Tag: jds

  • ಕಲಾವಿದರ ಮೇಲೆ ಸೇಡು ತೀರಿಸಿದ ನಟ್ಟು ಬೋಲ್ಟ್‌ ಮಿನಿಸ್ಟರ್‌- ಜೆಡಿಎಸ್‌ ಕಿಡಿ

    ಕಲಾವಿದರ ಮೇಲೆ ಸೇಡು ತೀರಿಸಿದ ನಟ್ಟು ಬೋಲ್ಟ್‌ ಮಿನಿಸ್ಟರ್‌- ಜೆಡಿಎಸ್‌ ಕಿಡಿ

    ಬೆಂಗಳೂರು: ಬಿಡದಿ (Bidadi) ಬಳಿ ನಡೆಯುತ್ತಿದ್ದ ಬಿಗ್‌ಬಾಸ್‌ ಶೋ (Bigg Boss) ನಡೆಯುತ್ತಿದ್ದ ಜಾಲಿವುಡ್‌ ಸ್ಟುಡಿಯೋಗೆ  ಬೀಗ ಹಾಕಿದ್ದಕೆ  ಜೆಡಿಎಸ್‌ (JDS) ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್‌ ವಿರುದ್ಧ ಸಿಟ್ಟು ಹೊರಹಾಕಿದೆ.

    ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿ ನಡೆಯುತ್ತಿದ್ದ ಬಿಗ್ ಬಾಸ್ ರಿಯಾಲಿಟಿ ಷೋ ಬಂದ್ ಮಾಡಿಸಿ, ಕಲಾವಿದರ ಮೇಲೆ ಸೇಡು ತೀರಿಸಿಕೊಂಡ ನಟ್ಟು ಬೋಲ್ಟ್ ಮಿನಿಸ್ಟರ್ ಡಿಕೆ ಶಿವಕುಮಾರ್‌ (DK Shivakumar) ಎಂದು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ಹೊರಹಾಕಿದೆ.

    ಮಾಲಿನ್ಯ ನಿಯಮ ಉಲ್ಲಂಘಿಸಿದ್ದಕ್ಕೆ ಬಿಗ್‌ ಬಾಸ್‌ ಶೋ ನಡೆಯುತ್ತಿದ್ದ ಜಾಲಿವುಡ್‌ ಸ್ಟುಡಿಯೋವನ್ನು ಬೆಂಗಳೂರು ದಕ್ಷಿಣ ಜಿಲ್ಲಾಡಳಿತ ಬಂದ್‌ ಮಾಡಿದೆ. ಪರಿಣಾಮ ಎಲ್ಲಾ ಸ್ಪರ್ಧಿಗಳು ಎರಡೇ ವಾರಕ್ಕೆ ಶೋದಿಂದ ಎಲಿಮಿನೇಟ್‌ ಆಗಿದ್ದಾರೆ.  ಇದನ್ನೂ ಓದಿ:  ಬಿಗ್‌ ಬಾಸ್‌ ಮನೆಗೆ ಬೀಗ – ರಕ್ಷಿತಾ ಹೇಳಿಕೆ ವೈರಲ್‌

    ಏನಿದು ನಟ್ಟು ಬೋಲ್ಟ್‌ ವಿವಾದ?
    16ನೇ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ ಉದ್ಘಾಟನಾ ಸಮಾರಂಭದಲ್ಲಿ ಸಿನಿಮಾ ಕಲಾವಿದರು ಭಾಗವಹಿಸಿರಲಿಲ್ಲ.  ಈ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಡಿಸಿಎಂ ಡಿಕೆ ಶಿವಕುಮಾರ್‌, ಇದು ನನ್ನ ವಾರ್ನಿಂಗ್ ಅಂತಾದ್ರೂ ಅಂದ್ಕೊಳ್ಳಿ, ಕೋರಿಕೆ ಅಂತಾದ್ರೂ ಅಂದ್ಕೊಳ್ಳಿ, ಚಿತ್ರರಂಗದವರ ನಟ್ಟು ಬೋಲ್ಟ್ ಹೇಗೆ ಟೈಟ್ ಮಾಡಬೇಕು ಅಂತ ಗೊತ್ತು ಎಂದು ಹೇಳಿಕೆ ನೀಡಿದ್ದು ದೊಡ್ಡ ಚರ್ಚೆಗೆ ಗ್ರಾಸವಾಗಿತ್ತು. ಇದನ್ನೂ ಓದಿ:  ಬಿಗ್‌ಬಾಸ್‌ ಸ್ಪರ್ಧಿಗಳು ಈಗಲ್‌ಟನ್‌ ರೆಸಾರ್ಟ್‌ಗೆ ಶಿಫ್ಟ್‌

    ಡಿಕೆಶಿ ಈ ಮೂಲಕ ಚಿತ್ರರಂಗದವರಿಗೆ ಬೆದರಿಕೆ ಹಾಕುತ್ತಿದ್ದಾರೆ ಎಂದು ನೆಟ್ಟಿಗರು ಅಂದೇ ಟೀಕೆ ವ್ಯಕ್ತಪಡಿಸಿದ್ದರು. ಈಗ ಮಾಜಿ ಸ್ಪರ್ಧಿ ಪ್ರಶಾಂತ್‌ ಸಂಬರಗಿ ಅವರು ವಿಧಾನಸಭಾ ಚುನಾವಣೆಯಲ್ಲಿ ಸುದೀಪ್‌ (Sudeep) ಬಿಜೆಪಿ ಪರ ಪ್ರಚಾರ ಮಾಡಿದ್ದಾರೆ ಎಂಬ ಕಾರಣಕ್ಕೆ ಡಿಕೆಶಿ ಬಿಗ್‌ಬಾಸ್‌ ಶೋ ರದ್ದು ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

  • ಅವಶ್ಯಕತೆ ಬಿದ್ದರೆ ದೆಹಲಿಗೆ ಹೋಗಿ ಪ್ರಧಾನಿ ಮೋದಿ ಬಳಿ ಪ್ರವಾಹ ಪರಿಹಾರ ಕೇಳ್ತೀನಿ: ದೇವೇಗೌಡ

    ಅವಶ್ಯಕತೆ ಬಿದ್ದರೆ ದೆಹಲಿಗೆ ಹೋಗಿ ಪ್ರಧಾನಿ ಮೋದಿ ಬಳಿ ಪ್ರವಾಹ ಪರಿಹಾರ ಕೇಳ್ತೀನಿ: ದೇವೇಗೌಡ

    ಬೆಂಗಳೂರು: ಕಲ್ಯಾಣ ಕರ್ನಾಟಕ (Kalyana Karnataka) ಭಾಗದಲ್ಲಿ ಪ್ರವಾಹದಿಂದ ಆಗಿರೋ ಅನಾಹುತಕ್ಕೆ ಅವಶ್ಯಕತೆ ಬಿದ್ದರೆ ನಾನೇ ದೆಹಲಿಗೆ ಹೋಗಿ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರನ್ನು ಭೇಟಿಯಾಗಿ, ಪರಿಹಾರಕ್ಕೆ ಮನವಿ ಮಾಡೋದಾಗಿ ಮಾಜಿ ಪ್ರಧಾನಿ ದೇವೇಗೌಡ (H D Deve Gowda) ತಿಳಿಸಿದ್ದಾರೆ.

    ಪ್ರವಾಹ (Flood) ವಿಚಾರ ಕುರಿತು ಜೆಪಿ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸಿಎಂ ಮೊನ್ನೆ ನೆರೆ ಹಾನಿ ಪ್ರದೇಶಗಳ ವೈಮಾನಿಕ ಸರ್ವೆ ಮಾಡಿದ್ದಾರೆ. ನಾನು ಅವರು ಮಾಡಿದ ಸರ್ವೆ ನೋಡಿದೆ. ನಾನು ಸಿಎಂ ಮೇಲೆ ಆಪಾದನೆ ಮಾಡೊಲ್ಲ. ವೈಮಾನಿಕ ಸರ್ವೆ ಮಾಡಿ 3 ದಿನ ಆಗಿದೆ. 6 ಜಿಲ್ಲೆಯಲ್ಲಿ ಬೆಳೆ ನಾಶ ಆಗಿದೆ. 50ಕ್ಕೂ ಹೆಚ್ಚು ಜನರು, ಜಾನುವಾರುಗಳು ಸತ್ತು ಹೋಗಿವೆ. ರೈತರ ಬೆಳೆ ಸಂಪೂರ್ಣವಾಗಿ ನಾಶವಾಗಿದೆ. ಅವ್ರು ಎಕ್ರೆಗೆ ಇಷ್ಟು ಹಣ ಅಂತ ಘೋಷಣೆ ಮಾಡಿದ್ರು. ಆದರೆ ಫೀಲ್ಡ್ಗೆ ಹೋಗಿ ಎಷ್ಟು ಪ್ರದೇಶ ಹಾನಿಯಾಗಿದೆ ಅಂತ ನೋಡಿ ಸಂಬಂಧಪಟ್ಟವರ ನೋವಿಗೆ ಸ್ಪಂದಿಸುವ ಕೆಲಸವನ್ನು ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾ ಆಡಳಿತವೂ ಮಾಡಿಲ್ಲ. ಅವರ ನೋವಿಗೆ ಸ್ಪಂದಿಸುವ ಕೆಲಸವನ್ನು ಸರ್ಕಾರ ಮಾಡಬೇಕು ಎಂದು ಆಗ್ರಹಿಸಿದ್ದಾರೆ. ಇದನ್ನೂ ಓದಿ: 3 ತಿಂಗಳು ನನ್ನ ಮನೆಮುಂದೆ ಮಾಧ್ಯಮಗಳು ಕಾಯೋ ಹಾಗೇ ಮಾಡಿದ್ದು ಯಾರ ಪ್ರೇರಣೆಯಿಂದ – HDD ಕಿಡಿ

