Tag: jc madhuswamy

  • ಸಂಸ್ಕಾರವಂತ ಮನುಷ್ಯ ಹೇಗಿರಬೇಕು ಎಂಬುದಕ್ಕೆ ಎಸ್‌ಎಂಕೆ ಮಾದರಿ: ಮಾಧುಸ್ವಾಮಿ

    ಸಂಸ್ಕಾರವಂತ ಮನುಷ್ಯ ಹೇಗಿರಬೇಕು ಎಂಬುದಕ್ಕೆ ಎಸ್‌ಎಂಕೆ ಮಾದರಿ: ಮಾಧುಸ್ವಾಮಿ

    ತುಮಕೂರು: ಸಂಸ್ಕಾರವಂತ ಮನುಷ್ಯ ಹೇಗಿರಬೇಕು ಎಂಬುದಕ್ಕೆ ಎಸ್‌ಎಂ ಕೃಷ್ಣ (SM Krishna) ಮಾದರಿಯಾಗಿದ್ದರು. ಅವರ ರಾಜಕೀಯ ಹಾಗೂ ಖಾಸಗಿ ಜೀವನದಲ್ಲಿ ಒರಟಾಗಿ, ಏಕವಚನದಲ್ಲಿ ಮಾತನಾಡಿದ್ದು ನಾವು ನೋಡಿಲ್ಲ ಎಂದು ಮಾಜಿ ಸಚಿವ ಜೆಸಿ ಮಾಧುಸ್ವಾಮಿ (JC Madhuswamy) ಹೇಳಿದ್ದಾರೆ.

    ಮಾಜಿ ಮುಖ್ಯಮಂತ್ರಿ ಎಸ್‌ಎಂ ಕೃಷ್ಣ ನಿಧನ ಹಿನ್ನೆಲೆ ತುಮಕೂರು (Tumakuru) ಜಿಲ್ಲೆ ಚಿಕ್ಕನಾಯಕನಹಳ್ಳಿಯಲ್ಲಿ (Chikkanayakanahalli) ಸಂತಾಪ ಸೂಚಿಸಿ ಮಾತನಾಡಿದ ಅವರು, ಎಸ್‌ಎಂ ಕೃಷ್ಣ ಅವರು ಕರ್ನಾಟಕ ರಾಜ್ಯದಲ್ಲಿ ಯಾವುದೇ ರಾಜಕಾರಣಿ ಪಡೆಯದಂತಹ ಸ್ಥಾನ, ಗೌರವ ಪಡೆದಿದ್ದಾರೆ. ರಾಷ್ಟ್ರ, ರಾಜ್ಯ ಮಟ್ಟದಲ್ಲಿ ಎಲ್ಲಾ ಆಯಾಮಗಳಲ್ಲೂ ಕೆಲಸ ಮಾಡಿದ್ದಾರೆ. ಎಲ್ಲಾ ಸೇವೆಗೂ ಗೌರವ ತಂದುಕೊಡುವ ವ್ಯಕ್ತಿತ್ವ ಅವರದ್ದು ಎಂದರು. ಇದನ್ನೂ ಓದಿ: ಪತ್ನಿಯ ಮಾರ್ಫ್‌ ಫೋಟೋ ಬಳಸಿ ಆ್ಯಪ್‌ ಏಜೆಂಟರ ಕಿರುಕುಳ – 2,000 ರೂ. ಸಾಲ ಪಡೆದಿದ್ದ ವ್ಯಕ್ತಿ ಆತ್ಮಹತ್ಯೆ

    ನಾವು ರಾಜಕಾರಣಕ್ಕೆ ಬರುವ ಮೊದಲೇ ಅವರು ಹಿರಿಯ ರಾಜಕಾರಣಿಯಾಗಿದ್ದರು. ನಮಗೆಲ್ಲಾ ತುಂಬಾ ಗೌರವ ಕೊಟ್ಟು ಮಾತನಾಡಿಸುತ್ತಿದ್ದರು. 1989-90ರಲ್ಲೇ ವಿಧಾನಸಭೆ ಸ್ಪೀಕರ್ ಆಗಿದ್ದರು. ವಿಧಾನಸಭೆಯಲ್ಲಿ ನಮ್ಮನ್ನು ಗುರುತಿಸಿ ಮಾತನಾಡಲು ಅವಕಾಶ ನೀಡುತ್ತಿದ್ದರು. ಮಾಧುಸ್ವಾಮಿಯವರೇ ಎದ್ದು ಮಾತನಾಡಿ ಎಂದು ಪ್ರೋತ್ಸಾಹ ನೀಡುತ್ತಿದ್ದರು. ಅವರು ತೋರಿಸುತ್ತಿದ್ದ ಸೌಜನ್ಯ, ಹಾಗೂ ರಾಜಕೀಯ ಶಕ್ತಿಯನ್ನು ಎಂದಿಗೂ ಮರೆಯೋದಿಲ್ಲ. ವಿಧಾನಸಭೆಯಲ್ಲಿ ನಮ್ಮನ್ನು ಮೊದಲು ಗುರುತಿಸಿದ್ದು ಕೃಷ್ಣರವರು. ಆರಂಭದ ದಿನಗಳಲ್ಲಿ ಇಂತಹ ವಿಷಯಗಳಿಗೆ ಹೆಚ್ಚು ಒತ್ತು ನೀಡಬೇಕು ಎಂದು ಸಲಹೆ ನೀಡುತ್ತಿದ್ದರು. ವಿಧಾನಸಭೆಯಲ್ಲಿ ಯಾರಿಗೂ ತಾರತಮ್ಯ ಮಾಡದೇ ಎಲ್ಲರನ್ನು ಸಮಾನವಾಗಿ ಕಾಣುತ್ತಿದ್ದರು. ಮಂತ್ರಿಯಾದಮೇಲೆ ನಮಗೆ ಹೆಚ್ಚಿನ ಅನುದಾನ ನೀಡಿ ಕ್ಷೇತ್ರದ ಅಭಿವೃದ್ಧಿಗೆ ಕಾರಣರಾಗಿದ್ದರು. ಅವರು ಮುಖ್ಯಮಂತ್ರಿಯಾದಮೇಲೆ ನಾನು ಸೋತಿದ್ದೆ. ಆಗ ವಿಧಾನಸಭೆಯಲ್ಲಿ ಮಾಧುಸ್ವಾಮಿಯಂತವರು ಇರಬೇಕಿತ್ತು ಎಂದು ನೆನೆದಿದ್ದರು. ಅದನ್ನು ಎಂದಿಗೂ ಮರೆಯಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಇದನ್ನೂ ಓದಿ: ಅತುಲ್ ಸುಭಾಷ್ ಆತ್ಮಹತ್ಯೆ | ಹಣಕ್ಕಾಗಿ ಕೇಸ್‌ ಮೇಲೆ ಕೇಸ್‌ – ಪತ್ನಿ ಸೇರಿದಂತೆ ನಾಲ್ವರ ವಿರುದ್ಧ ಎಫ್‌ಐಆರ್‌

