Tag: jds

  • ನಿಖಿಲ್‌ಗೆ ರಾಜ್ಯಾಧ್ಯಕ್ಷ ಪಟ್ಟ – ಜೆಡಿಎಸ್‌ ಹಿರಿಯ ನಾಯಕರ ಅಸಮಾಧಾನ

    ನಿಖಿಲ್‌ಗೆ ರಾಜ್ಯಾಧ್ಯಕ್ಷ ಪಟ್ಟ – ಜೆಡಿಎಸ್‌ ಹಿರಿಯ ನಾಯಕರ ಅಸಮಾಧಾನ

    – ಪಕ್ಷ ಸಂಘಟನೆಗೆ ಹೊಸ ಸೂತ್ರ ಮುಂದಿಟ್ಟ ನಾಯಕರು

    ಬೆಂಗಳೂರು: ನಿಖಿಲ್ ಕುಮಾರಸ್ವಾಮಿಗೆ (Nikhil Kumaraswamy) ರಾಜ್ಯಾಧ್ಯಕ್ಷ ಪಟ್ಟ ಕಟ್ಟೋ ವಿಚಾರ ಜೆಡಿಎಸ್‌ನಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ‌. ನಿಖಿಲ್ ಪಟ್ಟಕ್ಕೆ ಪಕ್ಷದ ಹಿರಿಯ ನಾಯಕರು ಅಸಮಾಧಾನಗೊಂಡಿದ್ದಾರೆ ಎನ್ನಲಾಗ್ತಿದ್ದು, ಪಕ್ಷ ಸಂಘಟನೆಗೆ ಹೊಸ ಸೂತ್ರವನ್ನು ದಳಪತಿಗಳ ಮುಂದೆ ಇಟ್ಟಿದ್ದಾರೆ ಎಂಬ ಚರ್ಚೆ ಪಕ್ಷದಲ್ಲಿ ಶುರುವಾಗಿದೆ.

    ಸಂಕ್ರಾಂತಿ ಬಳಿಕ ನಿಖಿಲ್ ಕುಮಾರಸ್ವಾಮಿ ಅವರನ್ನು ಜೆಡಿಎಸ್‌ ರಾಜ್ಯಾಧ್ಯಕ್ಷ ಮಾಡುವ ವಿಚಾರಕ್ಕೆ ಪಕ್ಷದ ಒಳಗಡೆ ಭಿನ್ನಾಭಿಪ್ರಾಯ ಸೃಷ್ಟಿಸಿದೆ. ಜೆಡಿಎಸ್‌ನ ಹಿರಿಯ ನಾಯಕರು ನಿಖಿಲ್‌ಗೆ ರಾಜ್ಯಾಧ್ಯಕ್ಷ ಸ್ಥಾನ ಕೊಡುವ ಬಗ್ಗೆ ಕೊಂಚ ಅಸಮಾಧಾನಗೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ರಾಜಕೀಯದಲ್ಲಿ ಹೆಚ್ಚು ಅನುಭವ ಇಲ್ಲದ ನಿಖಿಲ್ ಕೈ ಕೆಳಗೆ ಕೆಲಸ ಮಾಡೋಕೆ ಕೆಲ ಹಿರಿಯರಿಗೆ ಇಷ್ಟ ಇಲ್ಲ. ಅಲ್ಲದೇ, ನಿಖಿಲ್ ಕುಮಾರಸ್ವಾಮಿಗೆ ರಾಜ್ಯಾಧ್ಯಕ್ಷ ಸ್ಥಾನ ಕೊಟ್ಟರೆ ಮತ್ತೆ ಕುಟುಂಬ ರಾಜಕೀಯ ಹಣೆಪಟ್ಟಿ ಪಕ್ಷಕ್ಕೆ ಬರಲಿದ್ದು, ಇದನ್ನ ಹೊರತುಪಡಿಸಿ ಪಕ್ಷ ಸಂಘಟನೆಗೆ ಹೊಸ ಸೂತ್ರವನ್ನ ದೇವೇಗೌಡ, ಕುಮಾರಸ್ವಾಮಿ ಮುಂದೆ ಹಿರಿಯ ನಾಯಕರು ಇಟ್ಟಿದ್ದಾರೆ ಎನ್ನಲಾಗಿದೆ.

    ಹಿರಿಯರ ಜೆಡಿಎಸ್ ನಾಯಕರು ದಳಪತಿಗಳ ಮುಂದೆ ಸೂತ್ರವನ್ನು ಇಟ್ಟಿದ್ದಾರೆ. ಜೆಡಿಎಸ್ ಶಾಸಕಾಂಗ ಸ್ಥಾನ ಕೊಡದಿದ್ದಕ್ಕೆ ಅಸಮಾಧಾನಗೊಂಡಿರುವ ಜಿ.ಟಿ.ದೇವೇಗೌಡರ ಮನವೊಲಿಕೆ ಮಾಡಿ, ಅವರಿಗೆ ಜೆಡಿಎಸ್ ಶಾಸಕಾಂಗ ನಾಯಕ ಸ್ಥಾನ ನೀಡಿ ವಿಧಾನಸಭೆ ಒಳಗೆ ಪಕ್ಷ ಬಲಿಷ್ಠ ಮಾಡೋದು. ಪಕ್ಷದ ನಿಷ್ಠ, ಕುರುಬ ಸಮುದಾಯದ ನಾಯಕ ಬಂಡೆಪ್ಪ ಕಾಶಂಪೂರ್‌ಗೆ ರಾಜ್ಯಾಧ್ಯಕ್ಷ ಸ್ಥಾನ ನೀಡೋದು. ಈಗ ಜೆಡಿಎಸ್‌ ನಾಯಕ ಆಗಿರುವ ಸುರೇಶ್ ಬಾಬುನನ್ನು ಕೋರ್ ಕಮಿಟಿ ಅಧ್ಯಕ್ಷ ಮಾಡೋದು, ನಿಖಿಲ್ ಕುಮಾರಸ್ವಾಮಿಗೆ ಕಾರ್ಯಾಧ್ಯಕ್ಷ ಸ್ಥಾನ ನೀಡಿ ಪಕ್ಷದ ಸಂಘಟನೆ ಜವಾಬ್ದಾರಿ ಕೊಟ್ಟರೆ ಎಲ್ಲವೂ ಸರಿ ಹೋಗುತ್ತದೆ ಎಂಬ ಲೆಕ್ಕಾಚಾರ ದಳಪತಿಗಳ ಮುಂದೆ ಇಟ್ಟಿದ್ದಾರೆ ಎಂದು ತಿಳಿದುಬಂದಿದೆ.

    ಕುಮಾರಸ್ವಾಮಿ ಕೇಂದ್ರದ ಮಂತ್ರಿ ಆಗಿರುವುದರಿಂದ ರಾಜ್ಯದಲ್ಲಿ ಜೆಡಿಎಸ್ ಸಂಘಟನೆಗೆ ಹೆಚ್ಚು ಅವಕಾಶ ಆಗುತ್ತಿಲ್ಲ. ಹೀಗಾಗಿ, ನಿಖಿಲ್‌ಗೆ ಪಟ್ಟ ಕಟ್ಟುವುದಕ್ಕೆ ದಳಪತಿಗಳು ನಿರ್ಧಾರ ಮಾಡಿದ್ದಾರೆ. ಆದರೆ ಇದೇ ವಿಚಾರ ಈಗ ಪಕ್ಷದಲ್ಲಿ ಅಸಮಾಧಾನಕ್ಕೆ ಕಾರಣವಾಗಿದ್ದು, ಹಿರಿಯ ನಾಯಕರು ಕೊಟ್ಟ ಸೂತ್ರವನ್ನ ದಳಪತಿಗಳು ಒಪ್ಪುತ್ತಾರಾ ಎಂಬುದು ಪ್ರಶ್ನೆಯಾಗಿದೆ.

  • ಚುನಾವಣೆಯಲ್ಲಿ ʻಕೈʼ ಶಾಸಕ ನರೇಂದ್ರಸ್ವಾಮಿಗೆ ಐಶ್ವರ್ಯಗೌಡ ಹಣ ನೀಡಿದ್ದಾರೆ: ಅನ್ನದಾನಿ ಬಾಂಬ್‌

    ಚುನಾವಣೆಯಲ್ಲಿ ʻಕೈʼ ಶಾಸಕ ನರೇಂದ್ರಸ್ವಾಮಿಗೆ ಐಶ್ವರ್ಯಗೌಡ ಹಣ ನೀಡಿದ್ದಾರೆ: ಅನ್ನದಾನಿ ಬಾಂಬ್‌

    – ಐಶ್ವರ್ಯಗೌಡರನ್ನ ಮಂಪರು ಪರೀಕ್ಷೆಗೆ ಒಳಪಡಿಸುವಂತೆ ಆಗ್ರಹ

    ಮಂಡ್ಯ: ವಂಚನೆ ಪ್ರಕರಣದಲ್ಲಿ ಜೈಲು ಸೇರಿದ್ದ ಐಶ್ವರ್ಯಗೌಡ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮಂಡ್ಯ ಜಿಲ್ಲೆಯ ಮಳವಳ್ಳಿಯ ಶಾಸಕ ನರೇಂದ್ರಸ್ವಾಮಿ (Narendra Swamy) ಅವರಿಗೆ ಹಣ ನೀಡಿದ್ದಾರೆ ಎಂದು ಮಾಜಿ ಶಾಸಕ ಅನ್ನದಾನಿ (K Annadani) ಗಂಭೀರ ಆರೋಪ ಮಾಡಿದ್ದಾರೆ.

    ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು, ಐಶ್ವರ್ಯಗೌಡ (Aishwarya Gowda) ಮೂಲತಃ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಕಿರುಗಾವಲು ಗ್ರಾಮದವರು. ಈಕೆ ಮಂಡ್ಯ ಜಿಲ್ಲೆಯಲ್ಲೂ ಹಲವರಿಗೆ ಕೋಟ್ಯಂತರ ರೂಪಾಯಿ ವಂಚನೆ ಮಾಡಿದ್ದಾರೆ. ಅಮಾಯಕರನ್ನ ನಂಬಿಸಿ ಅವರಿಗೆ ಮೋಸ ಮಾಡಿದ್ದಾರೆ. ಈಕೆಯ ಈ ಮೋಸದ ಜಾಲಕ್ಕೆ ಕಾಂಗ್ರೆಸ್‌ನ ಒಂದಷ್ಟು ಮುಖಂಡರು ಬೆನ್ನೆಲುಬಾಗಿ ನಿಂತಿದ್ದಾರೆ ಎಂದು ದೂರಿದ್ದಾರೆ. ಇದನ್ನೂ ಓದಿ: ದಾವಣಗೆರೆ| ನ್ಯೂ ಇಯರ್ ಸಂಭ್ರಮದ ದಿನವೇ ಬೈಕ್ ಅಪಘಾತಕ್ಕೆ ಯುವಕ ಬಲಿ – ಮತ್ತೋರ್ವ ಗಂಭೀರ

    ಈ ಹಿಂದೆ ಸಾಕಷ್ಟು ಜನ ಐಶ್ವರ್ಯಗೌಡ ವಿರುದ್ಧ ವಂಚನೆಯ ಸಂಬಂಧ ದೂರು‌ ನೀಡಲು ಪೊಲೀಸ್ ಠಾಣೆಗೆ ಹೋಗಿದ್ದರು. ಆದ್ರೆ ಪೊಲೀಸರು ದೂರನ್ನು ಸ್ವೀಕಾರ ಮಾಡಿಯೇ ಇಲ್ಲ. ಇದಕ್ಕೆ ಐಶ್ವರ್ಯಗೌಡ ಹಿಂದಿರುವ ಕಾಂಗ್ರೆಸ್ ನಾಯಕರು ಕಾರಣ ಎಂದಿದ್ದಾರೆ. ಇದನ್ನೂ ಓದಿ: ದೇಗುಲದಲ್ಲಿ ಪುರುಷರು ಶರ್ಟ್ ತೆಗೆಯುವ ಪದ್ಧತಿ ಅನಿಷ್ಟ – ಶಿವಗಿರಿ ಶ್ರೀ

    ಸದ್ಯ ಮಳವಳ್ಳಿ ಶಾಸಕರಾಗಿರುವ ನರೇಂದ್ರಸ್ವಾಮಿಗೆ ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಐಶ್ವರ್ಯಗೌಡ ಫಂಡಿಂಗ್‌ ಮಾಡಿದ್ದಾರೆ. ಐಶ್ವರ್ಯಗೌಡರನ್ನ ಮಂಪರು ಪರೀಕ್ಷೆಗೆ ಒಳಪಡಿಸಿದರೆ, ಎಲ್ಲಾ ವಿಚಾರಗಳು ಬೆಳಕಿಗೆ ಬರುತ್ತವೆ. ಐಶ್ವರ್ಯಗೌಡರ ವಂಚನೆ ಪ್ರಕರಣವನ್ನ ಸಿಬಿಐಗೆ ನೀಡಬೇಕೆಂದು ಮಾಜಿ ಶಾಸಕ ಅನ್ನದಾನಿ ಆಗ್ರಹಿಸಿದ್ದಾರೆ.  ಇದನ್ನೂ ಓದಿ: ವಂಚನೆ ಕೇಸಲ್ಲಿ ಐಶ್ವರ್ಯಗೌಡಗೆ ಜಾಮೀನು – ರಾತ್ರಿಯೇ ಜೈಲಿಂದ ರಿಲೀಸ್

  • ಭಾರತದ 130 ಟನ್ ಚಿನ್ನ ಅಡ ಇಟ್ಟ ಭೀಕರ ಪರಿಸ್ಥಿತಿಯಲ್ಲಿ ದೇಶಕ್ಕಾಗಿ ಸಿಂಗ್ ಕೆಲಸ ಮಾಡಿದ್ರು: ಹೆಚ್‌ಡಿಡಿ ಸ್ಮರಣೆ

    ಭಾರತದ 130 ಟನ್ ಚಿನ್ನ ಅಡ ಇಟ್ಟ ಭೀಕರ ಪರಿಸ್ಥಿತಿಯಲ್ಲಿ ದೇಶಕ್ಕಾಗಿ ಸಿಂಗ್ ಕೆಲಸ ಮಾಡಿದ್ರು: ಹೆಚ್‌ಡಿಡಿ ಸ್ಮರಣೆ

    ಬೆಂಗಳೂರು: ಆಗ ನಮ್ಮ ದೇಶದ 130 ಟನ್ ಚಿನ್ನವನ್ನು ಅಡ ಇಟ್ಟಿದ್ದ ಭೀಕರ ಪರಿಸ್ಥಿತಿಯಲ್ಲಿ ಹಣಕಾಸು ಮಂತ್ರಿಯಾಗಿ ಮನಮೋಹನ್ ಸಿಂಗ್ (Manmohan Singh) ಅವರು ದೇಶಕ್ಕಾಗಿ ಕೆಲಸ ಮಾಡಿದ್ದರು ಎಂದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ (H.D.Deve Gowda) ಸ್ಮರಿಸಿದರು.

    ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ನಿಧನ ಹಿನ್ನೆಲೆ ಜೆಡಿಎಸ್ ಕಚೇರಿಯಲ್ಲಿ ಸಂತಾಪ ಸೂಚನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಹೆಚ್‌ಡಿಡಿ ಮಾತನಾಡಿದರು. ಇವತ್ತು ಅತ್ಯಂತ ದುಃಖದ ದಿವಸ. ಮನಮೋಹನ್ ಸಿಂಗ್ ಅವರನ್ನು ನಾನು ನೋಡಿದ್ದು ಲೋಕಸಭೆಯಲ್ಲಿ. 1991 ರಲ್ಲಿ ನಾನು ಕರ್ನಾಟಕದಿಂದ ಮೊದಲ ಬಾರಿಗೆ ಲೋಕಸಭೆಗೆ ಹೋದಾಗಿ ನೋಡಿದ್ದೆ. ಅವರು ನರಸಿಂಹ ರಾವ್ ಸರ್ಕಾರದಲ್ಲಿ ಹಣಕಾಸು ಮಂತ್ರಿ ಆಗಿದ್ರು. ಅದಕ್ಕೂ ಮುಂಚೆ ಹಲವಾರು ಹುದ್ದೆಯಲ್ಲಿ ದೇಶದ ಆರ್ಥಿಕ ಪರಿಸ್ಥಿತಿ ಸರಿಪಡಿಸಲು ಪ್ರಯತ್ನ ಮಾಡಿದ್ದಾರೆ ಎಂದು ನೆನೆದರು. ಇದನ್ನೂ ಓದಿ: ಅಮೆರಿಕದಲ್ಲಿ ಅವಮಾನ – ಸಿಂಗ್‌ ಬೆಂಬಲಿಸಿ ಪಾಕ್‌ ಪ್ರಧಾನಿ ಷರೀಫ್‌ ವಿರುದ್ಧ ಗುಡುಗಿದ್ದ ಮೋದಿ

    ರಿಸರ್ವ್ ಬ್ಯಾಂಕ್ ಗವರ್ನರ್ ಆಗಿದ್ದರು. ವಿಶ್ವಸಂಸ್ಥೆಯಲ್ಲಿ ಅಧಿಕಾರಿಯಾಗಿ ಕೆಲಸ ಮಾಡಿದ್ರು. ಅವರ ತಂದೆ ಪಾಕಿಸ್ತಾನದಿಂದ ಬಂದವರು. ಸಿಂಗ್ ಅವರು ಆರ್ಥಿಕವಾಗಿ ತುಂಬಾ ಬುದ್ದಿವಂತರು. ಅವರಿಗೆ ಬಹಳ ಅನುಭವ ಆರ್ಥಿಕ ವಿಚಾರದಲ್ಲಿ ಇತ್ತು. ನರಸಿಂಹ ರಾವ್ ಪ್ರಧಾನಿ ಆದಾಗ ದೇಶದ ಸ್ಥಿತಿ ತುಂಬಾ ಹದಗೆಟ್ಟಿತ್ತು. ಆಗ ನಮ್ಮ ದೇಶದ 130 ಟನ್ ಚಿನ್ನವನ್ನ ಅಡ ಇಡುತ್ತಾರೆ. ಅಂತಹ ಭೀಕರ ಪರಿಸ್ಥಿತಿ ಅವತ್ತು ಇತ್ತು. ಅಂತಹ ಸನ್ನಿವೇಶದಲ್ಲಿ ಹಣಕಾಸು ಮಂತ್ರಿಯಾಗಿ ಕೆಲಸ ಮಾಡಿದ್ರು. ಈ ದೇಶವನ್ನ, ದೇಶದ ಗೌರವ ಉಳಿಸಲು ಆರ್ಥಿಕ ತಜ್ಞರಾಗಿ ತಮ್ಮ ಪ್ರಯತ್ನ ಪ್ರಾರಂಭ ಮಾಡಿದ್ರು ಎಂದು ನೆನಪಿಸಿಕೊಂಡರು.

    ನಾನು ತುಂಬಾ ಕ್ರಿಟಿಸೈಸ್ ಮಾಡಿದ್ದೇನೆ. ಉದಾರೀಕರಣ, ಖಾಸಗೀಕರಣ, ಎಫ್‌ಡಿಐ ನೀತಿ ಮಾರ್ಪಾಡು ಹೀಗೆ ಅನೇಕ ಸುಧಾರಣೆಗಳನ್ನ ಅವರು ತಂದರು. ನಾನು ಆಗ ನಡೆದ ಬೇರೆ ಬೇರೆ ಘಟನೆ ಹೇಳೊಲ್ಲ. ಇವತ್ತು ಅವೆಲ್ಲ ಹೇಳಬಾರದು. ಅವರು ನಮ್ಮನ್ನ ಅಗಲಿ ಹೋಗಿದ್ದಾರೆ. ಹೀಗಾಗಿ ಅವರ ಕಾಲದಲ್ಲಿ ಅವರು ನಮ್ಮ ಸ್ಥಿತಿ ಹೇಗಿತ್ತು. ಅದನ್ನ ಸರಿ ಮಾಡೋಕೆ ಸರ್ವ ಪ್ರಯತ್ನ ಸಿಂಗ್ ಮಾಡಿದ್ರು. ಪ್ರತಿಯೊಬ್ಬರು ಹೇಳೋದು ಈ ದೇಶ ಸಂಕಷ್ಟದಲ್ಲಿ ಇದ್ದಾಗ ಹಲವಾರು ಕ್ರಮ ತೆಗೆದುಕೊಂಡರು ಅಂತ. ಅನೇಕ ಸುಧಾರಣೆ ಕ್ರಮ ತೆಗೆದುಕೊಂಡರು. ಅದಾದ ಮೇಲೆ ಅವರೇ ಪ್ರಧಾನಿ ಆದ್ರು. 10 ವರ್ಷ ಪ್ರಧಾನಿ ಆಗಿ ದೇಶ ಆಳಿದ್ರು. ನೆಹರೂ, ಇಂದಿರಾ ಗಾಂಧಿ ಬಿಟ್ಟರೆ ಅವರೇ 10 ವರ್ಷ ಪ್ರಧಾನಿ ಆಗಿದ್ದರು. ಸರಳ, ಸಜ್ಜನ, ಪ್ರಾಮಾಣಿಕ ವ್ಯಕ್ತಿ ಎಂದು ಮಾತನಾಡಿದರು. ಇದನ್ನೂ ಓದಿ: ಮನಮೋಹನ್‌ ಸಿಂಗ್‌ಗೆ ಅಂತಿಮ ನಮನ ಸಲ್ಲಿಸಿದ ರಾಹುಲ್‌, ಸೋನಿಯಾ ಗಾಂಧಿ