    48 ಗಂಟೆ ಒಳಗೆ ಡಿಸಿಗಳು, ಜಿಲ್ಲಾ ಉಸ್ತುವಾರಿಗಳು ಜಾಗಕ್ಕೆ ಹೋಗಿ ಸ್ಥಳ ಪರಿಶೀಲನೆ ಮಾಡಬೇಕು. ನೋವಿನಲ್ಲಿ ಇರೋ ರೈತರಿಗೆ ಪರಿಹಾರ ಕೊಟ್ಟಿದ್ದಾರಾ ಇಲ್ವಾ ಅಂತ ನೋಡಿ ಮಾತಾಡಬೇಕು. ಮೂರ್ನಾಲ್ಕು ದಿನ ಆದ ಮೇಲೆ ಕಲಬುರಗಿಗೆ ವಿಮಾನದಲ್ಲಿ ಬಂದಿದ್ದಾರೆ. ನಾನೇ ಪ್ರವಾಹ ಪೀಡಿತ ಪ್ರದೇಶಕ್ಕೆ ಹೋಗ್ತೀನಿ. ಸ್ಥಳ ಪರಿಶೀಲನೆ ಮಾಡಿ ಸರ್ಕಾರ ಏನು ಕ್ರಮ ಕೈಗೊಂಡಿದೆ ಎಂದು ಮಾತಾಡ್ತೀನಿ ಎಂದಿದ್ದಾರೆ. ಇದನ್ನೂ ಓದಿ: ರಾಜ್ಯದಲ್ಲಿ ಮುಂದೆ ಬರುವ ಎಲ್ಲಾ ಚುನಾವಣೆಗಳಿಗೂ ಬಿಜೆಪಿ-ಜೆಡಿಎಸ್ ಮೈತ್ರಿ: ಹೆಚ್‌ಡಿಡಿ ಘೋಷಣೆ

    ಈಗಾಗಲೇ ಪರಿಹಾರ ಕೊಡಿ ಅಂತ ಪ್ರಧಾನಿ ಮೋದಿ, ಅಮಿತ್ ಶಾಗೆ ಕುಮಾರಸ್ವಾಮಿ ಪತ್ರ ಬರೆದು ಮನವಿ ಮಾಡಿದ್ದಾರೆ. ನಾನು ಅವಶ್ಯಕತೆ ಬಿದ್ದರೆ ಮೋದಿ, ಅಮಿತ್ ಶಾಗೆ ಪತ್ರ ಬರೆಯುತ್ತೇನೆ. ನಾನೇ ದೆಹಲಿಗೆ ಹೋಗಿ ಪ್ರಧಾನಿ ಅವರ ಬಳಿ ಪರಿಹಾರಕ್ಕಾಗಿ ಮನವಿ ಮಾಡ್ತೀನಿ ಎಂದು ಹೇಳಿದ್ದಾರೆ.

    ಬೇರೆ ರಾಜ್ಯದ ಪ್ರವಾಹಕ್ಕೆ ಕೇಂದ್ರ ಹಣ ಕೊಟ್ಟಿದೆ. ಕರ್ನಾಟಕಕ್ಕೆ ಕೊಟ್ಟಿಲ್ಲ ಎಂಬ ಕಾಂಗ್ರೆಸ್ ನಾಯಕರ ಆರೋಪದ ಪ್ರತಿಕ್ರಿಯಿಸಿದ ಅವರು, ನಾನು ಇದರಲ್ಲಿ ರಾಜಕೀಯ ಬೆರೆಸಲು ಹೋಗಲ್ಲ. ಕಾಂಗ್ರೆಸ್‌ನ ಶಾಸಕರು ಗ್ಯಾರಂಟಿ ಕಾರ್ಯಕ್ರಮವನ್ನ ಅನುಷ್ಠಾನಕ್ಕೆ ತರಲು ಹೋಗಿ, ಇವತ್ತು ರಾಜ್ಯ ಬರಡಾಗಿದೆ. ಹಣಕಾಸಿನ ಸ್ಥಿತಿ ಹದಗೆಟ್ಟಿದೆ ಅಂತ ಹೇಳ್ತಿದ್ದಾರೆ. ಇದನ್ನ ನಾನು ಹೇಳ್ತಿಲ್ಲ. ಕಾಂಗ್ರೆಸ್ ಶಾಸಕರು ಹೇಳ್ತಿದ್ದಾರೆ. ರಾಜ್ಯದ ಬೊಕ್ಕಸದಲ್ಲಿ ದುಡ್ಡು ಇದೆಯೋ? ಇಲ್ಲವೋ ಅಂತ ಅವರಲ್ಲೇ ಗೊಂದಲವಿದೆ. ರಾಜ್ಯ ಸರ್ಕಾರ ಪ್ರವಾಹದಿಂದ ಸಮಸ್ಯೆಗೊಳಗಾದ ಜನರಿಗೆ ತನ್ನ ಸಂಪನ್ಮೂಲದಿಂದ ಶಕ್ತಿ ಮೀರಿ ಸಹಾಯ ಮಾಡಬೇಕು ಎಂದಿದ್ದಾರೆ.

  • ರಾಜ್ಯದಲ್ಲಿ ಮುಂದೆ ಬರುವ ಎಲ್ಲಾ ಚುನಾವಣೆಗಳಿಗೂ ಬಿಜೆಪಿ-ಜೆಡಿಎಸ್ ಮೈತ್ರಿ: ಹೆಚ್‌ಡಿಡಿ ಘೋಷಣೆ

    ರಾಜ್ಯದಲ್ಲಿ ಮುಂದೆ ಬರುವ ಎಲ್ಲಾ ಚುನಾವಣೆಗಳಿಗೂ ಬಿಜೆಪಿ-ಜೆಡಿಎಸ್ ಮೈತ್ರಿ: ಹೆಚ್‌ಡಿಡಿ ಘೋಷಣೆ

    – ಮೋದಿ ನನ್ನ ಸಂಬಂಧ ಬದಲಾವಣೆ ಮಾಡೋಕೆ ಆಗಲ್ಲ

    ಬೆಂಗಳೂರು: ರಾಜ್ಯದಲ್ಲಿ ಮುಂದೆ ಬರುವ ಎಲ್ಲಾ ಚುನಾವಣೆಗಳಿಗೂ ಬಿಜೆಪಿ-ಜೆಡಿಎಸ್ ಮೈತ್ರಿ (BJP JDS Alliance) ಮುಂದುವರೆಯಲಿದೆ ಅಂತ ಮಾಜಿ ಪ್ರಧಾನಿ, ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ದೇವೇಗೌಡರು (H.D Deve Gowda) ಸ್ಪಷ್ಟಪಡಿಸಿದ್ದಾರೆ.