    ಕೃಷ್ಣ ಅವರ ಬಗ್ಗೆ ನನಗೆ ಅಪಾರವಾದ ಗೌರವ ಇತ್ತು. ಅವರು ಅಷ್ಟೇ ಗೌರವ ಇಟ್ಟುಕೊಂಡಿದ್ದರು. ಅವರು ಇಂದು ನಮ್ಮ ಜೊತೆ ಇಲ್ಲ. ಅವರು ತುಂಬು ಜೀವನ ನಡೆಸಿ ಹೋಗಿದ್ದಾರೆ. ಅವರ ಛಾಪು ರಾಜ್ಯದ ಮೇಲಿದೆ. ಯಾವುದೇ ಪಕ್ಷ, ಜಾತಿ, ಧರ್ಮದಿಂದ ಬರಲಿ. ರಾಜ್ಯಕ್ಕೆ ಇಂತಹ ಸೌಮ್ಯ ಸ್ವಭಾವದ ರಾಜಕಾರಣಿ ಬೇಕು. ಅವರ ನಿಧನಕ್ಕೆ ನನ್ನ ಅಂತಿಮ ಅಶ್ರುತರ್ಪಣೆ ಅರ್ಪಿಸುತ್ತೇನೆ ಎಂದರು. ಇದನ್ನೂ ಓದಿ: ಬೈಕ್‌ಗೆ ಲಾರಿ ಡಿಕ್ಕಿ – ಕೂಲಿ ಕೆಲಸಕ್ಕೆ ಹೊರಟಿದ್ದ ದಂಪತಿ ಸಾವು

  • ಕಾಂಗ್ರೆಸ್ ಸೇರುವ ದುಃಸ್ಥಿತಿ ನನಗೆ ಬಂದಿಲ್ಲ: ಮಾಧುಸ್ವಾಮಿ

    ಕಾಂಗ್ರೆಸ್ ಸೇರುವ ದುಃಸ್ಥಿತಿ ನನಗೆ ಬಂದಿಲ್ಲ: ಮಾಧುಸ್ವಾಮಿ

    ತುಮಕೂರು: ಕಾಂಗ್ರೆಸ್ (Congress) ಸೇರುವ ದುಃಸ್ಥಿತಿ ನನಗೆ ಬಂದಿಲ್ಲ. ಯಾವನೋ ಮುಠ್ಠಾಳ ಈ ರೀತಿ ಹೇಳಿ ಸುಳ್ಳು ಸುದ್ದಿಯನ್ನು ಟಿವಿಗೆ ಹಾಕಿಸಿದ್ದಾನೆ ಎಂದು ಮಾಜಿ ಸಚಿವ ಮಾಧುಸ್ವಾಮಿ (J.C.Madhu Swamy) ವದಂತಿಗೆ ತೆರೆ ಎಳೆದಿದ್ದಾರೆ.

    ಚಿಕ್ಕನಾಯಕನಹಳ್ಳಿಯಲ್ಲಿ (Chikkanayakanahalli) ನಡೆದ ಸಭೆಯಲ್ಲಿ ಮಾತನಾಡಿದ ಅವರು, ನಾನು ಕಾಂಗ್ರೆಸ್‌ಗೆ ಸೇರುತ್ತೇನೆ ಎಂದು ಯಾವನೋ ಮುಠ್ಠಾಳ ವದಂತಿ ಹಬ್ಬಿಸಿದ್ದಾನೆ. ನನ್ನ ಜೀವನವಿಡೀ ಕಾಂಗ್ರೆಸ್ ವಿರೋಧಿಸಿಕೊಂಡು ಬಂದವನು ಎಂದು ಕಿಡಿಕಾರಿದರು. ಇದನ್ನೂ ಓದಿ: ನಾಳೆಯಿಂದ ಹೊಸ ಸರ್ಕಾರದ ಮೊದಲ ಅಧಿವೇಶನ – ಸದನ ಕದನ ಅಖಾಡ ರೆಡಿ

    ಜೆಪಿ ಚಳುವಳಿಯಲ್ಲಿ (JP Movement) ಕಾಂಗ್ರೆಸ್ ವಿರುದ್ಧ ಹೋರಾಡಿದವನು ನಾನು. ಅಂತಹದರಲ್ಲಿ ಕಾಂಗ್ರೆಸ್ ಸೇರುತ್ತೇನಾ? ಇಂತಹ ವದಂತಿಗೆ ಕಾರ್ಯಕರ್ತರು ತಲೆಕೆಡಿಸಿಕೊಳ್ಳಬಾರದು ಎಂದು ಸ್ಪಷ್ಟನೆ ನೀಡಿದರು. ಇದನ್ನೂ ಓದಿ: ಆಗಸ್ಟ್‌ನಿಂದ ಮನೆಯ ಯಜಮಾನಿಗೆ ಗೃಹಲಕ್ಷ್ಮಿ: ಲಕ್ಷ್ಮಿ ಹೆಬ್ಬಾಳ್ಕರ್

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಟೀಕೆಗಳಷ್ಟೇ ಅಲ್ಲ,ಸಲಹೆಗಳು ಕೊಡುವ ಕೆಲಸವೂ ಮಾಧ್ಯಮಗಳಿಂದಾಗಲಿ: ಮಾಧುಸ್ವಾಮಿ

    ಟೀಕೆಗಳಷ್ಟೇ ಅಲ್ಲ,ಸಲಹೆಗಳು ಕೊಡುವ ಕೆಲಸವೂ ಮಾಧ್ಯಮಗಳಿಂದಾಗಲಿ: ಮಾಧುಸ್ವಾಮಿ

    ಬೆಂಗಳೂರು: ಟೀಕೆಗಳು ಮಾಡುವುದಷ್ಟೇ ಮಾಧ್ಯಮಗಳ(Media) ಕೆಲಸವೆಂದು ಪರಿಭಾವಿಸದೇ ಆಡಳಿತ ವ್ಯವಸ್ಥೆಗೆ ಸೂಕ್ತ ಸಲಹೆ-ಸೂಚನೆಗಳು, ಮಾರ್ಗದರ್ಶನ ಕೊಡುವ ಕೆಲಸಗಳು ಮಾಧ್ಯಮಗಳಿಂದಾಗಬೇಕು. ಇದು ರಾಷ್ಟ್ರ ನಿರ್ಮಾಣದಲ್ಲಿ ಅತ್ಯಂತ ಅಗತ್ಯವಾಗಿದೆ ಎಂದು ಕಾನೂನು ಮತ್ತು ಮತ್ತು ಸಂಸದೀಯ ವ್ಯವಹಾರಗಳ ಸಚಿವರಾದ ಜೆ.ಸಿ.ಮಾಧುಸ್ವಾಮಿ(JC Madhuswamy) ಅವರು ಅಭಿಪ್ರಾಯಪಟ್ಟರು.

    ಕರ್ನಾಟಕ ಮಾಧ್ಯಮ ಅಕಾಡೆಮಿ ವತಿಯಿಂದ ರಾಷ್ಟ್ರೀಯ ಪತ್ರಿಕಾ ದಿನಾಚರಣೆ ಅಂಗವಾಗಿ ನಗರದ ಪ್ರೆಸ್‍ಕ್ಲಬ್ ಸಭಾಂಗಣದಲ್ಲಿ ಇಂದು ಏರ್ಪಡಿಸಿದ್ದ “ರಾಷ್ಟ್ರ ನಿರ್ಮಾಣದಲ್ಲಿ ಮಾಧ್ಯಮಗಳ ಪಾತ್ರ” ವಿಚಾರಸಂಕಿರಣಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

    ಸರ್ಕಾರಗಳು ಮತ್ತು ಆಡಳಿತ ವ್ಯವಸ್ಥೆ ತಪ್ಪು ಮಾಡಿದಲ್ಲಿ ಅವಹೇಳನ ಮಾಡದೇ ಅದನ್ನು ಅತ್ಯಂತ ನವೀರಾಗಿ ತಿದ್ದಿ ಹೇಳುವ ಕೆಲಸವನ್ನು ಮಾಧ್ಯಮಗಳು ಮಾಡಬೇಕು. ಇದುವರೆಗೆ ಏನಾಗಿದೆ? ಏನಾಗಬೇಕಾಗಿತ್ತು ಎನ್ನುವುದರ ಕುರಿತು ವಿಶ್ಲೇಷಣೆ ಮಾಡಿ ಸರ್ಕಾರಗಳಿಗೆ ಚಾಟಿ ಬಿಸಿ ಎಚ್ಚರಿಸುವ ಕೆಲಸಗಳನ್ನು ಮಾಡಬೇಕು ಎಂದು ಹೇಳಿದ ಸಚಿವ ಮಾಧುಸ್ವಾಮಿ ಅವರು ರಾಷ್ಟ್ರನಿರ್ಮಾಣದಲ್ಲಿ ಮಾಧ್ಯಮಗಳ ಪಾತ್ರ ಅತ್ಯಂತ ಪ್ರಮುಖವಾಗಿದೆ ಎಂಬ ಅಂಶವನ್ನು ವಿವಿಧ ರೀತಿಯ ಉದಾರಣೆಗಳ ಮೂಲಕ ತಿಳಿಯಪಡಿಸಿದರು.

    ರಾಷ್ಟ್ರ ನಿರ್ಮಾಣವೆಂದರೇ ಕೇವಲ ದೊಡ್ಡ ದೊಡ್ಡ ಕೈಗಾರಿಗಳ ಅಭಿವೃದ್ಧಿಯಲ್ಲ. ಜಾತಿ-ಮತ, ಪಂಥ, ಸಂಸ್ಕೃತಿ ಸೇರಿದಂತೆ ವೈವಿಧ್ಯತೆಯನ್ನೇ ಜೀವಾಳವಾಗಿಸಿಕೊಂಡಿರುವ ಎಲ್ಲವನ್ನು ಮತ್ತು ಎಲ್ಲರನ್ನೂ ಒಗ್ಗಟ್ಟಾಗಿ ತೆಗೆದುಕೊಂಡು ಮುನ್ನಡೆಯುತ್ತಾ ಎಲ್ಲ ರಂಗಗಳಲ್ಲಿ ಸಮಗ್ರ ಅಭಿವೃದ್ಧಿ ಸಾಧಿಸುವುದಾಗಿದೆ ಎಂದು ಅವರು ವಿವರಿಸಿದರು. ನಿಷ್ಪಕ್ಷಪಾತ ವರದಿಗಾರಿಕೆ ಮತ್ತು ಮಾಧ್ಯಮಗಳ ವರದಿ ಹಾಗೂ ನಿರೀಕ್ಷೆಗಳ ಕುರಿತು ಸಹ ಅವರು ಮಾತನಾಡಿದರು.

    ಹಿರಿಯ ಪತ್ರಕರ್ತರಾದ ರಾಜಾ ಶೈಲೇಶಚಂದ್ರಗುಪ್ತ ಅವರು ಮಾತನಾಡಿ, ಜನರ ಭಾವನೆಗಳಿಗೆ ಕನ್ನಡಿ ಹಿಡಿಯುವ ಕೆಲಸ ಮಾಧ್ಯಮಗಳು ಮಾಡಬೇಕು. ಮಾಧ್ಯಮಗಳ ಮೇಲೆ ನಿರೀಕ್ಷೆಗಳು ಹೆಚ್ಚಾಗಿದ್ದು, ಅವುಗಳು ಈಡೇರಿಸುವ ನಿಟ್ಟಿನಲ್ಲಿ ಯಾವುದೇ ರೀತಿಯ ಲೋಪಗಳಾಗದೇ ನಿರೀಕ್ಷೆಗಳು ನಿಜವಾಗಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಬೇಕು ಎಂದು ಅವರು ಮಾಧ್ಯಮಗಳು ಇರುವ ಅವಕಾಶಗಳನ್ನು ಸಮರ್ಪಕವಾಗಿ ಸದುಪಯೋಗಪಡಿಸಿಕೊಂಡು ರಾಷ್ಟ್ರವನ್ನು ಕಟ್ಟುವ ಕೆಲಸ ಮಾಡಬೇಕು ಎಂದರು. ಇದನ್ನೂ ಓದಿ: ಪೋಲೆಂಡ್‌ಗೆ ಕ್ಷಿಪಣಿ ಹಾರಿಸಿ ಉಕ್ರೇನ್ ಎಡವಟ್ಟು

    ಹಿರಿಯ ಪತ್ರಕರ್ತರಾದ ಡಾ.ಆರ್.ಪೂರ್ಣಿಮಾ ಅವರು ಮಾತನಾಡಿ, ಭಾರತದಲ್ಲಿ ಪತ್ರಿಕಾರಂಗ ಹುಟ್ಟಿದ್ದೇ ರಾಷ್ಟ್ರೀಯ ಚಳವಳಿ ಸಂದರ್ಭದಲ್ಲಿ. ಸ್ವಾತಂತ್ರ್ಯ ಚಳವಳಿಯಲ್ಲಿ ಜನರ ಪಾಲ್ಗೊಳ್ಳುವಿಕೆಗೆ ಮತ್ತು ಬ್ರಿಟೀಷರ ವಿರುದ್ಧ ಜನರು ಸಂಘಟಿತರಾಗಿ ಹೋರಾಟಕ್ಕಿಳಿಯುವಲ್ಲಿ ಪತ್ರಿಕೆಗಳ ಪಾತ್ರ ಅತ್ಯಂತ ಮಹತ್ವದ್ದು. ಪತ್ರಿಕಾರಂಗವನ್ನು ರಾಷ್ಟ್ರೀಯ ಚಳವಳಿ ಅತ್ಯಂತ ಸಮರ್ಪಕವಾಗಿ ಬಳಸಿಕೊಂಡಿತು ಎಂದರು.

    ಜರ್ನಲಿಸ್ಟ್ ಆ್ಯಕ್ಟಿವಿಸ್ಟ್ ಕೂಡ ಹೌದು ಎಂದು ಹೇಳಿದ ಅವರು ಇದನ್ನು ಗಮನದಲ್ಲಿಟ್ಟುಕೊಂಡು ಕಾರ್ಯನಿರ್ವಹಿಸುವ ಕೆಲಸವನ್ನು ಮಾಧ್ಯಮ ಪ್ರತಿನಿಧಿಗಳು ಮಾಡಬೇಕು ಎಂದರು.

    ನಮ್ಮ ಸಾಮಾಜಿಕ ವ್ಯವಸ್ಥೆಯಲ್ಲಿರುವ ಅನಿಷ್ಠಗಳ ಕುರಿತು ಆಡಳಿತ ವ್ಯವಸ್ಥೆ ಎಚ್ಚರಿಸುವುದು ಮತ್ತು ಲಿಂಗ ಸಮಾನತೆ ಕುರಿತು ತಿಳಿಸುವ ಕೆಲಸವನ್ನು ಮಾಧ್ಯಮಗಳು ಮಾಡಬೇಕು. ಜನಪರ ದೃಷ್ಟಿಕೋನವನ್ನಿಟ್ಟುಕೊಂಡು ಕಾರ್ಯನಿರ್ವಹಿಸುವುದು ನಮ್ಮ ಆದ್ಯತೆಯಾಗಬೇಕು ಎಂದರು.

    ಗೌರವ ಉಪಸ್ಥಿತರಿದ್ದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತರಾದ ಡಾ.ಪಿ.ಎಸ್.ಹರ್ಷ ಅವರು ಮಾತನಾಡಿ, ನೈತಿಕತೆ, ಮೌಲ್ಯಗಳನ್ನು ಉಳಿಸಿ ಬೆಳೆಸುವ ಮತ್ತು ಮುಂದಿನ ಪೀಳಿಗೆಗೆ ತಿಳಿಸುವ ಮಹತ್ತರ ಜವಾಬ್ದಾರಿ ಮಾಧ್ಯಮಗಳ ಮೇಲಿದೆ ಎಂದರು.

    ಸದೃಢ ರಾಷ್ಟ್ರನಿರ್ಮಾಣದಲ್ಲಿ ಮಾಧ್ಯಮಗಳ ಪಾತ್ರ ಅತ್ಯಂತ ಪ್ರಮುಖವಾಗಿದೆ ಎಂದು ಹೇಳಿದ ಅವರು ಮಾಧ್ಯಮಗಳ ಜವಾಬ್ದಾರಿ ಮತ್ತು ಅಲ್ಲಿನ ಒತ್ತಡದ ಕುರಿತು ತಿಳಿಸುವುದರ ಜೊತೆಗೆ ಇಲಾಖೆಯ ಜನಪದ ಮತ್ತು ಮಾರ್ಚ್ ಆಫ್ ಕರ್ನಾಟಕ ಮಾಸಿಕ ಪತ್ರಿಕೆಗಳ ಸಂಪಾದಕರಾಗಿ ಗುಣಮಟ್ಟದ ಮಾಸಿಕ ಪತ್ರಿಕೆ ಹೊರತರುವಲ್ಲಿ ವಹಿಸುವ ಶ್ರಮ ಮತ್ತು ಅನುಭವಗಳನ್ನು ಬಿಚ್ಚಿಟ್ಟರು. ಇದನ್ನೂ ಓದಿ: ‘ನಾನು ಮೋದಿ ಭಕ್ತ’ ಎಂದು ಬಹಿರಂಗವಾಗಿ ಘೋಷಿಸಿದ ನಟ ಅನಂತ್ ನಾಗ್

    ಖ್ಯಾತ ಚಲನಚಿತ್ರ ನಟ ಅನಂತನಾಗ್ ಅವರು ಪ್ರಧಾನ ಭಾಷಣ ಮಾಡಿದರು. ಕರ್ನಾಟಕ ಮಾಧ್ಯಮ ಅಕಾಡೆಮಿ ಅಧ್ಯಕ್ಷ ಸದಾಶಿವ ಶೆಣೈ ಕೆ. ಅಧ್ಯಕ್ಷತೆ ವಹಿಸಿದ್ದರು.

    ಈ ಸಂದರ್ಭದಲ್ಲಿ ಕರ್ನಾಟಕ ಮಾಧ್ಯಮ ಅಕಾಡೆಮಿ ಕಾರ್ಯದರ್ಶಿಗಳಾದ ಸಿ.ರೂಪಾ, ಸದಸ್ಯರಾದ ಶಿವಾನಂದ ತಗಡೂರು, ಕೆ.ಕೆ.ಮೂರ್ತಿ, ಶಿವಕುಮಾರ್ ಬೆಳ್ಳಿತಟ್ಟೆ, ಕೂಡ್ಲಿ ಗುರುರಾಜ್, ಗೋಪಾಲ್ ಯಡಗೆರೆ, ಸಿ.ಕೆ.ಮಹೇಂದ್ರ, ಜಗನ್ನಾಥ ಬಾಳ, ಕೆ.ವಿ.ಶಿವಕುಮಾರ, ದೇವಿಂದ್ರಪ್ಪ ಕಪನೂರು, ನಾಗಾರ್ಜುನ ದ್ವಾರಕನಾಥ, ಲಕ್ಷ್ಮೀನಾರಾಯಣ ಎಸ್., ಬದ್ರುದ್ದೀನ್ ಕೆ., ಕೆ.ಎಂ.ಶಿವರಾಜು ಸೇರಿದಂತೆ ಹಿರಿಯ ಪತ್ರಕರ್ತರು ಇದ್ದರು.