    ಅವರೊಬ್ಬ ದೇಶದ ಪ್ರಧಾನಿ ಆಗಿದ್ದವರು. ಕುಮಾರಸ್ವಾಮಿ ಅವರು ದೆಹಲಿಗೆ ಹೋಗಿ ಪಕ್ಷದ ಪರವಾಗಿ, ವಯಕ್ತಿಕವಾಗಿ ಗೌರವ ಸಲ್ಲಿಸಿದ್ದಾರೆ. ಇವತ್ತು ನಮ್ಮ ಪಕ್ಷದ ಸಂಘಟನೆ ಸಭೆ ಇತ್ತು. ಇದೊಂದು ಶೋಕ ದಿನ. 7 ದಿನ ಶೋಕಾಚರಣೆ ಮಾಡಲಾಗ್ತಿದೆ. ಸಿಂಗ್ ಅವರ ಗೌರವಾರ್ಥವಾಗಿ ಯಾವುದೇ ಸರ್ಕಾರಿ ಕೆಲಸ ಮಾಡಬಾರದು. ಭಾರತದ ಬಾವುಟ ಅರ್ಧಕ್ಕೆ ಇಳಿಸಬೇಕು. 10 ವರ್ಷ ಪ್ರಧಾನಿ, 5 ವರ್ಷ ಹಣಕಾಸು ಮಂತ್ರಿಯಾಗಿ, ಆರ್‌ಬಿಐ ಗವರ್ನರ್ ಆಗಿ ದೇಶಕ್ಕೆ ಸುದೀರ್ಘ ಸೇವೆ ಸಲ್ಲಿಸಿದ್ದಾರೆ. ಅವರು ನಮ್ಮನ್ನ ಅಗಲಿ ಹೋಗಿದ್ದಾರೆ. ಸಿಂಗ್ ಅವರ ಬಗ್ಗೆ ವೈಯಕ್ತಿಕವಾಗಿ ಗೌರವ ಇದೆ. ಅವರ ಆತ್ಮಕ್ಕೆ ಭಗವಂತ ಮೋಕ್ಷ ಕೊಡಲಿ. ಅವರ ಕುಟುಂಬಕ್ಕೆ ದುಃಖ ಸಹಿಸುವ ಶಕ್ತಿ ದೇವರು ಕೊಡಲಿ. ಈ ದೇಶದ ಆರ್ಥಿಕತೆಗೆ ಶಕ್ತಿ ಮೀರಿ ಕೆಲಸ ಮಾಡಿದ್ದಾರೆ. ಅವರೊಬ್ಬ ಉತ್ತಮ ಆರ್ಥಿಕ ತಜ್ಞ. ಅವರು ಮಾಡಿರೋ ಸೇವೆ ನಾವು ಸ್ಮರಣೆ ಮಾಡಿಕೊಳ್ಳಬೇಕು. ಅವರ ಆತ್ಮಕ್ಕೆ ಚಿರಶಾಂತಿ ದೇವರು ಕೊಡಲಿ ಎಂದು ಪ್ರಾರ್ಥಿಸಿದರು.

  • ಕಟೌಟ್‌ಗಳಲ್ಲಿ ಗಾಂಧಿ ಫೋಟೋನೇ ನೋಡಲಿಲ್ಲ, ನಕಲಿ ಗಾಂಧಿಗಳ ಫೋಟೋ ಆಕಾಶದೆತ್ತರಕ್ಕೆ ಹಾಕಿದ್ದಾರೆ: ಹೆಚ್‌ಡಿಕೆ

    ಕಟೌಟ್‌ಗಳಲ್ಲಿ ಗಾಂಧಿ ಫೋಟೋನೇ ನೋಡಲಿಲ್ಲ, ನಕಲಿ ಗಾಂಧಿಗಳ ಫೋಟೋ ಆಕಾಶದೆತ್ತರಕ್ಕೆ ಹಾಕಿದ್ದಾರೆ: ಹೆಚ್‌ಡಿಕೆ

    – ಕಾಂಗ್ರೆಸ್ ವಿಸರ್ಜನೆ ಮಾಡಿ ಎಂದು ಗಾಂಧೀಜಿ ಆವಾಗ್ಲೇ ಹೇಳಿದ್ದರು
    – ಬೆಳಗಾವಿ ಕಾಂಗ್ರೆಸ್‌ ಅಧಿವೇಶನ ಶತಮಾನೋತ್ಸವ ಕಾರ್ಯಕ್ರಮ ಕುರಿತು ಹೆಚ್‌ಡಿಕೆ ಟೀಕೆ

    ಮಂಡ್ಯ: ಸರ್ಕಾರ ಕೋಟ್ಯಂತರ ರೂಪಾಯಿ ವೆಚ್ಚ ಮಾಡಿ ಗಾಂಧಿ (Gandhiji) ಹೆಸರಿನಲ್ಲಿ ಕಾರ್ಯಕ್ರಮ ಮಾಡುತ್ತಿದೆ. ಆದ್ರೆ ಕಟೌಟ್‌ಗಳಲ್ಲಿ ಗಾಂಧೀಜಿ ಫೋಟೋನೇ ನೋಡಲಿಲ್ಲ. ನಕಲಿ ಗಾಂಧಿಗಳ ಫೋಟೋ ಆಕಾಶದೆತ್ತರಕ್ಕೆ ಹಾಕಿದ್ದಾರೆ ಎಂದು ಕೇಂದ್ರ ಸಚಿವ ಹೆಚ್‌.ಡಿ ಕುಮಾರಸ್ವಾಮಿ (HD Kumaraswamy) ಟೀಕಿಸಿದರು.

    ಮಂಡ್ಯದಲ್ಲಿ (Mandya) ದಿಶಾ ಸಭೆಯಲ್ಲಿ ಪಾಲ್ಗೊಳ್ಳುವ ಮುನ್ನ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ ನೇತೃತ್ವದ ರಾಜ್ಯ ಸರ್ಕಾರದ ವಿರುದ್ಧ ಕೆಂಡಾಮಂಡಲರಾದರು.

    ರಾಮರಾಜ್ಯ ಪರಿಕಲ್ಪನೆ ರಾಜ್ಯದಲ್ಲಿದ್ಯಾ?
    ಬೆಳಗಾವಿ ಕಾಂಗ್ರೆಸ್‌ ಅಧಿವೇಶನ ಶತಮಾನೋತ್ಸವ (Belagavi Session Centenary) ಕಾರ್ಯಕ್ರಮ ಕುರಿತು ಮಾತನಾಡಿದ ಹೆಚ್‌ಡಿಕೆ, ಸರ್ಕಾರ ಕೋಟ್ಯಂತರ ರೂಪಾಯಿ ವೆಚ್ಚ ಮಾಡಿ ಗಾಂಧಿ ಹೆಸರಲ್ಲಿ ಕಾರ್ಯಕ್ರಮ ಮಾಡುತ್ತಿದೆ. ಆದ್ರೆ ಕಟೌಟ್‌ಗಳಲ್ಲಿ ಗಾಂಧೀಜಿ ಫೋಟೋನೇ ನೋಡಲಿಲ್ಲ. ನಕಲಿ ಗಾಂಧಿಗಳ ಫೋಟೋ ಆಕಾಶದೆತ್ತರಕ್ಕೆ ಹಾಕಿದ್ದಾರೆ. ಗಾಂಧೀಜಿ ಹೆಸರಲ್ಲಿ ಕಾರ್ಯಕ್ರಮ ಮಾಡಲು ನನ್ನ ತಕರಾರಿಲ್ಲ. ಸಂಘಟಿತ ಹೋರಾಟದ ಮೂಲಕ ಸ್ವಾತಂತ್ರ್ಯಕ್ಕಾಗಿ ಹೋರಾಡಿದವರು ಗಾಂಧೀಜಿ. ಆದ್ರೆ ಅವರ ರಾಮರಾಜ್ಯ ಪರಿಕಲ್ಪನೆ ಇವತ್ತು ರಾಜ್ಯದಲ್ಲಿದ್ಯಾ? ಎಂದು ಪ್ರಶ್ನಿಸಿದರು.

    2.75 ಲಕ್ಷ ಸರ್ಕಾರಿ ಹುದ್ದೆ ಖಾಲಿ ಇದೆ:
    ಗ್ರಾಮ ಪಂಚಾಯಿತಿಗಳ ಅಭಿವೃದ್ಧಿಗೆ ಹಣ ಬಿಡುಗಡೆ ಆಗಿಲ್ಲ. ಸರಿಯಾದ ಚಿಕಿತ್ಸೆ ಇಲ್ಲದೇ ಬಾಣಂತಿಯರು, ಮಕ್ಕಳು ಸಾಯುತ್ತಿದ್ದಾರೆ. ಆಸ್ಪತ್ರೆಗಳಲ್ಲಿ ವೈದ್ಯರು, ನರ್ಸ್‌ಗಳಿಲ್ಲ. 2.75 ಲಕ್ಷ ಸರ್ಕಾರಿ ನೌಕರಿ ಖಾಲಿ ಇಟ್ಟುಕೊಂಡಿದ್ದಾರೆ. ಪ್ರತಿನಿತ್ಯ ರಾಜ್ಯದಲ್ಲಿ ನಡೆಯುತ್ತಿರುವ ಘಟನೆಗಳ ಬಗ್ಗೆ ಏನು ಹೇಳ್ತೀರಿ? ಎಂದು ಆಕ್ರೋಶ ಹೊರಹಾಕಿದ್ರು.

    ಕಾಂಗ್ರೆಸ್ ವಿಸರ್ಜನೆ ಮಾಡಿ ಎಂದು ಗಾಂಧೀಜಿ ಆವಾಗಲೇ ಹೇಳಿದ್ದರು. ಏಕೆಂದರೆ ಈಗ ಇರೋದು ಆಲಿಬಾಬ ಮತ್ತು 40 ಮಂದಿ ಕಳ್ಳರಿದ್ದಾರಲ್ಲ, ಆ ರೀತಿಯ ಕಾಂಗ್ರೆಸ್. ಜನಪರ ಕೆಲಸ ಮಾಡುವ ಕಾಂಗ್ರೆಸ್ ಅಲ್ಲ. ಗ್ಯಾರಂಟಿ ಗ್ಯಾರಂಟಿ ಅಂತಾರೆ ಏನ್‌ ಗ್ಯಾರಂಟಿ ಕೊಡ್ತಿದ್ದಾರೆ? ಮಹಿಳೆಯರಿಗೆ 2 ಸಾವಿರ ರೂ. ಕೊಡ್ತಿದ್ದಾರೆ, ಇನ್ನೂ 2 ಸಾವಿರ ಕೊಡಲಿ. ಆದ್ರೆ ಟ್ಯಾಕ್ಸ್ ಯಾವ ರೀತಿ ಹಾಕ್ತಿದ್ದಾರೆ? 2 ಲಕ್ಷ ಕೋಟಿ ಸಾಲ ಮಾಡಿ ಗ್ಯಾರಂಟಿ ಕೊಡೋದಕ್ಕೆ ನೀವೆ ಬೇಕಾ? ಆ ಸಾಲ ತೀರಿಸುವವರು ಯಾರು? ಜನಸಾಮಾನ್ಯರೆ ತೀರಿಸಬೇಕಲ್ವಾ? ಗಾಂಧೀಜಿ ಹೆಸರು ಹೇಳಿದ್ರೆ ಆಗಲ್ಲ, ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಡೆಯಬೇಕು ಎಂದು ವಾಗ್ದಾಳಿನಡೆಸಿದರು.

    ಇನ್ನೂ ಸರ್ಕಾರದಿಂದ ಪೊಲೀಸ್‌ ಇಲಾಖೆ ದುರ್ಬಳಕೆ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಕೇಂದ್ರ ಸಚಿವರು, ನಮ್ಮ ರಾಜ್ಯದ ಪೊಲೀಸ್ ಇಲಾಖೆ ಮೇಲೆ ದೇಶವೇ ಗೌರವ, ನಂಬಿಕೆ ಇಟ್ಟಿತ್ತು. ಎಲ್ಲರೂ ಪೊಲೀಸ್ ವ್ಯವಸ್ಥೆಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದರು. ಅಂತಹ ಪೊಲೀಸ್ ಇಲಾಖೆಯನ್ನ ಯಾವ ಮಟ್ಟಕ್ಕೆ ತೆಗೆದುಕೊಂಡು ಹೋಗಿದ್ದಾರೆ? ರಾಜ್ಯದ ಆಡಳಿತ ವ್ಯವಸ್ಥೆ ಏನಾಗಿದೆ? ಆಸ್ಪತ್ರೆಗಳಲ್ಲಿ ವೈದ್ಯರಿಲ್ಲ, ಗ್ಲೂಕೋಸ್, ಮೆಡಿಸನ್ ಡಿಫಾಲ್ಟ್‌ ಅಂತ ನೀವೇ ಹೇಳ್ಕೊಂಡಿದ್ದೀರಿ. ದೇಶದಲ್ಲಿ ಹೆಣ್ಣು ಮಕ್ಕಳಿಗೆ ಕಾಂಗ್ರೆಸ್ ಬಿಟ್ಟರೇ ಯಾರು ಗೌರವ ಕೊಡಲ್ಲ ಅಂತೀರಿ. ಪಾಪ ಬಾಣಂತಿಯರ ಸಾವು ಆದಾಗ ಪಶ್ಚಾತಾಪ ಪಟ್ರಾ? ಏನು ಆಗಿಯೇ ಇಲ್ಲ ಅನ್ನೋ ರೀತಿ ಓಡಾಡಿಕೊಂಡಿದ್ದಾರೆ, ಬರೀ ವೀರಾವೇಶದ ಮಾತುಗಳಷ್ಟೇ ಇವರದ್ದು ಎಂದು ಕುಟುಕಿದ್ದಾರೆ.

  • Kolar| ಜೆಡಿಎಸ್ ಮಾಜಿ ಶಾಸಕನಿಂದ ಸರ್ಕಾರಿ ಭೂಮಿ ಒತ್ತುವರಿ ಆರೋಪ – ಸ್ಥಳೀಯರಿಂದ ಪ್ರತಿಭಟನೆ

    Kolar| ಜೆಡಿಎಸ್ ಮಾಜಿ ಶಾಸಕನಿಂದ ಸರ್ಕಾರಿ ಭೂಮಿ ಒತ್ತುವರಿ ಆರೋಪ – ಸ್ಥಳೀಯರಿಂದ ಪ್ರತಿಭಟನೆ

    ಕೋಲಾರ; ಬೆಂಗಳೂರು ದೇವನಹಳ್ಳಿ ಕ್ಷೇತ್ರದ ಜೆಡಿಎಸ್ ಮಾಜಿ ಶಾಸಕ ಕೋಲಾರದಲ್ಲಿ (Kolar) ಸರ್ಕಾರಿ ಭೂಮಿ ಒತ್ತುವರಿ ಮಾಡಿಕೊಂಡಿರುವ ಆರೋಪ ಕೇಳಿ ಬಂದಿದೆ. ಕೋಲಾರ ಜಿಲ್ಲೆಯ ಕೆಜಿಎಫ್ (KGF) ತಾಲೂಕು ಚಿನ್ನಪಲ್ಲಿ (Chinnapalli) ಬಳಿ ಹತ್ತಾರು ಎಕರೆ ಸರ್ಕಾರಿ ಭೂಮಿ ಒತ್ತುವರಿ ಮಾಡಿದ್ದಾರೆ ಎಂದು ಮಾಜಿ ಜೆಡಿಎಸ್ ಶಾಸಕ ನಿಸರ್ಗ ನಾರಾಯಣಸ್ವಾಮಿ (Nisarga Narayanswamy) ವಿರುದ್ಧ ಸ್ಥಳಿಯರು ಆರೋಪ ಹೊರಿಸಿದ್ದಾರೆ. ಅಲ್ಲದೆ ಸ್ಥಳೀಯರು ಹಾಗೂ ಅಂಬೇಡ್ಕರ್ ಯುವ ವೇದಿಕೆ ಕಾರ್ಯಕರ್ತರು ಪ್ರತಿಭಟನೆ ಮಾಡಿ ಮನವಿ ಸಲ್ಲಿಸಿದ್ದಾರೆ.

    ದೇವನಹಳ್ಳಿ ಜೆಡಿಎಸ್‌ನ ಮಾಜಿ ಶಾಸಕ ನಿಸರ್ಗ ನಾರಾಯಣಸ್ವಾಮಿ ವಿರುದ್ದ ಸರ್ಕಾರಿ ಭೂಮಿ ಒತ್ತುವರಿ (Government Land Encroachment) ಆರೋಪ ಇದಾಗಿದೆ. ಚಿನ್ನಪಲ್ಲಿ ಸರ್ವೆ ನಂ-20 ರಲ್ಲಿ ಒಂದಷ್ಟು ಜಮೀನು ಖರೀದಿ ಮಾಡಿರುವ ಅವರು ಪಕ್ಕದಲ್ಲೇ ಇರುವ ಸರ್ವೇ ನಂ.21ರಲ್ಲಿ ಇರುವ ಸರ್ಕಾರಿ ಗೋಮಾಳ ಭೂಮಿ ಮೇಲೂ ಕಣ್ಣು ಹಾಕಿದ್ದಾರೆ. ಸುಮಾರು 76 ಎಕರೆ ಗೋಮಾಳ ಭೂಮಿಯಲ್ಲಿ ಹತ್ತಾರು ಎಕರೆ ಭೂಮಿಯನ್ನು ಒತ್ತುವರಿ ಮಾಡಿಕೊಂಡು ಕಾಂಪೌಂಡ್ ನಿರ್ಮಾಣ ಮಾಡಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ. ಇದನ್ನೂ ಓದಿ: ಪಾಪ್ ಕಾರ್ನ್‌ ಮೇಲೆ 3 ರೀತಿಯ ಜಿಎಸ್‌ಟಿ – ಕೌನ್ಸಿಲ್‌ ಸಭೆಯಲ್ಲಿ ಒಪ್ಪಿಗೆ; ಯಾವುದು ದುಬಾರಿ?

    ಈಗಾಗಲೆ ಭೂಮಿ ಇಲ್ಲದವರು, ಸ್ಥಳೀಯರು ಬಗರ್ ಹುಕಂ ಕಾಯ್ದೆಯಡಿ ನಮೂನೆ 57ಗೆ ಅರ್ಜಿಗಳನ್ನು ಹಾಕಿಕೊಂಡಿದ್ದಾರೆ. ಆದರೆ ಪ್ರಭಾವ ಬಳಸಿಕೊಂಡು ಮಾಜಿ ಶಾಸಕರು ಸರ್ಕಾರಿ ಗೋಮಾಳ ನುಂಗಲು ಮುಂದಾಗಿದ್ದಾರೆ ಎಂಬ ಆರೋಪ ಹೊರಿಸಲಾಗಿದೆ. ಇನ್ನೂ ಸ್ಥಳಕ್ಕೆ ಕೆಜಿಎಫ್ ತಹಶೀಲ್ದಾರ್ ನಾಗವೇಣಿ ಸಹ ಭೇಟಿ ನೀಡಿದ್ದು, ಸ್ಥಳೀಯರಿಂದಲೂ ಮನವಿ ಸ್ವೀಕರಿಸಿದ್ದಾರೆ. ಸದ್ಯ ಒತ್ತುವರಿ ಬಗ್ಗೆ ಸರಿಯಾದ ಮಾಹಿತಿ ಇಲ್ಲ. ಆದರೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಬಳಿಕ ಒತ್ತುವರಿ ತಿಳಿಯಲಿದೆ ಎಂಬುದು ತಹಶೀಲ್ದಾರ್ ನಾಗವೇಣಿ ಮಾತು. ಅಲ್ಲದೆ ದಾಖಲೆಗಳ ಸಹಿತ ಸರ್ವೆ ಮಾಡಿ ಒತ್ತುವರಿ ಕುರಿತು ಪರಿಶೀಲನೆ ಮಾಡುವ ಭರವಸೆಯನ್ನು ನಾಗವೇಣಿ ನೀಡಿದ್ದಾರೆ. ಇದನ್ನೂ ಓದಿ: ಪತ್ನಿ ಜೊತೆ ಸಿ.ಟಿ.ರವಿ ಟೆಂಪಲ್‌ ರನ್‌ – ರಾಘವೇಂದ್ರ ಸ್ವಾಮಿ ದೀರ್ಘದಂಡ ನಮಸ್ಕಾರ

  • ಸರ್ಕಾರಿ ಆಸ್ಪತ್ರೆಗಳ ಶುಲ್ಕ ಹೆಚ್ಚಳ ವಾಪಸ್ ಪಡೆಯಿರಿ: ಟಿ.ಎ ಶರವಣ ಆಗ್ರಹ

    ಸರ್ಕಾರಿ ಆಸ್ಪತ್ರೆಗಳ ಶುಲ್ಕ ಹೆಚ್ಚಳ ವಾಪಸ್ ಪಡೆಯಿರಿ: ಟಿ.ಎ ಶರವಣ ಆಗ್ರಹ

    ಬೆಂಗಳೂರು: ಇಲ್ಲಿನ ಸರ್ಕಾರಿ ಆಸ್ಪತ್ರೆಗಳಲ್ಲಿ ಶುಲ್ಕ ಹೆಚ್ಚಳ ಮಾಡಿರೋ ವಿಚಾರ ವಿಧಾನ ಪರಿಷತ್ ‌ನಲ್ಲಿ ಇಂದು ಪ್ರಸ್ತಾಪ ಆಯ್ತು. ಶುಲ್ಕ ಏರಿಕೆಯನ್ನ ಸಚಿವರು ಸಮರ್ಥನೆ ಮಾಡಿಕೊಂಡಿದ್ದಾರೆ.

    ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಜೆಡಿಎಸ್ ಸದಸ್ಯ ಶರವಣ (TA Saravana) ಪ್ರಶ್ನೆ ಕೇಳಿದ್ರು. ಈ ಸರ್ಕಾರ, ಸಿಎಂ ಅವರು ಯಾವುದಕ್ಕೂ ಜಗ್ಗಲ್ಲ, ಬಗ್ಗೊಲ್ಲ ಅಂತಾರೆ. ಸರ್ಕಾರಿ ಆಸ್ಪತ್ರೆಗಳಿಗೆ (Government Hospital) ಜನ ದುಡ್ಡು ಇಲ್ಲ ಅಂತ ಹೋಗೋದು. ಈಗ ಆಸ್ಪತ್ರೆಗಳ ಶುಲ್ಕ 3 ಪಟ್ಟು ಹಣ ಹೆಚ್ಚಳ ಮಾಡಿದ್ದಾರೆ. ಗ್ಯಾರಂಟಿಗಳನ್ನ ಕೊಡ್ತಿದ್ದೀರಾ, ಒಂದು ಕೈಯಲ್ಲಿ ‌ಕೊಟ್ಟು ಇನ್ನೊಂದು ಕೈಯಲ್ಲಿ ಕಿತ್ತುಕೊಳ್ತಿದೆ ಈ‌ ಸರ್ಕಾರ. ಬಡವರಿಗೆ ಮಾತ್ರ ಹಣ ಜಾಸ್ತಿ ಮಾಡಿದ್ದೀರಾ? ಸರ್ಕಾರಿ ಆಸ್ಪತ್ರೆಯಲ್ಲಿ ಇರೋ VIP ಕೊಠಡಿಗೆ ಶುಲ್ಕ ಜಾಸ್ತಿ ಮಾಡಿಲ್ಲ. ಕೂಡಲೇ ಆಸ್ಪತ್ರೆಗಳ ದರ ಹೆಚ್ಚಳ ಮಾಡಿರೋ ಆದೇಶ ವಾಪಸ್ ತೆಗೆದುಕೊಳ್ಳಿ ಅಂತ ಶರವಣ ಆಗ್ರಹ ಮಾಡಿದ್ರು. ಇದನ್ನೂ ಓದಿ: ಎರಡೂವರೆ ತಿಂಗಳಲ್ಲಿ ಪ್ರೌಢಶಾಲಾ ಶಿಕ್ಷಕರಿಗೆ ಪದೋನ್ನತಿ: ಮಧು ಬಂಗಾರಪ್ಪ

    ಇದಕ್ಕೆ ಸಚಿವ ಶರಣು ಪ್ರಕಾಶ್ ಪಾಟೀಲ್ (Sharanu Prakash Patil) ಉತ್ತರ ನೀಡಿ, 2 ಪಟ್ಟು 3 ಪಟ್ಟು ನಾನು ಶುಲ್ಕವನ್ನು ಹೆಚ್ಚಳ ಮಾಡಿಲ್ಲ. 20% ಮಾತ್ರ ಶುಲ್ಕ ಪರಿಷ್ಕರಣೆ ಮಾಡಿದ್ದೇವೆ.‌ ಶುಲ್ಕ ಹೆಚ್ಚಳ ಮಾಡಿರೋದು ಸತ್ಯ. ಆದ್ರೆ ಇದು ಸರ್ಕಾರದ ಮಟ್ಟದಲ್ಲಿ ‌ಮಾಡಿಲ್ಲ. ಸಂಸ್ಥೆ ಮಟ್ಟದಲ್ಲಿ ಜಾಸ್ತಿ ಆಗಿದೆ. 3 ವರ್ಷಕ್ಕೆ ಪರಿಷ್ಕರಣೆ ಆಗಬೇಕಿತ್ತು. ಕೋವಿಡ್ ಹಿನ್ನಲೆಯಲ್ಲಿ ಆಗಿರಲಿಲ್ಲ ಈಗ 6 ವರ್ಷಗಳ ನಂತರ ಜಾಸ್ತಿ ಮಾಡಿದ್ದೇವೆ ಎಂದರು. ಶುಲ್ಕ ಹೆಚ್ಚಳದಿಂದ ಬಡವರಿಗೆ ಸಮಸ್ಯೆ ಆಗಿಲ್ಲ ಅಂತ ಸರ್ಕಾರಿ ಆಸ್ಪತ್ರೆಗಳ ಶುಲ್ಕ ಸಮರ್ಥನೆ ಮಾಡಿಕೊಂಡ್ರು. ಇದನ್ನೂ ಓದಿ: ಬಿಜೆಪಿಯವ್ರು ಮುಸ್ಲಿಂ ಮೀಸಲಾತಿ ಹಿಂಪಡೆದು ಒಕ್ಕಲಿಗ, ಲಿಂಗಾಯತ ಸಮುದಾಯಗಳಿಗೆ ಹಂಚಿದ್ರು: ಸಿಎಂ

  • ಪಕ್ಷದ ಚೌಕಟ್ಟಿನಲ್ಲಿ ಏನೇ ತೀರ್ಮಾನ ಆದರೂ ಪಾಲಿಸಲು ಬದ್ಧ – ರಾಜ್ಯಧ್ಯಕ್ಷ ಹುದ್ದೆ ಬಗ್ಗೆ ನಿಖಿಲ್ ಮಾತು

    ಪಕ್ಷದ ಚೌಕಟ್ಟಿನಲ್ಲಿ ಏನೇ ತೀರ್ಮಾನ ಆದರೂ ಪಾಲಿಸಲು ಬದ್ಧ – ರಾಜ್ಯಧ್ಯಕ್ಷ ಹುದ್ದೆ ಬಗ್ಗೆ ನಿಖಿಲ್ ಮಾತು

    ನವದೆಹಲಿ: ನಾನು ಪಕ್ಷದ ಶಿಸ್ತಿನ ಸಿಪಾಯಿ. ಪಕ್ಷದ ಹಿತ ಕಾಪಾಡುವುದು ನನ್ನ ಜವಾಬ್ದಾರಿ. ಹೀಗಾಗೀ ಪಕ್ಷ ಕಟ್ಟಿ ಬೆಳೆಸಿದ ಕಟ್ಟ ಕಡೆಯ ಕಾರ್ಯಕರ್ತನಿಗೂ ರಾಜಕೀಯ, ಸಾಮಾಜಿಕ ಶಕ್ತಿ ತುಂಬುವ ನಿಟ್ಟಿನಲ್ಲಿ ಅವರಲ್ಲಿ ಒಬ್ಬನಾಗಿ ಕೆಲಸ ಮಾಡುತ್ತಿದ್ದೇನೆ. ಪಕ್ಷದ ಚೌಕಟ್ಟಿನಲ್ಲಿ ಏನೇ ತೀರ್ಮಾನ ಆದರೂ ನಾನು ಪಾಲಿಸಲು ಬದ್ಧ ಎಂದು ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ (Nikhil Kumaraswamy) ಹೇಳಿದ್ದಾರೆ.

    ರಾಜ್ಯಧ್ಯಕ್ಷ ಹುದ್ದೆ ಆಯ್ಕೆ ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ದೆಹಲಿಯಲ್ಲಿ (New Delhi) ಮಾತನಾಡಿದ ಅವರು, ನಾನು ಯಾವುದೇ ಹುದ್ದೆಯ ಆಕಾಂಕ್ಷಿ ಅಲ್ಲ. ನಮ್ಮಲ್ಲಿ ಹಿರಿಯ ನಾಯಕರಿದ್ದಾರೆ. ಅವರ ಜೊತೆಗೆ ಹೆಚ್.ಡಿ ಕುಮಾರಸ್ವಾಮಿ ಮಾರ್ಗದರ್ಶನದಲ್ಲಿ ಕೆಲಸ ಮಾಡುತ್ತೇನೆ. ಪಕ್ಷ ಇದ್ದರೆ ನಿಖಿಲ್ ಕುಮಾರಸ್ವಾಮಿ. ಪಕ್ಷಕ್ಕೆ ಸಾವಿರಾರು ಕಾರ್ಯಕರ್ತರನ್ನು ಹುಟ್ಟು ಹಾಕುವ ಶಕ್ತಿ ಇದೆ. ಹೀಗಾಗೀ ಪಕ್ಷದ ತಿರ್ಮಾನವೇ ಅಂತಿಮ ಎಂದರು. ಇದನ್ನೂ ಓದಿ: ಪ್ರತಿ ತಿಂಗಳು ಎಷ್ಟು ಮಂದಿಗೆ ಯುವನಿಧಿ ಹಣ ಸೇರುತ್ತಿದೆ – ಲೆಕ್ಕ ಕೊಟ್ಟ ಸರ್ಕಾರ

    ಉಪಚುನಾವಣೆ ಬಳಿಕ ನಾನು ಕೈಕಟ್ಟಿ ಕೂತಿಲ್ಲ. ರೈತರ ನಿಯೋಗದೊಂದಿದೆ ದೆಹಲಿಗೆ ಬಂದಿದ್ದೇನೆ. ತಂಬಾಕು ಬೆಳೆಗಾರರ ಸಮಸ್ಯೆಗಳ ಕೇಂದ್ರ ಮಂತ್ರಿಗಳ ಜೊತೆಗೆ ಚರ್ಚೆ ಮಾಡಿದ್ದೇನೆ. ಇದೇ ಅವಧಿಯಲ್ಲಿ ಗೃಹ ಸಚಿವ ಅಮಿತ್ ಶಾ, ಉಸ್ತುವಾರಿ ರಾಧಮೋಹನ್ ಸಿಂಗ್, ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್ ಸಂತೋಷ್ ಅವರನ್ನು ಭೇಟಿಯಾಗಿದ್ದೇನೆ. ಮೈತ್ರಿಯನ್ನು ಬಲಪಡಿಸುವ ಬಗ್ಗೆ, ಸ್ಥಳೀಯ ಚುನಾವಣೆಗಳಲ್ಲಿ ಒಟ್ಟಾಗಿ ಹೋಗುವ ಬಗ್ಗೆ ಚರ್ಚೆ ಮಾಡಿದ್ದೇನೆ. ಅಮಿತ್ ಶಾ ಅವರಿಗೆ ರಾಜ್ಯ ಬಿಜೆಪಿ ಬೆಳವಣಿಗೆ ಬಗ್ಗೆ ಗೊತ್ತಿರುವ ಹಿನ್ನೆಲೆ ಆ ಬಗ್ಗೆ ಚರ್ಚಿಸಿಲ್ಲ ಎಂದು ಹೇಳಿದರು. ಇದನ್ನೂ ಓದಿ: ಕೆರೆಗೆ ಬಿದ್ದ ಮಗನನ್ನು ರಕ್ಷಿಸಲು ಹೋಗಿ ತಾಯಿಯೂ ಸಾವು

    ಹಾಸನದಲ್ಲಿ ಕಾಂಗ್ರೆಸ್ ಜನಕಲ್ಯಾಣ ಸಮಾವೇಶದ ಬಗ್ಗೆ ಪ್ರತಿಕ್ರಿಯಿಸಿ, ಯಾರ ಕಲ್ಯಾಣ ಆಗಿದೆ ಎಂದು ಕಾಂಗ್ರೆಸ್ ಸಮಾವೇಶ ಮಾಡಿದೆ? ಹೆಚ್‌ಡಿ ದೇವೇಗೌಡರ ಕುಟುಂಬವನ್ನು ನಿಂದಿಸುವ ಸಮಾವೇಶ ಮಾಡಿದ್ದಾರೆ. ನಮ್ಮನ್ನು ನಿಂದಿಸಿ ರಾಜಕೀಯವಾಗಿ ದುರ್ಬಲ ಮಾಡುವ ಹುನ್ನಾರ ಮಾಡಿದ್ದಾರೆ. ದೇವೇಗೌಡರ ಕುಟುಂಬವನ್ನು ನಿಂದಿಸಿದರೆ ಏನು ಸಿಗುತ್ತೆ? ಅದಕ್ಕೆ ಪ್ರತಿಯಾಗಿ ಸಮಾವೇಶ ಮಾಡುವುದರಿಂದ ಏನು ಲಾಭ ಇಲ್ಲ ಎಂದು ಆಕ್ರೋಶ ಹೊರ ಹಾಕಿದರು. ಕುಮಾರಸ್ವಾಮಿ ಸಂಸತ್‌ನಲ್ಲಿ ಬ್ಯುಸಿಯಾಗಿರುವ ಹಿನ್ನೆಲೆ ಮಂಡ್ಯದಲ್ಲಿ ಮಾಡಬೇಕಿದ್ದ ಸಮಾವೇಶ ಮುಂದೂಡಿದೆ ಎಂದು ತಿಳಿಸಿದರು. ಇದನ್ನೂ ಓದಿ: ಗ್ರಾಪಂ ವ್ಯಾಪ್ತಿಯಲ್ಲಿ ಪರಿಶೀಲನೆ ಮಾಡಿ ಅನರ್ಹ ರೇಷನ್ ಕಾರ್ಡ್ ರದ್ದು: ಮುನಿಯಪ್ಪ

    ಉಪಚುನಾವಣೆಯಲ್ಲಿ (Channapatna By Election) ಅನಿರೀಕ್ಷಿತವಾಗಿ ಸ್ಪರ್ಧಿಸಿ 87,000 ಮತಗಳನ್ನು ಪಡೆದು ಸೋಲನ್ನಪ್ಪಿದ್ದೇನೆ. ನಮಗೆ ಜಯ ಸಿಕ್ಕಿರದೇ ಇರಬಹುದು, ಫಲ ಸಿಕ್ಕಿದೆ. ಜನರ ತೆರಿಗೆಯ ದುಡ್ಡನ್ನು ಚುನಾವಣಾ ಮುನ್ನಾ ದಿನ ಗೃಹಲಕ್ಷ್ಮಿ ಯೋಜನೆ ಮೂಲಕ ನೀಡಲಾಯಿತು. ಇದರ ಜೊತೆಗೆ ಒಂದು ಸಮುದಾಯ ನಮ್ಮನ್ನು ಕೈಬಿಟ್ಟಿತು. ಗಣೇಶ ವಿಸರ್ಜನೆ ಪ್ರಕರಣ ನಡೆದಾಗ ಎರಡು ಸಮುದಾಯದ ನಡುವೆ ಘರ್ಷಣೆಯಾಯಿತು. ಆಗ ಆಸ್ತಿ ಹಾನಿಯಾದವರಿಗೆ ಸಮುದಾಯ ಕೇಳದೆ ಹೆಚ್‌ಡಿ ಕುಮಾರಸ್ವಾಮಿ ಸಹಾಯ ಮಾಡಿದರು. ಮುಸ್ಲಿಮರಿಗೆ ಸಾಂತ್ವನ ಹೇಳಿ ನೆರವು ನೀಡಿದರು. ಹಲಾಲ್, ಹಿಜಾಬ್ ಪರ ಧ್ವನಿ ಎತ್ತಿದ್ದು ಕುಮಾರಸ್ವಾಮಿ. ಅದಾಗ್ಯೂ ನಮ್ಮನ್ನು ಬಿಟ್ಟು ಕಾಂಗ್ರೆಸ್ ಆಯ್ಕೆ ಮಾಡಿದ್ದಾರೆ. ಅದು ಅವರ ನಿರ್ಧಾರ. ನಾವು ಪ್ರಶ್ನೆ ಮಾಡುವುದಿಲ್ಲ ಎಂದರು. ಇದನ್ನೂ ಓದಿ: ಬೆಳಗಾವಿ| ವಿಧಾನಸಭೆ ಸಭಾಧ್ಯಕ್ಷರಿಗೆ ನೂತನ ಪೀಠ – ವಿಶೇಷತೆ ವಿವರಿಸಿದ ಯು.ಟಿ.ಖಾದರ್

    ಚನ್ನಪಟ್ಟಣಕ್ಕೆ ಹೆಚ್‌ಡಿ ಕುಮಾರಸ್ವಾಮಿ ಅವರು 1,200 ಕೋಟಿ ಅನುದಾನ ತಂದಿದ್ದಾರೆ. ಆದರೆ ನಾವು ಪ್ರಚಾರ ಪಡೆದಿಲ್ಲ. ಆತ್ಮ ಸಾಕ್ಷಿಯಾಗಿ ಕೆಲಸ ಮಾಡಿದ್ದೇವೆ. ಮಾಡಿದ ಕೆಲಸ ಹೆಚ್‌ಡಿ ದೇವೇಗೌಡರು, ಹೆಚ್‌ಡಿ ಕುಮಾರಸ್ವಾಮಿ ಹೇಳಿಕೊಂಡಿಲ್ಲ. ಮಾಡಿದ ಅಭಿವೃದ್ಧಿ ಜನರ ಮುಂದೆ ಹೇಳಬೇಕಿತ್ತು. ಜನರ ನೆನಪು ಕಡಿಮೆ. ಹೀಗಾಗಿ ನಾವು ನೆನಪಿಸಬೇಕಿತ್ತು. ಇದರಲ್ಲಿ ನಾವು ಎಡವಿದ್ದೇವೆ ಎಂದು ನುಡಿದರು. ಇದನ್ನೂ ಓದಿ: ಮೊದಲ ದಿನವೇ ಬಿಜೆಪಿ ಶಾಸಕರಲ್ಲಿ ಸಮನ್ವಯದ ಕೊರತೆ

  • ಚಳಿಗಾಲದ ಕಲಾಪದಲ್ಲಿ ಸಿಡಿಯಲಿದೆ ಹಗರಣಗಳ ಕಿಡಿ – ಇಂದಿನಿಂದ ಸರ್ಕಾರ Vs ವಿಪಕ್ಷ ಸಂಘರ್ಷ

    ಚಳಿಗಾಲದ ಕಲಾಪದಲ್ಲಿ ಸಿಡಿಯಲಿದೆ ಹಗರಣಗಳ ಕಿಡಿ – ಇಂದಿನಿಂದ ಸರ್ಕಾರ Vs ವಿಪಕ್ಷ ಸಂಘರ್ಷ

    ಬೆಳಗಾವಿ: ಇಂದಿನಿಂದ ಬೆಳಗಾವಿಯ ಸುವರ್ಣಸೌಧದಲ್ಲಿ (Belagavi Suvarna Soudha) ಚಳಿಗಾಲದ ಅಧಿವೇಶನ (Winter Session) ಆರಂಭವಾಗಲಿದೆ. ಉಪಚುನಾವಣೆಯಲ್ಲಿ (By Election) ಭರ್ಜರಿ ಗೆಲುವು ಹುಮ್ಮಸ್ಸಿನಲ್ಲಿರುವ ರಾಜ್ಯ ಸರ್ಕಾರವನ್ನು ಕಟ್ಟಿಹಾಕಲು ವಿಪಕ್ಷಗಳು ಸಿದ್ದಗೊಂಡಿವೆ.

    10 ದಿನಗಳ ಕಾಲ ನಡೆಯಲಿರುವ ಬೆಳಗಾವಿ ಚಳಿಗಾಲದ ಅಧಿವೇಶನದಲ್ಲಿ ಮುಡಾ, ವಾಲ್ಮೀಕಿ, ಅಬಕಾರಿ, ವಕ್ಫ್, ಬಾಣಂತಿಯರ ಸಾವು ಪ್ರಕರಣಗಳು ಸರ್ಕಾರಕ್ಕೆ ಬಿಸಿತುಪ್ಪವಾಗಿ ಪರಿಣಮಿಸುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ.

    ಸಾಲು ಸಾಲು ಅಸ್ತ್ರಗಳನ್ನ ರೆಡಿ ಮಾಡಿಕೊಂಡಿರುವ ವಿಪಕ್ಷಗಳು ಸರ್ಕಾರದ ಮೇಲೆ ಮುಗಿ ಬೀಳಲು ಸಜ್ಜಾಗಿವೆ. ಇತ್ತ ವಿಪಕ್ಷಗಳನ್ನು ಕಟ್ಟಿ ಹಾಕಲು ಸರ್ಕಾರವೂ ಸನ್ನದ್ಧವಾಗಿದೆ. ವಿಪಕ್ಷಗಳ ಹಗರಣಗಳನ್ನು ಮುಂದಿಟ್ಟುಕೊಂಡು ಸರ್ಕಾರ ಕೌಂಟರ್ ನೀಡಲು ತಯಾರಾಗಿದೆ. ಇದನ್ನೂ ಓದಿ: ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿ ಸರಣಿ ಸಾವು – ಮೃತ ಬಾಣಂತಿಯರ ಕುಟುಂಬಕ್ಕೆ 5 ಲಕ್ಷ ಪರಿಹಾರ ಘೋಷಣೆ

    ಸದನದ ಒಳಗೆ ಆಡಳಿತ ವಿಪಕ್ಷಗಳ ವಾಗ್ಯುದ್ಧ ಒಂದು ಕಡೆಯಾದರೆ ಸದನದ ಹೊರಗಡೆಯೂ ಸಮರ ಜೋರಾಗಿರಲಿದೆ. ಪಂಚಮಸಾಲಿ 2ಎ ಮೀಸಲಾತಿ ಹೋರಾಟ, ಅನ್ನದಾತರ ಪ್ರತಿಭಟನೆ ಕೂಡ ನಡೆಯುತ್ತಿದೆ.

    ಅಧಿವೇಶನದಲ್ಲಿ ಬಿಬಿಎಂಪಿ ವಿಧೇಯಕ, ರಾಜ್ಯಪಾಲರ ಅಧಿಕಾರ ಮೊಟಕು ಮಾಡುವ ಗ್ರಾಮೀಣಾಭಿವೃದ್ಧಿ ವಿವಿ ವಿಧೇಯಕ ಸೇರಿ 15ಕ್ಕೂ ಹೆಚ್ಚು ಮಸೂದೆಗಳು ಮಂಡನೆ ಆಗಲಿವೆ. ಬಿಜೆಪಿ ರಾಜ್ಯಾಧ್ಯಕ್ಷ, ಶಾಸಕ ವಿಜಯೇಂದ್ರ, ಸದನದ ಒಳಗೆ, ಹೊರಗೆ ಸರ್ಕಾರದ ಕಿವಿ ಹಿಂಡುವ ಕೆಲಸ ಮಾಡುತ್ತೇವೆ ಎಂದಿದ್ದಾರೆ. ವಿಪಕ್ಷಗಳು ಅಸ್ತ್ರಗಳನ್ನು ಎದುರಿಸಲು ನಾವ್ ರೆಡಿ ಎಂದಿದ್ದಾರೆ ಸಿಎಂ ಸಿದ್ದರಾಮಯ್ಯ.

    ಬಿಜೆಪಿ ಅಸ್ತ್ರ Vs ಸರ್ಕಾರದ ಪ್ರತ್ಯಸ್ತ್ರ
    – ಮುಡಾ ಸೈಟ್ ಹಂಚಿಕೆ ಹಗರಣ Vsಬಿಜೆಪಿ ಸರ್ಕಾರದ ಅವಧಿಯ ಕೋವಿಡ್ ಹಗರಣ
    – ವಾಲ್ಮೀಕಿ ನಿಗಮ ಅಕ್ರಮ ಪ್ರಕರಣ Vs ಬಿಎಸ್‌ವೈ & ವಿಜಯೇಂದ್ರ ವಿರುದ್ಧದ ಬಿಡಿಎ ಹಗರಣ
    – ವಕ್ಫ್‌ ಆಸ್ತಿ ಕಬಳಿಕೆ ವಿವಾದ Vs ಯತ್ನಾಳ್-ವಿಜಯೇಂದ್ರ ಬಣಗಳ ತಿಕ್ಕಾಟ
    – ಅಬಕಾರಿ ಇಲಾಖೆಯಲ್ಲಿ ವಸೂಲಿ Vs ಗಣಿ ಸೇರಿ ವಿವಿಧ ಹಗರಣ
    – ಬಳ್ಳಾರಿಯಲ್ಲಿ ಬಾಣಂತಿಯರ ಸಾವು Vs ಲೈಂಗಿಕ ದೌರ್ಜನ್ಯ ಪ್ರಕರಣ

     

  • ಸೋಮವಾರದಿಂದ ಬೆಳಗಾವಿಯಲ್ಲಿ ಅಧಿವೇಶನ – ವಿಪಕ್ಷಗಳ ಬತ್ತಳಿಕೆಯಲ್ಲಿ ಸಾಲು ಸಾಲು ಅಸ್ತ್ರ

    ಸೋಮವಾರದಿಂದ ಬೆಳಗಾವಿಯಲ್ಲಿ ಅಧಿವೇಶನ – ವಿಪಕ್ಷಗಳ ಬತ್ತಳಿಕೆಯಲ್ಲಿ ಸಾಲು ಸಾಲು ಅಸ್ತ್ರ

    ಬೆಳಗಾವಿ: ನಾಳೆಯಿಂದ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ (Belagavi Winter Session) ಪ್ರಾರಂಭ ಆಗಲಿದೆ. ಸರ್ಕಾರವನ್ನ ಕಟ್ಟಿ ಹಾಕಲು ವಿಪಕ್ಷಗಳು ಸಾಲು ಸಾಲು ಅಸ್ತ್ರ ರೆಡಿ ಮಾಡಿಕೊಂಡಿದ್ದರೆ ವಿಪಕ್ಷಗಳನ್ನು ಕಟ್ಟಿ ಹಾಕಲು ಸರ್ಕಾರವೂ ಸನ್ನದ್ದವಾಗಿದೆ.

    9 ದಿನಗಳ ಕಾಲ ಅಧಿವೇಶನ ನಡೆಯಲಿದ್ದು, ಆಡಳಿತ ಪಕ್ಷ ‌ಮತ್ತು ವಿಪಕ್ಷಗಳ ನಡುವೆ ಪ್ರತಿಷ್ಠೆಯ ಜಿದ್ದಿಗೆ ಅಧಿವೇಶನ ಸಾಕ್ಷಿಯಾಗಲಿದೆ. ಚಳಿಗಾಲದ ಅಧಿವೇಶನಕ್ಕೆ ಸುವರ್ಣ ಸೌಧವೂ ಸಿದ್ದವಾಗಿದ್ದು ಸ್ಪೀಕರ್ ಯುಟಿ ಖಾದರ್ (UT Khader) ಸಿದ್ದತೆ ವೀಕ್ಷಣೆ ಮಾಡಿದರು.

    ವಿಪಕ್ಷಗಳ ಬಳಿ ಇದೆ ಪ್ರಬಲ ಅಸ್ತ್ರ
    ಈ ಬಾರಿಯ ಅಧಿವೇಶನದಲ್ಲಿ ಸರ್ಕಾರವನ್ನು ಕಟ್ಟಿ ಹಾಕಲು ವಿಪಕ್ಷಗಳಿಗೆ ಪ್ರಬಲ ಅಸ್ತ್ರಗಳು ಸಿಕ್ಕಿವೆ. ಸಿಎಂ ಸಿದ್ದರಾಮಯ್ಯ (CM Siddaramaiah) ಮೇಲೆ ಕೇಳಿ ಬಂದಿರುವ ಮುಡಾ ಅಕ್ರಮ ಪ್ರಕರಣದಲ್ಲಿ ಇಡಿ ಪ್ರಸ್ತಾಪ ಮಾಡಿದ ಅಂಶಗಳು, ವಕ್ಪ್ ವಿವಾದ, ಬಳ್ಳಾರಿಯಲ್ಲಿ ಬಾಣಂತಿಯರ ಸಾವು ಪ್ರಕರಣ, ಅಲ್ಪಸಂಖ್ಯಾತರ ಸಂಸ್ಥೆಗಳಿಗೆ ನಿಯಮ ಸಡಿಲಿಕೆ ವಿಚಾರ, ಗುತ್ತಿಗೆಯಲ್ಲಿ ಅಲ್ಪಸಂಖ್ಯಾತರಿಗೆ ಮೀಸಲು ವಿವಾದ, ಗ್ಯಾರಂಟಿ ಯೋಜನೆಯಲ್ಲಿ ಲೋಪ.. ಹೀಗೆ ಸರ್ಕಾರದ ವಿರುದ್ದ ಸಾಲು ಸಾಲು ಅಸ್ತ್ರ ಪ್ರಯೋಗ ಮಾಡುವ ಮೂಲಕ ಸರ್ಕಾರವನ್ನ ತರಾಟೆಗೆ ತೆಗೆದುಕೊಳ್ಳಲು ವಿಪಕ್ಷಗಳು ಸಿದ್ದವಾಗಿವೆ. ಇದನ್ನೂ ಓದಿ: ಗಂಡಸರಿಗೂ ಫ್ರೀ ಬಸ್‌ ಕೊಟ್ರೆ KSRTC ಮುಚ್ಚಬೇಕಾಗುತ್ತೆ: ಸಿದ್ದರಾಮಯ್ಯ

     

    ಸರ್ಕಾರಕ್ಕೆ ಕೋವಿಡ್ ಅಕ್ರಮದ ಅಸ್ತ್ರ.
    ಸರ್ಕಾರದ ವಿರುದ್ದ ಸಮರ ಸಾರಲು ವಿಪಕ್ಷಗಳಿಗೆ ಸಾಲು ಸಾಲು ಅಸ್ತ್ರಗಳಿದ್ದು, ಅ ಅಸ್ತ್ರಗಳನ್ನ ಎದುರಿಸಲು ಸರ್ಕಾರದ ಬಳಿಯೂ ಬ್ರಹ್ಮಾಸ್ತ್ರಗಳು ರೆಡಿಯಾಗಿವೆ. ಯಡಿಯೂರಪ್ಪ (Yediyurappa) ಅವಧಿಯಲ್ಲಿ ನಡೆದಿರುವ ಕೋವಿಡ್ ಅಕ್ರಮ ಕುರಿತು ನಿವೃತ್ತ ನ್ಯಾ. ಡಿ ಕುನ್ಹಾ ವರದಿ ಇಟ್ಟುಕೊಂಡು ಬಿಜೆಪಿಗೆ (BJP) ತಿರುಗೇಟು ನೀಡಲು ಸರ್ಕಾರ ರೆಡಿಯಾಗಿದೆ.

    ಬಿಜೆಪಿ ಅವಧಿಯಲ್ಲಿ ನಡೆದಿದೆ ಎನ್ನಲಾಗಿರೋ ಬಿಡಿಎ ಹಗರಣ, ಗಣಿ ಹಗರಣಗಳು, ಬಿಜೆಪಿಯಲ್ಲಿ ವಿಜಯೇಂದ್ರ-ಯತ್ನಾಳ್ ಕಿತ್ತಾಟ, ಕೇಂದ್ರ ಸರಕಾರದಿಂದ ಅನುದಾನ ತಾರತಮ್ಯ, ಉಪ ಚುನಾವಣೆ ಸೋಲು ಸೇರಿ ಹಲವು ವಿಷಯಗಳನ್ನ ಇಟ್ಟುಕೊಂಡು ವಿಪಕ್ಷಗಳನ್ನ ಕಟ್ಟಿ ಹಾಕುವ ರಣತಂತ್ರವನ್ನ ಕಾಂಗ್ರೆಸ್ ಮಾಡಿದೆ. ಸದನದಲ್ಲಿ ವಿಪಕ್ಷಗಳನ್ನ ಕಟ್ಟಿ ಹಾಕಲು ಸಚಿವರಿಗೆ ಟಾಸ್ಕ್ ನೀಡಿರೋ‌ ಸಿಎಂ, ಯಾರ ಪ್ರಶ್ನೆಗೆ ಯಾರು ಉತ್ತರ ನೀಡಬೇಕು ಅಂತ ಸಚಿವರನ್ನು ನಿಯೋಜನೆ ಮಾಡಲಾಗಿದೆ.

     

    ಮಂಡನೆಯಾಗಲಿದೆ ಹಲವು ಮಹತ್ವದ ಮಸೂದೆಗಳು
    ಅಧಿವೇಶನದಲ್ಲಿ ಸುಮಾರು 6ಕ್ಕೂ ಹೆಚ್ಚು ವಿಧೇಯಕಗಳು ಮಂಡನೆ ಆಗಲಿವೆ. ಬಿಬಿಎಂಪಿ ವಿಧೇಯಕ, ರಾಜ್ಯಪಾಲರ ಅಧಿಕಾರ ಮೊಟಕು ಮಾಡುವ ಗ್ರಾಮೀಣಾಭಿವೃದ್ಧಿ ವಿವಿ ವಿಧೇಯಕ, ಠೇವಣಿದಾರರ ಹಿತರಕ್ಷಣೆ ಕಾಯ್ದೆ ವಿಧೇಯಕ, ಗಣಿಗಾರಿಕೆ ಸಂಬಂಧಿಸಿದ ವಿಧೇಯಕ ಸೇರಿ ಹಲವು ಮಹತ್ವದ ವಿಧೇಯಕಗಳು ಮಂಡನೆ ಆಗಲಿದೆ. ಅಲ್ಲದೆ ಉತ್ತರ ಕರ್ನಾಟಕ ಭಾಗದ ಸಮಸ್ಯೆಗಳ ಚರ್ಚೆಗೂ ಹೆಚ್ಚು ಸಮಯ ಮೀಸಲು ಇರಲಿದೆ.

    ವಿಧಾನಸಭೆ ಸಭಾಂಗಣದಲ್ಲಿ ಸ್ಪೀಕರ್ ಪೀಠ ಬದಲಾವಣೆ ಮಾಡಲಾಗಿದೆ. ಬೆಂಗಳೂರಿನ ವಿಧಾನಸಭೆ ಸಭಾಂಗಣದಲ್ಲಿ ಇರುವ ವಿನ್ಯಾಸದ ರೀತಿಯೇ ಬೆಳಗಾವಿಯಲ್ಲೂ ವಿನ್ಯಾಸ ನಿರ್ಮಾಣ ಮಾಡಲಾಗಿದೆ. ಒಟ್ಟಾರೆ 9 ದಿನಗಳ ಅಧಿವೇಶನ ಆಡಳಿತ-ವಿಪಕ್ಷಗಳ ನಡುವೆ ಕಾಳಗಗಕ್ಕೆ ಸಾಕ್ಷಿಯಾಗಲಿದೆ.

  • ಸ್ಥಳೀಯ ಸಂಸ್ಥೆ ಚುನಾವಣೆಯಲ್ಲೂ ಬಿಜೆಪಿ-ಜೆಡಿಎಸ್ ಮೈತ್ರಿ?- ಸೋಮವಾರ ಅಮಿತ್ ಶಾ ಜೊತೆ ನಿಖಿಲ್ ಚರ್ಚೆ

    ಸ್ಥಳೀಯ ಸಂಸ್ಥೆ ಚುನಾವಣೆಯಲ್ಲೂ ಬಿಜೆಪಿ-ಜೆಡಿಎಸ್ ಮೈತ್ರಿ?- ಸೋಮವಾರ ಅಮಿತ್ ಶಾ ಜೊತೆ ನಿಖಿಲ್ ಚರ್ಚೆ

    ಬೆಂಗಳೂರು/ ನವದೆಹಲಿ: ಮುಂಬರುವ ಜಿಲ್ಲಾ ಹಾಗೂ ತಾಲೂಕು ಪಂಚಾಯತ್‌ ಚುನಾವಣೆಗಳಲ್ಲಿ(Taluk Panchayat Election) ರಾಜ್ಯದಲ್ಲಿ ಜೆಡಿಎಸ್- ಬಿಜೆಪಿ (JDS-BJP) ಪರಸ್ಪರ ಸಮನ್ವಯತೆಯಿಂದ ಕೆಲಸ ಮಾಡುವ ನಿಟ್ಟಿನಲ್ಲಿ ಯುವ ಜನತಾದಳ ರಾಜ್ಯಾಧ್ಯಕ್ಷರಾದ ನಿಖಿಲ್ ಕುಮಾರಸ್ವಾಮಿ (Nikhil Kumaraswamy) ಅವರು ರಾಜ್ಯ ಬಿಜೆಪಿ ಉಸ್ತುವಾರಿಗಳಾದ ರಾಧಾಮೋಹನ್ ದಾಸ್ ಅಗರ್ವಾಲ್ (Radha Mohan Das) ಅವರನ್ನು ದೆಹಲಿಯಲ್ಲಿ ಭೇಟಿಯಾಗಿ ಚರ್ಚೆ ನಡೆಸಿದರು.

    ಸ್ಥಳೀಯ ಸಂಸ್ಥೆಗಳ ಚುನಾವಣೆ ಹಾಗೂ ಮುಂದಿನ ದಿನಗಳಲ್ಲಿ ಕರ್ನಾಟಕದಲ್ಲಿ ಎನ್‌ಡಿಎ (NDA) ಮೈತ್ರಿಕೂಟವನ್ನು ಮತ್ತಷ್ಟು ಬಲವರ್ಧನೆಗೊಳಿಸುವ ನಿಟ್ಟಿನಲ್ಲಿ ಅಗತ್ಯ ಸಲಹೆ-ಸೂಚನೆ ಪಡೆದುಕೊಳ್ಳಲು ನಿಖಿಲ್ ಅವರು ಸೋಮವಾರ ಗೃಹ ಸಚಿವರಾದ ಅಮಿತ್ ಶಾ (Amit Shah) ಅವರನ್ನು ಭೇಟಿ ಮಾಡಲಿದ್ದಾರೆ.ಈಗಾಗಲೇ ಗೃಹ ಸಚಿವರು ಸೋಮವಾರ ತಮ್ಮನ್ನು ಭೇಟಿಯಾಗುವಂತೆ ನಿಖಿಲ್ ಅವರಿಗೆ ಸಮಯ ನೀಡಿದ್ದು,ಅದಕ್ಕೆ ಪೂರ್ವಭಾವಿಯಾಗಿ ಅವರು ನವದೆಹಲಿಯಲ್ಲಿ ರಾಧಾ ಮೋಹನ್ ದಾಸ್ ಅಗರ್ವಾಲ್ ಅವರನ್ನು ಶುಕ್ರವಾರ ಭೇಟಿಯಾಗಿ ಮಾತುಕತೆ ನಡೆಸಿದರು. ಇದನ್ನೂ ಓದಿ: ಬಿಬಿಎಂಪಿ ವ್ಯಾಪ್ತಿಯ ರಸ್ತೆ ಅಭಿವೃದ್ಧಿಗೆ 694 ಕೋಟಿ ಅನುದಾನ ಬಿಡುಗಡೆಗೆ ಸಂಪುಟ ಅಸ್ತು!

    ಕಳೆದ ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್ ಬಿಜೆಪಿ ಮೈತ್ರಿಕೂಟ ಕಾಂಗ್ರೆಸ್ ಪಕ್ಷದ ವಿರುದ್ಧ ಪ್ರಬಲ ಹೋರಾಟ ನಡೆಸಿ ಉತ್ತಮ ಫಲಿತಾಂಶ ಸಾಧಿಸಿದೆ. ಜನತೆ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ನಾಯಕತ್ವದಲ್ಲಿ ನಂಬಿಕೆ ಇರಿಸಿದ್ದಾರೆ. ಇದನ್ನು ಉಳಿಸಿ ಬೆಳೆಸಿಕೊಂಡು ಹೋಗುವ ನಿಟ್ಟಿನಲ್ಲಿ ಒಟ್ಟಾಗಿ ಕೆಲಸ ಮಾಡುವ ಅಗತ್ಯ ಇದೆ ಎಂದು ನಿಖಿಲ್ ಅವರು ರಾಧಾ ಮೋಹನ್ ದಾಸ್ ಅಗರ್ವಾಲ್ ಅವರಿಗೆ ಹೇಳಿದ್ದಾರೆ.