Tag: Jayanna

  • ಜಯಣ್ಣ ಪಾಲಾದ ‘ಜೈಲರ್’ ಚಿತ್ರದ ಕರ್ನಾಟಕ ವಿತರಣಾ ಹಕ್ಕು

    ಜಯಣ್ಣ ಪಾಲಾದ ‘ಜೈಲರ್’ ಚಿತ್ರದ ಕರ್ನಾಟಕ ವಿತರಣಾ ಹಕ್ಕು

    ಸ್ಯಾಂಡಲ್ ವುಡ್ ನ ಹೆಸರಾಂತ ನಿರ್ಮಾಪಕ ಜಯಣ್ಣ (Jayanna) ಮತ್ತೊಂದು ಮೆಗಾ ಸಿನಿಮಾವನ್ನು ಕರ್ನಾಟಕದಲ್ಲಿ ವಿತರಿಸುತ್ತಿದ್ದಾರೆ. ರಜನಿಕಾಂತ್ ಮತ್ತು ಶಿವರಾಜ್ ಕುಮಾರ್ ಕಾಂಬಿನೇಷನ್ ನ ‘ಜೈಲರ್’ (Jailer) ಸಿನಿಮಾದ ಕರ್ನಾಟಕ ವಿತರಣಾ (Distributed) ಹಕ್ಕು ಜಯಣ್ಣಗೆ ಸಿಕ್ಕಿದ್ದು, ಹೆಚ್ಚು ಚಿತ್ರಮಂದಿರಗಳಲ್ಲಿ ಈ ಸಿನಿಮಾವನ್ನು ರಿಲೀಸ್ ಮಾಡಲು ಸಿದ್ದತೆ ಮಾಡಿಕೊಳ್ಳುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ದೊಡ್ಡದೊಂದು ಗೆಲುವು ಕಾಣದ ಜಯಣ್ಣಗೆ ಈ ಸಿನಿಮಾ ಕೈ ಹಿಡಿಯಲಿದೆ ಎಂದು ಅಂದಾಜಿಸಲಾಗಿದೆ.

    ಒಂದು ಕಡೆ ಸಿನಿಮಾವನ್ನು ರಿಲೀಸ್ ಮಾಡಲು ದೇಶಾದ್ಯಂತ ಸರ್ವಸಿದ್ದತೆ ನಡೆಸಿದ್ದರೆ, ಮತ್ತೊಂದು ಕಡೆ  ಚಿತ್ರದ ಟೈಟಲ್ (Title) ತಂಡಕ್ಕೆ ಸಂಕಷ್ಟ ತಂದಿದೆ ಈ ಸಿನಿಮಾ ಮೂರು ಭಾಷೆಗಳಲ್ಲಿ ಬಿಡುಗಡೆ ಆಗುತ್ತಿದೆ. ಈ ಸಂದರ್ಭದಲ್ಲಿ ಮಲಯಾಳಂ (Malayalam) ನಿರ್ದೇಶಕರೊಬ್ಬರು ಟೈಟಲ್ ವಿರುದ್ಧ ಕೋರ್ಟ್ ಮೆಟ್ಟಿಲು ಏರಿದ್ದಾರೆ.

    ಮಲಯಾಳಂನಲ್ಲಿ ಈಗಾಗಲೇ ನಿರ್ದೇಶಕ ಸಕ್ಕಿರ್ ಮಡತ್ತಿಲ್ಲ (Sakkir Madattilla) ‘ಜೈಲರ್’ ಹೆಸರಿನಲ್ಲಿ ಸಿನಿಮಾ ಮಾಡಿದ್ದಾರೆ. ಅದು ಇನ್ನಷ್ಟೇ ಬಿಡುಗಡೆ ಆಗಬೇಕಿದೆ. ಮಲಯಾಳಂನಲ್ಲಿ ರಜನಿ ಜೈಲರ್ ಸಿನಿಮಾ ಕೂಡ ಬಿಡುಗಡೆ ಆಗುತ್ತಿರುವುದರಿಂದ, ಮಲಯಾಳಂನಲ್ಲಿ ಟೈಟಲ್ ಬದಲಾಯಿಸಿ ರಿಲೀಸ್ ಮಾಡುವಂತೆ ಅವರು ಮನವಿ ಮಾಡಿಕೊಂಡಿದ್ದರು. ಆದರೆ, ಅದು ಆಗುವುದಿಲ್ಲ ಎಂದು ಸನ್ ಪಿಕ್ಚರ್ ನಿರ್ಮಾಣ ಸಂಸ್ಥೆ ಉತ್ತರ ಬರದಿತ್ತು.