    Live Tv
    [brid partner=56869869 player=32851 video=960834 autoplay=true]

  • ಗ್ರಾಮ ಪಂಚಾಯ್ತಿ ಕಚೇರಿಯಲ್ಲೇ ಪಿಡಿಒಗೆ ಕಿಸ್ ಕೊಟ್ಟ ಸದಸ್ಯ!

    ಗ್ರಾಮ ಪಂಚಾಯ್ತಿ ಕಚೇರಿಯಲ್ಲೇ ಪಿಡಿಒಗೆ ಕಿಸ್ ಕೊಟ್ಟ ಸದಸ್ಯ!

    ತುಮಕೂರು: ಇಲ್ಲಿನ ಚಿಕ್ಕನಾಯಕನಹಳ್ಳಿ ತಾಲೂಕಿನ ಜೆಸಿ ಪುರ ಗ್ರಾಮ ಪಂಚಾಯಿತಿ ಕಚೇರಿಯಲ್ಲೇ ಸದಸ್ಯನೊಬ್ಬ ಪಿಡಿಒಗೆ ಮುತ್ತು ಕೊಟ್ಟಿರುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

    ಸಚಿವ ಮಾಧುಸ್ವಾಮಿ ಅವರ ತವರು ಕ್ಷೇತ್ರದಲ್ಲಿ ಘಟನೆ ನಡೆದಿದೆ. ಗ್ರಾಮ ಪಂಚಾಯಿತಿ ಸದಸ್ಯ ಪ್ರಸನ್ನ, ಪಿಡಿಒ ಕೋಕಿಲಾ ಅವರಿಗೆ ಕಚೇರಿಯಲ್ಲೇ ಪಿಡಿಒ ಕೈ ಹಿಡಿದು ಚುಂಬಿಸಿದ್ದಾರೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇದನ್ನೂ ಓದಿ: 48 ವರ್ಷಗಳ ಹಿಂದೆ ಹೀಗಿತ್ತು ನನ್ನ ರೆಸ್ಯೂಮ್ – ಉದ್ಯೋಗಾಕಾಂಕ್ಷಿಗಳಿಗೆ ಆತ್ಮವಿಶ್ವಾಸ ತುಂಬಿದ ಬಿಲ್‌ಗೇಟ್ಸ್

    ಮತ್ತೊಂದು ದೃಶ್ಯದಲ್ಲಿ ಪಿಡಿಒ ಅವರ ಕೈ ಹಿಡಿದುಕೊಂಡು ಬಲವಂತವಾಗಿ ಎಳೆದಾಡಿ ಮುತ್ತುಕೊಟ್ಟಿದ್ದಾನೆ. ಕೆಲ ದಿನಗಳ ಹಿಂದೆ ಘಟನೆ ನಡೆದಿದ್ದು ತಳವಾಗಿ ಬೆಳಕಿಗೆ ಬಂದಿದೆ. ಸದ್ಯ ವೀಡಿಯೋ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಸಾರ್ವಜನಿಕರಿಂದಲೂ ಆಕ್ಷೇಪ ವ್ಯಕ್ತವಾಗುತ್ತಿದೆ.

    Live Tv

  • ವಿವಾಹ ನೋಂದಣಿಯಂತೆ ಮತಾಂತರ ನೋಂದಣಿ ಮಾಡೋ ಚಿಂತನೆ ನಡೆದಿದೆ: ಮಾಧುಸ್ವಾಮಿ

    ವಿವಾಹ ನೋಂದಣಿಯಂತೆ ಮತಾಂತರ ನೋಂದಣಿ ಮಾಡೋ ಚಿಂತನೆ ನಡೆದಿದೆ: ಮಾಧುಸ್ವಾಮಿ

    ತುಮಕೂರು: ವಿವಾಹ ನೋಂದಣಿ ಮಾಡುವಂತೆ ಮತಾಂತರವನ್ನು ಕೂಡ ನೋಂದಣಿ ಮಾಡುವಂತಹ ಪದ್ಧತಿಯನ್ನು ಮತಾಂತರ ನಿಷೇಧ ಕಾಯ್ದೆಯಲ್ಲಿ ತರುವ ಚಿಂತನೆ ನಡೆದಿದೆ ಎಂದು ಕಾನೂನು ಮತ್ತು ಸಂಸದೀಯ ಸಚಿವ ಜೆ.ಸಿ.ಮಾಧುಸ್ವಾಮಿ ಸ್ಪಷ್ಟಪಡಿಸಿದ್ದಾರೆ.

    ಚಿಕ್ಕನಾಯಕನಹಳ್ಳಿ ತಾಲೂಕಿನ ಜೆ.ಸಿ.ಪುರದಲ್ಲಿ ಮಾತನಾಡಿದ ಅವರು, ಮದುವೆ ನೋಂದಣಿ ಪ್ರಕ್ರಿಯೆಯಲ್ಲಿ ಹೇಗೆ ನೋಟಿಸ್ ಬೋರ್ಡಿಗೆ ವಿವಾಹಿತರ ವಿವರ ಹಾಕುತ್ತೇವೆಯೋ ಹಾಗೆಯೇ ಮತಾಂತರಗೊಂಡವರ ವಿವರವನ್ನೂ ನೋಟಿಸ್ ಬೋರ್ಡ್‍ಗೆ ಹಾಕಿ ಆಕ್ಷೇಪಣೆಗೆ ಸಮಯವಕಾಶ ಕೊಡಲಾಗುತ್ತದೆ. ಯಾವುದೇ ಆಕ್ಷೇಪಣೆ ಇಲ್ಲದಿದ್ದರೆ ಅಂಥವರ ಅರ್ಜಿಯನ್ನು ಪುರಸ್ಕರಿಸಲಾಗುತ್ತದೆ ಎಂದು ಹೇಳಿದರು.

