Tag: Jayanna films

  • ‘ಬ್ಯಾಡ್‌ ಮ್ಯಾನರ್ಸ್‌’ ರಿಲೀಸ್‌ಗೂ ಮೊದಲೇ ಹೊಸ ಚಿತ್ರ ಕೈಗೆತ್ತಿಕೊಂಡ ನಿರ್ದೇಶಕ ಸೂರಿ

    ‘ಬ್ಯಾಡ್‌ ಮ್ಯಾನರ್ಸ್‌’ ರಿಲೀಸ್‌ಗೂ ಮೊದಲೇ ಹೊಸ ಚಿತ್ರ ಕೈಗೆತ್ತಿಕೊಂಡ ನಿರ್ದೇಶಕ ಸೂರಿ

    ದುನಿಯಾ ಸೂರಿ ನಿರ್ದೇಶನದ ‘ಬ್ಯಾಡ್‌ ಮ್ಯಾನರ್ಸ್’ (Bad Manners)ಸಿನಿಮಾ ರಿಲೀಸ್‌ಗೂ ಮೊದಲೇ ಹೊಸ ಸಿನಿಮಾಗೆ ಸೂರಿ ಕೈಜೋಡಿಸಿದ್ದಾರೆ. ಇದೇ ಮೊದಲ ಬಾರಿಗೆ ಜಯಣ್ಣ ಫಿಲಂಸ್ ಜೊತೆ ನಿರ್ದೇಶಕ ಸೂರಿ ಸಿನಿಮಾ ಮಾಡಲು ಮುಂದಾಗಿದ್ದಾರೆ. ‘ಕಿಸ್’ (Kiss) ಹೀರೋ ವಿರಾಟ್‌ಗೆ ಸೂರಿ (Duniya Suri) ನಿರ್ದೇಶನ ಮಾಡ್ತಿದ್ದಾರೆ.

    ಜಯಣ್ಣ- ಬೋಗೇಂದ್ರ ಫಿಲಂಸ್ ಸಂಸ್ಥೆಯೊಂದಿಗೆ ಬಹು ಚಿತ್ರಗಳನ್ನ ಮಾಡಲು ನಟ ವಿರಾಟ್ ಸಹಿ ಮಾಡ್ತಿದ್ದಾರೆ. ಈ ಸಂಸ್ಥೆ ಜೊತೆ ದಿನಕರ್ ತೂಗುದೀಪ್ ನಿರ್ದೇಶನದ ‘ರಾಯಲ್’ (Royal) ಚಿತ್ರದಲ್ಲಿ ವಿರಾಟ್ ನಟನೆ ಮಾಡ್ತಿದ್ದಾರೆ. ಇದಾದ ಬಳಿಕ ವಿರಾಟ್‌ಗೆ ‘ಟಗರು’ ಖ್ಯಾತಿಯ ಸೂರಿ ಆ್ಯಕ್ಷನ್ ಕಟ್ ಹೇಳಲಿದ್ದಾರೆ.

     

    View this post on Instagram

     

    A post shared by Viraat (@viraat_official)

    ಅಭಿಷೇಕ್ ಅಂಬರೀಶ್ ನಟನೆಯ ‘ಬ್ಯಾಡ್‌ ಮ್ಯಾನರ್ಸ್’ ಸಿನಿಮಾ ಮೇ ಅಂತ್ಯದಲ್ಲಿ ತೆರೆಗೆ ಬರಲಿದೆ. ಈ ಸಿನಿಮಾದ ರಿಲೀಸ್ ಬಳಿಕ ವಿರಾಟ್ ಕೈಗೆತ್ತಿಕೊಳ್ಳಲಿದ್ದಾರೆ ನಿರ್ದೇಶಕ ಸೂರಿ. ಪಕ್ಕಾ ಮಾಸ್ ಎಂಟರ್‌ಟೈನರ್ ಸಿನಿಮಾ ಮಾಡಲು ಪ್ಲ್ಯಾನ್‌ ಮಾಡಿದ್ದಾರೆ. ಇದನ್ನೂ ಓದಿ:ನೆಟ್ಟಿಗರ ಹಾಸ್ಯಕ್ಕೆ ಗುರಿಯಾದ ‘ಬಿಗ್ ಬಾಸ್’ ಸೋನು ಗೌಡ ಬ್ರಾ ವೀಡಿಯೋ

    ಹೊಸ ಬಗೆಯ ಕಥೆ ಹೊತ್ತು  ಜಯಣ್ಣ ಫಿಲಂಸ್ ಅಡಿ ವಿರಾಟ್ ಲೈಟ್, ಕ್ಯಾಮೆರಾ, ಆ್ಯಕ್ಷನ್, ಎಂದು ಹೇಳಲು ರೆಡಿಯಾಗಿದ್ದಾರೆ. ದುನಿಯಾ ಸೂರಿ- ನಟ ವಿರಾಟ್ ಕಾಂಬೋ ಅದೆಷ್ಟರ ಮಟ್ಟಿಗೆ ಮೋಡಿ ಮಾಡಲಿದ್ದಾರೆ ಎಂದು ಕಾದುನೋಡಬೇಕಿದೆ.