    ಜೆಪಿ ಭವನದಲ್ಲಿ ಸುದ್ದಿಗೋಷ್ಟಿಯಲ್ಲಿ ಅವರು ಬಿಜೆಪಿ-ಜೆಡಿಎಸ್ ಮೈತ್ರಿ ಬಗ್ಗೆ ಮಾತನಾಡಿದರು. ಈ ವೇಳೆ, ಜಿಬಿಎ ಚುನಾವಣೆಯಲ್ಲಿ (Elections) ಬಿಜೆಪಿ ಜೊತೆ ಮೈತ್ರಿ ಆಗ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಬಿಜೆಪಿ-ಜೆಡಿಎಸ್ ಮೈತ್ರಿಗೆ ಯಾವುದೇ ಕಾರಣದಿಂದ ಆತಂಕ ಆಗುವುದಿಲ್ಲ. ಬಿಜೆಪಿ ಜೊತೆ ಮೈತ್ರಿ ಮುಂದುವರೆಯುತ್ತದೆ. ಜಿಲ್ಲಾ, ತಾಲೂಕು, ಜಿಬಿಎ, ವಿಧಾನಸಭೆ ಚುನಾವಣೆ ಸೇರಿ ಎಲ್ಲಾ ಚುನಾವಣೆಗಳಿಗೂ ಈ ಮೈತ್ರಿ ಮುಂದುವರೆಯಲಿದೆ ಎಂದು ತಿಳಿಸಿದರು. ಇದನ್ನೂ ಓದಿ: ನವೆಂಬರ್-ಡಿಸೆಂಬರ್ ಒಳಗೆ ಸಿಎಂ ಸಿದ್ದರಾಮಯ್ಯ ಅಧಿಕಾರ ಕಳೆದುಕೊಳ್ತಾರೆ: ಆರ್.ಅಶೋಕ್ ಭವಿಷ್ಯ

    ಬಿಜೆಪಿ-ಜೆಡಿಎಸ್ ಮೈತ್ರಿಗೆ ಎಂದೂ ಆತಂಕ ಇಲ್ಲ. ಮೋದಿ ನನ್ನ ಸಂಬಂಧ ಯಾವುದೇ ಕಾರಣಕ್ಕೂ ಯಾರು ಬದಲಾವಣೆ ಮಾಡೋಕೆ ಆಗೊಲ್ಲ. ನಮ್ಮ ಅವರ ಸಂಬಂಧ 10 ವರ್ಷದಿಂದ ಉತ್ತಮವಾಗಿದೆ. ನಾನು ಕಳೆದ 10 ವರ್ಷಗಳಲ್ಲಿ ಮೋದಿ ಬಗ್ಗೆ ಲಘುವಾಗಿ ಮಾತಾಡಿಲ್ಲ. ಇದ್ದರೆ ತೋರಿಸಿ ಎನ್ನುವ ಮೂಲಕ ನನ್ನ ಮೋದಿ ಸಂಬಂಧ ಉತ್ತಮವಾಗಿದ್ದು, ಇದೇ ಮೈತ್ರಿಗೆ ಅಡಿಪಾಯ ಅಂತ ತಿಳಿಸಿದರು.


    ಕುಮಾರಸ್ವಾಮಿಯವರು 4 ತಿಂಗಳಿಂದ ನಮ್ಮ ರಾಜ್ಯದಲ್ಲಿ ಪ್ರವಾಸ ಮಾಡಿರಲಿಲ್ಲ. ಸ್ವಲ್ಪ ಆರೋಗ್ಯ ಸುಧಾರಣೆ ಆಗಬೇಕಿತ್ತು. ಆರೋಗ್ಯ ಸರಿಯಾಗಿದೆ, ಯಾವುದೇ ಸಮಸ್ಯೆ ಇಲ್ಲ. ಹೊರ ದೇಶದಿಂದ ಬಂದ ಡಾಕ್ಟರ್ ಪರಿಶೀಲನೆ ಮಾಡಿ ಯಾವುದೇ ಸಮಸ್ಯೆ ಇಲ್ಲ. ಅವರು ಎಷ್ಟು ಬೇಕಾದ್ರು ರಾಜಕೀಯದಲ್ಲಿ ಹೋರಾಟ ಮಾಡೋಕೆ ತೊಂದರೆ ಇಲ್ಲ ಎಂದಿದ್ದಾರೆ. ಕೆಲವೇ ದಿನಗಳಲ್ಲಿ ಅವರು ರಾಜ್ಯ ಪ್ರವಾಸ ಮಾಡ್ತಾರೆ ಎಂದು ಘೋಷಿಸಿದ್ದಾರೆ. ಇದನ್ನೂ ಓದಿ: ಎಂಎಂ ಹಿಲ್ಸ್‌ನಲ್ಲಿ ಮತ್ತೊಂದು ಹುಲಿ ಹತ್ಯೆ; ಪಿಸಿಸಿಎಫ್ ತಂಡದ ತನಿಖೆಗೆ ಖಂಡ್ರೆ ಆದೇಶ

  • ಬೆಳ್ಳಂಬೆಳಗ್ಗೆ ಜೆಸಿಬಿ ಘರ್ಜನೆ; JDS ಮುಖಂಡ ಕಬ್ಜ ಮಾಡಿದ್ದ 75 ಕೋಟಿ ಮೌಲ್ಯದ ಭೂಮಿ ಬಿಡಿಎ ವಶಕ್ಕೆ

    ಬೆಳ್ಳಂಬೆಳಗ್ಗೆ ಜೆಸಿಬಿ ಘರ್ಜನೆ; JDS ಮುಖಂಡ ಕಬ್ಜ ಮಾಡಿದ್ದ 75 ಕೋಟಿ ಮೌಲ್ಯದ ಭೂಮಿ ಬಿಡಿಎ ವಶಕ್ಕೆ

    ಬೆಂಗಳೂರು: ಬೆಳ್ಳಂಬೆಳಗ್ಗೆ ಜೆಸಿಬಿ ಘರ್ಜಿಸಿದೆ. ಜೆಡಿಎಸ್‌ ಮುಖಂಡ ಹನುಮಂತೇಗೌಡ ಕಬ್ಜ ಮಾಡಿದ್ದ 75 ಕೋಟಿ ಮೌಲ್ಯದ ಭೂಮಿಯನ್ನು ಬಿಡಿಎ ವಶಕ್ಕೆ ಪಡೆದುಕೊಂಡಿದೆ.

    ಕೆಂಗೇರಿ ಬಳಿಯ ವಳಗೆರೆಹಳ್ಳಿ ಸರ್ವೆ ನಂಬರ್‌ನಲ್ಲಿ ಭೂಮಿ ಕಬ್ಜ ಮಾಡಲಾಗಿತ್ತು. ಸುಮಾರು 75 ಕೋಟಿ ಬೆಲೆ ಬಾಳುವ 1.5 ಎಕರೆ ಭೂಮಿ ಇದಾಗಿದೆ.

    ಹನುಮಂತೇಗೌಡ ಈ ಹಿಂದೆ ಯಲಹಂಕ ಎಂಎಲ್‌ಎ ಸ್ಥಾನಕ್ಕೆ ಸ್ಪರ್ಧಿಸಿದ್ದರು. ಅವರ ಪತ್ನಿ ಲತಾ ಹೆಸರಲ್ಲಿ ಜಮೀನಿತ್ತು. ಬಿಡಿಎ ಸ್ವತ್ತನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿದ್ದರು.

    ಬಿಡಿಎ ಎಸ್ಪಿ ಲಕ್ಷ್ಮೀಗಣೇಶ್ ನೇತೃತ್ವದಲ್ಲಿ ಒತ್ತುವರಿ ತೆರವು ಮಾಡಲಾಗಿದೆ.

  • 21 ಜನರನ್ನು ಬಂಧಿಸಲಾಗಿದೆ, ಮಸೀದಿ ಕಡೆಯಿಂದ ಕಲ್ಲು ಎಸೆದ ಬಗ್ಗೆ ಮಾಹಿತಿ ಇದೆ: ಚಲುವರಾಯಸ್ವಾಮಿ

    21 ಜನರನ್ನು ಬಂಧಿಸಲಾಗಿದೆ, ಮಸೀದಿ ಕಡೆಯಿಂದ ಕಲ್ಲು ಎಸೆದ ಬಗ್ಗೆ ಮಾಹಿತಿ ಇದೆ: ಚಲುವರಾಯಸ್ವಾಮಿ

    – ಅಶೋಕ್ ಸೇರಿದಂತೆ ಬಿಜೆಪಿ ನಾಯಕರ ಕುಮ್ಮಕ್ಕಿನಿಂದ ಇದೆಲ್ಲ ಆಗ್ತಿದೆ
    – ಈ ಹಿಂದೆ ಮಂಗಳೂರಿನಿಂದ ಪಾಂಡವಪುರಕ್ಕೆ ಬಂದು ಏನು ನಡೆಸಿದ್ರು ಗೊತ್ತಿದೆ

    ಬೆಂಗಳೂರು: ಮೆರವಣಿಗೆ ನಡೆಯುವ ಸಂದರ್ಭದಲ್ಲಿ ಮಸೀದಿ ಕಡೆಯಿಂದ ಕಲ್ಲುಗಳು ಎಸೆದ ಬಗ್ಗೆ ಮಾಹಿತಿ ಇದೆ. ವಿಚಾರಣೆ ನಡೆಸಿ ನಂತರ 21 ಜನರನ್ನು ಬಂಧಿಸಲಾಗಿದೆ ಎಂದು ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ (N Chaluvaraya Swamy) ಹೇಳಿದ್ದಾರೆ.

    ಮದ್ದೂರಿನಲ್ಲಿ (Maddur) ಗಣೇಶ ವಿಸರ್ಜನೆ ಮೆರವಣಿಗೆ (Ganesha Procession) ವೇಳೆ ಕಲ್ಲು ತೂರಾಟದ (Stone Pelting) ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಯಾವ ಹಿಂದೂಗಳ ಮೇಲೂ ಕೇಸ್ ದಾಖಲಾಗಿಲ್ಲ. ಇಷ್ಟು ಬೇಗ ಕ್ರಮ ತೆಗೆದುಕೊಂಡ ಪ್ರಕರಣ ಬೇರೆ ಯಾವುದೂ ಇಲ್ಲ. ಆದರೆ ಬಿಜೆಪಿ ಹಾಗೂ ಜೆಡಿಎಸ್ ನಾಯಕರು ಪ್ರಚೋದಿಸುತ್ತಿದ್ದಾರೆ. ಇನ್ನಷ್ಟು ಬಿಗಿಕ್ರಮಗಳನ್ನು ತೆಗೆದುಕೊಳ್ಳಲು ಹೇಳಬಹುದಿತ್ತು. ಅದು ಬಿಟ್ಟು ಕೋಮುಗಲಭೆಗೆ ಪ್ರಚೋದನೆ ಕೊಡುವುದು ಸರಿಯಲ್ಲ ಎಂದರು. ಇದನ್ನೂ ಓದಿ: ಧರ್ಮಸ್ಥಳ, ಚಾಮುಂಡೇಶ್ವರಿ ಆಯ್ತು ಈಗ ಮದ್ದೂರು: ಅಶೋಕ್ ಕಿಡಿ

    ಮದ್ದೂರಿನಲ್ಲಿ ಹಿಂದೆ ಎಂದೂ ಈ ರೀತಿ ನಡೆದಿರಲಿಲ್ಲ. ಹೊರಗಡೆಯಿಂದ ಬಂದು ಯಾರೋ ಗಲಭೆ ಮಾಡಿರಬಹುದು ಎಂಬುದನ್ನೂ ವಿಚಾರಣೆ ಮಾಡುತ್ತಿದ್ದೇವೆ. ಯಾವುದೇ ಸಮಾಜವಿದ್ದರೂ ಅವರ ಮೇಲೆ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ. ಬಿಜೆಪಿ, ಜೆಡಿಎಸ್‌ನವರು ರಾಜಕೀಯವಾಗಿ ನಮ್ಮನ್ನು ಎದುರಿಸಲು ಆಗದೇ ಪ್ರಚೋದನೆ ಮಾಡುತ್ತಿದ್ದಾರೆ. ನಾವು ಯಾರ ಓಲೈಕೆಯನ್ನ ಕೂಡ ಮಾಡುತ್ತಿಲ್ಲ. ಹಾಗಿದ್ರೆ ಯಾಕೆ 21 ಜನರ ಬಂಧನ ಮಾಡುತ್ತಿದ್ದೆವು? ಇದು ಪೂರ್ವನಿಯೋಜಿತ, ನಮಗೆ ಎಲ್ಲ ಗೊತ್ತಿದೆ. ಈ ಹಿಂದೆ ಮಂಗಳೂರಿನಿಂದ ಪಾಂಡವಪುರಕ್ಕೆ ಬಂದು ಏನು ನಡೆಸಿದ್ರು ಗೊತ್ತಿದೆ ನಮಗೆ. ನಾಗಮಂಗಲದಲ್ಲೂ ನಡೆಸಿದ್ರು, ಈ ಸಲ ಎಚ್ಚರಿಕೆ ವಹಿಸಿದ್ದೇವೆ ಎಂದು ಹೇಳಿದರು. ಇದನ್ನೂ ಓದಿ: ಒತ್ತಡಕ್ಕೆ ಮಣಿದರೆ ನಾನೇ ಮದ್ದೂರಿಗೆ ಬರಬೇಕಾಗುತ್ತೆ – ಮಂಡ್ಯ ಎಸ್ಪಿಗೆ ಹೆಚ್‌ಡಿಕೆ ಖಡಕ್ ವಾರ್ನಿಂಗ್

    ಇದು ಪೂರ್ವನಿಯೋಜಿತವಾಗಿ ನಡೆದಿದೆ. ಉದ್ದೇಶಪೂರ್ವಕವಾಗಿಯೇ ಹೀಗೆ ಮಾಡಿದ್ದಾರೆ. ಅಶೋಕ್ ಸೇರಿದಂತೆ ಬಿಜೆಪಿ ನಾಯಕರ ಕುಮ್ಮಕ್ಕಿನಿಂದ ಇದೆಲ್ಲ ಆಗುತ್ತಿದೆ. ನನಗೂ ಕೆಲವು ಸಂಘಟನೆಗಳ ಮುಖಂಡರು ಕರೆ ಮಾಡಿ ಮಾತನಾಡಿದ್ದಾರೆ. ಅವರ ಹೆಸರನ್ನ ಈಗ ಹೇಳಲು ಬಯಸುವುದಿಲ್ಲ. ಬಿಜೆಪಿ ನಾಯಕರೇ ಸಂಘಟನೆಗಳ ಮುಖಂಡರಿಗೆ ಕರೆ ಮಾಡಿ ಪ್ರಚೋದನೆ ಕೊಡುತ್ತಿದ್ದಾರೆ. ಸರ್ಕಾರದ ಅಭಿವೃದ್ಧಿ ಯೋಜನೆಗಳನ್ನು ಬಿಜೆಪಿ ಹಾಗೂ ಜೆಡಿಎಸ್ ನಾಯಕರಿಗೆ ಸಹಿಸಲು ಆಗುತ್ತಿಲ್ಲ. ವಿಧಾನಸಭೆಯಲ್ಲಿ ನಮ್ಮನ್ನು ಎದುರಿಸಲು ಅವರಿಗೆ ಆಗಿಲ್ಲ. ಹಾಗಾಗಿ ಇಂತಹ ಘಟನೆಗಳು ನಡೆದಾಗ ಪ್ರಚೋದನೆ ಕೊಡುವ ಕೆಲಸ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು. ಇದನ್ನೂ ಓದಿ: ಮದ್ದೂರಿನಲ್ಲಿ ಗಲಾಟೆ ಮಾಡಿದವರ ಬಂಧನ ಆಗಿದೆ: ಪರಮೇಶ್ವರ್

    ಇನ್ನು ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಚಲುವರಾಯಸ್ವಾಮಿ, ತಪ್ಪಿತಸ್ಥರ ವಿರುದ್ಧ ಕಠಣ ಕ್ರಮಕ್ಕೆ ಸೂಚನೆ ನೀಡಿದ್ದಾರೆ. ಮಂಡ್ಯ ಜಿಲ್ಲೆಯ ಮದ್ದೂರಿನಲ್ಲಿ ಗಣೇಶ ವಿಸರ್ಜನೆಯ ವೇಳೆ ಕಲ್ಲು ತೂರಾಟ ನಡೆದಿರುವುದು ವಿಷಾದನೀಯ. ಈ ಬಗ್ಗೆ ಸಮರ್ಪಕ ತನಿಖೆ ನಡೆಸಿ, ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ನೀಡುವಂತೆ ಜಿಲ್ಲಾ ಪೊಲೀಸ್ ಇಲಾಖೆಗೆ ಸೂಚನೆ ನೀಡಲಾಗಿದೆ. ಇನ್ನು ಮುಂದೆ ಇಂತಹ ದುರ್ವರ್ತನೆ ಮರುಕಳಿಸದಂತೆ ಕಟ್ಟುನಿಟ್ಟಿನ ಕ್ರಮ ವಹಿಸಲು ತಿಳಿಸಲಾಗಿದೆ. ಸಾರ್ವಜನಿಕರು ಈ ದಿಶೆಯಲ್ಲಿ ಸಹಕರಿಸಬೇಕು ಹಾಗೂ ಇಂತಹ ಯಾವುದೇ ರೀತಿಯ ಅಹಿತಕರ ಘಟನೆಗೆ ಎಡೆ ಮಾಡಿಕೊಡಬಾರದು ಎಂದು ಎಕ್ಸ್‌ನಲ್ಲಿ ಮನವಿ ಮಾಡಿದ್ದಾರೆ. ಇದನ್ನೂ ಓದಿ: ಮದ್ದೂರಿನಲ್ಲಿ ಗಣೇಶನಿಗೆ ಕಲ್ಲು – ಪ್ರತಿಭಟಿಸಿದ ಹಿಂದೂ ಕಾರ್ಯಕರ್ತರ ಮೇಲೆ ಲಾಠಿಚಾರ್ಜ್‌

  • ಭೋವಿ ನಿಗಮದ ಅಕ್ರಮ; ಕಾಂಗ್ರೆಸ್ ಸರ್ಕಾರದ 60% ಕಮಿಷನ್‌ಗೆ ಸಾಕ್ಷಿ – ಜೆಡಿಎಸ್ ಕಿಡಿ

    ಭೋವಿ ನಿಗಮದ ಅಕ್ರಮ; ಕಾಂಗ್ರೆಸ್ ಸರ್ಕಾರದ 60% ಕಮಿಷನ್‌ಗೆ ಸಾಕ್ಷಿ – ಜೆಡಿಎಸ್ ಕಿಡಿ

    ಬೆಂಗಳೂರು: ಭೋವಿ ನಿಗಮದಲ್ಲಿ ನಡೆದ ಅಕ್ರಮ ಕಾಂಗ್ರೆಸ್ (Congress) ಸರ್ಕಾರದ 60% ಕಮಿಷನ್ ದಂಧೆಗೆ ಸಾಕ್ಷಿ ಎಂದು ಸರ್ಕಾರದ ವಿರುದ್ಧ ಜೆಡಿಎಸ್ ಆಕ್ರೋಶ ಹೊರಹಾಕಿದೆ.

    ಭೋವಿ ನಿಗಮದ ಅಕ್ರಮದ ಬಗ್ಗೆ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಜೆಡಿಎಸ್ (JDS), ಕೂಡಲೇ ಭೋವಿ ನಿಗಮದ ಅಧ್ಯಕ್ಷನ ವಿರುದ್ಧ ತನಿಖೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ. ಇದನ್ನೂ ಓದಿ: 232 ಕೋಟಿ ವಂಚನೆ ಪ್ರಕರಣ – ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದ ಮ್ಯಾನೇಜರ್‌ ಅರೆಸ್ಟ್‌

    ಎಕ್ಸ್ನಲ್ಲಿ ಏನಿದೆ?
    60% ಕಾಂಗ್ರೆಸ್ ಸರ್ಕಾರದ ಕಮಿಷನ್ ದಂಧೆ ಮತ್ತೊಮ್ಮೆ ಸಾಬೀತಾಗಿದೆ. ಭೋವಿ ನಿಗಮದಲ್ಲಿ ಭೂ ಒಡೆತನ ಯೋಜನೆಯಡಿ ಭೂಮಿ ಮಂಜೂರಾದವರಿಗೆ 25 ಲಕ್ಷ ರೂ. ಸಹಾಯಧನ ಬಿಡುಗಡೆ ಮಾಡಲು ಭೋವಿ ನಿಗಮದ ಅಧ್ಯಕ್ಷ ರವಿಕುಮಾರ್ 5 ಲಕ್ಷ ರೂ. ಕಮಿಷನ್ ಪಡೆಯುತ್ತಿದ್ದಾನೆ. ಇದನ್ನೂ ಓದಿ: ಬೆಂಗಳೂರು ಟು ಬಳ್ಳಾರಿ ಜೈಲು – ದರ್ಶನ್ ಭವಿಷ್ಯ ಇಂದು ಕೋರ್ಟ್‌ನಲ್ಲಿ ನಿರ್ಧಾರ

    ರಾಜ್ಯ ಸರ್ಕಾರ ಕೂಡಲೇ ಭ್ರಷ್ಟ ಅಧ್ಯಕ್ಷನನ್ನು ವಜಾ ಮಾಡಿ, ಆತನ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿ ತನಿಖೆಗೆ ಆದೇಶಿಸಬೇಕು ಎಂದು ಜೆಡಿಎಸ್ ಪಕ್ಷವು ಆಗ್ರಹಿಸುತ್ತದೆ.

    ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಕೋಟ್ಯಂತರ ರೂ. ಹಗರಣ ನಡೆಸಿದ್ದ ಭ್ರಷ್ಟ ಸರ್ಕಾರ, ಬಳಿಕ ಎಸ್‌ಸಿಎಸ್‌ಪಿ/ಟಿಎಸ್‌ಪಿ ನಿಧಿಯಲ್ಲಿನ ಸಾವಿರಾರು ಕೋಟಿ ರೂ. ಹಣವನ್ನು ದುರ್ಬಳಕೆ ಮಾಡಿಕೊಂಡು ಪರಿಶಿಷ್ಟರಿಗೆ ದ್ರೋಹ ಬಗೆದಿದ್ದ ಕಾಂಗ್ರೆಸ್, ಮತ್ತೊಮ್ಮೆ ದಲಿತರ ಬೆನ್ನಿಗೆ ಚೂರಿ ಹಾಕಿದೆ. ದಲಿತ ವಿರೋಧಿ ಸಿದ್ದರಾಮಯ್ಯ (Siddaramaiah) ಸರ್ಕಾರದ ದುರಾಡಳಿತ ಮಿತಿಮೀರಿದೆ ಎಂದು ಜೆಡಿಎಸ್ ಕಿಡಿಕಾರಿದೆ.

  • ಧರ್ಮಸ್ಥಳ ವಿರುದ್ಧ ಅಪಪ್ರಚಾರ ಖಂಡಿಸಿ ಜೆಡಿಎಸ್ ಸತ್ಯ ಯಾತ್ರೆ

    ಧರ್ಮಸ್ಥಳ ವಿರುದ್ಧ ಅಪಪ್ರಚಾರ ಖಂಡಿಸಿ ಜೆಡಿಎಸ್ ಸತ್ಯ ಯಾತ್ರೆ

    – ಹಾಸನದಿಂದ ಧರ್ಮಸ್ಥಳಕ್ಕೆ ನಿಖಿಲ್ ಕುಮಾರಸ್ವಾಮಿ ನೇತೃತ್ವದಲ್ಲಿ ಯಾತ್ರೆ

    ಹಾಸನ: ಧರ್ಮಸ್ಥಳ ವಿರುದ್ಧ ಅಪಪ್ರಚಾರ ನಡೆಸಲಾಗುತ್ತಿದೆ ಎಂದು ಖಂಡಿಸಿ ನಿಖಿಲ್ ಕುಮಾರಸ್ವಾಮಿ (Nikhil Kumaraswamy) ನೇತೃತ್ವದಲ್ಲಿ ಜೆಡಿಎಸ್ ಕಾರ್ಯಕರ್ತರು ಸತ್ಯ ಯಾತ್ರೆ ಹೊರಟಿದ್ದಾರೆ. ಧರ್ಮಸ್ಥಳ ಚಲೋ ಬೃಹತ್ ರ‍್ಯಾಲಿಗೆ ಭಾನುವಾರ ಚಾಲನೆ ಸಿಕ್ಕಿದೆ.

    ಹಾಸನದಿಂದ (Hassan) ಧರ್ಮಸ್ಥಳಕ್ಕೆ (Dharmasthala Satya Yatra) ಜೆಡಿಎಸ್ ಸತ್ಯ ಯಾತ್ರೆ ಕೈಗೊಂಡಿದೆ. ರಾಜ್ಯದ ವಿವಿಧೆಡೆಗಳಿಂದ ಸಾವಿರಾರು ಜೆಡಿಎಸ್ ಕಾರ್ಯಕರ್ತರು ಆಗಮಿಸಿದ್ದಾರೆ. ರ‍್ಯಾಲಿಯಲ್ಲಿ ಜೆಡಿಎಸ್ ಶಾಸಕರು, ಮಾಜಿ ಶಾಸಕರು, ಎಂಎಲ್‌ಸಿಗಳು ಭಾಗಿಯಾಗಿದ್ದಾರೆ. ಕಾರುಗಳು, ಟಿಟಿ ವಾಹನ, ಬಸ್‌ಗಳಲ್ಲಿ ಕಾರ್ಯಕರ್ತರು ರ‍್ಯಾಲಿ ಹೊರಟಿದ್ದಾರೆ. ಹಾಸನ ಹೊರವಲಯದ ಕಂದಲಿ ಬಳಿಯಿಂದ ಧರ್ಮಸ್ಥಳ ಸತ್ಯ ಯಾತ್ರೆ ಹೊರಟಿದೆ. ಇದನ್ನೂ ಓದಿ: ಬುರುಡೆ ಗ್ಯಾಂಗ್‌ನ ಷಡ್ಯಂತ್ರ ರೂಪುಗೊಂಡಿದ್ದೇ ಬೆಂಗಳೂರಿನ ಲಾಡ್ಜ್‌ನಲ್ಲಿ!

    ಯಾತ್ರೆಗೆ ಚಾಲನೆ ನೀಡಿ ಮಾತನಾಡಿದ ನಿಖಿಲ್ ಕುಮಾರಸ್ವಾಮಿ, ಇಂದು ಧರ್ಮಸ್ಥಳಕ್ಕೆ ಸತ್ಯ ಯಾತ್ರೆ ಹೊರಟಿದ್ದೇವೆ. ಮಂಜುನಾಥಸ್ವಾಮಿ, ಅಣ್ಣಪ್ಪ ಸ್ವಾಮಿ ದರ್ಶನ ಪಡೆದು ನೈತಿಕ ಬೆಂಬಲ ಪೋಷಿಸುತ್ತೇವೆ. ಕಳೆದ ಹಲವಾರು ದಿನಗಳಿಂದ ಅಪಪ್ರಚಾರಗಳು, ಧರ್ಮಸ್ಥಳದ ಆವರಣದ ಸುತ್ತಮುತ್ತ ಅನುಮಾನ ಎಡೆಮಾಡಿಕೊಡುವಂತಹ ಷಡ್ಯಂತ್ರ, ಹುನ್ನಾರ, ಸಂಘಟಿತ ಪಿತೂರಿ ನಡೆದಿದೆ. ಇದೆಲ್ಲದರ ವಿರುದ್ಧವಾಗಿ ಯಾತ್ರೆ. ಇದರಲ್ಲಿ ರಾಜಕೀಯವಾಗಿ ಬೆರೆಸುವ ಪ್ರಶ್ನೆ ಇಲ್ಲ. ಪಕ್ಷಾತೀತವಾಗಿ ಇವತ್ತು, ಅಸಂಖ್ಯಾತ ಭಕ್ತರ ಗಣ ದೇಶವ್ಯಾಪಿ, ಹಲವಾರು ಕಡೆಗಳಿಂದ ಆರಾಧ್ಯ ದೈವ ಮಂಜುನಾಥಸ್ವಾಮಿ, ಅಣ್ಣಪ್ಪಸ್ವಾಮಿ ಕಾಣಲು ಬರುತ್ತಿದ್ದಾರೆ ಎಂದು ತಿಳಿಸಿದರು.

    ನಾನು ಬಾಲ್ಯದಿಂದಲೂ ಮಂಜುನಾಥಸ್ವಾಮಿ ಪರಮಭಕ್ತ. ಪ್ರತಿ ವರ್ಷ ನಾನು ಚಾಚುತಪ್ಪದೇ ಧರ್ಮಸ್ಥಳಕ್ಕೆ ಬರುತ್ತೇನೆ, ದೇವರ ದರ್ಶನ ಪಡೆಯುತ್ತೇನೆ. ಕಳೆದ ಹಲವಾರು ದಿನಗಳಿಂದ ಧರ್ಮಸ್ಥಳದ ವಿರುದ್ಧ ವ್ಯವಸ್ಥಿತವಾದ ಸಂಚು, ಷಡ್ಯಂತ್ರ ನಡೆಯುತ್ತಿದೆ. ದೊಡ್ಡ ಸ್ಥಾನದಲ್ಲಿರುವ ಜನಪ್ರತಿನಿಧಿಗಳು ಈ ಬಗ್ಗೆ ಮಾತನಾಡಿದ್ದಾರೆ. ಆರೋಪದ ಬಗ್ಗೆ ಅನುಮಾನ, ಶಂಕೆಗಳು ವ್ಯಕ್ತವಾಗಿವೆ. ಇದುವರೆಗೂ ಎಳ್ಳಷ್ಟು ಸತ್ಯಾಸತ್ಯತೆ ಹೊರಗೆ ಬಂದಿಲ್ಲ. ಧರ್ಮಸ್ಥಳದ ವಿರುದ್ಧ ಸಮಾಜಘಾತುಕ ಶಕ್ತಿಗಳು ಹುನ್ನಾರ ಮಾಡುತ್ತಿವೆ. ಇದೆಲ್ಲದರ ಬಗ್ಗೆ ಸಮಾಜದ ಮುಂದೆ ತನಿಖೆ ಮೂಲಕ ಸತ್ಯಾಂಶ ಹೊರಗೆ ತರಬೇಕಿದೆ. ನಮ್ಮಲ್ಲೆರ ಮೇಲೆ ಕೆಲವು ಜವಾಬ್ದಾರಿ ಇದೆ. ನಮ್ಮ ಧರ್ಮವನ್ನು ರಕ್ಷಣೆ ಮಾಡಬೇಕು ಅದು ಎಲ್ಲರ ಜವಾಬ್ದಾರಿ. ಮಂಜುನಾಥಸ್ವಾಮಿ ವಿಚಾರದಲ್ಲಿ ರಾಜಕಾರಣ ಬೆರೆಸಬಾರದು. ಬಹಳಷ್ಟು ಭಕ್ತಾಧಿಗಳು ಯಾತ್ರೆಯಲ್ಲಿ ಸ್ವಇಚ್ಛೆಯಿಂದ ಬರುತ್ತೇವೆ ಎಂದು ಹಳ್ಳಿಹಳ್ಳಿಗಳಿಂದ ಬಂದಿದ್ದಾರೆ. ಸತ್ಯದ ಪರವಾಗಿ ನಿಲ್ಲುತ್ತೇವೆ, ಧರ್ಮವನ್ನು ರಕ್ಷಣೆ ಮಾಡುತ್ತೇವೆ ಎಂದು ಪ್ರತಿಜ್ಞೆ ಮಾಡಿದರು. ಇದನ್ನೂ ಓದಿ: ಡಿಕೆಶಿ ಮನಸ್ಸಿನ ಇಚ್ಛೆ ಫಲಿಸಲಿ – ಕೃಷ್ಣ ಮಠದಲ್ಲಿ ಪುತ್ತಿಗೆ ಶ್ರೀ ಆಶೀರ್ವಾದ

    ಧರ್ಮಾಧಿಕಾರಿಗಳು ಇಂದು ಇಡೀ ದಿನ ನಮಗೆ ಸಮಯ ನಿಗದಿ ಮಾಡಿದ್ದಾರೆ. ಇಂದು ದೊಡ್ಡ ಸಂಖ್ಯೆಯಲ್ಲಿ ಜನ ಬರ್ತಿದ್ದಾರೆ. ಈ ಪ್ರಕರಣದಿಂದ ಎಷ್ಟೇ ಬೇಜಾರಾದರೂ ಅತ್ಯಂತ, ತಾಳ್ಮೆಯಿಂದ ಹೃದಯ ವೈಶಾಲ್ಯತೆಯಿಂದ ವರ್ತನೆ ಮಾಡಿದ್ದಾರೆ. ಇಂದು ಧರ್ಮಾಧಿಕಾರಿಗೆ ನೈತಿಕ ಬೆಂಬಲ ಸೂಚಿಸುತ್ತೇವೆ. ಸಮಾಜಘಾತುಕ ಶಕ್ತಿಗಳು ಈ ಎಪಿಸೋಡ್‌ಗೆ ಕೈ ಹಾಕಿದ್ದಾರೆ. ಇದು ತಾರ್ತಿಕ ಅಂತ್ಯಕ್ಕೆ ತಲುಪಬೇಕು. ಈ ಪ್ರಕರಣವನ್ನು ಎನ್‌ಐಎ ತನಿಖೆಗೆ ವಹಿಸಬೇಕು. ಯೂಟ್ಯೂಬರ್‌ಗಳಿಗೆ ಉತ್ತೇಜನ ಕೊಡುತ್ತಿದ್ದಾರೆ. ಇದರ ಹಿಂದೆ ದೊಡ್ಡಮಟ್ಟದ ಆರ್ಗನೈಸೇಷನ್ ಇದೆ. ಇದಕ್ಕೆ ಇಂಟರ್‌ನ್ಯಾಷನಲ್ ಫೈನಾನ್ಸ್ ಆಗಿದೆ. ಆದ್ದರಿಂದ ಎನ್‌ಎಐ ತನಿಖೆ ಕೈಗೆತ್ತಿಕೊಳ್ಳಬೇಕು ಎಂದು ಒತ್ತಾಯಿಸಿದರು.

    ಹಾಸನ ಹೊರವಲಯದ ಕಂದಲಿ ಬಳಿಯಿಂದ ಧರ್ಮಸ್ಥಳಕ್ಕೆ ಸತ್ಯ ಯಾತ್ರೆ ಹೊರಟಿದೆ. ಸಾರಿಗೆ ಬಸ್‌ನಲ್ಲಿ ಶಾಸಕರ ಜೊತೆ ನಿಖಿಲ್ ಕುಮಾರಸ್ವಾಮಿ ಯಾತ್ರೆ ಹೊರಟಿದ್ದಾರೆ. ಶಾಸಕರಾದ ಎ.ಮಂಜು, ಹೆಚ್.ಪಿ.ಸ್ವರೂಪ್‌ಪ್ರಕಾಶ್, ಹರೀಶ್‌ಗೌಡ, ಸಿ.ಎನ್.ಬಾಲಕೃಷ್ಣ, ಕರೆಯಮ್ಮ, ಎಂ.ಟಿ.ಕೃಷ್ಣಪ್ಪ, ಸುರೇಶ್‌ಬಾಬು, ಮಾಜಿ ಶಾಸಕರು, ಎಂಎಲ್‌ಸಿಗಳು ಯಾತ್ರೆಯಲ್ಲಿ ಭಾಗಿಯಾಗಿದ್ದಾರೆ.