    ಯಾರಿಗೂ ನೋವು ಆಗದ, ಅಡಚಣೆ ಆಗದ ರೀತಿಯಲ್ಲಿ ಕಾಯ್ದೆ ಇರಬೇಕು ಎಂದು ಯೋಚಿಸಿದ್ದೇನೆ. ಆ ನಿಟ್ಟಿನಲ್ಲಿ ಪರಾಮರ್ಶೆ ನಡೆದಿದೆ. ಬಲವಂತ ಹಾಗೂ ಆಮಿಷ ಒಡ್ಡಿ ಮಾಡುವ ಮತಾಂತರ ಈಗಾಗಲೇ ನಿಷೇಧ ಇದ್ದು, ಮತಾಂತರ ಮಾಡಿದವರಿಗೆ ಯಾವ ರೀತಿಯ ಶಿಕ್ಷೆ ಆಗಬೇಕು ಅನ್ನೋದು ಚರ್ಚೆ ನಡೆಯಬೇಕಿದೆ ಎಂದು ತಿಳಿಸಿದರು. ಇದನ್ನೂ ಓದಿ: ವೇದಿಕೆ ಮೇಲೆ ಕಣ್ಣೀರಿಟ್ಟ ಮಾಧುಸ್ವಾಮಿ

    ಸ್ವಯಂಪ್ರೇರಿತ ಮತಾಂತರಕ್ಕೂ ರೂಪುರೇಷೆ ಸಿದ್ಧಗೊಳ್ಳುತಿದ್ದು, ಮತಾಂತರ ಆಗುವವನೂ ಅರ್ಜಿ ಸಲ್ಲಿಸುವ ವ್ಯವಸ್ಥೆ ಜಾರಿಯಾಗಲಿದೆ. ಬಲವಂತದ ಮತಾಂತರ ಅಲ್ಲ ಎಂದು ತಿಳಿದ ಮೇಲೆ ಜಿಲ್ಲಾಧಿಕಾರಿಗಳು ಮತಾಂತರದ ಅರ್ಜಿ ಪುರಸ್ಕರಿಸಬಹುದಾಗಿದೆ. ಜೊತೆಗೆ ಒಮ್ಮೆ ಮತಾಂತರಗೊಂಡ ವ್ಯಕ್ತಿ ಮೂಲ ಜಾತಿ, ಧರ್ಮವನ್ನು ಕಳೆದುಕೊಳ್ಳುತ್ತಾನೆ ಎಂದು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಪಾಕಿಸ್ತಾನದ ವಿರುದ್ಧ ಭಾರತ ಯುದ್ಧವನ್ನೂ ಗೆಲ್ಲಲಿದೆ: ರಾಜನಾಥ್ ಸಿಂಗ್

    ಪರಿಶಿಷ್ಠ ಜಾತಿ ವ್ಯಕ್ತಿ ಕ್ರಿಶ್ಚಿಯನ್ ಗೆ ಮತಾಂತರಗೊಂಡರೆ, ಆತ ಅಲ್ಪಸಂಖ್ಯಾತ ಎಂದಾಗುತ್ತದೆ. ಆತನ ಮೂಲ ಜಾತಿ ಪ್ರಮಾಣ ಪತ್ರ ಬದಲಾಗುತ್ತದೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಇದನ್ನೂ ಓದಿ: 24 ಗಂಟೆಯಲ್ಲಿ ಬರೋಬ್ಬರಿ 10 ಡೋಸ್ ಕೋವಿಡ್ ಲಸಿಕೆ ಪಡೆದ ಭೂಪ!

  • ವೇದಿಕೆ ಮೇಲೆ ಕಣ್ಣೀರಿಟ್ಟ ಮಾಧುಸ್ವಾಮಿ

    ವೇದಿಕೆ ಮೇಲೆ ಕಣ್ಣೀರಿಟ್ಟ ಮಾಧುಸ್ವಾಮಿ

    ತುಮಕೂರು: ಗಟ್ಟಿ ಸ್ವಭಾವದ ಸಚಿವ ಮಾಧುಸ್ವಾಮಿ ಅವರ ಕಣ್ಣಂಚಲಿ ಇಂದು ಕಣ್ಣೀರು ಬಂದಿದೆ. ಚಿಕ್ಕನಾಯಕನಹಳ್ಳಿ ತಾಲೂಕಿನ ಕೆರೆಗಳಿಗೆ ನೀರು ಹರಿಸುವ ಎತ್ತಿನಹೊಳೆ ಯೋಜನೆ ಕನಸು ಸಾಕಾರಗೊಂಡ ಹಿನ್ನೆಲೆಯಲ್ಲಿ ಧನ್ಯತಾಭಾವದಿಂದ ಮಾಧುಸ್ವಾಮಿ ಗದ್ಗದಿತರಾಗಿ ಕಣ್ಣೀರು ಹಾಕಿದ್ದಾರೆ.

    ಸ್ವಗ್ರಾಮ ಜೆ.ಸಿ.ಪುರದಲ್ಲಿ 121 ಕೆರೆಗಳಿಗೆ ನೀರುಹರಿಸುವ 250 ಕೋಟಿ ರೂ ಕಾಮಗಾರಿಗೆ ಚಾಲನೆ ಕೊಟ್ಟು ಮಾತನಾಡುತ್ತಾ ಕೊಟ್ಟ ಮಾತನ್ನು ಉಳಿಸಿಕೊಂಡ ಧನ್ಯತಾಭಾವದಿಂದ ಆನಂದಭಾಷ್ಪ ಸುರಿಸಿದರು. ಮೊನ್ನೆ ದಿನ ದಾರಿಯಲ್ಲಿ ಒಬ್ಬ ವೃದ್ದೆ ಸಿಕ್ಕಿ ” ಏನಪ್ಪಾ ನಿನ್ನ ಬಾಯಿ, ಅದ್ಯಾವ್ ಬಾಯಲ್ಲಿ ಅಂದಿದ್ಯೋ ಎಲ್ಲಾ ಕೆರೆ ತುಂಬಿಸ್ತಿನಿ ಅಂತಾ, ಮಳೆನೇ ಬಂದು ಎಲ್ಲಾ ಕೆರೆನೆ ತುಂಬಿ ಹೋಯ್ತು” ಅಂದ್ಳು. ಆ ಮಹಾತಾಯಿ ಹಾರೈಕೆ ಕಂಡು ನನ್ನ ಮನಸ್ಸು ತುಂಬಿ ಬಂತು. ನಾನು ಕ್ಷೇತ್ರದ ಜನತೆಗೆ ಕೊಟ್ಟ ಮಾತನ್ನು ನೆರವೇರಿಸಿ ನಾಲಿಗೆ ಉಳಿಸಿಕೊಳ್ಳಬೇಕು ಎಂದರೆ ಎತ್ತಿನಹೊಳೆಯಿಂದ ಕೆರೆಗಳಿಗೆ ನೀರನ್ನು ಹರಿಸಬೇಕು ತಾಯಿ ಎಂದಿದ್ದೆ. ಆ ಕನಸು ಇಂದು ನೆರವೇರಿಸಿದೆ ಎಂದು ನೆನಪಿಸಿಕೊಂಡು ಭಾವುಕರಾದರು.

    ಎತ್ತಿನಹೊಳೆ ಯೋಜನೆಯಿಂದ ಚಿಕ್ಕನಾಯಕನಹಳ್ಳಿ ತಾಲೂಕಿನ 131 ಕೆರೆಗಳಿಗೆ 0.98 ಟಿ.ಎಮ್.ಸಿ ನೀರನ್ನು ಹರಿಸಲಾಗುವುದು. ಮುಂದಿನ ಒಂದು ವರ್ಷದಲ್ಲಿ ಈ ಯೋಜನೆ ಪೂರ್ಣಗೊಂಡು ನೀರುಹರಿಸುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

  • ಶಾಲಾ ಕಟ್ಟಡ ನಿರ್ಮಾಣಕ್ಕೆ ಅಡ್ಡಿ – ಕ್ರೀಡಾಪಟುಗಳ ಮೇಲೆ ಮಾಧುಸ್ವಾಮಿ ಗರಂ

    ಶಾಲಾ ಕಟ್ಟಡ ನಿರ್ಮಾಣಕ್ಕೆ ಅಡ್ಡಿ – ಕ್ರೀಡಾಪಟುಗಳ ಮೇಲೆ ಮಾಧುಸ್ವಾಮಿ ಗರಂ

    ತುಮಕೂರು: ಶಾಲಾ ಕಟ್ಟಡ ನಿರ್ಮಾಣಕ್ಕೆ ಕ್ರೀಡಾಪಟುಗಳು ಅಡ್ಡಿ ಮಾಡಿದ್ದು, ಈ ಪರಿಣಾಮ ಅವರ ಮೇಲೆ ಕಾನೂನು ಸಚಿವ ಜೆ.ಸಿ ಮಾಧುಸ್ವಾಮಿ ಗರಂ ಆದ ಪ್ರಸಂಗ ತುಮಕೂರಿನಲ್ಲಿ ನಡೆದಿದೆ.

    ಚಿಕ್ಕನಾಯಕನಹಳ್ಳಿ ತಾಲೂಕಿನ ಹುಳಿಯಾರು ಪಟ್ಟಣದಲ್ಲಿ ಶಾಲಾ ಕಟ್ಟಡ ಶಂಕುಸ್ಥಾಪನೆಗೆಂದು ಮಾಧುಸ್ವಾಮಿ ಅವರು ಆಗಮಿಸಿದ್ದು, ಈ ವೇಳೆ ಇಲ್ಲಿ ಶಾಲಾ ಕಟ್ಟಡ ಬೇಡ, ಬೇರೆ ಜಾಗದಲ್ಲಿ ನಿರ್ಮಿಸಿ ಎಂದು ಕ್ರೀಡಾಪಟುಗಳು ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಜಾತಿಗಣತಿ ವರದಿ ಬಹಿರಂಗ ಆಗಬೇಕು: ಜಿ.ಪರಮೇಶ್ವರ್

    ಇಡೀ ಪಟ್ಟಣಕ್ಕೆ ಇದೊಂದೇ ದೊಡ್ಡ ಮೈದಾನ ಇರುವುದು. ಇಲ್ಲಿ ಕಟ್ಟಡ ನಿರ್ಮಿಸಿದರೆ ಇತರೆ ಕ್ರೀಡಾ ಚಟುವಟಿಕೆಗಳಿಗೆ ತೊಂದರೆಯಾಗುತ್ತೆ ಎಂದು ಕ್ರೀಡಾಪಟುಗಳು ಸಚಿವರಲ್ಲಿ ಮನವಿ ಮಾಡಿಕೊಂಡಿದ್ದಾರೆ. ಕಳೆದ ಒಂದು ವರ್ಷದಿಂದಲೂ ಕಟ್ಟಡ ನಿರ್ಮಾಣಕ್ಕೆ ಅಡ್ಡಿ ಮಾಡುತ್ತಾ ಬಂದಿದ್ದ ಸ್ಥಳೀಯ ಕ್ರೀಡಾಪಟುಗಳು, ಶಂಕುಸ್ಥಾಪನೆಗೆ ಬಂದಿದ್ದ ಮಾಧುಸ್ವಾಮಿ ಅವರಿಗೂ ಅಡ್ಡಿ ಪಡಿಸಿದ್ದಾರೆ. ಇದನ್ನೂ ಓದಿ: ಹಳೆ ಬೆಳೆ ಕೊಚ್ಚಿ ಹೋಯ್ತು – ಹೊಸ ಬೆಳೆ ಬಿತ್ತನೆಗೆ ಪರದಾಡುತ್ತಿದ್ದಾರೆ ರೈತರು

    ಈ ವೇಳೆ ಸಿಟ್ಟಾದ ಸಚಿವ ಮಾಧುಸ್ವಾಮಿ, ಒಂದು ವರ್ಷದಿಂದಲೂ ಹೀಗೆ ಸಮಸ್ಯೆ ಮಾಡಿಕೊಂಡು ಬಂದಿದ್ದೀರಿ. ಇದು ಶಾಲಾ ಆವರಣ, ಮಕ್ಕಳಿಗೆಂದು ಇರುವುದು, ಮಕ್ಕಳ ಆಟದ ಮೈದಾನ ಇದು. ಶಾಲೆ ಉದ್ದೇಶಕ್ಕೆ ಬಳಕೆಯಾಗಬೇಕು ಎಂದು ಕ್ರೀಡಾಪಟುಗಳನ್ನು ತರಾಟೆಗೆ ತೆಗೆದುಕೊಂಡರು.