  • ಜಯಣ್ಣ ಫಿಲಂಸ್ ನೂತನ ಚಿತ್ರ ಆರಂಭ – ಗುರುನಂದನ್ ಹೀರೋ

    ಜಯಣ್ಣ ಫಿಲಂಸ್ ನೂತನ ಚಿತ್ರ ಆರಂಭ – ಗುರುನಂದನ್ ಹೀರೋ

    ಬೆಂಗಳೂರು: ಜಯಣ್ಣ ಫಿಲಂಸ್ ಲಾಂಛನದಲ್ಲಿ ಜಯಣ್ಣ ಹಾಗೂ ಭೋಗೇಂದ್ರ ಅವರು ನಿರ್ಮಿಸುತ್ತಿರುವ ನೂತನ ಚಿತ್ರದ ಮುಹೂರ್ತ ಸಮಾರಂಭ ಆಗಸ್ಟ್ 19ರ ಸೋಮವಾರ ಮೋದಿ ಆಸ್ಪತ್ರೆ ಬಳಿಯ ಗಣಪತಿ ದೇವಸ್ಥಾನದಲ್ಲಿ ನೆರವೇರಿತು. ಲವ್ ಹಾಗೂ ಕಾಮಿಡಿ ಕಥೆ ಆಧರಿಸಿರುವ ಈ ಚಿತ್ರಕ್ಕೆ ಸುಮಾರು 50ದಿನಗಳ ಚಿತ್ರೀಕರಣ ನಡೆಯಲಿದ್ದು, ಬೆಂಗಳೂರಿನಲ್ಲಿ ಮೊದಲ ಹಂತದ ಚಿತ್ರೀಕರಣ ನಡೆಯುತ್ತಿದೆ.

    ಈ ಹಿಂದೆ ರಾಮ್ ಲೀಲಾ, ಸಿಂಗ ಚಿತ್ರಗಳನ್ನು ನಿರ್ದೇಶಿಸಿದ್ದ ವಿಜಯ್ ಕಿರಣ್ ನಿರ್ದೇಶಿಸುತ್ತಿರುವ ಈ ಚಿತ್ರದ ನಾಯಕರಾಗಿ ಫಸ್ಟ್ ರ‍್ಯಾಂಕ್ ರಾಜು ಖ್ಯಾತಿಯ ಗುರುನಂದನ್ ಅಭಿನಯಿಸುತ್ತಿದ್ದಾರೆ. ಸಾಧುಕೋಕಿಲ, ಶಿವರಾಜ್ ಕೆ.ಆರ್.ಪೇಟೆ, ಕಡ್ಡಿಪುಡಿ ಚಂದ್ರು, ಕುರಿ ಪ್ರತಾಪ್, ವಿಶ್ವ, ಶ್ರೀನಿವಾಸಪ್ರಭು ಮುಂತಾದವರ ತಾರಾಬಳಗ ಈ ಚಿತ್ರಕ್ಕಿದೆ. ನಾಯಕಿಯ ಆಯ್ಕೆ ನಡೆಯುತ್ತಿದೆ.

    ನಿರ್ದೇಶಕರೇ ಕಥೆ, ಚಿತ್ರಕಥೆ ಬರೆದಿರುವ ಈ ಚಿತ್ರಕ್ಕೆ ಸಂಭಾಷಣೆಯನ್ನು ರಘು ನಿಡುವಳ್ಳಿ ಬರೆದಿದ್ದಾರೆ. ಕವಿರಾಜ್ ಗೀತರಚನೆ ಮಾಡಿದ್ದಾರೆ. ನಟರಾಜನ್ ಶಂಕರನ್ ಸಂಗೀತ ನಿರ್ದೇಶನ, ಕಿರಣ್ ಹಂಪಾಪುರ ಛಾಯಾಗ್ರಹಣ, ಮಧು ಸಂಕಲನ, ರವಿವರ್ಮ, ಪಳನಿರಾಜ್ ಸಾಹಸ ನಿರ್ದೇಶನ ಹಾಗೂ ಮುರಳಿ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ.