Tag: jds

  • ಇದು ಬಯಸದೇ ಬಂದ ಉಪಚುನಾವಣೆ, ಕೊನೆಗಳಿಗೆಯ ತೀರ್ಮಾನಕ್ಕೆ ತಲೆ ಬಾಗುತ್ತೇನೆ – ನಿಖಿಲ್ ಕುಮಾರಸ್ವಾಮಿ

    ಇದು ಬಯಸದೇ ಬಂದ ಉಪಚುನಾವಣೆ, ಕೊನೆಗಳಿಗೆಯ ತೀರ್ಮಾನಕ್ಕೆ ತಲೆ ಬಾಗುತ್ತೇನೆ – ನಿಖಿಲ್ ಕುಮಾರಸ್ವಾಮಿ

    ರಾಮನಗರ: ಇದು ಬಯಸದೇ ಬಂದ ಉಪಚುನಾವಣೆ, ಕೊನೆಗಳಿಗೆಯ ತೀರ್ಮಾನಕ್ಕೆ ನಾನು ತಲೆ ಬಾಗುತ್ತೇನೆ ಎಂದು ಎನ್‌ಡಿಎ ಅಭ್ಯರ್ಥಿ ಹಾಗೂ ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ (Nikhil Kumaraswamy) ಹೇಳಿದರು.

    ಚುನಾವಣೆ ಫಲಿತಾಂಶದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇದು ಬಯಸದೇ ಬಂದ ಉಪಚುನಾವಣೆ, ಕೊನೆಗಳಿಗೆಯ ತೀರ್ಮಾನಕ್ಕೆ ನಾನು ತಲೆಬಾಗುತ್ತೇನೆ. ಚುನಾವಣಾ ಸಂದರ್ಭದಲ್ಲಿ ನಾನು ಕೆಲವು ಮಾತು ಕೊಟ್ಟಿದ್ದೆ ಆ ಮಾತನ್ನ ಚುನಾವಣೆಯ ಸೋಲು-ಗೆಲುವು ನಿರ್ಧಾರ ಮಾಡಲ್ಲ. ನಿಮ್ಮ ಋಣ ತೀರಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಮಾತಿನಿಂದ ಹಿಂದೆ ಸರಿಯಲ್ಲ. ನಾನು ಈ ಜಿಲ್ಲೆಯ ಮಗ ಎಂದು ಭಾವಿಸುತ್ತೇನೆ. ನಾನು ಇಲ್ಲಿ ಹುಟ್ಟದೆ ಇರಬಹುದು ಆದರೆ ಭಾವನಾತ್ಮಕವಾಗಿ ಸಂಬಂಧ ಇದೆ ಎಂದು ಹೇಳಿದರು.ಇದನ್ನೂ ಓದಿ: ಪತಿಯೊಂದಿಗೆ ಯುಕೆಯಲ್ಲಿ ವಾಸಿಸುತ್ತಿದ್ದ ಭಾರತದ ಮಹಿಳೆ ಕಾರಿನಲ್ಲಿ ಶವವಾಗಿ ಪತ್ತೆ


    ರಾಜ್ಯದಲ್ಲಿ 3 ಕ್ಷೇತ್ರದ ಉಪಚುನಾವಣೆಗಳಲ್ಲಿ (ByElection) ಚನ್ನಪಟ್ಟಣ (Channapatna) ಬಹುನಿರೀಕ್ಷೆಯ ಚುನಾವಣೆ ಆಗಿತ್ತು. ಉಪಚುನಾವಣೆಯಲ್ಲಿ ಕೊನೆಹಂತದ ತೀರ್ಮಾನಕ್ಕೆ ಪಕ್ಷದ ಶಿಸ್ತಿನ ಸಿಪಾಯಿ ಆಗಿ ನಾನು ಎನ್‌ಡಿಎ ಅಭ್ಯರ್ಥಿ ಆಗಿ ಸ್ಪರ್ಧೆ ಮಾಡಿದೆ. ಚುನಾವಣೆಯ ಫಲಿತಾಂಶ ಎಲ್ಲರಿಗೂ ಆಘಾತ ತಂದುಕೊಟ್ಟಿದೆ. ಕೊನೆಯ ಹಂತದ ಬೆಳವಣಿಗೆಯಲ್ಲಿ ಕಳೆದ 18 ದಿನದಲ್ಲಿ ಪ್ರತಿ ಹಳ್ಳಿಯಲ್ಲೂ ಎಲ್ಲರೂ ನನಗೆ ಪ್ರೀತಿ, ವಾತ್ಸಲ್ಯ ತೋರಿದ್ದಾರೆ. ಸುಮಾರು 87 ಸಾವಿರ ಮತ ಬಂದಿದೆ. ಪ್ರಜಾಪ್ರಭುತ್ವದಲ್ಲಿ ತೀರ್ಮಾನ, ತೀರ್ಪು ತೆಗೆದುಕೊಳ್ಳುವ ಹಕ್ಕು ಇರುವುದು ಜನರಿಗೆ, ಮತದಾರರಿಗೆ ಎಲ್ಲರಿಗೂ ಧನ್ಯವಾದ ತಿಳಿಸುತ್ತೇನೆ ಎಂದು ತಿಳಿಸಿದರು.

    ಎಲ್ಲರೂ ಬಹಳ ಪ್ರಾಮಾಣಿಕವಾಗಿ ದುಡಿದಿದ್ದಾರೆ. ಆದರೆ ಚುನಾವಣೆ ಸೋಲಿಗೆ ಕೆಲವು ಕಾರಣ ಇರುತ್ತದೆ. ಒಂದು ಸಮುದಾಯದ ಮತ ಒಂದು ಕಡೆ ಕ್ರೋಢಿಕರಿಸಿದ್ದು ಕಾರಣ ಆಗಿರಬಹುದು. ನಮ್ಮ ಪಕ್ಷ ಸಾಕಷ್ಟು ಬಾರಿ ಆ ಸಮುದಾಯದ ಜೊತೆ ನಿಂತಿದ್ದೇವೆ. ಆದರೂ ಆ ಸಮುದಾಯ ನಮ್ಮ ಜೊತೆ ನಿಂತಿಲ್ಲ. ಎದೆಗುಂದಲ್ಲ ಹೋರಾಟದ ಹಿನ್ನೆಲೆಯಲ್ಲಿ ಈ ಪಕ್ಷ ಕಟ್ಟಿದ್ದೇವೆ. ವಯಸ್ಸು ಚಿಕ್ಕದಿದೆ ಎಲ್ಲವನ್ನೂ ಸಮಚಿತ್ತದಿಂದ ತಗೆದುಕೊಂಡಿದ್ದೇನೆ. ರಾಜ್ಯದ ನಿಷ್ಠಾವಂತ ಕಾರ್ಯಕರ್ತರೆಲ್ಲರಿಗೂ ಧ್ವನಿಯಾಗಿ ಇರುತ್ತೇನೆ ಎಂದರು.

    ನಾನು ಮೂರು ಬಾರಿ ಸೋತಿದ್ದೇನೆ ಒಪ್ಪಿಕೊಳ್ಳುತ್ತೇನೆ. ನಾನು ಗೆಲುವನ್ನು ನೋಡಿಲ್ಲ. ಇತಿಹಾಸ ನೋಡಿದರೆ ಅಬ್ರಾಹಂ ಲಿಂಕನ್, ಅಂಬೇಡ್ಕರ್, ವಾಜಪೇಯಿ ಸೋತಿದ್ದು ಹೇಳುತ್ತಾರೆ. ಈ ಪರಿಸ್ಥಿತಿಯಲ್ಲಿ ಕಾರ್ಯಕರ್ತರಿಗೆ ಕೊಟ್ಟು ಅವರು ಸೋತಿದ್ದರೆ ಕುಟುಂಬ, ರಾಜಕಾರಣ, ಸ್ವಾರ್ಥ ಎಂಬ ಆರೋಪ ಬರುತ್ತಿತ್ತು. ಇವಾಗ ಈ ಹೊಣೆ ನಾನೇ ಹೊರುತ್ತೇನೆ ನೆಮ್ಮದಿಯಿಂದ ಮಲಗುತ್ತೇನೆ. ಈ ಒಂದು ಸೋಲಿನಿಂದ ಜಿಲ್ಲೆಯಲ್ಲಿ ಜೆಡಿಎಸ್ ಮುಕ್ತ ಅಂದುಕೊಳ್ಳಲು ಸಾಧ್ಯವಿಲ್ಲ. ಕಾಂಗ್ರೆಸ್‌ನವರು ಲೋಕಸಭೆಯಲ್ಲಿ ಸೋತರು ಅವರ ಬಲವಿಲ್ಲ ಎಂದು ಹೇಳಲು ಸಾಧ್ಯವಿಲ್ಲ. ಹಾಗೆಯೇ ಈ ಗೆಲವಿನಿಂದ ಅವರ ಬಲ ಮತ್ತೆ ಹೆಚ್ಚಿದೆ ಎನ್ನಲು ಸಾಧ್ಯವಿಲ್ಲ. ಡಿ.ಕೆ.ಶಿವಕುಮಾರ್ ಅವರ ಹೇಳಿಕೆಗೆ ಸಂತೋಷವಾಗಿದೆ ಎಂದು ತಿಳಿಸಿದರು.ಇದನ್ನೂ ಓದಿ: ಉಪಚುನಾವಣೆಯಲ್ಲಿ ಸೋತಿದ್ದೇವೆ, ಇವಿಎಂ ಹ್ಯಾಕ್ ಮಾಡಿದ್ದಾರೆ ಎನ್ನಲ್ಲ: ಜೋಶಿ

  • ಸಿಎಂಗೆ ಮುಹೂರ್ತ ಇಡ್ತಿದ್ರು, ಈಗ ಯಾರು ಬದಲಾಗ್ತಾರೆ ನೋಡೋಣ – ಬಿವೈವಿಗೆ ಮಧು ಬಂಗಾರಪ್ಪ ತಿರುಗೇಟು

    ಸಿಎಂಗೆ ಮುಹೂರ್ತ ಇಡ್ತಿದ್ರು, ಈಗ ಯಾರು ಬದಲಾಗ್ತಾರೆ ನೋಡೋಣ – ಬಿವೈವಿಗೆ ಮಧು ಬಂಗಾರಪ್ಪ ತಿರುಗೇಟು

    – ವಿಜಯೇಂದ್ರಗೆ ಬಸ್ಟ್ಯಾಂಡ್‍ನಲ್ಲಿ ಚೇರ್ ಹಾಕಿ ಕೊಡೋಣ

    ಶಿವಮೊಗ್ಗ: ವಿಜಯೇಂದ್ರ (B.Y Vijayendra) ಸಿಎಂ ಬದಲಾವಣೆಗೆ ಮುಹೂರ್ತ ಇಡುತ್ತಿದ್ದರು. ಈಗ ಯಾರ ಬದಲಾವಣೆ ಆಗುತ್ತೆ ನೋಡೋಣ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ (Madhu Bangarappa) ಬಿಜೆಪಿ (BJP) ರಾಜ್ಯಾಧ್ಯಕ್ಷರ ಬದಲಾವಣೆಯ ಬಗ್ಗೆ ಭವಿಷ್ಯ ನುಡಿದಿದ್ದಾರೆ.

    ಶಿವಮೊಗ್ಗದಲ್ಲಿ (Shivamogga) ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಈ ವೇಳೆ, ವಿಜಯೇಂದ್ರ ಅವರು ಹೊಸ ವರ್ಷಕ್ಕೆ ಹೊಸ ಸಿಎಂ ಎನ್ನುತ್ತಿದ್ದರು. ಸೊಕ್ಕಿನ ಮಾತುಗಳನ್ನು ಆಡುತ್ತಿದ್ದರು. ಯಾರು ಯಾರಿಗೆ ಮುಹೂರ್ತ ಇಡುತ್ತಾರೆ ನೋಡೋಣ. ನಾನು ಯತ್ನಾಳ್ ಅವರಿಗೆ ಅಭಿನಂದನೆ ಹೇಳ್ತಿನಿ ಎಂದು ಅವರು ವ್ಯಂಗ್ಯವಾಡಿದ್ದಾರೆ.

    ವಿಜಯೇಂದ್ರ ಅವರಿಗೆ ಭವಿಷ್ಯ ಹೇಳಿ ಅಭ್ಯಾಸ ಇದೆ. ಯಾವುದಾದರೂ ಬಸ್ಟ್ಯಾಂಡ್‍ನಲ್ಲಿ ಚೇರ್ ಹಾಕಿ ಕೊಡೋಣ, ಕುಳಿತುಕೊಂಡು ಭವಿಷ್ಯ ಹೇಳಲಿ. ಚುನಾವಣಾ ಪ್ರಚಾರದ ವೇಳೆ ಮುಡಾ ಹಗರಣ, ವಕ್ಫ್ ಹಗರಣ ಎಂದು ವಿಪಕ್ಷದವರು ಭಾಷಣ ಮಾಡಿದ್ದರು. ಅವರ ಭಾಷಣಕ್ಕೆ ಮತದಾರರು ಸೊಪ್ಪು ಹಾಕಲಿಲ್ಲ. ಬಿಜೆಪಿ ಹಾಗೂ ಜೆಡಿಎಸ್‌ನವರು ಸ್ವಾರ್ಥಕ್ಕೆ ಸ್ನೇಹ ಮಾಡುವವರು. ಅವರ ಸ್ವಾರ್ಥದ ಸ್ನೇಹ ಜನರಿಗೆ ಗೊತ್ತಾಗಿದೆ ಎಂದು ಕುಟುಕಿದ್ದಾರೆ.

    ರಾಜ್ಯದ ಜನರು ಕಾಂಗ್ರೆಸ್ ಸರ್ಕಾರದ ಮೇಲೆ ವಿಶ್ವಾಸ ಇಟ್ಟು ಉಪಚುನಾವಣೆಯಲ್ಲಿ ಗೆಲ್ಲಿಸಿದ್ದಾರೆ. ಈ ಮೂಲಕ ಕಾರ್ಯಕರ್ತರು ಇತಿಹಾಸ ಸೃಷ್ಟಿ ಮಾಡಿದ್ದಾರೆ. ವಿಪಕ್ಷವನ್ನು ಮತದಾರರು ಕೆಳಮಟ್ಟಕ್ಕೆ ಕೂರಿಸಿದ್ದಾರೆ. ಮತದಾರರು ಒಳ್ಳೆಯ ರೀತಿಯಲ್ಲಿ ಉತ್ತರ ಕೊಟ್ಟಿದ್ದಾರೆ. ಮುಖ್ಯಮಂತ್ರಿಗಳಿಗೆ ಶುಭಾಶಯ ಕೋರುತ್ತೇನೆ ಎಂದಿದ್ದಾರೆ.

    ಚನ್ನಪಟ್ಟಣ ಮತದಾರರು ಆಮಿಷಕ್ಕೆ ಒಳಗಾಗುವ ಮತದಾರರಲ್ಲ. ಯೋಗೇಶ್ವರ್ ಅವರು ಸ್ಥಳೀಯ ನಾಯಕರಾಗಿದ್ದು, ಗೆಲ್ಲುವ ವಿಶ್ವಾಸ ಇತ್ತು. ಸರ್ಕಾರ ನೂರಕ್ಕೆ ನೂರು ಜನರ ಜೊತೆ ಇದೆ ಎಂದಿದ್ದಾರೆ.

  • ಕರ್ನಾಟಕ ಉಪಚುನಾವಣೆ | ಮೈತ್ರಿ ಕೂಟಕ್ಕೆ ಮುನ್ನಡೆ, ಕಾಂಗ್ರೆಸ್‌ಗೆ  ಬಿಗ್ ಶಾಕ್!

    ಕರ್ನಾಟಕ ಉಪಚುನಾವಣೆ | ಮೈತ್ರಿ ಕೂಟಕ್ಕೆ ಮುನ್ನಡೆ, ಕಾಂಗ್ರೆಸ್‌ಗೆ ಬಿಗ್ ಶಾಕ್!

    – ಮೂರು ಕ್ಷೇತ್ರಗಳಲ್ಲಿ ನಮ್ಮದೇ ಗೆಲುವು ಎನ್ನುತ್ತಿದ್ದಾರೆ ಎನ್‌ಡಿಎ ನಾಯಕರು
    – ಸಮೀಕ್ಷೆಗಳು ಹಿಂದೆ ಸುಳ್ಳಾಗಿವೆ ಎಂದ ಕಾಂಗ್ರೆಸ್‌

    ಬೆಂಗಳೂರು: ರಾಜ್ಯದ ಮೂರು ಕ್ಷೇತ್ರಗಳನ್ನು ಗೆಲ್ಲುತ್ತೇವೆ ಎಂಬ ನಿರೀಕ್ಷೆಯಲ್ಲಿದ್ದ ಕಾಂಗ್ರೆಸ್‌ಗೆ (Congress) ಬಿಗ್‌ ಶಾಕ್‌ ಸಿಗುವ ಸಾಧ್ಯತೆಯಿದೆ.

    ಹೌದು, ವಿಧಾನಸಭಾ ಚುನಾವಣೆಯಲ್ಲಿ (Vidhan Sabha Election) 136 ಸ್ಥಾನಗಳನ್ನು ಗೆದ್ದ ಕಾಂಗ್ರೆಸ್‌ ಚನ್ನಪಟ್ಟಣ, ಶಿಗ್ಗಾವಿ, ಸಂಡೂರು ಕ್ಷೇತ್ರಗಳನ್ನು ಗೆಲ್ಲುತ್ತೇವೆ ಎಂಬ ನಿರೀಕ್ಷೆಯನ್ನು ಇಟ್ಟುಕೊಂಡಿದೆ. ಆದರೆ ಸಮೀಕ್ಷೆಯಲ್ಲಿ ಸಂಡೂರು ಮಾತ್ರ ಈ ಬಾರಿ ಕೈ ಹಿಡಿಯಲಿದೆ ಎಂದು ಭವಿಷ್ಯ ನುಡಿದಿವೆ.

    ಪಿ-ಮಾರ್ಕ್ ಸಮೀಕ್ಷೆ ಚನ್ನಪಟ್ಟಣದಲ್ಲಿ ಜೆಡಿಎಸ್‌, ಶಿಗ್ಗಾವಿಯಲ್ಲಿ ಬಿಜೆಪಿ, ಸಂಡೂರಿನಲ್ಲಿ ಕಾಂಗ್ರೆಸ್‌ ಗೆಲುವು ಸಾಧಿಸಲಿದೆ ಎಂದು ಹೇಳಿದೆ. ಉಪಚುನಾವಣೆಯ ಚುನಾವಣೋತ್ತರ ಸಮೀಕ್ಷೆಯ ಫಲಿತಾಂಶ ನೋಡಿ ಎನ್‌ಡಿಎ ಮೈತ್ರಿಕೂಟದಲ್ಲಿ ಸಂಭ್ರಮ ಮನೆ ಮಾಡಿದೆ. ಆದರೆ ಕಾಂಗ್ರೆಸ್‌ ಸಮೀಕ್ಷಾ ವರದಿಯನ್ನು ಒಪ್ಪಿಕೊಂಡಿಲ್ಲ. ಹಿಂದೆ ಹಲವಾರು ಸಮೀಕ್ಷೆಗಳು ಸುಳ್ಳಾಗಿವೆ. ಹೀಗಾಗಿ ಈ ಬಾರಿ ಮೂರಕ್ಕೆ ಮೂರು ಸ್ಥಾನ ಗೆಲ್ಲುತ್ತೇವೆ ಎಂದು ಕಾಂಗ್ರೆಸ್‌ ಹೇಳುತ್ತಿದೆ. ಇದನ್ನೂ ಓದಿ: PUBLiC TV Impact | ರದ್ದಾದ ಅರ್ಹ ಬಿಪಿಎಲ್ ಕಾರ್ಡ್ ವಾಪಸ್‌ಗೆ ಸಿಎಂ ಆದೇಶ

    ಎನ್‌ಡಿಎ ಪಾಳೆಯದಲ್ಲಿ ವಿಶ್ವಾಸ:
    ಶಿಗ್ಗಾಂವಿ (Shiggaon) ಗೆಲುವು ನಿಶ್ಚಿತ ಎನ್ನುವ ವಿಶ್ವಾಸದಲ್ಲಿ ಮೈತ್ರಿ ನಾಯಕರಿದ್ದಾರೆ. ಸಂಸದ ಬೊಮ್ಮಾಯಿ ಸ್ವಕ್ಷೇತ್ರದ ಮೇಲೆ ಹಿಡಿತ ಇಟ್ಟುಕೊಂಡಿದ್ದಾರೆ. ಕಾಂಗ್ರೆಸ್‌ನಲ್ಲಿ ನಾಯಕತ್ವದ ಕೊರತೆ ಬಿಜೆಪಿಗೆ ಪ್ಲಸ್ ಆಗಲಿದೆ ಎನ್ನುವ ಲೆಕ್ಕಾಚಾರವನ್ನು ಹಾಕಿಕೊಂಡಿದ್ದಾರೆ.  ಇದನ್ನೂ ಓದಿ: Maharashtra Exit Polls: ಮಹಾರಾಷ್ಟ್ರದಲ್ಲಿ ಎನ್‌ಡಿಎ ಮೈತ್ರಿಕೂಟಕ್ಕೆ ಮುನ್ನಡೆ

    ಸಂಡೂರಿನಲ್ಲೂ (Sanduru) ಈ ಬಾರಿ ಅಲ್ಲಿ ಜನ ಬದಲಾವಣೆ ಬಯಸಿದ್ದಾರೆ. ಕಾಂಗ್ರೆಸ್ ಆಂತರಿಕ ಕಚ್ಚಾಟ ನಮಗೆ ಪೂರಕ ಆಗಲಿದೆ. ಜನಾರ್ದನ ರೆಡ್ಡಿ ಕಮಾಲ್ ಮಾಡಲಿದ್ದಾರೆ ಎಂಬ ನಿರೀಕ್ಷೆಯಲ್ಲಿದ್ದಾರೆ. ಇದನ್ನೂ ಓದಿ: Jharkhand Exit Polls: ಜಾರ್ಖಂಡ್‌ನಲ್ಲಿ ಎನ್‌ಡಿಎ v/s ‘ಇಂಡಿಯಾ’ ಕೂಟ – ಜಿದ್ದಾಜಿದ್ದಿನ ಹೋರಾಟದಲ್ಲಿ ಗೆಲ್ಲೋದ್ಯಾರು?

    ಚನ್ನಪಟ್ಟಣದಲ್ಲಿ (Channapatna) ನಿಖಿಲ್ ಜಯಗಳಿಸಲಿದ್ದಾರೆ. ಜಮೀರ್ ಹೇಳಿಕೆಗಳು, ದೇವೇಗೌಡರ ಪ್ರವೇಶ, ನಿಖಿಲ್ ಮೇಲೆ ಅನುಕಂಪ ಎಲ್ಲ ಕೆಲಸ ಮಾಡಲಿದೆ. ಯೋಗೇಶ್ವರ್‌ ಕೊನೆ ಕ್ಷಣದಲ್ಲಿ ಸೇರಿದ್ದರಿಂದ ಕಾಂಗ್ರೆಸ್‌ಗೆ ಹಿನ್ನಡೆಯಾಗಲಿದೆ. ನಮ್ಮ ಒಗ್ಗಟ್ಟಿನ ಶ್ರಮ ಕೈ ಹಿಡಿಯಲಿದೆ ಎಂದು ದೋಸ್ತಿ ನಾಯಕರು ಹೇಳುತ್ತಿದ್ದಾರೆ.

  • ಮೋದಿ ಉದ್ಯೋಗ ಸೃಷ್ಟಿಸುವ ಕೆಲಸ ಮಾಡ್ಲಿ, ನಾನೇ ನಿಂತು ಜಾಗ ಕೊಡಿಸ್ತೀನಿ: ಡಿಕೆಶಿ

    ಮೋದಿ ಉದ್ಯೋಗ ಸೃಷ್ಟಿಸುವ ಕೆಲಸ ಮಾಡ್ಲಿ, ನಾನೇ ನಿಂತು ಜಾಗ ಕೊಡಿಸ್ತೀನಿ: ಡಿಕೆಶಿ

    – ಬಿಜೆಪಿ-ಜೆಡಿಎಸ್ ನಾಯಕರು ಮೊಸರಲ್ಲಿ ಕಲ್ಲು ಹುಡುಕೋದು ಬೇಡವೆಂದ ಡಿಸಿಎಂ

    ಬೆಂಗಳೂರು: ವಿಪಕ್ಷಗಳು ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಮಾಡುತ್ತಿವೆ. ವಿಷಯ ಇಲ್ಲದೇ ನಮ್ಮ ಸರ್ಕಾರದ ವಿರುದ್ಧ ಸುಳ್ಳು ಆರೋಪ ಮಾಡುತ್ತಿವೆ. ಮೋದಿ (DK Shivakumar) ಅವರು ಮೊದಲು ಕೊಟ್ಟಿರುವ ಭರವಸೆ ಈಡೇರಿಸುವ ಕೆಲಸ ಮಾಡಲಿ. ಉದ್ಯೋಗ ಸೃಷ್ಟಿ ಮಾಡೋ ಕೆಲಸ ಮಾಡಲಿ ರಾಜ್ಯದಲ್ಲಿ ಜಾಗ ಬೇಕಿದ್ರೆ ಹೇಳಲಿ, ನಾನೇ ನಿಂತು ಜಾಗ ಕೊಡಿಸುತ್ತೇನೆ ಉದ್ಯೋಗ ನೀಡಲಿ ಎಂದು ಡಿಸಿಎಂ ಡಿ.ಕೆ ಶಿವಕುಮಾರ್‌ (DK Shivakumar) ಹೇಳಿದರು.

    ಕೆಪಿಸಿಸಿ (KPCC) ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಗೆ, ಕುಮಾರಸ್ವಾಮಿಗೆ (HD Kumaraswamy) ನಮ್ಮ ಸರ್ಕಾರದ ಬಗ್ಗೆ ಹೇಳೋದಕ್ಕೆ ಏನೂ ಇಲ್ಲ. ಅವರ ಕಾಲದಲ್ಲಿ ಏನೇನು ಅನ್ಯಾಯ ಮಾಡಬೇಕೋ ಮಾಡಿದ್ರು. ಯಾವ ಬಡವರಿಗೂ ಸಹಾಯ ಮಾಡಲಿಲ್ಲ. ಒಂದು ಕಾರ್ಯಕ್ರಮ ಕೋಡೋದಕ್ಕೆ ಆಗಲಿಲ್ಲ ಎಂದು ತಿವಿದರು. ಇದನ್ನೂ ಓದಿ: ಸೆಮಿಕಂಡಕ್ಟರ್ ವಹಿವಾಟು 100 ಶತಕೋಟಿ ಡಾಲರ್ ನತ್ತ: ಟಾಟಾ ಎಲೆಕ್ಟ್ರಾನಿಕ್ಸ್‌ನ ಮೂರ್ತಿ ದಸಾಕ

    ಅನ್ನಭಾಗ್ಯ ಕಾರ್ಯಕ್ರಮ ಅವರು ಮಾಡಿದ್ರಾ? ಪಿಂಚಣಿ ಕೊಡೋ ಕಾರ್ಯಕ್ರಮ ಅವರು ಮಾಡಿದ್ರಾ? ಸೈಟ್ ಕೊಡೋ ಕಾರ್ಯಕ್ರಮ ಅವರು ಮಾಡಿದ್ರಾ, ಜಮೀನು ಕೊಟ್ರಾ..? ಈಗ ಕೆಲವರು ಸರ್ಕಾರಿ ನೌಕಕರಿದ್ದಾರೆ. ಅನುಕೂಲಸ್ಥರಿದ್ದಾರೆ ಅವರಿಗೆ ಎಲ್ಲಾ ಸಿಗ್ತಿದೆ. ಅದನ್ನ ಸರ್ವೇ ಮಾಡ್ತಿದ್ದೇವೆ. ನಮ್ಮ ರಾಜ್ಯದಲ್ಲಿ ಅನುಕೂಲ ಇದೆ. ಬಡವರು ಯಾರು ಅನ್ನೋದು ಲಿಮಿಟೇಷನ್ ರಾಜ್ಯ ಸರ್ಕಾರವೇ ಮಾಡಿದೆ. ಕೆಲವರು ಜಿಎಸ್‌ಟಿ ಟ್ಯಾಕ್ಸ್ (GST Tax) ಕಟ್ಟುತ್ತಿದ್ದಾರೆ. ಅದರಲ್ಲಿ ಬಡವರು ಇದ್ದಾರೆ ಅಂದ್ರೆ ಮತ್ತೆ ಅವರಿಗೆ ಬಿಪಿಎಲ್‌ ಕಾರ್ಡ್‌ (BPL Card) ಕೊಡಬೇಕು ಎಂದು ನಿರ್ಧರಿಸಿದ್ದೇವೆ. ಈ ಬಗ್ಗೆ ನಿನ್ನೆಯೇ ಸಿಎಂ ಅವರು ಸೂಚನೆ ಕೊಟ್ಟಿದ್ದಾರೆ ಎಂದು ತಿಳಿಸಿದರು. ಇದನ್ನೂ ಓದಿ: ಬಿಪಿಎಲ್, ಎಪಿಎಲ್ ಯಾವ ಕಾರ್ಡ್ ರದ್ದಾಗಲ್ಲ: ಕೆ.ಹೆಚ್.ಮುನಿಯಪ್ಪ

    ಯಾವ ಬಡವರಿಗೂ ತೊಂದ್ರೆ ಆಗಲ್ಲ. ವಿಪಕ್ಷಗಳು ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಮಾಡುತ್ತಿವೆ. ಕುಮಾರಸ್ವಾಮಿ ರಾಜ್ಯಕ್ಕೆ ಏನು ಮಾಡಿದ್ದಾರೆ ರೀ? ಅವರ ಕೊಡುಗೆ ರಾಜ್ಯಕ್ಕೆ ಏನಿದೆ..? ಗಾಳಿಯಲ್ಲಿ ಗುಂಡು ಹೊಡೆಯೋದೇ ಕೊಡುಗೆನಾ? ನಾವು ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತಿದ್ದೇವೆ. ರಾಜ್ಯದಲ್ಲಿ ಬಂಡವಾಳ ಹೂಡಿಕೆ ಮಾಡುವ ಕೆಲಸ ಮಾಡುತ್ತಿದ್ದೇವೆ. ಯಾರು ಏನೂ ಗಾಬರಿ ಪಡಬೇಕಾಗಿಲ್ಲ. ಮೋದಿ ಅವರು ಕೊಟ್ಟಿರುವ ಭರವಸೆ ಈಡೇರಿಸುವ ಕೆಲಸ ಮಾಡಲಿ. ಉದ್ಯೋಗ ಸೃಷ್ಟಿ ಮಾಡೋ ಕೆಲಸ ಮಾಡಲಿ ರಾಜ್ಯದಲ್ಲಿ ಜಾಗ ಬೇಕಿದ್ರೆ ಹೇಳಲಿ, ನಾನೇ ನಿಂತು ಜಾಗ ಕೊಡಿಸುತ್ತೇನೆ ಉದ್ಯೋಗ ನೀಡಲಿ ಎಂದು ಗುಡುಗಿದರು. ಇದನ್ನೂ ಓದಿ: ಗ್ರಾಮೀಣ ಪ್ರದೇಶದಲ್ಲಿ ಟೆಲಿಮೆಡಿಸಿನ್, ಟೆಲಿ-ಐಸಿಯುಗಳತ್ತ ಚಿತ್ತ: ದಿನೇಶ್ ಗುಂಡೂರಾವ್

  • ಸರ್ಕಾರದ ಬೊಕ್ಕಸ ಖಾಲಿ ಮಾಡಿರೋದೆ ಸಿದ್ದರಾಮಯ್ಯ ಸಾಧನೆ – ಸಿಎಂ ವಿರುದ್ಧ ಜೆಡಿಎಸ್ ಕಿಡಿ

    ಸರ್ಕಾರದ ಬೊಕ್ಕಸ ಖಾಲಿ ಮಾಡಿರೋದೆ ಸಿದ್ದರಾಮಯ್ಯ ಸಾಧನೆ – ಸಿಎಂ ವಿರುದ್ಧ ಜೆಡಿಎಸ್ ಕಿಡಿ

    ಬೆಂಗಳೂರು: ಅನುದಾನ ಸಿಗುತ್ತಿಲ್ಲ ಎಂಬ ಕಾಂಗ್ರೆಸ್ ಶಾಸಕರ ಅಳಲು ವಿಚಾರಕ್ಕೆ ಸರ್ಕಾರ ಮತ್ತು ಸಿದ್ದರಾಮಯ್ಯ ವಿರುದ್ಧ ಜೆಡಿಎಸ್ (JDS) ಕಿಡಿಕಾರಿದೆ. ಈ ಬಗ್ಗೆ ಎಕ್ಸ್‌ನಲ್ಲಿ ಸರಣಿ ಟ್ವೀಟ್ ಮಾಡಿರುವ ಜೆಡಿಎಸ್ ಅನುದಾನ ಕೊಡಿ ಸಿಎಂ ಎಂದು ಸಿದ್ದರಾಮಯ್ಯ (Siddaramaiah) ವಿರುದ್ಧ ಲೇವಡಿ ಮಾಡಿದೆ.

    ಜೆಡಿಎಸ್ ಟ್ವೀಟ್‌ನಲ್ಲೇನಿದೆ?
    ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಕಾಂಗ್ರೆಸ್ ಶಾಸಕ ಹೆಚ್.ಆರ್.ಗವಿಯಪ್ಪ ಕಣ್ಣೀರು ಹಾಕಿ ಆಕ್ರೋಶ ಹೊರಹಾಕಿದ್ದಾರೆ. ಬೊಕ್ಕಸದಲ್ಲಿ ಹಣವಿಲ್ಲದ ಅನುದಾನ ಕಡಿತ. ವಿಜಯನಗರ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳು ಸ್ಥಗಿತ. ಇದೇನಾ ಕಾಂಗ್ರೆಸ್ ನ್ಯಾಯ? ವಚನ ಭ್ರಷ್ಟ ಕಾಂಗ್ರೆಸ್ ಸರ್ಕಾರದ ಹುಸಿ ಭರವಸೆಗಳಿಗೆ ಸ್ವಪಕ್ಷೀಯ ಶಾಸಕರೇ ಬೇಸತ್ತಿದ್ದಾರೆ.

    ಅಭಿವೃದ್ಧಿಗೆ ಅಡ್ಡಿಯಾದ ಕಾಂಗ್ರೆಸ್ ಅವೈಜ್ಞಾನಿಕ ಗ್ಯಾರಂಟಿ. ಸಿದ್ದರಾಮಯ್ಯನವರ ಸುಳ್ಳುಗಳನ್ನು ಸ್ವತಃ ಕಾಂಗ್ರೆಸ್ ಶಾಸಕರೇ ಬಯಲಿಗೆಳೆಯುತ್ತಿದ್ದಾರೆ. ವಿಜಯನಗರ (Vijayanagar) ವಿಧಾನಸಭಾ ಕ್ಷೇತ್ರದ ಶಾಸಕ ಗವಿಯಪ್ಪ ನನ್ನ ಬಳಿ ಹಣವಿಲ್ಲ ನನ್ನ ಕ್ಷೇತ್ರದ ಜನರು ನನ್ನನ್ನು ಪ್ರಶ್ನಿಸುತ್ತಿದ್ದಾರೆ. ನಾನೇನು ಮಾಡಲಿ ಎಂದು ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ಬಗ್ಗೆ ಅಸಹಾಯಕತೆ ಹೊರಹಾಕಿದ್ದಾರೆ.

    ರಾಜ್ಯದ ಹಣ ಯಾರ ಯಾರ ಜೇಬು ಸೇರುತ್ತಿದೆ? ಕರ್ನಾಟಕ ಕಾಂಗ್ರೆಸ್ ಸರ್ಕಾರ ದಿವಾಳಿಯಾಗಿದೆ. ದುಡ್ಡಿಲ್ಲದ ಖಾಲಿ ‘ಕೈ’ ಆಡಳಿತ. ರಾಜು ಕಾಗೆ ಬಳಿಕ ಈಗ ಮತ್ತೊಬ್ಬ ಕಾಂಗ್ರೆಸ್ ಶಾಸಕರಾದ ಗವಿಯಪ್ಪ, ನಮ್ಮ ಕ್ಷೇತ್ರಕ್ಕೆ ಅನುದಾನ ಕೊಡ್ತಿಲ್ಲ ಎಂದು ಕಣ್ಣೀರು ಹಾಕುತ್ತಿರುವುದು ಸಿದ್ದರಾಮಯ್ಯ ಸರ್ಕಾರದ ದಿವಾಳಿತನಕ್ಕೆ ಸಾಕ್ಷಿ.

    ಹೊಸದಾಗಿ ರಚನೆಯಾದ ವಿಜಯನಗರ ಜಿಲ್ಲೆಗೆ ಬರೀ‌ 10 ಕೋಟಿ ರೂ. ಅನುದಾನ‌ ಕೊಡಲಾಗಿದೆ ಎಂದು ಗವಿಯಪ್ಪ ಅಸಮಾಧಾನ ತೋಡಿಕೊಂಡಿದ್ದಾರೆ. ಹಿಂದಿನ ಸರ್ಕಾರ ಸಾಕಷ್ಟು ಅಭಿವೃದ್ಧಿ ಮಾಡಿದೆ. ಆದರೆ ಈ ಬಾರಿ ಅನುದಾನ ಸಿಗದೆ, ಕ್ಷೇತ್ರದಲ್ಲಿ ಆಸ್ಪತ್ರೆಗಳು, ರಸ್ತೆಗಳ ಸಮಸ್ಯೆಗಳು ಸಾಕಷ್ಟಿದೆ. ಜನರು ಕೇಳುವ ಪ್ರಶ್ನೆಗಳಿಗೆ ಉತ್ತರಿಸಲು ಆಗುತ್ತಿಲ್ಲ ಎಂದು ತಮ್ಮ ಸರ್ಕಾರದ ವಿರುದ್ಧವೇ ಕಿಡಿಕಾರಿರುವುದು ಭ್ರಷ್ಟ ಕಾಂಗ್ರೆಸ್ ಸರ್ಕಾರದ ಅಧ್ಯಕ್ಷ ಆಡಳಿತಕ್ಕೆ ಉದಾಹರಣೆಯಾಗಿದೆ.

    ಗ್ಯಾರಂಟಿ ಯೋಜನೆಗಳಿಗೆ ಹಣಹೊಂದಿಸಲು ಹೆಣಗಾಡುತ್ತಿರುವ ಸಿಎಂ, ಶಾಸಕರ ಕ್ಷೇತ್ರಗಳಿಗೆ ಅನುದಾನ ಕೊಡುತ್ತಿಲ್ಲ.‌ ಸ್ವತಃ ಕಾಂಗ್ರೆಸ್ ಶಾಸಕರೇ ತಮ್ಮ ಕ್ಷೇತ್ರಕ್ಕೆ ಅನುದಾನ ಕೊಡಿ ಎಂದು ಕಣ್ಣೀರಿಡುತ್ತಿದ್ದರೂ ಮುಖ್ಯಮಂತ್ರಿಗಳು ಕಿವಿಗೊಡುತ್ತಿಲ್ಲ. ಯಾಕಂದರೆ ಸರ್ಕಾರದ ಬೊಕ್ಕಸ ಖಾಲಿ ಮಾಡಿರುವುದೇ ಸಿದ್ದರಾಮಯ್ಯ ಅವರ ಸಾಧನೆ. ಅವೈಜ್ಞಾನಿಕ ಗ್ಯಾರಂಟಿಯಿಂದಾಗಿ ನಿಜವಾದ ಅಭಿವೃದ್ಧಿ ಯೋಜನೆಗಳಿಗೆ ಹಣವಿಲ್ಲದಂತೆ ಮಾಡಿದೆ ಭ್ರಷ್ಟ ಕಾಂಗ್ರೆಸ್. ವೇದಿಕೆಯಲ್ಲಿ ದೊಡ್ಡ ದೊಡ್ಡ ಹುಸಿ ಭಾಷಣಗಳನ್ನು ಮಾಡುವ ಸಿದ್ದರಾಮಯ್ಯ ಸರ್ಕಾರ ನ್ಯಾಯಯುತವಾಗಿ ಕ್ಷೇತ್ರಗಳಿಗೆ ನಿಧಿ ಹಂಚಿಕೆ ಮಾಡಲು ಕೈಲಾಗದ ದುಸ್ಥಿತಿ ತಲುಪಿದೆ. ಈ ಸತ್ಯವನ್ನು ಕಾಂಗ್ರೆಸ್ ಶಾಸಕ ಗವಿಯಪ್ಪ ಬಿಚ್ಚಿಟ್ಟಿದ್ದಾರೆ.

    ಕೊಟ್ಟಿರುವ 12 ಕೋಟಿ ರೂ.ಆಸ್ಪತ್ರೆಗೆ ಸಾಲುತ್ತಿಲ್ಲ. ಇನ್ನಿತರ ಯೋಜನೆಗಳಿಗೆ ನಾವೇನು ಮಾಡುವುದು ಎಂದು ಪ್ರಶ್ನಿಸಿದ್ದಾರೆ. ಆದರೆ ಹಗರಣಗಳಲ್ಲಿ ಸಿಲುಕಿರುವ ಭ್ರಷ್ಟ ಸಿಎಂ ಸಿದ್ದರಾಮಯ್ಯ ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳುತ್ತಿಲ್ಲ. ಇದು ನಾಡಿನ ದುರಂತ. ಅನುದಾನದ ಕೊರತೆಯಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿಕೊಳ್ಳುತ್ತಾರೆ. ಮತ್ಯಾಕೆ ಅನುದಾನ ಹಂಚಿಕೆ ವಿಚಾರದಲ್ಲಿ ತಾರತಮ್ಯ ಹಾಗೂ ಪಕ್ಷಪಾತ ಮಾಡುತ್ತಿರುವುದು? ಇತರರು ಕೋಟಿ ಕೋಟಿ ಹಣ ಪಡೆಯುತ್ತಿರುವಾಗ ವಿಜಯನಗರವನ್ನೇಕೆ ಕಡೆಗಣಿಸಲಾಗುತ್ತಿದೆ? ಖಾಲಿ ‘ಕೈ’ ಸರ್ಕಾರದ ಹುಸಿ ಭರವಸೆಗಳ ವಿರುದ್ಧ ಕಾಂಗ್ರೆಸ್ ಶಾಸಕ ಗವಿಯಪ್ಪ ಅವರ ಅಸಹನೆ ಮತ್ತು ಆಕ್ರೋಶ ನ್ಯಾಯಯೋಚಿತವಾಗಿಯೇ ಇದೆ ಎಂದು ಜೆಡಿಎಸ್‌ ಗವಿಯಪ್ಪ ಪರ ಬ್ಯಾಟ್‌ ಬೀಸಿದೆ.

  • ಉಪಚುನಾವಣಾ ಕಣದಲ್ಲಿ ಬೆಟ್ಟಿಂಗ್ ಭರಾಟೆ – ಕುತೂಹಲ ಹೆಚ್ಚಿಸಿದ ಚನ್ನಪಟ್ಟಣ ಫಲಿತಾಂಶ

    ಉಪಚುನಾವಣಾ ಕಣದಲ್ಲಿ ಬೆಟ್ಟಿಂಗ್ ಭರಾಟೆ – ಕುತೂಹಲ ಹೆಚ್ಚಿಸಿದ ಚನ್ನಪಟ್ಟಣ ಫಲಿತಾಂಶ

    ರಾಮನಗರ: ಚನ್ನಪಟ್ಟಣ, ಶಿಗ್ಗಾಂವಿ ಹಾಗೂ ಸಂಡೂರು ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಯ ಭರಾಟೆ ಮುಗಿದಿದೆ. ಇನ್ನೇನಿದ್ದರೂ ಫಲಿತಾಂಶ ಬರಬೇಕು. ಈ ನಡುವೆ ಗೆಲ್ಲುವ ಕುದುರೆ ಯಾರೆಂಬ ಲೆಕ್ಕಾಚಾರ ತೀವ್ರಗೊಂಡಿದೆ. ಕ್ಷೇತ್ರಗಳಲ್ಲಿ ಬೆಟ್ಟಿಂಗ್ ಭರ್ಜರಿಯಾಗಿ ನಡೆಯುತ್ತಿದ್ದು, ಶಿಗ್ಗಾಂವಿ, ಸಂಡೂರು ಕ್ಷೇತ್ರಕ್ಕಿಂತ ಚನ್ನಪಟ್ಟಣವೇ (Channapatna) ಎಲ್ಲರ ಫೇವರೆಟ್ ಆಗಿದೆ. ದೊಡ್ಡ ಮಟ್ಟದಲ್ಲೇ ಇಲ್ಲಿ ಬಾಜಿ ನಡೆಯುತ್ತಿದೆ.

    ಇಡೀ ರಾಜ್ಯದ ಗಮನ ಸೆಳೆದಿದ್ದ ಚನ್ನಪಟ್ಟಣ ಉಪಚುನಾವಣೆಯ (By Election) ಮತದಾನ ಮುಗಿದಿದ್ದು, ಇದೀಗ ಕ್ಷೇತ್ರದಲ್ಲಿ ಸೋಲು-ಗೆಲುವಿನ ಲೆಕ್ಕಾಚಾರ ಶುರುವಾಗಿದೆ. ಜೊತೆಗೆ ಬೆಟ್ಟಿಂಗ್ ಭರಾಟೆ ಕೂಡಾ ಹೆಚ್ಚಾಗಿದೆ. ನಿಖಿಲ್ ಕುಮಾರಸ್ವಾಮಿ (Nikhil Kumaraswamy) ಹಾಗೂ ಸಿ.ಪಿ ಯೋಗೇಶ್ವರ್ (CP Yogeshwar) ತುರುಸಿನ ಫೈಟ್ ನಡೆದಿದೆ. ಈ ಚುನಾವಣೆ ತೀವ್ರ ಹಣಾಹಣಿಗೆ ಕಾರಣವಾಗಿದೆ. ಹೀಗಾಗಿ ಚನ್ನಪಟ್ಟಣದತ್ತ ಬೆಟ್ಟಿಂಗ್‌ದಾರರು ಹೆಚ್ಚಿನ ಆಸಕ್ತಿ ತೋರಿಸುತ್ತಿದ್ದಾರೆ. ಇದನ್ನೂ ಓದಿ: ಕುಮಾರಸ್ವಾಮಿ ವಿರುದ್ಧ ವರ್ಣ ನಿಂದನೆ – ಜಮೀರ್ ವಿರುದ್ಧ ದೂರು

    ಸೋಲು, ಗೆಲುವು ಹಾಗೂ ಗೆಲುವಿನ ಅಂತರಕ್ಕೆ ಲಕ್ಷ ಲಕ್ಷ ಹಣ ಬೆಟ್ಟಿಂಗ್ ಕಟ್ಟಲಾಗುತ್ತಿದೆ. ಚನ್ನಪಟ್ಟಣ ತಾಲೂಕು ಮಾತ್ರವಲ್ಲದೇ ಅಕ್ಕಪಕ್ಕದ ತಾಲೂಕುಗಳು, ಜಿಲ್ಲೆಗಳಲ್ಲೂ ಸಹ ಫಲಿತಾಂಶದ ಮೇಲೆ ಬೆಟ್ಟಿಂಗ್ ಕಟ್ಟಲಾಗುತ್ತಿದೆ. ಅಲ್ಲದೇ ಗುರುವಾರ ಸಿ.ಪಿ.ಯೋಗೇಶ್ವರ್ ಹೇಳಿಕೆ ಬಳಿಕವೂ ಬೆಟ್ಟಿಂಗ್ ಕಟ್ಟುವವರ ಸಂಖ್ಯೆ ಕೂಡಾ ಹೆಚ್ಚಾಗಿದೆ. ಯಾವ ಭಾಗದಲ್ಲಿ ಯಾರಿಗೆ ಲೀಡ್, ಎಷ್ಟು ಮತಗಳು ಲೀಡ್ ಸೇರಿದಂತೆ ಇನ್ನಿತರ ವಿಚಾರಗಳ ಮೇಲೂ ಒನ್ ಟು ಡಬಲ್ ಎಂಬತೆ ಬೆಟ್ಟಿಂಗ್ ಕಟ್ಟಲಾಗುತ್ತಿದೆ. ಇದನ್ನೂ ಓದಿ: ಉತ್ತರ ಪ್ರದೇಶ ಆಸ್ಪತ್ರೆಯಲ್ಲಿ ಅಗ್ನಿ ಅವಘಡ – 10 ಮಕ್ಕಳು ಸಜೀವ ದಹನ

    ಚುನಾವಣೆಯ ಕೊನೆಯ ಹಂತದಲ್ಲಿ ಸಚಿವ ಜಮೀರ್ ಅಹ್ಮದ್ (Zameer Ahmed) ನೀಡಿದ್ದ ‘ಕರಿಯ’ ಹೇಳಿಕೆ ಚುನಾವಣೆಯಲ್ಲಿ ಪ್ರಭಾವ ಬೀರಿದೆ. ಇದನ್ನು ಸ್ವತಃ ಸಿಪಿವೈ ಒಪ್ಪಿಕೊಂಡಿದ್ದಾರೆ. ಇನ್ನು ಚನ್ನಪಟ್ಟಣದಲ್ಲಿ ಗೆಲ್ಲುವ ಬಗ್ಗೆ ಪೂರ್ತಿ ವಿಶ್ವಾಸವನ್ನು ಅವರು ವ್ಯಕ್ತಪಡಿಸಿಲ್ಲ. ಸಿಪಿವೈ ಈ ಹೇಳಿಕೆ ಬೆಟ್ಟಿಂಗ್ ಮೇಲೂ ಪ್ರಭಾವ ಬೀರಿದೆ ಎನ್ನಲಾಗುತ್ತಿದೆ. ಇದನ್ನೂ ಓದಿ: ಆಫ್ರಿಕಾ ವಿರುದ್ಧ ದಾಖಲೆಯ ಜಯದೊಂದಿಗೆ ಸರಣಿ ಗೆದ್ದ ಟೀಂ ಇಂಡಿಯಾ

    ಚನ್ನಪಟ್ಟಣದ ಜೊತೆಗೆ ಮಂಡ್ಯದವರೂ (Mandya) ಕೂಡ ಹೆಚ್ಚಿನ ಪ್ರಮಾಣದಲ್ಲಿ ಬೆಟ್ಟಿಂಗ್‌ಗೆ ಇಳಿದಿದ್ದಾರೆ. ಮಂಡ್ಯ ಜಿಲ್ಲೆಯದ್ದಾಗಲಿ, ಪಕ್ಕದ ಜಿಲ್ಲೆಯದ್ದಾಗಲಿ ಒಂದು ಕೈ ನೋಡೇ ಬಿಡೋಣಾ ಎಂದು ಬೆಟ್ಟಿಂಗ್ ಕಟ್ಟುತ್ತಾರೆ. ಇದೀಗ ಮಂಡ್ಯ ಜಿಲ್ಲೆಯ ಜನರ ಕಣ್ಣು ಬಿದ್ದಿರೋದು ಚನ್ನಪಟ್ಟಣ ಉಪಚುನಾವಣೆಯ ಫಲಿತಾಂಶದ ಮೇಲೆ. ಚನ್ನಪಟ್ಟಣ ಉಪಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಪರ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಕೆಲಸ ಮಾಡಿದ್ದು ಸಹ ಮಂಡ್ಯ ಜಿಲ್ಲೆಯ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಕಾರ್ಯಕರ್ತರು. ಮತದಾನದ ಬಳಿಕ ಕಾರ್ಯಕರ್ತರು ಮಾತ್ರವಲ್ಲ ಸಾಮಾನ್ಯ ಜನರು ಸಹ ಈ ಫಲಿತಾಂಶದ ಮೇಲೆ ಬಾಜಿ ಕಟ್ಟುತ್ತಿದ್ದಾರೆ. ಇದೀಗ ಯೋಗೇಶ್ವರ್ ಯಾರೇ ಗೆದ್ದರೂ ಕೂದಳೆಯ ಅಂತರದಲ್ಲಿ ಗೆಲ್ಲುತ್ತಾರೆ ಎಂಬ ಹೇಳಿಕೆ ಬಳಿಕ ಬೆಟ್ಟಿಂಗ್ ಲೆಕ್ಕಾಚಾರ ಬದಲಾಗಿದೆ. ಇದನ್ನೂ ಓದಿ: ಹಾಸನ| 1.49 ಕೋಟಿ ಹಣ ದುರುಪಯೋಗ ಆರೋಪ – ಗ್ರಾಮ ಪಂಚಾಯ್ತಿ ಕಾರ್ಯದರ್ಶಿ ಅಮಾನತು

    50:50 ಅನುಪಾತದಲ್ಲಿ ಬೆಟ್ಟಿಂಗ್ ನಡೆದಿದೆ. ಈಗ ಸದ್ಯ ಒಂದು ಲಕ್ಷಕ್ಕೆ ಒಂದು ಲಕ್ಷ ಎಂಬಂತೆ ಸ್ಟ್ರೈಟ್ ಫೈಟ್ ಬೆಟ್ಟಿಂಗ್ ಮಾಡಲಾಗುತ್ತಿದೆ. ಸಕ್ಕರೆ ನಾಡಲ್ಲಿ ಬೊಂಬೆ ನಗರಿಯ ಅಧಿಪತಿ ಯಾರು ಎಂದು ಬೆಟ್ಟಿಂಗ್ ನಡೆಯುತ್ತಿದೆ. ಮೂಲಗಳ ಪ್ರಕಾರ ಚನ್ನಪಟ್ಟಣ ಹಾಗೂ ರಾಮನಗರ ಜಿಲ್ಲೆಗಿಂತ ಮಂಡ್ಯ ಜಿಲ್ಲೆಯಲ್ಲಿಯೇ ಚನ್ನಪಟ್ಟಣ ಉಪಚುನಾವಣೆಯ ಫಲಿತಾಂಶದ ಮೇಲೆ ಬೆಟ್ಟಿಂಗ್ ಕಟ್ಟುತ್ತಿದ್ದಾರೆ ಎನ್ನಲಾಗುತ್ತಿದೆ. ಒಟ್ಟಿನಲ್ಲಿ ಬೆಟ್ಟಿಂಗ್ ಕಾನೂನು ಬಾಹಿರವಾದರೂ ಬಾಜಿ ಕಟ್ಟಿ ನೋಡು ಬಾರಾ ಮೀಸೆ ಮಾವಾ ಅನ್ನೋ ಹಾಡು ಇದೀಗ ಚನ್ನಪಟ್ಟಣ ಚುನಾವಣೆಗೆ ಅನ್ವಯಿಸುತ್ತಿದೆ. ಇದನ್ನೂ ಓದಿ: ಅಕ್ರಮ ಆಸ್ತಿ ಗಳಿಕೆ ಪ್ರಕರಣ – ಸಚಿವ ಜಮೀರ್‌ ಅಹ್ಮದ್‌ಗೆ ಲೋಕಾಯುಕ್ತ ನೋಟಿಸ್‌

  • ಕುಮಾರಸ್ವಾಮಿಯನ್ನು ಕರಿಯಾ ಎಂದ ಜಮೀರ್‌ ವಿರುದ್ಧ ದೂರು

    ಕುಮಾರಸ್ವಾಮಿಯನ್ನು ಕರಿಯಾ ಎಂದ ಜಮೀರ್‌ ವಿರುದ್ಧ ದೂರು

    ಚಿಕ್ಕಮಗಳೂರು: ಮಾಜಿ ಮುಖ್ಯಮಂತ್ರಿ, ಹಾಲಿ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ (HD Kumaraswamy) ಅವರನ್ನು ಕರಿಯ ಎಂದು ಸಂಬೋಧಿಸಿದ್ದ ವಸತಿ ಖಾತೆಯ ಸಚಿವ ಜಮೀರ್‌ ಅಹ್ಮದ್‌ (Zameer Ahmed) ವಿರುದ್ಧ ದೂರು ದಾಖಲಾಗಿದೆ.

    ಕುಮಾರಸ್ವಾಮಿ ವಿರುದ್ಧ ಅವಹೇಳನ ಹಾಗೂ ವರ್ಣ ನಿಂದನೆ ಮಾಡಿರುವುದನ್ನ ಖಂಡಿಸಿ ಜೆಡಿಎಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಾಗೇಂದ್ರ ಅವರು ಕೊಪ್ಪ ಪೊಲೀಸ್ ಠಾಣೆಯಲ್ಲಿ ಜಮೀರ್‌ ವಿರುದ್ಧ ದೂರು ನೀಡಿದ್ದಾರೆ. ಇದನ್ನೂ ಓದಿ: ಉತ್ತರ ಪ್ರದೇಶ ಆಸ್ಪತ್ರೆಯಲ್ಲಿ ಅಗ್ನಿ ಅವಘಡ – 10 ಮಕ್ಕಳು ಸಜೀವ ದಹನ

     

    ದೂರಿನಲ್ಲಿ ಏನಿದೆ?
    ಕುಮಾರಸ್ವಾಮಿ ಅವರನ್ನು ಉರ್ದು ಭಾಷೆಯಲ್ಲಿ ಕರಿಯ ಎಂದು ಕರೆದು ನಿಂದಿಸಿದ್ದಾರೆ. ಜಮೀರ್ ಹೇಳಿಕೆಯು ಜನಾಂಗೀಯ ನಿಂದನೆ ಹಾಗೂ ವರ್ಣಭೇದ ನೀತಿಯನ್ನು ಪ್ರಚೋದಿಸುವಂತಿದೆ.

    ಮುಸ್ಲಿಮರು ದೇವೇಗೌದೇವೇಗೌಡರ ಕುಟುಂಬವನ್ನೇ ಖರೀದಿ ಮಾಡುತ್ತಾರೆ ಎಂದು ಕೋಮು ಸೌಹಾರ್ದ ಕೆಣಕಿದ್ದಾರೆ. ಸಮಾಜದಲ್ಲಿ ಶಾಂತಿ ಭಂಗ ಉಂಟು ಮಾಡುವ ಹೇಳಿಕೆಯನ್ನು ನೀಡಿರುವ ಜಮೀರ್ ಅಹ್ಮದ್ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ದೂರಿನಲ್ಲಿ ಆಗ್ರಹಿಸಿದ್ದಾರೆ.

     

  • ಸಚಿವ ಜಮೀರ್ ರಾಜ್ಯದ ಜನತೆಗೆ ಕ್ಷಮೆ ಕೇಳಿ, ರಾಜೀನಾಮೆ ನೀಡಬೇಕು – ಜೆಡಿಎಸ್ ಆಗ್ರಹ

    ಸಚಿವ ಜಮೀರ್ ರಾಜ್ಯದ ಜನತೆಗೆ ಕ್ಷಮೆ ಕೇಳಿ, ರಾಜೀನಾಮೆ ನೀಡಬೇಕು – ಜೆಡಿಎಸ್ ಆಗ್ರಹ

    ಬೆಂಗಳೂರು: ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ (HD Kumarswamy) ಬಣ್ಣದ ಬಗ್ಗೆ ಮಾತನಾಡಿದ್ದ ಸಚಿವ ಜಮೀರ್ ಅಹ್ಮದ್ (Zameer Ahmed) ವಿರುದ್ಧ ಜೆಡಿಎಸ್ (JDS) ಕಿಡಿಕಾರಿದೆ. ಎಕ್ಸ್‌ನಲ್ಲಿ ಟ್ವೀಟ್ ಮಾಡಿರುವ ಜೆಡಿಎಸ್ ಜಮೀರ್ ಅಹ್ಮದ್ ರಾಜ್ಯದ ಜನತೆಯಲ್ಲಿ ಕ್ಷಮೆ ಕೇಳಿ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದೆ.ಇದನ್ನೂ ಓದಿ: ಬಿಎಸ್‌ವೈಗೆ ಮತ್ತೊಂದು ಶಾಕ್ ಕೊಟ್ಟ ಸರ್ಕಾರ – 300 ಕೋಟಿ ಅನುದಾನ ಅಕ್ರಮ ತನಿಖೆಗೆ ಸಮಿತಿ ರಚನೆ

    ಟ್ವೀಟ್‌ನಲ್ಲಿ ಏನಿದೆ?
    ಜಮೀರ್ ಅಹ್ಮದ್ ಅವರೇ, ಹೆಚ್.ಡಿ ಕುಮಾರಸ್ವಾಮಿ ಅವರು ಜಾತಿ, ಪಂಥ ಮತ್ತು ಬಣ್ಣದಿಂದ ಜನನಾಯಕರಾಗಿ ಬೆಳೆದಿಲ್ಲ. ಅವರ ನಾಯಕತ್ವ ಗುಣ, ಸಮಾಜಕ್ಕೆ ಮತ್ತು ಸಮುದಾಯಗಳ ಅಭಿವೃದ್ಧಿಗೆ ಕೊಟ್ಟಿರುವ ಕೊಡುಗೆಗಳು, ಜನಪರ ಯೋಜನೆಗಳು ಮತ್ತು ಉತ್ತಮವಾದ ಆಡಳಿತ ಮತ್ತು ಆರ್ಥಿಕ ಅಭಿವೃದ್ಧಿ ದೃಷ್ಟಿಕೋನದಿಂದಲೇ ಉತ್ತಮ ರಾಜಕಾರಣಿಯಾಗಿ ಗುರುತಿಸಿಕೊಂಡಿದ್ದಾರೆ.

    ಸರ್ವಜನಾಂಗದ ಶಾಂತಿಯ ತೋಟವಾಗಿರುವ ಕರ್ನಾಟಕದಲ್ಲಿ ಕಾಂಗ್ರೆಸ್ ಮತ್ತು ನೀವು ಕ್ಷುಲ್ಲಕ ರಾಜಕೀಯಕ್ಕಾಗಿ ದ್ವೇಷ ಹರಡಲು, ಒಡೆದು ಆಳುವ ನೀತಿಯನ್ನು ಅನುಸರಿಸುತ್ತಿದ್ದೀರಿ. ನೆನಪಿರಲಿ, ಇಲ್ಲಿ ನಿಮ್ಮ ಒಡೆದು ಆಳುವ ನೀತಿಗೆ ಜಾಗವಿಲ್ಲ. ಜನಾಂಗೀಯ ನಿಂದನೆ, ವರ್ಣಭೇದ ಹೇಳಿಕೆಗಳನ್ನು ನೀಡಿ ಅಪಮಾನ ಎಸಗಿರುವ ನೀವು ನಾಡಿನ ಜನರಲ್ಲಿ ಕ್ಷಮೆಯಾಚಿಸಿ, ರಾಜೀನಾಮೆ ನೀಡಬೇಕು ಎಂದು ಜೆಡಿಎಸ್ ಆಗ್ರಹಿಸಿದೆ.ಇದನ್ನೂ ಓದಿ: ಶಿಗ್ಗಾಂವಿ ಉಪಚುನಾವಣೆ: ತೆರಿಗೆ ಇಲಾಖೆಯಿಂದ 5 ಲಕ್ಷ ಮೌಲ್ಯದ ವಸ್ತುಗಳು ವಶ

  • ಹೆಚ್‌ಡಿಕೆ ಬಣ್ಣದ ಬಗ್ಗೆ ಜಮೀರ್ ನಿಂದನೆ – ವಿವಾದದ ಬಳಿಕ ಪ್ರೀತಿಯಿಂದ ಕರೆದಿದ್ದು ಅಂತ ಸ್ಪಷ್ಟನೆ

    ಹೆಚ್‌ಡಿಕೆ ಬಣ್ಣದ ಬಗ್ಗೆ ಜಮೀರ್ ನಿಂದನೆ – ವಿವಾದದ ಬಳಿಕ ಪ್ರೀತಿಯಿಂದ ಕರೆದಿದ್ದು ಅಂತ ಸ್ಪಷ್ಟನೆ

    ಬೆಂಗಳೂರು: ಬೈ ಎಲೆಕ್ಷನ್ ಹೊತ್ತಲ್ಲಿ ಸಚಿವ ಜಮೀರ್ (Zameer Ahmed Khan) ವಿವಾದದ ಮೇಲೆ ವಿವಾದ ಮೈಮೇಲೆ ಎಳೆದುಕೊಳ್ತಿದ್ದಾರೆ. ವಕ್ಫ್ ಆಸ್ತಿ ವಿಚಾರ ಕೆದಕಿ ಜನಾಕ್ರೋಶಕ್ಕೆ ತುತ್ತಾಗಿರುವ ಸಚಿವ ಜಮೀರ್, ಇದೀಗ ಕುಮಾರಸ್ವಾಮಿ (HD Kumaraswamy) ಬಗ್ಗೆ ಅನುಚಿತ ಪದ ಬಳಸಿ ಮತ್ತೊಮ್ಮೆ ವಿವಾದಕ್ಕೆ ಕಾರಣರಾಗಿದ್ದಾರೆ.

    ಚನ್ನಪಟ್ಟಣದಲ್ಲಿ ಪ್ರಚಾರ ವೇಳೆ ಕುಮಾರಸ್ವಾಮಿ ಬಣ್ಣದ ಬಗ್ಗೆ ಮಾತಾಡಿ ಲೇವಡಿ ಮಾಡಿದ್ದಾರೆ. ಕರಿಯಾ ಕುಮಾರಸ್ವಾಮಿ ಎಂದು ಜರೆದಿದ್ದಾರೆ. ಅಷ್ಟೇ ಅಲ್ಲ, ಇನ್ನೊಂದು ಹೆಜ್ಜೆ ಮುಂದೆ ಹೋದ ಜಮೀರ್, ಹಿಂದೆ ಹಿಜಬ್ ಬೇಡ ಎಂದಿದ್ದ ಕುಮಾರಸ್ವಾಮಿಗೆ ಈಗ ಮುಸ್ಲಿಮರ ವೋಟ್ ಬೇಕಾ ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: Manipur | ಭದ್ರತಾ ಪಡೆಗಳೊಂದಿಗೆ ಭಾರಿ ಗುಂಡಿನ ಚಕಮಕಿ – 11 ಶಂಕಿತ ಕುಕಿ ಬಂಡುಕೋರರು ಬಲಿ!

    ನಿನ್ ರೇಟ್ ಎಷ್ಟು ಹೇಳು.. ಮುಸ್ಲಿಮರೆಲ್ಲಾ ಸೇರಿ ನಿಮ್ಮ ಕುಟುಂಬವನ್ನು ಖರೀದಿ ಮಾಡ್ತಾರೆ ಅಂತಾ ಸವಾಲ್ ಹಾಕಿದ್ದಾರೆ. ಜಮೀರ್ ಮಾತುಗಳೀಗ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಇದು ಜನಾಂಗೀಯ ನಿಂದನೆ.. ಎಂದು ಜೆಡಿಎಸ್ ಟೀಕಿಸಿದೆ. ಇದು ಅಕ್ಷಮ್ಯ.. ಜಮೀರ್ ವಿರುದ್ಧ ಕ್ರಮ ಆಗ್ಬೇಕು.. ರಾಜೀನಾಮೆ ಪಡೀಬೇಕು ಎಂದು ಆಗ್ರಹಿಸಿದೆ. ಜಮೀರ್ ಹೇಳಿಕೆ ರಾಷ್ಟ್ರಮಟ್ಟದಲ್ಲಿ ಸದ್ದು ಮಾಡಿದೆ. ಕೇಂದ್ರ ಸಚಿವ ಕಿರಣ್ ರಿಜಿಜು ಟ್ವೀಟ್ ಮೂಲಕ ಆಕ್ರೋಶ ಹೊರಹಾಕಿದ್ದಾರೆ. ಮಾಜಿ ಸಿಎಂ ಯಡಿಯೂರಪ್ಪ, ಅಶೋಕ್ ಸೇರಿ ಹಲವರು ಆಕ್ರೋಶ ಹೊರಹಾಕಿದ್ದಾರೆ. ಈ ಬೆನ್ನಲ್ಲೇ ಎಚ್ಚೆತ್ತ ಜಮೀರ್ ಅಹ್ಮದ್, ಕುಮಾರಸ್ವಾಮಿ ನನ್ನನ್ನು ಕುಳ್ಳ ಅಂತಾರೆ.. ನಾನು ಪ್ರೀತಿಯಿಂದ ಕರಿಯಾ ಅಂದಿದ್ದೀನಿ ಅಷ್ಟೇ.. ನಮ್ಮ ಸಮಾಜವನ್ನು ಖರೀದಿ ಮಾಡಲಾಗಲ್ಲ ಅಂದಿದ್ದೇನೆ ಅಷ್ಟೇ ಅಂತಾ ತೇಪೆ ಹಚ್ಚಲು ನೋಡಿದ್ದಾರೆ.

    ಚನ್ನಪಟ್ಟಣ ಎಲೆಕ್ಷನ್‌ಗೆ ಸ್ಟೀಲ್, ಕಾಂಟ್ರಾಕ್ಟ್ ದುಡ್ಡಾ?
    ಚನ್ನಪಟ್ಟಣ ಚುನಾವಣೆಗೆ ಸ್ಟೀಲ್ ಕಂಪನಿ ದುಡ್ಡನ್ನು ಕುಮಾರಸ್ವಾಮಿ ಹರಿಸ್ತಿದ್ದಾರೆ ಎಂಬ ಚಲುವರಾಯಸ್ವಾಮಿ ಆರೋಪಕ್ಕೆ ಜೆಡಿಎಸ್ ಗರಂ ಆಗಿದೆ.ಚ ಲುವರಾಯಸ್ವಾಮಿಯನ್ನು ಕೆರೆ ಕಳ್ಳ, ವಂಚಕ ಮಂತ್ರಿ, ಲೂಟಿಕೋರ ಎಂಬ ಪದಪುಂಜ ಬಳಸಿ ಜೆಡಿಎಸ್ ಟ್ವೀಟ್ ಮೂಲಕ ಆಕ್ರೋಶ ಹೊರಹಾಕಿದೆ. ಗುತ್ತಿಗೆದಾರನಿಗೆ ಮಂಡ್ಯ ಲೋಕಸಭೆ ಟಿಕೆಟ್ ಕೊಡಿಸಿ ಎಷ್ಟು ಸಂಪಾದಿಸಿದ್ದೀಯಾ ಅಂತಾ ಗೊತ್ತಿದೆ ಎಂದು ತರಾಟೆಗೆ ತೆಗೆದುಕೊಂಡಿದೆ. ಇದ್ರ ಮಧ್ಯೆಯೂ, ಕುಮಾರಸ್ವಾಮಿ ಕಲೆಕ್ಷನ್ ಗಿರಾಕಿ.. ಎಂದು ಚಲುವರಾಯಸ್ವಾಮಿ ಕರೆದಿದ್ದಾರೆ. ಅವರು ಎಲೆಕ್ಷನ್ ಕಲೆಕ್ಷನ್ ಹೇಗೆ ಮಾಡ್ತಾರೆ ಗೊತ್ತು ಎಂದಿದ್ದಾರೆ. ಇದನ್ನೂ ಓದಿ: ಇಸ್ರೇಲ್‌ ಮೇಲೆ 150 ರಾಕೆಟ್‌ಗಳ ಸುರಿಮಳೆ – ಹಿಜ್ಬುಲ್ಲಾ ಭೀಕರ ದಾಳಿಗೆ ಹಲವೆಡೆ ಹಾನಿ!

    ಇನ್ನು ಸ್ಟೀಲ್ ಜೊತೆಗೆ ಮೈನಿಂಗ್ ದುಡ್ಡಲ್ಲಿ ಕುಮಾರಸ್ವಾಮಿ ಎಲೆಕ್ಷನ್ ಮಾಡ್ತಿದ್ದಾರೆ ಎಂಬರ್ಥದ ಹೇಳಿಕೆಯನ್ನು ಡಿಸಿಎಂ ನೀಡಿದ್ದಾರೆ. ಇದಕ್ಕೆ ಬಿಜೆಪಿ ಕೌಂಟರ್ ನೀಡಿದೆ. ಗುತ್ತಿಗೆದಾರರಿಂದ ಸಂಗ್ರಹಿಸಿದ ಹಣದಲ್ಲಿ ಕಾಂಗ್ರೆಸ್ ಎಲೆಕ್ಷನ್ ಮಾಡ್ತಿದೆ ಎಂದು ಕೇಂದ್ರ ಸಚಿವ ಸೋಮಣ್ಣ ಪ್ರತ್ಯಾರೋಪ ಮಾಡಿದ್ದಾರೆ. ಈ ಮಧ್ಯೆ, ಹಣ ಹಂಚಿಕೆ ಆರೋಪದಡಿ ಸಚಿವ ಜಮೀರ್ ವಿರುದ್ಧ ಚುನಾವಣಾ ಆಯೋಗ ದೂರು ದಾಖಲಿಸಿಕೊಂಡಿದೆ. ಇದನ್ನೂ ಓದಿ: ಸಮಾಜ ವಿಭಜಿಸಲು ಪ್ರಯತ್ನಿಸುತ್ತಿದ್ದಾರೆ, ರಾಷ್ಟ್ರೀಯ ಶತ್ರುಗಳ ವಿರುದ್ಧ ಹೋರಾಡಬೇಕಿದೆ – ಮೋದಿ ವಾಗ್ದಾಳಿ

  • ರಾಜ್ಯದಲ್ಲಿ ಮತ್ತೆ ಸುವರ್ಣಯುಗ ಆಡಳಿತಕ್ಕೆ ಬರಲಿದೆ, ಅದಕ್ಕಾಗಿ ನಿಖಿಲ್‌ ಗೆಲ್ಲಿಸಿ: ಹೆಚ್‌ಡಿಕೆ ಮನವಿ

    ರಾಜ್ಯದಲ್ಲಿ ಮತ್ತೆ ಸುವರ್ಣಯುಗ ಆಡಳಿತಕ್ಕೆ ಬರಲಿದೆ, ಅದಕ್ಕಾಗಿ ನಿಖಿಲ್‌ ಗೆಲ್ಲಿಸಿ: ಹೆಚ್‌ಡಿಕೆ ಮನವಿ

    – ಬಿಜೆಪಿ – ಜೆಡಿಎಸ್‌ದು ಹಾಲು-ಜೇನಿನ ಸಂಬಂಧ

    ರಾಮನಗರ: 2006ರಂತೆ ಮತ್ತೆ ಸುವರ್ಣಯುಗ ಆಡಳಿತಕ್ಕೆ ಬರಲಿದೆ, ಅದಕ್ಕಾಗಿ ನಿಖಿಲ್‌ನನ್ನು ಗೆಲ್ಲಿಸಿ ಎಂದು ಹೆಚ್‌ಡಿ ಕುಮಾರಸ್ವಾಮಿ (HD Kumaraswamy) ಹೇಳಿದರು.

    ಈ ಬಗ್ಗೆ ರಾಮನಗರದಲ್ಲಿ (Ramanagara) ಮಾತನಾಡಿದ ಅವರು, 2006ರ ಆಡಳಿತ ಸುವರ್ಣಯುಗ ಆಗಿತ್ತು, ಆ ಸರ್ಕಾರದ ಆಡಳಿತವನ್ನು ಜನ ಈಗಲೂ ಸ್ಮರಿಸಿಕೊಳ್ಳುತ್ತಾರೆ. ರೈತರ ಸಾಲಮನ್ನಾ, ಸಾರಾಯಿ ನಿಷೇಧ, ಲಾಟರಿ ನಿಷೇಧ, ಸೈಕಲ್ ಭಾಗ್ಯ ಇನ್ನೂ ಅನೇಕ ಕಾರ್ಯಕ್ರಮವನ್ನು ತಂದೆವು. ನಾನು ಯಡಿಯೂರಪ್ಪಗೆ ಅಧಿಕಾರ ಕೊಡಬೇಕು ಇಂದಿದ್ದವನು. ಆದರೆ ಅದನ್ನು ತಪ್ಪಿಸುವ ಕೆಲ ಘಟನೆ ಆಯಿತು. ಯಡಿಯೂರಪ್ಪ ಆಗ ಸಿಎಂ ಆಗದ ತಪ್ಪು ನನ್ನ ಮೇಲೆ ಹಾಕಿಕೊಂಡು ಇಷ್ಟು ವರ್ಷ ನೋವು ಅನುಭವಿಸಿದ್ದೇನೆ. ಆಗ ನನ್ನ ಮನಸಲ್ಲಿ ಯಡಿಯೂರಪ್ಪಗೆ ಅಧಿಕಾರ ಕೊಡಬಾರದು ಎಂದು ಎಳ್ಳಷ್ಟೂ ಇರಲಿಲ್ಲ.ಅದೇ ರೀತಿಯ ಸುವರ್ಣ ಯುಗದ ಆಡಳಿತ ಮತ್ತೆ ಬರಲಿದೆ, ನಿಖಿಲ್‌ನ್ನು ಅದಕ್ಕಾಗಿ ಗೆಲ್ಲಿಸಿ ಕಳಿಸಿಕೊಡಿ ಎಂದು ಹೇಳಿದರು.

    ಎರಡನೇ ಬಾರಿಗೆ ಬಿಜೆಪಿ (BJP) ಜೆಡಿಎಸ್ (JDS) ಹೊಂದಾಣಿಕೆ ಆಗಿದೆ. ಮುಂದೆ ನಾವಿಬ್ಬರೂ ಅಣ್ಣತಮ್ಮಂದಿರಂತೆ ಶಾಶ್ವತವಾಗಿ ಹೋಗುವ ಸಲುವಾಗಿ ಈ ಸಂಬಂಧ ಬೆಸೆದಿದ್ದೇವೆ. ನಮ್ಮ ವೈಯಕ್ತಿಕ ಹಿತಕ್ಕೆ ಅಲ್ಲ, ಜನರಿಗಾಗಿ ರಾಜ್ಯದ ಸಮಸ್ಯೆಗಳನ್ನು ಬಗೆಹರಿಸಲು ಒಂದಾಗಿದ್ದೇವೆ. ಕಾಂಗ್ರೆಸ್ ನಮ್ಮನ್ನ ಯಾವ ರೀತಿ ನಡೆದುಕೊಳ್ತೋ ಆಗ, ಯಡಿಯೂರಪ್ಪ 2006ರಲ್ಲಿ ಜತೆ ಸೇರಿ ಸರ್ಕಾರ ಮಾಡಿದ್ದೆವು. ಅವರು ಹಿರಿಯರಾಗಿದ್ದರು. 2006ರಲ್ಲಿ ಅವರೇ ಸಿಎಂ ಆಗಬಹುದಿತ್ತು, ಆದರೆ ನನಗೆ ಅವಕಾಶ ಮಾಡಿಕೊಟ್ಟರು. ನನ್ನನ್ನು ಜನ ಈಮಟ್ಟಕ್ಕೆ ಗುರುತಿಸಲು ರಾಮನಗರದ ಜನ, ಯಡಿಯೂರಪ್ಪ ಮತ್ತವರ ನಾಯಕರು ಕಾರಣ ಎಂದು ಸ್ಮರಿಸಿಕೊಂಡರು. ಇದನ್ನೂ ಓದಿ: Manipur | ಭದ್ರತಾ ಪಡೆಗಳೊಂದಿಗೆ ಭಾರಿ ಗುಂಡಿನ ಚಕಮಕಿ – 11 ಶಂಕಿತ ಕುಕಿ ಬಂಡುಕೋರರು ಬಲಿ!

    ದೇವೇಗೌಡರ ಮೇಲೆ ಮೋದಿಯವರೇ ಸುಳ್ಳುಗಾರ ಎಂದು ಆರೋಪ ಮಾಡಿದ್ದರು ಅಂತ ಸಿದ್ದರಾಮಯ್ಯ ಹೇಳುತ್ತಾರೆ. ಮೋದಿಯವರು ದೇವೇಗೌಡರ ಮೇಲೆ ಅಪಾರ ಅಭಿಮಾನ ಇಟ್ಟಿದ್ದಾರೆ. ಹೌದು ದೇವೇಗೌಡರ ಬಗ್ಗೆ ಮೋದಿಯವರು ಹಾಗೆ ಟೀಕೆ ಮಾಡಿದ್ದರು. ಆದರೆ ದೇವೇಗೌಡರ ಕೆಲಸ ಸಾಧನೆಗಳನ್ನು ನೋಡಿ ಅವರ ಜೊತೆ ಮೋದಿ ಕೈಜೋಡಿಸಿದ್ದಾರೆ. ಕೇಂದ್ರದ ಮಂತ್ರಿಯಾದ ನನ್ನ ಮೇಲೆಯೇ ಎಫ್‌ಐಆರ್ ಹಾಕಿಸುತ್ತಿದ್ದಾರೆ. ಒಬ್ಬ ಪೊಲೀಸ್ ಅಧಿಕಾರಿ ನಿಮ್ಮ ಕಚೇರಿ ಸರ್ಚ್ ಮಾಡಬೇಕು ಅಂತ ರಾಜ್ಯಪಾಲರ ಕಚೇರಿಗೆ ಪತ್ರ ಬರೆದಿದ್ದರು. ಇದನ್ನು ನಾನು ಪ್ರಸ್ತಾಪ ಮಾಡಿದ್ದಕ್ಕೆ ಎಫ್‌ಐಆರ್ ಹಾಕಿದ್ದಾರೆ ಎಂದು ಹೇಳಿದರು. ಇದನ್ನೂ ಓದಿ: ರಾಹುಲ್‌ ಗಾಂಧಿಗೆ ಮತ್ತೆ ಸಂಕಷ್ಟ – FIR ದಾಖಲಿಸುವಂತೆ ಚುನಾವಣಾ ಆಯೋಗಕ್ಕೆ ಬಿಜೆಪಿ ದೂರು

    ಈ ಸರ್ಕಾರದ ಸಾಲ ಇನ್ನೂ ಜಾಸ್ತಿ ಆಗಲಿದೆ. ಗ್ಯಾರಂಟಿಗಳಿಗೆ 52 ಸಾವಿರ ಕೋಟಿ ಕೊಟ್ರಲ್ಲ, ಎಲ್ಲಿಂದ ಕೊಟ್ರಿ? ನೀವು ಈಗ ಸಾಲ ಮಾಡಿ ಹೋಗ್ತೀರಿ, ಅದು ಜನರ ಮೇಲೆ ಹೊರೆಯಾಗಿ ಬೀಳುತ್ತದೆ. ಇವರ ಅವಧಿಯಲ್ಲಿ ಅಭಿವೃದ್ಧಿ ಎಲ್ಲಿದೆ? ಜನ ಹೇಗೆ ಬದುಕಬೇಕು? ಜನರ, ರೈತರ ಕಷ್ಟ ಕೇಳುತ್ತಿಲ್ಲ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ಹರಿಹಾಯ್ದರು. ಇದನ್ನೂ ಓದಿ: ಶಿಗ್ಗಾಂವಿ ʻಕೈʼ ಅಭ್ಯರ್ಥಿ ಯಾಸೀರ್ ಖಾನ್ ಮೇಲೆ ರೌಡಿಶೀಟರ್ ಕೇಸ್‌ ಇದೆ: ಎಸ್ಪಿ ಅಂಶುಕುಮಾರ್ ಆರೋಪ

    ನಿಖಿಲ್ ಅಭ್ಯರ್ಥಿಯಾಗಿ ನಿಲ್ಲಲ್ಲ ಅಂತ ಕಣ್ಣೀರು ಹಾಕಿದ. ಪಕ್ಷದ ಮರ್ಯಾದೆ ಅಂತ ಬಿ ಫಾರಂ ಕೊಟ್ಟು ನಾವೇ ನಿಲ್ಲಿಸಿದ್ದೇವೆ. ಇಂದಿನಿಂದ ನಾನು ನಿಖಿಲ್‌ನನ್ನ ಚನ್ನಪಟ್ಟಣದ ಜನರ ಮಡಿಲಿಗೆ ಹಾಕಿದ್ದೇನೆ. ನಿಖಿಲ್ ಹೊರಗಿನ ಅಭ್ಯರ್ಥಿ ಅಂತಾರೆ, ಆದರೆ ಅದೆಲ್ಲೋ ಉತ್ತರ ಭಾರತದಲ್ಲಿ ಹುಟ್ಟಿದ ರಾಹುಲ್, ಪ್ರಿಯಾಂಕ ಕೇರಳಕ್ಕೆ ಬರುತ್ತಾರೆ. ನಾವು ಈ ನೆಲದ ಮಕ್ಕಳು, ನಿಖಿಲ್ ಈಮಣ್ಣಿನ ಮಗ. ನಾವು ಇಲ್ಲಿ ನಿಲ್ಲಲು ಇವರ ಅಪ್ಪಣೆ ಬೇಕಾ? ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಪಟಾಕಿ ಸಿಡಿಸುವುದು ಮೂಲಭೂತ ಹಕ್ಕು ಎನ್ನುವವರು ಕೋರ್ಟ್‌ಗೆ ಬರಲಿ – ಶಾಶ್ವತ ಪಟಾಕಿ ನಿಷೇಧದ ಬಗ್ಗೆ ಪ್ರಸ್ತಾಪಿಸಿದ ಸುಪ್ರೀಂ

    ಬಿಜೆಪಿ ಜೆಡಿಎಸ್ ನಡುವೆ ಹಾಲು ಜೇನಿನ ಸಂಬಂಧ ಇದೆ. ಇವತ್ತು ನಡ್ಡಾ ಅವರು ನಿಖಿಲ್ ಬಗ್ಗೆ ಚನ್ನಪಟ್ಟಣದ (Channapatna) ಜನಕ್ಕೆ ದೆಹಲಿಯಿಂದ ನಿಖಿಲ್ ಗೆಲ್ಲಿಸಿ ಅಂತ ನಡ್ಡಾ ಅವರು ಸಂದೇಶ ಕಳಿಸಿದ್ದಾರೆ. ನಿಖಿಲ್ ಭಾಷಣದಲ್ಲಿ ನಮ್ಮನ್ನೆಲ್ಲ ಓವರ್ ಟೇಕ್ ಮಾಡಿದ್ದಾನೆ. ದೇವರೇ ಅವನಿಗೆ ಅವಕಾಶ ಕೊಟ್ಟಿದ್ದಾನೆ. ಒಂದು ಅವಕಾಶ ನಿಖಿಲ್‌ಗೆ ಕೊಟ್ಟು ಗೆಲ್ಲಿಸಿ, ಚನ್ನಪಟ್ಟಣದ ಮನೆ ಮಗನಾಗಿ ಕೆಲಸ ಮಾಡ್ತಾನೆ. ಚನ್ನಪಟ್ಟಣದಲ್ಲಿ ಕಾಂಗ್ರೆಸ್ ನಿಂದ ಕೂಪನ್ ಹಂಚೋದು, ಕಾರ್ಡ್ ಹಂಚೋದು ಮಾಡ್ತಿದ್ದಾರೆ. ಚನ್ನಪಟ್ಟಣದ ಜನ ಇವರ ಆಮಿಷಕ್ಕೆ ಬಲಿಯಾಗಲ್ಲ ಅನ್ನುವ ವಿಶ್ವಾಸ ನನಗಿದೆ ಎಂದರು. ಇದನ್ನೂ ಓದಿ: Bengaluru| ಬೈಕ್ ಡಿಕ್ಕಿ ಹೊಡೆದು 8ರ ಬಾಲಕ ಸಾವು