Tag: jcb

  • ಮಳೆ ನಡುವೆ ಹುಚ್ಚಾಟ – ಹಳ್ಳ ದಾಟಲು ಜೆಸಿಬಿ ಬಳಸಿದ ಗ್ರಾಮಸ್ಥರು

    ಮಳೆ ನಡುವೆ ಹುಚ್ಚಾಟ – ಹಳ್ಳ ದಾಟಲು ಜೆಸಿಬಿ ಬಳಸಿದ ಗ್ರಾಮಸ್ಥರು

    ಬಳ್ಳಾರಿ: ರಾಜ್ಯದಲ್ಲಿ ಮತ್ತೆ ಮಳೆಯ ಅಬ್ಬರ ಆರಂಭವಾಗಿದ್ದು, ಇತ್ತ ಗಣಿ ನಾಡು ಬಳ್ಳಾರಿ ಜಿಲ್ಲೆಯಲ್ಲಿ ಉತ್ತಮ ಮಳೆಯಾಗಿದೆ. ಮಳೆಯಿಂದಾಗಿ ಹಳ್ಳ ಕೊಳ್ಳಗಳು ತುಂಬಿ ಹರಿಯುತ್ತಿವೆ. ತುಂಬಿ ಹರಿಯುತ್ತಿರುವ ಹಳ್ಳ ದಾಟಲು ರಾರಾವಿಯಲ್ಲಿ ಗ್ರಾಮಸ್ಥರು ಜೆಸಿಬಿ ಬಳಸಿ ಹುಚ್ಚಾಟ ಮೆರೆದಿದ್ದಾರೆ.


    ಕಳೆದ ಎರಡು ದಿನಗಳಿಂದ ಜಿಲ್ಲೆಯ ಬಹುತೇಕ ತಾಲೂಕಿನಲ್ಲಿ ಮಳೆಯಾಗಿದೆ. ಇತ್ತ ಬಳ್ಳಾರಿ ಸಿರಗುಪ್ಪಾ ತಾಲೂಕಿನಲ್ಲಿ ವ್ಯಾಪಕ ಮಳೆಯಾಗಿದೆ. ಕಾರಣ ಹಳ್ಳ ಕೊಳ್ಳಗಳು ತುಂಬಿ ಹರಿಯುತ್ತಿವೆ. ತುಂಬಿ ಹರಿಯುತ್ತಿರೋ ಹಳ್ಳ ದಾಟಲು ರಾರಾವಿಯಲ್ಲಿ ಗ್ರಾಮಸ್ಥರು ಜೆಸಿಬಿ ಬಳಸಿದ ವೀಡಿಯೋ ವೈರಲ್ ಆಗುತ್ತಿದೆ. ಇದನ್ನೂ ಓದಿ: ಬೆಂಗ್ಳೂರಲ್ಲಿ ಬೆಳಗ್ಗೆವರೆಗೂ ಬಂದ ಮಳೆ – ರಾತ್ರಿ ಅಬ್ಬರಿಸಿದ ಮಳೆಗೆ ಜನರು ಹೈರಾಣು


    ಮಳೆಯಿಂದಾಗಿ ಹಳ್ಳದಲ್ಲಿ ನೀರು ತುಂಬಿ ಹರಿಯುತ್ತಿದ್ದು, ಜೆಸಿಬಿಯ ಬಕೆಟ್‌ನಲ್ಲಿ ಕುಳಿತು, ಬೈಕ್‍ಗಳೊಂದಿಗೆ ತುಂಬಿ ಹರಿಯುತ್ತಿರುವ ಹಳ್ಳವನ್ನು ಜನರು ದಾಟಿದ್ದಾರೆ. ನಿನ್ನೆ ತಡರಾತ್ರಿ ಆಂಧ್ರ ಮತ್ತು ಸಿರಗುಪ್ಪ ತಾಲೂಕಿನಲ್ಲಿ ವ್ಯಾಪಕವಾಗಿ ಮಳೆ ಸುರಿದಿದೆ. ರಾರಾವಿ ಗ್ರಾಮದ ಬಳಿ ಇರುವ ಸೇತುವೆ ಮೇಲೆ ನೀರು ಹರಿದ ಪರಿಣಾಮ, ಆಂಧ್ರ ಮತ್ತು ಕರ್ನಾಟಕಕ್ಕೆ ಸಂಪರ್ಕ ಹೊಂದಿದ್ದ ರಸ್ತೆ ಕಡಿತಗೊಂಡಿದೆ. ಇದನ್ನೂ ಓದಿ: ಭಾರೀ ಮಳೆಗೆ ಶಾರ್ಟ್ ಸರ್ಕ್ಯೂಟ್‌ನಿಂದ ವೃದ್ಧ ಸಾವು

    Live Tv
    [brid partner=56869869 player=32851 video=960834 autoplay=true]

  • ಅಕ್ರಮ ಗೋಮಾಂಸ ಶೆಡ್‌ ಮೇಲೆ ಜೆಸಿಬಿ ಘರ್ಜನೆ

    ಅಕ್ರಮ ಗೋಮಾಂಸ ಶೆಡ್‌ ಮೇಲೆ ಜೆಸಿಬಿ ಘರ್ಜನೆ

    ಚಿಕ್ಕಮಗಳೂರು: ಅಕ್ರಮ ಗೋಮಾಂಸ ಶೆಡ್ ಮೇಲೆ ಜೆಸಿಬಿ ದಾಳಿ ಮಾಡಿರುವ ಘಟನೆ ನಗರದ ತಮಿಳು ಕಾಲೋನಿಯಲ್ಲಿ ನಡೆದಿದೆ.

    ನಗರಸಭೆ ಇಂದು ಎಂದಿನಂತೆ ತಮಿಳು ಕಾಲೋನಿ ಹಾಗೂ ಷರೀಫ್ ಗಲ್ಲಿಯಲ್ಲಿ ಅಲ್ಲಲ್ಲೇ ಬೆಳೆದಿದ್ದ ಗಿಡ-ಘಂಟೆಗಳ ತೆರವಿಗೆ ಮುಂದಾಗಿತ್ತು. ಆಗ ತಮಿಳು ಕಾಲೋನಿಯ ಜನನಿಬಿಡ ಪ್ರದೇಶದಲ್ಲಿದ್ದ ಅಕ್ರಮ ಗೋಮಾಂಸ ಶೆಡ್ ಕಣ್ಣಿಗೆ ಬಿದ್ದಿದೆ. ಅಧಿಕಾರಿಗಳು ಸ್ಥಳಕ್ಕೆ ಹೋದಾಗ ಗೋಮಾಂಸವೂ ಅಲ್ಲಿ ಇತ್ತು ಎಂದು ಹೇಳಲಾಗಿದೆ. ಕೂಡಲೇ ನಗರಸಭೆ ಅಧ್ಯಕ್ಷ ವರಸಿದ್ಧಿ ವೇಣುಗೋಪಾಲ್ ಹಾಗೂ ನಗರಸಭೆ ಆಯುಕ್ತ ಬಸವರಾಜ್ ನಗರ ಪೊಲೀಸರಿಗೆ ಮಾಹಿತಿ ನೀಡಿ ಪೊಲೀಸರೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಅಕ್ರಮ ಗೋಮಾಂಸ ಮಳಿಗೆಯನ್ನು ಜೆಸಿಬಿಯಿಂದ ಧ್ವಂಸ ಮಾಡಿದ್ದಾರೆ. ಇದನ್ನೂ ಓದಿ: ಗೋಮಾಂಸ ಸಾಗಿಸುತ್ತಿದ್ದ ಇಬ್ಬರು ಅರೆಸ್ಟ್

    ಸ್ಥಳಕ್ಕೆ ಅಧಿಕಾರಿಗಳು ಹಾಗೂ ಪೊಲೀಸರು ಭೇಟಿ ನೀಡುತ್ತಿದ್ದಂತೆ ಗೋಮಾಂಸದ ಶೆಡ್‌ನಲ್ಲಿದ್ದ ಮೂವರು ನಾಪತ್ತೆಯಾಗಿದ್ದಾರೆ. ಅಕ್ರಮ ಗೋಮಾಂಸ ಶೆಡ್ ಕಣ್ಣಿಗೆ ಬೀಳುತ್ತಿದ್ದಂತೆ ಆ ಕಟ್ಟಡವನ್ನು ಜೆಸಿಬಿಯಿಂದ ಧ್ವಂಸ ಮಾಡಿದ್ದಾರೆ. ಪೊಲೀಸರು ಹಾಗೂ ಅಧಿಕಾರಿಗಳನ್ನು ಕಂಡು ಓಡಿ ಹೋದ ಅಕ್ರಮ ಗೋಮಾಂಸ ಶೆಡ್‍ನಲ್ಲಿದ್ದ ಮೂವರಿಗಾಗಿ ಪೊಲೀಸರು ಶೋಧ ಕಾರ್ಯ ಆರಂಭಿಸಿದ್ದಾರೆ. ನಗರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಇದನ್ನೂ ಓದಿ: 30 ಸಾವಿರ ದೇವಾಲಯಗಳನ್ನು ವಾಪಸ್ ಪಡೆಯುತ್ತೇವೆ: ಮುತಾಲಿಕ್

  • ಕೊಳವೆಬಾವಿಗೆ ಬಿದ್ದು ಬಾಲಕ ಸಾವು

    ಕೊಳವೆಬಾವಿಗೆ ಬಿದ್ದು ಬಾಲಕ ಸಾವು

    ಚಂಡೀಗಢ: 300ಅಡಿ ಆಳದ ಕೊಳವೆ ಬಾವಿಗೆ ಬಿದ್ದ ಬಾಲಕನೊಬ್ಬ ಮೃತಪಟ್ಟ ಘಟನೆ ಪಂಜಾಬ್‍ನ ಹೋಶಿಯಾರ್‌ಪುರದ ಗಾದ್ರಿವಾಲಾ ಗ್ರಾಮದಲ್ಲಿ ನಡೆದಿದೆ.

    ರಿತೀಕ್ (6) ಕೊಳವೆಬಾವಿಗೆ ಬಿದ್ದ ಬಾಲಕ. ರಕ್ಷಣಾ ಕಾರ್ಯಾಚರಣೆಗಾಗಿ ಸೇನೆಯನ್ನು ಕರೆಸಲಾಗಿತ್ತು. ಈ ರಕ್ಷಣಾ ಕಾರ್ಯಾಚರಣೆ ಒಂಬತ್ತು ಗಂಟೆಗಳ ಕಾಲ ನಡೆಯಿತು.

    ಕೊಳವೆಬಾವಿ ಕಡೆಗೆ ಸುರಂಗ ಕೊರೆಯಲು ಜೆಸಿಬಿ ಯಂತ್ರವನ್ನು ಅಳವಡಿಸಲಾಗಿದೆ. ಬಾಲಕ ಕೊಳವೆಬಾವಿಗೆ ತಲೆಕೆಳಗಾಗಿ ಬಿದ್ದಿದ್ದರಿಂದ ಯಂತ್ರದ ಸಹಾಯದಿಂದ ಬಾಲಕನನ್ನು ಹೊರತೆಗೆಯಲು ಯತ್ನಿಸಿದ್ದಾರೆ. ಆದರೆ ಒಂದೂವರೆ ಗಂಟೆಯಲ್ಲಿ 15 ಅಡಿ ಮಾತ್ರ ಅಗೆಯಲು ಈ ಜೆಸಿಬಿಗೆ ಸಾಧ್ಯವಾಯಿತು. ಬಾಲಕ ಕೊಳವೆಬಾವಿಯಲ್ಲಿ 65 ಅಡಿಯ ಜಾಗದಲ್ಲಿ ಸಿಲುಕಿಕೊಂಡಿದ್ದನು. ಇದನ್ನೂ ಓದಿ: ಭಾರತ ಸೇರಿದಂತೆ 15 ದೇಶಗಳಿಗೆ ಪ್ರಯಾಣ ನಿಷೇಧಿಸಿದ ಸೌದಿ ಅರೇಬಿಯಾ

    ಹೆಚ್ಚಿನ ಚಿಕಿತ್ಸೆಗಾಗಿ ಚಿಕಿತ್ಸೆಗಾಗಿ ರಿತಿಕ್‍ನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾನೆ. ರಿತಿಕ್ ಬೀದಿ ನಾಯಿಗಳಿಂದ ರಕ್ಷಿಸಿಕೊಳ್ಳಲು ಕೊಳವೆ ಬಾವಿಗೆ ಬಿದ್ದಿದ್ದಾನೆ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: ಕ್ವಾಡ್ ಸಭೆಗಾಗಿ ನರೇಂದ್ರ ಮೋದಿ ಜಪಾನ್ ಪ್ರವಾಸ

  • ಬೆಳ್ಳಂಬೆಳಗ್ಗೆ ಮಡಿಕೇರಿ ನಗರದಲ್ಲಿ ಜೆಸಿಬಿ ಘರ್ಜನೆ

    ಬೆಳ್ಳಂಬೆಳಗ್ಗೆ ಮಡಿಕೇರಿ ನಗರದಲ್ಲಿ ಜೆಸಿಬಿ ಘರ್ಜನೆ

    ಮಡಿಕೇರಿ: ಅನಧಿಕೃತವಾಗಿ ಸರ್ಕಾರಿ ಜಾಗದಲ್ಲಿ ಅಕ್ರಮವಾಗಿ ಕಟ್ಟಡ ನಿರ್ಮಾಣ ಮಾಡಿಕೊಂಡು ನಗರಸಭೆ ಅಧಿಕಾರಿಗಳಿಗೆ ಜೀವ ಬೆದರಿಕೆ ಹಾಕುತ್ತಿದ್ದ ಕಲಾವಿದನ ಫೋಟೋ ಗ್ಯಾಲರಿಯನ್ನು ಇಂದು ಬೆಳ್ಳಂಬೆಳಗ್ಗೆ ನಗರಸಭೆಯ ಅಧಿಕಾರಿಗಳು ತೆರವು ಮಾಡಿದರು.

    ಮಡಿಕೇರಿ ನಗರದ ಚೈನ್ ಗೇಟ್ ಬಳಿ ಅನಧಿಕೃತವಾಗಿ ನಿರ್ಮಾಣ ಮಾಡಿಕೊಂಡಿದ ಚಿತ್ರ ಕಲಾವಿದ ಹಾಗೂ ಕುಟುಂಬ ವರ್ಗದವರು ತೆರವು ಕಾರ್ಯಚರಣೆ ನಡೆಸುವ ಸಂದರ್ಭದಲ್ಲಿ ಹೈಡ್ರಾಮ ನಡೆಯಿತು. ಕಳೆದ ಬಾರಿಯು ತೆರವು ಕಾರ್ಯಚರಣೆ ಮಾಡಲು ಮುಂದಾಗಿರುವ ಸಂದರ್ಭದಲ್ಲಿ ಚಿತ್ರಕಲಾವಿದ ಸಂದೀಪ್ ಮತ್ತು ಕುಟುಂಬದಿಂದ ಗ್ಯಾಸ್ ಆನ್ ಮಾಡಿ ಬೆಂಕಿ ಹಚ್ಚಿಕೊಳ್ಳುತ್ತೇವೆ ಎಂದು ನಗರಸಭೆ ಅಧಿಕಾರಿಗಳಿಗೆ ಬೆದರಿಕೆ ಹಾಕಿದ್ದರು. ಇದನ್ನೂ ಓದಿ: ಆನ್‍ಲೈನ್ ವ್ಯವಹಾರಕ್ಕೂ ಮುನ್ನ ಎಚ್ಚರ- 100 ರೂ. ಲಿಪ್‍ಸ್ಟಿಕ್‍ಗೆ ಕಳೆದುಕೊಂಡಿದ್ದು 3 ಲಕ್ಷ ರೂ.!

    ಆದರೆ ಇಂದು ಮಡಿಕೇರಿ ತಹಶೀಲ್ದಾರ್ ಮಹೇಶ್ ನಗರಸಭೆ ಆಯುಕ್ತ ರಾಮದಾಸ್ ನೇತೃತ್ವದಲ್ಲಿ ಫೋಟೋ ಗ್ಯಾಲರಿ ತೆರವು ಕಾರ್ಯಚರಣೆ ಮಾಡಲಾಯಿತು. ಬೆಳಿಗ್ಗೆ 6:30ರ ಸುಮಾರಿಗೆ ನೂರಾರು ಪೊಲೀಸರೊಂದಿಗೆ ಆಗಮಿಸಿದ ನಗರಸಭೆಯ ಅಧಿಕಾರಿಗಳು ಯಾವುದೇ ಮಾಹಿತಿ ಹಾಗೂ ನೋಟಿಸ್ ನೀಡದೆ ಏಕಾಏಕಿ ಬಂದು ದೌರ್ಜನ್ಯ ನಡೆಸಿದ್ದಾರೆ ಎಂದು ಕಲಾವಿದನ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದರು. ಇದನ್ನೂ ಓದಿ: ಆ್ಯಸಿಡ್ ದಾಳಿಗೊಳಗಾದ ಯುವತಿ ಆರೋಗ್ಯದಲ್ಲಿ ಚೇತರಿಕೆ

  • ದೆಹಲಿಯ ಶಾಹೀನ್‌ಬಾಗ್‌ ಪ್ರದೇಶದಲ್ಲಿ ಜೆಸಿಬಿಗಳ ಘರ್ಜನೆ

    ದೆಹಲಿಯ ಶಾಹೀನ್‌ಬಾಗ್‌ ಪ್ರದೇಶದಲ್ಲಿ ಜೆಸಿಬಿಗಳ ಘರ್ಜನೆ

    ನವದೆಹಲಿ: ದೆಹಲಿಯ ಶಾಹೀನ್‌ಬಾಗ್‌ ಪ್ರದೇಶದಲ್ಲಿ ಅಕ್ರಮ ಕಟ್ಟಡಗಳ ತೆರವು ಕಾರ್ಯಾಚರಣೆ ಆರಂಭವಾಗಿದೆ.

    ಯಾವುದೇ ಗಲಾಟೆಗಳು ಆಗದೇ ಇರಲು ದಕ್ಷಿಣ ದೆಹಲಿಯ ಜಿಲ್ಲಾಡಳಿತ ಭಾರೀ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಿ ಅಕ್ರಮ ಕಟ್ಟಡಗಳನ್ನು ತೆರವು ಮಾಡುತ್ತಿದೆ. ತೆರವು ಮಾಡಲು ಮುಂದಾದಾಗ ಸ್ಥಳಿಯ ನಿವಾಸಿಗಳ, ಆಪ್‌, ಕಾಂಗ್ರೆಸ್‌ ಕಾರ್ಯಕರ್ತರು ಪ್ರತಿಭಟಿಸುತ್ತಿದ್ದು, ಕಾರ್ಯಾಚರಣೆ ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ.

    ನಿಗದಿ ಪ್ರಕಾರ ಏಪ್ರಿಲ್‌ 28 ರಂದೇ ತೆರವು ಕಾರ್ಯಾಚರಣೆ ನಡೆಸಬೇಕಿತ್ತು. ಆದರೆ ಸಾಕಷ್ಟು ಸಂಖ್ಯೆಯಲ್ಲಿ ಪೊಲೀಸರ ನಿಯೋಜನೆ ಗೊಳಿಸದ ಕಾರಣ ತೆರವು ಕಾರ್ಯಾಚರಣೆಯನ್ನು ಮುಂದೂಡಲಾಗಿತ್ತು.  ಇದನ್ನೂ ಓದಿ: ದೇವೇಂದ್ರ ಫಡ್ನವಿಸ್‍ರಿಂದ ಠಾಕ್ರೆ ಆಡಳಿತ ನಡೆಸೋದನ್ನ ಕಲಿಬೇಕು: ನವನೀತ್ ರಾಣಾ

    ದೆಹಲಿಯ ಬಿಜೆಪಿ ಮುಖ್ಯಸ್ಥ ಅದೇಶ್‌ ಸಿಂಗ್‌ ಅವರು ದಕ್ಷಿಣ ದೆಹಲಿಯ ಮಹಾನಗರ ಪಾಲಿಕೆಗೆ ಪತ್ರ ಬರೆದಿದ್ದರು. ರೋಹಿಂಗ್ಯಾ, ಬಾಂಗ್ಲಾದೇಶಿಯರು ಮತ್ತು ಸಮಾಜ ವಿರೋಧಿ ಶಕ್ತಿಗಳು ಇಲ್ಲಿ ಅಕ್ರಮ ಕಟ್ಟಡಗಳನ್ನು ನಿರ್ಮಿಸಿದ್ದಾರೆ. ಇವುಗಳನ್ನು ತೆರವು ಮಾಡಬೇಕು ಎಂದು ಮನವಿ ಮಾಡಿದ್ದರು.

    ದಕ್ಷಿಣ ದೆಹಲಿ ಪಾಲಿಕೆ 10 ದಿನಗಳ ಕಾಲ ಶಾಹೀನ್‌ ಬಾಗ್‌ ವಲಯದಲ್ಲಿ ಅಕ್ರಮ ಕಟ್ಟಡಗಳ ತೆರವು ಕಾರ್ಯಾಚರಣೆ ನಡೆಸಲು ಸಿದ್ಧತೆ ನಡೆಸಿದೆ.

    ಸಿಎಎ ವಿರೋಧಿಸಿ ಶಾಹೀನ್‌ಬಾಗ್‌ನಲ್ಲಿ 2019ರ ಡಿಸೆಂಬರ್‌ 15 ರಿಂದ 2020ರ ಮಾರ್ಚ್‌ 24ರವರೆಗೆ ಭಾರೀ ಪ್ರತಿಭಟನೆ ನಡೆದಿತ್ತು.

  • ಜೆಸಿಬಿ ನುಗ್ಗಿಸಿ ಎಟಿಎಂ ಎಗರಿಸಿಕೊಂಡು ಹೋಗಲು ದರೋಡೆಕೋರರಿಂದ ವಿಫಲ ಯತ್ನ!

    ಜೆಸಿಬಿ ನುಗ್ಗಿಸಿ ಎಟಿಎಂ ಎಗರಿಸಿಕೊಂಡು ಹೋಗಲು ದರೋಡೆಕೋರರಿಂದ ವಿಫಲ ಯತ್ನ!

