Tag: Jayashree Ramaiah

  • ತಿಂಗಳ ಹಿಂದೆಯಷ್ಟೇ ವೃದ್ಧಾಶ್ರಮ ಸೇರಿದ್ದ ಜಯಶ್ರೀ!

    ತಿಂಗಳ ಹಿಂದೆಯಷ್ಟೇ ವೃದ್ಧಾಶ್ರಮ ಸೇರಿದ್ದ ಜಯಶ್ರೀ!

    ಬೆಂಗಳೂರು: ಹಲವು ಬಾರಿ ಆತ್ಮಹತ್ಯೆ ಮಾಡಿಕೊಳ್ಳುವ ಮಾತುಗಳನ್ನಾಡಿದ್ದ ಬಿಗ್ ಬಾಸ್ ಸೀಸನ್ 3ರ ಸ್ಪರ್ಧಿ ಜಯಶ್ರೀ ರಾಮಯ್ಯ ಕೊನೆಗೂ ಸಾವಿನ ಮನೆಯ ಕದ ತಟ್ಟಿದ್ದಾರೆ.

    ಹೌದು. ನಟಿ ಜಯಶ್ರೀ ಅವರು ಮಾಗಡಿ ಮುಖ್ಯರಸ್ತೆಯಲ್ಲಿರುವ ಸಂಧ್ಯಾಕಿರಣ ವೃದ್ಧಾಶ್ರಮದಲ್ಲಿ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಜಯಶ್ರೀ ತಿಂಗಳ ಹಿಂದೆ ಅಂದ್ರೆ 2020ರ ಡಿಸೆಂಬರ್ 25ರಂದು ವೃದ್ಧಾಶ್ರಮ ಸೇರಿದ್ದು, ಮಾವ ಗಿರೀಶ್ ದಾಖಲಿಸಿದ್ದರು ಎಂಬ ಮಾಹಿತಿ ಲಭ್ಯವಾಗಿದೆ. ಹೀಗಾಗಿ ಇದೀಗ ನಟಿ ವೃದ್ಧಾಶ್ರಮ ಸೇರಿದ್ದು ಯಾಕೆ ಎಂಬ ಪ್ರಶ್ನೆ ಎದ್ದಿದೆ. ಅಲ್ಲದೆ ನಟಿ ಸಾವಿನ ಹಿಂದೆ ಹಲವು ಅನುಮಾನಗಳು ಎದ್ದಿವೆ.

    ನಿನ್ನೆ ರಾತ್ರಿ ಊಟ ಮುಗಿಸಿ ಜಯಶ್ರೀ ಕೋಣೆ ಸೇರಿದ್ದರು. ನಂತರ ಹೊರಗೆ ಬಂದಿಲ್ಲ. ಈ ಹಿನ್ನೆಲೆಯಲ್ಲಿ ಅನುಮಾನಗೊಂಡು ಬಾಗಿಲು ಮುರಿದು ನೋಡಿದಾಗ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ಮಾನಸಿಕ ಖಿನ್ನತೆ ಹಾಗೂ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರು ಎಂದು ಹೇಳಲಾಗುತ್ತಿದ್ದು, ಇದೇ ಅವರು ಆತ್ಮಹತ್ಯೆ ಮಾಡಿಕೊಳ್ಳಲು ಕಾರಣವಾಯ್ತಾ ಎಂಬ ಅನುಮಾನ ಹುಟ್ಟಿದೆ.

    ಮಾದನಾಯಕನಹಳ್ಳಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ಬಿಗ್‍ಬಾಸ್ ಸ್ಪರ್ಧಿ ಜಯಶ್ರೀ ಆತ್ಮಹತ್ಯೆಗೆ ಶರಣು

  • ‘ಸುದೀಪ್ ಸರ್ ನೀವು ನನ್ನ ಬದುಕಿಸಿದ್ದೀರಿ’ – ಕಿಚ್ಚನಿಗೆ ಜಯಶ್ರೀ ಧನ್ಯವಾದ

    ‘ಸುದೀಪ್ ಸರ್ ನೀವು ನನ್ನ ಬದುಕಿಸಿದ್ದೀರಿ’ – ಕಿಚ್ಚನಿಗೆ ಜಯಶ್ರೀ ಧನ್ಯವಾದ

    ಬೆಂಗಳೂರು: ಇತ್ತೀಚೆಗೆ ‘ಬಿಗ್‍ಬಾಸ್ ಸೀಸನ್ 3’ ರಲ್ಲಿ ಸ್ಪರ್ಧಿಯಾಗಿದ್ದ ಜಯಶ್ರೀ ರಾಮಯ್ಯ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುವ ಮೂಲಕ ಗೊಂದಲ ಸೃಷ್ಟಿಸುತ್ತಿದ್ದಾರೆ. ಇದೀಗ ಕಿಚ್ಚ ಸುದೀಪ್ ಅವರಿಗೆ ಧನ್ಯವಾದ ತಿಳಿಸಿದ್ದಾರೆ.

    ನಟಿ ಜಯಶ್ರೀ ಫೇಸ್‍ಬುಕ್‍ನಲ್ಲಿ ಬರೆದುಕೊಳ್ಳುವ ಮೂಲಕ ಸುದೀಪ್ ಅವರಿಗೆ ಧನ್ಯವಾದ ತಿಳಿಸಿದ್ದಾರೆ. “ನಿಮ್ಮ ಕಾಳಜಿಗೆ ಧನ್ಯವಾದಗಳು ಸುದೀಪ್ ಸರ್. ನೀವು ನನ್ನನ್ನು ಬದುಕಿಸಿದ್ದೀರಿ. ಸುದೀಪ್ ಅವರ ತಂಡದ ಸದಸ್ಯರು, ನನ್ನ ಸ್ನೇಹಿತರು ಮತ್ತು ಅಭಿಮಾನಿಗಳನ್ನು ನಾನು ತುಂಬಾ ಪ್ರೀತಿಸುತ್ತೇನೆ. ನಿಮ್ಮನ್ನೆಲ್ಲ ಆತಂಕಗೊಳ್ಳುವಂತೆ ಮಾಡಿದ್ದಕ್ಕೆ ಕ್ಷಮಿಸಿ. ನಾನು ಮತ್ತೆ ಸಹಜ ಸ್ಥಿತಿಗೆ ಬಂದಿದ್ದೇನೆ. ಬೆಂಬಲ ನೀಡಿದ ಎಲ್ಲರಿಗೂ ಧನ್ಯವಾದಗಳು” ಎಂದು ಜಯಶ್ರೀ ಫೇಸ್‍ಬುಕ್‍ನಲ್ಲಿ ಬರೆದುಕೊಂಡಿದ್ದಾರೆ.

    ಇತ್ತೀಚೆಗೆ ಫೇಸ್‍ಬುಕ್‍ನಲ್ಲಿ ಕೆಲವು ನಿಮಿಷ ಲೈವ್ ಬಂದಿದ್ದ ಜಯಶ್ರೀ, “ಎಲ್ಲರಿಗೂ ಹಾಯ್, ನಾನು ಇದನ್ನು ಪಬ್ಲಿಸಿಟಿಗೋಸ್ಕರ ಮಾಡುತ್ತಿಲ್ಲ. ನನಗೆ ಸುದೀಪ್ ಸರ್ ಅವರಿಂದ ಒಂದು ರೂಪಾಯಿಯಷ್ಟು ಆರ್ಥಿಕ ಸಹಾಯದ ನಿರೀಕ್ಷೆ ಇಲ್ಲ. ನನಗೆ ಬೇಕಾಗಿರುವುದು ಒಂದೇ ನನ್ನ ಸಾವು. ನಾನು ತುಂಬಾ ಖಿನ್ನತೆಯಲ್ಲಿದ್ದೇನೆ, ಕುಟುಂಬದ ಸಮಸ್ಯೆಗಳನ್ನು ತಡೆದುಕೊಳ್ಳಲು ಆಗುತ್ತಿಲ್ಲ. ನಾನು ಆರ್ಥಿಕವಾಗಿ ಚೆನ್ನಾಗಿಯೇ ಇದ್ದೇನೆ. ಆದರೆ ನನಗೆಲ್ಲ ಎಲ್ಲವೂ ಮೋಸ ನಡೆದಿದೆ. ಚಿಕ್ಕ ವಯಸ್ಸಿನಲ್ಲಿ ನನಗೆ ಆಗಬಾರದ ಘಟನೆ ನಡೆದಿವೆ. ಅದನ್ನು ಮರೆಯಲು ಆಗುತ್ತಿಲ್ಲ” ಎಂದು ತಮ್ಮ ಅಳಲನ್ನು ಹೇಳಿಕೊಡಿದ್ದರು.

