ಮಂಡ್ಯ: ಗ್ರಾಮದ ಅಭಿವೃದ್ಧಿ ಮಾಡಿಕೊಡಿ ಎಂದು ಮನವಿ ಮಾಡಿಕೊಂಡ ಮಹಿಳೆಯ ಮುಂದೆ ಜೆಡಿಎಸ್ ಶಾಸಕ (JDS MLA) ಬೇಸರಗೊಂಡು ತಮ್ಮ ಸ್ಥಿತಿಯ ಬಗ್ಗೆ ಹೇಳಿಕೊಂಡಿದ್ದಾರೆ.
ಕೆ.ಆರ್.ಪೇಟೆ (K.R Pete) ತಾಲೂಕಿನ ಸಿಂದಘಟ್ಟದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಶಾಸಕ ಹೆಚ್.ಟಿ ಮಂಜು (H.T Manju) ಮಹಿಳೆ ಮುಂದೆ ಈ ಅಸಾಹಾಯಕತೆ ತೋಡಿಕೊಂಡಿದ್ದಾರೆ. ನಾನು ಎಂಎಲ್‍ಎ ಆಗಿ 9 ತಿಂಗಳು ಆಗ್ತಿದೆ. ನನಗೆ ಇಲ್ಲಿಯವರೆಗೆ ಕೊಟ್ಟಿರೋದು ಕೇವಲ 50 ಲಕ್ಷ ರೂ. ಅನುದಾನ. ನನ್ನ ಕ್ಷೇತ್ರದಲ್ಲಿ 382 ಹಳ್ಳಿಗಳಿದೆ. ದೊಡ್ಡ ಹಳ್ಳಿಗೆ 50 ಸಾವಿರ ಕೊಡ್ತೀನಿ ಅಂದ್ರೆ, ಸಣ್ಣ ಹಳ್ಳಿ 25 ಸಾವಿರನಾದರೂ ಕೊಡಬೇಕು. ಆದರೆ ಪ್ರತಿಹಳ್ಳಿಗೆ 25 ಸಾವಿರ ಅನುದಾನ ಕೊಡೋಕು ದುಡ್ಡು ಸಾಲಲ್ಲ ಎಂದಿದ್ದಾರೆ.
ಹಾಸನ: ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವಾಗಲೇ ಹಾಸನ ಜಿಲ್ಲೆಯಲ್ಲಿ ಪಕ್ಷಾಂತರ ಪಾಲಿಟಿಕ್ಸ್ ಮಾತು ಕೇಳಿಬರುತ್ತಿದೆ. ಅರಸೀಕೆರೆಯ ಜೆಡಿಎಸ್ (JDS) ಶಾಸಕ ಕೆ.ಎಂ.ಶಿವಲಿಂಗೇಗೌಡ (Shivalingegowda) ಅವರು ಪಕ್ಷ ತೊರೆಯುವುದು ಗ್ಯಾರಂಟಿ ಎನ್ನಲಾಗುತ್ತಿದೆ.
ಗ್ರಾಮ ಪಂಚಾಯಿತಿ ಸದಸ್ಯೆ ಪತಿ ವಾಸು ಎಂಬವರಿಗೆ ಹಣಕ್ಕಾಗಿ ಧಮ್ಕಿ ಹಾಕಿರುವ ಆಡಿಯೋ ವೈರಲ್ ಆಗಿದೆ. ಇದರಲ್ಲಿ ಶಿವಲಿಂಗೇಗೌಡರು ಜೆಡಿಎಸ್ ತೊರೆಯುವ ಬಗ್ಗೆ ಸೂಚನೆ ಕೊಟ್ಟಿದ್ದಾರೆ. ಇದನ್ನೂ ಓದಿ: ಬೆಂಗಳೂರಲ್ಲಿ ಮೋದಿ ಮೆಗಾ ರೋಡ್ ಶೋಗೆ ಪ್ಲಾನ್
ಜಕ್ಕನಹಳ್ಳಿ ಗ್ರಾಪಂ ಸದಸ್ಯೆ ಸೌಮ್ಯ ಪತಿ ವಾಸು ಜೊತೆ ಶಾಸಕ ಕೆ.ಎಂ.ಶಿವಲಿಂಗೇಗೌಡ ಮಾತನಾಡಿರುವ ಆಡಿಯೋದಲ್ಲಿ, “ನಾನು ಕೊಟ್ಟಿದ್ದ 50 ಸಾವಿರ ಹಣವನ್ನು ವಾಪಸ್ ಕೊಡು. ನೀನು ಆ ಕಡೆ (ಜೆಡಿಎಸ್) ಇದ್ದೀಯಾ. ನನ್ನ ಪರವಾಗಿ ಇಲ್ಲ. ಹೀಗಾಗಿ ಹಣ ತಂದು ಕೊಡು” ಎಂದು ಧಮ್ಕಿ ಹಾಕಿದ್ದಾರೆ.