    ಮುಂಬೈ: ಜೆಸಿಬಿಯನ್ನೇ ನುಗ್ಗಿಸಿ ದರೋಡೆಕೋರರು ಎಟಿಎಂ ಎಗರಿಸಿಕೊಂಡು ಹೋಗಲು ವಿಫಲ ಯತ್ನ ನಡೆಸಿದ ಅಚ್ಚರಿಯ ಘಟನೆಯೊಂದು ಮಹಾರಾಷ್ಟ್ರದ ಸಾಂಗ್ಲಿಯಲ್ಲಿ ನಡೆದಿದೆ.

    ಸಾಂಗ್ಲಿ ಜಿಲ್ಲೆಯ ಮೀರಜ್ ತಾಲೂಕಿನ ಅರಗ್ ಎಂಬಲ್ಲಿ ಈ ಘಟನೆ ನಡೆದಿದೆ. ಜೆಸಿಬಿಯಿಂದ ಎಟಿಎಂ ಕಳವುಗೈಯುತ್ತಿರುವ ದೃಶ್ಯ ಅಲ್ಲಿಯೇ ಇದ್ದ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಇದೀಗ ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಇದನ್ನೂ ಓದಿ: ಮುಸ್ಲಿಂ ಮಹಿಳೆಯರಿಗೆ ಅತ್ಯಾಚಾರ ಬೆದರಿಕೆ ಹಾಕಿದ್ದ ಸ್ವಾಮೀಜಿಗೆ ಜಾಮೀನು

    ವೀಡಿಯೋದಲ್ಲಿ ರಾತ್ರಿ ವೇಳೆ ದರೋಡೆಕೋರರು ಜೆಸಿಬಿಯನ್ನು ಎಟಿಎಂ ಕೇಂದ್ರಕ್ಕೆ ನುಗ್ಗಿಸಿದ್ದಾರೆ. ನಂತರ ಎಟಿಎಂ ಮೆಷಿನ್ ಅನ್ನು ಜೆಸಿಬಿಯಿಂದ ಎಳೆದಿದ್ದಾರೆ. ಈ ವೇಳೆ ಆದ ಸದ್ದಿನಿಂದ ಎಚ್ಚರಗೊಂಡ ಸ್ಥಳೀಯ ನಿವಾಸಿಗಳು ಎಚ್ಚರಗೊಂಡು ಸ್ಥಳಕ್ಕೆ ಧಾವಿಸಿದ್ದಾರೆ. ಇದರಿಂದ ಗಾಬರಿಗೊಂಡ ಖದೀಮರು ಎಟಿಎಂ ಬಿಟ್ಟು ಜೆಸಿಬಿ ಸಮೇತ ಸ್ಥಳದಿಂದ ಕಾಲ್ಕಿತ್ತಿದ್ದಾರೆ.

    ಗ್ರಾಮಸ್ಥರ ಮಾಹಿತಿ ಅಧರಿಸಿ ಸ್ಥಳಕ್ಕೆ ಬಂದ ಪೊಲೀಸರು ಕಳ್ಳರ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ. ಇದನ್ನೂ ಓದಿ: ಚುನಾವಣೆವರೆಗೆ ಕಾದು ನೋಡಿ..- ಆಪರೇಷನ್ ಕಮಲ ಸುಳಿವು ಕೊಟ್ಟ ಕಟೀಲ್

     

  • ಮರಿ ಜೊತೆ ಇದ್ದ ಆನೆ ಮೇಲೆ ಜೆಸಿಬಿ ಹರಿಸಲು ಮುಂದಾದ ಚಾಲಕ – ಸಾರ್ವಜನಿಕರಿಂದ ಆಕ್ರೋಶ

    ಮರಿ ಜೊತೆ ಇದ್ದ ಆನೆ ಮೇಲೆ ಜೆಸಿಬಿ ಹರಿಸಲು ಮುಂದಾದ ಚಾಲಕ – ಸಾರ್ವಜನಿಕರಿಂದ ಆಕ್ರೋಶ

    ಚಿಕ್ಕಮಗಳೂರು: ಅರಣ್ಯ ಪ್ರದೇಶದಲ್ಲಿ ಮರಿ ಜೊತೆ ಇದ್ದ ಆನೆ ಮೇಲೆ ಜೆಸಿಬಿ ಚಾಲಕ ಜೆಸಿಬಿಯಲ್ಲಿ ಹೆದರಿಸಿ ಹಿಂದೆ ಓಡಿಸಿರುವ ಘಟನೆ ಜಿಲ್ಲೆಯ ತಣಿಗೇಬೈಲು ಅರಣ್ಯ ಪ್ರದೇಶದಲ್ಲಿ ನಡೆದಿದೆ.

    ಅರಣ್ಯಪ್ರದೇಶದಲ್ಲಿ ಸ್ವಚ್ಛಂದವಾಗಿ ವಿಹರಿಸುತ್ತಿದ್ದ ಮೂಕಪ್ರಾಣಿಗಳ ಮೇಲೆ ಜೆಸಿಬಿಯಲ್ಲಿ ದೌರ್ಜನ್ಯ ಎಸಗಿದ ಜೆಸಿಬಿ ಸಿಬ್ಬಂದಿಯೇ ಅದನ್ನು ವೀಡಿಯೋ ಮಾಡಿ ವಿಕೃತಿ ಮೆರೆದಿದ್ದಾರೆ. ಇದೀಗ ವೀಡಿಯೋ ವೈರಲ್ ಆಗಿದ್ದು ತೀವ್ರ ಚರ್ಚೆಗೆ ಗ್ರಾಸವಾಗಿದೆ. ಅಭಯಾರಣ್ಯದಲ್ಲಿ ಯಂತ್ರಗಳ ಮೂಲಕ ಕೆಲಸ ಮಾಡುವುದಕ್ಕೆ ಆರಂಭದಿಂದಲೂ ಇಲಾಖೆ ಮೇಲೆ ಅಸಮಾಧಾನವಿದೆ. ಈ ಮಧ್ಯೆ ಅರಣ್ಯದಲ್ಲಿನ ರಸ್ತೆಯನ್ನು ಅಭಿವೃದ್ದಿಪಡಿಸಲು ಖಾಸಗಿ ವ್ಯಕ್ತಿಗಳಿಗೆ ಟೆಂಡರ್ ಮೂಲಕ ಕೆಲಸವನ್ನು ನೀಡಲಾಗಿದೆ. ಇದನ್ನೂ ಓದಿ: ಚುನಾವಣೆವರೆಗೆ ಸುಮ್ಮನಿದ್ದು, ಪೆಟ್ರೋಲ್, ಡಿಸೇಲ್, ಗ್ಯಾಸ್ ಬೆಲೆ ಏರಿಕೆ ಮಾಡಿದ್ದಾರೆ: ಡಿಕೆಶಿ

    ಗುತ್ತಿಗೆದಾರರು ಅಭಯಾರಣ್ಯದೊಳಗೆ ಜೆಸಿಬಿಯನ್ನು ಬಳಸಿ ರಸ್ತೆ ಅಭಿವೃದ್ಧಿಪಡಿಸುತ್ತಿರುವುದು ಕೂಡ ಪರಿಸರವಾದಿಗಳ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ತಣಿಗೇಬೈಲು ಪ್ರದೇಶದಲ್ಲಿ ರಸ್ತೆಯನ್ನು ಅಭಿವೃದ್ಧಿ ಕಾಮಗಾರಿ ನಡೆಯುವ ವೇಳೆ ಕಾಡಾನೆಗಳ ಹಿಂಡು ಎದುರಾಗಿದೆ. ಈ ವೇಳೆ ವನ್ಯಜೀವಿಗಳ ಸುಗಮ ಸಂಚಾರಕ್ಕೆ ಅವಕಾಶ ನೀಡದೆ. ಮೂಕಪ್ರಾಣಿಗಳಿಗೆ ಜೆಸಿಬಿಯಿಂದ ಹೆದರಿಸಿರುವುದು ತೀವ್ರ ಚರ್ಚೆಗೆ ಗ್ರಾಸವಾಗಿದೆ.

    ಜೆಸಿಬಿಯನ್ನು ಕಂಡ ಕಾಡಾನೆ ತನ್ನ ಮರಿಯ ರಕ್ಷಣೆಗೆ ಮುಂದಾಗಿದ್ದು, ಈ ವೇಳೆ ಜೆಸಿಬಿ ಚಾಲಕ ಆನೆಗೆ ಜೆಸಿಬಿಯಿಂದ ಹೆದರಿಸಿದ್ದಾನೆ. ಮರಿ ಇದ್ದ ಕಾರಣ ಆನೆ ಕೂಡ ಜೆಸಿಬಿಗೆ ಬೆದರಿ ಹಿಂದೆ ಹೋಗಿದೆ. ಅರಣ್ಯದಲ್ಲಿ ಮೂಕಪ್ರಾಣಿಗಳ ಮೇಲೆ ಹೀಗೆ ಯಂತ್ರಗಳಿಂದ ದೌರ್ಜನ್ಯ ಎಸಗಿ ವೀಡಿಯೋ ಮಾಡಿ ವಿಕೃತಿ ಮೆರೆದಿರೋದು ಜೆಸಿಬಿ ಚಾಲಕನ ವಿರುದ್ಧ ಸಾರ್ವಜನಿಕರು, ಪರಿಸರವಾದಿಗಳು ತೀವ್ರ ಆಕ್ರೋಶ ಹೊರಹಾಕಿದ್ದು, ತಡವಾಗಿ ಎಚ್ಚೆತ್ತ ಅರಣ್ಯ ಇಲಾಖೆ ಜೆಸಿಬಿ ಚಾಲಕನ ಮೇಲೆ ಪ್ರಕರಣ ದಾಖಲಿಸಿದ್ದಾರೆ. ಇದನ್ನೂ ಓದಿ: ಇದೆ ಮೊದಲ ಬಾರಿ ಬಿಡಿಎ ಬ್ರೋಕರ್‌ಗಳ ಮನೆ ಮೇಲೆ ಎಸಿಬಿ ದಾಳಿ

    ಅಭಯಾರಣ್ಯದೊಳಗೆ ವನ್ಯಜೀವಿಗಳು ಮುಕ್ತವಾಗಿ ಸಂಚರಿಸಲು ಅವಕಾಶ ಇರಬೇಕು. ಅವುಗಳಿಗೆ ಯಾವುದೇ ತೊಂದರೆಯಾಗಬಾರದು. ಈ ನಿಟ್ಟಿನಲ್ಲಿ ಅಭಯಾರಣ್ಯದ ವ್ಯಾಪ್ತಿಯೊಳಗೆ ಯಾವುದೇ ಕೆಲಸ ಮಾಡುವಾಗ ಅರಣ್ಯ ಇಲಾಖೆ ಸಾಕಷ್ಟು ಮುನ್ನೆಚ್ಚರಿಕಾ ಕ್ರಮಗಳನ್ನ ಕೈಗೊಳ್ಳಬೇಕು. ಅರಣ್ಯದಲ್ಲಿ ಜೆಸಿಬಿ ಸೇರಿದಂತೆ ಯಂತ್ರಗಳ ಬಳಕೆಯನ್ನು ಆದಷ್ಟು ಕಡಿಮೆ ಮಾಡಿ ಕಾರ್ಮಿಕರಿಂದಲೇ ಕೆಲಸ ಮಾಡಿಸಲು ಅರಣ್ಯ ಇಲಾಖೆ ಮುಂದಾಗಬೇಕೆಂದು ಜನಸಾಮಾನ್ಯರು ಹಾಗೂ ಪರಿಸರವಾದಿಗಳು ಆಗ್ರಹಿಸಿದ್ದಾರೆ.

  • ಜೆಸಿಬಿ ಜೊತೆ ಕಾಳಗಕ್ಕಿಳಿದ ಆನೆ – ವೀಡಿಯೋ ವೈರಲ್

    ಜೆಸಿಬಿ ಜೊತೆ ಕಾಳಗಕ್ಕಿಳಿದ ಆನೆ – ವೀಡಿಯೋ ವೈರಲ್

    ಣ್ಣು ಅಗೆಯುವ ಯಂತ್ರ ಜೆಸಿಬಿ ಜೊತೆ ಕಾಳಗಕ್ಕೆ ಇಳಿದ ಆನೆಯೊಂದರ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

    ಜೆಸಿಬಿ ಹೊಲದಲ್ಲಿ ಮಣ್ಣು ಅಗೆಯುತ್ತಿದ್ದಂತೆ ಅಲ್ಲಿಗೆ ಆನೆ ಎಂಟ್ರಿ ಕೊಟ್ಟಿದೆ. ಜೆಸಿಬಿಯನ್ನು ನೋಡುತ್ತಿದ್ದಂತೆ ಸಿಟ್ಟಿಗೆದ್ದ ಆನೆ, ಜೆಸಿಬಿ ಜೊತೆ ಫೈಟ್ ಮಾಡಲು ಆರಂಭಿಸಿರುವ ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ ತೊಡಗಿದೆ. ಇದನ್ನೂ ಓದಿ: ಇನ್‍ಸ್ಟಾಗ್ರಾಂ ಖಾತೆ ಹ್ಯಾಕ್ – ಅಂತರಾಷ್ಟ್ರೀಯ ಷಡ್ಯಂತ್ರ ಎಂದ ಕಂಗನಾ

    ಈ ವೀಡಿಯೋವನ್ನು wild animals creation ಎಂಬ ಇನ್‍ಸ್ಟಾಗ್ರಾಂ ಪೇಜ್‍ನಲ್ಲಿ ಪೋಸ್ಟ್ ಮಾಡಲಾಗಿದೆ. ವೀಡಿಯೋದಲ್ಲಿ ಜೆಸಿಬಿ ಜೊತೆ ಆನೆ ಫೈಟ್ ಮಾಡಲು ಆರಂಭಿಸಿದೆ. ಈ ವೇಳೆ ಜೆಸಿಬಿ ಡ್ರೈವರ್ ಜೆಸಿಬಿಯ ಮುಂಭಾಗದ ಕೊಕ್ಕೆಯಿಂದ ಆನೆಗೆ ಹೆದರಿಸಲು ಪ್ರಯತ್ನ ಪಟ್ಟಿದ್ದಾನೆ. ಆನೆ ಕೂಡ ತನ್ನ ಸಾಮರ್ಥ್ಯ ಪ್ರದರ್ಶನಕ್ಕೆ ಮುಂದಾಗಿ ಜೆಸಿಬಿಯನ್ನು ತಳ್ಳಲು ಪ್ರಯತ್ನಿಸಿದೆ ಬಳಿಕ ಜೆಸಿಬಿಯಿಂದ ತನಗೆ ಗಾಯವಾಗಬಹುದೆಂದು ಅರಿವಾಗಿ ಆನೆ ಅಲ್ಲಿಂದ ಜಾಗ ಖಾಲಿ ಮಾಡಿದೆ.

    ಇದೀಗ ಈ ವೀಡಿಯೋ ಬಗ್ಗೆ ನೆಟ್ಟಿಗರು ವಿವಿಧ ಬಗೆಯ ಕಾಮೆಂಟ್ ಮೂಲಕ ಜೆಸಿಬಿ ಮತ್ತು ಆನೆಯ ಪರ, ವಿರುದ್ಧ ಮಾತನಾಡುತ್ತಿದ್ದಾರೆ. ಇದನ್ನೂ ಓದಿ: ಅಬುಧಾಬಿಯಲ್ಲಿ 44.75 ಕೋಟಿ ರೂ. ಲಾಟರಿ ಗೆದ್ದ ಭಾರತೀಯ ಮಹಿಳೆ!

  • ಅಕ್ರಮ ಅಂಗಡಿ ತೆರವು ವೇಳೆ ಸೀಮೆಎಣ್ಣೆ ಸುರಿದುಕೊಂಡು ನ್ಯಾಯವಾದಿ ಹೈಡ್ರಾಮಾ

    ಅಕ್ರಮ ಅಂಗಡಿ ತೆರವು ವೇಳೆ ಸೀಮೆಎಣ್ಣೆ ಸುರಿದುಕೊಂಡು ನ್ಯಾಯವಾದಿ ಹೈಡ್ರಾಮಾ

    ಧಾರವಾಡ: ಹುಬ್ಬಳ್ಳಿ-ಧಾರವಾಡ ಸೂಪರ್ ಮಾರುಕಟ್ಟೆಯಲ್ಲಿ ಅಕ್ರಮ ಅಂಗಡಿ ತೆರವುಗೊಳಿಸುವ ವೇಳೆ ನ್ಯಾಯವಾದಿಯೊಬ್ಬ ತನ್ನ ಮೇಲೆ ಸೀಮೆಎಣ್ಣೆ ಸುರಿದುಕೊಂಡಿದ್ದಲ್ಲದೇ ಎಸಿಪಿ ಮೇಲೆಯೂ ಎರಚುವ ಮೂಲಕ ಭಾರೀ ಹೈಡ್ರಾಮಾ ಮಾಡಿದ ಘಟನೆಯೊಂದು ನಡೆದಿದೆ.

    ಗುರುವಾರ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಅಧಿಕಾರಿಗಳು ಧಾರವಾಡ ನಗರದ ಸೂಪರ್ ಮಾರುಕಟ್ಟೆಗೆ ಅಕ್ರಮ ಅಂಗಡಿ ತೆರವು ಕಾರ್ಯಾಚರಣೆಗೆ ಬಂದಿದ್ದರು. ಈ ವೇಳೆ ಜೆಸಿಬಿ ತಂದು ಅಂಗಡಿ ತೆರವು ಮಾಡುತಿದ್ದಂತೆಯೇ ಮಧ್ಯಪ್ರವೇಶ ಮಾಡಿದ ನ್ಯಾಯವಾದಿ ಎಂ.ಎಂ. ಚೌಧರಿ, ತನ್ನ ಮೈಮೇಲೆ ಸೀಮೆಎಣ್ಣೆ ಸುರಿದುಕೊಂಡು ಅಂಗಡಿ ತೆರವು ಕಾರ್ಯಾಚರಣೆಗೆ ಅಡ್ಡಿಪಡಿಸಿದ್ದಾರೆ.

    ಈ ವೇಳೆ ಸ್ಥಳದಲ್ಲಿದ್ದ ಎಸಿಪಿ ಅನುಷಾ ಅವರ ಮೇಲೂ ಸೀಮೆಎಣ್ಣೆ ಎರಚಿದ ನ್ಯಾಯವಾದಿ ಚೌಧರಿಯನ್ನು ಪೊಲೀಸರು ತಕ್ಷಣ ವಶಕ್ಕೆ ಪಡೆದಿದ್ದಾರೆ. ಸದ್ಯ ಶಹರ ಪೊಲೀಸ್ ಠಾಣೆಯಲ್ಲಿ ಚೌಧರಿ ಮೇಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸೂಪರ್ ಮಾರುಕಟ್ಟೆಯ ಅಂಗಡಿಗಳ ನ್ಯಾಯ, ನ್ಯಾಯಾಲಯದಲ್ಲಿ ನಡೆದಿದೆ. ಸದ್ಯ ನ್ಯಾಯಾವಾದಿ ಚೌಧರಿ ಕೂಡ ಪೊಲೀಸರು ಹೊಡೆದಿದ್ದಾರೆ ಎಂದು ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಲು ಮುಂದಾಗಿದ್ದಾರೆ. ಇದನ್ನೂ ಓದಿ:ನಮ್ಮನ್ನು ಬೆಂಬಲಿಸಿದ್ದರೆ ಸಿ.ಟಿ ರವಿ ದೊಡ್ಡವರಾಗುತ್ತಿದ್ದರು: ಎಂ.ಪಿ ಕುಮಾರಸ್ವಾಮಿ

  • ನರೇಗಾ ಕಾಮಗಾರಿ ವೇಳೆ ಟ್ರಾಕ್ಟರ್ ಪಲ್ಟಿ – ಚಾಲಕ ಸಾವು

    ನರೇಗಾ ಕಾಮಗಾರಿ ವೇಳೆ ಟ್ರಾಕ್ಟರ್ ಪಲ್ಟಿ – ಚಾಲಕ ಸಾವು

    ತುಮಕೂರು: ನರೇಗಾ ಕಾಮಗಾರಿ ವೇಳೆ ಟ್ರಾಕ್ಟರ್ ಮಗುಚಿ ಚಾಲಕನೋರ್ವ ಸಾವನ್ನಪ್ಪಿರುವ ಘಟನೆ ತುಮಕೂರು ಜಿಲ್ಲೆ ಕುಣಿಗಲ್ ತಾಲೂಕಿನ ದೊಮ್ಮಡಿಗೆರೆಯಲ್ಲಿ ನಡೆದಿದೆ.

    ಸಿದ್ದಪ್ಪ(30) ಮೃತ ಟ್ರಾಕ್ಟರ್ ಚಾಲಕ. ದೊಡ್ಡಾಳ ಕಟ್ಟೆ ಕಾಮಗಾರಿ ವೇಳೆ ಈ ಘಟನೆ ನಡೆದಿದ್ದು, ಮಡಿಕೇಹಳ್ಳಿ ಗ್ರಾಮ ಪಂಚಾಯತಿಯಿಂದ ನರೇಗಾ ಕಾಮಗಾರಿಯನ್ನು ನಿಯಮ ಮೀರಿ ಜೆಸಿಬಿ ಮತ್ತು ಟ್ರಾಕ್ಟರ್ ಬಳಸಿ ನಡೆಸಲಾಗುತ್ತಿತ್ತು. ಈ ವೇಳೆ ಮಣ್ಣು ತುಂಬಿಕೊಂಡು ಸಾಗುತ್ತಿದ್ದ ಟ್ರಾಕ್ಟರ್ ಏಕಾಏಕಿ ಪಲ್ಟಿಯಾಗಿದೆ.  ಇದನ್ನೂ ಓದಿ: ಅಕ್ರಮವಾಗಿ ಸಾಗಿಸ್ತಿದ್ದ ಒಂಟೆಗಳ ರಕ್ಷಣೆ

    ನಿಯಮದ ಪ್ರಕಾರ ಉದ್ಯೋಗ ಖಾತ್ರಿ ಯೋಜನೆಯಡಿ ಸ್ಥಳೀಯ ಕಾರ್ಮಿಕರನ್ನು ಬಳಿಸಿಕೊಂಡು ಕಾಮಗಾರಿ ಮಾಡಬೇಕಿತ್ತು. ಆದರೆ ಟ್ರಾಕ್ಟರ್ ಮತ್ತು ಜೆಸಿಬಿ ಬಳಸಿ ಕಾಮಗಾರಿ ನಡೆಸುತ್ತಿದ್ದರಿಂದ ಈ ಅವಘಡ ಸಂಭವಿಸಿದೆ. ಕುಣಿಗಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.