Tag: jds

  • ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿರಲು ನಾಲಾಯಕ್: ಜೆಡಿಎಸ್ ಕಿಡಿ

    ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿರಲು ನಾಲಾಯಕ್: ಜೆಡಿಎಸ್ ಕಿಡಿ

    ಬೆಂಗಳೂರು: ಕೆ.ಆರ್ ಮಾರುಕಟ್ಟೆಯಲ್ಲಿ (KR Market) ನಡೆದಿದ್ದ ಸಾಮೂಹಿಕ ಅತ್ಯಾಚಾರ ಕೇಸ್‌ಗೆ ಸಂಬಂಧಿಸಿದಂತೆ ಉಡಾಫೆ ಉತ್ತರ ಕೊಟ್ಟಿದ್ದ ಸಿಎಂ ಸಿದ್ದರಾಮಯ್ಯ (Siddaramaiah) ವಿರುದ್ದ ಜೆಡಿಎಸ್ (JDS) ಕಿಡಿಕಾರಿದೆ.

    ಸಿದ್ದರಾಮಯ್ಯ ವಿರುದ್ದ ಎಕ್ಸ್‌ನಲ್ಲಿ ಕಿಡಿಕಾರಿರುವ ಜೆಡಿಎಸ್, ವಿಪಕ್ಷದಲ್ಲಿ ಇದ್ದಾಗ ಸಿದ್ದರಾಮಯ್ಯ ಮಾಡಿದ್ದ ಟ್ವೀಟ್ ಟ್ಯಾಗ್ ಮಾಡಿ ವಾಗ್ದಾಳಿ ನಡೆಸಿದೆ. ಅಷ್ಟೇ ಅಲ್ಲದೇ ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ನಾಲಾಯಕ್ ಎಂದು ಲೇವಡಿ ಮಾಡಿದೆ. ಇದನ್ನೂ ಓದಿ: KUWSDB ಎಂಜಿನಿಯರ್‌ಗೆ ಉಪಲೋಕಾಯುಕ್ತ ತರಾಟೆ

    ಜೆಡಿಎಸ್ ಟ್ವೀಟ್ ಏನು?
    ಸಿದ್ದರಾಮಯ್ಯ ಅವರೇ ಅಧಿಕಾರ ಅನುಭವಿಸುವಾಗ ನಿಮಗೆ ಮರೆವಿನ ಕಾಯಿಲೆಯೇ? ಬೆಂಗಳೂರಿನ ಕೆ.ಆರ್.ಮಾರ್ಕೆಟ್‌ನಲ್ಲಿ ನಡೆದ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ಇಡೀ ರಾಜ್ಯವೇ ತಲೆ ತಗ್ಗಿಸುವ ಹೀನ ಕೃತ್ಯವಾಗಿದೆ. ಇದನ್ನೂ ಓದಿ: ಹೆಬ್ಬಾಳ್ಕರ್‌ ಕಾರನ್ನು ಬಟ್ಟೆ ಹಾಕಿ ಮುಚ್ಚಿದ್ದು ಯಾಕೆ? – ಮತ್ತೆ ಅನುಮಾನ ವ್ಯಕ್ತಪಡಿಸಿದ ಛಲವಾದಿ

    ಇದನ್ನು ಪ್ರಶ್ನಿಸಿದರೇ ಹಿಂದಿನ ಸರ್ಕಾರಗಳ ಕಾಲದಲ್ಲಿ ರೇಪ್ ಆಗಿಲ್ವಾ ಎಂದು ಸಮರ್ಥಿಸಿಕೊಳ್ಳುವ ನೀವು ರಾಜ್ಯದ ಮುಖ್ಯಮಂತ್ರಿಯಾಗಿರಲು ನಾಲಾಯಕ್ ಸಿದ್ದರಾಮಯ್ಯ. ಇದನ್ನೂ ಓದಿ: ಬಿಜೆಪಿ ಕೋರ್‌ ಕಮಿಟಿ ಸಭೆ – ರಾಮುಲುಗೆ ರಾಧಾಮೋಹನ್‌ ದಾಸ್‌ ಕ್ಲಾಸ್‌!

    ಕಾಂಗ್ರೆಸ್ ಸರ್ಕಾರದ ದುರಾಡಳಿತದಲ್ಲಿ ಕೊಲೆ, ದರೋಡೆ, ಅತ್ಯಾಚಾರ ಪ್ರಕರಣಗಳು ಹೆಚ್ಚುತ್ತಲೇ ಇರುವುದು ರಾಜ್ಯದಲ್ಲಿ ಕುಸಿದುಬಿದ್ದಿರುವುದು ಕಾನೂನು-ಸುವ್ಯವಸ್ಥೆಗೆ ಸಾಕ್ಷಿ ಎಂದು ವಾಗ್ದಾಳಿ ನಡೆಸಿದೆ. ಇದನ್ನೂ ಓದಿ: ಏಯ್‌ ಯತ್ನಾಳ್‌ ಎಲ್ಲವನ್ನ ತೆಗೀಬೇಕಾ? – ಜಿಟಿಡಿ ಖಡಕ್‌ ವಾರ್ನಿಂಗ್‌

  • ಏಯ್‌ ಯತ್ನಾಳ್‌ ಎಲ್ಲವನ್ನ ತೆಗೀಬೇಕಾ? – ಜಿಟಿಡಿ ಖಡಕ್‌ ವಾರ್ನಿಂಗ್‌

    ಏಯ್‌ ಯತ್ನಾಳ್‌ ಎಲ್ಲವನ್ನ ತೆಗೀಬೇಕಾ? – ಜಿಟಿಡಿ ಖಡಕ್‌ ವಾರ್ನಿಂಗ್‌

    – ನನ್ನ ವಿರುದ್ಧ ಭ್ರಷ್ಟಾಚಾರ ಸಾಬೀತು ಮಾಡಿದ್ರೆ ರಾಜೀನಾಮೆ: ಶಾಸಕ ಸವಾಲ್‌

    ಮೈಸೂರು: ನೀನು ಸೌಹಾರ್ದ ಬ್ಯಾಂಕಿನ ಹೆಸರಿನಲ್ಲಿ ಹಣ ಡೆಪಾಸಿಟ್ ಮಾಡಿಸಿಕೊಂಡು, ಅದನ್ನ ಎಲ್ಲೆಲ್ಲಿ ಹೂಡಿಕೆ ಮಾಡಿದ್ಯಾ ಎಂಬುದು ನನಗೆ ಗೊತ್ತಿಲ್ವಾ? ಎಲ್ಲವನ್ನೂ ತೆಗೀಬೇಕಾ? ಎಂದ ಮಾಜಿ ಸಚಿವ ಜಿ.ಟಿ ದೇವೇಗೌಡ (GT Devegowda) ಅವರು, ನಾನು ಭ್ರಷ್ಟಾಚಾರ ಮಾಡಿರೋದನ್ನ ನೀನು ಸಾಬೀತು ಮಾಡಿದ್ರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡುತ್ತೇನೆ ಅಂತ ಶಾಸಕ ಯತ್ನಾಳ್‌ಗೆ (Basanagouda Patil Yatnal) ಬಹಿರಂಗ ಸವಾಲೆಸೆದಿದ್ದಾರೆ.

    ಮೈಸೂರಿನಲ್ಲಿ (Mysuru) ಮಾಧ್ಯಮಗಳೊಂದಿಗೆ ಮಾತನಾಡಿದ ಜಿ.ಟಿ ದೇವೇಗೌಡ ಅವರು, ಮುಡಾದ ಭ್ರಷ್ಟಾಚಾರದಲ್ಲಿ (MUDA Scam) ತಮ್ಮ ಪಾತ್ರವೂ ಇದೇ ಎಂಬ ಶಾಸಕ ಯತ್ನಾಳ್‌ ಹೇಳಿಕೆಗೆ ಕೆರಳಿ ಕೆಂಡವಾದರು. ಈ ವೇಳೆ ಯತ್ನಾಳ್‌ಗೆ ಏಕವಚನದಲ್ಲೇ ಬಹಿರಂಗ ಸವಾಲ್ ಹಾಕಿದರು. ಇದನ್ನೂ ಓದಿ: ಬಾಹ್ಯಾಕಾಶದಿಂದ ಮಹಾ ಕುಂಭಮೇಳ – ಫೊಟೋ ಬಿಡುಗಡೆ ಮಾಡಿದ ಇಸ್ರೋ

    ನನ್ನ ಯೋಗ್ಯತೆ, ನನ್ನ ಆಸ್ತಿ ಲೆಕ್ಕ ನಿನಗೇನು ಗೊತ್ತು? ನಿನಗೆ ತಾಕತ್ ಇದ್ರೆ ನಿನ್ನ ಬಳಿ ನನ್ನದೇನಿದೆ ಬಹಿರಂಗಪಡಿಸು. ನಿನ್ನ ವಿಚಾರವೂ ನನಗೆ ಗೊತ್ತಿದೆ. ನಾನು ಬಹಿರಂಗಪಡಿಸುತ್ತೇನೆ. ನಾನು ಭ್ರಷ್ಟಾಚಾರ ಮಾಡಿರೋದನ್ನ ನೀನು ಸಾಬೀತು ಮಾಡಿದ್ರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡುತ್ತೇನೆ ಎಂದು ಸವಾಲೆಸೆದರು. ಇದನ್ನೂ ಓದಿ: ದೇಹದ ಮೇಲೆ ತರಕಾರಿ ಬಿದ್ದಿತ್ತು, 1 ಗಂಟೆ ನಂತ್ರ ಜನ ಇರೋದು ಗೊತ್ತಾಯ್ತು- 9 ಮಂದಿ ಉಸಿರುಗಟ್ಟಿ ಸಾವನ್ನಪ್ಪಿದ್ರು: ಎಸ್‌ಪಿ

    ನಾನು ಶಾಸಕನಾಗಿ ಬಂದಾಗ ಇದ್ದ ಆಸ್ತಿಗೂ, ಇವತ್ತಿನ ಆಸ್ತಿಗು ಏನು ವ್ಯತ್ಯಾಸ ಇದೆ ಅನ್ನೋದನ್ನ ನೀನು ತೆಗಿ. ನೀನು ರಾಜಕೀಯಕ್ಕೆ ಬಂದಾಗ ಏನಿತ್ತು? ನಂತರ ನೀನು ಹೇಗೆ ದುಂಡಗಾದೆ? ಸೌಹಾರ್ಧ ಬ್ಯಾಂಕಿನ ಹೆಸರಿನಲ್ಲಿ ಹಣ ಡೆಪಾಸಿಟ್ ಮಾಡಿಸಿಕೊಂಡು, ಅದನ್ನ ಎಲ್ಲೆಲ್ಲಿ ಹೂಡಿಕೆ ಮಾಡಿದ್ಯಾ ಎಂಬುದು ನನಗೆ ಗೊತ್ತಿಲ್ವ? ಎಲ್ಲದನ್ನೂ ತೆಗೀಬೇಕಾ? ಯತ್ನಾಳ್‌ಗೆ ಸದಾ ಇನ್ನೊಬ್ಬರ ಬಗ್ಗೆ ಮಾತಾಡುವುದು ಒಂದು ಚಟ. ದಿನವೂ ಅದೇ ಚಟದಲ್ಲಿ ಮಾತಾಡ್ತಾರೆ. ಬೇರೆಯವರಿಗೆ ಮಾತನಾಡಿದಂತೆ ನನ್ನ ಜೊತೆ ಮಾತನಾಡಬೇಡ ಇದು ನಾನು ನಿನಗೆ ಕೊಡ್ತಿರೋ ಎಚ್ಚರಿಕೆ ಎಂದು ವಾರ್ನಿಂಗ್‌ ಕೊಟ್ಟರು.

    ಮುಂದುವರಿದು.. ಯತ್ನಾಳ್‌ಗೆ ಎಷ್ಟು ಆಸ್ತಿ ಇತ್ತು. ಈಗ ಎಷ್ಟಾಗಿದೆ ಗೊತ್ತಾ? ಒಬ್ಬರನ್ನು ಇಂದು ಹೊಗಳುವುದು, ನಾಳೆ ತೆಗಳುವುದು ಯತ್ನಾಳ್ ಗೆ ಚಟ. ಯಾವನೋ ಏನೋ ಹೇಳುತ್ತಾನೆ ಅಂತಾ ನನ್ನ ಬಗ್ಗೆ ಮಾತನಾಡಬೇಡಿ. ಹಿರಿಯ ಮನುಷ್ಯ ಇದ್ಯಾ? ಗೌರವ ಇಟ್ಕೊಂಡು ಮಾತನಾಡು. ನಿನ್ನ ಮೇಲೆ ಶುಗರ್ ಫ್ಯಾಕ್ಟರಿ ವಿಚಾರದಲ್ಲಿ ಎಫ್‌ಐಆರ್‌ ಆಗಿರಲಿಲ್ವಾ? ನೀನು ರಾಜೀನಾಮೆ ಕೊಟ್ಯಾ? ಸೌಹಾರ್ದ ಬ್ಯಾಂಕ್ ವಿಚಾರದಲ್ಲಿ ಯತ್ನಾಳ್ ಮೇಲೆ ತನಿಖೆ ಆಗಲಿ ಆಗ ಗೊತ್ತಾಗುತ್ತೆ. ಭ್ರಷ್ಟಾಚಾರಕ್ಕೆ ಇನ್ನೊಂದು ಹೆಸರೇ ಯತ್ನಾಳ್‌ ಎಂದು ಸಿಡಿಮಿಡಿಗೊಂಡರು.

    ಯತ್ನಾಳ್ ವಿರುದ್ಧ ಕ್ರಮ ಕೈಗೊಳ್ಳದ ವಿಚಾರಕ್ಕೆ ಪ್ರತಿಕ್ರಿಯಿಸಿ, ನನ್ನ ಮೇಲೆ ಆಗಲಿ, ಯತ್ನಾಳ್ ಮೇಲೆ ಆಗಲಿ ಕ್ರಮ ಕೈಗೊಳ್ಳಲು ನಾಯಕರಿಗೆ ಧಮ್‌ ಬೇಕು. ನನ್ನನ್ನ ಪಕ್ಷದಿಂದ ಸಸ್ಪೆಂಡ್ ಮಾಡೋಕೆ ಡಿಸ್ಮಿಸ್ ಮಾಡೋಕೆ ತಾಖತ್, ಧಮ್‌ ಬೇಕು. ಯಾವನಿಗೇ ಆದರೂ ಧಮ್‌ ಇರಬೇಕು. ಜನ ಕಟ್ಟುವ ಶಕ್ತಿ ಇರಬೇಕು. ಆದ್ರೆ ನಾಯಕರಿಗೆ ನನ್ನನ್ನ ಡಿಸ್ಮಿಸ್‌ ಮಾಡೋ ತಾಖತ್ತು, ಧಮ್‌ ನಾಯಕರಿಗಿಲ್ಲ ಎಂದು ಹೇಳಿವ ಮೂಲಕ ಪರೋಕ್ಷವಾಗಿ ಕೇಂದ್ರ ಸಚಿವ ಕುಮಾರಸ್ವಾಮಿ ಅವರಿಗೆ ಕುಟುಕಿದರು.

  • ಅಸಲಿ ಗಾಂಧಿಯವರ ಹಾಡಿನಲ್ಲಿ ಪುಕ್ಕಟೆ ಪ್ರಚಾರ ಪಡೆಯುತ್ತಿರುವ ಕಾಂಗ್ರೆಸ್: ಹೆಚ್‌ಡಿಕೆ ಕಿಡಿ

    ಅಸಲಿ ಗಾಂಧಿಯವರ ಹಾಡಿನಲ್ಲಿ ಪುಕ್ಕಟೆ ಪ್ರಚಾರ ಪಡೆಯುತ್ತಿರುವ ಕಾಂಗ್ರೆಸ್: ಹೆಚ್‌ಡಿಕೆ ಕಿಡಿ

    ನವದೆಹಲಿ: ನಕಲಿ ಗಾಂಧಿಗಳ ಪಕ್ಷ ಈಗ ಬೆಳಗಾವಿಯಲ್ಲಿ ಅಸಲಿ ಗಾಂಧಿಯವರ ಹಾಡಿನಲ್ಲಿ ಪುಕ್ಕಟೆ ಪ್ರಚಾರ ಪಡೆಯುತ್ತಿದೆ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ (H.D.Kumaraswamy) ಲೇವಡಿ ಮಾಡಿದರು.

    ನವದೆಹಲಿಯಲ್ಲಿ ಮಾಧ್ಯಮಗಳು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ ಸಚಿವರು, ರಾಜ್ಯದಲ್ಲಿ ಅತ್ಯಾಚಾರ, ದರೋಡೆಗಳು ನಡೆಯುತ್ತಿವೆ. ಅಪರಾಧಿ ಚಟುವಟಿಕೆಗಳು ಮಿತಿ ಮೀರಿವೆ. ಕಾನೂನು ಸುವ್ಯವಸ್ಥೆ ಹದಗೆಟ್ಟು ಜನರಿಗೆ ಭದ್ರತೆ ಇಲ್ಲದಾಗಿದೆ ಎಂದು ಆರೋಪಿಸಿದರು.

    ಸರ್ಕಾರದಲ್ಲಿ ಒಬ್ಬ ತಹಸಿಲ್ದಾರ್, ಉಪ ವಿಭಾಗಾಧಿಕಾರಿಯನ್ನು ನಿಯಂತ್ರಣ ಮಾಡುವುದು ಇವರಿಗೆ ಆಗುತ್ತಿಲ್ಲ. ಕಾನೂನು ಸುವ್ಯವಸ್ಥೆ ಮೇಲೆ ನಿಯಂತ್ರಣ ಇಲ್ಲ. ಕಾಂಗ್ರೆಸ್ಸಿನವರು ಕರ್ನಾಟಕವನ್ನು ಸಂಪೂರ್ಣ ಮುಗಿಸಲಿಕ್ಕೇ ಬಂದಿದ್ದಾರೆ. ಇದೇನಾ ಗಾಂಧಿ ತತ್ವದ ಆಡಳಿತ ಸಿದ್ದರಾಮಯ್ಯನವರೇ ಎಂದು ಕೇಂದ್ರ ಸಚಿವರು ಗುಡುಗಿದರು.

    ರಾಜ್ಯದಲ್ಲಿ ಗರ್ಭಿಣಿಯರ ಸರಣಿ ಸಾವಿನ ಪ್ರಕರಣಗಳ ವಾಸ್ತವಾಂಶವನ್ನು ಜನರ ಮುಂದೆ ಇಟ್ಟಿಲ್ಲ ಯಾಕೆ? ಯಾಕೆ ಅಷ್ಟು ಜನ ತಾಯಂದಿರು, ನವಜಾತ ಶಿಶುಗಳು ಬಲಿಯಾದದ್ದು? ಇಲ್ಲಿಯೂ 40% ಕಮಿಷನ್ ಎನ್ನುವ ಮಾತು ಕೇಳಿ ಬರುತ್ತಿದೆ. ರಾಜ್ಯದ ಜನರ ತೆರಿಗೆ ಹಣವನ್ನು ಯಾವ ರೀತಿ ಬಳಕೆ ಮಾಡುತ್ತಿದ್ದೀರಿ? ನಿಮಗೆ ಆತ್ಮಸಾಕ್ಷಿ ಎನ್ನುವುದು ಇದೆಯಾ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಇ-ಖಾತಾ ಹೆಸರಲ್ಲೂ ಸರ್ಕಾರ ಲೂಟಿ ಹೊಡೆಯುತ್ತಿದೆ. ರೇರಾ ಬಗ್ಗೆಯೂ ಜನ ಅನುಮಾನದಿಂದ ಮಾತಾಡುತ್ತಿದ್ದಾರೆ. ಈಗಿನ ಕಾಂಗ್ರೆಸ್ ಪಕ್ಷಕ್ಕೆ ಮಹಾತ್ಮ ಗಾಂಧೀಜಿ ಅವರ ಹೆಸರು ಇಡುವ ಯೋಗ್ಯತೆ ಇಲ್ಲ. ಈಗಿನ ಕಾಂಗ್ರೆಸ್ಸಿಗೂ ಸ್ವಾತಂತ್ರ್ಯಪೂರ್ವ ಕಾಂಗ್ರೆಸ್ ಬೇರೆ ಇದೆ. ಇವರು ಮೊನ್ನೆ ಬೆಳಗಾವಿಯಲ್ಲಿ ನಡೆದು ಅರ್ಧಕ್ಕೆ ಅಂತ್ಯವಾಗಿದ್ದ ಅಧಿವೇಶನದ ಜಾಹೀರಾತಿನಲ್ಲಿ ಭಾರತದ ಕಳಸವಾದ ಜಮ್ಮು- ಕಾಶ್ಮೀರದ ಭೂಪಟವೇ ಇರಲಿಲ್ಲ. ಇಂಥ ಇವರು ದೇಶ ಜೋಡಿಸುವವರಾ? ಕಾಂಗ್ರೆಸ್ ಪಕ್ಷಕ್ಕೆ ಅಂತಿಮವಾದ ಚರಮಗೀತೆ ಕರ್ನಾಟಕದಲ್ಲಿ ಆಗುತ್ತದೆ, ನೋಡುತ್ತೀರಿ ಎಂದು ಸಚಿವರು ಕಿಡಿಕಾರಿದರು.

    ಹಿಂದಿನ ಸರ್ಕಾರದ ಅವಧಿಯಲ್ಲಿ ಅತ್ಯಾಚಾರ ಪ್ರಕರಣಗಳು ಆಗಿಯೇ ಇರಲಿಲ್ಲವಾ? ಎಂದು ಸಿಎಂ ಸಿದ್ದರಾಮಯ್ಯ ಅವರು ನೀಡಿರುವ ಹೇಳಿಕೆ ಹೊಣೆಗೇಡಿತನದಿಂದ ಕೂಡಿದೆ. ಹಿಂದೆ ಅತ್ಯಾಚಾರ ಪ್ರಕರಣಗಳು ನಡೆದಿವೆ. ಈಗಲೂ ನಡೆಯಲಿ ಎನ್ನುವುದೇ ಅವರ ಭಾವನೆಯೇ? ಹಿಂದೆ ಆಗಿರುವ ಕೆಟ್ಟದ್ದನ್ನು ಸರಿಪಡಿಸುವುದು ಮುಖ್ಯವೇ ಹೊರತು, ತಮ್ಮ ವೈಫಲ್ಯ ಮುಚ್ಚಿಕೊಳ್ಳುವುದಲ್ಲ. ಸಿಎಂ ಅಪರಾಧ ನಿಯಂತ್ರಣ ಮಾಡುವುದು ಬಿಟ್ಟು ಸಬೂಬು ಹೇಳುತ್ತಿದ್ದಾರೆ. ಇವರು ಎರಡನೇ ಬಾರಿ ಸಿಎಂ ಆಗಿದ್ದಾರೆ. ಗ್ಯಾಂಗ್‌ರೇಪ್ ಪ್ರಕರಣಗಳ ಜೊತೆಗೆ ಕಾನೂನು ಸುವ್ಯವಸ್ಥೆ ಏನಾಗಿದೆ? ಆಡಳಿತ ಎಷ್ಟರ ಮಟ್ಟಿಗೆ ಕುಸಿದಿದೆ ಎಂದು ಹೇಳಲು ಸಾಧ್ಯವೇ ಇಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

    ಗಾಂಧಿ ಹೆಸರು ಹೈಜಾಕ್ ಮಾಡಿದ್ದಾರೆ
    ಬೆಳಗಾವಿ ಕಾಂಗ್ರೆಸ್ ಸಮಾವೇಶ ವಿಚಾರಕ್ಕೆ ಮಾತನಾಡಿದ ಕೇಂದ್ರ ಸಚಿವರು, ಬಾಪು, ಸಂವಿಧಾನ, ಅಂಬೇಡ್ಕರ್ ಬಗ್ಗೆ ಕಾಂಗ್ರೆಸ್ ಈಗ ನೆನಪು ಮಾಡಿಕೊಳ್ಳುತ್ತಿರುವುದು ಹಾಸ್ಯಾಸ್ಪದ. ಇವರು ಏನು ಸಾಧನೆ ಮಾಡಿದ್ದಾರೆ? ಗಾಂಧಿ ಅವರ ಹೆಸರು ಹೈಜಾಕ್ ಮಾಡಿದ್ದಾರೆ. ಗಾಂಧಿ ಕುಟುಂಬ ಎಂದರೆ ಮಹಾತ್ಮಾ ಗಾಂಧಿ ಕುಟುಂಬ ಅಲ್ಲ, ಇಂದಿರಾ ಗಾಂಧಿ ಅವರು ಬಂದ ಮೇಲೆ ಗಾಂಧಿ ಹೆಸರನ್ನು ಹೈಜಾಕ್ ಮಾಡಿದ್ದಾರೆ. ಈಗ ಇರುವವರು ಯಾರೂ ಗಾಂಧಿಗಳು ಅಲ್ಲ ಎಂದು ಸಚಿವರು ಕಿಡಿಕಾರಿದರು.

    ದೇಶಕ್ಕೆ ಪ್ರಧಾನಿ ಮೋದಿ ಅವರ ಕೊಡುಗೆ ದೊಡ್ಡದು
    ನಮ್ಮ ಸಂವಿಧಾನಕ್ಕೆ ಯಾರಿಂದ ಅಪಚಾರ ಆಗಿದೆ? ಎನ್ನುವುದು ದೇಶಕ್ಕೆ ಗೊತ್ತಿದೆ. ಅಂಬೇಡ್ಕರ್ ಅವರಿಗೆ ಕಾಂಗ್ರೆಸ್ ಎಷ್ಟು ಹಿಂದೆ ಕೊಟ್ಟಿದೆ ಎನ್ನುವುದಕ್ಕೆ ಸುದೀರ್ಘ ಇತಿಹಾಸವಿದೆ. ಇವತ್ತು ನರೇಂದ್ರ ಮೋದಿ ಅವರ ಸರ್ಕಾರ ಅಂಬೇಡ್ಕರ್ ಅವರ ಹೆಸರು ಚಿರಸ್ಥಾಯಿ ಆಗುವ ರೀತಿಯಲ್ಲಿ ಕೆಲಸ ಮಾಡುತ್ತಿದೆ ಎಂದು ಹೇಳಿದರು.

    ಗಾಂಧೀಜಿಗೆ ಜಾಹೀರಾತು ಮೂಲಕ ಅಪಚಾರ
    ಕಾಂಗ್ರೆಸ್ ಪಕ್ಷ ಮಹಾತ್ಮ ಗಾಂಧೀಜಿ ಮತ್ತು ಅವರ ನೇತೃತ್ವದಲ್ಲಿ ನಡೆದ ಐತಿಹಾಸಿಕ ಉಪ್ಪಿನ ಸತ್ಯಾಗ್ರಹಕ್ಕೆ ಅಪಚಾರ ಎಸಗಿದೆ. ಸತ್ಯಾಗ್ರಹದಲ್ಲಿ ಮಹಾತ್ಮರನ್ನು ಹಿಂಬಾಲಿಸಿದ್ದ ಮಹಾನ್ ಸ್ವಾತಂತ್ರ್ಯ ಹೋರಾಟಗಾರ ಚಿತ್ರಗಳನ್ನು ತೆಗೆದು, ಆ ಚಿತ್ರವನ್ನು ತಿರುಚಿದೆ. ಮಹಾತ್ಮರ ಹಿಂದೆ ಸಿಎಂ, ಡಿಸಿಎಂ ಅವರು ಸತ್ಯಾಗ್ರಹದಲ್ಲಿ ಭಾಗಿ ಆಗಿದ್ದರು ಎನ್ನುವಂತೆ ತಿರುಚಿ ಪತ್ರಿಕೆಗಳಿಗೆ ಜಾಹೀರಾತು ನೀಡಲಾಗಿದೆ. ಇತಿಹಾಸವನ್ನು ಕಾಂಗ್ರೆಸ್ ಹೇಗೆ ತಿರುಚಿದೆ ಎನ್ನುವುದಕ್ಕೆ ಇದೇ ಸಾಕ್ಷಿ ಎಂದು ಕುಮಾರಸ್ವಾಮಿ ಅವರು ಆಕ್ರೋಶ ವ್ಯಕ್ತಪಡಿಸಿದರು.

    ಇವರು ಕೊಟ್ಟಿರುವ ಜಾಹೀರಾತಿನಂತೆ ಕಾಂಗ್ರೆಸ್‌ನವರು ಯಾವ ಗಾಂಧಿ ತತ್ವ ಅನುಸರಿಸುತ್ತಿದ್ದಾರೆ? ಯಾವ, ಯಾರ ಆದರ್ಶ ಪಾಲನೆ ಮಾಡಲಾಗುತ್ತಿದ್ದಾರೆ? ಯಾವ ಗಾಂಧಿ ತತ್ವದ ಮೇಲೆ ಕರ್ನಾಟಕದಲ್ಲಿ ಆಡಳಿತ ನಡೆಯುತ್ತಿದೆ? ರಾಜ್ಯದಲ್ಲಿ ಆಡಳಿತವೇ ಕುಸಿದಿದೆ. ವಾಲ್ಮೀಕಿ ನಿಗಮ ಹಗರಣ, ಮೂಡಾ ಹಗರಣ.. ಎಷ್ಟು ಹಗರಣಗಳ ಪಟ್ಟಿ ಬೇಕು? ಇದಾ ಆಡಳಿತ ಎಂದು ಕಿಡಿಕಾರಿದರು.

  • ಕರ್ನಾಟಕದಲ್ಲಿ ಗೃಹ ಇಲಾಖೆ ಸತ್ತು ಹೋಗಿದೆ: ಶರವಣ ವ್ಯಂಗ್ಯ

    ಕರ್ನಾಟಕದಲ್ಲಿ ಗೃಹ ಇಲಾಖೆ ಸತ್ತು ಹೋಗಿದೆ: ಶರವಣ ವ್ಯಂಗ್ಯ

    ಬೆಂಗಳೂರು: ಕರ್ನಾಟಕದಲ್ಲಿ ಕಾನೂನು ಸುವ್ಯವಸ್ಥೆ ಹಾಳಾಗಿದ್ದು, ಲೂಟಿಕೋರರು, ದರೋಡೆಕೋರರಿಗೆ ಸ್ವರ್ಗವಾಗಿದೆ ಎಂದು ಜೆಡಿಎಸ್ (JDS) ಶಾಸಕ ಶರವಣ (Sharavana) ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

    ವಿಧಾನಸೌಧದಲ್ಲಿ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಈ ವೇಳೆ, ಮಂಗಳೂರು (Mangaluru), ಬೀದರ್ (Bidar) ದರೋಡೆ ವಿಚಾರವಾಗಿ ಪ್ರತಿಕ್ರಿಯಿಸಿದರು. ಕರ್ನಾಟಕ ಲೂಟಿಕೋರರು, ದರೋಡೆ ಮಾಡೋರಿಗೆ ಸ್ವರ್ಗವಾಗಿದೆ.ಗೃಹ ಇಲಾಖೆ ಸತ್ತು ಹೋಗಿದೆ ಎಂದು ಜನ ಪ್ರಶ್ನೆ ಮಾಡ್ತಿದ್ದಾರೆ. 4-5 ದಿನಗಳಿಂದ ಬೀದರ್, ಮಂಗಳೂರು, ಮೈಸೂರು ಭಾಗದಲ್ಲಿ ದರೋಡೆ, ಲೂಟಿ ಕೇಸ್‌ಗಳು ಆಗಿವೆ. ಬೆಂಗಳೂರಿನಲ್ಲಿ ಜ್ಯುವೆಲರಿ ಶಾಪ್‌ನಲ್ಲಿ 8.5 ಕೆಜಿ ಚಿನ್ನ ಲೂಟಿ ಮಾಡಿದ್ದಾರೆ. ನನ್ನ ಅಂಗಡಿ ಚಿನ್ನ ಹಾಲ್ ಮಾರ್ಕ್‌ಗೆ ಕೊಟ್ಟಾಗ ಚಿನ್ನ ಕಳ್ಳತನ ಆಗಿದೆ. ಕರ್ನಾಟಕದಲ್ಲಿ ಜನರು ಸುರಕ್ಷಿತವಾಗಿಲ್ಲ. ಎಲ್ಲರೂ ಭಯಭೀತರಾಗಿದ್ದಾರೆ. ಗೃಹ ಸಚಿವರು ಮನೆ ಬಿಟ್ಟು ಹೊರೆಗೆ ಬಂದು ಪೊಲೀಸ್ ವ್ಯವಸ್ಥೆ ಬಿಗಿ ಮಾಡ್ತಿಲ್ಲ ಎಂದು ಗೃಹ ಸಚಿವರ ವಿರುದ್ಧ ಕಿಡಿಕಾರಿದ್ದಾರೆ.

    ಕಾಂಗ್ರೆಸ್ ನಾಯಕರು ಬೆಳಗಾವಿಯಲ್ಲಿ ಗಾಂಧಿ ಸಮಾವೇಶ ಮಾಡಿ ಜಪ, ಶಾಂತಿ ಅಂತ ಮಾತಾಡ್ತಿದ್ದಾರೆ. ಕಾಂಗ್ರೆಸ್‌ನಲ್ಲಿ ಪವರ್ ಫೈಟ್ ಜೋರಾಗಿದೆ. ಇದರಲ್ಲಿ ಈ ಸರ್ಕಾರ ಮುಳುಗಿ ಕಾನೂನು ಸುವ್ಯವಸ್ಥೆ ಕಾಪಾಡ್ತಿಲ್ಲ. ಇವತ್ತು ಕ್ರೈಂ ಜಾಸ್ತಿ ಆಗೋಕೆ ಈ ಸರ್ಕಾರ ಕಾರಣ. ಪೊಲೀಸ್ ವ್ಯವಸ್ಥೆ ಹದಗೆಟ್ಟಿದೆ. ಸಮಾಜಘಾತುಕ ಶಕ್ತಿಗಳಿಗೆ ಈ ಸರ್ಕಾರದಲ್ಲಿ ಭಯ ಇಲ್ಲದಂತೆ ಆಗಿದೆ. ಹಾಡುಹಗಲೆ ಕೊಲೆ ಆಗ್ತಿದೆ. ಬೆಂಗಳೂರು ಸೇಫ್ ಸಿಟಿ ಅಂತ ಇತ್ತು‌. ಈಗ ಕ್ರೈಂ ಸಿಟಿ ಆಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.

    ಪೊಲೀಸ್ ಇಲಾಖೆಯನ್ನ ಬಿಗಿ ಮಾಡೋ ಕೆಲಸ ಸರ್ಕಾರ ಮಾಡಬೇಕು. ಬಂಡವಾಳ ಹೂಡಿಕೆ ಮಾಡೋರು ಹೇಗೆ ಬರೋದು ಅಂತ ಪ್ರಶ್ನೆ ಮಾಡ್ತಿದ್ದಾರೆ. ಬೇರೆ ಬೇರೆ ರಾಜ್ಯದಿಂದ ಜ್ಯುವೆಲರಿ ಶಾಪ್ ಬರೋಕೆ ಹೆದರುತ್ತಿದ್ದಾರೆ‌. ಸರ್ಕಾರ ಎಚ್ಚೆತ್ತುಕೊಳ್ಳಬೇಕು. ಸರ್ಕಾರ ಇದಕ್ಕೆ ಕ್ರಮ ತೆಗೆದುಕೊಳ್ಳದೇ ಹೋದ್ರೆ ಬಿಜೆಪಿ-ಜೆಡಿಎಸ್ ಜಂಟಿಯಾಗಿ ಹೋರಾಟ ಮಾಡುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

  • Bharat Mobility Global Expo | ವಿನೂತನ ವಾಹನಗಳ ವಿಶ್ವರೂಪವನ್ನೇ ನೋಡ್ತಿದ್ದೇನೆ: ಹೆಚ್‌ಡಿಕೆ

    Bharat Mobility Global Expo | ವಿನೂತನ ವಾಹನಗಳ ವಿಶ್ವರೂಪವನ್ನೇ ನೋಡ್ತಿದ್ದೇನೆ: ಹೆಚ್‌ಡಿಕೆ

    ನವದೆಹಲಿ: ಇಲ್ಲಿನ ಭಾರತ್ ಮಂಟಪದಲ್ಲಿ ನಡೆಯುತ್ತಿರುವ ಭಾರತ್ ಮೊಬಿಲಿಟಿ ಗ್ಲೋಬಲ್ ಎಕ್ಸ್ಪೋಗೆ ಭೇಟಿ ನೀಡಿದ ಕೇಂದ್ರ ಬೃಹತ್ ಕೈಗಾರಿಕೆ ಹಾಗೂ ಉಕ್ಕು ಖಾತೆ ಸಚಿವ ಹೆಚ್‌ಡಿ ಕುಮಾರಸ್ವಾಮಿ |(HD Kumaraswamy) ವಿವಿಧ ಅಟೋಮೊಬೈಲ್ ಮಳಿಗೆಗಳ ವೀಕ್ಷಣೆ ಮಾಡಿದರು.

    ಈ ವೇಳೆ ಮಾತನಾಡಿದ ಅವರು, ಒಂದೇ ಕಡೆಯಲ್ಲಿ ವಿನೂತನ ವಾಹನಗಳ ವಿಶ್ವರೂಪವನ್ನೇ ನೋಡುತ್ತಿದ್ದೇನೆ, ಅತ್ಯಾಧುನಿಕ ತಂತ್ರಜ್ಞಾನದಿಂದ ತಯಾರಾಗಿರುವ ಹೊಸ ತಲೆಮಾರಿನ ವಾಹನಗಳನ್ನು ನೋಡಿ ಚಕಿನಾಗಿದ್ದೇನೆ ಎಂದು ಉದ್ಘಾರ ತೆಗೆದರು. ಜೊತೆಗೆ ಹೈಡ್ರೋಜನ್ ಇಂಧನ ತಂತ್ರಜ್ಞಾನದಿಂದ ತಯಾರಿಸಲಾಗಿರುವ ಟ್ರಕ್ ಅನ್ನು ವೀಕ್ಷಿಸಿ, ಆ ಟ್ರಕ್‌ನಲ್ಲಿ ಕೊಂಚ ದೂರ ಸಂಚರಿಸಿ ಅದರ ಕ್ಷಮತೆಯನ್ನು ಪರಿಶೀಲನೆ ಮಾಡಿದರು. ಇಂಗಾಲ ಹೊರಸೂಸುವಿಕೆಯನ್ನು ಶೂನ್ಯ ಮಟ್ಟಕ್ಕೆ ಇಳಿಸುವ ಕೇಂದ್ರ ಸರ್ಕಾರ ಉಪಕ್ರಮವಾಗಿ ಈಗಾಗಲೇ ಅನೇಕ ಯೋಜನೆಗಳನ್ನು ಜಾರಿ ಮಾಡಲಾಗಿದೆ. ಹೈಡ್ರೋಜನ್ ತಂತ್ರಜ್ಞಾನ ಆಧಾರಿತ ವಾಹನಗಳ ತಯಾರಿಕೆಗೆ ಹೆಚ್ಚು ಪ್ರೋತ್ಸಾಹ ಕೊಡಲಾಗುವುದು ಎಂದು ಹೇಳಿದರು.ಇದನ್ನೂ ಓದಿ: ಭಂಡತನ ಬಿಟ್ಟು ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಡಿ – ವಿಜಯೇಂದ್ರ ಆಗ್ರಹ

    ಖಾಸಗಿ ಗಗನಯಾನ ಕಂಪನಿಯ ಮಳಿಗೆಯೊಂದಕ್ಕೆ ಭೇಟಿ ನೀಡಿ, ಎಲೆಕ್ಟ್ರಿಕ್ ಗಗನನೌಕೆ ಅಥವಾ ಹಾರುವ ಟ್ಯಾಕ್ಸಿಯನ್ನು ಕುತೂಹಲದಿಂದ ವೀಕ್ಷಿಸಿದರು. ದೂರದಿಂದಲೇ ಅದನ್ನು ಗಮನಿಸಿ, ಗಗನ ನೌಕೆಯ ಒಳಾಂಗಣವನ್ನು ಸೇರಿದಂತೆ ಗಗನನೌಕೆ ತಾಂತ್ರಿಕ ಅಂಶಗಳು, ಅದರ ಬಳಕೆ, ಉಪಯೋಗಗಳ ಬಗ್ಗೆ ನಿಪುಣರಿಂದ ಮಾಹಿತಿ ಪಡೆದುಕೊಂಡರು. ನಗರ ಪ್ರದೇಶಗಳಲ್ಲಿ ಹೆಚ್ಚು ಉಪಯುಕ್ತವಾಗಿರುವ ಹಾರುವ ಟ್ಯಾಕ್ಸಿಯ ಅಭಿವೃದ್ಧಿಗೆ ಆ ಕಂಪನಿಯು 10 ದಶಲಕ್ಷ ಡಾಲರ್ ಮೊತ್ತವನ್ನು ಹೂಡಿಕೆ ಮಾಡಿದೆ. 2028ಕ್ಕೆ ಈ ಹಾರುವ ಟ್ಯಾಕ್ಸಿ ಸೇವೆ ಆರಂಭಿಸಲು ಕಂಪನಿ ನಿರ್ಧರಿಸಿದೆ ಎನ್ನುವ ಮಾಹಿತಿ ಪಡೆದುಕೊಂಡರು.

