಇಷ್ಟ ಇರಲಿಲ್ಲ ಎಂಬ ಮಾತಿತ್ತು. ಆ ಕಾರಣಕ್ಕಾಗಿಯೇ ಚರ್ಚೆ ಬೇಡ ಎಂಬ ಪಟ್ಟು ಹಿಡಿದು ಬಿಜೆಪಿ-ಜೆಡಿಎಸ್ ಹೋರಾಟಕ್ಕೆ ಮುನ್ನುಡಿ ಬರೆದುಬಿಟ್ಟರು. ಅದನ್ನೇ ಅಸ್ತ್ರವನ್ನಾಗಿ ಮಾಡಿಕೊಂಡ ಬಿಜೆಪಿ-ಜೆಡಿಎಸ್ ಎರಡು ಹಂತದ ಹೋರಾಟದ ಪ್ಲ್ಯಾನ್ ಮಾಡಿ ಬೆಂಗಳೂರಿನಿಂದ ಮೈಸೂರು ತನಕ ಸಿದ್ದರಾಮಯ್ಯ ವಿರುದ್ಧ ಹೆಜ್ಜೆ ಹಾಕಿ ಇನ್ನಷ್ಟು ರಾಡಿ ಮಾಡಿಬಿಟ್ಟರು. ವಿಧಾನಸಭೆಯಲ್ಲಿ ಚರ್ಚೆ ನಡೆಸಿ ರಾಜಕೀಯ ಅಸ್ತ್ರ ಪ್ರಯೋಗಿಸಿದ್ರೆ ಮೈಸೂರಿನಲ್ಲಿ ಜನಾಂದೋಲನ ಸಮಾವೇಶ ಮಾಡಿ ಉತ್ತರ ಕೊಡಬೇಕಾದ ಅನಿವಾರ್ಯತೆಯೇ ಬರುತ್ತಿರಲಿಲ್ಲ.

