Tag: JDS workers

  • ಚನ್ನಪಟ್ಟಣ ಟಿಕೆಟ್ ಜೆಡಿಎಸ್‌ಗೆ ಪಡೆಯುವಂತೆ ಕಾರ್ಯಕರ್ತರಿಂದ ಒತ್ತಡ – ಹೆಚ್‌ಡಿಕೆ ರಿಯಾಕ್ಷನ್‌ ಏನು?

    ಚನ್ನಪಟ್ಟಣ ಟಿಕೆಟ್ ಜೆಡಿಎಸ್‌ಗೆ ಪಡೆಯುವಂತೆ ಕಾರ್ಯಕರ್ತರಿಂದ ಒತ್ತಡ – ಹೆಚ್‌ಡಿಕೆ ರಿಯಾಕ್ಷನ್‌ ಏನು?

    ಬೆಂಗಳೂರು: ಸ್ಥಳೀಯ ಸಂಸ್ಥೆ ಚುನಾವಣೆಗಳು ಮತ್ತು 3 ಕ್ಷೇತ್ರಗಳ ಉಪ ಚುನಾವಣೆ(Channapatna By Election) ಕುರಿತು ಭಾನುವಾರ (ಇಂದು) ಜೆಡಿಎಸ್ ಸಿದ್ಧತೆ ಸಭೆ ನಡೆಸಿತು. ಕೇಂದ್ರ ಸಚಿವ ಕುಮಾರಸ್ವಾಮಿ (HD Kumaraswamy) ನೇತೃತ್ವದಲ್ಲಿ ಜಿಲ್ಲಾ ಅಧ್ಯಕ್ಷರು, ಹಾಲಿ, ಮಾಜಿ ಶಾಸಕರು ಸಭೆ ನಡೆಸಿದ್ರು.

    ಸಭೆಯಲ್ಲಿ ಸ್ಥಳೀಯ ಸಂಸ್ಥೆ ಚುನಾವಣೆಗೆ ಜಿಲ್ಲಾ ಮಟ್ಟದಲ್ಲಿ ಪಕ್ಷ ಸಂಘಟನೆಗೆ ನಾಯಕರು ಜಿಲ್ಲಾ ಪ್ರವಾಸ ಮಾಡುವಂತೆ ನಿರ್ಣಯ ಅಂಗೀಕಾರ ಮಾಡಲಾಯ್ತು. ಇತ್ತ ಚನ್ನಪಟ್ಟಣ ಟಿಕೆಟ್ ಫೈನಲ್ ಮಾಡೋ ಬಗ್ಗೆ ಬಿಜೆಪಿ ಹೈಕಮಾಂಡ್ (BJP High Command) ನಾಯಕರ ಜೊತೆ ಚರ್ಚೆ ಮಾಡಿ ಒಮ್ಮತದ ಅಭ್ಯರ್ಥಿಯನ್ನ ಕಣಕ್ಕಿಳಿಸುವ ನಿರ್ಧಾರ ಮಾಡಲಾಯ್ತು. ಚನ್ನಪಟ್ಟಣ ಕ್ಷೇತ್ರ ಜೆಡಿಎಸ್ ಕ್ಷೇತ್ರವಾಗಿದ್ದು, ಜೆಡಿಎಸ್‌ಗೆ ಟಿಕೆಟ್ ಪಡೆಯುವಂತೆ ಸಭೆಯಲ್ಲಿ ಚನ್ನಪಟ್ಟಣ ನಾಯಕರು ಕುಮಾರಸ್ವಾಮಿಗೆ ಒತ್ತಡ ಹಾಕಿದ್ರು. ಇದನ್ನೂ ಓದಿ: 3,000ಕ್ಕೂ ಅಧಿಕ ಅಡಿಕೆ ಮರ, 200ಕ್ಕೂ ಅಧಿಕ ತೆಂಗಿನ ಮರಗಳು ನೆಲಸಮ

    \

    ಬಿಜೆಪಿ ಹೈಕಮಾಂಡ್ ಜೊತೆ ಚರ್ಚೆ ಮಾಡಿ ಒಮ್ಮತದ ಅಭ್ಯರ್ಥಿ ನಿಲ್ಲಿಸಲಾಗುತ್ತದೆ ಅಂತ ಕುಮಾರಸ್ವಾಮಿ ನಾಯಕರಿಗೆ ಮನವರಿಕೆ ಮಾಡಿದರು. ಇದರ ಬೆನ್ನಲ್ಲೇ ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಚನ್ನಪಟ್ಟಣದಿಂದ ಸ್ಪರ್ಧೆ ಮಾಡುವ ಬಗ್ಗೆ ಸ್ವತಃ ಅಡ್ಡಗೋಡೆ ಮೇಲೆ ದೀಪ ಇಟ್ಡಂತೆ ಮಾತಾಡಿದ್ರು. ಇದನ್ನೂ ಓದಿ: ಟ್ರೈನಿ ವೈದ್ಯೆ ಅತ್ಯಾಚಾರ & ಹತ್ಯೆ ಕೇಸ್‌; ಸ್ವಯಂಪ್ರೇರಿತವಾಗಿ ವಿಚಾರಣೆ ಕೈಗೆತ್ತಿಕೊಂಡ ಸುಪ್ರೀಂ

    ಸೋಮವಾರ (ಆ.19) ಬಿಜೆಪಿ ನಡೆಸುವ ಹೋರಾಟಕ್ಕೆ ಜೆಡಿಎಸ್ ಸಹ ಬೆಂಬಲ ಕೊಟ್ಟು ಹೋರಾಟ ಮಾಡುವ ನಿರ್ಧಾರವನ್ನು ಸಭೆಯಲ್ಲಿ ಕೈಗೊಳ್ಳಲಾಯಿತು. ಸಭೆ ಬಳಿಕ ಮಾತನಾಡಿದ ನಿಖಿಲ್, ಮುಡಾ ಕೇಸ್ ನಲ್ಲಿ ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡಬೇಕು ಅಂತ ಒತ್ತಾಯ ಮಾಡಿದ್ರು. ಇದನ್ನೂ ಓದಿ: Bengaluru | ಹಣಕ್ಕಾಗಿ ತಾಯಿ-ಮಗನ ಕಿಡ್ನ್ಯಾಪ್‌ ಮಾಡಿ ಲೈಂಗಿಕ ಕಿರುಕುಳ – ರೌಡಿ ಶೀಟರ್ಸ್‌ ಗ್ಯಾಂಗ್ ಅರೆಸ್ಟ್

  • ಸುಮಲತಾ ಕಾರು ಚಾಲಕನ ಮೇಲೆ ಹಲ್ಲೆ- ಸಾ.ರಾ.ಮಹೇಶ್‌ ಬೆಂಬಲಿಗರ ವಿರುದ್ಧ ಸಂಸದೆ ದೂರು

    ಸುಮಲತಾ ಕಾರು ಚಾಲಕನ ಮೇಲೆ ಹಲ್ಲೆ- ಸಾ.ರಾ.ಮಹೇಶ್‌ ಬೆಂಬಲಿಗರ ವಿರುದ್ಧ ಸಂಸದೆ ದೂರು

    ಮೈಸೂರು: ತಮ್ಮ ಕಾರು ಚಾಲಕನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಶಾಸಕ ಸಾ.ರಾ.ಮಹೇಶ್‌ ಬೆಂಬಲಿಗರ ವಿರುದ್ಧ ಸಂಸದೆ ಸುಮಲತಾ ದೂರು ನೀಡಿದ್ದಾರೆ.

    ಕೆ.ಆರ್.ನಗರ, ತಾಲೂಕು ಮುಂಜನಹಳ್ಳಿ ಗ್ರಾಮದಲ್ಲಿ ಮಂಡ್ಯ ಸಂಸದೆ ಸುಮಲತಾ ಹಾಗೂ ಜೆಡಿಎಸ್ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆದಿದೆ. ಈ ಗಲಾಟೆ ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿತ್ತು. ಸಂಸದೆ ಸುಮಲತಾ ವಿರುದ್ಧ ಜೆಡಿಎಸ್ ಕಾರ್ಯಕರ್ತರು ಧಿಕ್ಕಾರ ಕೂಗಿದ್ದರು. ಇದನ್ನೂ ಓದಿ: ‘ಕರ್ನಾಟಕ ಅದ್ಭುತ ರಾಜ್ಯ’: ಕರ್ನಾಟಕದಿಂದ ರಾಜ್ಯಸಭೆಗೆ ಮರು ಆಯ್ಕೆ ಬಗ್ಗೆ ನಿರ್ಮಲಾ ಸೀತಾರಾಮನ್ ಸುಳಿವು..!?

    50 ಲಕ್ಷ ರೂ. ವೆಚ್ಚದ ನೀರಾವರಿ ಇಲಾಖೆ ಕಾಮಗಾರಿ ಪೂಜೆಗೆ ಆಗಮಿಸಿದ್ದ ಸುಮಲತಾ ಅವರು ಚರಂಡಿ, ಸಿಮೆಂಟ್ ಕಾಂಕ್ರೀಟ್ ರಸ್ತೆಗಳ ನಿರ್ಮಾಣ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿದ್ದರು. ಕೆ.ಆರ್.ನಗರ ತಾಲೂಕಿನ ಚೌಕಹಳ್ಳಿ, ಬ್ಯಾಡಹಳ್ಳಿ, ಹಂಪಾಪುರ ಸೇರಿದಂತೆ ಮುಂಜನಹಳ್ಳಿ ಗ್ರಾಮದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಆದರೆ ಕಾರ್ಯಕ್ರಮದಲ್ಲಿ ಶಾಸಕ ಸಾ.ರಾ.ಮಹೇಶ್‌ ಅವರನ್ನು ಬಿಟ್ಟು ನೀವು ಗುದ್ದಲಿ ಪೂಜೆ ಮಾಡಿದ್ದು ಸರಿಯಲ್ಲ. ಪ್ರೋಟೊಕಾಲ್‌ ನಿಯಮಗಳನ್ನು ಗಾಳಿಗೆ ತೂರಿದ್ದೀರಿ ಎಂದು ಜೆಡಿಎಸ್‌ ಕಾರ್ಯಕರ್ತರು ವಿರೋಧ ವ್ಯಕ್ತಪಡಿಸಿದ್ದರು. ಈ ವೇಳೆ ಸಂಸದೆ ಗ್ರಾಮದ ಮಹಿಳೆಯರನ್ನು ಸೇರಿಸಿ ಗುದ್ದಲಿ ಪೂಜೆ ನೆರವೇರಿಸಿದ್ದಾರೆ.

    ಗುದ್ದಲಿಪೂಜೆ ಕಾರ್ಯಕ್ರಮಕ್ಕೆ ಸ್ಥಳೀಯ ಶಾಸಕರನ್ನು ಆಹ್ವಾನಿಸಿಲ್ಲ, ಶಿಷ್ಟಾಚಾರ ಪಾಲಿಸಿಲ್ಲವೆಂದು ಸಾರಾ ಬೆಂಬಲಿಗರ ತಕರಾರು ತೆಗೆದಿದ್ದಾರೆ. ಗ್ರಾಮಕ್ಕೆ ಬಾರದಂತೆ ಸಂಸದರು ಹಾಗೂ ಜೊತೆಯಲ್ಲಿದ್ದವರನ್ನು ತಡೆದಿದ್ದಾರೆ. ಈ ವೇಳೆ ಗಲಾಟೆಯನ್ನೂ ಆರಂಭಿಸಿದ್ದಾರೆ. ಗಲಾಟೆ ತಡೆಯಲು ಬಂದ ಸಂಸದರ ಕಾರು ಚಾಲಕ ನಂಜುಂಡನ ಮೇಲೆ ಸಾರಾ ಬೆಂಬಲಿಗರ ಹಲ್ಲೆ ನಡೆಸಿದ್ದಾರೆ. ಹಲ್ಲೆ ಮಾಡಿದ ಸಾರಾ ಬೆಂಬಲಿಗರ ವಿರುದ್ದ ಖುದ್ದು ಸಾಲಿಗ್ರಾಮ ಠಾಣೆಗೆ ತೆರಳಿ ಸಂಸದೆ ಸುಮಲತಾ ದೂರು ದಾಖಲಿಸಿದ್ದಾರೆ. ಇದನ್ನೂ ಓದಿ: ಸರ್ಕಾರ ಒಂದೇ ವರ್ಷದಲ್ಲಿ ನೀರು ಕೊಟ್ಟರೆ ತಲೆ ಬೋಳಿಸಿಕೊಳ್ತೀನಿ ಎಂದಿದ್ದೆ: ಎಚ್‍ಡಿಕೆ

  • ಸುಮಲತಾ ಬರುತ್ತಿದ್ದ ದಾರಿಯಲ್ಲಿದ್ದ ಜೆಡಿಎಸ್ ಕಾರ್ಯಕರ್ತರನ್ನು ಕೂಡಿಹಾಕಿದ ಪೊಲೀಸರು!

    ಸುಮಲತಾ ಬರುತ್ತಿದ್ದ ದಾರಿಯಲ್ಲಿದ್ದ ಜೆಡಿಎಸ್ ಕಾರ್ಯಕರ್ತರನ್ನು ಕೂಡಿಹಾಕಿದ ಪೊಲೀಸರು!