  • ಗಲಭೆಕೋರರಿಂದಲೇ ಆಸ್ತಿ ನಷ್ಟ ವಸೂಲಿಯ ಕಾನೂನಿದೆ: ಮಾಧುಸ್ವಾಮಿ

    ಗಲಭೆಕೋರರಿಂದಲೇ ಆಸ್ತಿ ನಷ್ಟ ವಸೂಲಿಯ ಕಾನೂನಿದೆ: ಮಾಧುಸ್ವಾಮಿ

    ತುಮಕೂರು: ಗಲಭೆಕೋರರಿಂದಲೇ ಆಸ್ತಿ ನಷ್ಟ ವಸೂಲಿ ಮಾಡಬೇಕು ಎಂಬ ಕಾನೂನನ್ನು ಕೇಂದ್ರ ಸರ್ಕಾರ ತಂದಿದೆ. ಆದರೆ ಕರ್ನಾಟಕದಲ್ಲಿ ಅದು ಜಾರಿ ಆಗಿರಲಿಲ್ಲ ಎಂದು ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಸ್ಪಷ್ಟಪಡಿಸಿದ್ದಾರೆ.

    ನಗರದಲ್ಲಿ ಮಾಧ್ಯಮ ದವರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಆಸ್ತಿ ಮುಟ್ಟುಗೋಲು ಆಗುವಂತಹ ಪ್ರಕರಣಗಳು ಇನ್ನೂ ಆಗಿರಲಿಲ್ಲ. ಹೀಗಾಗಿ ಆ ಕಾನೂನು ರಾಜ್ಯದಲ್ಲಿ ಇನ್ನೂ ಜಾರಿ ಆಗಿರಲಿಲ್ಲ. ಡಿಜೆ ಹಳ್ಳಿ ಪ್ರಕರಣದಲ್ಲಿ ಗಲಭೆಕೋರರಿಂದ ಆಸ್ತಿ ನಷ್ಟ ವಸೂಲಿ ಮಾಡುವ ಬಗ್ಗೆ ಸಿಎಂ ಬಳಿ ಚರ್ಚಿಸಬೇಕಾಗಿದೆ. ಸಿಎಂ ಕ್ವಾರಂಟೆನ್ ನಲ್ಲಿದ್ದಾರೆ. ಅವರ ಕ್ವಾರಂಟೈನ್ ಅವಧಿ ಮುಗಿದ ಬಳಿಕ ಸಭೆ ಮಾಡಿ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದರು.

    ಎಸ್‍ಡಿಪಿಐ, ಪಿಎಫ್‍ಐ ಸಂಘಟನೆಗಳ ನಿಷೇಧದ ಕುರಿತು ಮಾತನಾಡಿದ ಅವರು, ಕಾನೂನಿನ ಕ್ರಮ ಏನಿದೆಯೋ ಅದನ್ನು ಖಂಡಿತ ಜಾರಿ ಮಾಡುತ್ತೇವೆ. ಆದರೆ ತನಿಖಾ ವರದಿ ಬರದೇ ಪ್ರತಿಕ್ರಿಯಸಲು ಸಾಧ್ಯವಿಲ್ಲ. ಮೂರು ಸಾವಿರ ಜನ ಸೇರ್ತಾರೆ ಅಂದ್ರೆ ಪ್ರಚೋದನೆ ಇಲ್ಲದೆ, ಪ್ಲಾನ್ ಇಲ್ಲದೆ, ಸಂಘಟನೆ ಇಲ್ಲದೆ ಮಾಡಲು ಸಾಧ್ಯವಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.

  • ನಾನು ಸಚಿವ ಸ್ಥಾನ ತ್ಯಾಗಕ್ಕೆ ಸಿದ್ಧ: ಜೆ.ಸಿ ಮಾಧುಸ್ವಾಮಿ

    ನಾನು ಸಚಿವ ಸ್ಥಾನ ತ್ಯಾಗಕ್ಕೆ ಸಿದ್ಧ: ಜೆ.ಸಿ ಮಾಧುಸ್ವಾಮಿ

    ತುಮಕೂರು: ಸರ್ಕಾರ ಮತ್ತು ಪಕ್ಷಕ್ಕೆ ಒಳ್ಳೆಯದಾಗುತ್ತದೆ ಎಂದರೆ ನಾನು ನನ್ನ ಸಚಿವ ಸ್ಥಾನ ತ್ಯಜಿಸಲು ಸಿದ್ಧ ಎಂದು ಕಾನೂನು ಸಚಿವ ಜೆ.ಸಿ ಮಾಧುಸ್ವಾಮಿ ಪ್ರತಿಕ್ರಿಯಿಸಿದ್ದಾರೆ.

    ತುಮಕೂರಿನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ರಾಜ್ಯಕ್ಕೆ ಒಳ್ಳೆಯ ಸರ್ಕಾರ ಸಿಗಲಿ ಎನ್ನುವ ಅಪೇಕ್ಷೆ ನನ್ನದು. ಈ ಹಿನ್ನೆಲೆಯಲ್ಲಿ ಪಕ್ಷ ಮತ್ತು ಸರ್ಕಾರಕ್ಕೆ ಒಳ್ಳೆಯದಾಗುತ್ತದೆ ಎಂದರೆ ಸರ್ವ ತ್ಯಾಗಕ್ಕೂ ಸಿದ್ಧ. ಬೇಕಾದರೆ ಶಾಸಕ ಸ್ಥಾನನೂ ಬಿಡುತ್ತೇನೆ. ಅಲ್ಲದೇ ನನ್ನನ್ನು ಸಚಿವ ಸ್ಥಾನದಿಂದ ಕೈ ಬಿಟ್ಟರೂ ಇನ್ನಷ್ಟು ಹರ್ಷವಾಗಲಿದೆ ಎಂದರು.

    ಮಾರ್ಚ 2ರಿಂದ ಮಾರ್ಚ್ ಅಂತ್ಯದವರೆಗೆ ವಿಧಾನಸಭಾ ಅಧಿವೇಶನ ನಿಗದಿಯಾಗಿದ್ದು, ಮಾರ್ಚ 5ರಂದು ಮುಖ್ಯಮಂತ್ರಿಗಳು ಬಜೆಟ್ ಮಂಡನೆ ಮಾಡಲಿದ್ದಾರೆ. ಅಲ್ಲದೆ ಈ ಬಾರಿ ಯಾವುದೇ ಬಿಲ್ ಇದ್ದರೂ ಆರಂಭದಲ್ಲೇ ಮಂಡನೆ ಮಾಡಿ, ಕೆಲ ದಿನ ಬಿಟ್ಟು ಚರ್ಚೆಗೆ ಅವಕಾಶ ಮಾಡಿಕೊಡಲಾಗುವುದು. ಇದರಿಂದ ಬಿಲ್‍ನ್ನು ಓದಿಕೊಂಡು ಬರಲು ಶಾಸಕರುಗಳಿಗೆ ಅನುಕೂಲವಾಗಲಿದೆ ಎಂದು ತಿಳಿಸಿದರು.