    ಒಂದೂಕಾಲು ವರ್ಷಕ್ಕೆ ಕಾಂಗ್ರೆಸ್ ಸರ್ಕಾರ ಎರಡು ಪ್ರಮುಖ ಅಕ್ರಮ ಆರೋಪಗಳ ಕುಣಿಕೆ ಸಿಗುತ್ತೆ ಅಂತಾ ಯಾರೂ ನಿರೀಕ್ಷೆ ಮಾಡಿರಲಿಲ್ಲ. ಸಿದ್ದರಾಮಯ್ಯ ನಾಯಕತ್ವ ವಿಪಕ್ಷಗಳಿಂದ ಇಂತಹ ಹೋರಾಟ ಎದುರಾಗುತ್ತೆ ಎಂದು ಯಾರೂ ಊಹಿಸಿರಲಿಲ್ಲ. ಹಾಗಾದ್ರೆ ಇದು ರಾಜಕೀಯ ಬದಲಾವಣೆಗೆ ಸಾಕ್ಷಿ ಆಗುತ್ತಾ ಎಂಬ ಪ್ರಶ್ನೆಗೆ ಸದ್ಯಕ್ಕೆ ಇಲ್ಲ ಎನ್ನಬಹುದು. ಆದರೆ ಯಾರ ಮೇಲಾದಾರೂ ಪರಿಣಾಮ ಬೀರುತ್ತೆ ಎಂದರೆ ಖಂಡಿತವಾಗಿ ಕೆಲವರಿಗೆ ಲಾಭ-ನಷ್ಟದ ಹಾರ ಬೀಳುತ್ತೆ. ಸಿಎಂ ಸಿದ್ದರಾಮಯ್ಯ ಪರ ನಾನು ಇದ್ದೇನೆ, ನಾನು ಬಂಡೆ ಆಗಿದ್ದೇನೆ ಎಂಬುದು ಡಿಸಿಎಂ ಡಿ.ಕೆ.ಶಿವಕುಮಾರ್ ಸ್ಲೋಗನ್. ಬೆಂಗಳೂರಿನಿಂದ ಮೈಸೂರಿನ ತನಕ ನಾಲ್ಕೈದು ಸಮಾವೇಶಗಳಲ್ಲಿ ಸಿದ್ದರಾಮಯ್ಯ ಹೆಸರಲ್ಲಿ ಅಬ್ಬರಿಸಿದ್ದು ಡಿಕೆಶಿ. ನನ್ನ ಕುಮಾರಸ್ವಾಮಿ ನಡುವಿನ ಯುದ್ಧ ಎಂದು ಬಿಂಬಿಸಿಕೊಳ್ಳುವ ರೀತಿಯಲ್ಲಿ ನಡೆದ ತಂತ್ರದಲ್ಲಿ ಡಿಕೆಶಿ ಯಶಸ್ವಿ ಬಗ್ಗೆ ಲೆಕ್ಕಚಾರವೂ ನಡೆದಿದೆ. ಅಷ್ಟೇ ಅಲ್ಲದೆ ಮುಂದಿನ ಗುರಿ, ಗೆರೆ ಸ್ಪಷ್ಟವಾಗಿಸಿಕೊಳ್ಳಲು ಡಿಕೆಶಿಯ ಹರಸಾಹಸವೂ ಇದರಲ್ಲಿದೆ ಎನ್ನುವ ಮಾತುಗಳು ಕಾಂಗ್ರೆಸ್ ಪಕ್ಷದಲ್ಲೇ ಕೇಳಿಬಂದಿವೆ. ಈ ನಡುವೆ ಬಿಜೆಪಿ-ಜೆಡಿಎಸ್‌ಗೆ ಟಕ್ಕರ್ ಕೊಡುವ ಸಮಾವೇಶದಲ್ಲೇ ಕೆಲ ಸಚಿವರು ಸಿದ್ದರಾಮಯ್ಯ ಮೂರು ಮುಕ್ಕಾಲು ವರ್ಷ ಮುಖ್ಯಮಂತ್ರಿ ಆಗಿರುತ್ತಾರೆ ಎಂಬ ಮುದ್ರೆಯನ್ನು ಒತ್ತಿದ್ದಾರೆ. ಇನ್ನು ಬಿಜೆಪಿ-ಜೆಡಿಎಸ್ ಪಾದಯಾತ್ರೆಯಲ್ಲಿ ವಿಜಯೇಂದ್ರ, ನಿಖಿಲ್ ಕುಮಾರಸ್ವಾಮಿ ನೆಲೆ ಗಟ್ಟಿಗೊಳಿಸುವ ಯತ್ನವೂ ಹೌದು ಎನ್ನಬಹುದು. ಒಳಸುಳಿಯ ಹೊಡೆತದ ನಡುವೆಯೂ ಮೂರೂ ಮುಕ್ಕಾಲು ವರ್ಷದ ಬೆಳೆಗೆ ಬೆವರು ಹರಿಸುತ್ತಿರುವ ವಿಜಯೇಂದ್ರಗೆ ಸದ್ಯಕ್ಕೆ ಲಾಭ ಎಂಬುದೆಷ್ಟು ಸತ್ಯವೋ.. ಅದೇ ರೀತಿ ತಂದೆಯ ರಾಷ್ಟ್ರ ರಾಜಕಾರಣದ ನಡೆಯಿಂದ ಜೆಡಿಎಸ್ ನೆಲೆಯಲ್ಲಿ ಉತ್ತರಾಧಿಕಾರತ್ವ ಯತ್ನಕ್ಕೆ ನಿಖಿಲ್‌ಗೂ ರಹದಾರಿ ಎಂಬುದನ್ನು ಮರೆಯುವಂತಿಲ್ಲ. ಅಲ್ಲದೆ ಒಕ್ಕಲಿಗ ಕೋಟೆಯಲ್ಲಿ ಹೆಚ್.ಡಿ.ಕುಮಾರಸ್ವಾಮಿ, ಡಿ.ಕೆ.ಶಿವಕುಮಾರ್ ನಡುವಿನ ಯುದ್ಧ ಮೇಲ್ನೋಟಕ್ಕೆ ಒಕ್ಕಲಿಗ ಪಾರುಪತ್ಯ ಅನ್ನಿಸಿದರೂ ಜೆಡಿಎಸ್ ಶಕ್ತಿಯನ್ನು ಅಳೆಯುವಂತಿದೆ. ಆ ಕಾರಣಕ್ಕಾಗಿಯೇ ಒಂದೊಂದು ಸಲ ಕುಮಾರಸ್ವಾಮಿ ವರ್ಸಸ್ ಸಿದ್ದರಾಮಯ್ಯ, ಒಂದೊಂದು ಸಲ ಕುಮಾರಸ್ವಾಮಿ ವರ್ಸಸ್ ಡಿ.ಕೆ.ಶಿವಕುಮಾರ್ ನಡುವೆ ರಾಜಕೀಯ ಸಮರ ನಡೆಯುತ್ತೆ. ಹಾಗಾಗಿ `ಕಪ್ಪು ಚುಕ್ಕೆ’ ಇಡುವ ಆಟದಲ್ಲಿ ಸಿದ್ದರಾಮಯ್ಯಗೆ ಅಪ್ಪಳಿಸಿದ ಅನಿರೀಕ್ಷಿತ ಅಲೆ ಕರ್ನಾಟಕ ರಾಜಕಾರಣದಲ್ಲಿ ಯಾರ ದಿಕ್ಕನ್ನ ಬದಲಿಸುತ್ತೋ..? ಕಾದು ನೋಡಬೇಕಿದೆ.

  • ಮುಡಾ ಪ್ರಕರಣ – ಪ್ರಾಸಿಕ್ಯೂಷನ್‍ಗೆ ಅನುಮತಿಸಿದರೆ ಕಾನೂನು ಹೋರಾಟ: ಪರಮೇಶ್ವರ್

    ಮುಡಾ ಪ್ರಕರಣ – ಪ್ರಾಸಿಕ್ಯೂಷನ್‍ಗೆ ಅನುಮತಿಸಿದರೆ ಕಾನೂನು ಹೋರಾಟ: ಪರಮೇಶ್ವರ್

    ಬೆಂಗಳೂರು: ಮುಡಾ ಪ್ರಕರಣವನ್ನು (Muda case) ರಾಜ್ಯಪಾಲರು ಪ್ರಾಸಿಕ್ಯೂಷನ್‍ಗೆ ಅನುಮತಿ ನೀಡುವುದಿಲ್ಲ ಎಂಬ ವಿಶ್ವಾಸವಿದೆ ಎಂದು ಗೃಹ ಸಚಿವ ಜಿ.ಪರಮೇಶ್ವರ್ (G.Parameshwar) ಹೇಳಿದ್ದಾರೆ.

    ಸದಾಶಿವನಗರದ ತಮ್ಮ ನಿವಾಸದ ಬಳಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಈ ವೇಳೆ ರಾಜ್ಯಪಾಲರು ಪ್ರಾಸಿಕ್ಯೂಷನ್‍ಗೆ ನೀಡುವುದಿಲ್ಲ ಎಂಬ ವಿಶ್ವಾಸವಿದೆ. ಒಂದು ವೇಳೆ ಪ್ರಾಸಿಕ್ಯೂಷನ್‍ಗೆ ಅನುಮತಿ ನೀಡಿದರೆ, ಕಾನೂನು ಹೋರಾಟ ನಡೆಸುತ್ತೇವೆ. ಕಾನೂನು ಹೋರಾಟ ಪ್ರಾರಂಭವಾದ ಬಳಿಕ ಮುಂದಿನ ಬೆಳವಣಿಗೆ ಏನೆಂಬುದನ್ನು ಗಮನಿಸಿ ರಾಷ್ಟ್ರಪತಿಯವರನ್ನು ಭೇಟಿ ಮಾಡಲು ನಿರ್ಧರಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

    ಹತ್ತಾರು ಪ್ರಕರಣಗಳು ರಾಜ್ಯಪಾಲರ ಕಚೇರಿಯಲ್ಲಿ ಬಾಕಿ ಉಳಿದಿವೆ. ಯಾವುದಕ್ಕೂ ಕೂಡ ಪ್ರಾಸಿಕ್ಯೂಷನ್‍ಗೆ ರಾಜ್ಯಪಾಲರು ಮುಂದಾಗಿಲ್ಲ. ಮೂಡಾ ವಿಚಾರದಲ್ಲಿ ತುರಾತುರಿಯಲ್ಲಿ ನೋಟಿಸ್ ನೀಡಿದ್ದಾರೆ. ಜುಲೈ 26ರಂದು ರಾಜ್ಯಪಾಲರಿಗೆ ಟಿ.ಜೆ.ಅಬ್ರಹಾಂ ಮನವಿ ಕೊಡುತ್ತಾರೆ. ಅದೇ ದಿನ ರಾಜ್ಯಪಾಲರು ಸರ್ಕಾರದ ಮುಖ್ಯ ಕಾರ್ಯದರ್ಶಿಯವರಿಗೆ ಪತ್ರ ಬರೆಯುತ್ತಾರೆ. ಮುಖ್ಯ ಕಾರ್ಯದರ್ಶಿಯವರು ಹೋಗಿ ಸ್ಪಷ್ಟನೆ ನೀಡಿ ಬಂದಿದ್ದಾರೆ. ಅದೇ ದಿನ ಸಂಜೆ ಸಿಎಂ ಅವರಿಗೆ ಶೋಕಾಸ್ ನೋಟಿಸ್ ನೀಡಿದ್ದಾರೆ. ಇದರ ಹಿಂದಿನ ಉದ್ದೇಶ ಏನೆಂಬುದನ್ನು ರಾಜ್ಯಪಾಲರು ಹೇಳಬೇಕಲ್ಲವೇ ಎಂದು ಮರುಪ್ರಶ್ನಿಸಿದ್ದಾರೆ.

    ರಾಜ್ಯಪಾಲರು ಸಾಮಾನ್ಯ ರಾಜಕಾರಣಿಯೋ ಅಥವಾ ಅಧಿಕಾರಿಯೋ ಅಲ್ಲ. ಸಂವಿಧಾನದ ಮುಖ್ಯಸ್ಥರು. ಅನೇಕ ಪ್ರಕರಣಗಳು ಅವರ ಕಚೇರಿಯಲ್ಲಿ ಬಾಕಿ ಉಳಿದು, ಯಾವುದಕ್ಕೂ ಗಮನ ಹರಿಸದೇ ಏಕಾಏಕಿ ಮುಖ್ಯಮಂತ್ರಿಯವರಿಗೆ ಶೋಕಾಸ್ ನೋಟಿಸ್ ನೀಡಿದ್ದಾರೆ. ಇದರ ಹಿಂದೆ ಷಡ್ಯಂತ್ರ ಇದೆ. ರಾಜ್ಯಪಾಲರ ಮುಂದಿನ ನಡೆ ಏನು ಎಂಬುದನ್ನು ಕಾದು ನೋಡುತ್ತೇವೆ ಎಂದು ಅವರು ತಿಳಿಸಿದ್ದಾರೆ.

    ಬಿಜೆಪಿ ಕಾಲದಲ್ಲಿ ಸಾಕಷ್ಟು ಹಗರಣಗಳಾಗಿವೆ. ತನಿಖೆಗೆ ಆದೇಶ ಮಾಡಿದ್ದೇವೆ. ವರದಿಯನ್ನು ಆಧರಿಸಿ ಮುಂದಿನ ಕ್ರಮದ ಬಗ್ಗೆ ಕ್ಯಾಬಿನೆಟ್‍ನಲ್ಲಿ ನಿರ್ಧರಿಸುತ್ತೇವೆ. ಇನ್ನೂ ಯಡಿಯೂರಪ್ಪ ಅವರ ವಿರುದ್ಧದ ಪೋಕ್ಸೋ ಪ್ರಕರಣದ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿ, ಕೋರ್ಟ್ ನೀಡಿರುವ ತಡೆಯಾಜ್ಞೆಯನ್ನು ತೆರವು ಮಾಡಿಸಲು ಅಡ್ವೋಕೇಟ್ ಜನರಲ್‍ಗೆ ತಿಳಿಸಲಾಗಿದೆ. ಕಾನೂನು ಪ್ರಕಾರ ಕ್ರಮ ತೆಗೆದುಕೊಳ್ಳುತ್ತೇವೆ ಎಂದಿದ್ದಾರೆ.

    ಕೆಲವು ದಿನಗಳಲ್ಲಿ ಸರ್ಕಾರದಲ್ಲಿ ಯಾರು ಎಲ್ಲೆಲ್ಲಿರಬೇಕು, ಏನೇನಾಗುತ್ತದೆ ಎಂದು ಕಾದು ನೋಡಿ ಎಂದು ಕುಮಾರಸ್ವಾಮಿ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಕುಮಾರಸ್ವಾಮಿ ಅವರು ಎಚ್ಚರಿಕೆ ನೀಡಲಿ ನಮ್ಮದೇನು ತಕಾರಾರು ಇಲ್ಲ. ಅದಕ್ಕೂ ಮುನ್ನ ನಮ್ಮ ಪ್ರಶ್ನೆಗಳಿಗೆ ಉತ್ತರ ನೀಡಲಿ. ಬೇರೆ ಬೇರೆ ಪ್ರಕರಣಗಳ ಕುರಿತು ತನಿಖೆ ಆಗುತ್ತಿದೆ. ದೇವರಾಜು ಅರಸು ಟ್ರಕ್ ಟರ್ಮಿನಲ್‍ನಲ್ಲಿ 47 ಕೋಟಿ ರೂ. ಚೆಕ್ ಮೂಲಕ ಪಡೆದುಕೊಂಡಿದ್ದಾರೆ ಎಂಬುದು ಮೇಲ್ನೋಟಕ್ಕೆ ಕಂಡು ಬಂದಿದೆ. ಅಧಿಕಾರಿಗಳನ್ನು ಬಂಧಿಸಲಾಗಿದೆ. ಗಮನದಲ್ಲಿ ಇತ್ತು, ಇರಲಿಲ್ಲ ಎಂಬುದರ ಕುರಿತು ಬಿಜೆಪಿಯವರು ಉತ್ತರಿಸಲಿ ಎಂದು ಅವರು ತಿರುಗೇಟು ಕೊಟ್ಟಿದ್ದಾರೆ.

    ಲೋಕಸಭಾ ಚುನಾವಣೆ ಬಳಿಕ ದ್ವೇಷದ ರಾಜಕಾರಣ ಪ್ರಾರಂಭವಾಗಿದೆ ಎಂಬ ವಿಚಾರಕ್ಕೆ, ಸಾರ್ವಜನಿಕ ಜೀವನದಲ್ಲಿ ವೈಯಕ್ತಿಕ ಟೀಕೆಗಳ ಮಾತುಗಳು ಬರಬಾರದು. ಆಡಳಿತ ಮಾಡುವವರ ಬಗ್ಗೆ ಜನ ಬೇರೆ ವಿಚಾರಗಳನ್ನು ನಿರೀಕ್ಷೆ ಮಾಡುತ್ತಿದ್ದಾರೆ. ಅದನ್ನು ಮೀರಿ ಹೋದಾಗ ರಾಜಕಾರಣ ಅನ್ನಿಸಿಕೊಳ್ಳುವುದಿಲ್ಲ ಎಂದರು.

    ಸರ್ಕಾರ ಬೀಳಿಸುವುದು ಸುಲಭವೇ?, 136 ಶಾಸಕರಿದ್ದೇವೆ. ಯಾವ ರೀತಿ ಸರ್ಕಾರ ಬೀಳಿಸುತ್ತಾರೆ ನೀವೆ ಹೇಳಿ. 10ರೊಳಗಾಗಿ ಸರ್ಕಾರ ಬೀಳುತ್ತೆ ಅಂದಿದ್ರು, ಸರ್ಕಾರ ಬಿತ್ತೇ? ಈಗ ಮೂರು ತಿಂಗಳು ಅಂತಿದ್ದಾರೆ, ನೀವು ಮೂರು ತಿಂಗಳು ಕಾಯಬೇಕು. ಸರ್ಕಾರ ಬೀಳಿಸುವುದು ತಮಾಷೆಯಲ್ಲ ಎಂದು ಎಚ್ಚರಿಸಿದರು.

  • ಗನ್ ಪಾಯಿಂಟ್‍ಲ್ಲಿ ನಿವೇಶನ ಬರೆಸಿಕೊಂಡ ಆರೋಪ – ಮಹಿಳೆಯರಿಂದ ದೂರು ಕೊಡಿಸಲಿ: ಹೆಚ್‍ಡಿಕೆಗೆ ಡಿಕೆಶಿ ಸವಾಲ್

    ಗನ್ ಪಾಯಿಂಟ್‍ಲ್ಲಿ ನಿವೇಶನ ಬರೆಸಿಕೊಂಡ ಆರೋಪ – ಮಹಿಳೆಯರಿಂದ ದೂರು ಕೊಡಿಸಲಿ: ಹೆಚ್‍ಡಿಕೆಗೆ ಡಿಕೆಶಿ ಸವಾಲ್

    – ನಾನು ಮಾಜಿ ಪಿಎಂ ಮಗ ಅಲ್ಲ, ರೈತನ ಮಗ

    ಬೆಂಗಳೂರು: ವಿಧವೆಯರ ನಿವೇಶನವನ್ನು ಗನ್ ಪಾಯಿಂಟ್ ಇಟ್ಟು ಬರೆಸಿಕೊಂಡೆ ಎಂದು ಕುಮಾರಸ್ವಾಮಿ (H.D Kumaraswamy) ಹೇಳಿದ್ದಾರೆ. ಆ ಮಹಿಳೆಯರನ್ನ ಕರೆದುಕೊಂಡು ಬಂದು ದೂರು ಕೊಡಿಸಿ ಎಂದು ಹೆಚ್‍ಡಿಕೆಗೆ ಡಿಸಿಎಂ ಡಿ.ಕೆ ಶಿವಕುಮಾರ್ (D.K Shivakumar) ಸವಾಲು ಹಾಕಿದ್ದಾರೆ.

    ತಮ್ಮ ನಿವಾಸದ ಎದುರು ಅವರು ಸುದ್ದಿಗೋಷ್ಠಿ ನಡೆಸಿದರು. ಈ ವೇಳೆ ಹೆಚ್‍ಡಿಕೆ ನನಗೆ ವಾರ್ನಿಂಗ್ ಕೊಡ್ತಾರೆ. ನನ್ನನ್ನು ಕೆಣಕಬೇಡಿ ಅಂತಾರೆ. ಬಿಚ್ಚಪ್ಪ, ಏನಿದೆ ನಿನ್ ಹತ್ರ ಎಂದು ಅವರು ಗುಡುಗಿದ್ದಾರೆ. ಇದೇ ವೇಳೆ ಹೆಚ್‍ಡಿಕೆ ಗಂಡಸ್ತನದ ರಾಜಕೀಯ ಮಾಡಿ ಎಂಬ ಹೇಳಿಕೆಗೆ, ನಾವು ಗಂಡಸರಲ್ಲ, ಅವರೊಬ್ಬರೇ ಗಂಡಸರು, ಗಂಡಸ್ತನದ ಎಲ್ಲಾ ಶಕ್ತಿ ಅವರಲ್ಲಿದೆ. ಕುಮಾರಸ್ವಾಮಿ ಹಿಂದೆ ಏನು ಮಾತನಾಡಿದ್ದಾರೆ ನೆನಪಿಟ್ಟುಕೊಳ್ಳಬೇಕು. ನನ್ನನ್ನು ಮಿಲಿಟರಿಯವರು ಬಂದು ಕರೆದುಕೊಂಡು ಹೋಗ್ತಾರೆ ಎಂದಿದ್ದರು. ಅಂದರೆ ವಾಪಸ್ ಜೈಲಿಗೆ ಹೋಗ್ತೀನಿ ಎಂದಿದ್ದರು. ನಾನು ಜೈಲಿಗೆ ಹೋಗಿದ್ದಾಗ ಅವರು ಬಂದು ಭೇಟಿಯಾಗಿದ್ದರು. ಆ ವೇಳೆ ನನಗೆ ಎಷ್ಟು ಶಕ್ತಿ ಇತ್ತು ಜೈಲಲ್ಲಿ ಎಂದು ಅವರು ನೋಡಿದ್ದಾರೆ ಎಂದು ತಿರುಗೇಟು ಕೊಟ್ಟಿದ್ದಾರೆ.

    ಕುಮಾರಸ್ವಾಮಿ ಸಿಎಂ ಆಗಿದ್ದಾಗ ಅಧಿಕಾರ ದುರುಪಯೋಗಪಡಿಸಿಕೊಂಡು ನನ್ನ ಮೇಲೆ, ಹೆಂಡತಿ ಮೇಲೆ, ತಮ್ಮ, ತಂಗಿ ಮೇಲೆ ಅದಿರು ಕದ್ದಿದ್ದೇವೆ ಎಂದು ಕೇಸ್ ಹಾಕಿಸಿದ್ದರು. ಆ ದಿನ ನನ್ನ ಮಗಳ ಬರ್ತ್‍ಡೇ ಆಗಿತ್ತು. ಅದೇ ದಿನ ಎಫ್‍ಐಆರ್ ಆಗಿತ್ತು. ನನಗೆ ಡೇಟ್ ಚೆನ್ನಾಗಿ ನೆನಪಿದೆ ಎಂದಿದ್ದಾರೆ.

    ನಾನು ಅವರನ್ನು ಅಣ್ಣ ಎಂದು ಸ್ವೀಕರಿಸಿದ್ದೆ. ಆದರೆ ಅವರು ಯಾವಾಗ ಇದನ್ನೆಲ್ಲ ಮಾತಾಡಿದರೋ ಆಗ ಅದೆಲ್ಲ ಹೋಯ್ತು. ನಮ್ಮ ಸರ್ಕಾರವನ್ನು ಹತ್ತು ತಿಂಗಳಲ್ಲಿ ತೆಗೀತೀವಿ ಎಂದಿದ್ದಾರೆ. ನಮ್ಮ ಸರ್ಕಾರವನ್ನು ಮುಟ್ಟಲಿ ನೋಡೋಣ. ಬಿಜೆಪಿಯಲ್ಲಿ ಏನೇನಾಗ್ತಿದೆ ಗೊತ್ತಾ? ಬಿಜೆಪಿ ಒಳಗೆ ಏನೇನೋ ಆಗ್ತಿದೆ. ಅದರ ಬಗ್ಗೆ ಮಾತಾಡಲಿ ಎಂದು ಅವರು ಕುಟುಕಿದ್ದಾರೆ.

    ಇನ್ನೂ ನಾನು ದಾಖಲೆ ಬಿಡುಗಡೆ ಮಾಡ್ತೀನಿ ಎಂದು ಎಲ್ಲಿ ಹೇಳಿದ್ದೇನೆ? ವಿಚಾರಗಳಿವೆ ಎಂದಿದ್ದೆ. ವಿಧಾನಸಭೆಯಲ್ಲಿ ಅವೆಲ್ಲ ಚರ್ಚೆಗೆ ಬರಲಿ. ವಿಜಯೇಂದ್ರ ನನ್ನ ವಿರುದ್ಧ ಭ್ರಷ್ಟಾಚಾರ ಆರೋಪ ಮಾಡಿದ್ದಾನೆ. ನಾನು ಹಣ ವರ್ಗಾವಣೆ ಮಾಡಿದ್ದೀನಾ? ಲಂಚ ಪಡೆದಿದ್ದೇನಾ ಎಂದು ಏಕವಚನದಲ್ಲಿಯೇ ಅವರು ವಿಜಯೇಂದ್ರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

    ಸಿದ್ದರಾಮಯ್ಯ ರಾಜೀನಾಮೆ ಕೊಡಲ್ಲ, ರಾಜೀನಾಮೆ ಕೊಡುವ ಸಂದರ್ಭ ಉದ್ಭವಿಸಿಲ್ಲ. ಅವರು ಯಾವುದೇ ತಪ್ಪು ಮಾಡಿಲ್ಲ. ಬಿಜೆಪಿ ಹಾಗೂ ಜೆಡಿಎಸ್‍ನವರಿಗೆ ಸಿಎಂ ಮೇಲೆ ಅಸೂಯೆ ಎಂದು ಅವರು ದೋಸ್ತಿಗಳಿಗೆ ಟಾಂಗ್ ಕೊಟ್ಟಿದ್ದಾರೆ.

    ನಾನು ಬಿಜೆಪಿ, ಜೆಡಿಎಸ್‍ನ ಗೊಡ್ಡು ಬೆದರಿಕೆಗೆ ಹೆದರಲ್ಲ. ನಾನು ಯೂಟರ್ನ್ ಹೊಡೆಯಲ್ಲ. ನನ್ನದು ನೇರಾನೇರ ಹೋರಾಟ. ಹಿಂದೆ ಪೆನ್‍ಡ್ರೈವ್ ಹಂಚಿದ ಎಂದು ನನ್ನ ಮೇಲೆ ಹೇಳಿದ್ದರು. ನಾನು ಮೂರ್ಖ ಅಲ್ಲ. ಈಗ ಪ್ರೀತಂಗೌಡ ಎಂದು ಹೇಳ್ತಾರೆ. ಈಗ ಯೂಟರ್ನ್ ಹೊಡಿತಾರೆ ಎಂದು ಕುಟುಕಿದ್ದಾರೆ.

    ನಾನು ಪ್ರಧಾನಿ, ಸಿಎಂ ಮಗ ಅಲ್ಲ. ಮಧ್ಯಮ ವರ್ಗದ ರೈತನ ಮಗ. ನನ್ನ ಮೇಲೆ ಇ.ಡಿ ಕೇಸ್ ಯಾಕೆ ಹಾಕಿದ್ರು? ನಾನ್ಯಾಕೆ ಜೈಲಿನಲ್ಲಿದ್ದೆ? ಇದು ವಿಜಯೇಂದ್ರಗೆ ಗೊತ್ತಾ? ಇಡಿ ಕೇಸ್ ಕೋರ್ಟಿನಲ್ಲಿ ವಜಾ ಆಗಿದೆ ಎಂದಿದ್ದಾರೆ.