    ಅಲ್ಲದೇ “ಫೇಸ್‍ಬುಕ್‍ನಲ್ಲಿ ನನಗೆ ಬಂದಿರುವ ಕಮೆಂಟ್ಸ್ ನೋಡುತ್ತಿದ್ದೇನೆ. ನನ್ನ ಬಗ್ಗೆ ತುಂಬಾ ಕೆಟ್ಟದಾಗಿ ಮಾತನಾಡಿದ್ದಾರೆ. ಅದರ ಬಗ್ಗೆ ನಾನು ಮಾತನಾಡಲು ಇಷ್ಗಪಡುವುದಿಲ್ಲ. ನಾನೊಬ್ಬಳು ಲೂಸರ್, ನಾನು ಹುಚ್ಚಿ, ನಾನು ಸಾಯಬೇಕು ಎಂದುಕೊಂಡಿದ್ದೇನೆ. ನಾನು ಬಯಸುತ್ತಿರುವುದು ಒಂದೇ ನನ್ನ ಸಾವು. ಹೀಗಾಗಿ ನನಗೆ ದಯಾಮರಣ ನೀಡಿದರೆ ಸಾಕು. ನಾನು ಆರಾಮಾಗಿ ಇರುತ್ತೇನೆ. ನನಗೆ ದಯಾಮರಣ ನೀಡಿ. ನಾನು ಒಳ್ಳೆಯ ಹುಡುಗಿ ಅಲ್ಲ. ಪ್ಲೀಸ್ ಪ್ಲೀಸ್ ಎಂದು ಅವರು ಕಣ್ಣೀರಿಟ್ಟಿದ್ದರು. ನಂತರ ಈ ವಿಡಿಯೋವನ್ನು ಜಯಶ್ರೀ ಡಿಲೀಟ್ ಮಾಡಿದ್ದಾರೆ.

    ಇದಕ್ಕೂ ಮುನ್ನ ಫೇಸ್‍ಬುಕ್‍ನಲ್ಲಿ ‘ಖಿನ್ನತೆಗೆ ಹಾಗೂ ಈ ಜಗತ್ತಿಗೆ ವಿದಾಯ ಹೇಳುತ್ತಿದ್ದೇನೆ” ಎಂದು ಪೋಸ್ಟ್ ಮಾಡಿದ್ದರು. ಸ್ವಲ್ಪ ಸಮಯದ ನಂತರ ಆ ಪೋಸ್ಟನ್ನು ರಿಲೀಟ್ ಮಾಡಿ, “ನಾನು ಆರಾಮಾಗಿ, ಸುರಕ್ಷಿತವಾಗಿದ್ದೀನಿ’ ಎಂದು ಮತ್ತೆ ಪೋಸ್ಟ್ ಮಾಡಿದ್ದರು.

  • ‘ಈ ಖಿನ್ನತೆ, ಜಗತ್ತಿಗೆ ಗುಡ್ ಬೈ’ – ಬಿಗ್‍ಬಾಸ್ ಸ್ಪರ್ಧಿ ಜಯಶ್ರೀ ಪೋಸ್ಟ್

    ‘ಈ ಖಿನ್ನತೆ, ಜಗತ್ತಿಗೆ ಗುಡ್ ಬೈ’ – ಬಿಗ್‍ಬಾಸ್ ಸ್ಪರ್ಧಿ ಜಯಶ್ರೀ ಪೋಸ್ಟ್

    ಬೆಂಗಳೂರು: ‘ಬಿಗ್‍ಬಾಸ್ ಸೀಸನ್ 3’ ರಲ್ಲಿ ಸ್ಪರ್ಧಿಯಾಗಿದ್ದ ಜಯಶ್ರೀ ರಾಮಯ್ಯ “ಖಿನ್ನತೆಗೆ ಮತ್ತು ಈ ಜಗತ್ತಿಗೆ ಗುಡ್ ಬೈ” ಎಂದು ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಳ್ಳುವ ಮೂಲಕ ಆತಂಕ ಸೃಷ್ಟಿಸಿದ್ದರು. ಇದನ್ನೂ ಓದಿ: ಬಿಗ್‍ಬಾಸ್ ಸ್ಪರ್ಧಿ, ನಟಿ ಜಯಶ್ರೀಗೆ ಮಾವನಿಂದಲೇ ಕಿರುಕುಳ

    ನಟಿ ಜಯಶ್ರೀ ರಿಯಾಲಿಟಿ ಶೋ ಬಿಗ್‍ಬಾಸ್ ಮೂಲಕವೇ ಖ್ಯಾತಿ ಪಡೆದುಕೊಂಡಿದ್ದರು. ಆದರೆ ಇಂದು ಫೇಸ್‍ಬುಕ್‍ನಲ್ಲಿ “ಖಿನ್ನತೆಗೆ ಹಾಗೂ ಈ ಜಗತ್ತಿಗೆ ವಿದಾಯ ಹೇಳುತ್ತಿದ್ದೇನೆ” ಎಂದು ಪೋಸ್ಟ್ ಮಾಡಿದ್ದರು. ಜಯಶ್ರೀ ಟ್ವೀಟ್ ಕಂಡು ಆತಂಕಕ್ಕೆ ಒಳಗಾದ ಸ್ನೇಹಿತರು ಕೂಡಲೇ ಜಯಶ್ರೀ ಅವರನ್ನು ಸಂಪರ್ಕ ಮಾಡುವ ಪ್ರಯತ್ನ ಮಾಡಿದ್ದಾರೆ.

    ಅಲ್ಲದೇ ಮನೆಯ ಸಮೀಪ ಇರುವವರು ಕೂಡಲೇ ಹೋಗಿ ಅವರನ್ನು ಭೇಟಿ ಮಾಡಿ ಎಂದು ಸೋಶಿಯಲ್ ಮೀಡಿಯಾದಲ್ಲಿ ಮನವಿ ಮಾಡಿಕೊಂಡಿದ್ದರು. ನಂತರ ಸ್ನೇಹಿತರು ಜಯಶ್ರೀಗೆ ಧೈರ್ಯ ತುಂಬುವ ಕೆಲಸ ಮಾಡಿದ್ದಾರೆ. ಸದ್ಯಕ್ಕೆ ಜಯಶ್ರೀಯನ್ನು ಆಸ್ಪತ್ರೆಗೆ ದಾಖಲಿಸಿದ್ದು, ಸುರಕ್ಷಿತವಾಗಿದ್ದಾರೆ ಎಂದು ನಟಿ ಅಶ್ವಿತಿ ಶೆಟ್ಟಿ ಸ್ಪಷ್ಟಪಡಿಸಿದ್ದಾರೆ. ಜೊತೆಗೆ ನಟಿ ಜಯಶ್ರೀ ಕೂಡ, “ನಾನು ಆರಾಮಾಗಿ, ಸುರಕ್ಷಿತವಾಗಿದ್ದೀನಿ” ಎಂದು ಈಗ ಪೋಸ್ಟ್ ಮಾಡಿದ್ದಾರೆ.

    ನಟಿ ಜಯಶ್ರೀ ಕಳೆದ ಕೆಲವು ತಿಂಗಳಿನಿಂದ ಖಿನ್ನತೆಯಿಂದ ಬಳಲುತ್ತಿದ್ದಾರೆ ಎಂದು ತಿಳಿದು ಬಂದಿದೆ. ಕೌಟುಂಬಿಕ ಸಮಸ್ಯೆಯಿಂದಾಗಿ ನೊಂದಿದ್ದ ಜಯಶ್ರೀ ಇತ್ತೀಚೆಗೆ ತಾಯಿಯೊಂದಿಗೆ ಹೊಸ ಮನೆಯಲ್ಲಿ ವಾಸವಿದ್ದರು. ಆದರೆ ಹಲವು ಕಾರಣಕ್ಕೆ ವೈಯಕ್ತಿಕವಾಗಿ ಅವರು ಕುಗ್ಗಿದ್ದರು ಎನ್ನಲಾಗಿದೆ.

    ಈ ಹಿಂದೆ ನಟಿ ಜಯಶ್ರೀ ರಾಮಯ್ಯಗೆ ಸ್ವಂತ ಸೋದರಮಾವನೇ ಕಿರುಕುಳ ನೀಡಿದ್ದು, ನಡುರಾತ್ರಿ ಎಂಬುದನ್ನೂ ಲೆಕ್ಕಿಸದೆ ಮನೆಯಿಂದ ಹೊರಹಾಕಿದ್ದರು. ಈ ಕುರಿತು ನಟಿ ಜಯಶ್ರೀ ಚನ್ನಮ್ಮನಕೆರೆ ಅಚ್ಚುಕಟ್ಟು ಠಾಣೆಯಲ್ಲಿ ದೂರು ದಾಖಲಿಸಿದ್ದರು.