ಅದಕ್ಕೆ ವಾಸು, “ನಾನೇನಾದ್ರೂ ನಿನ್ ಹತ್ರ ಹಣ ಕೇಳಿದ್ನಾ ಅಣ್ಣ. ಈಗ ನನ್ ಹತ್ರ ಇಲ್ಲ. ಏನ್ ಮಾಡ್ಕೋತೀಯಾ ನೀನು? ಜೈಲಿಗೆ ಕಳಿಸ್ತೀಯಾ, ಕೊಲೆ ಮಾಡಿಸ್ತೀಯಾ? ಮಾಡಿಸ್ಕೊ. ಈಗ ನನ್ನ ಬಳಿ ಹಣ ಇಲ್ಲ” ಎಂದು ಎದುರುತ್ತರ ನೀಡಿದ್ದಾರೆ. ಇದಕ್ಕೆ ಶಿವಲಿಂಗೇಗೌಡರು ಮಾತನಾಡಿ, “ನೀನು ದೊಡ್ಡ ಮನುಷ್ಯ ಅಂತಾ ಜೈಲಿಗೆ ಕಳಿಸ್ತಾರಾ? ಅದೆಲ್ಲ ನನಗೆ ಗೊತ್ತಿಲ್ಲ, ನನ್ ಹಣ ನನಗೆ ತಂದು ಕೊಡು” ಎಂದು ಕೇಳಿದ್ದಾರೆ. ಇದನ್ನೂ ಓದಿ: ಬೊಮ್ಮಾಯಿ ಅಂಕಲ್ ನಮ್ಗೆ ಮೇಲ್ಸೇತುವೆ ಬೇಡ- ಸಿಎಂಗೆ 2 ಸಾವಿರ ವಿದ್ಯಾರ್ಥಿಗಳಿಂದ ಪತ್ರ
ನಾನು ಯಾವ ಪಕ್ಷದಲ್ಲಿ ಇದ್ದರೂ ನೀನು ನನ್ನ ಜೊತೆ ಇರಬೇಕು ಅಂತಾ ವಾಸುಗೆ ಶಿವಲಿಂಗೇಗೌಡರು ದುಡ್ಡು ಕೊಟ್ಟಿದ್ದರು ಎನ್ನಲಾಗಿದೆ. ಈಗ ವಾಸು ಜೆಡಿಎಸ್ ಪರವೇ ಇದ್ದು, ಶಿವಲಿಂಗೇಗೌಡರು ಪಕ್ಷ ಬಿಡಲು ತೀರ್ಮಾನಿಸಿದ್ದಾರೆ. ವಾಸು ತನ್ನ ಪರ ಇಲ್ಲ ಎಂದು ಹಣ ವಾಪಸ್ ನೀಡುವಂತೆ ಕೇಳಿದ್ದಾರೆ. ಈ ಸಂಭಾಷಣೆಯ ಆಡಿಯೋ ವೈರಲ್ ಆಗಿದೆ.
Live Tv
[brid partner=56869869 player=32851 video=960834 autoplay=true]
ಬೆಂಗಳೂರು: ನಗರದಲ್ಲಿ ಮತ್ತೊಂದು ಐಷಾರಾಮಿ ಕಾರು ಅಪಘಾತಕ್ಕೀಡಾಗಿರುವ ಘಟನೆ ಶನಿವಾರ ಯಲಹಂಕ ಮೇಲ್ಸೇತುವೆ ಬಳಿ ನಡೆದಿದೆ.
ಶನಿವಾರ ರಾತ್ರಿ ಸುಮಾರು 9 ಗಂಟೆಗೆ ಫೆರಾರಿ ಕಾರು ಅಪಘಾತಕ್ಕೀಡಾಗಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಅಲ್ಲದೇ ಈ ಕಾರು ಜೆಡಿಎಸ್ ವಿಧಾನ ಪರಿಷತ್ ಸದಸ್ಯ ಬಾವ ಮೊಹದ್ ಫಾರೂಕ್ ಒಡೆತನದಲ್ಲಿದೆ ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ: ಆಡಿ ಕಾರು ಅಪಘಾತ – ನೀರಿನ ಬಾಟಲ್‍ನಿಂದ 7 ಮಂದಿ ಸಾವು?
ಸದ್ಯ ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು, ಅಪಘಾತ ಸಂಭವಿಸಲು ಅತೀ ವೇಗವೇ ಕಾರಣನಾ? ಎಂದು ತನಿಖೆ ನಡೆಸುತ್ತಿದ್ದಾರೆ. ಆದರೆ ಚಾಲಕ ಹಾಗೂ ಫೆರಾರಿ ಕಾರು ಅಪಘಾತದ ಬಗ್ಗೆ ಮಾಹಿತಿ ಬಿಟ್ಟುಕೊಡಲು ಪೊಲೀಸರು ಹಿಂದೇಟು ಹಾಕುತ್ತಿದ್ದಾರೆ.
ಇತ್ತೀಚೆಗಷ್ಟೇ ಬೆಂಗಳೂರಿನ ಕೋರಮಂಗಲದ ಮಂಗಳ ಕಲ್ಯಾಣಮಂಟಪದ ಬಳಿ ಭೀಕರ ಕಾರು ಅಪಘಾತ ಸಂಭವಿಸಿದ್ದು 7 ಮಂದಿ ಮೃತಪಟ್ಟಿದ್ದರು. ಇದೀಗ ನಗರದಲ್ಲಿ ಮತ್ತೆ ಐಷಾರಾಮಿ ಕಾರು ಅಪಘಾತ ಸಂಭವಿಸಿದೆ. ಇದನ್ನೂ ಓದಿ: ಕಾರು ಅಪಘಾತಕ್ಕೂ ಮುನ್ನ ಮದ್ಯ ಖರೀದಿಸಿದ್ದ ಇಶಿತಾ, ಬಿಂದು
– ಸುಮಲತಾ- ದಳಪತಿಗಳ ಪ್ರತಿಷ್ಠೆಯಿಂದ ಇಕ್ಕಟ್ಟಿಗೆ ಸಿಲುಕಿದ ಅಧಿಕಾರಿಗಳು – ದಿಶಾ ಸಭೆಯಲ್ಲಿ ‘ತಪ್ಪಿತಸ್ಥ’ ಸ್ಥಾನದಲ್ಲಿ ನಿಂತ ಅಧಿಕಾರಿಗಳು
ಮಂಡ್ಯ: ಸಂಸದೆ ವರ್ಸಸ್ ದಳಪತಿಗಳ ಸಮರ ಮತ್ತೊಮ್ಮೆ ತಾರಕ್ಕೇರಿದೆ. ಇಷ್ಟು ದಿನ ಹಾದಿ ಬೀದಿಯಲ್ಲಿ ನಡೆಯುತ್ತಿದ್ದ ವಾಗ್ಯುದ್ಧ ಅಭಿವೃದ್ಧಿ ಬಗ್ಗೆ ಚರ್ಚೆ ನಡೆಯಬೇಕಿದ್ದ ಸಭೆಯಲ್ಲೂ ಮುಂದುವರಿದಿದೆ. ಎರಡು ವರ್ಷದಲ್ಲೇ ಮೊದಲ ಬಾರಿಗೆ ಸಂಸದರ ದಿಶಾ ಸಭೆಯಲ್ಲಿ ಭಾಗವಹಿಸಿದ್ದ ದಳಪತಿಗಳು ಸಂಸದರ ವಿರುದ್ಧ ಒಮ್ಮೆಲೇ ಮುಗಿಬಿದ್ರು. ಸಂಸದರ ಅಕ್ರಮ ಗಣಿಗಾರಿಕೆ ವಿರುದ್ಧದ ಹೋರಾಟಕ್ಕೆ ತಿರುಗೇಟು ನೀಡಿರುವ ಜೆಡಿಎಸ್ ಶಾಸಕರು ಸುಮಲತಾ ಸುತ್ತಮುತ್ತವಿರುವ ಅಕ್ರಮ ಕೂಟವನ್ನ ಬಹಿರಂಗಪಡಿಸಿದರು.
ಇಂದು ಸಂಸದೆ ಸುಮಲತಾ ಅಂಬರೀಶ್ ಅಧ್ಯಕ್ಷತೆಯಲ್ಲಿ ಮಂಡ್ಯದ ಜಿಲ್ಲಾ ಪಂಚಾಯಿತಿ ಕಾವೇರಿ ಸಭಾಂಗಣದಲ್ಲಿ ದಿಶಾ ಸಭೆ ಕರೆಯಲಾಗಿತ್ತು. ಕಳೆದ ಎರಡೂ ವರ್ಷಗಳಿಂದ ನಡೆದ 8 ದಿಶಾ ಸಭೆಗಳಿಗೆ ನಿರಂತರವಾಗಿ ಗೈರಾಗಿದ್ದ ಮಂಡ್ಯ ಜಿಲ್ಲೆಯ ಜೆಡಿಎಸ್ ಶಾಸಕರು ಇಂದು ಹಾಜರಾಗಿದ್ರು. ಸಭೆ ಆರಂಭಕ್ಕೂ ಮುನ್ನವೇ ಸಮರಕ್ಕಿಳಿದ ಶಾಸಕ ರವೀಂದ್ರ ಶ್ರೀಕಂಠಯ್ಯ, ಸಭಾಂಗಣದೊಳಗಿದ್ದ ಸಂಸದರ ಆಪ್ತ ಕೂಟವನ್ನು ಕಂಡು ಕೆಂಡಾಮಂಡಲರಾದ್ರು. ಮೊದಲು ಅನಧಿಕೃತ ವ್ಯಕ್ತಿಗಳನ್ನು ಹೊರಕಳಿಸುವಂತೆ ಪಟ್ಟು ಹಿಡಿದ್ರು. ಈ ವೇಳೆ ಸಂಸದ ಆಪ್ತ ಕಾರ್ಯದರ್ಶಿ ಎನ್ನಲಾದ ಶ್ರೀನಿವಾಸ್ ಭಟ್ ಎಂಬಾತ ಅಧಿಕೃತನೋ ಅಥವಾ ಅನಧಿಕೃತವೋ. ಸಂಸದರ ಲೆಟರ್ ಹೆಡ್ ಗಳಿಗೆ ನಾಲ್ಕು ಮಂದಿ ಸಹಿ ಮಾಡಿದ್ದಾರೆ ಅದು ಅಕ್ರಮ ಅಲ್ವೇ ಎಂದು ಪ್ರಶ್ನಿಸಿದ್ರು. ಈ ವೇಳೆ ಕೆಲ ಕಾಲ ಸುಮಲತಾ ಅವರು ದಿಗ್ಭ್ರಾಂತರಾದಂತೆ ಕುಳಿತಿದ್ದರು.
ಈ ನಡುವೆ ಸಂಸದೆ ಸುಮಲತಾ ತಮ್ಮ ಆಪ್ತರನ್ನ ಸಮರ್ಥಿಸಿಕೊಳ್ಳಲು ಮುಂದಾದರು. ಈ ವೇಳೆ ರವೀಂದ್ರ ಶ್ರೀಕಂಠಯ್ಯ ಜೊತೆಗೆ ಉಳಿದ ಜೆಡಿಎಸ್ ಶಾಸಕರೂ ಕೂಡ ಧ್ವನಿಗೂಡಿಸಿದ್ರು. ವಿಷಯ ದೊಡ್ಡದಾಗುತ್ತಿದ್ದಂತೆ ಎಚ್ಚೆತ್ತುಕೊಂಡ ಸಂಸದರ ಕೆಲವು ಆಪ್ತರು ಸಭಾಂಗಣದಿಂದ ತಾವಾಗಿಯೇ ಹೊರ ನಡೆದರು. ಇದರ ಜೊತೆಗೆ ಸಂಸದ ಲೆಟರ್ ಹೆಡ್ ದುರ್ಬಳಕೆ ಮಾಡಿಕೊಂಡಿರುವ ಹಾಗೂ ಆಪ್ತ ಕಾರ್ಯದರ್ಶಿ ಹೆಸರಲ್ಲಿ ಅಧಿಕಾರಿಗಳು ಹಾಗೂ ಗಣಿ ಮಾಲೀಕರಿಗೆ ಫೋನ್ ಮಾಡಿ ಬೆದರಿಕೆ ಹಾಕುವವರ ವಿರುದ್ಧ ಕ್ರಮಕ್ಕೆ ಜೆಡಿಎಸ್ ಶಾಸಕರು ಒತ್ತಾಯಿಸಿದರು.
ಅವಧಿಗೂ ಮುನ್ನ ದಿಶಾ ಸಭೆ ನಡೆಸೋಕ್ಕೆ ಸಿಇಓಗೆ ಅಧಿಕಾರ ಇದೆಯಾ? ಈ ಬಗ್ಗೆ ಲಿಖಿತ ಉತ್ತರ ನೀಡುವವರೆಗೂ ಸಭೆ ಆರಂಭಕ್ಕೆ ಅವಕಾಶ ನೀಡುವುದಿಲ್ಲ ಎಂದು ರವೀಂದ್ರ ಶ್ರೀಕಂಠಯ್ಯ ಪಟ್ಟು ಹಿಡಿದ್ರು. ಸತತ ಎರಡು ಗಂಟೆ ಸತಾಯಿಸಿ ಬಳಿಕ ಸಿಇಓ ದಿವ್ಯ ಪ್ರಭು ಲಿಖಿತ ಉತ್ತರ ನೀಡಿದ ಬಳಿಕ ಸಭೆ ಆರಂಭವಾಯ್ತು. ಈ ವೇಳೆ ಹಾಸ್ಯದ ಮೂಲಕವೇ ದಳಪತಿಗಳ ಕಾಲೆಳೆದ ಸಂಸದೆ, ನೀವೆಲ್ಲಾ ಸಭೆ ನಡೆಯಬಾರದು ಎಂಬ ಸ್ಟ್ರಾಟರ್ಜಿ ಇಟ್ಟುಕೊಂಡು ಬಂದಿದ್ದೀರಿ. ಇಲ್ಲವಾದ್ರೆ 8 ದಿಶಾ ಸಭೆಗೆ ಒಬ್ಬರೂ ಬರದಿದ್ದವರು ಇವತ್ತು ಒಟ್ಟಿಗೆ ಬಂದು ಹೀಗೆ ಮಾಡಿದ್ರೆ ಹೇಗೆ ಎಂದು ಪ್ರಶ್ನಿಸಿದ್ರು. ಈ ವೇಳೆ ಜೆಡಿಎಸ್ ಶಾಸಕ ಈ ಮಾತು ಹಿಂಪಡೆಯುವಂತೆ ಆಗ್ರಹಿಸಿದ್ರು. ಇದನ್ನೂ ಓದಿ: ಏರಿಕೆಯಾಯ್ತು ಗೃಹ ಬಳಕೆ ಎಲ್‍ಪಿಜಿ ಸಿಲಿಂಡರ್ ಬೆಲೆ
ಸದಾ ಅಕ್ರಮ ಗಣಿಗಾರಿಕೆ ವಿರುದ್ಧ ಸಮರ ಸಾರುತ್ತಿದ್ದ ಸಂಸದರಿಗೆ ಇವತ್ತಿನ ದಿಶಾ ಸಭೆ ನುಂಗಲಾರದ ತುತ್ತಾಗಿತ್ತು. ಸಭೆ ಆರಂಭವಾದ ಬಳಿಕವೂ ದಳಪತಿಗಳ ಆರ್ಭಟವೇ ಜೋರಾಗಿತ್ತು. ಸಂಸದರನ್ನೇ ಟಾರ್ಗೆಟ್ ಮಾಡಿಕೊಂಡು ಅಧಿಕಾರಿಗಳ ಬೆವರಿಳಿಸಿದ್ರು. ಗಣಿಗಾರಿಕೆ ವಿಚಾರವನ್ನೇ ಪ್ರಮುಖವಾಗಿ ಜೆಡಿಎಸ್ ಶಾಸಕರು ಲೀಗಲ್ ಮೈನಿಂಗ್ ನಿಲ್ಲಿಸಲು ಅಧಿಕಾರ ಕೊಟ್ಟವರು ಯಾರು? ಯಾರು ಹೇಳಿದ್ದಾರೆ. ನಿಮ್ಮಿಂದಾಗಿ ಜಿಲ್ಲೆಯಲ್ಲಿ ಅಭಿವೃದ್ಧಿ ಕಾರ್ಯಗಳು ನಿಂತಿವೆ. ಮಂಡ್ಯ ಜಿಲ್ಲೆಗೆ ಪ್ರತ್ಯೇಕ ಕಾನೂನಿದಿಯಾ ಎಂದು ಗಣಿ ಅಧಿಕಾರಿ ಪದ್ಮಜ ಅವರನ್ನ ತರಾಟೆ ತೆಗೆದುಕೊಂಡ್ರು. ಇದನ್ನೂ ಓದಿ: ಸುನಂದಾ ಪುಷ್ಕರ್ ಪ್ರಕರಣ – 7 ವರ್ಷಗಳ ಬಳಿಕ ಶಶಿ ತರೂರ್ಗೆ ರಿಲೀಫ್
ಈ ವೇಳೆ ದಳಪತಿಗಳ ಪ್ರಶ್ನೆಗಳಿಗೆ ಅಧಿಕಾರಿ ಉತ್ತರಿಸಲಾಗದೇ ತಬ್ಬಿಬ್ಬಾದ್ರು. ಈ ವೇಳೆ ಸಂಸದೆ ಸುಮಲತಾ ಮಾತನಾಡಿ, ನನ್ನ ಹೋರಾಟ ಏನಿದ್ರೂ ಅಕ್ರಮದ ವಿರುದ್ಧ ಹೊರತು ಸಕ್ರಮದ ವಿರುದ್ಧವಲ್ಲ ಎಂದೇಳುವ ಮೂಲಕ ತಮ್ಮ ವಿರುದ್ಧದ ಆರೋಪಕ್ಕೆ ಸ್ಪಷ್ಟನೆ ನೀಡುವ ಪ್ರಯತ್ನ ಮಾಡಿದ್ರು. ಸಂಸದರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸಂಸದರಿಗಿಂತ ಶಾಸಕರದ್ದೇ ಸೌಂಡ್ ಜೋರಾಗಿತ್ತು. ಇದನ್ನೂ ಓದಿ: ದಶಪಥದ ರಸ್ತೆ ಇರೋದು ಮೈಸೂರಿಗಾಗಿ, ಇದಕ್ಕಾಗಿ ಹೆಚ್ಚು ಆಸಕ್ತಿವಹಿಸಿದ್ದೇನೆ: ಪ್ರತಾಪ್ ಸಿಂಹ
ಮಂಡ್ಯ: ಎಲ್ಲೆಲ್ಲಿ ಯಾರ್ಯಾರಿಗೆ ಕರೆಂಟ್ ಹೊಡೆದಿದೆಯೋ ಗೊತ್ತಿಲ್ಲ. ಯಾಕೆ ಪಾಪ ಈ ರೀತಿ ತಪ್ಪು ಮಾಡಿಕೊಳ್ತಾರೋ ಎಂದು ಜೆಡಿಎಸ್ ಶಾಸಕ ರವಿಂದ್ರ ಶ್ರೀಕಂಠಯ್ಯ ಹೇಳಿದ್ದಾರೆ.
ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಮಾಹದೇವಪುರ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಾಂಬೆಗೆ ಹೋಗಿದ್ದವರೆಲ್ಲ ಕೋರ್ಟ್ ಮೊರೆ ಹೋಗಿದ್ದಾರೆ. ಮಾಧ್ಯಮದಲ್ಲಿ ಪ್ರಸಾರ ಮಾಡದಂತೆ ಕೊರ್ಟ್ ತಡೆ ಹೋಗಿರುವುದು ಬಹಳ ಹಾಸ್ಯ ಕಾಣ್ತಿದೆ ಎಂದರು.
ಸಿಡಿ ನೀವು ನೋಡಿದಾಗೇ ನಾನು ನೋಡಿದ್ದೀನಿ. ಅದಕ್ಕಿಂತ ಜಾಸ್ತಿ ಏನೂ ನನಗೆ ಗೊತ್ತಿಲ್ಲ. ಎಲ್ಲಿ ಯಾರ್ಯಾರಿಗೆ ಕರೆಂಟ್ ಹೊಡೆದಿದ್ಯೋ ನನಗೆ ಗೊತ್ತಿಲ್ಲ. ಯಾಕೇ ಪಾಪ ಈ ತರ ತಪ್ಪು ಮಾಡ್ಕೋಳ್ತಾರೋ. ನಾವು ಬಂದಿರುವುದು ಸಮಾಜ ಸೇವೆ ಮಾಡುವುದಕ್ಕೆ. ದೇವರು ಕೊಟ್ಟ ಅವಕಾಶದಲ್ಲಿ ಜನಗಳ ಸೇವೆ ಮಾಡಬೇಕು. ಜನ ಪ್ರತಿನಿಧಿಗಳು ಕೋರ್ಟ್ ಗೆ ಹೋಗಿ ತಡೆ ತರುವಂತ ಪರಿಸ್ಥಿತಿಯನ್ನ ಮಾಡ್ಕೋಳ್ಳಬಾರದು. ಇದು ರಾಜಕೀಯ ಕ್ಷೇತ್ರದಲ್ಲಿ ತಲೆ ತಗ್ಗಿಸುವಂತ ವಿಚಾರ ಇದು. ನೀವು ನೋಡಿರುವಾಗೆ ನಾನು ನೋಡಿದ್ದು, ಅಷ್ಟೇ ಹೊಸದಾಗಿ ಬಿಟ್ಟರೆ ನೋಡ್ತೇನೆ ಎಂದು ಹೇಳಿದರು.
ಮಾಜಿ ಸಚಿವ ಸೆಕ್ಸ್ ಸಿಡಿ ಹೊರ ಬಂದು ರಾಜಕೀಯ ವಲಯದಲ್ಲಿ ಅಲ್ಲೋಲಕಲ್ಲೋಲ ಆಗುತ್ತಿದ್ದಂತೆಯೇ ಇತ್ತ 6 ಮಮದಿ ಸಚಿವರು ಕೋರ್ಟ್ ಮೊರೆ ಹೊಗಿದ್ದಾರೆ. ತಮ್ಮ ವಿರುದ್ಧ ಮಾಧ್ಯಮಗಳು ವರದಿ ಪ್ರಸಾರ ಮಾಡಬಾರದು ಎಂದು ಸಚಿವರಾದ ಶಿವರಾಮ್ ಹೆಬ್ಬಾರ್, ಬಿ.ಸಿ.ಪಾಟೀಲ್, ಎಸ್.ಟಿ.ಸೋಮಶೇಖರ್, ಕೆ.ಸುಧಾಕರ್, ನಾರಾಯಣಗೌಡ, ಭೈರತಿ ಬಸವರಾಜ್ ಬೆಂಗಳೂರಿನ ಸಿಟಿ ಸಿವಿಲ್ ಕೋರ್ಟಿನಲ್ಲಿ ಅರ್ಜಿ ಸಲ್ಲಿಸಿದ್ದಾರೆ.
ತಮ್ಮ ವಿರುದ್ಧ ಸುದ್ದಿ ಪ್ರಸಾರ ಮಾಡದಂತೆ ಮಾಧ್ಯಮಗಳಿಗೆ ನಿರ್ಬಂಧ ವಿಧಿಸಬೇಕೆಂದು ಕೋರ್ಟಿನಲ್ಲಿ ಅರ್ಜಿ ಸಲ್ಲಿಸಿ ಮನವಿ ಮಾಡಿದ್ದಾರೆ. ಆರು ಸಚಿವರಿಗೆ ಭೀತಿ ಹುಟ್ಟಿರುವುದು ಏಕೆ? ಇದ್ದಕ್ಕಿಂದ್ದಂತೆ ಯಾಕೆ ಕೋರ್ಟ್ ಮೊರೆ ಹೋಗಿದ್ದಾರೆ ಎಂಬುದು ಮತ್ತಷ್ಟು ಕುತೂಹಲ ಹುಟ್ಟಿಸಿದೆ.
ಯಾದಗಿರಿ: ಗುರುಮಿಠಕಲ್ ಕ್ಷೇತ್ರದ ಜೆಡಿಎಸ್ ಹಿರಿಯ ಶಾಸಕ ನಾಗನಗೌಡ ಕಂದಕೂರ ಅವರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಈ ಕುರಿತು ಅವರ ಕಿರಿಯ ಪುತ್ರ ಶರಣಗೌಡ ಕಂದಕೂರ ಫೇಸ್‍ಬುಕ್ ಮೂಲಕ ಮಾಹಿತಿ ನೀಡಿದ್ದಾರೆ.
ಜಿಲ್ಲೆಯ ಗುರುಮಠಕಲ್ ಕ್ಷೇತ್ರದ ಜೆಡಿಎಸ್ ಶಾಸಕರಾದ ನಾಗನಗೌಡ ಕಂದಕೂರ ಮತ್ತು ಅವರ ಹಿರಿಯ ಪುತ್ರ ಮಲ್ಲಿಕಾರ್ಜುನ ರೆಡ್ಡಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದೆ. ಶರಣಗೌಡ ಕಂದಕೂರ ಫೇಸ್‍ಬುಕ್ ಮೂಲಕ ತಮ್ಮ ತಂದೆ ಹಾಗೂ ಸಹೋದರನಿಗೆ ಸೋಂಕು ತಗುಲಿದ ವಿಷಯವನ್ನು ತಿಳಿಸಿದ್ದಾರೆ.
“ನನ್ನ ತಂದೆ ನಾಗನಗೌಡ ಕಂದಕೂರ ಹಾಗೂ ಸಹೋದರ ಮಲ್ಲಿಕಾರ್ಜುನ ರೆಡ್ಡಿ ಕೊರೊನಾ ಟೆಸ್ಟ್ ಮಾಡಿಸಿದ್ದು, ಪಾಸಿಟಿವ್ ಬಂದಿದೆ. ಯಾವುದೇ ರೋಗದ ಲಕ್ಷಣಗಳು ಇಲ್ಲದಿದ್ದರೂ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದ್ದರಿಂದ ಶಾಸಕರ ಸಂಪರ್ಕಕ್ಕೆ ಬಂದ ಎಲ್ಲರೂ ಹೋಂ ಕ್ವಾರಂಟೈನ್‍ಗೆ ಒಳಗಾಗಬೇಕು. ಜೊತೆಗೆ ಕೋವಿಡ್ ಪರೀಕ್ಷೆ ಮಾಡಿಸಬೇಕು” ಎಂದು ಮನವಿ ಮಾಡಿಕೊಂಡಿದ್ದಾರೆ.
ಶೀಘ್ರದಲ್ಲಿ ನಿಮ್ಮೆಲ್ಲರ ಆಶೀರ್ವಾದದಿಂದ ಗುಣಮುಖರಾಗಿ ಜನ ಸೇವೆಗೆ ಬರಲೆಂದು ಆ ದೇವರಲ್ಲಿ ಪ್ರಾರ್ಥಿಸುತ್ತೇನೆ” ಎಂದು ಬರೆದುಕೊಂಡಿದ್ದಾರೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಆಡಿಯೋ ಪ್ರಕರಣದಲ್ಲಿ ಜೆಡಿಎಸ್ ಯುವ ಮಹಾ ಪ್ರಧಾನ ಕಾರ್ಯದರ್ಶಿ ಶರಣಗೌಡ ಕಂದಕೂರ ಸದ್ದು ಮಾಡಿದ್ದರು.
ಹಾಸನ: ಕೊರೊನಾ ಸಂಕಷ್ಟದಲ್ಲೂ ಹಾಸನ ಜಿಲ್ಲೆಗೆ ರಾಜ್ಯ ಸರ್ಕಾರಿಂದ ಯಾವುದೇ ಅನುದಾನ ಸಿಗುತ್ತಿಲ್ಲ ಎಂದು ಜೆಡಿಎಸ್ ಶಾಸಕರು ಆಕ್ರೋಶ ಹೊರಹಾಕಿದ್ದಾರೆ.
ಇಂದು ಮಾಜಿ ಪ್ರಧಾನಿ ದೇವೇಗೌಡರು ಹಾಸನಕ್ಕೆ ಭೇಟಿ ನೀಡಿ ಜನಸಾಮಾನ್ಯರಿಗೆ ಹಂಚಲು ಆಹಾರ ಧಾನ್ಯಗಳ ಕಿಟ್ ಅನ್ನು ಜಿಲ್ಲಾಡಳಿತಕ್ಕೆ ಹಸ್ತಾಂತರಿಸಿದರು. ಇದಕ್ಕೂ ಮುನ್ನ ಪಕ್ಷದ ಕಾರ್ಯಕರ್ತರೊಂದಿಗೆ ಮಾಜಿ ಪ್ರಧಾನಿ ದೇವೇಗೌಡರು ಸಂಸದರ ನಿವಾಸದಲ್ಲಿ ಚರ್ಚೆ ನಡೆಸಿದರು.
ಈ ವೇಳೆ ರಾಜ್ಯ ಸರ್ಕಾರದ ಕಾರ್ಯವೈಖರಿ ವಿರುದ್ಧ ಜೆಡಿಎಸ್ ಶಾಸಕರು ತಮ್ಮ ಅಸಮಾಧಾನ ಹೊರಹಾಕಿದರು. ಶ್ರವಣಬೆಳಗೊಳ ಕ್ಷೇತ್ರದ ಶಾಸಕ ಬಾಲಕೃಷ್ಣ, ಕೊರೊನಾ ಎಂದುಕೊಂಡು ನಮಗೆ ಯಾವ ಅನುದಾನ ಕೊಟ್ಟಿಲ್ಲ ಎಂದರು. ಆಗ ಮಾತನಾಡಿದ ಹೆಚ್‍ಡಿ.ರೇವಣ್ಣ, ಸರ್ಕಾರದಿಂದ ಬಂದ ಹಣ ಯಾವುದಕ್ಕೆ ಖರ್ಚು ಮಾಡಿದ್ದೀರಿ ಅಂದರೆ ಉಸಿರಿಲ್ಲ. ಹೆಚ್ಚಿನ ಬೆಲೆಗೆ ದಿನಸಿ ಮಾರಾಟ ಮಾಡುತ್ತಿದ್ದಾರೆ. ಅವರ ವಿರುದ್ಧವೂ ಕ್ರಮವಿಲ್ಲ, ಜಿಲ್ಲಾಡಳಿತ ಸತ್ತು ಹೋಗಿದೆ ಎಂದು ಆಕ್ರೋಶ ಹೊರಹಾಕಿದರು.
ಇದೇ ವೇಳೆ ಧ್ವನಿಗೂಡಿಸಿದ ಅರಸೀಕೆರೆ ಕ್ಷೇತ್ರದ ಶಾಸಕ ಶಿವಲಿಂಗೇಗೌಡ, ಕಾರ್ಡ್ ಇಲ್ಲದವರಿಗೂ ರೇಷನ್ ಕೊಡುತ್ತೇವೆ ಅಂದರು. ಇದುವರೆಗೂ ಯಾರಿಗೆ ಕೊಟ್ಟಿದ್ದಾರೆ. ನಮ್ಮ ನಮ್ಮ ತಾಲೂಕು ಉಳಿಸಿಕೊಳ್ಳೋಣ ನಡೀರಿ ಈ ಕಷ್ಟ ಕಾಲದಲ್ಲಿ ಇದರ ಬಗ್ಗೆ ಮಾತನಾಡುವುದು ಬೇಡ ಎಂದು ಚರ್ಚೆಗೆ ಫುಲ್ ಸ್ಟಾಪ್ ಇಟ್ಟರು.
ಬೆಂಗಳೂರು: ಜೆಡಿಎಸ್ ಶಾಸಕರಿಗೆ ಅನುದಾನ ಬಿಡುಗಡೆ ಮಾಡಬೇಕಾದರೆ ಯಡಿಯೂರಪ್ಪನವರ ಕಾಲು ಹಿಡಿಯಬೇಕೇ ಎಂಬ ಪ್ರಶ್ನೆಯನ್ನು ಜೆಡಿಎಸ್ ಶಾಸಕ ಡಾ.ಕೆ ಶ್ರೀನಿವಾಸಮೂರ್ತಿ ಅವರು ಹಿರಿಯ ನಟಿ ಡಾ.ಲೀಲಾವತಿ ಮುಂದೆ ನಗುತ್ತಲೇ ನೋವು ತೋಡಿಕೊಂಡಿದ್ದಾರೆ.
ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ಚೌಡಸಂದ್ರ ಹಾಗೂ ಬಿದನಪಾಳ್ಯ ನಡುವಿನ ಸೇತುವೆ ನಿರ್ಮಾಣ ಕಾಮಗಾರಿ ಶಂಕುಸ್ಥಾಪನೆ ವೇಳೆ ಈ ಪ್ರಸಂಗ ನಡೆದಿದೆ.
ಈ ಬಗ್ಗೆ ಮಾತನಾಡಿದ ಶಾಸಕ ಶ್ರೀನಿವಾಸ್, ಈಗಾಗಲೇ ಸಾಕಷ್ಟು ಕಾಮಗಾರಿಯ ಹಣವನ್ನು ವಾಪಸ್ ತೆಗೆದುಕೊಂಡಿದ್ದರು. ನಾನು ಹೋಗಿ ಕಾಲು ಹಿಡಿದುಕೊಂಡೆ, ಇಲ್ಲಾಂದ್ರೆ ಒದ್ದು ಬಿಡುವಂತ ಜನ ಅವರು. ಕ್ಷೇತ್ರದ ಅಭಿವೃದ್ಧಿ ಕೆಲಸಗಳು ಕುಂಠಿತವಾಗುತ್ತಿವೆ. ಜನರು ನಮ್ಮನ್ನು ಪ್ರಶ್ನೆ ಮಾಡುವ ಪರಿಸ್ಥಿತಿ ಎದುರಾಗಿದೆ. ಹಿಂದಿನ ಸರ್ಕಾರದಲ್ಲಿ ಬಿಡುಗಡೆಯಾದ ಎಲ್ಲ ಕಾಮಗಾರಿಯ ಹಣವನ್ನು ಈಗಾಗಲೇ ವಾಪಸ್ ಪಡೆದಿದ್ದು ಸರಿಯಲ್ಲ. ಕೂಡಲೇ ಶಾಸಕರ ಅನುದಾನವನ್ನು ತಾರತಮ್ಯ ಮಾಡದೇ ಕ್ಷೇತ್ರದ ಅಭಿವೃದ್ಧಿಗೆ ಮುಖ್ಯಮಂತ್ರಿ ಗಮನ ಹರಿಸಬೇಕು ಎಂದು ಮನವಿ ಮಾಡಿದರು.
ಇದೇ ವೇಳೆ ಹಿರಿಯ ನಟಿ ಡಾ. ಲೀಲಾವತಿ ಮಾತನಾಡಿ, ನಮ್ಮ ಹಳ್ಳಿ ಜನರ ರಕ್ಷಣೆ ಹಾಗೂ ಅಭಿವೃದ್ಧಿಯ ನಿಟ್ಟಿನಲ್ಲಿ ಈ ಕಾಮಗಾರಿಗಾಗಿ ಸಾಕಷ್ಟು ಹೋರಾಟ ನಡೆಸಿದ್ದು ಇಂದಿಗೆ ಸಾರ್ಥಕವಾಗಿದೆ ಎಂದರು. ಈ ಕಾರ್ಯಕ್ರಮದಲ್ಲಿ ಶಾಸಕ ಡಾ.ಕೆ ಶ್ರೀನಿವಾಸ ಮೂರ್ತಿ, ಡಾ.ಲೀಲಾವತಿ, ನಟ ವಿನೋದ್ ರಾಜ್, ಹೇಮಂತ್ ಕುಮಾರ್, ಸಂಪತ್ ಕುಮಾರ್, ಸ್ಥಾಯಿ ಸಮಿತಿಯ ಅಧ್ಯಕ್ಷ ಡಾ. ರಂಗನಾಥ್, ಮಾಜಿ ಸೈನಿಕ ಮೂರ್ತಿ, ವೆಂಕಟೇಶ, ಮತ್ತಿತರ ಮುಖಂಡರು ಹಾಜರಿದ್ದರು.
ತುಮಕೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕೊಟ್ಟ ಮಾತನ್ನು ಉಳಿಸಿಕೊಳ್ಳುವ ದಿಟ್ಟನಾಯಕರು. ಅವರು ಯಾವತ್ತೂ ವಚನ ಭ್ರಷ್ಟರಾಗಲು ಸಾಧ್ಯವಿಲ್ಲ ಎಂದು ಮಾಜಿ ಸಚಿವ, ಜೆಡಿಸ್ ಶಾಸಕ ಎಸ್.ಆರ್.ಶ್ರೀನಿವಾಸನ್ ಹಾಡಿ ಹೊಗಳಿದ್ದಾರೆ.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯ ಸಚಿವ ಸಂಪುಟ ವಿಸ್ತರಣೆ ಆಗಲಿದೆ. ಗೊಂದಲಗಳು ಎಲ್ಲ ಪಕ್ಷದಲ್ಲೂ ಇದ್ದದ್ದೇ. ಆದರೆ ಸಿಎಂ ಯಡಿಯೂರಪ್ಪ ಅವರು ಪಕ್ಷಾಂತರಿಗಳಿಗೆ ಕೊಟ್ಟ ಮಾತನ್ನು ಉಳಿಸಿಕೊಳ್ಳುತ್ತಾರೆ. ಹೈಕಮಾಂಡ್ ಟೈಟ್ ಮಾಡಿದ್ದರಿಂದ ತಾತ್ಕಾಲಿಕವಾಗಿ ಅವರಿಗೆ ಹಿನ್ನಡೆಯಾಗಿರಬಹುದು. ಆದರೆ ಕೊಟ್ಟ ಆಶ್ವಾಸನೆಯನ್ನು ಸಿಎಂ ಎಷ್ಟೇ ಕಷ್ಟ ಬಂದರೂ ಈಡೇರಿಸುತ್ತಾರೆ ಎಂದು ಹೇಳಿದರು.
ಸಿಎಂ ಯಡಿಯೂರಪ್ಪ ಅವರಲ್ಲಿ ದಿಟ್ಟ ನಾಯಕತ್ವ ಇದೆ. ಒಂದು ವೇಳೆ ಪಕ್ಷಾಂತರಿಗಳಿಗೆ ಸಚಿವ ಸ್ಥಾನ ಸಿಗದೇ ಇದ್ದರೆ ಅವರ ಜೀವ ಹೋಗಿಬಿಡುತ್ತದೆ. ಅವರಿಗೆ ಅವರೇ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ ಎಂದು ವ್ಯಂಗ್ಯವಾಡಿದರು.
ಬೆಂಗಳೂರಿನಲ್ಲಿ ಗುರುವಾರ ನಡೆದ ಜೆಡಿಎಸ್ ಸಭೆಗೆ ಗೈರಾಗಿದಕ್ಕೆ ಸ್ಪಷ್ಟನೆ ಕೊಟ್ಟ ಎಸ್.ಆರ್.ಶ್ರೀನಿವಾಸ್, ಜೆಡಿಎಸ್ ಕಾರ್ಯಕ್ರಮ ಯಾವತ್ತೂ ತಡವಾಗಿ ಆರಂಭವಾಗುತ್ತದೆ. ಪಕ್ಷದ ನಾಯಕರು ಬೆಳಗ್ಗೆ 9:30 ಗಂಟೆಗೆ ಕಾರ್ಯಕ್ರಮಕ್ಕೆ ಬರುವಂತೆ ಹೇಳಿದರೆ ಕಾರ್ಯಕರ್ತರು 11:30 ಗಂಟೆಗೆ ಬರುತ್ತಾರೆ. ಹಾಗಾಗಿ ನಾನು ಲೇಟಾಗಿ ಹೋಗಿದ್ದೆ. ಅಷ್ಟರಲ್ಲಿ ಕಾರ್ಯಕ್ರಮ ಮುಗಿದಿತ್ತು. ವೇದಿಕೆ ಮೇಲೆ ಹತ್ತಲಿಲ್ಲ. ಹಾಗಂತ ನನಗೆ ಪಕ್ಷದ ವಿರುದ್ಧ ಯಾವುದೇ ಅಸಮಾಧಾನ ಇಲ್ಲ ಎಂದು ಸ್ಪಷ್ಟನೆ ನೀಡಿದರು.
ತುಮಕೂರು: ತುಮಕೂರು ಗ್ರಾಮಾಂತರ ಜೆಡಿಎಸ್ ಶಾಸಕ ಗೌರಿಶಂಕರ್ ಅವರು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರನ್ನು ಹೊಗಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಮೋದಿ ಅವರ ಬಗ್ಗೆ ಈ ದೇಶದಲ್ಲಿ ಒಂದು ಒಳ್ಳೆಯ ಹೆಸರಿದೆ. ದೇಶ ಅಭಿವೃದ್ಧಿ ಮಾಡುವ ಒಳ್ಳೆಯ ಅಜೆಂಡಾ ಇಟ್ಟುಕೊಂಡು ಮುನ್ನಡೆಯುತ್ತಿದ್ದಾರೆ. ದೇಶದ ಬಗೆಗಿನ ಅವರ ದೃಷ್ಟಿಕೋನ ಒಳ್ಳೆಯದಿದೆ” ಎಂದು ಗುಣಗಾನ ಮಾಡಿದ್ದಾರೆ. ಅಲ್ಲದೆ ಬಿಜೆಪಿಯಲ್ಲಿನ ಕೆಲ ನಾಯಕರಿಂದ ಆ ಪಕ್ಷಕ್ಕೆ ಹಾನಿಯಾಗುತ್ತಿದೆ ಎಂದು ಕಾಳಜಿ ವ್ಯಕ್ತಪಡಿಸಿದ್ದಾರೆ.
ಮಾಜಿ ಶಾಸಕ ಸುರೇಶ್ ಗೌಡ ಅಂತಹವರಿಂದ ಬಿಜೆಪಿಗೆ ಕೆಟ್ಟ ಹೆಸರು ಬರುತ್ತಿದೆ. ತುಮಕೂರು ಗ್ರಾಮಾಂತರ ಕ್ಷೇತ್ರದ ರಸ್ತೆ ಕಾಮಗಾರಿಗೆ ಬಿಡುಗಡೆಯಾದ ಹಣವನ್ನು ತಡೆ ಹಿಡಿಯುವಂತೆ ಸುರೇಶ್ ಗೌಡ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದಾರೆ. ಇವರ ಪತ್ರಕ್ಕೆ ಮನ್ನಣೆ ಕೊಟ್ಟು ಹಣವನ್ನು ತಡೆ ಹಿಡಿಯಲಾಗಿದೆ.
ಸುರೇಶ್ ಗೌಡ ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ ಅಧಿಕಾರಿಗಳ ವರ್ಗಾವಣೆ ದಂಧೆ ನಡೆಸುತ್ತಿದ್ದಾರೆ. ಇಂತಹವರಿಂದ ಬಿಜೆಪಿ ಪಕ್ಷಕ್ಕೆ ಹಾನಿಯಾಗುತ್ತಿದೆ. ಈ ಕುರಿತು ಪ್ರಧಾನಿ ಮೋದಿ, ಅಮಿತ್ ಶಾ ಹಾಗೂ ರಾಜ್ಯಪಾಲರಿಗೂ ನಾನು ಟ್ವೀಟ್ ಮಾಡಿ ವಿಚಾರ ತಿಳಿಸುತ್ತೆನೆ ಎಂದು ಸುರೇಶ್ ಗೌಡರ ವಿರುದ್ಧ ಗೌರಿಶಂಕರ ವಾಗ್ದಾಳಿ ನಡೆಸಿದ್ದಾರೆ.