Tag: JDS activist

  • ಅಪಘಾತದಲ್ಲಿ ಜೆಡಿಎಸ್ ಕಾರ್ಯಕರ್ತ, ಇಬ್ಬರು ಮಕ್ಕಳು ಸಾವು- ಹೆಚ್‍ಡಿಕೆ ಬೇಸರ

    ಅಪಘಾತದಲ್ಲಿ ಜೆಡಿಎಸ್ ಕಾರ್ಯಕರ್ತ, ಇಬ್ಬರು ಮಕ್ಕಳು ಸಾವು- ಹೆಚ್‍ಡಿಕೆ ಬೇಸರ

    ಮಂಡ್ಯ: ನಿಂತಿದ್ದ ಲಾರಿಗೆ ದ್ವಿಚಕ್ರ ವಾಹನ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಮಕ್ಕಳು ಸೇರಿ ಜೆಡಿಎಸ್ ಕಾರ್ಯಕರ್ತ ಸಾವನ್ನಪ್ಪಿದ ಘಟನೆ ಶನಿವಾರ ನಡೆದಿತ್ತು. ಇಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಜಿಲ್ಲೆಯ ಹೊಣಕೆರೆ ಗ್ರಾಮಕ್ಕೆ ತೆರಳಿ ಅವರ ಅಂತಿಮ ದರ್ಶನವನ್ನ ಪಡೆದುಕೊಂಡು ಭಾವುಕರಾದರು.

    ಮಂಡ್ಯದ ನಾಗಮಂಗಲದ ಹೊಣಕೆರೆ ಗ್ರಾಮದ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಹಾಗೂ ಜೆಡಿಎಸ್ ಕಾರ್ಯಕರ್ತ ಆನಂದ್‍ಕುಮಾರ್ ನಿನ್ನೆ ತಮ್ಮ ಸೊಸೆ ಹಾಗೂ ಮೊಮ್ಮಕ್ಕಳ ಜೊತೆ ದ್ವಿಚಕ್ರ ವಾಹನದಲ್ಲಿ ಬರುವಾಗ ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಆನಂದ್‍ಕುಮಾರ್ ಸೇರಿದಂತೆ ಅವರ ಇಬ್ಬರು ಮೊಮ್ಮಕ್ಕಳು ಸಾವನ್ನಪ್ಪಿದ್ದರು. ಹೀಗಾಗಿ ಹೆಚ್.ಡಿ.ಕುಮಾರಸ್ವಾಮಿ ಹೊಣಕೆರೆ ಗ್ರಾಮಕಗಕೆ ತೆರಳಿ ಮೃತ ಆನಂದ್ ಮತ್ತು ಅವರ ಮೊಮ್ಮಕ್ಕಳ ಅಂತಿಮ ದರ್ಶನ ಪಡೆದುಕೊಂಡರು. ಇದನ್ನೂ ಓದಿ: ದಸರಾ ತಯಾರಿ- ಸೆ.8ರಂದು ಮೈಸೂರಿನಲ್ಲಿ ಜನಪ್ರತಿನಿಧಿಗಳ ಸಭೆ

    ಬಳಿಕ ಗ್ರಾಮದಲ್ಲಿ ಮಾತನಾಡಿದ ಕುಮಾರಸ್ವಾಮಿ, ನಮ್ಮ ಪಕ್ಷದ ನಿಷ್ಠಾವಂತ ಕಾರ್ಯಕರ್ತ ಆನಂದ್‍ಕುಮಾರ್ ಅವರನ್ನು ಕಳೆದುಕೊಂಡು ತುಂಬಾ ನೋವುಂಟಾಗಿದೆ. ಅಲ್ಲದೆ ಆ ಪುಟ್ಟ ಮಕ್ಕಳು ಸಾವನ್ನಪ್ಪಿರುವುದು ಕರುಳು ಹಿಂಡಿದಂತಿದೆ. ದೇವರು ಹುಟ್ಟಿಸಿ, ಇಷ್ಟು ಬೇಗ ಯಾಕೆ ಕರೆದುಕೊಳ್ಳುತ್ತಾನೆ ಎಂದು ನೋವಾಗುತ್ತದೆ ಎಂದು ಭಾವುಕರಾದರು.

  • 42 ನಿಮಿಷದಲ್ಲಿ 80 ಕಿ.ಮೀ ಸಂಚರಿಸಿ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ತಲುಪಿದ ಅಂಬುಲೆನ್ಸ್

    42 ನಿಮಿಷದಲ್ಲಿ 80 ಕಿ.ಮೀ ಸಂಚರಿಸಿ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ತಲುಪಿದ ಅಂಬುಲೆನ್ಸ್

    – ಜೆಡಿಎಸ್ ಕಾರ್ಯಕರ್ತರಿಂದ ಅಂಬುಲೆನ್ಸ್ ಸಿಬ್ಬಂದಿಗೆ ಸನ್ಮಾನ

    ಹಾವೇರಿ: ಪೊಲೀಸರ ನೆರವಿನಿಂದ ಅವಳಿ ಮಕ್ಕಳನ್ನು ಆಸ್ಪತ್ರೆಗೆ ಸೇರಿಸಿ ಜೀವ ಉಳಿಸಿದ ಅಂಬುಲೆನ್ಸ್ ಸಿಬ್ಬಂದಿ ಹಾಗೂ ವೈದ್ಯರಿಗೆ ಇಂದು ಜಿಲ್ಲಾ ಜೆಡಿಎಸ್ ಕಾರ್ಯಕರ್ತರು ಸನ್ಮಾನ ಮಾಡಿ ಗೌರವಿಸಿದರು.

    ಜನವರಿ 27ರಂದು ಹಾವೇರಿ ಜಿಲ್ಲಾಸ್ಪತ್ರೆಯಿಂದ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ಸೇರಿಸಿದ್ದ ಅಂಬುಲೆನ್ಸ್ ಸಿಬ್ಬಂದಿ ಕಾರ್ಯಕ್ಕೆ ಸಾರ್ವಜನಿಕರಿಂದ ಬಹಳ ಮೆಚ್ಚುಗೆ ವ್ಯಕ್ತವಾಗಿತ್ತು. ಹಾವೇರಿ ಜಿಲ್ಲಾಸ್ಪತ್ರೆಯಲ್ಲಿ ಲಕ್ಷ್ಮಿ ಎಂಬವರು ಅವಳಿ ಮಕ್ಕಳಿಗೆ ಜನ್ಮ ನೀಡಿದ್ದರು. ಆದರೆ ಹೆರಿಗೆ ನಂತರ ಮಕ್ಕಳ ಆರೋಗ್ಯದಲ್ಲಿ ತೀವ್ರ ಸಮಸ್ಯೆಯಾಗಿತ್ತು.

    ತುರ್ತಾಗಿ ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ಅವಳಿ ಮಕ್ಕಳನ್ನು ರವಾನೆ ಮಾಡಬೇಕಾಗಿತ್ತು. ಅಂಬುಲೆನ್ಸ್ ಚಾಲಕ ತೌಫಿಕ್ ಪಠಾಣ್ ಮತ್ತು ಕುಮಾರ್ ಇಬ್ಬರು 42 ನಿಮಿಷಗಳಲ್ಲಿ 80 ಕಿ.ಮೀ ತಲುಪಿ ಕಿಮ್ಸ್ ಆಸ್ಪತ್ರೆಗೆ ದಾಖಲು ಮಾಡಿದ್ದರು.

    ಇಂದು ತೌಫಿಕ್ ಪಠಾಣ್ ಮತ್ತು ಕುಮಾರ್ ಅಂಬುಲೆನ್ಸ್ ಸಿಬ್ಬಂದಿ, ಜಿಲ್ಲಾ ಶಸ್ತ್ರಚಿಕಿತ್ಸಕ ನಾಗರಾಜ್ ನಾಯಕ ಹಾಗೂ ಸಿಬ್ಬಂದಿಗೆ ಜೆಡಿಎಸ್ ಮುಖಂಡರು ಸನ್ಮಾನ ಮಾಡಿ ಗೌರವಿಸಿದರು. ಉತ್ತಮ ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

  • ಚುನಾವಣೆ ನಂತ್ರ ಮಂಡ್ಯದಲ್ಲಿ ನಿಖಿಲ್ – ಮೃತ ಕಾರ್ಯಕರ್ತನ ನೆನೆದು ಭಾವುಕ

    ಚುನಾವಣೆ ನಂತ್ರ ಮಂಡ್ಯದಲ್ಲಿ ನಿಖಿಲ್ – ಮೃತ ಕಾರ್ಯಕರ್ತನ ನೆನೆದು ಭಾವುಕ

    ಮಂಡ್ಯ: ಲೋಕಸಭಾ ಚುನಾವಣೆ ಬಳಿಕ ಮೊದಲ ಬಾರಿಗೆ ನಿಖಿಲ್ ಜಿಲ್ಲೆಗೆ ಭೇಟಿ ನೀಡಿದ್ದು, ಅನಾರೋಗ್ಯದಿಂದ ಸಾವನ್ನಪ್ಪಿದ ಜೆಡಿಎಸ್ ಕಾರ್ಯಕರ್ತನ ನಿವಾಸಕ್ಕೆ ಭೇಟಿ ಕೊಟ್ಟಿದ್ದಾರೆ.

    ಮಳವಳ್ಳಿಯ ಜೆಡಿಎಸ್ ಕಾರ್ಯಕರ್ತ ಸಂತೋಷ್ ಇತ್ತೀಚೆಗೆ ಅನಾರೋಗ್ಯದಿಂದ ಸಾವನ್ನಪ್ಪಿದ್ದರು. ಈ ಹಿನ್ನೆಲೆಯಲ್ಲಿ ಮೃತ ಸಂತೋಷ್ ಮನೆಗೆ ಹೋಗಿ ಕುಟುಂಬದವರಿಗೆ ಸಾಂತ್ವನ ಹೇಳಿದ್ದಾರೆ. ಇದೇ ವೇಳೆ ಕುಟುಂಬಸ್ಥರೊಂದಿಗೆ ಮಾತನಾಡುತ್ತಾ ಸದಾ ಜೆಡಿಎಸ್ ಪಕ್ಷಕ್ಕಾಗಿ ದುಡಿದ ಮೃತ ಸಂತೋಷ್ ನೆನೆದು ನಿಖಿಲ್ ಭಾವುಕರಾದರು.

    ನಿಖಿಲ್ ನಿವಾಸಕ್ಕೆ ಆಗಮಿಸುತ್ತಿದ್ದಂತೆ ಕಾಲಿಗೆ ಬಿದ್ದು ನಮಸ್ಕರಿಸಲು ಮೃತ ಸಂತೋಷ ತಾಯಿ ಜಯಮ್ಮ ಮುಂದಾಗಿದ್ದರು. ಈ ವೇಳೆ ಕಾಲಿಗೆ ಬೀಳುತ್ತಿದ್ದನ್ನು ನಿಖಿಲ್ ತಡೆದು ಅವರಿಗೆ ಕೈ ಮುಗಿದು ನಮಸ್ಕರಿಸಿದ್ದಾರೆ.

    ಇದೇ ವೇಳೆ ಮಾತನಾಡಿದ ನಿಖಿಲ್, ಸಂತೋಷ್ ಜೆಡಿಎಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿದ್ದರು. ಅವರ ಸ್ವಂತ ದುಡಿಮೆಯಲ್ಲಿ ಮಳವಳ್ಳಿ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷ ಕಟ್ಟಲಿಕ್ಕೆ ಕೆಲಸ ಮಾಡಿದ್ದರು. ಸಂತೋಷ್ ಅಗಲಿಕೆ ಜೀರ್ಣಿಸಿಕೊಳ್ಳಲಿಕ್ಕೆ ಆಗುತ್ತಿಲ್ಲ. ಲೋಕಸಭಾ ಚುನಾವಣಾ ಸಂದರ್ಭದಲ್ಲಿ ಪ್ರಚಾರದ ವೇಳೆ ಬೈಕ್ ಮೇಲೆ ಕರೆದುಕೊಂಡು ಹೋಗಿದ್ದರು ಎಂದು ಸಂತೋಷ್ ಅವರನ್ನು ನಿಖಿಲ್ ನೆನೆದರು.