    ಈಗ ಸಕ್ಕಿರ್ ಮಡತ್ತಿಲ್ಲ ತಮಿಳಿನ ಜೈಲರ್ ಸಿನಿಮಾದ ವಿರುದ್ಧ ಕೋರ್ಟ್ ಮೆಟ್ಟಿಲು ಏರಿದ್ದಾರೆ. ಮೊದಲು ಜೈಲರ್ ಹೆಸರಿನಲ್ಲಿ ತಾವು ಸಿನಿಮಾ ಮಾಡಿದ್ದರಿಂದ ಮತ್ತು ಮಲಯಾಳಂನಲ್ಲಿ ತಮಗೆ ರಜನಿ ಸಿನಿಮಾದಿಂದ ತೊಂದರೆ ಆಗುವುದರಿಂದ, ಟೈಟಲ್ ಬದಲಾಯಿಸುವಂತೆ ಅವರು ಕೋರ್ಟ್ ಗೆ ಮೊರೆ ಹೋಗಿದ್ದಾರೆ. ಇದನ್ನೂ ಓದಿ:ಎರಡೇ ಎರಡು ದಿನ ವೇಟ್ ಮಾಡಿ ಪ್ಲೀಸ್: ನಟ ಅನಿರುದ್ಧ ಮನವಿ

    ಈ ವರ್ಷದ ಬಹುನಿರೀಕ್ಷಿತ ಸಿನಿಮಾಗಳಲ್ಲಿ ಒಂದು. ತಲೈವ ವೃತ್ತಿ ಬದುಕಿನ ವಿಶೇಷ ಚಿತ್ರ‌ ಇದಾಗಿದ್ದು, ದಕ್ಷಿಣ ಭಾರತ ಹಾಗೂ ಬಾಲಿವುಡ್‌ ದಿಗ್ಗಜರು‌ ಜೈಲರ್ ಸಿನಿಮಾದ ಭಾಗವಾಗಿದ್ದಾರೆ. ಸದ್ಯ ಕಾವಾಲಾಯ್ಯ ಹಾಡಿನ ಮೂಲಕ ಭಾರೀ ಸೆನ್ಸೇಷನ್ ಸೃಷ್ಟಿಸುತ್ತಿರುವ ಈ ಚಿತ್ರ ಆಗಸ್ಟ್ 10ಕ್ಕೆ ಕನ್ನಡ, ತಮಿಳು ಹಾಗೂ ತೆಲುಗು ಭಾಷೆಯಲ್ಲಿ ಬೆಳ್ಳಿತೆರೆಗೆ ಎಂಟ್ರಿ ಕೊಡುತ್ತಿದೆ.

    ಸನ್ ಪಿಕ್ಚರ್ ನಿರ್ಮಾಣ ಮಾಡಿರುವ ಈ ಸಿನಿಮಾವನ್ನು ನೆಲ್ಸನ್ ದಿಲೀಪ್ ಕುಮಾರ್ (Nelson Dilip Kumar) ನಿರ್ದೇಶಿಸಿದ್ದಾರೆ. ಇದೇ ಮೊದಲ ಬಾರಿಗೆ ರಜನಿಕಾಂತ್ ಜೊತೆ ಶಿವರಾಜ್‌ಕುಮಾರ್ (Shivaraj Kumar) ವಿಶೇಷ ಪಾತ್ರದಲ್ಲಿ ನಟಿಸಿರೋದು ಕುತೂಹಲ ಕೆರಳಿಸಿದೆ. ಇನ್ನು ಬಾಲಿವುಡ್‌ ನಟ ಜಾಕಿ ಶ್ರಾಫ್, ಮಲಯಾಳಂ ಸೂಪರ್‌ಸ್ಟಾರ್ ಮೋಹನ್‌ಲಾಲ್ (Mohanlal), ಟಾಲಿವುಡ್ ನಟ ಸುನಿಲ್, ನಾಗಬಾಬು, ನಟಿ ರಮ್ಯಾ ಕೃಷ್ಣ, ತಮನ್ನಾ ಭಾಟಿಯಾ ನಟಿಸಿದ್ದು, ಸಿನಿಪ್ರಿಯರಿಗೆ ಇವರೆಲ್ಲರನ್ನೂ ಒಂದೇ ಸಿನಿಮಾದಲ್ಲಿ ನೋಡುವ ಭಾಗ್ಯ ಸಿಗಲಿದೆ.

     

    ಅಣ್ಣಾತ್ತೆ ಬಳಿಕ ರಜನಿ ನಟಿಸಿರುವ 169ನೇ ಸಿನಿಮಾ ಜೈಲರ್. ತಲೈವ ಹೊಸ ಸಿನಿಮಾ ಎಂಟ್ರಿಗೆ ಕಾದು‌ ಕುಳಿತಿರುವ ಅಭಿಮಾನಿಗಳು ಹಬ್ಬ ಮಾಡಲು ಸಜ್ಜಾಗಿದ್ದಾರೆ. ರಾಕ್ ಸ್ಟಾರ್ ಅನಿರುದ್ಧ್ ರವಿಚಂದರ್ ಸಂಗೀತ‌ ನಿರ್ದೇಶನದ ಜೈಲರ್ ಸಿನಿಮಾವನ್ನೂ ಚೆನ್ನೈ, ಮಂಗಳೂರು, ಹೈದರಾಬಾದ್, ಕೇರಳ ಸೇರಿದಂತೆ ಹಲವೆಡೆ ಶೂಟಿಂಗ್ ನಡೆಸಲಾಗಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಪುನೀತ್ ಸಾವಿನ ರಹಸ್ಯ ಒಂದೊಂದೇ ಬಯಲು!

    ಪುನೀತ್ ಸಾವಿನ ರಹಸ್ಯ ಒಂದೊಂದೇ ಬಯಲು!

    ಬೆಂಗಳೂರು: ಅಕಾಲಿಕ ಮರಣಕ್ಕೆ ಒಳಗಾದ ಪುನೀತ್ ರಾಜ್‍ಕುಮಾರ್ ಸಾವಿನ ರಹಸ್ಯ ಒಂದೊಂದಾಗೇ ಬಹಿರಂಗವಾಗುತ್ತಿದೆ. ಸಾವಿನ ಹಿಂದಿನ ದಿನಗಳ ಕರಾಳ ಕತೆಗಳನ್ನು ಒಬ್ಬೊಬ್ಬರೇ ಬಿಚ್ಚಿಡುತ್ತಿದ್ದಾರೆ. ಅಪ್ಪು ಅಗಲಿಕೆಗೆ ಮುನ್ನಾ ದಿನ ಅಂದರೆ ಗುರುವಾರವೇ ಅವರಿಗೆ ಹಾರ್ಟ್ ಅಟ್ಯಾಕ್‍ನ ಲಕ್ಷಣ ಕಾಣಿಸಿತ್ತಾ..? ಅನ್ನೋ ಚರ್ಚೆ ಆಗ್ತಿದೆ.