  • ಧರ್ಮಸ್ಥಳ ಕೇಸ್‌ನಲ್ಲಿ ಸರ್ಕಾರದ ನಡವಳಿಕೆಗೆ ಮಂಜುನಾಥ ಸ್ವಾಮಿಯೇ ಶಿಕ್ಷೆ ಕೊಡ್ತಾನೆ: ಹೆಚ್‌ಡಿಕೆ

    ಧರ್ಮಸ್ಥಳ ಕೇಸ್‌ನಲ್ಲಿ ಸರ್ಕಾರದ ನಡವಳಿಕೆಗೆ ಮಂಜುನಾಥ ಸ್ವಾಮಿಯೇ ಶಿಕ್ಷೆ ಕೊಡ್ತಾನೆ: ಹೆಚ್‌ಡಿಕೆ

    ಬೆಂಗಳೂರು: ಧರ್ಮಸ್ಥಳ ಕೇಸ್‌ನಲ್ಲಿ (Dharmasthala Case) ಸರ್ಕಾರದ ನಡವಳಿಕೆಗೆ ಮಂಜುನಾಥ ಸ್ವಾಮಿಯೇ (Manjunath Swamy) ಶಿಕ್ಷೆ ಕೊಡುತ್ತಾನೆ ಎಂದು ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ (HD Kumarswamy) ಭವಿಷ್ಯ ನುಡಿದಿದ್ದಾರೆ.

    ಜೆಪಿ ನಗರ ನಿವಾಸದಲ್ಲಿ ಧರ್ಮಸ್ಥಳ ಕೇಸ್ ವಿಚಾರವಾಗಿ ಮಾತನಾಡಿದ ಅವರು, ಧರ್ಮಸ್ಥಳ ಕೇಸ್‌ನಲ್ಲಿ ಈ ಸರ್ಕಾರ ನಡೆದುಕೊಂಡು ರೀತಿಗೆ ನಿಜಕ್ಕೂ ಶಿಕ್ಷೆಯಾಗಬೇಕು. ಮುಂದಿನ ದಿನಗಳಲ್ಲಿ ಈ ಸರ್ಕಾರಕ್ಕೆ ಮಂಜುನಾಥ ಸ್ವಾಮಿಯೇ ಶಿಕ್ಷೆ ಕೊಡುತ್ತಾನೆ ಅನ್ನೋದು ನನ್ನ ಅಭಿಪ್ರಾಯ. ಈ ಕೇಸ್‌ನಲ್ಲಿ ಸರ್ಕಾರದ ನಡೆವಳಿಕೆ ಸರಿಯಿಲ್ಲ. ಪ್ರಾರಂಭಿಕ ಹಂತದಲ್ಲಿ ಯಾವ ರೀತಿ ನಡೆದುಕೊಂಡಿದ್ದಾರೆ. ನಾನು ಧರ್ಮವನ್ನು ಬೆರೆಸಲು ಹೋಗಲ್ಲ. ಆದರೆ ಸರ್ಕಾರ ನಡೆದುಕೊಂಡ ರೀತಿ ಕ್ಷೇತ್ರಕ್ಕೆ ಅವಮಾನ, ಅನುಮಾನ ಆಗೋ ರೀತಿಯಲ್ಲಿ ಸರ್ಕಾರ ಎಸ್‌ಐಟಿ ತನಿಖೆ ನಾಟಕ ಆಡಿದೆ ಎಂದು ಕಿಡಿಕಾರಿದರು.ಇದನ್ನೂ ಓದಿ: ಸತ್ಯ ಹೇಳಿದರೆ ಕೆಲವರು ಸಹಿಸಲ್ಲ, ನಾನು ಮಾತನಾಡದಿರುವುದೇ ಉತ್ತಮ: ಡಿಕೆಶಿ

    ಈ ಕೇಸ್‌ಲ್ಲಿ ಪ್ರಾರಂಭಿಕ ಹಂತದಲ್ಲಿ ಸರ್ಕಾರಕ್ಕೆ ದೂರು ಕೊಟ್ಟಿದ್ದು ದ್ವಾರಕನಾಥ್. ಸಿಎಂಗೆ ಅವರೇ ದೂರು ಕೊಟ್ಟರು. ಆಗ ಸಿಎಂ ದೂರು ಬಂದ ತಕ್ಷಣ ಕ್ರಮ ತೆಗೆದುಕೊಳ್ಳುವ ವಾತಾವರಣ ನಿರ್ಮಾಣ ಮಾಡಿದರು. ಇದರಲ್ಲಿ ಎಡಪಂಥೀಯ ಶಕ್ತಿಗಳು ಇದೆ ಎಂದು ಹೇಳ್ತಾರೆ. ಯಾರಿದ್ದಾರೆ ಎಂದು ಮುಂದಿನ ದಿನಗಳಲ್ಲಿ ಎಲ್ಲವೂ ಗೊತ್ತಾಗುತ್ತದೆ ಎಂದು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.ಇದನ್ನೂ ಓದಿ: ಅನುಶ್ರೀ ಕಲ್ಯಾಣದಲ್ಲಿ ರಾರಾಜಿಸಿದ ಅಪ್ಪು ಫೋಟೋ

  • ಉಚ್ಛಾಟನೆಗೆ ಹೆದರಿ ಕ್ಷಮೆಯಾಚಿಸಿದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್: ಜೆಡಿಎಸ್ ಲೇವಡಿ

    ಉಚ್ಛಾಟನೆಗೆ ಹೆದರಿ ಕ್ಷಮೆಯಾಚಿಸಿದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್: ಜೆಡಿಎಸ್ ಲೇವಡಿ

    ಬೆಂಗಳೂರು: ಸದನದಲ್ಲಿ ಆರ್‌ಎಸ್‌ಎಸ್ (RSS) ಗೀತೆ ಹಾಡಿದ್ದಕ್ಕೆ ಕ್ಷಮೆ ಕೇಳಿದ ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ನಡೆಗೆ ಜೆಡಿಎಸ್ (JDS) ಲೇವಡಿ ಮಾಡಿದೆ.

    ಎಕ್ಸ್‌ನಲ್ಲಿ ಡಿಕೆಶಿವಕುಮಾರ್ ವಿರುದ್ದ ಲೇವಡಿ ಮಾಡಿರೋ ಜೆಡಿಎಸ್, ಉಚ್ಛಾಟನೆಗೆ ಹೆದರಿ ಕ್ಷಮೆಯಾಚಿಸಿದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅಂತ ಕಾಲೆಳೆದಿದೆ. ಇದನ್ನೂ ಓದಿ: ಹಬ್ಬಕ್ಕೆ ಬಟ್ಟೆ ಖರೀದಿಸುತ್ತಿದ್ದಾಗ ಕುಸಿದು ಬಿದ್ದು 17ರ ವಿದ್ಯಾರ್ಥಿ ಸಾವು

    ಜೆಡಿಎಸ್ ಎಕ್ಸ್‌ನಲ್ಲಿ ಏನಿದೆ?
    ಉಚ್ಛಾಟನೆಗೆ ಹೆದರಿ ಕ್ಷಮೆಯಾಚಿಸಿದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್. ಸದನದಲ್ಲಿ ಹುಲಿ, ಹೈಕಮಾಂಡ್ ಮುಂದೆ ಇಲಿ.ವಿಧಾನಸಭೆಯಲ್ಲಿ ಆರ್‌ಎಸ್‌ಎಸ್ ಗೀತೆ ಹಾಡಿ ಇಟಲಿ ಕಾಂಗ್ರೆಸ್ ನಾಯಕರ ಕೆಂಗಣ್ಣಿಗೆ ಗುರಿಯಾಗಿದ್ದ ರಣಹೇಡಿ ಡಿಕೆಶಿ ಅಧಿಕಾರ ಉಳಿಸಿಕೊಳ್ಳಲು, ಉಚ್ಛಾಟನೆಯಿಂದ ಪಾರಾಗಲು ಮಂಡಿಯೂರಿ ಕ್ಷಮೆಯಾಚಿಸಿದ್ದಾರೆ. ಇದನ್ನೂ ಓದಿ: ಮಾರುತಿ ಸುಜುಕಿಯ ಮೊದಲ ಇವಿ ವಾಹನ ಇ-ವಿಟಾರ ರಫ್ತಿಗೆ ಪ್ರಧಾನಿ ಮೋದಿ ಚಾಲನೆ

    ನಾಯಕ ಸಮುದಾಯದ ಸಚಿವರನ್ನು ಏಕಾಏಕಿ ಮಂತ್ರಿಸ್ಥಾನದಿಂದ ವಜಾಗೊಳಿಸಲಾಗಿತ್ತು. ಅವರಿಗೆ ಕ್ಷಮೆಕೇಳುವ ಒಂದು ಅವಕಾಶವನ್ನು ಸಹ ಹೈಕಮಾಂಡ್ ನೀಡಿರಲಿಲ್ಲ. ಕಾಂಗ್ರೆಸ್ (Congress) ಹೈಕಮಾಂಡ್‌ನಲ್ಲಿ ದಲಿತರಿಗೊಂದು ನ್ಯಾಯ, ಬಲಾಢ್ಯರಿಗೊಂದು ನ್ಯಾಯ ಎಂದು ಟೀಕಿಸಿದೆ. ಇದನ್ನೂ ಓದಿ: ಒಂದೇ ಸೀಟ್‌ಗಾಗಿ ಮಹಿಳೆಯರಿಬ್ಬರ ಫೈಟ್ – ಜುಟ್ಟು ಹಿಡಿದು ಜಗಳವಾಡಿದ ವಿಡಿಯೋ ವೈರಲ್

  • ಶ್ರೇಯಸ್ ಪಟೀಲ್ ವಿರುದ್ಧ ಆಸ್ತಿ ವಿವರ ಮುಚ್ಚಿಟ್ಟ ಆರೋಪ – ವಿಚಾರಣೆ ಕೈಗೆತ್ತಿಕೊಂಡ ಸುಪ್ರೀಂ

    ಶ್ರೇಯಸ್ ಪಟೀಲ್ ವಿರುದ್ಧ ಆಸ್ತಿ ವಿವರ ಮುಚ್ಚಿಟ್ಟ ಆರೋಪ – ವಿಚಾರಣೆ ಕೈಗೆತ್ತಿಕೊಂಡ ಸುಪ್ರೀಂ

    – ಎಂಥೆಂಥವರೋ ಏನೇನೊ ಆದ್ರೂ, ನಡೆ ಬದಲಿಸಿಕೊಳ್ಳಿ – ಸಂಸದರ ವಿರುದ್ಧ ವಕೀಲ ಗರಂ

    ಹಾಸನ: ಸಂಸದ ಶ್ರೇಯಸ್ ಪಟೇಲ್ (MP Shreyas Patel) ವಿರುದ್ಧದ ಆಸ್ತಿ ವಿವರ ಮುಚ್ಚಿಟ್ಟ ಆರೋಪದ ಮೇಲ್ಮನವಿ ಅರ್ಜಿಯನ್ನು ಸುಪ್ರೀಂ ಕೋರ್ಟ್ (Supreme Court) ವಿಚಾರಣೆಗೆ ಕೈಗೆತ್ತಿಕೊಂಡಿದೆ.

    ಈ ಸಂಬಂಧ ವಕೀಲ ಪೂರ್ಣಚಂದ್ರ ತೇಜಸ್ವಿ, ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಡಿಸಿ ಕಛೇರಿಯ ಕಟ್ಟಡದಲ್ಲಿರುವ ಸಂಸದರ ಕಛೇರಿಗೆ ನೋಟಿಸ್ ಅಂಟಿಸಿದ್ದಾರೆ. ಅಕ್ಟೋಬರ್ 6 ರಂದು ವಿಚಾರಣೆಗೆ ಹಾಜರಾಗಲು ನೋಟಿಸ್‍ನಲ್ಲಿ ಸೂಚಿಸಲಾಗಿದೆ. ಇದನ್ನೂ ಓದಿ: ಬೀದಿ ನಾಯಿಗಳನ್ನ ಹಿಡಿಯಿರಿ, ಸಂತಾನಹರಣ ಶಸ್ತ್ರಚಿಕಿತ್ಸೆ ಬಳಿಕ ಬಿಟ್ಟುಬಿಡಿ: ಸುಪ್ರೀಂ ತೀರ್ಪಿನಲ್ಲಿ ಮಹತ್ವದ ತಿದ್ದುಪಡಿ

    ಲೋಕಸಭಾ ಚುನಾವಣೆ (Lok Sabha Election) ವೇಳೆ ತಮ್ಮ ತಾತ ಮಾಜಿ ಸಂಸದ ಜಿ.ಪುಟ್ಟಸ್ವಾಮಿಗೌಡರ ಹೆಸರಿನಲ್ಲಿ ಬೆಂಗಳೂರಿನಲ್ಲಿರುವ ಕೋಟ್ಯಂತರ ರೂ. ಬೆಲೆ ಬಾಳುವ ಆಸ್ತಿ ವಿವರ ಮುಚ್ಚಿಟ್ಟ ಆರೋಪ ಸಂಸದರ ಮೇಲಿದೆ. ಇನ್ನೂ ಚುನಾವಣೆಗೂ ಮುನ್ನ ತಾತನ ಆಸ್ತಿಗೆ ಸಂಸದರು ತೆರಿಗೆ ಕಟ್ಟಿದ್ದರು. ಈ ಹಿಂದೆ ಆಸ್ತಿ ವಿವರ ಮುಚ್ಚಿಟ್ಟ ಪ್ರಕರಣದಲ್ಲೇ ಸದಸ್ಯತ್ವದಿಂದ ಮಾಜಿ ಸಂಸದ ಪ್ರಜ್ವಲ್‍ರೇವಣ್ಣ ಅನರ್ಹಗೊಂಡಿದ್ದ. ಇದೇ ಆರೋಪದ ಕೇಸ್ ದಾಖಲಿಸಿ ಸದಸ್ಯತ್ವ ಅನರ್ಹಕ್ಕೆ ಜೆಡಿಎಸ್ (JDS) ಕೇಸ್ ದಾಖಲಿಸಿದೆ.

    ಹೈಕೋರ್ಟ್‍ನಲ್ಲಿ ದಾಖಲಾದ ದೂರು ವಜಾಗೊಂಡಿದ್ದ ಹಿನ್ನೆಲೆ, ಸುಪ್ರೀಂ ಕೋರ್ಟ್‍ಗೆ ಮೇಲ್ಮನವಿ ಸಲ್ಲಿಕೆ ಮಾಡಲಾಗಿದ್ದು, ದೂರು ಸ್ವೀಕಾರ ಮಾಡಿ, ಸುಪ್ರೀಂ ಕೋರ್ಟ್ ಅರ್ಜಿಯ ವಿಚಾರಣೆಗೆ ಕೈಗೆತ್ತಿಕೊಂಡಿದೆ. ಈ ಬಗ್ಗೆ ಸಂಸದರಿಗೆ ನೋಟಿಸ್‍ನ್ನು ಖುದ್ದಾಗಿ ನಿಡುವುದಾಗಿಯೂ ವಕೀಲರು ತಿಳಿಸಿದ್ದಾರೆ.

    ನೋಟಿಸ್ ಅಂಟಿಸಲು ಬಂದಾಗ ವಕೀಲರತ್ತ ತಿರುಗಿ ನೋಡದೆ ಶ್ರೇಯಸ್ ಪಟೇಲ್ ತೆರಳಿದ್ದಾರೆ. ಈ ವೇಳೆ ಗರಂ ಆದ ವಕೀಲರು, ಕೋರ್ಟ್ ಸೂಚನೆಯಂತೆ ನಾನು ಬಂದಿದ್ದೇನೆ. ಯುವ ಸಂಸದರಾಗಿ ಕಾನೂನಿಗೆ ಗೌರವ ಕೊಡಬೇಕಿತ್ತು. ಇವರ ನಡೆ ಹೀಗಿರುತ್ತೆ ಎಂದು ನಿರೀಕ್ಷೆ ಮಾಡಿರಲಿಲ್ಲ. ಸಂಸದರು ತಮ್ಮ ನಡೆ ಬದಲಾಯಿಸಿಕೊಳ್ಳಬೇಕು. ಸಂಸದರು ವಕೀಲ ಸಮುದಾಯಕ್ಕೆ ಅವಮಾನ ಮಾಡಿದ್ದಾರೆ. ನೋಟಿಸ್ ಸ್ವೀಕಾರ ಮಾಡದೆ ಹೋದರೆ ಬೇಡ ಎನ್ನಬೇಕಿತ್ತು ಎಂದು ಕಿಡಿಕಾರಿದ್ದಾರೆ.

    ಇದನ್ನೇ ನಾನು ಕೋರ್ಟ್‍ಗೆ ಹೇಳುತ್ತೇನೆ. ಹಾಗಿದ್ದರೆ ಅವರು ಕೋರ್ಟ್‍ಗೆ ಹಾಜರಾಗುವುದಿಲ್ಲವೇ? ಸುಪ್ರೀಂ ಕೋರ್ಟ್‍ನಲ್ಲಿ ವಾದ ಮಾಡಲು ವಕೀಲರ ನೇಮಕ ಮಾಡಿಕೊಳ್ಳುವುದಿಲ್ಲವೇ? ಅಧಿಕಾರ ಯಾರಿಗೂ ಶಾಶ್ವತ ಅಲ್ಲ. ಎಂಥೆಂಥವರೋ ಏನೇನೊ ಆಗಿದ್ದಾರೆ. ನಿಮ್ಮ ನಡೆ ಬದಲಾಯಿಸಿಕೊಳ್ಳಿ ಎಂದು ಸಂಸದರ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. ಇದನ್ನೂ ಓದಿ: ಮಂಗಳೂರು | ಕುಡುಪುವಿನಲ್ಲಿ ಅಶ್ರಫ್ ಕೊಲೆ ಪ್ರಕರಣ – 10 ಆರೋಪಿಗಳ ಜಾಮೀನು ಅರ್ಜಿ ವಜಾ