    ಮಕ್ಕಳನ್ನ ಕಳೆದುಕೊಂಡ ನೋವು ತಂದೆತಾಯಿಗೆ ಮಾತ್ರ ಗೊತ್ತಿರುತ್ತದೆ. ನಾವು ಏನೇ ಸಾಂತ್ವನ ಹೇಳಿದರೂ ಸಾಲುವುದಿಲ್ಲ. ಸಂತೋಷ್ ತಾಯಿಯ ಕಣ್ಣೀರು ಕಂಡಾಗ ನನಗೆ ದುಃಖ ತಡೆಯಲು ಸಾಧ್ಯವಾಗಿಲ್ಲ. ನನ್ನ ಕುಟುಂಬ ಸದಸ್ಯರನ್ನ ಕಳೆದುಕೊಂಡಷ್ಟೇ ನನಗೆ ನೋವಾಗಿದೆ. ಸಂತೋಷ್ ಕುಟುಂಬಸ್ಥರ ಜೊತೆ ನಾನು ಸದಾ ಇರುತ್ತೇನೆ. ನನ್ನನ್ನು ಅವರ ಮನೆ ಮಗನಂತೆ ಭಾವಿಸಲಿ ಎಂದು ನಿಖಿಲ್ ಹೇಳಿದರು.

  • ಸುಮಲತಾ ಗೆಲುವಿನ ಬೆನ್ನಲ್ಲೇ ಮಂಡ್ಯದಲ್ಲಿ ಕಾರ್ಯಕರ್ತರ ವಾರ್- ಇಬ್ಬರು ಆಸ್ಪತ್ರೆಗೆ ದಾಖಲು

    ಸುಮಲತಾ ಗೆಲುವಿನ ಬೆನ್ನಲ್ಲೇ ಮಂಡ್ಯದಲ್ಲಿ ಕಾರ್ಯಕರ್ತರ ವಾರ್- ಇಬ್ಬರು ಆಸ್ಪತ್ರೆಗೆ ದಾಖಲು

    ಮಂಡ್ಯ: ಲೋಕಸಭಾ ಚುನಾವಣೆಯ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಅವರ ಗೆಲುವಿನ ಬೆನ್ನಲ್ಲೇ ಮಂಡ್ಯದಲ್ಲಿ ಕಾರ್ಯಕರ್ತರ ನಡುವೆ ವಾರ್ ಶುರುವಾಗಿದೆ.

    ಮದ್ದೂರು ತಾಲೂಕಿನ ಕೂಳಗೆರೆ ಗೇಟ್ ಬಳಿ ಸುಮಲತಾ ಬೆಂಬಲಿಗರು ಮತ್ತು ಜೆಡಿಎಸ್ ಕಾರ್ಯಕರ್ತರ ನಡುವೆ ಗಲಾಟೆ ಶುರುವಾಗಿದೆ. ಸುಮಲತಾ ಗೆಲುವಿನ ವಿಚಾರಕ್ಕೆ ಸಂಬಂಧಿಸಿದಂತೆ ಗುರುವಾರ ಈ ಗಲಾಟೆ ನಡೆದಿದೆ ಎನ್ನಲಾಗಿದೆ.

    ಕಾರ್ಯಕರ್ತರು ಬಿಯರ್ ಬಾಟಲಿ ಹಾಗೂ ಚಾಕುವಿನಿಂದ ಬಡಿದಾಡಿಕೊಂಡಿದ್ದಾರೆ. ಈ ಗಲಾಟೆಯಲ್ಲಿ ಸುಮಲತಾ ಬೆಂಬಲಿಗರಾದ ಶಶಿಧರ್ ಮತ್ತು ಕುಮಾರ್‍ಗೆ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಬಗ್ಗೆ ಮದ್ದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ರಾಜ್ಯದಲ್ಲಿ ಹೈವೋಲ್ಟೇಜ್ ಕ್ಷೇತ್ರವಾಗಿದ್ದ ಮಂಡ್ಯದಲ್ಲಿ ನಡೆದ ಸ್ವಾಭಿಮಾನಿ ವರ್ಸಸ್ ಸರ್ಕಾರದ ನಡುವಿನ ಸಮರದಲ್ಲಿ ಸುಮಲತಾ ಅವರು ಭರ್ಜರಿ ಗೆಲುವು ಪಡೆದಿದ್ದಾರೆ. ಚುನಾವಣೆಯಲ್ಲಿ ನಿಖಿಲ್ ಅವರಿಗೆ 5,71,777 ಮತ ಲಭಿಸಿದ್ದರೆ, ಸುಮಲತಾ ಅವರಿಗೆ 6,98,213 ಮತ ಲಭಿಸಿದೆ. ಆ ಮೂಲಕ ಸುಮಲತಾ ಅವರು ಬರೋಬ್ಬರಿ 1,26,436 ಮತಗಳ ಅಂತರದಿಂದ ಗೆಲುವು ಪಡೆದಿದ್ದಾರೆ.

  • ಪ್ರಚಾರಕ್ಕೆ ಬಂದ್ರೆ ಒಂದು ತಲೆಗೆ 500 ರೂ. – ಶಿವರಾಮೇಗೌಡರ ಆಡಿಯೋ ವೈರಲ್

    ಪ್ರಚಾರಕ್ಕೆ ಬಂದ್ರೆ ಒಂದು ತಲೆಗೆ 500 ರೂ. – ಶಿವರಾಮೇಗೌಡರ ಆಡಿಯೋ ವೈರಲ್

    ಮಂಡ್ಯ: ಮಂಡ್ಯದಲ್ಲಿ ಪ್ರಚಾರಕ್ಕೆ ಹೊರಗಿನಿಂದ ಜನ ಕರೆಸುತ್ತಿದ್ದಾರಾ ಎಂಬ ಅನುಮಾನವೊಂದು ಕ್ಷೇತ್ರದ ಮತದಾರರನ್ನು ಕಾಡುತ್ತಿದೆ. ಯಾಕಂದ್ರೆ ಸಂಸದ ಶಿವರಾಮೇಗೌಡರು, ಜೆಡಿಎಸ್ ಕಾರ್ಯಕರ್ತನ ಜೊತೆ ಮಾತನಾಡಿರುವ ಆಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

    ಹೌದು. ಪ್ರಚಾರಕ್ಕೆ ಬಂದ್ರೆ ತಲಾ 500 ರೂ. ಕೊಡುತ್ತೇನೆ ಎಂದು ಶಿವರಾಮೇಗೌಡರು ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ಚೀಣ್ಯ ಗ್ರಾಮದ ರಮೇಶ್ ಜೊತೆ ಮಾತನಾಡಿದ್ದಾರೆ. ಈ 43 ಸೆಕೆಂಡುಗಳ ಆಡಿಯೋ ವೈರಲ್ ಆಗುತ್ತಿದ್ದು, ಇದೀಗ ತೀವ್ರ ಅನುಮಾನಕ್ಕೆ ಕಾರಣವಾಗಿದೆ.

    ಆಡಿಯೋದಲ್ಲೇನಿದೆ?:
    ಶಿವರಾಮೇಗೌಡ: ಹೇಳಿ ರಮೇಶಣ್ಣ..
    ರಮೇಶ್: ಅಣ್ಣಾ ನಾವು ಯಾವಾಗ್ಲಿಂದ ಬರಬೇಕು ಅಣ್ಣಾ ಕ್ಯಾನ್ ವಾಸ್‍ಗೆ
    ಶಿವರಾಮೇಗೌಡ: ಯಾರು ಮಾತಾಡ್ತಿರೋದು
    ರಮೇಶ್: ಅಣ್ಣಾ ನಾನು ರಮೇಶ್
    ಶಿವರಾಮೇಗೌಡ: ನಮ್ ಡಾನು..
    ರಮೇಶ್: ಹೂಂ ಅಣ್ಣಾ..
    ಶಿವರಾಮೇಗೌಡ: ನಾಳೆಯಿಂದಲೇ..

    ರಮೇಶ್: ಅಣ್ಣಾ ಬೆಂಗಳೂರಿನಿಂದ ಎಲ್ಲರನ್ನೂ ಕರೆದುಕೊಂಡು ಬರಬೇಕಲ್ಲಾ ಹೆಂಗ್ ಮಾಡೋದು ವ್ಯವಸ್ಥೆ..?
    ಶಿವರಾಮೇಗೌಡ: ಎಲ್ಲರಿಗೂ 500 ರೂಪಾಯಿ ಕೊಡ್ತೇವೆ.. ತಲೆಗೆ 500 ರೂ. ಕೊಡ್ತೀನಿ ಕರೆದುಕೊಂಡು ಬಾ..
    ರಮೇಶ್: ಎಲ್ಲರನ್ನೂ ಕರೆದುಕೊಂಡು ಬರ್ಲಾ..?
    ಶಿವರಾಮೇಗೌಡ: ಹೂಂ.. ಎಲ್ಲಾ ಬರಬೇಕು..
    ರಮೇಶ್: ಅಣ್ಣಾ ಬರ್ತಾರಣ್ಣ.. ಗಂಗನಹಳ್ಳಿ, ಕೆಂಕನಹಳ್ಳಿಯಿಂದ ಸುಮಾರು ಜನ ಇದ್ದಾರೆ, ಎಲ್ಲರೂ ಬರ್ತಾರಣ್ಣ..
    ರಮೇಶ್: ಬಸ್ ವ್ಯವಸ್ಥೆ ನಾವೇ ಮಾಡ್ಕೋಬೇಕಣ್ಣಾ..?

    ಶಿವರಾಮೇಗೌಡ: ನೀವೇ ಮಾಡಿಕೊಂಡು ಬನ್ನಿ..ದುಡ್ಡು ಕೊಡ್ತೀನಿ..
    ರಮೇಶ್: ಸರಿ ಅಣ್ಣಾ.. ಬೆಳಗ್ಗೆ..
    ಶಿವರಾಮೇಗೌಡ: ಒಂದು ತಲೆಗೆ 500ರೂಪಾಯಿ, ಎಲ್ಲನೂ ಅಪ್ಪಾಜಿಗೌಡ್ರಿಗೆ ಜವಾಬ್ದಾರಿ ಕೊಟ್ಟಿದ್ದೀನಿ..
    ರಮೇಶ್: ಅಪ್ಪಾಜಿ ಗೌಡ್ರಿಗಾ ಅಣ್ಣಾ.. ಆಯ್ತಣ್ಣ.. ಸರಿ ಅಣ್ಣ..

  • ಪ್ರೀತಂಗೌಡ ನಿವಾಸದ ಮುಂದೆ ಕಲ್ಲುತೂರಾಟ ಕೇಸ್ – ರಾತ್ರಿ ಜೆಡಿಎಸ್ ಕಾರ್ಯಕರ್ತ ಅರೆಸ್ಟ್

    ಪ್ರೀತಂಗೌಡ ನಿವಾಸದ ಮುಂದೆ ಕಲ್ಲುತೂರಾಟ ಕೇಸ್ – ರಾತ್ರಿ ಜೆಡಿಎಸ್ ಕಾರ್ಯಕರ್ತ ಅರೆಸ್ಟ್

    ಹಾಸನ: ಬಿಜೆಪಿ ಶಾಸಕ ಪ್ರೀತಂಗೌಡ ನಿವಾಸಕ್ಕೆ ಕಲ್ಲು ತೂರಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಜೆಡಿಎಸ್ ಕಾರ್ಯಕರ್ತ ಚೇತನ್ ನನ್ನು ಬಂಧಿಸಲಾಗಿದೆ.

    ಪ್ರತಿಭಟನೆ ವೇಳೆ ಚೇತನ್ ಗೌಡ ಕಲ್ಲು ತೂರಿದ್ದು ವಿಡಿಯೋದಿಂದ ಬಹಿರಂಗವಾಗಿತ್ತು. ಚೇತನ್ ಜೆಡಿಎಸ್ ಕಾರ್ಯಕರ್ತನಾಗಿದ್ದು, ಲೋಕೋಪಯೋಗಿ ಸಚಿವ ರೇವಣ್ಣ, ಪ್ರಜ್ವಲ್ ಸೇರಿದಂತೆ ಹಲವು ನಾಯಕರೊಂದಿಗೆ ಫೋಟೋ ತೆಗೆಸಿಕೊಂಡಿಸಿದ್ದನು. ಸದ್ಯಕ್ಕೆ ಬಡಾವಣೆ ಠಾಣೆ ಪೊಲೀಸರು ಐಪಿಸಿ ಸೆಕ್ಷನ್ 307 ಅಡಿ ಪ್ರಕರಣ ದಾಖಲಿಸಿ ಚೇತನ್ ನನ್ನು ಜೈಲಿಗೆ ಕಳುಹಿಸಿದ್ದಾರೆ. ಇದನ್ನೂ ಓದಿ: ಹಾಸನ ಬಿಜೆಪಿ ಕಾರ್ಯಕರ್ತನ ಮೇಲೆ ಕಲ್ಲೆಸೆತ ಪ್ರಕರಣ – 8 ಮಂದಿ ವಿರುದ್ಧ ಎಫ್‍ಐಆರ್ ದಾಖಲು

    ಫೆಬ್ರವರಿ 13ರಂದು ಬಿಜೆಪಿ ಕಾರ್ಯಕರ್ತರೊಂದಿಗೆ ಮಾತಿನ ಚಕಮಕಿ ನಡೆಯುತ್ತಿದ್ದ ಸಯಮದಲ್ಲಿ ಚೇತನ್ ಎರಡು ಕಲ್ಲೆತ್ತಿಕೊಂಡು ಬಂದು ಜನರ ನಡುವೆ ನಿಂತು ಶಾಸಕರ ಮನೆಯತ್ತ ಕಲ್ಲೆಸೆದಿದ್ದಾನೆ. ಬಳಿಕ ಕಲ್ಲೆಸೆದು ಸದ್ದಿಲ್ಲದೆ ಹಿಂದೆ ಓಡಿ ಹೋಗಿದ್ದನು. ಈ ಕುರಿತು ಬಡಾವಣೆ ಪೊಲೀಸ್ ಠಾಣೆಯಲ್ಲಿ ಎಂಟು ಜನರ ವಿರುದ್ಧ ಎಫ್‍ಐಆರ್ ದಾಖಲಾಗಿತ್ತು. ಈಗ ಶುಕ್ರವಾರ ರಾತ್ರಿ ಚೇತನ್ ನನ್ನು ಬಡಾವಣೆ ಪೊಲೀಸರು ಬಂಧಿಸಿದ್ದಾರೆ. ಇದನ್ನೂ ಓದಿ: ಇಂದು ರಾಜ್ಯಾದ್ಯಂತ ಬಿಜೆಪಿ ಹೋರಾಟ- ಜೆಡಿಎಸ್ ವಿರುದ್ಧ ರಾಜ್ಯಪಾಲರಿಗೆ ಕಂಪ್ಲೆಂಟ್

    ಶಾಸಕ ಪ್ರೀತಂ ಗೌಡ ಮಾಜಿ ಪ್ರಧಾನಿ ದೇವೇಗೌಡ ವಿಕೆಟ್ ಹೋಗುತ್ತೆ ಎಂದು ಮಾತನಾಡಿದ ಆಡಿಯೋ ವೈರಲ್ ಆದ ಹಿನ್ನೆಲೆಯಲ್ಲಿ ಅವರ ಮನೆಯ ಎದುರು ಜೆಡಿಎಸ್ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದರು. ಈ ವೇಳೆ ಶಾಸಕ ಪ್ರೀತಂ ಗೌಡ ಅವರ ಮನೆಯ ಮೇಲೆ ಕಲ್ಲೆಸೆಯಲಾಗಿತ್ತು. ಪರಿಣಾಮ ಬಿಜೆಪಿ ಕಾರ್ಯಕರ್ತ ರಾಹುಲ್ ಕಿಣಿ ಗಾಯಗೊಂಡು ಆಸ್ಪತ್ರೆ ಸೇರಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv