Tag: jds

  • ನಾನು, ನನ್ನ ಮಗ ಜೈಲಿಗೆ ಹೋಗುವಂತಹ ತಪ್ಪು ಮಾಡಿಲ್ಲ: ಹೆಚ್.ಡಿ.ರೇವಣ್ಣಗೆ ಜಿಟಿಡಿ ತಿರುಗೇಟು

    ನಾನು, ನನ್ನ ಮಗ ಜೈಲಿಗೆ ಹೋಗುವಂತಹ ತಪ್ಪು ಮಾಡಿಲ್ಲ: ಹೆಚ್.ಡಿ.ರೇವಣ್ಣಗೆ ಜಿಟಿಡಿ ತಿರುಗೇಟು

    – ರೇವಣ್ಣ ಅವರೇ ನನ್ನ ಕುಟುಂಬವೇ ಬೇರೆ ನಿಮ್ಮದೇ ಬೇರೆ ಎಂದು ಟಾಂಗ್

    ಮೈಸೂರು: ನಾನು ಮತ್ತು ನನ್ನ ಮಗ ಜೈಲಿಗೆ ಹೋಗುವಂತಹ ಯಾವ ತಪ್ಪು ಮಾಡಿಲ್ಲ ಎಂದು ಮಾಜಿ ಸಚಿವ ಹೆಚ್.ಡಿ.ರೇವಣ್ಣಗೆ ಮಾಜಿ ಸಚಿವ ಜಿ.ಟಿ.ದೇವೇಗೌಡ ತಿರುಗೇಟು ನೀಡಿದರು.

    ಜಿ.ಟಿ.ದೇವೇಗೌಡ ಮತ್ತು ಅವರ ಮಗನನ್ನು ಕಾಂಗ್ರೆಸ್ ಸರ್ಕಾರ ಜೈಲಿಗೆ ಕಳುಹಿಸಲು ಮುಂದಾಗಿತ್ತು ಎಂಬ ಹೆಚ್.ಡಿ.ರೇವಣ್ಣ ಹೇಳಿಕೆಗೆ ಮೈಸೂರಿನಲ್ಲಿ ಜಿಟಿಡಿ ಟಾಂಗ್ ಕೊಟ್ಟರು. ಕ್ಷೇತ್ರದ ಜನರ ಸೇವೆ ಮಾಡುವುದು ಮಾತ್ರ ನನ್ನ ತಲೆಯಲ್ಲಿ ಇರುವುದು. ಅದು ಬಿಟ್ಟರೆ ನನ್ನ ತಲೆಯಲ್ಲಿ ಬೇರೆ ಯೋಚನೆ ಇಲ್ಲ. ನನ್ನ ತಂದೆ ಪಟೇಲರು. ಅವರ ಮೇಲೆ ಒಂದೇ ಒಂದು ಪೊಲೀಸ್ ಕೇಸ್ ಇರಲಿಲ್ಲ. ನಾನು ಸಾರ್ವಜನಿಕ ಜೀವನಕ್ಕೆ ಬಂದು 54 ವರ್ಷವಾಗಿದೆ. ನನ್ನ ಮೇಲೆ ಇದುವರೆಗೆ ಒಂದೇ ಒಂದು ಕೇಸ್ ಕೂಡ ಪೊಲೀಸ್ ಠಾಣೆಯಲ್ಲಿ ಇಲ್ಲ. ನನ್ನ ಮಗನ ಮೇಲೂ ಇಲ್ಲ ಎಂದು ಸ್ಪಷ್ಟಪಡಿಸಿದರು.

    ರಾಜ್ಯ ಗೃಹ ಮಂಡಳಿ ಅಧ್ಯಕ್ಷನಾಗಿದ್ದಾಗ ಜೆಡಿಎಸ್ – ಕಾಂಗ್ರೆಸ್ ಇಬ್ಬರು ಸೇರಿ ಅದರಲ್ಲಿ ಅವ್ಯವಹಾರ ಆಗಿದೆ ಎಂದು ತನಿಖೆ ಮಾಡಿಸಿದ್ದರು ಅಷ್ಟೆ. ನಾನು ಇದುವರೆಗೆ ಯಾರಿಂದಲೂ ನನ್ನ ರಕ್ಷಣೆ ಮಾಡಿ ಎಂದು ದೂರವಾಣಿ ಕರೆ ಮಾಡಿಸಿಲ್ಲ. ಕುಮಾರಸ್ವಾಮಿಯಿಂದ ನಾನು ಯಾವುದೇ ಕರೆ ಮಾಡಿಸಿ ನನ್ನ ರಕ್ಷಣೆ ಮಾಡಿಸಿಕೊಂಡಿಲ್ಲ. ನಾನು ನನ್ನ ಮಗ ಬಂಧನವಾಗುವಂತಹ ಯಾವ ಅಪರಾಧವೂ ಮಾಡಿಲ್ಲ ಟಾಂಗ್ ಕೊಟ್ಟರು.

    ರೇವಣ್ಣ ಅವರೇ ನನ್ನ ಕುಟುಂಬವೇ ಬೇರೆ ನಿಮ್ಮದೇ ಬೇರೆ. ನಾನು ಬೆಳೆದಿರುವ ಪರಿಸರವೇ ಬೇರೆ. ನಾನು ನನ್ನ ಮಗ ಯಾವತ್ತೂ ಆ ರೀತಿಯ ತಪ್ಪು ಮಾಡಿಲ್ಲ. ನಾನು ನನ್ನ ಮಗ ಯಾವ ಅಪರಾಧವೂ ಮಾಡಿಲ್ಲ. ಬಂಧಿಸುವಂತಹ ಪ್ರಶ್ನೆಯೆ ಬಂದಿಲ್ಲ. ಸಿದ್ದರಾಮಯ್ಯ ಸೇರಿದಂತೆ ಯಾವ ಸಿಎಂ ಕೂಡ ನನ್ನ ಬಂಧಿಸುವಂತೆ ಹೇಳಿಲ್ಲ. ಸಿದ್ದರಾಮಯ್ಯ ಸೇಡು ತೀರಿಸಿಕೊಳ್ಳಲು ರಾಜಕೀಯ ಮಾಡಿದ್ದಾರೆ. ಆದರೆ ಬಂಧಿಸುವಂತಹ ರೀತಿ ವರ್ತಿಸಿಲ್ಲ. ರೇವಣ್ಣ ಯಾಕೆ ಈ ರೀತಿ ಹೇಳಿದ್ರು ಗೊತ್ತಿಲ್ಲ. ವಿಧಾನಸಭೆ ಅಧಿವೇಶನದಲ್ಲಿ ಅವರು ಸಿಗುತ್ತಾರೆ. ಅವತ್ತೇ ಅವರ ಬಳಿ ಕೇಳಿ ಹೇಳುತ್ತೇನೆ. ನನ್ನ ವಿರುದ್ಧ ಯಾರೂ ಬಂಧಿಸುವಂತಹ ಸೇಡಿನ ರಾಜಕಾರಣ ಮಾಡಿಲ್ಲ. ನಾನು ಕೂಡ ಆ ರೀತಿ ನಡೆದುಕೊಂಡಿಲ್ಲ ಎಂದು ತಿಳಿಸಿದರು.

    ಬಂಧನದ ಸೇಡನ್ನು ಯಾರು ಇಟ್ಟುಕೊಂಡಿಲ್ಲ. ನನ್ನ ತಂದೆ, ನಾನು ಮತ್ತು ನನ್ನ ಮಗ ಯಾವತ್ತೂ ಜೈಲಿಗೆ ಹೋಗುವ ಸ್ಥಿತಿ ಬಂದಿಲ್ಲ. ಮುಂದೆಯೂ ಅಂತಾ ಸ್ಥಿತಿ ಬರುವುದು ಬೇಡ ಅಂತಾ ಪ್ರಾರ್ಥಿಸುತ್ತೇನೆ. ಬಿ.ಎಸ್.ಯಡಿಯೂರಪ್ಪ ಅವರು ಸಿಎಂ ಆಗುವುದನ್ನು ತಪ್ಪಿಸಿದ್ದು ಹೆಚ್.ಡಿ.ರೇವಣ್ಣ. 20 ರಲ್ಲಿ ಬಿ.ಎಸ್.ಯಡಿಯೂರಪ್ಪ ಸಿಎಂ ಆಗಬೇಕಿತ್ತು. ಈ ಬಗ್ಗೆ ರೇವಣ್ಣ ಒಪ್ಪಿಕೊಂಡು ಕ್ಷಮೆ ಕೂಡ ಯಾಚಿಸಿದ್ದಾರೆ. ಅವರು ಡಿಸಿಎಂ ಆಗಬೇಕಿತ್ತು. ಅದು ಆಗುವುದಿಲ್ಲ ಅನ್ನೋ ಕಾರಣಕ್ಕೆ ತಪ್ಪಿಸಿದರು. ದೊಡ್ಡ ಗೌಡರ ಜೊತೆ ಮಾತನಾಡಿ ಯಡಿಯೂರಪ್ಪ ಅವರಿಗೆ ಸಿಎಂ ಸ್ಥಾನ ತಪ್ಪಿಸಿದರು ಎಂದರು.

    ಇನ್ಮುಂದೆ ನಾನು ರಾಜಕೀಯವಾಗಿ ಯಾರ ವಿರುದ್ಧವೂ ಮಾತನಾಡುವುದಿಲ್ಲ. ನನ್ನನ್ನು ಕಳ್ಳ ಅಂದರೂ ಸಹ ನಾನು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ಇದೇ ಕೊನೆ ನಾನು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ತಿಳಿಸಿದರು.

  • ಕಾಂಗ್ರೆಸ್‌ನವರು ಯೋಗೇಶ್ವರ್ ಬಗ್ಗೆ ಎಚ್ಚರಿಕೆಯಿಂದ ಇರಬೇಕು: ಸುರೇಶ್ ಬಾಬು ಸಲಹೆ

    ಕಾಂಗ್ರೆಸ್‌ನವರು ಯೋಗೇಶ್ವರ್ ಬಗ್ಗೆ ಎಚ್ಚರಿಕೆಯಿಂದ ಇರಬೇಕು: ಸುರೇಶ್ ಬಾಬು ಸಲಹೆ

    ಬೆಂಗಳೂರು: ಕಾಂಗ್ರೆಸ್‌ನವರು (Congress) ಯೋಗೇಶ್ವರ್ (CP Yogeshwar) ಬಗ್ಗೆ ಎಚ್ಚರಿಕೆಯಿಂದ ಇರಬೇಕು. ಕಾಂಗ್ರೆಸ್ ಪಕ್ಷದಲ್ಲೇ ಒಡಕು ತರುತ್ತಾರೆ ಹುಷಾರ್ ಎಂದು ಕಾಂಗ್ರೆಸ್ ನಾಯಕರಿಗೆ ಜೆಡಿಎಸ್ ಶಾಸಕಾಂಗ ನಾಯಕ ಸುರೇಶ್ ಬಾಬು (Suresh Babu) ಸಲಹೆ ನೀಡಿದ್ದಾರೆ.

    ನನಗೆ ಟಾಸ್ಕ್ ಕೊಟ್ಟರೆ ಜೆಡಿಎಸ್ (JDS) ಪಕ್ಷವನ್ನ ಖಾಲಿ ಮಾಡ್ತೀನಿ ಎಂಬ ಯೋಗೇಶ್ವರ್ ಮಾತಿಗೆ ವಿಧಾನಸೌಧದಲ್ಲಿ ಮಾತನಾಡಿದ ಅವರು, ನಮ್ಮ ಶಾಸಕರು ಯಾರು ಮಾರಾಟ ಆಗಲ್ಲ. ಹಿಂದೆ ಕಾಂಗ್ರೆಸ್ ಶಾಸಕರನ್ನು ಆಪರೇಷನ್ ಮಾಡುತ್ತೇನೆ ಎಂದು ಹೇಳಿದ್ದು ಯಾರು? 30 ಜನರನ್ನು ಆಪರೇಷನ್ ಮಾಡುತ್ತೇನೆ ಎಂದು ಇದೇ ಯೋಗೇಶ್ವರ್ ಹೇಳಿದ್ದರು. ಕಾಂಗ್ರೆಸ್ ಅಧ್ಯಕ್ಷರಿಗೆ ಯೋಗೇಶ್ವರ್ ಬಗ್ಗೆ ಎಚ್ಚರಿಕೆ ಇರಲಿ. ನಮ್ಮ ಶಾಸಕರು ಯಾರು ಮಾರಾಟಕ್ಕೆ ಇಲ್ಲ. ನಮ್ಮ ಶಾಸಕರು ಮಾರುಕಟ್ಟೆಯಲ್ಲಿ ಸಿಗುವ ವಸ್ತುಗಳು ಅಲ್ಲ. ನಮ್ಮ ಶಾಸಕರು ಸಿದ್ಧಾಂತದ ಮೇಲೆ ರಾಜಕೀಯ ಮಾಡುತ್ತಿದ್ದಾರೆ. ಯಾರು ಪಕ್ಷ ಬಿಟ್ಟು ಹೋಗಲ್ಲ ಎಂದು ತಿರುಗೇಟು ಕೊಟ್ಟರು. ಇದನ್ನೂ ಓದಿ: ಜಿ.ಟಿ.ದೇವೇಗೌಡರಿಗೆ ಪಕ್ಷದ ಮೇಲೆ ಅಸಮಾಧಾನ ಇರೋದು ಸತ್ಯ: ಸುರೇಶ್ ಬಾಬು

    ಅನೇಕರು ಜೆಡಿಎಸ್ ಮುಗಿದೇ ಹೋಯಿತು ಎಂದು ಹೇಳಿದರು. ಮತ್ತೆ ಫಿನಿಕ್ಸ್ನಂತೆ ಎದ್ದು ಬಂತು. ರಾಜ್ಯದಲ್ಲಿ ಜೆಡಿಎಸ್ ಮುಗಿಸೋಕೆ ಎಂದು ಯೋಗೇಶ್ವರ್ ಹೀಗೆ ಹೇಳುತ್ತಿದ್ದಾರೆ. ಜೆಡಿಎಸ್ ಅನ್ನು ತೆಗೆಯೋಕೆ ಯಾರಿಂದಲೂ ಸಾಧ್ಯವಿಲ್ಲ.ಬೊಮ್ಮಾಯಿ, ದೇವೇಗೌಡರು, ಪಟೇಲ್‌ರು ಕಟ್ಟಿದ ಪಕ್ಷ ಇದು. ಇದು ಕಾರ್ಯಕರ್ತರ ಪಕ್ಷ. ಜೆಡಿಎಸ್ ಪಕ್ಷವನ್ನು ಏನು ಮಾಡಲು ಸಾಧ್ಯವಿಲ್ಲ. ಮತ್ತೆ ಜೆಡಿಎಸ್ ಅಧಿಕಾರಕ್ಕೆ ಬರುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇದನ್ನೂ ಓದಿ: ನಾಳೆ ಮಹಾರಾಷ್ಟ್ರ ಬಿಜೆಪಿ, ಶಿವಸೇನೆ, ಎನ್‌ಸಿಪಿ ಮುಖಂಡರಿಂದ ದೆಹಲಿಯಲ್ಲಿ ಅಮಿತ್ ಶಾ ಭೇಟಿ

  • ಜಿ.ಟಿ.ದೇವೇಗೌಡರಿಗೆ ಪಕ್ಷದ ಮೇಲೆ ಅಸಮಾಧಾನ ಇರೋದು ಸತ್ಯ: ಸುರೇಶ್ ಬಾಬು

    ಜಿ.ಟಿ.ದೇವೇಗೌಡರಿಗೆ ಪಕ್ಷದ ಮೇಲೆ ಅಸಮಾಧಾನ ಇರೋದು ಸತ್ಯ: ಸುರೇಶ್ ಬಾಬು

    ಬೆಂಗಳೂರು: ಜಿ.ಟಿ ದೇವೇಗೌಡರಿಗೆ (GT Devegowda) ಅಸಮಾಧಾನ ಇರೋದು ಸತ್ಯ. ದೇವೇಗೌಡರು, ಕುಮಾರಸ್ವಾಮಿ ಜೊತೆ ಮಾತನಾಡಿದರೆ ಎಲ್ಲವೂ ಸರಿ ಆಗಲಿದೆ ಎಂದು ಜೆಡಿಎಸ್ (JDS)  ಶಾಸಕಾಂಗ ನಾಯಕ ಸುರೇಶ್ ಬಾಬು (Suresh Babu) ತಿಳಿಸಿದ್ದಾರೆ.

    ಕುಮಾರಸ್ವಾಮಿ ವಿರುದ್ಧ ಜಿಟಿ ದೇವೇಗೌಡ ಅಸಮಾಧಾನ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಜಿಟಿ ದೇವೇಗೌಡರಿಗೆ ಅಸಮಾಧಾನ ಇರೋದು ನಿಜ. ಅವರಿಗೆ ಸ್ಥಾನಮಾನದ ಬಗ್ಗೆ ಅಸಮಾಧಾನ ಇದೆ ಎಂದರು. ಇದನ್ನೂ ಓದಿ: ನಾಳೆ ಮಹಾರಾಷ್ಟ್ರ ಬಿಜೆಪಿ, ಶಿವಸೇನೆ, ಎನ್‌ಸಿಪಿ ಮುಖಂಡರಿಂದ ದೆಹಲಿಯಲ್ಲಿ ಅಮಿತ್ ಶಾ ಭೇಟಿ

    ಇವತ್ತು ನಾನು ಸುದ್ದಿಗೋಷ್ಠಿಗೆ ಬರಲು ಹೇಳಿದ್ದೆ, ಅವರು ಬರಲಿಲ್ಲ. ಚನ್ನಪಟ್ಟಣ ಚುನಾವಣೆ ಸಮಯದಲ್ಲಿ ಪ್ರಚಾರಕ್ಕೆ ಬರುವಂತೆ ದೇವೇಗೌಡ ಕರೆ ಮಾಡಿದ್ದು ನಿಜ. ಆದರೆ ಅವರು ಬರಲಿಲ್ಲ ಎಂದು ಸ್ಪಷ್ಟಪಡಿಸಿದರು. ಇದನ್ನೂ ಓದಿ: ಬಿಜೆಪಿಗೆ ಸಿಎಂ ಪಟ್ಟ ಕೊಟ್ಟ ಶಿಂಧೆ – ಫಡ್ನಾವೀಸ್‌ ಮುಂದಿನ ಮುಖ್ಯಮಂತ್ರಿ?

  • ಜೆಡಿಎಸ್‌ನ ಯಾವ ಶಾಸಕರೂ ಕಾಂಗ್ರೆಸ್ ಸೇರಲ್ಲ: ಬಿಎನ್ ರವಿಕುಮಾರ್

    ಜೆಡಿಎಸ್‌ನ ಯಾವ ಶಾಸಕರೂ ಕಾಂಗ್ರೆಸ್ ಸೇರಲ್ಲ: ಬಿಎನ್ ರವಿಕುಮಾರ್

    -ಸಿಪಿವೈ ಕುತಂತ್ರದಿಂದ ಗೆಲುವು ಸಾಧಿಸಿದ್ದಾರೆ

    ಚಿಕ್ಕಬಳ್ಳಾಪುರ: 18 ಮಂದಿ ಜೆಡಿಎಸ್ (JDS) ಶಾಸಕರ ಪೈಕಿ ಯಾರೊಬ್ಬರೂ ಕೂಡ ಕಾಂಗ್ರೆಸ್ (Congress) ಸೇರೋದಿಲ್ಲ ಎಂದು ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದ ಶಾಸಕ ರವಿಕುಮಾರ್ (BN Ravikumar) ಹೇಳಿದರು.

    ಶಾಸಕರ ಸ್ವಗ್ರಾಮ ಮೇಲೂರು ಗ್ರಾಮದಲ್ಲಿ ನಡೆದ ಕನ್ನಡ ರಾಜ್ಯೋತ್ಸವದಲ್ಲಿ ಭಾಗಿಯಾಗಿ ನಂತರ ‘ಪಬ್ಲಿಕ್ ಟಿವಿ’ ಜೊತೆ ಮಾತನಾಡಿದ ಅವರು, 18 ಶಾಸಕರ ಪೈಕಿ ಯಾರೂ ಕೂಡ ಕಾಂಗ್ರೆಸ್ ಸೇರೋದಿಲ್ಲ. ಒಬ್ಬರೂ ಸಹ ಪಕ್ಷ ಬಿಡೋದಿಲ್ಲ. ಪಕ್ಷದ ವಿರುದ್ಧವಾಗಿ ನಡೆದುಕೊಳ್ಳುವವರಿಲ್ಲ ಎಂದು ಸ್ಪಷ್ಟಪಡಿಸಿದರು. ಇದನ್ನೂ ಓದಿ: ಸಾವಿನಲ್ಲೂ ಒಂದಾದ ದಂಪತಿ – ಪತಿಯ ಸಾವಿನ ಸುದ್ದಿ ಕೇಳಿ ಕುಸಿದು ಬಿದ್ದು ಪತ್ನಿ ಸಾವು

    ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ (CP Yogeshwar) ಕುತಂತ್ರದಿಂದ ಗೆಲುವು ಸಾಧಿಸಿದ್ದಾರೆ. ಎರಡು ಸಮುದಾಯ ಕಾಂಗ್ರೆಸ್ ಪರ ಇದ್ದ ಕಾರಣ ಕಾಂಗ್ರೆಸ್‌ಗೆ ಗೆಲುವಾಗಿದೆ. ಯೋಗೇಶ್ವರ್ ಯಾವ ಯಾವ ಸಮಯದಲ್ಲಿ ಎಲ್ಲಿ ಇದ್ದವರು, ಯಾವ ಯಾವ ಪಕ್ಷದಿಂದ ಪಕ್ಷಾಂತರ ಮಾಡಿ ಮಂತ್ರಿ ಆದರು ಅನ್ನೋದು ಗೊತ್ತಿದೆ. ಯೋಗೇಶ್ವರ್ ಹೇಳುವ ಹಾಗೆ ಜೆಡಿಎಸ್ ಪಕ್ಷದ ಅವನತಿ ಸಾಧ್ಯ ಇಲ್ಲ ಎಂದು ಕಿಡಿಕಾರಿದರು. ಇದನ್ನೂ ಓದಿ: ಬಿಪಿಎಲ್ ಕಾರ್ಡ್‌ದಾರರಿಗೆ ಗುಡ್ ನ್ಯೂಸ್

    ಇದು ದೇವೇಗೌಡರು ಕಟ್ಟಿರುವ ಜೆಡಿಎಸ್ ಪಕ್ಷ. ಲಕ್ಷಾಂತರ ಮಂದಿ ಸ್ವಾಭಿಮಾನಿ ಮುಖಂಡರು ಕಾರ್ಯಕರ್ತರು ಇರುವ ಪಕ್ಷ. ದೇಶದಲ್ಲಿ ಕಾಂಗ್ರೆಸ್ ಮುಕ್ತ ಆಗುತ್ತಿದೆ. ಅದಕ್ಕೆ ಮಹಾರಾಷ್ಟ್ರ ಚುನಾವಣೆಯೇ ಸಾಕ್ಷಿ. ಮುಂದೆ ಕರ್ನಾಟಕ ಸಹ ಕಾಂಗ್ರೆಸ್ ಮುಕ್ತ ಆಗಲಿದೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಮದುವೆ ಮಂಟಪದಿಂದ ಫೋಟೊಗ್ರಾಫರ್ ಕಿಡ್ನ್ಯಾಪ್ ಮಾಡಿ ಮಾರಣಾಂತಿಕ ಹಲ್ಲೆ – 8 ಮಂದಿ ಬಂಧನ

    ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಯಾವುದೇ ಅಭಿವೃದ್ಧಿ ಕೆಲಸಗಳನ್ನ ಮಾಡುತ್ತಿಲ್ಲ. ಬದಲಾಗಿ ಜೆಡಿಎಸ್ ಪಕ್ಷ ಮುಗಿಸಬೇಕು ಅನ್ನೋದೇ ಕಾಂಗ್ರೆಸ್ ಸಾಧನೆಯಾಗಿದೆ. ಕಳೆದ ಒಂದೂವರೆ ವರ್ಷದಿಂದ ದೇವೇಗೌಡರ ಕುಟುಂಬ ಮುಗಿಸಲು ಕಾಂಗ್ರೆಸ್ ನಾಯಕರು ಮುಂದಾಗಿದ್ದು, ಹಳೆಯ ಮೈಸೂರು ಭಾಗದಲ್ಲಿ ಜೆಡಿಎಸ್ ಹೋದರೆ ಕಾಂಗ್ರೆಸ್‌ಗೆ ಲಾಭ ಆಗಲಿದೆ ಎಂದು ಹುನ್ನಾರ ನಡೆಸುತ್ತಿದ್ದಾರೆ. ಎಂಪಿ ಚುನಾವಣಾ ಫಲಿತಾಂಶದಿಂದ ಜೆಡಿಎಸ್ ಮುಗಿಸಲು ತೀರ್ಮಾನ ಮಾಡಿದ್ದಾರೆ. ರಾಜ್ಯದ ಹಣ ಲೂಟಿ ಮಾಡಿ ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ತರುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಆಕ್ರೋಶ ಹೊರಹಾಕಿದರು. ಇದನ್ನೂ ಓದಿ: ಯೋಗೇಶ್ವರ್ ನಂಬಿ ನಾವು ಗೆದ್ದು ಬಂದಿಲ್ಲ: ಶಾರದಾ ಪೂರ್ಯನಾಯ್ಕ್ ತಿರುಗೇಟು

  • ಯೋಗೇಶ್ವರ್ ನಂಬಿ ನಾವು ಗೆದ್ದು ಬಂದಿಲ್ಲ: ಶಾರದಾ ಪೂರ್ಯನಾಯ್ಕ್ ತಿರುಗೇಟು

    ಯೋಗೇಶ್ವರ್ ನಂಬಿ ನಾವು ಗೆದ್ದು ಬಂದಿಲ್ಲ: ಶಾರದಾ ಪೂರ್ಯನಾಯ್ಕ್ ತಿರುಗೇಟು

    – ನಾವು ಫೀನಿಕ್ಸ್ ಹಕ್ಕಿಯಂತೆ ಮತ್ತೆ ಎದ್ದು ಬರುತ್ತೇವೆ

    ಶಿವಮೊಗ್ಗ: ನಾವು ನಿಮ್ಮನ್ನು ನಂಬಿ ನಮ್ಮ ಕ್ಷೇತ್ರದಲ್ಲಿ ಗೆದ್ದು ಬಂದಿಲ್ಲ ಎಂದು ಜೆಡಿಎಸ್ (JDS) ಶಾಸಕಿ ಶಾರದಾ ಪೂರ್ಯನಾಯ್ಕ್ (Sharada Puryanaik) ಅವರು ಸಿ.ಪಿ ಯೋಗೇಶ್ವರ್ (C.P Yogeshwar) ಅವರಿಗೆ ತಿರುಗೇಟು ಕೊಟ್ಟಿದ್ದಾರೆ.

    ಶಿವಮೊಗ್ಗದಲ್ಲಿ (Shivamogga) ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಈ ವೇಳೆ, ಜೆಡಿಎಸ್ ಶಾಸಕರನ್ನು ಕಾಂಗ್ರೆಸ್‍ಗೆ ಕರೆದುಕೊಂಡು ಬರುತ್ತೇನೆ ಎಂಬ ಸಿಪಿವೈ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದರು. ಅವರು ಯಾರು? ನಮ್ಮನ್ನು ಕೊಂಡುಕೊಂಡಿದ್ದಾರಾ? ನಾವೇನು ಅವರನ್ನು ನಂಬಿಕೊಂಡು ರಾಜಕಾರಣ ಮಾಡುತ್ತಿದ್ದೇವಾ? ಎಂದು ಪ್ರಶ್ನಿಸಿದ್ದಾರೆ.

    ಶಾಸಕರಾಗಿ ಗೌರವಯುತವಾಗಿ ನಡೆದುಕೊಳ್ಳುವುದನ್ನು ಅವರು ಕಲಿತುಕೊಳ್ಳಬೇಕು. ನಮಗೆ ಟಾಸ್ಕ್ ಕೊಟ್ಟರೆ ಅವರನ್ನು ಸೆಳೆಯುತ್ತೇವೆ. ಇವರನ್ನು ಕರೆದುಕೊಂಡು ಬರುತ್ತೇವೆ ಎನ್ನುವುದನ್ನು ಬಿಡಬೇಕು. ಅವರಿಗೆ ಇದನ್ನೇ ಮಾಡಿ ಅಭ್ಯಾಸ, ಹಾಗಾಗಿ ಅವರು ಇದನ್ನೇ ಹೇಳುತ್ತಾರೆ. ಹೋದ ಕಡೆಯಲ್ಲಿ ಅದನ್ನೇ ನೆನಪಿಸಿಕೊಳ್ಳುತ್ತಾರೆ. ಅಹಂ ಇರುತ್ತದೆಯಲ್ಲ ಹಾಗಾಗಿ ಈ ರೀತಿ ಹೇಳಿಕೆ ಕೊಡುತ್ತಾರೆ. ಯೋಗೇಶ್ವರ್ ಯಾರು ನಮ್ಮ ಪಕ್ಷದ ಬಗ್ಗೆ ತೀರ್ಮಾನ ತೆಗೆದುಕೊಳ್ಳಲು ಎಂದು ಕಿಡಿಕಾರಿದ್ದಾರೆ.

    ನಮ್ಮ ಪಕ್ಷ ಫೀನಿಕ್ಸ್ ಹಕ್ಕಿ ಇದ್ದ ಹಾಗೆ, ನಾವು ಮತ್ತೆ ಎದ್ದು ಬರುತ್ತೇವೆ ಎಂಬ ದೃಢವಾದ ನಂಬಿಕೆ ಇದೆ. ರಾಜಕಾರಣದಲ್ಲಿ ಜೆಡಿಎಸ್‍ಗೆ ಖಂಡಿತವಾಗಿಯೂ ಮುಂದಿನ ದಿನಗಳಲ್ಲಿ ಭವಿಷ್ಯವಿದೆ. ನನ್ನ ಪ್ರಕಾರ ಜೆಡಿಎಸ್‍ನಲ್ಲೆ ಎಲ್ಲರೂ ಇರುತ್ತಾರೆ ಎನ್ನುವ ನಂಬಿಕೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

  • ಕುಮಾರಸ್ವಾಮಿ ರಣಹೇಡಿ, ಮಗನನ್ನೇ ಗೆಲ್ಲಿಸೋಕೆ ಆಗಿಲ್ಲ ಅಂದ್ರೆ ಕೇಂದ್ರ ಸಚಿವನಾಗಿ ಏನು ಪ್ರಯೋಜನ?: ಸಿಪಿವೈ

    ಕುಮಾರಸ್ವಾಮಿ ರಣಹೇಡಿ, ಮಗನನ್ನೇ ಗೆಲ್ಲಿಸೋಕೆ ಆಗಿಲ್ಲ ಅಂದ್ರೆ ಕೇಂದ್ರ ಸಚಿವನಾಗಿ ಏನು ಪ್ರಯೋಜನ?: ಸಿಪಿವೈ

    ರಾಮನಗರ: ಮಗನನ್ನು ಯುದ್ಧ ಭೂಮಿಗೆ ಕಳುಹಿಸಿ ನೀನು ರಣಹೇಡಿ ಆಗಿಬಿಟ್ಟೆ ಎಂದು ಕುರುಕ್ಷೇತ್ರದ ಕಥೆಯಲ್ಲಿ ಬಭ್ರುವಾಹನ ಹೇಳುತ್ತಾನಲ್ಲ. ಇವತ್ತು ಕುಮಾರಸ್ವಾಮಿಯದ್ದು (HD Kumaraswamy) ಕೂಡ ಅದೇ ಪರಿಸ್ಥಿತಿ. ತನ್ನ ಮಗನನ್ನೇ ಗೆಲ್ಲಿಸಿಕೊಂಡು ಬರಲಿಲ್ಲ ಅಂದರೆ ಕೇಂದ್ರ ಸಚಿವ ಆಗಿ ಏನು ಪ್ರಯೋಜನ ಎಂದು ಚನ್ನಪಟ್ಟಣ ನೂತನ ಶಾಸಕ ಸಿಪಿ ಯೋಗೇಶ್ವರ್ (CP Yogeshwar) ಕಿಡಿಕಾರಿದ್ದಾರೆ.

    ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಜೆಡಿಎಸ್ (JDS) ಅವರು ಸೋತು ಸುಣ್ಣ ಆಗಿದ್ದಾರೆ. ಕುಮಾರಸ್ವಾಮಿ ಬಂಡತನ, ಅವರಿಗೆ ಇದ್ರೆ ಈ ಊರು, ಬಿಟ್ಟರೆ ಇನ್ನೊಂದು ಊರು. ಚನ್ನಪಟ್ಟಣದಲ್ಲಿ ಕುಮಾರಸ್ವಾಮಿ ಮಾಡಿರುವ ಅದ್ವಾನ ಸರಿಪಡಿಸಬೇಕು. ಕುಮಾರಸ್ವಾಮಿ ಏನು ಆಸಕ್ತಿ, ಕ್ರಮ ಕೈಗೊಂಡಿಲ್ಲ. ಚನ್ನಪಟ್ಟಣ ನಗರ ಸ್ವಚ್ಛ ಮಾಡುವ ಉದ್ದೇಶದಿಂದ ಎಲ್ಲಾ ನಗರಸಭಾ ಸದಸ್ಯರ ಸಭೆ ಕರೆದಿದ್ದೇನೆ. ಚನ್ನಪಟ್ಟಣ ನಗರ ಬಹಳ ದುಸ್ಥಿತಿ ಇದೆ. ಬಸ್‌ಸ್ಟ್ಯಾಂಡ್, ಕಸ, ಯುಜಿಡಿ ಸಮಸ್ಯೆ ಇದೆ. ಇವೆಲ್ಲವನ್ನೂ ಮೊದಲು ಬಗೆಹರಿಸಬೇಕು. ಇಂದು ಸಭೆ ನಡೆಸಿ ನಿರಂತರವಾಗಿ ತಾಲೂಕು ಅಭಿವೃದ್ಧಿಗೆ ಮುಂದಾಗುತ್ತೇನೆ ಎಂದರು. ಇದನ್ನೂ ಓದಿ: ನಿಖಿಲ್ ಚುನಾವಣೆಯಲ್ಲಿ ಸೋತಿದ್ದಾನೆಯೇ ಹೊರತು ಮನುಷ್ಯನಾಗಿ ಸೋತಿಲ್ಲ: ಅನಿತಾ ಕುಮಾರಸ್ವಾಮಿ

    ಜೆಡಿಎಸ್ ಶಾಸಕರನ್ನು ಕಾಂಗ್ರೆಸ್‌ಗೆ ಕರೆತರುವ ವಿಚಾರವಾಗಿ ಪ್ರತಿಕ್ರಿಯಿಸಿ, ದೇವೇಗೌಡರ ನಾಯಕತ್ವ, ದೇವೇಗೌಡರು ಹುಟ್ಟುಹಾಕಿದ ಪಕ್ಷ ಅದು. ದೇವೇಗೌಡರಿಗೆ ವಯೋಸಹಜ ಇರುವುದರಿಂದ ಪಕ್ಷ ಮುನ್ನಡೆಸಲು ಸಾಧ್ಯ ಆಗುತ್ತಿಲ್ಲ. ಅದಕ್ಕೆ ಪರ್ಯಾಯವಾದ ನಾಯಕತ್ವ ಇಲ್ಲ. ಅದೊಂದು ಕುಟುಂಬ ಪಕ್ಷ. ಕುಮಾರಸ್ವಾಮಿ ಅವರು ಸೋತಿದ್ದಾರೆ. ಅವರ ನಾಯಕತ್ವದಲ್ಲಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕೇವಲ 19 ಸೀಟು ಪಡೆದುಕೊಂಡಿತ್ತು. ಅದೇ ಡಿಕೆ ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷರಾಗಿ 136 ಸೀಟು ಗೆದ್ದಿದ್ದಾರೆ. ಈ ಎರಡು ಹೋಲಿಕೆ ನೋಡಿದರೆ ಕುಮಾರಸ್ವಾಮಿ ನಾಯಕತ್ವ ಕ್ಷೀಣಿಸುತ್ತಿದೆ. ಚನ್ನಪಟ್ಟಣ ಉಪಚುನಾವಣೆ ಫಲಿತಾಂಶವೇ ಇದಕ್ಕೆ ಸಾಕ್ಷಿ ಎಂದು ಹೇಳಿದರು. ಇದನ್ನೂ ಓದಿ: ನಾವು ಯಾರಿಗೂ ಎಚ್ಚರಿಕೆ ಕೊಡದೇ ಜನಜಾಗೃತಿ ಮಾಡುವ ಕೆಲಸ ಮಾತ್ರ ಮಾಡಲಿದ್ದೇವೆ – ಅರವಿಂದ ಲಿಂಬಾವಳಿ

    ಇಡೀ ಕುಟುಂಬವೇ ಹೋರಾಟ ಮಾಡಿದರೂ ಚನ್ನಪಟ್ಟಣ ಗೆಲ್ಲಲು ಸಾಧ್ಯ ಆಗಲಿಲ್ಲ. ಅವರನ್ನು ನಂಬಿರೋ ಕಾರ್ಯಕರ್ತರು, ಬಹಳ ಜನ ಶಾಸಕರು ನೊಂದಿದ್ದಾರೆ. ಏನಾದರೂ ಮನಸು ಮಾಡಿದರೆ ಅವರಿಗೆ ಬೇರೆ ಅವಕಾಶ ತಪ್ಪಿದರೆ ನೋಡಬಹುದು. ಪಕ್ಷವನ್ನೇ ಪಣಕ್ಕಿಟ್ಟು ಹೋರಾಟ ಮಾಡಿದರು. ಒಕ್ಕಲಿಗ ನಾಯಕತ್ವ ಬದಲಾವಣೆ ಆಗಬೇಕು. ಪರ್ಯಾಯವಾಗಿ ನಾಯಕತ್ವ ಹುಡುಕುತ್ತಿದ್ದಾರೆ. ಮುಂದೆ ಯಾರಿಗೆ ಅವಕಾಶ ಸಿಗುತ್ತದೆ ನೋಡೋಣ. ದೇವೆಗೌಡರ ಕುಟುಂಬದಿಂದ ಆಚೆ ಬರಬೇಕು ಅಂತಾ ಸಮುದಾಯ ತೀರ್ಮಾನ ಮಾಡಿದೆ.ಈ ಚುನಾವಣೆ ಫಲಿತಾಂಶದಿಂದಲೇ ಗೊತ್ತಾಗಿದೆ. ಅವರ ಕುಟುಂಬದಲ್ಲಿ ನಡೆದಿರುವ ಹಲವಾರು ಬೆಳವಣಿಗೆಗಳಿಂದ ಸಮುದಾಯ ಬೇಸತ್ತಿದೆ. ಆ ಹಿನ್ನಲೆಯಲ್ಲಿ ಜೆಡಿಎಸ್ ಶಾಸಕರಿಗೆ ನೋವಾಗಿದೆ ಎಂಬ ಅರ್ಥದಲ್ಲಿ ಹೇಳಿದ್ದೇನೆ. ಅವಕಾಶ ಸಿಕ್ಕಿದರೆ ನೋಡೊಣ ಎಂದು ನುಡಿದರು. ಇದನ್ನೂ ಓದಿ: ಬಾಂಗ್ಲಾದಲ್ಲಿ ಈಗ ವಿದ್ಯಾರ್ಥಿಗಳ ಮಧ್ಯೆ ಘರ್ಷಣೆ, ಮೂವರು ಸಾವು – ಆಸ್ಪತ್ರೆಗೆ 35 ಕೋಟಿ ನಷ್ಟ

    ಯೋಗೆಶ್ವರ್ ಕಾಂಗ್ರೆಸ್‌ನಲ್ಲೇ ಉಳಿಯುತ್ತಾರಾ ಎಂಬ ಚರ್ಚೆ ವಿಚಾರವಾಗಿ ಮಾತನಾಡಿದ ಅವರು, ನಾನು ಕಾಂಗ್ರೆಸ್‌ನಲ್ಲೇ ಇರುತ್ತೇನೆ. ನಾನು ಯಾವಾಗ ಕಾಂಗ್ರೆಸ್ ಬಿಡುತ್ತೇನೆ ಎಂದಿದ್ದೇನೆ? ಬಿಜೆಪಿ ಪಕ್ಷದಿಂದ ಆಚೆ ತಳ್ಳಲ್ಪಟ್ಟವನು ನಾನು. ನಾನೇನು ಬಿಜೆಪಿ ಬಿಟ್ಟು ಬರಲಿಲ್ಲ. ಕುಮಾರಸ್ವಾಮಿ, ಯಡಿಯೂರಪ್ಪ ಹಾಗೂ ವಿಜಯೇಂದ್ರ ಪಿತೂರಿಯಿಂದ ನಾನು ಆಚೆ ಬಂದಿದ್ದೇನೆ. ನಾನು ಏನು ಅಲ್ಲಿಂದ, ಇಲ್ಲಿಂದ ಹಾರೋನು ಅಲ್ಲ. ಅನಿವಾರ್ಯ, ರಾಜಕೀಯ ಸ್ಥಿತಿ ನನ್ನನ್ನು ಆ ರೀತಿ ಮಾಡಿದೆ. ನಾನು ಕೊನೆ ದಿನದವರೆಗೂ ಕಾದು ರಾಜಕೀಯ ನಿರ್ಣಯ ತೆಗೆದುಕೊಂಡಿದ್ದೇನೆ. ನಾವು ಕಟ್ಟಿದ ಮನೆಯಿಂದ ಆಚೆ ಹಾಕಿದ ಮೇಲೆ ಬೇರೆ ಮನೆ ಹುಡುಕಿಕೊಳ್ಳಬೇಕು. ನಾನು ಪಕ್ಕಾ ಕಾಂಗ್ರೆಸ್ಸಿಗ, ಪಕ್ಷ ಬಿಡಲ್ಲ ಎಂದು ಸ್ಪಷ್ಟನೆ ನೀಡಿದರು. ಇದನ್ನೂ ಓದಿ: ಸಿಎಂ ಬೇರೆ ಸಮುದಾಯಗಳಿಗೆ ಸ್ಪಂದನೆ ನೀಡುತ್ತಿದ್ದಾರೆ, ನಮ್ಮ ಸಮುದಾಯಕ್ಕೆ ಸ್ಪಂದನೆ ಇಲ್ಲ- ಜಯಮೃತ್ಯುಂಜಯ ಸ್ವಾಮೀಜಿ

  • ಡಿಚ್ಚಿ ಹೊಡಿತಿನಿ ಅಂತ ಬಂದಿದ್ಯಲ್ಲ, ಡೆಪಾಸಿಟ್ ಬಂತಾ?: ಅಶೋಕ್‍ಗೆ ಡಿಕೆಶಿ ತಿರುಗೇಟು

    ಡಿಚ್ಚಿ ಹೊಡಿತಿನಿ ಅಂತ ಬಂದಿದ್ಯಲ್ಲ, ಡೆಪಾಸಿಟ್ ಬಂತಾ?: ಅಶೋಕ್‍ಗೆ ಡಿಕೆಶಿ ತಿರುಗೇಟು

    ಬೆಂಗಳೂರು: ನನ್ನ ಮುಂದೆ ಕನಕಪುರದಲ್ಲಿ ಡಿಚ್ಚಿ ಹೊಡಿತಿನಿ ಅಂತ ಬಂದು ನಿಂತ್ಯಲ್ಲ ಡೆಪಾಸಿಟ್ ಬಂತಾ ಎಂದು ವಿಪಕ್ಷ ನಾಯಕ ಆರ್.ಅಶೋಕ್ (R.Ashok) ಅವರನ್ನು ಡಿಸಿಎಂ ಡಿ.ಕೆ ಶಿವಕುಮಾರ್ (D.K Shivakumar) ವ್ಯಂಗ್ಯವಾಡಿದ್ದಾರೆ.

    ವಿಕಾಸ ಸೌಧದಲ್ಲಿ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಈ ವೇಳೆ, ನಾನು ಒಕ್ಕಲಿಗ ನಾಯಕ ಎಂದು ಎಲ್ಲಿ ಹೇಳಿದ್ದೇನೆ. ಎನಪ್ಪ ಅಶೋಕ, ಅಲ್ಲಲ್ಲ ಅಶೋಕ್ ಅಣ್ಣ. ನನಗಿಂತ ದೊಡ್ಡವನ ಚಿಕ್ಕವನ ಗೊತ್ತಿಲ್ಲ, ಅಶೋಕಣ್ಣ. ಹೌದಪ್ಪ ನನ್ನ ತಮ್ಮ ಸೋತಿದ್ದಾನೆ. ಆದರೆ ಸೋಲಿಸಿದ ಕೊಂಡಿಗಳು ಒಂದೊಂದೆ ಕಳಚಿಕೊಂಡವಲ್ಲ. ರಾಜರಾಜೇಶ್ವರಿ ನಗರದಲ್ಲಿ ಏನಾಯ್ತು? ಚನ್ನಪಟ್ಟಣದಲ್ಲಿ ಏನಾಯ್ತು? ರೆವಿನ್ಯೂ ಮಿನಿಸ್ಟರ್ ಆಗಿ ನನ್ನ ಮುಂದೆ ಕನಕಪುರಕ್ಕೆ ಬಂದು ನಿಂತ್ಯಲ್ಲ ಏನಾಯ್ತು? ಎಂದು ಟಾಂಗ್ ಕೊಟ್ಟಿದ್ದಾರೆ.

    ಬಿಜೆಪಿ (BJP)  ಅವಧಿಯಲ್ಲಿ ರೈತರಿಗೆ ವಕ್ಫ್‍ನಿಂದ ಹೆಚ್ಚು ನೋಟಿಸ್ ಹೋಗಿದೆ ಎಂಬ ವಿಚಾರವಾಗಿ, ಬಿಜೆಪಿ ನಾಯಕರಿಗೆ ಬೇಕಿದ್ದು ಪ್ರಚಾರ. ಅವರ ಮುಖಗಳನ್ನು ಕನ್ನಡಿಯಲ್ಲಿ ನೋಡಿ ಎಂದು ಹೇಳಿದ್ದೇನೆ. ಇನ್ನೂ ಚನ್ನಪಟ್ಟಣ ಚುನಾವಣೆ ಸಂದರ್ಭದಲ್ಲಿ ಕೆಲವು ಹುಡುಗರು ರೈತರ ಪಹಣಿ ಸಂಗ್ರಹ ಮಾಡಿದ್ದಾರೆ. ಅದು ನನ್ನ ಹಳೆಯ ಕ್ಷೇತ್ರ. 2020 ರಲ್ಲಿ ಅಲ್ಲಿ ತಿದ್ದುಪಡಿ ಆಗಿದೆ. ಈಗ ಅದನ್ನು ಮನೆ ಮನೆಗೆ ಹೋಗಿ ಸಂಗ್ರಹ ಮಾಡ್ತಿದ್ದಾರೆ. ಆಂತರಿಕ ಸಮಸ್ಯೆ ಮುಚ್ಚಿಕೊಳ್ಳಲು ಹೀಗೆ ಮಾಡುತ್ತಿದ್ದಾರೆ. ನಾವು ಸತ್ಯಾಂಶವನ್ನು ಬಿಚ್ಚಿಡುತ್ತೇವೆ. ಅವರೆಲ್ಲ ಗೋಮುಖ ವ್ಯಾಘ್ರರು ಎಂದು ತಿರುಗೇಟು ಕೊಟ್ಟಿದ್ದಾರೆ.

    ಮುಸ್ಲಿಂ ಮತಗಳು ಕೈ ಕೊಟ್ಟ ಕಾರಣ ಚನ್ನಪಟ್ಟಣದಲ್ಲಿ ಸೋಲು ಎಂಬ ನಿಖಿಲ್ ಹೇಳಿಕೆ ವಿಚಾರವಾಗಿ, ಕುಮಾರಸ್ವಾಮಿಗೆ ಪಾಪ ಆ ಜನ ಮತ ಹಾಕಿದ್ದರು. ಇವಾಗ ಬಿಜೆಪಿ ಜೊತೆಗೆ ಹೋಗಿರುವಾಗ ಯಾಕೆ ಮತ ಹಾಕ್ತಾರೆ? ಅವರು ಮುಸ್ಲಿಮರನ್ನು ನಂಬಿಲ್ಲ. ಅವರಿಗೆ ಸೀಟ್ ಕೊಟ್ರಾ? ಮಂತ್ರಿ ಮಾಡಿದ್ರಾ? 4% ಮೀಸಲಾತಿ ಕಿತ್ತು ಹಾಕಿದ್ದಾರೆ. ಅವರ ಬಳಿ ಮತ ಕೇಳುವ ಹಕ್ಕು ಅವರಿಗೆ ಇಲ್ಲ. ಈ ಬಗ್ಗೆ ನಿಖಿಲ್ ಅಲ್ಲ, ಇದರ ಬಗ್ಗೆ ದೇವೇಗೌಡರು ಮಾತನಾಡಬೇಕು ಎಂದಿದ್ದಾರೆ.

    ನಾನು ಹೋದರೂ ಕಾಂಗ್ರೆಸ್ ಹೋಗಲ್ಲ, ಯಾರು ಹೋದರು ಕಾಂಗ್ರೆಸ್ ಹೋಗಲ್ಲ. ಕಾಂಗ್ರೆಸ್ ದೇಶವನ್ನು ವಿಭಜನೆ ಮಾಡಲು ಬಿಡಲ್ಲ. ಇನ್ನೂ ಜೆಡಿಎಸ್ (JDS) ಇಬ್ಭಾಗದ ಕುರಿತು ಸಿ.ಪಿ ಯೋಗೇಶ್ವರ್ ಹೇಳಿಕೆ ವಿಚಾರವಾಗಿ, ನನಗೆ ಅದು ಗೊತ್ತಿಲ್ಲ. ಅದರ ಬಗ್ಗೆ ಮಾತನಾಡಲ್ಲ. ಜಿ.ಟಿ ದೇವೇಗೌಡರು ಹಿರಿಯ ನಾಯಕರು. ಅವರು ಆ ಪಕ್ಷಕ್ಕೆ ದೊಡ್ಡ ಕೊಡುಗೆ ಕೊಟ್ಟಿದ್ದಾರೆ. ನಾವು ಈ ಹಿಂದೆ ಆಫರ್ ಮಾಡಿದ್ದೆವು. ಆದರೆ ದಳದಲ್ಲಿ ಇರುತ್ತೇನೆ ಎಂದಿದ್ದರು. ಆದರೆ ಇವಾಗ ಅವರಿಗೆ ಅಸಮಾಧಾನ ಆಗಿದೆ. ಆದರೆ ನನ್ನ ಬಳಿ ಚರ್ಚೆ ಮಾಡಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

    ಮುಡಾ ವಿಚಾರದಲ್ಲಿ ಐಎಎಸ್ ಅಧಿಕಾರಿಯೊಬ್ಬರು 144 ಫೈಲ್ ತಗೆದುಕೊಂಡು ಹೋಗಿದಾರೆ ಎಂಬ ವಿಚಾರವಾಗಿ, ಅದು ನನ್ನ ಗಮನಕ್ಕೆ ಬಂದಿಲ್ಲ. ಅದು ಹೇಗೆ ತಗೆದುಕೊಂಡು ಹೋಗ್ತಾರೆ? ಸರ್ಕಾರಿ ದಾಖಲೆ ಅದು, ಅದೆಲ್ಲಾ ಹೇಗೆ ತಗೆದುಕೊಂಡು ಹೋಗೋಕೆ ಸಾಧ್ಯ? ಲೋಕಾಯುಕ್ತ ವರದಿ ಬಗ್ಗೆ ನನಗೆ ಗೊತ್ತಿಲ್ಲ ಎಂದಿದ್ದಾರೆ.

  • ತೆನೆ ಮನೆಯಲ್ಲಿ ಮತ್ತೆ ಮುಸುಕಿನ ಗುದ್ದಾಟ – ಮದ್ದರೆಯಲು ಅಖಾಡಕ್ಕಿಳೀತಾರಾ ದೊಡ್ಡಗೌಡರು..?

    ತೆನೆ ಮನೆಯಲ್ಲಿ ಮತ್ತೆ ಮುಸುಕಿನ ಗುದ್ದಾಟ – ಮದ್ದರೆಯಲು ಅಖಾಡಕ್ಕಿಳೀತಾರಾ ದೊಡ್ಡಗೌಡರು..?

    ಮೈಸೂರು: ಚನ್ನಪಟ್ಟಣ ಚುನಾವಣೆ ಬಳಿಕ ಜೆಡಿಎಸ್ (JDS) ಪಾಳಯದಲ್ಲಿ ಮತ್ತೆ ಮುಸುಕಿನ ಗುದ್ದಾಟ ಆರಂಭವಾಗಿದೆ. ಪಕ್ಷದ ಹಿರಿಯ ನಾಯಕರ ಆರೋಪ-ಪತ್ಯಾರೋಪ ತಾರಕಕ್ಕೇರಿದೆ. ಜಿಟಿಡಿ ಮುನಿಸಿಗೆ ಮುಲಾಮು ಹಚ್ಚದಿದ್ದರೆ, ಮೈಸೂರು ಭಾಗದಲ್ಲಿ ಜೆಡಿಎಸ್‌ಗೆ ಸಂಘಟನೆ ವಿಚಾರದಲ್ಲಿ ದೊಡ್ಡ ನಷ್ಟ ಗ್ಯಾರಂಟಿ. ಹೀಗಾಗಿ ಮತ್ತೆ ಪಿಚ್‌ಗೆ ಇಳಿಯುತ್ತಾರಾ ಹೆಚ್‌ಡಿ ದೇವೇಗೌಡರು (HD Devegowda) ಎಂಬ ಪ್ರಶ್ನೆ ಮೂಡಿದೆ.

    ಹೌದು, ಒಂದು ಕಾಲದ ದಳಪತಿಗಳ ಭದ್ರಕೋಟೆಯಾಗಿದ್ದ ಚನ್ನಪಟ್ಟಣ ಉಪಚುನಾವಣೆ (Channapatna By Poll) ಬಳಿಕ ಮತ್ತೆ ಜೆಡಿಎಸ್ ಹಿರಿಯ ನಾಯಕರಲ್ಲಿ ಅಸಮಧಾನ ಭುಗಿಲೆದ್ದಿದೆ. ಚನ್ನಪಟ್ಟಣ ಉಪಚುನಾವಣೆ ಸೋಲಿಗೆ ಹೆಚ್‌ಡಿಕೆ ಕಾರಣ, ನಿಖಿಲ್‌ರನ್ನು ನಿಲ್ಲಿಸಲು ಹೇಳಿದ್ದು ಯಾರು? ದೇವೇಗೌಡರಾಗಲಿ ಅಥವಾ ಅವರ ಕುಟುಂಬದವರಾಗಲಿ ನನಗೆ ಚನ್ನಪಟ್ಟಣ ಚುನಾವಣಾ ಪ್ರಚಾರಕ್ಕೆ ಕರೆದೇ ಇಲ್ಲ ಎಂದು ಜಿಟಿಡಿ ಬೇಸರ ವ್ಯಕ್ತಪಡಿಸಿದ್ದು, ಹೆಚ್‌.ಡಿ ಕುಮಾರಸ್ವಾಮಿಗೆ ನನ್ನ ಮಗ ಬೇಕು… ನಾನು ಬೇಡದವನಾಗಿದ್ದೇನೆ. ನೋವುಂಡು ಜೆಡಿಎಸ್‌ನಲ್ಲಿ ಇದ್ದೇನೆ ಎಂದು ಜಿಟಿಡಿ ಅಸಮಾಧಾನ ಹೊರಹಾಕಿದ್ದಾರೆ. ಇದನ್ನೂ ಓದಿ: ಲಿವ್‌-ಇನ್‌ ಗೆಳತಿಯನ್ನ ಸುಟ್ಟು ಕೊಂದು ಬೆಂಕಿ ಅವಘಡ ಅಂತ ನಾಟಕವಾಡಿದ್ದ ಉದ್ಯಮಿ ಅಂದರ್‌

    ಇನ್ನು, ಅನಿವಾರ್ಯ ಸ್ಥಿತಿಯಲ್ಲಿ ನಿಖಿಲ್‌ರನ್ನು ಕಣಕ್ಕೆ ಇಳಿಸಬೇಕಾಯಿತು. ಜಿ.ಟಿ ದೇವೇಗೌಡರನ್ನು ಖುದ್ದು ಹೆಚ್.ಡಿ ದೇವೇಗೌಡರೆ ಫೋನ್ ಮಾಡಿ ಪ್ರಚಾರಕ್ಕೆ ಬರುವಂತೆ ಕರೆದಿದ್ದರು ಅವರು ಬರಲಿಲ್ಲ. ನಾವು ಯಾರು ಜಿ.ಟಿ. ದೇವೇಗೌಡರ ರಾಜಕೀಯ ನಿವೃತ್ತಿ ಬಯಸಿಲ್ಲ. ಅವರು ಇನ್ನೂ ಬಹಳ ವರ್ಷ ರಾಜಕಾರಣ ಮಾಡಬೇಕು. ನನ್ನಿಂದ ತೊಡಕಾಗುವುದಾದ್ರೆ ಚಾಮುಂಡಿಬೆಟ್ಟಕ್ಕೆ ಬರಲಿ ಎಂದು ಸಾರಾ ಮಹೇಶ್ ಹೇಳಿದ್ದಾರೆ.

    ಇತ್ತ, ಮಗ ಸೋತ ನೋವಿನಲ್ಲಿದ್ದ ಹೆಚ್‌ಡಿಕೆಗೆ ಗಾಯದ ಮೇಲೆ ಬರೆ ಎಂಬಂತೆ ಜಿಟಿಡಿ ಮಾತು ಘಾಸಿ ಮಾಡಿದ್ರೆ, ನಿಖಿಲ್ ಮಾತ್ರ ನಾನು ಎಲ್ಲಿ ಕಳೆದುಕೊಂಡಿದ್ದೇನೋ ಅಲ್ಲಿಯೇ ಹುಡುಕುತ್ತೇನೆ. ಇಲ್ಲಿಯೇ ಮುಂದಿನ ರಾಜಕೀಯ ಮುಂದುವರಿಸುತ್ತೇನೆ. ನಾನು ಕಾರ್ಯಕರ್ತರ ಜೊತೆಗಿರುತ್ತೇನೆ ಎಂದಿದ್ದಾರೆ. ಇದನ್ನೂ ಓದಿ: ಮಧ್ಯಪ್ರದೇಶ | ಗೆಳೆಯನಿಗೆ ಥಳಿಸಿ 15 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಟ್ರಕ್ ಚಾಲಕ

    ಒಟ್ಟಿನಲ್ಲಿ ಜಿಟಿಡಿ ಮುನಿಸಿಗೆ ಮುಲಾಮು ಹಚ್ಚದಿದ್ದರೆ ಮೈಸೂರು ಭಾಗದಲ್ಲಿ ಜೆಡಿಎಸ್‌ಗೆ ದೊಡ್ಡ ನಷ್ಟ ಅಗುವುದು ಗ್ಯಾರಂಟಿ. ಮಗನ ಜೊತೆ ಪ್ರೀತಿ ಅಪ್ಪನ ಜೊತೆ ಮುನಿಸು, ಹೆಚ್‌ಡಿಕೆಯ ಈ ನಡೆಯಿಂದ ಜಿಟಿಡಿ ಹಾಗೂ ಸಿಎಂ ಸಿದ್ದರಾಮಯ್ಯ ಹತ್ತಿರವಾಗಲು ಅವಕಾಶ ಮಾಡಿಕೊಟ್ಟರಾ..? ಜಿಟಿಡಿ ಮುನಿಸಿಗೆ ಮತ್ತೆ ಮುಲಾಮು ಹಚ್ಚಲು ದೊಡ್ಡಗೌಡರೇ ಪಿಚ್‌ಗೆ ಇಳಿಯುತ್ತಾರಾ ಕಾದು ನೋಡಬೇಕು.

  • ರಕ್ತದಲ್ಲಿ ಪತ್ರ ಬರೆದು ನಿಖಿಲ್‍ಗೆ ಧೈರ್ಯ ತುಂಬಿದ ಅಭಿಮಾನಿ!

    ರಕ್ತದಲ್ಲಿ ಪತ್ರ ಬರೆದು ನಿಖಿಲ್‍ಗೆ ಧೈರ್ಯ ತುಂಬಿದ ಅಭಿಮಾನಿ!

    ಚಿಕ್ಕಮಗಳೂರು: ಚನ್ನಪಟ್ಟಣದ ಪರಾಜಿತ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ (Nikhil Kumaraswamy) ಅವರಿಗೆ ಕಡೂರಿನ ಅಭಿಮಾನಿಯೊಬ್ಬರು ರಕ್ತದಲ್ಲಿ ಪತ್ರ ಬರೆದು ಧೈರ್ಯ ತುಂಬಿದ್ದಾರೆ.

    ಕಡೂರು ಮೂಲದ ಹರ್ಷಿತ್ ಎಂಬವರು ಪತ್ರ ಬರೆದಿದ್ದಾರೆ. ಪತ್ರದಲ್ಲಿ, ನೀವು ಸೋತಿರಬಹುದು, ಆದರೆ ಜನರ ಮನಸ್ಸಿನಲ್ಲಿದ್ದೀರಿ ಎಂದಿದ್ದಾರೆ. ಎಷ್ಟೋ ನಮ್ಮಂತಹ ನಿಷ್ಠಾವಂತ ಕಾರ್ಯಕರ್ತರಲ್ಲಿ ನಮ್ಮ ಪಕ್ಷದ ಉಸಿರಿದೆ. ಒಂದಲ್ಲ ಒಂದು ದಿನ ಒಳ್ಳೆತನ ಗೆದ್ದೆ ಗೆಲ್ಲಲಿದೆ ಎಂದು ಉಲ್ಲೇಖಿಸಿದ್ದಾರೆ.

    ನಿಮ್ಮ ಜೊತೆ ನಾವಿದ್ದೇವೆ ದೈರ್ಯವಾಗಿರಿ. ಜೆಡಿಎಸ್ (JDS) ಎಂದು ರಕ್ತದಲ್ಲಿ ಬರೆದಿದ್ದಾರೆ.

    ಚನ್ನಪಟ್ಟಣದಲ್ಲಿ ಕಾಂಗ್ರೆಸ್‌ನಿಂದ ಸಿ.ಪಿ ಯೋಗೇಶ್ವರ್ 1,12,642 ಮತಗಳನ್ನು ಪಡೆದು ಗೆಲವು ಪಡೆದಿದ್ದರು.  ಎನ್‌ಡಿಎ ಅಭ್ಯರ್ಥಿ ನಿಖಿಲ್ 87,229 ಮತ ಪಡೆದು ಸೋತಿದ್ದರು.

  • ರಾಜ್ಯದ ಜನ ಕಾಂಗ್ರೆಸ್ ಪರವಾಗಿದ್ದಾರೆ, ಗ್ಯಾರಂಟಿಗಳಿಂದ ಆಶೀರ್ವಾದ ಸಿಕ್ಕಿದೆ: ಕೆಹೆಚ್ ಮುನಿಯಪ್ಪ

    ರಾಜ್ಯದ ಜನ ಕಾಂಗ್ರೆಸ್ ಪರವಾಗಿದ್ದಾರೆ, ಗ್ಯಾರಂಟಿಗಳಿಂದ ಆಶೀರ್ವಾದ ಸಿಕ್ಕಿದೆ: ಕೆಹೆಚ್ ಮುನಿಯಪ್ಪ

    ಕೋಲಾರ: ರಾಜ್ಯದ ಜನ ಕಾಂಗ್ರೆಸ್ (Congress) ಪರವಾಗಿದ್ದಾರೆ. ಗ್ಯಾರಂಟಿಗಳಿಂದ (Guarantee Scheme) ನಮಗೆ ಆಶೀರ್ವಾದ ಮಾಡಿದ್ದಾರೆ. ನಮ್ಮ ಕಾರ್ಯಕ್ರಮಗಳು, ಯೋಜನೆಗಳನ್ನು ನೋಡಿ ವೋಟ್ ಕೊಟ್ಟಿದ್ದಾರೆ ಎಂದು ಆಹಾರ ಸಚಿವ ಕೆಹೆಚ್ ಮುನಿಯಪ್ಪ (KH Muniyappa) ಹೇಳಿದ್ದಾರೆ.

    ಕೋಲಾರದಲ್ಲಿ (Kolar) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಎಷ್ಟೇ ಬೊಬ್ಬೆ ಹಾಕಿದರೂ ಕೆಲಸ ಮಾಡಿಲ್ಲ. ರಾಜಕೀಯವಾಗಿ ಬೇರೆ ಬೇರೆ ಮಾತನಾಡುತ್ತಾರೆ. ಆದರೆ ಜನ ನಮ್ಮ ಪರವಾಗಿದ್ದಾರೆ ಅನ್ನೋದು ಈ ಫಲಿತಾಂಶದಿಂದ ಗೊತ್ತಾಗಿದೆ. ಬಿಜೆಪಿ ವಿರೋಧ ಪಕ್ಷ ಮಾರ್ಗ ಸೂಚಿ ನೀಡುತ್ತಾ ಟೀಕೆ ಮಾಡಬೇಕಿತ್ತು. ಆದರೆ ಅವರು ಸುಖಾಸುಮ್ಮನೆ ಆರೋಪಗಳನ್ನು ಮಾಡುತ್ತಾ ಲೋಪ ದೋಷಗಳನ್ನು ತಿಳಿಸಿಲ್ಲ. ವಿರೋಧ ಪಕ್ಷ ವ್ಯವಸ್ಥಿತವಾಗಿ ಕೆಲಸ ಮಾಡಲಿ. ಅವರ ಕಾರ್ಯ ವೈಖರಿ ಬದಲಾಗಲಿ ಎಂದು ಸಲಹೆ ನೀಡಿದರು. ಇದನ್ನೂ ಓದಿ: ಇದು ಬಯಸದೇ ಬಂದ ಉಪಚುನಾವಣೆ, ಕೊನೆಗಳಿಗೆಯ ತೀರ್ಮಾನಕ್ಕೆ ತಲೆ ಬಾಗುತ್ತೇನೆ – ನಿಖಿಲ್ ಕುಮಾರಸ್ವಾಮಿ

    ಮೂರಕ್ಕೆ ಮೂರು ಗೆಲ್ಲುತ್ತೇವೆ ಎಂದು ಮೊದಲೇ ಹೇಳಿದ್ದೆ. ಜನ ನಮ್ಮ ಕಾರ್ಯಕ್ರಮಗಳನ್ನು ನೋಡಿ ವೋಟ್ ಕೊಟ್ಟಿದ್ದಾರೆ. ನಮಗೆ ಆಶೀರ್ವಾದ ಮಾಡಿದ್ದಾರೆ. ಕಾಂಗ್ರೆಸ್ ಯೋಜನೆಗಳಿಂದ ಗೆಲುವು ನಮ್ಮದಾಗಿದೆ. ಈ ಕ್ರೆಡಿಟ್ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಅವರಿಗೆ ಸೇರಬೇಕು. ಸ್ವತಂತ್ರ ಭಾರತದಲ್ಲಿ ಮೊಟ್ಟ ಮೊದಲ ಬಾರಿಗೆ ದಿಟ್ಟ ಹೆಜ್ಜೆ ಇಟ್ಟಿದ್ದು ನಮ್ಮ ಸರ್ಕಾರ ಎಂದು ಸಂತಸ ವ್ಯಕ್ತಪಡಿಸಿದರು. ಇದನ್ನೂ ಓದಿ: ಉಪಚುನಾವಣೆಯಲ್ಲಿ ಸೋತಿದ್ದೇವೆ, ಇವಿಎಂ ಹ್ಯಾಕ್ ಮಾಡಿದ್ದಾರೆ ಎನ್ನಲ್ಲ: ಜೋಶಿ

    ಈ ಹಿಂದೆ ಯುಪಿಎ ಸರ್ಕಾರ ನ್ಯಾಷನಲ್ ಫುಡ್ ಸೆಕ್ಯೂರಿಟಿ ಆಕ್ಟ್ ಜಾರಿ ಮಾಡಿದ್ದು, ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ಸೇರಿ ಹಲವು ಯೋಜನೆಗಳನ್ನು ಜಾರಿ ಮಾಡಿದ್ದು ನಾವು. 10 ಕೆಜಿ ಅಕ್ಕಿ ಬದಲಾಗಿ ಹಣ ಕೊಟ್ಟಿದ್ದೇವೆ. ನಮ್ಮ ಸರ್ಕಾರ ಜನರ ಪರವಾಗಿದೆ ಎಂದರು. ಇದನ್ನೂ ಓದಿ: ಇವಿಎಂನಲ್ಲಿ ಅಡ್ಜಸ್ಟ್‌ಮೆಂಟ್‌, Give & Take Policy ಮಾಡ್ತಿದ್ದಾರೆ: ಸತೀಶ್‌ ಜಾರಕಿಹೊಳಿ

    ಇನ್ನೂ ಮಹಾರಾಷ್ಟ್ರದಲ್ಲಿ ಗ್ಯಾರಂಟಿ ವರ್ಕ್ ಆಗಿಲ್ಲವಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಬಲಿಷ್ಟವಾಗಿದ್ದ ಎನ್‌ಸಿಪಿ ಇಬ್ಭಾಗವಾಗಿದ್ದು ಕಾಂಗ್ರೆಸ್‌ಗೆ ಹೊಡೆತ ಸಿಕ್ಕಿದೆ. ಶರದ್ ಪವಾರ್ ನೇತೃತ್ವದಲ್ಲಿ ಎನ್‌ಸಿಪಿ ಈ ಹಿಂದೆ ಬಲಿಷ್ಟವಾಗಿತ್ತು. ಅದು ಇಬ್ಭಾಗವಾಗಿರೋದು ಇಂಡಿಯಾ ಒಕ್ಕೂಟಕ್ಕೆ ಹಿನ್ನಡೆಯಾಗಿದೆ ಎಂದು ನುಡಿದರು. ಇದನ್ನೂ ಓದಿ: ಜನರಿಗಾಗಿ ದುಡಿಯುವ ನಮ್ಮ ಸಂಕಲ್ಪಕ್ಕೆ ಚುನಾವಣಾ ಫಲಿತಾಂಶ ಇನ್ನಷ್ಟು ಬಲ ನೀಡಿದೆ: ಸಿಎಂ