    ಮಂಡ್ಯ: ಮಂಡ್ಯ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಅವರು ಇಂದು ನಾಗಮಂಗಲ ತಾಲೂಕಿನಲ್ಲಿ ಬಿರುಸಿನ ಪ್ರಚಾರ ನಡೆಸಿದರು. ಹೀಗಾಗಿ ಯಾವುದೇ ಅಹಿತಕರ ಘಟನೆ ನಡೆಯಬಾರದೆಂದು, ಪೊಲೀಸರು ಸುಮಲತಾ ಅವರು ಬರುವ ದಾರಿಯಲ್ಲಿದ್ದ ಜೆಡಿಎಸ್ ಕಾರ್ಯಕರ್ತರನ್ನು ಸ್ವಲ್ಪ ಹೊತ್ತು ಕೂಡಿ ಹಾಕಿದ್ದರು.

    ನಾಗಮಂಗಲದ ಚಾಮಲಾಪುರ ಗ್ರಾಮದಲ್ಲಿ ನಿಖಿಲ್ ಕುಮಾರಸ್ವಾಮಿ ಅವರು ಪ್ರಚಾರ ನಡೆಸುತ್ತಿದ್ದ ಹಿನ್ನೆಲೆ ಈ ಗ್ರಾಮದಲ್ಲಿ ಜೆಡಿಎಸ್ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿದ್ದರು. ಇದೇ ವೇಳೆ ಸುಮಲತಾ ಅವರು ಕೂಡ ಚಾಮಲಾಪುರ ಮಾರ್ಗವಾಗಿ ಬೆಳ್ಳೂರು ಕಡೆಗೆ ಹೋಗುತ್ತಿದ್ದರು. ಹೀಗಾಗಿ ಮುಂಜಾಗೃತೆ ಕ್ರಮವಾಗಿ ಚಾಮಲಾಪುರ ಗ್ರಾಮದಲ್ಲಿದ್ದ ಜೆಡಿಎಸ್ ಕಾರ್ಯಕರ್ತರನ್ನು ಬಂಗಲೆಯೊಂದರ ಕಾಂಪೌಂಡ್‍ನಲ್ಲಿ ಪೊಲೀಸರು ಕೂಡಿ ಹಾಕಿದ್ದರು.

    ಬೆಳ್ಳೂರು ಗ್ರಾಮ ಅತಿಸೂಕ್ಷ್ಮ ಪ್ರದೇಶ ಆಗಿರುವುದರಿಂದ ಇಬ್ಬರು ಅಭ್ಯರ್ಥಿಗಳು ಮುಖಾಮುಖಿಯಾದಾಗ ಯಾವುದೇ ಸಮಸ್ಯೆ ಆಗಬಾರದೆಂದು, ಗ್ರಾಮದಲ್ಲಿ ರಸ್ತೆ ಬದಿಯಲ್ಲಿ ಭಾರೀ ಪೊಲೀಸ್ ಭದ್ರತೆಯನ್ನು ನಿಯೋಜನೆ ಮಾಡಲಾಗಿತ್ತು. ಸುಮಾರು ಒಂದು ಕಿಲೋಮೀಟರ್ ರಸ್ತೆಯುದ್ದಕ್ಕೂ ಪೊಲೀಸ್ ಭದ್ರತೆ ಏರ್ಪಡಿಸಲಾಗಿತ್ತು. ಅಲ್ಲದೆ ಸುಮಲತಾ ಅವರು ಹೋಗುವಾಗ ವಿರೋಧವಾಗಿ ಜೈಕಾರ ಕೂಗದಂತೆ ಜೆಡಿಎಸ್ ಕಾರ್ಯಕರ್ತರಿಗೆ ಪೊಲೀಸರು ಎಚ್ಚರಿಕೆ ನೀಡಿದ್ದರು.

    ಸುಮಲತಾ ಅವರು ಚಾಮಲಾಪುರ ಮಾರ್ಗದಲ್ಲಿ ತೆರಳುತ್ತಿದ್ದ ಹಿನ್ನೆಲೆಯಲ್ಲಿ ಇದೇ ಸ್ಥಳದಲ್ಲಿದ್ದ ನಿಖಿಲ್ ಕುಮಾರಸ್ವಾಮಿ ಅವರನ್ನು ಕೂಡ ಐದು ನಿಮಿಷ ಗೇಟಿನಲ್ಲೇ ಪೊಲೀಸರು ತಡೆಹಿಡಿದಿದ್ದರು. ಈ ವೇಳೆ ಪೊಲೀಸರನ್ನು ಜೆಡಿಎಸ್ ಶಾಸಕ ಸುರೇಶ್ ಗೌಡ ತರಾಟೆಗೆ ತೆಗೆದುಕೊಂಡ ಬಳಿಕ ನಿಖಿಲ್ ಅವರ ವಾಹನವನ್ನು ಪೊಲೀಸರು ಬಿಟ್ಟು ಕಳುಹಿಸಿದರು.