    ಆಕರ್ಷಕ ಹಾರುವ ಟ್ಯಾಕ್ಸಿ ಜೊತೆಗೆ ಭಾರತ್ ಮೊಬಿಲಿಟಿ ಎಕ್ಸ್ಪೋದಲ್ಲಿ ಇವಿ ವಲಯದಲ್ಲಿ ಆಗಿರುವ ಪ್ರಗತಿಯನ್ನು ಅನಾವರಣಗೊಳಿಸಿತು. ಎಲೆಕ್ಟ್ರಿಕ್ ವಲಯದ ಪ್ರಮುಖ ತಯಾರಕರು ತಮ್ಮ ಇತ್ತೀಚಿನ ಇವಿ ವಾಹನಗಳ ಮಾದರಿಗಳನ್ನು ಸಚಿವರಿಗೆ ತೋರಿಸಿದರು. ಇಂಗಾಲದ ಹೊರಸೂಸುವಿಕೆಯನ್ನು ಕಡಿಮೆ ಮಾಡಲು ಮತ್ತು ಸುಸ್ಥಿರ ಚಲನಶೀಲತೆಯನ್ನು ಉತ್ತೇಜಿಸಲು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕ್ರಮಗಳ ಫಲ ಪ್ರದರ್ಶನದಲ್ಲಿ ಕಂಡು ಬಂದಿತು ಎಂದು ಹೇಳಿದರು.

    ಅಟೋಮೊಬೈಲ್ ಕ್ಷೇತ್ರದ ಜೊತೆಗೆ ಬೆಸೆದುಕೊಂಡಿರುವ ಉಕ್ಕು ಕ್ಷೇತ್ರದ ಹಲವಾರು ಕಂಪನಿಗಳು ಪ್ರದರ್ಶನದಲ್ಲಿ ತಮ್ಮ ಮಳಿಗೆಗಳನ್ನು ತೆರೆದಿದ್ದವು. ಮುಖ್ಯವಾಗಿ ಭಾರತೀಯ ಉಕ್ಕು ಪ್ರಾಧಿಕಾರ ಮಳಿಗೆಗೆ ಭೇಟಿ ಕೊಟ್ಟರು. ರಾಷ್ಟ ನಿರ್ಮಾಣಕ್ಕಾಗಿ ಪ್ರಾಧಿಕಾರ ತೊಡಗಿಸಿಕೊಂಡಿರುವ ವಿವಿಧ ಯೋಜನೆಗಳ ಬಗ್ಗೆ ಪ್ರಾಧಿಕಾರದ ಅಧ್ಯಕ್ಷ ಅಮರೆಂದು ಪ್ರಕಾಶ್ ಅವರಿಂದ ಕೂಲಂಕಷವಾಗಿ ಮಾತನಾಡಿ, ವಿವರ ತಿಳಿದುಕೊಂಡರು. ವಂದೇ ಭಾರತ್ ರೈಲು, ಯುದ್ಧ ಟ್ಯಾಂಕರ್‌ಗಳು, ಬೃಹತ್ ಸೇತುವೆಗಳು, ಯುದ್ಧ ನೌಕೆಗಳು, ವಾಹನಗಳಿಗೆ ಉಕ್ಕು ಬಳಸಲ್ಪಟ್ಟಿರುವ ವಿವಿಧ ಯಂತ್ರಗಳನ್ನು ಗಮನಿಸಿ, ಇವೆಲ್ಲಕ್ಕೂ ಉಕ್ಕು ಪ್ರಾಧಿಕಾರ ವತಿಯಿಂದ ಗುಣಮಟ್ಟದ ಉಕ್ಕು ಪೂರೈಕೆ ಮಾಡಲಾಗುತ್ತಿದೆ ಎಂದರು.

    ಈ ಸಂದರ್ಭದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಭಾರತ್ ಮೊಬಿಲಿಟಿ ಗ್ಲೋಬಲ್ ಎಕ್ಸ್ಪೋ 2025ನಲ್ಲಿ ಪ್ರದರ್ಶಿಸಲಾದ ಆವಿಷ್ಕಾರಗಳು ಸುಸ್ಥಿರ ಮತ್ತು ಸುಧಾರಿತ ಚಲನಶೀಲತೆ ಪರಿಹಾರಗಳಲ್ಲಿ ಪ್ರಮುಖವಾದವು. ದೇಶದ ಮುನ್ನಡೆಗೆ ಅವು ಪೂರಕವಾಗಿವೆ. ಭವಿಷ್ಯದ ಭಾರತಕ್ಕೆ ಇವೆಲ್ಲವೂ ದೊಡ್ಡ ಶಕ್ತಿಯನ್ನು ತುಂಬುತ್ತವೆ ಎಂದರು.ಇದನ್ನೂ ಓದಿ: ಅಪ್ರಾಪ್ತೆ ಮೇಲೆ ಅತ್ಯಾಚಾರ ಎಸಗಿದ ಕಾಮುಕನಿಗೆ 20 ವರ್ಷ ಜೈಲು

  • ಸಂಸದ ಡಾ.ಮಂಜುನಾಥ್ ನೇತೃತ್ವದಲ್ಲಿ ದಿಶಾ ಸಭೆ – ಅಧಿಕಾರಿಗಳಿಗೆ ಶಿಸ್ತಿನ ಪಾಠ

    ಸಂಸದ ಡಾ.ಮಂಜುನಾಥ್ ನೇತೃತ್ವದಲ್ಲಿ ದಿಶಾ ಸಭೆ – ಅಧಿಕಾರಿಗಳಿಗೆ ಶಿಸ್ತಿನ ಪಾಠ

    ರಾಮನಗರ: ಇಂದು ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಸಂಸದ ಡಾ.ಮಂಜುನಾಥ್ (Dr Manjunath) ನೇತೃತ್ವದಲ್ಲಿ ದಿಶಾ ಕಮಿಟಿ ಸಭೆ (Disha Committee Meeting) ನಡೆಸಲಾಯಿತು.

    ರಾಮನಗರದ (Ramanagara) ಜಿ.ಪಂ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಕೇಂದ್ರ ಪುರಸ್ಕೃತ ಯೋಜನೆಗಳ ಪ್ರಗತಿ ಪರಿಶೀಲನೆ ನಡೆಸಲಾಯಿತು. ಜಿಲ್ಲಾಮಟ್ಟದ ಅಧಿಕಾರಿಗಳಿಂದ ಅಭಿವೃದ್ಧಿ ಕುರಿತು ಡಾ.ಮಂಜುನಾಥ್ ಮಾಹಿತಿ ಸಂಗ್ರಹ ಮಾಡಿದರು. ಆಸ್ಪತ್ರೆಗಳಲ್ಲಿ ವೈದ್ಯರ ಸಮಸ್ಯೆ, ನಗರ ವ್ಯಾಪ್ತಿಯ ಕಸದ ಸಮಸ್ಯೆ, ರಸ್ತೆ ಅಪಘಾತ ತಡೆಗಟ್ಟುವ ನಿಟ್ಟಿನಲ್ಲಿ ಸುರಕ್ಷತಾ ಅಭಿಯಾನ, ಸ್ಮಶಾನ ಅಭಿವೃದ್ಧಿ, ತೋಟಗಾರಿಕೆ ಬೆಳೆಗಳಿಗೆ ಉತ್ತೇಜನ ನೀಡುವ ಬಗ್ಗೆ ಚರ್ಚೆ ನಡೆಸಿದರು. ಇದನ್ನೂ ಓದಿ: 2027ರ ವೇಳೆಗೆ ಮೈಸೂರು-ಕುಶಾಲನಗರ 4 ಪಥದ ರಸ್ತೆ ಕಾಮಗಾರಿ ಪೂರ್ಣ – ಯದುವೀರ್

    ಇನ್ನೂ ಸಭೆ ಆರಂಭಕ್ಕೂ ಮುನ್ನ ಅಧಿಕಾರಿಗಳಿಗೆ ಸಂಸದ ಡಾ.ಮಂಜುನಾಥ್ ಶಿಸ್ತಿನ ಪಾಠ ಮಾಡಿದರು. ಸಭೆ ನಡುವೆ ಯಾರೂ ಮೊಬೈಲ್ ಬಳಕೆ ಮಾಡಬೇಡಿ. ಏನಾದರೂ ತುರ್ತು ಕರೆಗಳಿದ್ದರೆ ಮಾತ್ರ ಬಳಕೆ ಮಾಡಿ. ಅದರ ಹೊರತಾಗಿ ಸಾಮಾಜಿಕ ಜಾಲತಾಣ ನೋಡುತ್ತಾ ಕೂರಬೇಡಿ. ಇದರಿಂದ ಸಭೆಗೆ ಅಗೌರವ ಹಾಗೂ ಸಭೆ ಉದ್ದೇಶಕ್ಕೆ ಧಕ್ಕೆ ಆಗುತ್ತೆ. ಅಲ್ಲದೇ ನಿಮ್ಮ ಕೆಲಸಗಳು ಜನರ ಬಳಿ ತಲುಪಿದಾಗ ಮಾತ್ರ ಜನ ನಿಮ್ಮನ್ನ ನೆನಪಿಸಿಕೊಳ್ಳುತ್ತಾರೆ. ಇಲ್ಲವಾದರೆ ನೀವು ಬೇಗ ಇಲ್ಲಿಂದ ಹೋಗಿ ಎಂದು ಶಾಪ ಹಾಕುತ್ತಾರೆ. ಅಧಿಕಾರಿಗಳು ಮಾನವೀಯತೆ ಇಟ್ಟುಕೊಂಡು ಕೆಲಸ ಮಾಡಿ ಎಂದು ಸಲಹೆ ನೀಡಿದರು. ಇದನ್ನೂ ಓದಿ: ಬಾಣಂತಿಯರಿಗೆ ಕೊಡಗು ಸೇಫ್‌

  • ದೇವೇಗೌಡರ ಆಪ್ತ ಪಟೇಲ್ ಶಿವರಾಂ ನಿಧನ

    ದೇವೇಗೌಡರ ಆಪ್ತ ಪಟೇಲ್ ಶಿವರಾಂ ನಿಧನ

    ಹಾಸನ: ಮಾಜಿ ವಿಧಾನ ಪರಿಷತ್ ಸದಸ್ಯ ಹಾಗೂ ಅಪೆಕ್ಸ್ ಬ್ಯಾಂಕ್ ಹಾಲಿ ನಿರ್ದೇಶಕ ಪಟೇಲ್ ಶಿವರಾಂ (75) (Patel Shivaram) ವಿಧಿವಶರಾಗಿದ್ದಾರೆ.

    ನಗರದ (Hassan) ಹೌಸಿಂಗ್ ಬೋರ್ಡ್ ನಿವಾಸದಲ್ಲಿ ಅವರು ನಿಧನರಾಗಿದ್ದಾರೆ. ಹಲವು ದಿನಗಳಿಂದ ಅವರು ಅನಾರೋಗ್ಯದಿಂದ ಬಳಲುತ್ತಿದ್ದರು. 2010-2016 ರವರೆಗೆ ವಿಧಾನ ಪರಿಷತ್ ಸದಸ್ಯರಾಗಿ ಅವರು ಸೇವೆಸಲ್ಲಿಸಿದ್ದರು. ಅಲ್ಲದೇ ಹೆಚ್‌ಡಿಸಿಸಿ ಬ್ಯಾಂಕ್ ಅಧ್ಯಕ್ಷ, ನಿರ್ದೇಶಕ, ಹಾಸನ ಹಾಲು ಒಕ್ಕೂಟದ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದರು.

    ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ (H.D Devegowda ) ಹಾಗೂ ಅವರ ಕುಟುಂಬಕ್ಕೆ ಪಟೇಲ್ ಆಪ್ತರಾಗಿದ್ದರು. ಈ ಮೂಲಕ ಹಾಸನ ಜಿಲ್ಲೆಯ ಪ್ರಭಾವಿ ಜೆಡಿಎಸ್ ಮುಖಂಡರಾಗಿದ್ದರು. ಸುಮಾರು ನಾಲ್ಕು ದಶಕಗಳಿಂದ ಜೆಡಿಎಸ್‌ನಲ್ಲಿ (JDS) ಸಕ್ರಿಯರಾಗಿದ್ದರು.

  • ಜೆಡಿಎಸ್‌ ರಾಜ್ಯಾಧ್ಯಕ್ಷರ ಆಯ್ಕೆಗೆ ಮುಹೂರ್ತ ಫಿಕ್ಸ್‌ – ಹೆಚ್‌ಡಿಕೆ ಹೇಳಿದ್ದೇನು?

    ಜೆಡಿಎಸ್‌ ರಾಜ್ಯಾಧ್ಯಕ್ಷರ ಆಯ್ಕೆಗೆ ಮುಹೂರ್ತ ಫಿಕ್ಸ್‌ – ಹೆಚ್‌ಡಿಕೆ ಹೇಳಿದ್ದೇನು?

    ಬೆಂಗಳೂರು: ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷರ ಆಯ್ಕೆಗೆ ಮುಹೂರ್ತ ಫಿಕ್ಸ್‌ ಆಗಿದೆ. ಈ ಕುರಿತು ಕೇಂದ್ರ ಸಚಿವ ಹೆಚ್‌ಡಿ ಕುಮಾರಸ್ವಾಮಿ ಅವರು ಮಾಹಿತಿ ನೀಡಿದ್ದಾರೆ.

    ಜೆ.ಪಿ.ಭವನದಲ್ಲಿ ಸಭೆ ಬಳಿಕ ಮಾತನಾಡಿದ ಅವರು, ಪಕ್ಷದ ಸಾಂಸ್ಥಿಕ ಚುನಾವಣೆ, ಸದಸ್ಯತ್ಯ ನೋಂದಣಿ ಮಾಡಬೇಕೆಂಬ ತೀರ್ಮಾನ ಆಯ್ತು. ಮುಂದಿನ ಏಪ್ರಿಲ್ ಒಳಗೆ ರಾಜ್ಯದ ಘಟಕದ ಅಧ್ಯಕ್ಷ ಸ್ಥಾನವನ್ನು ಚುನಾವಣೆ ಮೂಲಕ ಆಯ್ಕೆ ಮಾಡುವ ತೀರ್ಮಾನ ಆಗಿದೆ. ಪಕ್ಷದ ಸಂಘಟನೆ ಬಗ್ಗೆ ಪಕ್ಷದ ನಾಯಕರಿಗೆ ಕಠಿಣವಾಗಿಯೇ ಹೇಳಿದ್ದೇನೆ. ಯಾರು ಪ್ರಾಮಾಣಿಕವಾಗಿ ಪಕ್ಷದ ಸಂಘಟನೆಗೆ ದುಡೀತಾರೋ ಅಂಥವರಿಗೆ ಆದ್ಯತೆ ಕೊಡ್ತೀವಿ ಅಂದಿದ್ದೇವೆ. ರಾಜ್ಯಾಧ್ಯಕ್ಷ ಸ್ಥಾನಕ್ಕೆ ಯಾರ ಹೆಸರು ಆಯ್ಕೆ ಆಗಬೇಕು ಅಂತ ಇವತ್ತಿನ ಸಭೆಯಲ್ಲಿ ಚರ್ಚೆ ಆಗಿಲ್ಲ ಎಂದು ಸ್ಪಷ್ಟಪಡಿಸಿದರು.

    ವಾರದಲ್ಲಿ ನಾಲ್ಕು ದಿನ ದೆಹಲಿಗೆ ಸಚಿವಾಲಯದಲ್ಲಿ ಇಲಾಖೆ ಸಭೆ, ಇಲಾಖೆ ಕೆಲಸ ಮಾಡ್ತೇನೆ. ವಾರದಲ್ಲಿ ಒಂದು ದಿನ ಅಥವಾ ಎರಡು ದಿನ ದೇಶದ ಸ್ಟೀಲ್ ಇಂಡಸ್ಟ್ರಿಗಳಿಗೆ ಖುದ್ದು ಭೇಟಿ ಮಾಡ್ತೇನೆ. ಸ್ಟೀಲ್ ಇಂಡಸ್ಟ್ರಿಗಳು ಲಾಭತರಲ್ಲ ಅನ್ನುವ ಭಾವನೆ ಏನಿದೆ, ಅದನ್ನು ಹೋಗಲಾಡಿಸಬೇಕು. ಇನ್ನು ವಾರದಲ್ಲಿ ಒಂದೆರಡು ದಿನ ಪಕ್ಷದ ಸಂಘಟನೆ ಸಭೆ, ಪ್ರವಾಸ, ಮಂಡ್ಯ ಭೇಟಿ ಮಾಡಬೇಕು ಅಂತ ಟೈಮ್‌ಟೇಬಲ್ ನಾನೇ ರೆಡಿ‌ ಮಾಡ್ಕೊಂಡಿದ್ದೇನೆ ಎಂದರು.

    ಕಾಂಗ್ರೆಸ್ ನಮ್ಮ ಶಾಸಕರನ್ನು ಆಪರೇಷನ್ ಮಾಡ್ತಿದೆ. ‘ಜೆಡಿಎಸ್‌ನಲ್ಲಿ ಗಢಗಢ, ಸಂಕ್ರಾಂತಿ ನಂತರ ಜೆಡಿಎಸ್ ಇರೋದೇ ಇಲ್ಲ…’ ಹೀಗೆ ಯಾರಾದ್ರೂ ನಿಮಗೆ ಹೇಳಿದರೆ ನಂಬಬೇಡಿ. ಮೊದಲು ಕಾಂಗ್ರೆಸ್‌ನವರು ಅವರ ಪಕ್ಷದ ಬಗ್ಗೆ ನೋಡಿಕೊಳ್ಳಲಿ. ದೆಹಲಿಯಲ್ಲಿ ಏನಾಗಿದೆ? ಇಂಡಿ ಕೂಟದ ಒಳಗೆ ಏನಾಗ್ತಿದೆ ನೋಡಿಕೊಳ್ಳಿ. ನಿಮ್ಮ ಪಕ್ಷದ ತಟ್ಟೆಯಲ್ಲಿ ಹೆಗ್ಗಣ ಬಿದ್ದಿದೆ. ಎಂಬಿ ಪಾಟೀಲರೇ ಅದನ್ನು ಮೊದಲು ನೋಡಿ, ಬೇರೆಯವರಿಗೂ ಇದು ಅನ್ವಯ. ನಮಗೆ, ನಮ್ಮ ಕುಟುಂಬಕ್ಕೆ ಸೋಲು-ಗೆಲುವು ಹೊಸದೇನಲ್ಲ. ಸೋತಾಗ ಕುಗ್ಗಿಲ್ಲ, ಗೆದ್ದಾಗ ಹಿಗ್ಗಿಲ್ಲ ಎಂದು ತಿರುಗೇಟು ನೀಡಿದರು.

    ಹಸುಗಳ ಕೆಚ್ಚಲು ಕೊಯ್ದ ಪ್ರಕರಣಕ್ಕೆ ತೀವ್ರ ಖಂಡನೆ ವ್ಯಕ್ತಪಡಿಸಿದ ಹೆಚ್‌ಡಿಕೆ, ಇದು ರಾಕ್ಷಸೀ ಕೃತ್ಯ. ಕಾಂಗ್ರೆಸ್ ಆಡಳಿತ ಇವತ್ತು ಎಲ್ಲಿಗೆ ಬಂದಿದೆ? ಇಲ್ಲಿಯವರೆಗೆ ಮನುಷ್ಯರನ್ನು ಕೊಲ್ಲೋದನ್ನು ನೋಡಿದ್ದೀವಿ. ಕಾಮಧೇನು, ಮಹಾಲಕ್ಷ್ಮಿ ಹಾಗೆ. ಅಂಥ ಕಾಮದೇನು ಕೆಚ್ಚಲು ಕೊಯ್ಯುವ ಹೇಯ ಕೃತ್ಯ ಮಾಡಿರುವ ಆ ಕೆಟ್ಟ ಮನಸ್ಥಿತಿಗೆ ಏನನ್ನಬೇಕು. ಪರಮೇಶ್ವರ್ ಅವರು ಈ ನಿಟ್ಟಿನಲ್ಲಿ ಕಠಿಣ ಕ್ರಮ ತಗೋಬೇಕು. ಅವರ ಬೆಣ್ಣೆ ಮಾತು ನಡೆಯಲ್ಲ ಎಂದು ತರಾಟೆಗೆ ತೆಗೆದುಕೊಂಡರು.

    ಡಿನ್ನರ್ ಮೀಟಿಂಗ್ ನಿಲ್ಸಿ, ಆಡಳಿತ ಸರಿ ಮಾಡೋದನ್ನು ನೋಡಿ. ಇಂಥ ವಿಚಾರಗಳಲ್ಲಿ ಕ್ರಮ ತಗೊಳ್ಳಿ. ಇವರ ಸರ್ಕಾರದ ಅವಧಿಯಲ್ಲಿ ರಾಕ್ಷಸೀ ಕೃತ್ಯ ಮೆರೆಯುವ ಇಂಥ ಜನರನ್ನ ಸೃಷ್ಟಿ ಮಾಡ್ತಿದ್ದಾರೆ. ಡಿನ್ನರ್ ಪಾರ್ಟಿ ಎಲ್ಲಿಗೂ ಓಡಿ ಹೋಗಲ್ಲ. ಎಸ್‌‌ಸಿ-ಎಸ್‌ಟಿ ಮಕ್ಕಳಿಗೆ ಸ್ಕಾಲರ್‌ಶಿಪ್‌ ಕೊಡೋ ಚರ್ಚೆಗೆ ಡಿನ್ನರ್ ಪಾರ್ಟಿ ಅಂತೆ, ಕ್ಯಾಬಿನೆಟ್ ಸಭೆ ಯಾಕ್ ಮಾಡ್ತೀರಿ? ಸರ್ಕಾರದ ಲೋಪಗಳನ್ನ ಡಿನ್ನರ್ ಪಾರ್ಟಿಯಲ್ಲಿ ಚರ್ಚೆ ಮಾಡ್ತೀರಾ? ಹೊಸ ಸಂಪ್ರದಾಯ ತರ್ತಿದೀರಾ? ಕ್ಯಾಬೆನೆಟ್ ಸಭೆ ಏನಕ್ಕೆ ಮತ್ತೆ ಎಂದು ಪ್ರಶ್ನಿಸಿದರು.

  • ನಾನು ಶಾಲೆಗಳಿಗೆ ಹತ್ತಾರು ಎಕರೆ ಜಮೀನು ನೀಡಿದ್ದೇನೆ; ಹೆಚ್‌ಡಿಕೆ, ಮಂಜುನಾಥ್ ಒಂದು ಎಕರೆ ದಾನ ಮಾಡಿದ್ದಾರಾ?- ಡಿಕೆಶಿ

    ನಾನು ಶಾಲೆಗಳಿಗೆ ಹತ್ತಾರು ಎಕರೆ ಜಮೀನು ನೀಡಿದ್ದೇನೆ; ಹೆಚ್‌ಡಿಕೆ, ಮಂಜುನಾಥ್ ಒಂದು ಎಕರೆ ದಾನ ಮಾಡಿದ್ದಾರಾ?- ಡಿಕೆಶಿ

    ರಾಮನಗರ: ರಾಮನಗರ (Ramanagara) ಜಿಲ್ಲೆಗೆ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದೇವೆ. ಕನಕಪುರ ಕ್ಷೇತ್ರದಲ್ಲಿ ಸೋಲಾರ್ ಪ್ಲಾಂಟ್ ತಂದಿದ್ದೇನೆ. ಅದರ ಪಕ್ಕದಲ್ಲಿ ವಿದ್ಯಾರ್ಥಿ ವಸತಿ ನಿಲಯಕ್ಕೆ ಜಮೀನು ನೀಡಿದ್ದೇನೆ. ನಮ್ಮ ಅಜ್ಜಿ ಹೆಸರಿನಲ್ಲಿ ಖರೀದಿ ಮಾಡಿದ್ದ ಜಮೀನನ್ನು ಶಾಲೆಗೆ ಬರೆದುಕೊಟ್ಟಿದ್ದೇನೆ. ಕುಮಾರಸ್ವಾಮಿ (HD Kumaraswamy) ಅಥವಾ ಸಂಸದ ಮಂಜುನಾಥ್ (Dr Manjunath) ಅವರು ರಾಜ್ಯದಲ್ಲಿ ಯಾರಿಗಾದರೂ ಒಂದು ಎಕರೆ ದಾನ ಮಾಡಿದ್ದಾರಾ ಎಂದು ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಪ್ರಶ್ನಿಸಿದರು.

    ಕನಕಪುರ ತಾಲೂಕಿನ ದೊಡ್ಡಾಲಹಳ್ಳಿ ಗ್ರಾಮದಲ್ಲಿ ಜನಸ್ಪಂದನಾ ಕಾರ್ಯಕ್ರಮ ನಡೆಸಿ ಮಾತನಾಡಿದ ಅವರು, ನೀವು ನನ್ನನ್ನು ಬೆಳೆಸಿದ್ದೀರಿ. ಜಿಲ್ಲಾ ಪಂಚಾಯಿತಿ ಸದಸ್ಯ, ಶಾಸಕ, ಮಂತ್ರಿ ಹಾಗೂ ಉಪಮುಖ್ಯಮಂತ್ರಿ ಮಾಡಿದ್ದೀರಿ. ಸುರೇಶ್ ಅವರನ್ನು ಸಂಸದರನ್ನಾಗಿ ಮಾಡಿದ್ದೀರಿ ಎಂಬ ಕಾರಣಕ್ಕೆ ನಿಮ್ಮ ಋಣ ತೀರಿಸಲು ನಾನು ಈ ಕೆಲಸ ಮಾಡಿದ್ದೇನೆ. ನಮ್ಮ ಜೊತೆಯಲ್ಲಿದ್ದುಕೊಂಡು ತಟ್ಟೆಮರೆ ಏಟು ಕೊಟ್ಟವರಿಗೆ ನೀವು ಈ ವಿಚಾರ ತಿಳಿಸಿ. ಮುಂದೆ ನೀವು ಆತ್ಮಸಾಕ್ಷಿಗೆ ಮತ ಹಾಕುವಂತೆ ಹೇಳಬೇಕು ಎಂದರು. ಇದನ್ನೂ ಓದಿ: ಹಸುಗಳ ಮೇಲೆ ಪೈಶಾಚಿಕ ಕೃತ್ಯ ನಡೆಸಿದವರನ್ನು ಎನ್‍ಕೌಂಟರ್ ಮಾಡಿ ಬಿಸಾಕಿ: ರೇಣುಕಾಚಾರ್ಯ

    ಸುರೇಶ್ ಅವರು ಸಂಸದರಾಗಿದ್ದಾಗ ಅವರ ಕ್ಷೇತ್ರದಲ್ಲಿ ಹೆಚ್ಚು ಕುಡಿಯುವ ನೀರಿನ ಘಟಕ ಸ್ಥಾಪಿಸಲಾಗಿದೆ. ನಮ್ಮ ತಾಲೂಕಿನಲ್ಲಿ 120ಕ್ಕೂ ಹೆಚ್ಚು ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಲಾಗಿದೆ. ಈ ಭಾಗದ ಜನರಲ್ಲಿ ಹೆಚ್ಚು ಕ್ಯಾನ್ಸರ್ ರೋಗ ಪತ್ತೆಯಾಗುತ್ತಿದೆ ಎಂದು ವೈದ್ಯರು ಹೇಳಿದಾಗ ಇದನ್ನು ತಪ್ಪಿಸಲು ಈ ಕುಡಿಯುವ ನೀರಿನ ಘಟಕ ಸ್ಥಾಪಿಸಿದೆವು. ನಾನು ಇಂಧನ ಸಚಿವನಾಗಿದ್ದಾಗ, ಸುರೇಶ್ ಸಂಸದರಾಗಿದ್ದಾಗ ಈ ಭಾಗದ ಪ್ರತಿ ಇಬ್ಬರು ರೈತರಿಗೆ ಪ್ರತ್ಯೇಕವಾಗಿ ಟ್ರಾನ್ಸ್ಫಾರ್ಮ್ ಅಳವಡಿಸಿದ್ದೆವು. ಈ ಲೋಕಸಭಾ ಕ್ಷೇತ್ರದಲ್ಲಿ ಮಾತ್ರ ಇಂತಹ ಯೋಜನೆ ಮಾಡಲಾಗಿದ್ದು, ರಾಜ್ಯದ ಬೇರೆ ಯಾವುದೇ ಜಿಲ್ಲೆಯಲ್ಲಿ ಹಾಗೂ ಕಾಶ್ಮೀರದಿಂದ ಕನ್ಯಾಕುಮಾರಿವರೆಗೂ ದೇಶದಲ್ಲಿ ಎಲ್ಲಿಯೂ ಇಂತಹ ಯೋಜನೆ ಮಾಡಿಲ್ಲ ಎಂದು ತಿಳಿಸಿದರು. ಇದನ್ನೂ ಓದಿ: IPL 2025: ಮಾರ್ಚ್‌ 23 ರಿಂದ ಐಪಿಎಲ್‌ ಆರಂಭ: ಬಿಸಿಸಿಐ ಉಪಾಧ್ಯಕ್ಷ ಘೋಷಣೆ

    15-20 ವರ್ಷಗಳ ಹಿಂದೆ ಈ ಭಾಗದಲ್ಲಿ ಜಮೀನಿನ ಬೆಲೆ ಎಷ್ಟಿತ್ತು? ಈಗ ಎಷ್ಟು ಆಗಿದೆ? ನಿಮಗೆ ನೇರವಾಗಿ ಹಣ ನೀಡಲಾಗದಿದ್ದರೂ ನಿಮ್ಮ ಆಸ್ತಿ ಮೌಲ್ಯವನ್ನು ಹೆಚ್ಚಿಸಿ ನಿಮಗೆ ನೆರವಾಗಿದ್ದೇನೆ. ಆ ಮೂಲಕ ನಿಮ್ಮ ಬದುಕಿನಲ್ಲಿ ಬದಲಾವಣೆ ತಂದಿದ್ದೇನೆ. ಇನ್ನು ರಾಮನಗರಕ್ಕೆ ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಮರುನಾಮಕರಣಕ್ಕೆ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಿ ದೆಹಲಿಗೆ ಕಳುಹಿಸಲಾಗಿದೆ. ಕೇಂದ್ರ ಗೃಹ ಸಚಿವಾಲಯದಿಂದ ಇಂಟೆಲಿಜೆನ್ಸ್ನವರು ವರದಿ ಕಳುಹಿಸುವುದು ಬಾಕಿ ಇದೆ. ಈ ವಿಚಾರವಾಗಿ ಕೇಂದ್ರ ಸಚಿವರು ಹಾಗೂ ಪ್ರಧಾನಮಂತ್ರಿಗಳಿಗೆ ಒಂದೆರಡು ದಿನಗಳಲ್ಲಿ ಪತ್ರ ಬರೆಯಲಿದ್ದೇನೆ. ನಂತರ ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಅಧಿಕೃತವಾಗಿ ಘೋಷಣೆಯಾಗಲಿದೆ ಎಂದು ಹೇಳಿದರು. ಇದನ್ನೂ ಓದಿ: ಮೂರು ಹೊಸ ಹಸುಗಳನ್ನು ನಾನೇ ಕೊಡಿಸುತ್ತೇನೆ: ಜಮೀರ್

    ರಾಮನಗರವನ್ನು ಜಿಲ್ಲಾ ಕೇಂದ್ರವಾಗಿಯೇ ಉಳಿಯಲಿದೆ. ಹೀಗಾಗಿ ನೀವು ನಿಮ್ಮ ಆಸ್ತಿ ಮಾರಿಕೊಳ್ಳಬೇಡಿ. ನಾವು ಬೆಂಗಳೂರಿನವರು, ನಮ್ಮ ಈ ಗುರುತನ್ನು ನಾವು ಯಾಕೆ ಬಿಟ್ಟುಕೊಡಬೇಕು? ಭವಿಷ್ಯದಲ್ಲಿ ನಿಮ್ಮ ಜಮೀನಿನ ಬೆಲೆ ಏನಾಗುತ್ತದೆ ಎಂದು ನೀವು ನಿರೀಕ್ಷೆ ಮಾಡಲು ಸಾಧ್ಯವಿಲ್ಲ. ಈ ವಿಚಾರವಾಗಿ ಬಿಜೆಪಿ ಹಾಗೂ ಜೆಡಿಎಸ್ ನಾಯಕರು ಬಹಳ ಟೀಕೆ ಟಿಪ್ಪಣಿ ಮಾಡುತ್ತಿದ್ದಾರೆ. ಹಾಗಿದ್ದರೆ ಇವರುಗಳು ತಮ್ಮ ಊರು ಬಿಟ್ಟು ಇಲ್ಲಿಗೆ ಬಂದು ಯಾಕೆ ನೂರಾರು ಎಕರೆ ಜಮೀನು ಖರೀದಿ ಮಾಡಿದ್ದಾರೆ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಕನ್ನಡತಿ, ಮದ್ದೂರಿನ ಸೊಸೆಗೆ ಮಿಸೆಸ್ ಇಂಡಿಯಾ ಕಿರೀಟ

  • ಕಾಂಗ್ರೆಸ್ ಸರ್ಕಾರದಲ್ಲಿ ಪ್ರತಿಯೊಂದಕ್ಕೂ ರೇಟ್ ಫಿಕ್ಸ್‌ ಆಗಿದೆ: ಹೆಚ್‌ಡಿಕೆ ಆರೋಪ

    ಕಾಂಗ್ರೆಸ್ ಸರ್ಕಾರದಲ್ಲಿ ಪ್ರತಿಯೊಂದಕ್ಕೂ ರೇಟ್ ಫಿಕ್ಸ್‌ ಆಗಿದೆ: ಹೆಚ್‌ಡಿಕೆ ಆರೋಪ

    ಬೆಂಗಳೂರು: ಕಾಂಗ್ರೆಸ್ (Congress) ಸರ್ಕಾರದಲ್ಲಿ ಪ್ರತಿಯೊಂದಕ್ಕೂ ರೇಟ್ ಫಿಕ್ಸ್ ಆಗಿದೆ ಎಂದು ಕೇಂದ್ರ ಸಚಿವ ಹೆಚ್‌.ಡಿ ಕುಮಾರಸ್ವಾಮಿ (H.D Kumaraswamy) ಆರೋಪ ಮಾಡಿದ್ದಾರೆ.

    ನಗರದಲ್ಲಿ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಈ ವೇಳೆ, 60% ಕಮಿಷನ್ ಆರೋಪಕ್ಕೆ ದಾಖಲಾತಿ ಕೊಡಿ ಎಂಬ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ಕೊಟ್ಟರು. ಅದ್ಯಾರೋ ಹಂಗಾಮಿ ಅಧ್ಯಕ್ಷರು ಹೇಳಿಕೆ ಕೊಟ್ಟಿದ್ದಾರೆ ಅದಕ್ಕಿಂತ ದಾಖಲಾತಿ ಬೇಕಾ? ಸಿದ್ದರಾಮಯ್ಯ ಮಹಾನ್ ನಾಯಕರು ಪೇ ಸಿಎಂ ಎಂದು ಪೋಸ್ಟರ್ ಅಂಟಿಸಲು ಹೋಗಿದ್ರು. ಅವರು ಇಲ್ಲಿಯವರೆಗೆ ಯಾವ ದಾಖಲೆ ಇಟ್ಟಿದ್ದಾರೆ ಎಂದು ಪ್ರಶ್ನಿಸಿದ್ದಾರೆ.

    ಕೆಂಪಣ್ಣ ಹೇಳಿದ್ರು ಕೆಂಪಣ್ಣ ಹೇಳಿದ್ರು ಅಂತ ಸಿದ್ದರಾಮಯ್ಯ (Siddaramaiah) ಹೇಳ್ತಾರೆ. ಈಗ ಕಂಟ್ರಾಕ್ಟರ್‌ಗಳು 60% ಬಗ್ಗೆ ಹೇಳ್ತಿಲ್ವಾ? ಅದಕ್ಕಿಂತ ಸಾಕ್ಷಿ ಬೇಕಾ? ಈ ಆಟ ಸರ್ಕಾರ ಬಿಟ್ಟು ಬಿಡಬೇಕು ಎಂದು ಕಿಡಿಕಾರಿದ್ದಾರೆ.

    ಇದೇ ವೇಳೆ ಮಗ ಸೋತಿರೋದಕ್ಕೆ ಹತಾಶರಾಗಿ ಹೆಚ್‌ಡಿಕೆ 60% ಕಮಿಷನ್ ಆರೋಪ ಮಾಡ್ತಿದ್ದಾರೆ ಎಂಬ ಸಚಿವ ಕೃಷ್ಣಭೈರೇಗೌಡ ಹೇಳಿಕೆ ವಿಚಾರವಾಗಿ, ಮಗ ಸೋತಿರೋದಕ್ಕೆ ಹತಾಶೆಯಾಗಿದ್ದೇನೋ. ಇಲ್ಲವೋ ಅದನ್ನ ಬಿಟ್ಟು ಬಿಡಿ. ಮೊದಲು 60% ಕಮೀಷನ್‌ಗೆ ಉತ್ತರ ಹೇಳಪ್ಪ. ಕಂದಾಯ ಇಲಾಖೆ ಏನು ಸ್ವಚ್ಚವಾಗಿ ನಡೆಯುತ್ತಿದೆಯಾ? ಬೆಂಗಳೂರು AC ಪೋಸ್ಟ್‌ಗೆ ಎಷ್ಟು ದುಡ್ಡು ತಗೋತೀರಾ? ಎಷ್ಟು ಫಿಕ್ಸ್ ಮಾಡಿಕೊಂಡಿದ್ದೀರಾ? ಆ ಹಣ ಯಾರ್ ಯಾರಿಗೆ ಹೋಗುತ್ತೆ? ಏನ್ ಏನ್ ನಡೆಸ್ತೀರಾ ನಮಗೆ ಗೊತ್ತಿಲ್ವಾ? ಎಂದು ಕಂದಾಯ ಇಲಾಖೆಯಲ್ಲಿ ಅಕ್ರಮ ನಡೆಯುತ್ತಿದೆ ಎಂದ ಆರೋಪಿಸಿದ್ದಾರೆ.

    ನಾನು ಅಧಿಕಾರ ನಡೆಸಿದ್ದೇನೆ. ನಾನು ಹರಿಶ್ಚಂದ್ರ ಎಂದು ಎಲ್ಲೂ ಹೇಳಿಲ್ಲ. ವಿಧಾನಸಭೆಯಲ್ಲಿ ಹೇಳಿದ್ದೇನೆ. ಚುನಾವಣೆ ನಡೆಯಬೇಕಾದ್ರೆ ಇನ್ನೊಬ್ಬರ ಹತ್ರ ಕೈ ಚಾಚಲೇಬೇಕು. ಆದರೆ ನಾನು ಅಧಿಕಾರ ನಡೆಸುವಾಗ ಪ್ರತಿಯೊಂದು ಮಾರಾಟಕ್ಕೆ ಇಟ್ಟಿರಲಿಲ್ಲ. ಈ ಸರ್ಕಾರ ಪ್ರತಿಯೊಂದನ್ನು ಮಾರಾಟಕ್ಕೆ ಇಟ್ಟಿದೆ. ಪ್ರತಿಯೊಂದಕ್ಕೂ ಲೂಟಿ ಹೊಡೆದುಕೊಂಡು ಕೂತಿದ್ದಾರೆ. ಈ ಸರ್ಕಾರದಲ್ಲಿ ರೇಟ್ ಕಾರ್ಡ್ ಮೊದಲೇ ಫಿಕ್ಸ್ ಆಗಿ ಹೋಗಿದೆ. ನಾನು ಪ್ರಾರಂಭದಲ್ಲೇ ಈ ಸರ್ಕಾರದ ರೇಟ್ ಕಾರ್ಡ್ ಬಗ್ಗೆ ಹೇಳಿದ್ದೆ ಎಂದಿದ್ದಾರೆ.

    ಇವತ್ತಿನ ರಾಜಕಾರಣಕ್ಕೆ ದುಡ್ಡು ಬೇಕು. ಪ್ರೀತಿ ವಿಶ್ವಾಸದಿಂದ ನಾವು ಕೆಲಸ ಮಾಡಿದಾಗ ಚುನಾವಣೆ ಸಮಯದಲ್ಲಿ ಯಾರೋ 4 ಜನ ಬರ್ತಾರೆ‌ ಚುನಾವಣೆ ನಡೆಸೋಕೆ ಹಣ ಕೊಡ್ತಾರೆ. ಆದರೆ ಅಧಿಕಾರ ಇಟ್ಟುಕೊಂಡು ಪ್ರತಿದಿನ ನಮ್ಮ ಸಹಿಯನ್ನು ಮಾರಾಟಕ್ಕೆ ಇಡೋಕೆ ಆಗೊಲ್ಲ. ಈ ಸರ್ಕಾರ ಸಹಿಯನ್ನು ಮಾರಾಟಕ್ಕೆ ಇಟ್ಟಿದೆ. ಪ್ರತಿ ಕ್ಷಣವೂ ಈ ಸರ್ಕಾರದಲ್ಲಿ ಮಾರಾಟವೇ ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.