Tag: jcb

  • ಅನಧಿಕೃತ ಮಸೀದಿಯನ್ನು ಜೆಸಿಬಿಯಿಂದ ಕೆಡವಿದ UP ಮುಸ್ಲಿಮರು!

    ಅನಧಿಕೃತ ಮಸೀದಿಯನ್ನು ಜೆಸಿಬಿಯಿಂದ ಕೆಡವಿದ UP ಮುಸ್ಲಿಮರು!

    ಲಕ್ನೋ: ಉತ್ತರ ಪ್ರದೇಶದಲ್ಲಿ (Uttar Pradesh) ಈಗ ಮುಸ್ಲಿಮರೇ ಅಕ್ರಮವಾಗಿ ನಿರ್ಮಾಣಗೊಂಡ ಮಸೀದಿಯನ್ನು (Mosque) ಜೆಸಿಬಿಯಿಂದ ಕೆಡವಿದ್ದಾರೆ. ಸಂಭಾಲ್‌ (Sambhal) ಜಿಲ್ಲೆಯ ಅಸ್ಮೋಲಿ ಪೊಲೀಸ್ ಠಾಣೆ ವ್ಯಾಪ್ತಿಯ ರಾಯಾ ಬುಜುರ್ಗ್ ಗ್ರಾಮದಲ್ಲಿ ಮುಸ್ಲಿಮರು ಭಾನುವಾರ ಗೌಸುಲ್ಬರಾ ಮಸೀದಿಯನ್ನು ನೆಲಸಮ ಮಾಡಿದ್ದಾರೆ.

    ಅನಧಿಕೃತವಾಗಿ  ನಿರ್ಮಾಣಗೊಂಡಿದ್ದ ಮಸೀದಿಯನ್ನು ತೆಗೆಯುವಂತೆ ಜಿಲ್ಲಾಡಳಿತ 4 ದಿನಗಳ ಡೆಡ್‌ಲೈನ್‌ ನೀಡಿತ್ತು. ಈ ಗಡುವು ಮುಗಿಯುತ್ತಿದ್ದಂತೆ ಮುಸ್ಲಿಮರೇ ಮಸೀದಿಯನ್ನು ಕೆಡವಿದ್ದಾರೆ.

    ಗೌಸುಲ್ಬರಾ ಮಸೀದಿಯನ್ನು ಕೆಡವಲು ಜಿಲ್ಲಾಡಳಿತ ಮುಂದಾಗಿತ್ತು. ಆದರೆ ಮಸೀದಿ ಸಮಿತಿಯ ಸದಸ್ಯರು ನಾವೇ ಈ ಮಸೀದಿಯನ್ನು ಕೆಡವುತ್ತೇವೆ. 4 ದಿನಗಳ ಸಮಯ ನೀಡಿ ಎಂದು ವಿನಂತಿಸಿದ್ದರು. ಇದನ್ನೂ ಓದಿ:  ದುರ್ಗಾ ವಿಗ್ರಹ ವಿಸರ್ಜನೆ ವೇಳೆ ಕಲ್ಲು ತೂರಾಟ – ಇಂಟರ್ನೆಟ್ ಸ್ಥಗಿತ, 36 ಗಂಟೆಗಳ ಕಾಲ ಕರ್ಫ್ಯೂ

    ಅಕ್ಟೋಬರ್ 2 ರಂದು ಈ ಪ್ರದೇಶದಲ್ಲಿ ಅಕ್ರಮವಾಗಿ ನಿರ್ಮಿಸಲಾಗಿದ್ದ ಮದುವೆ ಮಂಟಪವನ್ನು ಪೊಲೀಸರ ಸಮ್ಮುಖದಲ್ಲಿ ಅಧಿಕಾರಿಗಳು ಕೆಡವಿ ಹಾಕಿದ್ದರು.

  • ಯೋಗಿ ಬರ್ತಾರೆ ಮೋದಿಗಿಂತ ದಿಟ್ಟ ನಿರ್ಧಾರ ತೆಗೆದುಕೊಳ್ತಾರೆ, ನಾನು ಜೆಸಿಬಿ ಸಹಿತ ಸಿಎಂ ಆಗಿ ಪ್ರಮಾಣ ಸ್ವೀಕರಿಸುವೆ: ಯತ್ನಾಳ್‌

    ಯೋಗಿ ಬರ್ತಾರೆ ಮೋದಿಗಿಂತ ದಿಟ್ಟ ನಿರ್ಧಾರ ತೆಗೆದುಕೊಳ್ತಾರೆ, ನಾನು ಜೆಸಿಬಿ ಸಹಿತ ಸಿಎಂ ಆಗಿ ಪ್ರಮಾಣ ಸ್ವೀಕರಿಸುವೆ: ಯತ್ನಾಳ್‌

    – ನಾನು ಸಿಎಂ ಆದ್ಮೇಲೆ 3ನೇ ಮಕ್ಕಳಾದ್ರೆ ಎಲ್ಲಾ ಸೌಲಭ್ಯ ಫ್ರೀ
    – ಮದ್ವೆಗೆ 5 ಲಕ್ಷ ರೂಪಾಯಿ ಸಹ ಉಚಿತ ಕೊಡುಗೆ

    ದಾವಣಗೆರೆ: ಈಗ ಮೋದಿ ಇದ್ದಾರೆ ಮುಂದೆ ಯೋಗಿ ಬರ್ತಾರೆ. ಮೋದಿಗಿಂತ ದಿಟ್ಟ ನಿರ್ಧಾರ ಕೈಗೊಳ್ತಾರೆ ಎಂದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ನಾನು ಸಿಎಂ ಆದ್ರೆ ಜೆಸಿಬಿ ಸಹಿತ ಪ್ರಮಾಣ ವಚನ ಸ್ವೀಕರಿಸುವುದಾಗಿ ಹೇಳಿದ್ದಾರೆ.

    ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಮರಡಿ ಗ್ರಾಮದ ಧರ್ಮ ಜಾಗೃತಿ ಸಮಾವೇಶದಲ್ಲಿ ಮಾತನಾಡಿದ ಅವರು, ನಾನು ಈ ಹಿಂದೆ ಪಕ್ಷದಿಂದ ಉಚ್ಚಾಟನೆ ಆದಾಗ ಅಮಿತ್ ಶಾ ಮರಳಿ ಬಿಜೆಪಿ ಕರೆತಂದಿದ್ದರು. ಯಡಿಯೂರಪ್ಪ ಅಲ್ಲ ನನ್ನ ಹಿರಿತನ ನೋಡಿದ್ರೆ ನಾನೇ ಸಿಎಂ ಆಗಬೇಕು. ಆದ್ರೆ ನನಗೆ ಮಂತ್ರಿ ಸಹ ಮಾಡಲಿಲ್ಲ ಯಡಿಯೂರಪ್ಪ. ಆವಾಗಿಂದನೇ ತುಳಿಯುತ್ತಾ ಬಂದಿದ್ದಾರೆ, ಕೊನೆಗೆ ಮದ್ದೂರಿನಿಂದ ಎದ್ದೇ. ರಾಜ್ಯದಲ್ಲಿ ಪಕ್ಷದಿಂದ ಉಚ್ಚಾಟನೆ ಆದವರೆಲ್ಲಾ ಸಿಎಂ ಆಗಿದ್ದಾರೆ. ನಾನು ಯಾಕೆ ಆಗಬಾರದು ಅಂತ ಪ್ರಶ್ನಿಸಿದರು.

    ಮುಂದುವರಿದು.. ರಾಜ್ಯದಲ್ಲಿ ಡಿಜೆ ಪರವಾನಿಗೆಯಿಲ್ಲ. ಆದ್ರೆ ನಮ್ಮ ವಿಜಯಪುರದಲ್ಲಿ ಮಾತ್ರ ಡಿಜೆ ಪರವಾನಿಗೆ ಇದೆ. ನಾಳೆ ನಾನು ಸಿಎಂ ಆಗುವಾಗ ಜೆಸಿಬಿ ಸಹಿತ ಪ್ರಮಾಣ ವಚನ ಸ್ವೀಕರಿಸುವೆ. ಗಣೇಶ ಮೆರವಣಿಗೆಯಲ್ಲಿ ಜೆಸಿಬಿಯನ್ನೇ ಮುಂದೆ ಬಿಡುತ್ತೇನೆ. ಈಗ ಮೋದಿ ಇದ್ದಾರೆ ಮುಂದೆ ಯೋಗಿ ಬರಲಿದ್ದಾರೆ. ಮೋದಿಗಿಂತ ದಿಟ್ಟ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ಹೇಳಿದರು.

    ರಾಜ್ಯದಲ್ಲಿ ಸಿದ್ದರಾಮಯ್ಯ ಅವರು ಮುಸ್ಲಿಂ ಓಲೈಕೆ ಮಾಡುತ್ತಾರೆ. ಇದಕ್ಕೆ ಸುಧಾರಿಸಿಕೊಳ್ಳಬೇಕು ಅಂದ್ರೆ 2028ರ ವರೆಗೆ ಸಿಎಂ ಆಗಿ ಉಳಿತೀರಿ. ಇಲ್ಲಾದ್ರೆ ಇಷ್ಟರಲ್ಲಿ ಸರ್ಕಾರ ಪತನವಾಗುತ್ತೆ. ಆದ್ರೆ ಸಿದ್ದರಾಮಯ್ಯ ಅವರು ಡಿಕೆ ಶಿವಕುಮಾರ್‌ಗೆ ಸಿಎಂ ಆಗೋಕೆ ಬಿಡಲ್ಲ. ಹಿಂದೂಗಳು ಜನಸಂಖ್ಯೆ ಹೆಚ್ಚಾಗಬೇಕು. ನಾನು ಸಿಎಂ ಆದ್ರೆ 3ನೇ ಮಕ್ಕಳಾದ್ರೆ ಎಲ್ಲಾ ಉಚಿತ ಸೌಲಭ್ಯ. ಮದ್ವೆಗೆ 5 ಲಕ್ಷ ರೂಪಾಯಿ ಸಹ ಉಚಿತ ಕೊಡುವೆ. ಸಾಬರು 25 ಅಡಿತಾರೆ ನಾವು ಕಟ್ಟಿದ ತೆರಿಗೆಯನ್ನೇ ಅವರೇ ತಿಂದು ತೇಗುತ್ತಾರೆ ಅಂತ ಲೇವಡಿ ಮಾಡಿದರು.

    ಇದೇ ವೇಳೆ ಮತ್ತೆ ಯಡಿಯೂರಪ್ಪ ವಿರುದ್ಧ ವಾಗ್ದಾಳಿ ನಡೆಸಿದರು. ಕೆಜೆಹಳ್ಳಿ-ಡಿಜೆಹಳ್ಳಿ ಕೇಸ್‌ನಲ್ಲಿ ಅಂದಿನ ಸಿಎಂ ಬೊಮ್ಮಾಯಿ ವೈಫಲ್ಯ ಕಾರಣ. ಆರಗಜ್ಞಾನೇಂದ್ರ, ಬೊಮ್ಮಾಯಿ ಅವರ ಕೈಗೆ ಅಧಿಕಾರ ಕೊಟ್ಟು ಹಾಳಾಯಿತು. ವೀರಶೈವ ಲಿಂಗಾಯತ ಒಂದು ಎಂದು ಕೆಲವರು ಹೇಳುತ್ತಿದ್ದಾರೆ. ಅವೇ ಮೂರು ಕುಟುಂಬಗಳು ಒಂದು ಯಡಿಯೂರಪ್ಪ, ಶಾಮನೂರು ಹಾಗೂ ಖಂಡ್ರೆ ಅವರು. ತಮ್ಮ ಕುಟುಂಬದ ರಾಜಕೀಯಕ್ಕಾಗಿ ಸಮಾಜ ಬಳಸಿಕೊಳ್ಳುತ್ತಿದ್ದಾರೆ. ಒಂದು ಕಡೆ ಯಡಿಯೂರಪ್ಪ ವೀರಶೈವ ಲಿಂಗಾಯತರು ಜಗಳವಾಡಬೇಡಿ ಅಂತಾರೆ. ಮೊದಲು ಅವರ ನಿಲುವೇನು ಅಂತ ಸ್ಪಷ್ಟಪಡಿಸಲಿ. ಮೊದಲು ತಂದೆ ಲೂಟಿ ಮಾಡಿದ್ದಾನೆ. ಈಗ ಮಗ ಲೂಟಿಮಾಡಲು ತಂದೆ ಅವಕಾಶ ಮಾಡಿಕೊಡುತ್ತಿದ್ದಾರೆ ಎಂದು ಕಿಡಿ ಕಾರಿದರು.

  • ಜನರ ಶೆಡ್‌ ತೆರವು – ಬಾಗಲಕೋಟೆಯ ಮಹಾಲಿಂಗಪುರದಲ್ಲಿ ಬೆಳ್ಳಂಬೆಳಗ್ಗೆ ಜೆಸಿಬಿ ಘರ್ಜನೆ

    ಜನರ ಶೆಡ್‌ ತೆರವು – ಬಾಗಲಕೋಟೆಯ ಮಹಾಲಿಂಗಪುರದಲ್ಲಿ ಬೆಳ್ಳಂಬೆಳಗ್ಗೆ ಜೆಸಿಬಿ ಘರ್ಜನೆ

    ಬಾಗಲಕೋಟೆ: ಬೆಳಂಬೆಳಗ್ಗೆ ಬಾಗಲಕೋಟೆ (Bagalkote) ಜಿಲ್ಲೆಯ ರಬಕವಿ- ಬನಹಟ್ಟಿ (Rabakavi Banahatti) ತಾಲೂಕಿನ ಮಹಾಲಿಂಗಪುರ ಪಟ್ಟಣದ ವಾರ್ಡ್ ನಂಬರ್ 13 ಕೆಂಗೇರಿ ಮಡ್ಡಿಯಲ್ಲಿ ಜೆಸಿಬಿಗಳು ಘರ್ಜಿಸಿವೆ.

    ಐದಾರು ವರ್ಷಗಳಿಂದ ಕೆಲ ಕುಟುಂಬಸ್ಥರು ಪಟ್ಟಣದ ಕೆಂಗೇರಿ ಮಡ್ಡಿಯ ಆಶ್ರಯ ಕಾಲೋನಿಯಲ್ಲಿ ವಾಸವಿದ್ದರು. ಆದರೆ ಇಂದು ಜೆಸಿಬಿ ಆಗಮಿಸುತ್ತಿದ್ದಂತೆಯೇ ಸ್ಥಳೀಯರು ಆತಂಕಗೊಂಡಿದ್ದಾರೆ. ಮಾಹಲಿಂಗಪುರ ಪುರಸಭೆ ಹಾಗೂ ತಹಸಿಲ್ದಾರ್ ನೇತೃತ್ವದಲ್ಲಿ ತೆರವು ಕಾರ್ಯಾಚರಣೆ ನಡೆದಿದ್ದು, ಜನ ವಾಸವಿರುವ ಶೆಡ್‌ಗಳನ್ನು ತೆರವುಗೊಳಿಸುವ ಕಾರ್ಯಾಚರಣೆ ನಡೆಸಲಾಗುತ್ತಿದೆ.  ಇದನ್ನೂ ಓದಿ: ಕೃಷಿಹೊಂಡದಲ್ಲಿ ಮುಳುಗಿ ಅಕ್ಕ, ತಂಗಿಯ ದಾರುಣ ಸಾವು

    ನಮಗೆ ಯಾವುದೇ ರೀತಿಯ ಸೂಚನೆ ನೀಡದೇ, ನೋಟಿಸ್ ಕೊಡದೇ ಏಕಾಏಕಿ ತೆರವು ಕಾರ್ಯಾಚರಣೆ ಮಾಡಿದ್ದಾರೆ ಎಂದು ಜನರು ಆಕ್ರೋಶ ಹೊರಹಾಕಿದ್ದಾರೆ.

    ಈಗ ತೆರವು ಮಾಡಿದರೆ ನಾವು ಎಲ್ಲಿಗೆ ಹೋಗಬೇಕು? ಚುನಾವಣೆ ವೇಳೆ ವೋಟು ಕೇಳಲು ಬರುವ ಜನಪ್ರತಿನಿಧಿಗಳು ಶೆಡ್ ಹಾಕಿಕೊಂಡು ಇಲ್ಲೇ ಇರಿ ಎಂದು ನೋಟಿಸ್ ನೀಡಿದ್ದರು. ಈಗ ಶೆಡ್ ತೆರವು ಮಾಡುವಾಗ ಯಾರೂ ಬರುತ್ತಿಲ್ಲ ಎಂದು ಮಹಿಳೆಯರು ಕಣ್ಣೀರು ಹಾಕಿ ಅಳಲು ತೋಡಿಕೊಳ್ಳುತ್ತಿದ್ದಾರೆ.

  • ನಾನು ಸಿಎಂ ಆದ್ರೆ ಸಾವಿರ ಜೆಸಿಬಿ ಆರ್ಡರ್, ಪ್ರತಿ ತಾಲೂಕಿಗೆ 35 ಇಡ್ತೀನಿ: ಯತ್ನಾಳ್‌

    ನಾನು ಸಿಎಂ ಆದ್ರೆ ಸಾವಿರ ಜೆಸಿಬಿ ಆರ್ಡರ್, ಪ್ರತಿ ತಾಲೂಕಿಗೆ 35 ಇಡ್ತೀನಿ: ಯತ್ನಾಳ್‌

    ಬಾಗಲಕೋಟೆ: ನಾನು ಮುಖ್ಯಮಂತ್ರಿ (Chief Minister) ಆದ್ರೆ ಸಾವಿರ ಜೆಸಿಬಿ (JCB) ಆರ್ಡರ್ ಮಾಡ್ತಿನಿ, ಎಲ್ಲಾ ತಾಲೂಕುಗಳಲ್ಲಿ ತಲಾ 35 ಜೆಸಿಬಿ ಇಡ್ತೀನಿ.ಯಾರೇ ಕ್ವಾಂಯಕ್ ಅಂದ್ರೂ ಅವ್ರ ಮನೆ ಕಲಾಸ್ ಎಂದು ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ (Basangouda Patil Yatnal) ಗುಳೇದಗುಡ್ಡ ಪಟ್ಟಣದಲ್ಲಿ ಗುಡುಗಿದ್ದಾರೆ.

    ಶಿವಾಜಿ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಜನರನ್ನು ಉದ್ದೇಶಿಸಿ ಮಾತನಾಡಿದ ಯತ್ನಾಳ್, ಯೋಗಿ ಆದಿತ್ಯನಾಥ್ (Yogi Adityanath) ಅವರ ಬುಲ್ಡೋಜರ್ ನಿಯಮ ಜಾರಿಗೆ ತರುವ ಬಗ್ಗೆ ಮಾತನಾಡಿದರು.

    ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕೆಟ್ಟು ಹೋಗಿದೆ, ನಮ್ಮ ಸರ್ಕಾರ ಇದ್ದಾಗೂ ಹಿಂಗೆ, ಈಗ ಇನ್ನಷ್ಟು ಕೆಟ್ಟು ಹೋಗಿದೆ. ಇದು ಹೋಗಬೇಕು ಅಂದ್ರೆ ಬುಲ್ಡೋಜರ್ಸ್ ತಗೊಂಡು ಬರಬೇಕು ಎಂದರು.

     

    ನಾನೇನಾದ್ರೂ ಮುಖ್ಯಮಂತ್ರಿ ಆದ್ರೆ ಒಂದು ಸಾವಿರ ಜೆಸಿಬಿ ಆರ್ಡರ್ ಮಾಡ್ತೀನಿ. ಎಲ್ಲಾ ತಾಲೂಕುಗಳಲ್ಲಿ ತಲಾ 25 ಜೆಸಿಬಿ ಇಡ್ತೀನಿ, ಯಾರೇ ಒಬ್ರು ಕಿರಿಕ್‌ ಮಾಡಿದರೆ ಅವರ ಮನೆ ಧ್ವಂಸ ಮಾಡ್ತೀನಿ. ಇಲ್ಲದಿದ್ದರೆ ನಿಯಂತ್ರಣ ಆಗುವುದಿಲ್ಲ ಎಂದು ಹೇಳಿದರು.

    ಮಹಾರಾಷ್ಟ್ರ ನಾಗಪುರನಲ್ಲಿ ಅಮಾಯಕ ಪೊಲೀಸರ ಮೇಲೆ ಹಿಂದೂಗಳ ಮೇಲೆ ದೌರ್ಜನ್ಯ ನಡೆಯುತ್ತಿದೆ. ಪೊಲೀಸ್ ಕಮಿಷನರ್ ಹಾಗೂ ಡಿಎಸ್‌ಪಿ ಮೇಲೆ ಹಲ್ಲೆ‌ ಮಾಡ್ತಾರೆ ಅಂದರೆ ಅವರಿಗೆ ಎಷ್ಟು ದುರಹಂಕಾರ ಇದೆ. ಇದನ್ನೆಲ್ಲಾ ನಾವು ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದರು.

    ಬರೀ ಮುಖ್ಯಮಂತ್ರಿ ಆಗೋದು ಲೂಟಿ ಮಾಡೋಕೆ ಅಲ್ಲ. ಯೋಗಿ ಆದಿತ್ಯನಾಥ್ ಅವರು ಭ್ರಷ್ಟಾಚಾರ ಮಾಡಿದವರ ಕುಟುಂಬದವರಿಗೆ ಮುಂದೆ ಎಂದೂ ಸರ್ಕಾರಿ ನೌಕರಿ ಸಿಗದಂತೆ ಮಾಡುತ್ತೇನೆ ಎಂದು ಹೇಳಿದ್ದಾರೆ. ಈ ರೀತಿ ಮಾಡದೇ ಇದ್ದರೆ ನಮ್ಮ ದೇಶ ದೇಶವಾಗಿ ಉಳಿಯುವುದಿಲ್ಲ ಎಂದು ಅಭಿಪ್ರಾಯಪಟ್ಟರು.

    ರಾಜ್ಯದ ಸ್ಥಿತಿಗತಿ ಬಗ್ಗೆ ಪೊಲೀಸರು ಬಂದು ನಮ್ಮ ಹತ್ರ ಹೇಳುತ್ತಾರೆ. ಏನ್‌ ಮಾಡೋದು ಸರ್. ಇಂತಹ ಸರ್ಕಾರ ಇದೆ ಎಂದು ಬೇಸರ ಹೊರಹಾಕ್ತಿದ್ದಾರೆ ಎಂದು ರಾಜ್ಯ ಸರ್ಕಾರದ ವಿರುದ್ಧ ಗುಡುಗಿದರು.

     

  • ಕ್ಷಣದಲ್ಲಿ ನೆಲಕಚ್ಚಿತು ಮುಗಿಲೆತ್ತರದ ಮೊಬೈಲ್‌ ಟವರ್‌ – 11 ಮಂದಿ ಗ್ರೇಟ್‌ ಎಸ್ಕೇಪ್‌

    ಕ್ಷಣದಲ್ಲಿ ನೆಲಕಚ್ಚಿತು ಮುಗಿಲೆತ್ತರದ ಮೊಬೈಲ್‌ ಟವರ್‌ – 11 ಮಂದಿ ಗ್ರೇಟ್‌ ಎಸ್ಕೇಪ್‌

    ಬೆಂಗಳೂರು: ಹಳೇ ಕಟ್ಟಡ ತೆರವುಗೊಳಿಸುತ್ತಿದ್ದ ವೇಳೆ ದುರ್ಘಟನೆಯೊಂದು ಸಂಭವಿಸಿದೆ. ಮುಗಿಲೆತ್ತರದ ಮೊಬೈಲ್ ಟವರ್‌ (Mobile Tower) ನೆಲ ಕಚ್ಚಿದ್ದು, 11 ಮಂದಿ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಬೆಂಗಳೂರಿನ (Bengaluru) ಲಗ್ಗೆರೆಯಲ್ಲಿ ನಡೆದಿದೆ.

    ಲಗ್ಗೆರೆಯಲ್ಲಿ ಹಳೆ ಕಟ್ಟಡಗಳನ್ನು ತೆರವುಗೊಳಿಸಿ ಜೆಸಿಬಿಯಲ್ಲಿ (JCB) ಸೈಟ್ ಕ್ಲೀನ್ ಮಾಡಲಾಗುತ್ತಿತ್ತು. ಈ ವೇಳೆ ಜೆಸಿಬಿ ಮುಂಭಾಗ ಟವರ್‌ಗೆ ತಗುಲಿದ್ದ ಮನೆ ಸಮೇತ ಧ್ವಂಸವಾಗಿದೆ. ಇದನ್ನೂ ಓದಿ: ಯತ್ನಾಳ್ ನಿಜವಾದ ಗುರಿ ಮೋದಿ ಅನ್ನೋದು ನಿಧಾನವಾಗಿ ಬಯಲಾಗಿದೆ: ಸಿದ್ದರಾಮಯ್ಯ

    ಮೊಬೈಲ್ ಟವರ್‌ಗೆ ಹೊಂದಿಕೊಂಡಿರುವ ಎರಡು ಅಂತಸ್ತಿನ ಕಟ್ಟಡದಲ್ಲಿ 11 ಜನ ವಾಸ ಮಾಡುತ್ತಿದ್ದರು. ಟವರ್‌ ಬೀಳುವುದಕ್ಕೂ ಮುಂಚೆ ಮನೆಯೊಳಗಿದ್ದ ಎಲ್ಲರನ್ನೂ ಹೊರಗೆ ಕರೆತರಲಾಗಿತ್ತು. ಆದ್ದರಿಂದ 11 ಮಂದಿಯ ಪ್ರಾಣ ಉಳಿದಿದೆ. ಮೊಬೈಲ್‌ ಟವರ್‌ ಬಿದ್ದಿದ್ದರಿಂದ ಒಂದು ಹಣ್ಣಿನ ಅಂಗಡಿ ಮತ್ತು ಬಂಬು ಅಂಗಡಿಯ ಮೇಲೆ ಟವರ್ ಬಿದ್ದು ಹಾಳಾಗಿದೆ. ಇದನ್ನೂ ಓದಿ: ಇನ್ನೊಂದು ತಿಂಗಳಲ್ಲಿ ಬಂಗಲೆ ಖಾಲಿ ಮಾಡ್ಬೇಕು – ವಿಧಾನಸಭೆಯಲ್ಲಿ ಗೆದ್ದ ಸಂಸದರಿಗೆ ಸೂಚನೆ

    ಲಗ್ಗೆರೆ ಮೊಬೈಲ್ ಟವರ್ ಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ ದಾಸರಹಳ್ಳಿ ವಲಯ ಇಂಜಿನಿಯರ್‌ಗಳು ಹಾಗೂ ಬಿಬಿಎಂಪಿಯಿಂದ ನಂದಿನಿ ಲೇಔಟ್‌ ಪೊಲೀಸ್ ಠಾಣೆಗೆ ದೂರು ನೀಡಲು ನಿರ್ಧರಿಸಲಾಗಿದೆ. ಸೈಟ್ ಕ್ಲೀನ್ ಮಾಡುವಾಗ ಜೆಸಿಬಿಯಿಂದ ಮೊಬೈಲ್ ಟವರ್ ಬಿದ್ದಿದ್ದು ಕ್ರಮ ವಹಿಸುವಂತೆ ಸೈಟ್ ಮಾಲೀಕ ಹರೀಶ್ ವಿರುದ್ಧ ದೂರು ನೀಡಲು ಅಧಿಕಾರಿಗಳು ಮುಂದಾಗಿದ್ದಾರೆ.

  • ಕದ್ದು ತಂದಿದ್ದ ಜೆಸಿಬಿ ಬಳಸಿ ATM ಕಳ್ಳತನಕ್ಕೆ ಯತ್ನ

    ಕದ್ದು ತಂದಿದ್ದ ಜೆಸಿಬಿ ಬಳಸಿ ATM ಕಳ್ಳತನಕ್ಕೆ ಯತ್ನ

    ಶಿವಮೊಗ್ಗ: ಕದ್ದು ತಂದಿದ್ದ ಜೆಸಿಬಿ (JCB) ಬಳಸಿ ಖತರ್ನಾಕ್‌ ಕಳ್ಳರು ಎಟಿಎಂ (ATM) ಕಳ್ಳತನಕ್ಕೆ ಯತ್ನಿಸಿರುವ ಘಟನೆ ಶಿವಮೊಗ್ಗದಲ್ಲಿ (Shivamogga) ನಡೆದಿದೆ.

    ಶಿವಮೊಗ್ಗದ ವಿನೋಬನಗರ ಬಡಾವಣೆಯಲ್ಲಿ ಈ ಘಟನೆ ಜರುಗಿದೆ. ರಾತ್ರೋರಾತ್ರಿ ಕಳ್ಳರು ಆಕ್ಸಿಕ್‌ ಬ್ಯಾಂಕ್‌ನ ಎಟಿಎಂ ಬಳಿಗೆ ಜೆಸಿಬಿ ತಂದಿದ್ದಾರೆ. ಜೆಸಿಬಿ ಮೂಲಕ ಎಟಿಎಂ ನಲ್ಲಿರುವ ಹಣ ಕಳ್ಳತನಕ್ಕೆ ಮುಂದಾಗಿದ್ದಾರೆ. ಇದನ್ನೂ ಓದಿ: ವಾಹನ ತೆರಿಗೆ ಪರಿಷ್ಕರಣೆ – ಯಾವುದು ಎಷ್ಟು ಏರಿಕೆ?

    ರಾತ್ರಿ ಗಸ್ತು ಪೊಲೀಸರು ಬರುತ್ತಿದ್ದಂತೆ ಸ್ಥಳದಲ್ಲೇ ಜೆಸಿಬಿ ಬಿಟ್ಟು ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಜೆಸಿಬಿಯನ್ನು ವಶಕ್ಕೆ ಪಡೆದಿದ್ದಾರೆ.

    ಕುತೂಹಲಕಾರಿ ಘಟನೆ ಎಂದರೆ, ಎಟಿಎಂ ಕಳ್ಳತನಕ್ಕೆ ತಂದಿದ್ದ ಜೆಸಿಬಿಯನ್ನೂ ಸಹ ಕದ್ದು ತಂದಿರುವುದು ಪೊಲೀಸರ ತನಿಖೆಯಿಂದ ತಿಳಿದುಬಂದಿದೆ. ಘಟನೆ ಕುರಿತು ವಿನೋಬನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಬೆಂಗಳೂರಿನಲ್ಲೊಂದು ಕಳ್ಳರ ಕುಟುಂಬ – ಕುಟುಂಬದ ಎಂಟು ಜನರ ಆದಾಯವೇ ಕಳ್ಳತನ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಅಣ್ಣನ ಮೇಲಿನ ಗೌರವದಿಂದ ಜೆಸಿಬಿಯಲ್ಲೇ ಮದುವೆ ಮಂಟಪ ತಲುಪಿದ ವರ

    ಅಣ್ಣನ ಮೇಲಿನ ಗೌರವದಿಂದ ಜೆಸಿಬಿಯಲ್ಲೇ ಮದುವೆ ಮಂಟಪ ತಲುಪಿದ ವರ

    ಭುವನೇಶ್ವರ: ಸಾಮಾನ್ಯವಾಗಿ ಮದುವೆ ಕಾರ್ಯಕ್ರಮವು ಡ್ಯಾನ್ಸ್, ಮ್ಯೂಸಿಕ್ ಹಾಗೂ ಮೋಜಿನಿಂದ ಕೂಡಿರುತ್ತದೆ. ಆದರೆ ಒಡಿಶಾ (Odisha) ದ ನವದಂಪತಿ ತಮ್ಮ ಮದುವೆ ಕಾರ್ಯಕ್ರಮವನ್ನು ಬಹಳ ವಿಭಿನ್ನ ಹಾಗೂ ವಿಶೇಷವಾಗಿ ಮಾಡಿದ್ದಾರೆ.

    ಹೌದು. ವರನೊಬ್ಬ ಜೆಸಿಬಿ (JCB) ಯ ಮೂಲಕ ಮೆರವಣಿಗೆ ಹೊರಡುವ ಮೂಲಕ ಎಲ್ಲರ ಹುಬ್ಬೇರಿಸುವಂತೆ ಮಾಡಿದ್ದಾನೆ. ಈ ಘಟನೆ ಒಡಿಶಾದ ಬೌದ್ ಜಿಲ್ಲೆಯ ಚತ್ರರಂಗ ಗ್ರಾಮದಲ್ಲಿ ನಡೆದಿದೆ.

    ವರನನ್ನು ಗಂಗಾಧರ್ ಬೆಹೆರಾ ಎಂದು ಗುರುತಿಸಲಾಗಿದೆ. ವರನ ಮದುವೆಯ ಮೆರವಣಿಗೆಯು ನಯಾಗಢ ಜಿಲ್ಲೆಯ ಖಂದಪದ ಬ್ಲಾಕ್‍ನ ಕಿಯಾಜರಾ ಗ್ರಾಮಕ್ಕೆ ತೆರಳಬೇಕಿತ್ತು. ಆದರೆ ವರ ಯಾವುದೇ ಐಷಾರಾಮಿ ವಾಹನಗಳನ್ನು ಬಳಸದೇ ಜೆಸಿಬಿ ಮೂಲಕ ವಧು ಮನೆ ತಲುಪಿದ್ದಾನೆ. ಹೀಗಾಗಿ ಕಾರ್ಯಕ್ರಮಕ್ಕೆ ಬಂದ ಅತಿಥಿಗಳು ಅಚ್ಚರಿಪಟ್ಟಿದ್ದಾರೆ.

    ಮೂಲಗಳ ಪ್ರಕಾರ, ವರ ಗಂಗಾಧರ್ ಸಹೋದರ ಜೆಸಿಬಿ ಆಪರೇಟರ್ ಆಗಿದ್ದಾರೆ. ಈ ಹಿನ್ನೆಲೆಯಲ್ಲಿ ಅವರಿಗೆ ಗೌರವ ಸಲ್ಲಿಸುವ ಸಲುವಾಗಿ ಗಂಗಾಧರ್ ಜೆಸಿಬಿಯಲ್ಲಿ ಮದುವೆ ಮೆರವಣಿಗೆ ಹೊರಡಲು ನಿರ್ಧಾರ ಮಾಡಿರುವುದಾಗಿ ತಿಳಿದುಬಂದಿದೆ. ಇದನ್ನೂ ಓದಿ: ಬಿಜೆಪಿ ಪ್ರಣಾಳಿಕೆಯಲ್ಲಿ ಪಂಚರತ್ನ ಯೋಜನೆ ನಕಲು ಮಾಡಿದ್ದಾರೆ: ಕುಮಾರಸ್ವಾಮಿ

    ಒಟ್ಟಿನಲ್ಲಿ ಗಂಗಾಧರ್ ಸಹೋದರನನ್ನು ಗೌರವಿಸುವ ಸಲುವಾಗಿ ಜನರು ಶ್ಲಾಘಿಸುವುದರೊಂದಿಗೆ ವಿಶಿಷ್ಟ ಮದುವೆಯ ಮೆರವಣಿಗೆಯು ಈಗ ಇಡೀ ಪಟ್ಟಣದಲ್ಲಿ ಚರ್ಚೆಯಾಗಿದೆ.

  • ಸೇತುವೆ ನೆಲಸಮ ಮಾಡುವಾಗ ನದಿಗೆ ಬಿದ್ದ ಜೆಸಿಬಿ- ಪ್ರಾಣಾಪಾಯದಿಂದ ಚಾಲಕ ಪಾರು

    ಸೇತುವೆ ನೆಲಸಮ ಮಾಡುವಾಗ ನದಿಗೆ ಬಿದ್ದ ಜೆಸಿಬಿ- ಪ್ರಾಣಾಪಾಯದಿಂದ ಚಾಲಕ ಪಾರು

    ಲಕ್ನೋ: ಗಂಗಾ ನದಿಯ (River) ಮೇಲಿದ್ದ ಸೇತುವೆಯೊಂದನ್ನು (Bridge) ನೆಲಸಮ ಮಾಡುವಾಗ ಜೆಸಿಬಿ (JCB) ನೀರಿಗೆ ಬಿದ್ದು, ಚಾಲಕ ಸ್ವಲ್ಪದರಲ್ಲೇ ಪ್ರಾಣಾಪಾಯದಿಂದ ಪಾರಾದ ಘಟನೆ ಉತ್ತರ ಪ್ರದೇಶದಲ್ಲಿ (Uttar Pradesh) ನಡೆದಿದೆ.

    ಉತ್ತರ ಪ್ರದೇಶದ ಮುಜಾಫರ್‌ನಗರ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಜನಸತ್ ಪ್ರದೇಶದಲ್ಲಿರುವ ಶಿಥಿಲಗೊಂಡ ಸೇತುವೆಯನ್ನು ಕೆಡಗುವಾಗ ಜೆಸಿಬಿ ನದಿಗೆ ಬಿದ್ದಿದೆ.

    ವೀಡಿಯೋದಲ್ಲಿ ಏನಿದೆ?: ಮುಜಾಫರ್‌ನಗರದ ಕಿರಿದಾದ ಸೇತುವೆಯಲ್ಲಿ ಬುಲ್ಡೋಜರ್ ನಿಂತಿರುವುದನ್ನು ನೋಡಬಹುದಾಗಿದೆ. ಜೆಸಿಬಿ ಯಂತ್ರವು ಹಳೆಯ ಸೇತುವೆಯನ್ನು ಕೆಡವಲು ಪ್ರಯತ್ನಿಸಿದಾಗ ಇದ್ದಕ್ಕಿದ್ದಂತೆ ಸೇತುವೆಯು ಪೂರ್ಣವಾಗಿ ಮುರಿದ್ದು ಬಿದ್ದಿದ್ದು, ಸೇತುವೆಯ ಮೇಲೆ ಇದ್ದ ಜೆಸಿಬಿಯು ನದಿಯೊಳಗೆ ಮುಳುಗಿದೆ. ಘಟನೆಯಲ್ಲಿ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಇದನ್ನೂ ಓದಿ: ಟೂರಿಸ್ಟ್ ಟೆಂಪೋ ಕಂದಕಕ್ಕೆ ಬಿದ್ದು 7 ವಿದ್ಯಾರ್ಥಿಗಳ ದುರ್ಮರಣ, 10 ಮಂದಿಗೆ ಗಾಯ

    ನೀರಿನಲ್ಲಿ ಕುಸಿದು ಬಿದ್ದ ಸೇತುವೆ 100 ವರ್ಷಗಳಷ್ಟು ಹಳೆಯದ್ದಾಗಿದೆ. ಕಾಲುವೆಯ ಉದ್ದಕ್ಕೂ ಪಾಣಿಪತ್-ಖತಿಮಾ ಹೆದ್ದಾರಿಯನ್ನು ವಿಸ್ತರಿಸುವ ಯೋಜನೆಯ ಭಾಗವಾಗಿ ನೆಲಸಮ ಕಾರ್ಯವನ್ನು ನಡೆಸಲಾಯಿತು. ಇದನ್ನೂ ಓದಿ: ಐಸಿಸ್ ಜೊತೆ ಸಂಪರ್ಕದ ಶಂಕೆ, ಮತ್ತೊಬ್ಬನ ಬಂಧನ – ಗಂಗಾವತಿಯಲ್ಲಿ ಖಾಕಿ ಕಣ್ಗಾವಲು

    Live Tv
    [brid partner=56869869 player=32851 video=960834 autoplay=true]

  • BBMP ಜೆಸಿಬಿ ಆಪರೇಷನ್ – ಒಂದೇ ವಾರದಲ್ಲಿ ನಲಪಾಡ್ ನಾಟಕ ಬಯಲು

    BBMP ಜೆಸಿಬಿ ಆಪರೇಷನ್ – ಒಂದೇ ವಾರದಲ್ಲಿ ನಲಪಾಡ್ ನಾಟಕ ಬಯಲು

    ಬೆಂಗಳೂರು: ರಸ್ತೆಯಲ್ಲಿ ನೀರು ನಿಂತಾಗ ಸರ್ಕಾರದ (Karnataka Government) ವಿರುದ್ಧ ಪ್ರತಿಭಟನೆ (Protest) ನಡೆಸಿದ್ದ ಯೂಥ್ ಕಾಂಗ್ರೆಸ್ ಅಧ್ಯಕ್ಷ ಮೊಹಮ್ಮದ್ ನಲಪಾಡ್ (mohammed haris nalapad) ನಾಟಕ ಒಂದೇ ವಾರದಲ್ಲಿ ಬಯಲಾಗಿದೆ.

    ರಾಜಕಾಲುವೆ (Rajkaluve) ಒತ್ತುವರಿ ಮಾಡಿ ಕಟ್ಟಡ ಕಟ್ಟಿದ ಪರಿಣಾಮ ಮಹಾದೇವಪುರ ವಿಧಾನ ಸಭಾ ಕ್ಷೇತ್ರದ ಕೆಲವೆಡೆ ರಸ್ತೆಯಲ್ಲಿ ನೀರು ನಿಂತಿತ್ತು. ಈ ಸಂದರ್ಭದಲ್ಲಿ ಟ್ರ್ಯಾಕ್ಟರ್‌ ಏರಿ ನಲಪಾಡ್ ಪ್ರತಿಭಟನೆ ನಡೆಸಿದ್ದರು. ಬಳಿಕ ಜಲಾವೃತಗೊಂಡ ರಸ್ತೆಯಲ್ಲಿ ಗಾಳಿ ತುಂಬಿದ ರಬ್ಬರ್ ಟ್ಯೂಬ್ ಮೇಲೆ ಕುಳಿತು ಸಂಚರಿಸುವ ಮೂಲಕ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದ್ದರು. ಆದರೆ ಈಗ ನಲಪಾಡ್ ನಿರ್ದೇಶಕರಾಗಿರುವ ನಲಪಾಡ್ ಅಕಾಡೆಮಿ ರಾಜಕಾಲುವೆ ಒತ್ತುವರಿ ಮಾಡಿಕೊಂಡ ವಿಚಾರ ಬೆಳಕಿಗೆ ಬಂದಿದೆ. ಇದನ್ನೂ ಓದಿ: 40percentsarkara ವೆಬ್‌ಸೈಟ್‌ ಓಪನ್‌ – ಬಿಜೆಪಿ ಅಂದ್ರೆ ಭ್ರಷ್ಟಾಚಾರ ಅಭಿಯಾನ ಆರಂಭಿಸಿದ ಕಾಂಗ್ರೆಸ್‌

    ಚಲ್ಲಘಟ್ಟದ ಎಂಬೆಸಿ ಗಾಲ್ಫ್ ಲಿಂಕ್ ಬಿಸಿನೆಸ್ ಪಾರ್ಕ್ ಬಳಿ ನಲಪಾಡ್ ಅಕಾಡೆಮಿ (Nalapad Academy) ಸ್ಥಾಪನೆಯಾಗಿದೆ. ಒತ್ತುವರಿ ಮಾಡಿ ಅಕಾಡೆಮಿಯ ಕಾಪೌಂಡ್ ಕಟ್ಟಿದ ಹಿನ್ನೆಲೆಯಲ್ಲಿ ಇಂದು ಜೆಸಿಬಿ ಜೊತೆ ಬಿಬಿಎಂಪಿ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದ್ದರು. ಜೆಸಿಬಿ ಕಾರ್ಯಾಚರಣೆ ಆರಂಭವಾಗುತ್ತಿದ್ದಂತೆ ಶಾಂತಿನಗರದ ಕಾಂಗ್ರೆಸ್ ಶಾಸಕ ಹ್ಯಾರಿಸ್ ಅವರ ಪಿಎ, ನೋಟಿಸ್ ನೀಡಿಲ್ಲ. ಹೇಗೆ ತೆರವು ಮಾಡುತ್ತೀರಾ ಎಂದು ಅವಾಜ್ ಹಾಕಿದರು. ಜೆಸಿಬಿ (JCB) ಕಾರ್ಯಾಚರಣೆ ನಡೆಸುತ್ತಿದ್ದಂತೆ ಸ್ಥಗಿತಕ್ಕೆ ಸೂಚನೆ ನೀಡಿದರು. ಬಿಬಿಎಂಪಿ (BBMP) ಅಧಿಕಾರಿಗಳಿಗೆ ಗೇಟು ತೆಗೆಯಲು ಕೂಡ ಅವಕಾಶ ಕೊಡಲಿಲ್ಲ. ಹೀಗಾಗಿ ಕಾರ್ಯಾಚರಣೆ ತಾತ್ಕಾಲಿಕವಾಗಿ ಸ್ಥಗಿತಗೊಂಡಿತ್ತು.

    ಕಾರ್ಯಾಚರಣೆ ಸ್ಥಗಿತಗೊಂಡ ಬೆನ್ನಲ್ಲೇ ಪಬ್ಲಿಕ್ ಟಿವಿ (Public TV) ನಿರಂತರ ವರದಿ ಮಾಡಿತ್ತು. ದೊಡ್ಡವರಿಗೆ ಒಂದು ನ್ಯಾಯ? ಬಡವರಿಗೆ ಒಂದು ನ್ಯಾಯ ಸರಿಯೇ ಎಂದು ಕೇಳಿತ್ತು. ನಿರಂತರ ವರದಿಯ ಬಳಿಕ ಬಿಬಿಎಂಪಿ ಜೆಸಿಬಿಗಳು ನಲಪಾಡ್ ಅಕಾಡೆಮಿ ಕಾಂಪೌಂಡ್‌ನ್ನು ಧರೆಗೆ ಉರುಳಿಸಿದೆ. ಇದನ್ನೂ ಓದಿ: ದೀದಿ ವಿರುದ್ಧ ಬಿಜೆಪಿ ಪ್ರತಿಭಟನೆ – ಪೊಲೀಸರಿಂದ ಜಲಫಿರಂಗಿ ಅಸ್ತ್ರ ಬಳಕೆ

    ವಾರದ ಹಿಂದೆ ಮಳೆ ಬಂದಾಗ ಪ್ರತಿಭಟನೆ ನಡೆಸಿದ್ದ ನಲಪಾಡ್, ʻತೊಲಗಲಿ ತೊಲಗಲಿ, ಬಿಜೆಪಿ ತೊಲಗಲಿ, ಜೀವವಿದ್ದರೆ ಜೀವನ – ಬಿಜೆಪಿಯಿದ್ದರೆ ದಹನ, ರಾಜಕಾಲುವೆ ನಿರ್ಮಿಸಿ, ಮಳೆಯಿಂದ ಜನರನ್ನು ರಕ್ಷಿಸಿ ಎಂಬಿತ್ಯಾದಿ’ ಘೋಷಣೆ ಕೂಗುತ್ತ ಪ್ಲಾಸ್ಟಿಕ್ ಟ್ಯೂಬ್ ಮೇಲೆ ಕುಳಿತು ಮೊಹಮ್ಮದ್ ನಲಪಾಡ್ ಪ್ರತಿಭಟನೆ ನಡೆಸಿದ್ದರು. ನಲಪಾಡ್‌ಗೆ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಬೆಂಬಲಿಗರು ಸಾಥ್ ನೀಡಿದ್ದರು.

    Live Tv
    [brid partner=56869869 player=32851 video=960834 autoplay=true]

  • ಆಕಸ್ಮಿಕವಾಗಿ ನದಿಗೆ ಬಿದ್ದ ಮುಸ್ಲಿಂ ವ್ಯಕ್ತಿಯನ್ನು ರಕ್ಷಿಸಿದ ಹಿಂದೂ ಯುವಕ!

    ಆಕಸ್ಮಿಕವಾಗಿ ನದಿಗೆ ಬಿದ್ದ ಮುಸ್ಲಿಂ ವ್ಯಕ್ತಿಯನ್ನು ರಕ್ಷಿಸಿದ ಹಿಂದೂ ಯುವಕ!

    – ಹಿಂದೂ ಯುವಕನ ಕಾರ್ಯಕ್ಕೆ ಭಾರೀ ಮೆಚ್ಚುಗೆ

    ಮಂಗಳೂರು: ಸರಣಿ ಕೊಲೆಗಳಿಂದ ಕಂಗಾಲಾಗಿದ್ದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇದೀಗ ಸಾಮರಸ್ಯವಾದ ಪ್ರಸಂಗವೊಂದು ನಡೆದಿದೆ. ಹಿಂದೂ ಯುವಕನೊಬ್ಬ ಮುಸ್ಲಿಂ ವ್ಯಕ್ತಿಯನ್ನು ರಕ್ಷಿಸುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

    ಆಕಸ್ಮಿಕವಾಗಿ ನದಿಗೆ ಬಿದ್ದ ಕ್ರೇನ್ ಆಪರೇಟರ್ ಆಗಿರುವ ಮುಸ್ಲಿಂ ಯುವಕನನ್ನು ಹಿಂದೂ ಯುವಕನೊಬ್ಬ ರಕ್ಷಿಸಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಹರಿಹರದಲ್ಲಿ ನಡೆದಿದೆ. ಜೆಸಿಬಿ ಆಪರೇಟರ್‍ನನ್ನು ಷರೀಫ್ ಎಂದು ಗುರುತಿಸಲಾಗಿದ್ದು, ಇವರನ್ನು ಸೋಮಶೇಖರ್ ಕಟ್ಟೆಮನೆ ರಕ್ಷಿಸಿದ್ದಾರೆ.

    ಹರಿಹರದ ಪಲ್ಲತಡ್ಕ ಎಂಬಲ್ಲಿ ಭಾರೀ ಮಳೆಯಿಂದ ತೇಲಿ ಬಂದು ಸೇತುವೆ ಮೇಲೆ ಸಿಲುಕಿದ್ದ ಮರಗಳನ್ನು ಜೆಸಿಬಿ ಹಾಗೂ ಕ್ರೇನ್ ಮುಲಕ ತೆರವುಗೊಳಿಸಲಾಗುತ್ತಿತ್ತು. ಅಂತೆಯೇ ಕಡಬ ತಾಲೂಕಿನ ಪಂಜ ಸಮೀಪದ ಪಡ್ಪಿನಂಗಡಿ ನಿವಾಸಿ ಷರೀಫ್ ಕ್ರೇನ್‍ನಿಂದ ಕೆಳಗಿಳಿದು ಸೇತುವೆಯ ಮೇಲೆ ನಿಂತಿದ್ದರು. ಇದನ್ನೂ ಓದಿ: ನೋ ಪಾರ್ಕಿಂಗ್ ಹಾವಳಿ ತಪ್ಪಿಸಲು ವ್ಹೀಲಿಂಗ್ ಕ್ಲಾಂಪ್ ಮೊರೆ- ಸ್ಥಳದಲ್ಲೇ ದಂಡ ವಸೂಲಿಗೆ ಪ್ಲಾನ್!

    ಜೆಸಿಬಿಯಿಂದ ಮೇಲಕ್ಕೆತ್ತಲಾದ ಮರದ ದಿಮ್ಮಿಗಳನ್ನು ಸಾಗಿಸುವ ಸಂದರ್ಭ ಆಕಸ್ಮಾತ್ತಾಗಿ ಮರದ ದಿಮ್ಮಿಯೊಂದು ಷರೀಫ್ ಗೆ ತಾಗಿದ್ದು, ಅವರು ನಿಯಂತ್ರಣ ತಪ್ಪಿ ನದಿಗೆ ಬಿದ್ದಿದ್ದಾರೆ. ಹೀಗೆ ನದಿಗೆ ಬಿದ್ದ ಷರೀಫ್ ನೀರಿನ ರಭಸಕ್ಕೆ ಈಜಲು ಸಾಧ್ಯವಾಗದೆ ಮುಳುಗುತ್ತಿರುವುದನ್ನು ಗಮನಿಸಿದ ಸ್ಥಳೀಯ ನಿವಾಸಿ ಸೋಮಶೇಖರ್ ತಕ್ಷಣ ನದಿಗೆ ಹಾರಿ ಷರೀಫ್ ಅವರನ್ನು ಸುಮಾರು 5 ನಿಮಿಷಗಳ ಕಾಲ ಹಿಡಿದುಕೊಂಡು ನೀರಿನಲ್ಲಿ ನಿಂತರು. ನಂತರ ಹಗ್ಗ ಬಳಸಿ ಜೆಸಿಬಿ ಮುಖಾಂತರ ಅವರನ್ನು ಮೇಲಕ್ಕೆತ್ತಲಾಯಿತು.

    ಸದ್ಯ ಸೋಮಶೇಖರ್ ಕ್ಟೆಮನೆ ಅವರ ಕಾರ್ಯಕ್ಕೆ ಜಿಲ್ಲೆಯಾದ್ಯಾಂತ ಭಾರೀ ಪ್ರಶಶಮಸೆ ವ್ಯಕ್ತವಾಗುತ್ತಿದೆ. ಸದ್ಯ ಶರೀಫ್ ನನ್ನು ರಕ್ಷಣೆ ಮಾಡುತ್ತೊರುವ ದೃಶ್ಯವನ್ನು ಸ್ಥಳದಲ್ಲಿದ್ದವರು ತಮ್ಮ ಮೊಬೈಲ್ ನಲ್ಲಿ ಸೆರೆಹಿಡಿದಿದ್ದು, ಇದೀಗ ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಅಲ್ಲದೆ ಸೋಮಶೇಖರ್ ಅವರ ಧೈರ್ಯ ಹಾಗೂ ಸಾಹಸವನ್ನು ಜನ ಕೊಂಡಾಡುತ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]