Tag: jayanagar

  • ನಿರ್ಮಾಣ ಹಂತದ ಕಟ್ಟಡದಿಂದ ಕಬ್ಬಿಣದ ಸರಳುಗಳ ಮೇಲೆ ಬಿದ್ದ ಯುವಕ!

    ನಿರ್ಮಾಣ ಹಂತದ ಕಟ್ಟಡದಿಂದ ಕಬ್ಬಿಣದ ಸರಳುಗಳ ಮೇಲೆ ಬಿದ್ದ ಯುವಕ!

    ಬೆಂಗಳೂರು: ಯುವಕನೊಬ್ಬ ನಿರ್ಮಾಣ ಹಂತದ ಕಟ್ಟಡದ ಮೇಲಿಂದ ಕಬ್ಬಿಣದ ಸರಳುಗಳ ಮೇಲೆ ಬಿದ್ದ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ.

    ಬೆಂಗಳೂರಿನ ಜಯನಗರದ 4 ನೇ ಬ್ಲಾಕ್ ನಲ್ಲಿ ಈ ಘಟನೆ ನಡೆದಿದೆ. ನಿರ್ಮಾಣ ಹಂತದ ಕಟ್ಟಡದಲ್ಲಿ ಗಾರೆ ಕೆಲಸ ಮಾಡುತ್ತಿದ್ದ ವೇಳೆ ಯುವಕ ಆಯತಪ್ಪಿ ಕಬ್ಬಿಣದ ಸರಳುಗಳ ಮೇಲೆ ಯುವಕ ಬಿದ್ದಿದ್ದಾನೆ. ಈ ವೇಳೆ ಎರಡು ಕಬ್ಬಿಣದ ಕಂಬಿಗಳು ಹೊಟ್ಟೆಯ ಭಾಗದಿಂದ ತೂರಿ ಬೆನ್ನಿನ ಭಾಗದಿಂದ ಹೊರಕ್ಕೆ ಬಂದಿದೆ. ಅದೇ ಸ್ಥಿತಿಯಲ್ಲಿ ಯುವಕ ಕಬ್ಬಿಣದ ಸರಳುಗಳ ಮೇಲೆ ಸಿಲುಕಿ ಒದ್ದಾಡಿದ್ದಾನೆ.

    ಕೂಡಲೇ ವಿಚಾರ ತಿಳಿದು ಸ್ಥಳಕ್ಕೆ ಬಂದ ಅಗ್ನಿಶಾಮಕ ದಳದ ಸಿಬ್ಬಂದಿ ಯುವಕನನ್ನು ರಕ್ಷಣೆ ಮಾಡಿದ್ದಾರೆ. ಬಳಿಕ ದೇಹದಲ್ಲಿದ್ದ ಕಬ್ಬಿಣದ ಸರಳುಗಳನ್ನು ಕಟ್ ಮಾಡಿ ಹೊರ ತೆಗೆದಿದ್ದಾರೆ. ಇದನ್ನೂ ಓದಿ: ರಜೆಯಲ್ಲಿದ್ದ ಯೋಧನ ಮನೆಗೆ ನುಗ್ಗಿ ಕಿಡ್ನ್ಯಾಪ್‌ ಮಾಡಿ ಹತ್ಯೆ

    ಸದ್ಯ ಖಾಸಗಿ ಆಸ್ಪತ್ರೆಗೆ ಯುವಕನನ್ನು ದಾಖಲು ಮಾಡಲಾಗಿದ್ದು, ಪ್ರಾಣಪಾಯದಿಂದ ಪಾರಾಗಿದ್ದಾನೆ. ಜಯನಗರ ಪೊಲೀಸ್ ಠಾಣೆಯಲ್ಲಿ (Jayanagar Police Station) ಪ್ರಕರಣ ದಾಖಲಾಗಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಕ್ಯಾಂಟರ್‌ನಲ್ಲಿ ಬಂದು 1,500 ಎಳನೀರು ಕದ್ದ ಖದೀಮರು

    ಕ್ಯಾಂಟರ್‌ನಲ್ಲಿ ಬಂದು 1,500 ಎಳನೀರು ಕದ್ದ ಖದೀಮರು

    ಬೆಂಗಳೂರು: ರಾತ್ರೋರಾತ್ರಿ ಟಾಟಾ ಏಸ್ ವಾಹನದಲ್ಲಿ ಬಂದ ಖದೀಮರು ರಸ್ತೆ ಬದಿಯಲ್ಲಿ ಇಟ್ಟಿದ್ದ ಬರೋಬ್ಬರಿ 1,500 ಎಳನೀರನ್ನು (Coconut) ಕದ್ದುಕೊಂಡು ಹೋಗಿರುವ ಘಟನೆ ಜಯನಗರ (Jayanagar) ರಾಷ್ಟ್ರೀಯ ವಿದ್ಯಾಲಯ ಮೆಟ್ರೋ ನಿಲ್ದಾಣದ ಬಳಿ ನಡೆದಿದೆ.

    ಆಗಸ್ಟ್ 7ರಂದು ಮುಂಜಾನೆ ಕಳ್ಳತನ ನಡೆದಿದೆ. ಕ್ಯಾಂಟರ್‌ನಲ್ಲಿ ಬಂದ ಕಳ್ಳರು ಸುಮಾರು 1,500 ಎಳನೀರನ್ನು ಕಳ್ಳತನ ಮಾಡಿದ್ದಾರೆ. ನಂಬರ್ ಪ್ಲೇಟ್‌ಗೆ ಮಸಿ ಬಳಿದು ಖದೀಮರು ಕೃತ್ಯ ಎಸಗಿದ್ದಾರೆ. ಈ ಬಗ್ಗೆ ಜಯನಗರ ಪೊಲೀಸ್ ಠಾಣೆಯಲ್ಲಿ ಮಾಲೀಕ ಸಲೀಂ ದೂರು ದಾಖಲಿಸಿದ್ದಾರೆ.

    ಘಟನೆಗೆ ಸಂಬಂಧಿಸಿದಂತೆ ತನಿಖೆ ನಡೆಸಿದ ಪೊಲೀಸರು ಇದೀಗ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಗೌತಮ್, ರಘು ಹಾಗೂ ಮಣಿಕಂಠ ಬಂಧಿತ ಆರೋಪಿಗಳು. ಈ ಮೂವರ ಮೇಲೆ ಈ ಹಿಂದೆ ಕೂಡಾ ಹಲವಾರು ಕೇಸ್‌ಗಳು ದಾಖಲಾಗಿವೆ. ರಘು ಮೇಲೆ ಕೊಲೆ ಯತ್ನ ಪ್ರಕರಣ ಕೂಡಾ ದಾಖಲಾಗಿದೆ. ಇದನ್ನೂ ಓದಿ: ರಾತ್ರಿ ತಡವಾಗಿ ಬಂದ ಮಗನಿಗೆ ಬುದ್ಧಿವಾದ ಹೇಳಿದ ತಾಯಿ- ಮನನೊಂದು ಯುವಕ ಆತ್ಮಹತ್ಯೆ

    ಕಳ್ಳರ ಸುಳಿವು ನೀಡಿದ್ದು ಗೂಗಲ್ ಪೇ:
    ಮೊದಲಿಗೆ ಇದನ್ನು ಸಣ್ಣ ಕೇಸ್ ಎಂದು ಪೊಲೀಸರು ಕಡೆಗಣಿಸಿದ್ದರು. ಆದರೆ ಬಳಿಕ ಯಾವುದೇ ಸುಳಿವೂ ಸಿಗದ ಆರೋಪಿಗಳನ್ನು ಬಂಧಿಸಿದ್ದೇ ರೊಚಕ ಎನಿಸಿಕೊಂಡಿದೆ. ಘಟನಾ ಸ್ಥಳದಲ್ಲಿ ಆರೋಪಿಗಳು ಯಾವುದೇ ಸುಳಿವು ಬಿಟ್ಟಿರಲಿಲ್ಲ. ಬಳಿಕ ಪೊಲೀಸರು ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದಾಗ ಗೂಗಲ್ ಪೇ ಕ್ಲೂ ದೊರೆತಿದೆ.

    ಖದೀಮರ ಸೆರೆಗಾಗಿ ಪೊಲೀಸರು ಸುಮಾರು 60ಕ್ಕೂ ಹೆಚ್ಚು ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದ್ದಾರೆ. ಈ ವೇಳೆ ಕಳ್ಳರು ಮುಂಜಾನೆ ಉತ್ತರಹಳ್ಳಿ ಬಳಿ ಟೀ ಕುಡಿದ ದೃಶ್ಯ ಪತ್ತೆಯಾಗಿತ್ತು. ಅದೇ ಜಾಗದಲ್ಲಿ ಗೂಗಲ್ ಪೇನಲ್ಲಿ ಹಣ ಪಾವತಿ ಮಾಡಿದ್ದರು. ಬಳಿಕ ಅಲ್ಲಿಗೆ ತೆರಳಿದ ಪೊಲೀಸರು ಗೂಗಲ್ ಪೇ ನಂಬರ್ ಪಡೆದು ಯಾವ ಬ್ಯಾಂಕ್ ಖಾತೆಯಿಂದ ಹಣ ಸಂದಾಯ ಆಗಿದೆ ಎಂದು ಪರಿಶೀಲಿಸಿದ್ದಾರೆ. ಈ ಮೂಲಕ ಪೊಲೀಸರು ಕಳ್ಳರ ಸುಳಿವನ್ನು ಪಡೆದಿದ್ದರು. ಇದನ್ನೂ ಓದಿ: ಬೆಂಗಳೂರಿನಲ್ಲೊಂದು ವಿಚಿತ್ರ ಘಟನೆ- ಬಾಡಿಗೆದಾರನನ್ನ ಗಮನಿಸದೇ ಮನೆ ಸೀಜ್

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಫ್ರೀ ಎಜುಕೇಷನ್ ಕೊಡಿಸ್ತೀನಿ ಅಂತ ವಿದ್ಯಾರ್ಥಿಗಳಿಗೆ 18 ಕೋಟಿ ವಂಚನೆ – ಆರೋಪಿ ಅರೆಸ್ಟ್

    ಫ್ರೀ ಎಜುಕೇಷನ್ ಕೊಡಿಸ್ತೀನಿ ಅಂತ ವಿದ್ಯಾರ್ಥಿಗಳಿಗೆ 18 ಕೋಟಿ ವಂಚನೆ – ಆರೋಪಿ ಅರೆಸ್ಟ್

    – ವಿದ್ಯಾರ್ಥಿಗಳ ದಾಖಲೆಗಳನ್ನು ಬ್ಯಾಂಕ್‍ನಲ್ಲಿಟ್ಟು ಕೋಟಿ ಕೋಟಿ ಸಾಲ ಪಡೆದಿದ್ದ ಖತರ್ನಾಕ್!

    ಬೆಂಗಳೂರು: ಉಚಿತವಾಗಿ ವಿದ್ಯಾರ್ಥಿಗಳಿಗೆ ಶಿಕ್ಷಣ (Free Education) ಕೊಡಿಸುವುದಾಗಿ 18 ಕೋಟಿ ರೂ. ವಂಚಿಸಿದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

    ಬಂಧಿತ ಆರೋಪಿಯನ್ನು ಆಂಧ್ರಪ್ರದೇಶ (Andhra Pradesh) ಮೂಲದ ಶ್ರೀನಿವಾಸುಲು ಎಂದು ಗುರುತಿಸಲಾಗಿದೆ. ಆರೋಪಿ ಡಾಟ ಸೈನ್ಸ್ ಕೋರ್ಸ್ ಮಾಡಿಸುವುದಾಗಿ ವಿದ್ಯಾರ್ಥಿಗಳಿಂದ ದಾಖಲೆಗಳನ್ನು ಪಡೆಯುತ್ತಿದ್ದ. ಬಳಿಕ ಅವುಗಳನ್ನು ಬ್ಯಾಂಕ್‍ನಲ್ಲಿಟ್ಟು ಲಕ್ಷಾಂತರ ರೂ. ಸಾಲ ಪಡೆಯುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಮಂಥರ್ ಗೌಡ ಗೆಲುವು – 135 ಕಿಮೀ ದೂರದ ಚಾಮುಂಡಿ ಬೆಟ್ಟಕ್ಕೆ ಪಾದಯಾತ್ರೆ

    ಆರೋಪಿ ಇದುವರೆಗೂ ಸುಮಾರು ಎರಡು ಸಾವಿರ ವಿದ್ಯಾರ್ಥಿಗಳಿಗೆ ವಂಚಿಸಿದ್ದಾನೆ. ಈ ಪ್ರಕರಣದಲ್ಲಿ ಬ್ಯಾಂಕ್ ಸಿಬ್ಬಂದಿಯೂ ಭಾಗಿಯಾಗಿರುವ ಶಂಕೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಸಂಬಂಧ ಜಯನಗರ (Jayanagar) ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಭಾರತ, ಚೀನಾ ಗಡಿ ವಿವಾದ – ಮಾತುಕತೆಗೆ ಮುಂದಾದ ಉಭಯ ರಾಷ್ಟ್ರಗಳು

  • ಗೌರಿ ಹಬ್ಬದ ಪ್ರಯುಕ್ತ ಜಯನಗರದಲ್ಲಿ 1,000 ಮಹಿಳೆಯರಿಗೆ ಬಾಗಿನ ವಿತರಣೆ

    ಗೌರಿ ಹಬ್ಬದ ಪ್ರಯುಕ್ತ ಜಯನಗರದಲ್ಲಿ 1,000 ಮಹಿಳೆಯರಿಗೆ ಬಾಗಿನ ವಿತರಣೆ

    ಬೆಂಗಳೂರು: ಜಯನಗರ ವಿಧಾನಸಭಾ ಕ್ಷೇತ್ರದಲ್ಲಿ ಮಾಜಿ ಮಹಾನಗರ ಪಾಲಿಕೆ ಸದಸ್ಯರಾದ ಸಿ.ಕೆ.ರಾಮಮೂರ್ತಿರವರ ನೇತೃತ್ವದಲ್ಲಿ ನಿಕಟಪೂರ್ವ ಬಿಬಿಎಂಪಿ ಸದಸ್ಯರಾದ ನಾಗರತ್ನ ರಾಮಮೂರ್ತಿರವರು 1,000 ಮಹಿಳೆಯರಿಗೆ ಗೌರಿ ಬಾಗಿನ ವಿತರಿಸಿದರು.

    ಸಮಾರಂಭದಲ್ಲಿ ಅರಣ್ಯ ಅಭಿವೃದ್ದಿ ನಿಗಮದ ಅಧ್ಯಕ್ಷರಾದ ತಾರಾ ಅನುರಾಧ, ಚಲನಚಿತ್ರ ನಟಿ ಮಾಳವಿಕಾ, ಗರುಡಾ ಫೌಂಡೇಷನ್ ಸಂಸ್ಥಾಪಕಿ ಮೇದಿನಿ ಗುರುಡಾಚಾರ್ ರವರು ಪಾಲ್ಗೊಂಡಿದ್ದರು. ಇದನ್ನೂ ಓದಿ: ದಶಪಥ ರಸ್ತೆಗೆ ಪ್ಲ್ಯಾನಿಂಗ್‌ ಕೊಟ್ಟವರಿಗೆ ಪದ್ಮಭೂಷಣ ಕೊಡಿ- ಸಿಎಂಗೆ ಡಿಕೆಶಿ ಟಾಂಗ್

    ಇದೇ ಸಂದರ್ಭದಲ್ಲಿ ನಿಕಟಪೂರ್ವ ಬಿಬಿಎಂಪಿ ಸದಸ್ಯರಾದ ನಾಗರತ್ನ ರಾಮಮೂರ್ತಿರವರು ಮಾತನಾಡಿ ಕಳೆದ 10 ವರ್ಷಗಳಿಂದ ಜಯನಗರ ವಿಧಾನಸಭಾ ಕ್ಷೇತ್ರದಲ್ಲಿ ಮಹಿಳೆಯರಿಗೆ ಗೌರಿ ಬಾಗಿನ ವಿತರಣೆ ಮಾಡಲಾಗುತ್ತಿದೆ ಎಂದರು. ಇದನ್ನೂ ಓದಿ: ಮನೆಯೊಂದರಲ್ಲಿ ಸಾಮೂಹಿಕ ನಮಾಜ್‌ ಮಾಡಿದ್ದಕ್ಕೆ ಕೇಸ್‌ – ಪ್ರಕರಣ ರದ್ದುಗೊಳಿಸಿದ ಪೊಲೀಸರು

    ಮಹಿಳೆಯರಿಗೆ ತವರು ಮನೆಯಿಂದ ಕೊಡುವ ಉಡುಗೂರೆ ಬಹು ದೊಡ್ಡ ಕೊಡುಗೆಯಾಗಿದೆ. ಜಯನಗರ ವಿಧಾನಸಭಾ ಕ್ಷೇತ್ರದ ಮಹಿಳೆಯರು ಒಂದು ಕುಟುಂಬದಂತೆ ಇಂದು ಗೌರಿ ಹಬ್ಬದ ದಿನ ಎಲ್ಲರು ಒಟ್ಟಾಗಿ ಸೇರಿ ಸಂಭ್ರಮಾಚರಣೆ ಮಾಡುವ ದಿನ. ಸಕಲ ಸಂಕಷ್ಟಗಳು ನಿವಾರಣೆಯಾಗಲಿ, ಎಲ್ಲರ ಜೀವನದಲ್ಲಿ ಸುಖ, ಶಾಂತಿ, ನೆಮ್ಮದಿ ಸಿಗಲಿ ಎಂದು ಗೌರಿ ಪೂಜೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಗೌರಿ ಬಾಗಿನದಲ್ಲಿ ಅರಿಶಿನ, ಕುಂಕುಮ ಮತ್ತು ಬಳೆ, ಆಹಾರ ಧಾನ್ಯಗಳ ಶುಭ ಕಾರ್ಯಕ್ಕೆ ಬಳಸುವ ವಸ್ತುಗಳನ್ನು ನೀಡಿ, ಶುಭ ಹಾರೈಸಲಾಗುತ್ತದೆ ಎಂದು ಹೇಳಿದರು.

    Live Tv
    [brid partner=56869869 player=32851 video=960834 autoplay=true]

  • ಜಯನಗರದ ಯುನೈಟೆಡ್ ಆಸ್ಪತ್ರೆಯಲ್ಲಿ ರಾಜ್ಯದಲ್ಲೇ ಮೊದಲ ಆಟೋಲೋಗಸ್ ಕಾರ್ಟಿಲೆಜ್ ಕಸಿ ಶಸ್ತ್ರಚಿಕಿತ್ಸೆ

    ಜಯನಗರದ ಯುನೈಟೆಡ್ ಆಸ್ಪತ್ರೆಯಲ್ಲಿ ರಾಜ್ಯದಲ್ಲೇ ಮೊದಲ ಆಟೋಲೋಗಸ್ ಕಾರ್ಟಿಲೆಜ್ ಕಸಿ ಶಸ್ತ್ರಚಿಕಿತ್ಸೆ

    ಬೆಂಗಳೂರು: ಫುಟ್‌ಬಾಲ್ ಆಟದಲ್ಲಿ ಪಾದದ ಕಾರ್ಟಿಲೆಜ್‌ಗೆ ಹಾನಿಮಾಡಿಕೊಂಡಿದ್ದ ಕ್ರೀಡಾಪಟುವಿಗೆ ರಾಜ್ಯದಲ್ಲೇ ಪ್ರಪ್ರಥಮ ಬಾರಿಗೆ ಅತ್ಯಾಧುನಿಕ ಆಟೋಲೋಗಸ್ ಕಾರ್ಟಿಲೆಜ್ ಕಸಿ ಶಸ್ತ್ರಚಿಕಿತ್ಸೆಯನ್ನು ಜಯನಗರದ ಯುನೈಟೆಡ್ ಆಸ್ಪತ್ರೆಯ ವೈದ್ಯರು ನೆರವೇರಿಸಿದ್ದಾರೆ.

    ರಾಜ್ಯದಲ್ಲೆ ಪ್ರಪ್ರಥಮ ಬಾರಿಗೆ ನಡೆಸಿದ ಈ ಅತ್ಯಾಧುನಿಕ ತಂತ್ರಜ್ಞಾನದ ಶಸ್ತ್ರಚಿಕಿತ್ಸೆಯ ಬಗ್ಗೆ ಆಸ್ಪತ್ರೆಯ ವೈದ್ಯರು ಪತ್ರಿಕಾಗೋಷ್ಠಿಯಲ್ಲಿ ವಿವರಿಸಿದರು.

    ಇತ್ತೀಚಿಗೆ ಫುಟ್‌ಬಾಲ್ ಆಟಗಾರ ಅಜಯ್ ಪಂದ್ಯವೊಂದರಲ್ಲಿ ತನ್ನ ಪಾದಕ್ಕೆ ಗಾಯ ಮಾಡಿಕೊಂಡಿದ್ದರು. ಕೀಲುಗಳ ಕಾರ್ಟಿಲೆಜ್ ಸಮಸ್ಯೆಯನ್ನು ಸಾಮಾನ್ಯವಾಗಿ ಯಾವುದೇ ಶಸ್ತ್ರಚಿಕಿತ್ಸೆಗಳಿಲ್ಲದೆ ನಿವಾರಿಸಲಾಗುತ್ತದೆ. ದೀರ್ಘಕಾಲದ ವಿಶ್ರಾಂತಿ ತೆಗೆದುಕೊಳ್ಳುವುದು ಸಾಮಾನ್ಯವಾಗಿ ಭಾರತದಲ್ಲಿ ರೂಢಿಯಲ್ಲಿದೆ. ಆದರೆ ಇದು ಕ್ರೀಡಾಪಟುಗಳು ತಮ್ಮ ಚಟುವಟಿಕೆಗಳಲ್ಲಿ ಮುಂದುವರಿಯುವುದನ್ನು ತಡೆಯುತ್ತದೆ ಹಾಗೂ ನಿಧಾನವಾಗಿ ಚೇತರಿಸಿಕೊಳ್ಳುವ ಮೂಲಕ ತಮ್ಮ ಕ್ರೀಡಾ ಸಾಮರ್ಥ್ಯವನ್ನು ಮರಳಿ ಪಡೆದುಕೊಳ್ಳಲು ಬಹಳಷ್ಟು ಸಮಯಾವಕಾಶ ಬೇಡುತ್ತದೆ ಎಂದರು.

    ನೂತನ ವಿಧಾನದ ಶಸ್ತ್ರಚಿಕಿತ್ಸೆಯ ಬಗ್ಗೆ ವಿವರಿಸಿದ ಯುನೈಟೆಡ್ ಆಸ್ಪತ್ರೆಯ ಕನ್ಸಲ್ಟೆಂಟ್ ಆರ್ಥೋಪಿಡಿಶಿಯನ್ ಡಾ. ಪ್ರದ್ಯುಮ್ನ ಆರ್, ಅಥ್ಲೆಟಿಕ್‌ನಲ್ಲಿ ಪಾಲ್ಗೊಳ್ಳುವ ಮಂದಿಗೆ ಕೀಲಿನ ಕಾರ್ಟಿಲೆಜ್ ಗಾಯಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ. ಸಾಮಾನ್ಯವಾಗಿ ವೃತ್ತಿಪರ ಕ್ರೀಡಾಪಟುಗಳು ಮತ್ತು ಕ್ರೀಡಾ ಹವ್ಯಾಸಿಗಳು ಕಾರ್ಟಿಲೆಜ್ ಹಾನಿಗೆ ಗುರಿಯಾಗುತ್ತಾರೆ. ಇದು ಟ್ವಿಸ್ಟ್ ಮಾಡುವಾಗ, ಜಂಪ್ ಮಾಡುವಾಗ ಜಿಗಿಯುವಾಗ ಮೊಣಕಾಲನ್ನು ತೀವ್ರವಾಗಿ ಬಾಗಿಸಿದಾಗ ಅಥವಾ ಹಠಾತ್ ಆಘಾತಕಾರಿ ಗಾಯದಿಂದಾಗಿ ಈ ಸಮಸ್ಯೆ ಕಾಣಿಸಿಕೊಳ್ಳಬಹುದು. ಇದನ್ನು ಗುಣಪಡಿಸುವ ಸೀಮಿತ ಚಿಕಿತ್ಸೆಗಳಿಂದಾಗಿ, ನೋವು ಹೆಚ್ಚಾಗಿರುತ್ತದೆ. ಹೆಚ್ಚಿನ ಬಾರಿ ಇದು ಅಪೂರ್ಣ ಚಿಕಿತ್ಸೆಗೆ ಕಾರಣವಾಗುತ್ತದೆ. ಚಿಕಿತ್ಸೆ ನೀಡದೆ ಬಿಟ್ಟರೆ, ಕಾರ್ಟಿಲೆಜ್ ಗಾಯಗಳು ಪ್ರೊಗ್ರೆಸ್ಸಿವ್ ಕೊಂಡ್ರೊಜೆನಿಕ್ ನಷ್ಟಕ್ಕೆ ಕಾರಣವಾಗಬಹುದು ಅಥವಾ ಕಾಲಕ್ರಮೇಣ ಕಾರ್ಟಿಲೆಜ್ ಕಳೆದುಹೋಗಬಹುದು ಎಂದು ಹೇಳಿದರು.

    ಕೇವಲ ಕೀಹೋಲ್ ವಿಧಾನದ ಮೂಲಕ ರೋಗಿಗೆ ಒಂದೇ ಹಂತದ ಶಸ್ತ್ರಚಿಕಿತ್ಸೆ ಮಾಡಲಾಯಿತು. ಅಜಯ್ ಈಗ ಗುಣಮುಖವಾಗುವುದರ ಜೊತೆಗೆ ವ್ಯಾಯಾಮ ಮತ್ತು ಕ್ರೀಡಾ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವ ಸಹಜ ಸ್ಥಿತಿಗೆ ಕ್ಷಿಪ್ರವಾಗಿ ಮರಳುತ್ತಿದ್ದಾರೆ. ಶೀಘ್ರದಲ್ಲೇ ಅವರು ತಮ್ಮ ನೆಚ್ಚಿನ ಕ್ರೀಡೆಯನ್ನು ಮತ್ತೆ ಆಡಲು ಸಾಧ್ಯವಾಗುತ್ತದೆ ಎಂದು ಯುನೈಟೆಡ್ ಆಸ್ಪತ್ರೆಯ ಕನ್ಸಲ್ಟೆಂಟ್ ಆರ್ಥೋಪಿಡಿಶಿಯನ್ ಡಾ. ಪ್ರದ್ಯುಮ್ನ ಆರ್ ತಿಳಿಸಿದರು. ಇದನ್ನೂ ಓದಿ: ಬಿಎಸ್‍ವೈ ಅಂದ್ರೆ ಒಂದು ದೊಡ್ಡ ಶಕ್ತಿ, ಅವರ ಹೇಳಿಕೆಯಿಂದ ಪಕ್ಷವನ್ನು ಇಕ್ಕಟ್ಟಿಗೆ ಸಿಲುಕಿಸಲ್ಲ: ಬೊಮ್ಮಾಯಿ

    ಯುನೈಟೆಡ್ ಆಸ್ಪತ್ರೆಯ ಸಂಸ್ಥಾಪಕರು ಹಾಗೂ ವ್ಯವಸ್ಥಾಪಕ ನಿರ್ದೇಶಕರಾದ ಡಾ. ವಿಕ್ರಮ್ ಸಿದ್ದಾರೆಡ್ಡಿ ಮಾತನಾಡಿ, ನೂತನ ವಿಧಾನದ ತಂತ್ರಜ್ಞಾನದಲ್ಲಿ ರೋಗಿಯ ಕೀಲಿನಿಂದ ಸಂಗ್ರಹಿಸಿದ ರೋಗಿಯ ಕಾರ್ಟಿಲೆಜ್ ಕೋಶಗಳನ್ನು ಬಳಸಿಕೊಳ್ಳಲಾಗುತ್ತದೆ. ಈ ಅಂಗಾಂಶವನ್ನು ರೋಗಿಯ ರಕ್ತದ ಪ್ರೋಟೀನ್ ಸಮೃದ್ಧ ಭಾಗದೊಂದಿಗೆ ಬೆರೆಸಿ ಜೆಲ್ ತರಹದ ವಸ್ತುವನ್ನು ರೂಪಿಸಿಕೊಳ್ಳಲಾಗುತ್ತದೆ. ಇದನ್ನು ನೋವಿರುವ ಜಾಗಗಳಿಗೆ ಹಾಕುವುದರ ಮೂಲಕ ಕೆಲವು ವಾರಗಳಲ್ಲಿ ಹೊಸ ಕಾರ್ಟಿಲೆಜ್ ಆಗಿ ಬೆಳೆಯಲು ಅನುವು ಮಾಡಿಕೊಡಲಾಗುತ್ತದೆ. ಇದರಿಂದ ಕೀಲುಗಳಿಗೆ ಹೆಚ್ಚಿನ ಹಾನಿಯಾಗುವುದನ್ನು ತಡೆಯಬಹುದು ಮತ್ತು ಕೀಲುಗಳಲ್ಲಿ ಸಂಧಿವಾತ ಹೆಚ್ಚುವುದನ್ನು ತಪ್ಪಿಸುತ್ತದೆ ಎಂದರು.

    ಕೋವಿಡ್ ಸಾಂಕ್ರಾಮಿಕ ರೋಗದ ನಂತರ ತಮ್ಮ ಕ್ರೀಡಾ ಚಟುವಟಿಕೆಗಳಿಗೆ ಮತ್ತೆ ಮರಳಿರುವ ಹೆಚ್ಚಿನ ಮಂದಿ ಗಾಯದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಯುನೈಟೆಡ್ ಹಾಸ್ಪಿಟಲ್ ಬೆಂಗಳೂರಿನಲ್ಲಿ ಮೂಲಸೌಕರ್ಯ, ಉಪಕರಣಗಳು, ಆಪರೇಷನ್ ಥಿಯೇಟರ್‌ಗಳು, ತರಬೇತಿ ಪಡೆದ ಸಿಬ್ಬಂದಿ, ರೋಗಿಗಳ ಯೋಗಕ್ಷೇಮಕ್ಕೆ ಮೀಸಲಾದ ನಿರ್ವಹಣೆ ಮತ್ತು ಭಾರತದ ಮೊದಲ ಆಟೋಲೋಗಸ್ ಕಾರ್ಟಿಲೆಜ್ ಟ್ರಾನ್ಸ್ಪ್ಲಾಂಟ್ ಸೌಲಭ್ಯಗಳ ಮೂಲಕ ಬೆಂಗಳೂರಿನ ಅತ್ಯುತ್ತಮ ಕ್ರೀಡೆ ಸಂಬಂಧಿತ ಗಾಯಗಳಿಗೆ ಚಿಕಿತ್ಸೆ ನೀಡುವ ಸುಸಜ್ಜಿತ ಆಸ್ಪತ್ರೆಗಳಲ್ಲಿ ಒಂದಾಗಿದೆ. ಕ್ರೀಡಾ ಸಮಸ್ಯೆಗಳ ನಿವಾರಣೆಗೆ ಇದೊಂದು ಉತ್ತಮವಾದ ಸ್ಥಳ ಎಂದು ಜಯನಗರದ ಯುನೈಟೆಡ್ ಆಸ್ಪತ್ರೆಯ ಕಾರ್ಯನಿರ್ವಾಹಕ ನಿರ್ದೇಶಕ ಮತ್ತು ಡಯಾಗ್ನೋಸ್ಟಿಕ್ ಮತ್ತು ವೆಲ್ನೆಸ್ ಮುಖ್ಯಸ್ಥ ಡಾ. ಶಾಂತಕುಮಾರ್ ಮುರುಡಾ ಹೇಳಿದರು. ಇದನ್ನೂ ಓದಿ: ಕಸ ಹಾಕಿದ್ದಕ್ಕೆ ಸಿಎಂ ನಿವಾಸಕ್ಕೆ 10,000 ರೂ. ದಂಡ ವಿಧಿಸಿದ ಕಾರ್ಪೊರೇಷನ್

    ಯುನೈಟೆಡ್ ಆಸ್ಪತ್ರೆಯಲ್ಲಿ ಎಲ್ಲಾ ಕ್ರೀಡೆಗಳಿಗೆ ಸಂಬಂಧಿಸಿದ ಗಾಯಗಳಿಗೆ ಚಿಕಿತ್ಸೆ ನೀಡಲು ವಿಶ್ವದ ಅತ್ಯುತ್ತಮ ತಂತ್ರಗಳನ್ನು ಬಳಸಲಾಗುತ್ತದೆ. ಆಟೋಲೋಗಸ್ ಕಾರ್ಟಿಲೆಜ್ ಟ್ರಾನ್ಸ್‌ಪ್ಲಾಂಟ್ ಅನ್ನು ಒಂದೇ ಸೆಟ್ಟಿಂಗ್‌ನಲ್ಲಿ ಮಾಡಲಾಗುತ್ತದೆ. ಕೀಹೋಲ್ ಶಸ್ತ್ರಚಿಕಿತ್ಸೆ, ಸಾಂಪ್ರದಾಯಿಕ 6 ವಾರಗಳ ಅಂತರದಲ್ಲಿ ನಡೆಯುವ 2 ಎಸಿಐ ಗಿಂತ ಕಡಿಮೆ ವೆಚ್ಚದಾಯಕವಾಗಿದೆ ಮತ್ತು ರೋಗಿಗೆ ಅನುಕೂಲಕರವಾಗಿದೆ ಎಂದು ಡಾ. ಮುರುಡಾ ವಿವರಿಸಿದರು.

    ಹಲವಾರು ವೈದ್ಯರನ್ನು ಭೇಟಿ ಮಾಡಿದ ಬಳಿಕ ಯುನೈಟೆಡ್ ಆಸ್ಪತ್ರೆಯ ಕನ್ಸಲ್ಟೆಂಟ್ ಆರ್ಥೋಪೆಡಿಶಿಯನ್ ಡಾ. ಪ್ರದ್ಯುಮ್ನ ಅವರನ್ನು ಭೇಟಿಯಾದೆ. ನನ್ನ ಪಾದದ ಕಾರ್ಟಿಲೇಜ್ ಹಾನಿಗೊಳಗಾಗಿದ್ದನ್ನು ಕಂಡು ವೈದ್ಯರಾದ ಪ್ರದ್ಯುಮ್ನ ಅವರು ಆರ್ಥೋಸ್ಕೊಪಿ ಮೂಲಕ ಆಟೋಲೋಗಸ್ ಕಾರ್ಟಿಲೆಜ್ ಕಸಿ ಮಾಡಲು ನಿರ್ಧರಿಸಿದರು. ಕಡಿಮೆ ಇನ್ ವೇಸಿವ್ ಸರ್ಜರಿ (ಕೀಹೋಲ್) ಮೂಲಕ ಹಾನಿಗೊಳಗಾದ ಕಾರ್ಟಿಲೆಜ್‌ಗೆ ಚಿಕಿತ್ಸೆ ನೀಡಲು ನಿರ್ಧರಿಸಿದರು. ಇದರಿಂದ ಒಂದೇ ಶಸ್ತ್ರಚಿಕಿತ್ಸೆಯ ಮೂಲಕ ನನ್ನ ಗಾಯಕ್ಕೆ ಸೂಕ್ತ ಚಿಕಿತ್ಸೆಯನ್ನು ಪಡೆದುಕೊಳ್ಳಲು ಸಾಧ್ಯವಾಯಿತು ಎಂದು ಶಸ್ತ್ರಚಿಕಿತ್ಸೆಗೆ ಒಳಪಟ್ಟ ಕ್ರೀಡಾಪಟು ಅಜಯ್ ಹೇಳಿದರು.

    Live Tv
    [brid partner=56869869 player=32851 video=960834 autoplay=true]

  • ನಮ್ಮಲ್ಲಿ ಪ್ರಾಣಿಗಳ ಕಾನೂನು ಕಠಿಣ ಇಲ್ಲ – ನಾಯಿ ‘ಲಾರಾ’ ಅಂತ್ಯಕ್ರಿಯೆಗೆ ಬಂದ ರಮ್ಯಾ

    ನಮ್ಮಲ್ಲಿ ಪ್ರಾಣಿಗಳ ಕಾನೂನು ಕಠಿಣ ಇಲ್ಲ – ನಾಯಿ ‘ಲಾರಾ’ ಅಂತ್ಯಕ್ರಿಯೆಗೆ ಬಂದ ರಮ್ಯಾ

    ಬೆಂಗಳೂರು: ಬೀದಿ ನಾಯಿ ‘ಲಾರಾ’ ಅಂತ್ಯ ಸಂಸ್ಕಾರ ಸುಮ್ಮನಹಳ್ಳಿ ಪ್ರಾಣಿಗಳ ಸ್ಮಶಾನದಲ್ಲಿ ನಡೆಯಿತು. ನಾಯಿ ಅಂತ್ಯಕ್ರಿಯೆಗೆ ನಟಿ ರಮ್ಯಾ ಆಗಮಿಸಿದ್ದು ವಿಶೇಷವಾಗಿತ್ತು.

    ನಾಯಿ ಮೇಲೆ ಕಾರು ಹರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಆದಿ ವಿರುದ್ಧ ರಮ್ಯಾ ಸರಣಿ ಟ್ವೀಟ್ ಮಾಡಿದ್ದರು. ಇಂದು ಲಾರಾ ಅಂತಿಮ ಸಂಸ್ಕಾರದಲ್ಲಿ ಎಲ್ಲರೂ ಭಾಗವಹಿಸುವಂತೆ ಅಭಿಮಾನಿಗಳನ್ನು ಕೇಳಿಕೊಂಡಿದ್ದರು. ಈ ಹಿನ್ನೆಲೆ ಇಂದು ಬೆಂಗಳೂರಿನ ಸುಮ್ಮನಹಳ್ಳಿ ಪ್ರಾಣಿಗಳ ಸ್ಮಶಾನಕ್ಕೆ ರಮ್ಯಾ ಬಂದು ಲಾರಾಗೆ ಅಂತಿಮ ನಮನ ಸಲ್ಲಿಸಿದರು. ಅಂತ್ಯಕ್ರಿಯೆಗೂ ಮುನ್ನ ಲಾರಾಗಾಗಿ ಒಂದು ನಿಮಿಷ ಮೌನಾಚರಣೆ ಮಾಡಲಾಯಿತು. ಲಾರಾ ಅಂತ್ಯಕ್ರಿಯೆ ಸಂಸ್ಕಾರಕ್ಕೆ ಹಲವು ಪ್ರಾಣಿ ಪ್ರಿಯರು ಭಾಗಿಯಾಗಿದ್ದರು. ಇದನ್ನೂ ಓದಿ: ಬೀದಿ ನಾಯಿ ಮೇಲೆ ಕಾರು ಹತ್ತಿಸಿದ FIR ಏನಾಯ್ತು: ಸಿಎಂ, ತೇಜಸ್ವಿ ಸೂರ್ಯಗೆ ರಮ್ಯಾ ಪ್ರಶ್ನೆ

    ಶ್ವಾನಪ್ರೀಮಿಯಾದ ರಮ್ಯಾ ಮಾತನಾಡಿ, ಆಕ್ಸಿಡೆಂಟ್ ಆಗುತ್ತೆ. ಮನುಷ್ಯ ತಪ್ಪು ಮಾಡ್ತಾನೆ ಅದು ಸಹಜ. ಆದರೆ ಈ ವಿಚಾರವನ್ನು ನಾವು ಗಮನಿಸಿದಾಗ, ಆ ವ್ಯಕ್ತಿ ಬೇಕಂತಲೇ ನಾಯಿ ಮೇಲೆ ಗಾಡಿ ಹತ್ತಿಸಿದ್ದಾನೆ. ಇದನ್ನ ನೋಡಿ ಸಹಿಸಿಕೊಳ್ಳಲು ಆಗಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ನಮ್ಮ ದೇಶದಲ್ಲಿ ಪ್ರಾಣಿಗಳ ಕಾನೂನು ಕಠಿಣ ಇಲ್ಲ. 50 ರೂಪಾಯಿ ಕೊಟ್ಟು ಹೊರಗಡೆ ಬರ್ತಾರೆ. ದಯೆ ಅನ್ನೋದು ಕೇವಲ ಮನುಷ್ಯನಿಗೆ ಅಲ್ಲ. ಪ್ರಕೃತಿಯಲ್ಲಿರುವ ಪ್ರಾಣಿಗಳಿಗೂ ಕೂಡ ಇರಬೇಕು. ಮೊದಲನೆಯದಾಗಿ ಕಾನೂನು ಕಠಿಣವಾಗಬೇಕಿದೆ. ದೊಡ್ಡವರು, ದುಡ್ಡಿರೋರು ಕಾನೂನಿನಲ್ಲಿ ಎಸ್ಕೇಪ್ ಆಗ್ತಾರೆ. ಕಾನೂನು ಕಠಿಣಗೊಳಿಸಬೇಕು ಅಂತ ನಾನು ಸರ್ಕಾರಕ್ಕೆ ಮನವಿ ಮಾಡ್ತಿನಿ ಎಂದರು.

    ಲಾರಾ ಪಾರ್ಥಿವ ಶರೀರದ ಬಳಿ ನಾಯಿಯನ್ನ ಸಲಹುತ್ತಿದ್ದ ಗಾಯತ್ರಿ ಕಣ್ಣೀರು ಇಡುತ್ತಿದ್ದರು. ಲಾರಾ ನಾಯಿಯನ್ನ ಸಣ್ಣ ಮರಿಯಿಂದ ಗಾಯತ್ರಿ ಅವರು ಸಲಹುತ್ತಿದ್ದೆ ಎಂದು ಭಾವುಕರಾಗಿದ್ದಾರೆ. ಸೆಂಟ್ ಪೀಟರ್ಸ್ ಶಾಲಾ ಮಕ್ಕಳು ಲಾರಾಗೆ ಹೂಗುಚ್ಛ ಅರ್ಪಿಸಿ ಅಂತಿಮ ನಮನ ಸಲ್ಲಿಸಿದರು

    ಪ್ರಕರಣ ಬೆಳಕಿಗೆ ಬಂದಾಗಿನಿಂದ ರಮ್ಯಾ ಸೋಶಿಯಲ್ ಮೀಡಿಯಾದಲ್ಲಿ ಆಕ್ರೋಶ ಹೊರಹಾಕುತ್ತಿದ್ದಾರೆ. ಈ ಕುರಿತು ಟ್ವೀಟ್ ನಲ್ಲಿ, ಆತನಿಗೆ ಡ್ರೈವಿಂಗ್ ಲೈಸನ್ಸ್ ಇದ್ಯಾ? ಅಲ್ಕೋಹಾಲ್ ಅಥವಾ ಡ್ರಗ್ಸ್ ಸೇವನೆ ಮಾಡಿದ್ದನಾ? ಪೊಲೀಸರು ಏನು ಕ್ರಮ ತೆಗೆದುಕೊಂಡಿದ್ದಾರೆ. ಆತ ಇನ್ನೂ ಪೊಲೀಸ್ ಕಸ್ಟಡಿಯಲ್ಲಿ ಇದ್ದಾನಾ? ಅಥವಾ ಆತನನ್ನ ಬಿಟ್ಟು ಕಳಿಸಿದ್ರಾ? ಎಂದು ಸರಣಿ ಟ್ವಿಟ್ ಮಾಡಿದ್ದು, ಮುಖ್ಯಮಂತ್ರಿಗಳು, ಸಂಸದ ತೇಜಸ್ವಿ ಸೂರ್ಯ, ಮೇನಕಾಗಾಂಧಿ, ಶಾಸಕಿ ಸೌಮ್ಯ ರೆಡ್ಡಿ, ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್, ಆರ್.ಆಶೋಕ್ ಗೆ ಟ್ವೀಟ್ ಟ್ಯಾಗ್ ಮಾಡಿದ್ದರು. ಇದನ್ನೂ ಓದಿ: ಬೀದಿ ನಾಯಿ ಮೇಲೆ ಕಾರು ಹತ್ತಿಸಿದ್ದ ಆದಿಕೇಶವುಲು ಮೊಮ್ಮಗ ಅರೆಸ್ಟ್‌

    ಆದಿಕೇಶವಲು ನಾಯ್ಡು ಮೊಮ್ಮಗ ಆದಿನಾರಾಯಣ ಉದ್ದೇಶಪೂರ್ವಕವಾಗಿ ಕಾರನ್ನು ಹರಿಸಿದ್ದ. ಘಟನೆ ಬಳಿಕ ಶ್ವಾನ ನಾಪತ್ತೆಯಾಗಿತ್ತು. ನಿನ್ನೆ ನಾಯಿಯ ಮೃತ ದೇಹ ಪತ್ತೆಯಾಗಿದೆ. ಹೆಬ್ಬಾಳ ಪಶುವೈದ್ಯಕೀಯ ಆಸ್ಪತ್ರೆಯಲ್ಲಿ ಮೃತ ಶ್ವಾನ ಲಾರಾಗೆ ಪೋಸ್ಟ್ ಮಾರ್ಟಂ ಮಾಡಲಾಗಿತ್ತು. ಘಟನೆಯ ಬಳಿಕ ನಾಪತ್ತೆಯಾಗಿದ್ದ ಆದಿನಾರಾಯಣನನ್ನು ಪೊಲೀಸರು ಬಂಧಿಸಿ ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದರು.

  • ಇಂದಿನಿಂದ ಆಗಸ್ಟ್ 15ರವರೆಗೆ ಬೆಂಗಳೂರಿನ ವಿವಿಧ ಭಾಗಗಳಲ್ಲಿ ವಿದ್ಯುತ್ ಕಟ್

    ಇಂದಿನಿಂದ ಆಗಸ್ಟ್ 15ರವರೆಗೆ ಬೆಂಗಳೂರಿನ ವಿವಿಧ ಭಾಗಗಳಲ್ಲಿ ವಿದ್ಯುತ್ ಕಟ್

    ಬೆಂಗಳೂರು: ನಿಗದಿತ ನಿರ್ವಹಣಾ ಕಾರ್ಯದಿಂದಾಗಿ ಇಂದಿನಿಂದ ಆಗಸ್ಟ್ 15ರವರೆಗೆ ಜಯನಗರ ಉಪವಿಭಾಗದ ಅಡಿಯಲ್ಲಿ ಬರುವ ಬೆಂಗಳೂರಿನ ಕೆಲವು ಭಾಗಗಳಲ್ಲಿ ವಿದ್ಯುತ್ ಪೂರೈಕೆಗೆ ಅಡಚಣೆ ಉಂಟಾಗಲಿದೆ ಎಂದು ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (ಬೆಸ್ಕಾಂ) ತಿಳಿಸಿದೆ.

    ಭಾನುವಾರ ಬೆಳಗ್ಗೆ 10 ರಿಂದ ಸಂಜೆ 5ರವರೆಗೆ ಎಸ್‍ಜೆ ಪಾರ್ಕ್, ಕಿಮ್ಸ್, ಸಿಟಿ ಮಾರ್ಕೆಟ್, ಬಿವಿಕೆ. ಅಯ್ಯಂಗಾರ್ ರಸ್ತೆ. ಆರ್‍ಟಿ ರಸ್ತೆ, ಸಿಟಿ ರೋಡ್, ಚಿಕ್ಕಪೇಟೆ, ಎಸ್.ಪಿ ರೋಡ್, ಟೌನ್ ಹಾಲ್, ಜೆಸಿ ರಸ್ತೆ, ಕೆಜಿ ರಸ್ತೆ, ವಿಕ್ಟೋರಿಯಾ ಆಸ್ಪತ್ರೆ, ಕಲಾಸಿಪಾಳ್ಯ, ಎಂಎಂ ರೋಡ್, ಶಂಕರಪುರ ಮತ್ತು ಮೆಡಿಕಲ್ ಕಾಲೇಜು ರಸ್ತೆಗಳಲ್ಲಿ ವಿದ್ಯುತ್ ಪೂರೈಕೆಯ ಅಡಚಣೆ ಉಂಟಾಗಲಿದೆ.

    ಆಗಸ್ಟ್ 9 ರಂದು ಬೆಳಗ್ಗೆ 10ರಿಂದ ಸಂಜೆ 5:30ರವರೆಗೆ ಪದ್ಮನಾಭನಗರ ಪ್ರದೇಶಗಳು, ವಿವೇಕಾನಂದ ನಗರ, ಕತ್ರಿಗುಪ್ಪೆ ಪೂರ್ವ, ಬನಶಂಕರಿ ಹಂತ 3, ಪುಟ್ಟೇನಹಳ್ಳಿ ವೃತ್ತ, ಬನಶಂಕರಿ ಹಂತ 5, ಜೆ.ಪಿ ನಗರ 6ನೇ ಹಂತ, ಕೆ.ಆರ್ ಲೇಔಟ್ ಪುಟ್ಟೇನಹಳ್ಳಿ ಕೆರೆ, ಅಶ್ವಥ್ ನಾರಾಯಣ್ ಲೇಔಟ್, ಅಣ್ಣಯ್ಯ ರೆಡ್ಡಿ ಲೇಔಟ್, ಕಾವೇರಿ ನಗರದಲ್ಲಿ ವಿದ್ಯುತ್ ಸ್ಥಗಿತಗೊಳ್ಳಲಿದೆ.

    ಆಗಸ್ಟ್ 10 ರಂದು ಆಗಸ್ಟ್ 10 ರಂದು ಪದ್ಮನಾಭನಗರ, ನಾಗಾರ್ಜುನ ಎನ್ಕ್ಲಾವ್, ಆರ್ಚಳ್ಳಿ ಮುಖ್ಯ ರಸ್ತೆ, ಕೆಇಬಿ ಲೇಔಟ್, ರಾಮರಾವ್ ಲೇಔಟ್, ಬನಶಂಕರಿ ಹಂತ 2 ಸಿಂಧೂರ್ ಚೌಲ್ಟ್ರಿ, ಜರಗನಹಳ್ಳಿಯ 1 ಮತ್ತು 6 ಹಂತಗಳು, ಇಟ್ಟಮಾಡು, ಕತ್ರಿಗುಪ್ಪೆ ಮುಖ್ಯ ರಸ್ತೆ ವಿದ್ಯುತ್ ಪೂರೈಕೆಯಲಿ ವ್ಯತ್ಯಾಸ ಉಂಡಾಗಲಿದೆ.

    ಆಗಸ್ಟ್ 11, 12 ಮತ್ತು 13 ರಂದು ಸುದಮ್ ನಗರ, ಜರಗನಹಳ್ಳಿ ಸಿ.ಎಸ್ ಲೇಔಟ್, ನಾಯ್ಡು ಲೇಔಟ್, ಬಸವರಾಜು ಲೇಔಟ್, ಅಯ್ಯಪ್ಪ ದೇವಸ್ಥಾನ, ಜೆಪಿ ನಗರ 2, 3 ಮತ್ತು 5ನೇ ಹಂತಗಳು, ಭುವನೇಶ್ವರಿ ನಗರ, ಇಟ್ಟಮಾಡು, ಸಿದ್ದಣ್ಣ ಲೇಔಟ್, ಶ್ರೀನಿಧಿ ಲೇಔಟ್, ಚುಂಚನಘಟ್ಟ ಗ್ರಾಮ, ಜೆ.ಪಿ ನಗರ 5ನೇ ಹಂತ, ಕಾಮಾಕ್ಯ ಲೇಔಟ್, 100 ಫೀಟ್ ರಿಂಗ್ ರೋಡ್, ಕೃಷ್ಣಪ್ಪ ಲೇಔಟ್, ಭುವನೇಶ್ವರಿ ನಗರ ಮತ್ತು ಪದ್ಮನಾಭನಗರ ಭಾಗಗಳಲ್ಲಿ ವಿದ್ಯುತ್ ಕಡಿತವನ್ನು ನಿಗದಿಪಡಿಸಲಾಗಿದೆ.

    ಆಗಸ್ಟ್ 14 ಮತ್ತು 15ರಂದು ಕರ್ನಾಟಕ ಬ್ಯಾಂಕ್ ರಸ್ತೆ, ಪದ್ಮನಾಭನಗರ ಬಿಡಬ್ಲ್ಯೂಎಸ್‍ಎಸ್‍ಬಿ ಕಚೇರಿ, ಹಳ್ಳಿ ಎಸ್‍ಬಿಎಂ ರಸ್ತೆ, ಎಚ್ ಸಿದ್ದಯ್ಯ ರಸ್ತೆ ಇತ್ಯಾದಿ ಪ್ರದೇಶಗಳು ವಿದ್ಯುತ್ ಸ್ಥಗಿತಗೊಳಿಸಲಾಗುತ್ತದೆ.  ಇದನ್ನೂ ಓದಿ:ಮಾಹಿತಿ ಇಲ್ಲದೇ ಕಾರ್ಯಕ್ರಮಕ್ಕೆ ಬಂದ ಅಧಿಕಾರಿಗಳಿಗೆ ವಿ.ಸೋಮಣ್ಣ ಕ್ಲಾಸ್

  • ಆಸ್ಪತ್ರೆಯ ಆವರಣದಲ್ಲೇ ಮಹಿಳೆ ಸಾವು- ಮೃತದೇಹ ಕೊಡಲ್ಲ ಎಂದ ಆಸ್ಪತ್ರೆ

    ಆಸ್ಪತ್ರೆಯ ಆವರಣದಲ್ಲೇ ಮಹಿಳೆ ಸಾವು- ಮೃತದೇಹ ಕೊಡಲ್ಲ ಎಂದ ಆಸ್ಪತ್ರೆ

    ಬೆಂಗಳೂರು: ಜಯನಗರದ ಖಾಸಗಿ ಆಸ್ಪತ್ರೆಯ ನಿರ್ಲಕ್ಷ್ಯದಿಂದ ಮಹಿಳೆ ಸಾವು ಆರೋಪ ಹಿನ್ನೆಲೆಯಲ್ಲಿ ಆಸ್ಪತ್ರೆಯ ಮುಂದೆ ಕುಟುಂಸ್ಥರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

    ಜಯನಗರದ ಭೈರಸಂದ್ರ ನಿವಾಸಿ ಸತ್ಯಮ್ಮ (47) ಮೃತ ಮಹಿಳೆ. ಸತ್ಯಮ್ಮರನ್ನು ಶನಿವಾರ ಸಂಜೆ ಗ್ಯಾಸ್ಟ್ರಿಕ್ ಸಮಸ್ಯೆಯಿಂದ ಜಯನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಒಂದು ದಿನದ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಭಾನುವಾರ ರಾತ್ರಿ ಇಲ್ಲಿ ಆಗೋದಿಲ್ಲ ಬೇರೆ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಎಂದು ವೈದ್ಯರು ತಿಳಿಸಿದ್ದಾರೆ. ನಂತರ ಕುಟುಂಬಸ್ಥರು ಪಕ್ಕದಲ್ಲೇ ಇದ್ದ ಮತ್ತೊಂದು ಆಸ್ಪತ್ರೆಗೆ ಅಂಬುಲೆನ್ಸ್ ಮೂಲಕ ಕರೆದುಕೊಂಡು ಬಂದಿದ್ದಾರೆ.

    ಸುಮಾರು 45 ನಿಮಿಷಗಳ ಕಾಲ ಆಸ್ಪತ್ರೆಯ ಹೊರಭಾಗದಲ್ಲಿಯೇ ನಿಲ್ಲಿಸಿಕೊಂಡಿದ್ದಾರೆ. ಈ ವೇಳೆ ರೋಗಿ ಸತ್ಯಮ್ಮ ತೀವ್ರ ಉಸಿರಾಟದಿಂದ ಅಂಬುಲೆನ್ಸ್‌ನಲ್ಲೇ ಒದ್ದಾಡಿದ್ದಾರೆ. ನಂತರ ಆಸ್ಪತ್ರೆಯ ಮುಂಭಾದಲ್ಲೇ ಸತ್ಯಮ್ಮರ ಉಸಿರು ನಿಂತು ಹೋಗಿದೆ. ಬಳಿಕ ಕುಟುಂಬಸ್ಥರು ಗಲಾಟೆ ಮಾಡಿದ ಮೇಲೆ ವೈದ್ಯರು ಸತ್ಯಮ್ಮರನ್ನು ಆಸ್ಪತ್ರೆಗೆ ಅಡ್ಮಿಟ್ ಮಾಡಿಕೊಂಡಿದ್ದಾರೆ. ವೈದ್ಯರು ಪರೀಕ್ಷೆ ಮಾಡಿ ಸುಮಾರು ರಾತ್ರಿ 11.59ಕ್ಕೆ ಸತ್ಯಮ್ಮ ಮೃತಪಟ್ಟಿದ್ದಾರೆ. ದಯವಿಟ್ಟು ನಮ್ಮನ್ನು ಕ್ಷಮಿಸಿ ಅಂತ ಕುಟುಂಬಸ್ಥರಿಗೆ ಮಾಹಿತಿ ನೀಡಿದ್ದಾರೆ.

    ಕೊರೊನಾ ಶಂಕೆ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ಬೇಗ ಆಡ್ಮಿಟ್ ಮಾಡಿಕೊಂಡಿಲ್ಲ ಎಂದು ಕುಟುಂಬಸ್ಥರು ಆರೋಪ ಮಾಡಿದ್ದಾರೆ. ಇದೀಗ ಮಹಿಳೆಯ ಕೊರೊನಾ ಟೆಸ್ಟ್ ರಿಪೋರ್ಟ್ ಬರುವರೆಗೂ ಮೃತದೇಹ ಕೊಡಲ್ಲ ಎಂದ ಖಾಸಗಿ ಆಸ್ಪತ್ರೆ ಹೇಳಿದೆ. ಆದರೆ ಮೃತದೇಹ ನೀಡಿ ಎಂದು ಕುಟುಂಬಸ್ಥರು ಪಟ್ಟು ಹಿಡಿದಿದ್ದಾರೆ. ಹೀಗಾಗಿ ಜಯನಗರದ ಖಾಸಗಿ ಆಸ್ಪತ್ರೆಯಿಂದ ಮೃತ ಸತ್ಯಮ್ಮ ದೇಹವನ್ನು ಕಿಮ್ಸ್ ಆಸ್ಪತ್ರೆಗೆ ಶಿಫ್ಟ್ ಮಾಡಲು ವೈದ್ಯರು ಚಿಂತನೆ ಮಾಡುತ್ತಿದ್ದಾರೆ.

    ಈಗಾಗಲೇ ಮೃತ ಸತ್ಯಮ್ಮರ ಗಂಟಲು ದ್ರವ ಪಡೆದುಕೊಂಡಿದ್ದು. ಕೊರೊನಾ ರಿಪೋರ್ಟ್ ಬಂದ ಮೇಲೆ ಮೃತದೇಹವನ್ನು ಕೊಡುತ್ತೀವಿ ಎಂದು ಆಸ್ಪತ್ರೆ ತಿಳಿಸಿದೆ. ಇಂದು ಬೆಳಗ್ಗೆ ಮೃತ ದೇಹವನ್ನು ಕೊಡುತ್ತೀವಿ ಎಂದು ಖಾಸಗಿ ಆಸ್ಪತ್ರೆ ಆಡಳಿತ ಮಂಡಳಿ ತಿಳಿಸಿತ್ತು. ಈಗ ಕೋವಿಡ್ ಟೆಸ್ಟ್ ಮಾಡಬೇಕು ಅಲ್ಲಿಯವರೆಗೆ ಮೃತದೇಹ ಕೊಡಲ್ಲ ಎಂದು ವೈದ್ಯರು ಹೇಳುತ್ತಿದ್ದಾರೆ. ಇದರಿಂದ ಸತ್ಯಮ್ಮ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

  • ಬೀಗ ಬೀಳುವ ಭೀತಿಯಲ್ಲಿದೆ ಬೆಂಗಳೂರಿನ ಅತಿ ದೊಡ್ಡ ಖಾಸಗಿ ಆಸ್ಪತ್ರೆ

    ಬೀಗ ಬೀಳುವ ಭೀತಿಯಲ್ಲಿದೆ ಬೆಂಗಳೂರಿನ ಅತಿ ದೊಡ್ಡ ಖಾಸಗಿ ಆಸ್ಪತ್ರೆ

    ಬೆಂಗಳೂರು: ನಗರದ ಅತಿ ದೊಡ್ಡ ಖಾಸಗಿ ಆಸ್ಪತ್ರೆಗೆ ಬೀಗ ಬೀಳುವ ಭೀತಿ ನಿರ್ಮಾಣವಾಗಿದೆ. ಕೊರೊನಾ ಸೋಂಕಿತೆ ಖಾಸಗಿ ಆಸ್ಪತ್ರೆಗಳಿಗೆ ಭೇಟಿ ಕೊಟ್ಟಿದ್ದು, ಈ ಮಾಹಿತಿ ಜಿಲ್ಲಾಡಳಿತಕ್ಕೆ ಸಿಕ್ಕ ಹಿನ್ನೆಲೆಯಲ್ಲಿ ಸದ್ಯ ಆಸ್ಪತ್ರೆಗೆ ನೋಟಿಸ್ ನೀಡಲಾಗಿದೆ.

    ನಗರದ ಬಿಳೆಕಲ್ಲಹಳ್ಳಿ ವಾರ್ಡಿನ ಕೋಡಿಚಿಕ್ಕನಹಳ್ಳಿಯ ನಿವಾಸಿಯಾಗಿದ್ದ ವೃದ್ಧೆಯಲ್ಲಿ ಕೊರೊನಾ ಪಾಸಿಟಿವ್ ಪತ್ತೆಯಾಗಿದೆ. ಕಳೆದ 10 ದಿನಗಳಿಂದ ಶೀತ, ಜ್ವರ, ನೆಗಡಿ, ಕೆಮ್ಮು ಕಾಣಿಸಿಕೊಂಡ ಕಾರಣ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಕೊರೊನಾ ಟೆಸ್ಟ್ ನಡೆಸಲಾಗಿತ್ತು. ಆದರೆ ಇದಕ್ಕೂ ಮುನ್ನ ಮಹಿಳೆ ನಗರದ ಮೂರು ಪ್ರತಿಷ್ಠಿತ ಖಾಸಗಿ ಆಸ್ಪತ್ರೆಗೆ ಭೇಟಿ ನೀಡಿದ್ದರು.

    ನಗರದ ಬನ್ನೇರುಘಟ್ಟ, ಜಯನಗರ ಮತ್ತು ಮೈಕೋ ಲೇ ಔಟ್‍ನ ಪ್ರಮುಖ ಮೂರು ಖಾಸಗಿ ಆಸ್ಪತ್ರೆಗೆಗಳಿಗೆ ಕೊರೊನಾ ಸೋಂಕಿತೆ ಭೇಟಿ ನೀಡಿದ್ದರು. ಸದ್ಯ ಕೊರೊನಾ ಪಾಸಿಟಿವ್ ಖಚಿತವಾದ ಹಿನ್ನೆಲೆಯಲ್ಲಿ ಆಸ್ಪತ್ರೆಗಳಿಗೆ ನೋಟಿಸ್ ನೀಡಿ ಬೀಗ ಜಡಿಯುವುದಕ್ಕೆ ಅಧಿಕಾರಿಗಳು ಸಜ್ಜಾಗುತ್ತಿದ್ದಾರೆ ಎಂಬ ಮಾಹಿತಿ ಮೂಲಗಳಿಂದ ಲಭ್ಯವಾಗಿದೆ.

    ನಗರದ ಕೇಸ್ ನಂ.565ರ ಈಕೆ ಮೂರು ಖಾಸಗಿ ಆಸ್ಪತ್ರೆಗಳಿಗೆ ಭೇಟಿ ನೀಡಿದ್ದಾರೆ. ಆದರೆ ಖಾಸಗಿ ಆಸ್ಪತ್ರೆಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಸುಳ್ಳು ಮಾಹಿತಿ ನೀಡಿದ್ದಾರೆ. ಆ ಬಳಿಕ ಜಯನಗರ ಖಾಸಗಿ ಆಸ್ಪತ್ರೆ ಸೋಂಕಿತೆಯ ಸ್ವಾಬ್ ಟೆಸ್ಟ್ ನಡೆಸಿತ್ತು. ಆದರೆ ಸೋಂಕು ಇರುವುದು ಖಚಿತವಾಗಿದ್ದರೂ ಜಿಲ್ಲಾಡಳಿತಕ್ಕೆ ಯಾವುದೇ ಮಾಹಿತಿ ನೀಡಿರಲಿಲ್ಲ ಎನ್ನಲಾಗಿದೆ. ಅಲ್ಲದೇ ಜಯನಗರದ ಖಾಸಗಿ ಆಸ್ಪತ್ರೆಯಲ್ಲಿ ನಮ್ಮ ಮನೆ ಡಾಕ್ಟರ್ ಇದ್ದು, ಅವರ ಬಳಿಯೇ ಚಿಕಿತ್ಸೆ ತೆಗೆದುಕೊಳ್ಳುತ್ತೇನೆ ಎಂದು ಅಲ್ಲಿಂದ ತೆರಳಿದ್ದಾರೆ.

    ಇತ್ತ ಜಯನಗರದ ಖಾಸಗಿ ಆಸ್ಪತ್ರೆ ಸಿಬ್ಬಂದಿ ಕೂಡ ಈಕೆಗೆ ಕೊರೊನಾ ಲಕ್ಷಣಗಳು ಕಂಡು ಬಂದರು ಸ್ಯಾಂಪಲ್ ತೆಗೆದುಕೊಂಡು ಮನೆಗೆ ಕಳಿಸಿದ್ದಾರೆ. ಈ ವೇಳೆ ಆಕೆಯನ್ನು ಖಾಸಗಿ ಆಸ್ಪತ್ರೆಯಿಂದ ವಿಕ್ಟೋರಿಯಾ ಆಸ್ಪತ್ರೆಗೆ ರವಾನೆ ಮಾಡಲಾಗಿತ್ತು. ಆ ವೇಳೆ ವಿಕ್ಟೋರಿಯಾದಲ್ಲಿ ಕೋವಿಡ್ ಟೆಸ್ಟ್ ಮಾಡಿಸಿದಾಗ ಸೋಂಕು ಇರುವುದು ಖಚಿತವಾಗಿತ್ತು. ಕೊರೊನಾ ಪಾಸಿಟಿವ್ ವರದಿ ಖಚಿತವಾದ ಹಿನ್ನೆಲೆಯಲ್ಲಿ ವೃದ್ಧೆಯ ಎಲ್ಲಿ ಹೋಗಿದ್ರು? ಹೇಗೆ ಬಂತು? ಇತ್ಯಾದಿ ಮಾಹಿತಿಗಳನ್ನು ಆರೋಗ್ಯ ಅಧಿಕಾರಿಗಳು ಸಂಗ್ರಹಿಸುತ್ತಿದ್ದಾರೆ.

  • ಪೌರ ಕಾರ್ಮಿಕರೊಂದಿಗೆ ಸಂಕ್ರಾಂತಿ ಸಂಭ್ರಮ- ಸ್ವಚ್ಛತಾ ರಾಯಭಾರಿಗಳಿಗೆ ಗೌರವ

    ಪೌರ ಕಾರ್ಮಿಕರೊಂದಿಗೆ ಸಂಕ್ರಾಂತಿ ಸಂಭ್ರಮ- ಸ್ವಚ್ಛತಾ ರಾಯಭಾರಿಗಳಿಗೆ ಗೌರವ

    – 500 ಕಾರ್ಮಿಕರಿಗೆ ಸಿಹಿ ಪೊಂಗಲ್

    ಬೆಂಗಳೂರು: ಮಕರ ಸಂಕ್ರಾಂತಿ ಹಬ್ಬದ ಪ್ರಯುಕ್ತ ಜಯನಗರ ವಿಧಾನಸಭಾ ಕ್ಷೇತ್ರದಲ್ಲಿ ಪೌರಕಾರ್ಮಿಕರಿಗಾಗಿ ಸಂಕ್ರಾಂತಿ ಸಂಭ್ರಮ ಏರ್ಪಡಿಸಲಾಗಿತ್ತು. ನಗರದ ಸ್ವಚ್ಛತಾ ರಾಯಭಾರಿಗಳಾದ ಪೌರ ಕಾರ್ಮಿಕರಿಗೆ ಎಳ್ಳು-ಬೆಲ್ಲದ ಜೊತೆಗೆ, ಸೀರೆ, ಬ್ಲೌಸ್, ಪ್ಯಾಂಟ್ ಶರ್ಟ್ ಮತ್ತು ಉಡುಗೊರೆಗಳನ್ನು ವಿತರಿಸಲಾಯಿತು.

    ಪ್ರತಿನಿತ್ಯ ಮನೆಗಳಿಂದ ಕಸ ಕೊಂಡೊಯ್ಯುವ, ಬೀದಿಗಳನ್ನು ಸ್ವಚ್ಛಗೊಳಿಸುವ ಸ್ವಚ್ಛತಾ ರೂವಾರಿಗಳಾದ ಪೌರಕಾರ್ಮಿಕರನ್ನು ಹಬ್ಬದ ಹಿನ್ನೆಲೆಯಲ್ಲಿ ಅವರಿಗೆ ಗೌರವ ಸೂಚಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದು, ಕಾರ್ಯಕ್ರಮದ ವಿಶೇಷವಾಗಿತ್ತು.

    ಜೆಪಿ ನಗರದ ದುರ್ಗಾ ಪರಮೇಶ್ವರಿ ದೇವಸ್ಥಾನ ಮೈದಾನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸುಮಾರು 500 ಕಾರ್ಮಿಕರಿಗೆ ಪೊಂಗಲ್ ತಯಾರಿಸಿ ಹಂಚಲಾಯಿತು. ಪೌರ ಕಾರ್ಮಿಕರು ಸಿಹಿ, ಎಳ್ಳು-ಬೆಲ್ಲ, ಕಬ್ಬು ಸ್ವೀಕರಿಸಿದರು. ಇಷ್ಟು ವರ್ಷಗಳಿಂದ ನಮ್ಮನ್ನು ಯಾರೂ ಕರೆದು ಗೌರವಿಸಿರಲಿಲ್ಲ. ನಮಗೆ ಹಬ್ಬದ ಸಿಹಿಯ ಜೊತೆಗೆ ಉಡುಗೊರೆಗಳನ್ನು ಸಹ ನೀಡಿರುವುದು ಖುಷಿ ತಂದಿದೆ ಎಂದು ಸಂತಸ ವ್ಯಕ್ತಪಡಿಸಿದರು.

    ಇದೇ ವೇಳೆ ಮಾಜಿ ಸಚಿವ, ಶಾಸಕ ರಾಮಲಿಂಗಾ ರೆಡ್ಡಿ ಮಾತನಾಡಿ, ಸಂಕ್ರಾಂತಿ ಸಂತಸದ ಹಬ್ಬ. ಹೊಸ ವರ್ಷದ ಹೊಸ್ತಿಲಲ್ಲಿ ಬರುವ ಸಂಕ್ರಾಂತಿ ಸಂದರ್ಭದಲ್ಲಿ ಬೆಂಗಳೂರು ನಗರವನ್ನು ಸುಂದರ, ಸ್ವಚ್ಛವಾಗಿಟ್ಟುಕೊಳ್ಳಲು ನಿಮ್ಮ ಪಾತ್ರ ಅನನ್ಯ. ಸದಾ ಕಾಲ ಸ್ವಚ್ಛತೆ ಕೈಗೊಳ್ಳುವ ನಿಮಗೂ ಖುಷಿ ಸಿಗಬೇಕು ಎಂಬ ಕಾರಣದಿಂದ ಈ ಕಾರ್ಯಕ್ರಮ ಏರ್ಪಡಿಸಲಾಗಿದೆ. ಶುಚಿತ್ವದಲ್ಲಿ ಆಧುನಿಕ ತಂತ್ರಜ್ಞಾನ ಅಳವಡಿಸಿಕೊಳ್ಳಲು ನಿಮ್ಮ ಸಹಕಾರ ಅಗತ್ಯ. ನಿಮ್ಮ ಸುರಕ್ಷತೆ, ಆರೋಗ್ಯ ರಕ್ಷಣೆಗಾಗಿ ಸರ್ಕಾರ ಮತ್ತು ಪಾಲಿಕೆ ಬದ್ಧವಾಗಿದೆ. ಹಳ್ಳಿಯ ನೆನಪು ತರುವ ಸಡಗರದ ಹಬ್ಬ ನಿಮ್ಮೆಲ್ಲರ ಬಾಳಿನಲ್ಲಿ ಬೆಳಕು ತರಲಿ ಎಂದು ಹಾರೈಸಿದರು.

    ಜಯನಗರ ಶಾಸಕಿ ಸೌಮ್ಯಾ ರೆಡ್ಡಿ ಮಾತನಾಡಿ, ಸದಾ ಸ್ವಚ್ಛತಾ ಕಾರ್ಯದಲ್ಲಿ ತೊಡಗುವ ನಿಮ್ಮ ಜೊತೆ ಸಂಕ್ರಾಂತಿ ಆಚರಿಸುವುದು ಅರ್ಥಪೂರ್ಣವಾಗಿದೆ. ಎಲ್ಲರಿಗಿಂತ ನಿಮಗೆ ಸಂಕ್ರಾಂತಿ ಹಬ್ಬದ ಉಡುಗೊರೆ ನೀಡಿದರೆ ಅದು ಸಾರ್ಥಕತೆ ಪಡೆಯುತ್ತದೆ. ಜಯನಗರ ಅತ್ಯಂತ ಶುಚಿ ಸ್ಥಳವಾಗಬೇಕು. ಸ್ವಚ್ಛ ಭಾರತದಲ್ಲಿ ಉತ್ತಮ ಹೆಸರು ಪಡೆಯಬೇಕು. ಕಸದ ಸಮಸ್ಯೆ ಸಂಪೂರ್ಣವಾಗಿ ನಿವಾರಣೆಯಾಗಬೇಕು. ಅದಕ್ಕಾಗಿ ಯಾವುದೇ ರೀತಿಯ ಸಹಕಾರ ಬೇಕಾದರೂ ನೀಡುತ್ತೇವೆ. ಕಸ ವಿಂಗಡಣೆ ಇನ್ನಷ್ಟು ಸುಧಾರಿಸಬೇಕು. ಇದರ ಸಂಪೂರ್ಣ ಉಸ್ತುವಾರಿಯನ್ನು ತಾವೇ ವಹಿಸಿರುವುದಾಗಿ ಹೇಳಿದರು.

    ಏಳು ವಾರ್ಡ್ ಗಳ ಸುಮಾರು 5000 ಜನ ಪೌರ ಕಾರ್ಮಿಕರು ಹಬ್ಬದ ಸಂಭ್ರಮದಲ್ಲಿ ಭಾಗಿಯಾಗಿದ್ದರು. ಪಾಲಿಕೆ ಸದಸ್ಯರಾದ ನಾಗರಾಜ್, ಮಾಜಿ ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ ಭಾಗಿಯಾಗಿದ್ದ ಕಾರ್ಯಕ್ರಮವನ್ನು ಬಾಂಧವ ತಂಡದ ಸದಸ್ಯರು ಅಚ್ಚುಕಟ್ಟಾಗಿ ನಿರ್ವಹಣೆ ಮಾಡಿದರು.