    ಅಕ್ಟೋಬರ್ 26ರಂದು ಭಜರಂಗಿ 2 ಪ್ರೀ-ರಿಲೀಸ್ ಕಾರ್ಯಕ್ರಮದಲ್ಲಿ ಅಪ್ಪು ಡಲ್ಲಾಗಿ ಕಾಣಿಸಿಕೊಂಡಿದ್ದರು ಅಂತ ಗೀತಾ ಹೇಳಿದ್ರು. ಆದರೆ, ಅಪ್ಪು ವರ್ಕೌಟ್ ಮಾಡಿ ಬಂದಿರಬೇಕು ಅಥವಾ ಸುಸ್ತಾಗಿರಬೇಕು ಅಂತ ಗೀತಾಗೆ ಹೇಳಿದ್ದೆ ಅಂತ ಶಿವಣ್ಣ ಹೇಳಿದ್ದಾರೆ. ಅಲ್ಲದೆ ವಿಧಿ 10 ನಿಮಿಷ ಟೈಮ್ ಕೊಡಬೇಕಿತ್ತು. ಎಲ್ಲರಿಗೂ ಟೈಮ್ ಕೊಡುತ್ತೆ, ನನ್ನ ತಮ್ಮನಿಗೆ ಯಾಕೆ ಕೊಡಲಿಲ್ಲ. ಒಂದು ಚೂರು ಸೂಚನೆ ಸಿಕ್ಕಿದ್ದರೆ ನಾವು ಬಿಡುತ್ತಿರಲಿಲ್ಲ. ಎಲ್ಲವೂ ಸಡನ್ ಸಡನ್ ಆಗಿಹೋಯ್ತು. ಅಂಥ ಒಳ್ಳೇ ವ್ಯಕ್ತಿಗೆ ಯಾಕೆ ಕೊಡ್ಲಿಲ್ಲ. ಇದು ಕಾಡ್ತಲೇ ಇರುತ್ತೆ ಅಂತ ಶಿವಣ್ಣ ಮರುಗಿದ್ದಾರೆ. ಇದನ್ನೂ ಓದಿ: ಎತ್ತುಗಳ ಜೊತೆಗೆ ಬಂದ ಅಭಿಮಾನಿಗಳನ್ನು ಭೇಟಿ ಮಾಡಿದ ಶಿವಣ್ಣ, ರಾಘಣ್ಣ

    ಮತ್ತೊಂದೆಡೆ ನಿರ್ಮಾಪಕ ಜಯಣ್ಣ ಅವರ ಕಚೇರಿಗೆ ಗುರುವಾಗ ಅಪ್ಪು ಭೇಟಿ ನೀಡಿದ್ದರು. ಈ ವೇಳೆ ಕೈಯಲ್ಲಿ ಜೋಮು ಹಿಡಿದಂತೆ ಕಂಡಿತ್ತು. ಅಪ್ಪು ಗೋಡೆಗೆ ಒರಗಿ ಎರಡು ಬಾರಿ ಕೈ ಮೇಲೆತ್ತಿಕೊಂಡು ನಿಂತಿದ್ದರು. ಅದು ಕೈ ಸೆಳೆತವೋ ಅಥವಾ ನೋವೋ ಗೊತ್ತಿಲ್ಲ ಅಂತ ಜಯಣ್ಣ ಹೇಳಿದ್ದಾರೆ. ಈ ಬಗ್ಗೆ ಶಿವಣ್ಣಗೆ ಫೋನ್ ಮಾಡಿ ತಿಳಿಸಿದ್ದೆ. ಅಲ್ಲದೆ ಕೊರೋನಾ ಹೊಡೆತದಿಂದ ಸಿನಿಮಾ ಇಂಡಸ್ಟ್ರಿ ಚೇತರಿಕೆ ಕಾಣಬೇಕು. ಅದಕ್ಕಾಗಿ ವರ್ಷಕ್ಕೆ 2 ಸಿನಿಮಾ ಮಾಡಿಕೊಡಿ ಅಂತ ಕೇಳಿಕೊಂಡಾಗ ಅಪ್ಪು ಒಪ್ಪಿಕೊಂಡಿದ್ರು ಅಂತ ಜಯಣ್ಣ ಹೇಳಿದ್ದಾರೆ. ಇದನ್ನೂ ಓದಿ: ನನಗೆ ಅರ್ಥ ಮಾಡಿಕೊಳ್ಳಲು, ಈ ಸತ್ಯವನ್ನ ಅರಗಿಸಿಕೊಳ್ಳಲು ಆಗ್ತಿಲ್ಲ: ರಾಮ್ ಚರಣ್ ತೇಜಾ

  • ಥಿಯೇಟರ್‌ನಲ್ಲಿ ಫುಲ್ ಹೌಸ್ – ಶೀಘ್ರವೇ ಸರ್ಕಾರದ ನಿರ್ಧಾರ ಪ್ರಕಟ

    ಥಿಯೇಟರ್‌ನಲ್ಲಿ ಫುಲ್ ಹೌಸ್ – ಶೀಘ್ರವೇ ಸರ್ಕಾರದ ನಿರ್ಧಾರ ಪ್ರಕಟ

    ಬೆಂಗಳೂರು: ಚಿತ್ರಮಂದಿರಗಳಲ್ಲಿ ಪೂರ್ಣ ಪ್ರಮಾಣದ ಸೀಟು ಭರ್ತಿಗೆ ಅವಕಾಶ ಮಾಡಿಕೊಡುವ ಬಗ್ಗೆ ಎರಡು, ಮೂರು ದಿನದಲ್ಲಿ ಸರ್ಕಾರ ತೀರ್ಮಾನ ಕೈಗೊಳ್ಳಲಿದೆ ಎಂದು ಆರೋಗ್ಯ ಸಚಿವ ಸುಧಾಕರ್ ಹೇಳಿದ್ದಾರೆ.

    ಇಂದು ಚಲನಚಿತ್ರ ನಿರ್ಮಾಪಕರಾದ ಜಯಣ್ಣ, ಸೂರಪ್ಪ ಬಾಬು ಹಾಗೂ ಶ್ರೀಕಾಂತ್ ಅವರು ಪೂರ್ಣ ಪ್ರಮಾಣದ ಸೀಟು ಭರ್ತಿಗೆ ಅನುಮತಿ ಕೋರುವ ಸಂಬಂಧ ವಿಧಾನಸೌಧದ ಕೊಠಡಿ 339ರಲ್ಲಿ ಸುಧಾಕರ್ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದರು. ಇದನ್ನೂ ಓದಿ: ರಾಜ್ಯದಲ್ಲಿ ಮತಾಂತರ ನಿಷೇಧ ಕಾಯಿದೆ ಜಾರಿಗೆ ಚಿಂತನೆ ಮಾಡಲಾಗುತ್ತಿದೆ: ಅರಗ ಜ್ಞಾನೇಂದ್ರ

    ಭೇಟಿ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು, ಅನೇಕ ಚಟುವಟಿಕೆಗೆ ರಿಯಾಯಿತಿ ನೀಡಿದ್ದೇವೆ. ಸಿನಿಮಾಗೆ ಶೇ.50 ರಷ್ಟು ರಿಯಾಯಿತಿ ನೀಡಿದ್ದೇವೆ. ಈಗ ಶೇ.100 ರಷ್ಟು ಬೇಡಿಕೆ ಇಟ್ಟಿದ್ದಾರೆ. ಇವರಿಗೆ ಹೇಗೆ ಸಹಕಾರ ಕೊಡಬೇಕು ಎಂಬುದರ ಬಗ್ಗೆ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸುತ್ತದೆ. ಈ ಕುರಿತು 2, 3 ದಿನದಲ್ಲಿ ತಾಂತ್ರಿಕ ಸಲಹೆ ಸಮಿತಿ ಜೊತೆ ಚರ್ಚಿಸಿ ತೀರ್ಮಾನ ಕೈಗೊಳ್ಳುತ್ತೇವೆ ಎಂದಿದ್ದಾರೆ. ಇದನ್ನೂ ಓದಿ:  ಯುವತಿಯಿಂದ ಕಾರು ಚಾಲನೆ- ಆಟೋ ಸಂಪೂರ್ಣ ನಜ್ಜುಗುಜ್ಜು

    ನಿರ್ಮಾಪಕ ಸೂರಪ್ಪ ಬಾಬು ಈ ಕುರಿತು ಮಾತನಾಡಿದ್ದು, ಆದಷ್ಟು ಬೇಗ ಈ ವಿಚಾರಕ್ಕೆ ಅನುಮತಿ ಸಿಗುವ ಸಾಧ್ಯತೆ ಇದೆ. ಇದರ ಜೊತೆಗೆ ಇತರೆ ಕೊರೊನಾ ನಿಯಮ ಸಡಿಲಿಕೆ ಬಗ್ಗೆಯು ಸರ್ಕಾರ ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ.